“ಪರ್ವ 2025” ಸೀರೆ, ಲೈಫ್ ಸ್ಟೈ ಲ್, ಮತ್ತು ಫುಢ್ ಫೆಸ್ಟಿವೆಲ್. ಡಿಸೆಂಬರ್ 19 ರಿಂದ 21 ರ ವರೆಗೆ ಸುರತ್ಕಲ್ ಬಂಟರ ಭವನದಲ್ಲಿ ಜನ ಜಾತ್ರೆ. ಸಂಗೀತ ರಸಮಂಜರಿ, “ಎನ್ನಿಲೆಕ ಇಜ್ಜೆರ್”, “ವೈರಲ್ ವೈಶಾಲಿ” ನಾಟಕ ಪ್ರದರ್ಶನ

94.1K Views 16 Dec 2025

ಮಂಗಳೂರು: ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಡಿಸೆಂಬರ್ 19, 20 ಮತ್ತು 21 ರಂದು ಸುರತ್ಕಲ್ ಬಂಟರ ಭವನದ ಆವರಣದಲ್ಲಿ “ಪರ್ವ 2025” ಸೀರೆ ಮೇಳ, ಲೈಫ್ ಸ್ಟೈಲ್ ಮತ್ತು ಫುಢ್ ಫೆಸ್ಟಿವೆಲ್ ನಡೆಯಲಿದೆ ಎಂದು ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಕಾರ್ಯದರ್ಶಿ ರಾಜೇಶ್ವರಿ ಡಿ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಡಿಸೆಂಬರ್ 20 ರಂದು ಶನಿವಾರ ಸಂಜೆ 7 ಕ್ಕೆ ಪೆರ್ಮೆದ ಕಲಾವಿದೆರ್ ಚೇಳಾರ್ ತಂಡದಿಂದ “ಎನ್ನಿಲೆಕ್ಕ ಇಜ್ಜೆರ್” ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.
ಡಿಸೆಂಬರ್ 21 ರಂದು ಸಂಜೆ 6 ಗಂಟೆಗೆ ವಿಶ್ವಾಸ್ ಮ್ಯೂಸಿಕಲ್ ಮಂಗಳೂರು ತಂಡದಿಂದ “ಸಂಗೀತ ರಸ ಮಂಜರಿ”, ಬಳಿಕ 7 ಗಂಟೆಗೆ ಉಮೇಶ್ ಮಿಜಾರ್ ಸಾರಥ್ಯದ ನಮ್ಮ ಕಲಾವಿದೆರ್ ಬೆದ್ರ ತಂಡದಿಂದ ಈ ವರ್ಷದ ಸೂಪರ್ ಹಿಟ್ ಹಾಸ್ಯ ನಾಟಕ “ವೈರಲ್ ವೈಶಾಲಿ” ಪ್ರದರ್ಶನ ಗೊಳ್ಳಲಿದೆ ಎಂದರು.
ಡಿ. 20 ಮತ್ತು 21 ರಂದು ಸಂಜೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತರ ತನಕ ಬಗೆಬಗೆಯ ತಿಂಡಿತಿನಿಸುಗಳ ಫುಡ್ ಫೆಸ್ಟಿವಲ್ ನಡೆಯಲಿದೆ.
ಸೀರೆ ಮೇಳ: ಮೂರು ದಿನಗಳ ಕಾಲ ಸುರತ್ಕಲ್ ಬಂಟರ ಭವನದಲ್ಲಿ ವಿವಿಧ ಮಳಿಗೆಗಳ ಸೀರೆ ಮಾರಾಟ ಮೇಳವೂ ನಡೆಯಲಿದೆ.
ನವನವೀನ ಮಾದರಿಯ ಕಾಂಚಿಪುರಂ, ಬನಾರಸ್, ರೇಷ್ಮೆ, ಬಂಗಾಲಿ ಕಾಟನ್ ಹಾಗೂ ವಿವಿಧ ಮಾದರಿಯ ಸೀರೆಗಳು ಸಲ್ವಾರ್ ಸೂಟ್, ಕುರ್ತಾಗಳು, ಖಾದಿ ಭಂಡಾರ, ಕಸೂತಿ, ಹಸ್ತಕಲೆ ಬ್ಯಾಗುಗಳು, ಒಂದು ಗ್ರಾಂ ಚಿನ್ನಾಭರಣ ವಿವಿಧ ವಿನ್ಯಾಸದ ಆರ್ಟಿಫಿಶಲ್ ಜ್ಯುವೆಲ್ಲರಿ ಮಸಾಲೆ ಹುಡಿಗಳು, ಹರ್ಬಲ್ ಉತ್ಪನ್ನಗಳು ಹಾಗೂ ಅನೇಕ ವಿಧವಿಧ ಉತ್ಪನ್ನಗಳ ಅಪೂರ್ವ ಸಂಗ್ರಹವೂ ಇದೆ.
ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಉತ್ಪನ್ನಗಳು ದೊರೆಯಲಿದೆ. ಇದು ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಆಶ್ರಯದಲ್ಲಿ ನಡೆಯುವಂತಹ ಕಾರ್ಯಕ್ರಮವಾಗಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ವೇದಿಕೆಯ ಅಧ್ಯೆಕ್ಷೆ ಸರೋಜ ಟಿ ಶೆಟ್ಟಿ, ಕೋಶಾಧಿಕಾರಿ ಮಾಲತಿ ಜೆ ಶೆಟ್ಟಿ, ಜೊತೆ ಕಾರ್ಯದರ್ಶಿ ಕವಿತಾ ಪಿ ಶೆಟ್ಟಿ ಉಪಸ್ಥಿತರಿದ್ದರು.

Read More News

Scroll to Top