ಮಂಗಳೂರು: ಪಾಲ್ದನೆ ಚರ್ಚ್ ನಲ್ಲಿ ಹಿರಿಯ ನಾಗರಿಕರ ದಿನಾಚರಣೆ

111.7K Views 31 Oct 2024

ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಯಿತು. ಚರ್ಚ್ ವ್ಯಾಪ್ತಿಯ 10 ವಾರ್ಡ್ ಗಳ 82 ಮಂದಿ ಹಿರಿಯ ನಾಗರಿಕರು ಭಾಗವಹಿಸಿದ್ದರು. ಪ್ರಾರಂಭದಲ್ಲಿ ಬಲಿ ಪೂಜೆ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ವಂದನೀಯ ಫಾ. ರಿಚಾರ್ಡ್ ಕ್ವಾಡ್ರಸ್ ಅವರು ಹಿರಿಯ ನಾಗರಿಕರು ನಮಗೆ ದಾರಿ ದೀಪವಾಗಿದ್ದಾರೆ ಎಂದು ಹೇಳಿದರು. ಚರ್ಚಿನ ಪ್ರದಾನ ಧರ್ಮ ಗುರು ವಂದನೀಯ ಫಾ. ಆಲ್ಬನ್ ಡಿ ಸೋಜಾ ಅವರು ಹಿರಿಯ ನಾಗರಿಕರಿಗೆ ಹಿತ ವಚನ ನೀಡಿದರು.
ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಪ್ಯಾಟ್ಸಿ ಮೊಂತೇರೊ, ಸ್ವಾಗತಿಸಿದರು. ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಉಪಸ್ಥಿತರಿದ್ದರು. ಹಿರಿಯ ನಾಗರಿಕರ ಪರವಾಗಿ ಚಾರ್ಲ್ಸ್ ಡಿಮೆಲ್ಲೊ ತಮ್ಮ ಅನಿಸಿಕೆ ಹೇಳಿದರು. ಪ್ಲಾವಿಯಾ ಡಿ ಸೋಜಾ ಕಾರ್ಯಕ್ರಮ ನಿರ್ವಹಿಸಿದರು. ಸಿರಿಲ್ ಫೆರ್ನಾಂಡಿಸ್ ಮತ್ತು ತಂಡದವರು ಕಿರು ನಾಟಕ ಪ್ರದರ್ಶಿಸಿದರು. ಚಾರ್ಲ್ಸ್ ಫೆರ್ನಾಂಡಿಸ್ ನಗೆ ಹನಿ ಪ್ರದರ್ಶನ ನೀಡಿದರು.ಕ್ಲಿಫರ್ಡ್ ಅವರು ವಂದಿಸಿದರು

Read More News

ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾಲಕತ್ವದ ಸ್ಟೇಟ್ ಬ್ಯಾಂಕ್ ನಲ್ಲಿರುವ ಹೋಟೆಲ್ ಸ್ವಾಗತ್ ನ ಸಪ್ಲೈಯರ್, ಎಂಪಿ ಎಂಎಲ್ ಎ ನ್ಯೂಸ್ 11ನೇ ಸೌಹಾರ್ದ ಸಂಗಮದಲ್ಲಿ ಯುವರತ್ನ ಪ್ರಶಸ್ತಿ -2020 ಪುರಸ್ಕೃತ ಯುವ ಸಮಾಜ ಸೇವಕ ಅರುಣ್ ಶೆಟ್ಟಿ ಕೋಡಿಬೆಟ್ಟು, ಪೊಳಲಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ನೇತೃತ್ವ ದಲ್ಲಿ ದ.ಕ. ಜಿಲ್ಲಾ ಪ್ರಶಸ್ತಿ-2026 ಪ್ರಧಾನ.

ರಂಗಭೂಮಿ, ಚಲನಚಿತ್ರ ರಂಗದ ಅಭಿಜಾತ ಕಲಾವಿದ, ಎಸ್ ಡಿಸಿಸಿ ಬ್ಯಾಂಕ್ ನ ನಿವೃತ್ತ ಅಧಿಕಾರಿ, ರಂಗಭೂಷಣ ಲಕ್ಷ್ಮಣ್ ಕುಮಾರ್ ಮಲ್ಲೂರ್ ಅವರಿಗೆ ರಾಜ್ಯೋತ್ಸವದ ದಿನದಂದೇ ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಸ್ಥಾಪಕತ್ವದ ರಂಗಚಾವಡಿ ಸಂಸ್ಥೆಯಿಂದ ಸುರತ್ಕಲ್ ಬಂಟರ ಭವನದಲ್ಲಿ ನಡೆದ ರಂಗು ರಂಗಿನ ರಂಗೋತ್ಸವದಲ್ಲಿ ಪ್ರತಿಷ್ಟಿತ ರಂಗಚಾವಡಿ ಪ್ರಶಸ್ತಿ ಪ್ರದಾನ. ರಂಗಚಾವಡಿ ಸಂಸ್ಥೆಯ ನಿಸ್ವಾರ್ಥ ಕಲಾಸೇವೆಯನ್ನು ಶಾಘಿಸಿದ ಐಕಳ ಹರೀಶ್ ಶೆಟ್ಟಿ ಸಹಿತ ಗಣ್ಯರನೇಕರು.

Scroll to Top