Author name: editor

ಪ್ರಾದೇಶಿಕ ವಾರ್ತೆಗಳು

ಮಂಗಳೂರು: ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ವಾರ್ಷಿಕೋತ್ಸವ ಸಂಭ್ರಮ

ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನ ವಾರ್ಷಿಕೋತ್ಸವ ಅಕ್ಟೋಬರ್ 12 ರಂದು ರವಿವಾರ ವಿಜೃಂಭಣೆಯಿಂದ ನಡೆಯಿತು.ಹಬ್ಬದ ಸಾಂಭ್ರಮಿಕ ಬಲಿ ಪೂಜೆಯ ನೇತೃತ್ವವನ್ನು ಮಂಗಳೂರು ಧರ್ಮ ಪ್ರಾಂತ್ಯದ ವಿಶ್ರಾಂತ ಬಿಷಪ್ ಅತಿ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿ ಸೋಜಾ ಅವರು ವಹಿಸಿ ವಾರ್ಷಿಕೋತ್ಸವದ ಶುಭಾಶಯಗಳನ್ನು ಸಲ್ಲಿಸಿದರು. ಚರ್ಚ್ ನ ಪೋಷಕಿ ಮದರ್ ತೆರೆಸಾ ಅವರ ಮೌಲ್ಯಾಧಾರಿತ ಜೀವನವನ್ನು ನೆನಪಿಸಿದ ಅವರು ಪ್ರತಿಯೊಬ್ಬ ಭಕ್ತರು ಕೂಡಾ ತಮ್ಮ ಜೀವನದಲ್ಲಿ ತೆರೆಸಾ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳ ಬೇಕೆಂದು ಹೇಳಿದರು.ಪ್ರವಚನ ನೀಡಿದ ಜಪ್ಪು ಸೈಂಟ್ ಜೋಸೆಫ್ ಸೆಮಿನರಿಯ ಮಾಜಿ ರೆಕ್ಟರ್ ವಂದನೀಯ ಫಾ. ಡಾ. ರೊನಾಲ್ಡ್ ಸೆರಾವೋ ಅವರು ಬಡ ಬಗ್ಗರ ಮತ್ತು ನಿರ್ಗತಿಕರ ಸೇವೆ ಮಾಡಿದ ಸಂತ ತೆರೆಸಾ ಅವರ ಬದುಕು ನಮಗೆಲ್ಲ ಮಾದರಿಯಾಗಿದೆ. ಅಂತಹ ಪೋಷಕಿಯನ್ನು ಪಡೆದ ಪಾಲ್ದನೆ ಚರ್ಚ್ ನ ಭಕ್ತರು ಧನ್ಯರು ಎಂದು ಹೇಳಿದರು.ಬಲಿ ಪೂಜೆಯಲ್ಲಿ ಮಂಗಳೂರು ಸಿಟಿ ವಲಯದ ಮುಖ್ಯಸ್ಥ ವಾಮಂಜೂರು ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ಡಾ. ಜೇಮ್ಸ್ ಡಿ ಸೋಜಾ, ಅಂಜೆಲೋರ್ ಗಾರ್ಡಿಯನ್ ಏಂಜೆಲ್ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ಫ್ರೆಡ್ರಿಕ್ ಮೊಂತೇರೊ, ಬಜ್ಜೋಡಿ ಇನ್ಫೆಂಟ್ ಮೇರಿ ಚರ್ಚ್ ನ ವಂದನೀಯ ಫಾ. ಮೆಲ್ವಿನ್ ಡಿ ಸೋಜಾ, ಜಪ್ಪು ಸೆಮಿನರಿಯ ವಂದನೀಯ ಫಾಫೆಲಿಕ್ಸ್ ಮೊಂತೇರೊ, ಮಂಜೇಶ್ವರ ಚರ್ಚ್ ನ ಧರ್ಮ ಗುರು ವಂದನೀಯ ಫಾ. ವಿನ್ಸೆಂಟ್ ಸಲ್ಡಾನ್ಹಾ, ಪಾಲ್ದನೆ ಸಂತ ತೆರೆಸಾ ಚರ್ಚ್ ನ ಡೀಕೋನ್ ರೋವಿನ್ ಲೋಪೆಜ್ ಮತ್ತು ಇತರ ಗುರುಗಳು ಉಪಸ್ಥಿತರಿದ್ದರು. ಪಾಲ್ದನೆ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಬಲಿಪೂಜೆಯಲ್ಲಿ ಭಾಗವಹಿಸಿ ವಾರ್ಷಿಕೋತ್ಸವದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಆಧ್ಯಾತ್ಮಿಕ ಸಂಚಾಲಕಿ ಪ್ರೆಸಿಲ್ಲಾ ಫೆರ್ನಾಂಡಿಸ್ , ಗಾಯನ ಮಂಡಳಿಯ ಅಧ್ಯಕ್ಷೆ ಲಿಝಿ ಫೆರ್ನಾಂಡಿಸ್ ಮತ್ತು ಇತರರು ಉಪಸ್ಥಿತರಿದ್ದರು. ಹಬ್ಬದ ಪಿರ್ಜೆಂತ್ ಫ್ರಾಂಕ್ ಫೆರ್ನಾಂಡಿಸ್ ಅವರನ್ನು ಎಂ.ಸಿ.ಸಿ. ಬ್ಯಾಂಕಿನ ಮಾಜಿ ಅಧ್ಯಕ್ಷ ಮೆಲ್ವಿನ್ ಡಿ ಕುನ್ಹಾ ಅವರೊಂದಿಗೆ ಸನ್ಮಾನಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಕ್ರೀಡಾಕ್ಷೇತ್ರಕ್ಕೆ ಟೊರ್ಪೆಡೋಸ್ ಸಂಸ್ಥೆಯ ಕೊಡುಗೆ ಅಪಾರ-ಯಶ್ಪಾಲ್ ಸುವರ್ಣ

ಉಡುಪಿ-ಇಲ್ಲಿನ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಟೊರ್ಪೆಡೋಸ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್-2025 ವಿದ್ಯುಕ್ತವಾಗಿ ಉದ್ಘಾಟನೆ ನೆರವೇರಿತು.ದೀಪ ಬೆಳಗಿಸಿ ಮಾತನಾಡಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ “ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಬಹಳಷ್ಟು ವರ್ಷಗಳಿಂದ ಹಲವಾರು ಕ್ರೀಡಾಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಸೃಷ್ಟಿಸಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನಾಗಿ ರೂಪಿಸಿದೆ”ಎಂದರು.ಈ ಸಂದರ್ಭ ಉದ್ಯಮಿ ಹಾಗೂ ಕಾಂಗ್ರೆಸ್ ನಾಯಕ ಪ್ರಸಾದರಾಜ್ ಕಾಂಚನ್,ಯುವಜನ‌ ಸಬಲೀಕರಣ ಮತ್ತು ಕ್ರೀಡಾಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ,ಉದ್ಯಮಿ ಅಬ್ದುಲ್ ರೆಹಮಾನ್,ವಕೀಲರಾದ ಗಣೇಶ್ ಕುಮಾರ್ ಮಟ್ಟು,ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಗೌತಮ್ ಶೆಟ್ಟಿ,ಕ್ರೀಡಾಕೂಟ ಪ್ರಮುಖ ಆಯೋಜಕರಲ್ಲೋರ್ವರಾದ ಶಾಲಿನಿ ಶೆಟ್ಟಿ,ಬಿಗ್ ಬೀಟರ್ಸ್ ಮಾಲೀಕ ಸುದೇಶ್ ಶೆಟ್ಟಿ, ರಾಯ್ ರಾಕರ್ಸ್ ನ ಆಲ್ವಿನ್ ಪಿಂಟೋ,ರ‌್ಯಾಕೆಟ್ ರೇಂಜರ್ಸ್ ನ ಗುರುರಾಜ್ ಸಾಲ್ಯಾನ್ ಮತ್ತು ಕಾಶೀರಾಮ್ ಪೈ,ನ್ಯಾಷನಲ್ ಸ್ಮ್ಯಾಷರ್ಸ್ ನ‌ ಅಬ್ದುಲ್ ರೆಹಮಾನ್,ಮಟ್ಟುಮಿತ್ ವಾರಿಯರ್ಸ್ ನ ಗಣೇಶ್ ಮತ್ತು ಅಮಿತ್,ಮಾಲ್ಸಿ ಸ್ಟ್ರೈಕರ್ಸ್ ನ ಚಂದ್ರಕಾಂತ್ ಶೆಣೈ ಮತ್ತು ಗೌತಮ್ ಶೆಣೈ,ಕೋಸ್ಟಲ್ ಸ್ಟಾರ್ ಸುರತ್ಕಲ್ ನ ಅರುಣ್.ಎಮ್.ಡಿಸೋಜಾ,ಮತ್ಸ್ಯರಾಜ್ ಗ್ರೂಪ್ ಮಲ್ಪೆಯ ಅಭಿಜಿತ್ ಕೋಟ್ಯಾನ್,ಗ್ಯಾಲಕ್ಸಿ ಸ್ಪೋರ್ಟ್ಸ್ ನ ಕೃಷ್ಣಮೂರ್ತಿ ಶೇಟ್ ಮತ್ತು ಸದಾನಂದ ನಾವಡ,ಫೆದರ್ ಫೈಟರ್ಸ್ ನ ಆರ್.ಉದಯ್ ಕುಮಾರ್ ಶೆಟ್ಟಿ ಮತ್ತು ರೋಹಿತ್ ಶೆಟ್ಟಿ, ಡೇರಿಂಗ್ ಜಾಗ್ವರ್ಸ್ ನ ಹರ್ಷ ಕುಮಾರ್ ಗೌಡ ಮತ್ತು ಕೋಸ್ಟಲ್ ನೈಲ್ ಮಾಲೀಕರಾದ ಡಾಲ್ಫಿ ಸಾರೆಸ್ ಮತ್ತು ಶಮ್ಶೀರ್ ಉಪಸ್ಥಿತರಿದ್ದರು.ಸುರೇಶ್ ಭಟ್ ಸ್ಪೋರ್ಟ್ಸ್ ಕನ್ನಡ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಕದ್ರಿ ಉದ್ಯಾನವನದಲ್ಲಿ ಸಸ್ಯೋತ್ಸವ

ರೈತ ಕುಡ್ಲ ಪ್ರತಿಷ್ಠಾನ ನೇತೃತ್ವದಲ್ಲಿ ಕದ್ರಿ ಉದ್ಯಾನವನ ದಲ್ಲಿ ಅಕ್ಟೋಬರ್ 17ರಿಂದ 19 ವರೆಗೆ “ಕದ್ರಿ ಸಸ್ಯೋತ್ಸವ -ರೈತ ಮೇಳ” ನಡೆಯಲಿದೆ.ಬೆಳಗ್ಗೆ 8ರಿಂದ ರಾತ್ರಿ 8ವರೆಗೆ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.ಅಕ್ಟೋಬರ್ 17ರಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ದರ್ಶನ್ ಕೆ.ವಿ. ಕಾರ್ಯಕ್ರಮ ಉದ್ಘಾಟಿಸುವರು.ರೈತಕುಡ್ಲ ಪ್ರತಿಷ್ಠಾನ ಅಧ್ಯಕ್ಷ ಭರತ್ ರಾಜ್ ಸೊರಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ದಕ್ಷಿಣ ಕನ್ನಡ ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನರ್ವಡೆ ವಿನಾಯಕ ಕಾರ್ಭಾರಿ ರೈತ ಕುಡ್ಲ ಗೌರವ ಪ್ರಶಸ್ತಿ ಪ್ರದಾನ ಮಾಡುವರು.ಮಂಗಳೂರು ಮಹಾ ನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಮಂಗಳೂರು ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಎಸ್. ಮರಿಯಪ್ಪ,ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೋವಿಂದ ಗೌಡ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಕಾರ್ಯಕಾರಿ ಸದಸ್ಯರಾದ ಜಗನ್ನಾಥ ಗಾಂಭೀರ್, ಜಿ.ಕೆ. ಭಟ್, ರಾಮ ಮೊಗರೋಡಿ, ರೈತಕುಡ್ಲ ಪ್ರತಿಷ್ಠಾನ ಕಾರ್ಯದರ್ಶಿ ಲತೀಶ್ ಭಾಗವಹಿಸುವರು.ಸಸ್ಯೋತ್ಸವದಲ್ಲಿ ಏನಿರಲಿದೆ?ನರ್ಸರಿ ಸಂಸ್ಥೆ ಗಳಿಂದ ಹೂವು, ಅಲಂಕಾರಿಕಾ ಸಸ್ಯಗಳ ಪ್ರದರ್ಶನ ಮಾರಾಟ ಇರಲಿದೆ. ತರಕಾರಿ, ಹಣ್ಣಿನ ಗಿಡಗಳು, ಒಳಾಂಗಣ ಸಸ್ಯ, ಕೈತೋಟ ನಿರ್ಮಾಣಕ್ಕೆ ಪೂರಕ ಗೊಬ್ಬರ, ಯಂತ್ರಗಳು, ಬೀಜಗಳು, ತರಕಾರಿ ಗಿಡಗಳು, ಗ್ರೋ ಬ್ಯಾಗ್ ಮಾರಾಟವಿರಲಿದೆ. ಕಸಿ ಕಟ್ಟುವ ಬಗ್ಗೆ ಉಚಿತ ತರಬೇತಿ ಕಲ್ಪಿಸಲಾಗಿದೆ.ವಿಶೇಷ ಆಕರ್ಷಣೆಯಾಗಿ ಮಣ್ಣಿನ ಮಡಿಕೆ ತಯಾರಿ, ಹಣತೆ ತಯಾರಿ ಪ್ರಾತ್ಯಕ್ಷಿಕೆ, ಬುಟ್ಟಿ ಹೆಣೆಯುವ ಪ್ರಾತ್ಯಕ್ಷಿಕೆ, ಕೈಮಗ್ಗದಿಂದ ಸೀರೆ‌ ತಯಾರಿ ಪ್ರಾತ್ಯಕ್ಷಿಕೆ ಇರಲಿದೆ. ನಗರ ಜೇನು‌ಕೃಷಿಗೆ ಪೂರಕವಾಗಿ ಜೇನುಕೃಷಿ ಮಾಹಿತಿ, ಸ್ಥಳೀಯ ರೈತೋದ್ಯಮಿಗಳು ತಯಾರಿಸಿದ ಉತ್ಪನ್ನಗಳ ಮಾರಾಟ, ಖಾದಿ ಉತ್ಪನ್ನಗಳ ಮಾರಾಟ ಏರ್ಪಡಿಸಲಾಗಿದೆ. ದೀಪಾವಳಿ ‌ಹಬ್ಬಕ್ಕೆ ಅಗತ್ಯವಾದ ಮಣ್ಣಿನ ಹಣತೆ, ಗೂಡುದೀಪ, ಅಲಂಕಾರಿಕ ವಸ್ತುಗಳು ಲಭ್ಯವಿರಲಿದೆ.ಪಾರ್ಕ್ ನಲ್ಲಿ ಶುಕ್ರವಾರ ಮತ್ತು‌ ಶನಿವಾರ ರಕ್ತದೊತ್ತಡ, ಮಧುಮೇಹ ತಪಾಸಣೆ ಶಿಬಿರ‌ ಏರ್ಪಡಿಸಲಾಗುವುದು.ರೈತ‌ ಕುಡ್ಲ ಗೌರವ ಪಡೆಯುವ ರೈತ ಜಾನ್ ಮೊಂತೇರೋ:ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಮುರುವ ನಿವಾಸಿ, ಕಾಯಕವನ್ನೇ ಉಸಿರಾಗಿಸಿಕೊಂಡ ಕರ್ಮಯೋಗಿ, ಬೇಸಾಯ ಹಾಗೂ ಮನೆಯ ಖರ್ಚಿಗಾಗಿ ನೀರಿನ ಸಮಸ್ಯೆ ಎದುರಾದಾಗ ಸುರಂಗಗಳನ್ನು ಕೊರೆದು‌‌ ಜಲ ಸಂಗ್ರಹಿಸಿದ ಸಾಧಕ. ಭತ್ತ, ಅಡಕೆ, ತರಕಾರಿ ಬೆಳೆಯುತ್ತಿರುವ 71 ವರ್ಷದ ಕಾಯಕಯೋಗಿ.ಹಣತೆ ಸಿಂಧೂರಅಕ್ಟೋಬರ್ 18ರಂದು ಹಣತೆ ಸಿಂಧೂರ ವಿಶೇಷ ಕಾರ್ಯಕ್ರಮ ನಡೆಯಲಿದೆ.‌ ಸಾಯಂಕಾಲ 6ಗಂಟೆಗೆ ಭಿನ್ನ ಸಾಮರ್ಥ್ಯದ ಮಕ್ಕಳೊಂದಿಗೆ ದೀಪಾವಳಿ ಆಚರಣೆ ನಡೆಯಲಿದೆ. ಭಿನ್ನ ಸಾಮರ್ಥ್ಯ ದ ಮಕ್ಕಳು ತಯಾರಿಸಿದ ಹಣತೆಯನ್ನು‌ ಸ್ಟಾಲ್ ಗಳಲ್ಲಿ ‌ಮಾರಾಟ ಮಾಡಿ‌ ಮಕ್ಕಳಿಗೆ ‌ಪ್ರೋತ್ಸಾಹ ನೀಡಲಾಗುವುದು.ಪತ್ರಿಕಾಗೋಷ್ಠಿಯಲ್ಲಿ ‌ಉಪಸ್ಥಿತಿ:ಭರತ್ ರಾಜ್, ರೈತಕುಡ್ಲ ಪ್ರತಿಷ್ಠಾನ ಅಧ್ಯಕ್ಷಲತೀಶ್ ಪ್ರತಿಷ್ಠಾನ ದ ಕಾರ್ಯದರ್ಶಿನವೀನ್ ಕುಲಶೇಖರ, ಪ್ರತಿಷ್ಠಾನದ ಸದಸ್ಯ

ಪ್ರಾದೇಶಿಕ ವಾರ್ತೆಗಳು

ಸಿದ್ದಕಟ್ಟೆ ಕೊಡಂಗೆ: ವೀರ ವಿಕ್ರಮ ಜೋಡುಕರೆ ಎರಡನೇ ವರ್ಷದ ‘ ರೋಟರಿ ಕಂಬಳ ‘ಕ್ಕೆ ಚಾಲನೆ. ‘ಕಂಬಳ ಕ್ಕೆ ಅಂತರ್ ರಾಷ್ಟೀಯ ಮಾನ್ಯತೆ’: ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ

ಬಂಟ್ವಾಳ: ದೇಶದಲ್ಲಿ ಸಿಗುವ ಕೆಲವೊಂದು ಜನಪ್ರಿಯ ಆಹಾರ ಮತ್ತು ಪಾನೀಯ ಪೊಟ್ಟಣ ಗಲ್ಲಿ ಕೂಡಾ ದಷ್ಟ -ಪುಷ್ಟ ಕಂಬಳ ಕೋಣಗಳ ಓಟದ ಚಿತ್ರ ಅಳವಡಿಸುವಷ್ಟರ ಮಟ್ಟಿಗೆ ಗ್ರಾಮೀಣ ರೈತರ ಕಂಬಳ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಜನರನ್ನು ಆಕರ್ಶಿಸುತ್ತಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ. ಕೆ. ಹೇಳಿದ್ದಾರೆ. ಇಲ್ಲಿನ ಸಿದ್ದಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆಯಲ್ಲಿ ಭಾನುವಾರ ಏರ್ಪಡಿಸಿದ್ದ ಎರಡನೇ ವರ್ಷದ ‘ರೋಟರಿ ಕಂಬಳ’ ಉದ್ಘಾಟಿಸಿ ಅವರು ಮಾತನಾಡಿದರು.ಲೊರೆಟ್ಟೋ ಹಿಲ್ಸ್ ಸೇರಿದಂತೆ ಬಂಟ್ವಾಳ, ಮೊಡಂಕಾಪು, ಮಂಗಳೂರು ಸೆಂಟ್ರಲ್ ಮತ್ತು ಸಿದ್ದಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಸಹ ಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಕಿರಿಯ ಮತ್ತು ಸಬ್ ಜೂನಿಯರ್ ವಿಭಾಗದಈ ಕಂಬಳ ಕಾರ್ಯಕ್ರಮದಲ್ಲಿಮಾಜಿ ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜಮುಖಿ ಚಟುವಟಿಕೆ ಜೊತೆಗೆ ಪಬ್ಲಿಕ್ ಇಮೇಜ್ ವೃದ್ಧಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ರೋಟರಿ ಕಂಬಳ ಪೂರಕವಾಗಿದೆ ಎಂದರು.ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಭೇಟಿ ನೀಡಿ ಶುಭ ಹಾರೈಸಿದರು.ಲೊರೆಟ್ಟೋ ಹಿಲ್ಸ್ ಕ್ಲಬ್ಬಿನ ಮಾಜಿ ಅಧ್ಯಕ್ಷ ಎಂ. ಪದ್ಮರಾಜ್ ಬಲ್ಲಾಳ್ ಮಾವಂತೂರು ಇವರು ‘ಕಂಬಳ  ಕರೆ ಉದ್ಘಾಟಿಸಿದರು. ಎಡಿಶನಲ್ ಎಸ್ಪಿ ಅನಿಲ್ ಕುಮಾರ್ ಬೊಮ್ಮರೆಡ್ಡಿ,   ಸಿದ್ದಕಟ್ಟೆ ಕೊಡಂಗೆ ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ, ಕಕ್ಯಪದವು ಮೈರ ಕಂಬಳ ಸಮಿತಿ ಅಧ್ಯಕ್ಷ ಸುದರ್ಶನ್  ಬಜ, ರೋಟರಿ ಸಹಾಯಕ ಗವರ್ನರ್ ಡಾ.ಎ.ಜಯ ಕುಮಾರ ಶೆಟ್ಟಿ, ಉಮೇಶ್ ರಾವ್ ಮಿಜಾರು, ಕೆ.ಪದ್ಮನಾಭ ರೈ ಕಲ್ಲಡ್ಕ,ಡಾ. ರಾಜಾರಾಮ್ ಉಪ್ಪಿನಂಗಡಿ, ಪ್ರಮುಖರಾದ ಡಾ. ದೇವದಾಸ್ ರೈ, ನಾರಾಯಣ ಹೆಗ್ಡೆ, ಡಾ. ಶಿವಪ್ರಕಾಶ್,ಲೊರೆಟ್ಟೋ ಕ್ಲಬ್ ಅಧ್ಯಕ್ಷ ವಿಜಯ ಫೆರ್ನಾಂಡಿಸ್, ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ಬಂಟ್ವಾಳ ಕ್ಲಬ್ಬಿನ ಅಧ್ಯಕ್ಷ ಬಸ್ತಿ ಮಾಧವ ಶೆಣೈ, ಸಿದ್ದಕಟ್ಟೆ ಕ್ಲಬ್ಬಿನ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರಿಂಕಿಜೆ, ಮೊಡಂಕಾಪು ಕ್ಲಬ್ಬಿನ ಅಧ್ಯಕ್ಷೆ ಪ್ರೀಮಾ ವೈಲೆಟ್ ಫೆರ್ನಾಂಡಿಸ್, ಮಂಗಳೂರು ಕ್ಲಬ್ಬಿನ ಅಧ್ಯಕ್ಷ ಭಾಸ್ಕರ ರೈ ಕಟ್ಟ  ಶುಭ ಹಾರೈಸಿದರು.  ಪ್ರಮುಖರಾದ ಶ್ರುತಿ ಮಾಡ್ತಾ, ಡಾ.ಆತ್ಮ ರಂಜನ್ ರೈ,ಗಣೇಶ್ ಶೆಟ್ಟಿ ಸಿದ್ದಕಟ್ಟೆ, ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ,ಜಾನ್ ಕೆನ್ಯೂಟ್ ಮಸ್ಕರೆನ್ಹಸ್ ಉಪ್ಪಿನಂಗಡಿ, ಡಾ.ಪ್ರಹ್ಲಾದ್ ಮೈಸೂರು, ಪುಷ್ಪರಾಜ ಹೆಗ್ಡೆ, ಕಿರಣ್  ಹೆಗ್ಡೆ ಮಾಣಿ,ಕಿರಣ್ ಕುಮಾರ್ ಮಂಜಿಲ, ಮೈಕಲ್ ಡಿಕೋಸ್ತ, ಮೋಹನ್ ಕೆ.ಶ್ರೀಯಾನ್ ರಾಯಿ, ಮೊಹಮ್ಮದ್ ಯಾಸೀರ್ ಕಲ್ಲಡ್ಕ, ಟೀನಾ ಡಿಕೊಸ್ತ ಸಿದ್ದಕಟ್ಟೆ,ಪ್ರಸನ್ನ ರಾವ್ ಮೊಡಂಕಾಪು, ವಿಕಾಸ್ ಕೋಟ್ಯಾನ್ ಮಂಗಳೂರು, ರಾಜೇಶ್ ಶೆಟ್ಟಿ ಸೀತಾಳ, ಹರಿಪ್ರಸಾದ್ಶೆಟ್ಟಿ ಕುರುಡಾಡಿ, ರಾಜೇಶ್ ಶೆಟ್ಟಿ ಕೊನೆರೊಟ್ಟು, ಮೈಕಲ್ ಡಿಕೋಸ್ತ,ಹೊನ್ನಯ ಕಾಟಿಪಳ್ಳ,ಪಿ.ಎ.ರಹೀಂ ಬಿ.ಸಿ.ರೋಡ್, ಕೆ.ರಮೇಶ್ ನಾಯಕ್, ಅಲೆಕ್ಸಾಂಡರ್ ಲೋಬೋ, ಶಶಿಧರ ಶೆಟ್ಟಿ ಕಲ್ಲಾಪು,ಸೀತಾರಾಮ ಶೆಟ್ಟಿ, ಹರೀಶ ಶೆಟ್ಟಿ, ಜಿಲ್ಲಾ ತೀರ್ಪುಗಾರ ವಿಜಯ ಕುಮಾರ್  ಕಂಗಿನಮನೆ, ಉಮೇಶ್ ಹಿಂಗಾಣಿ ಮತ್ತಿತರರಿದ್ದರು.    

ಪ್ರಾದೇಶಿಕ ವಾರ್ತೆಗಳು

ಅ.14 ರಂದು ರೆಡ್ ಕ್ರಾಸ್ಸೊಸೈಟಿಯ ಮಹಾ ಸಭೆ

ಮಂಗಳೂರು: ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ ವಾರ್ಷಿಕ ಸಾಮಾನ್ಯ ಸಭೆ ಅ.14 ರಂದು ಬೆಳಗ್ಗೆ 10.30ಕ್ಕೆ ದ.ಕ.ಜಿಲ್ಲಾಧಿಕಾರಿ, ರೆಡ್ ಕ್ರಾಸ್ ಜಿಲ್ಲಾ ಶಾಖೆಯ ಅಧ್ಯಕ್ಷ ದರ್ಶನ್ ಹೆಚ್.ವಿ. ಇವರ ಅಧ್ಯಕ್ಷತೆಯಲ್ಲಿ ರೆಡ್ ಕ್ರಾಸ್ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ನಡೆಯಲಿದೆಎಂದು ಪ್ರಕಟಣೆ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

ಮಂಗಳೂರಿನ ಓಷನ್ ಪರ್ಲ್ ನಲ್ಲಿ ಜಾಗತಿಕ ಕ್ರೀಡೋತ್ಸವದ ಪದಾಧಿಕಾರಿಗಳ ಪೂರ್ವಭಾವಿ ಸಭೆ

ಅಖಿಲ ಭಾರತ ಬಿಲ್ಲವರ ಯೂನಿಯನ್ ರಿಜಿಸ್ಟರ್ಡ್ ಮಂಗಳೂರು ಇದರ ವತಿಯಿಂದ ಜಾಗತಿಕ ಬಿಲ್ಲವರ ಕ್ರೀಡೋತ್ಸವದ ಪದಾಧಿಕಾರಿಗಳ ಪೂರ್ವಭಾವಿ ಸಭೆಯ ಉದ್ಘಾಟನೆಯನ್ನು ತಾರೀಕು 5 ರಂದು ನಿವೃತ್ತ ಎಸ್ ಪಿ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಗೌರವಾಧ್ಯಕ್ಷರಾದ, ಪೀತಾಂಬರ ಹೆರಾಜೆ ಯವರು ಮಂಗಳೂರಿನ ಓಷನ್ ಪರ್ಲ್ ಸಭಾಭವನದಲ್ಲಿ ಉದ್ಘಾಟಿಸಿ 2026 ಜನವರಿ 18ರಂದು ಮಂಗಳೂರು ನೆಹರು ಮೈದಾನದಲ್ಲಿ ನಡೆಯುವ ಜಾಗತಿಕ ಮಟ್ಟದ ಬಿಲ್ಲವ ಸಮಾಜದ ಮಹಿಳೆಯರು ಮತ್ತು ಮಹನೀಯರಿಗಾಗಿ ನಡೆಯುವ ಕ್ರೀಡಾಕೂಟದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕೆಂದು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷರಾದ ಶ್ರೀ ನವೀನ್ ಚಂದ್ರ ಡಿ ಸುವರ್ಣ ರವರು ಸ್ವಾಗತಿಸಿ, ಪ್ರಸ್ತಾವಿಸುತ್ತಾ ಇದೊಂದು ಐತಿಹಾಸಿಕ ಸಮಾರಂಭ ಈ ಕ್ರೀಡಾಕೂಟದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದ ಕ್ರೀಡಾಸ್ಪರ್ಧಿಗಳು ಭಾಗವಹಿಸಬೇಕೆಂದು ತಿಳಿಸಿದರು.ಕ್ರೀಡಾ ಪ್ರಧಾನ ಸಂಚಾಲಕರಾದ ಪುರುಷೋತ್ತಮ ಪೂಜಾರಿಯವರು ಕ್ರೀಡೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಜೀವನ್ ರವರು ವರದಿಯನ್ನು ಯಾಚಿಸಿದರು,ವೇದಿಕೆಯಲ್ಲಿ ಕ್ರೀಡಾ ಸಂಚಾಲಕರಾದ ಶ್ರೀ ಸದಾನಂದ ಪೂಜಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಸುಮಲತಾ ಎನ್ ಸುವರ್ಣ, ಉಪಾಧ್ಯಕ್ಷರುಗಳಾದ ಶ್ರೀ ಕೆಟಿ ಸುವರ್ಣ, ಶ್ರೀ ಲೋಕನಾಥ್ ಅಮೀನ್ ಕೋಶಾಧಿಕಾರಿ ಶ್ರೀ ಜಯಪ್ರಕಾಶ್,ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಶ್ರೀ ಯೋಗೇಶ್ ಕುಮಾರ್ ಗೇರುಕಟ್ಟೆ, ಸಹಕರಿಸಿದರು. ಸಮಾರಂಭದಲ್ಲಿ ಜಿಲ್ಲೆಯ ಬಿಲ್ಲವ ಸಮಾಜದ ಸಂಘಟನೆಗಳ ಪ್ರಮುಖರು,ದೇವಸ್ಥಾನಗಳ ಮುಖ್ಯಸ್ಥರು ಸಮಾಜದ ಬ್ಯಾಂಕುಗಳ ಅಧ್ಯಕ್ಷರುಗಳು, ಕ್ರೀಡಾಪಟುಗಳು, ರಾಜಕೀಯ, ಸಾಮಾಜಿಕ, ಮತ್ತು ಧಾರ್ಮಿಕ ಪ್ರಮುಖರು ಹಾಜರಿದ್ದರು.

ಪ್ರಾದೇಶಿಕ ವಾರ್ತೆಗಳು

ಅಂಚೆ ಚೀಟಿ ಚಾರಿತ್ರಿಕ ಮಹತ್ವದ ದಾಖಲೆ-ಸುಧಾಕರ ಮಲ್ಯ

ಮಂಗಳೂರು,ಅ.6;ಭಾರತೀಯ ಅಂಚೆ ಇಲಾಖೆ ಅಂಚೆ ಚೀಟಿ ಮೂಲಕ ಚಾರಿತ್ರಿಕ ಮಹತ್ವವನ್ನು ದಾಖಲಿಸಿ ದೇಶ ವಿದೇಶಗಳಲ್ಲಿಪಸರಿಸಿದೆ ಎಂದು ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಸುಧಾಕರ್ ಮಲ್ಯ ತಿಳಿಸಿದ್ದಾರೆ.ಅವರು ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮ ಸವಿ ನೆನಪಿಗಾಗಿ ಪತ್ರಿಕಾ ಭವನ ದಲ್ಲಿ ಹಮ್ಮಿಕೊಂಡ ಅಂಚೆ ಚೀಟಿ ಬಿಡುಗಡೆಮಾಡಿ ಮಾತನಾ ಡುತ್ತಿದ್ದರು.ಅಂಚೆ ಇಲಾಖೆ ವಿವಿಧ ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡುವ ಮೂಲಕ ಜನರಿಗೆ ಅಪಘಾತ ವಿಮಾಯೋಜನೆ, ಆರೋಗ್ಯ ಸುರಕ್ಷಾ ವಿಮಾಯೋಜನೆಯ ಜೊತೆ ಅಂಚೆ ಸೇವೆಯಲ್ಲಿಯೂ ಸುಧಾರಿತ ಸೇವಾ ಸೌಲಭ್ಯಗಳನ್ನು ನೀಡುತ್ತಿದೆ.ಮೈ ಸ್ಟ್ಯಾಂಪ್ ಮೂಲಕ ಚಾರಿತ್ರಿಕ ಮಹತ್ವದ ಘಟನೆಗಳ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳಿಗೆ ಅಂಚೆ ಚೀಟಿ ಬಿಡುಗಡೆ ಮಾಡಲು ಅವಕಾಶ ನೀಡಿದೆ ಎಂದು ಸುಧಾಕರ್ ಮಲ್ಯ ತಿಳಿಸಿದ್ದಾರೆ.ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ ಬಿ ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಹಾರಾಷ್ಟ್ರ ಘಟಕದ ಅಧ್ಯಕ್ಷ ರೋನ್ಸ್ ಬಂಟ್ವಾಳ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾಸರಗೋಡು ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯ ಕಟ್ಟೆ ,ಹಿರಿಯ ಪತ್ರಕರ್ತ ಆನಂದ ಶೆಟ್ಟಿ,ಆರ್.ರಾಮಕೃಷ್ಣ ,ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಮೊದಲಾದ ವರು ಉಪಸ್ಥಿತರಿದ್ದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮ ನಾಳೆ ಅಂಚೆ ಚೀಟಿ ಬಿಡುಗಡೆ

ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮ ಸವಿ ನೆನಪಿಗಾಗಿ ಅಂಚೆ ಚೀಟಿ ಬಿಡುಗಡೆ ಕಾರ್ಯಕ್ರಮ ಅಕ್ಟೋಬರ್ 6 ರಂದು ಬೆಳಿಗ್ಗೆ 10.45 ಗಂಟೆಗೆ ಪತ್ರಿಕಾ ಭವನ ದಲ್ಲಿ ನಡೆಯಲಿದೆ.ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅಂಚೆ ಚೀಟಿ ಬಿಡುಗಡೆ ಮಾಡಲಿದ್ದಾರೆ. ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಭಾರತೀಯ ಅಂಚೆ ಇಲಾಖೆಯ ಹಿರಿಯ ಅಧೀಕ್ಷಕ ಸುಧಾಕರ್ ಮಲ್ಯ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಮುಖ್ಯ ಅತಿಥಿ ಗಳಾಗಿ ಭಾಗವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ ಬಿ ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು ಗೌರವ ಉಪಸ್ಥಿರಿರುವರೆಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇ0ದ್ರ ಕುಂದೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಮಿಥುನ್ ರೈ ಅವರ ಸಮಾಜ ಸ್ಪಂದನೆಯೇ ಸ್ಪೂರ್ತಿ: ಅಶೋಕ್ ಪೂಜಾರ್

ಮೂಲ್ಕಿ: ಸಮಾಜದ ಎಲ್ಲ ವರ್ಗದ ಜನರೊಂದಿಗೆ ಸದಾ ಬೆರೆತು ಸಾಮಾಜಿಕ ಸ್ಪಂದನೆ ನೀಡುವ ಯುವನೇತಾರ ಮಿಥುನ್ ರೈ ಅವರೇ ನಮಗೆ ಸ್ಪೂರ್ತಿಯಾಗಿದ್ದು ಅವರ ಹುಟ್ಟು ಹಬ್ಬದ ದಿನದಂದು ಸಮಾಜದ ಚಿಂತನೆ ಮಾಡುವ ಅವಕಾಶ ನಮಗೆಲ್ಲರಿಗೂ ಸಿಕ್ಕಿದೆ ಎಂದು ಮುಲ್ಕಿ ಬ್ಲಾಕ್ ಯುವ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಅಶೋಕ್ ಪೂಜಾರ್ ಹೇಳಿದರು. ಅವರು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರ ಹುಟ್ಟು ಹಬ್ಬದ ಪ್ರಯುಕ್ತ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಣ್ಣು ಹಂಪಲನ್ನು ವಿತರಿಸಿ ಮಾತನಾಡಿದರುಆಸ್ಪತ್ರೆಯ ಡಾ. ಜತ್ತನ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಂಬಾರ್, ಮೂಲ್ಕಿ ನಗರ ಪಂಚಾಯತ್ ಸದಸ್ಯ ಪುತ್ತುಬಾವ, ರಕ್ಷಿತ್ ಪೂಜಾರಿ ಕೊಳಚಿಕಂಬಳ, ಕಿರಣ್ ಶೆಟ್ಟಿ ಕೆರೆಮನೆ, ದೀಕ್ಷಿತ್ ಪೂಜಾರಿ ಮತ್ತಿತರರು ಇದ್ದರು.

Scroll to Top