ಸುನೀತಾ ಶೆಟ್ಟಿ ಚಿಕಿತ್ಸೆಗೆ ಡೈಜಿ ವರ್ಲ್ಡ್ ಮೂಲಕ ಧನಸಹಾಯ ಒದಗಿಸಿ ಕೊಟ್ಟ ವಾಲ್ಟರ್ ನಂದಳಿಕೆಯವರಿಗೆ ಧನ್ಯವಾದಗಳು

115.1K Views 14 Aug 2025

ಮಂಗಳೂರು – ಜೆಪ್ಪು ಕುಡ್ಪಾಡಿ ನಿವಾಸಿ ಸುನೀತಾ ಶೆಟ್ಟಿಯವರ ಚಿಕಿತ್ಸೆಗೆ ಡೈಜಿ ವರ್ಲ್ಡ್ ಮೀಡಿಯಾದ ಮೂಲಕ ಧನ ಸಹಾಯ ಒದಗಿಸಿ ಕೊಟ್ಟ ಡೈಜಿ ವರ್ಲ್ಡ್ ಮೀಡಿಯಾ ಪ್ರೈವೇಟ್ ಲಿ. ನ ಸ್ಥಾಪಕರು ಮತ್ತು ಆಡಳಿತ ನಿರ್ದೇಶಕರಾಗಿರುವ ವಾಲ್ಟರ್ ನಂದಳಿಕೆಯವರಿಗೆ Mp mlas ನ್ಯೂಸ್ ಧನ್ಯವಾದಗಳನ್ನು ಸಲ್ಲಿಸುತ್ತದೆ. ಸುನೀತಾ ಶೆಟ್ಟಿಯಂತೆ ಸಾವಿರಕ್ಕೂ ಮಿಕ್ಕಿ ಬಡರೋಗಿಗಳಿಗೆ ದೈಜಿ ವರ್ಲ್ಡ್ ಮೂಲಕ ವಾಲ್ಟರ್ ನಂದಳಿಕೆಯವರು ಆರ್ಥಿಕ ನೆರವು ಒದಗಿಸಿ ಕೊಟ್ಟಿದ್ದಾರೆ.

ಮಾನವೀಯ ಮೌಲ್ಯಗಳಿಗೆ ಜೀವ ತುಂಬುವ ಸೌಹಾರ್ದ ವ್ಯಕ್ತಿತ್ವದ ವಾಲ್ಟರ್ ನಂದಳಿಕೆ ಅವರ ನಿಸ್ವಾರ್ಥ ಸಮಾಜ ಸೇವೆ ಇತರ ಪತ್ರಿಕೋದ್ಯಮಿಗಳಿಗೂ ಸ್ಫೂರ್ತಿಯಾಗಲಿ. ಇದೇ ಸಂದರ್ಭದಲ್ಲಿ ಡೈಜಿ ವರ್ಲ್ಡ್ ನ ಪೋಟೋಗ್ರಾಫರ್ ದಯಾನಂದ ಕುಕ್ಕಾಜೆಯವರಿಗೂ Mp mlas ನ್ಯೂಸ್ ಧನ್ಯವಾದಗಳನ್ನು ಸಲ್ಲಿಸುತ್ತದೆ

Read More News

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ, ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಅವರ ಪತ್ನಿ ಅಗಲಿಕೆ: ಮಂಗಳೂರಿನ ಹ್ಯಾಟ್ ಹಿಲ್ ನಲ್ಲಿ ಇಂದು ಬೆಳಿಗ್ಗೆ (ಅಕ್ಟೋಬರ್ 25) ಗಂಟೆ 10 ರಿಂದ 12ರವರೆಗೆ ಅಂತಿಮ ದರ್ಶನ ಮತ್ತು 12.30ಕ್ಕೆ ಕದ್ರಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ

Scroll to Top