ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಸರಕಾರಿ ಅಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಸಂಪಾದಕರಾಗಿ ಹೊಸ ಅಂಗಣ ಪತ್ರಿಕೆಯನ್ನು ನಿರಂತರವಾಗಿ ಹೊರ ತಂದು ದಶಮಾನೋತ್ಸವದ ಸಂಭ್ರಮ ಕಂಡ ಡಾ.ಪಿ.ಹರಿಶ್ಚಂದ್ರ ಸಾಲ್ಯಾನ್ ಅವರ ಸಾಧನೆ ಜನ ಶ್ಲಾಘನೀಯವಾದದ್ದು. ಪತ್ರಿಕೋದ್ಯಮ, ಸಾಹಿತ್ಯ ಕ್ಷೇತ್ರದಲ್ಲಿ ಅವರ ಕೃಷಿ ಪ್ರಶಂಸನೀಯ ವಾದದ್ದು- ‘ಹೊಸ ಅಂಗಣ’ ದಶಮಾನೋತ್ಸವದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಶ್ಲಾಘನೆ.

ಮೂಲ್ಕಿ: ನಿವೃತ್ತಿಯ ನಂತರ ವಿಶ್ರಾಂತ ಜೀವನ ನಡೆಸುವ ಬದಲು ಹತ್ತು ವರ್ಷಗಳ ಹಿಂದೆ ವಿಭಿನ್ನ ಶೈಲಿಯ ಹೊಸ ಅಂಗಣ ಕನ್ನಡ ಮಾಸಿಕ ಆರಂಭಿಸಿ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ದಶಮಾನೋತ್ಸವ ಸಂಭ್ರಮ ಆಚರಿಸುತ್ತಿರುವ ಡಾ. ಹರಿಶ್ಚಂದ್ರ ಪಿ. ಸಾಲ್ಯಾನ್ ಅವರ ಪತ್ರಿಕೋದ್ಯಮ,ಸಾಹಿತ್ಯ ಸೇವೆ ಇತರರಿಗೆ ಅನುಕರಣೀಯ ಎಂದು ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಅನ್ನಪೂರ್ಣೇಶ್ವರೀ ಸಭಾಂಗಣದಲ್ಲಿ ನಡೆದ ಡಾ. ಹರಿಶ್ಚಂದ್ರ ಪಿ. ಸಾಲ್ಯಾನ್ ಅವರ ‘ಹೊಸ ಅಂಗಣ’ ಪತ್ರಿಕೆಯ ದಶಮಾನೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು, ಡಾ. ಸಾಲ್ಯಾನ್ ರಚಿಸಿದ ‘ತುಳುನಾಡ ಮದುಮೆ’ ಕೃತಿಯನ್ನು ಬಿಡುಗಡೆಗೊಳಿಸಿದರು. ಹತ್ತು ವರ್ಷಗಳಿಂದ ‘ಹೊಸ ಅಂಗಣ’ ನಿರಂತರವಾಗಿ ಪ್ರಕಟಗೊಳ್ಳುತ್ತಿರುವುದು ಶ್ಲಾಘನೀಯ. ಪತ್ರಿಕೆ ತನ್ನ ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ಮುಂದುವರೆಯಲಿ ಎಂದು ಶುಭ ಹಾರೈಸಿದರು. ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದರು. ರಾಜ್ಯ ಪ್ರಶಸ್ತಿ ಪ್ರದಾನ: ಹೊಸ ಅಂಗಣ’ ಪತ್ರಿಕೆ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಭಾನುಮತಿ ಶೆಟ್ಟಿ ಕಕ್ವಗುತ್ತು, ಸರೋಜಿನಿ ಸುವರ್ಣ, ಸುರೇಂದ್ರ ಜಿ. ಶೆಣೈ, ಎ. ಕೃಷ್ಣಾನಂದ ಶೆಟ್ಟಿ ಐಕಳ, ಜೈಕೃಷ್ಣ ಕೋಟ್ಯಾನ್, ಜೋನ್ ಕ್ವಾಡ್ರಸ್, ವಾಸು ಪೂಜಾರಿ ಚಿತ್ರಾಪು, ದಿನೇಶ್ ಕೆ. ಶೆಟ್ಟಿ ಮತ್ತು ಪುನೀತ್‌ಕೃಷ್ಣ ಅವರನ್ನು ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು, ಪತ್ರಿಕೆಯ ಗೌರವ ಸಲಹೆಗಾರರನ್ನು ಸಮ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾರ್ಡ್, ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಬಿಲ್ಲವ ಮಹಾಮಂಡಲ ಅಧ್ಯಕ್ಷ ಸೂರ್ಯಕಾಂತ ಜೆ. ಸುವರ್ಣ, ‘ಯುಗಪುರುಷ’ ಸಂಪಾದಕ ಭುವನಾಭಿರಾಮ ಉಡುಪ, ನ್ಯಾಯವಾದಿ ಭಾಸ್ಕರ ಹೆಗ್ಡೆ, ಶಾಂಭವಿ ಜೇಸಿಐ ಟ್ರಸ್ಟ್ ಮಾಜಿ ಅಧ್ಯಕ್ಷ ಮೊಹಮ್ಮದ್ ಹಬೀಬುಲ್ಲಾ, ವಿಜಯ ಎಚ್ ಸಾಲ್ಯಾನ್ , ಅಕ್ಷಯ ಎಚ್ ಸಾಲ್ಯಾನ್ , ತುಷಾರ್ ಎಚ್ ಸಾಲ್ಯಾನ್ , ಲಿವನ್ ಬೆಂಗಳೂರು, ಕಾಂತು ಸೇರ್ವೆಗಾರ ಧರ್ಮಚಾವಡಿ ಅಧ್ಯಕ್ಷ ವಾಸು ಪೂಜಾರಿ ಹಾಗೂ ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಶೇಖರ ಸುವರ್ಣ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು.ಪತ್ರಿಕೆಯ ಸಂಪಾದಕ ಹರಿಶ್ಚಂದ್ರ ಟಿ.ಸಾಲ್ಯಾನ್ ಪತ್ರಿಕೆ ಹಾಗೂ ತನ್ನ ಕೃತಿಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಗೂ ಅತಿಥಿಗಳನ್ನು ಗೌರವಿಸಿದರು. ವಿಜಯಾ ಹರಿಶ್ಚಂದ್ರ ಸಾಲ್ಯಾನ್ ಸಹಕರಿಸಿದರು.ಸಮಾರೋಪ ಸಮಾರಂಭ:ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನಿರಂತರ ಓದುವ ಹವ್ಯಾಸ ವ್ಯಕ್ತಿಯನ್ನು ಜ್ಞಾನವಂತರನ್ನಾಗಿಸುತ್ತದೆ. ಅದಕ್ಕನುಗುಣವಾಗಿ ನಾಡಿನ ಉತ್ತಮ ಲೇಖಕರ ಲೇಖನ, ವಾರ್ತೆಗಳೊಂದಿಗೆ ಈ ಮಾಸಪತ್ರಿಕೆಯು ಪ್ರಕಟಗೊಳ್ಳುತ್ತಿದೆ . ಇಂದಿನ ಜಂಜಾಟದ ಬದುಕಿನಲ್ಲಿ ಸಾಹಿತ್ಯ ಚಟುವಟಿಕೆಗಳು ಅತ್ಯಂತ ಅಗತ್ಯ ಎಂದು ಹೇಳಿದರು.ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಎಸ್‌ಎನ್‌ಜಿ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕ ಹರೀಂದ್ರ ಸುವರ್ಣ, ಮೂಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಅಂಚನ್, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್‌ದಾಸ್ ಹೆಜಮಾಡಿ, ಕನ್ನಂಗಾರ್ ಶ್ರೀ ಬ್ರಹ್ಮಬೈದರ್ಕಳ ಗರಡಿ ಅಧ್ಯಕ್ಷ ಶೀನ ಪೂಜಾರಿ, ಉದ್ಯಮಿಗಳಾದ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ ಹಾಗೂ ಪ್ರಭಾಕರ ಪೂಜಾರಿ, ಬಪ್ಪನಾಡು ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುನಿಲ್ ಆಳ್ವ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.ಶ್ರೀ ನಾರಾಯಣ ಗುರು ಭಜನಾ ಮಂಡಳಿ ಮುಲ್ಕಿಯ ಚಂದ್ರಿಕಾ ಮತ್ತು ಶ್ರೀಮತಿ ಮಮತಾರವರ ಪ್ರಾರ್ಥನೆಯೊಂದಿಗೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು.ದಿನೇಶ್ ಕೆ. ಶೆಟ್ಟಿ ಹಾಗೂ ವೈ.ಎನ್. ಸಾಲ್ಯಾನ್ ಸ್ವಾಗತಿಸಿದರು. ಚರಣ್ ಬಜಪೆ ಹಾಗೂ ದಿನೇಶ್ ಕೊಲ್ನಾಡು ಕಾರ್ಯಕ್ರಮ ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್ಷಿಪ್ ಗಾಗಿ ಅರ್ಜಿ ಆಹ್ವಾನ

ಬೆಂಗಳೂರು, ಅಕ್ಟೋಬರ್ 06:- ಕರ್ನಾಟಕ ಮಾಧ್ಯಮ ಅಕಾಡೆಮಿಯು ಮಹಿಳಾ ಆಯವ್ಯಯದಡಿ ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ಪತ್ರಿಕೋದ್ಯಮದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವೀಧರರಿಗೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್ಷಿಪ್ ಗಾಗಿ ಅವಕಾಶ ಕಲ್ಪಿಸಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಅಯೇಶಾ ಖಾನಂ ತಿಳಿಸಿದ್ದಾರೆ.ಬರವಣಿಗೆಯಲ್ಲಿ ಪರಿಣತಿ ಮತ್ತು ಪತ್ರಿಕೋದ್ಯಮದಲ್ಲಿ ಆಸಕ್ತಿ ಹೊಂದಿರುವ 2022-23, 2023-24, 2024-2025 ಹಾಗೂ 2025-2026ನೇ ಶೈಕ್ಷಣಿಕ ವರ್ಷದಲ್ಲಿ ಪಡೆದ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಟ್ಟು 20 ಅಭ್ಯರ್ಥಿಗಳಿಗೆ ಇಂಟರ್ನ್ಷಿಪ್ ಅವಕಾಶ ಒದಗಿಸಲಾಗುವುದು.ಆಯ್ಕೆಯಾದ ಅಭ್ಯರ್ಥಿಗಳಿಗೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಎರಡು ತಿಂಗಳ ಇಂಟರ್ನ್ಷಿಪ್ಗೆ ಅವಕಾಶ ಕಲ್ಪಿಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಅಕಾಡೆಮಿ ವತಿಯಿಂದ ಸ್ಟೈಪೆಂಡ್ ನೀಡಲಾಗುವುದು.ಅಭ್ಯರ್ಥಿಗಳು ತಮ್ಮ ಸ್ವವಿವರ (Curriculum Vitae) ದೊಂದಿಗೆ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಪೂರಕ ದಾಖಲೆಗಳೊಂದಿಗೆ ಗೂಗಲ್ ಫಾರ್ಮ್ https://docs.google.com/forms/d/e/1FAIpQLSfYwla-tbEhbvzUmRvWdsOCn44knMZ7orPgzExhxJsmUxIxlQ/viewformರಲ್ಲಿ ಅರ್ಜಿ ಸಲ್ಲಿಸುವುದು. ಅಭ್ಯರ್ಥಿಗಳ ಆಯ್ಕೆಯ ಅಂತಿಮ ತೀರ್ಮಾನ ಅಕಾಡೆಮಿಯ ಸಮಿತಿಯದ್ದೇ ಅಗಿರುತ್ತದೆ.ಅರ್ಜಿ ಸಲ್ಲಿಸಲು 2026 ರ ಅಕ್ಟೋಬರ್ 23 ಕೊನೆಯ ದಿನವಾಗಿದೆ. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಅಯೇಶಾ ಖಾನಂ ಅವರು ಅಕಾಡೆಮಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

Tulu Film “Dr. Mohan MBBS” Presented by Dubai Businessman Prasad Kumar Shetty to Release in December.A story of a dedicated doctor who fights against the corporate medical mafia. Directed by Award-winning Director Venkat Bharadwaj, Concept by Dr. Sudhakar Shetty, Pune-Moodabidri.

*Mangaluru/Dubai, Oct 3:*A new chapter has begun in Tulu cinema. Dubai-based leading businessman from Udupi, Prasad Kumar Shetty, is presenting the Tulu feature film “Dr. Mohan MBBS”.The final outdoor shooting schedule of the film will begin by the end of October and the film will be ready for release by December this year, the film team informed.*A Dedicated Doctor’s Journey*The story is based on the dedicated journey of an honest doctor. It narrates the story of a doctor who comes from a rural background and fights against the corporate medical mafia to uphold ethical medical practice. The film will showcase strong content, soulful music, emotional sequences and will expose the dark face of the medical mafia and the sanctity of ethical medical practice.*Award-Winning Team Contribution*The film is written, directed and produced by award-winning director Venkat Bharadwaj under the banner of Amrutha Films.The project was initiated by Dakshina Kannada Rajyotsava Award 2022 awardee Dr. Sudhakar Shetty (Moodabedri) from Pune. The film is being made with his concept and inspiration.Dubai – Coastal Connect*Prasad Kumar Shetty is a prominent businessman in Dubai and has immense love for Tulu language and culture. He is presenting this film as part of his vision to take the Tulu language to the global level. The shooting will take place in Moodbidri, Mangaluru,

ಪ್ರಾದೇಶಿಕ ವಾರ್ತೆಗಳು

ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್ಟಿನ ಹೋರಾಟ-ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ

ಮಂಗಳೂರು : ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಂತ ಅವಶ್ಯವಾಗಿದ್ದು, ಕರಾವಳಿಯ ಜನಪ್ರತಿನಿಧಿಗಳು, ವಕೀಲರು ಮತ್ತು ನಾಗರಿಕರು ಒಗ್ಗಟ್ಟು ಮೆರೆದು ಪ್ರಬಲ ಹಕ್ಕೊತ್ತಾಯ ಮಂಡಿಸಿದರೆ ಮಾತ್ರ ಈ ಬೇಡಿಕೆ ಈಡೇರಲು ಸಾಧ್ಯ ಎಂದು ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.ಅವರು ಶನಿವಾರ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ಹೈಕೋರ್ಟ್ ಪೀಠ ಸ್ಥಾಪನೆ ಕುರಿತು ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರುಮಂಗಳೂರು ರಾಜ್ಯದ ಪ್ರಮುಖ ನಗರ. ಇಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅರ್ಹ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಮುಂದೆ ತಾಲೂಕು ಮಟ್ಟದಲ್ಲೂ ಆಯಾ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಸಾರ್ವಜನಿಕರಿಂದ ಹೈಕೋರ್ಟ್ ಪೀಠದ ಅಗತ್ಯತೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುವುದು. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ನಗರಕ್ಕೆ ಮತ್ತಷ್ಟು ಮಹತ್ವ ಸಿಗಲಿದೆ. ಜಿಲ್ಲೆಯ ಅಭಿವೃದ್ಧಿಗೂ ಇದು ಪೂರಕವಾಗಲಿದೆ ಎಂದರು.ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ ಶೇಣವ ಮಾತನಾಡಿ, ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಆಗುವುದರಿಂದ ಜನಸಾಮಾನ್ಯರಿಗೆ ಪ್ರಯೋಜನವಾಗಲಿದೆವಕೀಲರಿಗೆ ಸೀಮಿತವಾಗಿದ್ದ ಹೋರಾಟ ಸಾರ್ವಜನಿಕ ಬೇಡಿಕೆಯಾಗಿ ಇಂದು ಸಭೆ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಪ್ರತಿಯೊಬ್ಬರ ಬೇಡಿಕೆಯಾಗಿದ್ದು, ಇದರ ಅವಶ್ಯಕತೆ ಬಗ್ಗೆ ದಾಖಲೆ ಸಹಿತ ಸರ್ಕಾರಕ್ಕೆ ಮನವರಿಕೆ ಮಾಡುವುದು ಅಗತ್ಯವಾಗಿದೆ ‘ಎಂದರು.ವಕೀಲರ ಸಂಘದ ಮಾಜಿ ಅಧ್ಯಕ್ಷ ಎಚ್.ವಿ.ರಾಘವೇಂದ್ರ ಅವರು ಹೈಕೋರ್ಟ್ ಪೀಠ ಸ್ಥಾಪನೆ ಸಂಬAಧಿಸಿದ ನಡೆದ ಹೋರಾಟದ ಇದುವರೆಗಿನ ಬೆಳವಣಿಗೆಯನ್ನು ವಿವರಿಸಿದರು.ಹಿರಿಯ ವಕೀಲ ಎಂ.ಪಿ. ನೊರೊನ್ಹಾ ಅವರು ಪೀಠ ಸ್ಥಾಪನೆ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಲು ಹಂತಹAತವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಭಿಪ್ರಾಯ ತಿಳಿಸಿದರು.ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹಿಂ. ಮಾಜಿ ಎಂಎಲ್ಸಿ ಮೋನಪ್ಪ ಭಂಡಾರಿ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಕೆನರಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ದಿವಾಕರ ಕೊಚ್ಚಿಕರ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಐಎಂಎ ಪ್ರತಿನಿಧಿ ಡಾ.ಅಣ್ಣಯ್ಯ ಕುಲಾಲ್, ಲಯನ್ಸ್ ಕ್ಲಬ್ ಪ್ರತಿನಿಧಿ ವಿನೋದ್ ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಅಭಿಪ್ರಾಯ ಮಂಡಿಸಿದರು. ವಕೀಲರಾದ ಶ್ರೀಧರ ಶೆಟ್ಟಿ ಪುಳಿಂಚ ವಂದಿಸಿದರು. ಜಗದೀಶ್ ಕೆ.ಆರ್. ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ದುಬೈಯ ಹೆಸರಾಂತ ಉದ್ಯಮಿ ಪ್ರಸಾದ್ ಕುಮಾರ್ ಶೆಟ್ಟಿ ಪ್ರಸ್ತುತಪಡಿಸುವ ಬಹು ನಿರೀಕ್ಷೆಯ ತುಳು ಚಲನಚಿತ್ರ “ಡಾ. ಮೋಹನ್ ಎಂಬಿಬಿಎಸ್” ಡಿಸೆಂಬರ್ ನಲ್ಲಿ ತೆರೆಗೆ. ಇದು ಕಾರ್ಪೊರೇಟ್ ವೈದ್ಯಕೀಯ ಮಾಫಿಯಾದ ವಿರುದ್ಧ ಸಿಡಿದೆದ್ದ ನಿಷ್ಠಾವಂತ ವೈದ್ಯನೊಬ್ಬನ ಕಥೆ .ಪ್ರಶಸ್ತಿ ವಿಜೇತ ನಿರ್ದೇಶಕ ವೆಂಕಟ್ ಭಾರದ್ವಾಜ್ ನಿರ್ದೇಶನದ ಡಾ.ಸುಧಾಕರ್ ಶೆಟ್ಟಿ ಪುಣೆ- ಮೂಡಬಿದ್ರಿ ಪರಿಕಲ್ಪನೆಯ ಸಿನಿಮಾ.

ಮಂಗಳೂರು/ದುಬೈ, ಅ.3:ತುಳು ಚಿತ್ರರಂಗದಲ್ಲಿ ಮತ್ತೊಂದು ಹೊಸ ಅಧ್ಯಾಯ ಆರಂಭವಾಗಿದೆ. ದುಬೈನಲ್ಲಿ ಉದ್ಯಮಿಯಾಗಿ ಹೆಸರು ಮಾಡಿರುವ ಉಡುಪಿ ಮೂಲದ ಪ್ರಸಾದ್ ಕುಮಾರ್ ಶೆಟ್ಟಿ ಅವರು ತುಳು ಚಲನಚಿತ್ರ “ಡಾ. ಮೋಹನ್ ಎಂಬಿಬಿಎಸ್” ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ.ಅಕ್ಟೋಬರ್ ತಿಂಗಳಾಂತ್ಯದಲ್ಲಿ ಚಿತ್ರದ ಅಂತಿಮ ಹಂತದ ಹೊರಾಂಗಣ ಚಿತ್ರೀಕರಣ ಆರಂಭವಾಗಲಿದ್ದು, ಈ ವರ್ಷದ ಡಿಸೆಂಬರ್ ವೇಳೆಗೆ ಚಿತ್ರ ತೆರೆಗೆ ಬರಲು ಸಿದ್ಧವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ವೈದ್ಯನೊಬ್ಬನ ಸಮರ್ಪಣಾ ಪಯಣದ ಕಥೆ ಈ ಚಿತ್ರದ ಕಥೆ ಒಬ್ಬ ನಿಷ್ಠಾವಂತ ವೈದ್ಯನ ಸಮರ್ಪಣಾ ಪಯಣವನ್ನು ಆಧರಿಸಿದೆ. ಗ್ರಾಮೀಣ ಭಾಗದಿಂದ ಬಂದು ವೈದ್ಯನಾಗಿ, ನೈತಿಕ ವೈದ್ಯ ಪದ್ಧತಿಯನ್ನು ಉಳಿಸಿಕೊಳ್ಳಲು ಕಾರ್ಪೊರೇಟ್ ವೈದ್ಯಕೀಯ ಮಾಫಿಯಾ ವಿರುದ್ಧ ಹೋರಾಡುವ ವೈದ್ಯನ ಕಥೆ ಇದಾಗಿದೆ.ಬಲಿಷ್ಠ ಕಥಾವಸ್ತು, ಸುಮಧುರ ಸಂಗೀತ, ಭಾವನಾತ್ಮಕ ಸನ್ನಿವೇಶಗಳು, ನೈತಿಕ ವೈದ್ಯ ಪದ್ಧತಿ ಮತ್ತು ವೈದ್ಯಕೀಯ ಮಾಫಿಯಾದ ಕರಾಳ ಮುಖವನ್ನು ಈ ಚಿತ್ರ ಅನಾವರಣಗೊಳಿಸಲಿದೆ. ಪ್ರಶಸ್ತಿ ವಿಜೇತ ತಂಡದ ಕೊಡುಗೆ ಚಿತ್ರವನ್ನು ಪ್ರಶಸ್ತಿ ವಿಜೇತ ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರು ಅಮೃತಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಕಥೆ, ಚಿತ್ರಕಥೆ ಬರೆದು, ನಿರ್ದೇಶಿಸಿ, ನಿರ್ಮಾಣ ಮಾಡುತ್ತಿದ್ದಾರೆ.ಈ ಯೋಜನೆಯನ್ನು ಪುಣೆಯ ಪ್ರಸಿದ್ಧ ಮಕ್ಕಳ ತಜ್ಞ ಮೂಡಬಿದ್ರೆ ಮೂಲದ, ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2022 ಪುರಸ್ಕೃತ ಡಾ. ಸುಧಾಕರ್ ಶೆಟ್ಟಿ ಅವರು ಆರಂಭಿಸಿದ್ದಾರೆ. ಅವರ ಪರಿಕಲ್ಪನೆ ಮತ್ತು ಸ್ಫೂರ್ತಿಯಿಂದ ಈ ಚಿತ್ರ ಮೂಡಿಬರುತ್ತಿದೆ. ಡಾ. ಸುಧಾಕರ್ ಶೆಟ್ಟಿ ಅವರು ಬಿಡುವಿಲ್ಲದ ಜನಪ್ರಿಯ ವೈದ್ಯರಾಗಿದ್ದರೂ , ಅವರಿಗೆ ಸಿನಿಮಾದ ಬಗ್ಗೆ ಇರುವ ಅಭಿರುಚಿ,ಸಿನಿಮಾದ ಕುರಿತು ಇರುವರು ಸೃಜನಶೀಲ ಮನೋಭಾವ ಶ್ಲಾಘನೀಯವಾಗಿದೆ.ಈ ಹಿಂದೆ MPMLAS NEWS ಅವರಿಗೆ ಸೌಹಾರ್ದ ಸಂಗಮದಲ್ಲಿ ಸಮಾಜರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ದುಬೈ – ಕರಾವಳಿ ಸಂಬಂಧ ಪ್ರಸಾದ್ ಕುಮಾರ್ ಶೆಟ್ಟಿ ಅವರು ದುಬೈನಲ್ಲಿ ಪ್ರಮುಖ ಉದ್ಯಮಿಯಾಗಿ ಗುರುತಿಸಿಕೊಂಡಿದ್ದು, ತುಳು ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ. ತುಳು ಭಾಷೆಯನ್ನು ಜಾಗತಿಕ ಮಟ್ಟಕ್ಕೆ ತಲುಪಿಸುವ ಅವರ ಆಶಯದ ಭಾಗವಾಗಿ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ.ಮೂಡಬಿದ್ರಿ, ಮಂಗಳೂರಲ್ಲಿ ಚಿತ್ರೀಕರಣ ನಡೆಯಲಿದೆ.

ಪ್ರಾದೇಶಿಕ ವಾರ್ತೆಗಳು

ಮಂಗಳೂರು ನಗರದಲ್ಲಿ ಗಮನ ಸೆಳೆದ ವಿನೂತನ ಶೈಲಿಯ ಗಾಂಧಿ ಜಯಂತಿ ಆಚರಣೆ. ಪ್ಲಾಸ್ಟಿಕ್ ಚೀಲ ಬದಲು ಬಟ್ಟೆ ಚೀಲ ವಿತರಣಾ ಅಭಿಯಾನದೊಂದಿಗೆ ಗಾಂಧಿ ಜಯಂತಿ ಆಚರಣೆ. ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ನಗರದಲ್ಲಿ ವಿಶೇಷ ಅಭಿಯಾನ.

ಮಂಗಳೂರು,ಅ.2; ಸ್ವಚ್ಛ ಮಂಗಳೂರು, ಪ್ಲಾಸ್ಟಿಕ್ ಮುಕ್ತ ಪರಿಸರದ ಧ್ಯೇಯ ದೊಂದಿಗೆ ಪ್ಲಾಸ್ಟಿಕ್ ಚೀಲ ಬದಲು ಬಟ್ಟೆ ಚೀಲ ವಿತರಣಾ ಅಭಿಯಾನದೊಂದಿಗೆ ನಗರದ ಸಂತ ಅಲೋಶಿ ಯಸ್ ಐ.ಟಿ.ಐ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅಕ್ಟೋಬರ್ 2ರ ಶುಕ್ರವಾರ ವಿಶೇಷ ರೀತಿಯಲ್ಲಿ ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು.ಹಸಿರು ದಳ,ಸೂಜಿ ಮಲ್ಲಿಗೆ ಸ್ವಸಹಾಯ ಗುಂಪು,ಲಯನ್ಸ್ ಕ್ಲಬ್ ಮಂಗಳೂರು,ಲಿಯೊ ಕ್ಲಬ್ ಸೈಂಟ್ ಅಲೋಶಿಯಸ್ ಐಟಿಐ, ಲಿಯೊ ಕ್ಲಬ್ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛ ಮಂಗ ಳೂರಿಗಾಗಿ ನಮ್ಮ ಕೌಶಲ್ಯ ಧ್ಯೇಯದೊಂದಿಗೆ ಹಳೆಯ ಬಟ್ಟೆಯಿಂದ ತಯಾರಿಸಿದ 1000 ಚೀಲಗಳನ್ನು ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಸಾರ್ವಜನಿಕರಿಗೆ ವಿತರಿಸುವ ಕಾರ್ಯಕ್ರಮ ಪ್ಲಾಸ್ಟಿಕ್ ಮುಕ್ತ ಪರಿಸರ “ನಮ್ಮ ಜವಾಬ್ದಾರಿ.ಸಂತ ಅಲೋಶಿಯಸ್‌ನಿಂದ ಪ್ರಾರಂಭ ಗೊಂಡು ಬಂಟ್ಸ್ ಹಾಸ್ಟೆಲ್ – ಮಲ್ಲಿಕಟ್ಟೆ ಯವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಜನಸಾಮಾನ್ಯರ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲಗಳನ್ನು ಪಡೆದು ತಮ್ಮಲ್ಲಿದ್ದ ಬಟ್ಟೆ ಚೀಲಗಳನ್ನು ಉಚಿತವಾಗಿ ವಿತರಿಸುವ ಮೂಲಕ ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸಿದರು.ಪ್ರಾಂಶುಪಾಲರಾದ ರೋಶನ್ ಡಿಸೋಜ ಐಟಿಐ ನ ವಿದ್ಯಾರ್ಥಿಗಳು ಸಂಗ್ರಹಿಸಿದ ಹಳೆ ಬಟ್ಟೆಗಳನ್ನು ಬಳಸಿ ಸುಮಾರು ಒಂದು ಸಾವಿರ ಬಟ್ಟೆ ಚೀಲ ತಯಾರಿಸಿದ ಬಗ್ಗೆ ವಿವರಿಸಿ ಸಹಕಾರ ನೀಡಿದವರನ್ನು ಸ್ಮರಿಸಿದರು. ಸಮಾರಂಭದಲ್ಲಿಮುಖ್ಯ ಅತಿಥಿಯಾಗಿ ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ. ಎನ್ ಶುಭ ಹಾರೈಸಿದರು.ಅಧ್ಯಕ್ಷತೆ ವಹಿಸಿದ್ದ ಸಂತ ಅಲೋಶಿಯಸ್ ಐ.ಟಿ.ಐ. ಮಂಗಳೂರು ಇದರ ನಿರ್ದೇಶಕ ವಂ. ಜಾನ್ ಡಿಸೋಜ ಎಸ್.ಜೆ,ಹಸಿರು ದಳದ ಸಂಚಾಲಕರಾದ ನಾಗರಾಜ್ ಬಜಾಲ್, ಮಂಗಳೂರು ಲಯನ್ಸ್ ಕ್ಲಬ್‌ ಅಧ್ಯಕ್ಷೆ ಹೇಮ ರಾವ್ ಉಪ ಪ್ರಾಂಶುಪಾಲ ಆಲ್ವಿನ್ ಮಿನೇಜಸ್ ನೋಯೆಲ್ ಲೋಬೊ ಹಾಗೂ ವಿಲ್ಸನ್ ಎನ್ ತರಬೇತಿ ಅಧಿಕಾರಿ ಸೈಂಟ್ ಅಲೋಶಿಯಸ್ ಐಟಿಐ ಲಿಯೋ ಕ್ಲಬ್ ಅಧ್ಯಕ್ಷ ನಾಗರಾಜ್ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಕುತ್ಲುರು ಸರಕಾರಿ ಶಾಲೆಗೆ ಗ್ಲೋಬಲ್ ಸಿಂಪತಿ ಫೌಂಡೇಶನ್ ವತಿಯಿಂದ ಆರ್ಥಿಕ ನೆರವು

ಮಂಗಳೂರು, ಬೆಳ್ತಂಗಡಿ ತಾಲೂಕಿನ ಕುತ್ಲುರು ಸರಕಾರಿ ಉನ್ನತಿಕರಿಸೀದ ಹಿರಿಯ ಪ್ರಾಥಮಿಕ ಶಾಲೆಗೆ ಅಂತರಾಷ್ಟ್ರೀಯ ಜೂಡೋ ತರಬೇತುದಾರ ಹಾಗೂ ಕರ್ನಾಟಕ ಸ್ಟೇಟ್ ಜೂಡೋ ಅಸೋಸಿಯೇಷನ್ ಅಧ್ಯಕ್ಷ ಯತೀಶ್ ಎನ್ ಬಂಗೇರಾ ಹಾಗೂ ಗ್ಲೋಬಲ್ ಸಿಂಪತಿ ಫೌಂಡೇಶನ್ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ವಿದ್ಯಾರ್ಥಿಗಳ ಪರಿಸರ ಪ್ರೇಮದ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಆವರಣ ದಲ್ಲಿರುವ ಫ್ರೂಟ್ಸ್ ಪಾರ್ಕ್ ನಲ್ಲಿ ರಂಬೂಟಾನ್ ಗಿಡಗಳನ್ನು ನೆಟ್ಟು ಅಃಉಭಕೋರಿದರು.ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಗ್ಲೋಬಲ್ ಸಿಂಪತಿ ಫೌಂಡೇಶನ್ ವತಿಯಿಂದ ಆರ್ಥಿಕ ನೆರವು ಹಸ್ತಾಂತರಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂತಾರಾಷ್ಟ್ರೀಯ ಜೂಡೋ ತರಬೇತುದಾರ ಯತೀಶ್ ಎನ್ ಬಂಗೇರಾ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿರುವ ಈ ಸರಕಾರಿ ಶಾಲೆ ಮಾದರಿಯಾಗಿದೆ. ಈ ಶಾಲೆಯ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಾಯ ನೀಡಲಾಗುವುದು. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಸರಕಾರಿ ಶಾಲೆಯ ಮಕ್ಕಳಿಗೆ ಉಚಿತ ಜೂಡೋ ತರಬೇತಿ ನೀಡಲಾಗುವುದು. ಈ ಮೂಲಕ ಒಲಂಪಿಕ್ಸ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅರ್ಹತೆ ಪಡೆಯುವ ರೀತಿಯಲ್ಲಿ ತರಬೇತಿ ಕೊಡಲಾಗುವುದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ, ಶಾಲಾಭಿವೃದ್ಫಿ ಸಮಿತಿ ಅಧ್ಯಕ್ಷ ಕನಕ ವರ್ಮ ಜೈನ್ ಶಾಲಾ ಮುಖ್ಯ ಗುರು ಫ್ಲೆವಿಯಾ ಡಿ ಸೋಜಾ, ಶಾಲಾ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಬಂಟ್ವಾಳ ತಾಲೂಕು ಆದಿದ್ರಾವಿಡ ಸಮುದಾಯದ ವತಿಯಿಂದ ಮಾಜಿ ಬಿ. ರಮಾನಾಥ ರೈ ಅವರಿಗೆ ಅಭಿನಂದನೆ

ಬಂಟ್ವಾಳ -ದಿನಾಂಕ 01-10-2026 ರಂದು ಬೆಂಗಳೂರಿನ ವಸಂತನಗರದಲ್ಲಿ ರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ, ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರ ನೇತೃತ್ವದಲ್ಲಿ ತುಳು ಭಾಷಿಕ ಆದಿದ್ರಾವಿಡ ಸಮುದಾಯದೊಂದಿಗೆ ಸಂವಾದ ಕಾರ್ಯಕ್ರಮ ನೆರವೇರಲು ಹಾಗೂ ಸಮುದಾಯದ ಮೂಲಕ್ಷೇತ್ರದ ಅಭಿವೃದ್ಧಿಗೆ ಮತ್ತು ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಕುಲಶಾಸ್ತ್ರೀಯ ಅಧ್ಯಯನಕ್ಕಾಗಿ ಸರ್ಕಾರದಿಂದ ಅನುದಾನ ಘೋಷಣೆಯಾಗಲು ಮೂಲ ಕಾರಣಕರ್ತರಾದ, ಆದಿದ್ರಾವಿಡ ಸಮುದಾಯದ ಭರವಸೆಯ ಬೆಳಕಾಗಿರುವ ಮಾಜಿ ಸಚಿವರು ಹಾಗೂ ಹಿರಿಯ ಮುಖಂಡರಾದ ಬಿ. ರಮಾನಾಥ ರೈ ಅವರನ್ನು ಬಂಟ್ವಾಳ ತಾಲೂಕು ಆದಿದ್ರಾವಿಡ ಸಮುದಾಯದ ವತಿಯಿಂದ ಕೃತಜ್ಞತಾಪೂರ್ವಕವಾಗಿ ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಆದಿದ್ರಾವಿಡ ಸಮುದಾಯದ ಮುಖಂಡರಾದ ಶ್ರೀನಿವಾಸ ಅರ್ಬಿಗುಡ್ಡೆ, ರಾಜ ಚೆಂಡ್ತಿಮಾರ್, ಮೋಹನ್ ಚೆಂಡ್ತಿಮಾರ್, ಚಂದ್ರಹಾಸ ಅರ್ಬಿಗುಡ್ಡೆ, ರಾಮ ಚೆಂಡ್ತಿಮಾರ್, ಮಾಧವ್ ವಿ.ಎಸ್ ಕಡೇಶಿವಾಲಯ, ಸಂತೋಷ್ ಭಂಡಾರಿಬೆಟ್ಟು, ಪ್ರಕಾಶ್ ಅರ್ಬಿಗುಡ್ಡೆ ಹಾಗೂ ಲಕ್ಷ್ಮಣ್ ಚೆಂಡ್ತಿಮಾರ್ ಅವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಪ್ರಾಮಾಣಿಕತೆ ಅಂದರೆ ಶಾಸ್ತ್ರಿ – ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ. ವಿಶೇಷ ಲೇಖನ: ಡಾ. ಅಶೋಕ್ ಶೆಟ್ಟಿ. ಬಿ. ಎನ್.

ಅಕ್ಟೋಬರ್ 2 – ಈ ದಿನ ಎರಡು ಮಹಾನುಭಾವರ ಜನ್ಮದಿನ. ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ. ಒಬ್ಬರು ಸತ್ಯದ ಪ್ರತೀಕವಾದರೆ, ಇನ್ನೊಬ್ಬರು ಪ್ರಾಮಾಣಿಕತೆಯ ಪ್ರತೀಕ.ಜನನ ಮತ್ತು ಹೋರಾಟ:1904ರ ಅಕ್ಟೋಬರ್ 2ರಂದು ಉತ್ತರ ಪ್ರದೇಶದ ಮೊಘಲ್ಸರಾಯ್ ನಲ್ಲಿ ಜನಿಸಿದ ಬಾಲಕ ಮುಂದೆ ದೇಶದ ಪ್ರಧಾನಿಯಾದ ಕಥೆ ರೋಚಕ. 1921ರಲ್ಲಿ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಕರೆ ಬಂದಾಗ, ತಮ್ಮ ಶಾಲಾ ಶಿಕ್ಷಣವನ್ನು ಅರ್ಧದಲ್ಲೇ ತ್ಯಜಿಸಿ ದೇಶಸೇವೆಗೆ ಧುಮುಕಿದರು. ನಂತರ ಕಾಶಿ ವಿದ್ಯಾಪೀಠದಲ್ಲಿ ವ್ಯಾಸಂಗ ಮಾಡಿ ‘ಶಾಸ್ತ್ರಿ’ ಎಂಬ ಬಿರುದನ್ನು ಪಡೆದರು. ಸ್ವಾತಂತ್ರ್ಯಕ್ಕಾಗಿ ಒಟ್ಟು 9 ವರ್ಷಗಳ ಕಾಲ ಸೆರೆವಾಸ ಅನುಭವಿಸಿದ ತ್ಯಾಗಮಯಿ ಅವರು.ಅಧಿಕಾರದಲ್ಲೂ ಸರಳತೆ:ಸ್ವಾತಂತ್ರ್ಯದ ನಂತರ ಗೋವಿಂದ ವಲ್ಲಭ ಪಂತ್ ಸರ್ಕಾರದಲ್ಲಿ ಪೊಲೀಸ್ ಖಾತೆ, ನಂತರ 1951ರಲ್ಲಿ ರೈಲ್ವೆ ಸಚಿವರಾದರು. ಅರಿಯಲೂರು ರೈಲ್ವೆ ದುರಂತ ನಡೆದಾಗ, ನೈತಿಕ ಹೊಣೆ ಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಪರೂಪದ ರಾಜಕಾರಣಿ ಅವರು. ಮುಂದೆ ಸಾರಿಗೆ ಸಚಿವರಾಗಿ, 1961ರಲ್ಲಿ ಗೃಹ ಸಚಿವರಾಗಿ ದಕ್ಷ ಆಡಳಿತ ನೀಡಿದರು. 1964ರಲ್ಲಿ ನೆಹರುಜಿ ನಿಧನದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಹಲವು ಪ್ರಬಲ ಆಕಾಂಕ್ಷಿಗಳಿದ್ದರೂ, ಅತ್ಯಂತ ಸರಳ, ನಿರ್ಮಲ ಮನಸ್ಸಿನ ಶಾಸ್ತ್ರೀಜಿಯವರನ್ನು ಎಲ್ಲರೂ ಒಮ್ಮತದಿಂದ ಪ್ರಧಾನಿಯಾಗಿ ಆಯ್ಕೆ ಮಾಡಿದರು.ಪ್ರಾಮಾಣಿಕತೆಯ ಎರಡು ಘಟನೆಗಳು:

ಪ್ರಾದೇಶಿಕ ವಾರ್ತೆಗಳು

Mangaluru’s Real Hero. Human heart behind the White Stone Empire -Exclusive Story of Haji B. M. Sharief Jokatte. MP MLA’S NEWS SPECIAL STORY BY DR ASHOK SHETTY BN.

MANGALURU-In the heart of Mangaluru, opposite Roopa Hotel on Balmata Road, Door No. 14-2-103/12, a small office gave birth to a big dream. The dreamers were Haji B. M.Sharief Jokatte and Mrs. Mumthaz Sharief*. The dream was named *WHITE STONE DEVELOPERS.*Today, White Stone is not just a builder, it is a synonym for TRUST in Coastal Karnataka.Registered as a Partnership firm,the company’s roots are deep in honesty, quality and humanity. *Not Just a Builder, But a Humanitarian* People lovingly call him *“Whitestone Sharief”*. He has not just built buildings, he has built dreams of thousands of families. But his real height is seen in his philanthropy. *The Man Behind The Modern Marvel – Buhair Mosque* The recent viral image of the magnificent *BUHAIR MOSQUE* – a masterpiece of modern Islamic architecture with a soaring white minaret designed by GRAS Architects – stands as a testament to Whitestone Group’s vision for world-class quality. It is where faith meets futuristic design. *Rs 41 Lakh Scholarship: Lighting Up 272 Lives* In March 2026, at Kudmul Rangarao Town Hall, Mangaluru, *Whitestone Sharief Charitable Trust* created history by distributing *scholarships worth Rs 41 LAKH to 272 students* pursuing professional courses. In association with Puttur Community Center and Team B-Human, the trust is currently supporting *836 students* including 79 MBBS, 25 BDS, 26 BAMS, 85 CA and 35 Law students. The best part? This help is not limited to any single community. Students from ALL religions and castes are supported. Speaking on the occasion, *White Stone Group CEO and Team B-Human President Haji B.M. Shareef Jokatte said, “Community development is the goal of our trust. We are extremely happy to support 272 students this year.” The program was lauded by Dr. U.T. Ifthikar Ali Fareed of Karnataka State Allied and Healthcare Professions Council. *As Pure As White Stone* Like the name White Stone, Sharief’s heart is pure white. No compromise in quality while building, no desire for publicity while donating.From a small office in Balmata to the minaret of Buhair Mosque, his journey is an inspiration.He builds a home, a family gets peace. He gives a scholarship, a student’s future is secured.Coastal Karnataka will never forget such achievers.

Scroll to Top