ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಇಡೀ ಮಂಗಳೂರಿಗೆ ಬರುವ ಡೆಂಗ್ಯೂ, ಮಲೇರಿಯಾದ ಅಡಗುತಾಣ ಜೆಪ್ಪು ಕುಡ್ಪಾಡಿ, ಜೆಪ್ಪು ಬಪ್ಪಾಲ್. ಈ ಬಗ್ಗೆ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ, ಜೆಪ್ಪು ವಾರ್ಡ್ ಕಾರ್ಪೊರೇಟರ್ ಭರತ್ ಕುಮಾರ್ ಎಸ್. ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಸೂಕ್ತ ಕ್ರಮ ಜರುಗಿಸಬೇಕಾಗಿದೆ.

ಪ್ರತ್ಯಕ್ಷ ವರದಿ: ಡಾ. ಅಶೋಕ್ ಶೆಟ್ಟಿ ಬಿ.ಎನ್.ಮಂಗಳೂರು: ರಾಜ್ಯದಲ್ಲೇ ಡೆಂಗ್ಯೂ, ಮಲೇರಿಯಾದಿಂದ ಭೀತಿ ಹುಟ್ಟಿಸುತ್ತಿರುವ ಮಂಗಳೂರಲ್ಲಿ ಇದರ ಅಡಗುತಾಣ ಜೆಪ್ಪು ಕುಡ್ಪಾಡಿ, ಜೆಪ್ಪು ಬಪ್ಪಾಲ್‌ನಲ್ಲಿದೆಂದು Mp mla’s ನ್ಯೂಸ್‌ಗೆ ಪ್ರತ್ಯಕ್ಷವಾಗಿ ದೊರೆತ ಸಾರ್ವಜನಿಕ ಮಾಹಿತಿಯಾಗಿದೆ.ಹೌದು, ಕಳೆದ ವರ್ಷ ಉಮೇಶ್ ರವರು ಡೆಂಗ್ಯೂವಿನಿಂದ ಮೃತರಾಗಿದ್ದು,ಇವರು ಜೆಪ್ಪು ಕುಡ್ಪಾಡಿ ನಿವಾಸಿ.ಆರೋಗ್ಯ ಇಲಾಖೆಯ ಕಾರ‍್ಯಕರ್ತರು ದಿನವೂ ಜೆಪ್ಪು ಕುಡ್ಪಾಡಿ, ಜೆಪ್ಪು ಪರಿಸರಕ್ಕೆ ಬಂದು ಮಲೇರಿಯಾ,ಡೆಂಗ್ಯುವಿದೆ, ಜಾಗರೂಕರಾಗಿರೆಂದು ಮನೆ ಮನೆಗೆ ಭೇಟಿಯಿತ್ತು ಇಲ್ಲಿನ ಜನರ ರಕ್ತಪರೀಕ್ಷೆ ಮಾಡಿಸಿ ಹೋಗುತ್ತಾರೆಯೇ ವಿನಾಃ ಇಲ್ಲಿರುವ ಕೊಳಚೆ ಚರಂಡಿ, ಬಾಯಿ ತೆರೆದ ಡ್ರೈನೇಜ್ ಬಗ್ಗೆ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸುತ್ತಿಲ್ಲ. ಜೆಪ್ಪು ಕುಡ್ಪಾಡಿ, ಜೆಪ್ಪು ಬಪ್ಪಾಲ್ ಪರಿಸರಗಳಲ್ಲಿ ಅಪಾಯಕಾರಿ ಡೆಂಗ್ಯೂ ಸೊಳ್ಳೆಗಳಿದ್ದು ಇಲ್ಲಿಂದಲೇ ಡೆಂಗ್ಯೂ ಎಲ್ಲೆಡೆ ಹರಡುತ್ತವೆಂಬ ಸ್ಪಷ್ಟ ಸಂಗತಿ ಬಹಿರಂಗಗೊಂಡಿದೆ.ಜೆಪ್ಪು ಕುಡ್ಪಾಡಿ, ಜೆಪ್ಪು ಬಪ್ಪಾಲ್ ರಸ್ತೆಗಳು ಮಳೆ ಬಂದರೆ ಚರಂಡಿಮಯವಾಗುತ್ತದೆ. ರಸ್ತೆಗಳಲ್ಲಿ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಗೊಳ್ಳುತ್ತವೆ.ಈ ರಸ್ತೆಗಳು ನಾದುರಸ್ತಿಯಲ್ಲಿದೆ. ಜನಾರ್ಧನ ಮಂದಿರದ ಬಳಿ ರಸ್ತೆ ಕಾಂಕ್ರೀಟೀಕರಣಗೊಂಡಿಲ್ಲ. ಚರಂಡಿ ದುರ್ನಾತ ಬೀರುತ್ತಿದ್ದು, ಸ್ಥಳೀಯ ಕಾರ್ಪೊರೇಟರ್ ಭರತ್ ಕುಮಾರ್ ಎಸ್. ಅವರು ಇವುಗಳೆಲ್ಲವೂ ಬರುವ ವರ್ಷದೊಳಗೆ ಸರಿಯಾಗುತ್ತದೆಂದು Mp mla’s ನ್ಯೂಸ್ ಗೆ ತಿಳಿಸಿದ್ದಾರೆ. ಅಲ್ಲಿ ತನಕ ಇಲ್ಲಿನ ಜನರೇನು ಮಾಡಬೇಕು? ಡೆಂಗೂ ಮಲೇರಿಯಾದಿಂದ ಸಾಯಬೇಕಾ? ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.ಇಲ್ಲಿರುವ ರಸ್ತೆಗಳ ಅವ್ಯವಸ್ಥೆ ಬಗ್ಗೆ MPMLA’s ನ್ಯೂಸ್ ಬೆಳಕು ಚೆಲ್ಲಿದಾಗ ಜಯಾನಂದ ಅಂಚನ್ ಮೇಯರ್ ಆಗಿದ್ದರು. ಆಗ ಅವರು ಇದನ್ನು ನಿರ್ಲಕ್ಷಿಸಿದ್ದರು. ಅವರನಂತರ ಸುಧೀರ್ ಶೆಟ್ಟಿ ಮೇಯರ್‌ರಾದರು. ಸುಧೀರ್ ಶೆಟ್ಟಿಯವರು ಈ ಬಗ್ಗೆ ತಕ್ಷಣ ಗಮನಹರಿಸಿ ಸೂಕ್ತ ಕ್ರಮ ಜರುಗಿಸಬೇಕಾಗಿದೆ.ಕೆಲವು ವರ್ಷಗಳ ಹಿಂದೆ ಮಾಜಿ ಸಂಸದ ನಳಿನ್‌ಕುಮಾರ್ ಕಟೀಲು ಅವರು ಇಲ್ಲಿನ ಬಿಜೆಪಿ ಅಭ್ಯರ್ಥಿಯನ್ನು ಕಾರ್ಪೊರೇಟರ್ ಮಾಡಿಯೆಂದು ಇಲ್ಲಿ ಮತ ಯಾಚಿಸಿದ್ದರು.ಅದರಂತೆ,ಬಿಜೆಪಿ ಇಲ್ಲಿ ಗೆದ್ದಿದೆ. ಆದರೆ, ದಿನದಿಂದ ದಿನಕ್ಕೆ ಬಿಗಾಡಾಯಿಸುತ್ತಿರುವ ಡೆಂಗ್ಯೂ ಮಲೇರಿಯಾದ ಸಮಸ್ಯೆಗೆ ಅಡಗುತಾಣವಾಗುತ್ತಿರುವ ಜೆಪ್ಪು ಕುಡ್ಪಾಡಿ, ಜೆಪ್ಪು ಬಪ್ಪಾಲ್ ಸಮಸ್ಯೆಗೆ ಯಾರೂ ಕೂಡಾ ಸೂಕ್ತ ಕ್ರಮ ಕೈಗೊಂಡಿಲ್ಲ.ಶಾಸಕ ವೇದವ್ಯಾಸ ಕಾಮತ್ ಅವರು ಮಂಗಳೂರನ್ನು ಸ್ಮಾರ್ಟ್ ಸಿಟಿಯಾಗಿಸುವಲ್ಲಿ ಶ್ರಮಿಸಿದ್ದಾರೆ. ಜನರ ನಾಡಿ ಮಿಡಿತ ಚೆನ್ನಾಗಿ ಅರಿತಿರುವ ಉತ್ತಮ ಶಾಸಕರೆಂದು ಜನಮನ್ನಣೆ ಗಳಿಸಿರುವ ಅವರು ಇಲ್ಲೊಮ್ಮೆ ಗಮನಹರಿಸಿ ಇಲ್ಲಿನ ನಾದುರಸ್ತಿಯಲ್ಲಿರುವ ರಸ್ತೆಗಳನ್ನು ದುರ್ನಾತ ಬೀರುತ್ತಿರುವ ಚರಂಡಿ ಅವ್ಯವಸ್ಥೆಗಳನ್ನು ಸರಿಪಡಿಸುವಲ್ಲಿ ಸಕಾಲಿಕ ಕ್ರಮ ಜರುಗಿಸಬೇಕಾಗಿದೆ.ಚಿತ್ರಗಳು : ಕೃತ್ತಿಕಾಬ್ರಹ್ಮ

ಪ್ರಾದೇಶಿಕ ವಾರ್ತೆಗಳು

ಅಮ್ಟೂರ್ ಡಿಜಿಟಲ್ ಸ್ಟೂಡಿಯೋ ಉದ್ಘಾಟನೆ.

ಮಂಗಳೂರು: ಇಂದು ನವಭಾರತ್ ಸರ್ಕಲ್ ಓಷನ್ ಪರ್ಲ್ ಸಮೀಪ ಶಾರದ ಕಾಲೇಜು ರಸ್ತೆ ಯ ಗುಲಾಬಿ ಶ್ರೀಪಾದ್ ಎನ್ ಕ್ಲೇವ್ ಕಟ್ಟಡದಲ್ಲಿ ನೂತನವಾಗಿ ಶುಭಾರಂಭಗೊಂಡ ಅಮ್ಟೂರ್ ಡಿಜಿಟಲ್ ಸ್ಟುಡಿಯೊವನ್ನು ಮಾಜಿ ಸಚಿವ, ಯಶಸ್ವಿ ಉದ್ಯಮಿ ಕೃಷ್ಣ ಜೆ. ಪಾಲೇಮಾರ್ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಕಟ್ಟಡ ಮಾಲೀತರಾದ ಮಂಜುನಾಥ ರೇವಂಕರ್, ಯುವ ಉದ್ಯಮಿ ಸೂರಜ್ ಕಲ್ಯ, ಹಿರಿಯ ಪತ್ರಕರ್ತರಾದ ಆನಂದ್ ಶೆಟ್ಟಿ ಪಿ.ಬಿ. ಹರೀಶ್ ರೈ, ವಿಜಯ ಕರ್ನಾಟಕ ಪತ್ರಿಕೆಯ ಜಾಹಿರಾತು ವಿಭಾಗದ ಎಜಿಎಂ ಡಿ. ರಾಮಕೃಷ್ಣ , ಸ್ಟುಡಿಯ ಮಾಲಕರಾದ ಭಾಸ್ಕರ್ ಅಮ್ಟೂರ್ ಉಪಸ್ಠಿತರಿದ್ದರು. ಇದೇ ಸಂದರ್ಭದಲ್ಲಿ ಯಶ್ ಕರ್ನಾಟಕ ಪತ್ರಿಕೆಯನ್ನು ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಲೋಕಾರ್ಪಣೆ ಮಾಡಿದರು.ಯಶ್ ಕರ್ನಾಟಕ ಪತ್ರಿಕೆಯ ಪ್ರಕಾಶಕ ಪದ್ಮನಾಭ ಗಟ್ಟಿ ಉಪಸ್ಠಿತರಿದ್ದರು.

ಪ್ರಾದೇಶಿಕ ವಾರ್ತೆಗಳು

“ಆರಾಟ” ಕನ್ನಡ ಸಿನಿಮಾ ಬಿಡುಗಡೆ. ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಸಿನಿಮಾ: ರಾಜೇಶ್ ನಾಯ್ಕ್

ಮಂಗಳೂರು: ಪಿ.ಎನ್.ಆರ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ತಯಾರಾದ ಪುಷ್ಪರಾಜ್ ರೈ ಮಲಾರಬೀಡು ನಿರ್ದೇಶನದ “ಆರಾಟ” ಕನ್ನಡ ಸಿನಿಮಾ ಭಾರತ್ ಸಿನಿಮಾಸ್ ನಲ್ಲಿ ಬಿಡುಗಡೆಗೊಂಡಿತು.ಶಾಸಕ ರಾಜೇಶ್ ನಾಯ್ಕ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಆರಾಟ ಕನ್ನಡ ಸಿನಿಮಾ ನಮ್ಮ ಸಂಸ್ಕೃತಿಯನ್ನು, ನಮ್ಮ ಪರಂಪರೆಯನ್ನು ಬಿಂಬಿಸುವ ಸಿನಿಮಾ ಆಗಿದೆ. ಸಿನಿಮಾವನ್ನು ಎಲ್ಲರೂ ವೀಕ್ಷಿಸಿ ಪ್ರೋತ್ಸಾಹಿಸ ಬೇಕೆಂದರು.ಮುಖ್ಯ ಅತಿಥಿ ಕಟೀಲು ಯಕ್ಷಗಾನ‌ ಮೇಳದ ಮುಖ್ಯಸ್ಥ ದೇವಿಪ್ರಸಾದ್ ಶೆಟ್ಟಿ ಶುಭಹಾರೈಸಿದರು.ಸಮಾರಂಭದಲ್ಲಿ ಶಿವಪ್ರಸಾದ್ ಕಂಡೆಲ್ ಕಾರ್, ಶಿವಪ್ರಸಾದ್ಆಳ್ವ, ವಿಜಯಕುಮಾರ್ ಕೊಡಿಯಾಲ್ ಬೈಲ್, ಪ್ರಕಾಶ್ ಪಾಂಡೇಶ್ವರ್, ರವಿ ರೈ ಕಳಸ, ಜಗನ್ ಪವಾರ್ ಬೇಕಲ್, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ತಮ್ಮ ಲಕ್ಷಣ, ಸಂತೋಷ್ ಶೆಟ್ಟಿ ಕುಂಬ್ಳೆ, ಶ್ರೀಕಾಂತ್ ಶೆಟ್ಟಿ, ಜ್ಯೋತಿಷ್ ಶೆಟ್ಟಿ, ಸುನಿಲ್ ನೆಲ್ಲಿಗುಡ್ಡೆ, ಅನಿಲ್ ಉಪ್ಪಳ, ಪುಷ್ಪರಾಜ್ ರೈ, ರಾಘವೇಂದ್ರ ಹೊಳ್ಳ, ಮಲ್ಲಿಕಾಪ್ರಸಾದ್, ದಿನೇಶ್ ಶೆಟ್ಟಿ ಮಲಾರಬೀಡು, ರಾಮ್ ಪ್ರಸಾದ್,ಭಾಸ್ಕರ ಚಂದ್ರ ಶೆಟ್ಟಿ, ಕಿರಣ್ ಶೆಟ್ಟಿ, ಪ್ರೇಮ್ ಶೆಟ್ಟಿ ಸುರತ್ಕಲ್, ಉದಯ ಶೆಟ್ಟಿ ಇಡ್ಯಾ, ಅನಿಲ್ ರಾಜ್ ಮೊದಲಾದವರು ಉಪಸ್ಥತರಿದ್ದರು. ಲಕ್ಷ್ಮೀಶ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು.ಆರಾಟ ಸಿನಿಮಾ ಮಂಗಳೂರಿನಲ್ಲಿ ಭಾರತ್ ಸಿನಿಮಾಸ್, ಪಿ.ವಿ.ಆರ್, ಸಿನಿಪೊಲಿಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ , ಕುಂದಾಪುರದಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಭಾರತ್ ಸಿನಿಮಾಸ್, ಸುರತ್ಕಲ್ ಸಿನಿಗ್ಯಾಲಕ್ಸಿ, ಕಾಸರಗೋಡು ಸಿನಿಕೃಷ್ಣ ಮುಂತಾದ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಂಡಿದೆ.ಪಿ.ಎನ್.ಆರ್ ಬ್ಯಾನರ್ ನ ಅಡಿಯಲ್ಲಿ ರಾಘವೇಂದ್ರ ಹೊಳ್ಳ ಟಿ, ರಾಂಪ್ರಸಾದ್ ಕೆ, ನಿತೇಶ್ ಮಾಡಮ್ಮೆ ಹಾಗೂ ಸ್ನೇಹಿತರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಸಿನಿಮಾ ಕುರಿತು:ಸಿನಿಮಾದ ಮೂಲಕಥೆ ರಾಘವೇಂದ್ರ ಹೊಳ್ಳ ಅವರದ್ದಾಗಿದ್ದು ಚಿತ್ರಕಥೆ, ಸಂಭಾಷಣೆ, ನಿರ್ದೇಶನದ ಜವಾಬ್ದಾರಿಯನ್ನು ಪುಷ್ಪರಾಜ್ ರೈ ಮಲಾರಬೀಡು ವಹಿಸಿದ್ದಾರೆ.ನಿರ್ದೇಶನ ತಂಡದಲ್ಲಿ ಜಯರಾಜ್ ಹೆಜಮಾಡಿ, ರೋಷನ್ ಆರ್ ಆಳ್ವ, ಹರ್ಷರಾಜ್ ಬಂಟ್ವಾಳ, ಅಭಿ ಬೋಳ್ಯಾರ್, ಸುಶಿನ್ ದುಡಿದಿದ್ದಾರೆ. ಛಾಯಾಗ್ರಹಣ ರವಿ ಸುವರ್ಣ, ಸಂಕಲನ ದಾಮು ಕನ್ಸೂರ್ , ಸಂಗೀತ ರಾಘವೇಂದ್ರ ಬೀಜಾಡಿ ಹಾಗೂ ಶಮೀರ್ ಮುಡಿಪು, ಸಾಹಿತ್ಯ ಹೆಚ್ ಎಸ್ ವೆಂಕಟೇಶ್ ಮೂರ್ತಿ ಹಾಗೂ ಯೋಗೀಶ್ An, ಗಾಯಕರು ಶಮೀರ್ ಮುಡಿಪು ಹಾಗೂ ಶಾಲಿನಿ ಎಸ್ ಆರ್, ವಸ್ತ್ರ ವಿನ್ಯಾಸ ಶರತ್ ಪೂಜಾರಿ ಮಂಗಳೂರು, ಪ್ರಸಾಧನ ಚರಣ್ ರಾಜ್ ಪಚ್ಚಿನಡ್ಕ, ಕಲಾ ವಿನ್ಯಾಸ ಹರೀಶ್ ಆಚಾರ್ಯ, ಸ್ಥಿರ ಚಿತ್ರಣ ನವನೀತ್ ವಿಠ್ಠಲ್,ಪ್ರಚಾರಕಲೆ ಯಶ್ವಿನ್ ಕೆ ಶೆಟ್ಟಿಗಾರ್ ಹಾಗೂ ನಿರ್ಮಾಣ ಮೇಲ್ವಿಚಾರಣೆಯನ್ನು ಭಾಗ್ಯರಾಜ್ ನಾವೂರು ನಿರ್ವಹಿಸಿದ್ದಾರೆ.ತಾರಾಗಣದಲ್ಲಿ ಸರಕಾರಿ ಹಿ.ಪ್ರಾ ಶಾಲೆ ಖ್ಯಾತಿಯ ದಡ್ಡ ಪ್ರವೀಣ ರಂಜನ್ ಕಾಸರಗೋಡು, ವೆನ್ಯ ರೈ, ಜ್ಯೋತಿಶ್ ಶೆಟ್ಟಿ, ಸುನಿಲ್ ನೆಲ್ಲಿಗುಡ್ಡೆ, ಅನಿಲ್ ರಾಜ್ ಉಪ್ಪಳ, ಚೇತನ್ ರೈ ಮಾಣಿ, ರವಿ ರಾಮಕುಂಜ, ಸುರೇಶ್ ಮಂಜೇಶ್ವರ, ಪ್ರಭಾಕರ್ ಕಾಸರಗೋಡು , ತೇಜಸ್ವಿನಿ ಕಿಶೋರ್, ಸಂದೀಪ್ ಭಕ್ತ, ಆಶಾ ಮಾರ್ನಾಡ್, ನಯನ ಸಾಲ್ಯಾನ್, ದೀಕ್ಷಾ ಭಾಗ್ಯರಾಜ್ ನಾವೂರು, ವಿನೋದ್ ಶೆಟ್ಟಿ ಸಂಕೇತ್, ಉದಯ ಶೆಟ್ಟಿ ಇಡ್ಯಾ, ಉತ್ಸವ್ ವಾಮಂಜೂರ್, ತುಳಸೀಧರನ್, ಶಶಿ ಗುಜರನ್ ಪಡುಬಿದ್ರಿ ನಟಿಸಿದ್ದಾರೆ..

ಪ್ರಾದೇಶಿಕ ವಾರ್ತೆಗಳು

ಪತ್ರಕರ್ತರ ಸಂಘದಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಯೋಗಾಭ್ಯಾಸದಿಂದ ಒತ್ತಡ ನಿವಾರಣೆ -ಸಿಎ ಶಾಂತಾರಾಮ ಶೆಟ್ಟಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ದೇವಿಕಾ ಯೋಗ ಕ್ಲಾಸ್ ಕೇಂದ್ರದ ನಿರ್ದೇಶಕಿ ದೇವಿಕಾ ಪುರುಷೋತ್ತಮ್ ಇವರ ನೇತ್ರತ್ವದಲ್ಲಿ ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತರಾಮ ಶೆಟ್ಟಿ ಉದ್ಘಾಟಿಸಿದರು.ದಿನವಿಡೀ ಒತ್ತಡಗಳ ಮಧ್ಯೆ ಕಾರ್ಯ ನಿರ್ವಹಿಸುವ ಪತ್ರಕರ್ತರು ಯೋಗಾಭ್ಯಾಸಕ್ಕೆ ದಿನದ ಕೆಲವು ತಾಸು ಮೀಸಲಿಡುವ ಮೂಲಕ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಯೋಗದಿಂದ ಆರೋಗ್ಯ ಹಾಗೂ ಜೀವನೋತ್ಸಾಹ ವೃದ್ಧಿಯಾಗಿ ಬದುಕು ಹಸನಾಗುತ್ತದೆ ಎಂದು ಅವರು ಹೇಳಿದರು.ಪತ್ರಕರ್ತರಿಗೆ ಹತ್ತು ದಿನಗಳ ಉಚಿತ ಆರೋಗ್ಯ ಶಿಬಿರ ನಡೆಸಿದ ದೇವಿಕಾ ಪುರುಷೋತ್ತಮ್ ಅವರನ್ನು ಇದೇ ಸಂದರ್ಭ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತುದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್.ಬಿ.ಎನ್, ಪ್ರೆಸ್ ಕ್ಲಬ್ ಕಾರ್ಯಕಾರಿ ಸಮಿತಿ ಸದಸ್ಯ ದಯಾ ಕುಕ್ಕಾಜೆ, ಹಿರಿಯ ಪತ್ರಕರ್ತರಾದ ವಿದ್ಯಾಧರ ಶೆಟ್ಟಿ, ಗಿರಿಧರ ಶೆಟ್ಟಿ, ಮಂಗಳೂರು ಸಿಟಿ ರೋಟರಾಕ್ಟ್ ಕ್ಲಬ್ ಕಾರ್ಯದರ್ಶಿ ವರುಣ್ .ಬಿ.ರೈ ಉಪಸ್ಥಿತರಿದ್ದರು.ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಜನರನ್ನು ಮೂರ್ಖರನ್ನಾಗಿಸುವುದೇ ಕಾಂಗ್ರೆಸ್ ಸರಕಾರದ ಹುಟ್ಟುಗುಣವೆಂದು ವಾಗ್ದಾಳಿ ನಡೆಸಿದ ವೇದವ್ಯಾಸ ಕಾಮತ್. ಬೆಲೆಯೇರಿಕೆ ವಿರುದ್ದ ಇಂದು ಪ್ರತಿಭಟನೆ.

ಮಂಗಳೂರು :ಕಳೆದ ಒಂದು ವರ್ಷದಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ ಕರ್ನಾಟಕದ ಜನತೆಯ ಮೇಲೆ ಸರ್ಕಾರ ದ್ವೇಷ ಸಾಧನೆಗೆ ಹೊರಟಿದ್ದು ಬೆಲೆ ಏರಿಕೆಯ ಅಸ್ತ್ರವನ್ನು ಉಪಯೋಗಿಸಿದೆ. “ಎಲ್ಲವೂ ಉಚಿತ, ಪ್ರತಿಯೊಬ್ಬರಿಗೂ ಖಚಿತ, ಇದು ನಮ್ಮ ಗ್ಯಾರಂಟಿ” ಎನ್ನುತ್ತಾ ಕರ್ನಾಟಕದಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್ ನಿರಂತರವಾಗಿ “ಬೆಲೆ ಏರಿಕೆಯ ಗ್ಯಾರಂಟಿ” ನೀಡಿದ್ದರ ಪರಿಣಾಮವಾಗಿ ರಾಜ್ಯದ ಜನರು ಕಂಗಾಲಾಗಿದ್ದಾರೆ. ಇದೀಗ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್‌ ಡೀಸೆಲ್ ದರ ಏರಿಸಿ ಜನತೆಯನ್ನು ಇನ್ನಷ್ಟು ಸಂಕಟಕ್ಕೆ ದೂಡಲಾಗಿರುವುದು ಖಂಡನೀಯವೆಂದು ಶಾಸಕ ವೇದವ್ಯಾಸ ಕಾಮತ್ ಅವರು ಕಾಂಗ್ರೆಸ್ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.ಈಗಾಗಲೇ ಹಾಲು, ವಿದ್ಯುತ್, ಸಾರಿಗೆ ದರ, ಮನೆ ತೆರಿಗೆ, ರಿಜಿಸ್ಟ್ರೇಷನ್, ಸ್ಟ್ಯಾಂಪ್ ಡ್ಯೂಟಿ, ವಾಹನ ನೋಂದಣಿ, ಅಬಕಾರಿ ಸುಂಕ, ಸೇರಿದಂತೆ ಎಲ್ಲಾ ಅಗತ್ಯ ದಿನಬಳಕೆಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ಹೈರಾಣಾಗಿದ್ದ ಜನಸಾಮಾನ್ಯರಿಗೆ ಇದು ಬಹುದೊಡ್ಡ ಹೊಡೆತವಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸರಕು ಸಾಗಾಣಿಕೆ, ಹಾಗೂ ಸಾರಿಗೆ ದರಗಳೂ ಇನ್ನೂ ಹೆಚ್ಚಳವಾಗಿ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಲಿದೆ. ಅಂತಾರಾಷ್ಟ್ರೀಯ ಮಟ್ಟದ ಕಚ್ಚಾ ತೈಲದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗದಿದ್ದರೂ, ಇಡೀ ದೇಶದ ಯಾವೊಂದು ರಾಜ್ಯದಲ್ಲೂ ತೈಲ ಬೆಲೆ ಏರಿಸದಿದ್ದರೂ, ನಮ್ಮ ರಾಜ್ಯದಲ್ಲಿ ಮಾತ್ರ ಧಿಡೀರನೆ ಜನಸಾಮಾನ್ಯರ ಜೇಬಿಗೆ “ಕೈ” ಹಾಕಿರುವುದು ಕಾಂಗ್ರೆಸಿನ ನೈಜ ಮುಖದ ಅನಾವರಣವಾಗಿದೆ. ಅವೈಜ್ಞಾನಿಕ ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗಿದ್ದು ಯಾವುದೇ ಕ್ಷೇತ್ರಗಳ ಅಭಿವೃದ್ಧಿಗೂ ಒಂದೇ ಒಂದು ರೂಪಾಯಿ ಬಿಡುಗಡೆಯಾಗುತ್ತಿಲ್ಲ. ಆದರೂ ಮಾನ್ಯ ಮುಖ್ಯಮಂತ್ರಿಗಳು, ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿಲ್ಲ, ಸುಭದ್ರವಾಗಿದೆ, ಸರ್ಕಾರದ ಬೊಕ್ಕಸ ತುಂಬಿ ತುಳುಕುತ್ತಿದೆ ಎಂದು ಪದೇ ಪದೇ ರಾಜ್ಯದ ಜನತೆಯ ಮುಂದೆ ಹೇಳಿಕೆ ನೀಡುತ್ತಿದ್ದಾರೆ. ಹಾಗಾದರೆ ಜನಸಾಮಾನ್ಯರಿಗೆ ಈ ಬೆಲೆಯೇರಿಕೆಯ ಹೊರೆ ಯಾಕೆ?ಈ ಸರ್ಕಾರ ತನ್ನ ಘೋಷಿತ ಗ್ಯಾರೆಂಟಿಗಳಿಗೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಜನರ ಮೇಲೆ ಬೆಲೆ ಏರಿಕೆಯ ಬರೆ ಹಾಕುವ ಬದಲು ರಾಜ್ಯದಲ್ಲಿ ಸರ್ಕಾರದ ಮೂಲಕವೇ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಮೊದಲು ನಿಲ್ಲಿಸಬೇಕು. ಇತ್ತೀಚಿಗೆ ಪರಿಶಿಷ್ಟ ಪಂಗಡ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿದ್ದ 187 ಕೋಟಿ ರೂಪಾಯಿಗಳ ಭಾರೀ ಪ್ರಮಾಣದ ಭ್ರಷ್ಟಾಚಾರಕ್ಕೆ ಪ್ರಾಮಾಣಿಕ ಅಧಿಕಾರಿಯೊಬ್ಬರ ಆತ್ಮಹತ್ಯೆ ಹಾಗೂ ಸಚಿವರೊಬ್ಬರ ತಲೆದಂಡವಾಗಿದ್ದನ್ನು ರಾಜ್ಯ ಮಾತ್ರವಲ್ಲದೇ ಇಡೀ ದೇಶವೇ ಕಂಡಿದೆ. ಹಾಗಿದ್ದೂ ಅದಕ್ಕೆ ಕಡಿವಾಣ ಹಾಕದೇ ಜನಸಾಮಾನ್ಯರ ಮೇಲೆ ನಿರಂತರವಾಗಿ ಬೆಲೆ ಏರಿಕೆಯ ಹೊರೆಯನ್ನು ಹಾಕುವುದರಿಂದ ಜನಾಕ್ರೋಶದ ಕಟ್ಟೆಯೊಡೆಯುವುದು ನಿಶ್ಚಿತವಾಗಿದೆ. ಹಿಮಾಚಲ ಪ್ರದೇಶದಲ್ಲೂ ಇದೇ ಮಾದರಿಯಲ್ಲಿ ಸುಳ್ಳು ಗ್ಯಾರಂಟಿ ಅಸ್ತ್ರ ಪ್ರಯೋಗಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅಲ್ಲಿನ ಜನರನ್ನು ನಂತರ ಭ್ರಮ ನಿರಸನಗೊಳಿಸಿತ್ತು. ಈಗ ಕರ್ನಾಟಕದ ಜನರ ಸರದಿಯಾಗಿದೆ. ಕಾಂಗ್ರೆಸ್ ಪಕ್ಷದ ಹುಟ್ಟು ಗುಣವೇ ಜನರನ್ನು ಮೂರ್ಖರನ್ನಾಗಿಸೋದು. ನಾಡಿನ ಪ್ರಜ್ಞಾವಂತ ಜನತೆ ಇಂತಹ ಜನ ವಿರೋಧಿ ಸರ್ಕಾರವನ್ನು ತೊಲಗಿಸಲು ಒಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಈಗೇನಾದರೂ ರಾಜ್ಯದಲ್ಲಿ ಚುನಾವಣೆ ನಡೆದರೆ ಕಾಂಗ್ರೆಸ್ ಧೂಳಿಪಟಗೊಳ್ಳುವುದು ಮಾತ್ರವಲ್ಲ, ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಠೇವಣಿಗಳನ್ನು ಸಹ ಕಳೆದುಕೊಳ್ಳಲಿದೆ. ಅಷ್ಟರಮಟ್ಟಿಗೆ ಜನರು ಈ ಸರ್ಕಾರದ ದುರಾಡಳಿತದಿಂದ ರೋಸಿ ಹೋಗಿದ್ದಾರೆ.ಇದೇ ವಿಷಯವಾಗಿ ಬಿಜೆಪಿಯು ಜೂನ್ 20 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿರುವ ಅಂಗವಾಗಿ ಮಂಗಳೂರು ನಗರ ದಕ್ಷಿಣದ ಶಾಸಕರಾದ ಡಿ.ವೇದವ್ಯಾಸ ಕಾಮತ್ ಹಾಗೂ ಅಧ್ಯಕ್ಷರಾದ ರಮೇಶ್ ಕಂಡೆಟ್ಟು ರವರ ನೇತೃತ್ವದಲ್ಲಿ ಬೆಳಿಗ್ಗೆ 10.30ಕ್ಕೆ ಪಿವಿಎಸ್ ವೃತ್ತದ ಬಳಿ ಪ್ರತಿಭಟನೆ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ಬಹುನಿರೀಕ್ಷಿತ “ಆರಾಟ” ಕನ್ನಡ ಚಿತ್ರ ಜೂನ್ 21ರಂದು ತೆರೆಗೆ!

ಮಂಗಳೂರು: “ಪಿ.ಎನ್.ಆರ್. ಪ್ರೊಡಕ್ಷನ್ ಬ್ಯಾನರ್ ನಲ್ಲಿ ತಯಾರಾದ “ಆರಾಟ” ಕನ್ನಡ ಸಿನಿಮಾ ಜೂನ್ 21ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ” ಎಂದು ಚಿತ್ರದ ನಿರ್ದೇಶಕ ಪುಷ್ಪರಾಜ್ ರೈ ಮಲಾರಬೀಡು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.“ಮಂಗಳೂರಿನಲ್ಲಿ ಭಾರತ್ ಸಿನಿಮಾಸ್, ಪಿ.ವಿ.ಆರ್, ಸಿನಿಪೊಲಿಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ , ಕುಂದಾಪುರದಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಭಾರತ್ ಸಿನಿಮಾಸ್, ಸುರತ್ಕಲ್ ಸಿನಿಗ್ಯಾಲಕ್ಸಿ, ಕಾಸರಗೋಡು ಸಿನಿಕೃಷ್ಣ ಮುಂತಾದ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣಲಿದ್ದು ಚಿತ್ರದ ಟೀಸರ್, ಟ್ರೈಲರ್ ಹಾಗೂ 2 ಹಾಡುಗಳನ್ನು ಕನ್ನಡದ ಹೆಸರಾಂತ ಯೂಟ್ಯೂಬ್ ಚಾನೆಲ್ ಆನಂದ್ ಆಡಿಯೋ ಮೂಲಕ ಬಿಡುಗಡೆಗೊಳಿಸಲಾಗಿದ್ದು ಈಗಾಗಲೇ ಜನಮನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ” ಎಂದರು.“ಕರ್ನಾಟಕ ಮತ್ತು ಕೇರಳ ರಾಜ್ಯದ ಗಡಿಭಾಗಗಳಾದ ಮುಡಿಪು, ಆನೇಕಲ್ಲು, ಉಪ್ಪಳ, ಮಂಗಲ್ಪಾಡಿ ಹಾಗೂ ಕುಬಣೂರು ಪರಿಸರದಲ್ಲಿ ಸಿನಿಮಾ ಚಿತ್ರೀಕರಣಗೊಂಡಿದೆ.‌ ಸುಮಾರು 20 ದಿನಗಳ ಚಿತ್ರೀಕರಣ ಎರಡು ಹಂತಗಳಲ್ಲಿ ನಡೆದಿದ್ದು ಪಿ.ಎನ್.ಆರ್ ಬ್ಯಾನರ್ ನ ಅಡಿಯಲ್ಲಿ ರಾಘವೇಂದ್ರ ಹೊಳ್ಳ ಟಿ, ರಾಂಪ್ರಸಾದ್ ಕೆ, ನಿತೇಶ್ ಮಾಡಮ್ಮೆ ಹಾಗೂ ಸ್ನೇಹಿತರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ” ಎಂದು ನಟ ಜ್ಯೋತಿಷ್ ಶೆಟ್ಟಿ ಹೇಳಿದರು.ನಾಯಕನಟ ರಂಜನ್ ಕಾಸರಗೋಡು ಮಾತನಾಡಿ, “ಚಿತ್ರದಲ್ಲಿ ಕರಾವಳಿಯ ಸೊಗಡನ್ನು ತುಂಬ ಚೆನ್ನಾಗಿ ಚಿತ್ರಿಸಲಾಗಿದೆ. ದೇವರ ಜಾತ್ರೆಯ ಸಂದರ್ಭದಲ್ಲಿ ನಡೆಯುವ ಜಳಕದ ಸನ್ನಿವೇಶಕ್ಕೆ ಆರಾಟ ಎಂದು ಕರೆಯಲಾಗುತ್ತಿದ್ದು ಇಡೀ ಸಿನಿಮಾ ತುಳುನಾಡಿನಲ್ಲಿ ಚಿತ್ರಿಸಲಾಗಿದೆ. ಎಲ್ಲರೂ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ” ಎಂದರು.ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ರಾಘವೇಂದ್ರ ಹೊಳ್ಳ, ಸಂಗೀತ ನಿರ್ದೇಶಕ ಸಮೀರ್ ಮುಡಿಪು, ಸುನಿಲ್ ನೆಲ್ಲಿಗುಡ್ಡೆ, ರಂಜನ್ ಕಾಸರಗೋಡು, ಯೋಗೀಶ್ ಕೆ.ಎನ್., ಜ್ಯೋತಿಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸಿನಿಮಾ ಕುರಿತು:ಸಿನಿಮಾದ ಮೂಲಕಥೆ ರಾಘವೇಂದ್ರ ಹೊಳ್ಳ ಅವರದ್ದಾಗಿದ್ದು ಚಿತ್ರಕಥೆ, ಸಂಭಾಷಣೆ, ನಿರ್ದೇಶನದ ಜವಾಬ್ದಾರಿಯನ್ನು ಪುಷ್ಪರಾಜ್ ರೈ ಮಲಾರಬೀಡು ವಹಿಸಿದ್ದಾರೆ.ನಿರ್ದೇಶನ ತಂಡದಲ್ಲಿ ಜಯರಾಜ್ ಹೆಜಮಾಡಿ, ರೋಷನ್ ಆರ್ ಆಳ್ವ, ಹರ್ಷರಾಜ್ ಬಂಟ್ವಾಳ, ಅಭಿ ಬೋಳ್ಯಾರ್, ಸುಶಿನ್ ದುಡಿದಿದ್ದಾರೆ. ಛಾಯಾಗ್ರಹಣ ರವಿ ಸುವರ್ಣ, ಸಂಕಲನ ದಾಮು ಕನ್ಸೂರ್ , ಸಂಗೀತ ರಾಘವೇಂದ್ರ ಬೀಜಾಡಿ ಹಾಗೂ ಶಮೀರ್ ಮುಡಿಪು, ಸಾಹಿತ್ಯ ಹೆಚ್ ಎಸ್ ವೆಂಕಟೇಶ್ ಮೂರ್ತಿ ಹಾಗೂ ಯೋಗೀಶ್ An, ಗಾಯಕರು ಶಮೀರ್ ಮುಡಿಪು ಹಾಗೂ ಶಾಲಿನಿ ಎಸ್ ಆರ್, ವಸ್ತ್ರ ವಿನ್ಯಾಸ ಶರತ್ ಪೂಜಾರಿ ಮಂಗಳೂರು, ಪ್ರಸಾಧನ ಚರಣ್ ರಾಜ್ ಪಚ್ಚಿನಡ್ಕ, ಕಲಾ ವಿನ್ಯಾಸ ಹರೀಶ್ ಆಚಾರ್ಯ, ಸ್ಥಿರ ಚಿತ್ರಣ ನವನೀತ್ ವಿಠ್ಠಲ್,ಪ್ರಚಾರಕಲೆ ಯಶ್ವಿನ್ ಕೆ ಶೆಟ್ಟಿಗಾರ್ ಹಾಗೂ ನಿರ್ಮಾಣ ಮೇಲ್ವಿಚಾರಣೆಯನ್ನು ಭಾಗ್ಯರಾಜ್ ನಾವೂರು ನಿರ್ವಹಿಸಿದ್ದಾರೆ.ತಾರಾಗಣದಲ್ಲಿ ಸರಕಾರಿ ಹಿ.ಪ್ರಾ ಶಾಲೆ ಖ್ಯಾತಿಯ ದಡ್ಡ ಪ್ರವೀಣ ರಂಜನ್ ಕಾಸರಗೋಡು, ವೆನ್ಯ ರೈ, ಜ್ಯೋತಿಶ್ ಶೆಟ್ಟಿ, ಸುನಿಲ್ ನೆಲ್ಲಿಗುಡ್ಡೆ, ಅನಿಲ್ ರಾಜ್ ಉಪ್ಪಳ, ಚೇತನ್ ರೈ ಮಾಣಿ, ರವಿ ರಾಮಕುಂಜ, ಸುರೇಶ್ ಮಂಜೇಶ್ವರ, ಪ್ರಭಾಕರ್ ಕಾಸರಗೋಡು , ತೇಜಸ್ವಿನಿ ಕಿಶೋರ್, ಸಂದೀಪ್ ಭಕ್ತ, ಆಶಾ ಮಾರ್ನಾಡ್, ನಯನ ಸಾಲ್ಯಾನ್, ದೀಕ್ಷಾ ಭಾಗ್ಯರಾಜ್ ನಾವೂರು, ವಿನೋದ್ ಶೆಟ್ಟಿ ಸಂಕೇತ್, ಉದಯ ಶೆಟ್ಟಿ ಇಡ್ಯಾ, ಉತ್ಸವ್ ವಾಮಂಜೂರ್, ತುಳಸೀಧರನ್, ಶಶಿ ಗುಜರನ್ ಪಡುಬಿದ್ರಿ ನಟಿಸಿದ್ದಾರೆ. ಚಿತ್ರಗಳು :ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಪಳ್ಳಿಯಲ್ಲಿ ಉಚಿತ ಯಕ್ಷಗಾನ ನಾಟ್ಯ ತರಬೇತಿಗೆ ಚಾಲನೆ *ಯಕ್ಷಗಾನ ಪರಂಪರೆ ನಿರಂತರ ಮುಂದುವರಿಯಲಿ: ಕಿಶನ್ ಹೆಗ್ಡೆ

ಕಾರ್ಕಳ: ಕರಾವಳಿಯ ಮೇರು ಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸುವ ಪ್ರಯತ್ನವನ್ನು ಪ್ರತಿಯೊಬ್ಬರೂ ಮಾಡಬೇಕು. ಇದರೊಂದಿಗೆ ನಮ್ಮ ಸಂಸ್ಕೃತಿ, ಪರಂಪರೆಗೆ ಯಾವುದೇ ಧಕ್ಕೆಯಾಗದಂತೆ ಎಚ್ಚರವಹಿಸಬೇಕಾದ್ದು ಅತ್ಯವಶ್ಯಕ ಎಂದು ಯಕ್ಷಗಾನ ಪಂಚಮೇಳಗಳ ಯಜಮಾನ ಪಳ್ಳಿ ಕಿಶನ್ ಹೆಗ್ಡೆ ಹೇಳಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಪಳ್ಳಿ ನಿಂಜೂರು ಘಟಕದ ವತಿಯಿಂದ ಯಕ್ಷಧ್ರುವ ಯಕ್ಷ ಶಿಕ್ಷಣದ ಅಂಗವಾಗಿ ಪಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಉಚಿತ ಯಕ್ಷಗಾನ ನಾಟ್ಯ ತರಬೇತಿ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.ಯಕ್ಷಗಾನ ಪರಂಪರೆ ನಿರಂತರ ಮುಂದುವರಿಯಬೇಕು. ವಿದ್ಯಾರ್ಥಿಗಳು ತಮ್ಮ ಕಲಿಕೆಯ ಜೊತೆ ಜೊತೆಗೆ ಯಕ್ಷಗಾನ ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳಬೇಕು. ಇದರಿಂದ ವ್ಯಕ್ತಿತ್ವ ವಿಕಸನವೂ ಸಾಧ್ಯ. ಶಿಕ್ಷಣದೊಂದಿಗೆ ಮಕ್ಕಳಲ್ಲಿ ಜೀವನ ಮೌಲ್ಯಗಳನ್ನು ಬೆಳೆಸುವ ಕಾರ್ಯವನ್ನು ಹೆತ್ತವರು ಮತ್ತು ಶಿಕ್ಷಕರು ಮಾಡಬೇಕು ಎಂದು ಕಿಶನ್ ಹೆಗ್ಡೆ ಹೇಳಿದರು.ವೇದಿಕೆಯಲ್ಲಿ ಪಳ್ಳಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಜಗದೀಶ್ ಹೆಗ್ಡೆ ಪೆಜಕೊಡಂಗೆ, ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಅಂಚನ್, ಯಕ್ಷ ಗುರುಗಳಾದ ಮಹಾವೀರ್ ಪಾಂಡಿ, ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಪ್ರಭಾಕರ್ ಬಂಗೇರ, ಪಟ್ಲ ಫೌಂಡೇಶನ್ ಪಳ್ಳಿ ನಿಂಜೂರು ಘಟಕದ ಅಧ್ಯಕ್ಷರು ಸುನಿಲ್ ಬಿ ಶೆಟ್ಟಿ, ಗ್ರಾ.ಪಂ. ಸದಸ್ಯ ಶ್ರೀಕಾಂತ್ ಪ್ರಭು, ಪ್ರಮುಖರಾದ ಮನೋಹರ್ ಶೆಟ್ಟಿ, ವಿಜಯ ಎಂ. ಶೆಟ್ಟಿ, ರಘುನಾಥ್ ಶೆಟ್ಟಿ, ಜಯರಾಮ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಕಾಂತೇಶ್ ಶೆಟ್ಟಿ ಮತ್ತು ಪಟ್ಲ ಫೌಂಡೇಶನ್ ಟ್ರಸ್ಟ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ನಾಗರತ್ನ ಸ್ವಾಗತಿಸಿದರು. ಶಿಕ್ಷಕಿ ಲಕ್ಷ್ಮೀ ವಂದಿಸಿದರು. ಶಿಕ್ಷಕಿ ಚಿತ್ರ ವಿನಯ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಬಂಟ್ವಾಳ ತಾಲೂಕಿನ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕವರ್ ಗಳಲ್ಲಿ ತ್ಯಾಜ್ಯ ಬಿಸಾಡುತ್ತಾರೆ. ಇದನ್ನು ತಿನ್ನುವ ದನ ಕರುಗಳು ಪ್ರಜ್ಞೆ ತಪ್ಪುತ್ತಿವೆ. ಈ ಬಗ್ಗೆ ವಿಡಿಯೋ ವೈರಲ್ ಆಗುತ್ತಿದೆ

ಪ್ರತ್ಯಕ್ಷ ವರದಿ: ಸಂಗೀತ ಸತೀಶ್ ಶೆಟ್ಟಿ.ಬಂಟ್ವಾಳ:ಬಂಟ್ವಾಳ ತಾಲೂಕಿನ ಹಲವೆಡೆ ರಸ್ತೆ ಬದಿಗಳಲ್ಲಿ ಕೆಲವರು ಪ್ಲಾಸ್ಟಿಕ್ ಕವರ್ ಗಳಲ್ಲಿ ತ್ಯಾಜ್ಯಗಳನ್ನು ಬಿಸಾಡುತ್ತಾರೆ. ಇವುಗಳ ಬಗ್ಗೆ ಎನೂ ಅರಿಯದ ಮುಗ್ದ ಮೂಕ ಪ್ರಾಣೆಗಳು, ಸಾಕು ಪ್ರಾಣೆಗಳು,ದನ ಕರುಗಳು ಇದನ್ನು ಆಹಾರವೆಂದು ತಪ್ಪಾಗಿ ಭಾವಿಸಿ ತಿನ್ನುತ್ತವೆ. ಪರಿಣಾಮ, ಅವುಗಳು ಸಾಯುತ್ತವೆ, ಇನ್ನು ಕೆಲವು ಪ್ರಜ್ಞೆ ತಪ್ಪುತ್ತವೆ. ಪಾಪ, ಮೂಕ ಪ್ರಾಣಿಗಳಿಗೇನು ಗೊತ್ತು ಇದು ಅಪಾಯಕಾರಿ ಪ್ಲಾಸ್ಟಿಕ್ ತ್ಯಾಜ್ಯಗಳೆಂದು. ಈ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ ಪ್ಲಾಸ್ಟಿಕ್ ಕವರ್ ಗಳಲ್ಲಿ ತ್ಯಾಜ್ಯ ಬಿಸಾಡುವುದನ್ನು ನಿಷೇಧಿಸಬೇಕಾಗಿದೆ. ವೀಡಿಯೋ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ. https://drive.google.com/file/d/1RBgAOKnhaSIBsbaWWlJ3UDgbvDATRNOx/view?usp=sharing

ಪ್ರಾದೇಶಿಕ ವಾರ್ತೆಗಳು

ಭಾನುಪ್ರಕಾಶ್ ಅವರ ಆದರ್ಶ ಕಾರ್ಯಕರ್ತರಿಗೆ ದಾರಿದೀಪವಾಗಿದೆ : ನಳಿನ್ ಕುಮಾರ್ ಕಟೀಲು.

ಮಂಗಳೂರು : ರಾಜ್ಯದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಎಂ.ಬಿ. ಭಾನುಪ್ರಕಾಶ್ ಅವರು ತಮ್ಮ ಸರಳ ವ್ಯಕ್ತಿತ್ವದಿಂದ ಎಲ್ಲ ಕಾಯಕರ್ತರ ಪ್ರೀತಿಗೆ ಪಾತ್ರರಾದವರು. ವಿಧಾನ ಪರಿಷತ್‌ನ ಸದಸ್ಯರಾಗಿಯೂ ಜನತೆಗೆ ಸೇವೆ ನೀಡಿದ ಹಿರಿಯ ನಾಯಕ. ಪಕ್ಷದ ಎಲ್ಲ ಸ್ತರದ ನಾಯಕರಿಗೆ ಅವರು ಮಾರ್ಗದರ್ಶಕವಾಗಿದ್ದರು. ಅವರ ಅಗಲುವಿಕೆಯಿಂದ ಓರ್ವ ಅನುಭವಿ ನಾಯಕ ಹಾಗೂ ಮಾರ್ಗದರ್ಶಕನನ್ನು ಕಳಕೊಂಡಿದ್ದೇವೆ. ಭಾನುಪ್ರಕಾಶ್ ಅವರ ಆದರ್ಶಗಳು ಬಿಜೆಪಿ ಕಾರ್ಯಕರ್ತರಿಗೆ ಸದಾ ದಾರಿದೀಪವಾಗಿದೆ ಎಂದು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಎಂ.ಬಿ.ಭಾನುಪ್ರಕಾಶ್ ಅವರ ನಿಧನಕ್ಕೆ ವಿಜಯೇಂದ್ರ ಸಂತಾಪ.

ಬೆಂಗಳೂರು: ಬಿಜೆಪಿ ಹಿರಿಯ ಮುಖಂಡ ಎಂ.ಬಿ.ಭಾನುಪ್ರಕಾಶ್ (68 ವರ್ಷ)ಅವರ ನಿಧನ ಅತ್ಯಂತ ದುಃಖಕರ ವಿಚಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.ನಮ್ಮೆಲ್ಲ ಹಿರಿಯರು, ಮಾರ್ಗದರ್ಶಕರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು, ವಿಧಾನಪರಿಷತ್ ಮಾಜಿ ಸದಸ್ಯ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾತ್ರವಲ್ಲದೆ, ಪ್ರಕೋಷ್ಠಗಳ ರಾಜ್ಯ ಸಂಯೋಜಕರಾಗಿ ಹಾಗೂ ಕರಾವಳಿ ಕರ್ನಾಟಕದ ಲೋಕಸಭಾ ಕ್ಲಸ್ಟರ್ ಪ್ರಮುಖರಾಗಿ ಅವರು ಅತ್ಯಂತ ಸಕ್ರಿಯವಾಗಿ ಕೆಲಸ ಮಾಡಿದವರು ಎಂದು ತಿಳಿಸಿದ್ದಾರೆ.ಅವರ ಕುಟುಂಬಸ್ಥರು ಬಂಧುಮಿತ್ರರು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆಂದು ಬಿಜೆಪಿ ಕರ್ನಾಟಕದ ಮಾಧ್ಯಮ ಸಂಚಾಲಕರಾದ ಕರುಣಾಕರ ಖಾಸಲೆಯವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Scroll to Top