ಕಳಸಗುರಿ: ನವಜ್ಯೋತಿ ಫ್ರೆಂಡ್ಸ್ ಕ್ಲಬ್ ಕಳಸಗುರಿ ಇವರ ವತಿಯಿಂದ ಡಿಸೆಂಬರ್ 01,2024ರ ಭಾನುವಾರ ಕಳಸಗುರಿ ಬಾರ್ ಲಚ್ಚಿಲ್ ಇಲ್ಲಿ ಕ್ರೀಡಾಕೂಟ ನಡೆಸಲಾಯಿತು.. ಸಂಸ್ಥೆಯ ಗೌರವಾಧ್ಯಕ್ಪರಾದ ರುಕ್ಮಯ ಸಪಳಿಗ ಉಳಿಯ, ಸಂಸ್ದೆಯ ಅಧ್ಯಕ್ಷರಾದ ಭೋಜ ಕುಲಾಲ್, ರಾಜೇಶ್ ರಾವ್, ಗೀತಾ ಬಾರ್ಲಚ್ಚಿಲ್ ಇವರು ದೀಪ ಪ್ರಜ್ವಲನೆಯ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.



ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ವಿಭಾಗವಾರು ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.ಸಂಸ್ಥೆಯ ಸದಸ್ಯರು, ಪರಿಸರದ ಎಲ್ಲಾ ಬಂಧುಗಳು ಅತ್ಯಂತ ಸಂಭ್ರಮದಿಂದ ಭಾಗವಹಿಸಿದರು. ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಸಂಸ್ದೆಯ ಅಧ್ಯಕ್ಷರು ಮತ್ತು ಸಂಸ್ಥೆಯ ಹಿರಿಯರ ಉಪಸ್ಥಿತಿಯಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಂಸ್ಥೆಯ ಎಲ್ಲಾ ಸದಸ್ಯರ ಪೂರ್ಣ ಸಹಕಾರದೊಂದಿಗೆ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ನಡೆಯಿತು.



ನವಜ್ಯೋತಿ ಫ್ರೆಂಡ್ಸ್ ಕ್ಲಬ್ ಕಳಸಗುರಿ ಇದರ ವತಿಯಿಂದ ಡಿಸೆಂಬರ್ 21 ರ ಶನಿವಾರ ಸಂಸ್ಥೆಯ ವಾರ್ಷಿಕೋತ್ಸವದ ಪ್ರಯುಕ್ತ ಬಪ್ಪನಾಡು ಮೇಳದವರಿಂದ ಯಕ್ಷಗಾನ ಬಯಲಾಟ ಮತ್ತು ಅಶಕ್ತ ಬಂಧುಗಳಿಗೆ ಸಹಾಯನಿಧಿ ನೀಡುವ ಕಾರ್ಯಕ್ರಮ ನಡೆಯಲಿದೆ.












































































































































































































