ನವಜ್ಯೋತಿ ಫ್ರೆಂಡ್ಸ್ ಕ್ಲಬ್ ಕಳಸಗುರಿ ಇದರ ಸಹಾಯ ನಿಧಿಯ ದಶಮಾನೋತ್ಸವ

109.3K Views 20 Dec 2025

ಮಂಗಳೂರು -ನವಜ್ಯೋತಿ ಫ್ರೆಂಡ್ಸ್ ಕ್ಲಬ್ (ರಿ)ಕಳಸಗುರಿ ಇದರ ಸಹಾಯ ನಿಧಿಯ ದಶಮಾನೋತ್ಸವ ಕಾರ್ಯಕ್ರಮವು ಡಿಸೆಂಬರ್ 13 ರಂದು ಅಡ್ಡೂರು, ಕಳಸಗುರಿ ಎಂಬಲ್ಲಿ ಬಹಳ ಅದ್ದೂರಿಯಿಂದ ಜರುಗಿತು. ಕಾರ್ಯಕ್ರಮವು ಭಜನಾ ಕಾರ್ಯಕ್ರಮದೊಂದಿಗೆ ಆರಂಭವಾಯಿತು. ಈಶ್ವರಿ ಭಜನಾ ಮಂಡಳಿ, ಕಾಂಜಿಲಕೋಡಿ ಹಾಗೂ ಆಗಸ್ತ್ಯೇಶ್ವರ ಭಜನಾ ಮಂಡಳಿ, ಪೊಳಲಿ ಇವರಿಂದ ಕುಣಿತ ಭಜನೆಯ ಕಾರ್ಯಕ್ರಮವು ನಡೆಯಿತು.

ನಂತರ ಸ್ಥಳೀಯ ಪ್ರತಿಭೆಗಳಿಂದ ಹಾಗೂ ಸಂಸ್ಥೆಯ ಮಹಿಳಾ ಸದಸ್ಯರುಗಳಿಂದ ವಿವಿಧ ಡ್ಯಾನ್ಸ್ ಕಾರ್ಯಕ್ರಮವು ಜರುಗಿತು ಹಾಗೂ ಮಂಗಳೂರಿನ ಹೆಸರಾಂತ ಡ್ಯಾನ್ಸ್ ತಂಡವಾದ ವರ್ಸಿಟಿ ಡ್ಯಾನ್ಸ್ ಅಕಾಡೆಮಿ ಇವರಿಂದ ವಿನೂತನ ಶೈಲಿಯ ನೃತ್ಯ ಪ್ರದರ್ಶನವು ನಡೆಯಿತು. ಅಶೋಕ್ ಪೊಳಲಿ ಇವರಿಂದ ವಿಶಿಷ್ಟ ಶೈಲಿಯ ನೃತ್ಯ ಪ್ರದರ್ಶನವು ಜರುಗಿತು. ನಂತರ ದಶಮಾನೋತ್ಸವದ ಸಭಾ ಕಾರ್ಯಕ್ರಮವು ನಡೆಯಿತು. ಸಭಾಧ್ಯಕ್ಷತೆಯನ್ನು ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಇವರು ವಹಿಸಿದ್ದರು. ಅತಿಥಿಗಳಾಗಿ ಅನಂತ್ ಭಟ್ ಪೊಳಲಿ, ಪದ್ಮರಾಜ್ ಆರ್, ಹರಿಕೃಷ್ಣ ಬಂಟ್ವಾಳ, ಭುವನೇಶ್ ಪಚ್ಚಿನಡ್ಕ,ಗಿರೀಶ್ ಆಳ್ವ, ಪದ್ಮನಾಭ ಕೋಟ್ಯಾನ್, ಹಿರಿಯ ವರದಿಗಾರರಾದ ವಿಜಯ ಕೋಟ್ಯಾನ್, ಭಾರತ ಸರ್ಕಾರದ ಅಧಿಕಾರಿಯಾಗಿರುವ ಜಗದೀಶ್ ಕೆ, ವೆಂಕಟೇಶ, ನಾವಡ ಪೊಳಲಿ, ಯಶವಂತ ಪೊಳಲಿ, ಯು. ಪಿ. ಇಬ್ರಾಹಿಂ, ಎ. ಕೆ. ಹ್ಯಾರಿಸ್, ಧನಂಜಯ ಗಂದಾಡಿ, ಸಂಸ್ಥೆಯ ಅಧ್ಯಕ್ಷರಾದ ಭೋಜ ಮೂಲ್ಯ ಅಡ್ಡೂರು,ಮಹಿಳಾ ಅಧ್ಯಕ್ಷರಾದ ನಿಶ್ಮಿತಾ, ಸ್ವರೂಪ್ ಪೂಂಜಾ, ಚಂದ್ರಹಾಸ ಶೆಟ್ಟಿ ನಾರಳ, ಚಂದ್ರಹಾಸ ಪಲ್ಲಿಪಾಡಿ ಇವರುಗಳು ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ಸದಸ್ಯರುಗಳಿಗೆ ಗೌರವಾರ್ಪಣೆ ಕಾರ್ಯಕ್ರಮವು ಜರುಗಿತು. ಸ್ಥಳೀಯವಾಗಿ ಗುರುತಿಸಿಕೊಂಡು ಸಮಾಜಕ್ಕೆ ಮಾದರಿಯಾದ ಕೆಲಸಗಳನ್ನು ಮಾಡುತ್ತಿರುವ ಎಂಟು ಜನ ಸಾಧಕರಿಗೆ ಸಮ್ಮಾನ ಕಾರ್ಯಕ್ರಮವನ್ನು ನಡೆಸಲಾಯಿತು. ನಂತರ ಸಹಾಯ ನಿಧಿಯ ಫಲಾನುಭವಿಗಳಿಗೆ ಸಹಾಯ ನಿಧಿಯ ಮೊತ್ತವನ್ನು ವಿತರಿಸಲಾಯಿತು. ಪ್ರತಿಭಾ ಪುರಸ್ಕಾರ ಮಾಡಲಾಯಿತು, ಸುಮಾರು ಎರಡುವರೆ ಲಕ್ಷ ರೂಪಾಯಿಗಳ ಮೊತ್ತವನ್ನು.
ಸಹಾಯ ನಿಧಿ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ನೀಡಲಾಯಿತು. ಸಭಾ ಕಾರ್ಯಕ್ರಮವನ್ನು ದಿನೇಶ್ ರಾಯಿ ಇವರು ನಿರೂಪಿಸಿದರು. ಸಂಪೂರ್ಣ ಕಾರ್ಯಕ್ರಮವನ್ನು ಜಿತೇಶ್ ಕುಮಾರ್ ಉಳಿಯ ಮತ್ತು ಜಶ್ವಿನಿ ಜಿತೇಶ್ ಇವರು ನಿರೂಪಿಸಿದರು.ಕಿರಣ್, ಶ್ವೇತಾ. ಲೋಕೇಶ್ ಸಹಕರಿಸಿದರು.ಪ್ರಧಾನ ಸನ್ಮಾನವನ್ನು ಸಂಸ್ಥೆಯ ಸಹಾಯನಿಧಿ ರೂವಾರಿ ಸದಸ್ಯರಾದ ಅರುಣ್ ಕುಮಾರ್ ಶೆಟ್ಟಿ ಇವರಿಗೆ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಪ್ರಸನ್ನ ಶೆಟ್ಟಿ ಬೈಲೂರು ಇವರ ತಂಡದಿಂದ ‘ರಾಘು ಮಾಸ್ಟ್ರು’ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು. ಡಿ .14ರಂದು ಮಧ್ಯಾಹ್ನ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಂತರ ಮಹಾ ಅನ್ನ ಸಂತರ್ಪಣೆ ಹಾಗೂ ರಾತ್ರಿ ಬಪ್ಪನಾಡು ಮೇಳದವರಿಂದ ಯಕ್ಷಗಾನ ಪ್ರದರ್ಶನಗೊಂಡಿತು.

Read More News

Scroll to Top