Author name: editor

ಪ್ರಾದೇಶಿಕ ವಾರ್ತೆಗಳು

ಇಂದು ಮಿಥುನ್ ರೈ ಅವರ ಹುಟ್ಟುಹಬ್ಬ

ಮಂಗಳೂರು: ಇಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರ ಹುಟ್ಟುಹಬ್ಬ. ಪಿಲಿನಲಿಕೆಯ ಯಶಸ್ವಿ ಸಂಘಟಕರಾಗಿರುವ ಮಿಥುನ್ ರೈ ಅವರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 2019ರಲ್ಲಿ ಕಾಂಗ್ರೆಸ್ ನಿಂದ ಎಂಪಿ ಚುನಾವಣೆಗೆ ಸ್ಪರ್ಧಿಸಿ ಗಮನ ಸೆಳೆದಿದ್ದರು.ಮೂರು ಅವಧಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಯಶಸ್ವಿ ನಾಯಕರಾಗಿ ಜನ ಮನ್ನಣೆ ಗಳಿಸಿದ್ದರು. ಅದ್ಬುತ ಮಾತುಗಾರ, ಸಂಘಟಕ,ಸಮಾಜ ಸೇವಕ,ಸಮರ್ಥ ಯುವ ನಾಯಕರಾಗಿರುವ ಮಿಥುನ್ ರೈ ಅವರ ಹುಟ್ಟುಹಬ್ಬಕ್ಕೆ Mpmla*s news ಶುಭ ಹಾರೈಸುತ್ತದೆ.

ಪ್ರಾದೇಶಿಕ ವಾರ್ತೆಗಳು

ಪರಿಸರದ ಸ್ವಚ್ಛತೆ ಜನತೆಯ ಜವಾಬ್ದಾರಿ-ರವೀಂದ್ರ ಶೆಟ್ಟಿ ಉಳಿದೊಟ್ಟು

ಮಂಗಳೂರು : ಪರಿಸರ ಸ್ವಚ್ಛವಾಗಿದ್ದರೆ ಊರಿನ ಸುಂದರತೆ ಜತೆಗೆ ಸಾಂಕ್ರಾಮಿಕ‌ ರೋಗಗಳು ದೂರವಾಗಿ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಹಾಗಾಗಿ ಸ್ವಚ್ಛತೆ ಕಾಪಾಡಲು ಸಹಕರಿಸುವುದು ನಾಗರಿಕರ ಜವಾಬ್ದಾರಿಯಾಗಿದೆ ಎಂದು ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್, ರೋಶನಿ ನಿಲಯ ಕಾಲೇಜಿನ ಎನ್ ಎಸ್ ಎಸ್ ಘಟಕ ಮತ್ತು ಗ್ಲೋಬಲ್ ಇ ಕೋ ಗ್ರೀನ್ ಫೌಂಡೇಶನ್ ಹಭಾಗಿತ್ವದಲ್ಲಿ ಮಂಗಳವಾರ ನಗರದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ ರೈ ಕಟ್ಟ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್, ರೋಟರಿ ಪದಾಧಿಕಾರಿ ಜಾಕ್ಸನ್ ಅತಿಥಿಗಳಾಗಿ ಭಾಗವಹಿಸಿದ್ದರು.ನಗರದ ತಾಲೂಕು ಪಂಚಾಯತ್ ಕಚೇರಿಯಿಂದ ರೈಲು ನಿಲ್ದಾಣದವರೆಗಿನ ರಸ್ತೆ ಬದಿಯನ್ನುರೋಶನಿ ನಿಲಯ ಕಾಲೇಜಿನ ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿ ಗಳು ಸ್ವಚ್ಛಗೊಳಿಸಿದರು.

ಪ್ರಾದೇಶಿಕ ವಾರ್ತೆಗಳು

ಸಹಕಾರ ರತ್ನ ಡಾ.ಅಗರಿ ನವೀನ್ ಭಂಡಾರಿಯವರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸನ್ಮಾನ

ಪುತ್ತೂರು; ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇವರ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರಗಿದ ಸೌಹಾರ್ದ ಸಹಕಾರಿಗಳ ರಜತಮಹೋತ್ಸವ ಸಮಾವೇಶ ಸಂದರ್ಭದಲ್ಲಿ ಸಹಕಾರರತ್ನ ಪುರಸ್ಕೃತರಾದ, ಆರ್‌ಬಿಐನ ಮಾಜಿ ನಿರ್ದೇಶಕರೂ ಆಗಿರುವ, ಪುತ್ತೂರಿನ ಅಗರಿ ನವೀನ್ ಭಂಡಾರಿಯವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕೇಂದ್ರ ಸಚಿವ ಪ್ರಹಲ್ಲಾದ್ ಜೋಷಿ ಸೇರಿದಂತೆ ಅನೇಕ ಗಣ್ಯರು ಹಾಗೂ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಮಾವೇಶದಲ್ಲಿ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಪೊಳಲಿ ಯಕ್ಷೋತ್ಸವ -2025: ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಪ್ರದರ್ಶನ

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಾಜಾಂಗಣದಲ್ಲಿ ದಿನಾಂಕ 27 ಸೆಪ್ಟೆಂಬರ್ 2025ರಂದು ಯಕ್ಷಕಲಾ ಪೊಳಲಿ ಇದರ 30ನೇ ವರ್ಷದ ಪ್ರಯುಕ್ತ ತ್ರಿಂಶತಿ ಸಂಭ್ರಮದ ‘ಪೊಳಲಿ ಯಕ್ಷೋತ್ಸವ’ವು ಪ್ರಶಸ್ತಿ ಪ್ರದಾನ, ಗೌರವಾರ್ಪಣೆ, ಸಮ್ಮಾನ, ಸಂಸ್ಮರಣೆ ಹಾಗೂ ಯಕ್ಷಗಾನ ಪ್ರದರ್ಶನದೊಂದಿಗೆ ಸಂಪನ್ನಗೊಂಡಿತು. ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದಜಿ ಆಶೀರ್ವಚನ ನೀಡಿದರು. ಪೊಳಲಿ ಯಕ್ಷೋತ್ಸವ ಪ್ರಶಸ್ತಿ:ಸಮಾರಂಭದಲ್ಲಿ ಯಕ್ಷಕಲಾ ಪೋಷಕ, ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಇವರಿಗೆ ‘ಪೊಳಲಿ ಯಕ್ಷೋತ್ಸವ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಅಲ್ಲದೆ ಯಕ್ಷಗಾನ ರಂಗದ ವಿಶಿಷ್ಟ ಸಾಧನೆಗಾಗಿ ಹಿರಿಯ ಕಲಾವಿದರಾದ ಭಾಸ್ಕರ ರೈ ಕುಕ್ಕುವಳ್ಳಿ, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಅಡೂರು ಲಕ್ಷ್ಮೀನಾರಾಯಣ ರಾವ್, ಕೊಳ್ತಿಗೆ ನಾರಾಯಣ ಗೌಡ, ಉಬರಡ್ಕ ಉಮೇಶ್ ಶೆಟ್ಟಿ, ಜಬ್ಬಾರ್ ಸಮೋ ಸಂಪಾಜೆ, ಶಿವರಾಮ ಪಣಂಬೂರು, ಗಿರೀಶ್ ಹೆಗ್ಡೆ ಪುತ್ತೂರು, ಜಗದಾಭಿರಾಮ ಸ್ವಾಮಿ ಪಡುಬಿದ್ರೆ, ನಾ. ಕಾರಂತ ಪೆರಾಜೆ, ನಗ್ರಿ ಮಹಾಬಲ ರೈ, ಮಹಾಬಲೇಶ್ವರ ಭಟ್ ಭಾಗಮಂಡಲ ಹಾಗೂ ಲೇಖಕ ಡಾ. ವಸಂತಕುಮಾರ ಪೆರ್ಲ ಇವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಲಾ ಗೌರವ ಪ್ರದಾನ:ಮಂಗಳೂರಿನ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘ ಹಾಗೂ ಕೈರಂಗಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿಗೆ ಯಕ್ಷಕಲಾ ಗೌರವ ನೀಡಲಾಯಿತು. ಜತೆಗೆ 30 ವರ್ಷಗಳ ಕಾಲ ಸಂಸ್ಥೆಯಲ್ಲಿ ಕಲಾ ಸೇವೆ ನೀಡಿದ 5 ಮಂದಿ ಕಲಾವಿದರಿಗೆ ಗೌರವಾರ್ಪಣೆ, ಇಬ್ಬರು ಸಂಘಟಕರಿಗೆ ಯಕ್ಷ ಪೋಷಕ ಗೌರವ ನೀಡಲಾಯಿತು. ಪ್ರಶಸ್ತಿ ಪುರಸ್ಕೃತರ ಪರವಾಗಿ ಯಕ್ಷಗಾನ ವಿದ್ವಾಂಸ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ಕೃತಜ್ಞತೆ ಸಲ್ಲಿಸಿದರು.ಕೀರ್ತಿಶೇಷ 8 ಮಂದಿ ಕಲಾವಿದರನ್ನು ಸ್ಮರಿಸಿ ಅರ್ಥಧಾರಿ ಉಜಿರೆ ಅಶೋಕ ಭಟ್ ಅವರು ಸಂಸ್ಮರಣ ಭಾಷಣ ಮಾಡಿದರು. ಕದ್ರಿ ನವನೀತ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಜ್ಯೋತಿಷಿ ಕೋಡಿಮಜಲು ಆನಂತಪದ್ಮನಾಭ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು.ಪೊಳಲಿ ಕ್ಷೇತ್ರದ ಪ್ರಧಾನ ಅರ್ಚಕ ಪಿ. ಮಾಧವ ಭಟ್, ಆಡಳಿತ ಮೊಕ್ತಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಯಕ್ಷಗಾನ ಸಂಘಟಕ ಭುಜಬಲಿ ಧರ್ಮಸ್ಥಳ, ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಸ್ಥಾಪಕ ಸತೀಶ್ ಶೆಟ್ಟಿ ಪಟ್ಲ, ಕರ್ನಿರೆ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಪ್ರಭಾಕರ ಸುವರ್ಣ ಕರ್ನಿರೆ, ಬಿಲ್ಲವಾಸ್ ದುಬೈ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಬೆಳಪು, ಬೆಂಗಳೂರಿನ ಉದ್ಯಮಿ ರಾಜೇಂದ್ರ ಕಕ್ಯಪದವು, ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಯಕ್ಷಕಲಾ ಸಂಸ್ಥಾಪಕ ಅ.ನ.ಭ ಪೊಳಲಿ ಉಪಸ್ಥಿತರಿದ್ದರು.ಕಾರ್ಯಕ್ರಮ ಉದ್ಘಾಟನೆ:ಬೆಳಗ್ಗೆ ಯಕ್ಷೋತ್ಸವವನ್ನು ಪೊಳಲಿ ಕ್ಷೇತ್ರದ ಅರ್ಚಕ ಅನಂತ ಪದ್ಮನಾಭ ಭಟ್ ಮತ್ತು ವಿದ್ವಾಂಸ ಡಾ. ಎಂ.ಪ್ರಭಾಕರ ಜೋಶಿ ದೀಪೋಜ್ವಲನ ಮಾಡಿ ಉದ್ಘಾಟಿಸಿದರು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ಭೇಟಿ ನೀಡಿ ಶುಭಹಾರೈಸಿದರು.ಯಕ್ಷಕಲಾ ಪೊಳಲಿ ಸಂಚಾಲಕ ವೆಂಕಟೇಶ ನಾವಡ ಸ್ವಾಗತಿಸಿದರು. ಸಂಯೋಜಕ ಬಿ. ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರ್ವಹಿಸಿದರು.ಯಕ್ಷಗಾನ ಪ್ರದರ್ಶನ:ಪೊಳಲಿ ಯಕ್ಷೋತ್ಸವ ಅಂಗವಾಗಿ ಬೆಳಿಗ್ಗೆ ತೆಂಕುತಿಟ್ಟಿನ ಕಲಾವಿದರಿಂದ ‘ಜ್ವಾಲಾ ಪ್ರತಾಪ’, ‘ವೀರ ಬಬ್ರುವಾಹನ’, ಅಪರಾಹ್ನ ‘ದಮಯಂತಿ ಪುನಃ ಸ್ವಯಂವರ’ ಹಾಗೂ ರಾತ್ರಿ ಬಡಗು ತಿಟ್ಟಿನ ಕಲಾವಿದರಿಂದ ‘ಮಧುರಾ ಮಹೀಂದ್ರ’ ಯಕ್ಷಗಾನ ಪ್ರದರ್ಶನಗೊಂಡಿತು.

ಪ್ರಾದೇಶಿಕ ವಾರ್ತೆಗಳು

St. Joseph’s University Holds Second Annual Convocation

Bengaluru, September 27: St. Joseph’s University held its second annual convocation ceremony on Saturday, beginning at 10:00 a.m. with a procession of rank holders and special awardees, followed by the ceremonial march of dignitaries. The event was presided over by the Honourable Governor of Karnataka, Shri Thaawar Chand Gehlot, in the presence of the Honourable Minister for Higher Education, Dr M.C. Sudhakar, and Chief Guest Dr Jarugu Narasimha Moorthy, Director, Indian Institute of Science Education and Research (IISER), Thiruvananthapuram. Rev. Fr. Dionysius Vaz, SJ (Chancellor), and Rev. Dr Victor Lobo, SJ (Vice-Chancellor), were also present.A total of 2,747 students graduated this year, comprising 2,009 undergraduates and 738 postgraduates. Among them, 143 rank holders were recognised, including 99 undergraduates and 44 postgraduates. Additionally, 40 special prizes were awarded to outstanding achievers across academics, NCC, sports, and co-curricular fields.Dr M.C. Sudhakar ( Minister for Higher Education) congratulated all the medal winners, mentioning the support from their parents and the faculty of the institution. “Opportunities don’t come to our doorsteps. We need to run behind the opportunities, make the best possible chances and see how we can progress in this competitive world”. He added. In his convocation address, Dr J. N. Moorthy urged graduates to dream big, leverage emerging technologies, and pursue innovations to address pressing challenges such as green energy, waste management, healthcare, cybersecurity, and artificial intelligence. “No one anticipated there would be something called software when I graduated in 1994. Today, it has transformed lives. This is the change I want you to envision—pursue everything with passion and resilience and bring pride to your parents, institution, and nation,” he said. Honourable Governor Shri Thaawar Chand Gehlot, in his presidential remarks, reminded graduates to balance professional success with civic responsibility. “Respect your teachers and parents—they have shaped your success. Always remain grateful to them, and contribute to building a developed nation and serving humanity,” he said.Other dignitaries present included Dr. Godwin D’Souza (Controller of Examinations), Dr. Syed Wajeed (Registrar), Dr. Ronald J. Mascarenhas (Pro Vice-Chancellor), Rev. Dr. Swebert D’Silva, SJ (Pro Chancellor), Dr. Regina Mathias (Pro Vice-Chancellor), and Rev. Fr. Arun P. D’Souza, SJ (Finance Officer).Established in 1882, St. Joseph’s University marked 143 years of its legacy this year. The convocation paid tribute to its founders’ vision, the dedication of faculty, the achievements of students, and the support of parents and alumni, reaffirming the institution’s role as one of India’s oldest centres of higher education.

ಪ್ರಾದೇಶಿಕ ವಾರ್ತೆಗಳು

ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ದ್ವಿತೀಯ ಪದವಿ ಪ್ರದಾನ ಸಮಾರಂಭ

ಬೆಂಗಳೂರು, ಸೆಪ್ಟೆಂಬರ್ 27: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ದ್ವಿತೀಯ ಪದವಿ ಪ್ರದಾನ ಸಮಾರಂಭ ಶನಿವಾರ ದಂದು ನಡೆಯಿತು. ಮೊದಲಿಗೆ ರ‍್ಯಾಂಕ್ ಹೋಲ್ಡರ್ಸ್ ಮತ್ತು ವಿಶೇಷ ಪ್ರಶಸ್ತಿ ವಿಜೇತರ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ|ಎಂ.ಸಿ. ಸುಧಾಕರ್, ಹಾಗೂ ಮುಖ್ಯ ಅತಿಥಿ ಡಾ. ಜೆ.ಎನ್ .ಮೂರ್ತಿ ,ನಿರ್ದೇಶಕರು, ಐಐಎಸ್ಇಆರ್ , ತಿರುವನಂತಪುರಂ. ಚಾನ್ಸಲರ್ ವಂದನೀಯ ಡೈನೋಸಿಯಸ್ ವಾಸ್, ಉಪಕುಲಪತಿ ವಂದನೀಯ ವಿಕ್ಟರ್ ಲೋಬೋ ಉಪಸ್ಥಿತರಿದ್ದರುಒಟ್ಟು 2,747 ವಿದ್ಯಾರ್ಥಿಗಳು ಪದವಿ ಪಡೆದಿದ್ದು, 2,009 ಮಂದಿ ಪದವಿ ಹಾಗೂ 738 ಮಂದಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 143 ಮಂದಿ ರ‍್ಯಾಂಕ್ ಹೋಲ್ಡರ್ ಗಳಾಗಿದ್ದು , 40 ಮಂದಿ ವಿಶೇಷ ಪ್ರಶಸ್ತಿ ವಿಜೇತರನ್ನು ಗೌರವಿಸಲಾಯಿತು. ಮುಂದುವರಿದು ಮಾತನಾಡಿದ ಡಾ| ಎಂ.ಸಿ. ಸುಧಾಕರ್, ವಿದ್ಯಾರ್ಥಿಗಳ ಯಶಸ್ಸಿಗೆ ಪೋಷಕರು ಮತ್ತು ಶಿಕ್ಷಕರ ಬೆಂಬಲ ಮುಖ್ಯವೆಂದು ತಿಳಿಸಿದರು. “ಅವಕಾಶಗಳು ನಮ್ಮ ಮನೆ ಬಾಗಿಲಿಗೆ ಬರುವುದಿಲ್ಲ, ನಾವು ಅವನ್ನು ಹುಡುಕಬೇಕು ಮತ್ತು ನಮ್ಮ ಶ್ರಮದಿಂದ ಮುನ್ನಡೆಯಬೇಕು” ಎಂದು ಹೇಳಿದರು.ಡಾ. ಜೆ.ಎನ್. ಮೂರ್ತಿ ವಿದ್ಯಾರ್ಥಿಗಳನ್ನು ದೊಡ್ಡ ಕನಸು ಕಾಣಲು ಮತ್ತು ಹಸಿರು ಶಕ್ತಿ, ಆರೋಗ್ಯ, ತ್ಯಾಜ್ಯ ನಿರ್ವಹಣೆ, ಕೃತಕ ಬುದ್ಧಿಮತ್ತೆ ಮುಂತಾದ ಕ್ಷೇತ್ರಗಳಲ್ಲಿ ಆವಿಷ್ಕಾರಗಳತ್ತ ಗಮನಹರಿಸಲು ಕರೆ ನೀಡಿದರು. ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, “ವೃತ್ತಿಜೀವನದ ಯಶಸ್ಸಿನ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡುವುದು ಮುಖ್ಯ. ಪೋಷಕರು ಮತ್ತು ಶಿಕ್ಷಕರಿಗೆ ಸದಾ ಕೃತಜ್ಞರಾಗಿರಿ” ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಇತರ ಅಧಿಕಾರಿಗಳು ಮತ್ತು ಅತಿಥಿಗಳು ಭಾಗವಹಿಸಿದ್ದರು. 1882ರಲ್ಲಿ ಸ್ಥಾಪನೆಯಾದ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ ಈ ವರ್ಷ ತನ್ನ ಸಾರ್ಥಕ ಸೇವೆಯ 143 ಸಂವತ್ಸರಗಳನ್ನು ಪೂರೈಸುತ್ತಿದೆ.

ಪ್ರಾದೇಶಿಕ ವಾರ್ತೆಗಳು

ಶರಧಿ ಪ್ರತಿಷ್ಠಾನದಿಂದ ಮುದ್ದು ಶಾರದೆ ಸ್ಪರ್ಧೆ:’ನವರಾತ್ರಿ ಆಚರಣೆ ಸಂಸ್ಕೃತಿಯ ಪ್ರತೀಕ’-ಸಂಸದ ಕ್ಯಾ.ಬ್ರಿಜೇಶ್ ಚೌಟ

ಮಂಗಳೂರು: ದೇವಿ ಆರಾಧನಾ ಪರಂಪರೆಯ ನವರಾತ್ರಿ ಹಬ್ಬ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ.‌ ದಸರಾ ಆಚರಣೆ ನಾಡಿನ ಏಕತೆಯ ಸಂಕೇತವಾಗಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.ಶರಧಿ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಶಾರದಾ ವಿದ್ಯಾಲಯದ ಸಹಯೋಗದಲ್ಲಿ ದಸರಾ ಮಹೋತ್ಸವದ ಅಂಗವಾಗಿ‌ ನಗರದ ಶಾರದಾ ವಿದ್ಯಾಲಯದಲ್ಲಿ‌ ಭಾನುವಾರ ನಡೆದ 3ನೇ ವರ್ಷದಮುದ್ದು ಶಾರದೆ ಹಾಗೂ ನವದುರ್ಗೆ ವೇಷ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.ಮುಖ್ಯ ಅತಿಥಿಯಾಗಿದ್ದ ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾ ನಾಯಕ್ ಮಾತನಾಡಿ ಮುದ್ದು ಶಾರದೆ ಸ್ಪರ್ಧೆಯ ಮೂಲಕ ಎಳೆಯ ಮಕ್ಕಳಿಗೆ ವೇದಿಕೆ ಏರಲು ಅವಕಾಶ ಕಲ್ಪಿಸಿರುವುದು ಒಂದು ಉತ್ತಮ ಪ್ರಯತ್ನವಾಗಿದೆ ಎಂದರು.ಮಾಜಿ ಕಾರ್ಪೋರೇಟರ್ ಕಿರಣ್ ಕುಮಾರ್ ಕೋಡಿಕಲ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಉದ್ಯಮಿಗಳಾದ ಡಾ.ಪ್ರತಾಪ್ ಮಧುಕರ ಕಾಮತ್, ಡಿ. ರಮೇಶ್ ನಾಯಕ್, ಗಣೇಶ ಎನ್. ಶರ್ಮ, ಸೌತ್ ಕೆನರಾ ಫೋಟೋಗ್ರಾಫರ್ಸ್ ಸಹಕಾರ ಸಂಘದ ಅಧ್ಯಕ್ಷ ಕೆ.ವಾಸುದೇವ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಶರಧಿ ಪ್ರತಿಷ್ಠಾನದ ಕಾರ್ಯದರ್ಶಿ ಪುನೀಕ್ ಶೆಟ್ಟಿ, ಸದಸ್ಯರಾದ ಜಗದೀಶ್ ಶೆಟ್ಟಿ ಬಿಜೈ, ದಿನೇಶ್ ಹೊಳ್ಳ ಉಪಸ್ಥಿತರಿದ್ದರು.ಚೇತನ್ ಶೆಟ್ಟಿ ಪಿಲಿಕುಳ ಕಾರ್ಯಕ್ರಮ‌ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ನಂಜನಗೂಡು ಶ್ರೀಕoಟೇಶ್ವರ ದೇವಸ್ಥಾನ ವೇದಿಕೆಯಲ್ಲಿ ಜನಮನ ಸೂರೆಗೊಂಡ ಗಂಗಾಧರ್ ಗಾಂಧೀ ಗೀತಾ ಗಾಯನ ತಂಡ.

ಮೈಸೂರು -ವಿಶ್ವ ಪ್ರಸಿದ್ಧ ದಸರಾದ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ವೇದಿಕೆಯಲ್ಲಿ 29.09. 2025 ರಾತ್ರಿ ಗಂಗಾಧರ್ ಗಾಂಧಿ ಮತ್ತು ತಂಡದ ಕನ್ನಡ ಗೀತೆಗಳು ಸೇರಿದ ಜನಮನ ರಂಜಿಸಿ ನೆರೆದ ಪ್ರೇಕ್ಷಕರ ಮನಸೂರೆ ಗೊಳ್ಳುವಂತೆ ಮಾಡಿತು.ಸುಮಾರು ಒಂದೂವರೆ ಗಂಟೆಗಳ ಕಾಲ ಕನ್ನಡ ಗೀತಾ ಗಾಯನ ಕಾರ್ಯಕ್ರಮದಲ್ಲಿ ಬೆಳ್ಳಿ ತೆರೆಯ ಬಂಗಾರದ ಗೀತೆಗಳನ್ನು ಸಾದರ ಪಡಿಸಿದರು. ಲಕ್ಷ ಕೋಟಿ ನೀಡಿ ಸೆಲೆಬ್ರಿಟಿ ಗಳನ್ನು ಕರೆತಂದು ಕಾರ್ಯಕ್ರಮಗಳನ್ನು ಆಯೋಜಿಸುವ ಸರಕಾರ ಗಂಗಾಧರ್ ಗಾಂಧೀಯಂತಹ ಅಪ್ಪಟ ದೇಸಿ ಪ್ರತಿಭೆಗಳಿಗೆ ಅವಕಾಶ ನೀಡಿದರೆ ನಿಜವಾದ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಕೊಟ್ಟಂತೆ ಆದೀತು ಎಂಬ ಮಾತುಗಳು ಕೇಳಿಬಂದವು. *ಈ ದೇಶ ಚೆನ್ನಾ ಈ ಮಣ್ಣು ಚಿನ್ನಾ” ಎಂಬ ಗೀತೆಯೊಂದಿಗೆ ಆರಂಭಗೊಂಡ ಕನ್ನಡ ಗೀತಾ ಗಾಯನ ಕನ್ನಡ ಚಿತ್ರ ರಂಗದ ಅತ್ಯಂತ ಜನಪ್ರಿಯ ಗೀತೆ “ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ ನಾವಿರುವ ತಾಣವೇ ಗಂಧದ ಗುಡಿ” ಗೀತೆಯೊಂದಿಗೆ ವಿರಮಿಸಿದ ಗೀತಾಗಾಯನದಲ್ಲಿ ಮೈಸೂರಿನ ಸುಜಾತ ಜಯಕುಮಾರ, ದೃತಿ ಪಿ.ಶೆಟ್ಟಿ, ಸುಶೇಷ ಬಾಲಾಜಿ ಕನ್ನಡ ಚಿತ್ರ ರಂಗದ ಮಾಧುರ್ಯ ಪ್ರದಾನ ಗೀತೆಗಳಿಗೆ ಧ್ವನಿಯಾದರು. ರೇಷ್ಮಾ ಶೆಟ್ಟಿ ಗೊರೂರು ನಿರೂಪಣೆಯಲ್ಲಿ ಸುಂದರವಾಗಿ ಮೂಡಿಬಂಧ ಈ ಕಾರ್ಯಕ್ರಮಕ್ಕೆ ಮೈಸೂರಿನ ಯುವ ದಸರಾ ವೇದಿಕೆ ನೀಡಬೇಕಾಗಿತ್ತು ಎಂಬ ಮಾತುಗಳು ಕೇಳಿ ಬಂದವು. ಗಂಗಾಧರ್ ಗಾಂಧೀ ತಂಡ ನಿರಂತರ 12 ಗಂಟೆಗಳ ಹಾಡುವ ಮೂಲಕ ಎರಡು ವಿಶ್ವ ದಾಖಲೆ ಮಾಡಿರುವ ವಿಷಯ ಅರಿತ್ತಿದ್ದ ರಾಷ್ಟ್ರೀಯ ಬಸವ ದಳ ಮಂಡ್ಯ, ಅಧ್ಯಕ್ಷ, ನ್ಯಾಯವಾದಿ ಎಂ ಗುರುಪ್ರಸಾದ ಮಂಡ್ಯ ಮತ್ತು ಅವರ ಬಳಗ ಗಂಗಾಧರ್ ಗಾಂಧೀ ಮತ್ತು ತಂಡವರಾದ ಗಾಯಕಿ ಸುಜಾತಾ ಜಯಕುಮಾರ, ಗಾಯಕಿ ದೃತಿ ಪಿ.ಶೆಟ್ಟಿ ಹಾಗೂ ನಿರೂಪಕಿ ರೇಷ್ಮಾ ಶೆಟ್ಟಿ ಗೊರರುರನ್ನು ರೇಷ್ಮೆ ಶಾಲು, ಮೈಸೂರು ಪೇಟೆ, ಹಾರ ಮತ್ತು ಸ್ಮರಣಿಕೆ ನೀಡಿ ಗೌರವಿಸಿತು.ಉಪನ್ಯಾಸಕಿ ಮಂಜುಳಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರೂಪಕಿ ಸವಿತಾ ಮತ್ತು ವೇದಿಕೆ ಉಸ್ತುವಾರಿ ಆದರ್ಶ್ ಮತ್ತಿತರರು ಉಪಸ್ಥಿತರಿದ್ದರು.ಡಾ.ಕೊಲಚಪ್ಪೆ ಗೋವಿಂದ ಭಟ್.

ಪ್ರಾದೇಶಿಕ ವಾರ್ತೆಗಳು

Rohan Corporation Distributes Safety Shoes to the Civic Workers of Mangaluru City Corporation

Mangaluru: In a step towards ensuring health and safety, the prestigious builder Rohan Corporation organized a social initiative on September 29, distributing 100 pairs of safety shoes to the civic workers of Mangaluru City Corporation.The program was held at the Comissionar’s office of Mangaluru City Corporation. Mr Ravichandra Nayak, Commissioner of the City Corporation, was present at the event. Mr Maxim Lobo, Marketing Manager at Rohan Corporation, handed over the safety shoes to the civic workers.“Civic workers are truly the backbone of our society. They are the silent heroes whose dedication and hard work keep our city clean, safe, and functioning every day. Ensuring their safety through initiatives like this is not just a responsibility, but a heartfelt commitment to honour their contribution and well-being,” said Mr Maxim.The City Commissioner appreciated Rohan Corporation’s exemplary social welfare initiative focusing on worker safety and encouraged more such efforts in the future.

Scroll to Top