ಎಐಕೆಎಂಸಿಸಿ ಪುತ್ತೂರು ತಾಲೂಕು ಇದರ ಅಧ್ಯಕ್ಷರಾಗಿ ಅಬೂಬಕ್ಕರ್ ಮುಲಾರ್ ಆಯ್ಕೆ
ಅಲ್ ಇಂಡಿಯಾ ಕೇರಳ ಮುಸ್ಲಿಂ ಕಲ್ಟ್ ರಲ್ ಸೆಂಟರ್ AIKMCC ಪುತ್ತೂರು ತಾಲೂಕು ಇದರ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷರಾಗಿ ಅಬೂಬಕ್ಕರ್ ಮುಲಾರ್ ಆಯ್ಕೆಯಾಗಿದ್ದಾರೆ
ಅಲ್ ಇಂಡಿಯಾ ಕೇರಳ ಮುಸ್ಲಿಂ ಕಲ್ಟ್ ರಲ್ ಸೆಂಟರ್ AIKMCC ಪುತ್ತೂರು ತಾಲೂಕು ಇದರ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷರಾಗಿ ಅಬೂಬಕ್ಕರ್ ಮುಲಾರ್ ಆಯ್ಕೆಯಾಗಿದ್ದಾರೆ
2025ನೇ ರಾಜ್ಯೋತ್ಸವಪ್ರಶಸ್ತಿ ಪುರಸ್ಕೃತಅಬುಬಕ್ಕರ್ ಮುಲಾರ್1967ನೇ ಜುಲೈ 17ರಂದು ಪುತ್ತೂರು ತಾಲೂಕು ಮುಂಡೂರು ಗ್ರಾಮದ ಮುಲಾರ್ಮನೆತನದಇದಿನಬ್ಬ.ಜೈನಬ. ದಂಪತಿಗಳಎರಡನೆಯ ಪುತ್ರನಾಗಿವೃತ್ತಿಯಲ್ಲಿಕೃಷಿಕ.ಹಾಗುಬೋರ್ವೆಲ್ಉದ್ಯಮ1995 ರಲ್ಲಿಸ್ಥಾಪಿಸಿಸತತ 30ವರ್ಷಗಳ ಸಮಾಜ.ಸೇವೆಯ.ಮುಖಾಂತರ ಸಾರ್ವಜನಿಕ. ಪರಿಚಯಸ್ಥಗಿದ್ದು1990ರಲ್ಲಿನವೋದಯ ಯುವಕ ಮಂಡಲ ಮುಂಡೂರುಇದರ ಉಪಾಧ್ಯಕ್ಷರಾಗಿ👉 ಪುತ್ತೂರು ಕೋಟಿ ಚೆನ್ನಯ ಜೋಡು ಕರೆ ಕಂಬಳಕಂಬಳಸಮಿತಿಯ ಸದಸ್ಯರಾಗಿಹಿರಿಯರ ಕಾಲದಿಂದಲೇ ಕಂಬಳ.ಪ್ರಸಸ್ಥಿ. ವಿಜೇತ ಕೋಣಗಳಮಾಲೀಕರ. ಕುಟುಂಬಸ್ಥರಾಗಿ.*👉 ಪುತ್ತೂರು ಮಾಲಿಂಗೇಶ್ವರದೇವಸ್ಥಾನದಉಚಿತ.ಬೋರ್ವೆಲ್ ಕೊರೆಸಿ.ಎದುರಿನ.ಗದ್ದೆಹಾಗೂ.ರಥ ಬೀದಿಗೆ ಮಣ್ಣು ಹಾಕಿ.ಸಮತಟ್ಟುಮಾಡಿಕೊಟ್ಟವವರಾಗಿದ್ದು👉2017.ರಲ್ಲಿ ಟ್ರಸ್ಟ್ ಮುಖಾಂತರಖಾಸಗಿ.ಉಚಿತ. ಅಂಬುಲೆನ್ಸ್. ಬಿಡುಗಡೆ.👉ಕಳೆದ ಹತ್ತು ವರ್ಷಗಳಲ್ಲಿ. ಕುಡಿಯುವನೀರಿಗೆ ಅಭಾವವಾದಾಗಗ್ರಾಮಾಂತರ ಪ್ರದೇಶದ.ಸರ್ವಧರ್ಮೀಯರಮನೆಬಾಗಿಲಿಗೆಟೇಂಕರ್ ಮೂಲಕಉಚಿತ.ನೀರು.ವಿತರಣೆ*👉ಕಾರುಣ್ಯ ಸೇವಾ ಟ್ರಸ್ಟ್ ಮಂಗಳೂರು ಇದರ ಸದಸ್ಯರಾಗಿ. ಉಚಿತ ವೈದ್ಯಕೀಯ ಸೇವೆ 👉 ವೈದ್ಯರುಗಳ ಪ್ರತಿಭಟನೆಯ ಸಮಯದಲ್ಲಿ ಹಲವಾರು ಜನರನ್ನು ತುರ್ತು ಚಿಕಿತ್ಸಾ ಸಂದರ್ಭದಲ್ಲಿಆಂಬುಲೆನ್ಸ್. ಮುಖಾಂತರ ಉಚಿತವಾಗಿಜಿಲ್ಲಾ ಆಸ್ಪತ್ರೆಗಳಿಗೆ. ದಾಖಲಿಸಿದವರಾಗಿ 👉AIKMCC.ಪುತ್ತೂರು ತಾಲೂಕುಅಧ್ಯಕ್ಷನಾಗಿರೋಗಿಗಳಿಗೆ ಉಚಿತ ಆಂಬುಲೆನ್ಸ್ಮುಖಾಂತರ ವೈದ್ಯಕೀಯ ನೆರವು.👉 ಮಡಿಕೇರಿ ಜೋಡುಪಲ್ಲ.ದುರಂತ. ಭೂಮಿಯಲ್ಲಿಹಾಗೂ ಹಲವಾರು ನೆರೆ ದುರಂತ ಸಮಯದಲ್ಲಿಅಧಿಕಾರಿಗಳೊಂದಿಗೆ. ಸಂಘಟನೆಗಳ ಉಸ್ತುವಾರಿ ವಹಿಸಿಸಹಕರಿಸಿದ ಸಂದರ್ಭಸರಕಾರ. ಜಿಲ್ಲಾಡಳಿತ. ರಂಗ ಸಂಸ್ಥೆಗಳಿಂದ ನಿಸ್ವಾರ್ಥ ಸೇವಾ ಪ್ರಶಸ್ತಿ ಪಡೆದವರಾಗಿ 👉ಲಾಕ್.ಡೌನ್.ಸಮಯದಲ್ಲಿ ಸಂಕಷ್ಟದಲ್ಲಿರುವವರಿಗೆ.ಆಹಾರ ಕಿಟ್ಟುಮತ್ತು. ವಾಹನದ ಬಾಡಿಗೆ.ರಹಿತಮೆಡಿಸಿನ್ ಸಪ್ಲೈ.*👉 ಲಾಕ್ ಡೌನ್ ಸಮಯದಲ್ಲಿಎಲ್ಲಾ ಬಟ್ಟೆ ಅಂಗಡಿಗಳು ಮುಟ್ಟಿದ ಸಮಯದಲ್ಲಿಎಲ್ಲಾ. ಧರ್ಮದವರಿಗೂ ಶವ ಸಂಸ್ಕಾರದಭಟ್ಟೆ. ಶುಚಿತ್ವ ಸಾಮಗ್ರಿ.ಸೇಕರಿಸಿಉಚಿತವಾಗಿ ಮರಣದ ಮನೆಗೆರವಾನಿಸಿದವರಾಗಿದ್ದು👉ಕೊರೋನಾ ಸಮಯದಲ್ಲಿಮರಣ.ಹೊಂದಿದ.ಶವ ಸಂಸ್ಕಾರಕ್ಕೆಮನೆಯವರು ಕುಟುಂಬಸ್ಥರು ಹಿಂಜರಿಯುತ್ತಿದ್ದಸಮಯದಲ್ಲಿಸಂಘ ಸಂಸ್ಥೆಗಳ ನೆರವಿನೊಂದಿಗೆಆಯ ಧರ್ಮಗಳಧಾರ್ಮಿಕ ವಿಧಿಯಂತೆಶವ.ಸಂಸ್ಕಾರಮಾಡಿದ. ಜವಾಬ್ದಾರಿ ವಹಿಸಿದವರಾಗಿದ್ದು 👉ಜಿಲ್ಲೆಯಾದ್ಯಂತರಕ್ತದಾನಿಗಳನ್ನುಮನವೊಲಿಸಿಹಲವಾರು.ರಕ್ತದಾನ ಶಿಬಿರಗಳನ್ನುಏರ್ಪಡಿಸಿ. ಬ್ಲಡ್ ಬ್ಯಾಂಕುಗಳಿಗೆ ರಕ್ತ ಸಂಗ್ರಹಿಸಿ.ಹಲವಾರು ರೋಗಿಗಳಿಗೆ.ರಕ್ತ.ನೀಡಿ.ಸಹಕರಿಸುತ್ತಿದ್ದು.👉ಜಿಲ್ಲಾ ಕಾಂಗ್ರೆಸ್ ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿಯಾಗಿ.ಹಲವಾರು ಕಾರ್ಮಿಕರಿಗೆಕಾರ್ಮಿಕ ಕಾರ್ಡ್ ನೀಡಲು.ತನ್ನ ಸಂಸ್ಥೆಯ ಮುಖಾಂತರ. ಕಾರ್ಮಿಕ. ಗುರುತು ದೃಡೀಕರಣಪತ್ರ.ನೀಡಿ. ಸಹಕರಿಸುವವರಾಗಿದ್ದು👉ಲಯನ್ಸ್ ಕ್ಲಬ್ ಪುತ್ತೂರ್ದದ ಮುತ್ತು. ಇದರ ಸದಸ್ಯರಾಗಿ.👉ತುಳು ಕೂಟಪುತ್ತೂರುತಾಲೋಕುಇದರ.ಗುರಿಕಾರಾಗಿ.ಜಿಲ್ಲೆಹಾಗುತಾಲೂಕು ಜಿಲ್ಲಾಮಟ್ಟದ ಹಲವಾರು ತುಳು ಪಂಥ ಕಾರ್ಯಕ್ರಮಗಳಲ್ಲಿಬಹುಮಾನ ಪಡೆದಿದ್ದು. 👉ಕಲಾವಿದನಾಗಿಯುವಜನ ಒಕ್ಕೂಟದ ಸಮಿತಿ ಸದಸ್ಯರಾಗಿ. ಹಲವಾರು ಯುವಜನ. ಕೂಟಗಳಲ್ಲಿ ಭಾಗವಹಿಸುತ್ತಿದ್ದು 👉ಸರಕಾರಿ.ಹಾಗೂ ಖಾಸಗಿ. ಶಾಲೆಗಳು ಸಂಘ-ಸಂಸ್ಥೆಗಳು ನಡೆಸುವ. ರಾಜ್ಯ ಜಿಲ್ಲೆ ಹಾಗೂ ವಳಮಟ್ಟದಕ್ರೀಡಾಕೂಟಗಳಆಯೋಜಕರ ಸಮಿತಿಯಲ್ಲಿ ಕೈಜೋಡಿಸಿ ಹಲವಾರುಕ್ರೀಡಾಕೂಟಗಳಿಗೆ ಸಹಕಾರ ನೀಡಿರುತ್ತಿದ್ದು.👉 ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ.ನೀಡಿಹಲವಾರು ಬಡಪ್ರತಿಭಾವಂತವಿದ್ಯಾರ್ಥಿಗಳನ್ನು.ಮನ.ವೊಲಿಸಿ.ನರ್ಸಿಂಗ್.ಮೆಡಿಕಲ್ಇತರ.ವೈದ್ಯಕೀಯ.ಸೇವೆಗೆ ಸಹಾಯದನ ನೀಡುತ್ತಿದ್ದು.👉.2019 ರಲ್ಲಿಕೈಗಾರಿಕಾ ಸಂಸ್ಥೆಯನ್ನು ಸ್ಥಾಪಿಸಿ. ಹಲವಾರು ಬಡ ಯುವಕರಿಗೆ.ಉಚಿತವಾಗಿ ವೆಲ್ಡಿಂಗ್. ಮೆಕಾನಿಕಲ್. ಸ್ವಯಂಉದ್ಯೋಗ.ತರಬೇತಿನೀಡಿ ಕೈಗಾರಿಕೆಗೆ ಬೇಕಾದಸಲಕರಣೆಗಳನ್ನುಉಚಿತವಾಗಿ ಕೊಟ್ಟು.ಸ್ವಯಂ ಉದ್ಯೋಗಿಗಕ್ಕೆಪ್ರೋತ್ಸಾಹಿಸುತ್ತಿದ್ದು👉 ಪುತ್ತೂರು ತಾಲೂಕು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯನಾಗಿ👉 ಪ್ರಸ್ತುತ ಮುಂಡೂರು ಅಜ್ಜಿ ಕಟ್ಟೆ ಮಸೀದಿಯ ಅಧ್ಯಕ್ಷನಾಗಿಮುಕ್ವೆ ಮಸೀದಿಯ ಕೋಶಾಧಿಕಾರಿಯಾಗಿ.ಪುತ್ತೂರು ರೇಂಜಿ ವ್ಯಾಪ್ತಿಯ ಮಸೀದಿ ಮದ್ರಸಗಳ ಅಸೋಸಿಯೇಷನ್ ಅಧ್ಯಕ್ಷರಾಗಿಕಾರ್ಯನಿರ್ವಹಿಸುತ್ತಿದ್ದೇನೆ👉 ಜಮಿಹ್ಯಿತ್ತುಲ್ ಪಲಾವ್. ಪಲಾಹ್ ಪುತ್ತೂರು ಘಟಕದ ಸದಸ್ಯನಾಗಿ👉ರಾಜ್ಯ ರೈತ ಸಂಘ.ಜಿಲ್ಲಾ.ಹಾಗೂತಾಲೂಕು ಮಟ್ಟದ ಸದಸ್ಯನಾಗಿ.👉 ಹಲವಾರುಸೌಹಾರ್ದ ಕೂಟ ಕಾರ್ಯಕ್ರಮಗಳನ್ನು. ಏರ್ಪಡಿಸಿಸುಮಾರು 32 ವರ್ಷಗಳಿಂದ ತುತ್ತೂರಿನಲ್ಲಿ ಈದ್ ಮಿಲಾದ್. ಹಾಗೂ ಹಲವಾರು.ದಾರ್ಮಿಕ. ಸೌಹಾರ್ದ ಕಾರ್ಯಕ್ರಮಗಳನ್ಪು. ಏರ್ಪಡಿಸುತ್ತಿದ್ದು👉 ಜಿಲ್ಲಾ.ಮದ್ರಸ.ಮಸೀದಿ. ಆಡಳಿತ ಸಮಿತಿಗಳ ಅಸೋಸಿಯೇಷನ್.ಇದರ.ಕಾರ್ಯದರ್ಶಿಯಾಗಿ👉 ಪುತ್ತೂರು ತಾಲೂಕು ಶಿರತ್ ಕಮಿಟಿ ಸದಸ್ಯನಾಗಿ👉ಕನ್ನಡ ಸೇನೆ ಕರ್ನಾಟಕಇದರ ಸದಸ್ಯರಾಗಿ👉ಜಾತ್ಯಾತೀತವಾಗಿ ಸಾಮಾಜಿಕ ಶೈಕ್ಷಣಿಕಕ್ಷೇತ್ರದಲ್ಲಿ ಗುರುತಿಸಿಕೊಂಡುಹಲವಾರು. ಬಡ ಹೆಣ್ಣು ಮಕ್ಕಳ ವಿವಾಹ. ಸೇವೆಗಳನ್ನುಮಾಡಿದವರಾಗಿದ್ದು2025ನೇ.ಕನ್ನಡ ರಾಜ್ಯೋತ್ಸವ.ತಾಲೋಕು ಪ್ರಶಸ್ತಿ.ಪುರಸ್ಕೃತರಾಗಿಜಿಲ್ಲೆ.ಹಾಗು.ರಾಜ್ಯಾದ್ಯಂತ ಸುಮಾರು 30.ಕ್ಕಿಂತಲೂಅಧಿಕ ಸಮಾಜ ಸೇವಾಸಂಘಟನೆಗಳಲ್ಲಿ ತೊಡಗಿಸಿನಿರ್ವಹಿಸುವ. ಸೇವಾ ವ್ಯಕ್ತಿತ್ವಕ್ಕೆ. ಸಾಕ್ಷಿಯಾಗಿದ್ದಾರೆ.
ಮಂಗಳೂರು-ಮಂಗಳೂರಲ್ಲಿ ಮೆಸೇಜ್ ಪಾರ್ಲರ್ ಗಳು ಯುನಿಸೆಕ್ಸ್ ಸೆಲೂನ್ ಹೆಸರಲ್ಲಿ ಈಗಲೂ ಕೆಲವು ಕಡೆ ತಲೆ ಎತ್ತಿರುವ ಬಗ್ಗೆ ಸುದ್ದಿ ಬಂದಿದೆ. ಕೆಲವು ಕಡೆ ತೋರಿಕೆಗೆ ಯುನಿಸೆಕ್ಸ್ ಸೆಲೂನ್ ಒಳಗಡೆ ಮಸಾಜ್ ಪಾರ್ಲರ್. ಈ ಬಗ್ಗೆ ಮಂಗಳೂರಿನ ಹೋಟೆಲ್ ವೊಂದಕ್ಕೆ ಬಂದ ಗಿರಾಕಿಯೊಬ್ಬರು ಎಲ್ಲರ ಎದುರಲ್ಲೇ ಮಸಾಜ್ ಪಾರ್ಲರ್ ಮಾಲಕರಿಗೆ ಫೋನ್ ಮಾಡಿ ಲೌಡ್ ಸ್ಪೀಕರ್ ನಲ್ಲಿ ಮಾತಾಡಿದ ಬಗ್ಗೆ ಮಾಹಿತಿ ಬಂದಿದೆ.
ಬಂಟ್ಸ್ ಅಸೋಸಿಯೇಷನ್ ಪುಣೆ (ರಿ.) 14ನೇ ವಾರ್ಷಿಕ ಸಮಾವೇಶವನ್ನು ಫೆಬ್ರವರಿ 6, 2026 (ಶುಕ್ರವಾರ)ರಂದು ಮಧ್ಯಾಹ್ನ 2.30 ಗಂಟೆಯಿಂದ ಪುಣೆಯ ಬಾನೇರ್‍ನಲ್ಲಿರುವ ‘ಬಂಟರ ಭವನ’ದಲ್ಲಿ ಆಯೋಜಿಸಲಾಗಿದೆ.ಮರ್ಸಿಡಿಸ್ ಶೋರೂಮ್ ಸಮೀಪ, ಪುಣೆ-ಬೆಂಗಳೂರು ಹೆದ್ದಾರಿಯ ಬಾನೇರ್ ಪ್ರದೇಶದಲ್ಲಿರುವ ಬಂಟರ ಭವನದಲ್ಲಿ ನಡೆಯಲಿರುವ ಈ ಸಮಾವೇಶಕ್ಕೆ ಬಂಟ ಸಮುದಾಯದ ಸದಸ್ಯರು ಹಾಗೂ ಸಾರ್ವಜನಿಕರು ಕುಟುಂಬ ಸಮೇತ ಭಾಗವಹಿಸುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 2.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 6 ಗಂಟೆಗೆ ಅಧಿಕೃತ ವಾರ್ಷಿಕ ಸಮಾರಂಭಕ್ಕೆ ಚಾಲನೆ ದೊರೆಯಲಿದೆ. ರಾತ್ರಿ 9 ಗಂಟೆಗೆ ಭೋಜನ ವ್ಯವಸ್ಥೆ ಮಾಡಲಾಗಿದೆ.ಸಮಾವೇಶದ ವಿಶೇಷ ಆಕರ್ಷಣೆಯಾಗಿ ಶ್ರೀ ಶಕ್ತಿ ಸಾಂಸ್ಕೃತಿಕ ತಂಡದ ಆಶ್ರಯದಲ್ಲಿ ‘ಸಾಮರ್ಥ ಕಲಾವೈಭವ’ ಎ0ಬ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಭಕ್ತಿ, ಶಕ್ತಿ ಹಾಗೂ ಸಂಸ್ಕೃತಿಯ ಸೊಗಡನ್ನು ಒಳಗೊಂಡ ಈ ಕಾರ್ಯಕ್ರಮವು ಪ್ರೇಕ್ಷಕರಿಗೆ ಮನಮುಗ್ಧಗೊಳಿಸುವ ಅನುಭವ ನೀಡಲಿದೆ ಎಂದು ಸಂಘದವರು ತಿಳಿಸಿದ್ದಾರೆ.ಕಾರ್ಯಕ್ರಮಕ್ಕೆ ಬಂಟ್ಸ್ ಅಸೋಸಿಯೇಷನ್ ಪುಣೆ ಅಧ್ಯಕ್ಷರಾದ ರೋಹಿತ್ ಡಿ. ಶೆಟ್ಟಿ ನಗ್ರಿಗುತ್ತು ಅವರು ಅಧ್ಯಕ್ಷತೆ ವಹಿಸಲಿದ್ದು, ಬಂಟ್ಸ್ ಸಂಘ ಬೆಂಗಳೂರು ಅಧ್ಯಕ್ಷರಾದ ಸಿ.ಎ. ಅಶೋಕ್ ಶೆಟ್ಟಿ ಎ0. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.ಇದೇ ವೇಳೆ ಟೆಕ್ಕೋಥರ್ಮಾ ಗ್ರೂಪ್ ಆಫ್ ಇಂಡಸ್ಟ್ರೀಸ್, ಮುಂಬೈ ನಿರ್ದೇಶಕರಾದ ನಗ್ರಿಗುತ್ತು ವಿವೇಕ್ ಶೆಟ್ಟಿ ಹಾಗೂ ಬಂಟ್ಸ್ ಸಂಘ ಪುಣೆ ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರುಗುತ್ತು ಅವರು ಗೌರವಾನ್ವಿತ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.ಸಂಘದ ಪದಾಧಿಕಾರಿಗಳಾಗಿ ಉಪಾಧ್ಯಕ್ಷರಾಗಿ ಡಾ. ಸುಧಾಕರ್ ಶೆಟ್ಟಿ ಹಾಗೂ ಸತೀಶ್ ರೈ ಕಲ್ಲಂಗಲಗುತ್ತು, ಗೌರವ ಕಾರ್ಯದರ್ಶಿಯಾಗಿ ದಿನೇಶ್ ಶೆಟ್ಟಿ, ಗೌರವ ಖಜಾಂಚಿಯಾಗಿ ಮನೋಹರ್ ಶೆಟ್ಟಿ (ಸಿ.ಎ.), ಪಿಆರ್‍ಒ ಆಗಿ ಪ್ರದೀಪ್ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದಾರೆ.ಮಹಿಳಾ ಘಟಕದ ಅಧ್ಯಕ್ಷೆಯಾಗಿ ಶ್ರೀಮತಿ ರೇಷ್ಮಾ ಆರ್. ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ಶ್ರೀಮತಿ ಶರ್ಮಿಳಾ ಟಿ. ರೈ ಇದ್ದಾರೆ. ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ ಹಾಗೂ ಯುವ ಘಟಕ ಅಧ್ಯಕ್ಷರಾಗಿ ಅದೀಪ್ ಶೆಟ್ಟಿ ನೇತೃತ್ವ ವಹಿಸಿದ್ದಾರೆ.ಈ 14ನೇ ವಾರ್ಷಿಕ ಸಮಾವೇಶವು ಸಂಘಟನೆಯ ಚಟುವಟಿಕೆಗಳಿಗೆ ಹೊಸ ದಿಕ್ಕು ನೀಡುವುದರೊಂದಿಗೆ, ಸಾಂಸ್ಕೃತಿಕ ಏಕತೆಯ ವೇದಿಕೆಯಾಗಲಿದೆ ಎಂದು ಬಂಟ್ಸ್ ಅಸೋಸಿಯೇಷನ್ ಪುಣೆ ಪ್ರಕಟಣೆಯಲ್ಲಿ ತಿಳಿಸಿದೆ.
ಮಹಾರಾಷ್ಟ: ಮಹಾರಾಷ್ಟ್ರ ಇಲ್ಲಿನ ಬಾರಾಮತಿ ಬಳಿ ವಿಮಾನ ಲ್ಯಾಂಡಿಂಗ್ ವೇಳೆ ಅಪಘಾತ ಸಂಭವಿಸಿ ವಿಮಾನದಲ್ಲಿದ್ದ ಮಹಾರಾಷ್ಟ್ರದ ಪ್ರಭಾವಿ ನಾಯಕ, ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ (66 ವರ್ಷ) ಸಹಿತ 5 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ವಿಮಾನದಲ್ಲಿದ್ದ ಅಜಿತ್ ಪವರ್, ಇಬ್ಬರು ಪಿ.ಎ.ಗಳು, ಮತ್ತು ವಿಮಾನ ಪೈಲಟ್ ಸೇರಿದ್ದಾರೆ. ಮೃತದೇಹವನ್ನು ಬಾರಾಮತಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ನಾಳೆ ಅಂತ್ಯಸಂಸ್ಕಾರ ನಡೆಯಲಿದೆ. ಇಂದು ಬೆಳಿಗ್ಗೆ 8.30ಕ್ಕೆ ಮುಂಬಯಿಯಿಂದ ಹೊರಟ ವಿಮಾನ 9.12ಕ್ಕೆ ಬಾರಾಮತಿ ಬಳಿ ತಲುಪುತ್ತಿದ್ದಂತೆಯೇ ದಟ್ಟ ಮಂಜು ಮುಸುಕಿದ ವಾತಾವರಣವಿದ್ದ ಕಾರಣದಿಂದಾಗಿ ರನ್ ವೇ ಯಿಂದ ಸ್ವಲ್ಪವೇ ದೂರದಲ್ಲಿದ್ದ ವಿಮಾನ ಭೂ ಸ್ಪರ್ಶ ಮಾಡಲಾಗದೆ ಲ್ಯಾಡಿಂಗ್ ವೇಳೆ ಅಪಘಾತ ಘಟಿಸಿ ಈ ದುರಂತ ಸಂಭವಿಸಿದೆ. ಬಾರಾಮತಿಯಲ್ಲಿ ಚುನಾವಣಾ ಪ್ರಚಾರದ 2-3 ಕಡೆಗಳಲ್ಲಿ ಭಾಗವಹಿಸಬೇಕಾಗಿತ್ತು. ಅದಕ್ಕಾಗಿ ಅಜಿತ್ ಪವರ್ ಅವರು ಈ ನತದೃಷ್ಟ ವಿಮಾನದಲ್ಲಿ ತೆರಳಿದ್ದರು. ಆದರೆ, ಅಪಘಾತ ಸಂಭವಿಸಿ ಅಜಿತ್ ಪವಾರ್ ಸಾವನ್ನಪ್ಪಿದ್ದಾರೆ.ಈ ವಿಮಾನ ಅಪಘಾತಕ್ಕೆ ನಿರ್ದಿಷ್ಟ ಕಾರಣಗಳು ಇನ್ನೂ ತಿಳಿದು ಬಂದಿಲ್ಲ. ಈ ಅಪಘಾತ ಹೇಗೆ ಸಂಭವಿಸಿದೆ ಇದಕ್ಕೆ ಕಾರಣಗಳು ಏನು? ಎಂಬುದರ ಬಗ್ಗೆ ತನಿಖೆಯಿಂದ ಇನ್ನಷ್ಟೇ ಗೊತ್ತಾಗಬೇಕಾಗಿದೆ. ಬ್ಲ್ಯಾಕ್ ಬಾಕ್ಸ್ ನ ಮೂಲಕ ನಿರ್ದಿಷ್ಟ ಕಾರಣವನ್ನು ತಿಳಿಯಲು ಪ್ರಯತ್ನ ಪಡಲಾಗುತ್ತಿದೆ. ಅಜಿತ್ ಪವರ್ ಅವರ ಈ ದುರಂತ ಸಾವಿಗೆ ಪ್ರಧಾನಿ ಮೋದಿ ಸಹಿತ ಗಣ್ಯಾರನೇಕರು ಸಂತಾಪ ಸೂಚಿಸಿದ್ದಾರೆ. ಮೋದಿ ಅವರು ಅಜಿತ್ ಪವಾರ್ ಅವರ ತಂದೆ, ಹಿರಿಯ ರಾಜಕಾರಣಿ ಶರದ್ ಪವಾರ್ ಅವರಿಗೆ ಫೋನ್ ಮಾಡಿ ಸಾಂತ್ವನ ಹೇಳಿದ್ದಾರೆ.ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ನಿಧನದ ಈ ದಿನ ಕರಾಳ ದಿನ. ಅವರ ಅಗಲುವಿಕೆಯ ಶೋಕವನ್ನು ನನ್ನಿಂದ ತಡೆಯಲಾಗುತ್ತಿಲ್ಲ.ಮಹಾರಾಷ್ಟ್ರದಲ್ಲಿ ಮಹಾನ್ ನಾಯಕರೊಬ್ಬರ ಯುಗಾಂತ್ಯವಾಗಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಂತಾಪ ಸೂಚಿಸಿದ್ದಾರೆ.ವಿಮಾನ ದುರಂತದಿಂದ ಅಜಿತ್ ಪವಾರ್,ಅವರ ಇಬ್ಬರು ಪಿಎಗಳು.ಇಬ್ಬರು ವಿಮಾನ ಪೈಲೆಟ್ ಗಳು ಹೀಗೇ ಐದು ಮಂದಿ ಸಾವನ್ನಪ್ಪಿದ್ದಾರೆಂದು ಅಧಿಕೃತ ವರದಿ ತಿಳಿಸಿದೆ ಅಜಿತ್ ಪವಾರ್ ಅವರ ನಿಧನಕ್ಕೆ ಇಂದು ವಿಧಾನಸಭೆಯಲ್ಲಿ ಸ್ಪೀಕರ್ ಯು. ಟಿ. ಖಾದರ್ ಅವರ ನೇತೃತ್ವದಲ್ಲಿ ಸಂತಾಪ ಸೂಚಿಸಲಾಯಿತು
ಯೂತ್ ಕ್ಲಬ್ ಕೋಡಿಕಲ್ ಆಶ್ರಯದಲ್ಲಿ 77 ನೇ ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವವನ್ನು ಮಂಗಳೂರಿನ ಕೋಡಿಕಲ್ ಯೂತ್ ಕ್ಲಬ್ ಆವರಣದಲ್ಲಿ 26/01/2026 ರಂದು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ತ್ರಿವರ್ಣ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದ NSCDF ಪ್ರಧಾನ ಕಾರ್ಯದರ್ಶಿ ದಿನಕರ್ ಡಿ.ಬಂಗೇರ ಮಾತನಾಡಿ, ಇಂದು ನಮ್ಮ ದೇಶಕ್ಕೆ ಸಂವಿಧಾನ ಸಮರ್ಪಣೆಯಾದ ದಿನ, ಇಂದು ಪ್ರಜಾಪ್ರಭುತ್ವ ಸಾರಿದ ದಿನ, ಭಾರತದ ಎಲ್ಲಾ ರಾಜ್ಯಗಳನ್ನು ಒಂದೇ ಚೌಕಟ್ಟಿನಲ್ಲಿ ಸೇರಿಸಿದ ಮಹತ್ವದ ದಿನ, ಗಣರಾಜ್ಯೋತ್ಸವ ಭಾರತೀಯರಿಗೆ ಸ್ವಾಭಿಮಾನ, ಘನತೆ, ಸಮಾನತೆ ಅಧಿಕೃತವಾಗಿ ತಂದುಕೊಟ್ಟ ದಿನ ಎಂದು ಹೇಳಿದ ಅವರು ಈ ದಿನವನ್ನು ಭಾರತೀಯಾರೆಲ್ಲರೂ ಶ್ರದ್ದೆ ಭಕ್ತಿಯಿಂದ ಆರಾಧಿಸಬೇಕಾದ ದಿನ, ಇಂತಹ ಮಹತ್ವ ಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸುವ ನಾವೆಲ್ಲರೂ ಧನ್ಯರು ಎಂದು ಹೇಳಿದರು.ಈ ಸಂದರ್ಭದಲ್ಲಿ ಯೂತ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಪುತ್ರನ್ ಕೋಡಿಕಲ್ ಮತ್ತು ಪ್ರಧಾನ ಕಾರ್ಯದರ್ಶಿ ಶಶಿಧರ್ ಅಮೀನ್ ಕೋಡಿಕಲ್ ಉಪಸ್ಥಿತರಿದ್ದರು.
ಮಂಗಳೂರು: ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ತುಳು ಚಿತ್ರಗಳನ್ನು ಕಡೆಗಣಿಸುಲಾಗುತ್ತಿದೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ತಿಳಿಸಿದ್ದಾರೆ.ರಾಜ್ಯ ಸರ್ಕಾರವು ತುಳು ಮತ್ತು ಇತರ ಪ್ರಾದೇಶಿಕ ಭಾಷಾ ಚಿತ್ರಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರಶಸ್ತಿ ಮತ್ತು ಸಹಾಯಧನ ನೆರವನ್ನು ತುಳು ಚಿತ್ರಗಳಿಗೆ ವಿಸ್ತರಿಸಿದೆ. ಪ್ರತಿ ವರ್ಷ ಒಂದು ಪ್ರಾದೇಶಿಕ ಭಾಷಾ ಚಿತ್ರಕ್ಕೆ ಪ್ರಶಸ್ತಿ ನೀಡುತ್ತದೆ. ತ್ರೈಮಾಸಿಕ ಪ್ರಶಸ್ತಿಗಳನ್ನು ಪಡೆಯುವ ಈ ಚಿತ್ರಗಳು ಸ್ವರ್ದಿಸಿವೆ.16ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಎರಡನೆ ಮತ್ತು ಮೂರನೇ ಪ್ರಶಸ್ತಿಗಳನ್ನು ತುಳು ಚಿತ್ರಗಳು ಪಡೆದಿದ್ದವು. ಇಂದು ಈ ಬಾರಿ 17ನೇ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಯಾವುದೇ ತುಳು ಚಿತ್ರವನ್ನು ಪರಿಗಣಿಸಿಲ್ಲ ಎಂದವರು ತಿಳಿಸಿದ್ದಾರೆ.ನಾನು ತುಳುವಿನಲ್ಲಿ ನಿರ್ದೇಶಿಸಿದ ಬಿದ್೯ದ ಕಂಬುಲ’ ಚಿತ್ರವನ್ನು ಸ್ವರ್ಧೆಗಾಗಿ ಕಳುಹಿಸಿದೆ. ತುಳುನಾಡಿನ ವಿಶಿಷ್ಟ ಜಾನಪದ ಕ್ರೀಡೆಯಾಗಿರುವ ಕಂಬಳದ ಹಿನ್ನಲೆ ಕಥೆಯಿದು. ಸುಮಾರು 700 ವರ್ಷಗಳ ಇತಿಹಾಸ ಇರುವ ಕಂಬಳ ತುಳುನಾಡಿನ ಸಾಂಸ್ಕೃತಿಕ ಕ್ರೀಡೆ, ಮಾನ್ಯ ಮುಖ್ಯಮಂತ್ರಿಗಳು ಈ ಸಾರಿಯ ಬಜೆಟ್‌ನಲ್ಲಿ ಕಂಬಳ ಕ್ರೀಡೆಗೆ ವಿಶೇಷ ಅನುದಾನ ಮತ್ತು ಪ್ರೊತ್ಸಾಹ ನೀಡುತ್ತೇನೆ ಎಂದು ಘೋಶಿಸಿದ್ದರು. ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಚಿತ್ರವನ್ನು ತಿರಸ್ಕರಿಸುವ ಮೂಲಕ ತುಳುನಾಡು ಮತ್ತು ತುಳುನಾಡು ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳಿಗೆ ಬೆಂಬಲಿಸದೆ ಪರಿಗಣಿಸದೆ ಇರುವುದರ ಮೂಲಕ ಸಂಬಂಧ ಪಟ್ಟವರು ತುಳು ಚಿತ್ರರಂಗದ ಮೇಲೆ ಕಡೆಗಣಿಸುವ ವ್ಯವಸ್ತೆಯನ್ನು ಸೃಷ್ಟಿಸಿದ್ದಾರೆ.17ನೇ ಚಿತ್ರೋತ್ಸವದಲ್ಲಿ ಮಲೆಯಾಳಂನ 6 ಚಿತ್ರಗಳು ಮತ್ತು ಮಾರಾಠಿಯ 4 ಚಿತ್ರಗಳಿಗೆ ಮನ್ನಣೆ ಹಾಕುವ ಮೂಲಕ ಕನ್ನಡ ನಾಡಿನಲ್ಲಿಯೆ ನಾವು ಅನಾಥರಾಗಿರುವುದು ದುರಂತವೆ ಸರಿ ಎಂದವರು ತಿಳಿಸಿದ್ದಾರೆ.ತುಳು ಭಾಷೆಯನ್ನು ರಾಜ್ಯದ ಎರಡನೆ ಆಡಳಿತ ಭಾಷೆಯಾಗಿ ಪರಿಗಣಿಸಬೆಕಾಗಿದೆ ಅದನ್ನು ಪರಿಚ್ಚೆದಕ್ಕೆ ಸೇರಿಸಬೇಕು ಎನ್ನುವ ಒತ್ತಾಯ. ಒತ್ತಡಗಳು ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ತುಳು ಚಿತ್ರಗಳನ್ನು 17ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದ ಸ್ವರ್ಧಾಮಾನಕ್ಕೆ ಆಯ್ಕೆ ನೀಡದೆ ಇರುವುದು ಅನ್ಯಾಯ ಮಾಡಿದಂತಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಸೂಕ್ತ ಆದೇಶ ನೀಡಿ, ತುಳು ಚಿತ್ರರಂಗಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ನಿರ್ದೇಶಕ ಡಾ ಎಸ್ ವಿ ರಾಜೇಂದ್ರ ಸಿಂಗ್ ಬಾಬು ತಿಳಿಸಿದ್ದಾರೆ.
ಮಂಗಳೂರು: ಪೊಲೀಸರು ಹಾಗೂ ಪತ್ರಕರ್ತರು ಸದಾ ಒತ್ತಡದ ಮಧ್ಯೆ ಕೆಲಸ ನಿರ್ವಹಿಸುವ ಅನಿವಾರ್ಯತೆ ಇದೆ. ಕ್ರೀಡಾ ಚಟುವಟಿಕೆಗಳಿಗೆ ಸಮಯ ಮೀಸಲಿಡುವುದರಿಂದ ಒತ್ತಡ ನಿವಾರಣೆ ಸಾಧ್ಯ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಕದ್ರಿಯ ಕೆ.ಪಿ.ಟಿ. ಮೈದಾನದಲ್ಲಿ ಭಾನುವಾರ ನಡೆದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್.ಬಿ.ಎನ್. ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿದ್ದ ಕೆ.ಪಿ.ಟಿ.ಯ ಪ್ರಾಂಶುಪಾಲ ಹರೀಶ್ ಶೆಟ್ಟಿ ಶುಭ ಹಾರೈಸಿದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅನ್ನು ಮಂಗಳೂರು, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್.ಕೆ.ಪೂಜಾರಿ, ಉಪಾಧ್ಯಕ್ಷ ವಿಲ್ಫ್ರೆಡ್ ಡಿಸೋಜಾ ಉಪಸ್ಥಿತರಿದ್ದರು.ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹರೀಶ್ ಮೋಟುಕಾನ ವಂದಿಸಿದರು. ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.