ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಮಧುಮೇಹ ಕಾಯಿಲೆಯ ಮಾಹಿತಿ, ಜಾಗೃತಿ, ಮೂಡಿಸಿ

ಮಂಗಳೂರು: ದೀರ್ಘಾವಧಿ ಮಧುಮೇಹ ಮಾರಕ ಕಾಯಿಲೆಯು ದೇಹದ ಆರೋಗ್ಯ ಮತ್ತು ನಾನಾ ಅಂಗಾಂಗಳ ಮೇಲೆ ಕಠಿಣ ದುಷ್ಪರಿಣಾಮ ಬೀರಿದೆ. ಕಾಯಿಲೆಯ ಕುರಿತು ಮಾಹಿತಿ, ಜಾಗೃತಿ, ಮುಂಜಾಗ್ರತೆ, ಉಪಶಮನ ಚಿಕಿತ್ಸೋಪಾಯ ಕ್ರಮದ ಬಗ್ಗೆ ಜ್ಞಾನದ ಅವಶ್ಯಕತೆ ಇದೆ ಎಂದು ಕರ್ನಾಟಕ ವೈದ್ಯಕೀಯ ಮಂಡಳಿಯ ವೀಕ್ಷಕ ಪ್ರತಿನಿಧಿ ಡಾ.ಮಹಮ್ಮದ್ ಇಸ್ಮಾಯಿಲ್ ಹೇಳಿದರು.ಅವರು ಕಣಚೂರು ವೈದ್ಯಕೀಯ ಕಾಲೇಜಿನ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಶನಿವಾರ ಸಂಸ್ಥೆಯ ಸಭಾಂಗಣದಲ್ಲಿ ಜರುಗಿದ ವಿಶ್ವ ಮಧುಮೇಹ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ವಿಶ್ವದಲ್ಲಿ ಇನಸುಲಿನ್ ಔಷಧದ ಆವಿಷ್ಕಾರ ಈ ಕಾಯಿಲೆಗೆ ವರದಾನ ಎಂದರು. ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧ್ಯಕ್ಷ ಡಾ. ಯು.ಕೆ. ಮೋನು ಈ ವೈದ್ಯಕೀಯ ಕಾರ್ಯಾಗಾರವನ್ನು ಉದ್ಘಾಟಿಸಿದರು. ಸಂಘಟನಾ ಸಮಿತಿ ಅಧ್ಯಕ್ಷ ಹಾಗೂ ವೈದ್ಯಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ದೇವದಾಸ್ ರೈ ಅವರು ಮಧುಮೇಹ ಕಾಯಿಲೆಯು ಒಂದು ಆಧುನಿಕ ಜೀವನ ಶೈಲಿ ಪದ್ಧತಿಯ ಕಾಯಿಲೆ ಆಗಿದ್ದು, ಕೆಲಸ, ಕಾರ್ಯಗಳ ಒತ್ತಡ, ಬೊಜ್ಜು, ಅಧಿಕ ಸಕ್ಕರೆ ಅಂಶದ ಆಹಾರ ಸೇವನೆ ಮತ್ತು ವ್ಯಾಯಾಮ ರಹಿತ ಜೀವನ ಪ್ರಮುಖ ಕಾರಣವೆಂದರು.ಈ ಕಾರ್ಯಾಗಾರದಲ್ಲಿ ಖ್ಯಾತ ವೈದ್ಯಕೀಯ ಶಾಸ್ತç ತಜ್ಞರು ಹಾಗೂ ಮಧುಮೇಹ ಕಾಯಿಲೆಯ ತಜ್ಞರಾದ ಡಾ. ಸೌರಭ ಭಟ್, ಡಾ.ಪ್ರಶಾಂತ್ ಹುಬ್ಬಳ್ಳಿ, ಡಾ.ಸುದೀಪ್ ಕೆ., ಡಾ.ಅಖಿಲಾ ಭಂಡಾರ್ಕರ್, ಡಾ.ವಿಜಯ್ ಕುಮಾರ್, ಡಾ.ಎಂ. ಪ್ರಜ್ಞ, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕಾಯಿಲೆಯ ಕಾರಣಗಳು ಮತ್ತು ಲಕ್ಷಣಗಳು, ಉಪಶಮನ ಮತ್ತು ನಿರ್ವಹಣೆ ಬಗ್ಗೆ ಅತಿಥಿ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಡಾ.ದೇವದಾಸ್ ರೈಯವರು ಮಧುಮೇಹ ಕಾಯಿಲೆಯ ಬಗ್ಗೆ ರಸಪ್ರಶ್ನೆ ಸ್ಪರ್ಧಾಕೂಟವನ್ನು ಆಯೋಜಿಸಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಸಂಸ್ಥೆಯ ಪ್ರಿನ್ಸಿಪಾಲ್ ಡಾ. ಶಹನವಾಜ್ ಮನಿಪಾಡಿ, ಆಡಳಿತ ಅಧಿಕಾರಿ ಡಾ.ರೋಹನ್ ಮೊನಿಸ್ ಉಪಸ್ಥಿತರಿದ್ದರು.ಈ ವೈದ್ಯಕೀಯ ಕಾರ್ಯಾಗಾರದಲ್ಲಿ ಸುಮಾರು 190 ವೈದ್ಯರು, ವೈದ್ಯಕೀಯ ಶಿಕ್ಷಣ, ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರತಿನಿಧಿಗಳಾಗಿ ಭಾಗವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಡಾ. ಶ್ರೀಕಾಂತ್ ಹೆಗ್ಡೆ ವಂದಿಸಿದರು. ಡಾ.ಲಕ್ಷಿತಾ ಸುರೇಶ್ ಮತ್ತು ಡಾ.ಅಬ್ದುಲ್ ಫರೂಖಿ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ವಿಶೇಷ ಚೇತನ ಕಲಾವಿದರಿಗೆ ಸಂಗೀತ ಪರಿಕರ ವಿತರಣೆ ಮತ್ತು ವಿಶ್ವ ದಾಖಲೆ ಸಾಧಕಿ ದೀಕ್ಷಾ ವಿ. ಅಭಿನಂದನೆ.

ಮಂಗಳೂರು-ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಸ್ಥಾನ (NSCDF) ಆಶ್ರಯದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ(KS&DL) ಸಹಯೋಗದೊಂದಿಗೆ ದಕ್ಷಿಣ ಕನ್ನಡದಲ್ಲಿ ನೆಲೆಸಿರುವ ವಿಶೇಷ ಚೇತನ ಕಲಾವಿದರಿಗೆ ಸಂಗೀತ ಪರಿಕರ ಹಾಗೂ ಧ್ವನಿ ವರ್ಧಕ ವಿತರಣ ಕಾರ್ಯಕ್ರಮ “ಪುರಸ್ಕಾರ” ಸಮಾರಂಭ ದಿನಾಂಕ 27/11/2025 ನೇ ಗುರುವಾರ ಸಂಜೆ ಗಂಟೆ 6ಕ್ಕೆ ಮಂಗಳೂರಿನ ಪುರಭವನದಲ್ಲಿ ಜರುಗಿತು.ಈ ಮಹತ್ವ ಪೂರ್ಣ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ನ್ಯಾಯವಾದಿ ರವೀಂದ್ರ ಮುನ್ನಿಪಾಡಿ ಮಾತನಾಡಿ ,ವಿಶೇಷ ಚೇತನರಿಗೆ ಬದುಕು ಕಟ್ಟಿ ಕೊಡುವ NSCDF ಅಧ್ಯಕ್ಷ ಗಂಗಾಧರ್ ಗಾಂಧೀ ಈ ಕಾರ್ಯ ಮಹತ್ವ ಪೂರ್ಣವಾದದ್ದು. ಇಂತಹ ಕಾರ್ಯಕ್ರಮಗಳು ನಿರಂತರ ನಡೆಯಬೇಕು ಆಗ ವಿಶೇಷ ಚೇತನರು ಸ್ವಾವಲಂಬಿ ಜೀವನ ನಡೆಸಲು ಸಾಧ್ಯ ಎಂದು ಹೇಳಿದ ಅವರು ವಿಶೇಷ ಚೇತನರನ್ನು ಸಮಾಜ ಕಡೆ ಗಣಿಸದೆ ಗೌರವ ದಿಂದ ನೋಡುವ ಮನಸ್ಥಿತಿ ಬೆಳಸಿಕೊಳ್ಳಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಮಾತನಾಡಿ ಇದೊಂದು ಮೌಲ್ಯ ಆಧಾರಿತ ಸುದ್ದಿಯ ಕಾರ್ಯಕ್ರಮ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ, ಬೆಂಗಳೂರು ಮೂಲದ ಅಖಿಲ ಕರ್ನಾಟಕ ಅಭಿವೃದ್ಧಿ ಪ್ರತಿಸ್ಥಾನ ಅಧ್ಯಕ್ಷೆ ಸೌಮ್ಯ ಶೆಟ್ಟಿ ವಿಶೇಷ ಚೇತನಾ ಕಲಾವಿದರಿಗೆ ಸಂಗೀತ ಪರಿಕರ ಮತ್ತು ಧ್ವನಿವರ್ಧಕಗಳನ್ನು ಹಸ್ತಾಂತರಗೊಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ NSCDF ಅಧ್ಯಕ್ಷ ಗಂಗಾಧರ್ ಗಾಂಧೀ ಮಾತನಾಡಿ ನಮ್ಮ ಸಂಸ್ಥೆಯ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಇದು ಒಂದು, ನಾವು ನಮ್ಮ ಮಿತಿಯಲ್ಲಿ ನಮ್ಮ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ ನಾವು ಪ್ರಚಾರದ ಹಿಂದೆ ಬಿದ್ದವರಲ್ಲ ಎಂದು ಹೇಳಿದರು. ಸಮಾಜ ಸೇವಕ ರಂಜನ್ ಕುಮಾರ್, ನಿರಂತರ 216 ಗಂಟೆಗಳ ಕಾಲ ಭರತ ನಾಟ್ಯ ಪ್ರದರ್ಶನ ನೀಡುವ ಮೂಲಕ GOLDEN BOOK OF WORLD RECORD ನಲ್ಲಿ ವಿಶ್ವ ದಾಖಲೆ ಮಾಡಿದ ವಿಧುಷಿ ದೀಕ್ಷಾ ವಿ. ಮತ್ತು ಪತ್ರಕರ್ತ ಪುಷ್ಪರಾಜ್ ಬಿನ್ ಇವರನ್ನು NSCDF ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು“ಒಂದೇ ಮಾತರಂ ” ಗೀತೆಯನ್ನು ,ಹಾಡುವ ಮೂಲಕ ಶಿಲ್ಪಾ ಜೆ. ಸಕಲೇಶಪುರ ಮತ್ತು ರೇಖಾ ಸುದೇಶ್ ರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡದರು.ಮಾತಿನ ಮಲ್ಲಿ ರಶ್ಮಿ ಸನಿಲ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಗಂಗಾಧರ್ ಗಾಂಧೀ ಮತ್ತು ದೃತಿ ಪಿ.ಶೆಟ್ಟಿ ಬೆಳ್ಳಿ ತೆರೆಯ ಬಂಗಾರದ ಮಧುರ ಗೀತೆಗಳನ್ನು ಹಾಡುವ ನೆರೆದ ಪ್ರೇಕ್ಷಕರ ಮನಸೊರೆಗೊಳಿಸಿದರು.

ಪ್ರಾದೇಶಿಕ ವಾರ್ತೆಗಳು

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಪುನರಾಯ್ಕೆ ಗೊಂಡ ಐಕಳ ಹರೀಶ್ ಶೆಟ್ಟಿ. ಒಕ್ಕೂಟದ 29ನೇ ವಾರ್ಷಿಕ ಮಹಾಸಭೆ ಮತ್ತು ಬಹಿರಂಗ ಅಧಿವೇಶನದಲ್ಲಿ ಸಾಧಕರಿಗೆ ಸನ್ಮಾನ. ಸಂಭ್ರಮ ಸಡಗರದ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಗಣ್ಯಾತಿಗಣ್ಯರು ಮತ್ತು ಬಂಟ ಸಮಾಜ ಬಾಂಧವರು.

ಮಂಗಳೂರು-ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ 29ನೇ ವಾರ್ಷಿಕ ಮಹಾಸಭೆ, ಬಹಿರಂಗ ಅಧಿವೇಶನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬಂಟ್ಸ್ ಹಾಸ್ಟೆಲ್ ಬಳಿಯ ಬಂಟರ ಯಾನೆ ನಾಡವರ ಮಾತೃ ಸಂಘದ ಮೈದಾನದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಐಕಳ ಹರೀಶ್ ಶೆಟ್ಟಿಯವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಪುನರಾಯ್ಕೆ ಗೊಂಡರು.ಅವರು ಅಧ್ಯಕ್ಷ ಅವಧಿಯಲ್ಲಿ ತೋರಿದ ಉತ್ತಮ ನಿರ್ವಹಣೆಯೇ ಇದಕ್ಕೆ ಕಾರಣ.ಜೊತೆಗೆ,ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, “ಸುಸಂಸ್ಕೃತ ಸಮಾಜಕ್ಕೆ ಇನ್ನೊಂದು ಹೆಸರೇ ನಮ್ಮ ಬಂಟ ಸಮಾಜ. ಲಕ್ಷ್ಮಿ, ಜ್ಞಾನ ಶಕ್ತಿ, ಕ್ರಿಯಾ ಶಕ್ತಿ ಎಲ್ಲವೂ ಒಗ್ಗೂಡಿದಾಗ ಸಮಾಜದ ಶ್ರೇಯಸ್ಸು ಸಾಧ್ಯ. ಬಂಟ ಸಮಾಜಕ್ಕೆ ರಾಜ್ಯವನ್ನು ಆಳುವ ಸಾಮರ್ಥ್ಯವಿದೆ. ನಮ್ಮ ಬಂಟರು ವಿಶ್ವದೆಲ್ಲೆಡೆ ಇದ್ದಾರೆ. ಅವರೆಲ್ಲಾ ಒಗ್ಗೂಡಿದರೆ ರಾಷ್ಟ್ರ ಸುಭದ್ರವಾಗುತ್ತದೆ“ ಎಂದರು. ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಮಾತಾಡಿ, “ಜಿಲ್ಲೆಯ ಬೇರೆಲ್ಲಾ ಸಂಘಗಳಿಗೆ ಮಾದರಿಯಾಗಿ ನಮ್ಮ ಜಿಲ್ಲೆಗೆ ಗೌರವ ತಂದ ಸಂಘ ಏನಾದರೂ ಇದ್ದರೆ ಅದು ಬಂಟರ ಸಂಘ. ಬಂಟ ಸಮಾಜದ ಜೊತೆಗೆ ಎಲ್ಲಾ ಸಮಾಜವನ್ನು ಜೊತೆಗೆ ಕೊಂಡೊಯ್ಯುವ ತಾಕತ್ತು ಈ ಸಂಘಕ್ಕಿದೆ. ಭಿನ್ನಾಭಿಪ್ರಾಯ ಇದ್ದಾಗ ಎಲ್ಲಾ ವರ್ಗದ ಜನರನ್ನು ಪ್ರೀತಿ ವಿಶ್ವಾಸದಿಂದ ಗೆಲ್ಲುವ ಮೂಲಕ ಸಾಮರಸ್ಯವನ್ನು ಸ್ಥಾಪಿಸುವ ಮಹತ್ತರ ಜವಾಬ್ದಾರಿ ಸಾಮಾಜಿಕ ಸಂಘಟನೆಗಳಿವೆ. ಅದನ್ನು ಎಲ್ಲ ಸಂಘ ಸಂಸ್ಥೆಗಳು ಪಾಲಿಸಬೇಕು” ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, “ಜಾಗತಿಕ ಬಂಟರ ಸಂಘಗಳ ಒಕ್ಕೂಟ ನಿರಂತರವಾಗಿ ಬಡವರ ಕಣ್ಣೀರು ಒರೆಸುವ ಕೆಲಸವನ್ನು ಮಾಡುತ್ತಿದೆ. ಸಂಘ ಏನೇ ಸಾಧನೆ ಮಾಡಬೇಕಿದ್ರೂ ಅದಕ್ಕೆ ದಾನಿಗಳ ನೆರವು ಮತ್ತು ನಿರಂತರ ಪ್ರೋತ್ಸಾಹ ಅಗತ್ಯ. ನಮ್ಮ ಬೆನ್ನುತಟ್ಟುವ ದಾನಿಗಳು ಸದಾ ಜೊತೆಗಿರುವುದು ನಮ್ಮ ಯಶಸ್ಸಿನ ಸೂತ್ರಧಾರಿಗಳು“ ಎಂದರು. ಯುಎಇ ಅಧ್ಯಕ್ಷರಾದ ವಕ್ವಾಡಿ ಪ್ರವೀಣ್ ಶೆಟ್ಟಿ ಮಾತನಾಡಿ, “ನಾನು ಬಂಟರ ಸಂಘಕ್ಕೆ ಬರಲು ಐಕಳ ಹರೀಶ್ ಶೆಟ್ಟಿ ಅವರೇ ಕಾರಣ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳು. ಹೊಸ ತಂಡ ಉತ್ಸಾಹದಿಂದ ಕಾರ್ಯ ನಿರ್ವಹಿಸುವ ಮೂಲಕ ನಿರ್ಮಾಣ ಆಗಬೇಕಿರುವ ನೂತನ ಕಟ್ಟಡಕ್ಕೆ ಎಲ್ಲರೂ ಧನಸಹಾಯ ನೀಡಬೇಕು” ಎಂದರು.ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ, “ವಿಶ್ವದ ಎಲ್ಲಾ ಬಂಟರು ಬೇಧಭಾವ ಮರೆತು ಒಂದಾಗಬೇಕು. ಬಂಟ ಸಂಘಟನೆ ಮಾಡುವ ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಎಲ್ಲರೂ ಮುಕ್ತ ಮನಸ್ಸಿನಿಂದ ತೊಡಗಿಕೊಳ್ಳಬೇಕು” ಎಂದರು. ಸಮಾರಂಭದಲ್ಲಿ ಕರ್ನಾಟಕ ರಾಜ್ಯೋತ್ಸವ, ಜಿಲ್ಲಾ ರಾಜ್ಯೋತ್ಸವ, ಪತ್ರಕರ್ತರಿಗೆ ಹಾಗೂ ಸಾಧಕರಿಗೆ ಸನ್ಮಾನ ಮಾಡಲಾಯಿತು. ವೇದಿಕೆಯಲ್ಲಿ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಅಶೋಕ್ ಶೆಟ್ಟಿ ಬಿಲ್ಲಾಡಿ, ಉಮಾ ಕೃಷ್ಣ ಶೆಟ್ಟಿ, ಶಶಿಧರ್ ಶೆಟ್ಟಿ ಇನ್ನಂಜೆ, ಅಜಿತ್ ಶೆಟ್ಟಿ, ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಮೋಹನ್ ದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ ರಂಗೋಲಿ, ಅಜಿತ್ ಹೆಗ್ಡೆ ಪುಣೆ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್, ಪೃಥ್ವಿರಾಜ್ ರೈ, ಎಸಿ ಭಂಡಾರಿ, ಸುಧಾಕರ್ ಎಸ್ ಪೂಂಜಾ, ಮಂಜುನಾಥ್ ಶೆಟ್ಟಿ ಕೊಡ್ಲಾಡಿ, ಆನಂದ್ ಶೆಟ್ಟಿ ಎಕ್ಕಾರ್, ನಾಗೇಶ್ ಶೆಟ್ಟಿ, ಅನಿಲ್ ಶೆಟ್ಟಿ, ರಾಜೀವ್ ಭಂಡಾರಿ, ಒಕ್ಕೂಟದ ಸಂಚಾಲಕ ಬಾಲಕೃಷ್ಣ ರೈ ಕೊಲ್ಲಾಡಿ ಮತ್ತಿತರರು ಉಪಸ್ಥಿತರಿದ್ದರು. ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಪ್ರಾಸ್ತಾವಿಕ ಮಾತನ್ನಾಡಿದರು. ನಿತೇಶ್ ಶೆಟ್ಟಿ ಎಕ್ಕಾರ್, ಪ್ರಿಯಾ ಹರೀಶ್ ಶೆಟ್ಟಿ, ರಾಜೇಶ್ವರಿ ಡಿ ಶೆಟ್ಟಿ ಸುರತ್ಕಲ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಮಂಗಳೂರು ಪುರಭವನದಲ್ಲಿ ಇಂದು (ನವೆಂಬರ್ 27 ರ) ಸಂಜೆ 6 ಕ್ಕೆ ವಿಶೇಷ ಚೇತನ ಕಲಾವಿದರಿಗೆ ಸಂಗೀತ ಪರಿಕರ ವಿತರಣೆ ಮತ್ತು ವಿಶ್ವ ದಾಖಲೆ ಸಾಧಕಿ ದೀಕ್ಷಾ ವಿ. ಅಭಿನಂದನೆ.

ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಸ್ಥಾನ (NSCDF) ಆಶ್ರಯದಲ್ಲಿ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಹಯೋಗದೊಂದಿಗೆ ದಕ್ಷಿಣ ಕನ್ನಡದಲ್ಲಿ ನೆಲೆಸಿರುವ ವಿಶೇಷ ಚೇತನ ಕಲಾವಿದರಿಗೆ ಸಂಗೀತ ಪರಿಕರ ಹಾಗೂ ಧ್ವನಿ ವರ್ಧಕ ವಿತರಣ ಕಾರ್ಯಕ್ರಮ ಮತ್ತು 216 ಗಂಟೆಗಳ ಕಾಲ ನಿರಂತರ ಭರತ ನಾಟ್ಯ ಮಾಡುವ ಮೂಲಕ GOLDEN BOOK OF WORLD RECORD ನಲ್ಲಿ ವಿಶ್ವ ದಾಖಲೆ ಮಾಡಿರುವ ಸಾಧಕಿ ವಿಧುಷಿ ದೀಕ್ಷಾ ವಿ. ಅವರಿಗೆ ಅಭಿನಂದನಾ “ಪುರಸ್ಕಾರ” ಸಮಾರಂಭ ಇಂದು (ದಿನಾಂಕ 27/11/2025 ನೇ ಗುರುವಾರ) ಸಂಜೆ ಗಂಟೆ 6ಕ್ಕೆ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ. ಈ ಮಹತ್ವ ಪೂರ್ಣ ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ನ್ಯಾಯವಾದಿ ರವೀಂದ್ರ ಮುನ್ನಿಪಾಡಿ ನೆರವೇರಿಸಲಿದ್ದು , NSCDF ಅಧ್ಯಕ್ಷ ಗಂಗಾಧರ್ ಗಾಂಧೀ ಅಧಕ್ಷತೆವಹಿಸಲಿರುವ ಈ ಕಾರ್ಯಕ್ರಮದಲ್ಲಿ, ಬೆಂಗಳೂರು ಮೂಲದ ಅಖಿಲ ಕರ್ನಾಟಕ ಅಭಿವೃದ್ಧಿ ಪ್ರತಿಸ್ಥಾನ ಅಧ್ಯಕ್ಷೆ ಸೌಮ್ಯ ಶೆಟ್ಟಿ ವಿಶೇಷ ಚೇತನಾ ಕಲಾವಿದರಿಗೆ ಸಂಗೀತ ಪರಿಕರ ಮತ್ತು ಧ್ವನಿವರ್ಧಕಗಳನ್ನು ಹಸ್ತಾಂತರಗೊಳಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಹಾಗೂ ಸಮಾಜ ಸೇವಕ ರಂಜನ್ ಮತ್ತು ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಸ್ಥಾನ (KSSAP) ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.“ಒಂದೇ ಮಾತರಂ ” ಗೀತೆಯೊಂದಿಗೆ ಆರಂಭ ಗೊಳ್ಳಲಿರುವ ಈ ಪ್ರಾರ್ಥನಾ ಗೀತೆಯನ್ನು ದೃತಿ ಪಿ.ಶೆಟ್ಟಿ, ಶಿಲ್ಪಾ ಜೆ. ಸಕಲೇಶಪುರ ಮತ್ತು ರೇಖಾ ಸುದೇಶ್ ರಾವ್ ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಕಾರ್ಯಕ್ರಮದ ನಿರೂಪಣೆಯನ್ನು ಮಂಗಳೂರಿನ ಜನಪ್ರಿಯ ನಿರೂಪಕಿ, ಮಾತಿನ ಮಲ್ಲಿ ರಶ್ಮಿ ಸನಿಲ್ ನಿರ್ವಹಿಸಲಿದ್ದಾರೆ ಎಂದು NSCDF ಪ್ರಧಾನ ಕಾರ್ಯದರ್ಶಿ ದಿನಕರ ಡಿ. ಬಂಗೇರ ಮಾಧ್ಯಮ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಪತ್ರಕರ್ತರಾದ ಶ್ರೀನಿವಾಸ ನಾಯಕ್ ಇಂದಾಜೆ, ಪುಷ್ಪರಾಜ್ ಶೆಟ್ಟಿ ಬಿ. ಎನ್, ರಾಜೇಶ್ ಶೆಟ್ಟಿ, ಸತೀಶ್ ಇರಾ, ಅಶೋಕ್ ಶೆಟ್ಟಿ ಬಿ. ಎನ್. ಅವರಿಗೆ ಸನ್ಮಾನ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ 29ನೇ ವಾರ್ಷಿಕ ಮಹಾಸಭೆ ಮತ್ತು ಬಹಿರಂಗ ಅಧಿವೇಶನ ಸಮಾರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀನಿವಾಸ ನಾಯಕ್ ಇಂದಾಜೆ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ ಬಿ.ಎನ್, ಉಪಾಧ್ಯಕ್ಷರಾದ ರಾಜೇಶ್ ಶೆಟ್ಟಿ, ಕಾರ್ಯದರ್ಶಿ ಸತೀಶ್ ಇರಾ, ಕಾರ್ಯಕಾರಿ ಸಮಿತಿ ಸದಸ್ಯರಾದ ಅಶೋಕ್ ಶೆಟ್ಟಿ ಬಿ.ಎನ್. ಬ್ರಹ್ಮರಕೂಟ್ಲು ಅವರನ್ನು ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಲ್ಲಿ ಮಾತೃ ಸಂಘದ ಹೊರ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪುನರಾಯ್ಕೆಗೊಂಡ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಉಮಾಕೃಷ್ಣ ಶೆಟ್ಟಿ, ಪುಣೆ ಬಂಟರ ಸಂಘದ ಅಧ್ಯಕ್ಷ ಅಜಿತ್ ಹೆಗ್ಡೆ, ಮೋಹನ್ ದಾಸ್ ಶೆಟ್ಟಿ, ಶಶಿಧರ್ ಶೆಟ್ಟಿ ಇನ್ನಂಜೆ, ಹರೀಶ್ ಶೆಟ್ಟಿ ಪಡು ಕುಡೂರು, ಇಂದ್ರಾಳಿ ಜಯಕರ ಶೆಟ್ಟಿ, ಕರ್ನಿರೆ ವಿಶ್ವನಾಥ್ ಶೆಟ್ಟಿ, ಕೊಲ್ಲಾಡಿ ಬಾಲಕೃಷ್ಣ ರೈ, ಚಂದ್ರಹಾಸ ಶೆಟ್ಟಿ ರಂಗೋಲಿ, ನ್ಯಾಯವಾದಿ ಪೃಥ್ವಿರಾಜ್ ರೈ ಸೇರಿದಂತೆ ಗಣ್ಯರನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು

ಪ್ರಾದೇಶಿಕ ವಾರ್ತೆಗಳು

ಬಸವಣ್ಣನವರ ವಚನಗಳಾಗಲಿ, ನಾರಾಯಣ ಗುರುಗಳ ತಾತ್ವಿಕ ಚಿಂತನೆಗಳು ನಮ್ಮ ಜೀವನದಲ್ಲಿ ಅನುಷ್ಠಾನಗೊಳಿಸಬೇಕು-ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಆಶಯ.

ಬಸವಣ್ಣನವರ ವಚನಗಳಾಗಲಿ, ನಾರಾಯಣ ಗುರುಗಳ ತಾತ್ವಿಕ ಚಿಂತನೆಗಳನ್ನಾಗಲೀ ಬೆಳೆಸುವ ಬದಲು ನಮ್ಮ ಜೀವನದಲ್ಲಿ ಅನುಷ್ಠಾನಗೊಳಿಸಬೇಕು ಎಂದು ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್ ಅಭಿಪ್ರಾಯಪಟ್ಟರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ದಕ್ಷಿಣ ಕನ್ನಡ ಜಿಲ್ಲಾ ಕದಳಿ ಮಹಿಳಾ ವೇದಿಕೆ, ದ.ಕ.ನಾರಾಯಣ ಗುರು ಧರ್ಮ ಪರಿಪಾಲನಾ ಸಮಿತಿ ಮಂಗಳೂರು ಹಾಗೂ ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಸಭಾಂಗಣದಲ್ಲಿ ನಡೆದ ‘ಶರಣರ ಅನುಭಾವ ಸಂಗಮ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ವಿಚಾರ ಸಂಕೀರ್ಣ ಹಾಗೂ ಪ್ರಶಸ್ತಿ ಪ್ರಧಾನ’ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಗೋಕರ್ಣಥೇಶ್ವರ ಶಿಕ್ಷಣ ಸಂಸ್ಥೆಯ ಸಂಚಾಲಕ ವಸಂತ ಕಾರಂದೂರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಯುವಜನತೆಗೆ ಸಮಾಜ ಸುಧಾರಕರ ತತ್ವಗಳನ್ನು ತಿಳಿಸುತ್ತಾ ಅವರನ್ನು ಸಮಾಜಮುಖಿಯಾಗಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ದ.ಕ. ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ನಮ್ಮ ದೇಶದ ಪರಂಪರೆ ಹಾಗೂ ನೆಲದ ಗುಣ ನಮ್ಮನ್ನು ಒಗ್ಗೂಡಿಸಿ ಹೃದಯವಂತರನ್ನಾಗಿ ಮಾಡುವುದರೊಂದಿಗೆ ಸಂಸ್ಕಾರವಂತರನ್ನಾಗಿ ಮಾಡುತ್ತದೆ ಎಂದು ತಿಳಿಸಿದರು.ಈ ಸಂದರ್ಭ ಅಲೆಮಾರಿ-ಅರೆಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಅವರಿಗೆ ‘ಬಸವಶ್ರೀ’ ಕಾಯಕಯೋಗಿ ಪ್ರಶಸ್ತಿ, ಸ್ತ್ರೀಶಕ್ತಿಗಾಗಿ ಪ್ರತಿಭಾ ಕುಳಾಯಿ ಅವರಿಗೆ ‘ಕದಳಿಶ್ರೀ’ ಪ್ರಶಸ್ತಿ ಹಾಗೂ ಆಕಾಶವಾಣಿ ಉದ್ಘೋಷಕ ಮುದ್ದು ಮೂಡುಬೆಳ್ಳೆ ಅವರಿಗೆ ‘ನಾರಾಯಣ ಗುರುಶ್ರೀ’ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಬಳಿಕ ಮಂಗಳೂರು ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘದ ಅಧ್ಯಕ್ಷೆ ಸುಮಾ ಅರುಣ್ ಮಾನ್ವಿ ಅಧ್ಯಕ್ಷತೆಯಲ್ಲಿ ‘ಸಾಮಾಜಿಕ ಕ್ರಾಂತಿಗಾಗಿ ಶರಣರ ಪಯಣ’ ಈ ವಿಷಯದ ಬಗ್ಗೆ ಮಂಗಳೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ಕೆ ಎಸ್.ಜಯಪ್ಪ ಅವರು ವಿಚಾರ ಮಂಡಿಸಿದರು. ನಾರಾಯಣ ಗುರುಶ್ರೀ ವಿಚಾರ ಸಂಕಿರಣದ ಬಗ್ಗೆ ಡಸ್‌ಡಿಎಂ ಕಾಲೇಜಿನ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ರಾಮಚಂದ್ರ ಮಾತನಾಡಿದರು.ಅಖಿಲ ಭಾರತ ವೀರೇಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ ಬಸವರಾಜ ಗಗನ್, ಮಂಗಳೂರಿನ ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘದ ಉಪಾಧ್ಯಕ್ಷರುಗಳಾದ ಶೇಖರ ಪೂಜಾರಿ, ಡಾ.ಬಿ.ಜಿ ಸುವರ್ಣ, ಮಂಗಳೂರು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಂಶುಪಾಲ ಡಾ.ಜಯಪ್ರಕಾಶ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಘುರಾಜ್ ಕದ್ರಿ, ಶ್ರೀ ಗೋಕರ್ಣಥೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಉದಯಕುಮಾರ್, ಮಂಗಳೂರು ಅನುಭಾವ ಸಂಗಮದ ಅಧ್ಯಕ್ಷ ಶರಣ ಗುಂಡಪ್ಪ ಪೀರಲಾ ಅಬ್ಬೆಂದಿ, ಕರಾವಳಿ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಪ್ರ.ಕಾ. ಚನ್ನಬಸಪ್ಪ ರೊಟ್ಟಿ, ಧಾರವಾಡ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿ ಶರಣ ಕರಿಬಸಪ್ಪ ಕೋರಿಶೆಟ್ಟರ್ ಮೊದಲಾದವರು ಉಪಸ್ಥಿತರಿದ್ದರು. ಶರಣ ಸಾಹಿತ್ಯ ಪರಿಷತ್ತಿ ದ.ಕ. ಜಿಲ್ಲಾಧ್ಯಕ್ಷ ಶರಣ ಜಗನ್ನಾಥಪ್ಪ ಪನ್ಸಾಲೆ ಜನವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕದಳಿ ಮಹಿಳಾ ವೇದಿಕೆಯ ರಿಜಿಸ್ಟರ್ ಸುರೇಖಾ ಯಾಳವಾರ ವಂದಿಸಿದರು. ಕರಾವಳಿ ಪ್ರದೇಶ ಅನುಭವ ಪೀಠದ ಪೀಠಾಧಿಪತಿ ಅಲ್ಲಮಪ್ರಭು ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

ಅಡ್ಡೂರು ಸೆಂಟ್ರಲ್ ಕಮಿಟಿ ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಆಯ್ಕೆ

ಮಂಗಳೂರು: ಅಡ್ಡೂರು ಸೆಂಟ್ರಲ್ ಕಮಿಟಿಯ ೨೦೨೫-೨೬ನೇ ಸಾಲಿನ ಮಹಾಸಭೆಯು ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ನಂದ್ಯ ಆಯ್ಕೆಯಾದರು.ಎಂ.ಎಸ್.ರಫೀಕ್ ಅಧ್ಯಕ್ಷತೆಯಲ್ಲಿ ಎ.ಎಸ್.ಅಶ್ರಫ್ ಉಸ್ತುವಾರಿಯಲ್ಲಿ ಸಫ್ವಾ ದಮ್ಮಾಮ್ ಮವಾದಿ ರೆಸಾರ್ಟ್‌ನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಶರೀಫ್ ಜಿ.ಎ., ಶಮೀರ್ ಅಳಕೆ ಗೌರವಾಧ್ಯಕ್ಷರಾಗಿ ಎಂ.ಎಸ್.ರಫೀಕ್, ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ತೋಕೂರ್, ಜೊತೆ ಕಾರ್ಯದರ್ಶಿಯಾಗಿ ಶರೀಫ್ ಗೋಳಿಪಡ್ಪು ಹಾಗೂ ನವಾಝ್ ತೋಕೂರ್, ಕೋಶಾಧಿಕಾರಿಯಾಗಿ ನೂರ್ ತೋಕೂರ್, ಲೆಕ್ಕ ಪರಿಶೋಧಕರಾಗಿ ಕಲಂದರ್ ಗುತ್ತು, ಎಲ್ಲಾ ವಲಯ ಸಮಿತಿಗಳಿಂದ ತಲಾ ಐವರು ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು.ಸಲಹೆಗಾರರಾದ ಎ.ಪಿ.ಮುಹಮ್ಮದ್ ಕಿರಾಅತ್ ಪಠಿಸಿದರು. ಜುಬೈಲ್ ಸಮಿತಿಯ ಕಾರ್ಯದರ್ಶಿ ರಶೀದ್ ಎ.ಕೆ ಸ್ವಾಗತಿಸಿದರು. ಪ್ರದಾನ ಕಾರ್ಯದರ್ಶಿ ಮನ್ಸೂರ್ ವಾರ್ಷಿಕ ವರದಿ ಮಂಡಿಸಿದರು. ಜೊತೆ ಕಾರ್ಯದರ್ಶಿ ಖಲಂದರ್ ಗುತ್ತು ಹಣಕಾಸು ವರದಿ ಮಂಡಿಸಿದರು.

ಪ್ರಾದೇಶಿಕ ವಾರ್ತೆಗಳು

ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರಕ್ಕೆ ಟಿವಿ ಕೊಡುಗೆ

ಮಂಗಳೂರು, ನಗರದ ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರಕ್ಕೆ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿಯ ಮಹಾ ಪ್ರಬಂಧಕ ಅರುಣ್ ಪ್ರಭ ಕೊಡುಗೆಯಾಗಿ ನೀಡಿರುವ ಟಿವಿ ಯನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಹಸ್ತಾಂತರಿಸಿದರು.ಬಳಿಕ ಮಾತನಾಡಿದ ಅವರು ಈ ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದರು. ಆನೆಗುಂಡಿ ಅಂಗನವಾಡಿ ಕೇಂದ್ರ ಬಾಡಿಗೆ ಕೊಠಡಿಯಲ್ಲಿದ್ದು, ಅದಕ್ಕೂ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ ಜಮೀನು ಒದಗಿಸುವ ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ಬಾಲಭವನ ಸೊಸೈಟಿ ಅಧ್ಯಕ್ಷ ಬಿ ಆರ್ ನಾಯ್ಡು ಕರ್ನಾಟಕ ಸೆಣಬು ಅಭಿವೃದ್ಧಿ ನಿಗಮದ ಅಧ್ಯಕ್ಷ ನಟರಾಜ್, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ನಿರ್ದೇಶಕ ಶ್ರೀನಿವಾಸ್ ನಾಯಕ್ ಇಂದಾಜೆ,,ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿ ಜನರಲ್ ಮ್ಯಾನೇಜರ್ ಅರುಣ್ ಪ್ರಭಾ, ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ್ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಷಾ, ಎಂ ಸಿ ಸಿ ಬ್ಯಾಂಕ್ ನಿರ್ದೇಶಕ ಅಲ್ವಿನ್ ಮೊಂತೆರೋ, ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಸಿಂಧೂ, ಶಿಕ್ಷಕಿ ಲಕ್ಷ್ಮಿ, ಕೆ ವಿ ಪ್ರಭಾಕರ್ ಕುಟುಂಬದ ಸದಸ್ಯರು, ವಿವಿಧ ಅಂಗನವಾಡಿ ಕೇಂದ್ರದ ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಸಮಿತಿ ಪದಗ್ರಹಣ

ಮಂಗಳೂರು: ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ(ರಿ)ದ 2025-28ನೆ ಸಾಲಿನ ಜಿಲ್ಲಾ ಘಟಕದ ಪದಗ್ರಹಣ ಸಮಾರಂಭ ಮಂಗಳೂರು,ನ.21;ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ(ರಿ)ದ 2025-28ನೆ ಸಾಲಿನ ದ.ಕ ಜಿಲ್ಲಾ ಘಟಕದ ಪದಗ್ರಹಣ ಸಮಾರಂಭ ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ನಡೆಯಿತು. ಪದಗ್ರಹಣ ಸಮಾರಂಭ ಮುಖ್ಯ ಅತಿಥಿಯಾಗಿ ದ.ಕ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಉಪ ನಿರ್ದೇಶಕರು ಹಾಗೂ ಚುನಾವ ಣಾಧಿ ಕಾರಿ ಖಾದರ್ ಶಾ ಶುಭ ಹಾರೈಸಿ ಮಾತನಾಡುತ್ತಾ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರ್ಯನಿರತನಿರತ ಪತ್ರಕರ್ತರ ಸಂಘ ಸಕ್ರೀಯ ಚಟುವಟಿಕೆಗಳ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ.ಜಿಲ್ಲೆಯ ಗ್ರಾಮೀಣ ಪ್ರದೇಶದ ಪತ್ರಕರ್ತರು ಜಿಲ್ಲಾ ಸಂಘದ ಪದಾಧಿಕಾರಿಗಳಾಗಿ ಉತ್ತಮ ಕಾರ್ಯ ಮಿರ್ವಹಿಸುತ್ತಿದ್ದಾರೆ.ಸದಸ್ಯರ ಶ್ರೇಯೋ ಭಿವೃದ್ಧಿಗೆ ಇನ್ನಷ್ಟು ಉತ್ತಮ ಕೆಲಸಗಳಾಗಿ ಎಂದು ಶುಭ ಹಾರೈಸಿದರು.ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ(ರಿ)ದ ಪೂರ್ವಾಧ್ಯಕ್ಷ ಆನಂದ ಶೆಟ್ಟಿ ಯವರು ಅಧ್ಯಕ್ಷ ಪುಷ್ಪರಾಜ್ ಬಿ .ಎನ್ , ಪ್ರಧಾನ ಕಾರ್ಯದರ್ಶಿ ರಾಜೇಶ್ ಕೆ ಪೂಜಾರಿ, ಉಪಾ ಧ್ಯಕ್ಷರಾದ ಮುಹಮ್ಮದ್ ಆರಿಫ್ ಪಡುಬಿದ್ರೆ,ವಿಲ್ಫ್ರೆಡ್ ಡಿ ಸೋಜ, ರಾಜೇಶ್ ಶೆಟ್ಟಿ, ಕೋಶಾಧಿಕಾರಿ ವಿಜಯ ಕೋಟ್ಯಾನ್ ಪಡು ,ಕಾರ್ಯದರ್ಶಿಗಳಾದ ಸುರೇಶ್ ಡಿ ಪಳ್ಳಿ,ಸಿದ್ಧಿಕ್ ನೀರಾಜೆ,ಸತೀಶ್ ಇರಾ ರವರಿಗೆ ಪ್ರತಿಜ್ಞಾ ವಿಧಿ ಬೋಧನೆ ನೆರವೇರಿಸಿ ಮಾತ ನಾಡುತ್ತಾ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿ,ಸಂಘದ ಸದಸ್ಯರು ಸಂಘಟಿತರಾಗಿ ಕ್ರೀಯಾಶೀಲ ಚಟುವಟಿಕೆಗಳ ಮೂಲಕ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಇನ್ನಷ್ಟು ಸಾಧಿಸುವಂತಾಗಲಿ ಎಂದರು. ರಾಜ್ಯ ಕಾರ್ಯ ಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಯವರಿಗೆ ನಿಕಟ ಪೂರ್ವರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಪ್ರತಿಜ್ಞಾ ವಿಧಿ ಬೋಧಿಸಿದರು.ಜಿಲ್ಲಾ ಸಮಿತಿಯ ಪೂರ್ವಾಧ್ಯಕ್ಷ ಹರ್ಷ ಜಿಲ್ಲಾ ಕಾರ್ಯ ಕಾರಿ ಸಮಿತಿ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧನೆ ಮಾಡಿದರು.ನಿಕಟ ಪೂರ್ವ ಅಧ್ಯಕ್ಷ ಹಾಗೂ ರಾಜ್ಯ ಕಾರ್ಯ ಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಸ್ವಾಗತಿಸಿ ಮಾತನಾಡುತ್ತಾ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯದ ಮಾದರಿ ಸಂಘವಾಗಿ ಗುರುತಿಸಿ ಕೊಂಡಿದೆ.ಈ ಸಾಧನೆಗೆ ಸಹಕಾರ ನೀಡಿದ ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ ಮತ್ತು ನೂತನ ಆಡಳಿತ ಮಂಡಳಿಯ ಸದಸ್ಯರಿಗೆ ಶುಭ ಹಾರೈಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ(ರಿ).ನೂತನ ಅಧ್ಯಕ್ಷರಪುಷ್ಪರಾಜ್ ಬಿ.ಎನ್ ನಿಕಟ ಪೂರ್ವ ಅಧ್ಯಕ್ಷ ಅಧಿಕಾರ ಸ್ವೀಕರಿಸಿ ಮಾತನಾಡುತ್ತಾ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಕರ್ತರ ಸಂಘಟನೆ,ಅಪಘಾತ ವಿಮೆ,ಆರೋಗ್ಯ ವಿಮೆಯ ಜೊತೆ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಸಂಘದ ಸದಸ್ಯರ ರಚನಾತ್ಮಕ ಚಟುವಟಿಕೆಗಳಿಗೆ ಸಂಘಟಿತವಾಗಿ ಶ್ರಮಿಸಲಿದೆ ಎಂದರು. ಮಂಗಳೂರು ಪತ್ರಿಕಾ ಭವನ ಟ್ರಸ್ಟ್ ನ ಅಧ್ಯಕ್ಷ ಅನ್ನು ಮಂಗಳೂರು ಶುಭ ಹಾರೈಸಿದರು.ಅಶೋಕ್ ಶೆಟ್ಟಿ ಬಿ.ಎನ್,ಸಂದೇಶ್ ಜಾರ,ಸಂದೀಪ್ ಕುಮಾರ್ ಎಂ,ಲಕ್ಷ್ಮೀ ನಾರಾಯಣ ರಾವ್,ಹರೀಶ್ ಮೋಟುಕಾನ, ದಿವಾಕರ ಪದ್ಮುಂಜ,ಕಿರಣ್ ಯು ಸಿರ್ಸಿಕರ್, ಅಭಿಷೇಕ್ ಎಚ್ ಎಸ್,ಜಯಶ್ರೀ, ಭುವನೇ ಶ್ವರ ಜಿ, ಸಂದೀಪ್ ವಾಗ್ಲೆ,ಹರೀಶ್ ಕೆ ಆದೂರ್, ಗಿರೀಶ್ ಅಡ್ಪಂಗಾಯ, ಸಂದೀಪ್ ಸಾಲ್ಯಾನ್, ಆರಿಫ್ ಕಲ್ಕಟ್ಟ. ಜಿಲ್ಲಾ ಕಾರ್ಯ ಕಾರಿ ಸಮಿತಿ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.ಉಪಾಧ್ಯಕ್ಷ ಮುಹಮ್ಮದ್ ಆರಿಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿ ಸಿದರು.ಕಾರ್ಯದರ್ಶಿ ವಿಜಯ ಕೋಟ್ಯಾನ್ ಪಡು ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಮುಖ್ಯ: ಶ್ರೀ ಚಂದ್ರಶೇಖರ ಸ್ವಾಮೀಜಿ

ಬೆಂಗಳೂರು: ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯೊಂದಿಗೆ ಕಾನೂನಿನ ಮೇಲೆ ವಿಶ್ವಾಸವನ್ನು ಹೊಂದಿರಬೇಕು, ಸತ್ಯ, ನಿಷ್ಠೆ, ಪ್ರಾಮಾಣಿಕತೆಯಿಂದ ಇದ್ದವನಿಗೆ ನ್ಯಾಯದ ಮೇಲಿನ ಭರವಸೆ ಎಂದಿಗೂ ಹುಸಿಯಾಗುವುದಿಲ್ಲ, ಇಂದು ನಮ್ಮ ನಡುವೆ ನ್ಯಾಯಾಧೀಶರಾದವರು ತಮ್ಮ ಸರಳ ವ್ಯಕ್ತಿತ್ವದಿಂದ ಸಮಾಜದಲ್ಲಿ ಗುರುತಿಸಿಕೊಂಡವರಲ್ಲಿ ನಾಗಲಿಂಗನ ಗೌಡ ಅವರೂ ಸಹ ಒಬ್ಬರಾಗಿದ್ದಾರೆ. ಅವರ ತೀರ್ಪುಗಳೇ ಅವರನ್ನು ಗೌರವಿಸಿದೆ ಎಂದು ಆಧ್ಯಾತ್ಮಿಕ ವಿಶ್ವಗುರು, ಅಂತಾರಾಷ್ಟ್ರೀಯ ವಾಸ್ತುತಜ್ಞರು, ಜ್ಯೋತಿಷ್ಯರಾದ ಶ್ರೀ ಚಂದ್ರಶೇಖರ ಸ್ವಾಮೀಜಿ ನುಡಿದರು.ಅವರು ಬೆಂಗಳೂರಿನ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದಲ್ಲಿ ನಡೆದ ಕರುನಾಡ ಸಾಧಕರು ಎಂಬ ಸರಣಿ ಕಾರ್ಯಕ್ರಮದಲ್ಲಿ ನಿವೃತ್ತ ಜಸ್ಟಿಸ್ ಹಾಗೂ ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯ ಬೆಂಗಳೂರು. ಕರ್ನಾಟಕ ಸರಕಾರ ಇದರ ಅಧ್ಯಕ್ಷರಾಗಿರುವ ನಾಗಲಿಂಗನ ಗೌಡ ಅವರನ್ನು ಸನ್ಮಾನಿಸಿ ಮಾತನಾಡಿದರು.ಸನ್ಮಾನವನ್ನು ಸ್ವೀಕರಿಸಿ ನಾಗಲಿಂಗನ ಗೌಡ ಮಾತನಾಡಿ, ಸ್ವಾಮೀಜಿಯವರ ಸೇವಾ ಕಾರ್ಯ ನಿರಂತರವಾಗಿ ಮುಂದುವರಿಯಲಿ, ಸಮಾಜದಲ್ಲಿ ಅಶಕ್ತರಿಗೆ ಆಸರೆಯಾಗಿ, ಸದಾ ಸನ್ಮಾರ್ಗದಲ್ಲಿ ಸಾಗುವವರನ್ನು ಗೌರವಿಸುವ ಅವರ ಗುಣ ವಿಶೇಷತೆಯಿಂದ ಅವರ ನೇತೃತ್ವದ ಸೇವಾ ಶ್ರಮವನ್ನು ನಾಡಿನ ಜನತೆ ಗುರುತಿಸುತ್ತಿದೆ ಎಂದರು.ಸೇವಾಶ್ರಮದ ನಿರ್ದೇಶಕಿ ರಜನಿ ಸಿ. ಭಟ್, ರಾಘವ ಸೂರ್ಯ, ನ್ಯಾಯವಾದಿ ರೋಶನಿ ಚಂದ್ರಶೇಖರ್, ರಾಹುಲ್ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.ಆಶ್ರಮದ ವಕ್ತಾರ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Scroll to Top