ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಮದರ್ ತೆರೆಸಾ ವಾರ್ಡ್ ನಲ್ಲಿ ಮೊಂತಿ ಫೆಸ್ತ್ ನ್ನು ವಾರ್ಡ್ ಸದಸ್ಯರಾದ ರೋಲ್ಫಿ ಫೆರ್ನಾಂಡಿಸ್ ಮತ್ತು ಪ್ರೆಸಿಲ್ಲಾ ಫೆರ್ನಾಂಡಿಸ್ ಅವರ ಮನೆಯಲ್ಲಿ ಸಾಮೂಹಿಕವಾಗಿ ಆಚರಿಸಲಾಯಿತು. ವಾರ್ಡ್ ನ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಚರ್ಚ್ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಮಾತನಾಡಿ, ಮೇರಿ ಮಾತೆ ನಮ್ಮೆಲ್ಲರ ಕುಟುಂಬಗಳ ತಾಯಿ ಇದ್ದಂತೆ. ಅವರ ಜನ್ಮದಿನವನ್ನು ವಾರ್ಡ್ ನ ಎಲ್ಲಾ ಕುಟುಂಬದವರೂ ಒಟ್ಟು ಸೇರಿ ಆಚರಿಸುವ ಈ ಸಂದರ್ಭದಲ್ಲಿ ಮೇರಿ ಮಾತೆಯ ಒಳ್ಳೆಯ ಗುಣಗಳನ್ನು ನಮ್ಮ ಕುಟುಂಬಗಳಲ್ಲಿ ಅಳವಡಿಸಿಕೊಳ್ಳ ಬೇಕೆಂದರು.
ವಾರ್ಡ್ ಮುಖ್ಯಸ್ಥ ರೋಶನ್ ಮೊಂತೇರೊ ಸ್ವಾಗತಿಸಿದರು. ವಾರ್ಡ್ ಪ್ರತಿನಿಧಿ ಪ್ರೆಸಿಲ್ಲಾ ಫೆರ್ನಾಂಡಿಸ್ ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು. ಇನ್ನೋರ್ವ ಪ್ರತಿನಿಧಿ ಸುನಿತಾ ಫೆರ್ನಾಂಡಿಸ್ ಮತ್ತು ಮೈಕಲ್ ಕುವೆಲ್ಲೊ, ಸ್ಥಳಿಯ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಮೊಂತಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಾರ್ಡ್ ನ ಸದಸ್ಯರಿಗಾಗಿ ವಿವಿಧ ಆಟೋಟಗಳನ್ನು ಮತ್ತು ಸಹ ಭೋಜನವನ್ನು ಏರ್ಪಡಿಸಲಾಗಿತ್ತು.









































































































































































































