ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಹಾಸನದಲ್ಲಿ ಏ.12, 13ಕ್ಕೆ ಪತ್ರಕರ್ತರ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ. ಕ್ರೀಡಾಕೂಟ ಲಾಂಛನ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಹಾಸನದಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಕ್ರಿಕೆಟ್ ಕ್ರೀಡಾಕೂಟದ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕಾವೇರಿಯಲ್ಲಿ ಸೋಮವಾರ ಅನಾವರಣ ಮಾಡಿದರು.ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ವು ಈ ಬಾರಿ ಹಾಸನ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸಹಕಾರದಿಂದ ಇದೇ ಏ.12 ಮತ್ತು 13ರಂದು ಕ್ರೀಡಾಕೂಟವನ್ನು ಸಂಘಟಿಸಿದೆ. ಪ್ರತಿ ಜಿಲ್ಲೆಯ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದು, ಎರಡು ದಿನ ಪತ್ರಕರ್ತರ ಕ್ರಿಕೆಟ್ ಕ್ರೀಡಾ ಹಬ್ಬನಡೆಯಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಮುಖ್ಯಮಂತ್ರಿಗಳಿಗೆ ತಿಳಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, ಕ್ರೀಡಾಕೂಟ ಯಶಸ್ವಿಯಾಗಲಿ. ಎಲ್ಲರಿಗೂ ಶುಭವಾಗಲಿ ಎಂದು ಶುಭ ಹಾರೈಸಿದರು.ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ವಾರ್ತಾ ಇಲಾಖೆ ಆಯುಕ್ತರಾದ ಹೇಮಂತ ನಿಂಬಾಳ್ಕರ್, ಭಾರತೀಯ ಕಾರ್ಯ ನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ, ರಾಜ್ಯ ಸಮಿತಿ ಸದಸ್ಯ ಸೋಮಶೇಖರಗಾಂಧಿ ಮತ್ತಿತರರು ಹಾಜರಿದ್ದರು.ಲಾಂಛನ ವಿಶೇಷ:ಕ್ರಿಕೆಟ್ ಕ್ರೀಡಾಕೂಟ ಲಾಂಛನವು, ಹಾಸನ ಜಿಲ್ಲೆಯ ಜೀವನದಿ ಹೇಮಾವತಿ, ಹೊಯ್ಸಳ ಶಿಲ್ಪಕಲೆಯ ತವರೂರು, ಗೊಮ್ಮಟನ ನೆಲೆಬೀಡು ಎನ್ನುವುದನ್ನು ಪ್ರತಿನಿಧಿಸುತ್ತದಲ್ಲದೆ, ಮಲೆನಾಡು, ಅರೆ ಮಲೆನಾಡು, ಬಯಲುಸೀಮೆಯ ಸೊಗಡನ್ನು ಹೊಂದಿದೆ.

ಪ್ರಾದೇಶಿಕ ವಾರ್ತೆಗಳು

ಕ್ಯಾಥೊಲಿಕ್ ಕ್ರೈಸ್ತ ಧರ್ಮಸಭೆಯಿಂದ ಜುಬಿಲಿ ವರ್ಷ 2025

ಮಂಗಳೂರು:ಕ್ಯಾಥೋಲಿಕ್ ಕ್ರೈಸ್ತ ಧರ್ಮ ಸಭೆಯು ಭರವಸೆಯ ಯಾತ್ರಿಕರು ಎಂಬ ಧ್ಯೇಯದೊಂದಿಗೆಜುಬಿಲಿ ವರ್ಷ 2025 ನ್ನು ಆಚರಿಸುತ್ತಿದ್ದು, ಅದರ ಅಂಗವಾಗಿ ಮಂಗಳೂರು ಧರ್ಮ ಪ್ರಾಂತ್ಯದ ಎಪಿಸ್ಕೋಪಲ್ ಸಿಟಿ ವಲಯವು ಆಧ್ಯಾತ್ಮಿಕ ನವೀಕರಣದ ಉದ್ದೇಶವನ್ನು ಇರಿಸಿಕೊಂಡು ತಪಸ್ಸು ಕಾಲದಬೈಬಲ್ ಆಧಾರಿತ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಉದ್ಘಾಟನೆ ಭಾನುವಾರ ನೆರವೇರಿತು.ಜಪ್ಪು ಸೈಂಟ್ ಜೋಸೆಫ್ ಸೆಮಿನರಿಯ ತೆರೆದ ಮೈದಾನದಲ್ಲಿ ನಡರ ಸಾಮಾ ರಂಭದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪಾವ್ಲ್ ಸಲ್ದಾನ್ಹ ಅವರು 3 ದಿನಗಳ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ವಿಶಿಷ್ಟವಾದ ಸ್ಪರ್ಧೆಯುಬೈಬಲ್- ಆಧಾರಿತ ಕಿರು ನಾಟಕ ಪ್ರದರ್ಶನ ಮತ್ತು ಕೀರ್ತನೆ ಹಾಡುವ ಸ್ಪರ್ಧೆಗಳನ್ನು ಒಳಗೊಂಡಿದೆ, ಎಪಿಸ್ಕೋಪಲ್ ಸಿಟಿ ವಲಯ ವ್ಯಾಪ್ತಿಯಲ್ಲಿ 11 ಚರ್ಚ್ ಗಳು ಬರುತ್ತಿವೆ.ಸಮುದಾಯದ ಸಂಪರ್ಕವನ್ನು ಬಳ ಪಡಿಸುವುದು ಮತ್ತು ಸುವಾರ್ತೆಯನ್ನು ಆಧರಿಸಿ ಜೀವಿಸುವ ನವೀಕರಣದ ಬದ್ಧತೆಯನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. “ದೇವರ ವಾಕ್ಯದ ಪ್ರಕಾರ ಬದುಕುವವರು ತಮ್ಮ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ಅನುಭವಿಸುತ್ತಾರೆ. ವಾಕ್ಯವು ಕೇವಲ ಪಠ್ಯವಲ್ಲ; ಇದು ಜೀವನ ವಿಧಾನವಾಗಿದೆ ಎಂದು ಬಿಷಪ್ ಹೇಳಿದರು.ಸಮಾರಂಭದಲ್ಲಿ ವಿಕಾರ್ ಜನರಲ್ ಅತಿ ವಂದನೀಯಮ್ಯಾಕ್ಸಿಮ್ ನೊರೊನ್ಹಾ, ಚಾನ್ಸಲರ್ ಫಾದರ್ ವಿಕ್ಟರ್ ಜಾರ್ಜ್ ಡಿ’ಸೋಜಾ, ಫಾ. ರೊನಾಲ್ಡ್ ಸೇರಾವೋ, ಫಾ. ಜೆ.ಬಿ.ಸಲ್ಡಾನ್ಹಾ, ಫಾ. ಮ್ಯಾಕ್ಸಿಂ ಡಿಸೋಜಾ, ಫಾ. ವಾಲ್ಟರ್ ಡಿಸೋಜಾ , ಫಾ. ಜೆ. ಬಿ. ಕ್ರಾಸ್ತಾ, ಫಾ. ಎರಿಕ್ ಕ್ರಾಸ್ತಾ, ಫಾ. ವಿಜಯ್ ವಿಕ್ಟರ್ ಲೋಬೊ, ಫಾ. ಬೊನವೆಂಚರ್ ನಜರೆತ್, ಮಾಧ್ಯಮ ಸಂಚಾಲಕ ಎಲಿಯಾಸ್ ಫೆರ್ನಾಂಡಿಸ್ ಮುಂತಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

“ಮೀರಾ” ತುಳು ಸಿನಿಮಾ ಎಪ್ರಿಲ್ 11 ರಂದು ತೆರೆಗೆ.ಅಸ್ತ್ರ ಸಂಸ್ಥೆಯಿಂದ ಸಾಮಾಜಿಕ ಕಾರ್ಯಕರ್ತೆ ರಜಿನಿ ಶೆಟ್ಟಿಗೆ ಒಂದು ಲಕ್ಷ ರೂ, ಟ್ರಾಫಿಕ್ ಪೊಲೀಸರಿಗೆ ಕೊಡೆ ವಿತರಣೆ

ಮಂಗಳೂರು: ಅಸ್ತ್ರ ಪ್ರೊಡಕ್ಷ ನ್ನ ಬ್ಯಾನರ್ ನಲ್ಲಿ ಲಂಚು ಲಾಲ್ ಕೆ.ಎಸ್. ನಿರ್ಮಿಸಿರುವ, ಅಶ್ವಥ್ ನಿರ್ದೇಶನದ ‘ಮೀರಾ’ ಚಲನಚಿತ್ರ ಎಪ್ರಿಲ್ 11 ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಲಂಚುಲಾಲ್ ಕೆ.ಎಸ್. ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.ಈ ಚಿತ್ರವನ್ನು ಲಂಚುಲಾಲ್ ಕೆ.ಎಸ್.ನಿರ್ಮಿಸಿದ್ದು, ಅಶ್ವಥ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರ ತುಳು ಚಿತ್ರರಂಗದಲ್ಲಿ ಮಹತ್ವದ ಮೈಲಿಗಲ್ಲು ಆಗಲಿದೆ, ಈ ಚಿತ್ರ ತುಳು ಸಿನಿಮಾ ಇಂಡಸ್ಟ್ರಿಯಲ್ಲಿ ಮೊದಲ ಮಹಿಳಾ ಪ್ರಧಾನ ಚಿತ್ರವಾಗಿದೆ.ಚಿತ್ರದಲ್ಲಿ ಇಶಿತಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅರವಿಂದ್ ಬೋಳಾರ್, ಸ್ವರಾಜ್ ಶೆಟ್ಟಿ, ಜೆ.ಪಿ.ತೂಮಿನಾಡು, ಪ್ರಕಾಶ್ ತೂಮಿನಾಡು, ಮಂಜು ರೈ ಮೂಳೂರು, ರೂಪಶ್ರೀ ವರ್ಕಾಡಿ, ಯತೀಶ್ ಪೂಜಾರಿ, ಅಶ್ವಥ್, ಬೇಬಿ ಲಕ್ಷ್ಯ ಎಲ್. ಮುಂತಾದ ಕೋಸ್ಟಲ್ ವುಡ್ ನ ಹೆಸರಾಂತ ಕಲಾವಿದರ ಜತೆ ಮುಂಬೈ ಮೂಲದ ತುಳು ಬ್ಲಾಗರ್ ನಟಿ ರಕ್ಷಿತಾ ಶೆಟ್ಟಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಕರಾವಳಿ ಭಾಗದ ಅನೇಕ ಪ್ರತಿಭೆಗಳೂ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.ಮೀರಾ ಚಲನಚಿತ್ರದ ಡಿಒಪಿ ಅಜಯ್ ಕೆ.ಎಸ್, ಸಂಕಲನ ಜಾಬಿನ್ಸ್ ಸೆಬಾಸ್ಟಿಯನ್ ನಿರ್ವಹಿಸುತ್ತಿದ್ದು ಸಂಗೀತ ಸಂಯೋಜನೆ ರಜ್ಜು ಜಯ ಪ್ರಕಾಶ್, ಗೀತೆರಚನೆ ಜಯಪ್ರಕಾಶ್ ಕಳೇರಿ ನಿರ್ವಹಿಸುತ್ತಿದ್ದಾರೆ. ಮಲ ಯಾಳಂ ಸಿನೆಮಾ ‘ಭ್ರಮಯುಗಂ’ ಖ್ಯಾತಿಯ ಲಿಜು ಪ್ರಭಾಕರ್ ಚಿತ್ರದ ಡಿ.ಐ ವಿಭಾಗವನ್ನು ನಿರ್ವಹಿಸುತ್ತಿ ದ್ದಾರೆ.ಎಸ್.ಎಫ್.ಎಕ್ಸ್. ಮತ್ತು ಅಂತಿಮ ಮಿಶ್ರಣವನ್ನು ಯುನಿಟಿ ಸ್ಟುಡಿಯೋಸ್ ನಿರ್ವಹಿಸಿದ್ದು, ಜಿತಿನ್ ಕುಂಬ್ಳೆ ಸಹಾಯಕ ನಿರ್ದೇಶಕರಾಗಿ, ಜಯ ಸುವರ್ಣ ಮೇಕ್ ಅಪ್ ಹಾಗೂ ಪಿ.ಆ‌ರ್.ಒ ಆಗಿ ಬಾಳ ಜಗನ್ನಾಥ ಶೆಟ್ಟಿ ಉಸ್ತುವಾರಿ ವಹಿಸಿದ್ದಾರೆ. ಈ ಚಿತ್ರದಲ್ಲಿ 5 ಹಾಡುಗಳಿದ್ದು ದಕ್ಷಿಣ ಭಾರತ ಹೆಸರಾಂತ ಹಿನ್ನೆಲೆ ಗಾಯಕರಾದ ಮಧುಬಾಲಕೃಷ್ಣ ಸೇರಿ ದಂತೆ ಹೆಸರಾಂತ ಗಾಯಕರ ಧ್ವನಿ ಯಲ್ಲಿ ಮೂಡಿ ಬಂದಿದೆ. ತುಳು ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ A.I ತಂತ್ರಜ್ಞಾನದಲ್ಲಿ ತಯಾರಿಸಿದ ಹಾಡು ಕೂಡ ಈ ಚಿತ್ರದಲ್ಲಿ ಇದೆ” ಎಂದರು.ತನ್ನ ಕನಸುಗಳನ್ನು ನನಸಾಗಿಸುವ ಪಯಣದಲ್ಲಿ ಸಮಾಜದಿಂದ ಸವಾಲುಗಳನ್ನು ಎದುರಿಸುವ ಯುವತಿಯ ಕಥೆಯನ್ನು ಈ ಚಿತ್ರ ಹೇಳುತ್ತದೆ. ಈ ಚಲನಚಿತ್ರವು ಮಹಿಳೆಯರಿಗೆ ಅವರ ಕನಸನ್ನು ಜಯಿಸಲು ಮತ್ತು ಸಾಧಿಸಲು ಸ್ಫೂರ್ತಿ ನೀಡುತ್ತದೆ.ಮಂಗಳೂರು, ಕಟೀಲು, ಕಾಸರ ಗೋಡು, ಸೀತಾಂಗೋಳಿ, ಕುಂಬಳ ಮತ್ತು ಕರಾವಳಿ ಪ್ರದೇಶದ ಸುತ್ತಮು ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಗೊಂಡ ‘ಮೀರಾ’ ತುಳು ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು ಆಗಲಿದ್ದು, ಉತ್ತಮ ಕಥೆ, ಅಭಿನಯ ಮತ್ತು ಸಾಮಾಜಿಕ ಸಂದೇಶದೊಂದಿಗೆ ಎಪ್ರಿಲ್ 11 ರಂದು ಬಿಡುಗಡೆಯಾದಾಗ ಪ್ರೇಕ್ಷಕರ ಮೇಲೆ ಗಮನಾರ್ಹ ಪರಿಣಾಮ ಬೀರುವ ನಿರೀಕ್ಷೆಯಿದೆ.ಇದು ತುಳುವಿನ ಮೊದಲ ಮಹಿಳಾ ಪ್ರಧಾನ ಚಿತ್ರವಾಗಿದೆ. ಹೆಣ್ಣಿನ ಕನಸು, ನೋವು ನಲಿವನ್ನು ಕೇಂದ್ರೀಕರಿಸಿರುವ ಗಟ್ಟಿ ಕತೆಯನ್ನು ಒಳಗೊಂಡಿದೆ. ಮಹಿಳೆಯರು ತಮ್ಮ ಕನಸುಗಳನ್ನು ನನಸಾಗಿಸಲು ಸವಾಲುಗಳನ್ನು ಎದುರಿಸಿ ಸಾಧಿಸಲು ಸ್ಪೂರ್ತಿ ನೀಡಲಿದೆ ಎಂದು ನಿರ್ಮಾಪಕ ಲಂಚುಲಾಲ್ ಕೆಎಸ್ ತಿಳಿಸಿದರು.ಇತ್ತೀಚೆಗೆ ಅಸ್ತ್ರ ಪೊಡ್ರಕ್ಷನ್ ಲಾಂಛನದ ಆಶ್ರಯದಲ್ಲಿ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತೆ ರಜಿನಿ ಶೆಟ್ಟಿ ಅವರಿಗೆ ಒಂದು ಲಕ್ಷ ರೂಪಾಯಿ ಅಸ್ತ್ರ ಸಂಸ್ಥೆಯಿಂದ ನೀಡಲಾಯಿತು. ಅಲ್ಲದೆ 300 ಮಂದಿ ಟ್ರಾಫಿಕ್ ಪೋಲಿಸರಿಗೆ ಕೊಡೆಗಳನ್ನು ವಿತರಿಸಲಾಯಿತು.ಪತ್ರಿಕಾಗೋಷ್ಠಿಯಲ್ಲಿ ನಟ ಸ್ವರಾಜ್ ಶೆಟ್ಟಿ, ನಿರ್ದೇಶಕ ಅಶ್ವಥ್, ನಟಿ ಇಶಿತಾ ಶೆಟ್ಟಿ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಸಂಘಟನೆಗಳು ಸಮಾಜದ ದೀಪವಾಗಬೇಕು: ಮಹಾಬಲ ಪೂಜಾರಿ ಕಡಂಬೋಡಿ.ಸುರತ್ಕಲ್ ನಲ್ಲಿ ಹಿರಿಯರ ಕ್ರಿಕೆಟ್ ಹಬ್ಬ

ಸುರತ್ಕಲ್: ಸಂಘಟನೆಗಳು ಸಮಾಜದ ದೀಪವಾಗಬೇಕು ಸಮಾಜಕ್ಕೆ ಮಾದರಿಯದಂತಹ ಕಾರ್ಯಗಳನ್ನು ಮಾಡಿದಾಗ ಮಾತ್ರ ಸಂಘಟನೆ ಪದದ ಸಾರ್ಥಕ್ಯ ಕಾಣಲು ಸಾಧ್ಯ ಎಂದು ಸುರತ್ಕಲ್ ಸ್ಪೋರ್ಟ್ಸ್ ಕ್ಲಬ್ ಮತ್ತು ಕಲ್ಚರಲ್ ಕ್ಲಬ್ ಅಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿ ನುಡಿದರು. ಅವರು ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಆಶ್ರಯದಲ್ಲಿ ರಾಜ್ಯ ಮಟ್ಟದ ಹಿರಿಯರ ಕ್ರಿಕೆಟ್ ಹಬ್ಬ ಸೀಸನ್ 4 ಸುರತ್ಕಲ್ ಗೋವಿಂದದಾಸ ಕಾಲೇಜಿನ ಕ್ರೀಡಾಂಗಣದಲ್ಲಿ ಜರಗಿದ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಸಚಿವರಾದ ಕೃಷ್ಣ ಜೆ ಪಾಲೆಮಾರ್, ಬಿ,ಎ,ಎಸ್,ಎಪ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಪ್ರಭಂದಕರಾದ ಸಂತೋಷ್ ಪೈ, ಮನಪಾ ಮಾಜಿ ಸದಸ್ಯ ವರುಣ್ ಚೌಟ, ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅರ್ಜುನ್ ಭಂಡಾರ್ಕರ್, ಎನ್ ಐ ಟಿ ಕೆ ಮಾಜಿ ಜಂಟಿ ಕುಲಪತಿ ರಾಮಮೋಹನ್ ಎಣ್ಮಕಜೆ, ಮಂಗಳೂರು ಎಸ್ ಡಿ ಸಿ ಸಿ ಬ್ಯಾಂಕ್ ಎ.ಜಿ.ಎಂ ರಾಜೇಶ್ ಶೆಟ್ಟಿ, ಬಾಲಕೃಷ್ಣ ಕೆಂಚನೂರು, ಮಂಗಳೂರು ಬಿ.ಎಂ.ಅರ್ ಗ್ರೂಪ್ ಮಾಲಕರು ದಾವೂದ್ ಹಕಿಂ, ಸುರತ್ಕಲ್ ಸ್ಪೋರ್ಟ್ಸ ಕ್ಲಬ್ ಸಂಚಾಲಕರು ಮನೋಹರ ಶೆಟ್ಟಿ ಸೂರಿಂಜೆ, ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ಕಾರ್ಯದರ್ಶಿ ಕಿರಣ್ ಅಚಾರ್ಯ ಉಪಸ್ಥಿತರಿದ್ದರು. ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ದುರ್ಗಾಂಬ ತಡಂಬೈಲ್, ದ್ವೀತಿಯ ವೀರಕೇಸರಿ ತಡಂಬೈಲ್, ತೃತೀಯ ಬಿ.ಜೆ,ಸ್ಪಾರ್ಕ್ ಉಡುಪಿ ಚತುರ್ಥ ಆನಂದಿಲೆವೆನ್ ಬೆಂಗಳೂರು ಪಡೆಯಿತು. ಇದೇ ಸಂದರ್ಭದಲ್ಲಿ ಬಬಿತಾ ಜೆ ಶೆಟ್ಟಿ ಮತ್ತು ಅರ್ಜುನ್ ಭಂಡಾರ್ಕರ್ ಇವರನ್ನು ಸನ್ಮಾನಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಚಾರಿಟಿ ಟ್ರೋಫಿ 2025 :ಪಾಲಡ್ಕಾ ವಿನ್ನರ್ ಪೆರ್ಮನೂರ್ ರನ್ನರ್

ವೆಲ್ಫೇರ್ ಏಸೋಸಿಯೇಷನ್ ರಾಣಿಪುರ ಇವರ ಮುಂದಾಳತ್ವದಲ್ಲಿ , ಪಾದರ್ ಮುಲ್ಲರ್ ಹೋಮಿಯೋಪತಿ ಮೈದಾನ ದೇರಲಕಟ್ಟೆ ಇಲ್ಲಿ ನಡೆದ ಇಂಟರ್ ಪ್ಯಾರಿಷ್ ಚ್ಯಾರಿಟಿ ಟ್ರೋಫಿ ಕ್ರಿಕೆಟ್ ಪಂದ್ಯಾಟಗಳಲ್ಲಿ ಸೇಂಟ್ ಲೋಯೋಲಾ ಚರ್ಚ ಪಾಲಡ್ಕಾ ವಿನ್ನರ್ ಆಗಿದ್ದು, ಸೇಂಟ್ ಸೆಬೆಸ್ಟಿಯನ್ ಚರ್ಚ್ ಪೆರ್ಮನೂರ್ ರನ್ನರ್ ಪಟ್ಟವನ್ನು ಅಲಂಕರಿಸಿದೆ .ತಾರೀಕು 5 ಮತ್ತು 6 ರಂದು ಎರಡು ದಿನಗಳ ಕಾಲ ಕ್ರಿಕೆಟ್ ಪಂದ್ಯಾಟವು ನಡೆಯಿತು, ಬಡಬಗ್ಗರ ದೀನ ದಲಿತರಿಗೆ ಹಾಗೂ ವಿವಿಧ ರೋಗಗಳಿಂದ ಬಳಲುವ ಬಡ ರೋಗಿಗಳಿಗೆ ಸಹಾಯ ಹಸ್ತವನ್ನು ನೀಡುವ ಉದ್ದೇಶದಿಂದ ರಾಣಿಪುರ ವೆಲ್ಪೇರ್ ಏಸೋಸಿಯೇಷನ್ ಈ ಚಾರಿಟಿ ಟ್ರೋಫಿ ಪಂದ್ಯಾಟವನ್ನು ಆಯೋಜಿಸಿತ್ತು , ತಾ 5 ರಂದು ಬೆಳಿಗ್ಗೆ ಫಾದರ್ ಪಾವೊಸ್ತಿನ್ ಲೂಕಸ್ ಲೋಬೊ ಆಡಳಿತ ಅಧಿಕಾರಿ ಫಾ ಮುಲ್ಲರ್ ಹೋಮಿಯೋಪತಿ , ಇವರು ಕ್ರಿಕೆಟ್ ಪಂದ್ಯಾಟವನ್ನು ಉದ್ಗಾಟಿಸಿ ಶುಭಹಾರೈಸಿದರು. ಈ ಸಂಧರ್ಭದಲ್ಲಿ ಸ್ಥಾಪಕ ಅಧ್ಯಕ್ಷರಾದ ಜೋಸೆಫ್ ಪಾವ್ಲ್ ಲೋಬೋ ಇವರು ಉಪಸ್ಥಿತರಿದ್ದರು. ಎರಡು ದಿನಗಳ ಕಾಲ ಸುಸೂತ್ರವಾಗಿ ಹಾಗೂ ಬಹಳ ಅಚ್ಚು ಕಟ್ಟಾಗಿ ನಡೆದ ಪಂದ್ಯಾಟಗಳು ತಾ 6.ರಂದು ಸಂಜೆ ಮೂಡಬಿದ್ರೆಯ ಪಾಲಡ್ಕ ತಂಡ ಹಾಗೂ ಪೆರ್ಮನೂರಿನ ಸೆಬಾಸ್ಟಿಯನ್ ತಂಡವು ಫೈನಲ್ ಸೆಣಾಸಾಟ ನಡೆಸಿ ಫಾಲಡ್ಕ ತಂಡ ವಿಜಯಿಯಾಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವೆಲ್ಫೇರ್ ಎಸೋಸಿಯೇಷನ್ ಅಧ್ಯಕ್ಷರಾದ ಫೆಲಿಕ್ಷ್ ಮೊಂತೇರೋ ವಹಿಸಿಕೊಂಡರು ಮುಖ್ಯ ಅಥಿತಿಗಳಾಗಿ, ಸಾಹಿತಿ ಹಾಗೂ ಪೋಕಸ್ ಇಂಡಿಯಾ ಸಂಘಟನೆಯ ಅಧ್ಯಕ್ಷ ಯುವ ನಾಯಕ ವಿನೋದ್ ಪಿಂಟೋ ತಾಕೋಡೆ , ರೂಪೇಶ್ ನಿಲಿಮಾ ದಂಪತಿಗಳು ರಾಣಿಪುರ, ಶ್ರೀಮತಿ ಗ್ರೇಸಿ ಮೊಂತೇರೊ ರಾಣಿಪುರ , ಚಾರಿಟಿ ಟ್ರೋಫಿ ಸಂಚಾಲಕರಾದ ಜೀವನ್ ಪೆರಾವೊ, ಕೋಶಾಧಿಕಾರಿ ಟೈಟಸ್ ಡಿಸೋಜ ಕಾರ್ಯದರ್ಶಿ ಆಲ್ವಿನ್ ಡಿಸೋಜ ಇವರೆಲ್ಲರು ವೇದಿಕೆಯಲ್ಲಿದ್ದರು, ಅಧ್ಯಕ್ಷ ರಾದ ಫೆಲಿಕ್ಸ್ ಮೊಂತೇರೋ ಸ್ವಾಗತಿಸಿದರು ಈ ಸಂದರ್ಭದಲ್ಲಿ ಸರಿ ಸುಮಾರು 20 ಬಡ ರೋಗಿಗಳಿಗೆ ಹಾಗೂ ಅಶಕ್ತರಿಗೆ ಸಹಾಯ ಹಸ್ತವನ್ನು ಚೆಕ್ ಗಳ ಮುಕಾಂತರ ನೀಡಲಾಯಿತು, ಈ ಸಂಧರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದ ಶ್ರೀ ವಿನೋದ್ ಪಿಂಟೋ ತಾಕೋಡೆಯವರು, ಕ್ರಿಶ್ಚಿಯಿನ್ನರ ಈ ತಪಸ್ಸು ಕಾಲದಲ್ಲಿ ಬಡವರಿಗೆ ದೀನದಲಿತರಿಗೆ ಸಹಾಯ ಮಾಡಿ ಅವರಲ್ಲಿ ದೇವರನ್ನು ಕಾಣುವ ರಾಣಿಪುರ ವೆಲ್ಫೇರ್ ಸಂಘಟನೆಯ ಕಾರ್ಯವನ್ನು ಶ್ಲಾಗಿಸಿದರು ಇಂಥಹ ಸಂಘಟನೆಗಳು ಉತ್ತಮ ಹಾಗೂ ಆರೋಗ್ಯಕರ ಸಮಾಜವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಇಂಥಹ ಪಂದ್ಯಾಟಗಳು ಹಾಗೂ ಚಾರಿಟಿ ವರ್ಕ್ ಮುಂದಿನ ವರುಷಗಳಲ್ಲಿ ಇನ್ನು ದೊಡ್ಡ ಮಟ್ಟದಲ್ಲಿ ನಡೆಯುವಂತಾಗಲಿ ಎಂದು ಶುಭ ಹಾರೈಸಿದರು ಕಾರ್ಯದರ್ಶಿ ಆಲ್ವಿನ್ ಡಿಸೋಜ ವಂದಿಸಿದರು.ಡೆಲನ್ ಲೋಬೋ ಕಾರ್ಯಕ್ರಮ ನಿರೂಪಿಸಿದರು.ಗೆದ್ದ ತಂಡಗಳ ವಿವರ:ವಿನ್ನರ್:ಸೈಂಟ್ ಲೋಯೋಲಾ ಚರ್ಚ್ ಪಾಲಡ್ಕಟ್ರೋಫಿ ಹಾಗೂ 30 ಸಾವಿರ ನಗದುರನ್ನರ್:ಸೇಂಟ್ ಸೆಬೇಸ್ಟಿಯನ್ ಚರ್ಚ್ ಪೆರ್ಮನೂರ್ಟ್ರೋಫಿ ಹಾಗೂ 20 ಸಾವಿರ ನಗದುತೃತೀಯ:MYC ಮರೀಲ್ ಹಾಗೂ ಪೆರ್ಮನೂರ್ ಸ್ಟೋರ್ಟ್ಸ್ ಕ್ಲಬ್ವೈಯುಕ್ತಿಕ ಬಹುಮಾನಗಳು:ಮ್ಯಾನ್ ಆಪ್ ದಿ ಮ್ಯಾಚ್:ನಿತಿನ್ ಪಾಲಡ್ಕಮ್ಯಾನ್ ಆಫ್ ಧಿ ಸೀರಿಸ್ ಮತ್ತು ಬೆಸ್ಟ್ ಬ್ಯಾಟ್ಸ್ಮನ್:ಗ್ಲೆನ್ ಸನ್ ಪಾಲಡ್ಕಬೆಸ್ಟ್ ಬೌವ್ಲರ್:ಕೊನ್ವೆಲ್ ಪೆರ್ಮನೂರ್

ಪ್ರಾದೇಶಿಕ ವಾರ್ತೆಗಳು

“ದೇವರಿಗೆ ದಾರಿ ತೋರಿಸುವುದು” – ಅಂತರ್ಧಾರ್ಮಿಕ ಸಂವಾದ

ಬೆಂಗಳೂರು, ಮಾರ್ಚ್ 27: ಸೇಂಟ್ ಜೋಸೆಫ್ಸ್ ಯೂನಿವರ್ಸಿಟಿಯು ಯುಗಾದಿ, ರಂಜಾನ್ ಮತ್ತು ಈಸ್ಟರ್ ಹಬ್ಬಗಳ ಸಂದರ್ಭದಲ್ಲಿ “ದೇವರಿಗೆ ದಾರಿ ತೋರಿಸುವುದು” ಎಂಬ ಅಂತರ್ಧಾರ್ಮಿಕ ಸಂವಾದವನ್ನು ಆಯೋಜಿಸಿತು. ಸುಮಾರು 1000 ವಿದ್ಯಾರ್ಥಿಗಳು ಮತ್ತು ಗಣ್ಯ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಶಿಫ್ಟ್ IIIರ ಸಂಯೋಜಕ ಶ್ರೀ ಪ್ರಶಾಂತ್ ಕುಮಾರ್ ಅವರು ಸ್ವಾಗತ ಭಾಷಣ ಮಾಡಿದ ನಂತರ, ಶ್ರೀಮತಿ ಜುನೈದಾ ನಲ್ಲಕ್ಕಂಡಿ ಮತ್ತು ಶಿಕ್ಷಕ-ವಿದ್ಯಾರ್ಥಿ ತಂಡದ ನೇತೃತ್ವದಲ್ಲಿ ಅಂತರ್ಧಾರ್ಮಿಕ ಪ್ರಾರ್ಥನೆ ನಡೆಯಿತು. ಬೈಬಲ್, ಕುರಾನ್ ಮತ್ತು ವೇದಗಳ ಪಠಣವು ಸಭೆಯ ಉದ್ದೇಶವನ್ನು ಒತ್ತಿಹೇಳಿತು. ಪ್ಯಾನೆಲ್ ಚರ್ಚೆಯನ್ನು ಶಿಕ್ಷಕರು ಶ್ರೀ ಜೆರಿನ್ ಚಂದನ್ ಮತ್ತು ಡಾ. ವಿದ್ಯಾ ಬಿ ಅವರು ನಡೆಸಿಕೊಟ್ಟರು. ರೆ| ಡಾ| ಡೆನ್ಜಿಲ್ ಫೆರ್ನಾಂಡಿಸ್ ಅವರು ಕ್ರೈಸ್ತ ಧರ್ಮದಲ್ಲಿ ದಿವ್ಯ ಸಾಕ್ಷಾತ್ಕಾರ, ವಿವೇಚನೆ, ಶಿಸ್ತು ಮತ್ತು ಸಂವಾದದ ಮಹತ್ವವನ್ನು ವಿವರಿಸಿದರು. ಶ್ರೀ ಮುರಳೀಧರ್ ಕೋಟೇಶ್ವರ್ ಅವರು ಸನಾತನ ಧರ್ಮವು ಜೀವನದ ಮಾರ್ಗವಾಗಿದೆ ಎಂದು ಹೇಳಿ, ದೇವರು ಅನುಭವದ ವಿಷಯ ಎಂದು ಒತ್ತಿಹೇಳಿದರು. ಶ್ರೀಮತಿ ಹುಸ್ನಾ ಫಾತಿಮಾ ಅವರು ರಂಜಾನ್ ಉಪವಾಸದ ಆಧ್ಯಾತ್ಮಿಕ ಮಹತ್ವವನ್ನು ವಿವರಿಸಿದರು.ಡಾ. ಚಾಂದನಿ ಭಾಂಭಾನಿ ಅವರ ನಿರ್ದೇಶನದ ನೃತ್ಯ ನಾಟಕ “ಡಿವಿನಿಟಿ ಅಮಿಡ್ಸ್ಟ್ ಕಾಸ್” COVID-19, ಮಣಿಪುರ ಸಂಘರ್ಷ ಮತ್ತು ಕೇರಳದ ಪ್ರವಾಹದ ಸಂದರ್ಭದಲ್ಲಿ ಧರ್ಮಗಳ ಐಕ್ಯತೆಯನ್ನು ಚಿತ್ರಿಸಿತು.ಶಿಫ್ಟ್ IIIರ ಡೈರೆಕ್ಟರ್ ಫಾ। ಫ್ರಾನ್ಸಿಸ್ ಪಿಂಟೋ ಅವರು ಸಮಾಪ್ತಿ ಭಾಷಣದಲ್ಲಿ ಸಾಮರಸ್ಯ ಮತ್ತು ಒಗ್ಗಟ್ಟಿನ ಮಹತ್ವವನ್ನು ಒತ್ತಿಹೇಳಿದರು. ಡಾ. ರಿಜ್ವಾನಾ ಖಾನಂ ನೇತೃತ್ವದ ಶಿಕ್ಷಕ ತಂಡವು ಈ ಯಶಸ್ವಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು.ಈ ಸಂವಾದವು ಧರ್ಮಗಳ ನಡುವಿನ ಸಂವಾದ, ಕರುಣೆ ಮತ್ತು ಒಗ್ಗಟ್ಟು ದೇವರನ್ನು ತಲುಪುವ ಮಾರ್ಗ ಎಂಬ ಸಂದೇಶವನ್ನು ನೀಡಿತು.

ಪ್ರಾದೇಶಿಕ ವಾರ್ತೆಗಳು

“Showing the Way to God” – An Interfaith Symposium

Bengaluru, March 27: St. Joseph’s University organized an interfaith symposium titled “Showing the Way to God” to coincide with the festivals of Ugadi, Ramadan, and Easter. Around 1,000 students and distinguished guests attended the event.The program began with a welcome address by Mr. Prashanth Kumar, Coordinator of Shift III, followed by an interfaith prayer led by Ms. Junaida Nallakkandy and a team of faculty and students. Recitations from the Holy Bible, Quran, and Vedas emphasized the purpose of the gathering. A panel discussion was moderated by faculty members Mr. Jerrin Chandan and Dr. Vidhya B. Rev. Dr. Denzil Fernandes highlighted the importance of divine encounter, discernment, discipline, and dialogue in Christianity. Mr. Muralidhar Koteshwar explained how Sanatana Dharma is not just a religion but a way of life, emphasizing that God is an experience rather than a concept. Ms. Husna Fathima elaborated on the spiritual significance of fasting during Ramadan.The evening concluded with “Divinity Amidst Chaos,” a dance drama directed by Dr. Chandni Bhambhani, which depicted the resilience and unity of different faiths during crises such as COVID-19, the Manipur conflict, and the Kerala floods.In his closing remarks, Rev. Fr. Francis Pinto SJ, Director of Shift III, stressed the importance of harmony and togetherness. The event was successfully organized under the leadership of Dr. Rizwana Khanum and her faculty team.The symposium conveyed a powerful message: dialogue, compassion, and unity across religions are the true paths to reaching God.

ಪ್ರಾದೇಶಿಕ ವಾರ್ತೆಗಳು

ಸೇಂಟ್ ಜೋಸೆಫ್ಸ್ ಯುನಿವರ್ಸಿಟಿ, ಬೆಂಗಳೂರಿನ ಶಿಫ್ಟ್ IIIರ ಅಂತರವರ್ಗ ಸಾಂಸ್ಕೃತಿಕೋತ್ಸವ – ತೇಜಸ್ 2025

ಶಿಫ್ಟ್ IIIರ ಪ್ರಮುಖ ಅಂತರವರ್ಗ ಸಾಂಸ್ಕೃತಿಕೋತ್ಸವವಾದ ತೇಜಸ್ 2025, 7ರಿಂದ 19 ಮಾರ್ಚ್ 2025ರವರೆಗೆ ನಡೆದು, ಸಾಮಾನ್ಯ ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಸಿಗದ 1800ಕ್ಕೂ ಹೆಚ್ಚು ವಿದ್ಯಾರ್ಥಿಗಳು (ಕೆಲಸ ಮಾಡುವ ವೃತ್ತಿಪರರು ಮತ್ತು ವಿದ್ಯಾರ್ಥಿ ಉದ್ಯಮಿಗಳು ಸೇರಿದಂತೆ) ಭಾಗವಹಿಸಿದರು. ನೃತ್ಯ, ಸಾಹಿತ್ಯ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ಒಳಗೊಂಡ 27 ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಗುರುತಿಸಲಾಯಿತು. ನೃತ್ಯ ಸಂಘದಿಂದ ಫ್ಲ್ಯಾಶ್ ಮಾಬ್’ನಿಂದ ಕಾರ್ಯಕ್ರಮ ಆರಂಭವಾಯಿತು. ಶಿಕ್ಷಕರು ಮತ್ತು ಸ್ವಯಂಸೇವಕ ವಿದ್ಯಾರ್ಥಿಗಳ ಸಮರ್ಪಿತ ಪ್ರಯತ್ನಗಳಿಂದ ಈ ಕಾರ್ಯಕ್ರಮ ನಿರ್ವಹಿಸಯಿತು. ತೇಜಸ್ 2025ರ ಹೈಲೈಟ್ ಆಗಿ, BCA ಅಂತಿಮ ವರ್ಷದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ‘ಕಟ್‌ದ ಕ್ಯೂ’ ಡಿಜಿಟಲ್ ಅಪ್ಲಿಕೇಶನ್‌ನ ಲಾಂಚ್ ನಡೆಯಿತು.ಪ್ರೊ ಚಾನ್ಸಲರ್ ಫಾ। ಸ್ವಿಬರ್ಟ್ ಡಿಸಿಲ್ವಾ ಎಸ್‌ಜೆ, ವೈಸ್ ಚಾನ್ಸಲರ್ ಫಾ। ಡಾ। ವಿಕ್ಟರ್ ಲೋಬೋ ಎಸ್‌ಜೆ, ಸ್ಕೂಲ್ ಆಫ್ ಇನ್ಫರ್ಮೇಶನ್ ಟೆಕ್ನಾಲಜಿ ಡೀನ್ ಫಾ। ಡೆನ್ಜಿಲ್ ಲೋಬೋ ಎಸ್‌ಜೆ ಮತ್ತು ಶಿಫ್ಟ್ IIIರ ಡೈರೆಕ್ಟರ್ ಫಾ। ಫ್ರಾನ್ಸಿಸ್ ಪಿಂಟೋ ಎಸ್‌ಜೆ ಅವರ ಹಾಜರಿಯೊಂದಿಗೆ ಉತ್ಸವದ ಸಮಾಪ್ತಿ ಸಮಾರಂಭ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ಶ್ರೀ ರಾಮನವಮಿ ಮಹೋತ್ಸವ : ಇಸ್ಕಾನ್ ಆಶ್ರಯದಲ್ಲಿ ವೈಭವದ ಶ್ರೀ ರಾಮ- ಲಕ್ಷ್ಮಣ ಅಲಂಕೃತ ಶೋಭಾಯಾತ್ರೆ

ಮಂಗಳೂರು : ನಗರದ ಕೊಡಿಯಾಲಬೈಲ್ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಇಸ್ಕಾನ್ ಧಾರ್ಮಿಕ ಸಂಸ್ಥೆಯ ಆಶ್ರಯದಲ್ಲಿ ಶ್ರೀ ರಾಮನವಮಿ ಮಹೋತ್ಸವ ಹಾಗೂ ಶ್ರೀ ರಾಮ- ಲಕ್ಷ್ಮಣ ಅಲಂಕೃತ ಶೋಭಾಯಾತ್ರೆಯು ರವಿವಾರ ಸಂಸ್ಥೆಯ ಮುಖ್ಯಸ್ಥ ಶ್ರೀ ಗುಣಾಕರ ರಾಮ ದಾಸರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.ಈ ಧಾರ್ಮಿಕ ಉತ್ಸವವು ಪ್ರಾತಃಕಾಲ ಅರ್ಚಕ ಶ್ರೀ ದೇವಕಿತನಯದಾಸ ಅವರಿಂದ ಶ್ರೀ ರಾಮ, ಶ್ರೀ ಲಕ್ಷ್ಮಣ ಸೀತೆ ಮತ್ತು ಹನುಮಾನ್ ವಿಗ್ರಹಗಳಿಗೆ ಅಲಂಕಾರ ಮತ್ತು ಶೃಂಗಾರ ಪೂಜಾ ವಿಧಿ ವಿಧಾನಗಳೊಂದಿಗೆ ಪ್ರಾರಂಭವಾಯಿತು.ಸಂಜೆ ಶ್ರೀ ರಾಮ, ಶ್ರೀ ಲಕ್ಷ್ಮಣ, ಸೀತೆ ಮತ್ತು ಹನುಮಾನ್ ವಿಗ್ರಹಗಳನ್ನು ಆಕರ್ಷಕ ವಿಶೇಷ ಅಲಂಕೃತ ರಥದಲ್ಲಿ ಕೂರಿಸಿ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ರಥದಲ್ಲಿ ಹರಿಚರಣ್ ದಾಸï, ಗುಣಾಕರ ರಾಮದಾಸ ಅವರು ಪೂಜೆ ನೆರವೇರಿಸಿದರು.ಗಣ್ಯರು ಸೇರಿದಂತೆ ಭಕ್ತಾದಿಗಳು ರಥವನ್ನೆಳೆದರು. ಈ ಪವಿತ್ರ ಭವ್ಯ ರಥಯಾತ್ರೆಯು ಪಿ.ವಿ.ಎಸ್ ಸಂಕೀರ್ಣದಿಂದ ಮೆರವಣಿಗೆಯಲ್ಲಿ ಹೊರಟು, ಸಹಸ್ರಾರು ಭಕ್ತಾಭಿಮಾನಿಗಳು ಶ್ರಧ್ಧಾ ಭಕ್ತಿಯಿಂದ ಹರೇಕೃಷ್ಣ ಹರೇರಾಮ ಜಪದೊಂದಿಗೆ ಭಜನೆ, ಕೀರ್ತನೆ, ವಾದ್ಯಗಳೊಂದಿಗೆ ಬೆಸೆಂಟ್ ಶಾಲಾ ರಸ್ತೆ, ಎಂ.ಜಿ. ರಸ್ತೆ, ಪಿ.ವಿ.ಎಸ್ ವೃತ್ತ, ನವಭಾರತ್ ವೃತ್ತದ ಮೂಲಕ ಸಾಗಿ ಶಾರದಾ ವಿದ್ಯಾಲಯದ ಪ್ರಾಂಗಣವನ್ನು ತಲುಪಿತು.ಮೆರವಣಿಗೆಯಲ್ಲಿ ಶಾಲಾ ಮಕ್ಕಳು ಶ್ರೀ ರಾಮ, ಶ್ರೀ ಲಕ್ಷ್ಮಣ, ಸೀತೆ ಮತ್ತು ಹನುಮಾನ್ ದೇವರ ವೇಷಭೂಷಣಗಳನ್ನು ಧರಿಸಿ ರಥದ ಮುಂದೆ ಸಾಗಿದರು. ಇದೊಂದು ಮುಖ್ಯ ಆಕರ್ಷಣೆಯಾಗಿ, ಭಕ್ತ ಸಮೂಹವು ಭಕ್ತಿಯ ಕಡಲಲ್ಲಿ ಮಿಂದೇಳುವಂತೆ ಮಾಡಿತು.ಶಿಕ್ಷಣ ತಜ್ಞ ಪ್ರೊ.ಎಂ.ಬಿ. ಪುರಾಣಿಕ್ ಎಸ್.ಎಲ್. ಶೇಟ್ ಜ್ಯುವೆಲ್ಲರ್ಸ್ ಪಾಲುದಾರ ನಿಶಾಂತ್ ಶೇಟ್, ಮಂಗಳೂರಿನ ಹೃದ್ರೋಗ ತಜ್ಞ ಡಾ.ಮೋಹನ್ ಪೈ, ಉಡುಪಿಯ ಉದ್ಯಮಿ ಅಜಯ್ ಶೆಟ್ಟಿ, ಮಂಗಳೂರಿನ ಉದ್ಯಮಿ ಅಭಿನವ್ ಬನ್ಸಾಲ್ ಮತ್ತಿತರರು ಪಾಲ್ಗೊಂಡಿದ್ದರು. ಸಂತ ಅಲೋಶಿಯಸ್ ಕಾಲೇಜಿನ ಎನ್ ಎಸ್ ಎಸ್ ಕೆಡೆಟ್ಗಳು ಮೆರವಣಿಗೆಗೆ ರಕ್ಷಣೆ ಒದಗಿಸಿ, ಭಕ್ತಾದಿಗಳಿಗೆ ನೀರು, ಪ್ರಸಾದ ವಿತರಿಸಿದರು.ಶಾರದಾ ವಿದ್ಯಾಲಯದ ಪ್ರಾಂಗಣದಲ್ಲಿ ಜರುಗಿದ ಸಭಾ ಕಾರ್ಯಕ್ರಮವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಶ್ವೇತ ದ್ವೀಪ ದಾಸರ ನಿರೂಪಣೆಯಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಇಸ್ಕಾನ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಗುಣಾಕರ ರಾಮ ದಾಸರು ಶ್ರೀ ರಾಮ ನವಮಿಯ ಉದ್ದೇಶ ಮತ್ತು ಮಹತ್ವವನ್ನು ಭಕ್ತರಿಗೆ ಸವಿಸ್ತಾರವಾಗಿ ವಿವರಿಸಿದರು.ಶ್ರೀ ರಾಮ, ಶ್ರೀ ಲಕ್ಷ್ಮಣ, ಸೀತೆ ಮತ್ತು ಹನುಮಾನ್ ವಿಗ್ರಹಗಳಿಗೆ ಮಹಾಭಿಷೇಕ ಮತ್ತು ಮಹಾ ಮಂಗಳಾರತಿ ಸಲ್ಲಿಸಿದ ಬಳಿಕ ರಥವು ಇಸ್ಕಾನ್ ದೇವಾಲಯವನ್ನು ತಲುಪಿ, ನಂತರ ಭಕ್ತಾದಿಗಳಿಗೆ ಪ್ರಸಾದವನ್ನು ವಿತರಿಸುವುದರೊಂದಿಗೆ ಶೋಭಾಯಾತ್ರೆಯು ಭಕ್ತಿ ಭಾವದಿಂದ ಸಂಪನ್ನಗೊಂಡಿತು. ಇಸ್ಕಾನ್ ಸಂಸ್ಥೆಯ ಶ್ರೀ ಸನಂದನ ದಾಸ, ಶ್ರೀ ಸುಂದರ ಗೌರದಾಸ, ಶ್ರೀ ನಂದನ ದಾಸ ಈ ಕಾರ್ಯಕ್ರಮವನ್ನು ಸಂಘಟಿಸಿದ್ದರು.

ಪ್ರಾದೇಶಿಕ ವಾರ್ತೆಗಳು

Interclass Cultural Fest of the shift III of St Joseph’s University, Bengaluru.

Tejas 2025, the flagship Interclass Cultural Fest of Shift III, held from 7th to 19th March 2025, provided a dynamic platform for over 1800 students, including working professionals and student entrepreneurs who often miss out on regular daytime events. With 27 competitions spanning performing arts, literary contests, and cultural showcases, the fest celebrated student creativity while ensuring inclusivity and engagement for all. A thrilling surprise flash mob by the Dance Association, joined by faculty members, set an electrifying tone for the festival. The seamless execution of the event was made possible by the dedicated efforts of faculty and student volunteers, embodying the strong sense of community that defines Shift III.One of the standout moments of Tejas 2025 was the launch of ‘CuttheQ,’ a digital application innovatively developed by final-year BCA students, highlighting the technical ingenuity and problem-solving skills fostered within the institution. The festival concluded with an exhilarating finale, followed by a valedictory ceremony graced by Rev. Fr. Swebert Dsilva SJ (Pro Chancellor), Rev. Fr. Dr. Victor Lobo SJ (Vice Chancellor), Rev. Fr. Denzel Lobo SJ (Dean of the School of Information Technology), and Rev. Fr. Francis Pinto SJ (Director of Shift III). Their presence underscored Shift III’s commitment to providing a holistic educational experience—one that nurtures not just academic excellence but also creativity, leadership, and personal growth. Tejas 2025 was a testament to this vision, leaving a lasting impact on students and faculty alike.

Scroll to Top