Author name: editor

ಪ್ರಾದೇಶಿಕ ವಾರ್ತೆಗಳು

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಸಿರಿಪರ್ಬ- 2025’. ನಾಡು – ನುಡಿ ಸೇವೆಯಲ್ಲಿ ಆಳ್ವಾಸ್ ಪಾತ್ರ ಹಿರಿದು: ಗುರ್ಮೆ ಸುರೇಶ್ ಶೆಟ್ಟಿ

ಮೂಡಬಿದ್ರಿ: ‘ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆಯುವ ನುಡಿಸಿರಿ ವಿರಾಸತ್ ಗಳಲ್ಲದೆ ಇತರ ಹಲವಾರು ರಾಜ್ಯ – ರಾಷ್ಟ್ರ ಮಟ್ಟದ ಕಾರ್ಯಕ್ರಮಗಳು ಕರಾವಳಿ ಕರ್ನಾಟಕದ ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿಗಳ ಶ್ರೀಮಂತಿಕೆಯನ್ನು ಜಗದಗಲ ಪಸರಿಸಿದೆ. ನಾಡು – ನುಡಿಯ ಸೇವೆಯಲ್ಲಿ ಆಳ್ವಾಸ್ ಸಮೂಹ ಸಂಸ್ಥೆಗಳ ಪಾತ್ರ ಹಿರಿದು. ಅದು ಇತರ ಹಲವಾರು ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ’ ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಸಂಸ್ಥೆಯ ತುಳು ಸಂಘದ ಆಶ್ರಯದಲ್ಲಿ ಜರಗಿದ ‘ಸಿರಿಪರ್ಬ – 2025’ ತುಳು ಸಾಂಸ್ಕೃತಿಕ ಉತ್ಸವದಲ್ಲಿ ಪ್ರಧಾನ ಅತಿಥಿಗಳಾಗಿ ಭಾಗವಹಿಸಿದ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತಾತ್ಮಕ ಟ್ರಸ್ಟಿ ವಿವೇಕ್ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತುಳು ತಲೆಯೆತ್ತಿ ನಿಲ್ಲಲಿ:‘ ಶಿಕ್ಷಣ ಸಂಸ್ಥೆಗಳಲ್ಲಿ ತುಳು ಮಾತನಾಡಲು ತೀವ್ರ ವಿರೋಧವಿದ್ದ ಕಾಲವಿತ್ತು; ಆದರೆ ಈಗ ಅದು ಬದಲಾಗಿದೆ. ಪ್ರಾಥಮಿಕ ಹಂತದಿಂದ ಕಾಲೇಜಿನವರೆಗೆ ತುಳುವನ್ನೊಂದು ಪಠ್ಯವಾಗಿ ಸರಕಾರ ಅನುಮೋದಿಸಿದೆ. ಶಿಕ್ಷಣ ಸಂಸ್ಥೆಗಳಲ್ಲಿ ತುಳು ಚಟುವಟಿಕೆಗಳಿಗೆ ವೇದಿಕೆಗಳು ಸಿದ್ಧವಾಗಿವೆ. ತುಳುವೇತರರೂ ತುಳು ಭಾಷೆ ಕಲಿತು ಅವುಗಳಲ್ಲಿ ಭಾಗವಹಿಸುವಂತಾಗಬೇಕು. ಎಲ್ಲಾ ಕಡೆ ತೌಳವ ಸಂಸ್ಕೃತಿಯನ್ನು ಪಸರಿಸುವ ಮೂಲಕ ತುಳು ತಲೆಯೆತ್ತಿ ನಿಲ್ಲಬೇಕು’ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು. ಸಿರಿಪರ್ಬದ ಅಂಗವಾಗಿ ಏರ್ಪಡಿಸಲಾಗಿದ್ದ ‘ತುಳು ಸಾಂಸ್ಕೃತಿಕ ವೈಭವ’ ಅಂತರ್ಕಾಲೇಜು ಸ್ಪರ್ಧೆಗೆ ವಿಧ್ಯುಕ್ತ ಚಾಲನೆ ನೀಡಿ ಅವರು ಮಾತನಾಡಿದರು. ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ ಸಂಸ್ಥೆಯ ವಿದ್ಯಾರ್ಥಿಗಳಾದ ಹಾರ್ದಿಕ್ ಎಚ್.ಶೆಟ್ಟಿ, ಜೆವಿತಾ ಪೆರ್ಲ್ ಕ್ರಾಸ್ಟಾ, ಪ್ರಶಸ್ತಿ ಎಂ.ಎಸ್. ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ತುಳು ಚಲನಚಿತ್ರ ನಟ ಮತ್ತು ನಿರ್ದೇಶಕ ಅನೀಶ್ ಪೂಜಾರಿ ವೇಣೂರು, ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ಆಳ್ವಾಸ್ ಪದವಿ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿ, ಶಿಕ್ಷಕ – ಕಲಾವಿದ ಬಾಲಕೃಷ್ಣ ರೇಖ್ಯ ಮುಖ್ಯ ಅತಿಥಿಗಳಾಗಿದ್ದರು. ಉಪನ್ಯಾಸಕ ಹೇಮಂತ್ ಸುವರ್ಣ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಆಕರ್ಷಕ ಶೋಭಾಯಾತ್ರೆ – ವಸ್ತು ಪ್ರದರ್ಶನ:ಸಮಾರಂಭದಲ್ಲಿ ತುಳುನಾಡಿನ ಜಾನಪದ ಸಂಸ್ಕೃತಿಗೆ ಪೂರಕವಾದ ಯಕ್ಷಗಾನ, ಚೆಂಡೆ ವಾದನ, ಕಂಬಳದ ಕೋಣಗಳು, ಕುಣಿತ ಭಜನೆ, ದಫ್ ಕುಣಿತಗಳನ್ನೊಳಗೊಂಡ ವರ್ಣರಂಜಿತ ಶೋಭಾಯಾತ್ರೆ ನಡೆಯಿತು. ಅಲ್ಲದೆ ತುಳು ಬದುಕಿನ ಭೌತಿಕ ಸಂಸ್ಕೃತಿಯನ್ನು ಪ್ರತಿನಿಧಿಸುವ ವಿವಿಧ ಪಾರಂಪರಿಕ ವಸ್ತುಗಳು, ದಿನಬಳಕೆಯ ಸಾಮಾನು, ಕೃಷಿ ಉಪಕರಣಗಳು, ಆಭರಣ, ಹಸ್ತ ಕಲಾಕೃತಿ, ಶಿಲ್ಪ ವೈವಿಧ್ಯ ,ಭೂತಕೋಲ, ನಾಗಾರಾಧನೆ, ಸಂಗೀತ ವಾದ್ಯ, ಯಂತ್ರೋಪಕರಣಗಳು ಸೇರಿದಂತೆ ವೈವಿಧ್ಯಮಯ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.ಸ್ಪರ್ಧಾ ವಿಜೇತರು:ದಿನವಿಡೀ ನಡೆದ ಸ್ಪರ್ಧೆಯಲ್ಲಿ ಜಿ.ಎಫ್.ಜಿ.ಸಿ. ವಾಮದಪದವು, ಮಹಾವೀರ ಕಾಲೇಜು ಮೂಡಬಿದಿರೆ, ಎಸ್‌.ಡಿ.ಎಂ. ಪಿಜಿ ಸೆಂಟರ್, ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ಶ್ರೀ ಧವಳ ಕಾಲೇಜು, ಆಳ್ವಾಸ್ ಪದವಿ ಕಾಲೇಜು ಮುಂತಾದ ತಂಡಗಳು ಭಾಗವಹಿಸಿದ್ದವು. ಪ್ರತೀ ತಂಡವೂ ತುಳುನಾಡಿನ ಪುರಾತನ ಆಚರಣೆಗಳು, ಜಾನಪದ ಚರಿತ್ರೆ, ಆರಾಧನಾ ಪರಂಪರೆ, ಹಾಡು – ಕುಣಿತಗಳನ್ನೊಳಗೊಂಡ ತುಳುನಾಡಿನ ಶ್ರೀಮಂತ ಸಂಸ್ಕೃತಿಯನ್ನು ಕಲಾತ್ಮಕವಾಗಿ ರೂಪಿಸಿ ಪ್ರಸ್ತುತಪಡಿಸಿದವು. ಅಂತಿಮ ಹಂತದಲ್ಲಿ ವಿಜೇತರಾದ ಶ್ರೀ ಧವಳ ಕಾಲೇಜು ಮೂಡಬಿದಿರೆ (ಪ್ರಥಮ ), ಆಳ್ವಾಸ್ ಪದವಿ ಕಾಲೇಜು (ದ್ವಿತೀಯ) ಇವರಿಗೆ ಸ್ಮರಣಿಕೆಯೊಂದಿಗೆ ನಗದು ಬಹುಮಾನಗಳನ್ನು ವಿತರಿಸಲಾಯಿತು.ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಬಾಲಕೃಷ್ಣ ರೇಖ್ಯ ತೀರ್ಪುಗಾರರಾಗಿ ಸಹಕರಿಸಿದರು. ವಿದ್ಯಾರ್ಥಿ ನಾಯಕ ದೀಕ್ಷಿತ್ ಡಿ. ಶೆಟ್ಟಿ ಸ್ವಾಗತಿಸಿ, ನಿರೀಕ್ಷಾ ರೈ ವಂದಿಸಿದರು. ರಿಶಾಂಕ್ ತೋಡಾರ್ ಮತ್ತು ಅಜೇಯ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ, ಮಾಜಿ ಎಂಪಿ ನಳಿನ್ ಕುಮಾರ್ ಕಟೀಲು ಅವರಿಂದ ಬಂಟ್ವಾಳದ ಸುಹಾಸ್ ಶೆಟ್ಟಿ ಮನೆಗೆ ಭೇಟಿ. ಸುಹಾಸ್ ಹೆತ್ತವರಿಗೆ ಸಾಂತ್ವನದ ಜೊತೆಗೆ 1 ಲಕ್ಷ ರೂಪಾಯಿ ಆರ್ಥಿಕ ಧನ ಸಹಾಯ

ಮಂಗಳೂರು: ಬಜಪೆಯಲ್ಲಿ ಕೊಲೆಯಾದ ಭಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಬಂಟ್ವಾಳದ ಮನೆಗೆ ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ‌ಅವರು ಮಂಗಳವಾರ ಭೇಟಿ ನೀಡಿ ವೈಯಕ್ತಿಕ ನೆಲೆಯಲ್ಲಿ ಒಂದು ಲಕ್ಷ ರೂ. ಅರ್ಥಿಕ ನೆರವಿತ್ತರು‌.ಸುಹಾಸ್ ಶೆಟ್ಟಿ ಅವರ ಹೆತ್ತವರು ಹಾಗೂ ಕುಟುಂಬಸ್ಥರ ಜೊತೆ ಕೆಲ ಹೊತ್ತು ಮಾತುಕತೆ ನಡೆಸಿ ಸಾಂತ್ವನ ಹೇಳಿದರಲ್ಲದೆ ತಮ್ಮ ಕುಟುಂಬದ ಜೊತೆ ಸದಾಕಾಲವೂ ಇರುವುದಾಗಿ ಭರವಸೆ ನೀಡಿದರು.ಸರಕಾರದಿಂದ ಭರವಸೆ ಇಲ್ಲ:ಕರ್ನಾಟಕ ಸರಕಾರ ಮತ್ತು ಪೊಲೀಸ್ ಇಲಾಖೆ ಮೇಲೆ ಯಾವುದೇ ಭರವಸೆಯು ಉಳಿದಿಲ್ಲ. ಇದುವರೆಗೂ ಸರಕಾರದ ಪರವಾಗಿ ಯಾವೊಬ್ಬ ಪ್ರತಿನಿಧಿಯೂ ನಮ್ಮನ್ನು ಮಾತನಾಡಿಸಿಲ್ಲ ಎಂದು ಈ ಸಂದರ್ಭ ಸುಹಾಸ್ ಹೆತ್ತವರು ಮಾಜಿ ಸಂಸದ ನಳಿನ್ ಕುಮಾರ್ ಮುಂದೆ ಬೇಸರ ವ್ಯಕ್ತಪಡಿಸಿದರು.ಪ್ರಕರಣದ ತನಿಖೆಯನ್ನು ಎನ್.ಐ.ಎ. ಸಂಸ್ಥೆಗೆ ವಹಿಸಿ, ಮಗನ ಸಾವಿಗೆ ನ್ಯಾಯ ಒದಗಿಸಿ ಕೊಡಿ ಮತ್ತು ಮುಂದಿನ ದಿನಗಳಲ್ಲಿ ಯಾವೊಬ್ಬ ಹಿಂದೂ‌ಕಾರ್ಯಕರ್ತನಿಗೆ ಇಂತಹ ಕಷ್ಟ ಬರಬಾರದು ಎಂದು ಕಣ್ಣೀರಿಟ್ಟರು.ಮಾಜಿ ಮೇಯರ್ ಸುಧೀರ್ರ್ ಶೆಟ್ಟಿ ಕಣ್ಣೂರು, ಮಾಜಿ ಕಾರ್ಪೊರೇಟರ್ ವಿಜಯಕುಮಾರ್ ಶೆಟ್ಟಿ, ಪುತ್ತೂರು ಮಾಜಿ‌ ಮಂಡಲ‌ ಅಧ್ಯಕ್ಷ ಸಹಜ ರಾಧಾಕೃಷ್ಣ ಆಳ್ವ, ಸುಳ್ಯ ‌ಮಂಡಲ ಮಾಜಿ ಅಧ್ಯಕ್ಷ ಹರೀಶ್ ಕಾಂಜಿಪಿಳಿ, ಬಿಜೆಪಿ ಮುಖಂಡರಾದ ರವೀಶ್ ಶೆಟ್ಟಿ ಕಾರ್ಕಳ, ಸುದರ್ಶನ ಬಜ, ಮಾಧವ ಮಾವೆ, ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಗುತ್ತು, ಪುರುಷೋತ್ತಮ ಶೆಟ್ಟಿ ವಾಮದಪದವು, ಗಣೇಶ್ ರೈ ಮಾಣಿ, ದಿನೇಶ್ ಶೆಟ್ಟಿ ದಂಬೆದಾರ್, ಅಜಿತ್ ಶೆಟ್ಟಿ ಕಾರಿಂಜ, ಹರೀಶ್ ಕುತ್ತಾರ್, ರವಿರಾಮ ರೈ, ನಾಗೇಶ್ ಶೆಟ್ಟಿ ಕೊಡಂಗಾಯಿ, ಸತೀಶ್ ಶೆಟ್ಟಿ ಮದ್ವ ಅಜಿತ್ ಪುತ್ತೂರು, ರಂಜಿತ್, ಸುಕೇಶ್ ಚೌಟ,ಕಾರ್ತಿಕ್ ಬಲ್ಲಾಳ್, ಶ್ಯಾಮಣ್ಣ ಶೆಟ್ಟಿ, ಹರೀಶ್ ರಾಯಿ, ಅರುಣ್ ಕುವೆಲ್ಲೋ ಮತ್ತಿತರರು ಉಪಸ್ಥಿತರಿದ್ದರು.ಬಳಿಕ ನಳಿನ್ ಕುಮಾರ್ ಕಟೀಲ್ ಸುಹಾಸ್ ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು

ಪ್ರಾದೇಶಿಕ ವಾರ್ತೆಗಳು

“ರಾಜಸ್ಥಾನ ಬೃಹತ್ ಮಾರಾಟ ಮೇಳ” – ರಾಜಸ್ಥಾನ ಆರ್ಟ್ ಮತ್ತು ಕ್ರಾಫ್ಟ್, ಕರಕುಶಲ ವಸ್ತುಗಳ ಮತ್ತು ಕೈಮಗ್ಗ ಸೀರೆಗಳ ಹಾಗೂ ಅಭರಣಗಳು ಮತ್ತು ಕಲಾಕೃತಿಗಳ “ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳ”

ಮಂಗಳೂರು : ರಾಜಸ್ಥಾನ ಆರ್ಟ್ ಮತ್ತು ಕ್ರಾಫ್ಟ್ ರವರ ಸಂಯೋಜನೆಯಲ್ಲಿ ರಾಜಸ್ಥಾನ ಆರ್ಟ್ ಹಾಗೂ ಕ್ರಾಫ್ಟ್ ವಿವಿಧ ಕರಕುಶಲ ವಸ್ತುಗಳ ಹಾಗೂ ಕೈಮಗ್ಗ ಸೀರೆಗಳ ಹಾಗೂ ಅಭರಣಗಳು ಮತ್ತು ಕಲಾಕೃತಿಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ “ರಾಜಸ್ಥಾನ ಬೃಹತ್ ಮಾರಾಟ ಮೇಳ” ತಾ| 07 /05 / 2025, ಬುಧವಾರದಂದು ನಗರದ ಬಂಟ್ಸ್ ಹಾಸ್ಟೇಲ್ ರಸ್ತೆಯ ಹೋಟೇಲ್ ವುಡ್‌ಲ್ಯಾಂಡ್ಸ್‌ ನಲ್ಲಿ ಆರಂಭಗೊಂಡಿತು.ಖ್ಯಾತ ಲೇಖಕ ಹಾಗೂ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರು ಮೇಳವನ್ನು ಉದ್ಘಾಟಿಸಿ ಶುಭಾ ಹಾರೈಸಿದರು. ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಖ್ಯಾತ ಚಿತ್ರ ನಿರ್ದೇಶಕ ಹಾಗೂ ನಟ ರಂಗ ತ್ರಿವಿಕ್ರಮ ಬಿರುದಾಂಕಿತ ಸಾಯಿ ಕೃಷ್ಣ ಕುಡ್ಲ ಹಾಗೂ “Miss TeenWorld Super Model Global” ವಿಜೇತೆ ಚಿತ್ರನಟಿ ಕುಮಾರಿ ವೆನ್ಸಿಟಾ ಡೈಸ್ ಇವರು ಮೇಳದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಮೇಳದ ಬಗ್ಗೆ ಮಾಹಿತಿ ನೀಡಿದ ಮೇಳದ ಅಯೋಜಕರಾದ ಪ್ರಮೋದ್ ಸಿಂಗ್ ಅವರು, ಈ ಗ್ರಾಮೀಣ ಮೇಳದಲ್ಲಿ ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ ಕೈಮಗ್ಗದ ಸೀರೆ ಹಾಗೂ ಸಿಲ್ಕ್ ಸೀರೆಗಳು ಮತ್ತು ಕರಕುಶಲ ವಸ್ತುಗಳ ಬೃಹತ್ ಸಂಗ್ರಹವಿದ್ದು, ಮಾರಾಟ ಮತ್ತು ಪ್ರದರ್ಶನ ನಡೆಯಲಿದೆ. ರಾಜಸ್ಥಾನ ಸಿಲ್ಕ್ ಸಾರಿ, ಮೈಸೂರ್ ಸಿಲ್ಕ್ ಸಾರಿ, ಓರಿಸ್ಸಾ ಸಿಲ್ಕ್ ಸೀರೆಗಳು, ಕಾಂತ ವರ್ಕ್ ಸಿಲ್ಕ್ ಸೀರೆಗಳು, ಕೋಸಿಯಾ ಕೈ ಮಗ್ಗದ ಸೀರೆಗಳು, ಬಾಗಲ್ಪುರ್ ಸಿಲ್ಕ್ ಸೀರೆಗಳು, ಬನರಸ್ ಸಿಲ್ಕ್ ಸಾರಿ, ವೆಜ್ ಡೈ ಬ್ಲಾಕ್ ಪ್ರಿಂಟೆಡ್ ಸೀರೆಗಳು, ಮಧುರೈ ಸುಗುಡಿ ಕಾಟನ್ ಸೀರೆಗಳು, ಸಾಂಬ್ಲಪುರಿ ಇಕ್ತಾ ಸೀರೆಗಳು, ಕೈಮಗ್ಗದ ಕಾಟನ್ ಸೀರೆಗಳು, ಚಾಂದಾರ್ ಕಾಟನ್ ಸೀರೆಗಳು, ಪೌಂಚಪಲ್ಲಿ ಕೈಮಗ್ಗದ ಸೀರೆಗಳು, ಫೋಲ್ಕರಿ ವಿನ್ಯಾಸದ ಪಾಟಿಯಾಲ, ಫೋಲ್ಕರಿ ಬೆಡ್‌ಶೀಟ್‌ಗಳು, ಹಾಗೂ ಸೋಫಾ ಸೆಟ್ ಕವರ್, ಸಿಲ್ಕ್ ಕುಶನ್ ಕವರ್, ರಾಜಸ್ಥಾನ್ ಬೆಡ್‌ಶೀಟ್‌ಗಳು ಹಾಗೂ ಇನ್ನಿತರ ಕೈಮಗ್ಗದ ಸೀರೆಗಳು ಇಲ್ಲಿ ಲಭ್ಯವಿರುವುದು ಎಂದು ಹೇಳಿದರು. ಮಾತ್ರವಲ್ಲದೇ ಜೋಧ್ಪುರ್ ಕರಕುಶಲ ಮರದ ಪಿಠೋಪರಣಗಳು, ಸಾರಂಗ್ಪುರ್ ಮರದ ಪಿಠೋಪರಣಗಳು, ಹೈದಾರ್ಬಾದ್ ಕಪ್ಪು ಮೇಟಲ್ನ ವಿಗ್ರಹಗಳು, ಹಿತ್ತಳೆಯ ಕಲಾಕೃತಿಗಳು, ವಿಶೇಷ ಶೈಲಿಯ ಜೈಪುರ್ ಆಭರಣಗಳು, ವಿಶೇಷ ವಿನ್ಯಾಸದ ವೈವಿಧ್ಯಮಯ ಮಣ್ಣಿನ ವಿಗ್ರಹಗಳು, ನೀಲಿ ಬಣ್ಣದ ಕ್ರಾಕಾರಿ ಐಟಮ್ಗಳ ಬೃಹತ್ ಸಂಗ್ರಹಗಳಿವೆ ಎಂದು ಪ್ರಮೋದ್ ಸಿಂಗ್ ತಿಳಿಸಿದರುಚಿತ್ರಗಳು: ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

Rohan Corporation Joins Forces with Shah Rukh Khan to Redefine Real Estate in Karnataka. Signs Global Superstar Shah Rukh Khan as Brand Ambassador for Karnataka

Bengaluru, May 1, 2025 — In a defining moment for Karnataka’s real estate sector, Rohan Corporation, Mangalore’s leading builders and developers, proudly announces Bollywood legend Shah Rukh Khan as its official brand ambassador for Karnataka.Founded and headquartered in Mangalore, Karnataka, Rohan Corporation is a name synonymous with trust, class, and excellence. Over the past three decades, the company has played a pivotal role in shaping Mangalore’s skyline with landmark developments such as Hill Crest, High Crest, Rohan City & Rohan Square — projects that reflect their vision of modern, community-driven urban spaces. This monumental collaboration with Shah Rukh Khan reflects a shared passion for excellence, innovation, and community-building — values that have consistently shaped Rohan Corporation’s journey. With 25 completed landmark projects and a relentless commitment to sustainable, customer-centric development, the company continues to set new benchmarks in Karnataka’s real estate landscape.Dr. Rohan Monteiro, Founder and Chairman of Rohan Corporation, said: “Having Shah Rukh Khan represent Rohan Corporation is more than a partnership — it’s a meeting of dreams and determination. Just as Shah Rukh Khan has inspired millions through his journey of hard work and passion, Rohan Corporation aspires to inspire through spaces that transform lives. With him on board, we are reaffirming our promise to redefine urban living in Karnataka and beyond.”Shah Rukh Khan added: “It is an absolute pleasure to collaborate with Rohan Corporation — a brand that mirrors my own values of perseverance, innovation, and heart. Their commitment to creating sustainable, community-driven spaces resonates deeply with me. I look forward to being part of their incredible journey of shaping tomorrow’s cities with soul and vision.”Rooted in a strong vision to harmonize urban living with nature, Rohan Corporation strives to foster vibrant communities that enhance quality of life while preserving the environment. Their mission is to deliver exceptional value through cutting-edge design, superior construction quality, and an unwavering focus on customer delight.With core values anchored in integrity, excellence, innovation, and sustainability, Rohan Corporation’s partnership with Shah Rukh Khan signals a new era of dynamic growth, broader engagement, and a stronger brand presence — inspiring a new generation of dreamers and homeowners across Karnataka.About Rohan Corporation:Rohan Corporation is a premier real estate development company based in Mangalore, Karnataka, renowned for its pioneering projects and steadfast commitment to customer satisfaction. Established with a vision to revolutionize urban living, the company has consistently delivered exceptional value through innovative approaches, sustainable practices, and meticulous attention to detail. With a diverse portfolio spanning residential, commercial, and mixed-use developments, Rohan Corporation continues to enhance quality of life and foster vibrant communities across Karnataka. For further details please reach out to Pitch Perfect. Website: www.rohancorporation.in

ಪ್ರಾದೇಶಿಕ ವಾರ್ತೆಗಳು

ರೋಹನ್ ಕಾರ್ಪೊರೇಷನ್ ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ಮರುವ್ಯಾಖ್ಯಾನಿಸಲು ಶಾರುಖ್ ಖಾನ್ ರ ಬಲವನ್ನು ಹೊಂದಿದೆ. ಕರ್ನಾಟಕಕ್ಕೆ ಬ್ರ್ಯಾಂಡ್ ರಾಯಭಾರಿಯಾಗಿ ಜಾಗತಿಕ ಸೂಪರ್‌ಸ್ಟಾರ್ ಶಾರುಖ್ ಖಾನ್‌ರವರು ಸಹಿ ಮಾಡಿದ್ದಾರೆ

ಬೆಂಗಳೂರು, ಮೇ 1, 2025 – ಕರ್ನಾಟಕದ ರಿಯಲ್ ಎಸ್ಟೇಟ್ ವಲಯಕ್ಕೆ ಅವಿಸ್ಮರಣೀಯ ಕ್ಷಣದಲ್ಲಿ, ಮಂಗಳೂರಿನ ಪ್ರಮುಖ ಬಿಲ್ಡರ್‌ಗಳು ಹಾಗೂ ಡೆವಲಪರ್‌ಗಳಾದ ರೋಹನ್ ಕಾರ್ಪೊರೇಷನ್, ಕರ್ನಾಟಕಕ್ಕೆ ತನ್ನ ಅಧಿಕೃತ ಬ್ರ್ಯಾಂಡ್ ರಾಯಭಾರಿಯಾಗಿ ಬಾಲಿವುಡ್ ದಂತಕಥೆ ಶಾರುಖ್ ಖಾನ್‌ರನ್ನು ಹೆಮ್ಮೆಯಿಂದ ಘೋಷಿಸುತ್ತಿದೆ.ಕರ್ನಾಟಕದ ಮಂಗಳೂರಿನಲ್ಲಿ ಸ್ಥಾಪನೆಯಾದ ಮತ್ತು ಕೇಂದ್ರಕಚೇರಿ ಹೊಂದಿರುವ, ರೋಹನ್ ಕಾರ್ಪೊರೇಷನ್ ವಿಶ್ವಾಸ, ದರ್ಜೆ ಹಾಗೂ ಅತ್ಯುತ್ತಮತೆಗೆ ಅನುರೂಪ ಪದವಾಗಿದೆ. ಕಳೆದ ಮೂರು ದಶಕಗಳಿಂದ, ಕಂಪನಿ ಹಿಲ್ ಕ್ರೆಸ್ಟ್, ಹೈ ಕ್ರೆಸ್ಟ್, ರೋಹನ್ ಸಿಟಿ ಮತ್ತು ರೋಹನ್ ಸ್ಕ್ವೇರ್ ಇತ್ಯಾದಿ ಪ್ರಮುಖ ಡೆವಲಪ್‌ಮೆಂಟ್‌ಗಳೊಂದಿಗೆ ಮಂಗಳೂರಿನ ಆಕಾಶದೆತ್ತರದ ಕಟ್ಟಡಗಳನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.- ಈ ಯೋಜನೆಗಳು ಆಧುನಿಕತೆ, ಸಮುದಾಯ ಚಾಲಿತ ನಗರ ಸ್ಥಳದ ದೃಷ್ಟಿಕೋನವನ್ನು ಪ್ರತಿಫಲಿಸುತ್ತದೆ. ಶಾರುಖ್‌ಖಾನ್‌ರೊಂದಿಗಿನ ಈ ಅವಿಸ್ಮರಣೀಯ ಸಂಯೋಜನೆ ಅತ್ಯುತ್ತಮತೆ, ನಾವೀನ್ಯತೆ ಹಾಗೂ ಸಮುದಾಯ ನಿರ್ಮಾಣಕ್ಕೆ ಸಮರ್ಪಿತ ಮನೋಭಾವವನ್ನು ಪ್ರತಿಫಲಿಸುತ್ತದೆ- ಇದು ರೋಹನ್ ಕಾರ್ಪೊರೇಷನ್‌ನ ಪ್ರಯಾಣವನ್ನು ನಿರಂತರವಾಗಿ ರೂಪಿಸಿದ ಮೌಲ್ಯಗಳನ್ನು ಒಳಗೊಂಡಿದೆ. 25 ಪೂರ್ಣಗೊಳಿಸಲಾದ ಹೆಗ್ಗುರುತಿನ ಯೋಜನೆಗಳು ಹಾಗೂ ಸುಸ್ಥಿರತೆ, ಗ್ರಾಹಕ ಕೇಂದ್ರಿತ ಅಭಿವೃದ್ಧಿಯೆಡೆಗೆ ನಿರಂತರ ಬದ್ಧತೆಯೊಂದಿಗೆ, ಕಂಪನಿ ಕರ್ನಾಟಕದ ರಿಯಲ್ ಎಸ್ಟೇಟ್ ವಲಯದಲ್ಲಿ ಹೊಸ ಗುರುತನ್ನು ಮೂಡಿಸುವುದನ್ನು ಮುಂದುವರೆಸಿದೆ.ರೋಹನ್ ಕಾರ್ಪೊರೇಷನ್‌ನ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಡಾ. ರೋಹನ್ ಮೊಂತೇರೊ ಹೀಗೆ ಹೇಳಿದ್ದಾರೆ: “ಶಾರುಖ್ ಖಾನ್‌ರನ್ನು ಹೊಂದಿರುವುದು ರೋಹನ್ ಕಾರ್ಪೊರೇಷನ್ ಪಾಲುದಾರಿಕೆಗಿಂತ ಹೆಚ್ಚಿನದ್ದೆಂದು ಪ್ರತಿನಿಧಿಸುತ್ತದೆ- ಇದು ಕನಸು ಹಾಗೂ ಬದ್ಧತೆಯ ಸಮ್ಮಿಲನವಾಗಿದೆ. ಶಾರುಖ್ ಖಾನ್ ತಮ್ಮ ಪರಿಶ್ರಮ ಹಾಗೂ ಬದ್ಧತೆಯಿಂದ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿರುವಂತೆ, ರೋಹನ್ ಕಾರ್ಪೊರೇಷನ್ ಜೀವನವನ್ನು ಮಾರ್ಪಡಿಸುವ ಮೂಲಕ ಸ್ಫೂರ್ತಿ ನೀಡುವ ಆಕಾಂಕ್ಷೆ ಹೊಂದಿದೆ. ಅವರನ್ನು ನಮ್ಮೊಂದಿಗೆ ಹೊಂದುವ ಮೂಲಕ, ನಾವು ಕರ್ನಾಟಕ ಹಾಗೂ ಅದರಾಚೆಗೆ ನಗರ ಜೀವನವನ್ನು ಮರುವ್ಯಾಖ್ಯಾನಿಸುವ ನಮ್ಮ ಭರವಸೆಗೆ ಬದ್ಧರಾಗಿದ್ದೇವೆ.”ಶಾರುಖ್ ಖಾನ್ ಹೀಗೆ ಹೇಳಿದ್ದಾರೆ: “ನನ್ನ ಪರಿಶ್ರಮ, ನಾವೀನ್ಯತೆ ಮತ್ತು ಹೃದಯವನ್ನು ಪ್ರತಿಫಲಿಸುವ ಬ್ರ್ಯಾಂಡ್ ಆಗಿರುವ ರೋಹನ್ ಕಾರ್ಪೊರೇಷನ್‌ನೊಂದಿಗೆ ಕೈಜೋಡಿಸುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಸುಸ್ಥಿರ, ಸಮುದಾಯ ಚಾಲಿತ ಜಾಗಗಳು ನನ್ನಲ್ಲಿ ಆಳವಾಗಿ ಪ್ರತಿಧ್ವನಿಸುತ್ತಿದೆ. ಹೃದಯ ಹಾಗೂ ದೃಷ್ಟಿಕೋನದೊಂದಿಗೆ ನಾಳಿನ ನಗರಗಳನ್ನು ರೂಪಿಸುವ ಅದ್ಭುತ ಪ್ರಯಾಣದ ಭಾಗವಾಗಿರಲು ನಾನು ಎದುರು ನೋಡುತ್ತಿದ್ದೇನೆ.”ಪ್ರಕೃತಿಯೊಂದಿಗೆ ನಗರ ಜೀವನವನ್ನು ಸಾಮರಸ್ಯಗೊಳಿಸುವ ದೃಢವಾದ ದೃಷ್ಟಿಕೋನದ ಬೇರನ್ನು ಹೊಂದಿರುವ ರೋಹನ್ ಕಾರ್ಪೊರೇಷನ್ ಪರಿಸರವನ್ನು ಸಂರಕ್ಷಿಸುವುದರೊಂದಿಗೆ ಜೀವನದ ಗುಣಮಟ್ಟವನ್ನು ವಿಸ್ತರಿಸುವ ಉತ್ಸಾಹಭರಿತ ಸಮುದಾಯಗಳನ್ನು ಪೋಷಿಸಲು ಶ್ರಮಿಸುತ್ತಿದೆ. ಅತ್ಯುತ್ತಮ ವಿನ್ಯಾಸ, ಅತ್ಯದ್ಭುತ ನಿರ್ಮಾಣ ಗುಣಮಟ್ಟ ಹಾಗೂ ಗ್ರಾಹಕ ಸಂತೋಷದ ಮೇಲೆ ನಿರಂತರ ಕೇಂದ್ರೀಕರಿಸುವಿಕೆಯ ಮೂಲಕ ಅಸಾಧಾರಾಣ ಮೌಲ್ಯವನ್ನು ವಿತರಿಸುವುದು ಅವರ ಧ್ಯೇಯವಾಗಿದೆ.ಸಮಗ್ರತೆ, ಅತ್ಯುತ್ತಮತೆ, ನಾವೀನ್ಯತೆ, ಹಾಗೂ ಸುಸ್ಥಿರತೆಯ ಪ್ರಮುಖ ಮೌಲ್ಯಗಳೊಂದಿಗೆ, ಶಾರುಖ್ ಖಾನ್‌ರೊಂದಿಗೆ ರೋಹನ್ ಕಾರ್ಪೊರೇಷನ್‌ರವರ ಪಾಲುದಾರಿಕೆ ಹೊಸ ಕ್ರಿಯಾತ್ಮಕ ಬೆಳವಣಿಗೆ, ವ್ಯಾಪಕ ತೊಡಗುವಿಕೆ ಮತ್ತು ದೃಢವಾದ ಬ್ರ್ಯಾಂಡ್ ಅಸ್ತಿತ್ವದ ನವಯುಗವನ್ನು ಸಂಕೇತಿಸುತ್ತಿದ್ದು – ಇದು ಕರ್ನಾಟಕದಾದ್ಯಂತ ಕನಸುಗಾರರ ಹೊಸ ತಲೆಮಾರು ಮತ್ತು ಮನೆ ಮಾಲೀಕರಿಗೆ ಸ್ಫೂರ್ತಿಯಾಗಿದೆ.

ಪ್ರಾದೇಶಿಕ ವಾರ್ತೆಗಳು

ಐಅರ್‌ಸಿಎಸ್ ವಾರ್ಷಿಕ ಸಭೆಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಸಿಎ ಶಾಂತಾರಾಮ ಶೆಟ್ಟಿ ಭಾಗಿ

ಮಂಗಳೂರು : ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮೇ 13ರಂದು ನಡೆಯಲಿರುವ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ (ಐಆರ್‌ಸಿಎಸ್)ಯ ಕೇಂದ್ರ ಕಚೇರಿಯ ವಾರ್ಷಿಕ ಮಹಾ ಸಭೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆಯ ಪ್ರತಿನಿಧಿಯಾಗಿ ದ.ಕ.ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಭಾಗವಹಿಸಲಿದ್ದಾರೆ. ರೆಡ್‌ಕ್ರಾಸ್ ಸಂಸ್ಥೆಯ ರಾಷ್ಟ್ರೀಯ ಪ್ರಧಾನ ಕಚೇರಿಯ ಅಧ್ಯಕ್ಷರಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಧ್ಯಕ್ಷತೆಯಲ್ಲಿ, ರೆಡ್‌ಕ್ರಾಸ್ ಕೇಂದ್ರ ಕಚೇರಿಯ ಚೇರ್ಮನ್, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರ ಉಪಸ್ಥಿತಿಯಲ್ಲಿ ಈ ಸಭೆ ನಡೆಯಲಿದೆ.

ಪ್ರಾದೇಶಿಕ ವಾರ್ತೆಗಳು

ಆರೋಗ್ಯವು ಒಂದು ಹೂಡಿಕೆ, ಅದೊಂದು ವೆಚ್ಚವಲ್ಲ: ಫಾ. ಕ್ಲಿಫರ್ಡ್ ಫೆರ್ನಾಂಡಿಸ್‌

ಮಂಗಳೂರು: ಕುಲಶೇಖರದ ಕೋರ್ಡೆಲ್ ಹೋಲಿ ಕ್ರಾಸ್ ಚರ್ಚ್ ನಲ್ಲಿ ಬೆಥನಿ ಜೀವನ್‌ಧಾರಾ ಆರೋಗ್ಯ ಆಯೋಗ, ಮಹಿಳಾ ಆಯೋಗ, ಕುಟುಂಬ ಆಯೋಗ ಮತ್ತು ಬೆಥನಿ ಲೇ ಅಸೋಸಿಯೇಶನ್‌ ನ ಸಹಯೋಗದಲ್ಲಿ ವಿಶಿಷ್ಟ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಮೇ 4 ರಂದು ನಡೆಯಿತು. ಸ್ಥಳೀಯ ಜನ ಸಮುದಾಯಕ್ಕೆ ಮೂಲಭೂತ ವೈದ್ಯಕೀಯ ಸೇವೆಗಳನ್ನು ಒದಗಿಸುವುದು ಹಾಗೂ ಆರೋಗ್ಯ ಜಾಗೃತಿ ಮೂಡಿಸುವುದು ಮತ್ತು ಸಾಮಾನ್ಯ ಕಾಯಿಲೆಗಳ ಆರಂಭಿಕ ರೋಗ ನಿರ್ಣಯವನ್ನು ಮಾಡುವುದು ಈ ಶಿಬಿರದ ಉದ್ದೇಶವಾಗಿತ್ತು.ಫಾದರ್ ಮುಲ್ಲರ್ ಮೆಡಿಕಲ್‌ ಕಾಲೇಜು ಮತ್ತು ಚಾರಿಟೆಬಲ್ ಆಸ್ಪತ್ರೆಯ 15 ತಜ್ಞ ವೈದ್ಯರು ಮತ್ತು ಸಿಬಂದಿ ಶಿಬಿರವನ್ನು ನಡೆಸಿಕೊಟ್ಟರು. ಸಾಮಾನ್ಯ ಆರೋಗ್ಯ ತಪಾಸಣೆ (ಬಿಪಿ ಮತ್ತು ಶುಗರ್), ಕಣ್ಣು ತಪಾಸಣೆ, ಮಕ್ಕಳ ರೋಗಗಳು, ಚರ್ಮರೋಗ, ಒಬಿಜಿ, ಇಸಿಜಿ, ಮೂಳೆ ಚಿಕಿತ್ಸೆಗೆ ಸಂಬಂಧಿಸಿ ತಪಾಸಣೆ ನಡೆಸಲಾಯಿತು.ಫಾದರ್ ಮುಲ್ಲರ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಕೆಲ್ವಿನ್ ಪಾಯ್ಸ್‌ ಮತ್ತು ಶಿಬಿರ ಸಂಯೋಜಕಿ ಡಾ. ಕ್ಯಾರೋಲಿನ್ ಪಾಯ್ಸ್‌ ಅವರ ನೇತೃತ್ವದಲ್ಲಿ ಶಿಬಿರ ಆಯೋಜಿಸಲಾಗಿತ್ತು.ಕೋರ್ಡೆಲ್‌ ಚರ್ಚ್ ನ ಧರ್ಮಗುರು ಫಾ. ಕ್ಲಿಫರ್ಡ್ ಫೆರ್ನಾಂಡಿಸ್ ಆಶೀರ್ವದಿಸಿದರು ಹಾಗೂ ಚರ್ಚ್ ಉಪಾಧ್ಯಕ್ಷೆ ರೂತ್ ಕ್ಯಾಸ್ಟೆಲಿನೊ, 21 ಆಯೋಗಗಳ ಸಂಯೋಜಕ ಡಾಲ್ಫಿ ಡಿ’ಸೋಜಾ ಮತ್ತು ಆಯೋಗಗಳ ಪ್ರಮುಖರು ಮತ್ತು ಸ್ವಯಂಸೇವಕರ ಸಮ್ಮುಖದಲ್ಲಿ ಶಿಬಿರವನ್ನ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ಆರೋಗ್ಯವು ಒಂದು ಹೂಡಿಕೆ, ಅದೊಂದು ವೆಚ್ಚವಲ್ಲ ಎಂದು ಹೇಳಿದರು. ಜೀವನ್‌ ಧಾರಾ ಕೇಂದ್ರದ ನಿರ್ದೇಶಕಿ ಸಿಸ್ಟರ್‌ ರೀನಾ ಜೂಲಿಯೆಟ್ ಉಪಸ್ಥಿತರಿದ್ದರು. 300 ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದರು. ಹಲವರಿಗೆ ಸಣ್ಣಪುಟ್ಟ ಕಾಯಿಲೆಗಳು ಇರುವುದು ಪತ್ತೆಯಾಗಿದ್ದು, ಅಗತ್ಯ ಔಷಧಿಗಳನ್ನು ನೀಡಲಾಯಿತು. ಉಚಿತ ವೈದ್ಯಕೀಯ ಸೇವೆಗಳಿಗೆ ಫಲಾನುಭವಿಗಳು ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಮತ್ತು ಭವಿಷ್ಯದಲ್ಲಿ ನಿಯಮಿತ ಶಿಬಿರಗಳನ್ನು ನಡೆಸ ಬೇಕೆಂದು ವಿನಂತಿಸಿದರು.

ಪ್ರಾದೇಶಿಕ ವಾರ್ತೆಗಳು

“ಗಂಟ್ ಕಲ್ವೆರ್” ತುಳು ಚಿತ್ರ ಮೇ 23 ರಂದು ರಾಜ್ಯಾದ್ಯಾಂತ ಬಿಡುಗಡೆ

ಮಂಗಳೂರು: ಬಹು ನಿರೀಕ್ಷೆಯ “ಗಂಟ್ ಕಲ್ವೆರ್” ತುಳು ಚಿತ್ರ ಇದೇ ಬರುವ ಮೇ 23 ರಂದು ರಾಜ್ಯಾದ್ಯಾಂತ ಬಿಡುಗಡೆ‌ ಆಗಲಿದೆ. ಚಿತ್ರ ಈಗಾಗಲೇ ಸೆನ್ಸಾರ್ ಆಗಿದೆ ಎಂದು ಸಿನಿಮಾದ ನಿರ್ದೇಶಕ ಸುಧಾಕರ ಬನ್ನಂಜೆ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ತುಳು ನಾಟಕ ಧಾರಾವಾಹಿ ಸಿನಿಮಾಗಳಲ್ಲಿ ತುಳುನಾಡಿನ ಕೀರ್ತಿಯನ್ನು ಎತ್ತಿಹಿಡಿದ ಸುಧಾಕರ್ ಬನ್ನಂಜೆಯವರು ಕತೆ ಚಿತ್ರಕತೆ ಸಂಭಾಷಣೆ ಹಾಡು ಬರೆದು ನಿರ್ದೇಶನ ಮಾಡಿದ್ದಾರೆ.ತುಳುಮೂಲದ ಕನ್ನಡ ಚಿತ್ರರಂಗದ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ವಿ ಮನೋಹರ್ ಇದಕ್ಕೆ ಸಂಗೀತ ನೀಡಿದ್ದಾರೆ. ತುಳುನಾಡಿನ ಅಪ್ಪಟ ಪ್ರತಿಭೆ ತಮ್ಮ ಲಕ್ಷ್ಮಣ ಕಲಾನಿರ್ದೇಶನ , ಕೆ.ಗಿರೀಶ್ ಕುಮಾರ್ ಸಂಕಲನ, ಶಂಕರ್ ರವಿಕಿಶೋರ್ ಛಾಯಾಗ್ರಹಣ. ಪ್ರಶಾಂತ್ ಎಳ್ಳಂಪಳ್ಳಿ ಮತ್ತು ರಾಮದಾಸ್ ಸಸಿಹಿತ್ಲು ಸಹ ನಿರ್ದೇಶಕರಾಗಿ ದುಡಿದಿದ್ದಾರೆ.ಸ್ನೇಹಕೃಪಾ ಲಾಂಚನದಲ್ಲಿ ಉಪ್ಪಳ ರಾಜಾರಾಮ ಶೆಟ್ಟಿ ಅರ್ಪಿಸಿ ಗಿರೀಶ್ ಪೂಜಾರಿ ಸಹಕಾರದೊಂದಿಗೆ ಸುಧಾಕರ ಬನ್ನಂಜೆ ನಿರ್ಮಿಸಿರುವ ಈ ಚಿತ್ರದ ಇತರ ಸಹನಿರ್ಮಾಪಕರು ಮಮತಾ ಎಸ್ ಬನ್ನಂಜೆ , ಕೃತಿ ಆರ್ ಶೆಟ್ಟಿ,ಪ್ರಾರ್ಥನ್ ಬನ್ನಂಜೆ .ಪ್ರೇರಣ್ ಬನ್ನಂಜೆ. ಪ್ರಚಾರ ಬಾಳ ಜಗನ್ನಾಥ ಶೆಟ್ಟಿ, ಚೀಫ್ ಕೋರ್ಡಿನೆಟರ್ ಸುಧಾಕರ ಕುದ್ರೋಳಿ. ಸಹಾಯ ಸಂತೋಷ.ತಾರಾಗಣದಲ್ಲಿ ನವೀನ್ ಪಡೀಲ್, ಅರವಿಂದ ಬೋಳಾರ್, ಆರ್ಯನ್ ಶೆಟ್ಟಿ, ,ಸ್ಮಿತಾ ಸುವರ್ಣ, ಭೋಜರಾಜ್ ವಾಮಂಜೂರು, ಸುಧೀರ್ ಕೊಠಾರಿ, ಉಮೇಶ್ ಮಿಜಾರು , ಸುಂದರ ರೈ ಮಂದಾರ , ಸಂದೀಪ ಶೆಟ್ಟಿ ಮಾಣಿಬೆಟ್ಟು, ಗಿರೀಶ್ ಶೆಟ್ಟಿ ಕಟೀಲು., ನಾಗೇಶ್ ಡಿ ಶೆಟ್ಟಿ , ಕ್ಲಾಡಿ ಡಿಲೀಮಾ, ,ಸಂಪತ್ , ರವಿ ಸುರತ್ಕಲ್, ವಸಂತ ಮುನಿಯಾಲ್, ಯಾದವ ಮಣ್ಣ ಗುಡ್ಡೆ , ಪ್ರದೀಪ್ ಆಳ್ವ , ತಮ್ಮಲಕ್ಷಣ, ಪ್ರಶಾಂತ್ ಎಳ್ಳಂಪಳ್ಳಿ, ರಣವೀರ್ , ಶೇಖರ ಪಾಂಗಾಳ , ರಾಕೇಶ್ ಆಚಾರ್ಯ ಮಂಗೇಶ್ ಭಟ್ ವಿಟ್ಲ,ಜೀವನ್ ಉಲ್ಲಾಲ್ , ಚೇತಕ್ ಪೂಜಾರಿ ,ಮೋಹನ್ ಕೊಪ್ಪಳ, ಅರುಣ್ ಸತೀಶ್ ಕಲ್ಯಾಣಪುರ ಸುರೇಶ್ ಪಾಂಗಾಳ, ಸಂಚಿತ, ಮೈತ್ರಿ, ದಿಶಾ , ನಮಿತಾ ಸಿಂಚನಾ ಉಷಾ ಫೆರ್ನಾಂಡಿಸ್ ಮೋನಿಕಾ ಅಂದ್ರಾದೆ , ಶಾಂತಿ ಶೆಣೈ, ಸುಮಾಲಿನಿ ರಮಾನಂದ ಕರ್ಪೆ ಧನಂಜಯ ವಿಟ್ಲ ಅಶೋಕ , ಪ್ರೇರಣ್ ಮಾ‌.ಪದ್ಮನಾಭ್ , ನಿಧಿ , ಸಮೃದ್ದಿಮೊದಲಾದ ತುಳುನಾಡ ಅನೇಕ ಪ್ರತಿಭಾವಂತ ನಟ ನಟಿಯರು ಅಭಿನಯಿಸಿದ್ದಾರೆ‌.ಪ್ರತಿಭಾವಂತ ನಾಯಕ ನಟರಾದ ಅಥರ್ವ ಪ್ರಕಾಶ್ , ಶ್ರೀಕಾಂತ ರೈ, ಪ್ರಣವ್ ಹೆಗ್ಡೆ , ಶೈಲೇಶ್ ಕೋಟ್ಯಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಉಮೇಶ್ ಮಿಜಾರ್, ರಾಕೇಶ್ ಆಚಾರ್ಯ, ಆರ್ಯನ್ ಶೆಟ್ಟಿ, ಸುಧಾಕರ ಕುದ್ರೋಳಿ, ಪ್ರಶಾಂತ್ ಆಚಾರ್ಯ, ನಾಗೇಶ್ ಡಿ ಶೆಟ್ಟಿ, ತಮ್ಮ ಲಕ್ಷ್ಮಣ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಸಿಂಗಾಪುರದಲ್ಲಿ ಶ್ರೀನಿವಾಸ್ ನಾಯಕ್ ಇಂದಾಜೆ ಅವರ ‘ಸಾಧನೆಯ ಹಾದಿಯಲ್ಲಿ’ ಕಿರು ಹೊತ್ತಿಗೆ ಬಿಡುಗಡೆ. ‘ಸಿಂಗಾಪುರ ಮಾದರಿಯಲ್ಲಿ ಮಂಗಳೂರು ಅಭಿವೃದ್ಧಿ ಯಾಗಬೇಕು’: ಶ್ರೀನಿವಾಸ್ ನಾಯಕ್ ಇಂದಾಜೆ

ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಯುವ ಪತ್ರಕರ್ತ ಶ್ರೀನಿವಾಸ್ ನಾಯಕ್ ಇಂದಾಜೆ ಅವರ ಸಾಧನೆಯ ಹಾದಿಯಲ್ಲಿ ಕಿರು ಹೊತ್ತಿಗೆಯನ್ನು ಸಿಂಗಾಪುರದ ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್ ನಿರ್ದೇಶಕಿ ಶ್ರೀಮತಿ ಅನಿತಾ ಜಗದೀಶ್ ಬಿಡುಗಡೆ ಗೊಳಿಸಿದರು.ಸಿಂಗಾಪುರದ ಪ್ಲ್ಯೂಮೆ ಕಾನ್ಫರೆನ್ಸ್ ಹಾಲ್ ನಲ್ಲಿ ಭಾನುವಾರ ನಡೆದ 49 ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ಕಿರು ಹೊತ್ತಿಗೆ ಬಿಡುಗಡೆ ಗೊಳಿಸಿ ಮಾತನಾಡಿದ ಶ್ರೀಮತಿ ಅನಿತಾ ಜಗದೀಶ್ ಪತ್ರಕರ್ತರು ಹಲವಾರು ಸವಾಲುಗಳನ್ನು ಎದುರಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಪತ್ರಕರ್ತರಾಗಿದ್ದುಕೊಂಡು ಶ್ರೀನಿವಾಸ್ ಅವರು ಮಾಡುತ್ತಿರುವ ಸಮಾಜಮುಖಿ ಕೆಲಸಗಳು ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮಾತನಾಡಿ ಸಿಂಗಾ ಪುರದ ಜನತೆಯ ಪ್ರೀತಿ, ಜೀವನ ಕ್ರಮ ಹಾಗೂ ಪರಿಸರ ಪ್ರೇಮ ನಮಗೆಲ್ಲರಿಗೂ ಮಾದರಿಯಾಗಿದೆ. ಮಂಗಳೂರು ಕೂಡಾ ಸಿಂಗಾಪುರ ಮಾದರಿಯಲ್ಲಿ ಅಭಿವೃದ್ಧಿ ಯಾಗಬೇಕಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಿಂಗಾಪುರ ಕನ್ನಡ ಸಂಘದ ಮಾಜಿ ಕಾರ್ಯದರ್ಶಿ ಗೋಪಾಲ್, ಇಂಟರ್ನ್ಯಾಷನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಒಫ್ ಇಂಡಿಯಾ ಅಧ್ಯಕ್ಷ ಮಂಜುನಾಥ್ ಸಾಗರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಮೇ 10ಕ್ಕೆ ನವೋದಯ ಸ್ವ-ಸಹಾಯ ಸಂಘದ “ರಜತ ಸಂಭ್ರಮ”

ಮಂಗಳೂರು: “ಮೇ 10ರಂದು ಗೋಲ್ಡ್ ಫಿಂಚ್ ಸಿಟಿಯಲ್ಲಿ ನವೋದಯ ಸ್ವಸಹಾಯ ಗುಂಪುಗಳ ರಜತ ಸಂಭ್ರಮ ಕಾರ್ಯಕ್ರಮ ನಡೆಯಲಿರುವುದು. ಸ್ವಸಂಘದ ಒಂದೂವರೆ ಲಕ್ಷ ಮಂದಿ ಸದಸ್ಯೆಯರು ಸಮವಸ್ತ್ರ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಸಕಲ ವ್ಯವಸ್ಥೆಯನ್ನೂ ಮಾಡಲಾಗಿದೆ” ಎಂದು ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. “ಅಂದು ದೇಶದಲ್ಲೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಂಘದ ಮಹಿಳೆಯರು ನೀಲಿ ಬಣ್ಣದ ಸಮವಸ್ತ್ರದಲ್ಲಿ ಪಾಲ್ಗೊಳ್ಳಲಿದ್ದು ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭಾಗವಹಿಸಲಿದ್ದಾರೆ. ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸ್ಪೀಕರ್ ಯು.ಟಿ. ಖಾದರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ವೀರೇಂದ್ರ ಹೆಗ್ಗಡೆ, ಪೇಜಾವರ ಮಠಾಧೀಶರು, ಸಹಕಾರಿ ಸಚಿವ ಕೆಎನ್ ರಾಜಣ್ಣ, ದಿನೇಶ್ ಗುಂಡೂರಾವ್, ಲಕ್ಷ್ಮಿ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್, ಆರ್.ಬಿ.ತಿಮ್ಮಾಪುರ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಲಕ್ಷ್ಮಣ ಸವದಿ, ಜಿ.ಟಿ. ದೇವೇಗೌಡ, ಡಾ.ಉದಯ್ ಶಂಕರ್ ಆವಸ್ತಿ, ಮುರುಗೇಶ್ ನಿರಾಣಿ, ಸುನೀಲ್ ಕುಮಾರ್, ಶಿವರಾಮ್ ಹೆಬ್ಬಾರ್ ,ಬ್ರಜೇಶ್ ಚೌಟ್, ಕೋಟ ಶ್ರೀನಿವಾಸ್ ಪೂಜಾರಿ, ಡಾ.ಪ್ರಕಾಶ್ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. “ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು 3000 ಬಸ್ಸುಗಳಲ್ಲಿ ಮಹಿಳೆಯರು ನಗರಕ್ಕೆ ಬರಲಿದ್ದು ಪ್ರತೀ ಬಸ್ ಗಳಲ್ಲಿ ಇಬ್ಬರು ಪುರುಷ ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು. ತಿಂಡಿ, ಊಟೋಪಚಾರದ ವ್ಯವಸ್ಥೆ ಮಾಡಲಿದ್ದು ಎಲ್ಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಶ್ರಮಿಸಲಾಗುವುದು” ಎಂದರು.ಪತ್ರಿಕಾಗೋಷ್ಟಿಯಲ್ಲಿ ಬ್ಯಾಂಕ್ ಅಧ್ಯಕ್ಷರಾದ ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಕಾರ್ಯಾಧ್ಯಕ್ಷ ಶಶಿಕುಮಾರ್ ರೈ ಬೊಳ್ಯೊಟ್ಟು, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಎಸ್. ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.ಚಿತ್ರಗಳು: ಸತೀಶ್ ಕಾಪಿಕಾಡ್

Scroll to Top