ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಸಂಕಷ್ಟಗಳ ನಿವಾರಣೆಗಾಗಿ ದೋಷ ಪರಿಹಾರ ಪೂಜೆ: ಸ್ವಾಮಿ ಪೂರ್ಣಾಮೃತಾನಂದ ಪುರಿ

ಮಂಗಳೂರು: ಜನ್ಮಜಾತವಾಗಿ ಜಾತಕಗಳಲ್ಲಿ ಗ್ರಹಗಳ ಸ್ಥಾನಾಂತರದಿಂದ ಹಲವು ದೋಷಗಳು ಗೋಚರಿಸುತ್ತವೆ.ಇದರಿಂದಾಗಿ ಪ್ರಕೃತಿಸಹಜವಾದ ಸಂಕಷ್ಟಗಳು ಮತ್ತು ತೊಂದರೆಗಳು ಮನುಷ್ಯರನ್ನು ಬಾಧಿಸುತ್ತವೆ.ಅದಕ್ಕಾಗಿ ಕಾಲಕಾಲಕ್ಕೆ ದೋಷ ನಿವಾರಣಾ ಪೂಜೆಗಳನ್ನು ಮಾಡಿಸುವುದು ಸೂಕ್ತ ಎಂದು ಮಾತಾ ಅಮೃತಾನಂದಮಯಿ ಮಠದ ಹಿರಿಯ ಸ್ವಾಮೀಜಿಗಳಾದ ಸಂಪೂಜ್ಯ ಸ್ವಾಮಿ ಪೂರ್ಣಾಮೃತಾನಂದ ಪುರಿ ಹೇಳಿದರು. ಮಂಗಳೂರು ನಗರದ ಬೋಳೂರಿನಲ್ಲಿರುವ ಮಾತಾ‍ ಅಮೃತಾನಂದಮಯಿ ಮಠದ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ನೂತನವಾಗಿ ಆರಂಭಿಸಲಾದ ಶನಿ ದೋಷ ನಿವಾರಣಾ ಪೂಜೆಯನ್ನು ದೀಪ ಬೆಳಗಿಸಿ ಚಾಲನೆ ನೀಡಿ ಸ್ವಾಮೀಜಿ ಆಶೀರ್ವಚನವಿತ್ತರು.ನವಗ್ರಹಗಳಲ್ಲಿ ಶನಿಗ್ರಹದ ಪ್ರಭಾವವು ಜೀವಿಗಳ ಮೇಲೆ ಅಧಿಕವಾಗಿದ್ದು ಆ ಗ್ರಹಗಳ ಪ್ರೀತ್ಯರ್ಥವಾಗಿ ಸಾಮೂಹಿಕ ಪೂಜೆ ಕೈಗೊಂಡಾಗ ಅದರ ಪ್ರಭಾವವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದರು. ಮಂಗಳೂರಿನ ಶಾಖಾ ಮಠದ ಮುಖ್ಯಸ್ಥರಾದ ಪೂಜನೀಯ ಸ್ವಾಮಿನಿ ಮಂಗಳಾಮೃತ ಪ್ರಾಣ ಉಪಸ್ಥಿತರಿದ್ದರು.ಸ್ವಾಮೀಜಿಯವರನ್ನು ಬ್ರಹ್ಮಸ್ಥಾನ ಕ್ಷೇತ್ರಾಭಿವೃದ್ಧಿ ಸಮಿತಿಯ ವತಿಯಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಕರೆತರಲಾಯಿತು. ಈ ಸಂದರ್ಭದಲ್ಲಿ ಡಾ. ಜೀವರಾಜ್ ಸೊರಕೆ, ಸೇವಾ ಸಮಿತಿಯ ಅಧ್ಯಕ್ಷರಾದ ಸುರೇಶ್ ಅಮೀನ್, ಭೋಜರಾಜ್ ಕರ್ಕೇರ,ಶ್ರುತಿ ಸನತ್ ಹೆಗ್ಡೆ,ಶ್ರೀ ಮುರಳೀಧರ್ ಶೆಟ್ಟಿ,ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವೈ. ಎನ್. ಸಾಲ್ಯಾನ್,ಉಪಾಧ್ಯಕ್ಷರಾದ ಕೃಷ್ಣಶೆಟ್ಟಿ,ಸುಧಾಕರ ಭಟ್,ಸಂಘಟನಾ ಕಾರ್ಯದರ್ಶಿ ಯೋಗೀಶ್ ಸಾಲ್ಯಾನ್, ಕಾರ್ಯದರ್ಶಿ ಡಾ. ದೇವದಾಸ್ ಪುತ್ರನ್ , ರಾಮನಾಥ್ , ದೀಪಕ್ ಶೆಟ್ಟಿಗಾರ್, ಪ್ರಕಾಶ್ ಕರ್ಕೇರ ಮತ್ತು ವಿವಿಧ ಸೇವಾ ಸಮಿತಿಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಸಲಹೆಗಾರರಾದ ಡಾ.ವಸಂತಕುಮಾರ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಡಿದರು.ಪ್ರತಿ ತಿಂಗಳ ಎರಡನೆಯ ಶನಿವಾರ ಸಂಜೆ ಈ ದೋಷ ನಿವಾರಣೆ ಪೂಜೆ ಮುಂದುವರಿಯಲಿದೆ.

ಪ್ರಾದೇಶಿಕ ವಾರ್ತೆಗಳು

ಡಿ.18ರಂದು ಗಿರೀಶ್ ಭಾರದ್ವಾಜ್ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ

ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಡಿ.18ರಂದು ಬೆಳಗ್ಗೆ 11.30ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯುವಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ತೂಗು ಸೇತುವೆಗಳ ಸರದಾರ , ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಅವರು ಭಾಗವಹಿಸಿ ಸಂವಾದ ನಡೆಸಲಿದ್ದಾರೆ.ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸುವರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ .ಆರ್. ಉಪಸ್ಥಿತರಿರುವರು ಎಂದು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಂ ಸ್ಪೀಕರ್ಸ್ ಕ್ಲಬ್ ಕಾರ್ಯಕ್ರಮ. ಭಾರತೀಯ ಸೇನೆ ಒಂದು ಕುಟುಂಬ: ಲೆಫ್ಟಿನಂಟ್ ಜನರಲ್ ಬಿ ಎಸ್ ರಾಜು ಸೋಮಶೇಖರ್

ಮೂಡುಬಿದಿರೆ: ಎನ್‌ಸಿಸಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಭಾರತೀಯ ಸೇನೆಯನ್ನು ಸೇರಬೇಕು. ಭಾರತೀಯ ಸೇನೆ ಒಂದು ಕುಟುಂಬ, ಸವಾಲನ್ನು ಎದುರಿಸುವ ಸ್ಥಳ. ಅಗ್ನಿವೀರ್ ಯೋಜನೆಯು ಯುವಜನತೆಗೆ ದೇಶ ಸೇವೆ ಮಾಡಲು ಉತ್ತಮ ಅವಕಾಶ ಕಲ್ಪಿಸಿದೆ ಎಂದು ಭಾರತೀಯ ಸೇನೆಯ ನಿವೃತ್ತ ಲೆಫ್ಟಿನಂಟ್ ಜನರಲ್ ಬಿಎಸ್ ರಾಜು ಹೇಳಿದರು.ಅವರು ಆಳ್ವಾಸ್‌ನ ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಂ ಸ್ಪೀಕರ್ಸ್ ಕ್ಲಬ್‌ವತಿಯಿಂದ ಎನ್‌ಸಿಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕರ‍್ಯಕ್ರಮದಲ್ಲಿ ಮಾತನಾಡಿದರು. ಜೀವನದಲ್ಲಿ ಪ್ರತಿಬಾರಿ ನಾವು ಅಂದುಕೊAಡAತೆ ನಡೆಯುವುದಿಲ್ಲ. ಅದಕ್ಕಾಗಿ ನಾವು ಪರ್ಯಾಯ ಯೋಜನೆಗಳನ್ನು ಇಟ್ಟುಕೊಳ್ಳಬೇಕು. ಶಿಸ್ತು ಮತ್ತು ಘನತೆ ನಮ್ಮ ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಶಿಸ್ತು ನಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸುವ ಶಕ್ತಿ ನೀಡುತ್ತದೆ. ಎನ್‌ಸಿಸಿ ಸಮವಸ್ತ್ರ ವನ್ನು ಧರಿಸುವ ಆಸೆ ನಮ್ಮಲ್ಲಿ ಮೂಡಬೇಕು. ಆಳ್ವಾಸ್ ಸಂಸ್ಥೆಯ ಎನ್‌ಸಿಸಿಯಲ್ಲಿ ಮೂರು ವಿಭಾಗಳಿದ್ದು, ಕ್ರೀಯಾಶೀಲತೆಯಿಂದ ಕರ‍್ಯನಿರ್ವಹಿಸುತ್ತಿದೆ ಎಂಬುದನ್ನು ಅರಿತಿದ್ದೇನೆ ಎಂದರು.ಜಗತ್ತು ಕ್ಷಿಪ್ರ ಬದಲಾವಣೆಯಾಗುತ್ತಾ ಸಾಗುತ್ತಿದೆ. ನಮ್ಮಲ್ಲಿ ಹೊಸ ತಂತ್ರಜ್ಞಾನ, ಅನ್ವೇಷಣೆಗಳಿಗೆ ಒಗ್ಗಿಕೊಳ್ಳುವ ಸಾಮರ್ಥ್ಯ ಇರಬೇಕು. ಯಾವುದು ಸಮಾಜದಲ್ಲಿ ಅಸ್ತಿತ್ವದಲ್ಲಿಲ್ಲವೋ ಅಂತಹದನ್ನು ಅನ್ವೇಷಿಸುವ ಹಲವು ಕೌಶಲ್ಯಗಳನ್ನು ನಾವು ಪಡೆಯುವತ್ತಾ ಕರ‍್ಯಪ್ರವೃತ್ತರಾಗಬೇಕು. ಶಿಕ್ಷಣ ವ್ಯವಸ್ಥೆ ಹಲವಾರು ಬದಲಾವಣೆಗಳನ್ನು ತರುತ್ತಿದೆ. ಶಿಕ್ಷಣದ ಜೊತೆಗೆ ಬಹು ಕೌಶಲ್ಯಗಳನ್ನು ಹೊಂದಿದರೆ ಮಾತ್ರ ಬಹುರಾಷ್ಟಿçÃಯ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಸಾಧ್ಯ ಎಂದರು. ನಾವು ಸವಾಲನ್ನು ಎದುರುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಧನಾತ್ಮಕ ಯೋಚನೆಗಳನ್ನು ಇಟ್ಟುಕೊಳ್ಳಬೇಕು. ನಮಗೆ ವಹಿಸಿದ ಜವಾಬ್ದಾರಿಗಳನ್ನು ನಿರ್ವಹಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಸವಾಲನ್ನು ಎದುರಿಸುವ ಹಸಿವು ನಮ್ಮಲ್ಲಿ ಮೂಡಬೇಕು. ಸಂವಹನ ಕೌಶಲ್ಯ, ಅನ್ವೇಷಣಾತ್ಮಕ ಯೋಚನೆಗಳು ಅಗತ್ಯ . ವಿದ್ಯಾರ್ಥಿಗಳ ಪ್ರಾಯೋಗಿಕ ಅನುಭವ ಉದ್ಯೋಗದ ಮೂಲ ಎಂದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಇವತ್ತು ನಾನು ಏನಾಗಿದ್ದೇನೋ ಅದಕ್ಕೆ ಎನ್‌ಸಿಸಿ ಕಾರಣ. ಅಂದು ಕಲಿತ ಶಿಸ್ತು ನನ್ನ ಜೀವನದಲ್ಲಿ ಇಂದಿಗೂ ರೂಢಿಯಲ್ಲಿದೆ ಎಂದರು. ನಾವು ಜವಾಬ್ದಾರಿಗಳನ್ನು ಸ್ವೀಕರಿಸಿದಾಗ ನಮ್ಮ ವ್ಯಕ್ತಿತ್ವ ಬದಲಾಗುತ್ತದೆ. ಜೀವನದ ನಿಜವಾದ ಬದಲಾವಣೆ ಆಗ ಆಗುತ್ತದೆ. ನಮ್ಮಲ್ಲಿ ಅನ್ವೇಷಣಾತ್ಮಕ ಯೋಜನೆಗಳು ನಾವು ಹಾಕಿಕೊಂಡ ಚೌಕಟ್ಟಿನಿಂದ ಹೊರ ಬಂದಾಗ ಸಾಧಿಸಲು ಸಾಧ್ಯ. ನಾವು ಮಾಡುವ ಕೆಲಸದಲ್ಲಿ ಉತ್ಸಾಹಿತರಾಗಿರಬೇಕು. ಭಾರತದಲ್ಲಿರುವಷ್ಟು ವೈವಿಧ್ಯತೆ ಯಾವ ದೇಶದಲ್ಲೂ ಇಲ್ಲ. ಪ್ರತಿ ನೂರು ಕಿ.ಮೀ.ಗೂ ಭಾಷೆಯಲ್ಲಿ, ವೇಷಭೂಷಣದಲ್ಲಿ, ಬದಲಾವಣೆ ಕಾಣುತ್ತೇವೆ. ನಾವು ಭಾರತಲ್ಲಿ ಹುಟ್ಟಿರಲು ಅದೃಷ್ಟಮಾಡಿರಬೇಕು ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಲೆಫ್ಟಿನಂಟ್ ಜನರಲ್ ಬಿಎಸ್ ರಾಜು ಅವರ ಧರ್ಮಪತ್ನಿ ಶಕುಂತಲಾ ಸೋಮಶೇಖರ್ ಇದ್ದರು. ವಿದ್ಯಾರ್ಥಿನಿ ಶಾರ್ವರಿ ನಿರೂಪಿಸಿ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ನಿವೃತ್ತ ಲೆಫ್ಟಿನೆಂಟ್ ಜನರಲ್ ರಾಜು ಉಪನ್ಯಾಸ “ಜೀವನದ ಯಶಸ್ಸಿಗೆ ಶಿಸ್ತು ಬಹುದೊಡ್ಡ ಅಡಿಪಾಯ”

ವಿದ್ಯಾಗಿರಿ: ಶಿವಮೊಗ್ಗದಲ್ಲಿ ಪಿ.ಜಿ.ಆರ್.ಸಿಂಧ್ಯಾ ಅವರ ನೇತೃತ್ವದಲ್ಲಿ ಮೊದಲ ಬಾರಿ ಸ್ಕೌಟ್ಸ್ ಮತ್ತು ಗೈಡ್ಸ್ ಅನ್ನು ಕಂಡು ಆಶ್ಚರ್ಯಪಟ್ಟಿದೆ. ಏಕೆಂದರೆ, ಸ್ಕೌಟ್ಸ್ ಮತ್ತು ಗೈಡ್ಸ್ ಎನ್ನುವುದು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಶಾಂತ ಭಾವನೆ ಮತ್ತು ಸಮಯಪ್ರಜ್ಞೆಯನ್ನು ಸೃಷ್ಟಿಸುವಲ್ಲಿ ಮಾದರಿಯಾಗಿದೆ ಎಂದು ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ ಎಸ್ ರಾಜು ಹೇಳಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ೩೦ನೇ ಆಳ್ವಾಸ್ ವಿರಾಸಾತ್ ಸಂದರ್ಭದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್ – ರೇಂಜರ್ಸ್ ಸಾಂಸ್ಕೃತಿಕ ಉತ್ಸವದಲ್ಲಿ ಶುಕ್ರವಾರ ಅವರು ಉಪನ್ಯಾಸ ನೀಡಿದರು.ಸ್ಕೌಟ್ಸ್ ಮತ್ತು ಗೈಡ್ಸ್ನ ಧ್ಯೇಯವಾಕ್ಯವನ್ನು ಅರ್ಥೈಸಿಕೊಂಡು ಸಾಗುವುದು ಉತ್ತಮ. ಜೀವನದಲ್ಲಿ ಎಲ್ಲಾ ರೀತಿಯಲ್ಲಿಯೂ ಪ್ರಗತಿ ಕಾಣಲು ಮತ್ತು ಯಶಸ್ಸನ್ನು ಗಳಿಸಲು ಶಿಸ್ತು ಎನ್ನುವುದು ಏಕಮಾತ್ರ ಸಾಧನವಾಗಿದೆ ಎಂದು ಅವರು ಹೇಳಿದರು.ಸಣ್ಣಪುಟ್ಟ ಕೆಲಸವನ್ನು ಸರಿಯಾಗಿ ಅರ್ಥೈಸಿಕೊಳ್ಳುತ್ತಾ, ಉತ್ತಮ ರೀತಿಯಲ್ಲಿ ಅದನ್ನು ಸ್ವೀಕರಿಸುವ ಮನೋಭಾವನೆ ಬಂದಾಗ ದೊಡ್ಡ ದೊಡ್ಡ ಕೆಲಸವನ್ನು ಸವಾಲಿನಿಂದ ಎದುರಿಸಲು ಸಾಧ್ಯವಾಗುತ್ತದೆ ಎಂದು ತಮ್ಮ ಸೇನಾ ವೃತ್ತಿಯ ಮಜಲುಗಳನ್ನು ವಿವರಿಸಿದರು.ವಿದ್ಯಾರ್ಥಿಗಳು ನಿರಂತರ ಚಲನೆಯಿಂದ ತಮ್ಮ ಗುರಿಯೆಡೆಗೆ ಸಾಗಬೇಕು. ಜೀವನದಲ್ಲಿ ಸತತ ಕಠಿಣ ಪರಿಶ್ರಮ, ಶುಚಿತ್ವ, ಸಹಭಾಗಿತ್ವ ಮತ್ತು ಜಿಜ್ಞಾಸ ಮನೋಭಾವನೆ ಹೆಚ್ಚು ಅನಿವಾರ್ಯ. ನಿಮ್ಮದೇ ಆಸಕ್ತಿ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಕೊಂಡು ಕಾರ್ಯ ಪ್ರವೃತ್ತರಾಗಿ ಎಂದು ಸಲಹೆ ನೀಡಿದರು.ಸುತ್ತಮುತ್ತಲಿನ ವಾತಾವರಣ ಸುಂದರವಾಗಿದ್ದರೆ, ಅತ್ಯುತ್ತಮದ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಪ್ರತಿಯೊಬ್ಬರಲ್ಲೂ ಪ್ರತಿಭೆ ಎನ್ನುವುದು ಅಡಕವಾಗಿರುತ್ತದೆ. ಅದನ್ನು ಕ್ಲಪ್ತ ಸಮಯದಲ್ಲಿ ಸೂಕ್ತ ವೇದಿಕೆಯ ಮೂಲಕ ಅನಾವರಣಗೊಳಿಸುವುದು ಬಹಳ ಅವಶ್ಯಕ ಎಂದರು.ಯಾವುದೇ ಸಂದರ್ಭದಲ್ಲಿಯೂ ಕಠಿಣ ಕೆಲಸ ಬಂದಾಗ ಅದನ್ನು ನಗುಮುಖದಿಂದ ಸ್ವೀಕರಿಸಿ, ಎದುರಿಸಿದಾಗ ನಿಮ್ಮ ತಾಕತ್ತಿನ ಶಕ್ತಿ ಎಂತದ್ದು ಎಂದು ಅರಿವಾಗುತ್ತದೆ ಎಂದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ ಎಸ್ ರಾಜು ಅವರ ಧರ್ಮಪತ್ನಿ ಶಕುಂತಲಾ ರಾಜು ,ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ,ರಾಜ್ಯ ಕಾರ್ಯದರ್ಶಿ ಗಂಗಪ್ಪ ಗೌಡ, ಶಿಬಿರದ ಮೇಲ್ವಿಚಾರಕಿ ಮಲ್ಲೇಶ್ವರಿ ಜೂಜಾರೆ ಮತ್ತು ನಿತಿನ್ ಅಮೀನ್, ದಕ್ಷಿಣ ಕನ್ನಡ ಜಿಲ್ಲಾ ಕೋಶಾಧಿಕಾರಿ ನವೀನ್ ಚಂದ್ರ ಅಂಬೂರಿ ಇದ್ದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರೇಂಜರ್ಸ್ ಮೇಘನಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಡಿ.18ರಂದು ಸಂಪಿಗೆ ರೆಸಾರ್ಟ್‌ ಉದ್ಘಾಟಿಸಲಿರುವ ಡಾ.ಮೋಹನ್‌ ಆಳ್ವ

ಕಿನ್ನಿಗೋಳಿ : ಪುತ್ತಿಗೆ ಗ್ರಾಮ ದಲ್ಲಿರುವ ಸಂಪಿಗೆ ರೆಸಾರ್ಟ್ ನ್ನು ಆಳ್ವಾಸ್ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷರಾದ ಡಾ ಮೋಹನ್ ಆಳ್ವ ಅವರು ಡಿಸೆಂಬರ್ 18 ರಂದು ಉದ್ಘಾಟಿಸಲಿದ್ದಾರೆ. ದಕ್ಷಿಣ ಕನ್ನಡ ಎಂಪಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮೂಡಬಿದ್ರಿ ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ಕಾಂಗ್ರೆಸ್ ಮುಖಂಡ ಮಿಥುನ್ ರೈ, ಹರ್ಷವರ್ಧನ್ ಪಡಿವಾಳ್, ಕುಲದೀಪ್ ಎಂ, ತಿಮ್ಮಯ್ಯ ಶೆಟ್ಟಿ, ಶ್ರೀಪತಿ ಭಟ್, ಎಂ.ಶ್ರೀಧರ ಆಚಾರ್ಯ, ನಾರಾಯಣ ಪಿಎಂ, ಜಯಶ್ರೀ ಅಮರನಾಥ ಶೆಟ್ಟಿ, ರಾಮಚಂದ್ರ ಆಳ್ವ ಪುರುಷೋತ್ತಮ ಶೆಟ್ಟಿ ಹೊಸಮನೆಗುತ್ತು, ರವೀಂದ್ರ ಎಸ್. ಶೆಟ್ಟಿ ಸಾಯಿ ಪ್ಯಾಲೇಸ್, ಗಜಾನನ ಎನ್. ಪೂಂಜಾ, ಪುರುಷೋತ್ತಮ ಶೆಟ್ಟಿ ಉಡುಪಿ ಮೊದಲಾದ ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ರೆಸಾರ್ಟ್ ಒಂದು ಮೇರುಕೃತಿಯಾಗಿದೆ ಮತ್ತು ಇದನ್ನು ಪ್ರವೀಣ್ ಶೆಟ್ಟಿ (ಅತಿಥಿ & ಕ್ವಾಲಿಟಿ ಗ್ರೂಪ್ ಆಫ್ ರೆಸ್ಟೊರೆಂಟ್ಸ್, ಪುಣೆ) ಪರಿಕಲ್ಪನೆ ಮಾಡಿದ್ದಾರೆ. ಅವರು ಪುಣೆ ಮತ್ತು ಯುಎಇಯಲ್ಲಿ ರೆಸ್ಟೋರೆಂಟ್‌ಗಳ ಸರಣಿಯನ್ನು ಹೊಂದಿದ್ದಾರೆ.ಅವರು ಹೊರನಾಡ ಕನ್ನಡ ರತ್ನ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ ಸುಧಾಕರ ಶೆಟ್ಟಿಯವರ ಸಹೋದರರಾಗಿದ್ದಾರೆ, ಡಾ. ಸುಧಾಕರ್ ಶೆಟ್ಟಿಯವರು ಸತತ 4 ಬಾರಿ ಕೇಂದ್ರ ಸರಕಾರದ ರಕ್ಷಾ ಮಂತ್ರಿ ಅವಾರ್ಡ್ ಪುರಸ್ಕೃತ ಪುಣೆ ವೈದ್ಯಕೀಯ ತಂಡದ ಸದಸ್ಯರಾಗಿದ್ದು. ಪುಣೆಯ ಬೇಬಿ ಫ್ರೆಂಡ್ ಕ್ಲಿನಿಕ್ ನ ಮಾಲಕರಾಗಿ ಕಳೆದ36 ವರ್ಷಗಳಿಂದ ಪುಣೆಯಲ್ಲಿ ಮಕ್ಕಳ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಇತ್ತೀಚೆಗೆ ತುಳುನಾಡ ಧನ್ವoತರಿ ಪ್ರತಿಷ್ಟಿತ ಬಿರುದು ಕೂಡಾ ದೊರಕಿರುತ್ತದೆ ಸಂಪಿಗೆ ರೆಸಾರ್ಟ್ SAPPHIRE- ಬ್ಯಾಂಕ್ವೆಟ್ ಹಾಲ್, ಪೋಲಾರಿಸ್-ದ ಲಾಂಜ್, ಕ್ವಾಲಿಟಿ-ರೆಸ್ಟೋರೆಂಟ್, ಹಾರಿಜಾನ್-ರೂಫ್ ಟಾಪ್ ರೆಸ್ಟೋರೆಂಟ್, SPA ಮತ್ತು ಜಿಮ್, ಮಕ್ಕಳ ಆಟದ ಪ್ರದೇಶ, ಪೂಲ್‌ಸೈಡ್ ವಿಲ್ಲಾಗಳು, ಕಾರ್ಯನಿರ್ವಾಹಕ/ಡಿಲಕ್ಸ್ ಕೊಠಡಿಗಳು ಮತ್ತು ಸೂಟ್‌ಗಳನ್ನು ಹೊಂದಿದೆ.19/12/2024 ರಿಂದ ಸಾರ್ವಜನಿಕರಿಗೆ ರೆಸಾರ್ಟ್ ತೆರೆದಿರುತ್ತದೆ. ಇದನ್ನು ಹರಿಪ್ರಸಾದ್ ಶೆಟ್ಟಿ (ಅತಿಥಿ ಮತ್ತು ಕ್ವಾಲಿಟಿ ರೆಸ್ಟೋರೆಂಟ್‌ಗಳು, ಪುಣೆ) ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಆಳ್ವಾಸ್ ವಿರಾಸತ್ ನಲ್ಲಿ ನೃತ್ಯ ವರ್ಷಧಾರೆ, ರಾಮ- ಕೃಷ್ಣರ ನೃತ್ಯಾರಾಧನೆ

ವಿದ್ಯಾಗಿರಿ (ಮೂಡುಬಿದಿರೆ): ಆಗಸದಲ್ಲಿ ಆಗಾಗ್ಗೆ ಮೋಡ ಕವಿದ ವಾತಾವರಣ ಕಂಡರೆ, ಇತ್ತ ‘ಆಳ್ವಾಸ್ ವಿರಾಸತ್’ನ ವೇದಿಕೆಯಲ್ಲಿ ಕಥಕ್ ನೃತ್ಯ ವರ್ಷಧಾರೆ. ಪ್ರೇಕ್ಷಕರೆಲ್ಲ ನೃತ್ಯ ರೂಪಕದ ಸಿಂಚನದಲ್ಲಿ ಮಿಂದೆದ್ದರು.ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮAದಿರದಲ್ಲಿ 30ನೇ ವರ್ಷದ ಆಳ್ವಾಸ್ ವಿರಾಸತ್‌ನ ಮೂರನೇ ದಿನದ ಗಾಯನದ ಬಳಿಕ ಮೂಡಿ ಬಂದ ಸಾಂಸ್ಕೃತಿಕ ವೈಭವ.ಆಶಿಂಬAಧು ಚಟರ್ಜಿ ನಿರ್ದೇಶನದಲ್ಲಿ ಪ್ರಸ್ತುಗೊಂಡ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರ ಕಥಕ್ ‘ವರ್ಷಧಾರೆ’ಯನ್ನೇ ಸುರಿಸಿತು. ತುಂತುರು ಮಳೆಯನ್ನು ಸಂಭ್ರಮಿಸುವ ಋತುವಿನ ದರ್ಶನ ನೀಡಿತು. ಉತ್ತರದ ಕಥಕ್ ಬಳಿಕ ನೃತ್ಯ ಲೋಕವು ದ್ವೀಪ ರಾಷ್ಟ್ರ ಶ್ರೀಲಂಕಾ ಸಂಸ್ಕೃತಿಗೆ ಹೆಜ್ಜೆ ಇಟ್ಟಿತು.ಅಖಿಲ ಪರಿಮಳನ್ ನಿರ್ದೇಶನದ ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ‘ಭೂಮಿ’ ದ್ವೀಪ ದೇಶದ ಚಮತ್ಕಾರದ ಶಕ್ತಿಯೆಡೆಗೆ ಕೊಂಡೊಯ್ಯಿತು. ತಿರುಗುವ ಚಕ್ರ, ಹಾರುವ ಬೆಂಕಿ ಉಂಡೆ ಇತ್ಯಾದಿಗಳು ಸೊಬಗೇರಿಸಿದವು.ವಿಷ್ಣು, ಸಮನ್, ಕಾತರಂಗA, ಪಟ್ಟಿನಿ, ಕಾಳಿ ಮತ್ತು ಸುನಿಯಂ ಶ್ರೀಲಂಕಾದ ಪ್ರಮುಖ ದೇವ-ದೈವಗಳಾಗಿವೆ. ಅವರ ಆರಾಧನಾ ವಿಧಾನವಾಗಿ ನೃತ್ಯ ಬೆಳೆದು ಬಂದಿದೆ. ಶ್ರೀಲಂಕಾದ ಪ್ರಮುಖ ಪಟ್ಟಣವಾಗಿದ್ದ ‘ಕ್ಯಾಂಡಿ’ಯಲ್ಲಿ ಬೆಳೆದು ಬಂದ ನೃತ್ಯ ಪ್ರಕಾರವೇ ಶ್ರೀಲಂಕಾದ ನೃತ್ಯಪ್ರಕಾರವಾಗಿ ರೂಪುಗೊಂಡಿದೆ. ಶ್ರೀಲಂಕಾ ಭೂಮಿ ನೃತ್ಯ ರೂಪಕವು ಉದರಾಟ ನಾಟ್ಯ , ಪಹದಾ ರತ ನಾಟ್ಯ , ಸಬರಗಮುವಂ ನಾಟ್ಯಗಳನ್ನು ಒಳಗೊಂಡಿದೆ.ಬಳಿಕ ಯುವಜನತೆಯ ಮನಸೂರೆಗೊಳಿಸಿದ ಸೃಜನಶೀಲ ರೂಪಕ ನೃತ್ಯ. ‘ಘೂಮರ್ ಘೂಮರ್ ಘೂಮೇ…’ ಹಾಗೂ ‘ಚುಪಪೇ ಘೋರಿ ಚಿಂಗಾರಿ’ ಹಾಡಿಗೆ ಕುಣಿತದ ಆರ್ಭಟ. ಗುಜರಾತಿ, ರಾಜಸ್ತಾನಿ ಸೇರಿದಂತೆ ಉತ್ತರದ ಕುಣಿತಗಳ ಮಿಶ್ರಣದ ಜೊತೆ ಮಣಿಪುರದ ಕಸರತ್ತು ಸಾಥ್ ನೀಡಿತು.ಪಾಶ್ಚಾತ್ಯ, ಭಾರತೀಯ, ಕಸರತ್ತುಗಳ ಮಿಶ್ರಣದಂತೆ ಸಂಕಲಿಸಿದ ಸೃಜನಾತ್ಮಕ ನೃತ್ಯ ಹೊಸ ಲೋಕಕ್ಕೆ ಕೊಂಡೊಯ್ಯಿತು. ಆಳ್ವಾಸ್ ಸಾಂಸ್ಕೃತಿಕ ತಂಡದ ಕಲಾ ವೈಭವದ ಅನಂತರ ಉಡುಪಿಯ ಕೊಡವೂರು ನೃತ್ಯ ನಿಕೇತನ ತಂಡವು ‘ಕಾಂತಾರ’ ಖ್ಯಾತಿಯ ಮಾನಸಿ ಸುಧೀರ್ ನೇತೃತ್ವದಲ್ಲಿ ‘ಪುಷ್ಪಾಂಜಲಿ’ ನೃತ್ಯ ಪ್ರಸ್ತುತ ಪಡಿಸಿತು.ವಿದ್ವಾನ್ ಸುಧೀರ್ ರಾವ್ ಹಾಗೂ ಮಾನಸಿ ಸುಧೀರ್ ಸಂಯೋಜನೆಯಲ್ಲಿ ನೃತ್ಯ ಮೂಡಿಬಂತು. ಬಳಿಕ ಸುರಭಿ ಕೃಷ್ಣನಾಗಿ ‘ಕಾಳಿಂಗ ಮರ್ಧನ’ ಪ್ರಸ್ತುತ ಪಡಿಸಿದರು.ಬೆಂಗಳೂರಿನ ಚಿಗುರು ನೃತ್ಯಾಲಯ ಸರಿತಾ ಕೊಠಾರಿ ನಿರ್ದೇಶನದಲ್ಲಿ ‘ಗಣಪತಿ ತಾಳಂ’ ಹಾಗೂ ‘ ಅಭಂಗ’ಭರತನಾಟ್ಯ ರೂಪಕ ಪ್ರಸ್ತುತ ಪಡಿಸಿದರು. ಮನಮೋಹನ ರಾಧಾರಮಣನ ಆರಾಧನೆ ನಡೆಯಿತು. ನಾಟ್ಯ ಪಾಂಡುರAಗ ನರ್ತನ ಮನಸೆಳೆಯಿತು.ಮಂಗಳೂರಿನ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳು ವಿದ್ವಾನ್ ಶಾರದಾ ಮಣಿಶೇಖರ್ ಹಾಗೂ ಶ್ರೀಲತಾ ನಾಗರಾಜ್ ನಿರ್ದೇಶನದಲ್ಲಿ ‘ ಶ್ರೀ ರಾಮ ತೋಡಯ್ಯ ಮಂಗಳA’ ಪ್ರಸ್ತುತ ಪಡಿಸಿದರು.ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ಪ್ರವಿತಾ ಅಶೋಕ್ ನಿರ್ದೇಶನದಲ್ಲಿ ರಾಧಾಕೃಷ್ಣ, ಗೀತೋಪದೇಶ ಬಿಂಬಿಸುವ ‘ಗೋಕುಲ ವೃಂದಾವನ’ ಪ್ರಸ್ತುತ ಪಡಿಸಿದರು. ‘ಗೋಕುಲ ಬೃಂದಾವನ ಸುಂದರA ಗೋಪಾಲಕೃಷ್ಣಂ ಭಜೆ’ ಸ್ತುತಿಗೆ ನೃತ್ಯ ಮಾಡಿದರು.ಮಂಗಳೂರಿನ ಗಾನ ನೃತ್ಯ ಅಕಾಡೆಮಿಯ ವಿದ್ಯಾಶ್ರೀ ರಾಧಾಕೃಷ್ಣ ನಿರ್ದೇಶನದಲ್ಲಿ ‘ ಭಜನ್ ನಾಟ್ಯ ಸೌರಭ’ ಪ್ರಸ್ತುತ ಪಡಿಸಿದರು. ರಾಮ – ಕೃಷ್ಣ ರ ಭಜನೆ ‘ಜಯ ಜಯ ರಾಮ ಹರೇ ಕೃಷ್ಣ ಹರೇ…’ ಮೊಳಗಿತು.ನಿತೀಶ್ ಮಾರ್ನಾಡು ಕಾರ್ಯಕ್ರಮ ನಿರೂಫಿಸಿದರು.ಇದಕ್ಕೂ ಮೊದಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ನೇತೃತ್ವದಲ್ಲಿ ಅತಿಥಿಗಳಾದ ಮಂಗಳೂರು ಭಾರತ್ ಇನ್‌ಫ್ರಾಟೆಕ್‌ನ ಮುಸ್ತಾಫ ಎಸ್.ಎಂ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್, ಉದ್ಯಮಿ ಶ್ರೀಪತಿ ಭಟ್ ದೀಪ ಪ್ರಜ್ವಲನ ಮಾಡಿದರು.ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ, ಮೂಡುಬಿದಿರೆ ಜೈನಮಠದ ಭಟ್ಟಾರಕ ಪಂಡಿತಾಚಾರ್ಯವರ್ಯ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಆಳ್ವಾಸ್ ವಿರಾಸತ್ : ಗೋದೂಳಿಯಲ್ಲಿ ಗಜಲ್ -ಭಜನ್ ಸುಧೆ ಹರಿಸಿದ ಒಸ್ಮಾನ್ -ಅಮೀರ್ ಮೀರ್, ಸಾಥ್ ನೀಡಿದ ಪಾರತಿ ವ್ಯಾಸ್ಪ್ರೀತಿ, ಭಕ್ತಿ, ದೇಶಪ್ರೇಮ ಹೊನಲಾಗಿಸಿದ ‘ಸೌಹಾರ್ದತೆಯ ಗಾನ ಸಂತ’

ವಿದ್ಯಾಗಿರಿ (ಮೂಡುಬಿದಿರೆ): ಗುರುವಾರ ಬಿದಿರೆಯ ಆಗಸದಲ್ಲಿ ಹೊಂಗಿರಣ ಮೂಡಿದ್ದರೆ, ‘ಆಳ್ವಾಸ್ ವಿರಾಸತ್’ನ ವೇದಿಕೆಯಲ್ಲಿ ‘ಸಬ್ ಕಾ ಶುಕ್ರಿಯಾ’ ಎಂದು ವಿನಮ್ರತೆ ವ್ಯಕ್ತಪಡಿಸಿ ಒಸ್ಮಾನ್ ಮೀರ್ ಧನ್ಯರಾದರು, ‘ತುಜ್ ಸೇ ಮೇರಾ ಜೀನಾ ಮರ್ನಾ… ಮೈ ಮುಸಾಫಿರ್ ತು ಮುಸಾಫಿರ್’ ಎಂದು ಅವರ ಪುತ್ರ ಅಮೀರ್ ಮೀರ್ ವೈರಲ್ ಆದ ತಮ್ಮ ಆಲ್ಬಂನ ಗಾನದ ಹೊನಲು ಹರಿಸಿದರು. ‘ತೇರೆ ಬಿನಾ ಸೋನ ಹೀ ಸಕ್ತೇ….’ ಎಂದಾಗ ಸಭಾಂಗಣ ಕಿಕ್ಕಿರಿದ ವಿದ್ಯಾರ್ಥಿಗಳ ಉದ್ಘಾರ ನಿದ್ದೆಗೆಡಿಸಿತು.ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮAದಿರದಲ್ಲಿ ೩೦ನೇ ವರ್ಷದ ಆಳ್ವಾಸ್ ವಿರಾಸತ್‌ನ ಮೂರನೇ ದಿನದ ಕಾರ್ಯಕ್ರಮದ ಗೋದೂಳಿ ಸೊಬಗು. ಅದು ಸೌಹಾರ್ದತೆಯ ಮೆರುಗು.ಬಳಿಕ ಅಮೀರ್ ಮೀರ್ ಅವರು ‘ಸಂತ್ … ಸಜ್ ನಾ ತೇರೆ ಬಿನಾ…’ ಎಂದು ಹಾಡಿದಾಗ ತಂದೆ ಒಸ್ಮಾನ್ ಗಾಯನದಲ್ಲಿ ಜೊತೆಯಾದರು. ಪಾರತಿ ವ್ಯಾಸಿ ಸಾಥ್ ನೀಡಿದರು.ದೀರ್ಘ ಅಗಲುವಿಕೆಯ ‘ಮೌತ್ ನಾ ಆಯಿ.. ಲಂಬೀ ಜುದಾಯಿ…’ ಎಂಬ ನಟಿ ರೇಖಾ ನೆಚ್ಚಿನ ಹಾಡನ್ನು ಅಮೀರ್ ಉಲಿದಾಗ, ಎಲ್ಲ ಜನಸ್ತೋಮ ‘ ಲಂಬೀ ಜುದಾಯಿ’ ಎಂದು ಕೋರಸ್ ನೀಡಿದರು. ‘ಹೀರೋ’ ಸಿನಿಮಾದ ನೆನಪಿಗೆ ಜನರನ್ನು ಕೊಂಡೊಯ್ಯಿತು. ಹಿರಿಯರಿಗೆ ಜಾಕಿ- ಮೀನಾಕ್ಷಿ ನೆನಪು.‘ಸಜ್ ದಾ ತೆರಾ ಸಜ್ ದಾ’ ಸಾಲಿನ ‘ಮೈ ನೇಮ್ ಈಸ್ ಖಾನ್’ ಸಿನಿಮಾದ ಗಾನಕ್ಕೆ ವಿದ್ಯಾರ್ಥಿಗಳೂ ಜೊತೆ ಹಾಡಿದರು. ತಕ್ಷಣವೇ ‘ಮಿಥುವಾ…’ ಗಾನಸುಧೆ. ‘ ಚಾಂದ್ ನಜರ್ ಆಯಾ..ಆಯಾ ಆಯಾ…‘ತೇರಿ ಯಾದ್ ಸಾಥ್ ಹೇ’ ಹಾಡಿನ ಮೂಲಕ ಗಜಲ್ ಗಾಯಕ ನಸ್ರುತ್ ಫತೇ ಆಲಿಖಾನ್ ಹಾಗೂ ‘ನಮಸ್ತೇ ಲಂಡನ್’ ನೆನಪಿಸಿದರು.‘ವಿರಾಸತ್ ಪ್ರೇಕ್ಷಕರು, ಪ್ಯಾರಾ(ಪ್ರೀತಿ), ಸಂಯಮ್ (ತಾಳ್ಮೆ)ಯಿಂದ ಆಲಿಸುತ್ತಿದ್ದೀರಿ. ನಿಮ್ಮ ಮುಸ್ಸಂಜೆಯ ಭಾವಕ್ಕೆ ನಿಮ್ಮನ್ನು ನಾನು ‘ದರ್ಭಾರಿ’ ರಾಗದಲ್ಲಿ ಸ್ವಾಗತಿಸುತ್ತೇನೆ’ ಎಂದು ‘ತೇರೆ ಸಖೀ’ ಹಾಡಿದರು. ‘ನನ್ನ ಜೊತೆ ಹಾಡ್ತೀರಾ’ ಎಂದ ಒಸ್ಮಾನ್ ‘ತೆರೆ ನಾಮ್ ಸೇ ಜೀಲೂ .. ‘ ಹಾಡಿದಾಗ ‘ತೇರೀ ದೀವಾನಿ’ ಎಂದು ಪ್ರೇಕ್ಷಕರು ಸ್ವರ ನೀಡಿದರು. ಕೈಲಾಶ್ ಖೇರ್ ನೆನಪು…ಇಷ್ಕ್ ಜುನೂನ್ ಜಬ್ ಹಾತ್ ಸೇ ಬಡ್ ಜಾಯೇ…ಶೇರ್ ಹೇಳಿದಾಗ ಎಲ್ಲೆಲ್ಲೂ ‘ವ್ಹಾ ವ್ಹಾ ವ್ಹಾ’. ಇನ್ನಷ್ಟು ಶೇರ್ ಹೇಳಿ ಹುರಿದುಂಬಿಸಿದರು. ‘ಇಷ್ಕ್ ಸಚ್ಚಾ ಹೋ ತೋ ಖುದಾ ಮಿಲ್ ತಾ ಹೇ’ ಎಂದಾಗ ಪ್ರೀತಿಯ ಭಕ್ತಿ ಅಲೆ ಸಭಾಂಗಣದಲ್ಲಿ ಉಕ್ಕೇರಿತು.‘ಮರ್ ಮನ್ ಮೋಹಿ ಘರ್’ ಎಂದು ಪಾರತಿ ವ್ಯಾಸ್ ಗುಜರಾತಿ ಹಾಡನ್ನು ಢೋಲಕ್ ನಿನಾದದ ಜೊತೆ ಹಾಡಿದಾಗ ಅಮೀರ್ ಯುಗಳ ಹಾಡಿದರು.ಪಾರತಿ ವ್ಯಾಸ್ ಅವರು ಗಾರ್ಭಾದ ಹಾಡನ್ನು ‘ಮನಿಯಾರೋ’ ಎಂದಾಗ ‘ ಹೋವೇ ಹೋವೇ’ ಎಂದು ಶ್ರೋತ್ರುಗಳು ದನಿಯಾದರು. ಅಮೀರ್, ‘ಜೋಗಾಡಾ ತಾರಾ…ರಂಗೀಲಾ ತಾರಾ… ಹೇ…’ ಹಾಡಿ ಉದ್ಘಾರ ಹೆಚ್ಚಿಸಿದರು.‘ನೀವು ಖುಷಿಯಾಗಿದ್ದೀರಿ’ ಎಂದ ಒಸ್ಮಾನ್ ಮೀರ್, ಕರಾವಳಿಯ ಬೆಡಗಿ ದೀಪಿಕಾ ಪಡುಕೋಣೆ ‘ಗೋಲಿಯೋಂಕಿ ರಾಸಲೀಲಾ ರಾಮ್‌ಲೀಲಾ’ ಸಿನಿಮಾದಲ್ಲಿ ರಣವೀರ್ ಜತೆ ಹೆಜ್ಜೆ ಹಾಕಿದ ‘ಮನ್ ಮೋರ್ ಬನಿ ತಾಂಗಟ್‌ಕರೇ’ ಹಾಡನ್ನು ಹಾಡಿದರು. ೨೦೧೩ರಲ್ಲಿ ಈ ಹಾಡಿನ ಮೂಲಕ ಹಿನ್ನೆಲೆ ಗಾಯಕರಾಗಿ ಒಸ್ಮಾನ್ ಮೀರ್ ಬಾಲಿವುಡ್ ಪ್ರವೇಶಿಸಿದ್ದರು. ಹೇಮು ಗಾಢ್ವಿ ಈ ಹಾಡನ್ನು ಸಂಯೋಜಿಸಿದ್ದರು.‘ನಾಲ್ಕೂ ದಿಕ್ಕಿನಲ್ಲಿ ಸುರಿವ ಮಳೆ ಕಂಡಾಗ ನನ್ನ ಹೃದಯ ಅಚ್ಚರಿ ಪಡುತ್ತಿದೆ. ನನ್ನ ಹೃದಯ ನವಿಲಿನಂತೆ ನರ್ತಿಸುತ್ತಿದೆ’ ಎಂಬ ಭಾವಾರ್ಥದ ‘ಮನ್ ಮೋರ್ ಬನಿ ತಾಂಗಟ್‌ಕರೇ…’ ಸಾಲುಗಳನ್ನು ಹಾಡಿದಾಗ ವಿರಾಸತ್ ನ ವಿದ್ಯುದ್ದೀಪಗಳಿಂದ ಅಲಂಕೃತ ಗೊಂಡ ಸಭಾಂಗಣದಲ್ಲಿ ನೆರೆದ ಜನರೇ ಕುಳಿತಲ್ಲೇ ನವಿಲಿನಂತೆ ಸಂಭ್ರಮಿಸಿದರು. ಆಗಸದಲ್ಲಿ ಮೋಡ ಕವಿದಿದ್ದು, ಇನ್ನೇನು ಮಳೆ ಸಿಂಚನ ಸುರಿಸುವಂತಿತ್ತು ನೀಲನಭ. ಪ್ರೇಕ್ಷಕರೆಲ್ಲ ಕೈ ಎತ್ತಿ ಚಪ್ಪಾಳೆ ಹೊಡೆದರು.ಬಾಲಿವುಡ್ ನಿರ್ದೇಶಕ ಸಂಜಯ ಲೀಲಾ ಭನ್ಸಾಲಿ ಅವರು ಒಸ್ಮಾನ್ ಅವರನ್ನು ಈ ಹಾಡಿಗೆ ಮೆಚ್ಚಿಕೊಂಡಿದ್ದರು. ನAತರ ದೇವದಾಸ್ ಸಿನಿಮಾದ ‘ಡೋಲ್ ಬಾಜೆ…’ ಸಡಗರ. ‘ಬಂ ಬಂ ಬಂ’ ಎಂಬ ರಾಗಕ್ಕೆ ಅಬ್ದುಲ್ ಮೀರ್ ಮತ್ತು ಅಯ್ಯುಬ್ ಮೀರ್ ಮೊಣಕೈ ಬಳಸಿ ತಬಲಾ ನುಡಿಸಿದರು.ಅವರ ತಬಲಾ ಚಳಕಕ್ಕೆ ಉದ್ಘಾರದ ಅಲೆ.ವಾಡಿಯಾ ಸಹೋದರರ ಖ್ಯಾತಿಯ ‘ಓ ತೂ ಮಾನೆ ಯ ಮಾನೆ ದಿಲ್ ದಾರಾ…ಆಸಾನ್ ತೇನು ರಬ್ ಮಾನಿಯಾ…’ ಹಾಡಿದಾಗ ವಯೋಲಿನ್ ನಲ್ಲಿ ಪಿಂಟೂಭಾಯಿ ಮಂತ್ರಮುಗ್ಧಗೊಳಿಸಿದರು.‘ಖಾಲಿ ಖಾಲಿ ಜುಲ್ಫೋಂಕಿ ಫಂದೇ ನಾ ಡಾಲೋ….ತುಮಾರಿ ಜವಾನಿ ತುಮ್ ಕೋ ಮುಬಾರಕ್’ ಎಂದು ಹಾಡಿದ ಮೀರ್ ತಂದೆ- ಮಗ, ಮತ್ತೆ ನಸ್ರುತ್ ಫತೇ ಆಲಿಖಾನ್ ಘಜಲ್ ಅನುರಣಿಸಿದರು. ‘ಹಮೇ ಜಿಂದ ರೆಹೆನೋ ದೋ ಹೇ ಹುಸ್ ನ್ ವಾಲೋ…’೧೯೬೫ರಲ್ಲಿ ಲತಾ ಮಂಗೇಶ್ಕರ್ ಹಾಡಿದ ‘ವೋ ಕೌನ್ ತಿ’ ಸಿನಿಮಾದ ‘ಲಗ್ ಜಾ ಗಲೇ ..’ ಪಾರತಿ ಹಾಡಿದರು. ಆಗ ಅಮೀರ್, ‘ ತುಹಿರೇ ತುಹಿರೇ.. ತೇರೆ ಬಿನಾ ಮೈ ಕೈಸೇ ಜೀವೂ’ ಮೂಲಕ ಹರಿಹರನ್ ಹಾಡಿದ ‘ಬಾಂಬೆ’ ಕಾಲ ನೆನಪಿಸಿದರು. ಅರವಿಂದ ಸ್ವಾಮಿ -ಮನಿಷಾ ಕೊಯಿರಾ ನಟನೆಯ ಮೆಲುಕು.ಸೂಫಿ ಪರಂಪರೆಯ ಜ್ಞಾನದ ಅತ್ಯುನತ ಸಂತ ಖಲಂದರ್ (ಆಧ್ಯಾತ್ಮಿಕ ಪ್ರೀತಿ) ಅವರನ್ನು ಭಜಿಸಿ ಘಜಲ್ ಪಿತಾಮಹ ಅಮೀರ್ ಖುಸ್ರೋ ಬರೆದ ಘಜಲ್, ‘ಮಸ್ತ್ ಖಲಂದರ್… ಲಾಲ್ ಖಲಂದರ್.. ‘ ಹೊಮ್ಮಿಸಿದಾಗ ಭಾಂಗಣದಲ್ಲಿ ಸಂಚಲನ ಮೂಡಿಸಿತು. ‘ಪ್ರತಿ ಉಸಿರಿನ ಭಾವಪರವಶತೆ…’ ಸಾಲುಗಳನ್ನು ಜನ ಒಂದೇ ಉಸಿರಿನಲ್ಲಿ ಆಲಿಸಿದಂತೆ ಪರವಶರಾದರು.ಬಳಿಕ, ‘ಅಖಿಯಾ ಉಜಿಯಾ ದಿಯಾ ವಜಾ ಮಾರ್ ದಾ’ ಹಾಡಿದರು.ಎ.ಆರ್. ರೆಹಮಾನ್ ಅವರ ಸಂಗೀತ ಸಂಯೋಜನೆಯನ್ನು ಆರಾಧಿಸುವ ಒಸ್ಮಾನ್ ಮೀರ್ ಅವರಿಗೆ ಗಜಲ್ ಖ್ಯಾತಿಯ ನಸ್ರುತ್ ಫತೇ ಆಲಿಖಾನ್, ಜಗ್‌ಜಿತ್ ಸಿಂಗ್., ಮೆಹಂದಿ ಹಸನ್, ಗುಲಾಂ ಆಲಿ ಖಾನ್ ಗಾನಗಳು ಬಲು ಇಷ್ಟ. ಹೀಗಾಗಿ ಅವರು ‘ ಮಾ ತುಜೇ ಸಲಾಂ, ವಂದೇ ಮಾತರಂ’ ಹಾಡಿದಾಗ ಪ್ರೇಕ್ಷಕರೆಲ್ಲ ಮೊಬೈಲ್ ಬೆಳಗಿ ಬೀಸಿದರು. ‘ತೆರೀ ಮಿಠೀ ಮೇ ಮಿಲ್ ಜಾವಾ..’ ಸಾಲನ್ನು ಮಧ್ಯೆ ಸಂಯೋಜಿಸಿದರು. ‘ವಿರಾಸತ್’ನಲ್ಲಿ ದೇಶಭಕ್ತಿಯ ಅಲೆ ಉಕ್ಕಿಸಿತು. ‘ಭಾರತ್ ಮಾತಾ ಕೀ ಜೈ ‘ ಘೋಷಣೆ ಕೂಗಿದರು.ಶೇರ್ ಮೂಲಕ ‘ ನಿಮ್ಮೆಲ್ಲರ ಪ್ರೀತಿ ನಮ್ಮ ಜೊತೆ ಇರಲಿ’ ಎಂದು ಸಂದೇಶ ಸಾರಿದರು.ಮೇ ತೊ ಚುಂಡಾಡಿ ಒದಿ ತಾರಾ ನಾಮ್ ನಿ’ ಹಾಡಿನ ಮೂಲಕ “ಧೋಲಿವುಡ್’ (ಗುಜರಾತಿ ಸಿನಿಮಾ)ಗೆ ಕಾಲಿಟ್ಟ ಒಸ್ಮಾನ್ ಮೀರ್ ಹಾಡಿಗೆ ಸ್ಯಾಂಡಲ್‌ವುಡ್ ರಾಜ್ಯದ ಕೋಸ್ಟಲ್‌ವುಡ್ ಜನತೆ ತಲೆದೂಗಿದರು.ಧೋಲಿವುಡ್ ಹಾಗೂ ಬಾಲಿವುಡ್ ಹಿನ್ನೆಲೆ ಗಾಯಕರಾದ ಅವರು ೨೪ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ಕಛೇರಿ ನೀಡಿದ್ದಾರೆ. ಅವರನ್ನು ‘ಸೌಹಾರ್ದತೆಯ ಸಂಕೇತ’ ಎಂದು ಉಲ್ಲೇಖಿಸಲಾಗುತ್ತದೆ.ಅರೇಬಿಯಾದಲ್ಲಿ ಹುಟ್ಟಿದ ಪ್ರಗಾಥ ಅಥವಾ ಮೇಳಗೀತೆಯಾದ ‘ಗಜಲ್’, ಹಿಂದೂ ಭಕ್ತಿರಸದ ‘ಭಜನ್’, ದೇಶದ ನೆಲದ ಸೊಗಡಿನ ‘ಜಾನಪದ’ ಹಾಗೂ ಭಾರತದ ‘ಶಾಸ್ತ್ರೀಯ ’ ಗಾಯನದಲ್ಲೂ ಒಸ್ಮಾನ್ ಮೀರ್ ಸ್ವರಮಾಧುರ್ಯ ಹರಿಸಿದ್ದಾರೆ.ತಬಲಾದಲ್ಲಿ ಅಬ್ದುಲ್ ಮೀರ್ ಮತ್ತು ಅಯ್ಯುಬ್ ಮೀರ್, ಡೋಲಕ್ ನಲ್ಲಿ ಹಾರೂನ್ ಮೀರ್, ಒಕ್ಟೊವಾದಲ್ಲಿ ಸಾಫಿಲ್ ಮೀರ್, ಬಂಜೋದಲ್ಲಿ ನಜೀರ್ ಮೀರ್, ವಯೋಲಿನ್ ಪಿಂಟು ಭಾಯಿ, ಗಿಟಾರ್ ನಲ್ಲಿ ಉತ್ಕರ್ಷ್, ಕೀ ಬೋರ್ಡ್ ನಲ್ಲಿ ಚಂದನ್ ವಘೇಲಾ ಸಾಥ್ ನೀಡಿದರು. ಹೀರಂ ಖಾನ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ವಿರಾಸತ್: ರಥ ಸ್ವಸ್ಥಾಗಮನ, ಭಾನುವಾರವೂ ಇರಲಿದೆ ಮೇಳ

ವಿದ್ಯಾಗಿರಿ(ಮೂಡುಬಿದಿರೆ): ಬಾನಂಗಳದಲ್ಲಿ ಸಿಡಿಮದ್ದುಗಳ ಚಿತ್ತಾರ, ವೇದಘೋಷಗಳ ನಿನಾದ, ಭಜನೆಗಳು, ಪುಷ್ಪ ಪಲ್ಲಕ್ಕಿಗಳು, ಪ್ರೇಕ್ಷಕರ ಜಯ ಘೋಷ ಹಾಗೂ ಮಂಗಳವಾದ್ಯಗಳೊಂದಿಗೆ ಸಾಂಸ್ಕೃತಿಕ ರಥ ಎಡದಿಂದ ಬಲಕ್ಕೆ ಸಂಚರಿಸಿ ಸ್ವಸ್ಥಾನಕ್ಕೆ ಮರಳಿ, ಧ್ವಜ ಅವರೋಹಣದೊಂದಿಗೆ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘೩೦ನೇ ವಿರಾಸತ್‌’ ನ ಸಾಂಸ್ಕೃತಿಕ ಕರ‍್ಯಕ್ರಮಗಳಿಗೆ ಶನಿವಾರ ರಾತ್ರಿ ತೆರೆ ಬಿತ್ತು.ಲೋಕ ಮರ‍್ಗರ‍್ಶಕರಾದ ರಾಮ-ಕೃಷ್ಣರ ಮರ‍್ತಿ ಪ್ರತಿಷ್ಠಾಪಿಸಿದ ಸಾಂಸ್ಕೃತಿಕ ರಥವನ್ನು ಮುಖ್ಯ ವೇದಿಕೆಯ ಮುಂಭಾಗದಲ್ಲಿ ಎಡದಿಂದ ಬಲಕ್ಕೆ ಎಳೆಯಲಾಯಿತು.ಇದಕ್ಕೂ ಮೊದಲು ಸಣ್ಣ ರಥದಲ್ಲಿ ಗಣಪತಿ, ಪಲ್ಲಕ್ಕಿಯಲ್ಲಿ ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ ಹನುಮಂತ, ಸಂಪತ್ತಿನ ಧ್ಯೋತಕವಾದ ಮಹಾಲಕ್ಷ್ಮಿ ಹಾಗೂ ವಿದ್ಯಾಮಾತೆ ಮಹಾ ಸರಸ್ವತಿ ಮರ‍್ತಿಗಳನ್ನು ಕರೆ ತರಲಾಯಿತು.ರಥಯಾತ್ರೆಯಲ್ಲಿ ಮೈಸೂರು, ಪಂಡರಾಪುರ ಹಾಗೂ ಮಂಗಳೂರು ಹರೇಕೃಷ್ಣ ಪಂಥದ ಭಜನಾ ತಂಡಗಳ ಭಜನೆ ಹಾಡಿನ ಮೂಲಕ ಭಕ್ತಿ ಪ್ರಭಾವಳಿ ಮೂಡಿಸಿದರು. ರ‍್ಚಕರು ಮಂತ್ರ ಘೋಷ ಮಾಡಿದರು. ತಟ್ಟಿರಾಯ, ಅಪ್ಸರೆಯರು, ಕಳಶ ಹಿಡಿದ ಯುವತಿಯರು, ಹುಲಿರಾಯ, ಕೊಂಬು, ಕಹಳೆ ನಾದ ಮೊಳಗಿದವು. ಛತ್ರಿ, ಬಿರುದಾವಳಿ, ಚಾಮರಗಳೊಂದಿಗೆ ದೊಂದಿಗಳು ಬೆಳಗಿದವು. ಮಂಗಳ ವಾದ್ಯ ನಿನಾದ ಮೂಡಿಸಿತು.ಹರಿದ್ವಾರದಿಂದ ಬಂದ ವಿಪುಲ್ ರ‍್ಮಾ ನೇತೃತ್ವದ ಗಂಗಾರತಿ ತಂಡವು ಮಂತ್ರ ಘೋಷಗಳೊಂದಿಗೆ ಆರತಿ ಬೆಳಗಿದಾಗ ಶ್ರದ್ಧೆ ಭಕ್ತಿಯ ಪ್ರಜ್ವಲನವಾಯಿತು. ಭಕ್ತರು ಜಯಕಾರ ಹಾಕಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಗಣ್ಯರು ರಥಕ್ಕೆ ಪುಷ್ಪರ‍್ಚನೆ ಮಾಡಿದರು.ನಾಳೆಯೂ ಮಹಾಮೇಳ:ಡಿಸೆಂಬರ್ ೧೫ರಂದು ಆಳ್ವಾಸ್ ವಿರಾಸತ್‌ನಲ್ಲಿ ಸಾಂಸ್ಕೃತಿಕ ಕರ‍್ಯಕ್ರಮ ಹೊರತು ಪಡಿಸಿ, ಉಳಿದೆಲ್ಲವೂ ಇರಲಿವೆ. ಬೆಳಿಗ್ಗೆ ೯ರಿಂದ ರಾತ್ರಿ ೧೦ ವರೆಗೆ ತೆರೆದಿರಲಿವೆ. ೭ ಮೇಳಗಳ ೭೫೦ಕ್ಕೂ ಮಳಿಗೆಗಳಿವೆ. ರಜಾದಿನವನ್ನು ಕುಟುಂಬದ ಜೊತೆ ಆನಂದಿಸಲು ಸಂಪರ‍್ಣ ಅವಕಾಶ ಕಲ್ಪಿಸಲಾಗಿದೆ.

ಪ್ರಾದೇಶಿಕ ವಾರ್ತೆಗಳು

DR MOHAN ALVA TO INAUGURATE SAMPIGE RESORT ON 18th DECEMBER

SAMPIGE RESORT will be inaugurated by Dr Mohan Alva,Chairman,Alvas educational foundation on the 18th of December at 10.30am at Sampige resort,Moodabidri-kinnigoli road,puttige villiage.Sampige ,Moodabidri. The other dignitaries are Captain Brijesh Chowta(MP),Umanath Kotian (MLA),Krishna Palemar(ex MLA),Abhaychandra Jain(Ex MLA),Mithun Rai,Harshavardhan Padival,Kuldeep M,Thimmayya shetty,Shripathi Bhat,M Shridhar Acharya,Narayam PM,Jayashree Amarnath Shetty,Ramachandra Alva,Purshottam Shetty Hosemaneguttu,Ravindra S Shetty Saipalace,Gajanan N Poonja,Purushotham Shetty Udupi. This resort is a masterpiece and has been conceptualized by PRAVIN SHETTY(atithi &Kwality grp of restaurants,Pune).He has a chain of restaurants in Pune & UAE.He is the brother of Horanada Kannada Ratna & Dakshina Kannada Zilla Karnataka Rajyotsava awardee Dr Sudhakar Shetty who is practising as Pediatrician in Pune Since the last 36 years Sampige resort has SAPPHIRE- banquet hall, POLARIS-the lounge,KWALITY- restaurant,HORIZON-roof top restaurant, SPA & Gym,Children play area , Poolside Villas,executive/deluxe rooms & Suites.The resort will be open for public from 19/12/2024.This was informed by Hariprasad Shetty(atithi & kwality restaurants,Pune)

ಪ್ರಾದೇಶಿಕ ವಾರ್ತೆಗಳು

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮ. ಸ್ಕೌಟ್ಸ್ ಮತ್ತು ಗೈಡ್ಸ್ ದೇಶಪ್ರಮಕ್ಕೆ ಮುನ್ನುಡಿ: ರಾಜೇಂದ್ರ ಭಟ್ ಕೆ.

ವಿದ್ಯಾಗಿರಿ(ಮೂಡುಬಿದಿರೆ): ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ರಾಷ್ಟ್ರ ಪ್ರೇಮ,ಮಾನವೀಯ ಸ್ಪರ್ಶ, ಸೇವಾ ಮನೋಭಾವ, ಹೃದಯ ಶ್ರೀಮಂತಿಕೆ ಅತಿ ಮುಖ್ಯ ಎಂದು ಶಿಕ್ಷಕ, ರಾಜ್ಯ ಮಟ್ಟದ ವಿಕಸನ ತರಬೇತಿದಾರ ರಾಜೇಂದ್ರ ಭಟ್ ಕೆ. ಹೇಳಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ 30 ನೇ ಆಳ್ವಾಸ್ ವಿರಾಸಾತ್ ಸಂದರ್ಭದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್ – ರೇಂಜರ್ಸ್ ಸಾಂಸ್ಕೃತಿಕ ಉತ್ಸವದ ಅಂಗವಾಗಿ ರತ್ನಾಕರವರ್ಣಿ ವೇದಿಕೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಗುರುವಾರ ಅವರು ಉಪನ್ಯಾಸ ನೀಡಿದರು.ಸೇವೆ ಎನ್ನುವುದು ಪ್ರತಿ ಮನುಷ್ಯನ ಹೃದಯ ಶ್ರೀಮಂತಿಕೆ ಎಂದರು.ಇನ್ನೊಬ್ಬರ ಸಂತೋಷದಲ್ಲಿ ನಮ್ಮ ನಗುವನ್ನು ನೋಡುವ ಸೇವಾ ಮನೋಭಾವ, ಮಾನವೀಯ ಮೌಲ್ಯ ಇದ್ದಾಗ ಮಾತ್ರ ನಿಜವಾದ ಬದುಕನ್ನು ಜೀವಿಸಲು ಸಾಧ್ಯ ಎಂದು ಅವರು ಹೇಳಿದರು.ಅಮ್ಮನ ಪ್ರೀತಿ, ಕಷ್ಟ, ಹಸಿವು,ನೋವು, ಬೇರೆಯವರ ಆಸೆ ನೋವಿಗೆ ಸ್ಪಂದನೆ ಇದ್ದಾಗ ಮಾತ್ರ ಸಾಧನೆಯ ಹಾದಿಯಲಿ ಮುನ್ನಡೆಯಲು ಸಾಧ್ಯ ಎಂದರು.ಪ್ರತಿಯೊಬ್ಬರಲ್ಲೂ ಶಕ್ತಿ ಇರುತ್ತದೆ. ದೃಢನಿರ್ಧಾರ, ಸಾಧನೆ ಮಾಡುವ ಮನಸ್ಸು ಇದ್ದಾಗ ನಮ್ಮ ಶಕ್ತಿಯ ಬಗ್ಗೆ ಅರಿತು ಸಾಧನೆ ಮಾಡಬೇಕು ಎಂದು ತಿಳಿಸಿದರು.ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದರೆ ಸಮಾಜಕ್ಕೆ ನಾವು ಏನಾದರೂ ನೀಡಲೇಬೇಕು. ಪ್ರತಿಭೆ, ಸತ್ವಗಳನ್ನು ಬಂಡವಾಳವಾಗಿಸಿಕೊAಡು ದೇಶ ಸೇವೆ ಮಾಡುವ ಮನೋಭಾವ ಹೊಂದಿರಬೇಕು ಎಂದರು.ಮಾಡುವ ಯಾವುದೇ ಕೆಲಸವನ್ನು ಹಣ, ಪ್ರಶಸ್ತಿ, ಅಂಕ, ಕೀರ್ತಿ, ಪ್ರಚಾರ, ಸನ್ಮಾನ, ಮೆಚ್ಚುಗೆ ಮಾತಿಗೆ ಮಾಡಬೇಡಿ ಸಂತೋಷಕ್ಕೆ ಮಾಡಿ ಎಂದರು.ರಾಜ್ಯ ಕಾರ್ಯದರ್ಶಿ ಗಂಗಪ್ಪ ಗೌಡ ಮಾತನಾಡಿ, ಏನೇ ಬದಲಾವಣೆ ಆಗಬೇಕಾದರೆ ನಿಮ್ಮ ಯೋಚನಾ ಶಕ್ತಿ ಬದಲಾಯಿಸಿಕೊಳ್ಳಿ. ಆಗ ಮಾತ್ರ ಯಾವ ಸಾಧನೆ ಮಾಡಲು ಸಾಧ್ಯ ಎಂದರು.ಓದುವ ಹವ್ಯಾಸ ಬೆಳೆಸಿಕೊಳ್ಳಿ. ಓದುವುದನ್ನು ಕಲಿತರೆ ಜೀವನವನ್ನು ಒಳ್ಳೆ ರೀತಿಯಲ್ಲಿ ಬದಲಾಯಿಸಿಕೊಳ್ಳಬಹುದು ಎಂದರು.ಭಾರತ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ. ಜಿ. ಆರ್. ಸಿಂಧ್ಯಾ,ರಾಜ್ಯ ಸಂಘಟನಾ ಆಯುಕ್ತ ಎಂ. ಪ್ರಭಾಕರ ಭಟ್, ಶಿಬಿರದ ಮೇಲ್ವಿಚಾರಕಿ ಮಲ್ಲೇಶ್ವರಿ ಜೂಜಾರೆ, ಸ್ಕೌಟ್ಸ್ ವಿಭಾಗದ ಮೇಲ್ವಿಚಾರಕ ನಿತಿನ್ ಮಿಲಾಸ್ ಇದ್ದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರೇಂಜರ್ಸ್ ನಾಯಕಿ ಸ್ವರ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Scroll to Top