ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

BREAKING NEWS. ರಾಮಚಂದ್ರ ಬೈಕಂಪಾಡಿ ನಿಧನ

ಮಂಗಳೂರು- ಬಿಜೆಪಿಯ ಹಿರಿಯ ನಾಯಕ ರಾಮಚಂದ್ರ ಬೈಕಂಪಾಡಿ ಅವರು ನಿಧನರಾಗಿದ್ದಾರೆ. ಅವರಿಗೆ 75ವರ್ಷ ವಯಸ್ಸಾಗಿತ್ತು . ಆರಂಭದಲ್ಲಿ ನಾಟಕಕಾರರಾಗಿ ಜನ ಮನ ಗೆದ್ದಿದ್ದ ರಾಮಚಂದ್ರ ಬೈಕಂಪಾಡಿ ಅವರು ಸಾಹಿತಿ , ಮೇಧಾವಿ, ಎಂ.ಎ ಪದವೀಧರರಾಗಿದ್ದರುಯಾರೂ ಸಿಕ್ಕರೂ ದಾನೆ ಎಂಚ ಉಲ್ಲರ್ ಎಂದು ಆತ್ಮೀಯತೆಯಿಂದ ಮಾತಾಡುವ ಅವರು ಬಿಜೆಪಿ ಪಕ್ಷದ ಹಿರಿಯ ನಾಯಕರಾಗಿದ್ದರು. ಬಿ.ಎಸ್.ಯಡಿ ಯೂರಪ್ಪನವರ ಆತ್ಮೀಯರಾಗಿದ್ದ ರಾಮಚಂದ್ರ ಬೈಕಂಪಾಡಿ ಯವರು 2013ರಲ್ಲಿ ಬಿಎಸ್ ವೈಯವರ ಸ್ವತಂತ್ರ ರಾಜಕೀಯ ಪಕ್ಷ ಕೆಜೆಪಿಯಲ್ಲಿ ಮಂಗಳೂರು ಉತ್ತರದಲ್ಲಿ ಎಂಎಲ್ ಎ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಹಿಂದೊಮ್ಮೆ,ಅವರು ಹೃದಯದ ಶಸ್ತ್ರ ಚಿಕಿತ್ಸೆಗೊಳಗಾಗಿದ್ದಾಗ ಆಸ್ಪತ್ರೆಗೆ ಪಾವತಿಸಬೇಕಾಗಿದ್ದ ಚಿಕಿತ್ಸಾ ವೆಚ್ಚವನ್ನು ಬಿ ಎಸ್ ವೈಯವರೇ ಭರಿಸಿದ್ದರು. ಬಿಎಸ್ ವೈ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದ ಅವರು ಮಾಜಿ ಎಂಪಿ, ಬಿಜೆಪಿ ಪಕ್ಷದ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ಸಾದಾ ಶ್ಲಾಘನೆ ವ್ಯಕ್ತಪಡಿಸುತ್ತಿದ್ದರು. ಮೊಗವೀರ ಸಮಾಜದ ಪ್ರಬಲ ನಾಯಕರಾಗಿದ್ದ ಅವರು ಕರ್ನಾಟಕ ಮೀನುಗಾರಿಕಾಭಿವೃದ್ದಿ ನಿಗಮ KFDC ನ ಅಧ್ಯಕ್ಷರಾಗಿಯೂ ಗಮನಾರ್ಹ ಸೇವೆ ಸಲ್ಲಿಸಿದ್ದರು. ಬಿಎಸ್ ವೈ ಜತೆಗೆ ,ಮತ್ತೆ ಮಾತೃಪಕ್ಷ ಬಿಜೆಪಿ ಸೇರಿದ ಅವರು ಹಿರಿಯ ಸಾಮಾಜಿಕ ಕಾರ್ಯಕರ್ತರಾಗಿದ್ದರು. ಕರ್ನಾಟಕ ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಪರಿಸರ ಪ್ರೇಮಿ , ಪರಿಸರ ಹಿತರಕ್ಷಣಾ ಹೋರಾಟಗಾರರಾಗಿದ್ದರು. ಈ ಹಿನ್ನೆಲೆಯಲ್ಲಿ 2021ರಲ್ಲಿ ಅವರಿಗೆ ಕರ್ನಾಟಕ ಸರಕಾರದಿಂದ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳು ದೊರಕಿವೆ.ಹಲವು ದಶಕಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ಪೂರ್ಣಕಾಲಿಕಾ ರಾಜಕಾರಣಿಯಾಗಿ ನಿಸ್ವಾರ್ಥ ಸಮಾಜಸೇವಕರಾಗಿದ್ದ ರಾಮಚಂದ್ರ ಬೈಕಂಪಾಡಿ ಅವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಈ ನಾಡು ಪರಿಸರ ಪ್ರೇಮಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಗಣ್ಯರನೇಕರು ಸಂತಾಪ ಸೂಚಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ನಿತ್ಯಶ್ರೀ ಬಿ.ವಿ.ಗೆ ಪಿಎಚ್ ಡಿ ಪದವಿ

ಮಂಗಳೂರು: ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಯೆನೆಪೋಯ ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ನಿತ್ಯಶ್ರೀ ಬಿ.ವಿ. ಇವರು ಮಂಗಳೂರಿನ ಆಯ್ದ ಶಾಲೆಗಳ ಹದಿಹರೆಯದ ಬಾಲಕಿಯರಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವ ಉದ್ದೇಶದಿಂದ ಅರಿವು, ದೃಢವಾದ ನಡವಳಿಕೆ ಮತ್ತು ಸ್ವಾಭಿಮಾನವನ್ನು ಹೆಚ್ಚಿಸುವ ಸಾಮರ್ಥ್ಯವರ್ಧನಾ ಕಾರ್ಯಕ್ರಮದ ಪರಿಣಾಮಕಾರಿತ್ವದ ಕುರಿತು ನಡೆಸಿದ ಸಂಶೋಧನಾ ಪ್ರಬಂಧಕ್ಕೆ ಯೆನೆಪೋಯ ಪರಿಗಣಿತ ವಿ.ವಿ. ಪಿಎಚ್ ಡಿ ಪದವಿ ನೀಡಿದೆ. ಯೆನೆಪೋಯ ನರ್ಸಿಂಗ್ ಕಾಲೇಜಿನ ಡೀನ್ ಡಾ. ಲೀನಾ ಕೆ.ಸಿ. ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಪೂರೈಸಿದ್ದರು. ಯೆನೆಪೋಯ ಪರಿಗಣಿತ ವಿ.ವಿ.ಯ ಯೂತ್ ರೆಡ್‌ಕ್ರಾಸ್ ನೋಡಲ್ಅಧಿಕಾರಿಯಾಗಿರುವ ನಿತ್ಯಶ್ರೀ ಬಿ.ವಿ. ಇವರು ಸುಳ್ಯದ ನಿವೃತ್ತ ಸರ್ವೆ ಮೇಲ್ವಿಚಾರಕ ವಿಠಲ ಬಿ.ಕೆ.- ರುಕ್ಮಿಣಿ ಬಿ.ವಿ. ದಂಪತಿ ಪುತ್ರಿ .ಗಣೇಶ್ ಮಾಣಿಬೆಟ್ಟು ಅವರ ಪತ್ನಿ.

ಪ್ರಾದೇಶಿಕ ವಾರ್ತೆಗಳು

ನಾಗರಿಕ ಸೇವಾ ಸಮಿತಿ (ರಿ.)ಅಂಬೇಡ್ಕರ್ ನಗರ ಕರಂಬಾರು ಇದರ 12 ನೇ ವಾರ್ಷಿಕೋತ್ಸವ

ಮಂಗಳೂರು- ನಾಗರಿಕ ಸೇವಾ ಸಮಿತಿ.ರಿ.ಅಂಬೇಡ್ಕರ್ ನಗರ, ಕರಂಬಾರು ಇದರ 12 ನೇ ವಾರ್ಷಿಕೋತ್ಸವವು ಕರಂಬಾರಿ ನಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಲೋಕೇಶ್ ಪೂಜಾರಿ ಅವರು ಮಾತನಾಡುತ್ತಾ,ನಾಗರಿಕ ಸೇವಾ ಸಮಿತಿಯ ಸಮಾಜ ಸೇವೆಯನ್ನು ಪ್ರಶಂಸಿದರು. ಸಮಾಜಕ್ಕೆ ಮಾದರಿ ಸಂಘ ಎಂದು ಹೇಳಿದರು. ಬಜಪೆ ಬಂಟರ ಸಂಘದ ಅಧ್ಯಕ್ಷರಾದ ವೇಣುಗೋಪಾಲ್ ಶೆಟ್ಟಿ ರವರ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು . ಮಾತನಾಡಿದ ವೇಣುಗೋಪಾಲ್ ಶೆಟ್ಟಿ ರವರು ನಾಗರಿಕ ಸೇವಾ ಸಮಿತಿಯ ಸಮಾಜ ಸೇವೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು, ನಾಗರಿಕ ಸೇವಾ ಸಮಿತಿಯು ಕಣ್ಣಿನ ಉಚಿತ ಚಿಕಿತ್ಸಾ ಶಿಬಿರ ಮಾಡಿ ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡಿದೆಂದು ಕೊಂಡಾಡಿದರು.ನಾಗರಿಕ ಸೇವಾ ಸಮಿತಿಯ ಅಧ್ಯಕ್ಷರಾದ ಭೋಜರಾಜ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬಜಪೆ ಪಟ್ಟಣ ಪಂಚಾಯತ್ ಸದಸ್ಯರಾದ ರಾಜೇಶ್ ಅಮೀನ್, ದಿನೇಶ್ ಶೆಟ್ಟಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ದೇವಾಡಿಗ, ಮಳವೂರು ಪಂಚಾಯತ್ ಮಾಜಿ ಅಧ್ಯಕ್ಷರಾದ ನಾರಾಯಣ ಬೋಧಿ, ಎಸ್ ಡಿಯಂಸಿ ಅಧ್ಯಕ್ಷರಾದ ಗುಣಪಾಲ್ ದೇವಾಡಿಗ, ವಾಸು ಪೇಜಾವರ್, ರುಕ್ಕಯ್ಯ ಕೋಟ್ಯಾನ್, ಉಪಸ್ಥಿತರಿದ್ದರು. ಕುಮಾರಿ ಕೃತಿ ಬಿ. ಕೆ ಕಾರ್ಯಕ್ರಮ ನಿರೂಪಿಸಿದರು, ವೀಣಾ ಸಾಲ್ಯಾನ್ ಪ್ರಾಸ್ತವಿಕ ಮಾತನಾಡಿದರು, ವಿದ್ಯಾ ಮಿಥುನ್ ಸ್ವಾಗತಿಸಿ, ರಾಕೇಶ್ ಕುಂದರ್ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಯಕ್ಷಧ್ರುವ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ವಾರ್ಷಿಕೋತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆ

ಸುರತ್ಕಲ್: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಸುರತ್ಕಲ್ ಘಟಕದ 6 ನೇ ವರ್ಷದ ಅಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿತು. ಅಮಂತ್ರಣ ಪತ್ರಿಕೆಯನ್ನು ಶಕುಂತಲಾ ರಮಾನಂದ ಭಟ್ ಇಡ್ಯಾ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಗೌರವಾಧ್ಯಕ್ಷರಾದ ಸುಧಾಕರ ಪೂಂಜ, ಪಟ್ಲ ಫೌಂಡೇಶನ್ ಕೇಂದ್ರಿಯ ಘಟಕದ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ, ಜಗನ್ನಾಥ ಶೆಟ್ಟಿ ಬಾಳ, ಸಮಿತಿಯ ಉಪಾಧ್ಯಕ್ಷೆ ಸಹನಾ ರಾಜೇಶ್ ರೈ, ಉಪಾಧ್ಯಕ್ಷ ರಮೇಶ್ ಭಟ್, ಸಂಚಾಲಕ ನಾಗರಾಜ್ ಕಡಂಬೋಡಿ, ಮುಂತಾದವರು ಉಪಸ್ಥಿತರಿದ್ದರು. ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಅಧ್ಯಕ್ಷರಾದ ಲೀಲಾಧರ ಶೆಟ್ಟಿ ಕಟ್ಲ‌ ಸ್ವಾಗತಿಸಿ, ಕಾರ್ಯದರ್ಶಿ ಬಾಳ ಗಂಗಾಧರ ಪೂಜಾರಿ ಚೇಳೈರು ವಂದಿಸಿದರು. ಸವಿತಾ ಬಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

BREAKING NEWS. ಆಶಾ ಭೋಸ್ಲೆ ನಿಧನ

ಮುಂಬಯಿ – ಭಾರತೀಯ ವಿವಿಧ ಭಾಷೆಗಳಲ್ಲಿ 12ಸಾವಿರಕ್ಕೂ ಮಿಕ್ಕಿ ಹಾಡುಗಳಿಗೆ ಧ್ವನಿಯಾಗಿದ್ದ ಗಿನ್ನಿಸ್ ದಾಖಲೆಯ ಗಾನ ಕೋಗಿಲೆ ,ಭಾರತೀಯ ಚಿತ್ರರಂಗದ ದಂತ ಕಥೆ , ಬಾಲಿವುಡ್ ನ ಹಿರಿಯ ಗಾಯಕಿ ಆಶಾ ಭೋಸ್ಲೆ ಅವರು ಇಂದು ಮುಂಬಯಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆ ಮತ್ತು ಹೃದಯ ಸಂಬಂಧಿ ಕಾಯಿಲೆ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ಅವರ ಮಗ ಆನಂದ ಭೋಸ್ಲೆ ಅವರು ಮಾಧ್ಯಮಗಳಿಗೆ ದೃಢ ಪಡಿಸಿದ್ದಾರೆ.ಅವರಿಗೆ 92 ವರ್ಷ ವಯಸ್ಸಾಗಿತ್ತು.ನಿನ್ನೆ ಅವರನ್ನು ತೀವ್ರ ಅಸ್ವಸ್ಥ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಳೆ ಅವರ ಅಂತ್ಯಕ್ರಿಯೆ ನಡೆಯಲಿದೆ.ಪ್ರಧಾನಿ ಮೋದಿ ಸಹಿತ ಗಣ್ಯರನೇಕರು ಆಶಾ ಭೋಸ್ಲೆಯವರ ನಿಧಾನಕ್ಕೆ ಸಂತಾಪ ಸೂಚಿಸಿದ್ದಾರೆ. ಆಶಾ ಭೋಸ್ಲೆ ಅವರ ಹಾಡುಗಳು ಎಂದಿಗೂ ಅಮರ ಎಂದು ಮೋದಿ ಅವರು ಸಂತಾಪ ಸೂಚನೆಯಲ್ಲಿ ಹೇಳಿದ್ದಾರೆ.ಆಶಾ ಮಂಗೇಶ್ಕರ್ ಆಗಿದ್ದ ಅವರು ಸಹೋದರಿ ಲತಾ ಮಂಗೇಶ್ಕರ್ ಅವರ ಸೆಕ್ರೆಟರಿ ಅವರನ್ನೇ ಮದುವೆಯಾಗಿ ಆಶಾ ಭೋಸ್ಲೆ ಆಗಿದ್ದರು. ಉದ್ಯಮಿ ಆಗಿಯೂ ಯಶಸ್ವಿಯಾಗಿದ್ದ ಅವರು 250ಕೋಟಿ ರೂಪಾಯಿ ಆಸ್ತಿಗೆ ಒಡತಿಯಾಗಿದ್ದರು

ಪ್ರಾದೇಶಿಕ ವಾರ್ತೆಗಳು

“90 ಎಮ್ ಎಲ್” ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

ಮಂಗಳೂರು: ಡಿ ಡಿ ಪ್ರೊಡಕ್ಷನ್ ಲಾಂಛನದಲ್ಲಿ ರಂಜಿತ್ ಸಿ ಬಜಾಲ್ ನಿರ್ದೇಶನದಲ್ಲಿ ಡೋಲ್ಪಿ ಡಿ ಸೋಜ ನಿರ್ಮಾಣದಲ್ಲಿ ತಯಾರಾದ “90 ಎಮ್ ಎಲ್” ತುಳು ಚಲನ ಚಿತ್ರ ಶುಕ್ರವಾರ ಭಾರತ್ ಸಿನಿಮಾಸ್ ನಲ್ಲಿ ತೆರೆ ಕಂಡಿತು. ದೀಪ ಬೆಳಗಿಸುವ ಮೂಲಕ ಸಿನಿಮಾ ಉದ್ಘಾಟನೆ ನೆರವೇರಿಸಿ ಮಾತಾಡಿದ ಬೆಂಜನಪದವು ಕೊರಗಜ್ಜ ಕ್ಷೇತ್ರದ ವಿಜಯ ಅವರು “ತುಳುವಿನಲ್ಲಿ ಸದಭಿರುಚಿಯ ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ಖುಷಿಯ ವಿಚಾರ. ಇಂದು ಬಿಡುಗಡೆಯಾಗುತ್ತಿರುವ 90 ಎಂಎಲ್ ಸಿನಿಮಾ ತುಳು ಪ್ರೇಕ್ಷಕರ ಮನೆ ಮನ ಮುಟ್ಟುವ ಕೆಲಸ ಮಾಡಲಿ. ಇಡೀ ಚಿತ್ರತಂಡಕ್ಕೆ ಶುಭವಾಗಲಿ” ಎಂದರು.ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮಾತಾಡಿ, “ಸಿನಿಮಾದ ಟ್ರೈಲರ್ ನೋಡಿದೆ. ಮಲಯಾಳಂ ಚಿತ್ರದಂತೆ ಇದೆ. ಟೈಟಲ್ ಕೂಡ ಸಖತ್ತಾಗಿದೆ ಎಲ್ಲರಿಗೂ ಶುಭವಾಗಲಿ” ಎಂದರು.ಲಾಂಚುಲಾಲ್ ಕೆ.ಎಸ್. ಮಾತಾಡಿ, “90 ಎಂ ಎಲ್ ಸಿನಿಮಾ ಟೈಟಲ್ ಡಿಫರೆಂಟ್ ಆಗಿದೆ. ತುಳುವರು ಸಿನಿಮಾ ನೋಡಿದರೆ ಖಂಡಿತ ಸಿನಿಮಾ ಗೆಲ್ಲಲಿದೆ. ಸಿನಿಮಾಕ್ಕೆ ಶುಭ ಹಾರೈಕೆಗಳು” ಎಂದರು.ನಟ ಅರ್ಜುನ್ ದೇವ್ ಮಾತಾಡಿ, “90 ಎಂ ಎಲ್ ನಿಜ ಜೀವನದಿಂದ ದೂರವಿರಲಿ ಆದರೆ ಸಿನಿಮಾ ನಮಗೆಲ್ಲರಿಗೂ ಹತ್ತಿರವಿರಲಿ. ಚಿತ್ರತಂಡಕ್ಕೆ ದೊಡ್ಡ ಯಶಸ್ಸು ಸಿಗಲಿ” ಎಂದರು.ಕಾರ್ಯಕ್ರಮದಲ್ಲಿ ನಿರ್ಮಾಪಕ ಡೋಲ್ಪಿ ಡಿ ಸೋಜ, ಸ್ವರಾಜ್ ಶೆಟ್ಟಿ, ಸಿದ್ಧಾರ್ಥ್, ತ್ರಿಶೂಲ್ ಶೆಟ್ಟಿ, ಆನಂದ್ ಕುಂಪಲ, ಜಗನ್ನಾಥ ಶೆಟ್ಟಿ ಬಾಳ, ಮೋಹನ್ ಕೊಪ್ಪಲ, ವಿನೀತ್ ಕುಮಾರ್, ರುಹಾನಿ ಶೆಟ್ಟಿ, ರೋಶನ್ ಶೆಟ್ಟಿ, ಶೈಲಶ್ರೀ, ಧೃತಿ, ನಿರ್ದೇಶಕ ರಂಜಿತ್ ಸಿ ಬಜಾಲ್, ತುಳಸಿದಾಸ್ ಮಂಜೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.ವಿಜೆ ಮಧುರಾಜ್ ಕಾರ್ಯಕ್ರಮ ನಿರೂಪಿಸಿದರು.ಸಿನಿಮಾ ಕುರಿತು:90 ಎಂಎಲ್ ಸಿನಿಮಾ ಮಂಗಳೂರು, ಉಡುಪಿ, ಪುತ್ತೂರು, ಬೆಳ್ತಂಗಡಿ, ಪಡುಬಿದ್ರೆ, ಸುರತ್ಕಲ್, ಕಾರ್ಕಳ, ದೇರಳಕಟ್ಟೆ ಮೊದಲಾದೆಡೆ ಬಿಡುಗಡೆಗೊಂಡಿದೆ. ಸಿನಿಮಾವು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ.90 ಎಮ್ ಎಲ್ ಸಿನಿಮಾದಲ್ಲಿ ವಿನೀತ್ ಕುಮಾರ್, ರುಹಾನಿ ಶೆಟ್ಟಿ , ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ರೋಶನ್ ಶೆಟ್ಟಿ, ಉಮೇಶ್ ಮಿಜಾರ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರು, ನಮಿತ, ಶೈಲಾಶ್ರೀ, ಧೃತಿ ನಟಿಸಿದ್ದಾರೆ.ರಂಜಿತ್ ಸಿ ಬಜಾಲ್ ಕಥೆ. ಚಿತ್ರಕಥೆ, ನಿರ್ದೇಶನ ಮಾಡಿದ್ದು, ಸಂಭಾಷಣೆ ತುಳಸಿದಾಸ್ ಮಂಜೇಶ್ವರ್, ಛಾಯಾಗ್ರಾಹಣ ಅರ್ಜುನ್ ಎಂವಿ, ಸಂಗೀತ ಸೃಜನ್ ಕುಮಾರ್ ತೋನ್ಸೆ, ಸಂಕಲನ ಸಚಿನ್ ರಾಮ್, ಡಿಸೈನ್ ಆಚಾರ್ಯ ಗುರು.90 ಎಮ್ ಎಲ್ ತುಳು ಸಿನಿಮಾ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ, ಹಾಸ್ಯ ಮನರಂಜನೆಯೊಂದಿಗೆ ಉತ್ತಮ ಕತೆಯನ್ನು ಒಳಗೊಂಡಿದೆ.

ಪ್ರಾದೇಶಿಕ ವಾರ್ತೆಗಳು

ಏಪ್ರಿಲ್ 12ಕ್ಕೆ ಬಂಟರ ಯಾನೆ ನಾಡವರ ಮಾತೃ ಸಂಘದ ಬಹಿರಂಗ ಅಧಿವೇಶನ, ಸಾಧಕರಿಗೆ ಪ್ರಶಸ್ತಿ ಪ್ರದಾನ

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಇದೇ ಏಪ್ರಿಲ್ 12, ಭಾನುವಾರ ಬೆಳಿಗ್ಗೆ 9 ಗಂಟೆಗೆ ಮಂಗಳೂರಿನ ಪುರಭವನದಲ್ಲಿ (ಟೌನ್ ಹಾಲ್) ಬಹಿರಂಗ ಅಧಿವೇಶನ ನಡೆಯಲಿದ್ದು, ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಮಾಲಾಡಿ ಅಜಿತ್ ಕುಮಾರ್ ರೈ ಕೊಡಿಯಾಲ್ ಗುತ್ತು ಅವರು ತಿಳಿಸಿದರು.ನಗರದ ಬಂಟ್ಸ್ ಹಾಸ್ಟೇಲ್ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಐಕ್ಯತೆ ಮತ್ತು ಸಾಧಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಬೃಹತ್ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ಮಾನ್ಯ ನ್ಯಾಯಮೂರ್ತಿಗಳಾದ ವಿಶ್ವಜಿತ್ ಶೆಟ್ಟಿ ಸವಣೂರು ಹಾಗೂ ರಾಜೇಶ್ ರೈ ಕಲ್ಲಂಗಳ ಅವರು ಭಾಗವಹಿಸಲಿದ್ದಾರೆ. ಕೊಡ್ಮಾನ್ ಮೋಹನದೇವ್ ಆಳ್ವ ಮತ್ತು ಡಾ. ಎಮ್. ಕೆ. ಶೈಲಜಾ ಆಳ್ವ ಅವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ವಿವರಿಸಿದರು. ಡಾ. ಕೊಡ್ಮಾನ್ ನಾಗಪ್ಪ ಆಳ್ವ ಮತ್ತು ಶ್ರೀಮತಿ ಕಲ್ಯಾಣಿ ಆಳ್ವ ಇವರ ಸ್ಮರಣಾರ್ಥವಾಗಿ ನೀಡುವ ಪ್ರತಿಷ್ಠಿತ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ನಿಟ್ಟೆ ವಿ.ವಿ.ಯ ಉಪಾಧ್ಯಕ್ಷ ಡಾ. ಸತೀಶ್ ಭಂಡಾರಿ, ಶೈಕ್ಷಣಿಕ ಕ್ಷೇತ್ರದಲ್ಲಿ ಬೆಂಗಳೂರು ಪಶು ವೈದ್ಯಕೀಯ ವಿ.ವಿ.ಯ ಮಾಜಿ ಡೀನ್ ಪ್ರೊ. ವಸಂತ್ ಶೆಟ್ಟಿ ಮುಳ್ಳಾಡ್, ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯ ಸಾಹಿತಿ ಕೆ. ಉಷಾ ಪಿ. ರೈ, ಸಂಗೀತ ಕ್ಷೇತ್ರದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಶೆಟ್ಟಿ, ನೃತ್ಯ ಕ್ಷೇತ್ರದಲ್ಲಿ ಕರ್ನಾಟಕ ಕಲಾಶ್ರೀ ಪುರಸ್ಕೃತ ವಿದುಷಿ ನಯನ ವಿ. ರೈ ಕುಧ್ಕಾಡಿ, ದೇಶ ಸೇವೆ ವಿಭಾಗದಲ್ಲಿ ನಿವೃತ್ತ ಸೇನಾಧಿಕಾರಿ ಲೆ. ಕ. ಅಜಿತ್ ಕುಮಾರ್ ಶೆಟ್ಟಿ, ಕ್ರೀಡಾ ಕ್ಷೇತ್ರದಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತ ಕಬಡ್ಡಿ ಆಟಗಾರ ಪ್ರಶಾಂತ್ ರೈ ಪುತ್ತೂರು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಈಜುಪಟು ಚಿಂತನ್ ಎಸ್. ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕೈಗಾರಿಕಾ ಕ್ಷೇತ್ರದಲ್ಲಿ ಮುಂಬೈನ ವಿಶ್ವಾಸ್ ಕೆಮಿಕಲ್ಸ್‌ನ ಆಡಳಿತ ನಿರ್ದೇಶಕ ವಿವೇಕ್ ಶೆಟ್ಟಿ ಬೊಳ್ಯಗುತ್ತು ಹಾಗೂ ಕೈಗಾರಿಕೋದ್ಯಮಿ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು ಅವರನ್ನು ಗೌರವಿಸಲಾಗುವುದು. ಸಾಂಸ್ಕೃತಿಕ ಕ್ಷೇತ್ರಕ್ಕೆ ಮುಂಬೈನ ಚಿಣ್ಣರ ಬಿಂಬದ ಸ್ಥಾಪಕ ಪ್ರಕಾಶ್ ಭಂಡಾರಿ, ಧಾರ್ಮಿಕ ಕ್ಷೇತ್ರಕ್ಕೆ ಕುಂಬ್ಳೆಯ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಶ್ರೀ ಕೆ. ಕೆ. ಶೆಟ್ಟಿ ಕುತ್ತಿಕಾರ್ ಹಾಗೂ ಸಹಕಾರಿ ಕ್ಷೇತ್ರಕ್ಕೆ ಉಡುಪಿಯ ಸಹಕಾರಿ ಧುರೀಣ ಡಾ. ದೇವಪ್ರಸಾದ್ ಶೆಟ್ಟಿ ಬೆಳಪು ಆಯ್ಕೆಯಾಗಿದ್ದಾರೆ ಎಂದರು.ಅದೇ ರೀತಿ ಆತಿಥ್ಯ ಉದ್ಯಮದಲ್ಲಿ ಥಾಣೆಯ ವೇಣುಗೋಪಾಲ ಎಲ್. ಶೆಟ್ಟಿ, ನಿರ್ಮಾಣ ಕ್ಷೇತ್ರದಲ್ಲಿ ಮಂಗಳೂರಿನ ಮುಗ್ರೋಡಿ ಸುಧಾಕರ ಶೆಟ್ಟಿ, ಸಂಶೋಧನೆಯಲ್ಲಿ ಶ್ರೀನಿವಾಸ್ ವಿ.ವಿ.ಯ ಸಿ.ಇ.ಒ ಡಾ. ನವೀನ್‌ಚಂದ್ರ ಶೆಟ್ಟಿ, ದೈವಾರಾಧನೆಯಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ. ಅಶೋಕ್ ಆಳ್ವ ಮತ್ತು ಸಮಾಜ ಸೇವೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕುಂದಾಪುರದ ಕೆಂಚನೂರು ಸೋಮಶೇಖರ ಶೆಟ್ಟಿ ಸನ್ಮಾನಿತರಾಗಲಿದ್ದಾರೆ.ಶಿಕ್ಷಣ ಕ್ಷೇತ್ರದಲ್ಲಿ ಮ್ಯಾಪ್ಸ್ ಸಂಸ್ಥೆಯ ಅಧ್ಯಕ್ಷ ದಿನೇಶ್ ಆಳ್ವ, ಕೃಷಿಯಲ್ಲಿ ಸಿರಿಕುರಲ್ ಸಂಸ್ಥೆಯ ಮುರ ಸದಾಶಿವ ಶೆಟ್ಟಿ ಎಕ್ಕಾರು, ಕೃಷಿ ಸಂಶೋಧನೆಯಲ್ಲಿ ಕಾಸರಗೋಡಿನ ಕೃಷಿ ವಿಜ್ಞಾನ ಕೇಂದ್ರದ ತಜ್ಞೆ ಡಾ. ಸರಿತಾ ಹೆಗ್ಡೆ ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ಬೆಂಗಳೂರಿನ ತೇಜಾ ಇಕ್ವಿಪ್‌ಮೆಂಟ್ಸ್‌ನ ರವೀಂದ್ರನಾಥ ಮಾರ್ಲ ಅವರಿಗೆ ಗೌರವ ಸಲ್ಲಿಸಲಾಗುವುದು. ಕಲಾ ಕ್ಷೇತ್ರದಲ್ಲಿನ ಗಣನೀಯ ಸಾಧನೆಗಾಗಿ ಉಡುಪಿಯ ಯಕ್ಷಗಾನ ಮೇಳಗಳ ಸಂಚಾಲಕ ಪಿ. ಕಿಶನ್ ಹೆಗ್ಡೆ ಅವರಿಗೆ ಕೊಡಿಯಾಲ್‌ಗುತ್ತು ಭಾಸ್ಕರ ರೈ ಸ್ಮರಣಾರ್ಥ ಸನ್ಮಾನ ಮಾಡಲಾಗುವುದು ಎಂದು ಅಜಿತ್‌ ಕುಮಾರ್‌ ಮಾಲಾಡಿ ಹೇಳಿದರು. *ಪಾರ್ಕಿಂಗ್ ವ್ಯವಸ್ಥೆ -ವಿಶ್ವವಿದ್ಯಾನಿಯ ಕಾಲೇಜ್ ಮೈದಾನ, ತಾಲೂಕು ಕಚೇರಿ, ಪಿಡಬ್ಲ್ಯೂಡಿ ಮೈದಾನ, ಆರ್ ಟಿಒ ಕಚೇರಿ ಬಳಿ, ಫುಟ್ಬಾಲ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆಂದು ಮಾಲಾಡಿ ಅಜಿತ್ ಕುಮಾರ್ ರೈ ತಿಳಿಸಿದರುಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಹೇಮನಾಥ ಶೆಟ್ಟಿ ಕಾವು, ಪ್ರಧಾನ ಕಾರ್ಯದರ್ಶಿ ಕೆ. ಎಮ್. ಶೆಟ್ಟಿ ಹಾಗೂ ಕೋಶಾಧಿಕಾರಿ ಸಿ.ಎ. ರಾಮ್ ಮೋಹನ್ ರೈ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

BREAKING FLASH NEWS. ನಾಳೆ ಪಾಕಿಸ್ತಾನದಲ್ಲಿ ಅಮೇರಿಕಾ,ಇಸ್ರೇಲ್- ಇರಾನ್ ನಡುವೆ ಮೊದಲ ಸುತ್ತಿನ ಮಾತುಕತೆ ಫಲಪ್ರದವಾಗುತ್ತದಾ? ಇಲ್ಲ, ಮತ್ತೆ ಯುದ್ಧ ಶುರುವಾಗುತ್ತದಾ?

*ಡಾ. ಅಶೋಕ್ ಶೆಟ್ಟಿ ಬಿ. ಎನ್.ಏಪ್ರಿಲ್ 11ರಂದು ಪಾಕಿಸ್ತಾನದ ಪ್ರಧಾನಿ ಶೆರೀಫ್ ಮಧ್ಯಸ್ಥಿಕೆಯಲ್ಲಿ ಅಮೇರಿಕಾ, ಇಸ್ರೇಲ್, ಇರಾನ್ ನಡುವೆ ನಡೆಯುವ ಮೊದಲ ಸುತ್ತಿನ ಮಾತುಕತೆ ಸಫಲವಾಗುತ್ತದಾ ?ವಿಫಲವಾಗುತ್ತದಾ ಎಂಬ ಬಗ್ಗೆ ಇಡೀ ವಿಶ್ವವೇ ಕಾತರದಿಂದ ಎದುರು ನೋಡುತ್ತಿದೆ.ಸದ್ಯದ ಪರಿಸ್ಥಿತಿಯಲ್ಲಿ ಕದನ ವಿರಾಮ ಘೋಷಿಸಿದರೂ ,ಟ್ರಂಪ್ ಮಾತ್ರ ಅಮೇರಿಕಾ ಸೇನೆಯನ್ನು ಇರಾನ್ ನ ಸುತ್ತಮುತ್ತ ನಿಲ್ಲಿಸಿ ಯಾವುದೇ ಕ್ಷಣ ದಾಳಿ ಮಾಡಲು ಸಜ್ಜಾಗಿರುವಂತೆ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.ಇನ್ನೊಂದು ಕಡೆ,ಇಸ್ರೇಲ್ ಲೆಬನಾನ್ ಮೇಲೆ ನಿರಂತರ ದಾಳಿ ನಡೆಸುತ್ತಲೇ ಇದೆ.ಕೇವಲ ಒಂದೇ ನಿಮಿಷ ದಲ್ಲಿ ಲೆಬನಾನ್ ನ 100 ಕಡೆ ದಾಳಿ ನಡೆಸಿ 300ಮಂದಿಯನ್ನು ಬಲಿ ತೆಗೆದುಕೊಂಡಿದೆ.ಇದರಿಂದ ಇರಾನ್ ಕದನ ವಿರಾಮದ ಷರತ್ತುಗಳಿಗೆ ವ್ಯತಿರಿಕ್ತವಾಗಿ ಹಾರ್ಮೋಜ್ ಜಲಸಂಧಿಯನ್ನು ಮುಚ್ಚಿ ಯುದ್ಧಕ್ಕೆ ಸಿದ್ದವೆಂದು ಹೇಳಿದೆ. ಇರಾನ್ ನೊಳಗೆ ನುಗ್ಗಿ ಯುರೇನಿಯಂ ಪರಮಾಣು ವಶಪಡಿಸುವತ್ತ ಅಮೇರಿಕಾ,ಇಸ್ರೇಲ್ ಕಾದು ಕುಳಿತಿದೆ .ಈ ಪರಿಸ್ಥಿತಿಯಲ್ಲಿ ನಾಳೆ ನಡೆಯುವ ಮಾತುಕತೆ ಫಲಪ್ರದ ವಾಗುತ್ತದಾ.ಎಲ್ಲದ್ದಕ್ಕೂ ಕಾಲವೇ ಉತ್ತರಿಸಬೇಕು.ಇನ್ನೊಂದು ಕಡೆ ಅಮೇರಿಕಾದ 60 ಶೇಕಡಾ ಜನರು ಇಸ್ರೇಲ್ ಪ್ರತಿಕೂಲ ದೇಶವೆಂದು ಹೇಳಿದ್ದು ಟಂಪ್ ಇಸ್ರೇಲ್ ಪರ ವಹಿಸಿ ಇರಾನ್ ಮೇಲೆ ದಾಳಿ ನಡೆಸಬಾರದೆಂದು ಹೇಳಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಪತ್ರಕರ್ತರ ಗ್ರಾಮ ವಾಸ್ತವ್ಯದ ಬಳಿಕ ಕುತ್ಲುರು ಸರಕಾರಿ ಶಾಲೆಯ ಚಿತ್ರಣವೇ ಬದಲು-ಕನಕವರ್ಮ ಜೈನ್

ಮಂಗಳೂರು, ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿದ ಬಳಿಕ ಶಾಲೆಯ ಚಿತ್ರಣವೇ ಬದಲಾಗಿದೆ.ಮೂಲಭೂತ ಸೌಕರ್ಯ ಹೆಚ್ಚಾಗಿದೆ. ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಕೂಡಾ ಹೆಚ್ಚಳ ವಾಗಿದೆ ಎಂದು ಕುತ್ಲುರು ಸರಕಾರಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕನಕವರ್ಮಾ ಜೈನ್ ಹೇಳಿದರು.ಮಂಗಳೂರು ಪತ್ರಿಕಾ ಭವನದಲ್ಲಿ ಗುರುವಾರ ಕುತ್ಲುರು ಸರಕಾರಿ ಶಾಲೆ ವತಿಯಿಂದ ಶಾಲೆಯ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ ಎಂ ಆರ್ ಪಿ ಎಲ್ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಹಾಗೂ ಬಿ ಎ ಎಸ್ ಎಫ್ ನಿರ್ದೇಶಕ ಶ್ರೀನಿವಾಸ್ ಪ್ರಾಣೇಶ್ ಅವರನ್ನು ಸನ್ಮಾನಿಸಿ ಮಾತನಾಡಿದರು. ಈ ಶೈಕ್ಷಣಿಕ ವರ್ಷದಿಂದ ಕುತ್ಲುರು ಸರಕಾರಿ ಶಾಲೆಯಲ್ಲಿ ಎಲ್ ಕೆ ಜಿ, ಯು ಕೆ ಜಿ ತರಗತಿ ಆರಂಭಿಸಲು ರಾಜ್ಯ ಸರಕಾರ ಅನುಮತಿ ನೀಡಿದೆ. ಈಗಾಗಲೇ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಭರವಸೆ ನೀಡಿದ್ದಾರೆ. ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ ಅಭಿಯಾನ ಕೂಡಾ ಆರಂಭಿಸಲಾಗಿದೆ ಎಂದು ಹೇಳಿದರು.ಎಂ ಆರ್ ಪಿ ಎಲ್ ನಿವೃತ್ತ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮಾತನಾಡಿ ತಮ್ಮ ಸಂಸ್ಥೆ ಶಿಕ್ಷಣ ಹಾಗೂ ಅರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂದಿದೆ. ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಯನ್ನು ಸಿ ಎಸ್ ಆರ್ ನಿಧಿ ಮೂಲಕ ನೀಡಲಾಗುತ್ತದೆ. ಕುತ್ಲುರು ಶಾಲೆಯ ಅಭಿವೃದ್ಧಿಗೆ ಎಲ್ಲಾ ರೀತಿಯ ನೆರವಿನ ಭರವಸೆ ನೀಡಿದರು.ಬಿ ಎ ಎಸ್ ಎಫ್ ನಿರ್ದೇಶಕ ಶ್ರೀನಿವಾಸ್ ಪ್ರಾಣೇಶ್ ಮಾತನಾಡಿ ಪತ್ರಕರ್ತರ ಸಂಘ ಸಮಾಜಕ್ಕೆ ಮಾದರಿಯಾದ ಕೆಲಸ ಮಾಡುತ್ತಿದೆ. ತಮ್ಮ ಸಂಸ್ಥೆ ವತಿಯಿಂದ ಶಾಲೆಗೆ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್, ಸಮವಸ್ತ್ರ ಹಾಗೂ ನೋಟ್ ಬುಕ್ ನೀಡಲಾಗಿದೆ. ಮುಂದೆಯೂ ಈ ಸರಕಾರಿ ಶಾಲೆ ಅಭಿವೃದ್ಧಿಗೆ ತಮ್ಮ ಸಂಸ್ಥೆ ಕೈ ಜೋಡಿಸಲಿದೆ ಎಂದು ಹೇಳಿದರು.ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ ವಿ ದರ್ಶನ್ ಈ ಸರಕಾರಿ ಶಾಲೆಗೆ ಭೇಟಿ ನೀಡಿದ ಬಳಿಕ ಶಾಲೆಯ ಚಿತ್ರಣವೇ ಬದಲಾಗಿದೆ. ಕೆ ವಿ ಪ್ರಭಾಕರ್ ಅವರು ಸಮವಸ್ತ್ರ, ಬ್ಯಾಗ್, ಕಂಪ್ಯೂಟರ್ಸ್, ಪ್ರೊಜೆಕ್ಟರ್, ಶಾಲೆಗೆ ಪೈಂಟ್ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ. ಮಕ್ಕಳ ಕಷ್ಟ್ಟ ವನ್ನು ಅರಿತು ಶಾಲೆಗೆ ಶೀಘ್ರವೇ ಮಿನಿ ಬಸ್ ಕೂಡಾ ನೀಡುವುದಾಗಿ ತಿಳಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಅವರು ಈ ಶಾಲೆಗೆ ಎಲ್ ಕೆ ಜಿ, ಯು ಕೆ ಜಿ ಆರಂಭಿಸಲು ಎರಡು ತರಗತಿ ನಿರ್ಮಿಸಿ ಕೊಡುವುದಾಗಿ ತಿಳಿಸಿದ್ದಾರೆ. ಶಾಲೆಯ ಮನವಿ ಮೇರೆಗೆ ಪ್ರಿಂಟರ್, ಬೆಂಚ್, ಡೆಸ್ಕ್, 3 ಕಂಪ್ಯೂಟರ್ಸ್ ಒದಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ ಮಾಹಿತಿ ನೀಡಿದರು.ಕಾರ್ಯಕ್ರಮ ದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ ಎನ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ ಬಿ ಹರೀಶ್ ರೈ, ರೋಟರಿ ಕ್ಲಬ್ ಅಧ್ಯಕ್ಷ ಭಾಸ್ಕರ್ ರೈ ಕಟ್ಟಾ,ಕುತ್ಲುರು ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶ್ವೇತಾ ಜಗದೀಶ್, ಸದಸ್ಯರಾದ ಗಾಯತ್ರಿ, ಹರ್ಷಿತ್ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಕೆಟ್ ನಿಂದ ಶಿಸ್ತು,ನಾಯಕತ್ವ ಗುಣ ರೂಪಿಸಲು ಸಾಧ್ಯ- ಶ್ರೀನಿವಾಸ್ ನಾಯಕ್ ಇಂದಾಜೆ

ಮಂಗಳೂರು, ಕ್ರಿಕೆಟ್ ಆಟದ ಮೂಲಕ ಶಿಸ್ತು ಕಲಿಯಲು ಸಾಧ್ಯ, ನಾಯಕತ್ವ ಗುಣವನ್ನು ಕೂಡಾ ರೂಪಿಸಲು ಸಾಧ್ಯವಿದೆ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ ಅಭಿಪ್ರಾಯ ಪಟ್ಟರು. ಮಂಗಳ ಕಾಲೇಜು ಒಫ್ ಫಿಸಿಯೋತೆರಫಿ ವತಿಯಿಂದ ನಿರುಮಾರ್ಗದಲ್ಲಿ ಆಯೋಜಿಸಲಾದ ಅಂತರ್ ಕಾಲೇಜು ಫಿಸಿಯೋ ಕ್ರಿಕೆಟ್ ಪಂದ್ಯಾವಳಿ ಮಂಗಳಾ ಮಗ್ನೆಸ್ ಕಪ್ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಯೊಂದಿಗೆ ಪಠ್ಯತೆರ ಚಟುವಟಿಕೆಯಲ್ಲಿ ತಮ್ಮನ್ನು ತೊದಗಿಸಿಕೊಳ್ಳುವಂತೆ ಕರೆ ನೀಡಿದರು.ಮಂಗಳಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಗಣಪತಿ ಮಾತನಾಡಿ ಕ್ರಿಕೆಟ್ ಎಂಬುದು ಜಾತಿ, ಮತ, ಧರ್ಮ ವನ್ನು ಮೀರಿದ ಆಟವಾಗಿದೆ. ಇದರಲ್ಲಿ ವೈವಿಧ್ಯತೆ ಹಾಗೂ ಏಕತೆಯನ್ನು ಕಾಣಬಹುದಾಗಿದೆ. ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಇದೆ ಎಂದು ಹೇಳಿದರು.ಕಾರ್ಯಕ್ರಮ ದಲ್ಲಿ ಕ್ರಿಕೆಟ್ ಪಂದ್ಯಾವಳಿ ಸಂಯೋಜಕರಾದ ಡಾ. ಭರತ್ ಕೆ ಎಚ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.ವಿವಿಧ ಕಾಲೇಜುಗಳ ಪುರುಷರು ಹಾಗೂ ಮಹಿಳೆಯರ 30 ತಂಡ ಗಳು ಈ ಪಂದ್ಯಾವಳಿ ಯಲ್ಲಿ ಭಾಗವಹಿಸಿವೆ.

Scroll to Top