ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಡಿ.7: ರೋಹಿತ್ ಶೆಟ್ಟಿ ನಗ್ರಿಗುತ್ತು ಅಧ್ಯಕ್ಷತೆಯಲ್ಲಿ ಪುಣೆ ಬಂಟ್ಸ್ ಅಸೋಸಿಯೇಸನ್ ವಾರ್ಷಿಕ ಕ್ರೀಡೋತ್ಸವ

ಪುಣೆ: ಬಂಟ್ಸ್ ಅಸೋಸಿಯೇಸನ್ ಪುಣೆ 13ನೇ ವಾರ್ಷಿಕ ಕ್ರೀಡೋತ್ಸವವು ಡಿ. 7ರಂದು ಪುಣೆಯ ಸಾಳುಂಕೆ ವಿಹಾರ್ ರೋಡ್‍ನ ಬ್ಯಾಂಕ್ ಆಫ್ ಮಹಾ ರಾಷ್ಟ್ರಲೇನ್, ವಾನ್ವೋರಿಯರೇಸ್ ಸ್ಪೋಟ್ಸ್ ಕ್ರೀಡಾ ಸಂಕುಲದಲ್ಲಿ ವೈವಿಧ್ಯಮಯ ಕ್ರೀಡಾ ಸ್ಪರ್ಧೆಗಳೊಂದಿಗೆ ಜರಗಲಿದೆ.ಪುಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 8ರಿಂದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಹಡಪ್ಪರ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಹಾದೇವ ಅಣ್ಣಾ ಬಾಬರ್, ಗೌರವ ಅತಿಥಿಯಾಗಿ ಪುಣೆ ಬಂಟರ ಸಂಘದ ಮ್ಯಾರೇಜ್ ಬ್ಯುರೋ ಸಮಿತಿಯ ಕಾರ್ಯಾಧ್ಯಕ್ಷ ಪುಣೆ ತುಳುಕೂಟದ ಉಪಾಧ್ಯಕ್ಷ ಸಮಾಜಸೇವಕ ಮಾಧವ ಆರ್. ಶೆಟ್ಟಿ ಭಾಗವಹಿಸಲಿದ್ದಾರೆ. ಅಸೋಸಿಯೇಶನ್‍ನ ಕ್ರೀಡಾ ಕಾರ್ಯಾಧ್ಯಕ್ಷ ರಕ್ಷಿತ್ ಶೆಟ್ಟಿ ನೇತೃತ್ವದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಅಸೋಸಿಯೇಶನ್ ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಸರ್ವಸಮಿತಿ ಪದಾಧಿಕಾರಿಗಳ ಸಹಕಾರದೊಂದಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.ಈ ಸಂದರ್ಭ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್‍ನಲ್ಲಿ ಚಿನ್ನದ ಪದಕ ವಿಜೇತ ಪುಣೆಯ ವೈಷ್ಣವಿ ವಸಂತ್ ಶೆಟ್ಟಿ ಅವರನ್ನು ಸಮ್ಮಾನಿಸಲಾಗುವುದು. ಬಂಟ ಸಮಾಜದ ಮಕ್ಕಳು, ಮಹಿಳೆಯರು, ಪುರುಷರು ಸಹಿತ ವಯೋಮಿತಿಗೆ ಅನುಗುಣವಾಗಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಶೇಷ ಆಕರ್ಷಣೆಯಾಗಿ ಪುರುಷರು ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆಯು ನಡೆಯಲಿದೆ. ಕ್ರೀಡಾ ಸ್ಪರ್ಧಿಗಳು ಹಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡೋತ್ಸವದ ಯಶಸ್ಸಿಗೆ ಸಹಕರಿಸುವಂತೆ ಪುಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು, ನಿಕಟಪೂರ್ವ ಅಧ್ಯಕ್ಷ ಗಣೇಶ್ ಹೆಗ್ಡೆ ಪುಣ್ಚೂರು, ಉಪಾಧ್ಯಕ್ಷರಾದ ಡಾ| ಸುಧಾಕರ್ ಶೆಟ್ಟಿ, ಸತೀಶ್ ರೈ ಕಲ್ಲಂಗಳಗುತ್ತು, ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಪೆಲತ್ತೂರು ಮೇಲ್ಮನೆ, ಕೋಶಾಧಿಕಾರಿ ಸಿಎ ಮನೋಹರ್ ಶೆಟ್ಟಿ, ಕ್ರೀಡಾ ಕಾರ್ಯಾಧ್ಯಕ್ಷ ರಕ್ಷಿತ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೇಷ್ಮಾ ಆರ್. ಶೆಟ್ಟಿ ಮತ್ತು ಯುವವಿಭಾಗದ ಕಾರ್ಯಾಧ್ಯಕ್ಷ ಅದೀಪ್ ಶೆಟ್ಟಿ, ಮಹಿಳಾ ವಿಭಾಗದ ಕ್ರೀಡಾ ಕಾರ್ಯಾಧ್ಯಕ್ಷೆ ಪೂರ್ಣಿಮಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಡಿ. 14 ರಂದು ದುಬೈ ಯುಎಇ ಬಂಟ್ಸ್ ನ 48 ನೇ ವರ್ಷದ ಭಾವೈಕ್ಯ ಬಂಟರ ಮಹಾ ಸಮಾಗಮ

ಮಂಗಳೂರು: ದುಬೈ ಯುಎಇ ಬಂಟ್ಸ್ ನ 48 ನೇ ವರ್ಷದ “ಭಾವೈಕ್ಯ” ಬಂಟರ ಮಹಾಸಮಾಗಮವು ಡಿಸೆಂಬರ್ 14 ರಂದು  ಶೇಖ್ ಝಯೀದ್ ರಸ್ತೆಯ ಮಿಲೆನಿಯಂ ಪ್ಲಾಜಾ ಹೋಟೆಲ್ ಡೌನ್ ಟೌನ್ ಹೋಟೆಲ್ (ಹಳೆಯ ಕ್ರೌನ್ ಪ್ಲಾಜಾ) Millenium plaza Down Town Hotel Sheikh Zayed Road ನ ಸಭಾಂಗಣದಲ್ಲಿ ಬೆಳಿಗ್ಗೆ ಒಂಬತ್ತು ಗಂಟೆಯಿಂದ ಸಂಜೆ ಆರು ಗಂಟೆಯ ವರೆಗೆ ಯುಎಇ ಬಂಟರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ “ಬಂಟ ವಿಭೂಷಣ ಪ್ರಶಸ್ತಿ” ಪ್ರದಾನ ಕಾರ್ಯಕ್ರಮಗಳೊಂದಿಗೆ ಜರಗಲಿದೆ.   *ಸಾಂಸ್ಕೃತಿಕ ಕಾರ್ಯಕ್ರಮ* ಯುಎಇ ಬಂಟ ಬಾಂಧವರಿಂದ ತುಳುನಾಡ ಮಣ್ಣ್ ದ ಮಹಿಮೆ, ಭಾರತದ‌ ಸಂಸ್ಕೃತಿಯ ಪಯಣ, ಬಂಟೆರ್ನ ಐಸಿರ, ಕಿರುಚಿತ್ರ ಸ್ಪರ್ಧೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ.  *ಬಂಟ ವಿಭೂಷಣ ಪ್ರಶಸ್ತಿ ಪ್ರದಾನ*ವರ್ಷಂಪ್ರತಿ ಕೊಡಮಾಡುವ ಯುಎಇ ಬಂಟರ ಪ್ರತಿಷ್ಠಿತ ಬಂಟ ವಿಭೂಷಣ ಪ್ರಶಸ್ತಿಯನ್ನು ಮಂಗಳೂರು ಕಂಬಳದ ರೂವಾರಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರಿಗೆ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಚಿತ್ರರಂಗದ ನಟ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ, ಬಾಲಿವುಡ್ ನಟ ವಿವೇಕ್ ಒಬೆರಾಯ್  ಆಗಮಿಸಲಿದ್ದಾರೆ.  ಸಾಯಿಲ್ ರೈ ಮತ್ತು ನಯನ ಶೆಟ್ಟಿ ಕಾರ್ಯಕ್ರಮ‌ ನಿರೂಪಿಸಲಿದ್ದಾರೆ.      ಯುಎಇಯಲ್ಲಿ ಇರುವ ಎಲ್ಲಾ ಬಂಟ ಬಾಂಧವರು 48  ನೇ ವರ್ಷದ ಬಂಟರ ಮಹಾಸಮಾಗಮದಲ್ಲಿ ಭಾಗವಹಿಸಬೇಕೆಂದು ಹಾಗೂ ಬೆಳಿಗ್ಗೆ ಹತ್ತು ಗಂಟೆಯ ಒಳಗೆ ಆಗಮಿಸಿದವರಿಗೆ ಉಚಿತ ಪ್ರವೇಶ ಮತ್ತು ಎಂಟು ಗ್ರಾಂ ಚಿನ್ನದ ನಾಣ್ಯ ಗೆಲ್ಲುವ ಅವಕಾಶ ಇದೆ ಎಂದು ಯುಎಇ ಬಂಟ್ಸ್ ನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಯುಎಇ ಬಂಟ್ಸ್ ನ ಪೋಷಕರಾದ ಸರ್ವೋತ್ತಮ ಶೆಟ್ಟಿ, ಉಪಾಧ್ಯಕ್ಷರಾದ ಪ್ರೇಮ್ ನಾಥ್ ಶೆಟ್ಟಿ, ಪ್ರದಾನ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಮತ್ತು 2025 ಸಾಲಿನ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.   

ಪ್ರಾದೇಶಿಕ ವಾರ್ತೆಗಳು

ಮಾತಾ ಅಮೃತಾನಂದಮಯಿ ಮಠದ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ “ನವಗ್ರಹ ಶಾಂತಿ ಹೋಮ”

ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಬುಧವಾರ ದಿನಾಂಕ 26-11-2025 ರಂದು ನವಗ್ರಹ ಶಾಂತಿ ಹೋಮವು ಶ್ರದ್ಧಾ ಭಕ್ತಿಯಿಂದ ನೆರವೇರಿತು.ಅಮ್ಮನ ಆಶ್ರಮದ ಹಿರಿಯ ಸನ್ಯಾಸಿ ಶಿಷ್ಯೆಯರು ಈ ವಿಶೇಷ ಹೋಮದ ಪೂಜಾ ವಿಧಾನಗಳನ್ನು ನೆರವೇರಿಸಿದರು. ಮಂಗಳೂರಿನ ಆಶ್ರಮದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ, ಹೈದರಾಬಾದ್ ಮಠದಲ್ಲಿರುವ ಹಾಗೂ ತೆಲಂಗಾಣ, ಆಂದ್ರಪ್ರದೇಶದ ಜವಾಬ್ದಾರಿ ಹೊಂದಿರುವ ಸ್ವಾಮಿನಿ ಸುವಿದ್ಯಾಮೃತ ಪ್ರಾಣ, ಕೊಟ್ಟಾಯಂ ಆಶ್ರಮದ ನಿಷ್ಟಾಮೃತ ಪ್ರಾಣ ಹಾಗೂ ಕಾರವಾರದಿಂದ ಸ್ವಾಮಿನಿ ಅಮಲಾಮೃತ ಪ್ರಾಣ ರವರು ಜೊತೆಯಾಗಿ ಸೇರಿ ಆಶ್ರಮದ ವಿಧಿವಿಧಾನಗಳ ಅನುಸಾರ ಪೂಜೆಗೈದರು. ಸೇವಾ ಸಮಿತಿಯ ಗೌರವಾಧ್ಯಕ್ಷರುಗಳಾದ ಡಾ.ಜೀವರಾಜ್ ಸೊರಕೆ,ಡಾ.ವೈ.ಸನತ್ ಹೆಗ್ಡೆ, ಶ್ರುತಿ ಸನತ್ ಹೆಗ್ಡೆ, ಅಧ್ಯಕ್ಷರಾದ ಸುರೇಶ್ ಅಮೀನ್ ಮತ್ತು ಪದಾಧಿಕಾರಿಗಳು, ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಉಡುಪಿ ಸೇವಾಸಮಿತಿಯ ಅಧ್ಯಕ್ಷ ಯೋಗೀಶ್ ಬೈಂದೂರು, ನವೀನ್ ಪಿವಿಟಿ, ಕುಂದಾಪುರ ಸಮಿತಿಯ ಕಲ್ಪನಾ ಭಾಸ್ಕರ್, ಮಾಲತಿ ಬಂಗೇರ ಹಾಗೂ ಕರಾವಳಿ ಕರ್ನಾಟಕದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಅಮ್ಮನ ಭಕ್ತರು ಭಾಗವಹಿಸಿದ್ದರು.ಯುವ ಉದ್ಯಮಿ ಶರಣ್ ರಾಜ್ ಮತ್ತು ಭರತ್ ಹೊಸಬೆಟ್ಟು ರವರನ್ನು ಸನ್ಮಾನಿಸಲಾಯಿತು. ಅತಿಥಿಯಾಗಿ ಆಗಮಿಸಿದ ವಿ4 ಮೀಡಿಯ ಮಾಲಕರಾದ ಲಕ್ಷ್ಮಣ್ ಕುಂದರ್ ಮತ್ತು ಖ್ಯಾತ ಚಿತ್ರನಟ ಅರ್ಜುನ್ ಕಾಪಿಕಾಡ್ ರವರಿಗೆ ಸ್ವಾಮಿನಿ ಮಂಗಳಾಮೃತ ಪ್ರಾಣ ರವರು ಗೌರವ ಪ್ರಸಾದ ನೀಡಿದರು.ಆಗಮಿಸಿದ ಎಲ್ಲರಿಗೂ ಪ್ರಸಾದ ವಿತರಣೆ ಮಾಡಲಾಯಿತು.ಈ ಶುಭ ಸಂದರ್ಭದಲ್ಲಿನೂತನ ಪಾರ್ಕಿಂಗ್ ಪ್ರದೇಶದ ಉದ್ಘಾಟನೆ ನೆರವೇರಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಭಟ್ರಕುಮೇರು: ಡಿಸಂಬರ್ 7 ರಂದು ಬಾಲ ತನಿಯನ ವಾರ್ಷಿಕ ಕೋಲ ಸೇವೆ

ಮಂಗಳೂರು: ನಗರದ ಪದವಿನಂಗಡಿ ಸಮೀಪದ ಭಟ್ರಕುಮೇರು ಸ್ವಾಮಿ ಕೊರಗ ತನಿಯ ಸಾನಿಧ್ಯದಲ್ಲಿ ವಾರ್ಷಿಕ ಕೋಲ ಸೇವೆಯು ಇದೇ ಬರುವ ದಿನಾಂಕ 7 -12.-2025 ನೇ ಭಾನುವಾರದಂದು ತಂತ್ರಿಗಳಾದ ಶ್ರೀ ರವಿ ಆನಂದ ಶಾಂತಿ ಅಡುಮರೋಳಿ ಇವರ ಮಾರ್ಗದರ್ಶನದಲ್ಲಿ ಜರುಗಲಿದೆ.ಅಂದು ಬೆಳಿಗ್ಗೆ 7 ಗಂಟೆಯಿಂದ ಮಹಾಗಣಪತಿ ಹೋಮ, ನಂತರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಸ್ಥಳೀಯ ವಿವಿಧ ಭಜನಾ ತಂಡಗಳಿಂದ ಭಜನೆ ಹಾಗೂ ಹರಿನಾಮ ಸಂಕೀರ್ತನೆ ನಡೆಯಲಿದೆ. ಸಂಜೆ 3 ಗಂಟೆಗೆ ಸಮಾರೋಪ ಸಮಾರಂಭ ಆರಂಭಗೊಳ್ಳಲಿದ್ದು, ಸಾಂದೀಪನಿ ಸಾಧನಾಶ್ರಮ ಶ್ರೀ ಕ್ಷೇತ್ರ ಕೇಮಾರು ಮಠದ ಶ್ರೀ ಶ್ರೀ ಈಶ ವಿಠಲ ದಾಸ ಸ್ವಾಮೀಜಿಯವರು ಆಶೀರ್ವಚನ ನೀಡಲಿರುವರು. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಶ್ರೀ ಹರಿ ನಾರಾಯಣ ದಾಸ ಅಸ್ರಣ್ಣರ ದಿವ್ಯ ಸಾನಿಧ್ಯ ಇರಲಿರುವುದು. ಹಾಗೆ ಗಣ್ಯರ ಉಪಸ್ಥಿತಿಯಲ್ಲಿ ಸಮಾರಂಭ ನೆರವೇರಲಿದೆ.ಸಂಜೆ 5 ಗಂಟೆಗೆ ಕೋಲ ಸೇವೆ ಆರಂಭ: ಸಂಜೆ 5 ಗಂಟೆಗೆ ಸ್ವಾಮಿ ಕೊರಗ ತನಿಯ ದೈವದ ಕೋಲ ಸೇವೆ ಜರುಗಲಿದೆ.ರಾತ್ರಿ 8 ಗಂಟೆಯಿಂದ ಭಕ್ತಿಗಾನ ಸುಧೆ ಭಕ್ತಿ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಇದೇ ವೇಳೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ.ಅಗೆಲು ಸೇವೆ: ದಿನಾಂಕ 08-12-2025 ನೇ ಸೋಮವಾರ ಸಂಜೆ 7 ಗಂಟೆಗೆ ಅಗೆಲು ಸೇವೆ ನಡೆಯಲಿದೆ. ಸಾನಿಧ್ಯಕ್ಕೆ ಹೊರೆ ಕಾಣಿಕೆ ನೀಡಲಿಚ್ಛಿಸುವ ಭಕ್ತರು 05- 12 -2025 ರ ಒಳಗಾಗಿ ತಲುಪಿಸಬೇಕಾಗಿ ವಿನಂತಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕರಿಗಂಧ ಪ್ರಸಾದ ಸ್ವೀಕರಿಸಿ ಸ್ವಾಮಿ ಕೊರಗ ತನಿಯ ದೈವದ ಕ್ರಪೆಗೆ ಪಾತ್ರರಾಗಬೇಕಾಗಿ ಸಾನಿಧ್ಯದ ಯಜಮಾನರಾದ ಶ್ರೀ ಭಾಸ್ಕರ ಬಂಗೇರರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಬಂಟ್ವಾಳ: ಸಕ್ರಮ ಮರಳುಗಾರಿಕೆಗೆ ತಹಶಿಲ್ದಾರ್ ಮಂಜುನಾಥ್ ಅವರ ನೇತೃತ್ವದಲ್ಲಿ ನಾಲ್ಕು ಕಡೆ ಸ್ಥಳ ಪರಿಶೀಲನೆ.

ಬಂಟ್ವಾಳ: ಸರಕಾರದ ಸುತ್ತೊಲೆಯಂತೆ ಬಂಟ್ವಾಳ ‌ತಾಲೂಕಿನ ಆಯ್ದ ನಾಲ್ಕು ಜಾಗದಲ್ಲಿ ನೇತ್ರಾವತಿ ನದಿಯಿಂದ ಸಕ್ರಮವಾಗಿ ಮರಳು ತೆಗೆಯಲು ಅವಕಾಶ ನೀಡುವ ಉದ್ದೇಶದಿಂದ ಬಂಟ್ವಾಳ ತಹಶಿಲ್ದಾರ್ ನೇತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ‌ನಡೆಸಿದ್ದಾರೆ.ಈ ಸಂದರ್ಭದಲ್ಲಿ ವಿವಿಧ ಮರಳು ಮೂಲಗಳ ಜಲಸಂಪನ್ಮೂಲ ಇಲಾಖೆಯ ( ಸಣ್ಣ ನೀರಾವರಿ ಮತ್ತು ಅಂರ್ಜಲ) ಇಂಜಿನಿಯರ್ ಡಾ.ಆನಂದ್ ಬಂಜನ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವಿಜ್ಞಾನಿ ಡಾ.ಮಾದೇಶ್ವರ, ಆರ್.ಟಿ.ಒ ಪ್ರಮೋದ್ ಭಟ್, ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಅವಿನಾಶ್, ಪೊಲಿಸ್ ಸಿಬಂಧಿ ಕೃಷ್ಣ, ಬರಿಮಾರು ಪಿಡಿಒ. ಪುಷ್ಪಾ, ಸರಪಾಡಿ ಪಿಡಿಒ ಸಿಲ್ಬಿಯಾ ಪೆರ್ನಾಂಡಿಸ್, ಕರಿಯಂಗಳ ಪಿಡಿಒ ವಸಂತಿ, ನಾವೂರ ಪಿಡಿಒ ರಾವರ್ಟ್ ಪೆರ್ನಾಂಡಿಸ್ ಅವರು ಹಾಜರಿದ್ದರು.ಹೊಸ ಮರಳು ನೀತಿಯನ್ವಯ ಅಧಿಕೃತವಾಗಿ ನೇತ್ರಾವತಿ ನದಿಯಿಂದ ಮರಳು ತೆಗೆಯಲು ಅವಕಾಶ ನೀಡಿದ್ದೇ ಆದರೆ, ಬಹು ತಿಂಗಳಿನಿಂದ ಮರಳಿಲ್ಲದೆ, ಸೊರಗಿ ಹೋಗಿದ್ದ ತಾಲೂಕಿನ ಜನರ ಬೇಡಿಕೆ ಬಹುಪಾಲು ಈಡೇರಿದಂತೆ, ಮರಳು ಇಲ್ಲದೆ ಅರ್ಧಕ್ಕೆ ನಿಂತಿದ್ದ ವಾಸದ ಮನೆ ಸಹಿತ ಅನೇಕ ಕಾಮಗಾರಿಗಳಿಗೆ ಮರುಜೀವ ನೀಡಿದಂತಾಗುತ್ತದೆ.ಕರಾವಳಿಯ ಬಡಜನರ ಅರ್ಥಿಕ ವ್ಯವಸ್ಥೆಯಲ್ಲೂ ಸುಧಾರಣೆ ಕಾಣಲು ಸಾಧ್ಯವಾಗಬಹುದು ಎಂಬ ಮಾತುಗಳು ಕೇಳಿ ಬಂದಿವೆ.ಬಂಟ್ವಾಳ ತಾಲೂಕು ಕರಿಯಂಗಳ, ಬರಿಮಾರು, ನಾವೂರು ಮತ್ತು ಸರಪಾಡಿ ಗ್ರಾಮದಲ್ಲಿ ಮರಳು ಬ್ಲಾಕ್‌ನ್ನು ಗುರುತಿಸಲು ಜಂಟಿ ಸ್ಥಳ ತನಿಖೆ ನಡೆಸಿ,ವರದಿ ಸಲ್ಲಿಸುವಂತೆ ಸೂಚನೆಯನ್ನು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕು ಕರಿಯಂಗಳ, ಬರಿಮಾರು, ನಾವೂರು ಮತ್ತು ಸರಪಾಡಿ ಗ್ರಾಮದ ಕ್ರಮವಾಗಿ ಸ. ನಂ 46, 1/*, 97 ಮತ್ತು 104 ರಲ್ಲಿ ಕರ್ನಾಟಕ ಹೊಸ ಮರಳು ನೀತಿ-2020 ನ್ನು ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು 1994 ರ ತದ್ದುಪಡಿ 2021 ರನ್ವಯ ಅನುಷ್ಟಾನಗೊಳಿಸಲು ಮರಳನ್ನು ತೆಗೆಯುವ ಉದ್ದೇಶಕ್ಕೆ ನಿರಾಕ್ಷೇಪಣಾ ಪತ್ರ ನೀಡುವ ಬಗ್ಗೆ ಜಂಟಿ ಸ್ಥಳ ತನಿಖೆ ನಡೆಸಿ ವರದಿ ನೀಡುವ ಉದ್ದೇಶದಿಂದ ಸಂಬಂಧಿಸಿದ ಎಲ್ಲಾ ಅಧಿಕಾರಿಗಳ ಜೊತೆ ಬಂಟ್ವಾಳ ತಹಶಿಲ್ದಾರ್ ಮಂಜುನಾಥ್ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮರಳು ತೆಗೆಯಲು ಗುರುತಿಸುವ ಜಾಗ in ಸರಕಾರದ ನಿಯಮದಂತೆ ಸೂಕ್ತವಾಗಿದೆಯಾ? ಎಂಬುದನ್ನು ಖಾತರಿಪಡಿಸಿ ಬಳಿಕ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ ಬಳಿಕ ಒಂದಷ್ಟು ಕ್ರಮಗಳು ನಡೆದು ಮುಂದೆ ಅವಕಾಶ ನೀಡಲಾಗುತ್ತದೆ.

ಪ್ರಾದೇಶಿಕ ವಾರ್ತೆಗಳು

ಡಾ. ಮೂಡಂಬೈಲ್ ರವಿ ಶೆಟ್ಟಿ ಅವರಿಗೆ ಪ್ರತಿಷ್ಠಿತ ‘ಕಲಾದರ್ಪಣ ಕನ್ನಡ ಕಣ್ಮಣಿ’ ರಾಷ್ಟ್ರೀಯ ಪ್ರಶಸ್ತಿ ಗೌರವ!

ಮಂಗಳೂರು: ಜಾಗತಿಕವಾಗಿ ಕರ್ನಾಟಕ ಸಂಸ್ಕೃತಿ ಮತ್ತು ಭಾಷೆಯನ್ನು ಪಸರಿಸುವಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ, ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷರು ಹಾಗೂ ಎಟಿಎಸ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ದೋಣಿಂಜೆಗುತ್ತು ಡಾ. ಮೂಡಂಬೈಲ್ ರವಿ ಶೆಟ್ಟಿ ಅವರಿಗೆ ಪ್ರತಿಷ್ಠಿತ ಕಲಾದರ್ಪಣ ಕನ್ನಡ ಕಣ್ಮಣಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ‘ಕಲಾದರ್ಪಣ ಕನ್ನಡ ಹಬ್ಬ’ ಹಾಗೂ ರಾಜ್ಯೋತ್ಸವ ಸಂಭ್ರಮದ ವೇದಿಕೆಯಲ್ಲಿ ಈ ಸನ್ಮಾನ ನೆರವೇರಿತು.ಸಾಧನೆಯ ಹಾದಿ ಮತ್ತು ಸೇವೆಡಾ. ರವಿ ಶೆಟ್ಟಿ ಮೂಡಂಬೈಲ್ ಅವರ ನಾಯಕತ್ವದಲ್ಲಿ ಕರ್ನಾಟಕ ಸಂಘ ಕತಾರ್ (KSQ) ತನ್ನ ರಜತ ವರ್ಷೋತ್ಸವ ಸಾಂಸ್ಕೃತಿಕ, ಸಾಮಾಜಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ 25 ವೈವಿಧ್ಯಮಯ ಮೈಲಿಗಲ್ಲು ಕಾರ್ಯಕ್ರಮಗಳ ಆಯೋಜನೆ ಮಾಡುವ ಮೂಲಕ ಯಶಸ್ವಿಯಾಗಿ ಪೂರೈಸಿದೆ.ನೂರಾರು ಜನರಿಗೆ ವಿದೇಶದಲ್ಲಿ ಉದ್ಯೋಗವನ್ನು ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿ ಅನೇಕರ ಮನೆಯನ್ನು ಬೆಳಗಿಸುವುದರ ಜೊತೆಗೆ ವಿದೇಶದಲ್ಲಿದ್ದರೂ ಸದಾ ಸ್ವದೇಶದಲ್ಲಿ ತಾನು ಬೆಳೆದ ಊರಿನ ಸರ್ವರಲ್ಲೂ ಉತ್ತಮ ಬಾಂಧವ್ಯ ಇರಿಸಿಕೊಂಡು ಸರ್ವರ ಮೆಚ್ಚುಗೆಗೆ ಪಾತ್ರರಾದ ಪುತ್ತೂರಿನ ಕಣ್ಮಣಿ ರವಿ ಶೆಟ್ಟಿಯವರು ಕತಾರ್‌ನಲ್ಲಿ ಸಾಂಪ್ರದಾಯಿಕ ಕಲೆ ಯಕ್ಷಗಾನ ಮತ್ತು ದೇಸಿ ಕ್ರೀಡೆ ಕಬಡ್ಡಿಯನ್ನು ಇವರ ನಾಯಕತ್ವದಲ್ಲಿ ಪರಿಚಯಿಸಿರುವುದು ಉಲ್ಲೇಖನೀಯ.ತುಳುಕೂಟ ಕತಾರ್ (ಮೂರು ಬಾರಿ ಅಧ್ಯಕ್ಷರು), ಬಂಟ್ಸ್ ಕತಾರ್ (ಸ್ಥಾಪಕ ಅಧ್ಯಕ್ಷರು) ಸೇರಿದಂತೆ ಹಲವು ಸಂಘಟನೆಗಳಲ್ಲಿ ನಾಯಕತ್ವ ವಹಿಸಿ ತಮ್ಮ ತಂಡದ ಜೊತೆ ಉತ್ತಮ ಸಂಘಟನೆಯ ಮೂಲಕ ನಾಡಿನ ಆಚಾರ ವಿಚಾರ ಸಂಸ್ಕೃತಿ ಸಂಸ್ಕಾರವನ್ನು ಹಲವಾರು ಕಲಾವಿದರಿಗೆ ವೇದಿಕೆ ಕಲ್ಪಿಸುವ ಮೂಲಕ ಕತಾರ್ ನಲ್ಲಿ ಪಸರಿಸಿ ಹೊಸ ಪೀಳಿಗೆಗೆ ಹಸ್ತಾಂತರಿಸುವ ಸಾಮಾಜಿಕ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.ಕೃತಜ್ಞತಾ ನುಡಿಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ರವಿ ಶೆಟ್ಟಿ ಮೂಡಂಬೈಲ್, ಮಕ್ಕಳಿಗೆ ವೇದಿಕೆ ಒದಗಿಸಿ ಸಂಸ್ಕೃತಿಯನ್ನು ಉಳಿಸುತ್ತಿರುವ ಕಲಾದರ್ಪಣದ ಕಾರ್ಯ ಶ್ಲಾಘನೀಯ. ಈ ಗೌರವವು ರಜತ ಮಹೋತ್ಸವದ ಯಶಸ್ಸಿಗೆ ಹಗಲಿರುಳು ಶ್ರಮಿಸಿದ ಕರ್ನಾಟಕ ಸಂಘ ಕತಾರ್‌ನ ನನ್ನ ಸಮರ್ಪಿತ ತಂಡಕ್ಕೆ ಸಲ್ಲುತ್ತದೆ ಎಂದು ಪ್ರಶಸ್ತಿಯನ್ನು ತಮ್ಮ ತಂಡಕ್ಕೆ ಅರ್ಪಿಸಿದರು.

ಪ್ರಾದೇಶಿಕ ವಾರ್ತೆಗಳು

ಡಿ.13ರಂದು ಸುರತ್ಕಲ್ ಮುಕ್ಕ ಕ್ಯಾಂಪಸ್ ನಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯದ ವತಿಯಿಂದ ಅಂತರಾಷ್ಟ್ರೀಯ ಸಮ್ಮೇಳನ

ಮಂಗಳೂರು ಶ್ರೀನಿವಾಸ್ ವಿಶ್ವವಿದ್ಯಾಲಯದ ಶ್ರೀನಿವಾಸ್ ಯೋಗ–ಸಂಸ್ಕೃತ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು “ಭಾರತೀಯ ಜ್ಞಾನ ಮತ್ತು ಸಂಸ್ಕೃತ ಪರಂಪರೆಯ ಮೂಲಕ ಸುಸ್ಥಿರತೆ” ವಿಷಯದ ಅಂತರರಾಷ್ಟ್ರೀಯ ಸಮ್ಮೇಳನವನ್ನು ಡಿಸೆಂಬರ್ 13, 2025 ರಂದು ಸುರತ್ಕಲ್‌ನ ಮುಕ್ಕಾ ಕ್ಯಾಂಪಸ್‌ನಲ್ಲಿ ಆಯೋಜಿಸುತ್ತಿದ್ದು, ಈ ಪ್ರಯುಕ್ತ ಪಿಯುಸಿ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಿಗೆ “ಸಂಸ್ಕೃತ–ಸಂಸ್ಕೃತಿ ಉತ್ಸವ: ಎ ಕಲ್ಚರಲ್ ಶೋ” ಎಂಬ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದನ್ನೂ ಹಮ್ಮಿಕೊಂಡಿದೆ. ಸಂಸ್ಕೃತ ಭಾಷೆಯ ಮೌಲ್ಯ, ಭಾರತೀಯ ಸಂಸ್ಕೃತಿ, ಕಲಾ ಪರಂಪರೆಯನ್ನು ಯುವ ಕಲಿಕರು ತಿಳಿದುಕೊಳ್ಳಲು ಮತ್ತು ಪ್ರದರ್ಶನ ಮಾಡಲು ವೇದಿಕೆ ಕಲ್ಪಿಸುವ ಉದ್ದೇಶದಿಂದ ನೃತ್ಯ, ಗೀತೆ, ಶ್ಲೋಕ ಪಠಣ, ವಾದ್ಯ ವಾದನ ಹಾಗೂ ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುವ ವಿವಿಧ ಕಲಾ ಪ್ರದರ್ಶನಗಳನ್ನು ಒಳಗೊಂಡಿರುವ ಈ ಕಾರ್ಯಕ್ರಮವು ಬೆಳಗ್ಗೆ 9 ಗಂಟೆಯಿಂದ ಪ್ರಾರಂಭವಾಗಲಿದ್ದು, ಪ್ರತಿ ತಂಡದಲ್ಲಿ ಗರಿಷ್ಠ 10 ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಅಣಕಲ್ಪಿಸಲಾಗಿದೆ. ಪ್ರತೀ ಸಂಸ್ಥೆಯಿಂದ ಅನೇಕ ತಂಡಗಳನ್ನೂ ಬರಮಾಡಿಕೊಳ್ಳಲಾಗಿದ್ದು, ಪ್ರತಿ ತಂಡಕ್ಕೆ 15 ನಿಮಿಷ ಪ್ರದರ್ಶನ ಸಮಯವನ್ನು ನೀಡಲಾಗುತ್ತದೆ. ಡಿಸೆಂಬರ್ 8, 2025 ರೊಳಗೆ ತಂಡಗಳ ನೊಂದಣಿಯನ್ನು ಪೂರ್ಣಗೊಳಿಸಬೇಕ며, ಎಲ್ಲಾ ಭಾಗವಹಿಸುವವರಿಗೆ ಪ್ರಮಾಣಪತ್ರ ನೀಡಲಾಗುತ್ತದೆ ಮತ್ತು ಅತ್ಯುತ್ತಮ ತಂಡಗಳಿಗೆ ಬಹುಮಾನ ನೀಡಲಾಗುತ್ತದೆ. ವಿದ್ಯಾರ್ಥಿಗಳಲ್ಲಿನ ಸಂಸ್ಕೃತ ಭಾಷಾ ಅರಿವು ಮತ್ತು ಭಾರತೀಯ ಸಂಸ್ಕೃತಿ ಪ್ರೀತಿಯನ್ನು ಉತ್ತೇಜಿಸಲು ಹಾಗೂ ಅಂತರರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಒದಗಿಸಲು ಈ ಉತ್ಸವ ನೆರವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ conferencesubmission@srinivasuniversity.edu.in ಸಂಪರ್ಕಿಸಲು ಹಾಗೂ ನೊಂದಣಿ ಲಿಂಕ್ https://forms.gle/v5riABwbkpNWeBz78 ಬಳಸುವಂತೆ ವಿನಂತಿಸಲಾಗಿದೆ. ಡಾ. ಎ. ಆರ್. ಶಬರಾಯ ಮತ್ತು ಡಾ. ಪ್ರವೀಣ್ ಬಿ.ಎಂ. ನೇತೃತ್ವದ ಆಯೋಜನಾ ಸಮಿತಿಯವರು ಎಲ್ಲಾ ಶೈಕ್ಷಣಿಕ ಸಂಸ್ಥೆಗಳ ಸಹಭಾಗಿತ್ವ ಮತ್ತು ಬೆಂಬಲ ಕೋರಿ ಮನವಿ ಮಾಡಿದ್ದಾರೆ.

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

Dr.Mohan MBBS,Tulu Film,A story of an Dedicated Doctor

Pune/Bengaluru: In the bustling halls of Bharti Vidyapeeth and the paediatric wards of Pune, Dr. Sudhakar Shetty is renowned as a compassionate and deeply committed physician. Yet, beyond his demanding medical career, Dr. Shetty has embraced a surprising second life on the silver screen, bringing his decades of real-world experience to the Kannada film industry in a remarkable dual role as a healer and a hero. Dr. Shetty’s journey began far from Pune in the coastal regions of Karnataka, specifically Udupi and Mangalore. After completing his schooling in Pune, he moved to Bangalore to study medicine. It was here, in 1983, that his two passions—medicine and acting—first intertwined. He enrolled in evening theatre classes, completing courses under Kannada film legend Uday Kumar and through the ‘Abhinaya Taranga’ course, alongside contemporaries like the now pan-Indian star, Prakash Raj. Despite his deep love for performance, medicine remained his anchor. After earning his MBBS and MD, Dr. Shetty dedicated himself to his medical career for nearly 40 years, building a life of service in Pune. He has worked at KEM Hospital and is presently working at Bharathi vidyapeet University, Pune Police Hospital, SRPF,Pune Womens Central jail, Pune Cantonment hospital & Pune’s Redlight Area. Headed BABY FRIEND ClINC,Pune, runs outreach programmes, trains future doctors, and maintains his clinic on MG Road. An Unexpected Return to ActingDr. Shetty’s re-entry into cinema came unexpectedly two years ago when Director Venkat Bharadwaj called him with a singular request: he needed a credible, practising physician to play a professor in his film, Hey Prabhu. The role, which positioned him as a strict but caring mentor to his students, was a perfect fit, leveraging his authentic medical gravitas.This paved the way for his first cinematic role in Hey Prabhu, released on November 7, 2025. The film, directed by Bharadwaj, centers on a young doctor who chooses to serve in a medically underserved village. The narrative explores pressing social issues, from real estate greed to the challenges facing rural healthcare, earning praise as a “gentle film about quiet transition.”Focusing on Social ResponsibilityDr. Shetty’s involvement is more than just acting; he only presented the superhit film called Hey Prabhu underscoring his belief in the film’s social mission to spotlight rural health issues and the ethical challenges of modern medicine.He is strict about his film choices, accepting only “doctor roles” that align with his real-time vocation, stating, “I can only be a real-life doctor And I can give a message.” His second film, ChargeSheet, also features him in a central doctor’s role dealing with a real-life crime. It is the true crime thriller written by retired Deputy Superintendent of Police S K UMESH, Who is the father of Sapthami Gowda(Lead actress of KANTARA film) and his third film is RAKKI in kannada in which he has a doctor. Fourth film is Dr. MOHAN MBBS in Tulu & Marati movie based on a story of a dedicated and sincere Doctor.In that movie dr. Sudhakar shetty is in very important role.also slated for a medical setting.Highlighting the film’s resonance, the righ Hey Prabhu were recently acquired by the AIR INDIA ENGINEERING SERVICES to be Screened in Prime Minister’s official Aircraft from Dec 1st 2025.For in-flight projection for an entire month—a rare honour that elevates the film’s public health dialogue.“My films are not pure entertainment,” Dr. Shetty concludes, “they are a platform to spark dialogues about ethics, health equity and social responsibility. I want to die as a doctor, perhaps treating patients or acting but my life is service.” For Dr. Sudhakar Shetty, the white coat and the spotlight are simply two different avenues for the same lifelong mission: service.

ಪ್ರಾದೇಶಿಕ ವಾರ್ತೆಗಳು

ಕಾ.ಕ.ನಿ. ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಎಂ. ಹನೀಫ್ ರಿಗೆ ದ.ಕ ಜಿಲ್ಲಾ ಪತ್ರಕರ್ತರ ಸಂಘದಿಂದ ಗೌರವಾರ್ಪಣೆ

ಮಂಗಳೂರು,ನ.30;ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ,ನೂತನ ಅಧ್ಯಕ್ಷರಾಗಿ ಮರುಆಯ್ಕೆ ಯಾಗಿರುವ ಶಿವಾನಂದ ತಗಡೂರು ಅವರು ನವೆಂಬರ್ ಶನಿವಾರ ಕಾಸರಗೋಡು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಪತ್ರಿಕಾ ಭವನಕ್ಕೆ ಆಗಮಿಸಿ,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.ನೂತನ ಪದಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ರಾಜ್ಯ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಅವರು ಪತ್ರಕರ್ತ ನಾಗಿ ತಮ್ಮ ಹುಟ್ಟೂರಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿಯವರ ಸಂಪಾದಕರಾಗಿದ್ದ ಸಂದರ್ಭದಲ್ಲಿ ಮುಂಗಾರು ಪತ್ರಿಕೆ ಬಳಿಕ ಪ್ರಜಾವಾಣಿ ಪತ್ರಿಕೆಯಲ್ಲಿ ತಾವು ಕಾರ್ಯ ನಿರ್ವಹಿಸಿದ ತಮ್ಮ ಅನುಭವವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ರಾಜ್ಯೋತ್ಸವ ಪುರಸ್ಕೃತ ಬಿ.ಎಂ.ಹನೀಫ್ ಹಾಗೂ ರಾಜ್ಯ ಸಂಘದ ಅಧ್ಯಕ್ಷರಾಗಿ ಪುನರಾಯ್ಕೆಯಾದ ಶಿವಾನಂದ ತಗಡೂರು ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯ ನಿರತ ಪತ್ರಕರ್ತರ ಸಂಘದ ವತಿ ಯಿಂದ ಅಭಿನಂದಿಸಿ ಗೌರವಿಸಲಾಯಿ ತು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪುಷ್ಪರಾಜ್ ಬಿ.ಎನ್ ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪೂರ್ವಾ ಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಉಪಾಧ್ಯಕ್ಷ ರಾಜೇಶ್ ಶೆಟ್ಟಿ,ಕಾರ್ಯದರ್ಶಿ ವಿಲ್ಪ್ರೆಡ್ ಡಿ ಸೋಜ, ಸಿದ್ಧಿಕ್ ನೀರಾಜೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಅಶೋಕ್ ಶೆಟ್ಟಿ ಬಿ.ಎನ್, ಭುವನೇಶ್, ಸಂದೀಪ್ ವಾಗ್ಲೆ,ಎಂ. ಲಕ್ಷ್ಮೀನಾರಾಯಣ ರಾವ್,ಸಂದೀಪ್ ಕುಮಾರ್, ಅಭಿಷೇಕ್, ಹರೀಶ್ ಆದೂರ್ ಹಾಗೂ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಮೂಡಬಿದ್ರೆ ತಾಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಪಾಧ್ಯಕ್ಷ ಆರಿಫ್ ಪಡುಬಿದ್ರೆ ವಂದಿಸಿದರು. ಕೋಶಾಧಿಕಾರಿ ವಿಜಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಪತ್ರಕರ್ತ ದಿವಂಗತ ನಾಗರಾಜ್ ಮನೆಗೆ ಭೇಟಿ, ಕುಟುಂಬದ ಸದಸ್ಯರಿಗೆ ಸಾ0ತ್ವನ ಹೇಳಿದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು

ಮಂಗಳೂರು, ಇತ್ತೀಚಿಗೆ ಅಕಾಲಿಕವಾಗಿ ನಿಧಾನರಾಗಿರುವ ವಿಡಿಯೋ ಜರ್ನಲಿಸ್ಟ್ ನಾಗರಾಜ್ ಅವರ ಬಿಜೈ ಕಾಪಿಕಾಡ್ ನಿವಾಸಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.ರಾಜ್ಯ ಸಂಘದಿಂದ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು. ಅಲ್ಲದೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದಲೂ ಆರ್ಥಿಕ ನೆರವು ಕೊಡಿಸುವ ಭರವಸೆ ನೀಡಿದರು.ಹಿರಿಯ ಪತ್ರಕರ್ತ ಹನೀಫ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ. ಏನ್, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ನಿರ್ದೇಶಕ ಶ್ರೀನಿವಾಸ್ ನಾಯಕ್ ಇಂದಾಜೆ, ಸಂಘದ ನಿಕಟಪೂರ್ವ ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟಾ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸಂದೀಪ್ ಉಪಸ್ಥಿತರಿದ್ದರು.

Scroll to Top