ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಮಾನವ ಸರಪಳಿ ಕಾರ್ಯಕ್ರಮದಲ್ಲಿ ಸಂವಿಧಾನದ ಆಶಯ ಭಾಷಣ ಮಾಡಿದ ಕೆ. ಎಂ. ಮುಸ್ತಫಾ.

ಸುಳ್ಯ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಕರ್ನಾಟಕದಾದ್ಯoತ ನಡೆದ ಮಾನವ ಸರಪಳಿ ಕಾರ್ಯಕ್ರಮ ದಲ್ಲಿ ಗಾಂಧಿನಗರ ಜುಮ್ಮಾ ಮಸ್ಜಿದ್ ಮಾಜಿ ಅಧ್ಯಕ್ಷ ಕೆ. ಎಂ. ಮುಸ್ತಫ ಸಂವಿಧಾನ ದ ಆಶಯ ಭಾಷಣ ಮಾಡಿದರು.ನಗರ ಪಂಚಾಯತ್ ಸದಸ್ಯ ಕೆ. ಎಸ್. ಉಮ್ಮರ್ ಸಂವಿಧಾನ ಪೀಠಿಕೆ ವಾಚಿಸಿದರುಮಾನವ ಸರಪಳಿಯಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮುಖಂಡರು, ಜನ ಪ್ರತಿನಿಧಿ ಗಳು ಭಾಗವಹಿಸಿದ್ದರು

ಪ್ರಾದೇಶಿಕ ವಾರ್ತೆಗಳು

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಬಿ. ರಘು ಅವರನ್ನು ನೇಮಕ ಮಾಡಲು ಜನಮತ. ಇದು Mpmlasnewstv ಜನಾಭಿಪ್ರಾಯ ವರದಿ.

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ಮುಖಂಡ, ಧಾರ್ಮಿಕ ಮುಂದಾಳು, ಜನಪರ ವೈದ್ಯಕೀಯ ಸಮಾಜಸೇವಕ ಸುಳ್ಯದ ಡಾ. ಬಿ. ರಘು ಅವರನ್ನು ನೇಮಕ ಮಾಡಬೇಕೆಂದು ಜನಾಭಿಪ್ರಾಯಗಳು ಕೇಳಿಬರುತ್ತಿವೆ. ಈ ಬಗ್ಗೆ mpmla’s ನ್ಯೂಸ್ ಟಿವಿ ಡಾ. ಬಿ. ರಘು ಅವರನ್ನು ಸಂಪರ್ಕಿಸಿದಾಗ-“ನಾನು ಉಪ್ಪಿನಂಗಡಿ ಶಾಂತಿನಗರದ ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ‍್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಮೊದಲಿನಿಂದಲೂ ದೇವರು,ಧರ್ಮದ ಬಗ್ಗೆ ಅಚಲ ನಂಬಿಕೆ, ಶ್ರದ್ದೆವಿರಿಸಿಕೊಂಡು ಬಂದಿದ್ದೇನೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷನಾಗಲು ಅರ್ಹತೆ ಹೊಂದಿದ್ದೇನೆ. ಇಷ್ಟರತನಕ,ಪರಿಶಿಷ್ಟರಿಗೆ ಇಲ್ಲಿ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ. ನಾನು ಪರಿಶಿಷ್ಟನಾಗಿದ್ದು ಅರ್ಹನಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಹಲವು ದಶಕಗಳ ಕಾಲ ಸಲ್ಲಿಸಿದ ಪ್ರಾಮಾಣಿಕ ಸೇವೆಗೆ ನನ್ನನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷನಾಗಿ ಆಯ್ಕೆ ಮಾಡಿದರೆ ದೇವಸ್ಥಾನದ ಸರ್ವತ್ತೋಮುಖ ಅಭಿವೃದ್ಧಿಗೆ ಶಕ್ತಿಮೀರಿ ದುಡಿಯುತ್ತೇನೆ” ಎಂದು ಹೇಳಿದ್ದಾರೆ.ಡಾ. ಬಿ. ರಘು ಅವರು ಈ ಹಿಂದೆ ಸರಕಾರಿ ಗಜೆಟೆಡ್ ಅಧಿಕಾರಿಯಾಗಿದ್ದು, ಸರಕಾರಿ ವೈದ್ಯರಾಗಿ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದಾರೆ.ಉಪ್ಪಿನಂಗಡಿಯಲ್ಲಿ ಖಾಸಗಿ ಕ್ಲಿನಿಕ್ ಹೊಂದಿರುವ ಅವರು ಕ್ಯಾನ್ಸರ್ ತಜ್ಞರಾಗಿ ಸಾವಿರಾರು ಬಡರೋಗಿಗಳಿಗೆ ಉಚಿತ ವೈದ್ಯಕೀಯ ಸೇವೆ ಮಾಡಿದ್ದಾರೆ.ನೇರ,ನಡೆ ನುಡಿಯ ನಿಷ್ಕಳಂಕ ವ್ಯಕ್ತಿತ್ವದ ಡಾ. ಬಿ. ರಘು ಅವರು ದೈವ,ದೇವರುಗಳ ಬಗ್ಗೆ ವಿಶೇಷ ನಂಬಿಕೆ, ಭಕ್ತಿಯಿರಿಸಿದ್ದು ಸರ್ವರೀತಿಯಲ್ಲೂ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷರಾಗಲು ಸಮರ್ಥ ಮತ್ತು ಅರ್ಹ ಅಭ್ಯರ್ಥಿಯೆಂದು ಜನಾಭಿಪ್ರಾಯ ತಿಳಿಸಿದೆ. ಡಾ. ಬಿ.ರಘು ಅವರು ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಸತತ 4 ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಕನಿಷ್ಠ ಅಂತರದಿಂದ ಸೋತಿದ್ದರು.ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿರುವ ಅವರಿಗೆ ಎಂಎಲ್‌ಸಿ ಸ್ಥಾನವಾದರೂ ಸಿಗಬೇಕಿತ್ತು. ನಿಗಮ, ಮಂಡಳಿಗೆ ಅಧ್ಯಕ್ಷರಾಗಿಯಾದರೂ ನೇಮಕವಾಗಬೇಕಿತ್ತು. ಕಾರಣಾಂತರದಿಂದ ಇದು ಸಾಧ್ಯ ಆಗಲಿಲ್ಲ. ಈ ಬಾರಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿಯಾದರೂ ಆಯ್ಕೆಯಾಗಲಿ ಎಂದು ಜನರ ಒತ್ತಾಯಗಳು ಕೇಳಿಬರುತ್ತಿವೆ . ಈ ಬಗ್ಗೆ ಪಕ್ಷದ ಹೈಕಮಾಂಡ್ ಡಾ. ಬಿ. ರಘು ಅವರನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷರಾಗಿ ಆಯ್ಕೆ ಮಾಡಲಿ ಎಂದು ಜನರು ಒತ್ತಾಯಿಸಿದ್ದಾರೆ. ಇದು ಜನಾಭಿಪ್ರಾಯ ವರದಿಯಾಗಿದೆ.

ಪ್ರಾದೇಶಿಕ ವಾರ್ತೆಗಳು

ರಾಜ್ಯದಲ್ಲಿ ಮತಾಂಧರಿಗೆ ಸರ್ಕಾರದ್ದೇ ಕೃಪಾಕಟಾಕ್ಷ!:- ಶಾಸಕ ಕಾಮತ್ ಆಕ್ರೋಶ

ಕಾಂಗ್ರೆಸ್ ಆಡಳಿತಕ್ಕೆ ಬಂದ ಮೇಲೆ ಶಾಂತಿಯ ಬೀಡಾಗಿದ್ದ ಕರ್ನಾಟಕದಲ್ಲಿ ಮತಾಂಧ ಕೋಮು ಕ್ರಿಮಿಗಳ ಹಾವಳಿ ಹೆಚ್ಚಾಗಿದ್ದು ಇದೀಗ ಹಿಂದೂಗಳು ನೆಮ್ಮದಿಯಾಗಿ ಹಬ್ಬ ಆಚರಿಸಲೂ ಆತಂಕ ಪಡುವ ಸ್ಥಿತಿಗೆ ಬಂದಿರುವುದು ರಾಜ್ಯದ ಪಾಲಿನ ಅತ್ಯಂತ ದುರಂತವೆಂದು ಶಾಸಕ ವೇದವ್ಯಾಸ ಕಾಮತ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.ಮಂಡ್ಯದ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಗಲಭೆಯು ಪೂರ್ವಯೋಜಿತ ಕೃತ್ಯವಾಗಿದ್ದು ಇದರ ಹಿಂದೆ ನಿಷೇಧಿತ ಸಂಘಟನೆಗಳ ಕೈವಾಡವಿರುವ ಶಂಕೆಯಿರುವುದರಿಂದ ಸಮಗ್ರ ತನಿಖೆಯಾಗಬೇಕು ಹೊರತು ಸರ್ಕಾರವೇ ಇದೊಂದು ಸಣ್ಣ ಘಟನೆ, ಆಕಸ್ಮಿಕ ಘಟನೆ ಎಂದು ಮುಚ್ಚಿ ಹಾಕಲು ಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ನಮ್ಮನ್ನು ಕೊಲ್ಲಲೂ ಸಹ ಮುಂದಾಗಿದ್ದರು ಎಂದು ಸ್ವತಃ ಪೊಲೀಸರೇ ಹೇಳುತ್ತಿದ್ದರೆ, ಇಲ್ಲಿಂದ ಓಡಿ ಹೋಗಿ ಮೊದಲು ಜೀವ ಉಳಿಸಿಕೊಳ್ಳು ಎಂದು ಪೊಲೀಸರು ನಮ್ಮನ್ನು ಕಳುಹಿಸಿದರು ಎಂದು ಅಲ್ಲಿನ ಹಿಂದೂಗಳು ಹೇಳುತ್ತಿದ್ದಾರೆ. ಇಷ್ಟಾಗಿಯೂ ಸರ್ಕಾರ ಮತಾಂಧ ಕೋಮು ಕ್ರಿಮಿಗಳನ್ನು ರಕ್ಷಿಸಲು, ಎಲ್ಲಾ ನಿಯಮಗಳನ್ನು ಪಾಲಿಸಿ ಗಣೇಶೋತ್ಸವವನ್ನು ಆಚರಿಸಿರುವ ಆಯೋಜಕರನ್ನೇ ಗಲಭೆಯ ಪ್ರಮುಖ ಆರೋಪಿಗಳನ್ನಾಗಿಸಿರುವುದು ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿ ಹಿಂದೂಗಳು ಎಂತಹ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

ಪ್ರಾದೇಶಿಕ ವಾರ್ತೆಗಳು

ಮಾಜಿ ಸಚಿವ ಬಿ. ರಮಾನಾಥ ರೈಯವರ 73ನೇ ವರ್ಷದ ಹುಟ್ಟುಹಬ್ಬದ ಆಚರಣೆ.

ಬಂಟ್ವಾಳ: ಮಾಜಿ ಸಚಿವ ಬಂಟ್ವಾಳ ಅಭಿವೃದ್ಧಿಯ ರೂವಾರಿ ಬಿ. ರಮಾನಾಥ ರೈ ಯವರ 73ನೇ ವರ್ಷದ ಹುಟ್ಟುಹಬ್ಬವನ್ನು ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಬಿ. ಸಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಅಮೇರಿಕದಲ್ಲಿ ಮತ್ತೊಂದು ಮೈಲುಗಲ್ಲನ್ನು ಸ್ಥಾಪಿಸಿದ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್.

ಮಂಗಳೂರು: ಯಕ್ಷಗಾನ ಕಲೆಯ ದಿಗ್ವಿಜಯವನ್ನು ಅಮೇರಿಕಾ ದೇಶದಲ್ಲಿ ಕೈಗೊಂಡಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇತ್ತೀಚೆಗಷ್ಟೇ ಕ್ಯಾಲಿಫೋರ್ನಿಯಾ ರಾಜ್ಯದ ಫೀನಿಕ್ಸ್ ನಗರದ ಮೇಯರ್ ಜುಲೈ 27 ನೇ ತಾರೀಕನ್ನು ಯಕ್ಷದ್ರುವ ಪಟ್ಲ ಫೌಂಡೇಶನ್ ಡೇ ಎಂದು ಘೋಷಿಸಿದ ಬೆನ್ನಲ್ಲೇ, ಇದೀಗ ವಿಸ್ಕಾನ್ಸಿನ್ ರಾಜ್ಯದ ಬ್ರೂಕ್ಫೀಲ್ಡ್ ನಗರದಲ್ಲಿ ನಡೆದ ಯಕ್ಷಗಾನ ಕಲೆಯನ್ನು ಹಾಗೂ ಪಟ್ಲ ಫೌಂಡೇಶನ್ ಕೈಗೊಂಡಿರುವ ಮಹಾನ್ ಕಾರ್ಯವನ್ನು ಶ್ಲಾಘಿಸಿ ಅಲ್ಲಿಯ ಮೇಯರ್ ಸ್ಟೀವನ್ ವಿ ಪೋಂಟೋ ಅವರು ಕೂಡ ಆಗಸ್ಟ್ 18ನೇ ತಾರೀಖು ಬ್ರೂಕ್ಫೀಲ್ಡ್ ನಗರದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಡೇ ಎಂದು ಘೋಷಿಸಿದ್ದಾರೆ. ಈ ಸಾಧನೆಯಲ್ಲಿ ನಿರ್ಣಾಯಕ ಬೆಂಬಲ ನೀಡಿದ ಮಿಲ್ವಾಕೀ ಕನ್ನಡ ಸಂಘಕ್ಕೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

“ತಪ್ಪು ಮಾಡದೆಯೂ ನಮಗೆ ಅನ್ಯಾಯವಾದರೆ ಚಿತ್ರತಂಡದ ಜೊತೆ ನಾನಿದ್ದೇನೆ“ -ವಿಜಯ್ ಕುಮಾರ್ ಕೊಡಿಯಾಲ್ ಬೈಲ್. ಬಹುನಿರೀಕ್ಷಿತ “ಕಲ್ಜಿಗ” ಸಿನೆಮಾ ರಾಜ್ಯಾದ್ಯಂತ ಬಿಡುಗಡೆ.

ಮಂಗಳೂರು: ಹಿಮಾನಿ ಫಿಲಂಸ್ ಬ್ಯಾನರ್ ನಡಿಯಲ್ಲಿ ಸುಮನ್ ಸುವರ್ಣ ನಿರ್ದೇಶನದಲ್ಲಿ ಶರತ್ ಕುಮಾರ್ ಎ.ಕೆ. ನಿರ್ಮಾಣದಲ್ಲಿ ತಯಾರಾದ “ಕಲ್ಜಿಗ” ಸಿನಿಮಾ ಶುಕ್ರವಾರ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ತೆರೆಕಂಡಿತು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.ಬಳಿಕ ಮಾತಾಡಿದ ಹಿರಿಯ ರಂಗಭೂಮಿ ಕಲಾವಿದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು, “ಕಲ್ಜಿಗ ಸಿನಿಮಾ ಕುರಿತು ಟೀಕೆ ಟಿಪ್ಪಣಿ ಬರುತ್ತಿದೆ. ಇದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸೋಣ. ಸಿನಿಮಾ ನೋಡಿದವರು ನಮ್ಮ ತುಳುನಾಡಿನ ದೈವಗಳ ಕಾರಣಿಕವನ್ನು ಚೆನ್ನಾಗಿ ತೋರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನ ಪ್ರಕಾರ ಸಿನಿಮಾದಲ್ಲಿ ದೈವಾರಾಧನೆಗೆ ಎಲ್ಲೂ ಅಪಚಾರ ಆಗಿರಲಿಕ್ಕಿಲ್ಲ. ನಾವು ತಪ್ಪು ಮಾಡದೆಯೂ ನಮಗೆ ಅನ್ಯಾಯವಾಗುವುದಾದರೆ ನಾನು ಚಿತ್ರತಂಡದ ಜೊತೆಗೆ ಇದ್ದೇನೆ“ ಎಂದರು.ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತಾಡಿ, “ಅರ್ಜುನ್ ಕಾಪಿಕಾಡ್ ಅವರು ಅಭಿನಯಿಸಿದ ಸಿನಿಮಾದಲ್ಲಿ ತುಳುನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುವ ಕೆಲಸ ನಡೆದಿದೆ. ತುಳುನಾಡಿನ ದೈವಗಳ ಪವಾಡವನ್ನು ತೋರಿಸಲಾಗಿದೆ. ನಾವೆಲ್ಲರೂ ಸಿನಿಮಾ ನೋಡಿ ಬೆಂಬಲಿಸಬೇಕು” ಎಂದರು.ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಪ್ರಕಾಶ್ ಧರ್ಮನಗರ, ತಮ್ಮ ಲಕ್ಷ್ಮಣ, ಉದ್ಯಮಿ ಗಿರೀಶ್ ಶೆಟ್ಟಿ ಕಟೀಲು, ನಟ ಅರ್ಜುನ್ ಕಾಪಿಕಾಡ್, ನಿರ್ಮಾಪಕ ಶರತ್ ಕುಮಾರ್ ಎ.ಕೆ., ನಿರ್ದೇಶಕ ಸುಮನ್ ಸುವರ್ಣಮತ್ತಿತರರು ಉಪಸ್ಥಿತರಿದ್ದರು. ಸಿನಿಮಾ ಕುರಿತು:ಕರಾವಳಿ ಸೀಮೆಯಿಂದ ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಅನೇಕರು ಆಗಮಿಸಿದ್ದಾರೆ. ಗೆಲುವನ್ನೂ ದಾಖಲಿಸಿದ್ದಾರೆ. ಇದೀಗ ಕಲ್ಜಿಗ’ ಎಂಬ ಚಿತ್ರದ ಮೂಲಕ ಮತ್ತೊಂದು ತಂಡ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಶೀರ್ಷಿಕೆಯಲ್ಲಿಯೇ ಕೌತುಕವನ್ನು ಬೆಸೆದುಕೊಂಡಿದೆ. ಕಲ್ಜಿಗದ ಕಥೆ ಚಿತ್ರಕಥೆ ಸಂಭಾಷಣೆಯನ್ನು ಕೂಡ ನಿರ್ದೇಶಕರೇ ಬರೆದಿದ್ದಾರೆ. ವಿಶೇಷವೆಂದರೆ, ಬಹು ಕಾಲದ ನಂತರ ನಾದಬ್ರಹ್ಮ ಹಂಸಲೇಖ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶನಕ್ಕೆ ಮರಳಿದ್ದಾರೆ. ಸಿನಿಮಾಕ್ಕೆ ಪ್ರಸಾದ್ ಕೆ ಶೆಟ್ಟಿ ಹಿನ್ನಲೆ ಸಂಗೀತ ನೀಡಿದ್ದಾರೆ. ಇನ್ನುಳಿದಂತೆ ಗಿರ್ಗಿಟ್, ಸರ್ಕಸ್, ಗಮ್ಜಾಲ್ ಮುಂತಾದ ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಸುಮನ್ ಸುವರ್ಣಕಲ್ಜಿಗ’ದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ತುಳು ಚಿತ್ರರಂಗದಲ್ಲಿ ಕಿಂಗ್ ಆಫ್ ಆಕ್ಷನ್ ಎಂಬ ಬಿರುದು ಪಡೆದಿರುವ ನಟ ಅರ್ಜುನ್ ಕಾಪಿಕಾಡ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಅಪ್ಪಟ ಕನ್ನಡತಿ ಸುಶ್ಮಿತಾ ಭಟ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಎಸ್. ಕೆ ಗ್ರೂಪ್ ಎಂಬ ಮಾರ್ಕೆಟಿಂಗ್ ಸಂಸ್ಥೆಯ ಮಾಲೀಕರಾಗಿರುವ ಶರತ್ ಕುಮಾರ್ ಎ.ಕೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಟರಾದ ಗೋಪಿನಾಥ್ ಭಟ್ , ಜ್ಯೋತಿಷ್ ಶೆಟ್ಟಿ , ಮಾನಸಿ ಸುಧೀರ್ , ವಿಜಯ್ ಶೋಭರಾಜ್ ಪಾವೂರ್ , ಶ್ಲಾಘಾ ಸಾಲಿಗ್ರಾಮ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.ಮಂಗಳೂರು , ಉಡುಪಿ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ರಾಜ್ಯಾದ್ಯಂತ ಸುಮಾರು ಐವತ್ತು ಟಾಕೀಸ್ ಗಳಲ್ಲಿ ಕಲ್ಜಿಗ ಸಿನಿಮಾ ತೆರೆಕಾಣಲಿದೆ. ದಕ್ಷಿಣ ಕನ್ನಡ , ಉಡುಪಿ , ಬೆಂಗಳೂರು , ಮೈಸೂರು , ಶಿವಮೊಗ್ಗ , ಚಿಕ್ಕಮಗಳೂರು , ಹಾಸನ , ಮಡಿಕೇರಿ , ಹುಬ್ಬಳ್ಳಿ , ಧಾರವಾಡ , ದಾವಣಗೆ ಮುಂಬೈ ಹಾಗೂ ಗಲ್ಫ್ ದೇಶಗಳಲ್ಲಿ ಬಿಡುಗಡೆಯಾಗಲಿದೆ.ಈಗಾಗಲೇ ಕಲ್ಜಿಗ ಚಿತ್ರದ ಟ್ರೈಲರ್ ಅನ್ನು ಯೂಟ್ಯೂಬ್ ನಲ್ಲಿ ಒಟ್ಟು 14 ಲಕ್ಷಕ್ಕಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಮಂಗಳೂರು ಸೀಮೆಯ ಕನ್ನಡ ಭಾಷಾ ಶೈಲಿಯಲ್ಲಿ ಚಿತ್ರ ತಯಾರಾಗಿದೆ. ಧರ್ಮದ ದಾರಿಯಲ್ಲಿ ಅಧರ್ಮದ ನೆರಳು ಬಿದ್ದ ನಂತರದಲ್ಲಿ ಘಟಿಸುವ ರೋಚಕ ಕಥನ ಕಲ್ಜಿಗದಲ್ಲಿದೆ. ಸಚಿನ್ ಶೆಟ್ಟಿ ಛಾಯಾಗ್ರಹಣ , ಯಶ್ವಿನ್ ಕೆ ಶೆಟ್ಟಿಗಾರ್ ಸಂಕಲನ ಈ ಚಿತ್ರಕ್ಕಿದೆ. ಕಾಂತಾರ ಖ್ಯಾತಿಯ ಸನೀಲ್ ಗುರು ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ರಾಧಾಕೃಷ್ಣ ಮಾಣಿಲ , ಪ್ರೊಡಕ್ಷನ್ ಮ್ಯಾನೇಜರ್ ಆಗಿ ಸಂದೀಪ್ ಶೆಟ್ಟಿ `ಕಲ್ಜಿಗ’ಕ್ಕೆ ಕೈ ಜೋಡಿಸಿದ್ದಾರೆ.ಚಿತ್ರ :ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ವಿನೂತನ ಮಾದರಿಯಲ್ಲಿ ಅರೋಗ್ಯ ಜಾಗ್ರತಿ ಮೂಡಿಸಿದ ಸನ್ನಿಧಿ ಕಶೆಕೋಡಿ ಅವರಿಗೆ ಸ್ಪೀಕರ್ ಖಾದರ್ ಸನ್ಮಾನ

ಮಂಗಳೂರು, ಸೆಪ್ಟೆಂಬರ್ 12,ವಿನೂತನ ರೀತಿಯಲ್ಲಿ ಮತದಾನ ಜಾಗೃತಿ ಹಾಗೂ ಆರೋಗ್ಯ ಜಾಗೃತಿ ಮತ್ತು ಪರಿಸರ ಸ್ನೇಹಿ ಗಣಪ ಜಾಗೃತಿಯನ್ನು ಮನೆಮನೆ ಹಾಗೂ ಅಂಗಡಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅರಿವು ಮೂಡಿಸಿದ ಸನ್ನಿಧಿ ಕಶೆ ಕೋಡಿ ಬಾಲಕಿಯನ್ನು ಕರ್ನಾಟಕ ವಿಧಾನಸಭಾಧ್ಯಕ್ಷರಾದ ಯು . ಟಿ ಖಾದರ್ ಅವರು ತಮ್ಮ ಬೆಂಗಳೂರಿನ ವಿಧಾನಸೌಧ ಕೊಠಡಿಯಲ್ಲಿ ಇವಳ ಕೆಲಸ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದಲ್ಲದೆ ಗೌರವಿಸಿದರು ಈ ಸಂದರ್ಭದಲ್ಲಿ ನೀವು ವಿಧಾನಸಭಾ ಅಧ್ಯಕ್ಷರಾಗಿ ಒಳ್ಳೆಯ ರೀತಿ ಕೆಲಸ ಮಾಡುತ್ತಿದ್ದು ಮುಂದೆ ನೀವು ರಾಷ್ಟ್ರಮಟ್ಟದಲ್ಲೂ ಇಂತಹ ಹೆಸರು ಮಾಡಿ ನಮ್ಮ ಊರಿನ ಕೀರ್ತಿ ಪತಾಕೆ ಹಾರಿಸಬೇಕಾಗಿ ಕೇಳಿಕೊಂಡಳು ಇದಕ್ಕೆ ವಿಧಾನಸಭಾಧ್ಯಕ್ಷರು ನೀನು ಕೂಡ ದೇಶದಲ್ಲಿ ಒಳ್ಳೆಯ ಹೆಸರು ಮಾಡ್ತೀಯಾ ಎಂದು ಹಾರೈಸಿದರು ಈ ಸಂದರ್ಭದಲ್ಲಿ ಬಾಲಕಿಯ ತಂದೆ ಲೋಕೇಶ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಇಂದಾಜೆ ಉಪಾಧ್ಯಕ್ಷ ಭಾಸ್ಕರ್ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಜ್ಯೋತಿಯ ಅಂಬೇಡ್ಕರ್ ವೃತ್ತ ಸಹಿತ ಪ್ರತಿಮೆಗೆ ಸಂಪೂರ್ಣ ಸಹಕಾರ:- ಶಾಸಕ ವೇದವ್ಯಾಸ ಕಾಮತ್

ಮಂಗಳೂರು: ನಗರದ ಜ್ಯೋತಿ-ಕೆಎಂಸಿ ಆಸ್ಪತ್ರೆ ಬಳಿ ನಿರ್ಮಾಣಗೊಳ್ಳಬೇಕಿರುವ ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ರವರ ಭವ್ಯ ಪ್ರತಿಮೆ ಸಹಿತ ಆಕರ್ಷಕ ವೃತ್ತಕ್ಕೆ ಸಂಪೂರ್ಣ ಸಹಮತವಿದ್ದು, ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದೆಂದು ಶಾಸಕ ವೇದವ್ಯಾಸ ಕಾಮತ್ ರವರು ತಿಳಿಸಿದರು.ಈ ಬಗ್ಗೆ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟ, ಮುಂಡಾಲ ಯುವ ವೇದಿಕೆ ಮಂಗಳೂರು, ಆದಿ ದ್ರಾವಿಡ ಸಮಾಜ ಸಂಘಟನೆಗಳು ಶಾಸಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಶಾಸಕರು ನಗರದ ಜ್ಯೋತಿಯಂತಹ ಪ್ರಮುಖ ಭಾಗದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆ ಸಹಿತ ವೃತ್ತ ನಿರ್ಮಿಸುವುದು ನಮ್ಮೆಲ್ಲರಿಗೂ ಹೆಮ್ಮೆಯೂ ಹೌದು, ಜವಾಬ್ದಾರಿಯೂ ಹೌದು. ಮೇಯರ್ ಅವರು ಈ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಿದ್ದು, ಹತ್ತು ಹಲವು ಸಭೆಗಳನ್ನು ನಡೆಸಿದ್ದು ಎಲ್ಲವೂ ಅಭಿನಂದನಾರ್ಹ. ಮಂಗಳೂರು ಸ್ಮಾರ್ಟ್ ಸಿಟಿಯಡಿಯಲ್ಲಿ ಈ ಯೋಜನೆ ಕಾರ್ಯಗತಗೊಳ್ಳಲಿದ್ದು ವಿಶೇಷ ಆದ್ಯತೆಯ ಮೇರೆಗೆ ಶೀಘ್ರವಾಗಿ ಪೂರ್ಣಗೊಳ್ಳುವ ಬಗ್ಗೆ ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು. ಈ ಹಿಂದೆ ನಗರದಲ್ಲಿ ಸುಂದರವಾದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಹಾಗೂ ಪ್ರತಿಮೆಯು ನಿರ್ಮಾಣಗೊಂಡಿದ್ದು ಇಲ್ಲಿ ಗಮನಾರ್ಹ.ಸ್ಟೇಟ್ ಬ್ಯಾಂಕ್ ನ ಅವೈಜ್ಞಾನಿಕ ಬ್ಯಾರಿಕೇಡ್ ಗಳನ್ನು ಕೂಡಲೇ ತೆರವುಗೊಳಿಸಿ :-ನಗರದ ಸ್ಟೇಟ್ ಬ್ಯಾಂಕ್ ನಿಂದ ಹಂಪನಕಟ್ಟೆವರೆಗೆ ಅವೈಜ್ಞಾನಿಕವಾಗಿ ಬ್ಯಾರಿಕೇಡ್ ಅಳವಡಿಸಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೇವಲ ಉಸ್ತುವಾರಿ ಸಚಿವರ ಮೌಖಿಕ ಆದೇಶವೆಂದು ಹೀಗೆ ಏಕಾಏಕಿ ಯಾರಿಗೂ ಮಾಹಿತಿ ನೀಡದೇ ದಿನ ಬೆಳಗಾಗುವುದರೊಳಗೆ ಅರ್ಥವಿಲ್ಲದ ನಿಯಮಗಳನ್ನು ಜನರ ಮೇಲೆ ಹೇರುವ ಮೊದಲು ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕಿತ್ತು. ಕ್ಷೇತ್ರದ ಶಾಸಕನಾದ ನನಗಂತೂ ಈ ಬಗ್ಗೆ ಯಾವುದೇ ಮಾಹಿತಿಯೇ ನೀಡಿಲ್ಲ. ಹಾಗಾದರೆ ಇವರ ಮಟ್ಟಿಗೆ ಕ್ಷೇತ್ರದ ಜನಪ್ರತಿನಿಧಿಗಳ, ಸಾರ್ವಜನಿಕರ ಅಭಿಪ್ರಾಯ ಲೆಕ್ಕಕ್ಕಿಲ್ಲವೇ?ಈ ಅವ್ಯವಸ್ಥೆಯಿಂದ ತೊಂದರೆ ಅನುಭವಿಸುತ್ತಿರುವ ಸಾರ್ವಜನಿಕರು ಸೇರಿದಂತೆ ರಿಕ್ಷಾ ಚಾಲಕರಿಂದ ದಿನನಿತ್ಯ ಅನೇಕ ಕರೆಗಳು ಬರುತ್ತಿದ್ದು ಅವರಿಗೆ ಯಾರು ಉತ್ತರ ಕೊಡುತ್ತಾರೆ? ಈ ಕೂಡಲೇ ಅವರೆಲ್ಲರ ಆಗ್ರಹದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಇಲ್ಲಿನ ಅವೈಜ್ಞಾನಿಕ ಬ್ಯಾರಿಕೇಡ್ ಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರ ಪರವಾಗಿ ಸ್ಟೇಟ್ ಬ್ಯಾಂಕ್ ನಲ್ಲಿಯೇ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದೆಂದು ಶಾಸಕರು ಎಚ್ಚರಿಸಿದರು.

ಪ್ರಾದೇಶಿಕ ವಾರ್ತೆಗಳು

ತುಳು ಚಿತ್ರರಂಗದ ಇತಿಹಾಸದಲ್ಲೇ ಸಿಂಗಲ್ ಥಿಯೇಟರ್ ನಲ್ಲಿ ಅದ್ಧೂರಿ ಕಾರ್ಯಕ್ರಮ. ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ಚಿತ್ರದ ಹಾಡು ಬಿಡುಗಡೆ.

ಉಡುಪಿ: ವೈಭವ್ ಫ್ಲಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಅರ್ಪಿಸುವ, ಎಚ್.ಪಿ.ಆರ್ ಫಿಲ್ಮ್ಸ್- ಹರಿಪ್ರಸಾದ್ ರೈ ಯವರ ಸಹಯೋಗದಲ್ಲಿ ಆನಂದ್ ಕುಂಪಲರವರ ನಿರ್ಮಾಣ ಹಾಗೂ ರಾಹುಲ್ ಅಮೀನ್ ನಿರ್ದೇಶನದಲ್ಲಿ ತಯಾರಾದ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ತುಳು ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮ ಮಂಗಳವಾರ ಸಂಜೆ ಇಲ್ಲಿನ ಕಲ್ಪನಾ ಥಿಯೇಟರ್ ನಲ್ಲಿ ಜರುಗಿತು.ತುಳುನಾಡ ಬಾವುಟ ಹಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಬಳಿಕ ಸಾಯಿರಾಧಾ ಡೆವಲಪರ್ಸ್ ಮಾಲಕ ಮನೋಹರ್ ಶೆಟ್ಟಿ ಅವರು ಚಿತ್ರದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದರು.ಬಳಿಕ ಮಾತಾಡಿದ ಅವರು, “ತುಳು ಭಾಷೆಯಲ್ಲಿ ವಿಭಿನ್ನ ಪ್ರಯತ್ನಗಳು ನಡೆಯುತ್ತಿವೆ. “ಮಿಡ್ಲ್ ಕ್ಲಾಸ್ ಫ್ಯಾಮಿಲಿ” ತುಳು ಸಿನಿಮಾ ಇಡೀ ದೇಶದಲ್ಲಿ ಹೆಸರು ಮಾಡಲಿ” ಎಂದರು.ಉಡುಪಿ ಕ್ಷೇತ್ರದ ಶಾಸಕ ಯಶ್ಪಾಲ್ ಸುವರ್ಣ ಮಾತಾಡಿ, “ತುಳು ಭಾಷೆ ಮೇಲಿನ ಪ್ರೀತಿ, ಅಭಿಮಾನದಿಂದ ಯುವಕರ ತಂಡ ಸಿನಿಮಾ ಮಾಡಿದ್ದಾರೆ. ಅವರಿಗೆ ನಾವೆಲ್ಲರೂ ಬೆಂಬಲ ನೀಡಬೇಕಿದೆ. ಉಡುಪಿಯ ಜನರು ತುಳು ಭಾಷೆಯ ಮೇಲೆ ಅತೀವ ಪ್ರೀತಿ ಹೊಂದಿದ್ದು ಸಿನಿಮಾ ನೋಡಿ ಪ್ರೋತ್ಸಾಹಿಸುವುದು ನಿಶ್ಚಿತ” ಎಂದರು.ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತಾಡಿ, “ತುಳು ಸಿನಿಮಾರಂಗ ಹತ್ತಾರು ಉತ್ತಮ ಕಲಾವಿದರನ್ನು ಸಮಾಜಕ್ಕೆ ನೀಡಿದೆ. ಸಾಧನೆ ಮಾಡಲು ಛಲ ಇರಬೇಕು. ಛಲ ಇದ್ದಲ್ಲಿ ಮಾತ್ರ ಯಾವುದೇ ಕೆಲಸ ಪರಿಪೂರ್ಣವಾಗಲು ಸಾಧ್ಯ. ತುಳು ಭಾಷೆಯ ಉಳಿವಿಗಾಗಿ ಕೊಡುಗೆ ನೀಡುವ ಇಂತಹ ಸಿನಿಮಾ ತಂಡಕ್ಕೆ ಶುಭಾಶಯಗಳು“ ಎಂದರು.ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಮಾತಾಡಿ, ”ನಾನು ಚಿಕ್ಕಂದಿನಿಂದಲೂ ತುಳು ಸಿನಿಮಾಗಳನ್ನು ನೋಡಿ ಬೆಳೆದವನು. ಬಾಲ್ಯದಲ್ಲಿ ಅಮ್ಮ ಸಿನಿಮಾಕ್ಕೆ ಕರೆದುಕೊಂಡು ಹೋಗುತ್ತಿದ್ದರು. ನಾನು ಅನೇಕ ಸಿನಿಮಾಗಳನ್ನು ನೋಡುತ್ತೇನೆ. ಇಂದು ಬಿಡುಗಡೆಯಾದ ಸಿನಿಮಾ ಹಾಡು ತುಂಬಾ ಚೆನ್ನಾಗಿದೆ. ಜನರ ಆಶೀರ್ವಾದವಿಲ್ಲದೆ ತುಳು ಭಾಷೆ, ಸಿನಿಮಾ ಬೆಳೆಯಲು ಸಾಧ್ಯವಿಲ್ಲ. ನಾವೆಲ್ಲರೂ ತುಳು ಸಿನಿಮಾ ನೋಡಿ ಕಲಾವಿದರನ್ನು ಬೆಂಬಲಿಸಬೇಕು“ ಎಂದರು.ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತಾಡಿ, ”ಕಲ್ಪನಾ ಸಿನಿಮಾ ಮಂದಿರದಲ್ಲಿ ಇವತ್ತು ಮಿಡ್ಲ್ ಕ್ಲಾಸ್ ಫ್ಯಾಮಿಲಿ ಸಿನಿಮಾದ ಹಾಡು ಬಿಡುಗಡೆಯಾಗಿದೆ. ಪ್ರತೀ ರಾಜ್ಯದ ಜನರು ಆಯಾ ಭಾಷಾ ಸಿನಿಮಾಗಳಿಗೆ ಪ್ರೋತ್ಸಾಹ ಕೊಡುತ್ತಾರೆ. ಅದೇ ರೀತಿ ತುಳುವರು ನಮ್ಮ ಭಾಷೆಯ ಸಿನಿಮಾಗಳನ್ನು ಪ್ರೋತ್ಸಾಹಿಸಬೇಕು“ ಎಂದರು.ಹಿರಿಯ ರಂಗಭೂಮಿ ಕಲಾವಿದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತಾಡಿ, “ಮಿಡ್ಲ್ ಕ್ಲಾಸ್ ಫ್ಯಾಮಿಲಿ ಸಿನಿಮಾವನ್ನು ಕೇವಲ ಮಿಡ್ಲ್ ಕ್ಲಾಸ್ ಪ್ರೇಕ್ಷಕರು ನೋಡಿದರೆ ಸಾಲದು. ಬಡ, ಮಧ್ಯಮ, ಶ್ರೀಮಂತ ಹೀಗೇ ಎಲ್ಲ ವರ್ಗದ ಪ್ರೇಕ್ಷಕರು ಈ ಸಿನಿಮಾ ನೋಡಿ ಗೆಲ್ಲಿಸಬೇಕು” ಎಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸಮಾಜಮುಖಿ ಸೇವೆಯಲ್ಲಿ ಸಾಧನೆ ಮಾಡಿರುವ ರವಿ ಕಟಪಾಡಿ, ಹುಲಿ ವೇಷ ಧರಿಸುವ ಸುಷ್ಮಾ ರಾಜ್, ಸಮಾಜಮುಖಿ ಸೇವೆಯಲ್ಲಿ ತೊಡಗಿರುವ ಯೂಟ್ಯೂಬರ್ ಶಟರ್ ಬಾಕ್ಸ್ ಫಿಲ್ಮ್ಸ್ ನ ಸಚಿನ್ ಶೆಟ್ಟಿ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಉದ್ಯಮಿ ರಮೇಶ್ ಕಾಂಚನ್, ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಹರಿಪ್ರಸಾದ್ ರೈ, ದಿನೇಶ್ ಕಿಣಿ, ಲಯನ್ಸ್ ಜಿಲ್ಲಾ ಗವರ್ನರ್ ಮುಹಮ್ಮದ್ ಹನೀಫ್, ಗಿರೀಶ್ ರಾವ್, ನಿರ್ಮಾಪಕ ಆನಂದ್ ಕುಂಪಲ, ಸಹನಿರ್ಮಾಪಕರಾದ ಗಣೇಶ್ ಕೊಲ್ಯ, ಭರತ್ ಕುಮಾರ್, ನಿತಿನ್ ರಾಜ್ ಶೆಟ್ಟಿ, ಪವನ್ ಕುಮಾರ್ ಹಾಗೂ ಅಶೋಕ್ ಹೆಗ್ಡೆ, ಲಯನ್ ಕಿಶೋರ್ ಡಿ ಶೆಟ್ಟಿ, ಚಿತ್ತರಂಜನ್ ಬೋಳೂರು, ತಮ್ಮ ಲಕ್ಷ್ಮಣ್, ವಿಜಯ್ ಕೊಡವೂರು, ನಿತಿನ್ ಶೆಟ್ಟಿ, ನಟಿ ಸಮತಾ ಅಮೀನ್, ನಟ ವಿನೀತ್ ಕುಮಾರ್, ಭೊಜರಾಜ ವಾಮಂಜೂರು, ನಿರ್ದೇಶಕ ರಾಹುಲ್ ಅಮೀನ್, ಶ್ಯಾಮಿಲಿ, ಸಂದೀಪ್ ಶೆಟ್ಟಿ, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಹರ್ಷಿತ್ ಸೋಮೇಶ್ವರ್, ರೋಷನ್, ದಯಾನಂದ ಬಂಟ್ವಾಳ, ರೂಪ ವರ್ಕಾಡಿ, ನವೀನ್ ಶೆಟ್ಟಿ, ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷರಾದ ಪದ್ಮಪ್ರಸಾದ್ ಜೈನ್, ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಉಡುಪಿ ವಲಯಾಧ್ಯಕ್ಷ ಸುಧೀರ್ ಎಂ.ಶೆಟ್ಟಿ, ಮಂಗಳೂರು ವಲಯಾಧ್ಯಕ್ಷ ಹರೀಶ್ ಅಡ್ಯಾರ್, ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್ ಮತ್ತು ಶ್ರೀಧರ್ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.ತುಳು ಸಿನಿಮಾ ರಂಗದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ತುಳು ಸಿನಿಮಾದ ಹಾಡೊಂದು ಸಿಂಗಲ್ ಥಿಯೇಟರ್ ನಲ್ಲಿ ಬಿಡುಗಡೆಗೊಳ್ಳುತ್ತಿರುವುದು ಇದೇ ಮೊದಲನೇ ಬಾರಿಯಾಗಿದೆ.‘ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ತಂಡದ ಬಹುತೇಕ ತಂತ್ರಜ್ಞರು, ಕಲಾವಿದರು ಇಲ್ಲಿ ದುಡಿದಿದ್ದಾರೆ. ಮುಖ್ಯವಾಗಿ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಸಿನಿಮಾದ ನಿರ್ದೇಶಕ ರಾಹುಲ್ ಅಮೀನ್ ಇಲ್ಲೂ ನಿರ್ದೇಶಕರಾಗಿದ್ದಾರೆ‌. ವಿನೀತ್ ಕುಮಾರ್ ನಾಯಕ ನಟನಾಗಿ ಸಮತಾ ಅಮೀನ್ ನಾಯಕಿಯಾಗಿ ಹಾಗೂ ತುಳು ಚಿತ್ರರಂಗದ ಮೇರು ಕಲಾವಿದರಾದ ನವೀನ್ ಡಿ.ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಚೈತ್ರಾ ಶೆಟ್ಟಿ, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ರೂಪ ವರ್ಕಾಡಿ, ರವಿ ರಾಮಕುಂಜ ಮತ್ತಿತರರು ಅಭಿನಯಿಸಿದ್ದಾರೆ‌. ಸೃಜನ್ ಕುಮಾರ್ ತೋನ್ಸೆ ಸಂಗೀತ ನೀಡಿದ್ದಾರೆ. ನವೀನ್ ಕುಮಾರ್ ಶೆಟ್ಟಿ ನೃತ್ಯ ಸಂಯೋಜಿಸಿದ್ದಾರೆ. ಮಧುರಾಜ್ ಕಾರ್ಯಕ್ರಮ ನಿರ್ವಹಿಸಿದರು.

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

‘ಪ್ಲಾಸ್ಟಿಕ್ ನಿರ್ಮೂಲನಕ್ಕೆ ಜನ ಜಾಗ್ರತಿ ಮೂಡಿಸುವ ಅಗತ್ಯವಿದೆ’ : ವಿಧಾನ ಸಭೆ ಸ್ಪೀಕರ್ ಯು ಟಿ ಖಾದರ್

ಮಂಗಳೂರು, ಸೆಪ್ಟೆಂಬರ್ 11,ಪ್ಲಾಸ್ಟಿಕ್ ಬಳಕೆಯಿಂದ ಆಗುವ ಹಾನಿಗಳ ಕುರಿತು ಜನ ಜಾಗ್ರತಿ ಮೂಡಿಸುವ ಕೆಲಸಗಳನ್ನು ಸಂಘ ಸಂಸ್ಥೆಗಳು ಮಾಡಬೇಕು. ಇದನ್ನು ಸಂಪೂರ್ಣ ನಿಯಂತ್ರಿಸಲು ಜನರ ಸಹಭಾಗಿತ್ವ ಅಗತ್ಯ ಇದೆ ಎಂದು ಹೇಳಿದರು.ನಗರದ ಗೋಲ್ಡ್ ಫಿಂಚ್ ಹೋಟೆಲ್ ನಲ್ಲಿ ನೂತನವಾಗಿ ಆರಂಭಗೊಂಡ ಸ್ವಚ್ಚ ಪರಿಸರ ಪ್ರತಿಷ್ಠಾನ ವನ್ನು ಉದ್ಘಾಟಿಸಿ ಸ್ಪೀಕರ್ ಯು ಟಿ ಖಾದರ್ ಮಾತನಾಡಿದರು. ಪ್ಲಾಸ್ಟಿಕ್ ಮರು ಬಳಕೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಷ್ಠಾನ ಮುತುವರ್ಜಿಯಿಂದ ಕೆಲಸ ಮಾಡಬೇಕು. ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳನ್ನು ಪ್ಲಾಸ್ಟಿಕ್ ಜಾಗ್ರತಿ ಅಭಿಯಾನದಲ್ಲಿ ತೋಡಗಿಸಿಕೊಳ್ಳುವ0ತೆ ಸಲಹೆ ನೀಡಿದರು.ಸ್ವಚ್ಚ ಪರಿಸರ ಪ್ರತಿಷ್ಠಾನ ಟ್ರಸ್ಟಿ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ,ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನದ ಮುಖ್ಯ ಸಯೋ0ಜಕ ರಂಜನ್ ಬೆಳ್ಳಪಾರ್ದಿ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಮಾಜಿ ಉಪ ಮೇಯರ್ ಸುಮಂಗಲ ರಾವ್, ಪಾಲಿಕೆ ಸದಸ್ಯ ವಿನಯರಾಜ್,ಮಂಗಳೂರು ವಿಶ್ವ ವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಸ0ಯೋಜನಾಧಿಕಾರಿ ಶೇಷಪ್ಪ ಅಮೀನ್,ಮಂಗಳೂರು ವಲಯ ಪಿ ಆರ್ ಓ ರೆವ್ ಡಾ ಜೆಬಿ ಸಲ್ಡಾನ್ಹಾ ಹರೇಕಳ ಜುಮ್ಮಾ ಮಸೀದಿ ಧರ್ಮ ಗುರುಗುರು ಹಫಿಲ್ ಯಾಕೂಬ್ ಸಹಿದಿ ಉಪಸ್ಥಿತರಿದ್ದರು.ಪುಷ್ಪರಾಜ್ ಸ್ವಾಗತಿಸಿ ವಂದಿಸಿದರು. ಪ್ರಿಯಾ ಹರೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Scroll to Top