ಕರಾವಳಿ ಸುದ್ದಿ

ಕರಾವಳಿ ಸುದ್ದಿ

ಶ್ರೀನಿಧಿ ಕ್ಯಾಟರರ‍್ಸ್ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಕೋಟೆಬಾಗಿಲು ಇದರ ಮಾಲಕರಾದ ಸುಧಾಕರ ಹೆಗ್ಡೆಯವರು ಯಶಸ್ವಿ ಉದ್ಯಮಿಯಾದ ಸತ್ಯಕಥೆ.

ಮೂಡಬಿದ್ರಿ :ಕಳೆದ ಮೂವತ್ತೊಂಬತ್ತು ವರ್ಷಗಳಿಂದ ಸಮಾಜಮುಖಿಯಾಗಿ ನಡೆದು ಯಶಸ್ವಿ ಉದ್ಯಮಿಯಾಗಿ ಬೆಳೆದು ಸುಮಾರು 150 ಕ್ಕೂ ಮಿಕ್ಕಿ ಉದ್ಯೋಗಿಗಳಿಗೆ ಅನ್ನದಾತರಾಗಿರುವ ಮೂಡಬಿದ್ರೆ ಕೋಟೆಬಾಗಿಲಿನ ಶ್ರೀನಿಧಿ ಕ್ಯಾಟರರ‍್ಸ್ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಎಂಬ ರಾಜ್ಯಮಟ್ಟದ ಉದ್ಯಮ ಸಂಸ್ಥೆಯ ಮಾಲಕರಾಗಿರುವ ಸುಧಾಕರ ಹೆಗ್ಡೆಯವರ ವೃತ್ತಿ ಬದುಕಿನ ಯಶಸ್ಸಿನ ಕಥೆ ಯುವಜನರಿಗೆ ಸ್ಪೂರ್ತಿದಾಯಕವಾಗಿದೆ. ಮೂಡಬಿದ್ರೆ ಕೋಟೆಬಾಗಿಲಿನ ಶ್ರೀನಿಧಿ ಕಂಪೌಂಡ್ ನಿವಾಸಿ ಶಿವಣ್ಣ ಹೆಗ್ಡೆಯವರ ಸುಪುತ್ರರಾಗಿರುವ ಸುಧಾಕರ ಹೆಗ್ಡೆಯವರು ಮೂಡಬಿದ್ರೆ ಜೈನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿ ತನಕ ಓದಿ ತದನಂತರ, ಉದ್ಯೋಗವನ್ನರಸಿಕೊಂಡು ಮುಂಬೈಗೆ ಹೋಗಿದ್ದರು. ಆವಾಗ ಅವರಿಗೆ 11 ವರ್ಷ ಪ್ರಾಯ. ಆರಂಭದಲ್ಲಿ ಮುಂಬೈಯ ಹೊಟೇಲ್‌ವೊಂದರಲ್ಲಿ ಕ್ಲೀನರ್ ಆಗಿ ಕೆಲಸಕ್ಕೆ ಸೇರಿದ್ದರು. ಆ ಬಳಿಕ ಕಿಚನ್ ಹೆಲ್ಪರ್ ಆಗಿ ಸೇರಿ ಕುಕ್ಕಿಂಗ್ ಜ್ಞಾನ ಪಡೆದರು. ಇದೇ ಸಂದರ್ಭದಲ್ಲಿ ಗೋರೆಗಾಂವ್‌ನ ಸರಸ್ವತಿ ನೈಟ್ ಹೈಸ್ಕೂಲಿನಲ್ಲಿ 9ನೇ ತರಗತಿ ತನಕ ಓದಿದರು. ಹಲವು ವರ್ಷಗಳ ಕಾಲ ಹೊಟೇಲ್‌ನಲ್ಲಿ ದುಡಿದು ದುಡಿದ ಹಣವನ್ನು ಉಳಿಸಿ 3೦ ಸಾವಿರ ರೂಪಾಯಿ ಬಂಡವಾಳ ಸೇರಿಸಿ ಸ್ವಂತ ಕ್ಯಾಂಟೀನ್ ಆರಂಭಿಸಿದರು.ಅನಂತರ,ಹಂತ ಹಂತವಾಗಿ ಸ್ವಂತ ಹೊಟೇಲ್, ಬಾರ್ ಆರಂಭಿಸಿದರು. ಆದರೆ, ಮುಂಬಯಿ ಮಹಾನಗರ ಪಾಲಿಕೆಯು ಅದನ್ನು ನೆಲಸಮಗೊಳಿಸಿದ್ದರಿಂದ ನಷ್ಟ ಅನುಭವಿಸಿ ಊರಿಗೆ ಮರಳಿದರು. ಹೀಗೇ ಸುಮಾರು 27 ವರ್ಷಗಳ ಕಾಲ ಮುಂಬೈಯಲ್ಲಿ ದುಡಿದರು. ತದನಂತರ, ಮಂಗಳೂರಲ್ಲಿ ಕಂಪೆನಿಯೊಂದರ ಕ್ಯಾಂಟೀನ್‌ವೊಂದರಲ್ಲಿ ಕೆಲಸಕ್ಕೆ ಸೇರಿದರು. ಆ ಸಂದರ್ಭದಲ್ಲಿ ಕ್ಯಾಟರಿಂಗ್ ಸರ್ವಿಸ್‌ನಲ್ಲಿ ಕೆಲಸ ಮಾಡಿ ಅನುಭವ ಗಳಿಸಿದರು.ಸ್ನೇಹಿತರ ಆರ್ಥಿಕ ಸಹಕಾರದಿಂದ ಹಣ ಸಂಗ್ರಹಿಸಿ ಮೂಡಿಬಿದ್ರೆಯ ಕೋಟೆಬಾಗಿಲಿನಲ್ಲಿ 5೦ ಸೆಂಟ್ಸ್ ಸ್ವಂತ ಜಾಗ ಖರೀದಿಸಿ ಮಂಗಳೂರಲ್ಲಿ, ಮೂಡಬಿದ್ರೆಯಲ್ಲಿ ಮತ್ತು ಕಾರ್ಕಳದಲ್ಲಿ ಶ್ರೀನಿಧಿ ಕ್ಯಾಟರರ‍್ಸ್ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಎಂಬ ರಾಜ್ಯಮಟ್ಟದ ಉದ್ಯಮ ಸಂಸ್ಥೆಯನ್ನು ಆರಂಭಿಸಿದರು. ಇದಕ್ಕೀಗ 17 ವರ್ಷ ತುಂಬಿದೆ. ಸುಮಾರು 150 ಕ್ಕೂ ಮಿಕ್ಕಿ ಇದರಲ್ಲಿ ಉದ್ಯೋಗಿಗಳಾಗಿದ್ದು, ಅವರ ಮಕ್ಕಳಿಗೆ ವರ್ಷವರ್ಷವೂ ವಿದ್ಯಾಭ್ಯಾಸದ ನೆರವು ಒದಗಿಸುತ್ತಿದ್ದಾರೆ. ಸಮಾಜಸೇವಕರು, ಮಾನವೀಯ ಮೌಲ್ಯಗಳಿಗೆ ಜೀವ ತುಂಬುವ ಸಹೃದಯ ಉದ್ಯಮಿ ಸುಧಾಕರ ಹೆಗ್ಡೆಯವರು ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಮೂಡಬಿದ್ರೆ ಘಟಕದ ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ.ವೀರಮಾರುತಿ ದೇವಸ್ಥಾನ ಕೋಟೆಬಾಗಿಲು, ಮಹಮ್ಮಾಯಿ ದೇವಸ್ಥಾನ ಕೋಟೆಬಾಗಿಲು, ನಿಡ್ಡೋಡಿ ಮಾರಪ್ಪಾಡಿ ಕೊಡಮಣಿತ್ತಾಯ- ಕುಕ್ಕಿತ್ತಾಯ ದೈವಸ್ಥಾನ, ಮಂಜುಶ್ರೀ ಭಜನಾ ಮಂಡಳಿ ಮುರಮೇಲು ಮಾರ್ಪಾಡಿ ಮೊದಲಾದ ಧಾರ್ಮಿಕ ಕ್ಷೇತ್ರಗಳಲ್ಲಿ ಆಡಳಿತ ಮಂಡಳಿ ಸದಸ್ಯರಾಗಿ ಸಕ್ರಿಯರಾಗಿರುವ ಸುಧಾಕರ ಹೆಗ್ಡೆಯವರ ಯಶಸ್ಸಿನ ಹಿಂದೆ ಧರ್ಮಪತ್ನಿ ಪ್ರಮೀಳಾ ಸುಧಾಕರ ಹೆಗ್ಡೆಯವರ ಪ್ರೋತ್ಸಾಹವಿದೆ. ಇವರಿಗೆ ಪ್ರಶ್ವೀತ್ ಮತ್ತು ಉದ್ವೀತ್ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ.ಸುಧಕರ ಹೆಗ್ಡೆಯವರ ನಿಸ್ವಾರ್ಥ ಮನೋಭಾವವನ್ನು ಗುರುತಿಸಿ ಹಲವಾರು ಸಂಘ, ಸಂಸ್ಥೆಗಳು ಅವರನ್ನು ಸನ್ಮಾನಿಸಿ, ಗೌರವಿಸಿದೆ.

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

‘ಪ್ಲಾಸ್ಟಿಕ್ ನಿರ್ಮೂಲನಕ್ಕೆ ಜನ ಜಾಗ್ರತಿ ಮೂಡಿಸುವ ಅಗತ್ಯವಿದೆ’ : ವಿಧಾನ ಸಭೆ ಸ್ಪೀಕರ್ ಯು ಟಿ ಖಾದರ್

ಮಂಗಳೂರು, ಸೆಪ್ಟೆಂಬರ್ 11,ಪ್ಲಾಸ್ಟಿಕ್ ಬಳಕೆಯಿಂದ ಆಗುವ ಹಾನಿಗಳ ಕುರಿತು ಜನ ಜಾಗ್ರತಿ ಮೂಡಿಸುವ ಕೆಲಸಗಳನ್ನು ಸಂಘ ಸಂಸ್ಥೆಗಳು ಮಾಡಬೇಕು. ಇದನ್ನು ಸಂಪೂರ್ಣ ನಿಯಂತ್ರಿಸಲು ಜನರ ಸಹಭಾಗಿತ್ವ ಅಗತ್ಯ ಇದೆ ಎಂದು ಹೇಳಿದರು.ನಗರದ ಗೋಲ್ಡ್ ಫಿಂಚ್ ಹೋಟೆಲ್ ನಲ್ಲಿ ನೂತನವಾಗಿ ಆರಂಭಗೊಂಡ ಸ್ವಚ್ಚ ಪರಿಸರ ಪ್ರತಿಷ್ಠಾನ ವನ್ನು ಉದ್ಘಾಟಿಸಿ ಸ್ಪೀಕರ್ ಯು ಟಿ ಖಾದರ್ ಮಾತನಾಡಿದರು. ಪ್ಲಾಸ್ಟಿಕ್ ಮರು ಬಳಕೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಷ್ಠಾನ ಮುತುವರ್ಜಿಯಿಂದ ಕೆಲಸ ಮಾಡಬೇಕು. ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳನ್ನು ಪ್ಲಾಸ್ಟಿಕ್ ಜಾಗ್ರತಿ ಅಭಿಯಾನದಲ್ಲಿ ತೋಡಗಿಸಿಕೊಳ್ಳುವ0ತೆ ಸಲಹೆ ನೀಡಿದರು.ಸ್ವಚ್ಚ ಪರಿಸರ ಪ್ರತಿಷ್ಠಾನ ಟ್ರಸ್ಟಿ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ,ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನದ ಮುಖ್ಯ ಸಯೋ0ಜಕ ರಂಜನ್ ಬೆಳ್ಳಪಾರ್ದಿ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಮಾಜಿ ಉಪ ಮೇಯರ್ ಸುಮಂಗಲ ರಾವ್, ಪಾಲಿಕೆ ಸದಸ್ಯ ವಿನಯರಾಜ್,ಮಂಗಳೂರು ವಿಶ್ವ ವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಸ0ಯೋಜನಾಧಿಕಾರಿ ಶೇಷಪ್ಪ ಅಮೀನ್,ಮಂಗಳೂರು ವಲಯ ಪಿ ಆರ್ ಓ ರೆವ್ ಡಾ ಜೆಬಿ ಸಲ್ಡಾನ್ಹಾ ಹರೇಕಳ ಜುಮ್ಮಾ ಮಸೀದಿ ಧರ್ಮ ಗುರುಗುರು ಹಫಿಲ್ ಯಾಕೂಬ್ ಸಹಿದಿ ಉಪಸ್ಥಿತರಿದ್ದರು.ಪುಷ್ಪರಾಜ್ ಸ್ವಾಗತಿಸಿ ವಂದಿಸಿದರು. ಪ್ರಿಯಾ ಹರೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.

ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಸದರಾದ ಜಗದೀಶ್ ಶೆಟ್ಟರ್, ಡಾ. ಸಿ.ಎನ್. ಮಂಜುನಾಥ್, ಹಿರಿಯ ಬಾಲಿವುಡ್ ನಟ ಗುಲ್ಶನ್ ಗ್ರೋವರ್ ಮೊದಲಾದವರು ಉಪಸ್ಥಿತರಿದ್ದರು. ಡಾ.ಸದಾನಂದ ಪೂಜಾರಿಯವರು ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೂತ್ರರೋಗ ವಿಭಾಗದ ಮುಖ್ಯಸ್ಥರಾಗಿದ್ದು, ಸಾವಿರಾರು ಬಡರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿ ಸಮಾಜಮುಖಿಯಾಗಿ ಸಾಗಿ ಬಡವರ ಪಾಲಿನ ಕರುಣಾಮಯಿ ಎಂದೇ ಜನಜನಿತರಾಗಿದ್ದಾರೆ. ಇವರಿಗೆ Mp mla’s news ಸೌಹಾರ್ದ ಸಂಗಮದಲ್ಲಿ ಬೆಸ್ಟ್ ಡಾಕ್ಟರ್ ಅವಾರ್ಡ್ ನೀಡಿ ಗೌರವಿಸಿದೆ.

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

ಬೋಂದೆಲ್ ಚರ್ಚ್ ಕಟ್ಟಡ ನವೀಕರಣ ಯೋಜನೆಯ ಸಹಾಯಾರ್ಥ ವೊಜೆಂ ಉತ್ಸವ್ – 2024

ಮಂಗಳೂರು : ಕೊಂಕಣಿ ಕ್ಯಾಥೊಲಿಕ್ ಕ್ರೈಸ್ತರ ಸಂಸ್ಕೃತಿಯಲ್ಲಿ ಹೊರೆ ಕಾಣಿಕೆಗೆ ವಿಶಿಷ್ಟವಾದ ಸ್ಥಾನವಿದೆ. ಅದು ಕೊಂಕಣಿ ಕ್ಯಾಥೊಲಿಕ್ ಕ್ರೈಸ್ತರ ವಿವಾಹ ಸಂಸ್ಕೃತಿಯ ಒಂದು ಭಾಗವಾಗಿದೆ. ಮದುವೆಯ ಮುಂಚಿತವಾಗಿ ನಡೆಯುವ ರೋಸ್ ಸಂಭ್ರಮದ ವೇಳೆ ನಡೆಯುವ ವಿವಿಧ ಕಾರ್ಯಕ್ರಮಗಳ ಪೈಕಿ ಹೊರೆ ಕಾಣಿಕೆಯೂ ಒಂದಾಗಿದೆ. ಇದನ್ನು ಕೊಂಕಣಿಯಲ್ಲಿ ವೊಜೆಂ ಎಂದು ಹೇಳುತ್ತಾರೆ. ರೋಸ್ ಸಮಾರಂಭದ ವೇಳೆ ವರ ಅಥವಾ ವಧುವಿನ ಮನೆಯಲ್ಲಿ ನಡೆಯುವ ಮೊದಲ ಕಾರ್ಯಕ್ರಮ ಇದಾಗಿದೆ. ಮದುವೆ ಸಮಾರಂಭಕ್ಕೆ ತಗಲುವ ಖರ್ಚು ವೆಚ್ಚದ ಹೊರೆಯನ್ನು ಸ್ವಲ್ಪ ಪ್ರಮಾಣದಲ್ಲಿ ತಗ್ಗಿಸುವ ನಿಟ್ಟಿನಲ್ಲಿ ತರಕಾರಿ, ದವಸ ಧಾನ್ಯ ಇತ್ಯಾದಿಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ತಲುಪಿಸುವ ಉದ್ದೇಶದಿಂದ ಪೂರ್ವಜರು ಈ ವೊಜೆಂ ಅಥವಾ ಹೊರೆ ಕಾಣಿಕೆ ಸಂಪ್ರದಾಯವನ್ನು ಜಾರಿಗೆ ತಂದಿದ್ದರು ಎಂದು ತಿಳಿದು ಬರುತ್ತದೆ. ಈ ಸಂಪ್ರದಾಯವು ಅನಾಚೂನವಾಗಿ ಬೆಳೆದು ಬಂದಿದೆ.ಇದೀಗ ಸಾಂಗಾತಿ ಮಂಗ್ಲುರ್ ಸಂಸ್ಥೆಯು ಬೋಂದೆಲ್ ಸಂತ ಲಾರೆನ್ಸ್ ಚರ್ಚ್ ಮತ್ತು ಪುಣ್ಯ ಕ್ಷೇತ್ರದ ಸಹಯೋಗದಲ್ಲಿ ಬೋಂದೆಲ್ ಚರ್ಚಿನ ನವೀಕರಣ ಯೋಜನೆಯ ಸಹಾಯಾರ್ಥ ಹೊರೆ ಕಾಣಿಕೆ ಉತ್ಸವ ಅಥವಾ ವೊಜೆಂ ಉತ್ಸವ್ ಸ್ಪರ್ಧೆಯನ್ನು ಆಯೋಜಿಸಿದೆ. ಮೇ 19 ರಂದು ವಾಮಂಜೂರು ಚರ್ಚ್ ಸಭಾಂಗಣದಲ್ಲಿ ಈ ವೊಜೆಂ ಉತ್ಸವ್ ಸ್ಪರ್ಧೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಈ ಸ್ಪರ್ಧೆ ಆರಂಭವಾಗಲಿದೆ.ಸ್ಪರ್ಧೆಯ ವಿಜೇತರಿಗೆ ಆಕರ್ಷಕ ನಗದು ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ 50,000 ರೂ., ದ್ವಿತೀಯ ಬಹುಮಾನ 25,000 ರೂಪಾಯಿ ಹಾಗೂ ತೃತೀಯ ಬಹುಮಾನ 15,000 ನಗದು ನೀಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.ವಿಶಾಲಿನ್ ಸಲ್ದಾನ್ಹಾ ಅಧ್ಯಕ್ಷರಾಗಿರುವ, ವಿಕ್ರಮ್ ಪೆರ್ಮನ್ನೂರು ಉಪಾಧ್ಯಕ್ಷರಾಗಿರುವ ಮತ್ತು ಸ್ಟೀಫಾ ಡಿ ಸೋಜಾ ಕಾರ್ಯದರ್ಶಿ ಆಗಿರುವ ಉತ್ಸವ ಸಮಿತಿಯು ಇದನ್ನು ಹಮ್ಮಿಕೊಂಡಿದೆ.ಹೆಚ್ಚಿನ ವಿವರಗಳಿಗೆ 8660015203 ಅಥವಾ 8904373405 ಸಂಖ್ಯೆಗೆ ಸಂಪರ್ಕಿಸ ಬಹುದು.ವೊಜೆಂ ಉತ್ಸವ್ – 2024ಸ್ಪರ್ಧೆಯ ನಿಯಮಗಳು:ಕ್ಯಾಥೋಲಿಕ್ ಕ್ರೈಸ್ತರಿಗೆ ಮಾತ್ರ ಇದರಲ್ಲಿ ಭಾಗವಹಿಸಲು ಅವಕಾಶ. ಒಬ್ಬರು ಒಂದು ತಂಡದಲ್ಲಿ ಮಾತ್ರ ಪಾಲ್ಗೊಳ್ಳ ಬಹುದು. ಒಂದು ತಂಡಕ್ಕೆ ಪ್ರದರ್ಶನ ನೀಡಲು 15 ನಿಮಿಷಗಳ ಕಾಲಾವಕಾಶ ಇರುತ್ತದೆ. ಒಂದು ತಂಡದಲ್ಲಿ ಗರಿಷ್ಠ 25 ಮಂದಿಗೆ ಪಾಲ್ಗೊಳ್ಳಲು ಅವಕಾಶವಿದೆ. ಒಂದು ತಂಡದಲ್ಲಿ ಗುರ್ಕಾರ್ ಮತ್ತು ಗುರ್ಕಾರ್ನ್ (ಮಹಿಳೆ), ವಧು ಅಥವಾ ವರ ಮತ್ತು ತಾಯಿ ತಂದೆಯರ ಪಾತ್ರ ಕಡ್ಡಾಯ. ಹೊರೆ ಕಾಣಿಕೆಗೆ ಬ್ಯಾಂಡ್ ಮತ್ತು ಬೇಕಾಗಿರುವ ಕೆಲವು ಸಾಮಗ್ರಿಗಳನ್ನು ಸಂಘಟಕರು ಒದಗಿಸುತ್ತಾರೆ. (ಹೆಚ್ಚುವರಿ ವಸ್ತುಗಳು ಬೇಕಿದ್ದರೆ ಸ್ಪರ್ಧಿಗಳು ತರ ಬಹುದು). ಬೆಂಕಿ, ನೀರು, ಪಟಾಕಿ ಮತ್ತು ಪ್ರಾಣಿ/ ಜಾನುವಾರುಗಳ ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ ಕೃತಕ ಪ್ರಾಣಿ/ ಜಾನುವಾರುಗಳನ್ನು ಬಳಸ ಬಹುದು. ಸ್ಪರ್ಧಿಗಳು ಕಾರ್ಯಕ್ರಮ ಪ್ರಸ್ತುತ ಪಡಿಸುವಾಗ ಕೊಂಕಣಿಯ ಹೊರತಾಗಿ ಅವಶ್ಯಕತೆ ಇಲ್ಲದೆ ಬೇರೆ ಯಾವುದೇ ಭಾಷೆಯನ್ನು ಬಳಸುವಂತಿಲ್ಲ. ಮಾತಿನಲ್ಲಿ ಅಥವಾ ಕೃತ್ಯದಲ್ಲಿ ಯಾವುದೇ ವ್ಯಕ್ತಿಗೆ, ಸಂಸ್ಥೆಗೆ ಅಥವಾ ಒಂದು ಮತ ಧರ್ಮಕ್ಕೆ ಅವಮಾನ ಅಥವಾ ನಿಂದನೆ ಹಾಗೂ ಅಸಭ್ಯ, ಅಶ್ಲೀಲ ಅಥವಾ ಸ್ಪರ್ಧೆಗೆ ಕಳಂಕ ತರುವ ರೀತಿಯ ಪ್ರದರ್ಶನವನ್ನು ನಿಷೇಧಿಸಲಾಗಿದೆ. ರಾಜಕೀಯ ವಿಷಯ ಹಾಗೂ ದ್ವಂದ್ವಾರ್ಥದ ಶಬ್ದಗಳ ಬಳಕೆಯನ್ನು ಮಾಡುವಂತಿಲ್ಲ. ಸ್ಪರ್ಧೆಯ ಯಾವುದೇ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಪ್ರವೇಶಾವಕಾಶವನ್ನು ಅಮಾನತಿನಲ್ಲಿಡುವ ಅಧಿಕಾರ ಸ್ಪರ್ಧೆಯ ಸಂಚಾಲಕರಿಗೆ ಇರುತ್ತದೆ. ಸ್ಪರ್ಧೆಯ ಸಂದರ್ಭದಲ್ಲಿ ವ್ಯವಸ್ಥಾಪಕರು ನೇಮಿಸುವ ವ್ಯಕ್ತಿಗಳ ಹೊರತಾಗಿ ಬೇರೆ ಯಾರೂ ಫೋಟೋ ಅಥವಾ ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ. ಹಾಗೆಯೇ ವೀಕ್ಷಕರಿಗೆ ಮತ್ತು ತೀರ್ಪುಗಾರರಿಗೆ ಅಡ್ಡಿಯಾಗುವ ರೀತಿಯಲ್ಲಿ ಫೋಟೋ ತೆಗೆಯುವುದನ್ನು ಕೂಡಾ ನಿಷೇಧಿಸಲಾಗಿದೆ. ತೀರ್ಪುಗಾರರ ಮತ್ತು ಸಂಘಟಕರ ತೀರ್ಮಾನವೇ ಅಂತಿಮ. ಸ್ಪರ್ಧೆಯ ಫಲಿತಾಂಶವನ್ನು ಸಂಪೂರ್ಣ ಪ್ರದರ್ಶನದ ಕೊನೆಯಲ್ಲಿ ಘೋಷಿಸಿ ಬಹುಮಾನ ವಿತರಣೆ ಮಾಡಲಾಗುವುದು.ತಂಡದ ಪ್ರವೇಶ ಶುಲ್ಕ 10,000 ರೂಪಾಯಿ ಆಗಿರುತ್ತದೆ. ನೋಂದಣಿಯು ಮೇ 19 ಭಾನುವಾರ ಬೆಳಗ್ಗೆ 8.30 ಕ್ಕೆ ಆರಂಭವಾಗುತ್ತದೆ. ನೋಂದಣಿ ಬಗ್ಗೆ ಹೆಚ್ಚಿನ ಮಾಹಿತಿಗೆ 8904373405, 8660015203 ನಂಬರಿಗೆ ಸಂಪರ್ಕಿಸ ಬಹುದು. ಹೊರೆ ಕಾಣಿಕೆ ಮೆರವಣಿಗೆಯ ರೀತಿ ಮತ್ತು ಡ್ರೆಸ್, ಹಾಡು, ಗುರ್ಕಾರ್ ಮತ್ತು ಗುರ್ಕಾರ್ನ್ ಅವರ ಸಂಭಾಷಣೆ, ಭಾಗವಹಿಸಿದ ಎಲ್ಲರ ನೃತ್ಯ, ಹಾಸ್ಯ ಪಾತ್ರದ ಮಾನ ದಂಡಗಳ ಆಧಾರದಲ್ಲಿ ಅಂಕಗಳನ್ನು ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

ಎ. 3ರಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ನಾಮಪತ್ರ ಸಲ್ಲಿಕೆ.

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಎ. 3ಕ್ಕೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.ಕ್ಷೇತ್ರದ ಉಸ್ತುವಾರಿ ಕೆ.ಜೆ. ಜಾರ್ಜ್ ಸಹಿತ ಇತರ ನಾಯಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಂದು ಬೆಳಗ್ಗೆ 11ಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ಸಣ್ಣ ಸಭೆ ನಡೆಸಿ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ನಡೆಯಲಿದೆ. ಎ. 6ರಂದು ನಡೆಸಲು ಉದ್ದೇಶಿಸಿರುವ ಸಾರ್ವತ್ರಿಕ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗ ವಹಿಸುವ ಸಾಧ್ಯತೆಗಳಿದ್ದು ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಉಡುಪಿಯಲ್ಲಿ ತಿಳಿಸಿದ್ದಾರೆ.

ಕರಾವಳಿ ಸುದ್ದಿ, ಹೊರ ರಾಜ್ಯ ವಾರ್ತೆಗಳು

ಪ್ರಖ್ಯಾತ ಉದ್ಯಮಿ, ಸಮಾಜ ಸೇವಕ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಮಾಲಕತ್ವದ ಅತ್ಯಾಧುನಿಕ ಸೌಲಭ್ಯದ ಸುಸಜ್ಜಿತವಾದ ಕೊರೋನೆಟ್ ಬ್ಯೂಟಿಕ್ ಹೋಟೆಲ್ ವಿನೂತನ ವಿನ್ಯಾಸದೊಂದಿಗೆ ಪುಣೆಯ ಆಪೆಯ ರೋಡನಲ್ಲಿ ಶುಭಾರಂಭ

ಪುಣೆ: ಸಮಾಜ ಸೇವಕ, ಪುಣೆಯ ಹೆಸರಾಂತ ಹೊಟೇಲ್ ಉದ್ಯಮಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ, ಪುಣೆ ಬಂಟರ ಸಂಘದ ಅಧ್ಯಕ್ಷ ಮತ್ತು ಬಂಟ ಸಮಾಜದ ಮುಖಂಡ, ಬಡವರ ಬಂಧು ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಬಾಳಿಕೆ ಮಾಲಕತ್ವದ ಕೊರೋನೆಟ್ ಬ್ಯೂಟಿಕ್ ಹೊಟೇಲ್ ನೂತನ ವಿನ್ಯಾಸದೊಂದಿಗೆ ಪುಣೆಯ ಆಪ್ಪೆ ರೋಡ್‌ನಲ್ಲಿ ಮಾ. 1ರಂದು ಶುಭಾರಂಭಗೊಂಡಿತು. ಧಾರ್ಮಿಕ ಕಾರ್ಯಕ್ರಮವಾಗಿ ವಾಸ್ತು ಪೂಜೆ, ಶ್ರೀ ಸತ್ಯನಾರಾಯಣ ಪೂಜೆ ಯೊಂದಿಗೆ ದೇವತಾ ಕಾರ್ಯಗಳು ನಡೆದವು. ಈ ಸಂದರ್ಭ ಗಣ್ಯರಾದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಎಂ.ಜಿ.ಆರ್ ಗ್ರೂಪ್‌ನ ಸಿಎಂಡಿ ಪ್ರಕಾಶ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಬಂಟರ ಸಂಘ ಮುಂಬಯಿಯ ಪ್ರಮುಖರು, ಖ್ಯಾತ ಉದ್ಯಮಿಗಳು ಆಗಮಿಸಿ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟುಬಾಳಿಕೆ, ದಿವ್ಯಾ ಸಂತೋಷ್ ಶೆಟ್ಟಿ ದಂಪತಿಯನ್ನು ಶಾಲು ಹೊದಿಸಿ, ಪುಷ್ಪಗುಚ್ಚ ಸ್ಮರಣಿಕೆ ನೀಡಿ ಅಭಿನಂದಿಸಿ ಶುಭ ಹಾರೈಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂ ಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ,ಗೌರವ ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ, ವಿ. ಕೆ. ಗ್ರೂಪ್ ಆಫ್ ಕಂಪೆನೀಸ್‌ ಸಿಎಂಡಿ ಕೆ. ಎಂ.ಶೆಟ್ಟಿ,ಸಿಎ ಎನ್. ಬಿ. ಶೆಟ್ಟಿ,ಹೊಟೇಲ್ ಸಾಯಿ ಪ್ಯಾಲೇಸ್ ಆಡಳಿತ ನಿರ್ದೇಶಕ ರವಿ ಶೆಟ್ಟಿ, ಬಂಟರ ಸಂಘ ಮುಂಬಯಿ, ಮಾಜಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಎಸ್‌ಎಂಶೆಟ್ಟಿ ಶಿಕ್ಷಣಸಮೂಹ ಸಂಸ್ಥೆಯ ಕಾರ್ಯಾಧ್ಯಕ್ಷ ರತ್ನಕಾರ್ ಶೆಟ್ಟಿ ಮುಂಡ್ಕೂರು, ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಉಪ್ಪೇಂದ್ರ ಶೆಟ್ಟಿ ಮುಂಬಯಿ ಶ್ರೀ ಸಿದ್ದಿವಿನಾಯಕ ಮಂದಿರದ ಟ್ರಸ್ಟಿ ಭಾಸ್ಕರ್ ಶೆಟ್ಟಿ,ನವಿಮುಂಬಯಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸಂಜೀವ ಎಸ್. ಶೆಟ್ಟಿ, ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಮಾಜಿ ಅಧ್ಯಕ್ಷ ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ, ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ, ಬಾಲಾಜಿ ಗ್ರೂಪ್‌ನ ವಿಜಯ ಶೆಟ್ಟಿ,ತುಂಗಾ ಹಾಸ್ಪಿಟಲ್ ಮುಂಬಯಿ ನಿರ್ದೇಶಕ ಉಮೇಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಪಶ್ಚಿಮ ವಲಯ ಸಮನ್ವಯಕ ಖಾಂದೇಶ ಭಾಸ್ಕರ್ ಶೆಟ್ಟಿ, ಮುಂಬಯಿ ಉದ್ಯಮಿಗಳಾದ ಹರೀಶ್ ಶೆಟ್ಟಿ ಗುರ್ಮೆ, ಆಶೋಕ್ ಶೆಟ್ಟಿ, ಪ್ರಭಾಕರ ಶೆಟ್ಟಿ ಇನ್ನ, ದಿವಾಕರ ಶೆಟ್ಟಿ ಕುರ್ಲಾ, ಸಮಾಜ ಸೇವಕ ಸಂಚಿತ್ ಶೆಟ್ಟಿ, ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷರು, ಟ್ರಸ್ಟಿಗಳು, ಕಾರ್ಯಕಾರಿ ಸಮಿತಿಯ ಪದಾ ಧಿಕಾರಿಗಳು, ಪ್ರಾದೇಶಿಕ ಸಮಿತಿ ಪದಾ ಧಿಕಾರಿಗಳು, ಮಹಿಳಾ ವಿಭಾಗ ಪದಾ ಧಿಕಾರಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಹಿತೈಷಿಗಳು ಶುಭ ಹಾರೈಸಿದರು.ಸಂತೋಷ್ ಶೆಟ್ಟಿಯವರು ಅತಿಥಿ- ಗಣ್ಯರನ್ನು ಶಾಲು ಹೊದಿಸಿ, ಪುಷ್ಪ ಗುಚ್ಚವನ್ನಿತ್ತು ಸ್ವಾಗತಿಸಿ ಗೌರವಿಸಿದರು. ಬಂಟರ ಸಂಘ ಮುಂಬಯಿ ಮುಖವಾಣಿ ಬಂಟರವಾಣಿ ಸಮಿತಿ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ ಅವರು ಕಾರ್ಯಕ್ರಮವನ್ನು ನಿರ್ವಹಿಸಿ, ವಂದಿಸಿದರು.

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಮಂಡಲೋತ್ಸವದಲ್ಲಿ ಸುಪುತ್ರ ದೇವಪ್ರಸಾದ್ ಜತೆ ಭಾಗವಹಿಸಿದ ಧರ್ಮದರ್ಶಿ ಹರಿಕೃಷ್ಣ ಪುನರೂರು.

ಅಯೋಧ್ಯೆ: ಧರ್ಮದರ್ಶಿ ಮತ್ತು ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ತನ್ನ ಸುಪುತ್ರ ದೇವಪ್ರಸಾದ್ ಪುನರೂರು ಅವರ ಜತೆಗೆ ಅಯೋಧ್ಯೆಗೆ ತೆರಳಿ, ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದಲ್ಲಿ ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಮಂಡಲೋತ್ಸವದಲ್ಲಿ ರಾಮ ತಾರಕ ಯಜ್ಞ ಹಾಗೂ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡರು. ಈ ಹಿಂದೆ ಹರಿಕೃಷ್ಣ ಪುನರೂರು ಅವರು ನೇಪಾಳದ ಪಶುಪತಿ ದೇವಸ್ಥಾನ, ವಾರಣಾಸಿ, ಬದರಿನಾಥ, ಕೇದರನಾಥ, ಕೈಲಾಸ, ಮಾನಸ ಸರೋವರ ಮೊದಲಾದ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು.

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ, ಸಜೀಪಮೂಡ,ಬಂಟ್ವಾಳ ತಾಲೂಕು ಇಲ್ಲಿ ಫೆ.25 ಮತ್ತು ಫೆ.27 ರಂದು ಅಗೇಲು ಸೇವೆ ಇರುವುದಿಲ್ಲ.

ಪಣೋಲಿಬೈಲ್ : ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾoಬಾ ಕ್ಷೇತ್ರ ಇದರ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ದಿನಾಂಕ 25-02-2024 ನೇ ಆದಿತ್ಯವಾರ ಮತ್ತು 27-02-2024 ನೇ ಮಂಗಳವಾರದಂದು ಶ್ರೀ ಕ್ಷೇತ್ರದಲ್ಲಿ ಅಗೇಲು ಸೇವೆ ಇರುವುದಿಲ್ಲವೆಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

ಕರಾವಳಿ ಸುದ್ದಿ, ಕರ್ನಾಟಕ ವಾರ್ತೆಗಳು

ದುರ್ಗಾಪರಮೇಶ್ವರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಇದರ ವ್ಯವಸ್ಥಾಪಕ ಎಂ.ಬಿ ಉಮೇಶ್‌ ಶೆಟ್ಟಿ ಇವರಿಗೆ 2024ರ ಸಾಧಕ ಪ್ರಶಸ್ತಿ

ದುರ್ಗಾ ಪರಮೇಶ್ವರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಭಯ ಸೇವಾ ಫೌಂಡೇಶನ್ ಅಧ್ಯಕ್ಷರಾದ ಎಂ.ಬಿ ಉಮೇಶ್ ಶೆಟ್ಟಿ ಮಂದಾರ್ತಿ ಇವರಿಗೆ ಏಶಿಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಪತ್ರಿಕೆ ಇವರ ಸಮಾಜಸೇವೆ ಗುರುತಿಸಿ 2024ರ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಶ್ರೀಯುತರು ಸಾಮಾಜಿಕ ಸೇವೆಯ ನೂತನ ಕ್ರಾಂತಿ ಮಾಡುವ ಮೂಲಕ ಹಲವಾರು ಬಡ ಜನತೆಯ ಕುಟುಂಬಕ್ಕೆ ಬೆಳಕಾಗಿ ಸಮಾಜದಲ್ಲಿ ತಮ್ಮ ಸಾಮಾಜಿಕ ಕಾರ್ಯದಲ್ಲಿ ಗುರುತಿಸಿಕೊಂಡವರು. ಈ ಪ್ರಶಸ್ತಿ ಇವರ ಅಭಿಮಾನಿಗಳಿಗೆ ಅತೀವ ಸಂತಸ ತಂದಿದೆ.

Scroll to Top