ಕರಾವಳಿ ಸುದ್ದಿ

ಕರಾವಳಿ ಸುದ್ದಿ

International Women’s Day – A functional collaborative endeavour towards Accelerating Action on Health!

Through the collaborative ideation of the Diocesan Council for Catholic Women, Mangalore Diocese; Deanery Stree Sanghatan; Catholic Association of South Canara alongside the joint efforts of the healthcare partners Kanachur Medical College Hospital and ResearchCentre, Deralakatte & the Indian Cancer Society, Mangaluru – a preventive health inclusive outreach health camp was held exclusively for women on 9th March at Church School, Kinnigoli in honor of International Women’s Day. The camp focused on creatingawareness, ensuring guidance for focused health interventions and the programmed approach to healthcare – to improve the general well being of the women in our communities. The health camp commenced with the invocation and recognition of the dignitaries. On the dais were : Vicar forane – Fr Oswald Monteiro; Deanery Stree Sanghatan Director – Fr Anil D’Souza; Kinnigoli ParishPriest – Fr Joquim Fernandez; Catholic Association of South Kanara, President – Mr Ronald Gomes; DCCW President – Mrs Gretta Pinto; Deanery Stree Sanghatan President – Mrs Anitha D’Souza; Secretary – Nalini D’Souza; Kinnigoli Stree Sanghatan President – Sangeetha Sequeira; Secretary – Mrs Gretta Rodrigues; Kinnigoli Parish Council Vice President – William D’Souza & Kanachur Doctors : Dr Ashwathi, Dr Afsal, DrShreya Hegde, Dr Rashmi, Dr Habiba & Dr Simran. In the inaugural addresses Fr OzwaldMonteiro and Mrs Gretta Pinto expressed the importance of this health initiative and the need for proactively testing. Mr Ronald Gomes expressed the resemblance of the women to salt, figuratively. Cancer is non-communicable chronic health public crises; which when diagnosed on time – can be eliminated; adding life to years. The proactive healthcare partnership of Kanachur Medical CollegeHospital and Indian Cancer Society is an earnest attempt to help educate, test and guide women on the cancer of oral cavity, breast and cervix. The Kanachur team of healthcare providers offered services on The camp saw a high level of participation of women from the villages of Kinnigoli, Damaskatte, Balkunje, Mundkur, Bola, Pakshikere, Niddodi and Neerude – demonstrating a greaterunderstanding of the value of preventative women’s health and utilized the experience of the healthcare professionals from Kanachur MedicalCollege. The campaign specifically focused on increasing awarenessof women’s health issues and motivated them to prioritize their well-being, in keeping with the spirit of International Women’s Day. The accomplishment of this benevolent project highlights how important easily accessible healthcare and focused awareness campaigns are to empowering people and creating healthier communities. Numerous people’s lives were significantly impacted bythe humanitarian efforts of the partnering teams – which emphasised the need for more focused healthcare outreach teamwork in meeting community health needs; against the dreaded disease.

ಕರಾವಳಿ ಸುದ್ದಿ

ಸ್ತ್ರೀಯರು ತಮ್ಮ ಚೈತನ್ಯ ಶಕ್ತಿಯನ್ನು ಜಾಗೃತಗೊಳಿಸಿ ಸಾಧನೆ ಮಾಡಬೇಕು‌: ರೂಪಾ ಅಯ್ಯರ್

ತಪಸ್ಯದಿಂದ ಮಂಗಳೂರಿನಲ್ಲಿ “ಶೌರ್ಯ” ಕಾರ್ಯಕ್ರಮ ಮಂಗಳೂರು: ವೇದ ಕಾಲದಿಂದಲೂ ಮಹಿಳೆಯರಿಗೆ ಗೌರವ ನೀಡುತ್ತಾ ಬರಲಾಗಿದೆ‌. ಸ್ತ್ರೀಯಲ್ಲಿ ಕೀರ್ತಿ, ಕ್ಷಮೆಯೇ ನಾನು ಎಂದು ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ದಶ ಮಹಾವಿದ್ಯೆಯಲ್ಲಿ ದೇವಿ ತನ್ನ ಶಕ್ತಿ ಬೇಕೇ ಬೇಕು ಎಂದು ತೋರಿಸಿದ್ದಾಳೆ. ಹಾಗಾಗಿ ಸ್ತ್ರೀಯರು ತಮ್ಮ ಚೈತನ್ಯ ಶಕ್ತಿಯನ್ನು ಜಾಗೃತಗೊಳಿಸಿ ಸಾಧನೆ ಮಾಡಬೇಕು‌ ಎಂದು ಖ್ಯಾತ ಅಂಕಣಕಾರ್ತಿ, ಚಿತ್ರ ನಟಿ, ಚಿತ್ರ ನಿರ್ದೇಶಕಿ, ಸಮಾಜಸೇವಕಿ ರೂಪಾ ಅಯ್ಯರ್ ಹೇಳಿದರು.ಅವರು ಮಾ.8ರಂದು ಶನಿವಾರ ಮಂಗಳೂರಿನ ಪುರಭವನದಲ್ಲಿ ನಡೆದ ಲಯನ್ಸ್‌ ಇಂಟರ್‌ನ್ಯಾಷನಲ್‌ ಡಿಸ್ಟ್ರಿಕ್ಟ್ 317 , ಐಡಿಎಫ್‌ಸಿ ಫ‌ಸ್ಟ್‌ ಬ್ಯಾಂಕ್‌ ಮತ್ತು ಬಿಎಎನ್‌ಎಂಎಸ್‌ ಮಂಗಳೂರು ತಾಲೂಕು ಸಮಿತಿ ಮಹಿಳಾ ಘಟಕದ ಸಹಯೋಗದಲ್ಲಿ ತಪಸ್ಯ ಫೌಂಡೇಶನ್ ವತಿಯಿಂದ ಶೌರ್ಯದ ಹೆಸರಲ್ಲಿ ಸಾಹಸಿಗಳನ್ನು ಗೌರವಿಸುವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.ಸಮಾಜದಲ್ಲಿ ಮಹಿಳೆಯರಿಗೆ ದೌರ್ಜನ್ಯಗಳಾಗುತ್ತಿರುವುದು ಮಾತ್ರವಲ್ಲ, ದೇವಾನು ದೇವತೆಗಳಿಗೂ ಆಗಿವೆ‌, ಪುರುಷರಿಗೂ ದೌರ್ಜನ್ಯಳಾಗುತ್ತಿದೆ. ಹೀಗಾಗಿ ನಾವು ಮೇಲು ಕೀಳು ಎಂಬ ಸ್ಪರ್ಧೆಯಲ್ಲಿಯೇ ಹೋದರೆ ದೌರ್ಜನ್ಯಗಳಿಗೆ ಪರಿಹಾರ ಖಂಡಿತಾ ಸಾಧ್ಯವಿಲ್ಲ. ಸಮಾಜದಲ್ಲಿ ಅನೇಕ ಕಷ್ಟಗಳನ್ನು ಮೆಟ್ಟಿ ನಿಂತು ಸಾಧನೆಗಳನ್ನು ಮಾಡಿದವರಿದ್ದಾರೆ. ಸಾಧನೆಯನ್ನು ಯಾರು ಬೇಕಾದರೂ ಮಾಡಬಹುದು. ಸಮಾಜಕ್ಕಾಗಿ ದುಡಿಯುವವರನ್ನು ನಿರುತ್ಸಾಹಗೊಳಿಸುವವರು ಇದ್ದೇ ಇರುತ್ತಾರೆ. ಇದನ್ನೆಲ್ಲಾ ಲೆಕ್ಕಿಸದೆ ದೇವರೊಬ್ಬನೇ ನನ್ನ ಶಕ್ತಿ ಎಂದು ಅವನನ್ನೇ ಸಾಕ್ಷೀಕರಿಸಿ ಸಾಧನೆ ಮಾಡಿದರೆ ಉತ್ತಮ ಫಲಿತಾಂಶ ಖಂಡಿತಾ ಸಿಗುತ್ತದೆ ಎಂದು ರೂಪಾ ಅಯ್ಯರ್ ಹೇಳಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಲಯನ್ ಜಿಲ್ಲಾ ರಾಜ್ಯಪಾಲರು 317 ಡಿ. ಡಿಸ್ಟ್ರಿಕ್ಟ್ ಗವರ್ನರ್‌ ಲ| ಭಾರತಿ ಬಿ.ಎಂ., ಸ್ತ್ರೀ ತಮ್ಮ ಪರಿಶ್ರಮ, ಕಾಳಜಿ, ತ್ಯಾಗದ ಮೂಲಕ ಇಡೀ ಕುಟುಂಬದ ಭದ್ರತೆಯಾಗಿರುತ್ತಾಳೆ. ಇಂತಹ ಮಹಿಳೆಯರಿಗೆ ವಿಶ್ವ‌ಮಹಿಳಾ ದಿನಾಚರಣೆಯ ಶುಭಾಶಯಗಳು ಎಂದರು. ತಪಸ್ಯ ಫೌಂಡೇಶನ್ ಮೂಲಕ ಕ್ಯಾನ್ಸರ್ ರೋಗಿಗಳ ಆರೈಕೆ, ಚಿಕಿತ್ಸೆ ನೀಡಲಾಗುತ್ತಿದೆ. ಇಂತಹಾ ರೋಗಿಗಳ ಸೇವೆ ಮಾಡುವ ಸಂಸ್ಥೆಗೆ ತನು,‌ ಮನ, ಧನಗಳಿಂದ ಸಹಾಯಹಸ್ತ ನೀಡಬೇಕಾಗಿದೆ ಎಂದರು.ಬಾಲ್ಯದ ಕ್ಯಾನ್ಸರನ್ನು ಗುಣಪಡಿಸಬಹುದು(childhood cancer is curable) ಎಂಬ ಧ್ಯೇಯವಾಕ್ಯವನ್ನಿಟ್ಟು ಸಮಾಜದಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕೇವಲ 23 ದಿನಗಳಲ್ಲಿ ಮುಂಬೈಯಿಂದ ಮಂಗಳೂರಿಗೆ950 ಕಿ.ಮೀ ಓಡಿ ಬಂದು ವಿಶ್ವದಾಖಲೆ ನಿರ್ಮಿಸಿದ ಗಿರೀಶ್ ಶೆಟ್ಟಿ- ರೇಷ್ಮಾ ಗಿರೀಶ್ ಶೆಟ್ಟಿ ದಂಪತಿಯನ್ನು ಅದ್ಧೂರಿ ಮೆರವಣಿಗೆಯ ಮೂಲಕ ಕರೆದೊಯ್ಯಲಾಯಿತು.ರೂಪ ಅಯ್ಯರ್, ಲ| ಭಾರತಿ ಬಿ.ಎಂ., ಡಾ. ಆಶಾ ಜ್ಯೋತಿ ರೈ, ಸಚಿತ ನಂದಗೋಪಾಲ್ ಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಅಪೂರ್ವ ಸಾಧನೆ ಮಾಡುತ್ತಿರುವ ಗಿರೀಶ್ ಶೆಟ್ಟಿ- ರೇಷ್ಮಾ ಗಿರೀಶ್ ಶೆಟ್ಟಿ ದಂಪತಿ, ಕುಮಾರ್ ಅಜ್ವಾನಿ ದಂಪತಿ, ಹರಿದಾಸನ್ ನಾಯರ್ ದಂಪತಿಯನ್ನು ಸನ್ಮಾನಿಸಲಾಯಿತು.ಪ್ರಶಾಂತ್ ಶೆಟ್ಟಿ, ಹರಿಣಿ ಶೆಟ್ಟಿ, ನಯನ ಶೆಟ್ಟಿ ಹಾಗೂ ಅರವಿಂದ ಕುಮಾರ್ ಸನ್ಮಾನಿತರನ್ನು ಪರಿಚಯಿಸಿದರು.ವೇದಿಕೆಯಲ್ಲಿ ಶಾಸಕ ವೇವ್ಯಾಸ ಕಾಮತ್, ಕೆಎಂಸಿ ಆಸ್ಪತ್ರೆಯ ಖ್ಯಾತ ವೈದ್ಯ ಡಾ. ಹರ್ಷಪ್ರಸಾದ್ ಎಲ್., ಆಸರೆ ಚಾರಿಟೇಬಲ್ ಟ್ರಸ್ಟ್‌ ಚೇರ್‌ಪರ್ಸನ್ ಡಾ. ಆಶಾ ಜ್ಯೋತಿ ರೈ, ಬಾಲ ನ್ಯಾಯ ಮಂಡಳಿಯ ಸಚಿತಾ ನಂದಗೋಪಾಲ್, ಸವಿತಾ, ನವೀನ್ ಹೆಗ್ಡೆ ಮತ್ತಿತರರಿದ್ದರು. ಭರತನಾಟ್ಯ ಕಲಾವಿದೆ ಸುನೀತಾ ಶೆಟ್ಟಿ ಗಣೇಶನ ಸ್ಥುತಿ ನೃತ್ಯ ಮಾಡಿದರು. ದಿವ್ಯ ವಸಂತ್ ಶೆಟ್ಟಿ ಪ್ರಾರ್ಥಿಸಿದರು. ತಪಸ್ಯ ಮ್ಯಾನೇಜಿಂಗ್ ಟ್ರಸ್ಟಿ ಸಬಿತಾ ರಮಾನಾಥ್ ಶೆಟ್ಟಿ ಸ್ವಾಗತಿಸಿದರು. ಸ್ವಯಂಪ್ರೇರಿತ ದಾನಿಗಳಿಗೆ ಗೌರವಿಸಲಾಯಿತು. ಡಾ. ಮಂಜುಳಾ ಶಟ್ಟಿ ಮತ್ತು ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನವೀನ್ ಹೆಗ್ಡೆ ವಂದಿಸಿದರು. ಶಾಸಕನ ವೇದವ್ಯಾಸ್ 25 ಲಕ್ಷ ಭರವಸೆ:ವೇದಿಕೆ ಮೇಲೆ ಆಸೀನರಾದ ಸಾಧಕರ ಸಾಧನೆ, ತ್ಯಾಗದ ಮುಂದೆ ಶಾಸಕನಾದ ನನ್ನ ಸಾಧನೆ ಏನೂ ಅಲ್ಲ. ಕ್ಯಾನ್ಸರ್ ಮಕ್ಕಳಿಗಾಗಿ ನಾಲ್ಕು ತಿಂಗಳೊಳಗೆ ದಾನಿಗಳ ಸಹಕಾರದಿಂದ ರೂ. ಇಪ್ಪತ್ತೈದು ಲಕ್ಷ ಕೊಡುವುದಾಗಿ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಭರವಸೆ ನೀಡಿದ್ದಾರೆ.

ಕರಾವಳಿ ಸುದ್ದಿ

ಅಂಚೆ ಅಪಘಾತ ವಿಮೆ ಉಪಯುಕ್ತ ಯೋಜನೆಹಿರಿಯ ಅಂಚೆ ಅಧೀಕ್ಷಕ ಎಂ.ಸುಧಾಕರ ಮಲ್ಯ ಮಾಹಿತಿ

ಮಂಗಳೂರು : ಭಾರತೀಯ ಅಂಚೆ ಇಲಾಖೆಯು ಅತ್ಯಂತ ವಿಶ್ವಾಸಾರ್ಹ ಸೇವೆ ನೀಡುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದೆ. ಅಂಚೆ ಅಪಘಾತ ವಿಮಾ ಯೋಜನೆಯು ಸರಳವಾದ ಹಾಗೂ ಜನಸಾಮಾನ್ಯರ ಕೈಗೆಟುಕುವ ಉಪಯುಕ್ತ ವಿಮಾ ಯೋಜನೆಯಾಗಿದೆ ಎಂದು ಅಂಚೆ ಇಲಾಖೆಯ ಮಂಗಳೂರು ವಿಭಾಗದ ಹಿರಿಯ ಅಧೀಕ್ಷಕ ಎಂ.ಸುಧಾಕರ ಮಲ್ಯ ತಿಳಿಸಿದರು.ದ.ಕ.ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘ ಮತ್ತು ಭಾರತೀಯ ಅಂಚೆ ಇಲಾಖೆ, ಮಂಗಳೂರು ವಿಭಾಗ ಇದರ ಸಹಯೋಗದಲ್ಲಿ ಭಾನುವರ ನಗರದ ಅತ್ತಾವರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಅಂಚೆ ಜನಸಂಪರ್ಕ ಅಭಿಯಾನದಲ್ಲಿ ಅವರು ಇಲಾಖೆಯವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.ವಿಮಾ ಕಂತು 549 ರೂ.ಅಥವಾ 749 ರೂ. ಪಾವತಿಸಿದ ಬಳಿಕ ಯಾವುದೇ ಅಂಚೆ ಕಚೇರಿಯ ಮೂಲಕ ದಾಖಲೆ ಸಲ್ಲಿಸಿ ಸಣ್ಣಪುಟ್ಟಅಪಘಾತ ಸಂಭವಿಸಿದಾಗ ನಿರ್ದಿಷ್ಟ ವಿಮಾ ಪರಿಹಾರ ಮೊತ್ತ ಪಡೆಯಬಹುದು. ಶಾಶ್ವತ ಅಂಗವೈಕಲ್ಯ, ಮರಣ ಸಂದರ್ಭ ಪೂರ್ಣ ಪ್ರಮಾಣದ ವಿಮಾ ಮೊತ್ತ ಪಡೆಯಬಹುದು. ಅಂಚೆ ಜನಸಂಪರ್ಕ ಅಭಿಯಾನದ ಮೂಲಕ ಇಲಾಖೆಯ ವಿವಿಧ ಯೋಜನೆಗಳ ಸೌಲಭ್ಯ ಒದಗಿಸಲಾಗುತ್ತಿದೆ. ಮಂಗಳೂರಿನಲ್ಲಿ ಇದುವರೆಗೆ 75 ಮಾಹಿತಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಅವರು ತಿಳಿಸಿದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ದ.ಕ. ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾನೂನು ಸಲಹೆಗಾರ , ವಕೀಲ ರಾಮ್‌ಪ್ರಸಾದ್ಮುಖ್ಯ ಅತಿಥಿಯಾಗಿದ್ದರು.ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ಯೆಯ್ಯಡಿ ವರದಿ ವಾಚಿಸಿದರು. ಅಂಚೆ ನಿರೀಕ್ಷಕ ಪ್ರದೀಪ್ ಭಂಡಾರಿ, ಸಂಘದ ಸ್ಥಾಪಕ ಅಧ್ಯಕ್ಷ ಮೋಹನ್ ಕುಮಾರ್ ಅತ್ತಾವರ, ಕೋಶಾಧಿಕಾರಿ ಸತೀಶ್ ಪೂಜಾರಿ ಉರ್ವ, ಸುರತ್ಕಲ್ ಘಟಕದ ಅಧ್ಯಕ್ಷ ಜಪ್ರುಲ್ಲಾ ಕೃಷ್ಣಾಪುರ , ಬಿ.ಸಿ.ರೋಡ್ ಘಟಕದ ಕಾರ್ಯದರ್ಶಿ ಶ್ರೀಕಾಂತ್ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿ ಕಿರಣ್ ಲೇಡಿಹಿಲ್ ಸ್ವಾಗತಿಸಿ, ಭವಾನಿ ಶಂಕರ್ ವಂದಿಸಿದರು. ರೆಹಮಾನ್ ಖಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು.

ಕರಾವಳಿ ಸುದ್ದಿ

ಕರ್ನಾಟಕದಾದ್ಯಂತ ಹೋಮ್ ನರ್ಸಿಂಗ್ ಸೇವೆಯಲ್ಲಿ ಅನುಭವೀ ,ಹೆಸರಾಂತ ಮತ್ತುಮುಂಚೂಣಿಯಲ್ಲಿರುವ ದಾಸ್‌ ಸೇವಾ ಸಂಸ್ಥೆಯಿಂದ ಸಹಸ್ರಾರು ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ.

ಮಂಗಳೂರು -ದಾಸ್ ಪ್ರಮೋಷನ್ಸ್ ಹೋಮ್ ನರ್ಸಿಂಗ್ ಸೇವಾ ಸಂಸ್ಥೆ ಕಳೆದ 23 ವರುಷ ಗಳಿಂದ ಸೇವಾ ತರಬೇತಿ ಯೊಂದಿಗೆ ಉದ್ಯೋಗ ವನ್ನು ಕಲ್ಪಿಸಿ ನಿರುದ್ಯೋಗಿ ಯುವಕ ಯುವತಿ ಯರಿಗೆ ದಾರಿ ದೀಪವಾಗಿದೆ ಮತ್ತು ಆಶಾ ಕಿರಣವಾಗಿದೆ. ಕರ್ನಾಟಕ ದಾದ್ಯಂತ ಮಂಗಳೂರು ಕೇಂದ್ರೀಕೃತ ಗೊಂಡು ಬೆಂಗಳೂರು, ಮೈಸೂರು, ಹುಬ್ಬಳ್ಳಿ. ಬೆಳಗಾಂ, ಶಿವಮೊಗ್ಗ. ಹಾಸನ, ದಾವಣಗೆರೆ. ಬಳ್ಳಾರಿ ಮುಂತಾದೆಡೆ ಶಾಖೆಗಳನ್ನು ಹೊಂದಿದ್ದು.. ಕನಿಷ್ಠ ವಿದ್ಯಾರ್ಹತೆ. 10ನೇ. ಪಿ ಯು ಸಿ. ಡಿಗ್ರಿ ಯಾದ ವಿದ್ಯಾರ್ಥಿಗಳಿಗೆ ಆಸ್ಪತ್ರೆಗಳ ಮುಖಾಂತರ ಉಚಿತ ಸೇವಾ ತರಬೇತಿ ಯನ್ನು ಕೊಟ್ಟು ಉದ್ಯೋಗಕ್ಕೆ ಆಯ್ಕೆ ಮಾಡುತ್ತದೆ ಹಾಗೂ ಈಗಾಗಲೇ ತರಬೇತಿ ಹೊಂದಿರುವ ನರ್ಸ್. ಹೋಮ್ ನರ್ಸ್. (GNM. ANM. PAYARAMEDICAL) ಕೋರ್ಸ್ ಆದ ಅಭ್ಯರ್ಥಿ ಗಳಿಗೆ ಸಂಸ್ಥೆ ಯಿಂದ ಉದ್ಯೋಗ ಅವಕಾಶ ಮಾಡಿ ಕೊಟ್ಟಿದೆ. ಸಂಸ್ಥೆ ಯಿಂದ ತರಬೇತಿ ಪಡೆದ ಅದೆಷ್ಟೋ ಅಭ್ಯರ್ಥಿಗಳು ದೇಶ ವಿದೇಶಗಳಲ್ಲಿ ಉತ್ತಮ ಸೇವಾ ಅನುಭವ ಪಡೆದು ತನ್ನ ಬದುಕನ್ನು ನಿರೂಪಿಸಿದ ನಿದರ್ಶನವಿದೆ.. ಸಂಸ್ಥೆಯು ವಯೋವೃದ್ಧರ , ರೋಗಿಗಳ ಆರೈಕೆಯಲ್ಲಿ.. ನಿಷ್ಠಾವಂತ ಅನುಭವಿ ನರ್ಸ್ ಹೋಮ್ ನರ್ಸ್ ಗಳನ್ನು ಮನೆ. ವೃದ್ಧಾಶ್ರಮ. ಆಸ್ಪತ್ರೆ.. ಮುಂತಾದಡೆ ಸಂಸ್ಥೆ ಯ ಪೂರ್ಣ ಜವಾಬ್ದಾರಿ ಯೊಂದಿಗೆ ಕಳುಹಿಸಿ.. ದೇಶ ವಿದೇಶಗಳಲ್ಲಿ ಅಸಂಖ್ಯಾತ ಗ್ರಾಹಕ ವರ್ಗವನ್ನು ಹೊಂದಿದೆ.ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ಮೂಲಕ ತನ್ನ ದುಡಿಮೆಯ ಒಂದು ಭಾಗವನ್ನು ಸಮಾಜದ ವಿವಿಧ ಸೇವಾ ಚಟುವಟಿಕೆಯಲ್ಲಿ ತೊಡಗಿಸಿ ದಾಸ್ ಓಲ್ಡ್ ಹೆಲ್ತ್ ಕೇರ್ ಮೂಲಕ ವೃದ್ಧರ ಆರೈಕೆ ಯನ್ನು ಉಚಿತವಾಗಿ ಮಾಡುತ್ತಿದೆ ಹಾಗೂ ಸಮಾಜದ ಅಗ್ರಮಾನ್ಯರ ಸಂತುಷ್ಟ ಸೇವೆಯ ಮೂಲಕ ಸಾರ್ಥಕತೆಯ ಮೈಲಿ ಗಲ್ಲಿನೊಂದಿಗೆ ಬೆಳ್ಳಿ ಹಬ್ಬದ ಸಂಭ್ರಮಕ್ಕೆ ದಾಪುಗಾಲು ಇಟ್ಟಿದೆ.ದಾಸ್ ಪ್ರಮೋಷನ್ಸ್ ಹೋಮ್ ನರ್ಸಿಂಗ್ ಸೇವಾ ಸಂಸ್ಥೆ ಕಂಕನಾಡಿ ಮಂಗಳೂರು.. www.homenursingservices.org Mob..9343568915ಕಳೆದ 23 ವರ್ಷಗಳಿಂದ ನಿರುದ್ಯೋಗಿ ಯುವಕ, ಯುವತಿಯರಿಗೆ ದಾರಿ ದೀಪವಾದ “ದಾಸ್ ಪ್ರಮೋಷನ್ಸ್ ಹೋಮ್ ನರ್ಸಿಂಗ್” ಸೇವಾ ಸಂಸ್ಥೆ

ಕರಾವಳಿ ಸುದ್ದಿ

ರೆಡ್‌ಕ್ರಾಸ್ ಸೊಸೈಟಿಯಿಂದ ಮಹಿಳಾ ದಿನಾಚರಣೆಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಕರ್ತವ್ಯದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ

ಮಂಗಳೂರು : ಮಕ್ಕಳಿಗೆ ಶಿಕ್ಷಣ, ಆರೋಗ್ಯದ ಜತೆ ಉತ್ತಮ ಸಂಸ್ಕಾರ ನೀಡುವುದು ನಮ್ಮೆಲ್ಲರ ಕರ್ತವ್ಯ. ಎಲ್ಲ ಸಂಕಷ್ಟಗಳನ್ನು ದಿಟ್ಟವಾಗಿ ಎದುರಿಸಿ ಸಂಸಾರದ ಜವಾಬ್ದಾರಿ ನಿರ್ವಹಿಸುವ ಮಹಿಳೆಯರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ವತಿಯಿಂದ ಬಲ್ಮಠದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಐಕ್ಯುಎಸಿ, ಸಮಾಜಶಾಸ್ತ್ರ ವಿಭಾಗ, ಯೂತ್ ರೆಡ್‌ಕ್ರಾಸ್ ಮತ್ತು ಎನ್‌ಎಸ್‌ಎಸ್ ಘಟಕ ಹಾಗೂ ಸುಶೇಗ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿಶನಿವಾರ ಬಲ್ಮಠ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.ಡಾ.ಲವೀನಾ ನೊರೊನ್ಹಾ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ್ ಬಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ವಿ.ವಿ.ಯೂತ್ ರೆಡ್‌ಕ್ರಾಸ್‌ನ ನೋಡಲ್ ಅಧಿಕಾರಿ ಡಾ.ಗಾಯತ್ರಿ.ಎನ್., ಕಾಲೇಜಿನ ಐಕ್ಯುಎಸಿ ಸಂಯೋಜಕಿ ಡಾ.ಮಂಜುಳಾ ಮಲ್ಯ, ಯೂತ್ ರೆಡ್‌ಕ್ರಾಸ್ ಅಧಿಕಾರಿ ಡಾ.ರಾಜೇಶ್ ಶೆಟ್ಟಿ , ಮಹಿಳಾ ಸೆಲ್‌ನ ಸಂಯೋಜಕಿ ಸುಜಾತ.ಪಿ.ಎಸ್., ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ.ಮೀನಾಕ್ಷಿ ಆಚಾರ್ಯ, ರೆಡ್‌ಕ್ರಾಸ್ ಸೊಸೈಟಿಯ ಆಡಳಿತ ಮಂಡಳಿ ನಿರ್ದೇಶಕ ಗುರುದತ್ ಕಾಮತ್, ಕಾರ್ಯದರ್ಶಿ ಕಿಶೋರ್‌ಚಂದ್ರ ಶೆಟ್ಟಿ , ಕಾರ್ಯಕ್ರಮದ ಸಂಯೋಜಕಿ ಡಾ.ಸುಮನಾ.ಬಿ. ಉಪಸ್ಥಿತರಿದ್ದರು.ಕೌನ್ಸೆಲಿಂಗ್ ಮತ್ತು ಹದಿಹರೆಯದ ಮಾನಸಿಕ ಆರೋಗ್ಯ ವಿಷಯದ ಸರ್ಟಿಫಿಕೆಟ್ ಕೋರ್ಸ್ ಪೂರೈಸಿದ ಬಲ್ಮಠ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಇದೇ ಸಂದರ್ಭ ಪ್ರಮಾಣಪತ್ರ ವಿತರಿಸಲಾಯಿತು. ಬಳಿಕ ನಡೆದ ಆತ್ಮಹತ್ಯೆ ತಡೆಗಟ್ಟುವಿಕೆ ವಿಷಯದ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ಝೀನಾ ಫ್ಲೇವಿಯಾ ಡಿಸೋಜ, ವೀಣಾ ಬರ್ನೆಸ್ ಮತ್ತು ಶಾಲಿನಿ ಡಿಸೋಜಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಕರಾವಳಿ ಸುದ್ದಿ

ಇಂದು ರೆಡ್‌ಕ್ರಾಸ್ ಸೊಸೈಟಿಯಿಂದ ಮಹಿಳಾ ದಿನಾಚರಣೆ

ಮಂಗಳೂರು : ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ವತಿಯಿಂದ ಬಲ್ಮಠದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಐಕ್ಯುಎಸಿ, ಸಮಾಜಶಾಸ್ತ್ರ ವಿಭಾಗ, ಯೂತ್ ರೆಡ್‌ಕ್ರಾಸ್ ಮತ್ತು ಎನ್‌ಎಸ್‌ಎಸ್ ಘಟಕ ಹಾಗೂ ಸುಶೇಗ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಮಾ.8ರಂದು ಬೆಳಗ್ಗೆ 10ಕ್ಕೆ ವಿಶ್ವ ಮಹಿಳಾ ದಿನಾಚರಣೆ ಬಲ್ಮಠ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.ಅವೆ ಮರಿಯ ಪೆಲೆಟಿವ್ ಕೇರ್‌ನ ನಿರ್ದೇಶಕಿ ಡಾ.ಲವೀನಾ ನೊರೊನ್ಹಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ್ ಬಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ವಿ.ವಿ.ಯೂತ್ ರೆಡ್‌ಕ್ರಾಸ್‌ನ ನೋಡಲ್ ಅಧಿಕಾರಿ ಡಾ.ಗಾಯತ್ರಿ.ಎನ್., ಕಾಲೇಜಿನ ಐಕ್ಯುಎಸಿ ಸಂಯೋಜಕಿ ಡಾ.ಮಂಜುಳಾ ಮಲ್ಯ, ಯೂತ್ ರೆಡ್‌ಕ್ರಾಸ್ ಅಧಿಕಾರಿ ಡಾ.ರಾಜೇಶ್ ಶೆಟ್ಟಿ , ಮಹಿಳಾ ಸೆಲ್‌ನ ಸಂಯೋಜಕಿ ಸುಜಾತ.ಪಿ.ಎಸ್., ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ.ಮೀನಾಕ್ಷಿ ಆಚಾರ್ಯ ಅತಿಥಿಗಳಾಗಿಭಾಗವಹಿಸಲಿದ್ದಾರೆ.ಬಳಿಕ ಆತ್ಮಹತ್ಯೆ ತಡೆಗಟ್ಟುವಿಕೆ ವಿಷಯದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು ಡಾ.ಝೀನಾ ಫ್ಲೇವಿಯಾ ಡಿಸೋಜ, ವೀಣಾ ಬರ್ನೆಸ್ ಮತ್ತು ಶಾಲಿನಿ ಡಿಸೋಜಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಕೌನ್ಸೆಲಿಂಗ್ ಮತ್ತು ಹದಿಹರೆಯದ ಮಾನಸಿಕ ಆರೋಗ್ಯ ವಿಷಯದ ಸರ್ಟಿಫಿಕೆಟ್ ಕೋರ್ಸ್ ಪೂರೈಸಿದ ಬಲ್ಮಠ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಇದೇ ಸಂದರ್ಭ ಪ್ರಮಾಣಪತ್ರ ವಿತರಿಸಲಾಗುವುದೆಂದು ಕಾರ್ಯಕ್ರಮದ ಸಂಯೋಜಕಿ ಡಾ.ಸುಮನಾ.ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರಾವಳಿ ಸುದ್ದಿ

ಮಾಜಿ ಕೌನ್ಸಿಲರ್ ಮೊಹಮ್ಮದ್ ಕುಂಜತ್ತಬೈಲ್ ನಿಧನ: ಕೆ.ಅಶ್ರಫ್ ಸಂತಾಪ.

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕೌನ್ಸಿಲರ್ ಮತ್ತು ಒಂದು ಬಾರಿ ಉಪ ಮೇಯರ್ ಸ್ಥಾನವನ್ನು ಹೊಂದಿದ್ದ ಮೊಹಮ್ಮದ್ ಕುಂಜತ್ತಬೈಲ್ ರವರು ಇಂದು ನಿಧನರಾಗಿದ್ದು,ಅವರ ನಿಧನಕ್ಕೆ ಮಾಜಿ ಮೇಯರ್ ಕೆ.ಅಶ್ರಫ್ ತೀವ್ರ ಸಂತಾಪ ಸೂಚಿಸಿದ್ದಾರೆ.ಕೆ.ಮೊಹಮ್ಮದ್ ಕುಂಜತ್ತಬೈಲ್ ರವರು ಓರ್ವ ಕಾಂಗ್ರೆಸ್ ಮುಂದಾಳು ಆಗಿದ್ದು, ಕಾನೂನಾತ್ಮಕ ಮತ್ತು ಶಿಸ್ತು, ಶಿಷ್ಟಾಚಾರ ಬಗ್ಗೆಗಿನ ವಿಷಯಗಳಲ್ಲಿ ಹೆಚ್ಚಿನ ಜ್ಞಾನ ಹೊಂದಿದ ಓರ್ವ ನಿಷ್ಠಾವಂತ ಕಾರ್ಯಕರ್ತ ಕೂಡಾ ಆಗಿದ್ದರು. ಸರ್ವರೊಂದಿಗೆ ಮುಕ್ತವಾಗಿ ಬೆರೆಯುವ ವ್ಯಕ್ತಿತ್ವದ ಮೊಹಮ್ಮದ್ ಕುಂಜತ್ತಬೈಲುಅವರ ನಿಧನದಿಂದಾಗಿ ಪಕ್ಷದ ಓರ್ವ ಪ್ರಮುಖ ವ್ಯಕ್ತಿಯನ್ನು ಕಳೆದು ಕೊಂಡಂತಾಗಿದೆಂದುಮಾಜಿ ಮೇಯರ್ ಕೆ.ಅಶ್ರಫ್ ಸಂತಾಪ ಸೂಚಿಸಿದ್ದಾರೆ.

ಕರಾವಳಿ ಸುದ್ದಿ

ಪುರಾಣ ಕೃತಿಗಳ ಅಧ್ಯಯನದಿಂದ ಜ್ಞಾನ ಸಂಪಾದನೆಹಿರಿಯ ಸಾಹಿತಿ ಶ್ರೀಧರ ಡಿ.ಎಸ್.ಕಿನ್ನಿಗೋಳಿ ಅಭಿಮತ

ಮಂಗಳೂರು : ಬಾಲ್ಯದಲ್ಲಿ ಬೆಳೆದ ಮಲೆನಾಡಿನ ಪರಿಸರ ,ಪುಸ್ತಕ ಓದುವ ಹವ್ಯಾಸ, ಶ್ರೇಷ್ಠ ಗುರುಗಳ ಮಾರ್ಗದರ್ಶನ ,ಯಕ್ಷಗಾನದ ಆಕರ್ಷಣೆ ಇದೆಲ್ಲವೂ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿತು. ಪುರಾಣ ಕೃತಿಗಳ ಅಧ್ಯಯನದಆಸಕ್ತಿಯಿಂದ ಹೆಚ್ಚಿನ ಜ್ಞಾನ ಸಂಪಾದನೆ ಸಾಧ್ಯವಾಯಿತು ಎಂದು ಹಿರಿಯ ಸಾಹಿತಿ, ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತಶ್ರೀಧರ ಡಿ.ಎಸ್.ಕಿನ್ನಿಗೋಳಿ ಹೇಳಿದರು.ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಯೋಜಿಸಿದ ಹಿರಿಯ ಸಾಹಿತಿಗಳ ಸಂಪರ್ಕ ಅಭಿಯಾನದಡಿ ಶುಕ್ರವಾರ ಸ್ವಗೃಹದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು ‘ಉಡುಪಿ ಮತ್ತು ಕಟೀಲು ಕ್ಷೇತ್ರದ ಪರಿಸರ ಸಾಂಸ್ಕೃತಿಕವಾಗಿ ಬೆಳೆಯಲು ಇನ್ನಷ್ಟು ಅವಕಾಶ ಕಲ್ಪಿಸಿತು’ಎಂದರು.ಪುರಾಣ ಕೃತಿಗಳು ಸೇರಿದಂತೆ ಭಾರತೀಯ ಸಂವೇದನೆಯುಳ್ಳ ಕೃತಿಗಳ ಸಂದೇಶವನ್ನು ಸಮಾಜಕ್ಕೆ ಪಸರಿಸುವುದು ಅಗತ್ಯ.ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಇಂತಹ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.ಮುಖ್ಯ ಅತಿಥಿಯಾಗಿದ್ದ ಹಿರಿಯ ವಿದ್ವಾಂಸ ಪಶುಪತಿ ಶಾಸ್ತ್ರಿ ಶಿರಂಕಲ್ಲು ಮಾತನಾಡಿ ‘ ಬಹುಶ್ರುತ ವಿದ್ವಾಂಸರಾದ ಶ್ರೀಧರ್ ಡಿ.ಎಸ್.ಅವರು ಪುರಾಣ ಲೋಕದ ವಿಶಿಷ್ಟ ಪಾತ್ರಗಳನ್ನು ತಮ್ಮ ಕೃತಿಯ ಮೂಲಕ ಜನಮಾನಸಕ್ಕೆ ಪರಿಚಯಿಸಿದ ಅಪರೂಪದ ಸಾಹಿತಿ. 40ಕ್ಕೂ ಹೆಚ್ಚು ಪ್ರಸಂಗ ರಚಿಸಿ ಯಕ್ಷಗಾನ ಕ್ಷೇತ್ರಕ್ಕೆ ಅತ್ಯಪೂರ್ವ ಕೊಡುಗೆ ನೀಡಿದ್ದಾರೆ ಎಂದರು.ಅಭಾಸಾಪ ಮೂಲ್ಕಿ ತಾಲೂಕು ಸಮಿತಿಯ ಉಪಾಧ್ಯಕ್ಷ ವಿದ್ಯಾಧರ ಶೆಟ್ಟಿ ಕೊಲ್ನಾಡು, ಜಿಲ್ಲಾ ಸಮಿತಿಯ ಸಾಹಿತ್ಯ ಕೂಟದ ಮುಖ್ಯಸ್ಥೆ ಗೀತಾಲಕ್ಷ್ಮೀಶ್ ಉಪಸ್ಥಿತರಿದ್ದರು. ಅಭಾಸಾಪ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸ್ವಾಗತಿಸಿ, ಸಮಿತಿ ಸದಸ್ಯ ಡಾ.ಸುರೇಶ್ ನೆಗಳಗುಳಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಸುಮಂಗಲಾ ರತ್ನಾಕರ್ ಕಾರ್ಯಕ್ರಮ ನಿರೂಪಿಸಿದರು.

ಕರಾವಳಿ ಸುದ್ದಿ

“ವೈಲ್ಡ್ ಟೈಗರ್ ಸಫಾರಿ“ ಹಿಂದಿ ಮತ್ತು ಕನ್ನಡ ಸಿನಿಮಾಕ್ಕೆ ಕದ್ರಿ ದೇವಸ್ಥಾನದಲ್ಲಿ ಮುಹೂರ್ತ

ಮಂಗಳೂರು: ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತಯಾರಾಗಲಿರುವ ”ವೈಲ್ಡ್ ಟೈಗರ್ ಸಫಾರಿ“ ಸಿನಿಮಾದ ಮುಹೂರ್ತ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ ಕದ್ರಿ ದೇವಸ್ಥಾನದಲ್ಲಿ ಜರುಗಿತು.ಬಳಿಕ ಮಾಧ್ಯಮಗಳ ಜೊತೆ ಮಾತಾಡಿದ ಚಿತ್ರದ ನಿರ್ದೇಶಕ ಚಂದ್ರಮೌಳಿ ಅವರು, ”ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುವ ಕಥಾಹಂದರವನ್ನು ಈ ಸಿನಿಮಾ ಹೊಂದಿದ್ದು ಸಿನಿಮಾದ ಮುಹೂರ್ತ ಕಾರ್ಯಕ್ರಮ ಇಂದು ನಡೆದಿದೆ. ಮಂಗಳೂರು ಮೂಲದ ಕಥೆಯಲ್ಲಿ ಹುಲಿ ವೇಷಕ್ಕೆ ಪ್ರಾಧಾನ್ಯತೆ ಇರಲಿದೆ. ಮುಂದೆ ಸಿನಿಮಾದ ಚಿತ್ರೀಕರಣ ಆರಂಭಗೊಳ್ಳಲಿದ್ದು ಶೀಘ್ರದಲ್ಲಿ ಸಿನಿಮಾ ತೆರೆಗೆ ಬರಲಿದೆ“ ಎಂದರು. ಬಳಿಕ ಮಾತಾಡಿದ ನಾಯಕ ನಟ ಶಿಥಿಲ್ ಕುಮಾರ್, ”ಸಿನಿಮಾಕ್ಕೆ ಬೇಕಾಗಿ ಸಾಕಷ್ಟು ಸಿದ್ಧತೆಯನ್ನು ಮಾಡಿಕೊಂಡಿದ್ದೇನೆ. ಲವ್, ಆಕ್ಷನ್ ಸಿನಿಮಾ ಇದಾಗಿದ್ದು ವೀಕ್ಷಕರಿಗೆ ಮನೋರಂಜನೆ ಬೇಕಾದ ಎಲ್ಲವನ್ನು ಒಳಗೊಂಡಿದೆ. ಕಥೆ ಕೇಳಿ ಥ್ರಿಲ್ ಆಗಿದ್ದೇನೆ“ ಎಂದರು.ರಾಜೇಶ್ ಭಟ್ ಸಿನಿಮಾಕ್ಕೆ ಕೆಮರಾ ಕ್ಲಾಫ್ ಮಾಡಿದರು.ಸಿನಿಮಾ ನಿರ್ಮಾಪಕ ವಿನೋದ್ ಕುಮಾರ್, ನಾಯಕಿ ನಿಮಿಕಾ ರತ್ನಾಕರ್, ಬಾಲಿವುಡ್ ನ ಖ್ಯಾತ ನೃತ್ಯ ನಿರ್ದೇಶಕರಾದ ಧರ್ಮೇಶ್, ಸುಶಾಂತ್, ಕೆಮರಾಮ್ಯಾನ್ ಎಜೆ ಶೆಟ್ಟಿ, ಕಲಾ ನಿರ್ದೇಶಕ ಶಿವು, ದೇವಳದ ಮೆನೇಜರ್ ಜಗದೀಶ್ ಕದ್ರಿ, ಕಿಶೋರ್ ಕುಮಾರ್, ರತ್ನಾಕರ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಚಿತ್ರಗಳು – ಸತೀಶ್ ಕಾಪಿಕಾಡ್

ಕರಾವಳಿ ಸುದ್ದಿ

ಮಾ.9 ರಂದು ಅಂಚೆ ಜನಸಂಪರ್ಕ ಅಭಿಯಾನ

ಮಂಗಳೂರು : ದ.ಕ.ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘ ಮತ್ತು ಭಾರತೀಯ ಅಂಚೆ ಇಲಾಖೆ, ಮಂಗಳೂರು ವಿಭಾಗ ಇದರ ಸಹಯೋಗದಲ್ಲಿಅಂಚೆ ಜನಸಂಪರ್ಕ ಅಭಿಯಾನ ಮಾ.9 ರಂದು ಬೆಳಗ್ಗೆ 9ರಿಂದ ಸಾಯಂಕಾಲ 4ರವರೆಗೆ ನಗರದ ಅತ್ತಾವರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ.‌ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.‌ದ.ಕ. ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ.ಉದ್ಯಮಿ ರತೀಂದ್ರನಾಥ್, ದ.ಕ. ಟ್ಯಾಕ್ಸ್‌ಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಶನ್ ನ ಅಧ್ಯಕ್ಷ ಆನಂದ್.ಕೆ., ದ.ಕ. ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ಗೌರವ ಸಲಹೆಗಾರ ರಾಮ್ ಪ್ರಸಾದ್ , ಹಿರಿಯ ಅಂಚೆ ಅಧೀಕ್ಷಕ ಎಂ.ಸುಧಾಕರ ಮಲ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಅಭಿಯಾನದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ, ಪಾಸ್ ಪೋರ್ಟ್ ನೋಂದಣಿ, ಅಪಘಾತ ವಿಮೆ ಹಾಗೂ ಪಾನ್ ಕಾರ್ಡ್ ನೋಂದಣಿಗೆ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ

Scroll to Top