ಬೆಂಗಳೂರು ಕಾರ್ಕಳ ತಾಲೂಕಿನ ಮುನಿಯಾಲುವಿನ ಹೆಮ್ಮೆಯ ಸುಪುತ್ರ ಜಿ.ಎಸ್. ಗಂಗಾಧರ ಆಚಾರ್ಯ ಅವರು ಇಂದು ರಾಜ್ಯದ ಪ್ರತಿಷ್ಠಿತ ಮೂಲಸೌಕರ್ಯ ಕಂಪನಿಯೊಂದರಲ್ಲಿ ಉನ್ನತ ಹುದ್ದೆ ಅಲಂಕರಿಸಿ ನಾಡಿಗೆ ಕೀರ್ತಿ ತಂದಿದ್ದಾರೆ.
ಬೆಂಗಳೂರಿನ ಬಸವನಗುಡಿಯಲ್ಲಿರುವ ವಿಶಾಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (VIL) ಸಂಸ್ಥೆಯಲ್ಲಿ ಸೀನಿಯರ್ ಮ್ಯಾನೇಜರ್ (ಮೆಕ್ಯಾನಿಕಲ್) – ಆಪರೇಷನ್ & ಮೆಂಟೆನೆನ್ಸ್, ಪ್ಯಾನ್ ಇಂಡಿಯಾ ಪ್ರಾಜೆಕ್ಟ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಳ್ಳಿಯ ಸರಳ ಬದುಕಿನಿಂದ ಬಂದು, ತಮ್ಮ ಪರಿಶ್ರಮ, ತಾಂತ್ರಿಕ ಜ್ಞಾನದಿಂದ ಇಂದು ಭಾರತದಾದ್ಯಂತ ನಡೆಯುವ ಕೋಟ್ಯಾಂತರ ರೂಪಾಯಿ ಮೌಲ್ಯದ ನೀರು ಸರಬರಾಜು, ರಸ್ತೆ, ಕಟ್ಟಡ ಯೋಜನೆಗಳ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದಾರೆ.ಮುನಿಯಾಲು, ಕಾರ್ಕಳ ಭಾಗದ ಯುವಜನತೆಗೆ ಇವರು ಮಾದರಿ ವ್ಯಕ್ತಿ. ಗ್ರಾಮದ ಸಂಸ್ಕೃತಿ, ವಿನಯತೆಯನ್ನು ಕಾರ್ಪೊರೇಟ್ ಕ್ಷೇತ್ರದಲ್ಲೂ ಉಳಿಸಿಕೊಂಡಿರುವ ಹೆಮ್ಮೆಯ ಕನ್ನಡಿಗ. ಇವರು ಮಂಗಳೂರು ಕರ್ನಾಟಕ ಪಾಲಿಟೆಕ್ನಿಕ್ ನಲ್ಲಿ ಆಟೋಮೋಬೈಲ್ ಇಂಜಿನಿಯರಿಂಗ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಅಶೋಕ ನಗರದ ಬಿಸಿಯಂ ಹಾಸ್ಟೆಲ್ ನಲ್ಲಿದ್ದರು. ಇವರ ಸಾಧನೆ ಬಗ್ಗೆ Mp MLA’s News ಅಭಿನಂದನೆ ಸಲ್ಲಿಸಿದ್ದು, ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ಇವರ ಕಾಲೇಜ್ ದಿನದ ಸಹಪಾಠಿಯಾಗಿದ್ದು, ಗಂಗಾಧರ್ ಅವರು ಬಾಲ್ಯದಿಂದಲೂ ನಾಯಕತ್ವದ ಗುಣ ಹೊಂದಿದ್ದರು. ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಟ.ಛಲ, ಧ್ಯೇಯ,ದೃಢ ಸಂಕಲ್ಪ ಉಳ್ಳವರಾಗಿದ್ದರು. ಅವರಲ್ಲಿ ನಿಸ್ವಾರ್ಥತೆ, ಅನ್ಯಾಯ ಪ್ರತಿಭಟಿಸುವ ಗುಣ, ಪರೋಪಕಾರಿ ಮನೋಭಾವನೆ ಇದ್ದವು. ಅದೇ ಇವತ್ತು ಇಷ್ಟೊಂದು ಉನ್ನತ ಹುದ್ದೆ ಅಲಂಕರಿಸಲು ಸಾಧ್ಯವಾಯಿತ್ತೆಂದೂ ಸಂಪಾದಕರು ಗಂಗಾಧರ್ ಬಗ್ಗೆ ಪ್ರಶಂಸನೀಯ ಮಾತುಗನ್ನಾಡಿದ್ದಾರೆ. ಅಲ್ ದಿ ಬೆಸ್ಟ್ ಗಂಗಾಧರ್ ಸರ್, ಭವಿಷ್ಯದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡುವ ಶಕ್ತಿ ದೇವರು ನಿಮಗೆ ಅನುಗ್ರಹಿಸಲಿ ಎಂದು Mp MLA’s News ಶುಭ ಹಾರೈಸುತ್ತದೆ




















































































































































































