ಪಡೀಲ್ ನಲ್ಲಿ ಶಾಂತಿಯುತ ಮತ್ತು ಆಹ್ಲಾದಕರ ವಾತಾವರಣದೊಂದಿಗೆ ಗ್ರಾಹಕರಿಗಾಗಿ ಶುಭಾರಂಭಗೊಂಡಿದೆ ಮೆಹಂದಿ ಬಾರ್ ಅಂಡ್ ಫ್ಯಾಮಿಲಿ ರೆಸ್ಟೋರೆಂಟ್. ಪತ್ರಿಕೋದ್ಯಮಿ ಪ್ರಕಾಶ್ ಕೆ. ಪಾಂಡೇಶ್ವರ್ ರವರ ಹೋಟೆಲ್ ಉದ್ಯಮದ ಸಾಧನೆಗೆ ಮತ್ತೊಂದು ಕಿರೀಟ.
ಮಂಗಳೂರು: ಪಡೀಲ್ ಬಳಿ ಇರುವ ಪಡೀಲ್ ಗೇಟ್ನಲ್ಲಿ ಹಲವು ವಿಶೇಷತೆಗಳನ್ನು ಹೊಂದಿರುವ ‘ಮೆಹಂದಿ’ ಬಾರ್ ಆ್ಯಂಡ್ ಫ್ಯಾಮಿಲಿ ರೆಸ್ಟೋರೆಂಟ್ ಮೇ.12 ರ ಆದಿತ್ಯವಾರ ಸಂಜೆ ಗಣ್ಯ ಅತಿಥಿಗಳ ಉಪಸ್ಥಿತಿಯೊಂದಿಗೆ ಶುಭಾರಂಭಗೊಂಡಿದೆದಕ್ಷಿಣ ಕನ್ನಡದ ಎಂಪಿ ನಳಿನ್ ಕುಮಾರ್ ಕಟೀಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ವೈನ್ ಮರ್ಚಂಟ್ ಎಸೋಸಿಯೇಶನ್ ಅಧ್ಯಕ್ಷರಾದ ಎಂ. ಗಣೇಶ್ ಶೆಟ್ಟಿ, ಡೈಜಿವರ್ಲ್ಡ್ನ ಆಡಳಿತ ನಿರ್ದೆಶಕರಾದ ವಾಲ್ಟರ್ ನಂದಳಿಕೆ, ಶ್ರೀ ಡೆವಲಪರ್ಸ್ನ ಮಾಲಕರಾದ ಗಿರೀಶ್ ಎಂ.ಶೆಟ್ಟಿ ಕಟೀಲು, ಮೇಯರ್ ಸುಧೀರ್ ಶೆಟ್ಟಿ, ಮನಪಾ ಸದಸ್ಯೆ ರೂಪಾಶ್ರೀ ಪೂಜಾರಿ, ಚಿತ್ರ ನಿರ್ಮಾಪಕರಾದ ಕಿಶೋರ್ಡಿ.ಶೆಟ್ಟಿ, ದೇವದಾಸ್ ಕಾಪಿಕಾಡ್, ವಿಜಯ್ ಕುಮಾರ್ ಕೊಡಿಯಾಲ್ಬೈಲ್, ಚಿತ್ರನಟ ಭೋಜರಾಜ್ ವಾಮಂಜೂರು ಶುಭ ಹಾರೈಸಿದರು. ಸಿನಿಮಾ ನಿರ್ಮಾಪಕರಾದ ಧನರಾಜ್, ಸಂಸ್ಥೆಯ ಮಾಲಕರಾದ ಪ್ರಕಾಶ್ ಕೆ. ಪಾಂಡೇಶ್ವರ್, ಮ್ಯಾನೇಜರ್ ಬಾಲಕೃಷ್ಣಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯ ಕ್ರಮ ನಿರ್ವಹಿಸಿದರು. ‘ಮೆಹಂದಿ’ ಹೆಸರಿನಿಂದಲೇ ವಿಜಯ: ಮಿಥುನ್ ರೈ.ಜೀವನದಲ್ಲಿ ಎಷ್ಟೇ ಕಷ್ಟ ಇದ್ದರೂ ಛಲವಿದ್ದರೆ ಯಾವುದೇ ಗುರಿ ಸಾಧಿಸಬಹುದು ಎನ್ನುವುದಕ್ಕೆ ಪ್ರಕಾಶ್ ಪಾಂಡೇಶ್ವರ ಸಾಕ್ಷಿಯಾಗಿದ್ದು,ಅವರು ಯುವಕರಿಗೆ ಮಾದರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ವೇಗವಾಗಿ ಅಭಿವೃದ್ಧಿ ಹೊಂದಲಿರುವ ಪಡೀಲ್ ನಲ್ಲಿ ಟೇಸ್ಟಿಂಗ್ ಪೌಡರ್, ಕೃತಕ ಬಣ್ಣ ಇಲ್ಲದ ಗುಣಮಟ್ಟದ ಹೋಟೆಲ್ ಅಗತ್ಯವಿತ್ತು, ಮೆಹಂದಿ ಎನ್ನುವ ಹೆಸರೇ ಇದರ ಯಶಸ್ಸಿಗೆ ಕಾರಣವಾಗಲಿದೆ ಎಂದು ಮಿಥುನ್ ರೈ ಆಶಿಸಿದರು.ಪೈಪೋಟಿ ನಡುವೆ ಶುಚಿ- ರುಚಿಗೆ ಆದ್ಯತೆ: ಗಣೇಶ್ ಶೆಟ್ಟಿಪ್ರಸ್ತುತ ದಿನಗಳಲ್ಲಿ ಹೋಟೆಲ್ ನಿರ್ವಹಣೆ ಸುಲಭದ ಮಾತಲ್ಲ. ಅದರಲ್ಲೂ ಮಂಗಳೂರಿನಲ್ಲಿ ಪ್ರತಿದಿನ ಹೋಟೆಲ್ ತೆರೆಯುತ್ತಿದ್ದು, ಪೈಪೋಟಿ ಸಹಜ. ಆದರೆ, ಗ್ರಾಹಕರು ಶುಚಿ, ರುಚಿ ಇರುವಲ್ಲಿಗೆ ಮಾರು ಹೋಗುತ್ತಾರೆ.ಬಿಕರ್ನಕಟ್ಟೆ, ನಾಗುರಿಗೆ ಹೋಗುವ ರಸ್ತೆಯಲ್ಲಿ ಈ ಫ್ಯಾಮಿಲಿ ರೆಸ್ಟೋರೆಂಟ್ ಆರಂಭಗೊಂಡಿದ್ದು, ಯಶಸ್ಸು ಸಾಧಿಸಲೆಂದು ವೈನ್ ಮೆರ್ಚೆಂಟ್ ಅಸೋಸಿಯೇಶನನ ಅಧ್ಯಕ್ಷರಾದ ಎಂ. ಗಣೇಶ್ ಶೆಟ್ಟಿ ಶುಭ ಹಾರೈಸಿದರು. ಜೀವನದಲ್ಲಿ ಎತ್ತರದ ಹೆಜ್ಜೆ: ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು.ಪತ್ರಿಕೋದ್ಯಮದ ಜೊತೆಗೆ ಕಳೆದ 14 ವರ್ಷಗಳಿಂದ ಹೋಟೆಲ್ ಉದ್ಯಮದಲ್ಲಿರುವ ಪ್ರಕಾಶ್ ಪಾಂಡೇಶ್ವರ ಅವರು ಮಂಗಳೂರಿನ ಹೆಬ್ಬಾಗಿಲು ಪಡೀಲ್ನಲ್ಲಿ ಆರಂಭಿಸಿರುವ ಮೆಹಂದಿ ಫ್ಯಾಮಿಲಿ ರೆಸ್ಟೋರೆಂಟ್ ಮೂಲಕ ಜನರಲ್ಲಿ ನವ ಚೈತನ್ಯ ಮೂಡಿಸಿದ್ದಲ್ಲದೆ, ಪರಿಸರಕ್ಕೂ ಕಳೆ ತಂದಿದ್ದಾರೆಂದು ಮೇಯರ್ ಸುಧೀರ್ ಶೆಟ್ಟಿ ಅಭಿಪ್ರಾಯ ಪಟ್ಟರು.‘ಮೆಹಂದಿ’ ಹೆಸರೇ ಆಕರ್ಷಕ ಉದ್ಯಮಿ ಗಿರೀಶ್ ಶೆಟ್ಟಿ.ಯಾವುದೇ ಕೆಲಸದಲ್ಲಿ ಶ್ರದ್ಧೆಯಿಟ್ಟು ಮಾಡಿದರೆ ಯಶಸ್ಸು ಖಚಿತ, ತುಳು ಚಿತ್ರರಂಗದಲ್ಲಿ ಎಲ್ಲರನ್ನೂ ಸೇರಿಸಿ ಯಶಸ್ವೀ ಚಿತ್ರ ನಿರ್ಮಿಸಿದ ಪ್ರಕಾಶ್ ಪಾಂಡೇಶ್ವರ ಅವರು‘ಮೆಹಂದಿ’ ಎನ್ನುವ ಅತ್ಯಂತ ಆಕರ್ಷಕ ಹೆಸರಿಟ್ಟು ಫ್ಯಾಮಿಲಿರೆಸ್ಟೋರೆಂಟ್ ಸ್ಥಾಪಿಸಿದ್ದು, ಇದು ಯಶಸ್ಸಿನ ಉತ್ತುಂಗ ಕ್ಕೇರಲಿ ಎಂದು ಶ್ರೀ ಡೆವಲಪರ್ಸ್ ಮಾಲಕರಾದ ಗಿರೀಶ್ ಎಂ.ಶೆಟ್ಟಿ ಕಟೀಲು ಅವರು ಆಶಿಸಿದರು.ಪಡೀಲ್ ನಲ್ಲಿ ಶುಭಾರಂಭಗೊಂಡ ‘ಮೆಹಂದಿ’ ಬಾರ್ ಅಂಡ್ ಫ್ಯಾಮಿಲಿ ರೆಸ್ಟೋರೆಂಟ್ ನ ವೈಶಿಷ್ಟತೆಗಳು.“ಮೆಹಂದಿ” ಬಾರ್ ಆ್ಯಂಡ್ ಫ್ಯಾಮಿಲಿ ರೆಸ್ಟೋರೆಂಟ್ನಲ್ಲಿ ಆಹಾರ ಪದಾರ್ಥಗಳಿಗೆ ಯಾವುದೇ ರಾಸಾಯನಿಕ, ಕೃತಕ ಬಣ್ಣ ಮತ್ತು ಟೇಸ್ಟಿಂಗ್ ಪೌಡರ್ ಉಪಯೋಗಿಸುವುದಿಲ್ಲ.ಉಪ್ಪಿನಿಂದ ಹಿಡಿದು ಎಲ್ಲಾ ಆಹಾರ ವಸ್ತುಗಳು ಆರ್ಗಾನಿಕ್ (ಸಾವಯವ) ಆಗಿರುವುದರಿಂದ ನೈಜ ರುಚಿಯ ಆಸ್ವಾದನೆ ಗ್ರಾಹಕರಿಗೆ ಸಿಗಲಿದೆ. ಕೌಟುಂಬಿಕ ವ್ಯಕ್ತಿಗಳಿಗಾಗಿ ಪ್ರತ್ಯೇಕ ಕ್ಯಾಬಿನೆಟ್ ವ್ಯವಸ್ಥೆ, ರೂಫ್ ಟಾಪ್, ಓಪನ್ ಗಾರ್ಡನ್ ಇದೆ. ತೋಟದ ಮಧ್ಯೆ ಕುಳಿತು ಕೊಂಡು ನೈಜ ಆಹಾರದ ಸ್ವಾದವನ್ನು ಸವಿಯುವ ಅವಕಾಶ ಇದೆ.ಅಲ್ಲದೆ ಪ್ರೇಮಿಗಳಿಗಾಗಿ ಪ್ರತ್ಯೇಕ ಸ್ಥಳವಿದೆ. ಯಾವುದೇ ಸಮಸ್ಯೆಯಿಲ್ಲದೆ ಆಹಾರದ ಸವಿಯೊಂದಿಗೆ ಕಳೆಯಬಹುದಾದ ವಾತಾವರಣ ಇಲ್ಲಿದೆ. ಕಾರ್ಪೊರೇಟ್ ಸಂಸ್ಥೆಗಳ ಸಭೆ, ಇತರ ಸಮಾರಂಭಗಳಿಗೆ ಬೇಕಾದ ವ್ಯವಸ್ಥೆಯೂ ಇದೆ.ಎ.ಸಿ ಮತ್ತು ನಾನ್ ಎ.ಸಿ ವಿಭಾಗಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ನಿರ್ವಹಿಸಲ್ಪಡುತ್ತದೆ. ವಿಶೇಷ ಎಂದರೆ ಇಲ್ಲಿ ಸಂಪೂರ್ಣ ಸಸ್ಯಾಹಾರಿ ವಿಭಾಗವೂ ಇದೆ. ಸಮುದ್ರ ಖಾದ್ಯವನ್ನು ಸವಿಯುವವವರಿಗೆಂದೇ ಪ್ರತ್ಯೇಕ ವಿಭಾಗವಿದೆ.ರೆಸ್ಟೋರೆಂಟ್ ಕೇವಲ ತಿನ್ನಲು ಮಾತ್ರವಲ್ಲ, ದಕ್ಷಿಣ ಭಾರತದ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಉತ್ತಮ ಸ್ಥಳವಾಗಿದೆ. ಸಾಂಪ್ರದಾಯಿಕ ಶೈಲಿಯ ವಿನ್ಯಾಸದ ಕಟ್ಟಡದಲ್ಲಿ ನೆಲೆಗೊಂಡಿರುವ ‘ಮೆಹಂದಿ’ ಬಾರ್ ಆ್ಯಂಡ್ ಫ್ಯಾಮಿಲಿ ರೆಸ್ಟೋರೆಂಟ್ ಹಸಿರಿನ ಮಿನುಗು, ಶಾಂತಿಯುತ ಮತ್ತು ಆಹ್ಲಾದಕರ ವಾತಾವರಣದೊಂದಿಗೆ ಗ್ರಾಹಕರನ್ನು ಸ್ವಾಗತಿಸುತ್ತಿದೆ. ಕೈಗೆಟುಕುವ ಬೆಲೆಯಲ್ಲಿ ಅಧಿಕೃತ ಸುವಾಸನೆಯೊಂದಿಗೆ ಇಲ್ಲಿನ ಆಹಾರ ಖಾದ್ಯಗಳನ್ನು ಸವಿಯಬಹುದಾಗಿದೆ ಎಂದು ಸಂಸ್ಥೆಯ ಮಾಲಕ ಪ್ರಕಾಶ್ ಪಾಂಡೇಶ್ವರ್ ತಿಳಿಸಿದ್ದಾರೆ.










