ಕರಾವಳಿ ಸುದ್ದಿ

ಕರಾವಳಿ ಸುದ್ದಿ

“ಶಿವಾಜಿಯನ್ನು ವಿರೋಧಿಸುವವರು ನಾಟಕ ನೋಡಿ!“ – ವಿಜಯ್ ಕುಮಾರ್ ಕೊಡಿಯಾಲ್ ಬೈಲ್

ಮಂಗಳೂರು: “ಶಿವಾಜಿ ಹಿಂದೂ ಧರ್ಮದ ರಕ್ಷಕ ಆದರೆ ಅನ್ಯಧರ್ಮದ ದ್ವೇಷಿಯಲ್ಲ. ಇತಿಹಾಸವನ್ನು ತಿರುಚಿದವರು ಮಾತ್ರ ಅಪಚಾರ ಮಾಡುತ್ತಿದ್ದಾರೆ ಶಿವಾಜಿಯನ್ನು ಅರಿತವರು ಅವರಂತಹ ಒಬ್ಬ ಒಳ್ಳೆಯ ಸಾಮ್ರಾಟನನ್ನು ಕೊಂಡಾಡುತ್ತಾರೆ. ಶಿವಾಜಿಯ ಸಂಪೂರ್ಣ ಕಥೆ ತಿಳಿದುಕೊಂಡರೆ ಅವರೆಂತಹ ಅನ್ಯಧರ್ಮ ಸಹಿಷ್ಣು ಎನ್ನುವುದು ತಿಳಿಯುತ್ತದೆ. ಶಿವಾಜಿಯ ಬಗ್ಗೆ ತಿಳಿಯದವರು ನಮ್ಮ ಮುಂದಿನ ಚಾರಿತ್ರಿಕ ನಾಟಕ “ಶಿವಾಜಿ”ಯನ್ನು ನೋಡಬೇಕು. ಅವರ ಶಿವಾಜಿ ಬಗೆಗಿನ ಅಭಿಪ್ರಾಯ ಬದಲಾಗುತ್ತದೆ“ ಎಂದು ಹಿರಿಯ ರಂಗಕರ್ಮ, ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.”ಶಿವಾಜಿ ನಾಟಕ ಮಾರ್ಚ್ 6 ರಂದು ಗುರುವಾರ ಕಟೀಲು ಕ್ಷೇತ್ರದಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಮಾಚ್೯ 13 ರಂದು ಪುರಭವನದಲ್ಲಿ ಪ್ರದರ್ಶನ ಕಾಣಲಿದೆ. ನಾಟಕದ ಟೈಟಲ್ ಹಾಡು ಕನ್ನಡ ಭಾಷೆಯಲ್ಲಿದ್ದರೆ ತುಳುವಿನಲ್ಲಿ ಸಂಭಾಷಣೆ ಇರಲಿದೆ. ಹಿಂದಿ ಭಾಷೆಯನ್ನು ಕೂಡ ಬಳಕೆ ಮಾಡುವ ಮೂಲಕ ಭಾಷಾ ಸಾಮರಸ್ಯಕ್ಕೆ ಒತ್ತು ನೀಡಲಾಗಿದೆ. ಕಥೆ ರಚನೆಕಾರ ಶಶಿರಾಜ್ ರಾವ್ ಕಾವೂರು ತುಂಬಾ ಕಷ್ಟಪಟ್ಟು ಕಥೆ ರಚಿಸಿದ್ದಾರೆ. ಒಟ್ಟು 3 ಹಾಡುಗಳಿದ್ದು ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಟೈಟಲ್ ಸಾಂಗ್ ಹೆಸರಾಂತ ಗಾಯಕ ಕೈಲಾಶ್ ಖೇರ್ ಹಾಡಬೇಕಿತ್ತು ಆದರೆ ಅವರು 25 ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದರಿಂದ ಕೈಬಿಡಬೇಕಾಯಿತು. ಬೇರೆ ಪ್ರಸಿದ್ಧ ಗಾಯಕರಿಂದ ಹಾಡಿಸಲು ಪ್ರಯತ್ನ ಮುಂದುವರಿದಿದೆ“ ಎಂದರು. ”ಪ್ರೀತೇಶ್ ಬಳ್ಳಾಲ್ ಬಾಗ್ ಇತ್ತೀಚಿನ 70 ಶೋಗಳಲ್ಲಿ ಶಿವದೂತೆ ಗುಳಿಗೆ ನಾಟಕದಲ್ಲಿ ಗುಳಿಗನ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಶಿವಾಜಿ ಪಾತ್ರದಲ್ಲೂ ಅವರೇ ಇರಲಿದ್ದಾರೆ. ಪ್ರಮೋದ್ ಮರವಂತೆ, ಶಶಿರಾಜ್ ಕಾವೂರು ಸಾಹಿತ್ಯ ಬರೆದಿದ್ದಾರೆ. ಶಿವಾಜಿ ಪಾತ್ರಕ್ಕೆ ನಟ ಪೃಥ್ವಿ ಅಂಬರ್ ಕಂಠದಾನ ಮಾಡಿದ್ದರೆ ಗುರು ದಾದಾಜಿ ಪಾತ್ರಕ್ಕೆ ನವೀನ್ ಡಿ ಪಡೀಲ್ ಧ್ವನಿ ನೀಡಿದ್ದಾರೆ. ಪಟ್ಲ ಸತೀಶ್ ಶೆಟ್ಟಿ, ಡಾ ದೇವದಾಸ್ ಕಾಪಿಕಾಡ್ ಹಾಡಿದ್ದು ಹಾಡುಗಳು ಸೊಗಸಾಗಿ ಮೂಡಿಬಂದಿದೆ“ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮಣಿಕಾಂತ್ ಕದ್ರಿ, ಶಶಿರಾಜ್ ಕಾವೂರು, ಎ ಕೆ ವಿಜಯ್, ಪ್ರೀತೇಶ್ ಬಳ್ಳಾಲ್ ಭಾಗ್ ಉಪಸ್ಥಿತರಿದ್ದರು. ಶಿವಾಜಿಯಂತ ರಾಜ ಬೇರೆ ಇಲ್ಲ!ಶಿವಾಜಿ ಎಲ್ಲ ಜಾತಿ ಧರ್ಮದ ಜನರನ್ನು ಸಮಾನವಾಗಿ ಕಂಡವರು. ಅವರಿಗೆ ಅವರೇ ಸಾಟಿ. ಶಿವಾಜಿ ಒಬ್ಬ ದರೋಡೆಕೋರ ಅನ್ಯಧರ್ಮದ ದ್ವೇಷಿ ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಾರೆ. ಇದು ಖಂಡಿತಾ ಸರಿಯಲ್ಲ. ಶಿವಾಜಿಯ ಬಗ್ಗೆ ಅವರ ಸಾಮ್ರಾಜ್ಯ ಮತ್ತು ಆಡಳಿತದ ಬಗ್ಗೆ ಪಟ್ಟಾಭಿಷೇಕದ ಬಗ್ಗೆ ನಾಟಕದಲ್ಲಿ ವಾಸ್ತವವನ್ನು ತೆರೆದಿಡುವ ಪ್ರಯತ್ನ ಮಾಡಲಾಗಿದೆ. ಎಲ್ಲರೂ ನಾಟಕ ನೋಡಿ”-ಶಶಿರಾಜ್ ರಾವ್ ಕಾವೂರು ಚಿತ್ರಗಳು – ಸತೀಶ್ ಕಾಪಿಕಾಡ್

ಕರಾವಳಿ ಸುದ್ದಿ

ಅಭಾಸಾಪ ಕಡಬ ತಾಲೂಕುಸಮಿತಿ ಅಧ್ಯಕ್ಷರಾಗಿ ಕರುಣಾಕರ ಗೋಗಟೆ

ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಕಡಬ ತಾಲೂಕು ಸಮಿತಿ ಅಧ್ಯಕ್ಷರಾಗಿ ಕರುಣಾಕರ ಗೋಗಟೆ ಹೊಸಮಠ, ಉಪಾಧ್ಯಕ್ಷರಾಗಿ ಕೆ.ಎಸ್.ಬಾಲಕೃಷ್ಣ ಕೊಲ, ಕಾರ್ಯದರ್ಶಿಯಾಗಿ ಎನ್. ಕೆ.ನಾಗರಾಜ್, ಜತೆ ಕಾರ್ಯದರ್ಶಿಗಳಾಗಿಸಂಯಕ್ತ ಜೈನ್, ಸುನೀತ ಶ್ರೀರಾಮ ಕೊಲ, ಖಜಾಂಚಿಯಾಗಿ ಗಿರೀಶ, ಸದಸ್ಯರಾಗಿ ಸುಪ್ರೀತ ಬಿಳಿನೆಲೆ, ಚಂದ್ರಹಾಸಆಯ್ಕೆಯಾಗಿದ್ದಾರೆ.

ಕರಾವಳಿ ಸುದ್ದಿ

ಅಭಾಸಾಪ ಬಂಟ್ವಾಳ ತಾಲೂಕುಸಮಿತಿ ಅಧ್ಯಕ್ಷರಾಗಿ ರಾಜಮಣಿ ರಾಮಕುಂಜ

ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷರಾಗಿ ರಾಜಮಣಿ ರಾಮಕುಂಜ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಮಧುರಾ ಕಡ್ಯ, ಜತೆ ಕಾರ್ಯದರ್ಶಿಯಾಗಿ ಸಂಧ್ಯಾ , ಖಜಾಂಚಿಯಾಗಿ ನರಸಿಂಹ ಮಯ್ಯ , ಸಮಿತಿ ಸದಸ್ಯರಾಗಿ ಜಯಾನಂದ ಪೆರಾಜೆ, ರಮೇಶ್ ಬಾಯಾರು, ಜಯಶ್ರೀ ಶೆಣೈ, ಸೀತಾಲಕ್ಷ್ಮಿ ವರ್ಮ, ಅಶೋಕ್ ಕಲ್ಲಟೆ , ಹೇಮಾವತಿ ಸಾಲೆತ್ತೂರು, ಈಶ್ವರ ಪ್ರಸಾದ್, ಜಯರಾಮ್ ಪಡ್ರೆ ಆಯ್ಕೆಯಾಗಿದ್ದಾರೆ.

ಕರಾವಳಿ ಸುದ್ದಿ

ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ -2025 : ಪ್ರೆಸ್ ಕ್ಲಬ್ ಗೆ ಆಗಮಿಸಿದ ಪ್ರಿನ್ಸೆಸ್ ಆಫ್ ಕರಾವಳಿ ವಿನ್ನರ್ ವಿಯಾ ಸಾಯಿ ಸೇರಿದಂತೆ ಸ್ಪರ್ಧೆ ವಿಜೇತರು

ಚಿತ್ರಗಳು – ಸತೀಶ್ ಕಾಪಿಕಾಡ್ ಮಂಗಳೂರು: ಮೂಡುಬಿದಿರೆಯ ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಮತ್ತು ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೊ ನೇತೃತ್ವದಲ್ಲಿ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ -2025 ಸ್ಪರ್ಧೆಯಲ್ಲಿ 60 ಮಕ್ಕಳು ಭಾಗವಹಿಸಿದ್ದು, ಒಟ್ಟು 65,555 ರೂ. ಬಹುಮಾನ ನೀಡಲಾಗಿದೆ ಎಂದು ಸ್ಪರ್ಧೆಯ ತೀರ್ಪುಗಾರ ಸಂದೀಪ್ ಶೆಟ್ಟಿ ಮಂಗಳೂರು ತಿಳಿಸಿದರು.7ರಿಂದ 11 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರಿನ್ಸ್ ಆಫ್ ಕರಾವಳಿ 2025 ವಿನ್ನರ್ ಆಗಿ ಮಂಗಳೂರು ಎಸ್‌ಡಿಎಂ ಶಾಲೆಯ ಶೌರ್ಯ ರಾವ್, ಬಾಲಕಿಯರ ವಿಭಾಗದಲ್ಲಿ ಪ್ರಿನ್ಸೆಸ್ ಆಫ್ ಕರಾವಳಿ 2025 ವಿನ್ನರ್ ಆಗಿ ಮಂಗಳೂರು ಕಾರ್ಮೆಲ್ ಸಿಬಿಎಸ್‌ಇ ಶಾಲೆಯ ವಿಯಾ ಸಾಯಿ, ಸ್ಟಾರ್ ಕಿಡ್ ಕರಾವಳಿ 2025 ವಿನ್ನರ್ ಆಗಿ ಕುಳಾಯಿ ರಾಯನ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಐಶಾನಿ ಶೆಟ್ಟಿ ಆಯ್ಕೆಯಾಗಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು. 7ರಿಂದ 11 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರಿನ್ಸ್ ಆಫ್ ಕರಾವಳಿ 2025 ವಿನ್ನರ್ ಆಗಿ ಮಂಗಳೂರು ಎಸ್‌ಡಿಎಂ ಶಾಲೆಯ ಶೌರ್ಯ ರಾವ್, ಬಾಲಕಿಯರ ವಿಭಾಗದಲ್ಲಿ ಪ್ರಿನ್ಸೆಸ್ ಆಫ್ ಕರಾವಳಿ 2025 ವಿನ್ನರ್ ಆಗಿ ಮಂಗಳೂರು ಕಾರ್ಮೆಲ್ ಸಿಬಿಎಸ್‌ಇ ಶಾಲೆಯ ವಿಯಾ ಸಾಯಿ, ಸ್ಟಾರ್ ಕಿಡ್ ಕರಾವಳಿ 2025 ವಿನ್ನರ್ ಆಗಿ ಕುಳಾಯಿ ರಾಯನ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಐಶಾನಿ ಶೆಟ್ಟಿ ಆಯ್ಕೆಯಾಗಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.11ರಿಂದ 17 ವರ್ಷದೊಳಗಿನ ಹುಡುಗರ ವಿಭಾಗದ ಮಿಸ್ಟರ್ ಟೀನ್ ಕರಾವಳಿ 2025 ವಿನ್ನರ್ ಆಗಿ ಕಿನ್ನಿಗೋಳಿ ಸೈಂಟ್ ಮೇರೀಸ್ ಸೆಂಟ್ರಲ್ ಸ್ಕೂಲ್‌ನ ಸಾನ್ವಿತ್ ಕುಲಾಲ್, ಹುಡುಗಿಯರ ವಿಭಾಗದಲ್ಲಿ ಮಿಸ್ ಟೀನ್ ಕರಾವಳಿ 2025 ವಿನ್ನರ್ ಆಗಿ ಮೂಡುಬಿದರೆ ರೋಟರಿ ಇಂಗ್ಲಿಷ್ ಮೀಡಿಯಂ ಶಾಲೆಯ ಧನ್ವಿ ಶೆಟ್ಟಿ, ಮಿಸ್ ಕ್ವೀನ್ ಕರಾವಳಿ 2025 ವಿನ್ನರ್ ಆಗಿ ಉಡುಪಿ ಹಿರಿಯಡ್ಕ ಗ್ರೀನ್ ಪಾರ್ಕ್ ಶಾಲೆಯ ಪೂರ್ವಿ ಕುಲಾಲ್, ಪಾಪ್ಯುಲರ್ ಐಕಾನ್ ಕರಾವಳಿ 2025 ವಿನ್ನರ್ ಆಗಿ ಆಲಂಗಾರು ಸೈಂಟ್ ಥೋಮಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಸಾಧ್ವಿ ಶೆಟ್ಟಿ ವಿನ್ನರ್ ಆಗಿ ಆಯ್ಕೆಯಾಗಿದ್ದಾರೆ ಎಂದರು. ಸ್ವಾಮೀಸ್ ಬೆದ್ರ ಕ್ಲಾಸಿಕ್ 2025 ಮಿ. ದಕ್ಷಿಣ ಕನ್ನಡ ದೇಹದಾರ್ಢ್ಯ ಸ್ಪರ್ಧೆಯಲ್ಲಿ 100 ಸ್ಪರ್ಧಿಗಳು ಭಾಗವಹಿಸಿದ್ದು, ವಿಜೇತರಿಗೆ ಒಟ್ಟು 3 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ ಎಂದರು.ಸಂಸ್ಥೆಯ ಸ್ವಾಮಿಪ್ರಸಾದ್, ಎಂ.ಜೆ. ಅನೀಶ್, ಸ್ಪರ್ಧೆಯಲ್ಲಿ ವಿಜೇತ ಮಕ್ಕಳು ಉಪಸ್ಥಿತರಿದ್ದರು.

ಕರಾವಳಿ ಸುದ್ದಿ

INAUGURATION OF MCC BANK’S ATM AT BRAHMAVARA

On the occasion of the first anniversary of opening of Brahmavara branch, achievement of total business turnover of Rs.10 Crore by the branch and inauguration of ATM at Brahmavara branch, a programme was arranged on the 3rd march 2025 at MCC Bank Brahmavara branch premises.The ATM room was inaugurated by Mr Jerald Gonsalves, President Catholic Cooperative Society, Brahmavara. Rev. Fr John Fernandes, Parish Priest, Holy Family Church, Brahmavara blessed the event and congratulated the Chairman, Directors, staff and customers on this occasion. Mr Sourab Shetty, Proprietor, AS Used Cars, Brahmavara inaugurated the ATM by withdrawing the amount from the ATM. Mr Shamsuddin Moideen Gudmi Kutty was the chief guest. Mr Elroy Kiran Crasto, Director in charge of the branch was present on the occasion. The programme was presided over by the Chairman of the Bank, Sahakara Ratna Mr Anil Lobo. In his presidential address ‘Sahakara Ratna’ Mr Anil Lobo, thanked the customers of the branch who were responsible for opening of the branch and the branch achieving the total business turnover of Rs.10 Crore within one year of its opening. He said that it is only because of the support and cooperation of the customers, the branch could achieve this milestone. This has also demonstrated that excellent customer service and thereby earning the trust of the customers can lead to success of the branch. He congratulated Mr Ovin Rebello and his team for achieving the milestone and called upon the customers to cooperate and the branch staff make efforts for achieving a total business turnover of Rs.30 Crore by next financial year ending 31st Mach 2025. He thanked Rev. Fr. John Fernandes who had blessed the premises at the time of inauguration of the branch last year. Speaking on the occasion, Mr Jerald Gonsalves, President Catholic Cooperative Society, Brahmavara appreciated the Chairman for his efficient leadership in taking the Bank to greater heights after assuming charge as Chairman of the Bank. He congratulated the management and expressed his happiness at the branch achieving Rs. 10 Crore business in the first year of its operation. He said that progress is possible only when there is technological advancement and appreciated the Bank for adopting latest technology in the banking operations, He wished all the best for the future endeavours of the Bank. The first anniversary of the branch was celebrated by cutting the cake and Mr Ovin Rebello was felicitated for achieving the business turnover of Rs.10 crore of the branch in the first year of operation. Mr Jerald Gonsalves was felicitated for having been elected as President of Catholic Cooperative Society, Brahmavara recently. Dr Gerald Pinto, Director welcomed the guests, General Manager Mr Sunil Menezes proposed vote of thanks and Mr Ovin Rebello compered the programme. Mr Pradeep Dsouza, Branch Manager, Udupi, Mrs Ancilla Fernandes, Branch Manager, Shirva, Mrs Jyothi Baretto, Branch Manager, Kundapura and the customers of Brahmavara branch were present on the occasion.

ಕರಾವಳಿ ಸುದ್ದಿ

ಬ್ರಹ್ಮಾವರದ ಲ್ಲಿ ಎಂ.ಸಿ.ಸಿ ಬ್ಯಾಂಕಿನ ಎಟಿಎಮ್ ಉದ್ಘಾಟನೆ

ಬ್ರಹ್ಮಾವರ ಶಾಖೆಯು ಆರಂಭಗೊoಡು ಒಂದು ವರ್ಷ ಪೂರ್ಣಗೊಂಡ ಸಂದರ್ಭ ವಾರ್ಷಿಕೋತ್ಸವ, ೧೦ ಕೋಟಿ ವ್ಯವಹಾರದ ಸಾಧನೆ ಮತ್ತು ನೂತನ ಎಟಿಮ್ ಉದ್ಘಾಟಣಾ ಸಮಾರಂಭ 2025 ಮಾರ್ಚ್ 3ರಂದು ಬ್ರಹ್ಮಾವರ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಎಂ.ಸಿ.ಸಿ. ಬ್ಯಾಂಕಿನ ೮ನೇ ಎಟಿಎಮ್ ಅನ್ನು ಬ್ರಹ್ಮಾವರ ಶಾಖೆಯಲ್ಲಿ ಬ್ರಹ್ಮಾವರ ಕ್ಯಾಥೋಲಿಕ್ ಕ್ರೇಡಿಟ್ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಜೆರಾಲ್ಡ್ ಗೊನ್ಸಾಲ್ವಿಸ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹೋಲಿ ಫ್ಯಾಮಿಲಿ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ| ಜೋನ್ ಫೆರ್ನಾಂಡಿಸ್ ಆಶೀರ್ವದಿಸಿದರು. ಎಟಿಎಮ್ ಯಂತ್ರವನ್ನು ಎಎಸ್ ಯೂಸ್ಡ್ ಕರ‍್ಸ್ ಇದರ ಮ್ಹಾಲಕರಾದ ಶ್ರೀ ಸೌರಬ್ ಶೆಟ್ಟಿ ಇವರು ಎಟಿಎಮ್‌ನಿಂದ ಹಣ ತೆಗೆಯುವ ಮೂಲಕ ಉದ್ಘಾಟಿಸಿದರು. ಉದ್ಯಮಿ ಶ್ರೀ ಶಂಶುದ್ದಿನ್ ಮೊÊದಿನ್ ಮುಖ್ಯ ಅತಿಥಿಯಾಗಿದ್ದರು ಹಾಗೂ ಶಾಖಾ ನಿರ್ದೇಶಕ ಶ್ರೀ ಎಲ್‌ರೋಯ್ ಕಿರಣ್ ಕ್ರಾಸ್ಟೊ ಸಮಾರಂಭದಲ್ಲಿ ಹಾಜರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು.ಸಹಕಾರ ರತ್ನ ಶ್ರೀ ಅನಿಲ್ ಲೋಬೊ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಬ್ರಹ್ಮಾವರದಲ್ಲಿ ಶಾಖೆಯು ಆರಂಭಗೊಳ್ಳಲು ಹಾಗೂ ರೂ. 10 ಕೋಟಿ ವ್ಯವಹಾರ ದಾಖಲಿಸಲು ಸಹಕರಿಸಿದ ಬ್ರಹ್ಮಾವರದ ಗ್ರಾಹಕರಿಗೆ ವಂದನೆಗಳನ್ನು ಸಲ್ಲಿಸಿದರು. ಬ್ರಹ್ಮಾವರದ ಜನತೆ ನೀಡಿದ ಸಹಕಾರದಿಂದ ಬ್ರಹ್ಮಾವರ ಶಾಖೆಯು ಈ ಸಾಧನೆ ಮಾಡಲು ಸಾಧ್ಯವಾಯಿತು.ಶಾಖೆಯಲ್ಲಿ ಉತ್ತಮ ಸೇವೆ ಮತ್ತು ವಿಶ್ವಾಸರ್ಹತೆಯನ್ನು ಗಳಿಸುವಲ್ಲಿ ಯಶಸ್ವಿಯಾದರೆ ಮಾತ್ರ ಸಾಧನೆ ಮಾಡಲು ಸಾದ್ಯ. ಇದಕ್ಕಾಗಿ ಬ್ರಹ್ಮಾವರ ಶಾಖೆಯ ವ್ಯವಸ್ಥಾಪಕ ಶ್ರೀ ಒವಿನ್ ರೆಬೆಲ್ಲೊ ಮತ್ತು ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿ ಮುಂದಿನ ವರ್ಷ ೩೦ ಕೋಟಿ ವ್ಯವಹಾರವನ್ನು ದಾಖಲಿಸಿ, ಶಾಖೆಯು ಲಾಭ ಗಳಿಸುವಲ್ಲಿ ಗ್ರಾಹಕರು ಸಹಕರಿಸಲು ಮತ್ತು ಶಾಖೆಯ ಸಿಬ್ಬಂದಿ ಶ್ರಮಿಸಲು ಕರೆ ಕೊಟ್ಟರು. ಕಳೆದ ವರ್ಷ ಶಾಖೆಯ ಉದ್ಘಾಟನಾ ಸಂದರ್ಭದಲ್ಲಿ ಆಶೀರ್ವಚಿಸಿದ ಧರ್ಮಗುರುಗಳಾದ ವಂ. ಫಾ| ಜೋನ್ ಫೆರ್ನಾಂಡಿಸ್ ಇವರಿಗೆ ವಂದನೆಗಳನ್ನು ಸಲ್ಲಿಸಿದರು. ನೂತನ ಎಟಿಎಮ್‌ನ್ನು ಆಶೀರ್ವಚಿಸಿ ಮಾತನಾಡಿದ ವಂದನೀಯ ಫಾ| ಜೋನ್ ಫೆರ್ನಾಂಡಿಸ್ ಬ್ಯಾಂಕಿನ ಅಧ್ಯಕ್ಷರು, ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಗ್ರಾಹಕರಿಗೆ ಶುಭ ಹಾರೈಸಿದರು. ಎಟಿಎಮ್ ಉಧ್ಘಾಟಿಸಿ ಮಾತನಾಡಿದ ಶ್ರೀ ಜೆರಾಲ್ಡ್ ಗೊನ್ಸಾಲ್ವಿಸ್ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊ ಇವರ ಮುಂದಾಳುತ್ವದ ಆಡಳಿತ ಮಂಡಳಿಯ ಇತ್ತೀಚಿನ ಸಾಧನೆಯನ್ನು ಮತ್ತು ಫಲಿತಾಂಶದ ಬಗ್ಗೆ ಶ್ಲಾಘಿಸಿದರು. ಶಾಖೆಯು ಒಂದು ವರ್ಷದಲ್ಲಿಯೇ ರೂ. ೧೦ ಕೋಟಿ ಸಾಧನೆಗೈದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ನೂತನ ತಂತ್ರಜ್ಞಾನದಲ್ಲಿ ಹಿಂದೆ ಬಿದ್ದರೆ ಪ್ರಗತಿ ಅಸಾದ್ಯ, ಎಲ್ಲರೂ ಒಟ್ಟುಗೂಡಿ ಕೆಲಸ ಮಾಡಿದ್ದರಿಂದ ಬ್ಯಾಂಕ್ ಪ್ರಗತಿಯಲ್ಲಿ ಮುಂದೆ ಇದೆ. ಬ್ಯಾಂಕ್ ತಂತ್ರಜ್ಞಾನದಲ್ಲಿ ಮೂಂಚೂಣಿಯಲ್ಲಿದ್ದು ಮುಂದೆಯೂ ಉತ್ತಮ ಪ್ರಗತಿ ಸಾಧಿಸಲಿ ಎಂದು ಶುಭ ಹಾರೈಸಿದರು. ಶಾಖೆಯ ವಾರ್ಷಿಕೋತ್ಸವ ಸಂದರ್ಭವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ರೂ. ೧೦ ಕೋಟಿ ವ್ಯವಹಾರದ ಸಾಧನೆ ಮಾಡಿದ ಶಾಖೆಯ ವ್ಯವಸ್ಥಾಪಕ ಶ್ರೀ ಒವಿನ್ ರೆಬೆಲ್ಲೊ ಇವರನ್ನು ಸನ್ಮಾನಿಸಲಾಯಿತು. ಬ್ರಹ್ಮಾವರ ಕ್ಯಾಥೋಲಿಕ್ ಕ್ರೇಡಿಟ್ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದ ಶ್ರೀ ಜೆರಾಲ್ಡ್ ಗೊನ್ಸಾಲ್ವಿಸ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಿರ್ದೇಶಕರಾದ ಡಾ| ಜೆರಾಲ್ಡ್ ಪಿಂಟೊ ಸ್ವಾಗತಿಸಿ, ಮಹಾಪ್ರಬಂಧಕ ಶ್ರೀ ಸುನಿಲ್ ಮಿನೆಜಸ್ ವಂದಿಸಿದರು. ಶಾಖಾ ವ್ಯವಸ್ಥಾಪಕ ಶ್ರೀ ಒವಿನ್ ರೆಬೆಲ್ಲೊ ನಿರೂಪಿಸಿದರು. ಉಡುಪಿ ಶಾಖಾ ವ್ಯವಸ್ಥಾಪಕ ಶ್ರೀ ಪ್ರದೀಪ್ ಡಿಸೋಜ, ಶಿರ್ವ ಶಾಖಾ ವ್ಯವಸ್ಥಾಪಕಿ ಅನ್ಸಿಲ್ಲಾ ಫೆರ್ನಾಂಡಿಸ್, ಕುಂದಾಪುರ ಶಾಖಾ ವ್ಯವಸ್ಥಾಪಕಿ ಜ್ಯೋತಿ ಬಾರೆಟ್ಟೊ ಹಾಗೂ ಗ್ರಾಹಕರು ಹಾಜರಿದ್ದರು.

ಕರಾವಳಿ ಸುದ್ದಿ

ಎಂಸಿಸಿ ಬ್ಯಾಂಕ್ 19ನೇ ಶಾಖೆ ಬೆಳ್ಮಣ್ ನಲ್ಲಿ ಲೋಕಾರ್ಪಣೆ

ಮಂಗಳೂರು: ಎಂಸಿಸಿ ಬ್ಯಾಂಕ್ ನ 19ನೇ ಶಾಖೆ ಬೆಳ್ಮಣ್ ನಲ್ಲಿ ಆದಿತ್ಯವಾರ ಲೋಕಾರ್ಪಣೆಗೊಂಡಿತು.ಬೆಳ್ಮಣ್ ಚರ್ಚ್ ಧರ್ಮಗುರು ಫೆಡ್ರಿಕ್ ಮಸ್ಕರೇನಸ್ ಅವರು ದೀಪ ಬೆಳಗಿಸುವ ಮೂಲಕ ನೂತನ ಬ್ಯಾಂಕ್ ಉದ್ಘಾಟಿಸಿ ಶುಭ ಹಾರೈಸಿದರು.ಬಳಿಕ ಆಶೀರ್ವಚನದ ನುಡಿಗಳನ್ನಾಡಿದ ಅವರು, “ಎಂಸಿಸಿ ಬ್ಯಾಂಕ್ ನ 19ನೇ ಶಾಖೆ ಇಂದು ಉದ್ಘಾಟನೆಗೊಂಡಿದೆ. ಗ್ರಾಹಕರ ಸಹಕಾರದಿಂದ ಬ್ಯಾಂಕ್ ಈ ಮಟ್ಟಕ್ಕೆ ತಲುಪಿದೆ. ಅನಿಲ್ ಲೋಬೋ ಮುಂದಾಳತ್ವದಲ್ಲಿ ಹಾಗೂ ನಿರ್ದೇಶಕರ ಅಹರ್ನಿಶಿ ದುಡಿಮೆ ಮತ್ತು ಸಿಬ್ಬಂದಿಯ ಕಾರ್ಯ ದಕ್ಷತೆಯಿಂದ ಎಂಸಿಸಿ ಬ್ಯಾಂಕ್ ಮನೆಮಾತಾಗಿದೆ. ಬೆಳ್ಮಣ್ ಶಾಖೆಯು ಅದೇ ರೀತಿ ಗ್ರಾಹಕ ಸ್ನೇಹಿಯಾಗಿ ಬೆಳೆದು ಜನರಿಗೆ ವರದಾನವಾಗಲಿ“ ಎಂದರು.ಬಳಿಕ ಮಾತಾಡಿದ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಅವರು, ”ವಿಶ್ವಾಸಾರ್ಹತೆಗೆ ಇನ್ನೊಂದು ಹೆಸರೇ ಎಂಸಿಸಿ ಬ್ಯಾಂಕ್. ಈ ಕಾರಣದಿಂದ 113 ವರ್ಷಗಳಿಂದ ಬ್ಯಾಂಕ್ ಗ್ರಾಹಕ ಸೇವೆಯಲ್ಲಿ ಹೆಸರು ಪಡೆದಿದೆ. ಕಳೆದ 10 ವರ್ಷಗಳಲ್ಲಿ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕ್ ಗೆ ಸರಿಸಮಾನವಾಗಿ ಬೆಳೆದಿದೆ. ಒಂದು ಊರಿಗೆ ಬ್ಯಾಂಕ್ ಬಂತು ಎಂದರೆ ಅದು ಪ್ರಗತಿಗೆ ದಾರಿಯಾಗಿದೆ. ಜನರ ವ್ಯವಹಾರಕ್ಕೆ ಪೂರಕವಾಗಿ ಬ್ಯಾಂಕ್ ಸೇವೆ ಮಾಡಿದಲ್ಲಿ ಜನರು ಬ್ಯಾಂಕ್ ಗೆ ಮತ್ತಷ್ಟು ಹತ್ತಿರವಾಗುತ್ತಾರೆ. ಜನರ ವಿಶ್ವಾಸವನ್ನು ಇದೇ ರೀತಿ ಮುಂದುವರಿಸಿ“ ಎಂದರು.ಬಳಿಕ ಮಾತಾಡಿದ ದೈಜಿ ವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮಾತಾಡಿ, “ಎಂಸಿಸಿ ಬ್ಯಾಂಕ್ ಅನ್ನು ಹಿಂದೆ ಕ್ಯಾಥೋಲಿಕ್ ಸಮುದಾಯದವರು ಅಮ್ಚೆ ಬ್ಯಾಂಕ್ ಎಂದು ಕರೆಯುತ್ತಿದ್ದರು. ಆದರೆ ಇಂದು ಇದು ನಮ್ಮೆಲ್ಲರ ಬ್ಯಾಂಕ್ ಆಗಿದೆ. ಇದಕ್ಕೆ ಕಾರಣ ಬ್ಯಾಂಕ್ ನ ಗ್ರಾಹಕ ಸ್ನೇಹಿ ನಿರ್ದೇಶಕರು ಮತ್ತು ಸಿಬ್ಬಂದಿಯ ತಂಡ. ಅನಿಲ್ ಲೋಬೋ ಅವರ ನೇತೃತ್ವದಲ್ಲಿ ಬ್ಯಾಂಕ್ ಯಶಸ್ಸಿನ ದಾರಿಯಲ್ಲಿ ಮುನ್ನಡೆಯುತ್ತಿದೆ. ಅವರಲ್ಲಿನ ನಾಯಕತ್ವ ಗುಣದಿಂದಲೇ ಬ್ಯಾಂಕ್ ಹೊಸ ಹೊಸ ಶಾಖೆಯನ್ನು ಗ್ರಾಮೀಣ ಭಾಗಗಳಲ್ಲಿ ತೆರೆಯುತ್ತಿದೆ. ಈ ಮೂಲಕ ಜನರಿಗೆ ಆರ್ಥಿಕ ವಹಿವಾಟು ನಡೆಸಲು ನೆರವಾಗುತ್ತಿದೆ. ನಗುಮೊಗದ ಸಿಬ್ಬಂದಿಯ ಸೇವೆಯಿಂದ ಜನರಿಗೆ ಆಪ್ತವಾಗಿರುವ ಬ್ಯಾಂಕ್ ಮುಂದೆ ಇನ್ನಷ್ಟು ಶಾಖೆಗಳನ್ನು ವಿಸ್ತರಿಸಿ ಬೆಳೆಯಲಿ“ ಎಂದರು. ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಮಾತಾಡಿ, ”ಬ್ಯಾಂಕ್ ಆಗಮನಕ್ಕೆ ಬೆಳ್ಮಣ್ ನಾಗರಿಕರು ತುಂಬು ಹೃದಯದ ಸ್ವಾಗತ ಕೋರಿದ್ದಾರೆ. ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬ್ಯಾಂಕ್ ನಲ್ಲಿ ಖಾತೆ ತೆರೆಯುತ್ತಿದ್ದಾರೆ. ನಮ್ಮ ಧ್ಯೇಯ ಬ್ಯಾಂಕ್ ಶಾಖೆಗಳನ್ನು ಹೆಚ್ಚಿಸಿ ಗ್ರಾಹಕರಿಗೆ ನೆರವಾಗುವುದು. ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಹಕಸ್ನೇಹಿಯಾಗಿ ಬ್ಯಾಂಕ್ ಕೆಲಸ ಮಾಡಲಿದೆ“ ಎಂದರು. ವೇದಿಕೆಯಲ್ಲಿ ಬೆಳ್ಮಣ್ ಗ್ರಾಮ ಪಂಚಾಯತ್ ರಾಮೇಶ್ವರಿ ಎಂ. ಶೆಟ್ಟಿ, ಜನರಲ್ ಮೆನೇಜರ್ ಸುನಿಲ್, ಅನಿವಾಸಿ ಉದ್ಯಮಿ ರೊನ್ ರಾಡ್ರಿಗಸ್ ಲಂಡನ್, ಬ್ರಾಂಚ್ ಮೆನೇಜರ್ ಶೈನಿ ಲಸ್ರಾದೋ ಮತ್ತಿತರರು ಉಪಸ್ಥಿತರಿದ್ದರು.ಎಲ್ಸನ್ ಕಾರ್ಯಕ್ರಮ ನಿರೂಪಿಸಿದರು.

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

ಭಾಸ್ಕರ ರೈ ಕುಕ್ಕುವಳ್ಳಿಯವರ ‘ಸೃಷ್ಟಿಸಿರಿಯಲಿ ಪುಷ್ಪವೃಷ್ಠಿ’ ಕೃತಿ ಬಿಡುಗಡೆ. ಕಾವ್ಯ ರಚನೆಯೂ ಒಂದು ಸೃಷ್ಟಿ ಕಾರ್ಯ: ಕೊಡಿಯಾಲಬೈಲ್

ಮಂಗಳೂರು: ‘ಕವಿತೆ ಕಟ್ಟುವುದು ಸುಲಭದ ಮಾತಲ್ಲ. ನಮ್ಮ ಪರಿಸರವನ್ನು ಸೂಕ್ಷ್ಮವಾಗಿ ಅವಲೋಕಿಸುವ ಚಿಕಿತ್ಸಕ ಬುದ್ಧಿಯೊಂದಿಗೆ ಭಾಷೆಯ ಮೇಲಿನ ಪ್ರಭುತ್ವವೂ ಬೇಕಾಗುತ್ತದೆ. ಈ ದೃಷ್ಟಿಯಿಂದ ಕಾವ್ಯ ರಚನೆ ಎಂಬುದು ಒಂದು ಅದ್ಭುತ ಸೃಷ್ಟಿ ಕಾರ್ಯವೇ. ವಿವಿಧ ಮಾದರಿಯ ಕವಿತಾ ರಚನೆಯ ಮೂಲಕ ಕುಕ್ಕುವಳ್ಳಿ ಅವರು ಅದನ್ನು ಸಾಧಿಸಿದ್ದಾರೆ’ ಎಂದು ಖ್ಯಾತ ರಂಗಭೂಮಿ ಮತ್ತು ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್ ಹೇಳಿದ್ದಾರೆ. ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಫೆಬ್ರವರಿ 14ರಂದು ನಗರದ ಪುರ ಭವನದಲ್ಲಿ ಜರಗಿದ ಪುಸ್ತಕ ಪ್ರೇಮಿಗಳ ದಿನಾಚರಣೆಯಲ್ಲಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ‘ಸೃಷ್ಟಿಸಿರಿಯಲಿ ಪುಷ್ಪವೃಷ್ಟಿ’ ಭಾವ – ಅನುಭಾವ ಗೀತೆಗಳ ಗುಚ್ಛವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಗುಲ್ಬರ್ಗ ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ಅಧಿಕಾರಿ ಡಾ. ಸದಾನಂದ ಪೆರ್ಲ ಕೃತಿಯ ಬಗ್ಗೆ ಮಾತನಾಡಿ ‘ವೃಕ್ಷರಾಜಿಗಳೆಲ್ಲ ಹೂ ಬಿಡುವ ಭೂಮಿಯ ಫಲವಂತಿಕೆಯ ಕಾಲದಲ್ಲಿ ಕೃತಿ ಹೊರಬರುತ್ತಿದೆ.ಅದಕ್ಕನುಗುಣವಾಗಿ ಕೃತಿಯ ಶೀರ್ಷಿಕೆ ಹೊಂದಿಕೆಯಾಗುವುದೊಂದು ಯೋಗಾಯೋಗ ‘ ಎಂದರು. ಪುಷ್ಪ ವೃಷ್ಟಿ ವ್ಯರ್ಥವಲ್ಲ:ಕೃತಿಕಾರ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ‘ಪ್ರಕೃತಿಯಲ್ಲಾಗುವ ಪುಷ್ಪ ವೃಷ್ಟಿ ಯಾವತ್ತೂ ವ್ಯರ್ಥವಲ್ಲ. ಎಲ್ಲಾ ಹೂಗಳು ಸುಗಂಧ ಬೀರದಿದ್ದರೂ ಔಷಧಿ ಅಥವಾ ಅಲಂಕಾರಕ್ಕಾಗಿಯಾದರೂ ಉಪಯೋಗವಾಗುತ್ತವೆ. ಅದಕ್ಕಾಗಿ ಸಂಕಲನದಲ್ಲಿರುವ ಕವಿತೆಗಳನ್ನು ಕಾವ್ಯಸಿರಿ, ಭಾವಸಿರಿ ಮತ್ತು ಭಕ್ತಿಸಿರಿ ಎಂಬ ಮೂರು ವಿಭಾಗಗಳಲ್ಲಿ ಪ್ರಕಟಿಸಲಾಗಿದೆ’ ಎಂದು ನುಡಿದರು.ಇದೇ ಸಂದರ್ಭದಲ್ಲಿ ಕೃತಿಕಾರರನ್ನು ರಂಗ ಸಂಗಾತಿ ವತಿಯಿಂದ ಸನ್ಮಾನಿಸಲಾಯಿತು.ಲೇಖಕಿ ಅಕ್ಷಯ ಆರ್ .ಶೆಟ್ಟಿ ಕವಿ ಪರಿಚಯ ನೀಡಿದರು. ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಶಶಿರಾಜ್ ರಾವ್ ಕಾವೂರು ಸ್ವಾಗತಿಸಿದರು. ಡಾ. ಮಂಜುಳಾ ಶೆಟ್ಟಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

ಫೆ.8ರಂದು ಸದಾಶಿವ ಶೆಟ್ಟಿ ಸೇವಾ ಬಳಗದ ವತಿಯಿಂದ ಸಹಾಯ ಹಸ್ತ ಮತ್ತು ಉಚಿತ ಅರೋಗ್ಯ ವಿಮೆ ಉದ್ಘಾಟನೆ

ಮಂಗಳೂರು: “ಸದಾಶಿವ ಶೆಟ್ಟಿ ಸೇವಾ ಬಳಗ ಕೇಂದ್ರೀಯ ಸಮಿತಿ ವತಿಯಿಂದ ಫೆ.8ರಂದು ಶನಿವಾರ ಸಂಜೆ 4 ಗಂಟೆಯಿಂದ ಮೀಂಜ ಬಂಟರ ಸಂಘ ಮೈದಾನ ಚಿಗುರುಪಾದೆಯಲ್ಲಿ ನಡೆಯುವ ಸದಾಶಿವ ಸಹಾಯ ಹಸ್ತ ವಿತರಣೆ ಮತ್ತು ಉಚಿತ ಅರೋಗ್ಯ ವಿಮೆ ಉದ್ಘಾಟನೆ ಹಾಗೂ ಸದಾಶಿವ ಶೆಟ್ಟಿ ಅಭಿಮಾನಿ ಬಳಗ ಹಾಗೂ ಹಿತೈಷಿಗಳಿಂದ ತುಳುನಾಡ ಕಣ್ಮಣಿ, ಕೊಡುಗೈ ದಾನಿ ಕರ್ನಾಟಕ ರಾಜ್ಯೋತ್ಸವ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಸದಾಶಿವ ಶೆಟ್ಟಿ ಕನ್ಯಾನರವರಿಗೆ ಅಭಿನಂದನಾ ಕಾರ್ಯಕ್ರಮವು ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತುಳು ಜಾನಪದ ನಾಟಕದೊಂದಿಗೆ ಸಮಾರೋಪಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಸುಮಾರು 4000ಕ್ಕಿಂತ ಮೇಲ್ಪಟ್ಟು ಜನಸಾಮಾನ್ಯರು ಭಾಗವಹಿಸಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಉಪಹಾರ ಮತ್ತು ಭೋಜನದ ವ್ಯವಸ್ಥೆ ಇದೆ. ಹಾಗೂ ಈ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ, ಉಚಿತ ಅರೋಗ್ಯ ಕುಟುಂಬ ವಿಮೆ (5 ಲಕ್ಷ) ಆಂಬುಲೆನ್ಸ್ ಹಸ್ತಾಂತರ, ಶಾಲಾ ವಾಹನ ಹಸ್ತಾಂತರ, ಶಾಲಾ ಅಭಿವೃದ್ಧಿಗೆ ಸಹಾಯ, ಅಂಗವಿಕಲರಿಗೆ ಕೃತಕ ಕಾಲು, ವೀಲ್‌ ಚೇರ್, ಹೊಲಿಗೆ ಮಿಷನ್, ಕ್ಯಾನ್ಸ‌ರ್ ರೋಗಿಗಳಿಗೆ ಹಾಗೂ ಇತರ ರೋಗಿಗಳಿಗೆ ವಿಶೇಷ ಸಹಕಾರ ನಡೆಯಲಿದೆ“ ಎಂದು ಸೇವಾ ಬಳಗದ ಉಪಾಧ್ಯಕ್ಷ ಕೆ. ನಾರಾಯಣ್ ನಾಯ್ಕ್ ನಡುಹಿತ್ತಿಲು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಜರಾಜೇಶ್ವರಿ ದೇವಸ್ಥಾನ ಮುಂಡಪಲ್ಲ ಕುಂಬಳೆ ಇದರ ಆಡಳಿತ ಮೊತ್ತೇಸರರಾದ ಕೆ.ಕೆ. ಶೆಟ್ಟಿ ಕುತ್ತಿಕ್ಕಾರ್ ವಹಿಸಲಿರುವರು. ಆಶೀರ್ವಚನವನ್ನು ಪರಮ ಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಇವರು ನೀಡಲಿರುವರು.ಉದ್ಘಾಟನೆಯನ್ನು ಗೌರವಾನ್ವಿತ ವಿಧಾನ ಸಭಾ ಅಧ್ಯಕ್ಷರಾದ ಎ.ಎನ್.ಶಂಸೀರ್ ಮಾಡಲಿರುವರು. ಸಹಾಯ ಹಸ್ತ ಆರೋಗ್ಯ ವಿಮ ಉದ್ಘಾಟನೆಯನ್ನು ಕನ್ಯಾನ ಸದಾಶಿವ ಶೆಟ್ಟಿಯವರು ಮಾಡಲಿರುವರು.ಡಾ.ಎಂ.ಶಾಂತಾರಾಮ್ ಶೆಟ್ಟಿ, ರೆ.ಫಾದರ್ ಮೆಲ್ವಿನ್ ಜೋಸೆಫ್ ಪಿಂಟೋ ಎಸ್‌ಜೆ, ಉಸ್ತಾದ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಉಪಸ್ಥಿತಿಯಿರಲಿದ್ದಾರೆ.ಮುಖ್ಯಅತಿಥಿಯಾಗಿ ಸ್ಪೀಕರ್ ಯು.ಟಿ.ಖಾದರ್, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ, ಕಾಸರಗೋಡು ಎಸ್ಪಿ ಡಿ.ಶಿಲ್ಪಾ, ರಘುರಾಮ್ ಶೆಟ್ಟಿ ಕುಳೂರು ಕನ್ಯಾನ, ಸುಜಾತ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಸತೀಶ್ ಕುಂಪಲ, ಐಕಳ ಹರೀಶ್ ಶೆಟ್ಟಿ, ಶಶಿಧರ ಶೆಟ್ಟಿ ಬರೋಡ, ಸತೀಶ್ ಶೆಟ್ಟಿ ಪಟ್ಲ , ಐ.ಸುಬ್ಬಯ್ಯ ರೈ, ಗುರುಕಿರಣ್, ರಕ್ಷಿತ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.ಪತ್ರಿಕಾಗೋಷ್ಟಿಯಲ್ಲಿ ಸಂಘದ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಚಾರ್ಲ, ಕೋಶಾಧಿಕಾರಿ ಕಾರ್ತಿಕ್ ಶೆಟ್ಟಿ ಮಜಿಬೈಲು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.ಚಿತ್ರಗಳು ಸತೀಶ್ ಕಾಪಿಕಾಡ್

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

“ಮಿಡ್ಲ್ ಕ್ಲಾಸ್ ಫ್ಯಾಮಿಲಿ'” ತುಳು ಚಿತ್ರದೊಂದಿಗೆ ಕೈಜೋಡಿಸಿದ ರೋಹನ್ ಮೊಂತೇರೊ

ಮಂಗಳೂರು: ವೈಭವ್ ಫ್ಲಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಅರ್ಪಿಸುವ, ಎಚ್.ಪಿ.ಆರ್ ಫಿಲ್ಮ್ಸ್- ಹರಿಪ್ರಸಾದ್ ರೈ ಯವರ ಸಹಯೋಗದಲ್ಲಿ ಆನಂದ್ ಕುಂಪಲರವರ ನಿರ್ಮಾಣ ಹಾಗೂ ರಾಹುಲ್ ಅಮೀನ್ ನಿರ್ದೇಶನದಲ್ಲಿ ತಯಾರಾದ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ತುಳು ಸಿನಿಮಾ ಜನವರಿ 24 ರಂದು ತೆರೆಕಾಣಲಿದೆ.ತುಳು ಭಾಷೆಯ ಬೆಳವಣಿಗೆಗೆ ತುಳು ಚಿತ್ರ ರಂಗದ ಬೆಳವಣಿಗೆ ಕೂಡ ಅತ್ಯಗತ್ಯ. ಪ್ರತಿಯೊಬ್ಬ ತುಳುವನು ತುಳು ಚಿತ್ರ ನೋಡಿ ಇಷ್ಟ ಪಟ್ಟು ಹರಸಿದರೆ, ಚಿತ್ರರಂಗ ಉತ್ತಮವಾಗಿ ಬೆಳೆಯುತ್ತದೆ.ತುಳು ಚಿತ್ರಗಳನ್ನು ಜನ ಮನ ಮುಟ್ಟುವ ರೀತಿಯಲ್ಲಿ ತಯಾರಿಸಿ ಪ್ರಸ್ತುತ ಪಡಿಸಲು ಎಷ್ಟೇ ಪ್ರಯತ್ನಪಟ್ಟರು , ವಿಸ್ತಾರವಾದ ತುಳುನಾಡಿನಲ್ಲಿ ಒಂದು ಪರಿಧಿಯವರೆಗೂ ಮಾತ್ರ ಅದನ್ನು ತಲುಪಿಸಲು ಸಾಧ್ಯವಾಗುತ್ತಿದೆ. ತುಳು ಚಿತ್ರರಂಗ ತನ್ನ ಪರಿಧಿಯನ್ನು ವಿಸ್ತರಿಸಲು ಪ್ರೋತ್ಸಾಹಬೇಕಾಗಿದೆ. ಈ ಪ್ರೋತ್ಸಾಹಕ್ಕಾಗಿ ಹಲವಾರು ಮಂದಿಯ ಬಾಗಿಲು ತಟ್ಟುವುದು ನಮ್ಮ ಕರ್ತವ್ಯ ಹಾಗೂ ಅನಿವಾರ್ಯತೆಯೂ ಹೌದು. ಇಂಥಾ ಅನಿವಾರ್ಯತೆಯ ಸಂದರ್ಭದಲ್ಲಿ ಬಾಗಿಲು ತೆರೆದು ನಮ್ಮನ್ನು ಬಾಚಿ ತಬ್ಬಿಕೊಂಡವರು ರೋಹನ್ ಕಾರ್ಪೊರೇಷನ್ ನ ಮ್ಯಾನೇಜಿಂಗ್ ಡೈರೆಕ್ಟರ್ ಆದಂತಹಾ ರೋಹನ್ ಮೊಂತೇರೊರವರು. ಪ್ರಪ್ರಥಮ ಬಾರಿಗೆ ಒಬ್ಬ ಬಿಸಿನೆಸ್ ಜಾಯoಟ್ ತುಳು ಚಿತ್ರರಂಗಕ್ಕೆ ಈ ರೀತಿಯ ಸಹಕಾರ ನೀಡಿದ್ದು, ಶ್ಲಾಘನೀಯ. ರೋಹನ್ ಮೊಂತೇರೊರವರು ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ತುಳು ಚಿತ್ರವನ್ನು ವೀಕ್ಷಿಸಿ , ಇಷ್ಟ ಪಟ್ಟು ತನ್ನ ಬೆಂಬಲವನ್ನು ಘೋಷಿಸಿದ್ದಾರೆ. ಇದೀಗ ರೋಹನ್ ಹಾಗೂ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ಸಮಾಗಮದಲ್ಲಿ ತುಳು ಚಿತ್ರ ತನ್ನ ವಿಜಯದ ಇನ್ನೊಂದು ಮೆಟ್ಟಿಲು ಹತ್ತಲು ತಾಯಾರಾಗಿರುವುದು ಖಚಿತ.‘ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ತಂಡದ ಬಹುತೇಕ ತಂತ್ರಜ್ಞರು, ಕಲಾವಿದರು ಇಲ್ಲಿ ದುಡಿದಿದ್ದಾರೆ. ಮುಖ್ಯವಾಗಿ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಸಿನಿಮಾದ ನಿರ್ದೇಶಕ ರಾಹುಲ್ ಅಮೀನ್ ಇಲ್ಲೂ ನಿರ್ದೇಶಕರಾಗಿದ್ದಾರೆ‌. ವಿನೀತ್ ಕುಮಾರ್ ನಾಯಕ ನಟನಾಗಿ ಸಮತಾ ಅಮೀನ್ ನಾಯಕಿಯಾಗಿ ಹಾಗೂ ತುಳು ಚಿತ್ರರಂಗದ ಮೇರು ಕಲಾವಿದರಾದ ನವೀನ್ ಡಿ.ಪಡೀಲ್,ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಚೈತ್ರಾ ಶೆಟ್ಟಿ, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ರೂಪ ವರ್ಕಾಡಿ, ರವಿ ರಾಮಕುಂಜ ಮತ್ತಿತರರು ಅಭಿನಯಿಸಿದ್ದಾರೆ‌. ಸೃಜನ್ ಕುಮಾರ್ ತೋನ್ಸೆ ಸಂಗೀತ ನೀಡಿದ್ದಾರೆ. ಛಾಯಾಗ್ರಾಹಕರಾಗಿ ವಿಷ್ಣು ಪ್ರಸಾದ್ ಪಿ, ಸಂಕಲನ ವಿಶಾಲ್ ದೇವಾಡಿಗ, ವಸ್ತ್ರ ವಿನ್ಯಾಸ ವರ್ಷ ಆಚಾರ್ಯ ಹಾಗೂ ನವೀನ್ ಕುಮಾರ್ ಶೆಟ್ಟಿ ಮತ್ತು ವಿನಾಯಕ ಆಚಾರ್ಯ ನೃತ್ಯ ಸಂಯೋಜಿಸಿದ್ದಾರೆ.ಪವನ್ ಕುಮಾರ್,ನಿತಿನ್ ರಾಜ್ ಶೆಟ್ಟಿ, ಸುಹಾನ್ ಪ್ರಸಾದ್, ಭರತ್ ಕುಮಾರ್ ಗಟ್ಟಿ, ಗಣೇಶ್ ಕೊಲ್ಯ, ಅಶ್ವಿನಿ ರಕ್ಷಿತ್, ಕ್ಷಿತಿಂದ್ರ ಕೋಟೆಕಾರ್, ಮಿತ್ರಂಪಾಡಿ ಜಯರಾಮ್ ರೈ, ಕಿರಣ್ ಶೆಟ್ಟಿ, ಸ್ವಸ್ತಿಕ್ ಆಚಾರ್ಯ ಸಹ ನಿರ್ಮಾಪಕರಾಗಿದ್ದಾರೆ.ಪ್ರೊಡಕ್ಷನ್ ಮ್ಯಾನೇಜರ್ ಕಾರ್ತಿಕ್ ರೈ ಅಡ್ಯನಡ್ಕ ಹಾಗೂ ನಿತಿನ್ ಶೇರಿಗಾರ್ ಮತ್ತು ಆಯುಷ್ಮಾನ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.ಈಗಾಗಲೇ ಈ ಚಿತ್ರವನ್ನು ಯುಎಇ ರಾಷ್ಟ್ರದಲ್ಲಿ ಮೋನಿಷ ಶರತ್ ಶೆಟ್ಟಿ , ಹರೀಶ್ ಬಂಗೇರ, ಹರೀಶ್ ಶೇರಿಗಾರ್, ಗಿರೀಶ್ ನಾರಾಯಣ್, ದೀಪಕ್ ಕುಮಾರ್ ರವರು ಅರ್ಪಿಸಲು ಮುಂದಾಗಿದ್ದು, ದುಬೈನ ಗಮ್ಮತ್ ಕಲಾವಿದರ ಪೈಕಿ 5 ಕಲಾವಿದರಾದ ಚಿದಾನಂದ ಪೂಜಾರಿ , ಗಿರೀಶ್ ನಾರಾಯಣ್, ಡೋನಿ ಕೊರಿಯ, ಆಶಾ ಕೊರಿಯ , ದೀಪ್ತಿ ದಿನ್ ರಾಜ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.ಜನವರಿ 18, 19 ರಂದು ಯುಎಇ ಯಲ್ಲಿ ಪ್ರೀಮಿಯರ್ ಶೋ ನಡೆಯಲಿದೆ. ಸಿನಿಮಾ ಬಿಡುಗಡೆಯ ಮೊದಲೇ ಯುಎಇಯಲ್ಲಿ 30 ಲಕ್ಷಗಳ ಗಳಿಕೆಯನ್ನು ಮಾಡಿದೆ. ಇದು ತುಳು ಸಿನಿಮಾರಂಗದಲ್ಲಿ ದಾಖಲೆಯಾಗಿದೆ.ಸಿನಿಮಾ ಕೌಟುಂಬಿಕ ಕಥೆಯನ್ನು ಒಳಗೊಂಡಿದೆ. ಹಾಸ್ಯಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ‘ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ಸಿನಿಮಾದಂತೆ ಈ ಸಿನಿಮಾ ಕೂಡಾ ತುಳುಚಿತ್ರರಂಗದಲ್ಲಿ ದೊಡ್ಡ ಸೌಂಡ್ ಮಾಡಲಿದೆ. ಈಗಾಗಲೇ ಸಿನಿಮಾದ ಟೈಟಲ್ ಸ್ವಾಂಗ್ ಸೂಪರ್ ಹಿಟ್ ಆಗಿದೆ. ಜೊತೆಗೆ ಸಿನಿಮಾದ ನಾಯಕ ನಟ ವಿನೀತ್ ಕುಮಾರ್ ಮತ್ತು ನಾಯಕಿ ನಟಿ ಸಮತಾ ಅಮೀನ್ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಲಿದೆ.

Scroll to Top