ಮದುವೆ ಹಾಲ್ ಬುಕ್ಕಿಂಗ್ ಮಾಡುವಾಗ ಕ್ಯಾಟರಿಂಗ್‍ನವರ ಲೈಸನ್ಸ್ ಪ್ರತಿ ಕಡ್ಡಾಯಗೊಳಿಸುವ ಕ್ರಮ ಶೀಘ್ರ ಜಾರಿಯಾಗಲಿ – ದ.ಕ. ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘದ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿಕೆ.

103.6K Views 14 Nov 2024

ಮಂಗಳೂರು: ಮದುವೆ ಹಾಲ್ ಬುಕ್ಕಿಂಗ್ ಮಾಡುವಾಗ ಹಾಲ್‍ನವರು ಕ್ಯಾಟರಿಂಗ್‍ನವರು ಯಾರು ಎಂದು ಕೇಳುತ್ತಾರೆ. ಈ ಸಂದರ್ಭದಲ್ಲಿ ಕ್ಯಾಟರಿಂಗ್‍ನವರ ಹೆಸರು ಬರೆಸಿಕೊಳ್ಳುವಾಗ ಲೈಸನ್ಸ್ ಪ್ರತಿಯನ್ನು ಕೂಡಾ ಹಾಜರು ಪಡಿಸುವಂತೆ ನಿಯಮ, ಪದ್ಧತಿಯನ್ನು ಮದುವೆ ಹಾಲ್‍ನವರು ಕಡ್ಡಾಯವಾಗಿ ಜಾರಿಗೊಳಿಸುವ ಕ್ರಮವನ್ನು ಮಾಡಬೇಕು. ಹಾಗದಲ್ಲಿ ಮಾತ್ರ ಅನಧಿಕೃತ ಕ್ಯಾಟರಿಂಗ್‍ನವರಿಗೆ ಕಡಿವಾಣ ಹಾಕಲು ಸಾಧ್ಯ ಎಂದು ದ.ಕ. ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘ (ರಿ)ದ ಅಧ್ಯಕ್ಷ ಅಬ್ದುಲ್ ರಶೀದ್‍ರವರು ತಿಳಿಸಿದ್ದಾರೆ.
Mp mla’s ನ್ಯೂಸ್ ಜೊತೆ ಮಾತನಾಡಿದ ಅವರು ಶುಭ ಕಾರ್ಯ ಮಾಡುವವರು ಲೈಸನ್ಸ್ ಹೊಂದಿದ ಕ್ಯಾಟರಿಂಗ್‍ನ್ನೇ ಬುಕ್ ಮಾಡಬೇಕೆಂದು ಎಂದಿದ್ದಾರೆ. ಒಂದು ವೇಳೆ ಫುಡ್ ಪಾಯಿಸನ್ ಸಂಭವಿಸಿದರೆ ಹಾಲ್‍ನವರು ಜವಾಬ್ದಾರಿಯಾಗುತ್ತಾರಾ? ಅಂತಹ ಸಂದರ್ಭದಲ್ಲಿ ಎಲ್ಲರೂ ಬೊಟ್ಟು ಮಾಡಿ ತೋರಿಸುವುದು ಅದಕ್ಕೆ ಕಾರಣರಾದ ಕ್ಯಾಟರಿಂಗನ್ನು. ಈ ಕಾರಣಕ್ಕೆ ಸಾರ್ವಜನಿಕರು ಪರವಾನಿಗೆ ಹೊಂದಿರುವ ಅಧಿಕೃತ ಕ್ಯಾಟರಿಂಗ್‍ಗಳಿಗೆ ಆರ್ಡರ್ ಕೊಡಬೇಕು. ಹಾಗಾದಲ್ಲಿ ಮಾತ್ರ ಅಂತಹ ಸಂದರ್ಭದಲ್ಲಿ ಸಂಘ ಮಧ್ಯಪ್ರವೇಶಿಸಿ ಗ್ರಾಹಕರಿಗೆ ನ್ಯಾಯದೊರಕಿಸಿಕೊಡಲು ಸಾಧ್ಯ ಎಂದು ಅಬ್ದುಲ್ ರಶೀದ್‍ರವರು ಹೇಳಿದ್ದಾರೆ.
ಈ ಬಗ್ಗೆ ಈಗಾಗಲೇ ಮದುವೆ ಹಾಲ್‍ಗಳ ಮಾಲಕರ ಸಂಘದ ಜೊತೆ ಮಾತಾಡಲಾಗಿದ್ದು, ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆಯ ಕಮೀಷನರ್ ರವರ ಗಮನಕ್ಕೂ ತರಲಾಗಿದೆ. ಮದುವೆ ಹಾಲ್‍ಗಳ ಮಾಲಕರ ಸಭೆ ಕರೆದು ಕ್ಯಾಟರಿಂಗ್‍ನವರು ಕಡ್ಡಾಯವಾಗಿ ಲೈಸನ್ಸ್ ಪ್ರತಿಯನ್ನು ಹಾಜರುಪಡಿಸಲೇಬೇಕಾದ ನಿಯಮ, ಪದ್ಧತಿಯನ್ನು ಅನುಷ್ಟಾನಗೊಳಿಸುವತ್ತ ನಮ್ಮ ಸಂಘ ಸತತ ಪ್ರಯತ್ನ ಮಾಡುತ್ತದೆ. ಅನಧಿಕೃತ ಕ್ಯಾಟರಿಂಗ್ ಹಾವಳಿಯನ್ನು ಸಂಪೂರ್ಣವಾಗಿ ಮಟ್ಟಹಾಕುವಲ್ಲಿ ಸಾರ್ವಜನಿಕರ, ಅಧಿಕಾರಿಗಳ, ಮದುವೆ ಹಾಲ್‍ಗಳ ಮಾಲಕರ ಪರಸ್ಪರ ಸಹಕಾರ ಅತ್ಯಗತ್ಯವಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಮದುವೆ ಹಾಲ್ ಬುಕ್ ಮಾಡುವಾಗ ಕ್ಯಾಟರಿಂಗ್‍ಗಳ ಲೈಸನ್ಸ್ ಪ್ರತಿ ಹಾಜರುಪಡಿಸುವಿಕೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವ ಕ್ರಮ ಜಾರಿಯಾಗಲಿ ಎಂದು ಅಬ್ದುಲ್ ರಶೀದ್‍ರವರು ಹೇಳಿದ್ದಾರೆ.

Read More News

ಇಂದು ಸಂಜೆ (ಸೆ.13 )ಬಿ.ಸಿ. ರೋಡ್ ನಲ್ಲಿ ನಡೆದ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಹುಟ್ಟುಹಬ್ಬದ 75ರ ಸಂಭ್ರಮ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮ.ಜೊತೆಗೆ, ಪ್ರಜ್ಞಾಶ್ರಮದ ವಿದ್ಯಾರ್ಥಿಗಳಿಗೆ ರೋಶನ್ ರೈ ನೇತೃತ್ವದಲ್ಲಿ ಭೋಜನ ವ್ಯವಸ್ಥೆ. ಮಾನವೀಯ ಮೌಲ್ಯಗಳಿಗೆ ಜೀವ ತುಂಬಿದ ಬೇಬಿಯಣ್ಣನ ಬರ್ತ್ ಡೇ.

ದ.ಕ. ಕಾಂಗ್ರೆಸ್ ಗೆ ಪದ್ಮರಾಜ್ ಸಾರಥ್ಯ: ಬಿಲ್ಲವ ಅಸ್ತ್ರ, ಬಂಟ-ಕ್ರೈಸ್ತ-ಮುಸ್ಲಿಂ ಸಮುದಾಯದ ಪ್ರತಿಕ್ರಿಯೆ ಹೇಗಿದೆ ಮತ್ತು 8 ವಿಧಾನ ಸಭಾ ಕ್ಷೇತ್ರದ ಗೆಲುವಿನ ಟಾರ್ಗೆಟ್ ಸೇರಿದಂತೆ ವಿಶೇಷ ಸಂದರ್ಶನದಲ್ಲಿ ಪದ್ಮರಾಜ್ ಪೂಜಾರಿ ಅವರು ಹೇಳಿದ್ದೇನು? MP MLA’S NEWS SPECIAL EXCLUSIVE REPORT by DR ASHOK SHETTY BN.

Scroll to Top