ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ತುಳು ಭಾಷೆಗೆ ರಾಜ್ಯದಲ್ಲಿ ಅಧಿಕೃತ ಸ್ಥಾನಮಾನ: ಗಂಗಾಧರ್ ಗಾಂಧೀ, ರಾಣಿ ಪುಷ್ಪಲತಾ ದೇವಿ ಮತ್ತು ಸೌಮ್ಯ ಶೆಟ್ಟಿ ಅಭಿನಂದನೆ.

ಮಂಗಳೂರು: ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಆಡಳಿತ ಭಾಷೆಯೆಂದು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿ ನಿರ್ಧಾರ ಪ್ರಕಟಿಸಿದ ಕರ್ನಾಟಕ ಸರಕಾರದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹಾಗೂ ಸಚಿವ ಸಂಪುಟದ ಎಲ್ಲಾ ಮಂತ್ರಿಗಳಿಗೆ ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಸ್ಥಾನ (NSCDF) ಅಧ್ಯಕ್ಷ ಗಂಗಾಧರ್ ಗಾಂಧೀ, ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (KSSAP) ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ,ಹಾಗೂ ಅಖಿಲ ಕರ್ನಾಟಕ ಅಭಿವೃದ್ಧಿ ಪ್ರತಿಷ್ಠಾನ (AKAP) ಅಧ್ಯಕ್ಷೆ ಸೌಮ್ಯ ಶೆಟ್ಟಿ ತಮ್ಮ ಸಂಯುಕ್ತ ಮಾಧ್ಯಮ ಪ್ರಕಟಣೆಯಲ್ಲಿ, ಅಭಿನಂದನೆ ಮತ್ತು ಧನ್ಯವಾದವನ್ನು ಸಲ್ಲಿಸಿದ್ದಾರೆ.ಕಳೆದ ಬಾರಿಯ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ತುಳು ಭಾಷೆಗೆ ಅಧಿಕೃತ ಮಾನ್ಯತೆಯನ್ನು ನೀಡುವ ಮೂಲಕ ಸರಕಾರ ನುಡಿದಂತೆ ನಡೆದಿದೆ ಎಂದು ಗಂಗಾಧರ್ ಗಾಂಧೀ, ರಾಣಿ ಪುಷ್ಪಲತಾ ದೇವಿ ಹಾಗೂ ಸೌಮ್ಯ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ನಿಟ್ಟಿನಲ್ಲಿ ತುಳುವರ ಪರವಾಗಿ ಕಾಳಜಿ ವಹಿಸಿದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವ ಶಿವರಾಜ್. ಎಸ್. ತಂಗಡಗಿ ಅವರಿಗೆ, ಸರಕಾರದ ಮುಂದೆ ವಿಷಯವನ್ನು ನಿರಂತರವಾಗಿ ಮಂಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಪುತ್ತೂರಿನ ಶಾಸಕ ಅಶೋಕ್ ರೈ ಹಾಗೂ ಕರಾವಳಿಯ ಎಲ್ಲಾ ಶಾಸಕರನ್ನು ಮತ್ತು ಸರಕಾರದ ಮೇಲೆ ಒತ್ತಾಯ, ಆಗ್ರಹಗಳನ್ನು ನಿರಂತರವಾಗಿ ತಂದ ದೇಶ ವಿದೇಶದ ಎಲ್ಲಾ ತುಳು ಸಂಘ ಸಂಸ್ಥೆಗಳಿಗೂ ಇದೇ ಸಂದರ್ಭದಲ್ಲಿ ಅವರು ಧನ್ಯವಾದಗಳನ್ನು ಮತ್ತು ಅಭಿನಂದನೆಯನ್ನು ಸಲ್ಲಿಸಿದ್ದಾರೆ.ಸಮಸ್ತ ತುಳುವರಿಗೆ ಇದೊಂದು ಐತಿಹಾಸಿಕ ದಿನವಾಗಿದ್ದು ಜಗತ್ತಿನಾದ್ಯಂತ ನೆಲೆಸಿರುವ ತುಳು ಭಾಷಿಗರಲ್ಲಿ ಆತ್ಮ ವಿಶ್ಮಾಸವನ್ನು ಅರಳಿಸುವಂತೆ ಮಾಡಿದ ದಿನವಾಗಿದೆ. ತುಳು ಭಾಷೆಯ ಸಮಗ್ರ ಬೆಳವಣಿಗೆಯ ನಿಟ್ಟಿನಲ್ಲಿ ಇದೊಂದು ಅಭೂತಪೂರ್ವ ಕ್ರಮವಾಗಿದೆ ಎಂದ ಅವರು ಆಡಳಿತಾತ್ಮಕವಾದ ಕಾರ್ಯಕ್ರಮ ಶೀಘ್ರದಲ್ಲಿ ನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಾದೇಶಿಕ ವಾರ್ತೆಗಳು

MP MLA’S NEWS 🔴ಬ್ರೇಕಿಂಗ್ ನ್ಯೂಸ್ | ಎಕ್ಸ್‌ಕ್ಲೂಸಿವ್ ಸ್ಪಾಟ್ ರಿಪೋರ್ಟ್. ಪ್ರಜಾ ಸೌಧದ ಐತಿಹಾಸಿಕ ಪತ್ರಿಕಾಗೋಷ್ಠಿಯಲ್ಲಿ MP MLA’S NEWS ಭಾಗಿ: ₹30,000 ಕೋಟಿ ಗುತ್ತಿಗೆದಾರರ ಬಾಕಿ ಪ್ರಶ್ನೆಗೆ ಡಿಸಿಎಂ ಪರಮೇಶ್ವರ್ ಹಿಂದೇಟು, ಹೋಟೆಲ್ ಬಂದ್ ಪ್ರಶ್ನೆಗೆ ಖಾದರ್ ನಿರ್ಲಕ್ಷ್ಯ!

ಮಂಗಳೂರು, ಸೆ.18 – ಪಡೀಲ್ ಪ್ರಜಾ ಸೌಧ: ರಾಜ್ಯ ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳೂರಿನ ಪ್ರಜಾ ಸೌಧದಲ್ಲಿ ನಡೆದ 21ನೇ ಸಚಿವ ಸಂಪುಟ ಸಭೆಯ ಬಳಿಕ ಸಿಎಂ ಡಿ.ಕೆ. ಶಿವಕುಮಾರ್ ಕರೆದ ಐತಿಹಾಸಿಕ ಪತ್ರಿಕಾಗೋಷ್ಠಿಯಲ್ಲಿ MP MLA’S NEWS ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ.ಎನ್. ಅವರು ಭಾಗವಹಿಸಿದ್ದರು.ಪತ್ರಿಕಾಗೋಷ್ಠಿ ವೇಳೆ ಮಹತ್ವದ ಎರಡು ಜನಪರ ಪ್ರಶ್ನೆಗಳನ್ನು ಕೇಳಲಾಯಿತು, ಆದರೆ ಉತ್ತರ ಮಾತ್ರ ತಪ್ಪಿಸಿಕೊಳ್ಳುವಂತಿತ್ತು.

ಪ್ರಾದೇಶಿಕ ವಾರ್ತೆಗಳು

MP MLA’S NEWS 🔴 ಬ್ರೇಕಿಂಗ್ ನ್ಯೂಸ್ | ಎಕ್ಸ್‌ಕ್ಲೂಸಿವ್ ಸ್ಪಾಟ್ ರಿಪೋರ್ಟ್ 🔴

ಪ್ರಜಾ ಸೌಧದ ಐತಿಹಾಸಿಕ ಪತ್ರಿಕಾಗೋಷ್ಠಿಯಲ್ಲಿ MP MLA’S NEWS ಭಾಗಿ: ₹30,000 ಕೋಟಿ ಗುತ್ತಿಗೆದಾರರ ಬಾಕಿ ಪ್ರಶ್ನೆಗೆ ಡಿಸಿಎಂ ಪರಮೇಶ್ವರ್ ಹಿಂದೇಟು, ಹೋಟೆಲ್ ಬಂದ್ ಪ್ರಶ್ನೆಗೆ ಖಾದರ್ ನಿರ್ಲಕ್ಷ್ಯ! ಮಂಗಳೂರು, ಸೆ.18 – ಪಡೀಲ್ ಪ್ರಜಾ ಸೌಧ: ರಾಜ್ಯ ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳೂರಿನ ಪ್ರಜಾ ಸೌಧದಲ್ಲಿ ನಡೆದ 21ನೇ ಸಚಿವ ಸಂಪುಟ ಸಭೆಯ ಬಳಿಕ ಸಿಎಂ ಡಿ.ಕೆ. ಶಿವಕುಮಾರ್ ಕರೆದ ಐತಿಹಾಸಿಕ ಪತ್ರಿಕಾಗೋಷ್ಠಿಯಲ್ಲಿ MP MLA’S NEWS ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ.ಎನ್. ಅವರು ಭಾಗವಹಿಸಿದ್ದರು.ಪತ್ರಿಕಾಗೋಷ್ಠಿ ವೇಳೆ ಮಹತ್ವದ ಎರಡು ಜನಪರ ಪ್ರಶ್ನೆಗಳನ್ನು ಕೇಳಲಾಯಿತು, ಆದರೆ ಉತ್ತರ ಮಾತ್ರ ತಪ್ಪಿಸಿಕೊಳ್ಳುವಂತಿತ್ತು.

ಪ್ರಾದೇಶಿಕ ವಾರ್ತೆಗಳು

EXECLUSSIVE SPOT REPORT. MP MLA’S NEWS Joins Historic Press Meet At Praja Soudha: DCM Avoids Question On Rs 30,000 Crore Dues, Khader Ignores Hotel Closure Issue

Mangaluru:,The first-ever cabinet meeting held outside Bengaluru at Padil Praja Soudha on September 18 will be remembered for its historic announcements, but the press conference that followed also saw some uncomfortable questions going unanswered.MP MLA’S NEWS editor Dr Ashok Shetty B N was among the journalists present at the press conference addressed by Chief Minister D K Shivakumar after the 21st cabinet meeting of the year. Two public-interest queries raised during the interaction drew evasive responses.On the issue of nearly Rs 30,000 crore in pending dues to contractors across the state, Deputy Chief Minister Dr G Parameshwara is said to have sidestepped a direct reply, offering no clear timeline for clearance.In another exchange, when asked why hotels and eateries in Mangaluru are mandated to down shutters by 11:30 pm — a move that stakeholders say affects tourism and night economy — District in-charge minister U T Khader reportedly termed it a minor issue. Witnesses at the venue said the minister appeared more keen on accommodating a national channel’s byte.The perceived contradiction has not gone unnoticed. On one hand, the cabinet cleared the Karavali-Malenadu Tourism Policy 2026 aiming to project coastal Karnataka as a tourism hub; on the other, the early closure norm remains a concern for the hospitality sector.While the cabinet’s decisions — granting second official language status to Tulu in Dakshina Kannada and Udupi, clearing Rs 32,611 crore worth of projects and proposing to rename Dakshina Kannada as Mangaluru district — were largely welcomed, the unanswered questions left many in the media gallery wanting more clarity

ಪ್ರಾದೇಶಿಕ ವಾರ್ತೆಗಳು

*ಕರಾವಳಿಗೆ ಸಂಭ್ರಮ: ತುಳು ಭಾಷೆಗೆ ಎರಡನೇ ಹೆಚ್ಚುವರಿ ಅಧಿಕೃತ ಸ್ಥಾನಮಾನ ಘೋಷಣೆ! *ತುಳುವರ ಮನ ಗೆದ್ದ ಡಿಕೆಶಿ. MPMLA’S NEWS ವಿಶೇಷ ವರದಿ: ಡಾ.ಅಶೋಕ್ ಶೆಟ್ಟಿ. ಬಿ.ಎನ್. ಬ್ರಹ್ಮರಕೂಟ್ಲು.

ಮಂಗಳೂರು, ಸೆ. 18: ಕರಾವಳಿ ಜನರ ದಶಕಗಳ ನಿರೀಕ್ಷೆಗೆ( ಸೆ. 18)ಇಂದು ತೆರೆ ಬಿದ್ದಿದೆ. ಪಡೀಲ್‌ನ ಪ್ರಜಾ ಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆಯ ನಂತರ ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಗುರುತಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಮಂಗಳೂರು ಪಡೀಲ್ ನ ಪ್ರಜಾಸೌಧದಲ್ಲಿ ನಡೆದ ಐತಿಹಾಸಿಕ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್ ಮೊದಲಾದವರು ಉಪಸ್ಥಿತರಿದ್ದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಡಿಕೆಶಿ ಅವರು, “ತುಳು ಒಂದು ಭಾಷೆ ಮಾತ್ರವಲ್ಲ, ಇದು ತುಳುನಾಡಿನ ಸಂಸ್ಕೃತಿ, ನಾಗರೀಕತೆ ಮತ್ತು ಸ್ವಾಭಿಮಾನದ ಸಂಕೇತ. ಇದರ ಪ್ರಾಚೀನತೆ ಮತ್ತು ಸಾಹಿತ್ಯಿಕ ಶ್ರೀಮಂತಿಕೆಯನ್ನು ಪರಿಗಣಿಸಿ ಈ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದರು.ಹಿನ್ನೆಲೆ:*ಈ ಹಿಂದೆ ಡಾ. ಎಂ. ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಪರಿಣಿತರ ಸಮಿತಿಯು ತುಳುವಿಗೆ ಎರಡನೇ ಅಧಿಕೃತ ಭಾಷೆ ಸ್ಥಾನ ನೀಡಲು ಕಾನೂನಿನಲ್ಲಿ ಯಾವುದೇ ತೊಡಕಿಲ್ಲ ಎಂದು ಸ್ಪಷ್ಟಪಡಿಸಿತ್ತು. ಬಳಿಕ ಆಂಧ್ರಪ್ರದೇಶದ ಭಾಷಾ ನೀತಿ ಅಧ್ಯಯನಕ್ಕಾಗಿ ತೆರಳಿದ್ದ ನಿಯೋಗವು 2026ರ ಮಾರ್ಚ್‌ನಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿತ್ತು.ಹೊಸ ಅನುದಾನ:ತುಳು ಭಾಷೆಯ ಬೆಳವಣಿಗೆ, ತರಬೇತಿ ಕಾರ್ಯಕ್ರಮಗಳು ಮತ್ತು ಆಡಳಿತದಲ್ಲಿ ಬಳಕೆಗಾಗಿ ಪ್ರತಿ ವರ್ಷ 82 ಲಕ್ಷ ರೂಪಾಯಿ ಮೀಸಲಿಡುವುದಾಗಿ ಸಿಎಂ ತಿಳಿಸಿದರು. ಐದು ಪ್ರಮುಖ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ಮತ್ತು 18 ಲಕ್ಷಕ್ಕೂ ಹೆಚ್ಚು ಜನರಿಂದ ಮಾತನಾಡಲ್ಪಡುವ ತುಳು, ಈ ನಿರ್ಧಾರದಿಂದ ಸಂವಿಧಾನದ 8ನೇ ಅನುಸೂಚಿಯಲ್ಲಿ ಸ್ಥಾನ ಪಡೆಯುವ ಹಾದಿ ಸುಗಮವಾಗಿದೆ.ಈ ಘೋಷಣೆಯಿಂದ ಕರಾವಳಿ ಜಿಲ್ಲೆಗಳಲ್ಲಿ ಸಂಭ್ರಮ ಮನೆ ಮಾಡಿದೆ.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಶಾಸಕ ಸುನೀಲ್ ಕುಮಾರ್ ಸಹಿತ ಜನ ಪ್ರತಿನಿಧಿಗಳು,ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಸಹಿತ ವಿವಿಧ ತುಳು ಪರ ಸಂಘಟನೆಗಳು ಸರ್ಕಾರದ ನಿರ್ಧಾರವನ್ನು ಮುಕ್ತವಾಗಿ ಸ್ವಾಗತಿಸಿವೆ.

ಪ್ರಾದೇಶಿಕ ವಾರ್ತೆಗಳು

Historic first: CM, ministers ride open-top double-decker bus to Cabinet meet at Mangaluru Praja Soudha; Rs 32,611 cr projects, Tulu official status, Data Centre fortune for coast

Mangaluru, Sept 18: In a first in Karnataka’s political history, Chief Minister D.K. Shivakumar and his cabinet colleagues travelled in an open-top KSRTC Ambaari double-decker bus to attend the cabinet meeting, creating history at Padil Praja Soudha in Mangaluru on Thursday. CM D.K. Shivakumar, after offering puja at the 4000-year-old Udbhava Shivalinga at Kadri Manjunatha Temple in the morning, arrived in a grand procession from Pumpwell Circle to Praja Soudha along with all ministers in the open bus. Folk artists and Congress workers gave a rousing welcome. Key decisions taken in the 21st Cabinet meeting 2026 held outside Bengaluru:

ಪ್ರಾದೇಶಿಕ ವಾರ್ತೆಗಳು

ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯೆಂದು ಘೋಷಣೆ: ಸಿಎಂ ಡಿ.ಕೆ. ಶಿವಕುಮಾರ್. *ಮಂಗಳೂರಿನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ: 32,611 ಕೋಟಿ ರೂ. ಯೋಜನೆಗಳಿಗೆ ಅನುಮೋದನೆ. *ಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ 2026. *ಗ್ರಾಮೀಣ ಸಂಪರ್ಕ ರಸ್ತೆ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಒಟ್ಟು 16,000 ಕೋಟಿ ಯೋಜನೆ. *ದಕ್ಷಿಣ ಕನ್ನಡಕ್ಕೆ ಮಂಗಳೂರು ಮರುನಾಮಕರಣ: ಜನಾಭಿಪ್ರಾಯ ಸಂಗ್ರಹ. *ಮುಂದಿನ ದಿನಗಳಲ್ಲಿ 10-12 ಕಡೆ ಸಚಿವ ಸಂಪುಟ ಸಭೆ

ಮಂಗಳೂರು,ಸೆ.18;ಬಹುಕಾಲದಿಂದ ನಿರೀಕ್ಷೆಯಲ್ಲಿದ್ದ ಮಹತ್ವದ ತುಳು ಭಾಷೆಗೆ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ 2026, 150 ಎಕರೆ ಪ್ರದೇಶದಲ್ಲಿ ಮೀನುಗಾರಿಕೆ ಪಾರ್ಕ್ ನಿರ್ಮಾಣ ಸೇರಿದಂತೆ 32,611 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳೂರಿನಲ್ಲಿ ಶುಕ್ರವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ ಸಿಎಂ ಡಿ.ಕೆ. ಶಿವಕುಮಾರ್ ಇದರಲ್ಲಿ 16,000 ಕೋಟಿ ರೂ. ಗ್ರಾಮೀಣಾಭಿವೃದ್ಧಿ ಯೋಜನೆಯಾಗಿದ್ದು, ಉಳಿದ ಮೊತ್ತ ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿದೆ ಎಂದು ವಿವರಿಸಿದರು. ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ತುಳುನಮ್ಮ ಸರ್ಕಾರ ಜನರ ಭಾವನೆಯನ್ನು ಗೌರವಿಸಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಭಾಷೆ ಎರಡನೇ ಆಡಳಿತ ಭಾಷೆಯಾಗಿ ಘೋಷಣೆಯಾಗಬೇಕೆನ್ನುವ ಬೇಡಿಕೆ ಬಹಳ ದಿನಗಳದ್ದು. ಹಿಂದಿನವರು ಈ ತೀರ್ಮಾನ ಏಕೆ ಮಾಡಲಿಲ್ಲ ಎಂದು ಚರ್ಚಿಸುವುದಿಲ್ಲ. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ. ಸಭೆಯಲ್ಲಿ ಅನೇಕ ಸಲಹೆಗಳು ಬಂದಿವೆ. ಬದ್ಧತೆ ಇರುವ ಸರ್ಕಾರನಮಗೆ ಬದ್ಧತೆ ಇದೆ. ನಾವು ಜನರ ಭಾವನೆ ಮೇಲಲ್ಲ; ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಭಾವನೆಗಳ ಆಧಾರದ ಮೇಲೆ ಸಮಾಜ ಕಟ್ಟಲ್ಲ. ಸಾಮಾಜಿಕ ಆರ್ಥಿಕ ಶಕ್ತಿ ತುಂಬಿ ಬದುಕು ಕಟ್ಟಿಕೊಡಲಾಗುವುದು ಎಂದು ತಿಳಿಸಿದರು.ಅವಶ್ಯತೆ ಇದ್ದಲ್ಲಿ ಆರ್ಥಿಕ ಹಾಗೂ ಕಾನೂನು ಚೌಕಟ್ಟು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಸಚಿವ ಸಂಪುಟ ಸಭೆ ನಡೆಸುವ ತೀರ್ಮಾನ ಮಾಡಿ ಆಗ ಅಗತ್ಯವಿರುವ ವಿಚಾರಗಳ ಬಗ್ಗೆ ತೀರ್ಮಾನಿಸಲಾಗುವುದು. ಇದು ಟೀಮ್ ಕರ್ನಾಟಕ.ಸಚಿವ ಸಂಪುಟ ನಿಮ್ಮ ಜೊತೆ ಇದೆ. ತುಳು ಭಾಷೆಯನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾಗಿ ರಾಜ್ಯದ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ ಮಾಡಲಾಗುವುದು. ಮಾಜಿ ಸಚಿವ ರಮಾನಾಥ ರೈ ಅವರು ತುಳು ಭಾಷೆಗೆ 2 ನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಲು ಮೊದಲು ಬೇಡಿಕೆ ಇಟ್ಟಿದ್ದರು ಎಂದು ಸ್ಮರಿಸಿದರು. ಸಚಿವ ಯು.ಟಿ. ಖಾದರ್‌, ಶಾಸಕ ಅಶೋಕ್‌ ಕುಮಾರ್‌ ರೈ ಸೇರಿದಂತೆ ಹಲವು ಜನಪ್ರತಿನಿಧಿಗಳು ಒಟ್ಟಾಗಿ ಒತ್ತಡ ಹೇರಿದ್ದರು ಎಂದು ಅವರು ತಿಳಿಸಿದರು. ತುಳು ಭಾಷೆ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಅಂಗೀಕರಿಸಿದ ಹಿನ್ನೆಲೆಯಲ್ಲಿ ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಮುಖ್ಯಮಂತ್ರಿಗಳು ಅಭಿನಂದಿಸಿದರು. ದಕ್ಷಿಣ ಕನ್ನಡಕ್ಕೆ ಮಂಗಳೂರು ಮರುನಾಮಕರಣ: ಜನಾಭಿಪ್ರಾಯ ಸಂಗ್ರಹ ಮಂಗಳೂರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಇದೆ. ದಕ್ಷಿಣ ಕನ್ನಡದ ಬದಲಿಗೆ ಮಂಗಳೂರು ಎಂದು ಹೆಸರಿಸುವ ಬಗ್ಗೆ ಜನಾಭಿಪ್ರಾಯ ಪಡೆದು ತೀರ್ಮಾನಿಸಲಾಗುವುದು. ಕರಡು ಅಧಿಸೂಚನೆ ಹೊರಡಿಸಿ ಒಂದು ತಿಂಗಳ ಅವಧಿ ನೀಡಿ, ಜನರ ಭಾವನೆ, ಜನರ ಅಭಿಪ್ರಾಯ ಪಡೆದು ತೀರ್ಮಾನಿಸಲಾಗುವುದು ಎಂದರು. ಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈವರೆಗಿನ ಎಲ್ಲಾ ನೀತಿಗಳಿಗಿಂತ ಭಿನ್ನವಾದ ನೀತಿ ಇದಾಗಲಿದೆ. ಹೂಡಿಕೆದಾರರಿಗೆ ಹೆಚ್ಚಿನ ಶಕ್ತಿ ಹಾಗೂ ಸಾಲ ಮರುಪಾವತಿಗೆ ಸಮಯಾವಕಾಶ ನೀಡಲಾಗುವುದು. ಮಲೆನಾಡು ಒಳಗೊಂಡಂತೆ ಕರಾವಳಿ ಪ್ರದೇಶದಲ್ಲಿ ಹೊಸ ಪ್ರವಾಸೋದ್ಯಮ ನೀತಿ ಮೂಲಕ ಪ್ರವಾಸೋದ್ಯಮ ಯೋಜನೆಗಳನ್ನು ಮೂಲಸೌಕರ್ಯ ಯೋಜನೆಗಳೆಂದು ಪರಿಗಣಿಸಲಾಗುವುದು. ಅಲ್ಲದೆ ಅನೇಕ ಪ್ರೋತ್ಸಾಹಕಗಳನ್ನು ನೀಡಲು ಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಮೀನುಗಾರಿಕಾ ವಿಶ್ವವಿದ್ಯಾಲಯಮೀನುಗಾರಿಕೆಗೆ ಸಂಬಂಧಿಸಿದಂತೆ Fisheries, Blue economy university ಯನ್ನು ಸ್ಥಾಪಿಸಲಾಗುವುದು. ಪ್ರಸ್ತುತ ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳ ಪ್ರವೇಶವನ್ನು 60 ರಿಂದ 200 ಸೀಟುಗಳಿಗೆ ಹೆಚ್ಚಳ ಮಾಡಲಾಗುವುದು ಎಂದು ತಿಳಿಸಿದರು.ಈ ಭಾಗದಲ್ಲಿ ಕಿದ್ವಾಯಿ, ಜಯದೇವ ಆಸ್ಪತ್ರೆಗೆ ಬೇಡಿಕೆ ಬಂದಿದೆ ಎಂದು ತಿಳಿಸಿದ ಅವರು ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ 549 ಕೋಟಿ ರೂ. ಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ 10-12 ಕಡೆ ಸಚಿವ ಸಂಪುಟ ಸಭೆಬೆಂಗಳೂರಿನಿಂದಾಚೆಗೆ ಮಂಗಳೂರಿನಲ್ಲಿ ಮೊದಲ ಬಾರಿ ಸಚಿವ ಸಂಪುಟ ಸಭೆ ನಡೆಸಿರುವುದು ಸ್ವಾಗತಾರ್ಹ. ಇತರ ಜಿಲ್ಲೆಗಳಲ್ಲೂ ಸಚಿವ ಸಂಪುಟ ಸಭೆ ನಡೆಸುವಿರಾ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಮುಂದಿನ 15 ತಿಂಗಳ ಅವಧಿಯಲ್ಲಿ 10 – 12 ಸ್ಥಳಗಳಲ್ಲಿ ಸಚಿವ ಸಂಪುಟ ಸಭೆ ನಡೆಸುವ ಉದ್ದೇಶವಿದೆ. ಎಲ್ಲಿ ಸಾಮರ್ಥ್ಯವಿದೆ, ಅಗತ್ಯವಿದೆ- ಅಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗುವುದು ಎಂದು ಅವರು ತಿಳಿಸಿದರು.ಸಮಗ್ರ ಕರ್ನಾಟಕ, ಸಮೃದ್ಧ ಕರ್ನಾಟಕವಾಗಿಸುವುದು ನಮ್ಮ ಗುರಿ ಎಂದು ಅವರು ವಿವರಿಸಿದರು. ದೇಶದಲ್ಲೇ ಗಮನ ಸೆಳೆದ ದಕ್ಷಿಣ ಕನ್ನಡಇಂದು ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ವಿವಿಧ ಆಯಾಮದ ಅಭಿವೃದ್ಧಿ ಯೋಜನೆಗಳನ್ನು ನೀಡುತ್ತಿದ್ದೀರಿ. ರಾಜ್ಯದ ಇತರ ಭಾಗಗಳಿಗೂ ಇದನ್ನು ವಿಸ್ತರಿಸುವಿರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಖಂಡಿತವಾಗಿ ವಿಸ್ತರಿಸಲಾಗುವುದು ಎಂದರು. ಜೊತೆಗೆ ದಕ್ಷಿಣ ಕನ್ನಡ ಧಾರ್ಮಿಕವಾಗಿ, ಶೈಕ್ಷಣಿಕವಾಗಿ ದೇಶದಲ್ಲೇ ಗಮನ ಸೆಳೆದಿದೆ. ದೇಶಕ್ಕೆ 6 ರಾಷ್ಟ್ರೀಕೃತ ಬ್ಯಾಂಕುಗಳನ್ನು ನೀಡಿ ಆರ್ಥಿಕ ಶಕ್ತಿಯನ್ನು ಹೊಂದಿರುವ ಸ್ಥಳವಿದು. ಬಂದರುಗಳಿವೆ. ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಪ್ರಮುಖ ಕೇಂದ್ರವಾಗಿದೆ ಎಂದು ವಿವರಿಸಿದರು. ಕಸ್ತೂರಿ ರಂಗನ್ ವರದಿ: ಸಭೆಗಳಲ್ಲಿ ಭಾಗಿಇಂದು ಹೆಬ್ರಿಯಲ್ಲಿ ಕಸ್ತೂರಿರಂಗನ್ ವರದಿ ಬಗ್ಗೆ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ನಾಳೆ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜನರ ಅಭಿಪ್ರಾಯ ಪಡೆಯಲಾಗುವುದು ಎಂದು ತಿಳಿಸಿದರು.ಪ್ರಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ತೋರಿಸಿದ ಅಭಿಮಾನ, ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿದ ಮುಖ್ಯಮಂತ್ರಿಗಳು, ದಕ್ಷಿಣ ಕನ್ನಡ ಜಿಲ್ಲೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಬೆಳೆದಿರುವ ಜಿಲ್ಲೆ. ಇಡೀ ದೇಶ ದಕ್ಷಿಣ ಕನ್ನಡದ ಇತಿಹಾಸ ಪರಂಪರೆಯನ್ನು ತಿಳಿದಿದೆ. ಈ ಜಿಲ್ಲೆಯ ಅಭಿವೃದ್ಧಿಗೆ ನಾವು ಅಳಿಲು ಸೇವೆ ಮಾಡಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆಯನ್ನು ನಡೆಸಲಾಗಿದೆ ಎಂದರು.ಪಕ್ಷಭೇದ ಮರೆತು ಶಾಸಕರು, ಸಂಸದರು, ವಿಧಾನಪರಿಷತ್ತು ಸದಸ್ಯರೂ ಸೇರಿದಂತೆ ಸಲಹೆ ನೀಡಿ, ಜಿಲ್ಲೆಯ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ಅವರು ತಿಳಿಸಿದರು. ಭಾಷೆಯ ಕುರಿತ ಭಾವನೆ ದೊಡ್ಡದುತುಳು ಭಾಷೆಯನ್ನು ಆಡಳಿತ ಭಾಷೆಯಾಗಿ ಘೋಷಿಸುವ ಕುರಿತು ಈ ಭಾಗದ ಜನರ ಭಾವನೆ, ಒತ್ತಡಗಳ ಕುರಿತು ವಿವರಿಸಿದ ಮುಖ್ಯಮಂತ್ರಿಗಳು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಶಾಸಕರಾದ ನಂತರ ಅಧಿವೇಶನದಲ್ಲಿ ಕೇಳಿದ ಮೊದಲ ಪ್ರಶ್ನೆ ತುಳು ಭಾಷೆಯ ಕುರಿತಾದುದು. ನನಗೆ ಆಶ್ಚರ್ಯವಾಗಿತ್ತು. ಆದರೆ ಅವರ ಮೊದಲ ಭಾವನೆ ಇದ್ದದ್ದು ಭಾಷೆಯ ಮೇಲೆ. ಇಂದು ಅವರು 500 ಕೋಟಿ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿಕೊಂಡು ಲಾಟರಿ ಹೊಡೆದಿದ್ದಾರೆ, ಅದು ಬೇರೆ ವಿಷಯ. ಯು.ಟಿ. ಖಾದರ್ ಆಗ ಸ್ಪೀಕರ್ ಆಗಿದ್ದರು. ಇಬ್ಬರೂ ತುಳುವಿನಲ್ಲಿ ಮಾತನಾಡುತ್ತ, ಇತರರೂ ಸೇರಿ ಒತ್ತಡ ಹೇರಿದರು ಎಂದು ಸ್ಮರಿಸಿದರು.ಸಚಿವ ಸಂಪುಟದ ವಿವರಗಳನ್ನುಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ವಿವರಿಸಿದರು.ಸುದ್ದಿ ಗೋಷ್ಠಿಯಲ್ಲಿ ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ,ಸಚಿವ ಯು.ಟಿ. ಖಾದರ್, ರಿಜ್ವಾನ್ ಅರ್ಷದ್ , ವಿಜಯಾ ನಂದ ಕಾಶಪ್ಪನವರ್ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ತುಳು ನಮ್ಮ ಮಾತೃಭಾಷೆ ಮಾತ್ರವಲ್ಲ; ಅದು ನಮ್ಮ ನೆಲದ ಇತಿಹಾಸ, ನಮ್ಮ ಸಂಸ್ಕೃತಿ, ನಮ್ಮ ಪರಂಪರೆ, ನಮ್ಮ ಭಾವನೆ ಮತ್ತು ನಮ್ಮ ಅಸ್ಮಿತೆಯ ಜೀವಂತ ಪ್ರತೀಕ

ಮಂಗಳೂರು: ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ದೊರಕುವ ಈ ಐತಿಹಾಸಿಕ ಸಂದರ್ಭದಲ್ಲಿ, ಈ ಮಹತ್ವದ ನಿರ್ಧಾರಕ್ಕೆ ಕಾರಣರಾದ ಕರ್ನಾಟಕದ ಪ್ರಸ್ತುತ ಸರ್ಕಾರಕ್ಕೆ ಹಾಗೂ ಮಾನ್ಯ ಮುಖ್ಯಮಂತ್ರಿಗಳು, ಸಚಿವ ಸಂಪುಟದ ಎಲ್ಲಾ ಸದಸ್ಯರಿಗೆ , ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿ ಬಂಟ ಸಮುದಾಯದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಕೃತಜ್ಞತೆ ಸಲ್ಲಿಸಿದ್ದಾರೆ. ಆದರೆ, ಈ ಕ್ಷಣವು ಕೇವಲ ಇಂದಿನ ಸಾಧನೆಯಲ್ಲ. ಇದು ಹಲವು ದಶಕಗಳ ಕನಸು, ಹೋರಾಟ ಮತ್ತು ನಿರಂತರ ಪ್ರಯತ್ನಗಳ ಫಲ.ತುಳು ಭಾಷೆಯ ಉಳಿವು, ಬೆಳವಣಿಗೆ ಮತ್ತು ಅಧಿಕೃತ ಮಾನ್ಯತೆಗಾಗಿ ಬಹು ವರ್ಷಗಳ ಕಾಲ ಧ್ವನಿ ಎತ್ತಿದ ಹಿರಿಯರು, ಸಾಹಿತಿಗಳು, ಸಂಶೋಧಕರು, ಕಲಾವಿದರು, ಸಂಘ-ಸಂಸ್ಥೆಗಳು, ಹೋರಾಟಗಾರರು, ಜನಪ್ರತಿನಿಧಿಗಳು ಹಾಗೂ ಅಸಂಖ್ಯಾತ ತುಳು ಭಾಷಾ ಪ್ರೇಮಿಗಳಿಗೆ ಈ ಸಂದರ್ಭದಲ್ಲಿ ನಮ್ಮ ಹೃದಯಪೂರ್ವಕ ನಮನಗಳು.ತಮ್ಮ ಜೀವನದ ಅಮೂಲ್ಯ ಸಮಯವನ್ನು ತುಳು ಭಾಷೆಗಾಗಿ ಸಮರ್ಪಿಸಿದ, ಹಲವು ಬಾರಿ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ತಮ್ಮ ಹೋರಾಟವನ್ನು ನಿಲ್ಲಿಸದ ಎಲ್ಲರ ಪರಿಶ್ರಮವನ್ನು ಇಂದು ಕೃತಜ್ಞತೆಯಿಂದ ಸ್ಮರಿಸಬೇಕಾಗಿದೆ. ಎಂದವರು ತಿಳಿಸಿದ್ದಾರೆಒಂದು ಭಾಷೆಗೆ ಮಾನ್ಯತೆ ದೊರಕುವುದು ಎಂದರೆ ಕೇವಲ ಒಂದು ಆಡಳಿತಾತ್ಮಕ ನಿರ್ಧಾರವಲ್ಲ. ಅದು ಒಂದು ಜನಸಮುದಾಯದ ಭಾಷೆ, ಸಂಸ್ಕೃತಿ ಮತ್ತು ಅಸ್ಮಿತೆಗೆ ದೊರಕುವ ಗೌರವ.ಕನ್ನಡದ ನೆಲದಲ್ಲಿ ಕನ್ನಡದೊಂದಿಗೆ ತುಳು ಕೂಡ ಗೌರವದಿಂದ ಅರಳಲಿ; ತುಳು ಸಾಹಿತ್ಯ, ಕಲೆ, ಶಿಕ್ಷಣ ಮತ್ತು ಆಡಳಿತದ ಕ್ಷೇತ್ರಗಳಲ್ಲಿ ಇನ್ನಷ್ಟು ಸಮೃದ್ಧವಾಗಿ ಬೆಳೆಯಲಿ ಎಂಬುದು ನಮ್ಮ ಆಶಯ.ಈ ಐತಿಹಾಸಿಕ ಹೆಜ್ಜೆಯನ್ನು ಇಟ್ಟ ಕರ್ನಾಟಕ ಸರ್ಕಾರಕ್ಕೆ ಮತ್ತೊಮ್ಮೆ ,ಬಂಟರ ಯಾನೆ ನಾಡವರ ಮಾತೃ ಸಂಘದ ಹೃತ್ಪೂರ್ವಕ ಧನ್ಯವಾದಗಳು. ಇದು ಒಬ್ಬರ ಗೆಲುವಲ್ಲ — ಇದು ತಲೆಮಾರುಗಳ ಕನಸಿನ ಸಾಕಾರ.ಇದು ಹೋರಾಡಿದವರ ಜಯ, ತುಳುವನ್ನು ಉಳಿಸಿದವರ ಜಯ, ತುಳುವನ್ನು ಪ್ರೀತಿಸಿದ ಪ್ರತಿಯೊಬ್ಬ ತುಳುವನ ಜಯ. ಸರ್ವರಿಗೂ ಹೃದಯಪೂರ್ವಕ ಅಭಿನಂದನೆಗಳು ಮತ್ತು ಕೃತಜ್ಞತೆಗಳು. 🙏🏼

ಪ್ರಾದೇಶಿಕ ವಾರ್ತೆಗಳು

ತುಳು ಭಾಷೆಗೆ ಅಧಿಕೃತ ಮಾನ್ಯತೆ : ಐತಿಹಾಸಿಕ ಕ್ರಮ ; ತಾರಾನಾಥ ಗಟ್ಟಿ ಕಾಪಿಕಾಡ್

ಮಂಗಳೂರು: ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಆಡಳಿತ ಭಾಷೆಯೆಂದು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿ ನಿರ್ಧಾರ ಪ್ರಕಟಿಸಿದ ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಯವರಾದ ಡಿ.ಕೆ.ಶಿವಕುಮಾರ್ ಅವರಿಗೆ ಹಾಗೂ ಸಚಿವ ಸಂಪುಟದ ಎಲ್ಲಾ ಮಂತ್ರಿಗಳಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಕಾಡೆಮಿಯ ಪರವಾಗಿ ಧನ್ಯವಾದವನ್ನು ಸಲ್ಲಿಸಿರುತ್ತಾರೆ.ಕಳೆದ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ತುಳು ಭಾಷೆಗೆ ಅಧಿಕೃತ ಮಾನ್ಯತೆಯನ್ನು ನೀಡುವ ಮೂಲಕ ಸರಕಾರ ನುಡಿದಂತೆ ನಡೆದಿದೆ ಎಂದು ತಾರಾನಾಥ ಗಟ್ಟಿ ಕಾಪಿಕಾಡ್ ಅವರ ಸಂತಸ ವ್ಯಕ್ತಪಡಿಸಿದ್ದಾರೆ.ತುಳು ಭಾಷೆಗೆ ಅಧಿಕೃತ ಮಾನ್ಯತೆ ಲಭಿಸುವ ನಿಟ್ಟಿನಲ್ಲಿ ತುಳುವರ ಪರವಾಗಿ ಕಾಳಜಿ ವಹಿಸಿದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವರಾದ ಶಿವರಾಜ್. ಎಸ್. ತಂಗಡಗಿ ಅವರಿಗೆ, ಸರಕಾರದ ಮುಂದೆ ವಿಷಯವನ್ನು ನಿರಂತರವಾಗಿ ಮಂಡಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್, ಪುತ್ತೂರಿನ ಶಾಸಕರಾದ ಅಶೋಕ್ ರೈ ಹಾಗೂ ಕರಾವಳಿಯ ಎಲ್ಲಾ ಶಾಸಕರನ್ನು ಮತ್ತು ಸರಕಾರದ ಮೇಲೆ ಒತ್ತಾಯ, ಆಗ್ರಹಗಳನ್ನು ನಿರಂತರವಾಗಿ ತಂದ ದೇಶ ವಿದೇಶದ ಎಲ್ಲಾ ತುಳು ಸಂಘ ಸಂಸ್ಥೆಗಳಿಗೂ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಅಭಿನಂದನೆ ಸಲ್ಲಿಸಿರುತ್ತಾರೆ.ಸಮಸ್ತ ತುಳುವರಿಗೆ ಇದೊಂದು ಚಾರಿತ್ರಿಕ ದಿನವಾಗಿದ್ದು ಜಗತ್ತಿನಾದ್ಯಂತ ನೆಲೆಸಿರುವ ತುಳು ಭಾಷಿಗರಲ್ಲಿ ಆತ್ಮ ವಿಶ್ಮಾಸವನ್ನು ಪುಟಿದೆಬ್ಬಿಸಿದ ದಿನವಾಗಿದೆ. ತುಳು ಭಾಷೆಯ ಸಮಗ್ರ ಬೆಳವಣಿಗೆಯ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ಕ್ರಮವಾಗಿದೆ. ಸುಮಾರು 3 ಸಾವಿರ ವರ್ಷಗಳ ಚಾರಿತ್ರಿಕ ಹಿನ್ನಲೆಯನ್ನು ಹೊಂದಿರುವ ತುಳು ಭಾಷೆಗೆ ಒದಗಿದ ಮಹತ್ವದ ಕೊಡುಗೆಯಾಗಿದೆ ಎಂದು ಅವರು ಹೇಳಿದ್ದಾರೆ.ಈ ಹಿಂದಿನ ಸರಕಾರದ ಅವಧಿಯಲ್ಲಿ ಡಾ.ಎಂ. ಮೋಹನ್ ಆಳ್ವ ಅವರು ಸಲ್ಲಿಸಿರುವ ವರದಿಯ ಬಳಿಕ ಮಾನ್ಯ ಸಿದ್ದರಾಮಯ್ಯ ಸರಕಾರವು ರಚಿಸಿದ ಆಂಧ್ರ ಪ್ರದೇಶದ ಅಧ್ಯಯನ ವರದಿಯ ಹಿನ್ನಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ದಿಟ್ಟ ನಿರ್ಧಾರ ಕೈಗೊಂಡು ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಮಾನ್ಯತೆ ನೀಡುವ ಮೂಲಕ ಐತಿಹಾಸಿಕ ಕ್ರಮ ಕೈಗೊಂಡಿರುವುದು ಸಮಸ್ತ ತುಳುವರಿಗೆ ಹೆಮ್ಮೆಯ ವಿಚಾರವಾಗಿರುತ್ತದೆ ಎಂದು ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಅಭಿಪ್ರಾಯಪಟ್ಟಿದ್ದಾರೆ.ಸರಕಾರ ನೇಮಿಸಿದ ಆಂಧ್ರ ಪ್ರದೇಶ ಅಧ್ಯಯನ ಸಮಿತಿಯ ಸದಸ್ಯನಾಗಿ ಆಂಧ್ರ ಪ್ರದೇಶದಲ್ಲಿ ಉರ್ದು ಭಾಷೆಯನ್ನು ಅಧಿಕೃತ ಭಾಷೆಯಾಗಿ ಘೋಷಣೆ ಮಾಡಿರುವ ವಿಧಿ ವಿಧಾನ ಹಾಗೂ ಕಾನೂನು ಪ್ರಕ್ರಿಯೆಗಳ ಮಾಹಿತಿಯನ್ನು ವರದಿಯ ಮೂಲಕ ಸರಕಾರಕ್ಕೆ ಸಲ್ಲಿಸುವ ಸೇವೆಗೈಯಲು ಅವಕಾಶವಾಯಿತು ಹಾಗೂ ಆಂಧ್ರ ಪ್ರದೇಶ ಅಧ್ಯಯನ ವರದಿಯು ತುಳುವನ್ನು ಅಧಿಕೃತ ಭಾಷೆಯಾಗಿ ಘೋಷಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರಕ್ಕೆ ಮಹತ್ವದ ದಾಖಲೆಗಳನ್ನು ಹಾಗೂ ನಿರೂಪಣೆಗಳನ್ನು ಒದಗಿಸಿಕೊಟ್ಟಿತ್ತು ಎಂಬುದನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.ಸಂವಿಧಾನದ 8 ನೇ ಪರಿಚ್ಚೇದಕ್ಕೆ ತುಳು ಸೇರ್ಪಡೆಯಾಗಬೇಕೆಂಬ ತುಳುವರ ಮಹತ್ವದ ಇನ್ನೊಂದು ಬೇಡಿಕೆ ಈಡೇರುವ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ಇಂದಿನ ಈ ಚಾರಿತ್ರಿಕ ನಿರ್ಧಾರವು ಪೂರಕ ಬಲವನ್ನು ತಂದುಕೊಟ್ಟಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಾದೇಶಿಕ ವಾರ್ತೆಗಳು

Abu Dhabi’s Kannada Icon Sarvottam Shetty Most Deserving for Padma Shri After 48 Years of Service; MP MLAs News Report Crosses 1.14 Lakh Views. By Dr Ashok Shetty BN | MP MLAs NEWS SPECIAL REPORT – EXCLUSIVE**Abu Dhabi / Mangaluru, Sep 17

Abu Dhabi/Karnataka :For 48 years in the desert land of Abu Dhabi, one man has kept the Kannada and Tulu culture alive. He is Sarvottam Shetty from Pareeka, Udupi – Founder President of Abu Dhabi Karnataka Sangha.MP MLAs News special report demanding Padma Shri for him has now crossed *1,14,100 views*, with lakhs of Horanadu Kannadigas supporting the demand. Born to Soorappa Hegde and Saraswati Shetty of Pareeka, Sarvottam Shetty completed his studies in Perdoor and Hiriadka, graduated in Commerce from R A Podar College, Mumbai, and was Senate Leader at Mumbai University in 1978.Since then his service has been unbroken.He founded KalaJagathu in Mumbai in 1979, and later founded Abu Dhabi Karnataka Sangha, UAE Bunts Sangha, Tulu Koota and Namma Tuluveru.He is the only person in 55 year history of India Social and Cultural Centre (ISCC), Abu Dhabi to be elected President unanimously twice* – in 1999-2000 and 2002-03. He was Vice President in 1995-96.Since 1997, he has been Member, Board of Governors and Chairman of Education and Sports Division, Abu Dhabi Indian School, guiding 12,000 students.He introduced Throwball in the Gulf and has been running the Koosamma Shambu Shetty Memorial Tournament for 30 years.He was honoured with Karnataka Rajyotsava Award in 1998*. He also received Aryabhata International Award, Mayura Global Kannadiga Award, Hrudaya vantharu Award and Vishwa Tulu Ayano International President honour.Married to Usha Shetty in 1984, he is blessed with son Samarth and daughter Sanyuktha.Kannadigas in UAE say he is the true cultural ambassador who built the community brick by brick.Following the overwhelming public response, MP MLAs News has formally requested Hon’ble Prime Minister Shri Narendra Modi to recommend *Padma Shri Award 2026* to Shri Sarvottam Shetty for his contribution to social work and promotion of Indian culture abroad.Congratulations to Shri Sarvottam Shetty.

Scroll to Top