ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಸಚಿವ ಸಂಪುಟ ಸಭೆ ಪಕ್ಷಾತೀತವಾಗಿ ನಡೆಯಲಿ: ರಮಾನಾಥ ರೈ

ಮಂಗಳೂರು: ಕರಾವಳಿ ಭಾಗದ ಅಭಿವೃದ್ಧಿ ದೃಷ್ಟಿಯಿಂದ ಮಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಸಚಿವ ಸಂಪುಟ ಸಭೆಯನ್ನು ಎಲ್ಲರೂ ಪಕ್ಷಬೇಧ ಮರೆತು ಸ್ವಾಗತಿಸಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಕರೆ ನೀಡಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಜಾಮರ್ ವಿಚಾರ ಮುಂದಿಟ್ಟುಕೊಂಡು ಸಭೆಗೆ ಅಡಚಣೆ ಮಾಡಲು ಯತ್ನಿಸುತ್ತಿರುವುದು ಸರಿಯಲ್ಲ. ಇದು ಕರಾವಳಿಯ ಅಭಿವೃದ್ಧಿಗೆ ಸಂಬಂಧಿಸಿದ ಸಭೆ ಎಂದು ಹೇಳಿದರು.ಕೊರಗ ಸಮುದಾಯ ಸೇರಿದಂತೆ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಈ ಸಭೆಯಲ್ಲಿ ಮಹತ್ವದ ನಿರ್ಧಾರಗಳು ಹೊರಬರುವ ನಿರೀಕ್ಷೆ ಇದೆ. ಮುಹಮ್ಮದ್ ಪೀರ್ ವರದಿ ಆಧರಿಸಿ ಕಾಂಗ್ರೆಸ್ ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರು.ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಬೇಕು. ಜೊತೆಗೆ ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಬಿಜೆಪಿ ಸಂಸದರು, ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ದೈವಾರಾಧಕರು, ಭೂತಾರಾಧನೆ ಮಾಡುವವರಿಗೂ ಅರ್ಚಕರ ಮಾದರಿಯಲ್ಲಿ ಗೌರವಧನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಅಪ್ಪಿ ಶಾಹುಲ್ ಹಮೀದ್, ಮೊಹಮ್ಮದ್ ಮೋನು, ಪೃಥ್ವಿರಾಜ್, ನೀರಜ್ ಪಾಲ್ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಕರಾವಳಿ ಸಮಗ್ರ ಅಭಿವೃದ್ಧಿಗೆ ಸಂಪುಟ ಸಭೆ ನೆರವಾಗಲಿ: ಹರೀಶ್ ಕುಮಾರ್

ಮಂಗಳೂರು: ಕರಾವಳಿ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿ ಉದ್ದೇಶದಿಂದ ಸರ್ಕಾರ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಆಯೋಜಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.ಸೆ. 16ರ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಭೆಯಲ್ಲಿ ತುಳು ಭಾಷೆಗೆ ಎರಡನೇ ರಾಜ್ಯಭಾಷಾ ಸ್ಥಾನಮಾನ, ಪ್ರವಾಸೋದ್ಯಮ ಅಭಿವೃದ್ಧಿ, ಮೀನುಗಾರಿಕೆ ಮತ್ತು ಬ್ಯಾರಿ ಸಮುದಾಯದ ಏಳಿಗೆ ಕುರಿತು ಚರ್ಚೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ ಎಂದರು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಐತಿಹಾಸಿಕ ವೀರರಾದ ಕೋಟಿ-ಚೆನ್ನಯರ ಹೆಸರನ್ನು ಇಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ. ಜೊತೆಗೆ ಮಂಗಳೂರಿನಲ್ಲಿ ಹೆಚ್ಚುತ್ತಿರುವ ನೈಟ್ ಲೈಫ್ ಮತ್ತು ಡ್ರಗ್ಸ್ ಜಾಲದ ಬಗ್ಗೆಯೂ ಸರ್ಕಾರ ಗಂಭೀರ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.ದ.ಕ. ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಪದ್ಮರಾಜ್ ಪೂಜಾರಿ ಅವರ ಪದಗ್ರಹಣ ಕಾರ್ಯಕ್ರಮ ಸೆಪ್ಟೆಂಬರ್ 20ರಂದು ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಸದಾಶಿವ ಉಳ್ಳಾಲ್, ಅಪ್ಪಿ, ಶುಭೋದಯ ಆಳ್ವ, ಸುಹಾನ್ ಆಳ್ವ, ನವಾಜ್ ಮತ್ತಿತರರು ಇದ್ದರು

ಪ್ರಾದೇಶಿಕ ವಾರ್ತೆಗಳು

ಜೈಲು ಜಾಮರ್ ನಾಟಕ: ಕಾಮತ್-ಶೇಣವ ವಿರುದ್ಧ ಕಾಂಗ್ರೆಸ್ ಬಾಂಬ್!

ಮಂಗಳೂರು: ಕೊಡಿಯಾಲಬೈಲ್ ಜೈಲಿನ ಜಾಮರ್ ವಿಚಾರ ಈಗ ಮಂಗಳೂರಿನಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.ಜಾಮರ್ ಹೆಸರಿನಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಶಾಸಕ ವೇದವ್ಯಾಸ ಕಾಮತ್ ಮತ್ತು ವಕೀಲರ ಸಂಘದ ಅಧ್ಯಕ್ಷ ಜಗದೀಶ ಶೇಣವ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಮನೋರಾಜ್ ರಾಜೀವ್ ನೇರ ಆರೋಪ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,“ಜಾಮರ್ ನಿರ್ವಹಣೆ ಮಾಡುವುದು ರಾಜ್ಯ ಸರ್ಕಾರ ಅಲ್ಲ, ಕೇಂದ್ರದ TCIL ಸಂಸ್ಥೆ. ಸತ್ಯ ಗೊತ್ತಿದ್ದೂ ಮುಚ್ಚಿಟ್ಟು ರಾಜಕೀಯ ಮಾಡುತ್ತಿದ್ದಾರೆ. ಇಚ್ಛಾಶಕ್ತಿ ಇದ್ದಿದ್ದರೆ ದೆಹಲಿಯಲ್ಲಿ ತಮ್ಮದೇ ಸಂಸದ ಬ್ರಿಜೇಶ್ ಚೌಟ ಮೂಲಕ ಸಮಸ್ಯೆ ಬಗೆಹರಿಸಬಹುದಿತ್ತು” ಎಂದು ಗುಡುಗಿದರು.ಅಲ್ಲದೆ, ಈ ಬಗ್ಗೆ ಈಗಾಗಲೇ ಹೈಕೋರ್ಟ್ ನಲ್ಲಿ PIL ದಾಖಲಾಗಿದ್ದು, TCIL ಸಂಸ್ಥೆಯೇ ‘ಜಾಮರ್ ಸರಿ ಮಾಡಿದ್ದೇವೆ’ ಎಂದು ಕೋರ್ಟ್ ಗೆ ವರದಿ ಕೊಟ್ಟಿದೆ. ಸಮಸ್ಯೆ ಇದ್ದರೆ ಕೋರ್ಟ್ ನಲ್ಲೇ ಪ್ರಶ್ನಿಸಬೇಕಿತ್ತು. ಸಂಪುಟ ಸಭೆಗೆ ಮುತ್ತಿಗೆ ಹಾಕುತ್ತೇವೆ ಎನ್ನುವುದು ಕೇವಲ ರಾಜಕೀಯ ಸ್ಟಂಟ್ ಎಂದು ಕಿಡಿಕಾರಿದರು.ವಕೀಲರ ಸಂಘದ ಅಧ್ಯಕ್ಷರಾಗಿ ಶೇಣವ ಅವರು ಜಾಮರ್ ಬಿಟ್ಟು, ಹೈಕೋರ್ಟ್ ಪೀಠ, ವಕೀಲರ ಭವನ, ಕೋರ್ಟ್ ಗಳ ಮೂಲಸೌಕರ್ಯದ ಬಗ್ಗೆ ಸರ್ಕಾರದ ಬಳಿ ಮಾತನಾಡಬೇಕಿತ್ತು ಎಂದು ಅವರು ತಿರುಗೇಟು ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ನಂದಿನಿ, ಶಾಹಿದ್ ಬಡ್ಡೂರು, ಉಷಾ ಎಸ್., ಅರುಣಾ ಬಿ.ಪಿ., ಸುದರ್ಶನ್ ಮುಳಿಯ, ವಿನೋದ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು

ಪ್ರಾದೇಶಿಕ ವಾರ್ತೆಗಳು

ಆದಿಚುಂಚನಗಿರಿ ಶ್ರೀಗಳಿಗೆ ಗೌರವ ಫೆಲೋಶಿಪ್ – ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ACCE(I) ಅಧ್ಯಕ್ಷರ ಘೋಷಣೆ

ಮಂಗಳೂರು, ಸೆ. 15:* ಎಂಜಿನಿಯರಿಂಗ್, ಶಿಕ್ಷಣ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರಿಗೆ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ (ಇಂಡಿಯಾ)- ACCE(I) ವತಿಯಿಂದ ಪ್ರತಿಷ್ಠಿತ ಗೌರವ ಫೆಲೋಶಿಪ್ ನೀಡಿ ಗೌರವಿಸಲಾಗುವುದು ಎಂದು ACCE(I )ರಾಷ್ಟ್ರೀಯ ಅಧ್ಯಕ್ಷ Er. ರಾಜೇಂದ್ರ ಕಲ್ಬಾವಿ ರಾವ್ ಹೇಳಿದ್ದಾರೆ. ಅವರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರುಸೆಪ್ಟೆಂಬರ್ 17 ರಂದು ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿರುವ ಎಂಜಿನಿಯರ್ಸ್ ಡೇ ಆಚರಣೆ ಕಾರ್ಯಕ್ರಮದಲ್ಲಿ ಈ ಫೆಲೋಶಿಪ್ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದರು. ACCE(I) ದೇಶದ ಪ್ರಮುಖ ವೃತ್ತಿಪರ ಸಿವಿಲ್ ಎಂಜಿನಿಯರ್‌ಗಳ ಸಂಘಟನೆಯಾಗಿದ್ದು, ದೇಶಾದ್ಯಂತ 54 ಕೇಂದ್ರಗಳು ಹಾಗೂ 9,500ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಕಳೆದ 41 ವರ್ಷಗಳಿಂದ ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದ ಅಭಿವೃದ್ಧಿಗಾಗಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು Er. ರಾಜೇಂದ್ರ ಕಲ್ಬಾವಿ ರಾವ್ ತಿಳಿಸಿದರು.“ಎಂಜಿನಿಯರಿಂಗ್ ಜ್ಞಾನವನ್ನು ಶಿಕ್ಷಣ ಹಾಗೂ ಸಮಾಜದ ಅಭಿವೃದ್ಧಿಯೊಂದಿಗೆ ಸಮ್ಮಿಲನಗೊಳಿಸಿ ಹಲವು ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಶ್ರಮಿಸಿರುವ ಮಹಾಸ್ವಾಮೀಜಿಯವರ ನಿಸ್ವಾರ್ಥ ಮತ್ತು ಶ್ಲಾಘನೀಯ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ” ಎಂದು ಅವರು ಹೇಳಿದರು.ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಪದ್ಮಶ್ರೀ ಪುರಸ್ಕೃತ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ಭಾಗವಹಿಸಲಿದ್ದಾರೆ.ಮಹಾಸ್ವಾಮೀಜಿಯವರು ಸಿವಿಲ್ ಎಂಜಿನಿಯರಿಂಗ್ ಪದವೀಧರರಾಗಿದ್ದು, ಐಐಟಿ ಬಾಂಬೆಯಿಂದ ಸ್ಟ್ರಕ್ಚರಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.*ಸುದ್ದಿಗೋಷ್ಠಿಯಲ್ಲಿ ACCE(I) ರಾಷ್ಟ್ರೀಯ ಅಧ್ಯಕ್ಷ Er. ರಾಜೇಂದ್ರ ಕಲ್ಬಾವಿ ರಾವ್ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಹಿಂದೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರಿಗೂ ACCE(I) ಫೆಲೋಶಿಪ್ ನೀಡಲಾಗಿತ್ತು ಎಂದು Er. ರಾಜೇಂದ್ರ ಕಲ್ಬಾವಿ ರಾವ್ ಹೇಳಿದ್ದಾರೆ

ಪ್ರಾದೇಶಿಕ ವಾರ್ತೆಗಳು

Mangaluru: Adichunchanagiri seer to get ACCE(I) honorary fellowship, says national president Rajendra Kalbavi Rao

MP MLA’S News tv| Mangaluru | Sep 15:Sri Adichunchanagiri Mahasamsthana seer Jagadguru Sri Sri Sri Dr Nirmalanandanatha Mahaswamiji will be conferred the prestigious honorary fellowship by the Association of Consulting Civil Engineers (India) – ACCE(I) for his contributions to engineering, education and social service.ACCE(I) national president Er Rajendra Kalbavi Rao told reporters at a press meet at Mangaluru Press Club in September. 15,Monday that the fellowship will be presented during the Engineers Day programme to be held at NIMHANS Convention Centre, Bengaluru, on September 17. ACCE(I) is a premier body of consulting civil engineers in the country with 54 centres and over 9,500 members. It has been working for the development of civil engineering sector for the past 41 years, Rao said.Rao said the seer, who is a civil engineering graduate and gold medallist in MTech (structural engineering) from IIT Bombay, has been chosen for his selfless service in blending engineering knowledge with education and social uplift.Minister for Greater Bengaluru Development Krishna Byre Gowda and Padma Shri awardee and MP Dr C N Manjunath will be present at the function.ACCE(I) had earlier conferred similar fellowship on former PM H D Deve Gowda, Rao said.

ಪ್ರಾದೇಶಿಕ ವಾರ್ತೆಗಳು

ಸೆಪ್ಟೆಂಬರ್ 18 ರಂದು “ಅಮರ್ಥ” ಸಿನಿಮಾ ತೆರೆಗೆ

ಮಂಗಳೂರು: ‘ಪಂಚರಂಗಿ’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ತಮ್ಮ ಚೊಚ್ಚಲ ‘ಅಮರ್ಥ’ ಚಿತ್ರದ ಮೂಲಕ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ನಿರ್ಮಾಪಕರಾಗಿ ಗಾಂಧಿನಗರಕ್ಕೆ ಕಾಲಿಟ್ಟಿದ್ದಾರೆ. ಈ ಸಿನಿಮಾಕ್ಕೆ ಗುರು ಹೆಗ್ಡೆಯವರು ಕೂಡಾ ನಿರ್ಮಾಪಕರಾಗಿದ್ದಾರೆ.ಗುರು ಹೆಗ್ಡೆ ಮತ್ತು ವಿನಯ್ ಪ್ರೀತಂ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಅಮರ್ಥ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ಸರ್ಜಾ, ನಿರ್ದೇಶಕ ಗುರು ಹೆಗ್ಡೆ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಪ್ರೇಕ್ಷಕರಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ. ‘ಅಮರ್ಥ’ ಸಿನಿಮಾವು ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಎಲ್ಲಾ ಪ್ರಮುಖ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ ಎಂದು ಸಿನಿಮಾದ ನಿರ್ದೇಶಕ ಗುರು ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಅಮರ್ಥ ಅಂದರೆ ಅಂತ್ಯ ಇಲ್ಲದ್ದು. ಇದು ಸಂಸ್ಕೃತ ಪದ. ಸಿನಿಮಾದಲ್ಲಿ ಒಳ್ಳೆಯ ಕತೆ ಇದೆ. ಕತೆಯೊಂದಿಗೆ ಹಾಸ್ಯ ಇದೆ. ಇದು ಪ್ರತಿಯೊಬ್ಬರ ಕತೆ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುವಂತಹ ಕತೆಯನ್ನು ಅಮರ್ಥದಲ್ಲಿ ನೀಡಿದ್ದೇವೆ ಎಂದರು.ಸಿನಿಮಾಕ್ಕೆ ಶಿರ್ವ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ‌ ಎಂದರು. ಚಿತ್ರದ ನಾಯಕಿ ಮೇಘನಾರಾಜ್ ಮಾತನಾಡಿ ಶ್ರೀನಗರ ಕಿಟ್ಟಿಯೊಂದಿಗೆ ಅಭಿನಯಿಸಿದ ಮೂರನೇ ಸಿನಿಮಾ ಇದಾಗಿದೆ. ಇಲ್ಲಿ ನನ್ನದು ಮತ್ತು ಕಿಟ್ಟಿ ಅವರದ್ದು ವಿಭಿನ್ನ ಪಾತ್ರ ಎಂದರು.ಶ್ರೀನಗರ ಕಿಟ್ಟಿ ಮಾತನಾಡಿ ಗುರು ಹೆಗ್ಡೆ ನಿರ್ಮಾಪಕರಾಗಿ, ನಿರ್ದೇಶಕರಾಗಿ ನಟರಾಗಿ ಇಲ್ಲಿ ಕೆಲಸ ಮಾಡಿದ್ದಾರೆ. ಪ್ರೇಕ್ಷಕರು ಸಿನಿಮಾ ನೋಡಿ ಪ್ರೋತ್ಸಾಹಿಸ ಬೇಕೆಂದರು.ಪತ್ರಿಕಾಗೋಷ್ಠಿಯಲ್ಲಿ ಮಂಜುಭಾಷಿಣಿ ಶೆಟ್ಟಿ, ಆರಾಧನಾ ಭಟ್, ವಿನಯ್ ಪ್ರೀತಮ್, ಪಿಎಲ್ ಅಶ್ರಿತ್ ಮೊದಲಾದವರು ಉಪಸ್ಥಿತರಿದ್ದರು. ಅಮರ್ಥ ಸಿನಿಮಾ ಸೆಪ್ಟಂಬರ್ 18 ರಂದು ರಾಜ್ಯಾದ್ಯಂತ ಪ್ರದರ್ಶನ ಕಾಣಲಿದೆ.

ಪ್ರಾದೇಶಿಕ ವಾರ್ತೆಗಳು

ಇಂದು ಸಂಜೆ (ಸೆ.13 )ಬಿ.ಸಿ. ರೋಡ್ ನಲ್ಲಿ ನಡೆದ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಹುಟ್ಟುಹಬ್ಬದ 75ರ ಸಂಭ್ರಮ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮ.ಜೊತೆಗೆ, ಪ್ರಜ್ಞಾಶ್ರಮದ ವಿದ್ಯಾರ್ಥಿಗಳಿಗೆ ರೋಶನ್ ರೈ ನೇತೃತ್ವದಲ್ಲಿ ಭೋಜನ ವ್ಯವಸ್ಥೆ. ಮಾನವೀಯ ಮೌಲ್ಯಗಳಿಗೆ ಜೀವ ತುಂಬಿದ ಬೇಬಿಯಣ್ಣನ ಬರ್ತ್ ಡೇ.

ಬಂಟ್ವಾಳ: ಮಾಜಿ ಸಚಿವ ಬೆಳ್ಳಿಪ್ಪಾಡಿ ಬಿ. ರಮಾನಾಥ ರೈ ಅವರ 75ನೇ ಹುಟ್ಟುಹಬ್ಬದ ಸಂಭ್ರಮಾಚರಣೆ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮ ಇಂದು (ಸೆ.13, ಭಾನುವಾರ) ಸಂಜೆ 3 ಗಂಟೆಗೆ ಬಿ.ಸಿ. ರೋಡ್ ನ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಬೆಳ್ಳಿಪ್ಪಾಡಿ ರಮಾನಾಥ ರೈ ಹುಟ್ಟುಹಬ್ಬ ಆಚರಣಾ ಸಮಿತಿ, ದಕ್ಷಿಣ ಕನ್ನಡ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು . ನಾಲ್ಕುವರೆ ದಶಕಗಳ ಅವರ ರಾಜಕೀಯ ಅನುಭವ,ಸಾಮಾಜಿಕ ಮತ್ತು ನಿಸ್ವಾರ್ಥ ಜನಸೇವೆಯನ್ನು ಪರಿಗಣಿಸಿ ಈ ಹುಟ್ಟುಹಬ್ಬದ ಸಂಭ್ರಮವನ್ನು ಅಭಿಮಾನಿಗಳು ಆಚರಿಸಿದರು.ಈ ಸಂದರ್ಭದಲ್ಲಿ ರೈಯವರ ಆಪ್ತರಾದ ಪಿಯೂಸ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಬೇಬಿ ಕುಂದರ್, ಎಂ. ಎಸ್. ಮೊಹಮ್ಮದ್,ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮಮತ ಗಟ್ಟಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು, ರೈಯವರ ಅಭಿಮಾನಿಗಳು ಉಪಸ್ಥಿತರಿದ್ದರುಮಾನವೀಯತೆಯೊಂದಿಗೆ ಹುಟ್ಟುಹಬ್ಬದ ಆಚರಣೆಮಾಜಿ ಸಚಿವ ರಮಾನಾಥ ರೈ ಅಂದರೆ ಅಪಾರ ಅಭಿಮಾನಿಗಳ ಅಚ್ಚುಮೆಚ್ಚಿನ ಬೇಬಿಯಣ್ಣ ಅವರ ಹುಟ್ಟುಹಬ್ಬದ ಪ್ರಯುಕ್ತ ಪುತ್ತೂರಿನ ಪ್ರಜ್ಞಾಶ್ರಮದ ವಿಕಲಚೇತನ ವಿದ್ಯಾರ್ಥಿಗಳಿಗೆ ರೋಶನ್ ರೈ ಅವರು ಇಂದು ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಿದರು.ಕೇಕ್ ಕತ್ತರಿಸುವ ಸಂಭ್ರಮಕ್ಕೆ ಸೀಮಿತವಾಗದೆ, ಅಶಕ್ತ ಮಕ್ಕಳೊಂದಿಗೆ ಸಂತಸ ಹಂಚಿಕೊಂಡ ಈ ಕಾರ್ಯಕ್ರಮವು ಮಾನವೀಯತೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಪ್ರತೀಕವಾಯಿತು. “ಸೇವೆಯೇ ಸಂಭ್ರಮ, ಮಾನವೀಯತೆಯೇ ನಿಜವಾದ ಆಚರಣೆ” ಎಂಬ ಸಂದೇಶದೊಂದಿಗೆ ಈ ಕಾರ್ಯಕ್ರಮ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ಸೆ.13ರ ಭಾನುವಾರ ಸಂಜೆ (ಇಂದು )ಬಿ. ಸಿ. ರೋಡ್ ನ ಅಂಬೇಡ್ಕರ್ ಭವನದಲ್ಲಿ ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಅವರ ಹುಟ್ಟುಹಬ್ಬದ 75ರಸಂಭ್ರಮ ಮತ್ತು ಲಾಂಛನ ಬಿಡುಗಡೆ.

ಬಂಟ್ವಾಳ. ಸೆ., 13. ಇಂದುರಾಜಕೀಯ ರಂಗದ ಅಜಾತಶತ್ರು, ಜನಸೇವೆಗೆ ಅಧಿಕಾರ ಮುಖ್ಯವಲ್ಲವೆಂದು ಸಮಾಜಕ್ಕೆ ತಾವೇ ಸ್ವತ,:ಕಾರ್ಯಪ್ರವೃತ್ತರಾಗಿ ತೋರಿಸಿಕೊಟ್ಟ, ದಣಿವರಿಯದ ನಿರಾಡಂಬರ, ನಿಸ್ವಾರ್ಥ, ನಿಷ್ಕಲ್ಮಶ ವ್ಯಕ್ತಿತ್ವದ ಪೂರ್ಣಕಾಲಿಕ ರಾಜಕಾರಣಿ, ಜಾತ್ಯತೀತ ಸೇವಾ ಮನೋಭಾವದ ರಾಜಕೀಯ ಮುತ್ಸದ್ದಿ, ಬಡವರ ಬಂಧು,ಕರ್ನಾಟಕ ಸರಕಾರದ ಮಾಜಿ ಸಚಿವ, ಸೌಹಾರ್ದ ಚಕ್ರವರ್ತಿ ಬೆಳ್ಳಿಪ್ಪಾಡಿ ರಮಾನಾಥ ರೈ ಅವರ 75 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ರೈಯವರ ಹುಟ್ಟುಹಬ್ಬದ ಪ್ರಯುಕ್ತ ಬೆಳ್ಳಿಪ್ಪಾಡಿ ರಮಾನಾಥ ರೈ ಹುಟ್ಟುಹಬ್ಬ ಆಚರಣೆ ಸಮಿತಿ, ದಕ್ಷಿಣ ಕನ್ನಡದ ವತಿಯಿಂದ ಸೆ. 13ರ ಭಾನುವಾರ ಅಂದರೆ ಇಂದು ಸಂಜೆ 3 ಗಂಟೆಗೆ ಬಿ. ಸಿ. ರೋಡಿನ ಅಂಬೇಡ್ಕರ್ ಭವನದಲ್ಲಿ ಬೆಳ್ಳಿಪ್ಪಾಡಿ ರಮಾನಾಥ ರೈ ಅವರ 75ನೇ ಹುಟ್ಟುಹಬ್ಬದ ಸಂಭ್ರಮ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮವಿದೆ.ಬೆಳ್ಳಿಪ್ಪಾಡಿ ರಮಾನಾಥ ರೈ ಅವರ ಹುಟ್ಟುಹಬ್ಬಕ್ಕೆ MP MLA’S NEWS ಮತ್ತು mpmlasnewstv 24×7 ನ್ಯೂಸ್ ಪೋರ್ಟಲ್ ನ ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ಶುಭಾಶಯ ಸಲ್ಲಿಸಿದ್ದಾರೆ.ಚಿತ್ರಗಳು :ತಿಲಕ್, ಮಂಚಿ

ಪ್ರಾದೇಶಿಕ ವಾರ್ತೆಗಳು

ಸೆಪ್ಟೆಂಬರ್ 18 ರಂದು “ಟಾಸ್” ಸಿನಿಮಾ ರಾಜ್ಯಾದ್ಯಂತ ತೆರೆಗೆ

ಮಂಗಳೂರು: ಅವಿಕಾ ಪ್ರೊಡಕ್ಷನ್ ಮತ್ತು ಬಿಆರ್ ಬಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗಿರುವ ಅರ್ಜುನ್ ದೇವ್ ನಿರ್ದೇಶನ, ನಟನೆಯ “ಟಾಸ್” ತುಳು ಸಿನಿಮಾ ಸೆಪ್ಟಂಬರ್ 18 ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಚಿತ್ರದ ನಿರ್ದೇಶಕ ಅರ್ಜುನ್ ದೇವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಡಾ|| ದೇವದಾಸ್ ಕಾಪಿಕಾಡ್ ರಚನೆ ಸಂಭಾಷಣೆ, ಅರ್ಜುನ್ ದೇವ್ ನಿರ್ದೇಶನ ಮತ್ತು ಅಭಿನಯದ “ಟಾಸ್” ಸಿನಿಮಾದ ಚಿತ್ರೀಕರಣ ಎರಡು ಹಂತಗಳಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ನಿರ್ಮಾಪಕರು: ಪಿ ಆ್ಯಂಡ್ ವೈ ವಲ್ಡ್ ಟೂರ್ಸ್ ಎಲ್ ಎಲ್ ಪಿ ಸಾಗರ್ ಪೂಜಾರಿ, ಕಥೆ–ಚಿತ್ರಕಥೆ–ಸಂಭಾಷಣೆ ಗೀತೆಗಳು, ಡಾ. ದೇವದಾಸ್ ಕಾಪಿಕಾಡ್, ನಿರ್ದೇಶಕರು ಅರ್ಜುನ್ ದೇವ್, ಸಹ ನಿರ್ದೇಶಕರು ಯಶಾಂತ್ ಕಲ್ಲಡ್ಕ, ರಾಕೇಶ್ ಬಿ.ಜೆ. ವಿಕ್ರಮ್ ದೇವಾಡಿಗ, ಸಹಾಯಕ ನಿರ್ದೇಶಕರು ಸೌರವ್ ರಾಮ್ ಸುಜಿತ್ ವಿನೋದ್ ಆಶಿಷ್ ರಾವ್ ಛಾಯಾಗ್ರಹಣ ಜೋಯೆಲ್ ಶಮನ್ ಡಿ’ಸೋಜಾ, ಸಹಾಯಕ ಛಾಯಾಗ್ರಾಹಕರು ಅಮನ್ ಪ್ರಖ್ಯಾತ್, ಕಲಾ ನಿರ್ದೇಶನ ರಾಜೇಶ್ ಕೊಳಕೆ ರಾಜೇಶ್ ಬಾಂಧ್ಯೋಡ್, ಸಂಕಲನ ಯಶ್ವಿನ್ ಕೆ. ಶೆಟ್ಟಿಗಾರ್, ಸಂಗೀತ ಮಣಿಕಾಂತ್ ಕದ್ರಿ, ಕಾರ್ಯಕಾರಿ ನಿರ್ಮಾಪಕರು ಸಂದೀಪ್ ಶೆಟ್ಟಿ, ವಸ್ತ್ರ ವಿನ್ಯಾಸ ಅನುಪ್ ಸಾಗರ್. ವಿತರಕರಾಗಿ ಸಚಿನ್ ಎಎಸ್ ಉಪ್ಪಿನಂಗಡಿ ಕೆಲಸ ಮಾಡಿದ್ದಾರೆ ಎಂದರು.ತಾರಾಗಣದಲ್ಲಿ ಡಾ ||ದೇವದಾಸ್ ಕಾಪಿಕಾಡ್, ಅರ್ಜುನ್ ದೇವ್, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರ್, ಸುತೇಜ್ ಶೆಟ್ಟಿ, ಸಂಗೀತಾ ಶೆಟ್ಟಿ, ಶೋಭರಾಜ್ ಪಾವೂರ್, ಚೈತ್ರಾ ಶೆಟ್ಟಿ, ಕೃತಿ ಶೆಟ್ಟಿ ಅಭಿನಯಿಸಿದ್ದಾರೆ. ಟಾಸ್ ತುಳು ಹಾಗೂ ಕನ್ನಡ ಭಾಷೆಯಲ್ಲಿ ತಯಾರಾಗಿದೆ. ಎರಡನ್ನೂ ಬೇರೆ ಬೇರೆಯಾಗಿ ಚಿತ್ರೀಕರಣ ಮಾಡಲಾಗಿದೆ. ಈ ಸಿನಿಮಾಗಳಿಗೆ ನಟ ಗಣೇಶ್ ಮತ್ತು ಶಿಲ್ಪಾ ಗಣೇಶ್ ಸಾಥ್ ನೀಡಿದ್ದಾರೆ ಎಂದು ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ತಿಳಿಸಿದರು.ಟಾಸ್ ಸಿನಿಮಾ ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಮಣಿಪಾಲ, ಕುಂದಾಪುರ ಕಾರ್ಕಳ, ಬೆಳ್ತಂಗಡಿ, ಪುತ್ರೂರು, ಸುಳ್ಯ ಸಹಿತ ಬೇರೆ ಬೇರೆ ಕಡೆಗಳಲ್ಲಿ ಬಿಡುಗಡೆಗೊಳ್ಳಲಿದೆ. ಬೆಂಗಳೂರು, ಮೈಸೂರು ಮೊದಲಾದ ಕಡೆಗಳಲ್ಲೂ ಸಿನಿಮಾ ಬಿಡುಗಡೆಯಾಗಲಿದೆ.ಇದೊಂದು ಪಕ್ಕಾ ಕಾಮಿಡಿ ಸಿನಿಮಾ, ಸೆಂಟಿಮೆಂಟ್, ಆ್ಯಕ್ಷನ್, ಥ್ರಿಲ್ಲರ್ ಹೀಗೆ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಪಕ್ಕಾ ಫ್ಯಾಮಿಲಿ ಪ್ಯಾಕೇಜ್, ಎಲ್ಲಾ ಚಿಂತೆಗಳನ್ನು ಬಿಟ್ಟು ಎಂಜಾಯ್ ಮಾಡಬೇಕೆಂದು ರೆಡಿ ಮಾಡಿರುವ ಸಿನಿಮಾ ಇದು. ಹಣ ಕೊಟ್ಟು ಬರುವ ಪ್ರೇಕ್ಷಕರಿಗೆ ಏನೇನು ಬೇಕೋ ಎಲ್ಲವೂ “ಟಾಸ್” ಸಿನಿಮಾದಲ್ಲಿದೆ* ಎಂದು ನಿರ್ದೇಶಕ ಅರ್ಜುನ್ ದೇವ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ನವೀನ್ ಡಿ ಪಡೀಲ್, ಭೋಜರಾಜ ವಾಮಂಜೂರು, ಸುತೇಜ್ ಶೆಟ್ಟಿ ಚೈತ್ರಾ ಶೆಟ್ಟಿ, ಜೋಯಲ್, ಸಂದೀಪ್ ಶೆಟ್ಟಿ ಶರ್ಮಿಳಾ ಕಾಪಿಕಾಡ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಪಾದೆ ಅಜಿತ್ ರೈ ಅವರಿಗೆ ಎಮಿನೆಂಟ್ ಬಂಟ್ ಪರ್ಸನಾಲಿಟಿ ಪ್ರಶಸ್ತಿ

ಮಂಗಳೂರು: ವಿಶ್ವ ಬಂಟ ಪ್ರತಿಷ್ಠಾನ ಇದರ 30ನೇ ವಾರ್ಷಿಕ ಮಹಾಸಭೆ ಹಾಗೂ ಎಮಿನೆಂಟ್ ಬಂಟ್ ಪರ್ಸನಾಲಿಟಿ ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ನಗರದ ಎ.ಜೆ. ಗ್ರ್ಯಾಂಡ್‌ನ ಸಭಾಂಗಣದಲ್ಲಿ ನಡೆಯಿತು. ಕೈಗಾರಿಕೋದ್ಯಮಿ, ಯುನೈಟೆಡ್ ರಬ್ಬರ್ ಇಂಡಸ್ಟ್ರೀಸ್ ನ ಸ್ಥಾಪಕಾಧ್ಯಕ್ಷ ಪಾದೆ ಅಜಿತ್ ರೈ ಅವರಿಗೆ ವಿಶ್ವ ಬಂಟ ಪ್ರತಿಷ್ಠಾನದಎಮಿನೆಂಟ್ ಬಂಟ್ ಪರ್ಸನಾಲಿಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪ್ರಶಸ್ತಿ ಸ್ವೀಕರಿಸಿದ ಪಾದೆ ಅಜಿತ್ ರೈ ಮಾತನಾಡಿ ” ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರಿಗೆ ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯ ಸೇವೆ ನೀಡಲು ನೆರವಾಗುವುದು ಎಲ್ಲರ ಕರ್ತವ್ಯ. ಮಾನವೀಯ ಸೇವೆಯಿಂದ ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರಲು ಸಾಧ್ಯವಾಗುತ್ತದೆ. ಸಮಾಜದ ಸಂಕಷ್ಟಕ್ಕೆ ಸ್ಪಂದಿಸುವ ಗುಣವನ್ನು ಮಕ್ಕಳಲ್ಲಿ ಬೆಳೆಸಿ ಬಂಟ ಸಮಾಜದ ಸೇವಾ ಪರಂಪರೆಗೆ ಪ್ರೇರಣೆ ನೀಡಬೇಕು’ ಎಂದರು.ಯಕ್ಷಗಾನ ಕಲಾವಿದ ಸುರೇಶ್ ಶೆಟ್ಟಿ ಶಂಕರನಾರಾಯಣ ಅವರಿಗೆ ಡಾ.ಡಿ.ಕೆ. ಚೌಟ ದತ್ತಿನಿಧಿ ಪ್ರಶಸ್ತಿ, ಸಿಎ ಅಂತಿಮ ಪರೀಕ್ಷೆಯಲ್ಲಿ 47ನೇ ರ‍್ಯಾಂಕ್ ಪಡೆದ ಆದಿತ್ಯ ಪೆರ್ಗಡೆ ಅವರಿಗೆ ದಿ.ಸಿಎ.ವೈ.ಆರ್.ಶೆಟ್ಟಿ ದತ್ತಿನಿಧಿ ಪ್ರಶಸ್ತಿ, ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪುನೀತ್ ಶೆಟ್ಟಿ ಅವರಿಗೆ ಸಿಎ ಗೋಪಾಲ್ ಬಿ.ಶೆಟ್ಟಿ ದತ್ತಿನಿಧಿ ಪ್ರಶಸ್ತಿ ಹಾಗೂ ಕೃಷಿ ಕ್ಷೇತ್ರದ ಸಾಧಕಿ ಸಾಧಮ್ಮ ಶೆಟ್ಟಿ ಅವರಿಗೆ ದಿ.ಎಣ್ಮಕಜೆ ಕಲಾವತಿ ಶೆಟ್ಟಿ ದತ್ತಿನಿಧಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಪ್ರತಿಷ್ಠಾನದ ಪೋಷಕ ಡಾ.ಎಂ.ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ.ಬಿ.ಸಚ್ಚಿದಾನಂದ ರೈ ಪ್ರತಿಷ್ಠಾನದ ವಾರ್ಷಿಕ ವರದಿ ವಾಚಿಸಿದರು. ಯೋಜನಾ ನಿರ್ದೇಶಕ ಡಾ.ಬಿ.ಸಂಜೀವ ರೈ, ಉಪಾಧ್ಯಕ್ಷರಾದ ಟಿ.ಸುಬ್ಬಯ್ಯ ಶೆಟ್ಟಿ , ಜ್ಯೋತಿ.ಎ.ಆಳ್ವ, ಪಾದೆ ಅಜಿತ್ ರೈ ಅವರ ಪುತ್ರ ಗೀತ್ ರೈ, ಸೊಸೆ ನಿಹಾರಿಕಾ ರೈ ಉಪಸ್ಥಿತರಿದ್ದರು.ಪ್ರತಿಷ್ಠಾನದ ಉಪಾಧ್ಯಕ್ಷ ಸಿಎ ಸುಧೀರ್ ಕುಮಾರ್ ಶೆಟ್ಟಿ ಮತ್ತು ಪಳ್ಳಿ ಕಿಶನ್ ಹೆಗ್ಡೆ ಸನ್ಮಾನ ಪತ್ರ ವಾಚಿಸಿದರು. ಕೋಶಾಧಿಕಾರಿ ಸಿಎ ಪ್ರವೀಣ್ ಕುಮಾರ್ ಶೆಟ್ಟಿ ವಂದಿಸಿದರು. ಡಾ.ಪ್ರಿಯಾ ಹರೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Scroll to Top