ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ದ. ಕ. ಕಾರ್ಯನಿರತ ಪತ್ರಕರ್ತರ ಸಂಘದ ಶ್ರೀನಿವಾಸ್ ನಾಯಕ್, ಅನ್ಸಾರ್ ಇನೋಳಿ, ಸತ್ಯವತಿ, ಇಕ್ಬಾಲ್ ಕುತ್ತಾರ್, ಸ್ಟೀವನ್, ವೇಣು ವಿನೋದ್ ಸೇರಿದಂತೆ 21 ಮಂದಿ ಪತ್ರಕರ್ತರಿಗೆ ಕಾಸರಗೋಡು ಪತ್ರಕರ್ತ ಸಂಘದ ದತ್ತಿ ನಿಧಿ ಪ್ರಶಸ್ತಿ

ಮಂಗಳೂರು-ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್, ಉಪಾಧ್ಯಕ್ಷ ಅನ್ಸಾರ್ ಇನ್ನೊಳಿ,ಕಾರ್ಯಕಾರಿ ಸಮಿತಿ ಸದಸ್ಯೆ ಸತ್ಯವತಿ,ಸದಸ್ಯರಾದ ವೇಣುವಿನೋದ್, ಸ್ಟೀವನ್ ರೇಗೋ,ಎನ್ಕೌಂಟರ್ ಪತ್ರಿಕೆಯ ಸಂಪಾದಕ ಇಕ್ಬಾಲ್ ಕುತ್ತಾರ್ ಸಹಿತ ಜಿಲ್ಲೆಯ 6 ಮಂದಿ ಪತ್ರಕರ್ತರಿಗೆ ಸೇರಿದಂತೆ ಒಟ್ಟು 21 ಮಂದಿ ವಾರ್ಷಿಕ ದತಿನಿಧಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೇ 3ರಂದು ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಎಲೈನ್ಸ್ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.ಪ್ರಶಸ್ತಿಗೆ ಆಯ್ಕೆಯಾದವರ ವಿವರಸತ್ಯವತಿ -ನ್ಯಾಯವಾದಿ ಮುಹಮ್ಮದ್ ಇಬ್ರಾಹೀಂ ಪಾರೆ ಸ್ಮರಣಾರ್ಥ ಪ್ರಶಸ್ತಿ, ಕಂಡಕೆರೆ ಇಸ್ಮಾಯೀಲ್ ಕೊಡಗು- ಮೊಗರೋಡಿ ಗೋಪಾಲಕೃಷ್ಣ ಮೇಲಾಂಟ ದತ್ತಿ ಪ್ರಶಸ್ತಿ, ಶ್ರೀನಿವಾಸ ಜೋಕಟ್ಟೆ ಮುಂಬೈ-ಬ್ರಹ್ಮಕ್ಯ ಎಡನೀರು ಶ್ರೀಕೇಶವಾನಂದ ಭಾರತೀ ಸ್ವಾಮೀಜಿ ನೆನಪಿಗಾಗಿ ನೀಡುವ ದತ್ತಿನಿಧಿ ಪ್ರಶಸ್ತಿ, ಗಣೇಶ್ ಕಾಸರಗೋಡು – ಪತ್ರಕರ್ತ ರವಿಬೆಳೆಗೆರೆ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ, ಶ್ರೀನಿವಾಸ ನಾಯಕ್ ಇಂದಾಜೆ -ಅವ್ವ ಟ್ರಸ್ಟ್ ಹುಬ್ಬಳ್ಳಿ ದತ್ತಿನಿಧಿ, ಮಲ್ಲಿಕಾರ್ಜುನ ರೆಡ್ಡಿ ಗೋಂದಿ ಬೆಳಗಾವಿ- ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ ದತ್ತಿನಿಧಿ, ಎನ್. ರವಿಕುಮಾರ್ – ಹವ್ವಾ ಹಸನ್ ಫೌಂಡೇಶನ್ ಕುದ್ಕೋಳಿ ದತ್ತಿನಿಧಿ, ನಾಗರಾಜ ವೈ ಕೊಪ್ಪಳ -ಅನಿವಾಸಿ ಉದ್ಯಮಿ ಕಲಾಪೋಷಕ ಶ್ರೀ ಜೋಸೆಫ್ ಮಥಾಯಸ್ ದುಬೈ ದತ್ತಿನಿಧಿ, ಈಶ್ವರ ಅಲೆವೂರು ಮುಂಬೈ- ಕೆ.ವಿ.ಆರ್.ಟ್ಯಾಗೋರ್ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ, ಮುಹಮ್ಮದ್ ಅನ್ಸಾರ್ ಇನೋಳಿ – ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಭೀಮಣ್ಣ ಖಂಡ್ರೆ ದತ್ತಿನಿಧಿ ಪ್ರಶಸ್ತಿ, ಸಿ.ಜೆ.ಪುನೀತ್ ಮೈಸೂರು- ಆರ್ಥಿಕ ತಜ್ಞ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ದತ್ತಿನಿಧಿ, ವೇಣು ವಿನೋದ್ ಮಂಗಳೂರು- ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಸೋಮಣ್ಣ ಬೇವಿನಮರದ ದತ್ತಿನಿಧಿ, ಮೌಲಾನ ಸಾಬ್ ಬೀದರ್-ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ದತ್ತಿನಿಧಿ, ಸ್ಟೀವನ್ ರೇಗೊ ಮಂಗಳೂರು-ಉದ್ಯಮಿ ಮಹಾಬಲೇಶ್ವರ ಭಟ್ ಎಡಕ್ಕಾನ ದತ್ತಿನಿಧಿ, ಕೆ.ಜಿ.ನಾಗಲಕ್ಷ್ಮೀ ಬಾಯಿ ಬೆಂಗಳೂರು -ಉದ್ಯಮಿ ಶಿವಶಂಕರ ನೆಕ್ರಾಜೆ ದತ್ತಿನಿಧಿ, ಇಕ್ಬಾಲ್ ಕುತ್ತಾರ್-ಉದ್ಯಮಿ ಸಮಾಜ ಸೇವಕ ಜೇಮ್ಸ್ ಮೆಂಡೊನ್ಸಾ ದತ್ತಿನಿಧಿ, ರಾಮ ಅಜೆಕ್ಕಾರ್-ಉದ್ಯಮಿ ಸಮಾಜ ಸೇವಕ ಅಶ್ರಫ್ ಶಾ ಮಂತೂರು ದತ್ತಿನಿಧಿ, ಗಣೇಶ್ ಕಾಸರಗೋಡು-ಕೆಯುಡಬ್ಲ್ಯುಜೆ ರಾಜ್ಯ ಸಮಿತಿ ದತ್ತಿನಿಧಿ, ಭಾಸ್ಕರ ಕೆ ಕಾಸರಗೋಡು-ಕೆಯುಡಬ್ಲ್ಯುಜೆ ರಾಜ್ಯ ಸಮಿತಿ ದತ್ತಿನಿಧಿ, ಅಜಿತ್ ಸ್ವರ್ಗ -ಕೆಯುಡಬ್ಲ್ಯುಜೆ ದತ್ತಿನಿಧಿ, ಮತ್ತಿಕೆರೆ ಜಯರಾಮ ಮಂಡ್ಯ- ಕೆ.ಕೆ. ಶೆಟ್ಟಿ ಕುತ್ತಿಕಾರ್ ದತ್ತಿನಿಧಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದತ್ತಿನಿಧಿ ಪ್ರಶಸ್ತಿಯು ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹೊಂದಿರುತ್ತದೆ.ಎರಡು ದಶಕಗಳಿಂದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು ಕನ್ನಡ ಭಾಷೆ, ಸಂಸ್ಕೃತಿ, ಕಲೆಗಳ ಉಳಿವಿಗಾಗಿ ಇತರ ಕನ್ನಡಪರ ಸಂಘ ಸಂಸ್ಥೆಗಳೊಂದಿಗೆ ಸೇರಿ ಶ್ರಮಿಸುತ್ತಿದೆ. ಕನ್ನಡ ಮತ್ತು ಮಲೆಯಾಳ ಪತ್ರಕರ್ತರ ಸ್ನೇಹಸೇತುವಾಗಿ ಈ ಸಂಘವು ಕಾರ್ಯಾಚರಿಸುತ್ತಿದೆ.ಮೇ 3 ರಂದು ಕಾಸರಗೋಡಿನ ಸೀತಾಂಗೋಳಿ ಎಲೈನ್ಸ್ ಸಭಾಂಗಣದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಕೆ. ಕೆ ಶೆಟ್ಟಿ ಕುತ್ತಿಕಾರ್ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ, ಕರ್ನಾಟಕ ಸರಕಾರದ ಕೃಷಿ ಸಚಿವ ಚೆಲುವರಾಯ ಸ್ವಾಮಿ, ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕರ್ನಾಟಕ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಪ್ರಶಸ್ತಿ ಪ್ರದಾನ ಮಾಡಲಿರುವರು ಎಂದು ಕಾಸರಗೋಡು ಜಿಲ್ಲಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿ ನಾಯ್ಕಾಪು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಎ. 25: ಮಿಲಾಗ್ರಿಸ್‌ ಚರ್ಚ್ ನಲ್ಲಿ ಪೋಪ್‌ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಕ್ಯಾಥೊಲಿಕ್‌ ಧರ್ಮ ಸಭೆಯ ಪರಮೋಚ್ಛ ಗುರು ಪೋಪ್‌ ಫ್ರಾನ್ಸಿಸ್‌ ಅವರು ಎಪ್ರಿಲ್‌ 21 ರಂದು ನಿಧನ ಹೊಂದಿದ್ದು, ಮಂಗಳೂರು ಧರ್ಮ ಪ್ರಾಂತ್ಯದ ವತಿಯಿಂದ ಪೋಪ್‌ ಅವರ ಆತ್ಮಕ್ಕೆ ಚಿರ ಶಾಂತಿ ಕೋರಲು ಎಪ್ರಿಲ್ 25 ರಂದು ಶುಕ್ರವಾರ ಮಂಗಳೂರಿನ ಮಿಲಾಗ್ರಿಸ್‌ ಚರ್ಚ್ ನಲ್ಲಿ ಸಂಜೆ 5 ಗಂಟೆಗೆ ಬಲಿ ಪೂಜೆಯನ್ನು ಏರ್ಪಡಿಸಲಾಗಿದೆ. ಬಲಿ ಪೂಜೆಯ ಬಳಿಕ 6 ಗಂಟೆಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಧರ್ಮ ಪ್ರಾಂತ್ಯದ ಬಿಷಪ್‌ ಅತಿ ವಂದನೀಯ ಡಾ. ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

“ಧರ್ಮ ಚಾವಡಿ”ತುಳು ಚಿತ್ರದ ಟೀಸರ್ ಬಿಡುಗಡೆ. ಜುಲೈ 11ಕ್ಕೆ ಬಿಡುಗಡೆ

ಮಂಗಳೂರು: “ಧರ್ಮ ದೈವ” ತುಳು ಚಿತ್ರದ ನಿರ್ದೇಶಕರ ಎರಡನೇ ಚಿತ್ರ “ಧರ್ಮ ಚಾವಡಿ” ತುಳು ಚಿತ್ರದ ಟೀಸರ್ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ಬಿಡುಗಡೆಗೊಂಡಿದ್ದು ಸಿನಿಮಾ ಹೊಸ ನಿರೀಕ್ಷೆ ಹುಟ್ಟು ಹಾಕಿದೆ. ಸಾಕಷ್ಟು ಜನರು ಇದು ಧರ್ಮ ದೈವದ ಮುಂದುವರೆದ ಭಾಗ ಎಂದು ಭಾವಿಸಿದ್ದರು, ಆದರೆ ಟೀಸರ್ ಬೇರೆಯೇ ರೀತಿಯಲ್ಲಿದ್ದು ಬಹಳಷ್ಟು ಕುತೂಹಲವನ್ನು ಹುಟ್ಟಿಹಾಕಿದೆ.ಎಂ.ರ್ .ಟಿ ಯುಟ್ಯೂಬ್ ಚಾನೆಲ್ ನಲ್ಲಿ ಟೀಸರ್ ಬಿಡುಗಡೆ ಗೊಂಡಿದೆ.ಟೀಸರ್ ಬಿಡುಗಡೆ ಸಮಾರಂಭದಲ್ಲಿ ತುಳು ಸಿನಿಮಾ ರಂಗದ ಗಣ್ಯರು ಭಾಗವಹಿಸಿದ್ದರು. ಟೀಸರ್ ಬಗ್ಗೆ ಎಲ್ಲರು ಕುತೂಹಲ ವ್ಯಕ್ತಪಡಿಸಿದ್ದರು. ನಿರ್ದೇಶನ, ಛಾಯಾಗ್ರಹಣ, ಸಂಕಲನ ಹಾಗೂ ಹಿನ್ನೆಲೆ ಸಂಗೀತ, ಕಲರ್ ಗ್ರೇಡಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.ಮಂಗಳೂರಿನ ಭಾರತ್ ಸಿನಿಮಾಸ್ ನಲ್ಲಿ ನಡೆದ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ನಿರ್ಮಾಪಕ, ನಿರ್ದೇಶಕರಾದ ಪ್ರಕಾಶ್ ಪಾಂಡೇಶ್ವರ ಉದ್ಘಾಟನೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಟೀಸರ್ ಬಿಡುಗಡೆಯನ್ನು ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಡೆಸಿಕೊಟ್ಟು ಧರ್ಮ ಚಾವಡಿ ನಿರೀಕ್ಷೆ ಹೆಚ್ಚಿಸಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಉದ್ಯಮಿ, ಚಲನ ಚಿತ್ರ ನಿರ್ಮಾಪಕ ಅಸ್ತ್ರ ಗ್ರೂಪ್ ನ ಲಂಚು ಲಾಲ್, ಉದ್ಯಮಿ ರಾಧಾಕೃಷ್ಣ ರೈ ಬುಡಿಯಾರ್, ನಿರ್ದೇಶಕ ತ್ರಿಶೂಲ್ ಶೆಟ್ಟಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಚೇತನ್ ಮುಂಡಾಡಿ, ಅಕ್ಷಯ ಕಾಲೇಜ್ ನ ಜಯಂತ ನಡುಬೈಲು, ನಿರ್ಮಾಪಕ ಪ್ರತೀಕ್ ಪೂಜಾರಿ, ಎಸ್ ಆರ್ ಎಸ್ ಮಸಾಲ ದ ಮಾಲೀಕರಾದ ಶೈಲೆಂದ್ರ ಎಸ್ ಸುವರ್ಣ, ಬಾಲಕೃಷ್ಣ ಸಾಲ್ಯಾನ್ ನಡುಬೈಲ್, ಧರ್ಮ ಚಾವಡಿ ಚಿತ್ರದ ನಿರ್ಮಾಪಕ ಜಗದೀಶ್ ಅಮೀನ್ ನಡುಬೈಲು, ಮಾಜಿ ಯಕ್ಷಗಾನ ಅಕಾಡೆಮಿಯ ಸದಸ್ಯ ಭಾಸ್ಕರ್ ರೈ ಕುಕ್ಕುವಳ್ಳಿ, ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಯುವ ನಿರ್ದೇಶಕ ಹರ್ಷಿತ್ ಸೋಮೇಶ್ವರ, ಚಿತ್ರದ ಸಹ ನಿರ್ಮಾಪಕ ರವಿ ಸ್ನೇಹಿತ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಟ ರಮೇಶ್ ರೈ ಕುಕ್ಕುವಳ್ಳಿ ನೆರವೇರಿಸಿದರು. ಧರ್ಮ ಚಾವಡಿ ಚಿತ್ರ ಜುಲೈ 11ರಂದು ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಯಾಗಲಿದೆ.

ಪ್ರಾದೇಶಿಕ ವಾರ್ತೆಗಳು

ಎ.22 ಮತ್ತು 23 ರಂದು ನೆಲ್ಲಿಗುಡ್ಡೆ ಶ್ರೀರಕ್ತೇಶ್ವರಿ ದೈವಸ್ಥಾನದಲ್ಲಿರಕ್ತೇಶ್ವರಿ, ಪಂಜುರ್ಲಿ ಧರ್ಮ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕಲಶೋತ್ಸವ.

ಮಂಗಳೂರು,: ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡಿರುವ ಬಂಟ್ವಾಳ ತಾಲೂಕಿನ ನೆಲ್ಲಿಗುಡ್ಡೆ ಶ್ರೀ ರಕ್ತೇಶ್ವರಿ ದೈವಸ್ಥಾನದಲ್ಲಿ ರಕ್ತೇಶ್ವರಿ, ಪಂಜುರ್ಲಿ, ಧರ್ಮ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕಲಶೋತ್ಸವ ಎಪ್ರಿಲ್ 22 ಹಾಗೂ 23 ರಂದು ನಡೆಯಲಿದೆ.ಶ್ರೀಕಾರಿಂಜೇಶ್ವರ ದೇವಸ್ಥಾನ ವಗ್ಗ ಬಳಿಯಲ್ಲಿ ಪ್ರಾಚೀನ ಕಾಲದಿಂದ‌ ಆರಾಧಿಸಿಕೊಂಡು ಬರುತ್ತಿರುವ ನೆಲ್ಲಿಗುಡ್ಡೆ ಶ್ರೀ ರಕ್ತೇಶ್ವರಿ ದೈವಸ್ಥಾನದ ಜೀರ್ಣೋದ್ಧಾರ ಪೂರ್ಣಗೊಂಡಿದ್ದು ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗಿದೆ ಎಂದು ಶ್ರೀ ರಕ್ತೇಶ್ವರಿ ದೈವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿವಾಸ ನಾಯಕ್ ಇಂದಾಜೆ ತಿಳಿಸಿದ್ದಾರೆ.ಎ.22 ಮಂಗಳವಾರ ಸಂಜೆ ವಾಸ್ತು ಪೂಜೆ, ರಾಕ್ಷೋಘ್ನ ಹೋಮ, ವಾಸ್ತು ಬಲಿ ಪ್ರಧಾನ, ದೈವಾಲಯದ ಶುಚೀಕರಣ ಕ್ರಿಯೆ ನಡೆಯಲಿದೆ. ಎ.23ರಂದು ಬೆಳಗ್ಗೆ 8.45ಕ್ಕೆ ಮಿಥುನ ಲಗ್ನ ಮುಹೂರ್ತದಲ್ಲಿ ಶ್ರೀ ದೈವಗಳ ಪುನರ್ ಪ್ರತಿಷ್ಠೆ, ಸಾನಿಧ್ಯ ಹವನ, ಪ್ರತಿಷ್ಠಾಹ ವನ, ಬ್ರಹ್ಮ ಕಲಶ ಅಭಿಷೇಚನ, ಪ್ರಸನ್ನ ಪೂಜೆ, ಭಕ್ತಾಧಿಗಳಿಗೆ ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆಶ್ರೀ ರಾಕೇಶ್ವರಿ ದೈವಸ್ಥಾನದ ಕುರಿತು:ಅನಾದಿಕಾಲದಿಂದಲೂ ಈ ಮಣ್ಣಿನಲ್ಲಿ ನೆಲೆ ನಿಂತ ರಕ್ತೇಶ್ವರಿ ದೇವಿ, ದುರ್ಗಾ ಪರಮೇಶ್ವರಿ, ಸನಾತನ ಹಿಂದೂ ದೇವಾಲಯಗಳಲ್ಲಿ ಪೂಜಿಸಲ್ಪಡುವ ಬ್ರಹ್ಮಾಂಡದ ದೈವಿಕ ಮಾತೃ ಶಕ್ತಿ ದೇವತೆ.ಅನಾದಿ ಕಾಲದಿಂದಲೂ ಕಾರಿಂಜೇಶ್ವರನ ಸಾನಿಧ್ಯಕ್ಕೆ ಸೇರಿದ ನೆಲ್ಲಿಗುಡ್ಡೆ ಪರಿಸರದ ಮಣ್ಣಿನಲ್ಲಿ ನೆಲೆ ನಿಂತ ರಕ್ತೇಶ್ವರಿ ದೇವಿ, ಈ ಶಕ್ತಿದೇವತೆ ಯನ್ನು ನೆಲ್ಲಿಗುಡ್ಡೆ ಪರಿಸರದಲ್ಲಿ ಆರಾಧನೆ ಮಾಡಿಕೊಂಡು ಬಂದ ಐತಿಹ್ಯವಿದೆ. ಆದರೆ ಕಾಲಾಂತರದಲ್ಲಿ ಈ ಆರಾಧನೆ ನಡೆಯಬೇಕಾದ ಪರ್ವ ಕಾಲದಲ್ಲಿ ನಡೆಯದೆ ಇರುವುದರಿಂದ ಕೆಲವೊಂದು ದೋಷಗಳು ಪರಿಸರದಲ್ಲಿ ಕಂಡು ಬಂದವು. ಈ ಬಗ್ಗೆ ಪ್ರಶ್ನೆ ಯಲ್ಲಿ ನೆಲ್ಲಿಗುಡ್ಡೆಯಲ್ಲಿ ಈಗ ಇರುವಷ್ಟೇ ದೊಡ್ಡದಾದ ರಕ್ತೇಶ್ವರಿಯ ಹೊಸ ಗುಡಿಯನ್ನು ನಿರ್ಮಿಸಬೇಕು. ಹೊಸದಾದ ಬಿಂಬ ಪ್ರತಿಷ್ಠಾಪನೆಯಾಗಬೇಕು.ದೇವಿಯ ನಿರಂತರ ಉಪಾಸನೆ, ಪ್ರಾರ್ಥನೆಯ ಮೂಲಕ ರಕ್ತೇಶ್ವರಿ ಗುಡಿಯ ಜೀರ್ಣೋದ್ಧಾರ ನಡೆಯಬೇಕು. ಪ್ರತಿ ಸಂಕ್ರಮಣದಂದು ಪೂಜೆ ನಡೆಯಬೇಕು ಎಂದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಶ್ರೀಕಾರಿಂಜೇಶ್ವರನ ಅನುಗ್ರಹ ಬೇಡಿಕೊಂಡು ಶಕ್ತಿ ದೇವತೆ ರಕ್ತೇಶ್ವರಿಯ ಜೀರ್ಣೋದ್ದಾರ, ಬಿಂಬ ಪ್ರತಿಷ್ಠಾಪನೆ ಸೇರಿದಂತೆ ಕಾಲ ಕಾಲಕ್ಕೆ ದೈವಿಕ ಸಂಸ್ಕಾರವನ್ನು ನಡೆಸಿ ಕೊಂಡು ಬರಲು ನಿರ್ಧರಿಸಿ ಜೀರ್ಣೋದ್ಧಾರ ಕಾರ್ಯ ನೆರವೇರಿಸಿ ಇದೀಗಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿದೆ ಎಂದು ಶ್ರೀನಿವಾಸ ನಾಯಕ್ ಇಂದಾಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಂಗಳೂರು,ಎ.20: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ , ಶ್ರೀ ಶಾರದಾ ಪೂಜಾ ಸಮಿತಿ, ಮಂಗಳಾ ಫ್ರೆಂಡ್ಸ್ ಸರ್ಕಲ್ ಊರ್ವಸ್ಟೋರ್ ಹಾಗೂ ಎ ಜೆ ಆಸ್ಪತ್ರೆ ಯ ಜಂಟಿ ಆಶ್ರಯದಲ್ಲಿ ಊರ್ವ ಸ್ಟೋರ್ ನ ಮಾನಸ ಮಂಟಪದ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ರವಿವಾರ ನಡೆಯಿತು.ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ನ ಅಧ್ಯಕ್ಷ ರೋ. ಬ್ರಾಯನ್ ಪಿಂಟೋ , ರೋಟರಿ ಜಿಲ್ಲೆ 3181 ಅಸಿಸ್ಟೆಂಟ್ ಗವರ್ನರ್ ಕೆ. ಯಂ .ಹೆಗ್ಡೆ , ಎ ಜೆ ದಂತ ಮಹಾ ವಿದ್ಯಾಲಯದ ಸಮುದಾಯ ಸೇವಾ ವಿಭಾಗದ ಮುಖ್ಯಸ್ಥೆ ಡಾ .ವಿಜಯ ಹೆಗ್ಡೆ ಹಾಗೂ ರೋಟರಿ ಪದಾಧಿಕಾರಿಗಳಾದ ರವಿ ಜಲನ್, ಸಾಯಿಬಾಬಾ ರಾವ್, ರಾಜೇಶ್ ಶೆಟ್ಟಿ,ಡೆರಿಲ್ ,ಆರ್ ಒ ಟಿ ಮಂಗಳ ಸ್ಫೋರ್ಟ್ಸ್ ಸರ್ಕಲ್ ಊರ್ವ ಸ್ಟೋರ್ ನ ಅಧ್ಯಕ್ಷ. ರಮೇಶ್ ಶೆಟ್ಟಿ ಮಾಜಿ ರೋಟರಿ ಗವರ್ನರ್ ದೇವ ದಾಸ್ ರೈ, ಜಗನ್ನಾಥ್ ಶೆಟ್ಟಿ, ಜಾಕ್ಸನ್ ಸಲ್ದಾನಾ,ಡೆರಿಲ್ ಸ್ಟೀವನ್ ಡಿಸೋಜ, ಆ್ಯನ್ಸ್ ಪೂರ್ಣಿಮಾ ರೈ, ಪ್ರಮೀಳಾ ಹೆಗ್ಡೆ, ಗೀತಾ ಬಿ ರೈ ಎ ಜೆ ಆಸ್ಪತ್ರೆ ಯ ವೈದ್ಯರು ಗಳು ಉಪಸ್ಥಿತರಿದ್ದರು. ರೋ ರಾಜ್ ಗೋಪಾಲ್ ರೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಕೆ ಯಂ ಹೆಗ್ಡೆ ರೋಟರಿ ಕ್ಲಬ್ ಹಮ್ಮಿ ಕೊಂಡಿರುವ ಸಾಮಾಜಿಕ ಕಾರ್ಯ ಕ್ರಮಗಳ ಮಾಹಿತಿ ನೀಡಿದರು. ಎ ಜೆ ದಂತ ಮಹಾ ವಿದ್ಯಾಲಯದ ಕ. ಕಮ್ಯುನಿಟಿ ದಂತವೈದ್ಯ ವಿಭಾಗದ ಮುಖ್ಯಸ್ಥೆ ಡಾ.ವಿಜಯ ಹೆಗ್ಡೆ ಶಿಬಿರದ ಮಹತ್ವವನ್ನು ತಿಳಿಸಿದರು.ರೋ ಭಾಸ್ಕರ್ ರೈ ಕಟ್ಟ ನಿರೂಪಿಸಿದರು.ಶಿಬಿರದಲ್ಲಿ ಹೃದಯ ತಪಾಸಣೆ, ಕಣ್ಣು ತಪಾಸಣೆ , ಅಗತ್ಯ ವಿದ್ದವರಿ ಗೆ ಕನ್ನಡಕ ವಿತರಣೆ, ರಕ್ತ ದೊತ್ತಡ ಸೇರಿದಂತೆ ಎಲ್ಲಾ ರೀತಿಯ ವೈದ್ಯಕೀಯ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಯನ್ನು ನೀಡ ಲಾ ಯಿತು. ಶಿಬಿರದಲ್ಲಿ 124 ಫಲಾನುಭವಿಗಳಿಗೆ ಉಚಿತ ತಪಾಸಣೆ ನಡೆಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಕ್ರೀಡೆಯಿಂದ ಮನಸ್ಸು ಹಗುರ: ಡಿವೈಎಸ್ ಪಿ ಮಹೇಶ್ ಕುಮಾರ್. ಸೂರಿಂಜೆಯಲ್ಲಿ ಸ್ನೇಹ ಸಮ್ಮಿಲನ ಕೂಟ

ಸುರತ್ಕಲ್: ಸುರತ್ಕಲ್ ಸ್ಪೋಟ್ಸ್೯ ಮತ್ತು ಕಲ್ಚರಲ್ ಕ್ಲಬ್ (ರಿ) ಇದರ ಆಶ್ರಯದಲ್ಲಿ ಸುರತ್ಕಲ್ ನಲ್ಲಿ ನಡೆದ ಲೆಜಂಡ್ಸ್ ಕ್ರಿಕೆಟ್ ಲೀಗ್ ಸೀಸನ್ 4 ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟದ ಯಶಸ್ಸಿನ ಹಿನ್ನಲೆಯಲ್ಲಿ ಸೂರಿಂಜೆಯಲ್ಲಿ ಮನೋಹರ್ ಶೆಟ್ಟಿಯವರ ಮನೆಯಲ್ಲಿ ಸ್ನೇಹ ಸಮ್ಮಿಲನ ಕೂಟ ಆಯೋಜಿಸಲಾಗಿತ್ತು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸ್ಥೆಯ ಮಹಾಪೋಷಕ ವಿರಾಜಪೇಟೆ ಡಿವೈಎಸ್ ಪಿ ಮಹೇಶ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕ್ರೀಡೆಯಿಂದ ಮನಸ್ಸು ಹಗುರ ಗೊಳ್ಳುತ್ತದೆ, ಕ್ರೀಡೆ ವ್ಯಾಯಾಮಕ್ಕೂ ಸಹಕಾರಿಯಾಗುತ್ತದೆ ಎಂದರು.ಸುರತ್ಕಲ್ ಸ್ಪೋಟ್ಸ್೯ ಮತ್ತು ಕಲ್ಚರಲ್ ಕ್ಲಬ್ ನಲ್ಲಿ ಕುಟುಂಬದ ವಾತಾವರಣ ಸೃಷ್ಟಿಯಾಗಿದೆ. ಮಕ್ಕಳು ಕೂಡಾ ಇಂತಹ ಸಂಘಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮುಂದಿನ‌ ದಿನಗಳಲ್ಲಿ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಮಹಿಳಾ ವಿಭಾಗವನ್ನೂ ರಚಿಸಬೇಕು. ಇಂತಹ ಸಂಘಟನೆಗಳು ಬೆಳೆಯಬೇಕು, ಅದಕ್ಕೆ ಎಲ್ಲರ ಸಹಕಾರವೂ ಬೇಕು ಎಂದು ಡಿವೈಎಸ್ ಪಿ ಮಹೇಶ್ ಕುಮಾರ್ ತಿಳಿಸಿದರು.ಸ್ಪೋಟ್ಸ್೯ ಕ್ಲಬ್ ನ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ಅಧ್ಯಕ್ಷತೆ ವಹಿಸಿದ್ದರು. ಸುರತ್ಕಲ್ ನಲ್ಲಿ ಸ್ಪೋಟ್ಸ್೯ ಮತ್ತು ಕಲ್ಚರಲ್ ಕ್ಲಬ್ ಬೆಳೆಯುವಲ್ಲಿ ಯುವಕರ ಶ್ರಮ ಬಹಳಷ್ಟಿದೆ. ಮುಂದಿನ ದಿನಗಳಲ್ಲೂ ಇದು ಸಂಘಟನಾತ್ಮಕವಾಗಿ, ಸೌಹಾರ್ದತಯುತವಾಗಿ ಸಮಾಜ ಪರ ಚಿಂತನೆಯಲ್ಲಿ ಬೆಳೆಯಲಿ ಎಂದರು.ಸಂಚಾಲಕರಾದ ಮನೋಹರ ಶೆಟ್ಟಿ ಸೂರಿಂಜೆ, ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ಕಾರ್ಯದರ್ಶಿ ಕಿರಣ್ ಅಚಾರ್ಯ ಸುರತ್ಕಲ್ , ನಾಗರಾಜ್ ಕಡಂಬೋಡಿ, ಕೇಸರಿ ಮನೋಹರ ಶೆಟ್ಟಿ , ಸುಧಾಕರ ಪೂಂಜ ,ಪುಷ್ಪರಾಜ್ ಶೆಟ್ಟಿ ಮಧ್ಯ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ ಮುಂತಾದವರು ಉಪಸ್ಥಿತರಿದ್ದರು. ಸುರತ್ಕಲ್ ಸ್ಪೋಟ್ಸ್೯ ಮತ್ತು ಕಲ್ಚರಲ್ ಕ್ಲಬ್ ನ ಸದಸ್ಯರು ಕುಟುಂಬ ಸಮೇತರಾಗಿ ಭಾಗವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಕಿರಣ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

ಅರಂತಬೆಟ್ಟುಗುತ್ತು ಮಾರ್ಲ ಮನೆತನದ ಗಡಿಪ್ರಧಾನ ಕಾರ್ಯಕ್ರಮ, ಆಮಂತ್ರಣ ಪತ್ರಿಕೆ ಬಿಡುಗಡೆ. ಮೇ 4, 5 ರಂದು ಕಾರ್ಯಕ್ರಮ

ಸುರತ್ಕಲ್: ಅರಂತಬೆಟ್ಟು ಗುತ್ತು ಶ್ರೀ ನಾಗದೇವರು ಶ್ರೀ ಉಳ್ಳಾಯ ಹಾಗೂ ಪರಿವಾರ ದೈವಗಳ ದೈವಸ್ಥಾನ ಇಲ್ಲಿ ಅರಂತಬೆಟ್ಟು ಗುತ್ತು ಮಾರ್ಲ ಮನೆತನದ ಗಡಿ ಸ್ವೀಕಾರ ಸಮಾರಂಭ ಮೇ 4 ರಂದು ಭಾನುವಾರ ಬೆಳಿಗ್ಗೆ 8.20 ಕ್ಕೆ ಅರಂತಬೆಟ್ಟುಗುತ್ತುವಿನಲ್ಲಿ ನಡೆಯಲಿದೆ. ಸುರತ್ಕಲ್ ಮಧುಸೂದನ‌ ಮಯ್ಯರವರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸುರತ್ಕಲ್ ಕೊಡಿಪಾಡಿ ಬಾಳಿಕೆ ಹಾಗೂ ಪಡ್ರೆ ಚಾವಡಿಯ ಗಡಿ ಪ್ರಧಾನರುಗಳ ಉಪಸ್ಥಿತಿಯಲ್ಲಿ ಹಾಗೂ ಗೌರವಾನ್ವಿತ ಎಲ್ಲಾ ಗಡಿ ಪ್ರಧಾನರ ಸಮ್ಮುಖದಲ್ಲಿ ಅರಂತಬೆಟ್ಟು ಗುತ್ತು ಮಾರ್ಲ ಮನೆತನದ ನಿಡ್ಡೋಡಿ ಮೈಂದಡಿ ಸದಾನಂದ ಶೆಟ್ಟಿಯವರಿಗೆ ಕಾಂತೇರಿ ಜುಮಾದಿಯ ಗಡಿ ಸ್ವೀಕಾರ ನಡೆಯಲಿದೆ. ಕಾರ್ಯಕ್ರಮಗಳುಮೇ 4 ಭಾನುವಾರ ಬೆಳಿಗ್ಗೆ 8.20 ಗಡಿ ಸ್ವೀಕಾರ, 10.30 ಕ್ಕೆ ಧರ್ಮರಸು ಉಳ್ಳಾಯ, ಕಾಂತೇರಿ ಜುಮಾದಿ ಹಾಗೂ ಪರಿವಾರ ದೈವಗಳ ಭಂಡಾರ ಇಳಿಸುವುದು, ನಂತರ ಧರ್ಮರಸು ಉಳ್ಳಾಯ ದೈವಕ್ಕೆ ನೇಮ, ಮಧ್ಯಾಹ್ನ‌1 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ.ಸಂಜೆ 6 ಕ್ಕೆ ಮೈಸಂದಾಯ ದೈವಕ್ಕೆ ನೇಮ, ರಾತ್ರಿ 8 ಕ್ಕೆ ಅನ್ನ ಸಂತರ್ಪಣೆ, ರಾತ್ರಿ 9 ಕ್ಕೆ ಕಾಂತೇರಿ ಜುಮಾದಿ ಹಾಗೂ ಭಂಟ, ಸರಳ ಜುಮಾದಿ ಹಾಗೂ ಭಂಟ ದೈವಗಳಿಗೆ ನೇಮ, ನಂತರ ಪಿಲಿಚಾಮುಂಡಿ ದೈವಕ್ಕೆ ನೇಮ‌ ನಡೆಯಲಿದೆ.ಮೇ 5 ರಂದು ರಾತ್ರಿ 8 ಕ್ಕೆ ಕಲ್ಲುರ್ಟಿ ಪಂಜುರ್ಲಿ ಹಾಗೂ ಜಾಗದ ಪಂಜುರ್ಲಿ ದೈವಗಳಿಗೆ ಕೋಲ ನಡೆಯಲಿದೆ.ಆಮಂತ್ರಣ ಪತ್ರಿಕೆ ಬಿಡುಗಡೆಗಡಿ ಸ್ವೀಕಾರ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಎ.18 ರಂದು ಅರಂತಬೆಟ್ಟು ಗುತ್ತುವಿನಲ್ಲಿ ನಡೆಯಿತು.ಗಡಿ ಪ್ರಧಾನರಾದ ಬಾಬು ಬಂಡ್ರಿಯಾಲ್ ಪಡ್ರೆ, ಜಗನ್ನಾಥ ಅತ್ತಾರ್ ಕೊಡಿಪಾಡಿ, ಮಧು ಮಯ್ಯ, ರಮಾನಾಥ ರೈ, ಬಾಲಕೃಷ್ಣ ಶೆಟ್ಟಿ ಏಳಿಂಜೆ ಅಂಗಡಿಗುತ್ತು, ಪುಷ್ಪರಾಜ ಶೆಟ್ಟಿ ಕುಡುಂಬೂರು, ದಿನಕರ ಶೆಟ್ಟಿ ಪಡ್ರೆ, ದೇವೇಂದ್ರ ಪೂಜಾರಿ ಪಡ್ರೆ, ಸದಾನಂದ ಶೆಟ್ಟಿ, ನವೀನ್ ಶೆಟ್ಟಿ ಪಡ್ರೆ, ಅರಂತ ಬೆಟ್ಟು ಗುತ್ತು ಮನೆತನದ ಮುದ್ದಣ್ಣ ಶೆಟ್ಟಿ, ನವೀನ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ರಾಜೇಶ್ ಶೆಟ್ಟಿ, ದಿಲ್ ರಾಜ್ ಆಳ್ವ, ಪ್ರಶಾಂತ್ ಶೆಟ್ಟಿ, ಜ್ಯೋತಿ ಪ್ರಕಾಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ವಿದ್ವಾನ್ ರಾಮಚಂದ್ರ ಉಚ್ಚಿಲ್ ಕೃತಿಸಂಚಯ ಲೋಕಾರ್ಪಣೆ ಮತ್ತು ಯಕ್ಷಗಾನ ತಾಳಮದ್ದಳೆ

ದೀರ್ಘಕಾಲ ಹೊರನಾಡು ಮುಂಬಯಿಯಲ್ಲಿದ್ದು, ಕನ್ನಡ ನಾಡುನುಡಿಯ ಕೈಂಕರ್ಯ ಮಾಡುತ್ತಾ ಅಲ್ಲಿ ಕನ್ನಡದ ಉಳಿವಿಗೆ, ಬೆಳವಣಿಗೆಗೆ ಶ್ರಮಿಸಿದ ವಿದ್ವಾನ್ ರಾಮಚಂದ್ರ ಉಚ್ಚಿಲರ ಬರಹ ಬದುಕನ್ನು ಅನಾವರಣಗೊಳಿಸಬೇಕು. ಅದು ದಾಖಲೀಕರಣಗೊಳ್ಳಬೇಕು ಎಂಬುದಾಗಿ ಈ ಮೇಲಿನ ಮೂರು ಸಂಸ್ಥೆಗಳು ಒಂದುಗೂಡಿ ಮಾಡಿದ ಕಾರ್ಯವೇ ಚ.ರಾ. ನೆನಪಿನ ನಾಲ್ಕು ಸಂಪುಟಗಳ ಸಂಚಯ. ಉಚ್ಚಿಲರ ಹುಟ್ಟೂರಿನಲ್ಲಿ ಈ ಸಂಪುಟಗಳು ಲೋಕಾರ್ಪಣೆಗೊಳ್ಳುತ್ತಿರುವುದು ಅದೂ ಉಚ್ಚಿಲರ ಜನ್ಮ ಶತಮನೋತ್ಸವದ ಸಂಸ್ಮರಣೆಯನ್ನು ಮಾಡುವ ವಿಶೇಷ ದಿನ. ಅದರೊಂದಿಗೆ ಡಾ. ವಾಣಿ ಎನ್. ಉಚ್ಚಿಲ್ಕರ್ ರವರ ಮೂರು ಕೃತಿಗಳು ಹಾಗೂ ಇನ್ನೊಂದು ಸಂಪಾದಿತ ಕೃತಿ ಹಾಗೆ ಒಟ್ಟು 8 ಕೃತಿಗಳು ಲೋಕಾರ್ಪಣೆಗೊಳ್ಳಲಿದೆ.ಚ.ರಾ. ನೆನಪಿನ ಸಂಪುಟ ಒಂದರಲ್ಲಿ ಚ.ರಾ.ರವರ ಪ್ರಕಟಿತ ಕೃತಿಗಳಲ್ಲಿ 5 ಕೃತಿಗಳನ್ನು 1 ಸಂಪುಟವಾಗಿ ಸಂಕಲಿಸಲಾಗಿದೆ. ಸಂಪುಟ ಒಂದರಲ್ಲಿ ಕಡಲಕರೆಯ ಚಿತ್ರಗಳು, ೨ನೇ ಕೃತಿ ಪದರ, ೩ನೇ ಕೃತಿ ನೆನಪಿನ ಬುತ್ತಿ 4ನೇ ಕೃತಿ ಯಕ್ಷಗಾನ ನಡೆದು ಬಂದ ದಾರಿ ಹಾಗೂ ೫ನೇ ಕೃತಿ ಗಿಡ, ಮರ, ಬಳ್ಳಿ, ಮೂಲಿಕೆಗಳು ಇದರ ಮೂಲಗ್ರಂಥ ೧೮೮೧ರಲ್ಲಿ ಪ್ರಕಟವಾಗಿ ಆಗಲೇ 3 ಆವೃತ್ತಿಗಳನ್ನು ಕಂಡಿರುವುದು ಇಲ್ಲಿಯ ವೈಶಿಷ್ಟ್ಯ.ಚ.ರಾ. ನೆನಪಿನ ಸಂಪುಟ 2ರಲ್ಲಿ ಉಚ್ಚಿಲರು ಬರೆದ ಬರಹಗಳನ್ನು ಸಂಪಾದಕನಾಗಿ, ಪತ್ರಕರ್ತನಾಗಿ, ವಿಮರ್ಶಕನಾಗಿ, ಬರೆದ ಬರಹಗಳು ದೊರಕಿದ್ದು ಕೇವಲ 5೦ ಪ್ರತಿಶತ ಒಟ್ಟುಗೂಡಿಸಿ ದಾಖಲಿಸಿ ಪ್ರಕಟಿಸಲಾಗಿದೆ. ಚ.ರಾ. ನೆನಪಿನ ಸಂಪುಟ ೩ರಲ್ಲಿ ಮುಂಬಯಿಯ ದೈನಿಕ ಕರ್ನಾಟಕ ಮಲ್ಲದಲ್ಲಿ ಪ್ರಕಟಿತ ಅಂಕಣ ಬರಹಗಳ ಸಂಕಲನ ಇದೆ. ಚ.ರಾ. ನೆನಪಿನ ಸಂಪುಟ ೪ರಲ್ಲಿ ಸಾಹಿತಿಗಳು ಕಂಡ ಚ.ರಾ., ಆತ್ಮೀಯರು ನೆನಪಿಸಿಕೊಂಡಾಗಿನ ಲೇಖನಗಳು, ವಿದ್ವಜ್ಜನರ ವೈಚಾರಿಕ ಲೇಖನಗಳು, ಚ.ರಾ. ಪ್ರಕಟಿತ ಕೃತಿಗಳ ವಿಮರ್ಶೆ ಇವೆಲ್ಲವು ಸಂಕಲನಗೊಂಡಿವೆ.ಹೀಗೆ ಉಚ್ಚಿಲರ ಬರಹದ ಬದುಕನ್ನು ಸಾಧ್ಯವಾದಷ್ಟು ಮಟ್ಟಿಗೆ ಈ ನಾಲ್ಕು ಸಂಪುಟಗಳಲ್ಲಿ ಸಂಗ್ರಹಿಸಿ ಸಾರಸ್ವತ ಲೋಕಕ್ಕೆ ಕೊಡಲಾಗಿದೆ.ಈ ಕೃತಿಗಳಲ್ಲದೆ ಚ.ರಾ. ಪುತ್ರಿ ಡಾ. ವಾಣಿ ಎನ್. ಉಚ್ಚಿಲ್ಕರ್ ರವರ ಬರಹದ ಬದುಕನ್ನೂ ಇಲ್ಲಿ ದಾಖಲಿಸಲಾಗಿದೆ. ಈ ನಾಲ್ಕು ಕೃತಿಗಳೂ ಎಪ್ರಿಲ್ 20ರಂದು ಲೋಕಾರ್ಪಣೆಗೊಳ್ಳಲಿದೆ.1.ಭಾವ ತರಂಗ –ಕವನಸಂಕಲನದಲ್ಲಿ ತುಳು, ಕನ್ನಡ ಹಾಗೂ ಮಲೆಯಾಳ ಕವಿತೆಗಳನ್ನು ಸಂಕಲಿಸಲಾಗಿದೆ.2.ಜ್ಞಾನದರ್ಶನ – ಮುಂಬಯಿಯ ಅನೇಕ ಸಂಸ್ಥೆಗಳು, ಜಾತೀಯ ಸಂಸ್ಥೆಗಳು ಅವರು ಡಾಕ್ಟರೇಟ್ ಮಾಡಿದ ಸಂದರ್ಭದಲ್ಲಿ ಗೌರವ ಮಾಡಿದ ಬೇರೆ ಬೇರೆ ವಿಷಯ ಕೊಟ್ಟು, ಪ್ರಬಂಧ ಮಂಡನೆಗೆ ಅವಕಾಶ ನೀಡಿ ಸಾಹಿತ್ಯಿಕ ಹಿನ್ನೆಲೆಯಲ್ಲಿ ಬೆಳೆಸಿದುದನ್ನು ಸ್ಮರಿಸಿದ್ದಾರೆ.3, ನನ್ನ ಚೇತನ – ಸಂಸ್ಮರಣಾ ಲೇಖನಗಳು. ಡಾ. ವಾಣಿಯವರ ಬಾಳಿಗೆ ಬೆಳಕು, ಸ್ಫೂರ್ತಿ, ಚೇತನ ನೀಡಿದ ಅವರ ತಂದೆ ವಿದ್ವಾನ್ ರಾಮಚಂದ್ರ ಉಚ್ಚಿಲ್, ತಾಯಿ ಪೊನ್ನಮ್ಮ ಹಾಗೂ ಅವರ ಪತಿಯ ಸಂಸ್ಮರಣೆಯನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ.4, ಎಲೆಮರೆಯ ಬರಹಗಾರ ದಿ. ನಾರಾಯಣ ಕೆ. ಉಚ್ಚಿಲ್ಕರ್ – ಇವರು ವರದಿಗಾರರಾಗಿದ್ದು ಬೇರೆ ಬೇರೆ ಪತ್ರಿಕೆಗಳಲ್ಲಿ ಬರೆದ ವರದಿಗಳನ್ನು ಅವರ ಮಕ್ಕಳಾದ ನವೀನ್ ಎನ್. ಉಚ್ಚಿಲ್ಕರ್, ನವನೀತ ಎನ್. ಉಚ್ಚಿಲ್ಕರ್ ಸಂಪಾದಿಸಿ ಕೃತಿರೂಪದಲ್ಲಿ ಸಂಕಲಿಸಿದ್ದಾರೆ.ಈ ಎಂಟು ಕೃತಿಗಳ ಬಿಡುಗಡೆ ಸಮಾರಂಭವು 2೦ ಎಪ್ರಿಲ್ 2೦25 ರವಿವಾರ ಸೋಮೇಶ್ವರ ಉಚ್ಚಿಲದ ಉಚ್ಚಿಲ ಬೋವಿ ಹಿರಿಯ ಪ್ರಾಥಮಿಕ ಶಾಲೆ ಇದರ ವಜ್ರಮಹೋತ್ಸವ ಸ್ಮಾರಕ ಸಭಾಗೃಹದಲ್ಲಿ ಸಂಜೆ ಘಂಟೆ 5ಕ್ಕೆ ನಡೆಯಲಿದೆ.ಕೃತಿ ಬಿಡುಗಡೆ – ತಾಳಮದ್ದಳೆ:ಸಮಾರಂಭವನ್ನು ಹಿರಿಯ ವೈದ್ಯ, ಸಾಹಿತಿ ಡಾ. ರಮಾನಂದ ಬನಾರಿ ಉದ್ಘಾಟಿಸುವರು. ಮುಂಬೈ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ವಸಂತ ಕುಮಾರ್ ತಾಳ್ತಜೆ ಅಧ್ಯಕ್ಷತೆ ವಹಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಚ.ರಾ. ಸಂಸ್ಮರಣೆಯನ್ನು ನೆರವೇರಿಸುವರು. ಡಾ.ಎಂ. ಪ್ರಭಾಕರ ಜೋಶಿ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ನಂದಳಿಕೆ ಬಾಲಚಂದ್ರ ರಾವ್, ಮುರಳಿ ಕಡೆಕಾರ್ ನಾಗೇಶ್ ಕಲ್ಲೂರ್ ಮುಖ್ಯ ಅತಿಥಿಗಳಾಗಿರುವರು. ಸಮಾರಂಭಕ್ಕೆ ಮುನ್ನ ಅಪರಾಹ್ನ ಗಂ.2.30ರಿಂದ ಹಿರಿಯ ಕಲಾವಿದರಿಂದ ‘ಕರ್ಣ ಪರ್ವ’ ಯಕ್ಷಗಾನ ತಾಳಮದ್ದಳೆಯನ್ನು ಏರ್ಪಡಿಸಲಾಗಿದೆ. ರಾಜಾರಾಮ ಹೊಳ್ಳ ಕೈರಂಗಳ, ಮಯೂರ್ ನಾಯಗ, ಸ್ಕಂದ ಕುಮಾರ್ ಹಿಮ್ಮೇಳದಲ್ಲಿರುವರು. ಡಾ‌ ಎಂ. ಪ್ರಭಾಕರ ಜೋಶಿ, ಭಾಸ್ಕರ ರೈ ಕುಕ್ಕುವಳ್ಳಿ, ಡಾ.ಪುರುಷೋತ್ತಮ ಬಿಳಿಮಲೆ ಮತ್ತು ಸದಾಶಿವ ಆಳ್ವ ತಲಪಾಡಿ ಅರ್ಥಧಾರಿಗಳಾಗಿ ಭಾಗವಹಿಸುವರು.ಗುರುವಾರ ಮಂಗಳೂರು ಪತ್ರಿಕಾಭವನದಲ್ಲಿ ಜರಗಿದ ಸುದ್ದಿಗೋಷ್ಠಿಯಲ್ಲಿ ಮುಂಬಯಿಯ ಲೇಖಕಿ ಡಾ. ವಾಣಿ ಎನ್.ಉಚ್ಚಿಲ್ಕರ್ ಬಿಡುಗಡೆಗೊಳ್ಳುವ ಕೃತಿಗಳ ವಿವರ ನೀಡಿದರು. ಸಲಹೆಗಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮದ ವಿವರ ನೀಡಿದರು. ನವನೀತ ಎನ್.ಉಚ್ಚಿಲ್ಕರ್,ನಿಧೀಶ್ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

Anti-Drug Awareness Program at Uppala and Hosangadi Bus Stand Conducted by Snehalaya De Addiction Centre in Collaboration with Janamaithri Police Station Manjeshwar and Police Officers Association Kasaragod District

Snehalaya De Addiction Centre, in collaboration with Janamaithri Police Station Manjeshwar and Police Officers Association Kasaragod District, organized a street play at Uppala and Hosangadi Bus Stand to raise awareness about the dangers of drug abuse and promote a drug-free lifestyle. The program featured skits and mime shows performed by the Snehalaya team and MSW field work students from Mangalore University. The event was attended by notable officials, including Mr. P Balakrishna Nair, ASP Kasaragod District; Ajith Kumar, CI Hosadurg Police station; Mr. Anoop, CI Manjeshwar; and Mr. Joseph Crasta, Executive Director of Snehalaya De Addiction Centre. The initiative aimed to educate the public, especially youth and parents, about the risks associated with substance abuse and encourage them to make informed choices. During the program, police officers highlighted the lack of facilities for victims of substance abuse for treatment in the Kasaragod district and praised Snehalaya’s 15-year-long service to the Society. They commended Joseph Crasta and Snehalaya’s mission, particularly their recently established well-equipped De-addiction center for victims. The Executive Director of Snehalaya emphasized the dangers of drug abuse and the treatment options available at their center.

Scroll to Top