ಗಾಂಧೀಜಿಯವರ ಚಿಂತನೆಗಳು ಎಲ್ಲಾ ಪತ್ರಕರ್ತರಿಗೆ ಎಂದೆಂದಿಗೂ ಮಾರ್ಗದರ್ಶಿ.

118.5K Views 1 Oct 2024

ಮಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ಮೂಲಮಂತ್ರಗಳು ವಿಶ್ವದಾದ್ಯಂತದ ಮಾಧ್ಯಮ ವ್ಯಕ್ತಿಗಳಿಗೆ ಮಾತ್ರವಲ್ಲ ಎಲ್ಲಾ ಮನುಷ್ಯರಿಗೆ ಕತ್ತಲಲ್ಲಿ ಮುನ್ನಡೆಸುವ ದಾರಿದೀಪಗಳಾಗಿವೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ ಹೇಳಿದರು. ಅವರು ಮಂಗಳೂರಿನ ಸಿಒಡಿಪಿಯಲ್ಲಿ ನಡೆದ ಇಂಡಿಯನ್ ಕ್ಯಾಥೋಲಿಕ್ ಪ್ರೆಸ್ ಅಸೋಸಿಯೇಷನಿನ 29 ನೇ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಗಾಂಧೀಜಿಯವರು ನಮಗೆ ಅನ್ಯರ ಅಭಿಪ್ರಾಯಗಳನ್ನು ಗೌರವಿಸುವ ಪರಂಪರೆಯನ್ನು ಪಾಲಿಸಲು ಕರೆ ನೀಡಿದ್ದಾರೆ. ಆ ಕೋರಿಕೆಯಂತೆ ನಾವೆಲ್ಲರೂ ಜವಾಬ್ದಾರಿಯಿಂದ ಮುಂದುವರೆಯಬೇಕೆಂದು ಹಾಗೂ ಗಾಂಧೀಜಿಯವರಂತೆ ಇಂದಿನ ಎಲ್ಲಾ ಪತ್ರಕರ್ತರು ನಿರ್ಭೀತರೂ ಸತ್ಯಪಕ್ಷಪಾತಿಗಳಾಗಬೇಕೆಂದು ಕರೆ ನೀಡಿದರು. ಮಾಧ್ಯಮಗಳ ಮೂಲಕ ಸತ್ಯದ ಹುಡುಕಾಟ ನಡೆಯುತ್ತಿದೆಯೇ? ಸತ್ಯ ನೋವು ನೀಡುತ್ತದೆ. ಆದರೆ ಅದು ನಿರ್ಗತಿಕರಿಗೆ ಬಲ ನೀಡುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಹೆನ್ರಿ ಡಿಸೋಜಾರವರು ಮಾತನಾಡಿ ವಿವಿಧ ಒತ್ತಡಗಳ ನಡುವೆ ಸಿಲುಕಿ ಹೋಗಿರುವ ಇಂದಿನ ಮಾಧ್ಯಮ ಜಗತ್ತಿನಲ್ಲಿ ಗಾಂಧೀಜಿಯವರ ಚಿಂತನೆಗಳು ಅಪ್ರಸ್ತುತ ಎನ್ನುವಂತೆ ಕಾಣುತ್ತಿದೆಯಾದರೂ ವಾಸ್ತವವಾಗಿ ಬೆಳಕಿನ ಅಗತ್ಯವಿರುವುದು ಕತ್ತಲಿನ ನಡುವೆಯೇ ಎನ್ನುವುದನ್ನು ಮರೆಯಬಾರದು. ಇಂತಹ ಗೊಂದಲದ ನಡುವೆಯೇ ಪ್ರಜಾತಂತ್ರದ ಹಾಗೂ ಭಾರತೀಯತೆಯ ಬಲವನ್ನು ಹೆಚ್ಚಿಸಲು ಮಾಧ್ಯಮಗಳ ಪಾತ್ರದ ಕುರಿತು ಗಾಂಧೀಜಿಯವರ ಚಿಂತನೆಗಳನ್ನು ಪುನಃ ನಮ್ಮ ಪತ್ರಿಕೋದ್ಯಮದ ಕೇಂದ್ರ ಭಾಗವಾಗಿಸುವ ಅಗತ್ಯವಿದೆ ಎಂದು ಹೇಳಿದರು.
ಸನ್ಮಾನ್ಯ ವಿಧಾನ ಪರಿಷತ್ತಿನ ಸದಸ್ಯರಾದ ಐವನ್ ಡಿಸೋಜಾ ಸಮಾವೇಶದ ಉದ್ಘಾಟಕರಾಗಿ ಉಪಸ್ಥಿತರಿದ್ದರು. ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠ ಗುರುಗಳಾದ ಬಹು ವಂದನೀಯ ಮ್ಯಾಕ್ಸಿಮ್ ಎಲ್ ನರೊನ್ಹಾ, ಐಸಿಪಿಎ ಅಧ್ಯಕ್ಷರಾದ ಇಗ್ನೇಷಿಯಸ್ ಗೊನ್ಸಾಲ್ವಿಸ್, ಕಾರ್ಯದರ್ಶಿ ಫಾ. ಸುರೇಶ್ ಮ್ಯಾಥ್ಯೂ, ಕಾರ್ಯಕ್ರಮದ ಸಂಯೋಜಕರಾದ ರಾಕ್ಣೊ ವಾರಪತ್ರಿಕೆಯ ಸಂಪಾದಕರಾದ ವಂದನೀಯ ಫಾದರ್ ರೂಪೇಶ್ ಮಾಡ್ತಾ, ಸಿಒಡಿಪಿ ನಿರ್ದೇಶಕರಾದ ವಂದನೀಯ ಫಾದರ್ ವಿನ್ಸೆಂಟ್ ಡಿಸೋಜಾ ವೇದಿಕೆಯಲ್ಲಿ ಹಾಜರಿದ್ದರು.

Read More News

ಸರಕಾರಿ ಆಸ್ಪತ್ರೆಗಳಲ್ಲಿ ರೇಬಿಸ್ ತಡೆಗಟ್ಟಲು ನೀಡುವ ERIG ಇಂಜೆಕ್ಷನ್ ಕಳಪೆ ಗುಣಮಟ್ಟದ ಔಷಧವಲ್ಲ -ಡಿಎಂಒ ಡಾ. ಶಿವಪ್ರಕಾಶ್ ಸ್ಪಷ್ಟನೆ. ಅದು ಓಕೆ, ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಬೆಲೆ ಬಾಳುವ ರಿಸ್ಕ್ ರಹಿತ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್ ಗಳ ಬಳಕೆಗೆ mpmlasnewstv ಒತ್ತಾಯ

Scroll to Top