ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಕ್ರೈಸ್ತ ಧರ್ಮಗುರುಗಳ ದಿನಾಚರಣೆ: ಪಾಲ್ದನೆ ಚರ್ಚ್ ನಲ್ಲಿ ಮೂವರು ಧರ್ಮಗುರುಗಳಿಗೆ ಸನ್ಮಾನ

ಮಂಗಳೂರು: ಕ್ಯಾಥೊಲಿಕರ ಚರ್ಚ್ ಧರ್ಮಗುರುಗಳ ಪೋಷಕ ಸಂತ ಜಾನ್ ಮೇರಿ ವಿಯಾನ್ನಿ ಅವರ ಸ್ಮರಣಾರ್ಥ ಆಗಸ್ಟ್ 4 ನ್ನು ಧರ್ಮಗುರುಗಳ ದಿನವಾಗಿ ಆಚರಿಸಲಾಗುತ್ತದೆ. ಆ ಪ್ರಯುಕ್ತ ಆಗಸ್ಟ್ 9 ರಂದು ಭಾನುವಾರ ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಬಲಿ ಪೂಜೆಯ ಸಂದರ್ಭ ಪ್ರಧಾನ ಧರ್ಮಗುರು ಸೇರಿದಂತೆ ಮೂವರು ಧರ್ಮಗುರುಗಳನ್ನು ಸನ್ಮಾನಿಸಲಾಯಿತು.ಪ್ರಧಾನ ಧರ್ಮ ಗುರು ವಂದನೀಯ ಫಾ ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರನ್ನು ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಸಹಾಯಕ ಧರ್ಮ ಗುರು ವಂದನೀಯ ಫಾ. ಜೋಸೆಫ್ ಕುವೆಲ್ಲೊ ಅವರನ್ನು ಚರ್ಚ್ ನ ಕಾರ್ಯದರ್ಶಿ ರೋಷನ್ ಮೊಂತೇರೊ, ಚರ್ಚ್ ನಲ್ಲಿ ಡಿಯಾಕೋನ್ ಆಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಧರ್ಮಗುರುಗಳಾಗಿ ದೀಕ್ಷೆ ಸ್ವೀಕರಿಸಿ ಇಂದು ಪಾಲ್ದನೆಗೆ ಅತಿಥಿಯಾಗಿ ಆಗಮಿಸಿ ಬಲಿ ಪೂಜೆಯಲ್ಲಿ ಸಹಭಾಗಿತ್ವ ವಹಿಸಿದ ವಂದನೀಯ ಫಾ. ರೋಶ್ವಿನ್ ಲೋಪೆಜ್ ಅವರನ್ನು ಚರ್ಚ್ ನ ಸರ್ವ ಆಯೋಗಗಳ ಸಂಯೋಜಕ ವಿಲಿಯಂ ಲೋಬೊ ಅವರು ಹೂ ಗುಚ್ಛ ನೀಡಿ ಅಭಿನಂದಿಸಿದರು.

ಪ್ರಾದೇಶಿಕ ವಾರ್ತೆಗಳು

ದ. ಕ. ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನಕ್ಕೆ ಪಿಯುಸ್ ಎಲ್. ರೋಡ್ರಿಗಸ್ ಸ್ಪರ್ಧೆ. ವಿಸ್ತಾರ ಜನಸೇವೆಯೇ ಇವರ ಧ್ಯೇಯ, ದಣಿವರಿಯದ ನಿರಾಡಂಬರ ನಾಯಕ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಇನ್ನಷ್ಟು ಬಲಿಷ್ಠವಾಗಿಸಬಲ್ಲ ಅಜಾತ ಶತ್ರು, ಸಮರ್ಥ ಸಂಘಟಕ, ಮಾಸ್ ಲೀಡರ್, ಸೌಹಾರ್ದತೆ, ಸುದೀರ್ಘ ಪಕ್ಷ ನಿಷ್ಠೆಯೇ ಇವರ ಶಕ್ತಿ, MPMLASNEWSTV PUBLIC VIEW BY DR. ASHOK SHETTY B. N.

ಮಂಗಳೂರು: ಸಮಾಜ ಪರ ಚಿಂತಕ, ಬಡವರ ಪರ, ನ್ಯಾಯದ ಪರ ಪ್ರತಿಧ್ವನಿಯಾಗಿ ಬಾಲ್ಯದಲ್ಲೇ ನಾಯಕತ್ವದ ಗುಣಗಳನ್ನು ರಕ್ತಗತವಾಗಿ ಮೈಗೂಡಿಸಿಕೊಂಡಿದ್ದ ನಿಸ್ವಾರ್ಥ ಸಮಾಜ ಸೇವಾ ಮನೋಭಾವದ, ಮಾನವೀಯ ಮೌಲ್ಯಗಳಿಗೆ ಜೀವ ತುಂಬಬಲ್ಲ ಅಲ್ಪಸಂಖ್ಯಾತ ಸಮುದಾಯದ ಸೌಹಾರ್ದ ಜನನಾಯಕ, ಸಂಘಟನಾ ಚತುರ ಪಿಯುಸ್ ಎಲ್ ರೋಡ್ರಿಗಸ್ ಅವರು ಸುಮಾರು 35 ವರ್ಷಗಳ ಹಿಂದೆ ಬಂಟ್ವಾಳದ ಆಗ್ರಾರ್ ಚರ್ಚಿನ ಡಾನ್ ಬೋಸ್ಕೊ ಯುವಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ, ಅವರ ನಾಯಕತ್ವ, ಸಂಘಟನಾ ಸಾಮರ್ಥ್ಯ ಹಾಗೂ ಜನಸೇವೆಯ ಮನೋಭಾವವನ್ನು ಗುರುತಿಸಿದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.ಅಂದಿನಿಂದ ಇಂದಿನವರೆಗೆ ಸುಮಾರು 35 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಜನರ ಪ್ರೀತಿಯ ಜನ ನೇತಾರನಾಗಿ ಹಾಗೂ ಸಮಾಜಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಳಮಟ್ಟದ ಸಾಮಾನ್ಯ ಕಾರ್ಯಕರ್ತರಾಗಿ ಆರಂಭವಾದ ಅವರ ರಾಜಕೀಯ ಪಯಣ ಇಂದು ರಾಜ್ಯಮಟ್ಟದ ನಾಯಕತ್ವದವರೆಗೆ ಬೆಳೆದಿದೆ. ಸಾಮಾನ್ಯ ಎಲೆಕ್ಟ್ರಿಷಿಯನ್ ಆಗಿ ಜೀವನ ಆರಂಭಿಸಿದ ಅವರು ತಮ್ಮ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಹಾಗೂ ದೃಢಸಂಕಲ್ಪದಿಂದ ಲೆವಿನ್ ಎಲೆಕ್ಟ್ರಿಕಲ್ಸ್, ಲೆವಿನ್ ಎಂಜಿನಿಯರಿಂಗ್ಸ್, ಲೆವಿನ್ ಫರ್ನಿಚರ್ಸ್ ಹಾಗೂ ಲೆವಿನ್ ಬೋರ್‌ವೆಲ್ಸ್ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಸುಮಾರು 300ಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿ ನೂರಾರು ಕುಟುಂಬಗಳ ಜೀವನಕ್ಕೆ ಆಧಾರಸ್ಥoಭವಾಗಿದ್ದಾರೆ. ಕೃಷಿ ಕ್ಷೇತ್ರದಲ್ಲಿಯೂ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿ ಮಾದರಿ ಕೃಷಿಕರಾಗಿ ಗುರುತಿಸಿಕೊಂಡಿದ್ದು, ಅನೇಕ ಯುವಕರಿಗೆ ಉದ್ಯೋಗ, ಸ್ವ-ಉದ್ಯೋಗ ಹಾಗೂ ಸಮಾಜಸೇವೆಯತ್ತ ಪ್ರೇರಣೆಯಾಗಿದ್ದಾರೆ.ಸ್ಥಳೀಯ ಪಂಚಾಯತ್, ಪುರಸಭೆ, ಬಂಟ್ವಾಳ ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹಗಲು–ರಾತ್ರಿ ಶ್ರಮಿಸಿ, ಕಾರ್ಯಕರ್ತರನ್ನು ಸಂಘಟಿಸಿ, ಪಕ್ಷದ ಬಲವರ್ಧನೆಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಪ್ರಸ್ತುತ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಸದಸ್ಯರಾಗಿದ್ದು,ಈ ಹಿಂದೆ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ,ಮಾಜಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರಾಗಿ ,ಬಂಟ್ವಾಳ ನಗರ ಅಭಿವೃದ್ಧಿ ಪ್ರಾಧಿಕಾರದ (ಬೂಡಾ) ಮಾಜಿ ಅಧ್ಯಕ್ಷರಾಗಿ ಹಾಗೂ ಬಂಟ್ವಾಳ ಕಂಬಳ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಸುಮಾರು 35 ವರ್ಷಗಳ ರಾಜಕೀಯ ಅನುಭವದೊಂದಿಗೆ, ಹಳ್ಳಿಯ ಸಾಮಾನ್ಯ ಕಾರ್ಯಕರ್ತರಿಂದ ದೆಹಲಿಯ ರಾಷ್ಟ್ರೀಯ ಮಟ್ಟದ ಕಾಂಗ್ರೆಸ್ ನಾಯಕರವರೆಗೆ ಉತ್ತಮ ಒಡನಾಟ ಮತ್ತು ವಿಶ್ವಾಸಾರ್ಹ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ. ಪಕ್ಷದ ಸಂಘಟನೆ, ಕಾರ್ಯಕರ್ತರು ಮತ್ತು ಜನಸೇವೆಯೇ ಅವರ ರಾಜಕೀಯ ಬದುಕಿನ ಮೂಲಾಧಾರವಾಗಿದೆ.ಜನಪರ ಹೋರಾಟಗಳು, ಪಾದಯಾತ್ರೆಗಳು, ಪ್ರತಿಭಟನೆಗಳು ಹಾಗೂ ಕಾಂಗ್ರೆಸ್ ಪಕ್ಷದ ವಿವಿಧ ಸಂಘಟನಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸಾವಿರಾರು ಕಾರ್ಯಕರ್ತರು ಮತ್ತು ಯುವಕರನ್ನು ಸಂಘಟಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಜನರ ಸಮಸ್ಯೆಗಳಿಗೆ ಧ್ವನಿಯಾಗಿ, ಪಕ್ಷದ ತತ್ವ–ಸಿದ್ಧಾಂತಗಳನ್ನು ತಳಮಟ್ಟಕ್ಕೆ ತಲುಪಿಸುವ ಕಾರ್ಯದಲ್ಲಿ ಸದಾ ಮುಂಚೂಣಿಯಲ್ಲಿದ್ದಾರೆ.ಬಂಟ್ವಾಳ ಕಂಬಳದ ಅಧ್ಯಕ್ಷರಾಗಿ ಕಂಬಳ ಸಂಸ್ಕೃತಿಯ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿದ್ದು, ಅವರ ಆಹ್ವಾನವನ್ನು ಸ್ವೀಕರಿಸಿ ಅಂದಿನ ಮುಖ್ಯಮಂತ್ರಿ (ಈಗ ಮಾಜಿ ಮುಖ್ಯಮಂತ್ರಿ) ಸಿದ್ದರಾಮಯ್ಯ ಅವರು ಬಂಟ್ವಾಳ ಕಂಬಳಕ್ಕೆ ಆಗಮಿಸಿ, ಪಿಯುಸ್ ಎಲ್. ರೋಡ್ರಿಗಸ್ ಅವರ ನಿವಾಸಕ್ಕೆ ಭೇಟಿ ನೀಡಿದ್ದು ಬಂಟ್ವಾಳದ ಜನರಿಗೆ, ಕಂಬಳ ಪ್ರಿಯರಿಗೆ, ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಹೆಮ್ಮೆಯ ಮತ್ತು ಸ್ಮರಣೀಯ ಕ್ಷಣವಾಗಿದೆ.ಗೃಹಲಕ್ಷ್ಮಿ, ಗೃಹಜ್ಯೋತಿ ಹಾಗೂ SIR ಫಾರ್ಮ್ ಅಭಿಯಾನ ಸೇರಿದಂತೆ ಸರ್ಕಾರದ ಜನಪರ ಯೋಜನೆಗಳನ್ನು ಗ್ರಾಮ–ಗ್ರಾಮ, ಮನೆ–ಮನೆಗೆ ತಲುಪಿಸುವಲ್ಲಿ ಅವರು ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಾಮಾನ್ಯ ಕಾರ್ಯಕರ್ತರು, ಯುವಕರ ತಂಡಗಳು, ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಾವಿರಾರು ಜನರಿಗೆ ನೆರವಾಗುವ ಮೂಲಕ ಜನಸೇವೆಗೆ ಹೊಸ ಆಯಾಮ ನೀಡಿದ್ದಾರೆ. ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲರೊಂದಿಗೆ ಬೆರೆತು ಜನರ ಕಷ್ಟ–ಸುಖಗಳಿಗೆ ಸ್ಪಂದಿಸುವ ಅವರ ಸೇವೆ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಗಳಿಸಿದೆ.ಸರಳತೆ, ಪ್ರಾಮಾಣಿಕತೆ, ನಿಸ್ವಾರ್ಥ ಸೇವೆ, ಸಂಘಟನಾ ಸಾಮರ್ಥ್ಯ, ದೂರದೃಷ್ಟಿಯ ನಾಯಕತ್ವ ಹಾಗೂ ಜನಪರ ಕಾಳಜಿಯಿಂದ ಜನರ ಅಪಾರ ಪ್ರೀತಿ ಮತ್ತು ವಿಶ್ವಾಸ ಗಳಿಸಿರುವ ಪಿಯುಸ್ ಎಲ್. ರೋಡ್ರಿಗಸ್ ಅವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇರಬೇಕಾದ ಸರ್ವ ಅರ್ಹತೆಗಳೊಂದಿಗೆ ಅಪಾರ ರಾಜಕೀಯ ಅನುಭವ ಹಾಗೂ ನಾಯಕತ್ವ ಗುಣ ಹೊಂದಿರುವ ಜನ ನಾಯಕರಾಗಿದ್ದಾರೆ ಎಂಬುದು ಬಂಟ್ವಾಳ ತಾಲೂಕಿನ ಸೇರಿದಂತೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳ ವಿಶ್ವಾಸ ಮತ್ತು ಆಶಯವಾಗಿದೆ. ಪಿಯುಸ್ ಎಲ್. ರೋಡ್ರಿಗಸ್ ಅವರು ದ. ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂದು ತುಂಬಾ ಮಂದಿ ಕಾಂಗ್ರೆಸ್ ಕಾರ್ಯಕರ್ತರು ಹೇಳಿದ್ದಾರೆ.MPMLASNEWSTV ಈ ಬಗ್ಗೆ 7 ತಿಂಗಳ ಹಿಂದೆಯೇ ಜನಾಭಿಪ್ರಾಯವನ್ನು ಆಧರಿಸಿ ದ. ಕ. ಜಿಲ್ಲಾ ಕಾಂಗ್ರೆಸ್ ಗೆ ಪಿಯುಸ್ ಎಲ್. ರೋಡ್ರಿಗಸ್ ಅವರೇ ಜಿಲ್ಲಾಧ್ಯಕ್ಷರಾಗಲಿ. ಸಮರ್ಥ ಮತ್ತು ಅರ್ಹರೆಂದು ಪಬ್ಲಿಕ್ ವ್ಯೂ ವರದಿ ಪ್ರಕಟಿಸಿತ್ತು. ಪಿಯುಸ್ ಎಲ್ರೋಡ್ರಿಗಸ್ ಅವರು ದ. ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡರೆ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗುವುದರಲ್ಲಿ ಅನುಮಾನವೇ ಇಲ್ಲ.ಅವರಿಗೆ ಆಲ್ ದಿ ಬೆಸ್ಟ್.

ಪ್ರಾದೇಶಿಕ ವಾರ್ತೆಗಳು

‘Routledge’ Releases Groundbreaking Book on Untouchability in Contemporary India

Mangalore, 7 August 2026: ‘Routledge’ has published and released ‘Untouchability in 21st Century India’, a pioneering new book by legal scholar Dr. Preethi Lolaksha Nagaveni, of Mangalore origin, offering a comprehensive legal and human rights analysis of the continued existence of untouchability in modern India.The book examines two of the most significant contemporary manifestations of untouchability—manual scavenging and caste-based discrimination in higher educational institutions. Challenging the widespread perception that untouchability belongs to India’s past, Dr. Preethi argues that the inhuman practice continues to exist in both visible and subtle forms despite constitutional guarantees and legislative safeguards. Drawing upon extensive doctrinal and socio-legal research, including interviews with a wide range of stakeholders, the author demonstrates that untouchability continues to affect both, the most deprived, economically marginalised sections of Dalit communities, particularly manual scavengers, as well as highly educated Dalit students and academics within institutions of higher education.The study is regarded as a rare and significant contribution to scholarship on caste discrimination. While numerous works have examined untouchability from sociological, political and historical perspectives, ‘Untouchability in 21st Century India’ is among the first book-length studies to analyse the subject primarily through the lens of international human rights law. The book argues that untouchability should not be viewed solely as a social, economic, political or cultural issue, but also as a legal one, exposing the limitations of existing legal mechanisms in eradicating the practice. Dr. Preethi’s wider academic and policy engagement has attracted international recognition. Her oral and written submissions have contributed to discussions before United Nations human rights mechanisms, the UK Parliament and the New Zealand Parliament. Among her notable interventions is an oral statement before a United Nations CEDAW highlighting the persistent human rights violations faced by manual scavengers, underscoring the global relevance of the issues explored in her latest publication. Her other interventions include advocating for the Persons With Disability, Women and Children. Her work has been cited by the United Nations Committee on the Rights of the Child, and Parliament Committees of House of Lords and House of Commons, UK.An accomplished legal academic, Dr. Preethi has authored 19 peer-reviewed journal articles and five peer-reviewed book chapters with internationally recognised publishers. Her chapter on the International Health Regulations, published by Oxford University Press, is listed in the World Health Organization’s COVID-19 Research Database. In addition, two of her journal articles and two book chapters have been indexed in the catalogue of the United Nations Office Library in Geneva. The present book is kept in the catalogue of British Library, LondonWith Untouchability in 21st Century India, Dr. Preethi makes a significant contribution to contemporary legal scholarship on caste, human rights and equality. The book is expected to be of considerable interest to academics, policymakers, legal practitioners, human rights organisations and anyone seeking to understand the continuing realities of caste-based discrimination in twenty-first-century India.The book is available in official Routledge website, routledge.com and amazon.in

ಪ್ರಾದೇಶಿಕ ವಾರ್ತೆಗಳು

‘ರೌಟ್ಲೆಜ್’ ನಿಂದ ಮಹತ್ವದ ಪುಸ್ತಕ ಬಿಡುಗಡೆ: ’21ನೇ ಶತಮಾನದ ಭಾರತದಲ್ಲಿ ಅಸ್ಪೃಶ್ಯತೆ’

ಮಂಗಳೂರು, ಆಗಸ್ಟ್ 7: ಮಂಗಳೂರು ಮೂಲದ ಕಾನೂನು ತಜ್ಞೆ ಡಾ. ಪ್ರೀತಿ ಲೋಲಾಕ್ಷ ನಾಗವೇಣಿ ಅವರ Untouchability in 21st Century India (21ನೇ ಶತಮಾನದ ಭಾರತದಲ್ಲಿ ಅಸ್ಪೃಶ್ಯತೆ) ಕೃತಿಯನ್ನು ಜಾಗತಿಕ ಖ್ಯಾತಿಯ ಪ್ರಕಾಶನ ಸಂಸ್ಥೆ ‘ರೌಟ್ಲೆಜ್’ ಪ್ರಕಟಿಸಿ ಇಂದು ಬಿಡುಗಡೆ ಮಾಡಿದೆ.ಆಧುನಿಕ ಭಾರತದಲ್ಲಿ ಅಸ್ಪೃಶ್ಯತೆ ಇನ್ನೂ ಮುಂದುವರಿದಿರುವ ವಾಸ್ತವಿಕತೆಯನ್ನು ಕಾನೂನು ಹಾಗೂ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದೃಷ್ಟಿಕೋನದಿಂದ ವಿಶ್ಲೇಷಿಸಿರುವ ಅಪರೂಪದ ಸಂಶೋಧನಾ ಕೃತಿ ಇದಾಗಿದೆ. ಈ ಕೃತಿಯಲ್ಲಿ ಅಸ್ಪೃಶ್ಯತೆಯ ಎರಡು ಪ್ರಮುಖ ಸಮಕಾಲೀನ ರೂಪಗಳಾದ ಮ್ಯಾನುಯಲ್ ಸ್ಕ್ಯಾವೆಂಜಿಂಗ್ (ಕೈಯಾರೆ ಮಲ ವಿಲೇವಾರಿ) ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯ ಕುರಿತಾಗಿ ಆಳವಾದ ಅಧ್ಯಯನ ನಡೆಸಲಾಗಿದೆ. ಅಸ್ಪೃಶ್ಯತೆ ಭಾರತದ ಇತಿಹಾಸದ ಭಾಗವಾಗಿಬಿಟ್ಟಿದೆ ಎಂಬ ಸಾಮಾನ್ಯ ನಂಬಿಕೆಯನ್ನು ಪ್ರಶ್ನಿಸಿರುವ ಲೇಖಕಿ, ಸಂವಿಧಾನಾತ್ಮಕ ಖಾತರಿಗಳು ಹಾಗೂ ಕಾನೂನುಗಳಿದ್ದರೂ ಸಹ ಅಸ್ಪೃಶ್ಯತೆ ಇಂದು ಬಹಿರಂಗವಾಗಿಯೂ, ಸೂಕ್ಷ್ಮ ಹಾಗೂ ಪರೋಕ್ಷ ರೂಪಗಳಲ್ಲಿಯೂ ಮುಂದುವರಿದಿದೆ ಎಂದು ಪ್ರತಿಪಾದಿಸಿದ್ದಾರೆ.ಸಮಗ್ರ ಕಾನೂನು ಅಧ್ಯಯನ, ಸಾಮಾಜಿಕ-ಕಾನೂನು ಸಂಶೋಧನೆ ಹಾಗೂ ವಿವಿಧ ಹಿತಾಸಕ್ತಿದಾರರೊಂದಿಗೆ ನಡೆಸಿದ ಸಂದರ್ಶನಗಳ ಆಧಾರದ ಮೇಲೆ ರಚಿಸಲಾದ ಈ ಕೃತಿ, ಅಸ್ಪೃಶ್ಯತೆ ಕೇವಲ ಸಮಾಜದ ಅತ್ಯಂತ ಅವಮಾನಿತ, ಶೋಷಿತ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳನ್ನಷ್ಟೇ ಅಲ್ಲದೆ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ಹಾಗೂ ಕಾರ್ಯನಿರ್ವಹಿಸುತ್ತಿರುವ ವಿದ್ಯಾವಂತ ದಲಿತ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನೂ ಬಾಧಿಸುತ್ತಿದೆ ಎಂಬುದನ್ನು ದಾಖಲಿಸುತ್ತದೆ.ದಲಿತರ ಮೇಲಿನ ತಾರತಮ್ಯ ಕುರಿತು ಸಮಾಜಶಾಸ್ತ್ರೀಯ, ರಾಜಕೀಯ ಹಾಗೂ ಐತಿಹಾಸಿಕ ಅಧ್ಯಯನಗಳು ಸಾಕಷ್ಟು ನಡೆದಿದ್ದರೂ, ಅಸ್ಪೃಶ್ಯತೆಯನ್ನು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ದೃಷ್ಟಿಕೋನದಿಂದ ವಿಶ್ಲೇಷಿಸಿರುವ ಅಪರೂಪದ ಕೃತಿ ಇದಾಗಿದೆ. ಅಸ್ಪೃಶ್ಯತೆಯನ್ನು ಕೇವಲ ಸಾಮಾಜಿಕ, ಆರ್ಥಿಕ, ರಾಜಕೀಯ ಅಥವಾ ಸಾಂಸ್ಕೃತಿಕ ಸಮಸ್ಯೆಯಾಗಿ ಮಾತ್ರವಲ್ಲದೆ, ಕಾನೂನು ವ್ಯವಸ್ಥೆಯ ವೈಫಲ್ಯವನ್ನೂ ಪ್ರತಿಬಿಂಬಿಸುವ ಗಂಭೀರ ಕಾನೂನು ಸಮಸ್ಯೆಯಾಗಿ ಈ ಕೃತಿ ವಿಶ್ಲೇಷಿಸುತ್ತದೆ.ಡಾ. ಪ್ರೀತಿಯವರ ಶೈಕ್ಷಣಿಕ ಸಂಶೋಧನೆ ಮತ್ತು ಸಾರ್ವಜನಿಕ ನೀತಿ ಕ್ಷೇತ್ರದ ಕೊಡುಗೆಗಳು ಈಗಾಗಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ. ಅವರು ಸಲ್ಲಿಸಿದ ಮೌಖಿಕ ಹಾಗೂ ಲಿಖಿತ ಹೇಳಿಕೆಗಳು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವ್ಯವಸ್ಥೆಗಳು, ಯುನೈಟೆಡ್ ಕಿಂಗ್‌ಡಮ್ ಸಂಸತ್ತು ಹಾಗೂ ನ್ಯೂಜಿಲೆಂಡ್ ಸಂಸತ್ತಿನ ಚರ್ಚೆಗಳಲ್ಲಿ ಮಹತ್ವದ ಪಾತ್ರ ವಹಿಸಿವೆ. ವಿಶ್ವಸಂಸ್ಥೆಯ ‘ಮಹಿಳಾ ವಿರೋಧಿ ತಾರತಮ್ಯ ನಿರ್ಮೂಲನಾ ಸಮಿತಿ’ಯ ಮುಂದೆ ಅವರು ಮಂಡಿಸಿದ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳು ಎದುರಿಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಕುರಿತ ಹೇಳಿಕೆ ವಿಶೇಷ ಗಮನ ಸೆಳೆದಿತ್ತು. ಇದಲ್ಲದೆ, ಮಹಿಳೆಯರು, ಮಕ್ಕಳು ಹಾಗೂ ಅಂಗವಿಕಲರ ಹಕ್ಕುಗಳ ಪರವಾಗಿಯೂ ಅವರು ವಿಶ್ವಸಂಸ್ಥೆಯ ವೇದಿಕೆಗಳಲ್ಲಿ ಧ್ವನಿಯೆತ್ತಿದ್ದಾರೆ. ಅವರ ಸಂಶೋಧನಾ ಕೃತಿಗಳನ್ನು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮಿತಿ ಹಾಗೂ ಯುನೈಟೆಡ್ ಕಿಂಗ್‌ಡಮ್‌ನ ಹೌಸ್ ಆಫ್ ಲಾರ್ಡ್ಸ್ ಮತ್ತು ಹೌಸ್ ಆಫ್ ಕಾಮನ್ಸ್ ಸಂಸದೀಯ ಸಮಿತಿಗಳು ಉಲ್ಲೇಖಿಸಿವೆ.ಡಾ. ಪ್ರೀತಿ ಇದುವರೆಗೆ 19 ಪೀರ್-ರಿವ್ಯೂಡ್ ಸಂಶೋಧನಾ ಲೇಖನಗಳು ಹಾಗೂ ಐದು ಪೀರ್-ರಿವ್ಯೂಡ್ ಪುಸ್ತಕ ಅಧ್ಯಾಯಗಳನ್ನು ಅಂತರರಾಷ್ಟ್ರೀಯ ಖ್ಯಾತಿಯ ಪ್ರಕಾಶಕರು ಪ್ರಕಟಿಸಿದ್ದಾರೆ. ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿರುವ ಇಂಟರ್ನ್ಯಾಷನಲ್ ಹೆಲ್ತ್ ರೆಗ್ಯುಲೇಶನ್ಸ್ ಕುರಿತ ಅವರ ಪುಸ್ತಕ ಅಧ್ಯಾಯವು ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ -19 ರಿಸರ್ಚ್ ಡಾಟಾಬೇಸ್ ನಲ್ಲಿ ಸ್ಥಾನ ಪಡೆದಿದೆ. ಅಲ್ಲದೆ, ಅವರ ಎರಡು ಸಂಶೋಧನಾ ಲೇಖನಗಳು ಮತ್ತು ಎರಡು ಪುಸ್ತಕ ಅಧ್ಯಾಯಗಳು ವಿಶ್ವಸಂಸ್ಥೆಯ ಜಿನೀವಾ ಕಚೇರಿಯ ಗ್ರಂಥಾಲಯದ ಕ್ಯಾಟಲಾಗ್ನಲ್ಲಿ ಸೂಚ್ಯಂಕಗೊಂಡಿವೆ. ’21ನೇ ಶತಮಾನದ ಭಾರತದಲ್ಲಿ ಅಸ್ಪೃಶ್ಯತೆ’ ಪುಸ್ತಕವು ಲಂಡನ್ ನಲ್ಲಿರುವ ಬ್ರಿಟಿಷ್ ಲೈಬ್ರೆರಿಯ ಕ್ಯಾಟ್ ಲಾಗ್ ನಲ್ಲಿ ಸೂಚ್ಯಂಕಗೊಂಡಿದೆ ಎಂದು ರೌಟ್ಲೆಜ್ ಪ್ರಕಟಿಸಿದೆ.ಮಾನವ ಹಕ್ಕುಗಳು, ಸಮಾನತೆ, ಜಾತಿ ತಾರತಮ್ಯ ಹಾಗೂ ಭಾರತೀಯ ಕಾನೂನು ವ್ಯವಸ್ಥೆಯ ಕುರಿತು ಗಂಭೀರ ಅಧ್ಯಯನ ನಡೆಸುವ ಸಂಶೋಧಕರು, ನೀತಿ ರೂಪಿಸುವವರು, ಕಾನೂನು ವೃತ್ತಿಪರರು ಹಾಗೂ ವಿದ್ಯಾರ್ಥಿಗಳಿಗೆ ‘ಅನ್ಟಚೆಬಿಲಿಟಿ ಇನ್ 21ಸ್ಟ್ ಸೆಂಚುರಿ ಇಂಡಿಯಾ’ ಒಂದು ಮಹತ್ವದ ಆಕರಗ್ರಂಥವಾಗಲಿದೆ ಎಂದು ನಿರೀಕ್ಷಿಸಲಾಗಿದೆ.ಈ ಪುಸ್ತಕವು ರೌಟ್ಲೆಜ್ ವೆಬ್ ಸೈಟ್ ಮತ್ತು ಅಮೆಜಾನ್ ನಲ್ಲಿ ಲಭ್ಯವಿದೆ.

ಪ್ರಾದೇಶಿಕ ವಾರ್ತೆಗಳು

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಕೇಂದ್ರ ಸಂಘ, ಬೆಂಗಳೂರು ಇದರ ಜಿಲ್ಲಾ ಶಾಖೆ, ದಕ್ಷಿಣ ಕನ್ನಡ, ಮಂಗಳೂರು ಇದರ ಅಧ್ಯಕ್ಷರಾಗಿ ಯೋಗೀಶ್ ದೇವಾಡಿಗ, ಗೌರವಾಧ್ಯಕ್ಷರಾಗಿ ನಗರದ ಖ್ಯಾತ ಮೂತ್ರ ಶಾಸ್ತ್ರ ತಜ್ಞ, ಕರ್ನಾಟಕ ಸರಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಜನಪ್ರಿಯ ವೈದ್ಯ, ವೆನ್ ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯ ಮೂತ್ರರೋಗ ವಿಭಾಗದ ಮುಖ್ಯಸ್ಥ ಡಾ. ಸದಾನಂದ ಪೂಜಾರಿ

ಪ್ರಾದೇಶಿಕ ವಾರ್ತೆಗಳು

ಮಾನವೀಯ ಮೌಲ್ಯಗಳಿಗೆ ಜೀವ ತುಂಬುವ ಲೋಕೋಪಕಾರಿ, ಜನಪರ ಚಿಂತಕ, ನೇರ ನಡೆ ನುಡಿಯ ಸರದಾರ, ನಿರ್ಭೀತ ಮಾತಿನ ಹೃದಯಸ್ಪರ್ಶಿ ವಾಗ್ಮಿ, ನಿಸ್ವಾರ್ಥ ಸಮಾಜ ಸೇವಕ, ಕೊಡುಗೈ ದಾನಿ, ಬಂಟ ಸಮಾಜದ ಪ್ರತಿಷ್ಠಿತ ಯಶಸ್ವಿ ಉದ್ಯಮಿ, ಸೌಹಾರ್ದ ನಾಯಕ ಶಶಿಧರ್ ಶೆಟ್ಟಿ ಬರೋಡ ಅವರಿಗೆ Mp mla’s News ನಿಂದ ಹುಟ್ಟುಹಬ್ಬದ ಶುಭಾಶಯಗಳು.

ಮಂಗಳೂರು – ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕ, ಸೂಪರ್ ಹಿಟ್ ಕನ್ನಡ ಚಲನಚಿತ್ರ ಸು ಫ್ರಮ್ ಸೋ ದ ಸಹ ನಿರ್ಮಾಪಕ, ಬರೋಡ ತುಳು ಸಂಘದ ಅಧ್ಯಕ್ಷರಾಗಿದ್ದ ಶಶಿಧರ್ ಶೆಟ್ಟಿ ಬರೋಡ ಅವರಿಗೆ Mp mla’s news ಸಂಪಾದಕ ಡಾ, ಅಶೋಕ್ ಶೆಟ್ಟಿ ಬಿ. ಎನ್ ಅವರು ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸಿದ್ದಾರೆ. ವೇದಿಕೆಯಲ್ಲಿ ಭಾಷಣ ಮಾಡಲು ನಿಂತರೆ ನೇರನುಡಿಗಳಿಂದ , ಅದ್ಭುತವಾಗಿ, ಹೃದಯಸ್ಪರ್ಶಿಯಾಗಿ ಜನರ ಮನಸ್ಸು ಮುಟ್ಟುವಂತೆ ಮಾತಾಡಬಲ್ಲ ಶಶಿಧರ್ ಶೆಟ್ಟಿ ಬರೋಡ ಅವರು ಆಡಂಬರ ಮತ್ತು ಪ್ರಚಾರ ಬಯಸಿ ಸಮಾಜ ಸೇವೆ ಮಾಡಿದವರಲ್ಲ. ಸಮಾಜ ಸೇವೆ ಎಂಬುದು ಅವರಿಗೆ ರಕ್ತಗತವಾಗಿ ಬಂದಿದೆ. ಅವರ ನಿರಾಡಂಬರ ವ್ಯಕ್ತಿತ್ವ ಯುವ ಜನರಿಗೆ ಸ್ಪೂರ್ತಿಯಾಗಿದೆ. ಶಶಿಧರ್ ಶೆಟ್ಟಿ ಬರೋಡ ಅವರು ಶಶಿಯಣ್ಣಎಂದೇ ಜನಜನಿತರಾಗಿದ್ದಾರೆ. ಅರ್ಹರನ್ನು ಗುರುತಿಸಿ ಸಮಾಜ ಸೇವೆ ಮಾಡುವ ಅವರು ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಗುರುವಾಯನಕೆರೆಯವರು. 1992ರಲ್ಲಿ ಗುಜರಾತ್ ನ ಬರೋಡದಲ್ಲಿ ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಎಂಬ ಉದ್ಯಮ ಸಂಸ್ಥೆ ಆರಂಭಿಸಿ ಸಾವಿರಾರು ಉದ್ಯೋಗಿಗಳಿಗೆ ಅನ್ನದಾತರಾಗಿ ಉದ್ಯಮರಂಗದಲ್ಲಿ ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರಿ ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡ ಮಹಾನ್ ಸಾಧಕ, ಸಮಾಜಪರ ಚಿಂತನೆಯ ಜನಸೇವಕ,ಬಡವರ ಬಂಧು, ಸಮಾಜ ರತ್ನ,ಕರುಣಾಮಯಿ ಶಶಿಧರ್ ಶೆಟ್ಟಿ ಬರೋಡ ಅವರು ಯಾವುದೇ ಪ್ರಶಸ್ತಿ, ಬಿರುದು, ಸನ್ಮಾನ ಬಯಸದ ಉದ್ಯಮರಂಗದ ಸೂಪರ್ ಸ್ಟಾರ್. ಸಮಾಜ ಕಂಡ ಅಪ್ಪಟ ಅಪರಂಜಿ ಮತ್ತು ಜನ ಮೆಚ್ಚಿದ ಸಮಾಜ ಸೇವಕ. ತುಳುನಾಡಿನ ಹೆಮ್ಮೆಯ ಸುಪುತ್ರ.ಅವರಿಗೆ ಅಪಾರ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸಿದ್ದಾರೆ. Mp MLA’s news ಕೂಡಾ ಶುಭಾಶಯ ಸಲ್ಲಿಸುತ್ತಿದೆ . ಶಶಿಯಣ್ಣ ಇರೆಗ್ ಎಂಕ್ಲೆನ ಉಡಲ್ ದಿಂಜಿನಾ ಪುಟ್ಟು ಪರ್ಬದ ಶುಭಾಶಯಲು ❤️🙏

ಪ್ರಾದೇಶಿಕ ವಾರ್ತೆಗಳು

ಕದ್ರಿಯಲ್ಲಿ ಸಂಸ್ಕೃತಿ ಸಂಭ್ರಮ.

ಸಂಸ್ಕೃತಿ ಎಂದರೆ ಮಾನವನು ತನ್ನ ಜೀವನವನ್ನು ಸುಧಾರಿಸಲು ಹಾಗೂ ಸಮಾಜದಲ್ಲಿ ಒಗ್ಗಟ್ಟಿನಿಂದ ಬಾಳಲು ರೂಢಿಸಿಕೊಂಡಿರುವ ಜ್ಞಾನ, ನಂಬಿಕೆ, ಕಲೆ ಆಚಾರ ವಿಚಾರ, ಸಂಪ್ರದಾಯ ಮತ್ತು ಮೌಲ್ಯಗಳ ಒಟ್ಟು ಮೊತ್ತ ಎಂದು ವೈಟ್ ಲೋಟಸ್ ಫೌಂಡೇಶನ್ ಅಧ್ಯಕ್ಷೆ ಪ್ರಮೀಳಾ ಮನೂರು ಹೇಳಿದರು.ಅವರು ರಾಷ್ಟೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ದಿ ಪ್ರತಿಷ್ಠಾನ ಮಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕದ್ರಿಯಲ್ಲಿ ಆಯೋಜಿಸಿದ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಸ್ಕೃತಿಯು ವಂಶ ಪಾರಂಪರ್ಯವಾಗಿ ಬರುವುದಿಲ್ಲ. ಸಮಾಜದಲ್ಲಿ ಬದುಕುತ್ತಾ ಕಲಿಯುವಂತದ್ದು. ಇದು ಒಬ್ಬ ವ್ಯಕ್ತಿಗೆ ಸೀಮಿತವಾಗಿರುವುದಿಲ್ಲ. ಸಮುದಾಯದ ಎಲ್ಲರೂ ಇದನ್ನು ಹಂಚಿಕೊಳ್ಳುತ್ತಾರೆ. ಸಂಸ್ಕೃತಿ ನಿರಂತರವಾಗಿ ಬದಲಾಗುತ್ತಿರುತ್ತದೆ.ಸಂಸ್ಕಾರವು ಸಮಾಜದಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬ ನೈತಿಕ ಮೌಲ್ಯವನ್ನು ಕಲಿಸುತ್ತದೆ. ಹಿಂದಿನ ಇತಿಹಾಸ ಕಲೆ ಮತ್ತು ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುತ್ತದೆ. ಮತ್ತು ಸಂಪ್ರದಾಯಗಳ ಮೂಲಕ ಜನರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.ಇಂತಹ ಕಾರ್ಯಕ್ರಮ ವನ್ನು ಆಯೋಜಿಸಿದ ರಾಷ್ಟೀಯ ಸಾಮಾಜಿಕ ಸಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ದ ಅಧ್ಯಕ್ಷ ಗಂಗಾಧರ ಗಾಂಧಿ ಮತ್ತು ಬಳಗದವರ ಕಾರ್ಯ ಶ್ಲಾಘನಿಯ ಎಂದರು.NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಅಧ್ಯಕ್ಷತೆ ವಹಿಸಿದ್ದು ಮುಖ್ಯ ಅತಿಥಿಗಳಾಗಿದ್ದ ಇನ್ಫೋಸಿಸ್ ಲೆಕ್ಕ ಪರಿಶೋಧಕಿ ಶ್ರೀಮತಿ ರಶ್ಮಿ ಸನಿಲ್ ಮಾತನಾಡಿ ನಾನು ನೂರಾರು ಕಾರ್ಯಕ್ರಮ ನಿರೂಪಣೆ ಮಾಡಿದ್ದೇನೆ ಆದರೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ಇದೇ ಮೊದಲು ಎಂದು ಹೇಳಿದ ಅವರು ಇದು ನನ್ನ ಜೀವನದ ಅವಿಸ್ಮರಣೀಯ ಕಾರ್ಯಕ್ರಮ ಎಂದು ಹೇಳಿದರು. ಉಪನ್ಯಾಸಕ ರಾಮಾಂಜಿ ನಮ್ಮ ಭೂಮಿ ಮಾತನಾಡಿ ಸಂಸ್ಕೃತಿ ಸಂಭ್ರಮದಂತಹ ಕಾರ್ಯಕ್ರಮಗಳು ಜಗತ್ತಿನಾದ್ಯoತ ನಡೆಯ ಬೇಕು ಎಂದು ಅಭಿಪ್ರಾಯ ಪಟ್ಟರು ಉಪಸ್ಥಿತರಿದ್ದರು.ಕು. ಶರಣ್ಯ ಬೆಳುವಾಯಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಆಯಿಷಾ ಪೆರ್ನೆ, ಜಯಂತಿ ಎಸ್. ನಂದಳಿಕೆ ಕಾರ್ಕಳ, ಆಂಟೋನಿ ಲೂಯಿಸ್ ಮಣಿಪಾಲ, ಪ್ರಶಾಂತ್ ಆಚಾರ್ಯ ಎಡಪದವು, ಗಿರೀಶ್ ಪೆರಿಯಡ್ಕ, ಎಂ.ಎ.ಮುಸ್ತಫಾ ಬೆಳ್ಳಾರೆ, ಸುಳ್ಯ, ಸುಮಯ್ಯಾ ಎಂ ಪಾಟೀಲ್, ಮಾನಸ ಪ್ರವೀಣ್ ಭಟ್, ಮೂಡಬಿದ್ರೆ, ರಶ್ಮಿ ಸನಿಲ್, ಕಸ್ತೂರಿ ಜಯರಾಮ್, ಆಕೃತಿ ಐ ಎಸ್ ಭಟ್, ಮಂಗಳೂರು, ನಿಶಾನ್ ಅಂಚನ್ ಮೊದಲಾದ ಕವಿಗಳು ತಮ್ಮ ಚುಟುಕು ವಾಚಿಸಿದರು.ಗಡಿನಾಡು ಸಾಂಸ್ಕೃತಿಕ ಕಲಾ ವೇದಿಕೆ ಕಾಸರಗೋಡು ನಡೆಸಿಕೊಟ್ಟ ವಿವಿಧ ನೃತ್ಯಗಳು ಜನಮನ ಸೂರೆಗೊಂಡವು.ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಆಯಿಷಾ ಪೆರ್ನೆ ನಿರೂಪಿಸಿದರೇ , ಕವಿಗೋಷ್ಠಿ ನಿರೂಪಣೆಯನ್ನು ರಶ್ಮಿ ಸನಿಲ್ ಮಾಡಿದರು, ರಾಣಿ ಪುಷ್ಪಲತಾ ದೇವಿ ವಂದಿಸಿದರು.ಗುರುರಾಜ್ ಕಾಸರಗೋಡು ಸಾರಥ್ಯದ ಗಡಿನಾಡು ಸಾಂಸ್ಕೃತಿಕ ಕಲಾ ವೇದಿಕೆ ಕಲಾವಿದರಿಂದ ಗೀತಾ ನೃತ್ಯ ಕಾರ್ಯಕ್ರಮ ನೆರದ ಪ್ರೇಕ್ಷಕರ ಮನಸೊರೆಗೊಂಡಿತು.

ಪ್ರಾದೇಶಿಕ ವಾರ್ತೆಗಳು

ಸಂತ ಅನ್ಸ್ ಪ್ರೌಢ ಶಾಲಾ ಮುಂಭಾಗದಲ್ಲಿ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಟ್ಟದ ಬಾಲಕ -ಬಾಲಕಿಯರ ಚದುರಂಗ ಪಂದ್ಯಾಟದ ಉದ್ಘಾಟನೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ಉತ್ತರ ವಲಯ ಹಾಗೂ ಸಂತ ಆನ್ಸ್ ಪ್ರೌಢಶಾಲೆ, ಬೋಳಾರ್, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 2026/2027 ನೇ ಸಾಲಿನ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಚದುರಂಗ ಪಂದ್ಯಾಟದ ಉದ್ಘಾಟನಾ ಸಮಾರಂಭವು ಸಂತ ಆನ್ಸ್ ಪ್ರೌಢಶಾಲೆಯ ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಆನ್ಸ್ ಸಮೂಹ ವಿದ್ಯಾ ಸಂಸ್ಥೆಗಳ ಜಂಟಿ ಕಾರ್ಯದರ್ಶಿಗಳಾದ ಭಗಿನಿ ಮಾರಿ ಇವ್ಲಿನ್ ಎ.ಸಿ. ವಹಿಸಿದ್ದರು. ಮಂಗಳೂರು ಉತ್ತರ ವಲಯದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀ ಜೀವನ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಬಳಿಕ ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲನೆ ಮಾಡುವ ಮೂಲಕ ಚದುರಂಗ ಪಂದ್ಯಾಟವನ್ನು ಉದ್ಘಾಟಿಸಿದರು. ನಂತರ ವಿದ್ಯಾರ್ಥಿಗಳು ಚದುರಂಗ ಆಟವನ್ನು ಸಾಂಕೇತಿಕ ವಾಗಿ ಆಡಿ. ಪಂದ್ಯಾಟಕ್ಕೆ ಚಾಲನೆ ನೀಡಿದರು.ವೇದಿಕೆಯಲ್ಲಿ ತಾಲ್ಲೂಕು ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ಶ್ರೀ ನಿತಿನ್ ಆರ್. ಪುತ್ರನ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಹರೀಶ್ ರೈ, ಗ್ರೇಡ್–1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಮತಿ ಚೆಲುವಮ್ಮ, ಸಂತ ಆನ್ಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ಅನೆಟ್ ಎ.ಸಿ, ಸಂತ ಅನ್ನರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಭಗಿನಿ ರೋಸ್ಮಿಟ ಎ.ಸಿ., ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಮಹಮ್ಮದ್ ಕಾಸಿಂ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಿಕ್ಷಕಿ ವೀಣಾ ಲೋಬೋ ಅವರು ನಿರೂಪಿಸಿದರು. ಮುಖ್ಯ ಶಿಕ್ಷಕಿ ಭಗಿನಿ ಅನೆಟ್ ಎ. ಸಿ . ಯವರು ಸ್ವಾಗತಿಸಿದರು. ಶಿಕ್ಷಕಿ ಸಾರ ನತಾಶಾ ವಂದನಾರ್ಪಣೆ ಸಲ್ಲಿಸಿದರು.ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದರು.

ಪ್ರಾದೇಶಿಕ ವಾರ್ತೆಗಳು

ಮೊಳಹಳ್ಳಿಯವರು ಆರು ದಶಕಗಳ ಕಾಲ ಸಹಕಾರಿ ರಂಗದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆ ಮಹಾನ್ ಸಾಧಕ ತೋರಿದ ಹಾದಿಯಲ್ಲಿ ನಾವು ನಡೆಯೋಣ. ಅವರ ಆದರ್ಶ ಸಮಸ್ತ ಸಹಕಾರಿ ಕ್ಷೇತ್ರಕ್ಕೆ ಸ್ಫೂರ್ತಿಯಾಗಲಿ -ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್

ಮಂಗಳೂರು; ಸಹಕಾರ ರಂಗದ ಮೂಲಕ ಜಿಲ್ಲೆಯ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಮೊಳಹಳ್ಳಿ ಶಿವರಾಯರು ತೋರಿಸಿಕೊಟ್ಟಿದ್ದಾರೆ. ಅವರು ಸಹಕಾರಿ ರಂಗದ ಮೂಲಕ ಮಾಡಿದ ಕೆಲಸಗಳು ನಮಗೆ ಇಂದಿಗೂ ಮಾದರಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.ಅವರು ಎಸ್ ಸಿಡಿಸಿಸಿ ಬ್ಯಾಂಕ್ ನ ಸಭಾಂಗಣದಲ್ಲಿ ಮೊಳಹಳ್ಳಿ ಶಿವರಾಯರ ಜನ್ಮ ದಿನಾಚರಣೆಗೆ ಚಾಲನೆ ನೀಡಿ, ಅರವಿಂದ ಚೊಕ್ಕಾಡಿಯವರು ಬರೆದ ಮೊಗೆದಷ್ಟು ಬೆಳೆಯುವ ಮೊಳಹಳ್ಳಿ ಕೃತಿ ಬಿಡುಗಡೆ ಗೊಳಿಸಿ ಮಾತನಾಡುತ್ತಾ, ಮೊಳ ಹಳ್ಳಿ ಶಿವರಾಯರು ಆರು ದಶಕಗಳ ಕಾಲ ಸಹಕಾರಿ ರಂಗವನ್ನು ಕಟ್ಟಿ ಬೆಳೆಸಿ, ಸಹಕಾರಿ ರಂಗದ ಮೂಲಕ ಏನೆಲ್ಲಾ ಮಾಡಬಹುದು ಅದನ್ನು ಮಾಡಿ ತೋರಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಇತರ ವಾಣಿಜ್ಯ ಬ್ಯಾಂಕುಗಳು, ರಾಷ್ಟ್ರೀಕೃತ ಬ್ಯಾಂಕ್ ಗಳು ಒಂದರೊಳಗೆ ಒಂದು ವಿಲೀನಗೊಳ್ಳುವ ಸಮಯದಲ್ಲೂ, ಸಹಕಾರಿ ಬ್ಯಾಂಕ್ ಜಿಲ್ಲೆಯಲ್ಲಿ ದೃಢವಾಗಿ ಬೇರೂರಿವೆ.ಗ್ರಾಹಕರಿಗೆ ಸೇವೆ ನೀಡುತ್ತಿವೆ. ಇದರ ಹಿಂದೆ ಮೊಳಹಳ್ಳಿ ಶಿವರಾಯರ ಮಹತ್ವದ ಕೊಡುಗೆ ಇದೆ.ಅವರ ಆದರ್ಶಗಳು ಮುಂದೆಯೂ ಸಹಕಾರಿ ರಂಗದ ಬೆಳವಣಿಗೆಗೆ ಸಹಕಾರಿ ಯಾಗಲಿ ಎಂದು ಡಾ.ಎಂ.ಎನ್‌.ರಾಜೇಂದ್ರ ಕುಮಾರ್ ಹಾರೈಸಿದರು. ಆಕರ ಗ್ರಂಥ ರಚಿಸಿದ ಲೇಖಕ ಅರವಿಂದ ಚೊಕ್ಕಾಡಿಯವರು ಮಾತನಾಡುತ್ತಾ,,ಮಿತಭಾಷಿ ಮೊಳಹಳ್ಳಿ ಶಿವರಾಯರು ಕರಾವಳಿಯನ್ನು ಕಟ್ಟಿದ ಮೂವರು ಮಹನೀಯರಾದ ಸಾಮಾಜಿಕ ಮುಖಂಡ ಕುದ್ಮುಲ್ ರಂಗರಾವ್, ಸ್ವಾತಂತ್ರ ಹೋರಾಟಗಾರ ಕಾರ್ನಾಡ್ ಸದಾಶಿವರಾವ್, ಅವರ ಜೊತೆ ಸಹಕಾರಿ ರಂಗದ ಮೂಲಕ ಜನರಿಗೆ ಆರ್ಥಿಕ ಶಕ್ತಿಯನ್ನು ನೀಡಿದವರು ಮೊಳಹಳ್ಳಿ ಶಿವರಾಯರು. ಸಹಕಾರಿ ಕ್ಷೇತ್ರ ಸೂಕ್ಷ್ಮ ಕ್ಷೇತ್ರ, ಎಲ್ಲಾ ಜಾತಿ,ಧರ್ಮದ ಜನರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು. ಮೊಳಹಳ್ಳಿ ಯವರು ಅದನ್ನು ನಡೆಸಿ ಕೊಂಡು ಬಂದಿದ್ದಾರೆ. ಅದನ್ನು ಡಾ.ಎಂ.ಎನ್ ರಾಜೇಂದ್ರ ಕುಮಾರ್ ವಿಸ್ತರಿಸಿ ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಮೊಳಹಳ್ಳಿ ಶಿವರಾಯರ ಸಹಕಾರಿ ರಂಗದ ಚಿಂತನೆಯ ಮೂಲಕ ಸಮಗ್ರ ಅಭಿವೃದ್ಧಿಯಪರಿಕಲ್ಪನೆ ಇತ್ತು.ಅದರಿಂದ ಪುತ್ತೂರಿನಲ್ಲಿ ಬೀದಿ ದೀಪ ಆರಂಭಿಸಲು ಕಾರಣ ರಾದರು, ಪಾಣೆ ಮಂಗಳೂರು ಸೇತುವೆ ನಿರ್ಮಾಣಕ್ಕೆ ಜನರಿಂದ ದೇಣಿಗೆ ಸಂಗ್ರಹಿದರು.ದಸರಾ ಉತ್ಸವವನ್ನು ಪುತ್ತೂರಿನಲ್ಲಿ ಆರಂಭಿಸಿದರು, ಹೈನುಗಾರಿಕೆ ಯನ್ನು ಸಹಕಾರಿ ರಂಗದ ಮೂಲಕ ಆರಂಭಿಸಿದರು. ಮುದ್ರಣಾಲಯವನ್ನು ಆರಂಭಿಸಿದರು.ಸಹಕಾರಿ ರಂಗ ಬಲಿಷ್ಠ ರಂಗವಾಗಿ ಬೆಳೆಯಲು ಪೂರಕವಾದ ಎಲ್ಲಾ ಕೆಲಸವನ್ನು ಮೊಳಹಳ್ಳಿ ಮಾಡಿ ಮಾದರಿಯಾಗಿದ್ದಾರೆ ಎಂದರು.ಸಮಾರಂಭದಲ್ಲಿ ಎಸ್ ಸಿ ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಜಯರಾಮ ರೈ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ,ಎಸ್ ಸಿಡಿಸಿಸಿ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್, ಕ್ಯಾಂಪೋ ಅಧ್ಯಕ್ಷ ಎಸ್ ಎನ್ ಸತೀಶ್ಚಂದ್ರ, ಹಾಗೂ ಇತರ ಬ್ಯಾಂಕಿನ ನಿರ್ದೇಶಕರು ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲೋಟ್ಟು ಸ್ವಾಗತಿಸಿದರು.ಜಿಲ್ಲಾ ಸಹಕಾರಿ ಯೂನಿಯನ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ವಿ. ಹಿರೇಮಠ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಪುರಾಣಲೋಕ – ನೀರಾಜನ ಅವಳಿ ಕಾರ್ಯಕ್ರಮಗಳ ಲೋಕಾರ್ಪಣೆ. ನಮ್ಮ ಪೌರಾಣಿಕ ಮೌಲ್ಯಗಳು ಸಾರ್ವಕಾಲಿಕ: ಡಾ| ಎಂ. ಮೋಹನ ಆಳ್ವ

ಮಂಗಳೂರು: ‘ಭಾರತೀಯ ಪುರಾಣಗಳಲ್ಲಿ ಅಪಾರವಾದ ಜೀವನ ಮೌಲ್ಯಗಳಿವೆ. ಅವು ಸಾರ್ವಕಾಲಿಕವಾದುವುಗಳು. ಪೌರಾಣಿಕ ಕಾವ್ಯಗಳ ಅಧ್ಯಯನದಲ್ಲಿ ಎಳೆಯರಿಗೆ ಆಸಕ್ತಿ ಮೂಡಿಸಿದರೆ ಇಂದಿನ ಪೀಳಿಗೆಯವರಲ್ಲೂ ಪುರಾಣ ಪುರುಷರ ಆದರ್ಶಗಳನ್ನು ಪಾಲಿಸುವ ಮನಸ್ಥಿತಿಯನ್ನು ಬೆಳೆಸಬಹುದಾಗಿದೆ’ ಎಂದು ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದ್ದಾರೆ.ನಮ್ಮ ಕುಡ್ಲ ವಾಹಿನಿಯಲ್ಲಿ ನೂತನವಾಗಿ ಪ್ರಸಾರವಾಗುವ ‘ಪುರಾಣ ಲೋಕ’ ಕಾವ್ಯ ವಾಚನ – ಪ್ರವಚನದ ಶುಭಾರಂಭ ಮತ್ತು ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಅವರ ನೂತನ ಕೃತಿ ‘ನೀರಾಜನ’ ಕನ್ನಡ – ತುಳು ಭಕ್ತಿಗೀತೆಗಳ ಸಂಕಲನ ಬಿಡುಗಡೆಯ ಅವಳಿ ಕಾರ್ಯಕ್ರಮವನ್ನು ಆ.3ರಂದು ನಮ್ಮ ಕುಡ್ಲ ಬಿ.ಪಿ. ಕರ್ಕೇರ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.ಸಮಾರಂಭದಲ್ಲಿ ಟಿವಿ ರಿಮೋಟ್ ಒತ್ತುವ ಮೂಲಕ ‘ಪುರಾಣ ಲೋಕ’ದ ಟ್ರೇಲರನ್ನು ಡಾ| ಮೋಹನ ಆಳ್ವ ಬಿಡುಗಡೆಗೊಳಿಸಿದರು. ‘ಹಿಂದಿನ ಕಾಲದಲ್ಲಿ ಮನೆ ಮನೆಗಳಲ್ಲಿ, ಮಠ ಮಂದಿರಗಳಲ್ಲಿ ಆಗುತ್ತಿದ್ದ ಪುರಾಣ ಪ್ರವಚನ ಕಾರ್ಯಕ್ರಮಗಳು ಈಗ ಕಡಿಮೆಯಾಗುತ್ತಿವೆ. ನಮ್ಮ ಕುಡ್ಲದ ಮೂಲಕ ಅದು ಮತ್ತೊಮ್ಮೆ ಮನೆ ಮಾತಾಗಲಿ’ ಎಂದವರು ಹಾರೈಸಿದರು‘ನೀರಾಜನ’ ಅನಾವರಣ:ಇದೇ ಸಂದರ್ಭದಲ್ಲಿ ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಷನ್ಸ್ ಪ್ರಕಟಿಸಿದ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಅವರ ‘ನೀರಾಜನ’ ದೈವ – ದೇವರ ಭಕ್ತಿ – ಸುಗಿಪು ಗೀತಾ ಸಂಕಲನವನ್ನು ಅಹ್ಮದ್ ನಗರದ ಉದ್ಯಮಿ ಹಾಗೂ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸಂಸ್ಥಾಪಕ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ ಕುತ್ತಿಕಾರ್ ಅವರು ಅನಾವರಣಗೊಳಿಸಿದರು. ‘ಕಲಿಯುಗದಲ್ಲಿ ಕೇವಲ ಭಕ್ತಿಪೂರ್ವಕವಾದ ಸ್ತುತಿ ಮತ್ತು ನಾಮಸ್ಮರಣೆಗಳಿಂದ ದೇವರನ್ನು ಸುಲಭವಾಗಿ ಒಲಿಸಿಕೊಳ್ಳಬಹುದು. ನೀರಾಜನ ಹೆಸರೇ ಸುಂದರ; ಈ ಕೃತಿಯೊಳಗಿನ ಅಪೂರ್ವ ಭಕ್ತಿಗೀತೆಗಳನ್ನು ಸ್ವರ ಸಂಯೋಜಿಸಿ ಆಸ್ತಿಕರೆಲ್ಲರೂ ಅಲ್ಲಲ್ಲಿ ಹಾಡುವಂತಾಗಲಿ’ ಎಂದವರು ಶುಭ ಕೋರಿದರು.ದ್ವಿಭಾಷಿಕ ಅವಳಿತನದ ಸ್ತುತಿ-ಸುಗಿಪು: ಪ್ರೊ| ಶಿವರಾಮ ಶೆಟ್ಟಿಕೃತಿ ಪರಿಚಯ ಮಾಡಿದ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ನಿಕಟಪೂರ್ವ ಯೋಜನಾ ನಿರ್ದೇಶಕ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ| ಬಿ.ಶಿವರಾಮ ಶೆಟ್ಟಿ ಅವರು ‘ನೀರಾಜನ ಕೃತಿ ದೈವ ದೇವರುಗಳ ಕನ್ನಡ – ತುಳು ಭಾಷೆಗಳ ದ್ವಿಭಾಷಿಕ ಅವಳಿತನದ ಭಕ್ತಿ ಸ್ತುತಿ – ಸುಗಿಪು ಗೀತ ಸಂಕಲನ. ಭಕ್ತಿ ಪರಂಪರೆಯ ಶೈವ,ವೈಷ್ಣವ, ಗಾಣಪತ,ಶಾಕ್ತ ಮುಂತಾದ ಪೂಜಾ ಪರಂಪರೆಯ ದೇವರುಗಳನ್ನು ಹಾಗೂ ಇದಕ್ಕೆ ಸಮಾನವಾಗಿ ತುಳುನಾಡಿನ ಜನಪದೀಯ ದೈವ ಮತ್ತು ನಾಗನನ್ನು ಆರಾಧಿಸುವ ಗೀತೆಗಳು, ಜೊತೆಗೆ ಕ್ಷೇತ್ರ ಪುರಾಣ, ಸ್ಥಳ ಮಹಾತ್ಮೆಯ ಸ್ತುತಿ – ಸುಗಿಪು ಹಾಡುಗಳು ಸಮೃದ್ಧವಾಗಿದ್ದು ದೇವಸ್ಥಾನ, ಪೂಜಾ ಮಂದಿರ ಮತ್ತು ಹಬ್ಬ ಹರಿದಿನಗಳಲ್ಲಿ ಹಾಡಲು ಯೋಗ್ಯವಾಗಿವೆ’ ಎಂದರು.ಕೃತಿ ಕರ್ತರಾದ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿ ಅರ್ಥವತ್ತಾಗಿ ಆಯೋಜಿಸಲಾದ ಅವಳಿ ಕಾರ್ಯಕ್ರಮಗಳ ಹಿನ್ನೆಲೆ ಮತ್ತು ಸ್ವರೂಪಗಳನ್ನು ವಿವರಿಸಿದರು. ನಮ್ಮ ಕುಡ್ಲದ ನಿರ್ದೇಶಕ ಲೀಲಾಕ್ಷ ಬಿ.ಕರ್ಕೇರ ಸ್ವಾಗತಿಸಿದರು. ಆಕೃತಿ ಆಶಯ ಪಬ್ಲಿಕೇಶನ್ಸ್ ನ ಕಲ್ಲೂರು ನಾಗೇಶ್ ವಂದಿಸಿದರು. ನಿತಿನ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.ಆ.9 ‘ಪುರಾಣ ಲೋಕ’ ಪ್ರಸಾರ:ಪುರಾಣ ಲೋಕದ ಮೊದಲ ಸಂಚಿಕೆಗಳಲ್ಲಿ ಸಂತಕವಿ ಕನಕದಾಸರ ‘ನಳ ಚರಿತ್ರೆ’ ಕಾವ್ಯದ ತುಳು – ಕನ್ನಡ ಆವೃತ್ತಿಗಳನ್ನು ಯಕ್ಷಗಾನ ಭಾಗವತ ದೇವಿ ಪ್ರಸಾದ ಆಳ್ವ ತಲಪಾಡಿ ಮತ್ತು ಹರಿಕಥಾ ವಿದುಷಿ ಮಂಜುಳಾ ಜಿ.ರಾವ್ ಇರಾ ವಾಚಿಸಿದ್ದಾರೆ. ಪ್ರವಚನಕಾರ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನ ನೀಡಿದ್ದಾರೆ. ಆಗಸ್ಟ್ 9 ರಿಂದ ಪ್ರತಿ ಭಾನುವಾರ ಬೆಳಿಗ್ಗೆ ಗಂ.9.00ಕ್ಕೆ ಕಾರ್ಯಕ್ರಮ ನಮ್ಮ ಕುಡ್ಲದಲ್ಲಿ ಪ್ರಸಾರವಾಗುವುದು; ಮಂಗಳವಾರ ರಾತ್ರಿ ಗಂ.9.30 ಕ್ಕೆ ಇದು ಮರುಪ್ರಸಾರವಾಗಲಿದೆ ಎಂದು ವಾಹಿನಿಯ ಪ್ರಕಟಣೆ ತಿಳಿಸಿದೆ.

Scroll to Top