ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಕಲ್ಲುಗಳಲ್ಲಿ ಕನಸು ಕಂಡವರು, ಮನಸ್ಸುಗಳಲ್ಲಿ ದೀಪ ಬೆಳಗಿದವರು – ವೈಟ್ ಸ್ಟೋನ್ ಡೆವಲಪರ್ಸ್ ಹಾಜಿ ಬಿ. ಎಂ. ಶರೀಫ್ ಜೋಕಟ್ಟೆ.ಮಂಗಳೂರಿನ ಬಲ್ಮಠ ರಸ್ತೆಯಿಂದ ಆರಂಭವಾದ ಒಂದು ಸಾಮ್ರಾಜ್ಯದ ಕಥೆ. MPMLA’S NEWS SPECIAL REPORT BYDR ASHOK SHETTY BN

  ಮಂಗಳೂರು :ನಗರದ ರೂಪಾ ಹೋಟೆಲ್ ಎದುರುಗಡೆ, ಬಲ್ಮಠ ರಸ್ತೆಯ 14-2-103/12 ನಂಬರಿನ ಸಣ್ಣ ಕಚೇರಿಯಲ್ಲಿ ಒಂದು ದೊಡ್ಡ ಕನಸು ಹುಟ್ಟಿಕೊಂಡಿತು. ಆ ಕನಸು ಕಂಡವರು ಹಾಜಿ ಬಿ. ಎಂ. ಶರೀಫ್ ಜೋಕಟ್ಟೆ  ಮತ್ತು ಮುಮ್ತಾಜ್ ಶರೀಫ್* ದಂಪತಿಗಳು. ಅವರ ಕನಸಿನ ಹೆಸರೇ *“ವೈಟ್ ಸ್ಟೋನ್ ಡೆವಲಪರ್ಸ್”*. ಇಂದು ವೈಟ್ ಸ್ಟೋನ್ ಎಂದರೆ ಮಂಗಳೂರಿನಲ್ಲಿ ನಂಬಿಕೆಯ ಇನ್ನೊಂದು ಹೆಸರು. ಪಾರ್ಟನರ್‌ಶಿಪ್ ಸಂಸ್ಥೆಯಾಗಿ 2017 ರಲ್ಲಿ GST ನೋಂದಣಿಯಾದರೂ, ಅದರ ಬೇರುಗಳು ತುಂಬಾ ಆಳವಾಗಿವೆ. *ಬಿಲ್ಡರ್ ಅಲ್ಲ, ಒಬ್ಬ ಮಾನವತಾವಾದಿ* ಹಾಜಿ ಬಿ. ಎಂ. ಶರೀಫ್ ಹೋಕಟ್ಟೆ ಅವರನ್ನು ಜನರು “ವೈಟ್ ಸ್ಟೋನ್ ಶರೀಫ್” ಎಂದು ಪ್ರೀತಿಯಿಂದ ಕರೆಯುತ್ತಾರೆ. ಅವರು ಕಟ್ಟಿದ್ದು ಕೇವಲ ಕಟ್ಟಡಗಳಲ್ಲ, ಸಾವಿರಾರು ಕುಟುಂಬಗಳ ಕನಸುಗಳನ್ನು. ಆದರೆ, ಅವರ ನಿಜವಾದ ಎತ್ತರ ಗೊತ್ತಾಗುವುದು ಅವರ ಸಮಾಜ ಸೇವೆಯಲ್ಲಿ. *41 ಲಕ್ಷದ ವಿದ್ಯಾದಾನ – 272 ವಿದ್ಯಾರ್ಥಿಗಳ ಬಾಳಿಗೆ ಬೆಳಕು* ಇತ್ತೀಚೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಟೌನ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ, *ವೈಟ್ ಸ್ಟೋನ್ ಶರೀಫ್ ಚಾರಿಟೇಬಲ್ ಟ್ರಸ್ಟ್* ವತಿಯಿಂದ 272 ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ ಬರೋಬ್ಬರಿ *41 ಲಕ್ಷ ರೂಪಾಯಿ ಸ್ಕಾಲರ್‌ಶಿಪ್* ವಿತರಿಸಲಾಯಿತು. ಪುತ್ತೂರು ಕಮ್ಯುನಿಟಿ ಸೆಂಟರ್ ಮತ್ತು ಟೀಂ ಬಿ-ಹ್ಯೂಮನ್ ಸಂಸ್ಥೆಯ ಸಹಕಾರದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ, MBBS ನ 79, BDS ನ 25, BAMS ನ 26, CA ಯ 85, Law ನ 35 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 836 ವಿದ್ಯಾರ್ಥಿಗಳಿಗೆ ನೆರವಾಗಲಾಗುತ್ತಿದೆ. ವಿಶೇಷ ಏನೆಂದರೆ, ಈ ಸಹಾಯ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಲ್ಲ. ಎಲ್ಲಾ ಧರ್ಮ, ಎಲ್ಲಾ ಜಾತಿಯ ಬಡ ವಿದ್ಯಾರ್ಥಿಗಳಿಗೆ ಹಾಜಿ ಬಿ. ಎಂ.ಶರೀಫ್ ಜೋಕಟ್ಟೆ ಅವರು ಆಸರೆಯಾಗಿದ್ದಾರೆ. ವೇದಿಕೆಯಲ್ಲಿ ಮಾತನಾಡಿದ *ವೈಟ್ ಸ್ಟೋನ್ ಗ್ರೂಪ್ CEO ಮತ್ತು ಟೀಂ ಬಿ-ಹ್ಯೂಮನ್ ಅಧ್ಯಕ್ಷ ಹಾಜಿ ಬಿ.ಎಂ. ಶರೀಫ್  ಜೋಕಟ್ಟೆ ಅವರು ಹೇಳಿದರು – “ಸಮುದಾಯದ ಅಭಿವೃದ್ಧಿಯೇ ನಮ್ಮ ಟ್ರಸ್ಟ್‌ನ ಗುರಿ. ಈ ವರ್ಷ 272 ವಿದ್ಯಾರ್ಥಿಗಳಿಗೆ ನೆರವಾಗಲು ನಮಗೆ ಅತೀವ ಸಂತೋಷವಾಗಿದೆ” ಎಂದು. *ಬಿಳಿ ಕಲ್ಲಿನಂತೆ ಶುದ್ಧ ಮನಸ್ಸು* ವೈಟ್ ಸ್ಟೋನ್ ಎಂಬ ಹೆಸರಿನಂತೆ ಹಾಜಿ ಬಿ. ಎಂ.ಶರೀಫ್ ಜೋಕಟ್ಟೆ ಅವರ ಮನಸ್ಸು ಕೂಡ ಬಿಳಿ ಕಲ್ಲಿನಂತೆ ಶುದ್ಧ. ಕಟ್ಟಡ ಕಟ್ಟುವಾಗ ಗುಣಮಟ್ಟದಲ್ಲಿ ರಾಜಿ ಇಲ್ಲ, ದಾನ ಮಾಡುವಾಗ ಪ್ರಚಾರದ ಹಂಬಲವಿಲ್ಲ. ಬಲ್ಮಠದಿಂದ ಆರಂಭವಾದ ಅವರ ಪಯಣ ಇಂದು ಮಂಗಳೂರಿನ ಹೆಮ್ಮೆಯಾಗಿ ಬೆಳೆದಿದೆ. ಅವರು ಕಟ್ಟುವ ಪ್ರತಿ ಮನೆಯಲ್ಲಿ ಒಂದು ಕುಟುಂಬದ ನೆಮ್ಮದಿ ಇದೆ, ಅವರು ನೀಡುವ ಪ್ರತಿ ಸ್ಕಾಲರ್‌ಶಿಪ್‌ನಲ್ಲಿ ಒಬ್ಬ ವಿದ್ಯಾರ್ಥಿಯ ಭವಿಷ್ಯವಿದೆ. ಇಂತಹ ಸಾಧಕರನ್ನು ನಮ್ಮ ಕರಾವಳಿ ಎಂದಿಗೂ ಮರೆಯುವುದಿಲ್ಲ.

ಪ್ರಾದೇಶಿಕ ವಾರ್ತೆಗಳು

ಸಹಾಯಕ ನಗರ ಯೋಜನಾಧಿಕಾರಿ ಎನ್ ನಾಗೇಂದ್ರ ಇವರಿಗೆ ಎರಡನೇ ಬಾರಿ ಅಂತರಾಷ್ಟ್ರೀಯ ಪ್ರಶಸ್ತಿ ಪ್ರಧಾನ

ದಿನಾಂಕ 27-09-2026ರಂದು  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು ಹಾಗೂ ಸುರ್ವೆ ಕಲ್ಚರಲ್ ಅಕಾಡೆಮಿ(ರಿ)ಬೆಂಗಳೂರು ಇವರ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ರಂಗ ಮಂದಿರದಲ್ಲಿ,ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಸಹಾಯಕ ನಗರ ಯೋಜನಾಧಿಕಾರಿ *ಎನ್ ನಾಗೇಂದ್ರ* ಅವರು  *ಮಯೂರ ಅಂತರಾಷ್ಟ್ರೀಯ  ಪ್ರಶಸ್ತಿ* ಯನ್ನು ಸ್ವೀಕರಿಸಿದ್ದಾರೆ.   ಈಗಾಗಲೇ ಇವರು PRIDE OF INDIA ಪ್ರಶಸ್ತಿ,ಮೂರು ರಾಷ್ಟ್ರೀಯ ಪ್ರಶಸ್ತಿ, ಒಂದು ಅಂತರಾಷ್ಟ್ರೀಯ ಪ್ರಶಸ್ತಿ,ರಾಜ್ಯ ಪ್ರಶಸ್ತಿ, ಕಲಾರತ್ನ ಪ್ರಶಸ್ತಿ,  ಹಾಗೂ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಪ್ರಶಸ್ತಿ , ರೋಟರಿ ಪ್ರಶಸ್ತಿ ಪಡೆದಿರುತ್ತಾರೆ

ಪ್ರಾದೇಶಿಕ ವಾರ್ತೆಗಳು

Renowned senior Sports Journalist S. Jagadishchandra Anchan Sooterpete Conferred with Prestigious ‘Sadhaka Ratna’ Award at Kochi

KOCHI, KERALA:In a moment of great pride for coastal Karnataka, eminent and senior sports columnist *Mr. S. Jagadishchandra Anchan Sooterpete*, the record holder of *4,500 sports articles*, was honoured with the prestigious *‘Sadhaka Ratna’ Award*.The award ceremony was held during the grand *Kerala-Karnataka Janapada Utsava* at the Gokulam Park Convention Centre, Kaloor, Kochi. The award was conferred by *Shri V.E. Abdul Gafoor, Hon’ble Minister for Ports and Fisheries, Government of Kerala.*The prestigious festival was jointly organized by the *Kasaragod Karnataka Border Area Development Authority* and the *Karnataka Janapada Parishath, Kerala Unit*, celebrating the rich folk culture and unity of both states. *Three and a Half Decades of Service:*With an illustrious career spanning over 35 years in sports journalism, S. Jagadishchandra Anchan is revered as the *Doyen of Sports Journalism*. Through his unique style and in-depth writing, he has brought countless sporting talents of Karavali to the national spotlight and has been a guiding force for the next generation of journalists. *A Crown of Awards:*Mr. Anchan is a recipient of numerous state and national-level honours, including: – MPMLA Media Award (2013) – Samaja Ratna State Award (2014) – Jilla Rajyotsava Award – Gadinada Rajyotsava Award – Janapada Loka Award – Karnataka Kalashree Award – Basavashree Award and many more. *MPMLA’S NEWS* whole heartedly congratulates Mr. S. Jagadishchandra Anchan on this well-deserved recognition and wishes him to be honoured with the Karnataka Rajyotsava State Award and many more national and international accolades in the coming years.

ಪ್ರಾದೇಶಿಕ ವಾರ್ತೆಗಳು

ಖ್ಯಾತ ಹಿರಿಯ ಕ್ರೀಡಾ ಅಂಕಣಕಾರ,4,500 ಕ್ರೀಡಾ ಲೇಖನಗಳ ದಾಖಲೆ ಸರದಾರ, ಕ್ರೀಡಾ ಜಗತ್ತಿನಲ್ಲಿ ಅತ್ಯಂತ ಅನುಭವಿ ಬರವಣಿಗೆಗಳ ಮೂಲಕ ತನ್ನದೇ ಶೈಲಿಯ ವಿಶೇಷ ಛಾಪು ಮೂಡಿಸಿದ ಪ್ರತಿಭಾವಂತ ಕ್ರೀಡಾ ಪತ್ರಕರ್ತ ಎಸ್. ಜಗದೀಶ್ಚಂದ್ರ ಅಂಚನ್‌ ಸೂಟರ್ ಪೇಟೆ ಅವರಿಗೆ  ‘ಸಾಧಕ ರತ್ನ’ ಪ್ರಶಸ್ತಿ ಪ್ರದಾನ

ಕೊಚ್ಚಿ: ಕಳೆದ ಮೂರುವರೆ ದಶಕಗಳಿಂದ ಕ್ರೀಡಾ ಪತ್ರಿಕೋದ್ಯಮದಲ್ಲಿ ತಮ್ಮ ಅನುಭವಿ ಲೇಖನಿಗಳ ಮೂಲಕ ಖ್ಯಾತರಾಗಿರುವ ಹಿರಿಯ ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಅವರಿಗೆ ಪ್ರತಿಷ್ಠಿತ *‘ಸಾಧಕ ರತ್ನ’ ಪ್ರಶಸ್ತಿ* ನೀಡಿ ಗೌರವಿಸಲಾಯಿತು.ಕೇರಳದ ಕೊಚ್ಚಿಯ ಕಲೂರ್ ಗೋಕುಲಂ ಪಾರ್ಕ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ *‘ಕೇರಳ-ಕರ್ನಾಟಕ ಜಾನಪದ ಉತ್ಸವ’* ಸಮಾರಂಭದಲ್ಲಿ ಕೇರಳ ಸರ್ಕಾರದ ಬಂದರು ಮತ್ತು ಮೀನುಗಾರಿಕಾ ಸಚಿವರಾದ ವಿ.ಇ. ಅಬ್ದುಲ್ ಗಫೂರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಕಾರ್ಯಕ್ರಮವು ಕಾಸರಗೋಡು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಘಟಕದ ಜಂಟಿ ಆಶ್ರಯದಲ್ಲಿ ನಡೆದಿತ್ತು.ಜಗದೀಶ್ಚಂದ್ರ ಅಂಚನ್ ಅವರು ಈ ಹಿಂದೆ ಎಂಪಿ ಎಂಎಲ್ ಎ ಮೀಡಿಯಾ ಅವಾರ್ಡ್ (2013), ಸಮಾಜ ರತ್ನ ರಾಜ್ಯ ಪ್ರಶಸ್ತಿ (2014), ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ, ಕರ್ನಾಟಕ ಕಲಾಶ್ರೀ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ ಸೇರಿದಂತೆ ಹಲವು ರಾಜ್ಯ ಮತ್ತು ಅಂತರರಾಜ್ಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕ್ರೀಡಾ ಜಗತ್ತಿನಲ್ಲಿ ಅವರು ಬೆಳಕು ಚೆಲ್ಲಿದ ಬರವಣಿಗೆ ವಿಸ್ತಾರವಾದದ್ದು. ಅವರಿಗೆ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ, ಸನ್ಮಾನಗಳು ಅರಸಿಕೊಂಡು ಬರಲಿ ಎಂದು  Mp MLA’s News ಶುಭ ಹಾರೈಸುತ್ತದೆ

ಪ್ರಾದೇಶಿಕ ವಾರ್ತೆಗಳು

ರಮಾನಾಥ ರೈ ಅವರ ಆರೋಗ್ಯ ವಿಚಾರಿಸಿದ ಸಚಿವ ಯು.ಟಿ. ಖಾದರ್

ಬಂಟ್ವಾಳ: ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರ ಕಳ್ಳಿಗೆ ನಿವಾಸಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಯು.ಟಿ. ಖಾದರ್ ಅವರು ಇಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಚಿವ ಯು.ಟಿ. ಖಾದರ್ ಅವರು ರಮಾನಾಥ ರೈ ಅವರ ಆರೋಗ್ಯದ ಕುರಿತು ವಿಚಾರಿಸಿ, ಆರೋಗ್ಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಇದೇ ವೇಳೆ ರಮಾನಾಥ ರೈ ಅವರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ, ಶೀಘ್ರ ಚೇತರಿಕೆಗೆ ಹಾರೈಸಿದರು.ಭೇಟಿಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ಫೋಟೋ: ಸತೀಶ್ ಕಾರ್ತಿಕ್ ಸ್ಟುಡಿಯೋ, ಬಿ. ಸಿ. ರೋಡ್

ಪ್ರಾದೇಶಿಕ ವಾರ್ತೆಗಳು

ಇಂದು ಅಂಜೆಲೋರ್ ಚರ್ಚ್ ವಾರ್ಷಿಕ ಹಬ್ಬ

ಮಂಗಳೂರು: ಮಂಗಳೂರಿನ ನಾಗುರಿಯ ಆಂಜೆಲೋರ್ ನ ಗಾರ್ಡಿಯನ್ ಏಂಜೆಲ್ ಚರ್ಚ್ ನ ವಾರ್ಷಿಕ ಹಬ್ಬ ಅಕ್ಟೋಬರ್ 2 ರಂದು ನಡೆಯಲಿದೆ.ಬೆಳಗ್ಗೆ 10 ಗಂಟೆಗೆ ನಡೆಯುವ ಹಬ್ಬದ ಸಂಭ್ರಮದ ಬಲಿ ಪೂಜೆಯ ಮುಖ್ಯ ಕಾರ್ಮಿಕತ್ವವನ್ನುಮಂಗಳೂರು ಧರ್ಮ ಪ್ರಾಂತ್ಯದ ಸಿಟಿ ವಲಯದ ಪ್ರಧಾನ ಗುರು ಹಾಗೂ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ವಹಿಸಿ ಸಂದೇಶ ನೀಡಲಿದ್ದಾರೆ. ಆಂಜೆಲೋರ್ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ಫ್ರೆಡ್ರಿಕ್ ಮೊಂತೇರೊ ಮತ್ತು ಸಹಾಯಕ ಗುರು ವಂದನೀಯ ಫಾ. ಅವಿಲ್ ಸಾಂತ್ ಮಯೋರ್ ಹಾಗೂ ಇತರ ಗುರುಗಳು ಭಾಗವಹಿಸಲಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಕರ್ನಾಟಕ ರಾಜ್ಯ ಔಷಧಿ ವ್ಯಾಪಾರಿಗಳ ಸಂಘ (KCDA ) ಇದರ 68ನೇ ವಾರ್ಷಿಕ ಮಹಾಸಭೆ

ಕರ್ನಾಟಕ ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ 68ನೇ ವಾರ್ಷಿಕ ಮಹಾಸಭೆಯು ಮಂಗಳೂರಿನ ದೇರೆಬೈಲ್ ಚರ್ಚ್ ಹಾಲ್ ನಲ್ಲಿ ಸೆಪ್ಟೆಂಬರ್ 06 ರಂದು ನಡೆಯಿತು . ದಕ್ಷಿಣ ಕನ್ನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ (ರಿ ) SKDCDAಇದರ ಆತಿಥ್ಯ ವಹಿಸಿತ್ತು . ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 300ಕ್ಕೂ ಹೆಚ್ಚು ಪ್ರತಿನಿಧಿಗಳು , ಜಿಲ್ಲಾ ಸಂಘಗಳ ಅದ್ಯಕ್ಷರು , ಪದಾಧಿಕಾರಿಗಳೂ ಈ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದರು. ದಕ್ಷಿಣ ಕನ್ನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ ದ ಅದ್ಯಕ್ಷರಾದ ಶ್ರೀ ಅರುಣ್ ಶೆಟ್ಟಿ ಇವರು ಸಂಘದ ಕ್ರಿಯಾಶೀಲ ಚಟುವಟಿಕೆಗಳು ಹಾಗೂ ನಡೆದು ಬಂದ ಹಾದಿಯನ್ನು ಪ್ರಾಸ್ತಾ ವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಶ್ರೀ ಶಶಿಧರ ಪಳಂಗಾಯ ಇವರು ಕರಾವಳಿಯ ಸಾಂಪ್ರದಾಯಿಕ ವೈಶಿಷ್ಟ್ಯ , ಶ್ರೀಮಂತ ಪರಂಪರೆ , ಸಂಸ್ಕ್ರತಿ , ಕಲೆ, ಸಾಹಿತ್ಯ, ವೈದ್ಯಕೀಯ ಸೇವಾ ಪರಂಪರೆಯನ್ನು ಸಭೆ ಮುಂದಿರಿಸಿದರುಕರ್ನಾಟಕ ರಾಜ್ಯ ಔಷಧಿ ವ್ಯಾಪಾರಿಗಳ ಸಂಘ ದ ಅಧ್ಯಕ್ಷರಾದ ಶ್ರೀ ರಘುನಾಥ್ ರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎ.ಕೆ. ಜೀವನ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭ ಚಾಲನೆ ನೀಡಿದರು. ಕರಾವಳಿಯ ಫಲವಂತಿಕೆಯ ಸಂಕೇತವಾದ ಭತ್ತ ತುಂಬಿದ ಕಳಸದಲ್ಲಿ ತೆಂಗಿನ ಕೋಡನ್ನು ತೆರೆಯುವ ಮೂಲಕ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಚಾಲನೆಯನ್ನು ವೇದಿಕೆಯಲ್ಲಿ ನೀಡಲಾಯಿತು . ನಾಡಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮವನ್ನು ಅಧಿಕೃತ ಅನಾವರಣ ಗೊಳಿಸಲಾಯಿತುವೇದಿಕೆಯಲ್ಲಿ ಕರ್ನಾಟಕ ರಾಜ್ಯ ಔಷಧಿ ವ್ಯಾಪಾರಿಗಳ ಸಂಘ ದ ಅಧ್ಯಕ್ಷರಾದ ಶ್ರೀ ರಘುನಾಥ್ ರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎ .ಕೆ ಜೀವನ್ , ಉಪಾಧ್ಯಕ್ಷರಾದ ಶ್ರೀ ಬಿ. ಕೆ ಪ್ರಸನ್ನ ಕುಮಾರ್ , ಶ್ರೀ ಶಿವರಾಜ್ ಪಾಟೀಲ್ , ಖಜಾಂಚಿ ಬಿ.ಉಮೇಶ್ , ಸಹ ಕಾರ್ಯದರ್ಶಿ ಶ್ರೀ ಸತ್ಯನಾರಾಯಣ ಕೆಳಗಾರ್ , ಸಂಘಟನಾ ಕಾರ್ಯದರ್ಶಿ ವಿಜಯ ಕುಮಾರ್ ಎಸ್ ಬುರುಲಿ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಶ್ರೀ ಅರುಣ್ ಶೆಟ್ಟಿ ಹಾಗೂ ಕಾರ್ಯದರ್ಶಿ ಶ್ರೀ ಡಾ. ಎ. ಕೆ. ಜಮಾಲ್.ಜಮಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಧನ್ಯವಾದ ಸಮರ್ಪಿಸಿದರು. ಶ್ರೀ ಶಶಿಧರ ಪಳಂಗಾಯ ಕಾರ್ಯಕ್ರಮ ನಿರೂಪಿಸಿದರುನಂತರ ನಡೆದ 68ನೇ ವಾರ್ಷಿಕ ಮಹಾಸಭೆಯ ಸರ್ವಾಧ್ಯಕ್ಷತೆಯನ್ನು ವಹಿಸಿದ KCDA ಇದರ ಅಧ್ಯಕ್ಷರಾದ ಶ್ರೀ ರಘುನಾಥ್ ರೆಡ್ಡಿಯವರು ಪ್ರಸ್ತುತ ಔಷಧಿ ವ್ಯಾಪಾರಿಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಮತ್ತು ಸಮಾಜದ ಮೇಲೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಸಂಘದ ವಾರ್ಷಿಕ ಲೆಕ್ಕಪತ್ರ ವನ್ನು ಸಭೆಯ ಮುಂದಿರಿಸಿ ಅನುಮೋದನೆ ಪಡೆಯಲಾಯಿತು . ಔಷಧಿ ವ್ಯಾಪಾರಿಗಳಾಗಿ ಸಾಮಾಜಿಕ ಅಭ್ಯುದಯಕ್ಕಾಗಿ ತಮ್ಮನ್ನು ತೊಡಗಿಸಿಕೊಂಡ ಮೂವರು ಹಿರಿಯ ಫಾರ್ಮಸಿಸ್ಟ್ ಗಳಾದ1ಶ್ರೀ ಸದಾನಂದ ಶೆಟ್ಟಿ, ಗಣೇಶ್ ಮೆಡಿಕಲ್ಸ್, ಮಂಗಳೂರು2ಶ್ರೀ ಅಶೋಕ್ ವಿ. ಬಿಜ್ಜಲ್, ಅಶೋಕ್ ಮೆಡಿಕಲ್ ಸ್ಟೋರ್ಸ್, ಬಾಗಲಕೋಟೆ.3ಶ್ರೀ ಕೆ. ಪ್ರಭಾಕರನ್, ಭಾರ್ಗವಿ ಫಾರ್ಮ್, ಮಂಡ್ಯ“ಕೆಮಿಸ್ಟ್ ರತ್ನ ಪ್ರಶಸ್ತಿ-2026” ಪ್ರಧಾನ ಮಾಡಲಾಯಿತು , KCDA ಇದರ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎ. ಕೆ. ಜೀವನ್ ಔಷಧ ವ್ಯಾಪಾರದಲ್ಲಿರುವ ಸವಾಲುಗಳ ಸಮರ್ಪಕ ನಿರ್ವಹಣಾ ಮನವಿಯನ್ನು ಸಭೆಯ ಮುಂದಿರಿಸಿ ಕರ್ನಾಟಕ ಸರಕಾರದ ಆರೋಗ್ಯ ಮಂತ್ರಿಗಳಾದ ಶ್ರೀ ಯು.ಟಿ ಖಾದರ್ ರವರಿಗೆ ಸಲ್ಲಿಸುವುದಾಗಿ ತಿಳಿಸಿದರು. ರಾಜ್ಯದ ವಿವಿದೆಡೆಯಿಂದ ಭಾಗವಹಿಸಿದ ಪ್ರತಿನಿಧಿಗಳಿಗೆ ನೆನಪಿನ ಸ್ಮರಣಿಕೆ ನೀಡುವುದರೊಂದಿಗೆ 68ನೇ ವಾರ್ಷಿಕ ಮಹಾಸಭೆಯು ಯಶಸ್ವಿಯಾಗಿ ನೆರವೇರಿತು.

ಪ್ರಾದೇಶಿಕ ವಾರ್ತೆಗಳು

*ರಾಷ್ಟ್ರೀಯ ಸ್ವಯಂ ಪ್ರೇರಿತಾ ರಕ್ತದಾನ ದಿನಾಚರಣೆ. ರಕ್ತದಾನಿಗಳು ರೆಡ್‌ಕ್ರಾಸ್ ಸೇವೆಯ ಶಕ್ತಿ-ದ.ಕ. ಜಿಲ್ಲಾ ರೆಡ್‌ಕ್ರಾಸ್ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ

ಮಂಗಳೂರು: ರಕ್ತದಾನಿಗಳು ರೆಡ್‌ಕ್ರಾಸ್ ಸೇವೆಯ ನಿಜವಾದ ಶಕ್ತಿಯಾಗಿದ್ದಾರೆ. ಸ್ವಯಂ ಪ್ರೇರಿತ ರಕ್ತದಾನಿಗಳಿಂದಾಗಿ ರೆಡ್‌ಕ್ರಾಸ್ ಸಂಸ್ಥೆಯು ಸದಾ ಸೇವಾ ಸನ್ನದ್ಧವಾಗಿರಲು ಸಾಧ್ಯವಾಗಿದೆ ಎಂದು ರೆಡ್‌ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ ವತಿಯಿಂದ ಯೂತ್ ರೆಡ್‌ಕ್ರಾಸ್ (ವೈಆರ್‌ಸಿ )ಮಂಗಳೂರು ವಿ.ವಿ.ಘಟಕ ಮತ್ತು ಲಯನ್ಸ್ ಕ್ಲಬ್ ಕಾವೂರು ಸಹಯೋಗದಲ್ಲಿ ಗುರುವಾರ ರೆಡ್‌ಕ್ರಾಸ್ ಶತಮಾನೋತ್ಸವ ಭವನದ ಪ್ರೇರಣಾ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಪ್ರೇರಿತಾ ರಕ್ತದಾನ ದಿನಾಚರಣೆ ಹಾಗೂ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರೋಟರಿ ಜಿಲ್ಲೆ 3180ರ ಮಾಜಿ ಗವರ್ನರ್ ಕೆ.ಕೃಷ್ಣ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಕಾವೂರು ಅಧ್ಯಕ್ಷ ಮೋಹನ್‌ದಾಸ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.ರೆಡ್‌ಕ್ರಾಸ್ ಜಿಲ್ಲಾ ಘಟಕದ ಖಜಾಂಜಿ ಗುರುದತ್ ನಾಯಕ್, ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಪಿ.ಬಿ.ಹರೀಶ್ ರೈ, ರಾಘವೇಂದ್ರ ರಾವ್ ಉಪಸ್ಥಿತರಿದ್ದರು. ಮಿಲಾಗ್ರಿಸ್ಕಾಲೇಜಿನ ವೈಆರ್‌ಸಿ ಯೋಜನಾಧಿಕಾರಿ ಸುಶ್ಮಿತಾ ಶೈಲಾ ಮೊರಾಸ್ ಪ್ರತಿಜ್ಞಾ ವಿಧಿ ಬೋಧಿಸಿದರು. ರೆಡ್‌ಕ್ರಾಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಸತೀಶ್ ಕುಮಾರ್ ಶೆಟ್ಟಿ ಪಿ ಸ್ವಾಗತಿಸಿ, ಬೆಸೆಂಟ್ ಕಾಲೇಜಿನ ವೈಆರ್‌ಸಿ ಯೋಜನಾಧಿಕಾರಿ ದೀಕ್ಷಿತಾ ವಂದಿಸಿದರು. ರಾಮಕೃಷ್ಣ ಕಾಲೇಜಿನ ವೈಆರ್‌ಸಿ ಯೋಜನಾಧಿಕಾರಿ ಸುಮನ ರೈ ಕಾರ್ಯಕ್ರಮ ನಿರೂಪಿಸಿದರು.ನಗರದ ಮಿಲಾಗ್ರಿಸ್ ಕಾಲೇಜು, ರಾಮಕೃಷ್ಣ ಕಾಲೇಜು, ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸೈಂಟ್ ಆಗ್ನೆಸ್ ಕಾಲೇಜು, ಬೆಸೆಂಟ್ ಮಹಿಳಾ ಕಾಲೇಜು, ಕೆನರಾ ಕಾಲೇಜು, ಪಿ.ಎ.ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾವೂರು, ಬೆಸೆಂಟ್ ಸಂಧ್ಯಾ ಕಾಲೇಜಿನ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

ಪ್ರಾದೇಶಿಕ ವಾರ್ತೆಗಳು

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಶ್ರೀ ಬಸವರಾಜು ಅವರಿಗೆ ಮಂಗಳೂರು ವಕೀಲರ ಸಂಘದಿಂದ ಬೀಳ್ಕೊಡುಗೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಶ್ರೀ ಬಸವರಾಜು ಅವರು ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ, ಮಂಗಳೂರು ವಕೀಲರ ಸಂಘದ ವತಿಯಿಂದ ಮಂಗಳೂರು ಬಾರ್ ಅಸೋಸಿಯೇಷನ್‌ ಆವರಣದಲ್ಲಿರುವ ಕಾನ್ಫರೆನ್ಸ್ ಹಾಲ್‌ನಲ್ಲಿ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಜಗದೀಶ್ ಕೆ. ಶೇನವ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಅಶೋಕ್ ಅರಿಗ, ಪ್ರಧಾನ ಜಿಲ್ಲಾ ಸರ್ಕಾರಿ ವಕೀಲರಾದ ಎಂ. ಪಿ. ನೊರೋನ್ಹಾ, ಪ್ರಧಾನ ಕಾರ್ಯದರ್ಶಿ ಗೌತಮ್ ಬಿ.ಪಿ., ಕೋಶಾಧಿಕಾರಿ ಶ್ರೀಮತಿ ರೇಖಾ, ಜೊತೆ ಕಾರ್ಯದರ್ಶಿ ರವಿಕುಮಾರ್ ವಿ. ಸೇರಿದಂತೆ ನ್ಯಾಯಾಧೀಶರು ಹಾಗೂ ಹಿರಿಯ ಮತ್ತು ಕಿರಿಯ ವಕೀಲರು ಉಪಸ್ಥಿತರಿದ್ದರು.ನ್ಯಾಯಾಂಗ ಕ್ಷೇತ್ರದಲ್ಲಿ ಶ್ರೀ ಬಸವರಾಜು ಅವರು ಸಲ್ಲಿಸಿದ ಸೇವೆ ಹಾಗೂ ವಕೀಲರು ಮತ್ತು ನ್ಯಾಯಾಂಗದ ನಡುವಿನ ಉತ್ತಮ ಬಾಂಧವ್ಯವನ್ನು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು. ಅವರ ನಿವೃತ್ತಿ ಜೀವನ ಸುಖ, ಶಾಂತಿ ಹಾಗೂ ಆರೋಗ್ಯದಿಂದ ಕೂಡಿರಲಿ ಎಂದು ಮಂಗಳೂರು ವಕೀಲರ ಸಂಘದ ವತಿಯಿಂದ ಶುಭ ಹಾರೈಸಲಾಯಿತು.ಕಾರ್ಯಕ್ರಮದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು, ನ್ಯಾಯಾಧೀಶರು ಹಾಗೂ ಅಪಾರ ಸಂಖ್ಯೆಯ ಹಿರಿಯ ಮತ್ತು ಕಿರಿಯ ವಕೀಲರು ಭಾಗವಹಿಸಿ ಶ್ರೀ ಬಸವರಾಜು ಅವರಿಗೆ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು.

ಪ್ರಾದೇಶಿಕ ವಾರ್ತೆಗಳು

MP MLA’S NEWS BREAKING :DR ASHOk SHETTY BN. ಎಂಆರ್‌ಪಿಎಲ್‌ನಲ್ಲಿ ಬೆಂಕಿ – ಆಕಾಶ ಮುಗಿಲು ಆವರಿಸಿದ ದಟ್ಟ ಕಪ್ಪು ಹೊಗೆ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ: ಡಾ. ರುಡಾಲ್ಪ್ ನೊರೋನ್ಹಾ ಅವರಿಂದ ಅಧಿಕೃತ ಮಾಹಿತಿ.

ಮಂಗಳೂರು, ಸೆ. 30: ದಕ್ಷಿಣ ಕನ್ನಡ ಜಿಲ್ಲೆಯ ಜೋಕಟ್ಟೆ ಸಮೀಪದ ಕುತ್ತೆತ್ತೂರುನಲ್ಲಿರುವ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನ 3ನೇ ಹಂತದ ಘಟಕದಲ್ಲಿ ಇಂದು ಮಧ್ಯಾಹ್ನ 12.25 ರ ಸುಮಾರಿಗೆ ಭೀಕರ ಸ್ಫೋಟ ಸಂಭವಿಸಿ, ಬಳಿಕ ಭಾರಿ ಬೆಂಕಿ ಕಾಣಿಸಿಕೊಂಡಿದೆ. ದಟ್ಟ ಕಪ್ಪು ಹೊಗೆ ಆಕಾಶವನ್ನೇ ಆವರಿಸಿದ್ದು, ಬೆಂಕಿಯ ಜ್ವಾಲೆ ಘಟಕದ ಒಳಭಾಗದಲ್ಲಿ ಕಾಣುತ್ತಿದೆ.ಬೆಂಕಿ ಈಗ ನಿಯಂತ್ರಣದಲ್ಲಿದೆ. ಯಾವುದೇ ರೀತಿಯ ಆತಂಕ, ಗಾಬರಿ ಬೇಡವೆಂದು ಸಂಬಂಧ ಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ ಸ್ಥಳೀಯರಲ್ಲಿ ಆತಂಕ:ಸ್ಫೋಟದ ಶಬ್ದವು ಜೋಕಟ್ಟೆ, ಬಜ್ಪೆ, ಕಳವಾರು, ಬೈಕಂಪಾಡಿ, ಸುರತ್ಕಲ್, ಕಾವೂರು ಮತ್ತು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಕೇಳಿಸಿದೆ. ಜೋಕಟ್ಟೆ ಗ್ರಾಮ ಪಂಚಾಯತ್ ಕಟ್ಟಡ ಸೇರಿದಂತೆ ಸುತ್ತಮುತ್ತಲಿನ ಮನೆಗಳು ನಡುಗಿದ ಅಂದರೆ ಲಘು ಭೂಕಂಪದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಅಧಿಕೃತ ಮಾಹಿತಿ:ಎಂಆರ್‌ಪಿಎಲ್ ಜನಸಂಪರ್ಕಾಧಿಕಾರಿ ಡಾ. ರುಡಾಲ್ಫ್ ಅವರು ನೀಡಿದ ಮಾಹಿತಿಯ ಪ್ರಕಾರ“ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಘಟಕವನ್ನು ಖಾಲಿ ಮಾಡಲಾಗಿದೆ. ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿವೆ. ರಾಜೇಶ್ ಬ್ಯಾಪ್ಟಿಸ್ಟ್ ಎಂಬ ಕಾರ್ಮಿಕರಿಗೆ ಶೇ.35 ರಷ್ಟು ಸುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತರ 6 ಜನ ಸಣ್ಣ ಗಾಯಗಳಿಗೆ ಹೊರರೋಗಿ ಚಿಕಿತ್ಸೆ ಪಡೆದಿದ್ದಾರೆ.”ಮಂಗಳೂರು, ಪಾಂಡೇಶ್ವರ, ಪಣಂಬೂರು ಭಾಗದಿಂದ ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.ಘಟನೆಯ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.

Scroll to Top