ಕರ್ನಾಟಕ ವಾರ್ತೆಗಳು

ಕರ್ನಾಟಕ ವಾರ್ತೆಗಳು

ಬಾರಕೂರು ದೀಪಕ್ ಶೆಟ್ಟಿಯವರು ಯಕ್ಷಗಾನ ಕ್ಷೇತ್ರದ ಆರ್ಥಿಕ ಸ್ಥಿತಿಗಳ ಮೌಲ್ಯೀಕರಣ ಬಗ್ಗೆ ಮಂಡಿಸಿದ ಮಹಾಪ್ರಬಂಧಕ್ಕೆ ಪಿ.ಎಚ್ ಡಿ ಪದವಿ.

ಬೆಂಗಳೂರು :ವಿದ್ಯಾಭ್ಯಾಸ ಮೆಕ್ಯಾನಿಕಲ್ ಎಂಜಿನಿಯರಿಂಗ್. ವೃತ್ತಿಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಟೊಯೊಟಾ ಕಂಪನಿಯಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್. ಆದರೆ, ತುಡಿತ ಕರಾವಳಿಯ ಗಂಡು ಕಲೆ ಖ್ಯಾತಿಯ ಯಕ್ಷಗಾನದಲ್ಲಿ ಸುಸ್ಥಿರತೆ. ಇದಕ್ಕಾಗಿ ವಿಭಿನ್ನ ರೀತಿಯಲ್ಲಿ ಪ್ರಯತ್ನಿಸುತ್ತಿರುವವರು ಬೆಂಗಳೂರು ಬಂಟರ ಸಂಘದ ಮಾಜಿ ಕೋಶಾಧಿಕಾರಿ ಬಾರ್ಕೂರು ದೀಪಕ್ ಶೆಟ್ಟಿ. ಯಕ್ಷಗಾನ ಕ್ಷೇತ್ರದ ಆರ್ಥಿಕ ಸ್ಥಿತಿಗತಿಗಳ ಮೌಲ್ಯೀಕರಣ ಎನ್ನುವ ವಿಷಯದ ಕುರಿತು ಇವರು ಮಂಡಿಸಿದ ಮಹಾಪ್ರಬಂಧಕ್ಕೆ ಡಾ| ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿ.ವಿ. ಪಿ.ಎಚ್‌ಡಿ ಪದವಿ ನೀಡಿದೆ. ಇದಕ್ಕಾಗಿ ಯಕ್ಷಗಾನದ ಇತಿಹಾಸ, ಪೌರಾಣಿಕೆ ಹಿನ್ನಲೆ, ರೂಪಾಂತರವನ್ನು ಅಭ್ಯಸಿಸಿ ಪ್ರಬಂಧದಲ್ಲಿ ಮಂಡಿಸಿದ್ದಾರೆ. ಹತ್ತಾರು ಹಿರಿಯ ಕಲಾವಿದರನ್ನು ಸಂದರ್ಶಿಸಿ, ಕ್ಷೇತ್ರದಲ್ಲಿ ಆಳವಾದ ಅಧ್ಯಯನ ನಡೆಸಿದ್ದಾರೆ. ಸುಮಾರು 3 ತಲೆಮಾರಿನ ಅನುಭವವನ್ನು ಸಂಗ್ರಹಿಸಿದ್ದಾರೆ. ಮುಖ್ಯ ಉದ್ದೇಶ: ಆರ್ಥಿಕವಾಗಿ ಸದೃಢವಿದ್ದಾಗ ಕಲಾವಿದರು ಉಳಿಯುತ್ತಾರೆ. ಕಲಾ ಪ್ರಕಾರ ಉಳಿಯುತ್ತದೆ. ಯಕ್ಷಗಾನ ಕ್ಷೇತ್ರದಲ್ಲಿ ಆರ್ಥಿಕ ಸುಸ್ಥಿರತೆ ಕಾಪಾಡುವ ಮುಖ್ಯ ಉದ್ದೇಶದಿಂದ ವಿಚಾರ ಮಂಡಿಸಿದ್ದಾರೆ. ಈ ಸುಸ್ಥಿರತೆಯಲ್ಲಿ ಕಲಾವಿದರು, ಮೇಳದ ಯಜಮಾನರು, ಸಂಘಟಕರು, ಪ್ರೇಕ್ಷಕರು ಹಾಗೂ ಪ್ರಾಮುಖ್ಯವಾಗಿ ಸರಕಾರದ ಪಾತ್ರವನ್ನು ಒತ್ತಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದೀಕ್ಷಾ ಕನ್ವೆನ್ಷನ್ ಹಾಲ್ ಹೊಂದಿರುವ ಶ್ರೀಯುತರು ಯುವ ಉದ್ಯಮಿಯಾಗಿ, ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿರುರುವ ಬಾರ್ಕೂರು ದೀಪಕ್ ಶೆಟ್ಟಿಯವರ ಸಾಧನೆಗೆ Mp mla’s ನ್ಯೂಸ್ ಶುಭ ಹಾರೈಸುತ್ತದೆ.

ಕರ್ನಾಟಕ ವಾರ್ತೆಗಳು

ವಸತಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಜು.05 : ಇತರ ಶಾಲೆಗಳಿಗೆ ಹೋಲಿಸಿದರೆ ವಸತಿ ಶಾಲೆಗಳು ಗುಣಮಟ್ಟದಲ್ಲಿ ಉತ್ತಮವಾಗಿದ್ದರೂ, ವಸತಿ ಶಾಲೆಗಳಿಗೆ ಇನ್ನಷ್ಟು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಅವರು ಶುಕ್ರವಾರ ಎಸ್‌ಸಿಸಿಪಿ/ಟಿ.ಎಸ್.ಪಿ ರಾಜ್ಯ ಅಭಿವೃದ್ದಿ ಪರಿಷತ್‌ ಸಭೆಯ ಬಳಿಕ ಚಾಮರಾಜಪೇಟೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ 833 ವಸತಿ ಶಾಲೆಗಳಿದ್ದು, ಎಲ್ಲಾ ವಸತಿ ಶಾಲೆಗಳಿಗೆ ಸುಸಜ್ಜಿತವಾದ ಕಟ್ಟಡಗಳನ್ನು ಹಂತಹಂತವಾಗಿ ನಿರ್ಮಿಸಲಾಗುತ್ತಿದೆ. ಎಲ್ಲಾ ಆಶ್ರಮ ಶಾಲೆಗಳನ್ನು ವಸತಿ ಶಾಲೆಗಳಾಗಿ ಪರಿರ್ವತಿಸುತ್ತಿದ್ದೇವೆ. ಈ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಊಟ, ವಾಸ್ತವ್ಯ ವ್ಯವಸ್ಥೆ ಮಾತ್ರವಲ್ಲದೆ ಇಂಗ್ಲಿಷ್‌, ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಕೋಚಿಂಗ್‌ ಸಹ ನೀಡುತ್ತಿದ್ದೇವೆ ಎಂದು ಹೇಳಿದರು.ಚಾಮರಾಜಪೇಟೆಯ ಸರ್ಕಾರಿ ಶಾಲೆಯನ್ನು ಪಡೆದು ಮೊರಾರ್ಜಿ ದೇಸಾಯಿ ವಸತಿ ಶಾಲೆಯಾಗಿ ಪರಿವರ್ತಿಸಲಾಗಿದೆ. ಪ್ರಸ್ತುತ ಇಲ್ಲಿ 218 ಮಕ್ಕಳಿದ್ದಾರೆ. ವಿದ್ಯಾರ್ಥಿಗಳ ಜತೆಯಲ್ಲಿ ಮಾಡಿದ ಊಟ, ಸಾಂಬಾರ್ ಚೆನ್ನಾಗಿತ್ತು‌ ಎಂದು ಅವರು ಈ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಕರ್ನಾಟಕ ವಾರ್ತೆಗಳು

ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಮಿತ್ರಂಪಾಡಿ ಜಯರಾಮ ರೈ.

ಬೆಂಗಳೂರು : ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಬುಧಾಬಿಯ ಖ್ಯಾತ ಉದ್ಯಮಿ,ವಿಶ್ವದ ಅತೀ ದೊಡ್ಡ ಅನಿವಾಸಿ ಭಾರತೀಯರ ಸಂಘಟನೆ ಯಾಗಿರುವ ಇಂಡಿಯಾ ಸೋಶಿಯಲ್ ಅಂಡ್ ಕಲ್ಚರಲ್ ಸೆಂಟರ್ ನ ಅಧ್ಯಕ್ಷರಾದ ಪುತ್ತೂರು ಮೂಲದ ಮಿತ್ರಂಪಾಡಿ ಜಯರಾಮ ರೈಯವರಿಗೆ ಜೂನ್ 23ರಂದು ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಯನ್ನು ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ನೀಡಿ ಗೌರವಿಸಿತ್ತು. ವಿದೇಶಿ ಗಣ್ಯರು ಸೇರಿದಂತೆ 60 ಮಂದಿ ಸಾಧಕರಿಗೆ 2024 ರ ಸಾಲಿನ 49 ನೇಯ ವಾರ್ಷಿಕ ‘ಆರ್ಯಭಟ ಅಂತರ್ ರಾಷ್ಟ್ರೀಯ ಪ್ರಶಸ್ತಿ’ಯನ್ನು ನೀಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿಗಳಾದ ಡಾ| ಹೆಚ್.ಬಿ.ಪ್ರಭಾಕರ ಶಾಸ್ತ್ರಿಯವರು ನೆರವೇರಿಸಿದ್ದು, ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ| ಮಹೇಶ್ ಜೋಶಿಯವರು, ಖ್ಯಾತ ಚಲನಚಿತ್ರ ನಿರ್ದೇಶಕರಾದ ಡಾ. ಎಸ್.ನಾರಾಯಣ್ ರವರು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಆರ್ಯಭಟ ಸಂಸ್ಥೆಯ ಸಂಸ್ಥಾಪಕರಾದ ಡಾ. ಹೆಚ್.ಎಲ್.ಎನ್.ರಾವ್ ರವರು ವಹಿಸಿದ್ದರು. ಕಾನೂನು ಮತ್ತು ನ್ಯಾಯಾಂಗ ವಿಭಾಗದಿಂದ ಸಿ.ಕೆ. ವೀರೇಶ್‌ಕುಮಾರ್, ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ, ನಟ ರಕ್ಷಿತ್‌ ಶೆಟ್ಟಿ, ಪತ್ರಕರ್ತರಾದ ವೈ.ಎಸ್.ಎಲ್.ಸ್ವಾಮಿ. ಸರ್ಕಲ್ ಇನ್ಸ್‌ಪೆಕ್ಟ‌ರ್ ಆರ್.ಪಿ.ಅನಿಲ್, ಕತಾರ್‌ನಿಂದ ಅನಿಲ್ ಚಂದ್ರಶೇಖರ್ ಬಾಸಗಿ, ಲಂಡನ್‌ನಿಂದ ಡಾ. ಸತ್ಯವತಿ ಮೂರ್ತಿ, ಅಮೇರಿಕಾದಿಂದ ಪ್ರದ್ಯುಮ್ನ ಕಶ್ಯಪ್, ಕೃಷ್ಣ ಆದೋನಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದಿರುವ 60 ಸಾಧಕರಿಗೆ ಆರ್ಯಭಟ ಅಂತ‌ರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜೂನ್ 23ರ ಸಂಜೆ 6 ಗಂಟೆಗೆ ಪ್ರದಾನ ಮಾಡಲಾಯಿತು.ಕರಾವಳಿಯ ಸಾಧಕರು: ಕರಾವಳಿ ಭಾಗದಿಂದ ರಾಜ್ಯ ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷ, ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಕೆ ರವೀಂದ್ರ ಶೆಟ್ಟಿ ಉಳಿದೊಟ್ಟು, ಪುಣೆ ಅಹ್ಮದ್ ನಗರದ ಉದ್ಯಮಿ, ಧಾರ್ಮಿಕ ಸೇವಾಕರ್ತ ಕೆ.ಕೆ.ಶೆಟ್ಟಿ, ತುಳು ಸಾಹಿತಿ ಯೋಗೀಶ್ ಕಾಂಚನ್, ಯಕ್ಷಾಂಗಣ ಮಂಗಳೂರು ಉಪಾಧ್ಯಕ್ಷ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ಮೂಲ್ಕಿಯಿಂದ ಹೊಸ ಅಂಗಣ ಪತ್ರಿಕೆ ಯ ಸಂಪಾದಕ ಡಾ. ಹರಿಶ್ಚಂದ್ರ ಪಿ. ಸಾಲಿಯಾನ್, ಯಕ್ಷಗಾನ ಕಲಾವಿದ ದಿನೇಶ್ ಕೋಡಪದವು ಪ್ರಶಸ್ತಿ ಸ್ವೀಕರಿಸಿದರು..

ಕರ್ನಾಟಕ ವಾರ್ತೆಗಳು

ರಾಜ್ಯ ಬಿಜೆಪಿಯ ವತಿಯಿಂದ ನೂತನ ಸಂಸದರಿಗೆ ಮತ್ತು ನೂತನ ಸಚಿವರಿಗೆ ಸನ್ಮಾನ

ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಬಿಜೆಪಿ ಆಯೋಜಿಸಿದ್ದ ನೂತನ ಸಂಸದರಿಗೆ ಮತ್ತು ಕೇಂದ್ರ ಸಚಿವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಗೌರವಿಸಲಾಯಿತು. ರಾಜ್ಯದಿಂದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದ ಆಯ್ಕೆಯಾದ 19 ಸಂಸದರನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಹಾಗೂ ಡಿ.ವಿ ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ, ಕರ್ನಾಟಕದ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಉಪಸ್ಥಿತರಿದ್ದರು.

ಕರ್ನಾಟಕ ವಾರ್ತೆಗಳು

ಜೇವರ್ಗಿಯಲ್ಲಿ ರಾಷ್ಟ್ರೀಯ ಕಿಶೋರ್ ಸ್ವಾಸ್ತ್ಯ ಕಾರ್ಯಕ್ರಮ.

ಜೇವರ್ಗಿ : ಜೇವರ್ಗಿ ತಾಲ್ಲೂಕಿನ ಸಮುದಾಯ ಆರೋಗ್ಯ ಕೇಂದ್ರ, ನೆಲೋಗಿ ವ್ಯಾಪ್ತಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಮಂದೇವಾಲ್ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿ ಆವರಣದಲ್ಲಿ ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮ* (RKSK) ದಡಿಯಲ್ಲಿ ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಪ್ರಯುಕ್ತ ಅಂತರರಾಷ್ಟ್ರೀಯ ಮುಟ್ಟಿನ ನೈರ್ಮಲ್ಯ ದಿನಾಚರಣೆ ಹಮ್ಮಿಕೊಂಡಿತ್ತು. ಸದರಿ ಕಾರ್ಯಕ್ರಮದಲ್ಲಿ ಮಂದೇವಾಲ್ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಮೇಶ್ ಗೌಡ ಪಾಟೀಲ್ ರವರ ಜೊತೆಗೆ ಆರೋಗ್ಯ ಸಿಬ್ಬಂದಿಗಳು ಮತ್ತು KHPT ಸಿಬ್ಬಂದಿಗಳು ಸ್ನೇಹ ಕ್ಲಿನಿಕ್ ಪೋಸ್ಟರಗಳನ್ನು ಬಿಡುಗಡೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ಹದಿಹರೆಯದ ಹೆಣ್ಣು ಮಕ್ಕಳು ಕಾರ್ಯಕ್ರಮಕ್ಕೆ ಬಂದ ಅತಿಥಿ ಗಣ್ಯರಿಗೆ ಕೆಂಪು ಬಣ್ಣದ ರಿಬ್ಬನ್ ಕಟ್ಟುವುದರ ಮೂಲಕ ಸ್ವಾಗತಿಸಿದರು. ಮಂದೇವಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ.ರೇಣುಕಾದೇವಿ ದೇವರಮನಿರವರು ಹೆಣ್ಣು ಮಕ್ಕಳಲ್ಲಿ ಆಗುವ ಮಾಸಿಕ ಋತುಶ್ರಾವದ (ಮುಟ್ಟು) ಬಗ್ಗೆ ಕಿಶೋರಿಯರಿಗೆ ಚರ್ಚೆ ಮೂಲಕ ಸಮಗ್ರ ಮಾಹಿತಿ ನೀಡಿದರು. ಮಕ್ಕಳಿಗೆ ಪೌಷ್ಟಿಕ ಆಹಾರ ವ್ಯಯಕ್ತಿಕ ಶುಚಿತ್ವದ ಕುರಿತು RKSK ಆಪ್ತ ಸಮಾಲೋಚಕರಾದ ನಿಂಗಣ್ಣಗೌಡ. ಎಸ್. ಪಾಟೀಲ್ ರವರು ತಿಳಿಸಿದರು. ಅದೇ ರೀತಿಯಾಗಿ ,KHPT ಸಂಸ್ಥೆಯ ಸಮುದಾಯ ಸಂಘಟಕರಾದ ಮತಿ ಮೇಘಾ ಅವರು ನಿರೂಪಣೆ ಮಾಡುತ್ತಾ ಹದಿಹರೆಯದ ಮಕ್ಕಳಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತಿ ಉಪಾದ್ಯಕ್ಷರಾದ ಮತಿ ಲಕ್ಷ್ಮೀ ಮುದಗಲ್ ರವರು ವಂದಿಸಿದರು. ಸದರಿ ಕಾರ್ಯಕ್ರಮದಲ್ಲಿ PHCO ರಾದ ಶ್ರೀಮತಿ ಚಂದ್ರಕಲಾ ಹಚ್ಚಡ KHPT ಸಮುದಾಯ ಸಂಘಟಕಾರದ ಮತಿ ಈರಮ್ಮ ,ಶ್ರೀಮತಿ ಸಾವಿತ್ರಿ ಮತ್ತು ಶ್ರೀ ಮತಿ ದಾನಮ್ಮ ಹಾಗೂ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಮತ್ತು ಕಿಶೋರಿಯರ ಪಾಲಕರು ಮತ್ತು ಪೋಷಕರು ಭಾವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು..

ಕರ್ನಾಟಕ ವಾರ್ತೆಗಳು, ರಾಜಕೀಯ ವಾರ್ತೆಗಳು

ಕರ್ನಾಟಕ ರಾಜ್ಯದಲ್ಲಿ ಏಪ್ರಿಲ್ 26 ರಂದು ಲೋಕಸಭೆಗೆ ನಡೆದ ಮೊದಲ ಹಂತದ ಚುನಾವಣೆಯ ಮತದಾನದ ಶೇಕಡವಾರು ವಿವರ.

ವಿಶೇಷ ವರದಿ:ಡಾ. ಅಶೋಕ್ ಶೆಟ್ಟಿ ಬಿ. ಎನ್. ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಲೋಕಸಭೆಗೆ ನಡೆದ ಮೊದಲ ಹಂತದ ಚುನಾವಣೆಯ ಮತದಾನದ ಶೇಕಡವಾರು ವಿವರವನ್ನು ಗಮನಿಸಿದರೆ ದ.ಕ. ಬೆಸ್ಟ್, ನಂತರದ ಸ್ಥಾನ ಉಡುಪಿಗೆ ಮತ್ತು ಬೆಂಗಳೂರು ನೀರಸ ಮತದಾನ ಪ್ರಕ್ರಿಯೆ ತೋರಿಸಿದೆ.ಲೋಕಸಭೆ ಕ್ಷೇತ್ರ –ದಕ್ಷಿಣ ಕನ್ನಡ – 72%(2024) 80%(2019)ಉಡುಪಿ – 73%(2024) 78%(2019)ಮೈಸೂರು – 67%(2024) 71%(2019)ಚಾಮರಾಜ ನಗರ- 70%(2024) 77%(2019)ಚಿತ್ರದುರ್ಗ – 68%(2024) 72%(2019)ಹಾಸನ – 72%(2024) 79%(2019)ತುಮಕೂರು – 72%(2024) 79%(2019)ಚಿಕ್ಕಬಳ್ಳಾಪುರ – 72%(2024) 77%(2019)ಮಂಡ್ಯ – 75%(2024) 82%(2019)ಕೋಲಾರ – 73%(2024) 79%(2019)ಬೆಂಗಳೂರು ಗ್ರಾಮಾಂತರ – 62%(2024) 68%(2019)ಬೆಂಗಳೂರು ದಕ್ಷಿಣ- 49%(2024) 55%(2019)ಬೆಂಗಳೂರು ಸೆಂಟ್ರಲ್ – 49%(2024) 56%(2019)ಬೆಂಗಳೂರು ಉತ್ತರ- 51%(2024) 55%(2019)

ಕರ್ನಾಟಕ ವಾರ್ತೆಗಳು

ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರ ನೇಮಕ

ಕರ್ನಾಟಕ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ತಾರನಾಥ ಗಟ್ಟಿ ಕಾಪಿಕಾಡ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಉಮ್ಮರ್ ಯು.ಎಚ್.,ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಜೋಂಕಿ ಸ್ಟಾಸ್ಟ್ಯಾನ್ಲಿ ಅಲ್ವಾರಿಸ್, ಅರೆಭಾಷೆ ಅಕಾಡೆಮಿ ಅಧ್ಯಕ್ಷರಾಗಿ ಮಂಡೆಕೋಲಿನ ಸದಾನಂದ ಮಾವಜಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಜಾನಪದ ವಿದ್ವಾಂಸ ಡಾ. ಪುರುಷೋತ್ತಮ ಬಿಳಿಮಲೆ ನೇಮಕಗೊಂಡಿದ್ದಾರೆ.

ಕರ್ನಾಟಕ ವಾರ್ತೆಗಳು

ವಿಧಾನ ಸಭಾ ಕಲಾಪ ವೀಕ್ಷಿಸಿದ ಬೆಂಡೋಡಿ ಸರಕಾರಿ ಶಾಲಾ ಪುಟಾಣಿಗಳು

ಸುಳ್ಯ, ಫೆ.20: ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಸರಕಾರಿ ಕಿರಿಯ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಜೊತೆಗೆ ಬೆಂಗಳೂರಿನ ವಿಧಾನ ಸೌಧಕ್ಕೆ ಆಗಮಿಸಿ ವಿಧಾನ ಸಭಾ ಕಲಾಪ ವೀಕ್ಷಿಸಿದರು. ಬೆಂಡೋಡಿ ಶಾಲಾ ಮುಖ್ಯ ಶಿಕ್ಷಕಿ ಲಲಿತಾ ಕುಮಾರಿ ನೇತೃತ್ವದಲ್ಲಿ ಶಾಲೆಯ 14 ಮಂದಿ ಪುಟಾಣಿಗಳು ವಿಧಾನ ಸಭಾ ಕಲಾಪ ವೀಕ್ಷಿಸಿದರು. ಅದಕ್ಕೂ ಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಭೇಟಿ ಮಾಡಿ ಶಾಲಾ ಬೇಡಿಕೆಗಳ ಬಗ್ಗೆ ಮಕ್ಕಳು ಮನವಿ ಸಲ್ಲಿಸಿದರು. ಬಳಿಕ ಯು.ಟಿ.ಖಾದರ್ ಅವರ ಜೊತೆಗೆ ವಿಧಾನ ಸೌಧದ ಮುಂಭಾಗ ಪೊಟೊ ತೆಗೆಸಿಕೊಂಡರು. ಪ್ರಥಮ ಬಾರಿಗೆ ವಿಧಾನ ಸಭಾ ಕಲಾಪ ವೀಕ್ಷಿಸಿದ ಮಕ್ಕಳು ಸಂತಸ ವ್ಯಕ್ತಪಡಿಸಿದರು. ಇತ್ತೀಚೆಗೆ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಕೊಲ್ಲಮೊಗ್ರು ವಿಗೆ ಆಗಮಿಸಿದ್ದ ಯು.ಟಿ.ಖಾದರ್ ಅವರು ಗ್ರಾಮದ ಸರಕಾರಿ ಶಾಲೆಯೊಂದರ ಮಕ್ಕಳಿಗೆ ವಿಧಾನ ಸಭಾ ಕಲಾಪ ವೀಕ್ಷಣೆಗೆ ವ್ಯವಸ್ಥೆ ಮಾಡುವ ಭರವಸೆ ನೀಡಿದಂತೆ ಕಲಾಪ ವಿಕ್ಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕರಾವಳಿ ಸುದ್ದಿ, ಕರ್ನಾಟಕ ವಾರ್ತೆಗಳು

ದುರ್ಗಾಪರಮೇಶ್ವರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಇದರ ವ್ಯವಸ್ಥಾಪಕ ಎಂ.ಬಿ ಉಮೇಶ್‌ ಶೆಟ್ಟಿ ಇವರಿಗೆ 2024ರ ಸಾಧಕ ಪ್ರಶಸ್ತಿ

ದುರ್ಗಾ ಪರಮೇಶ್ವರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಭಯ ಸೇವಾ ಫೌಂಡೇಶನ್ ಅಧ್ಯಕ್ಷರಾದ ಎಂ.ಬಿ ಉಮೇಶ್ ಶೆಟ್ಟಿ ಮಂದಾರ್ತಿ ಇವರಿಗೆ ಏಶಿಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಪತ್ರಿಕೆ ಇವರ ಸಮಾಜಸೇವೆ ಗುರುತಿಸಿ 2024ರ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಶ್ರೀಯುತರು ಸಾಮಾಜಿಕ ಸೇವೆಯ ನೂತನ ಕ್ರಾಂತಿ ಮಾಡುವ ಮೂಲಕ ಹಲವಾರು ಬಡ ಜನತೆಯ ಕುಟುಂಬಕ್ಕೆ ಬೆಳಕಾಗಿ ಸಮಾಜದಲ್ಲಿ ತಮ್ಮ ಸಾಮಾಜಿಕ ಕಾರ್ಯದಲ್ಲಿ ಗುರುತಿಸಿಕೊಂಡವರು. ಈ ಪ್ರಶಸ್ತಿ ಇವರ ಅಭಿಮಾನಿಗಳಿಗೆ ಅತೀವ ಸಂತಸ ತಂದಿದೆ.

ಕರ್ನಾಟಕ ವಾರ್ತೆಗಳು

ಮುಖ್ಯ ಮಂತ್ರಿ ಸಿದ್ಧರಾಮಯ್ಯರಿಂದ ದ.ಕ . ಪತ್ರಕರ್ತರ ಗ್ರಾಮ ವಾಸ್ತವ್ಯದ ಮಾಹಿತಿ ಪತ್ರ ಬಿಡುಗಡೆ

ದಾವಣಗೆರೆ,ಫೆ.3;ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ,ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ,ದ.ಕ ಜಿಲ್ಲಾ ಪಂಚಾಯತ್,ಸುಳ್ಯ ತಾಲೂಕು ಪಂಚಾಯತ್ ,ದ.ಕ ಜಿಲ್ಲಾ ಪೊಲೀಸ್ ಇಲಾಖೆ. ಹರಿಹರ,ಕೊಲ್ಲಮೊಗರು ಗ್ರಾಮ ಪಂಚಾಯತ್ ಮತ್ತು ಸ್ಥಳೀಯಾಡಳಿತ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋ ಗದೊಂದಿಗೆ  ಕೊಲ್ಲಮೊಗರುವಿನ ಬಂಗ್ಲೆ ಗುಡ್ಡೆ ಸರಕಾರಿ ಶಾಲಾ ವಠಾರದಲ್ಲಿ ಫೆ.10ರಂದು  ನಡೆಯಲಿರುವ ಪತ್ರಕರ್ತರ 5ನೆ ಗ್ರಾಮ ವಾಸ್ತವ್ಯದ ಮಾಹಿತಿ ಪತ್ರವನ್ನು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ದಾವಣಗೆರೆಯ ಕರ್ನಾಟಕ ಕಾರ್ಯ ನಿರತ ಪತ್ರ ಕರ್ತರ ಸಂಘದ ಸಮಾವೇಶದಲ್ಲಿ ಶನಿವಾರ ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ದಾವಣಗೆರೆ ಉಸ್ತುವಾರಿ ಸಚಿವ ಮಲ್ಲಿಕಾರ್ಜುನಯ್ಯ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅದ್ಯಕ್ಷ ಶಿವಾನಂದ್ ತಗಡೂರು, ಮಾಜಿ ಸಚಿವ ಶಾಮನೂರು ಶಿವ ಶಂಕರಪ್ಪ, ದಕ್ಷಿಣ ಕನ್ನಡ ಜಿಲ್ಲೆ ಕಾರ್ಯ ನಿರತ ಪತ್ರಕಾರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಮೊದಲಾದ ವರು  ಉಪಸ್ಥಿತರಿದ್ದರು.

Scroll to Top