ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಎಂಸಿಸಿ ಬ್ಯಾಂಕಿನಲ್ಲಿ 114ನೇ ಸಂಸ್ಥಾಪಕರ ದಿನಾಚರಣೆ

ಮಂಗಳೂರು, ಮೇ 9: ಎಂಸಿಸಿ ಬ್ಯಾಂಕ್ ಲಿಮಿಟೆಡ್ ತನ್ನ 114ನೇ ಸಂಸ್ಥಾಪಕರ ದಿನಾಚರಣೆಯನ್ನು ಆಡಳಿತ ಕಚೇರಿ ಆವರಣದಲ್ಲಿ ಭವ್ಯವಾಗಿ ಆಚರಿಸಿತು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಂಸ್ಥಾಪಕರಾದ ದಿವಂಗತ ಶ್ರೀ ಪಿ.ಎಫ್.ಎಕ್ಸ್. ಸಾಲ್ದಾನ್ಹ ಅವರ ದೂರದೃಷ್ಟಿಯ ಸೇವೆಯನ್ನು ಸ್ಮರಿಸಲಾಯಿತು ಹಾಗೂ ಸಹಕಾರಿ ಕ್ಷೇತ್ರದಲ್ಲಿ ಬ್ಯಾಂಕ್ ಸಾಧಿಸಿರುವ ನಿರಂತರ ಪ್ರಗತಿ ಹಾಗೂ ಸ್ಥೈರ್ಯವನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು. ಸೇಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯುನಿವರ್ಸಿಟಿ), ಮಂಗಳೂರು ಇದರ ಉಪಕುಲಪತಿ ರೆವ್. ಡಾ. ಪ್ರವೀಣ್ ಮಾರ್ಟಿಸ್ SJ ಕರ್ನಾಟಕ ಬ್ಯಾಂಕಿನ ಮಾಜಿ ಮಹಾಪ್ರಬಂಧಕ ಹಾಗೂ ಮುಖ್ಯ ಅನುಸರಣಾಧಿಕಾರಿ ಡಾ| ಮೀರಾ ಅರನ್ಹಾ, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷ ಶ್ರೀ ರಾಯ್ ಕ್ಯಾಸ್ಟೆಲಿನೋ ಹಾಗೂ ಕೆನರಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಮಾಜಿ ಅಧ್ಯಕ್ಷ ಶ್ರೀ ಐಸಾಕ್ ವಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬ್ಯಾಂಕಿನ ಮಹಾಪ್ರಬಂಧಕರಾದ ಶ್ರೀ ಸುನಿಲ್ ಮಿನೇನೆಜಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ಸಂಸ್ಥಾಪಕರ ಕುಟುಂಬ ಸದಸ್ಯರು ದಿವಂಗತ ಶ್ರೀ ಪಿ.ಎಫ್.ಎಕ್ಸ್. ಸಾಲ್ದಾನ್ಹ ಅವರ ಭಾವಚಿತ್ರಕ್ಕೆ ಪುಷ್ಪ್ಪನಮನ ಸಲ್ಲಿಸಿ ಗೌರವ ಸಲ್ಲಿಸಿದರು. ಸ್ವಾಗತ ಭಾಷಣದಲ್ಲಿ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊ ಅವರು, ಸಂಸ್ಥಾಪಕರ ದೃಷ್ಟಿಕೋನ ಮತ್ತು ಧ್ಯೇಯವನ್ನು ಸ್ಮರಿಸುವ ಉದ್ದೇಶದಿಂದ ಸಂಸ್ಥಾಪಕರ ದಿನಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. 2018ರಲ್ಲಿ ಹೊಸ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ನಂತರ ಬ್ಯಾಂಕ್ ವೃತ್ತಿಪರತೆಯೊಂದಿಗೆ ಗಮನಾರ್ಹ ಬೆಳವಣಿಗೆ ಸಾಧಿಸಿದೆ ಎಂದು ಹೇಳಿದರು. ಬ್ಯಾಂಕಿನ ಪ್ರಗತಿಯನ್ನು ವಿವರಿಸಿದ ಅವರು, 24 ವರ್ಷಗಳ ಬಳಿಕ ಶಾಖೆಗಳ ಸಂಖ್ಯೆ 16ರಿಂದ 21ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು. ಬ್ಯಾಂಕಿನ ಒಟ್ಟು ವ್ಯವಹಾರ ರೂ.500 ಕೋಟಿಯಿಂದ ರೂ.1,525 ಕೋಟಿಗೆ ಏರಿಕೆಯಾಗಿದ್ದು, ಠೇವಣಿಗಳು ರೂ.300 ಕೋಟಿಯಿಂದ ರೂ.875 ಕೋಟಿಗೆ ಹೆಚ್ಚಳವಾಗಿವೆ ಎಂದರು. ಬ್ಯಾಂಕ್ ರೂ.13 ಕೋಟಿ ಲಾಭ ದಾಖಲಿಸಿದ್ದು, ನಿರಂತರವಾಗಿ “ಎ” ದರ್ಜೆಯ ಲೆಕ್ಕಪರಿಶೋಧನಾ ವರ್ಗೀಕರಣವನ್ನು ಪಡೆಯುತ್ತಿದೆ ಎಂದು ತಿಳಿಸಿದರು. ಪ್ರಸ್ತುತ ಇರುವ 21 ಶಾಖೆಗಳನ್ನು ಈ ಆರ್ಥಿಕ ವರ್ಷದಲ್ಲಿ 25ಕ್ಕೆ ವಿಸ್ತರಿಸುವ ಯೋಜನೆಯನ್ನೂ ಘೋಷಿಸಿದರು. ತಮ್ಮ ಭಾಷಣದಲ್ಲಿ ವಂ. ಡಾ| ಪ್ರವೀಣ್ ಮಾರ್ಟಿಸ್ ಅವರು ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊ ಅವರ ನಾಯಕತ್ವವನ್ನು ಶ್ಲಾಘಿಸಿ, ಬ್ಯಾಂಕ್ ಕಳೆದ ಕೆಲವು ವರ್ಷಗಳಲ್ಲಿ ಸಾಧಿಸಿರುವ ಪರಿವರ್ತನೆಯನ್ನು ಮೆಚ್ಚಿದರು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ನೆರವಾಗುವ “ವಿದ್ಯಾಧನ ವಿದ್ಯಾರ್ಥಿ ಕ್ರೆಡಿಟ್ ಯೋಜನೆ”ಯನ್ನು ವಿಶೇಷವಾಗಿ ಪ್ರಶಂಸಿಸಿದರು. ಎಂಸಿಸಿ ಬ್ಯಾಂಕ್ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುವ ಜನಪರ ಬ್ಯಾಂಕಾಗಿ ಹೊರಹೊಮ್ಮಿದೆ ಎಂದು ಹೇಳಿದರು. ಡಾ| ಮೀರಾ ಅರನ್ಹಾ ಅವರು “ವಿದ್ಯಾಧನ ಶಿಕ್ಷಣ ಯೋಜನೆ”ಯನ್ನು ಉದ್ಘಾಟಿಸಿದರು. ತಮ್ಮ ಭಾಷಣದಲ್ಲಿ ಕಳೆದ ಏಳು-ಎಂಟು ವರ್ಷಗಳಲ್ಲಿ ಬ್ಯಾಂಕ್ ಸಾಧಿಸಿರುವ ಪ್ರಗತಿಯನ್ನು ಅಭಿನಂದಿಸಿದ ಅವರು, ಬ್ಯಾಂಕಿನ ಭವಿಷ್ಯ ಬೆಳವಣಿಗೆಯಲ್ಲಿ ಕೃತಕ ಬುದ್ಧಿಮತ್ತೆ, ಹವಾಮಾನ ಹಾಗೂ ESG ಅಪಾಯ ನಿರ್ವಹಣೆ ಮತ್ತು ವಿಶ್ವಾಸದ ಕಾಪಾಡುವಿಕೆ ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದರು. ಶ್ರೀ ರಾಯ್ ಕ್ಯಾಸ್ಟೆಲಿನೋ ಅವರು ಕೇವಲ ಏಳು ವರ್ಷಗಳಲ್ಲಿ ಬ್ಯಾಂಕ್ ಮೂರು ಪಟ್ಟು ಬೆಳವಣಿಗೆ ಸಾಧಿಸಿರುವುದಕ್ಕೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು. ಶ್ರೀ ಐಸಾಕ್ ವಾಸ್ ಅವರು ಸಂಪಾದಕರಾದ ಡಾ. ಜೆರಾಲ್ಡ್ ಪಿಂಟೊ ಅವರೊಂದಿಗೆ ಬ್ಯಾಂಕಿನ ಬುಲೆಟಿನ್ ಬಿಡುಗಡೆ ಮಾಡಿದರು. ತಮ್ಮ ಭಾಷಣದಲ್ಲಿ ಸಂಸ್ಥಾಪಕರು ಬ್ಯಾಂಕನ್ನು ಸಮುದಾಯದ ವಿಶ್ವಾಸದ ಸಂಕೇತವಾಗಿ ಸ್ಥಾಪಿಸಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹೊಸದಾಗಿ ಅರ್ಹತೆ ಪಡೆದ ಚಾರ್ಟರ್ಡ್ ಅಕೌಂಟೆAಟ್ಸಳಾದ ಸಿಎ ಮ್ಯೂರಿಯಲ್ ಮಸ್ಕರೇನ್ಹಾಸ್ ಹಾಗೂ ಸಿಎ ಜಾಯ್ಸ್ಟನ್ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು. ಕೇಂದ್ರ ಸೆಂಟ್ರಲ್ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ಹೆನ್ರಿ ಮೆಂಡೋನ್ಕಾ (ಎಚ್.ಎಂ. ಪೆರ್ನಾಲ್), ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ರಿಶೆಲ್ ಫೆರ್ನಾಂಡಿಸ್ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ| ಜೋಸೆಫ್ ಲೋಬೊ, ಶ್ರೀ ಝೇವಿಯರ್ ಡಿಸೋಜಾ ಮತ್ತು ಶ್ರೀ ಪ್ರೇಮ್ ಜೆ. ಮೊರಾಸ್ ಅವರನ್ನು ಗೌರವಿಸಲಾಯಿತು. ನಿರ್ದೇಶಕರಾದ ಶ್ರೀ ರೋಶನ್ ಡಿಸೋಜಾ ಹಾಗೂ ಶ್ರೀ ಅನಿಲ್ ಪತ್ರಾವೊ ಅವರನ್ನು ಅವರ ಜನ್ಮದಿನದ ಅಂಗವಾಗಿ ಸನ್ಮಾನಿಸಲಾಯಿತು. ಬ್ಯಾಂಕಿನ ಹೊಸ ಲೋಗೋ ವಿನ್ಯಾಸಗೊಳಿಸಿದ ಶ್ರೀ ಬನ್ನು ಫೆರ್ನಾಂಡಿಸ್ ಹಾಗೂ ಪಿಎಫ್ಎಕ್ಸ್ ಮೆಮೋರಿಯಲ್ ಆಡಿಟೋರಿಯಂ ವಿನ್ಯಾಸಗೊಳಿಸಿದ ವಾಸ್ತುಶಿಲ್ಪಿ ಶ್ರೀ ದೀಪಕ್ ಡಿಸೋಜಾ ಅವರನ್ನು ಸಹ ಗೌರವಿಸಲಾಯಿತು. ಕಾರ್ಯಕ್ರಮವು ಶ್ರೀ ಮನೋಜ್ ಲೋಪೆಸ್ ಮತ್ತು ತಂಡದವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಬ್ಯಾಂಕಿನ ಮಹಾಪ್ರಬಂಧಕರಾದ ಶ್ರೀ ಸುನಿಲ್ ಮೆನೆಜಸ್ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವನ್ನು ಶ್ರೀ ಜೇಸನ್ ಶಿರ್ತಾಡಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಶ್ರೀ ಆಂಡ್ರೂ ಡಿಸೋಜಾ, ಶ್ರೀ ಹೆರಾಲ್ಡ್ ಮೊಂತೋರೊ, ಶ್ರೀ ಅನಿಲ್ ಪತ್ರಾವೊ, ಶ್ರೀ ಡೇವಿಡ್ ಡಿಸೋಜಾ, ಶ್ರೀ ಜೆ.ಪಿ. ರೋಡ್ರಿಗಸ್, ಶ್ರೀ ರೋಶನ್ ಡಿಸೋಜಾ, ಶ್ರೀ ಮೆಲ್ವಿನ್ ವಾಸ್, ಶ್ರೀ ವಿನ್ಸೆಂಟ್ ಲಸ್ರಾದೊ, ಶ್ರೀ ಸುಶಾಂತ್ ಸಾಲ್ದಾನ್ಹಾ, ಶ್ರೀಮತಿ ಐರಿನ್ ರೆಬೆಲ್ಲೊ, ಶ್ರೀ ಆಲ್ವಿನ್ ಪಿ. ಮೊಂತೇರೊ, ಶ್ರೀ ಫೆಲಿಕ್ಸ್ ಡಿಕ್ರೂಜ್, ಡಾ| ಜೆರಾಲ್ಡ್ ಪಿಂಟೊ ಹಾಗೂ ಶ್ರೀ ಸಿ.ಜಿ. ಪಿಂಟೊ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ವೈದ್ಯಕೀಯ ಶಿಕ್ಷಣ ಕಾರ್ಯಾಗಾರ

ಮಂಗಳೂರು: ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್‌ ಮತ್ತು ಕೆಎಂಸಿ ಮಂಗಳೂರು ಸಹಯೋಗದಲ್ಲಿ ನಗರದ ಅತ್ತಾವರ ಕೆಎಂಸಿಯಲ್ಲಿ ಆರ್ಥೋಪೆಡಿಕ್ಸ್‌ನಲ್ಲಿ 3ಡಿ ಮುದ್ರಣದ ಕುರಿತು ವೈದ್ಯಕೀಯ ಶಿಕ್ಷಣ ಕಾರ್ಯಾಗಾರ ನಡೆಯಿತು. ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್‌ನ ಅಧ್ಯಕ್ಷ ಡಾ. ಬಿ. ಸಚ್ಚಿದಾನಂದ ರೈ, ಕೆಎಂಸಿ ಮಂಗಳೂರಿನ ಅಸೋಸಿಯೇಟ್ ಡೀನ್ ಡಾ. ಅಶ್ಫಾಕ್ ಮಹಮ್ಮದ್ ಮತ್ತು ಸಿಒಎಸ್ ಅಧ್ಯಕ್ಷ ಡಾ. ಸುದೀಪ್ ಶೆಟ್ಟಿ ಕಾರ್ಯಾಗಾರ ಉದ್ಘಾಟಿಸಿದರುಕಾರ್ಯಾಗಾರದ ಸಂಘಟನಾ ಅಧ್ಯಕ್ಷ ಡಾ. ಆತ್ಮಾನಂದ ಶೆಟ್ಟಿ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಡಾ. ಚೇತನ್ ಶೆಟ್ಟಿ ವಂದಿಸಿದರು. ನೂರಕ್ಕೂ ಅಧಿಕ‌ಮೂಳೆ ಶಸ್ತ್ರಚಿಕಿತ್ಸಕರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು

ಪ್ರಾದೇಶಿಕ ವಾರ್ತೆಗಳು

ವಾರ್ತಾ ಇಲಾಖೆ ಪತ್ರಿಕಾ ವಾಹನಕ್ಕೆ ಚಾಲನೆ

ಮಂಗಳೂರು, ಮೇ 08- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜಿಲ್ಲೆಯ ಪತ್ರಕರ್ತರ ಪ್ರವಾಸದ ಅನುಕೂಲಕ್ಕೆ ದಕ್ಷಿಣ ಕನ್ನಡ ಜಿಲ್ಲೆಗೆ ಹಂಚಿಕೆಯಾದ ಹೊಸ ಪತ್ರಿಕಾ ವಾಹನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಶುಕ್ರವಾರ ನಗರದ ಸುಲ್ತಾನ್ ಬತ್ತೇರಿಯಲ್ಲಿ ಹಸಿರು ನಿಶಾನೆ ತೋರಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಶಾ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಮತ್ತಿತರರು ಇದ್ದರು.

ಪ್ರಾದೇಶಿಕ ವಾರ್ತೆಗಳು

ಮೇ 28ರಂದು ಅಮ್ಮ ಮಂಗಳೂರಿಗೆ- : ಇಂದು ಚಪ್ಪರ ಮುಹೂರ್ತ. ‘ನಡೆದಾಡುವ, ಮಾತನಾಡುವ ದೇವರು ಅಮ್ಮ’- ನಳಿನ್ ಕುಮಾರ್ ಕಟೀಲ್

ಮಂಗಳೂರು: ಮಂಗಳೂರಿನ ಮಾತಾ ಅಮೃತಾನಂದಮಯಿ ಮಠಕ್ಕೆ ಮೇ 28 ರಂದು ಆಗಮಿಸುವ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಕಾರ್ಯಕ್ರಮ” ಬ್ರಹ್ಮಸ್ಥಾನಂ ಮಹೋತ್ಸವ ಮತ್ತು ಅಮೃತಸಂಗಮ 2026″ದ ಪ್ರಯುಕ್ತ ಚಪ್ಪರ ಮುಹೂರ್ತ ಜರುಗಿತು.ಸ್ವಾಮಿನಿ ಮಂಗಳಾಮೃತ ಪ್ರಾಣ ರವರ ಉಪಸ್ಥಿತಿಯಲ್ಲಿ ನಡೆದ ಈ‌ ಕಾರ್ಯಕ್ರಮದಲ್ಲಿನಿಕಟಪೂರ್ವ ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲ್ ವಿದ್ಯುಕ್ತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ “ಮಾನವ ಮಹಾದೇವತ್ವಕ್ಕೆ ಏರುವ ಪುಣ್ಯಭೂಮಿ ಭಾರತ.ನಡೆದಾಡುವ , ಮಾತನಾಡುವ ದೇವರಾದ ಮಾತಾ ಅಮೃತಾನಂದಮಯಿ ದೇವಿಯವರು ಜಗತ್ತಿಗೆಪ್ರೇಮದ ಸಂದೇಶಗಳನ್ನು ಸಾರುತ್ತಿದ್ದಾರೆ.ಪ್ರೀತಿ ಮತ್ತು ವಾತ್ಸಲ್ಯ ತಾಯಿಯ ಸಹಜ ಗುಣ .ಅಮ್ಮನವರು ಶ್ರೇಷ್ಠವಾದ ಶಿಕ್ಷಣ ಯಜ್ಞ , ಆರೋಗ್ಯ ಯಜ್ಞ ಮೊದಲಾದ ಹತ್ತಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.ಇಲ್ಲಿನ ಸೇವಾ ಸಮಿತಿಯು ಅತ್ಯುತ್ತಮ ಕಾರ್ಯಕ್ರಮಗಳನ್ನು ಕಳೆದ ಹಲವು ವರ್ಷಗಳಿಂದ ಮಾಡುತ್ತಾ ಬಂದಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಗೌರವಾಧ್ಯಕ್ಷ ಡಾ.ಜೀವರಾಜ್ ಸೊರಕೆ ಮಾತನಾಡಿ ಅಮ್ಮನವರು ಈ ಬಾರಿ ರಾಜ್ಯದಲ್ಲಿ ಏಕೈಕ ಸ್ಥಳಕ್ಕೆ ಭೇಟಿ ನೀಡುತ್ತಿರುವುದು ಅದರಲ್ಲಿ ಮಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಸುವ ಸೌಭಾಗ್ಯ ಇಲ್ಲಿನ ಭಕ್ತರ ಪಾಲಿಗೆ ಲಭಿಸಿದೆ. ಮಂಗಳೂರಿನ ಕಾರ್ಯಕ್ರಮ ಎಂದರೆ ಅದು ಶ್ರೇಷ್ಠ ಮಟ್ಟದ ಕಾರ್ಯಕ್ರಮವಾಗಿರುತ್ತದೆ ಎಂಬ ಅನುಭವ ಅಸಂಖ್ಯಾತ ಭಕ್ತರದ್ದಾಗಿದೆ. ಅವರೆಲ್ಲರೂ ಅಮ್ಮನವರ ದರ್ಶನಕ್ಕೆ ಮಂಗಳೂರನ್ನು ಆಯ್ಕೆ ಮಾಡುತ್ತಿರುವ ಕಾರಣ ನಮ್ಮ ಜವಾಬ್ದಾರಿ ಬಹಳ ಮಹತ್ವದ್ದಾಗಿದೆ.ಆದಷ್ಟು ಹೆಚ್ಚಿನ ಭಕ್ತರು ಪೂಜೆ ಸಲ್ಲಿಸುವ ಮೂಲಕ ಅಮ್ಮನ ಕಾರ್ಯಕ್ರಮದ ಯಶಸ್ವಿಯಾಗಿ ನೆರವೇರಲು ಸರ್ವರ ಸಹಕಾರ ಕೋರಿದರು.ಸ್ವಾಮಿನಿ ಮಂಗಳಾಮೃತ ಪ್ರಾಣರವರು ಆಶೀರ್ವಚನವಿತ್ತು”ಅಮ್ಮನವರ ಭೇಟಿಯ ಬಗ್ಗೆ ಕಳೆದ ಏಳು ವರ್ಷಗಳಿಂದ ಕಾತರದಿಂದ ಕಾದು ಕುಳಿತ ಭಕ್ತರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು ಹೆಚ್ಚಿನ ಜನರು ಇದರ ಪ್ರಯೋಜನ ಪಡೆಯುವಂತೆ ಕರೆಯಿತ್ತರು.ಗೌರವಾಧ್ಯಕ್ಷರಾದ ಡಾ. ವಸಂತ ಕುಮಾರ್ ಪೆರ್ಲ ಕಾರ್ಯಕ್ರಮ ನಿರೂಪಣೆ ಮಾಡಿ ಅಮ್ಮನ ಕಾರ್ಯಕ್ರಮದ ಸ್ವರೂಪವನ್ನು ತಿಳಿಸಿದರು. ಗುತ್ತಿಗೆದಾರ ಶ್ರೀ ಭಾಸ್ಕರ್ ಭಟ್ ರವರನ್ನುಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಮಾಜಿ‌ಮೇಯರ್ ಗಣೇಶ್ ಹೊಸಬೆಟ್ಟು, ಗೌರವ ಅಧ್ಯಕ್ಷ ಸಿ ಎ. ವಾಮನ್ ಕಾಮತ್, ಮುರಳೀಧರ್ ಶೆಟ್ಟಿ, ವಾಮನ್ ಮೈಂದನ್,ಚಂದ್ರಹಾಸ್ ಸುವರ್ಣ,ಗಣೇಶ್ ಕೆ,ಕೃಷ್ಣಶೆಟ್ಟಿ,ಅಡ್ವೊಕೇಟ್ ಪುಷ್ಪಲತಾ,ಅಮೃತ ವಿದ್ಯಾಲಯಂ ಪ್ರಾಂಶುಪಾಲೆ ಮಧುಲಿಖಾ ರಾವ್ ಸೇವಾ ಸಮಿತಿಯ ಪದಾಧಿಕಾರಿಗಳು, ಅಯುಧ್ ಮಂಗಳೂರು ಮತ್ತು ಅಮ್ಮನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ – ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಬಹುಮತ.ಕೇರಳದಲ್ಲಿ ಕಾಂಗ್ರೆಸ್, ತಮಿಳುನಾಡಿನಲ್ಲಿ ಟಿವಿಕೆ. ELECTION RESULT LATEST NEWS.

ವಿಶೇಷ ವರದಿ – ಡಾ.ಅಶೋಕ್ ಶೆಟ್ಟಿ ಬಿ.ಎನ್.ಬೆಂಗಳೂರು – ಪಂಚರಾಜ್ಯಗಳ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ತಮಿಳುನಾಡಿನಲ್ಲಿ ಮಮತಾ ಬ್ಯಾನರ್ಜಿ ಅವರ ತೃಣ ಮೂಲ ಕಾಂಗ್ರೆಸ್ ನ್ನು ಹೀನಾಯವಾಗಿ ಸೋಲಿಸಿದೆ. ಟಿಎಂಸಿ ಕೇವಲ 80ಸ್ಥಾನಕ್ಕೆ ತೃಪ್ತಿ ಪಟ್ಟರೆ ,ಬಿಜೆಪಿ 207 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.ಈ ಮಧ್ಯೆ ಸೂರ್ಯಾಸ್ತದವರೆಗೆ ಕಾದು ನೋಡೋಣ ಎಂದು ಮಮತಾ ಬ್ಯಾನರ್ಜಿ ಅವರು ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದರು. ಆದರೆ, ಮಮತಾ ಬ್ಯಾನರ್ಜಿ ಅವರ ಅತೀ ಆತ್ಮವಿಶ್ವಾಸ ಅವರ ನಿರೀಕ್ಷೆಯನ್ನು ಹುಸಿಯಾಗಿಸಿತ್ತು. ತೃಣ ಮೂಲ ಕಾಂಗ್ರೆಸ್ ಇನ್ನಿಲ್ಲದಂತೆ ಆಶ್ಚರ್ಯಕರ ರೀತಿಯಲ್ಲಿ ನೆಲ ಕಚ್ಚಿತ್ತು.ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಅಧಿಕಾರ ಯುಗ ಇಲ್ಲಿಗೆ ಮುಗಿಯುತ್ತೆಂದೇ ಹೇಳಬಹುದು.ತಮಿಳುನಾಡಿನಲ್ಲಿ ಡಿಎಂಕೆಗೆ ಸೋಲಾಗಿದೆ. ದಳಪತಿ ವಿಜಯ್ ಅವರು ಕೇವಲ ಸಿನಿಮಾದಲ್ಲಿ ಮಾತ್ರವಲ್ಲ ,ನಿಜ ಜೀವನದಲ್ಲಿ ಕೂಡ ಜನನಾಯಗನ್ ಅಗಿ ಹೊರ ಹೊಮ್ಮಿದ್ದಾರೆ. ಅವರ ಟಿವಿಕೆ 107 ಸ್ಥಾನಗಳಲ್ಲಿ ಗೆದ್ದು ಪ್ರಥಮ ಸ್ಥಾನದಲ್ಲಿ ರಾರಾಜಿಸಿದೆ.ಇದು ಎನ್ ಟಿಆರ್ ಮಾದರಿ ಅದ್ಬುತ ಜಯವಾಗಿದೆ. ಇಡೀ ತಮಿಳುನಾಡಿಗೆ ದಳಪತಿ ವಿಜಯ್ ಹೊಸ ಸಾಮ್ರಾಟ್ ನಾಗಿ ದಾಖಲೆ ಬರೆದಿದ್ದಾರೆ.ಈ ದ್ರಾವಿಡ ನಾಯಕನ ಎದುರು ಸ್ಟಾಲಿನ್ ನೆಲ ಕಚ್ಚಿದ್ದಾರೆ.ಪುದುಚೇರಿ,ಅಸ್ಸಾಂನಲ್ಲಿ ಬಿಜೆಪಿ ಬಹುಮತ ಗಳಿಸಿದೆ.ದಾವಣಗೆರೆಯಲ್ಲಿ ಎಸ್ ಡಿಪಿಐ ಸ್ಪರ್ಧಿಸಿದರೂ ಕಾಂಗ್ರೆಸ್ ನ್ನು ಬಿಜೆಪಿಗೆ ಸೋಲಿಸಲಾಗಲಿಲ್ಲ.ಬಾಗಲಕೋಟೆಯಲ್ಲಿ ಕಾಂಗ್ರೆಸ್ ನ ಉಮೇಶ್ ಮೇಟಿಯವರು ಬಿಜೆಪಿ ಅಭ್ಯರ್ಥಿ ಎದುರು ಭರ್ಜರಿ ಜಯ ಸಾಧಿಸಿದ್ದಾರೆ. ಮಹಿಳಾ ಮೀಸಲಾತಿ ವಿರೋಧಿ ನಿಲುವು ಕಾಂಗೆಸ್ಸನ್ನು ಉಳಿದ ರಾಜ್ಯಗಳಲ್ಲಿ ಎಡ್ರೆಸ್ ಇಲ್ಲದಂತೆ ಮಾಡಿದೆಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ.ಆದರೆ, ಕರ್ನಾಟಕದಲ್ಲಿ ಬಿಜೆಪಿ ನಾಯಕರಿಗೆ ಸೋಲಾಗಿದ್ದು ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ರಿಯಲ್ ಹೀರೋ ಆಗಿ ,ಕಿಂಗ್ ಮೇಕರ್ ಆಗಿ ಹೊರಹೊಮ್ಮಿದ್ದಾರೆ. ಸಿದ್ದರಾಮಯ್ಯ ಅಲೆ ಮುಂದೆ ಕಮಲದ ಕಮಾಲ್ ಕರ್ನಾಟಕದಲ್ಲಿ ನಡೆಯಲಿಲ್ಲ. ಒಂದು ರೀತಿಯಲ್ಲಿ ಬಾಗಲಕೋಟೆ,ದಾವಣಗೆರೆಯಲ್ಲಿ ಗೆದ್ದದ್ದು ಕುಟುಂಬ ರಾಜಕಾರಣವೇ ಎನ್ನಬೇಕು.ಬಾಗಲಕೋಟೆಯಲ್ಲಿ ಉಮೇಶ್ ಮೇಟಿ ತಂದೆಯವರ ಅಧಿಕಾರ ಪಡೆದರೆ,ದಾವಣಗೆರೆಯಲ್ಲಿ ಸಮರ್ಥ್ ಅವರು ಗೆಲ್ಲುವುದರ ಮೂಲಕ ಅಜ್ಜನವರ ಸಿಂಹಾಸನ ಗಟ್ಟಿ ಮಾಡಿಕೊಂಡರು.ಕೇರಳದಲ್ಲಿ ಎಲ್ ಡಿಎಫ್ ಗೆ ಹಿನ್ನಡೆಯಾಗಿ ಪಿಣರಾಯಿ ವಿಜಯ್ ಅಧಿಕಾರ ಕಳೆದುಕೊಂಡಿದ್ದಾರೆ. ಇಲ್ಲಿ ಯುಡಿಎಫ್ ಗೆ ಅಂದರೆ ಕಾಂಗ್ರೆಸ್ ಬಹುಮತ ಗಳಿಸಿದೆ.ತಮಿಳುನಾಡಿನಲ್ಲಿ ಟಿವಿಕೆಗೆ ಬೆಂಬಲ ನೀಡಲು ಕಾಂಗ್ರೆಸ್ ಮುಂದಾಗಿದೆ. ತಮಿಳುನಾಡಿನಲ್ಲಿ ಚುನಾವಣೆಗೆ ಮೊದಲೇ ಟಿವಿಕೆಗೆ ಕಾಂಗ್ರೆಸ್ ಬೆಂಬಲ ಕೊಡುವುದರಲ್ಲಿತ್ತು.ಆಗ ತಡೆದದ್ದು ಡಿಎಂಕೆಯ ಸ್ಟಾಲಿನ್.ಈಗ ಕಾಂಗ್ರೆಸ್ ಗೆ ತಪ್ಪಿನ ಅರಿವಾಗಿದೆ. ಟಿವಿಕೆ ಕಾಂಗ್ರೆಸ್ ಬೆಂಬಲವನ್ನು ಒಪ್ಪುತ್ತದಾ.ಬಿಡುತ್ತದಾ ಎಂಬುದು ಮುಂದಿನ ಕುತೂಹಲವಾಗಿದೆ.ಒಟ್ಟಿನಲ್ಲಿ ಪಂಚರಾಜ್ಯಗಳ ಚುನಾವಣೆಯಲ್ಲಿ ಮೋದಿ- ಅಮಿತ್ ಶಾ ಮಾಸ್ಟರ್ ಪ್ಲಾನ್ ಗೆದ್ದು ಮಮತಾ ಬ್ಯಾನರ್ಜಿ ಅವರ ತೃಣ ಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಕಳೆದುಕೊಳ್ಳುವುದರೊಂದಿಗೆ ಅಲ್ಲಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ.ಈ ಮೂಲಕ ಪಶ್ಚಿಮ ಬಂಗಾಳ,ಪುದುಚೇರಿ, ಅಸ್ಸಾಂನಲ್ಲಿ ನಮೋ ಅಲೆ ಎದ್ದಿದೆ. ಇದು ಮುಂದೆ ನಡೆಯಲಿರುವ ಉಳಿದ ರಾಜ್ಯಗಳ ಚುನಾವಣೆಗೆ ಗಟ್ಟಿ ಅಡಿಪಾಯ ಹಾಕಿ ಕೊಟ್ಟಿದೆ

ಪ್ರಾದೇಶಿಕ ವಾರ್ತೆಗಳು

ಮೇ 4 ರಂದು ಉಡುಪಿಯಲ್ಲಿ ಪ್ರವೀಣ್ ಶೆಟ್ಟಿ ಪುಣೆಯವರಿಗೆ ಭ್ರಮರ ಕೃಷ್ಣ ಪ್ರಶಸ್ತಿ ಪ್ರಧಾನ ಮತ್ತು ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಇದರ ಬಾಲ ಪ್ರತಿಭೆಗಳಿಂದ ಯಕ್ಷಗಾನ ಪ್ರದರ್ಶನ.

ಉಡುಪಿ- ಅಷ್ಟ ಮಠದ ಪರ್ಯಾಯ ಶೀರೂರು ಮಠದ ಶ್ರೀ ವೇದವರ್ಧನ ಶ್ರೀಪಾದರ ಆಶೀರ್ವಾದದೊಂದಿಗೆ ಮೇ. 4ರ ಸೋಮವಾರದಂದು ಅಂದರೆ ಇಂದು ರಾತ್ರಿ ಗಂಟೆ 7ರಿಂದ ಶ್ರೀ ಕೃಷ್ಣ ಮಠ ಉಡುಪಿ ರಾಜಾಂಗಣದಲ್ಲಿ ಭ್ರಾಮರಿ ಯಕ್ಷ ನೃತ್ಯ ಕಲಾನಿಲಯ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಇದರ ಬಾಲ ಪ್ರತಿಭೆಗಳಿಂದ ಭಾರತ ನಿರ್ಣಯ ಪೌರಾಣಿಕ ಯಕ್ಷಗಾನ ಪ್ರಸಂಗ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವುಜರಗಲಿದೆ.ಇದೇ ಸಂದರ್ಭದಲ್ಲಿ ಭ್ರಮರ ಕೃಷ್ಣ ಪ್ರಶಸ್ತಿಯನ್ನು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ಅವರಿಗೆ ಪ್ರದಾನಿಸಲಾಗುವುದು ಹಾಗೂ ಭ್ರಮರ ಚೇತನ ಪುರಸ್ಕಾರವನ್ನು ವಿನಯಾ ಆನಂತಕೃಷ್ಣ, ನಿತ್ಯಾಶ್ರೀ ಬಿ. ಶೆಟ್ಟಿ, ಆರಾಧ್ಯ ಎಮ್ ಶೆಟ್ಟಿ, ತ್ರಿಷಾ ಜಿ. ಭಟ್ ಅವರಿಗೆ ನೀಡಿ ಗೌರವಿಸಲಾಗುವುದು.ಕಾರ್ಯಕ್ರಮದ ಮಧ್ಯಂತರದಲ್ಲಿ ಸಭಾ ಕಾರ್ಯಕ್ರಮ ಜರಗಲಿದ್ದು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾ ಪ್ರಕಾಶ್ ಎಲ್ ಶೆಟ್ಟಿ ಕಡಂದಲೆ ಪರಾರಿ ಭ್ರಾಮರಿ ಯಕ್ಷನೃತ್ಯ ಕಲಾ ನಿಲಯದ ಗೌ. ಅಧ್ಯಕ್ಷ ವಹಿಸಲಿದ್ದು, ಅಶೀರ್ವಚನವನ್ನು ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದ ನೀಡಲಿದ್ದಾರೆ.ಮುಖ್ಯ ಅತಿಥಿಯಾಗಿ ಪುಣೆ ಬಂಟ್ಸ್ ಸಂಘದ ಅಧ್ಯಕ್ಷರಾದ ಅಜಿತ್ ಹೆಗ್ಡೆ, ಜಯಕರ ಶೆಟ್ಟಿ ಇಂದ್ರಾಳಿ ,ಅಧ್ಯಕ್ಷರು ಯಕ್ಷಧ್ರುವ ಪಟ್ಲ ಫೌಂಡೇಶನ್ ಉಡುಪಿ ಘಟಕ, ಶ್ಯಾಮ್ ಎನ್. ಶೆಟ್ಟಿ ,ಮಾಜಿ ಅಧ್ಯಕ್ಷ ಮುಂಬಯಿ ಬಂಟ್ಸ್ ಅಸೋಸಿಯೇಷನ್, ಶಮ್ಮಿ ಎ. ಹೆಗ್ಡೆ ,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಬಂಟ್ಸ್ ಸಂಘ ಪುಣೆ, ಜನಾರ್ದನ ಎಸ್.ದೇವಾಡಿಗ ವಿಶ್ವಸ್ಥ ಶ್ರೀ ಏಕಾನಾಥೇಶ್ವರಿ ದೇವಸ್ಥಾನ ಬಾರ್ಕೂರು, ಜಯಂತಿ ಸಿ. ಶೆಟ್ಟಿ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರ, ಗೀತಾ ಎಸ್. ಶೆಟ್ಟಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಬಂಟರ ಸಂಘ ಮುಂಬಯಿ ನವಿಮುಂಬಯಿ ಪ್ರಾದೇಶಿಕ ಸಮಿತಿ, ಶಾಂತಾ ಎಮ್. ಆಚಾರ್ಯ ಸ್ಥಾಪಕ ಸದಸ್ಯೆ ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಉಪಸ್ಥಿತರಿರುವರು.ಯಕ್ಷಗಾನದ ಹಿಮ್ಮೇಳದಲ್ಲಿ ಭಾಗವತರಾಗಿ ನಿರಂಜನ್ ಬೆಳ್ಳೂರು, ಮದ್ದಳೆಯಲ್ಲಿ ಹರೀಶ್ ಎನ್. ಸಾಲ್ಯಾನ್, ಚಂಡೆಯಲ್ಲಿ ಸುಬ್ರಹ್ಮಣ್ಯ ಭಟ್, ನಿಶಿತ್ ಸುವರ್ಣ, ಚಕ್ರತಾಳ ಹರೀಶ್ ಪೂಜಾರಿ ಶಹಾಡ್, ವೇಷಭೂಷಣ ಕಲಾ ವಿಶ್ವ ಯಕ್ಷ ಬಳಗ ಮಾರ್ಪಳ್ಳಿ ನೀಡಲಿದ್ದಾರೆ.ಭ್ರಾಮರಿಯ ಬಾಲ ಕಲಾವಿದರಿಂದ ನಡೆಯಲಿರುವ ಯಕ್ಷಗಾನ ಪ್ರದರ್ಶನದಲ್ಲಿ ಕಲಾ ಪ್ರೇಮಿಗಳೆಲ್ಲರೂ ಉಪಸ್ಥಿತಿಯಲ್ಲಿದ್ದು ಪ್ರೋತ್ಸಾಹಿಸಬೇಕೆಂದು ಭ್ರಾಮರಿ ಯಕ್ಷನೃತ್ಯ ಕಲಾ ನಿಲಯ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರು, ಟ್ರಸ್ಟಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಭಾಗ ಪ್ರಮುಖೆ ವಿನಂತಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಮೇ 2ರಂದು ಪುತ್ತೂರು ದರ್ಭೆ ಜಂಕ್ಷನ್ ಬಳಿ ಔಷಧಿ ರಹಿತ ಚಿಕಿತ್ಸಾಲಯ ಕಾಯಕಲ್ಪ ಅರೋಗ್ಯ ಧಾಮ ಶುಭಾರಂಭ-ಪ್ರೊ. ಲಕ್ಷ್ಮಣ್.

ಪುತ್ತೂರು -ಕುಂಬ್ರದಿಂದ ಸ್ಥಳಾoತರಗೊಂಡು ಪುತ್ತೂರಿನ ದರ್ಬೆ ಜಂಕ್ಷನ್ ಹತ್ತಿರ, ರೋಡರಿಗಸ್ ಚಿಕೆನ್ ಸೆಂಟರ್ ಪಕ್ಕ ಪ್ರೊ. ಲಕ್ಷ್ಮಣ್ ಸಾರಥ್ಯದ ಔಷಧಿ ರಹಿತ ಚಿಕಿತ್ಸಾಲಯ ಕಾಯಕಲ್ಪ ಮೇ.2ರಂದು ಶುಭಾಭರಂಭಗೊಳ್ಳಲಿದೆಔಷಧಿ ರಹಿತ ಚಿಕಿತ್ಸೆಯನ್ನು. ಸಾರ್ವಜನಿಕರು ಸದುಪಯೋಗ ಪಡೆದು ಕೊಳ್ಳಬಹುದೆಂದು ಪ್ರೊ. ಲಕ್ಷ್ಮಣ್ ತಿಳಿಸಿದ್ದಾರೆ

ಪ್ರಾದೇಶಿಕ ವಾರ್ತೆಗಳು

ಮುಲ್ಲಕಾಡು ಫ್ರೆಂಡ್ಸ್ (ರಿ) : ಮೇ 02 ರಂದು ಯುಗಾದಿ ಉತ್ಸವ -2026, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ

ಹಲವಾರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಾವೂರು ಮುಲ್ಲಕಾಡು ಪರಿಸರದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಕ್ರೀಡೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಊರಿನವರೆಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾದ ಸಂಘಟನೆಯಾದ ಮುಲ್ಲಕಾಡು ಫ್ರೆಂಡ್ಸ್ (ರಿ) 21 ನೇ ವರ್ಷದ ಯುಗಾದಿ ಉತ್ಸವದ ಸಲುವಾಗಿ ವೈವಿಧ್ಯಮಯ ಕಾರ್ಯಕ್ರಮ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, ಅಶಕ್ತರಿಗೆ ಸಹಾಯಧನ, ಮಕ್ಕಳಿಗೆ ಪ್ರೋತ್ಸಾಹ ಧನ, ಪುಸ್ತಕ ವಿತರಣೆ ಹಾಗೂ ಪ್ರಸನ್ನ ಶೆಟ್ಟಿ ಬೈಲೂರು ನಿರ್ದೇಶನದ ಚೈತನ್ಯ ಕಲಾವಿದರು ಬೈಲೂರು ತಂಡದವರಿಂದ ‘ರಾಘು ಮಾಸ್ಟ್ರು’ ಹಾಸ್ಯಮಯ ತುಳು ನಾಟಕ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಆಸರೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈಯವರು ನೆರವೇರಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಜೇಶ್ ಚೌಟ, ಮಾಜಿ ಮಂತ್ರಿ ಕೃಷ್ಣ ಜೆ ಪಾಲೇಮಾರ್, ಬಿಲ್ಲವ ಬ್ರಿಗೇಡ್ ಸಂಸ್ಥಾಪಕ ಸದಾನಂದ ಪೂಜಾರಿ, ಗುತ್ತಿಗೆದಾರ ರಾಜಶೇಖರ್ ಕೋಟ್ಯಾನ್, ಸಮಾಜಸೇವಕ ಅರ್ಜುನ್ ಭಂಡಾರ್ಕರ್ ಅವರ ಘನ ಉಪಸ್ಥಿತಿಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಜನಪ್ರಿಯ ಶಾಸಕ ಡಾ. ವೈ ಭರತ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮವು ಮೇ 02 ರಂದು ಶನಿವಾರ ಸಂಜೆ 6.30 ಕ್ಕೆ ಸರಿಯಾಗಿ ಶ್ರೀ ಅಯ್ಯಪ್ಪ ಭಜನಾ ಮಂದಿರ ಬಳಿ ಇರುವ ಮುಲ್ಲಕಾಡು ಕೇಂದ್ರ ಮೈದಾನದಲ್ಲಿ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಾರ್ಯಕಾರಿ ಸದಸ್ಯ ಸತೀಶ್ ಮುಂಚೂರು, ಕೋಸ್ಟಲ್ ವಲಯ ಬಸ್ ಮಾಲಕರ ಸಂಘದ ಅಧ್ಯಕ್ಷ ನರೇಶ್ ಪೂಜಾರಿ, ಸುಹಾನ ಟ್ರಾವೆಲ್ಸ್ ಮಾಲಕ ಸಯ್ಯದ್ ಅನ್ಸಾರ್, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಚಂದ್ರಶೇಖರ ಪೂಜಾರಿ, ದೀಪಕ್ ಕೆ ಪೂಜಾರಿ, ಬಬಿತ ರವೀಂದ್ರ, ಪ್ರಶಾಂತ್ ಪೂಜಾರಿ, ಸುಶಾಂತ್ ಶೆಟ್ಟಿ, ಗೌತಮ್ ನೊರೋನ್ಹ, ಪ್ರತೀಕ್ ಪೂಜಾರಿ, ವಕೀಲ ಶಿವಪ್ರಸಾದ್ ಶೆಟ್ಟಿ, ರಾಘವೇಂದ್ರ ಉಡುಪ, ಶಬರಿ ಗ್ಯಾರೇಜ್ ಮಾಲಕರಾದ ಎಂ ರಾಘವ ಅವರ ಗೌರವ ಉಪಸ್ಥಿತಿಯಿರಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದ ಸುರತ್ಕಲ್ ನ ಡಿ ಟ್ರಿಕ್ಸ್ ಡಾನ್ಸ್ ಸ್ಟುಡಿಯೋ ಅವರಿಂದ ನೃತ್ಯ ಪ್ರದರ್ಶನವೂ ಜರುಗಲಿದ್ದು, ಕಾರ್ಯಕ್ರಮದ ನಿರೂಪಣೆಯನ್ನು ಖ್ಯಾತ ವಾರ್ತಾ ವಾಚಕಿ ಡಾ| ಪ್ರಿಯಾ ಹರೀಶ್ ನಡೆಸಿಕೊಡಲಿದ್ದಾರೆ. ಮುಲ್ಲಕಾಡು ಪರಿಸರದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಡಿಸ್ಟ್ರಿಂಕ್ಷನ್ ಪಡೆದ 3 ವಿದ್ಯಾರ್ಥಿಗಳಿಗೆ ಹಾಗೂ 10 ಶಾಲಾ ಶಿಕ್ಷಕಿಯರಿಗೆ ಸನ್ಮಾನ, ಸಮಾಜದ ಏಳಿಗೆಗಾಗಿ ದುಡಿದ ಊರಿನ ಪ್ರತಿ ಸಂಘ ಸಂಸ್ಥೆಯ ಪ್ರಮುಖರನ್ನು ಕೂಡಾ ಗೌರವಿಸಲಿದ್ದೇವೆ, ಎಲ್ಲರೂ ಸಮಯಕ್ಕೆ ಸರಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮುಲ್ಲಕಾಡು ಫ್ರೆಂಡ್ಸ್ ನ ಅಧ್ಯಕ್ಷರಾದ ಸುಚೇತನ್ ಜಿ ಕಾವೂರು ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಜೆಪ್ಪುಕುಡ್ಪಾಡಿ, ಜೆಪ್ಪು ಬಪ್ಪಾಲ್ ನಲ್ಲಿ ರಾತ್ರಿಯಿಡೀ ಪವರ್ ಕಟ್ ಮಾಮೂಲು. ಇದು ಸರಿಯಾಗುವುದು ಯಾವಾಗ.

ವರದಿ: ಡಾ.ಅಶೋಕ್ ಶೆಟ್ಟಿ ಬಿ.ಎನ್.BREAKING NEWSಮಂಗಳೂರು – ಮಂಗಳೂರನ್ನು ಸ್ಮಾರ್ಟ್ ಸಿಟಿ ಎನ್ನುತ್ತೇವೆ.ಆದರೆ,ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಜೆಪ್ಪು ವಾರ್ಡ್ ನ ಜೆಪ್ಪು ಕುಡ್ಪಾಡಿ,ಜೆಪ್ಪು ಬಪ್ಪಾಲ್ ನಲ್ಲಿ ಮೆಸ್ಕಾಂ ಲೋಡ್ ಚಾರ್ಜಿಂಗ್, ಲೋಡ್ ಶೆಡ್ಡಿಂಗ್ ಎಂದು ರಾತ್ರಿಯಿಡೀ ಪವರ್ ಕಟ್ ಮಾಡುತ್ತಿದೆ. ಇದು ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ವಲ್ಲ.ಅವರು ಅವರ ಡ್ಯೂಟಿ ಯನ್ನು ಸಮರ್ಪಕವಾಗಿ ಮಾಡುತ್ತಿದ್ದಾರೆ.ಇಲ್ಲಿ ಮೆಸ್ಕಾಂ ಇಂಜಿನಿಯರ್ ಗಳು,ಲೈನ್ ಮೆನ್, ಮೆಸ್ಕಾಂ ಸಿಬ್ಬಂದಿಗಳು ಸಮಸ್ಯೆ ಶಮನಕ್ಕಾಗಿ ಪ್ರಾಮಾಣಿಕವಾಗಿ ರಾತ್ರಿ ಪೂರ್ತಿ ಶ್ರಮಿಸುತ್ತಲೇ ಇರುತ್ತಾರೆ.ಆದರೆ,ಪವರ್ ಜಂಪ್ ಆಗಿ ಪವರ್ ಕಟ್ ಆಗುತ್ತಲೇ ಇರುತ್ತದೆ.ಮಂಗಳೂರು ದಕ್ಷಿಣದ ಜನಪರ ಶಾಸಕರಾದ ವೇದವ್ಯಾಸ ಕಾಮತ್ ಅವರು ಪವರ್ ಕಟ್ ಸಮಸ್ಯೆ ಶಮನದ ಬಗ್ಗೆ ಶಾಶ್ವತ ಪರಿಹಾರವನ್ನು ಮೆಸ್ಕಾಂ ಕಂಡುಕೊಳ್ಳುವಂತೆ ಸೂಕ್ತ ವ್ಯವಸ್ಥೆ, ಕ್ರಮ ಜರುಗಿಸುವಂತೆ mp mlas news ಒತ್ತಾಯಿಸುತ್ತದೆ.

ಪ್ರಾದೇಶಿಕ ವಾರ್ತೆಗಳು

ಕನ್ನಡ ಝೇಂಕಾರ ಎಂದರೆ ನಮ್ಮ ಕನ್ನಡ ಭಾಷೆಯ ಮಧುರ ಧ್ವನಿಯ ಪ್ರತಿಫಲನ – ಪ್ರೊ. ಹೆಚ್ ಎನ್ ಆಂಜನೇಯಪ್ಪ.

ಕನ್ನಡದ ಸೊಗಸು ಶ್ರೀಮಂತಿಕೆ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಕನ್ನಡವು ಕೇವಲ ಒಂದು ಭಾಷೆಯಲ್ಲ ಅದು ನಮ್ಮ ಅಸ್ತಿತ್ವ ಅದು ಒಂದು ಸಂಸ್ಕೃತಿ, ಪರಂಪರೆ ಮತ್ತು ಜೀವನ ಶೈಲಿಯ ಪ್ರತೀಕವಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಈ ಭಾಷೆ ಅನೇಕ ಕವಿಗಳು ಸಾಹಿತ್ಯ ಸಾಹಿತ್ಯ ಕರು ಮತ್ತು ಚಿಂತಕರಿಂದ ಬೆಳಗಿದೆ. ಹಳೆಗನ್ನಡ ನಡುಗನ್ನಡ ಮತ್ತು ಹೊಸಗನ್ನಡ ಕವಿಗಳ ಬಗ್ಗೆ ಮಾತನಾಡಿದರು ಈ ಕಾರ್ಯಕ್ರಮವು ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಕನ್ನಡದ ಬಗ್ಗೆ ಆಸಕ್ತಿ ಗೌರವ ಮತ್ತು ಅಭಿಮಾನವನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಮುಖ್ಯಸ್ಥ ಪ್ರೊಫೆಸರ್ ಹೆಚ್ ಎನ್ ಆಂಜನೇಯಪ್ಪ ಹೇಳಿದರು. ಅವರು ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭೀವೃದ್ದಿ ಪ್ರತಿಷ್ಠಾನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಮಂಗಳೂರು ಪುರಭವನದಲ್ಲಿ 25-04- 2026 ರಂದು ಆಯೋಜಿಸಿದ್ದ ಕನ್ನಡ ಝೇಂಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ತಂತ್ರಜ್ಞಾನದಲ್ಲಿ ನಾವು ಇಂಗ್ಲಿಷ್ ಮತ್ತು ಇತರ ಭಾಷೆಗಳೊಂದಿಗೆ ಮುಂದೆ ಸಾಗುತ್ತಿದ್ದರು ತಮ್ಮ ತಾಯಿ ಭಾಷೆಯನ್ನು ಮರೆಯಬಾರದು. ಕನ್ನಡವನ್ನು ದಿನನಿತ್ಯ ಜೀವನದಲ್ಲಿ ಬಳಸುವುದರಿಂದ ಮಾತ್ರ ಅದು ಜೀವಂತವಾಗಿರುತ್ತದೆ. ಈ ಕಾರ್ಯಕ್ರಮದ ಮೂಲಕ ನಾವು ನಮ್ಮ ಕನ್ನಡ ಭಾಷೆಯ ಮೇಲೆ ಇರುವ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸುತ್ತಿದ್ದೇವೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರ ತರುವ ವೇದಿಕೆಯಾಗಿ ಈ ಕಾರ್ಯಕ್ರಮ ಕಾರ್ಯ ನಿರ್ವಹಿಸುತ್ತದೆ. ಹಾಡು ನೃತ್ಯ ಕವನ ನಾಟಕ ಇತ್ಯಾದಿಗಳ ಮೂಲಕ ಕನ್ನಡದ ವೈವಿಧ್ಯತೆಯನ್ನು ನಾವು ಕಾಣಬಹುದು. ಇಂದಿನ ತಂತ್ರಜ್ಞಾನದಲ್ಲಿ ನಾವು ನಮ್ಮ ಭಾಷೆಯನ್ನು ಮರೆಯದೆ ಅದನ್ನು ಉಳಿಸಿ ಬೆಳೆಸುವುದು ಬಹಳ ಮುಖ್ಯ ಮನೆಗಳಲ್ಲಿ ಶಾಲೆಗಳಲ್ಲಿ ಸಾರ್ವಜನಿಕ ಜೀವನದಲ್ಲಿ ಕನ್ನಡವನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ನಾವು ಅದನ್ನು ಜೀವಂತವಾಗಿಡಬಹುದು ಎಂದ ಅವರು ಇಂತಹ ವೈವಿದ್ಯಮಯ ಕಾರ್ಯಕ್ರಮ ಆಯೋಜಿಸಿದ ರಾಣಿ ಪುಷ್ಪಲತಾ ದೇವಿ ಸಾರಥ್ಯದ KSSAP ಕಾರ್ಯ ಅಭಿನಂದನಾರ್ಹ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ತನ್ನ ವಿಶ್ರಾಂತ ಜೀವನದಲ್ಲೂ ಶಾಲಾ ಮಕ್ಕಳ ಬುದ್ಧಿಮತ್ತೆಯನ್ನು ವೃದ್ಧಿಸಲು 1400ಕ್ಕೂ ಹೆಚ್ಚು ಉಪನ್ಯಾಸ ನೀಡಿರುವ /ನೀಡುತ್ತಿರುವ ಬೆಂಗಳೂರಿನ ಓಂಕಾರಪ್ರಿಯ ಬಾಗೇಪಲ್ಲಿ ಅವರಿಗೆ KSSAP ಕನ್ನಡ ಕಣ್ಮಣಿ ಪ್ರಶಸ್ತಿ ಹಾಗೂ ಮಂಗಳೂರಿನ ಸೌಂಡ್ ಇಂಜಿನಿಯರ್ ಗಣೇಶ್ ಬಂಗೇರ ಇವರಿಗೆ ಸೂಪರ್ ಸೌಂಡ್ ಮಾಸ್ಟರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಹಾಯಕ ಪ್ರಾಧ್ಯಾಪಕಿ ಅಕ್ಷಯ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಆಯಿಷಾ ಪೆರ್ನೆ, ಮೂಗಪ್ಪ ಗಾಳೇರ, ಆಕೃತಿ ಐ.ಎಸ್.ಭಟ್, ತನ್ಸೀರಾ ಆತೂರು, ಸುಲೋಚನಾ ನವೀನ್ ಕೊಟ್ಟಾರ, ನಿರೀಕ್ಷಿತಾ ಮಂಗಳೂರು, ರಶ್ಮಿ ಸನಿಲ್, ಸುಖಲತ ಶೆಟ್ಟಿ. ರೇಖಾ ಸುದೇಶ್ ರಾವ್, ವ. ಉಮೇಶ್ ಕಾರಂತ, ಅನಿತಾ ಶೆಣೈ, ಎಂ.ಎ. ಮುಸ್ತಫಾ ಬೆಳ್ಳಾರೆ, ಓಂಕಾರಪ್ರಿಯ ಬಾಗೇಪಲ್ಲಿ, ಮುಂತಾದ ಕವಿಗಳು ತಮ್ಮ ಸ್ವರಚಿತ ಕವನ ವಾಚಿಸಿದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಮ.ನ.ಪಾ. ನಗರ ಯೋಜನಾಧಿಕಾರಿ ನಾಗೇಂದ್ರ ಎನ್. ಕವಿ ಬರಹಗಾರ, ಶಿವಪ್ರಸಾದ್ ಕೊಕ್ಕಡ, ಸಾಮಾಜಿಕ ಚಿಂತಕ ರಂಜನ್ ಕುಮಾರ್, ಸಾಮಾಜಿಕ ಚಿಂತಕ ಗಂಗಾಧರ್ ಗಾಂಧೀ ಭಾಗವಹಿಸಿದ್ದರು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಡಿನಾಡು ಸಾಂಸ್ಕೃತಿಕ ಕಲಾ ತಂಡ ಇವರಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅಲ್ಲದೆ ಗಾಯನದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಗಂಗಾಧರ್ ಗಾಂಧೀ ಬಳಗವು ಬೆಳ್ಳಿ ತೆರೆಯ ಬಂಗಾರದ ಗೀತೆಗಳನ್ನು ಸಾದರ ಪಡಿಸಿತು. ಕನ್ನಡ ಶಿಕ್ಷಕಿ ರೇಖಾ ಸುದೇಶ್ ರಾವ್ ಒಂದೇ ಮಾತರಂ ಗೀತೆ ಹಾಡಿ ಪ್ರಾರ್ಥಿಸಿದರು.ರಶ್ಮಿ ಸನಿಲ್ ನಿರೂಪಿಸಿದರು

Scroll to Top