ಬೆಂಗಳೂರು: ಮುಂಬಯಿ ಉದ್ಯಮಿಯೊಬ್ಬರು ಚಲನಚಿತ್ರ ನಟಿಯೊಬ್ಬರ ಜೊತೆ ಅನೈತಿಕ ಸಂಬಂಧದಲ್ಲಿದ್ದ ವೀಡಿಯೋವೊಂದನ್ನು ಅ ಚಲನಚಿತ್ರ ನಟಿ ಬೆಂಗಳೂರಿನ ಟಿವಿ ಚಾನೆಲ್ ಪತ್ರಕರ್ತರೊಬ್ಬರಿಗೆ ನೀಡಿ, ಹನಿಟ್ರ್ಯಾಪ್ ಮಾಡಿದ್ದಳು.
ಮಂಗಳೂರು ಮೂಲದ ಪ್ರಸ್ತುತ ಬೆಂಗಳೂರಿನ ಟಿವಿ ಚಾನೆಲ್‍ವೊಂದರಲ್ಲಿ ಪ್ರಮುಖ ಹುದ್ದೆಯಲ್ಲಿರುವ ಆ ಪತ್ರಕರ್ತ ಮುಂಬಯಿ ಉದ್ಯಮಿಗೆ ಫೋನು ಮಾಡಿ ನಿಮ್ಮ ವೀಡಿಯೋ ಸಿಕ್ಕಿದೆ. 5 ಕೋಟಿ ರೂಪಾಯಿ ನೀಡಿ, ಇಲ್ಲದಿದ್ದರೆ ಟಿವಿ ಚಾನೆಲ್‍ನಲ್ಲಿ ಪ್ರಸಾರ ಮಾಡುತ್ತೇನೆಂದು ಬ್ಲ್ಯಾಕ್‍ಮೇಲ್ ಮಾಡಿದ್ದ.
ಕೂಡಲೇ ಆ ಮುಂಬಯಿ ಉದ್ಯಮಿ 5 ಕೋಟಿ ರೂಪಾಯಿಯನ್ನು ಪತ್ರಕರ್ತನಿಗೆ ಮುಟ್ಟಿಸಿದರು. ಆ ಬಳಿಕ ಚುರುಕಾದ ಮುಂಬೈ ಉದ್ಯಮಿ ತನ್ನ ಆಪ್ತರೊಬ್ಬರ ಮೂಲಕ ದುಬೈಯಲ್ಲಿರುವ ಭೂಗತ ದೊರೆಗೆ ವಿಷಯ ಮುಟ್ಟಿಸಿದರು. ಭೂಗತ ದೊರೆ ಮಂಗಳೂರು ಮೂಲದವರೇ ಆಗಿರುವ ಬೆಂಗಳೂರಿನ ಟಿವಿ ಚಾನೆಲ್ ಪತ್ರಕರ್ತನಿಗೆ ಫೋನು ಮಾಡಿ ಹಣ ವಾಪಾಸ್ ನೀಡುವಂತೆ ಬೆದರಿಕೆ ಹಾಕಿದರು. ಬೆದರಿದ ಆ ಪತ್ರಕರ್ತ 5 ಕೋಟಿ ರೂಪಾಯಿ ಹಣವನ್ನು ಮುಂಬಯಿ ಉದ್ಯಮಿಗೆ ವಾಪಾಸ್ಸು ನೀಡಿದರು. ಅದನ್ನವರು ತನಗೆ ಸಹಾಯ ಮಾಡಿದ ಆಪ್ತರಿಗೆ ಹಂಚಿದರು. ಅವರ ಆಪ್ತರು ಯಾರೆಂಬುದು ಕೂಡಾ ಮಾಹಿತಿ ಲಭ್ಯವಾಗಿದೆ


























































































































































































