ರಾಷ್ಟ್ರೀಯ ವಾರ್ತೆಗಳು

ರಾಷ್ಟ್ರೀಯ ವಾರ್ತೆಗಳು

FROM MUNIYALU TO CORPORATE PINNACLE: THE INSPIRING JOURNEY OF G.S. GANGADHARA Acharya. Article by: Ashok shetty bn

Mangaluru / Bengaluru: Mr. G.S. Gangadhara Acharya, a proud son of Muniyalu village in Karkala Taluk, has brought laurels to coastal Karnataka by securing a top leadership position in the infrastructure sector.Mr. Acharya is currently serving as Senior Manager (Mechanical) – Operation & Maintenance, Pan India Projects, at Vishal Infrastructure Limited (VIL), Basavanagudi, Bengaluru – one of Karnataka’s leading infrastructure companies executing multi-crore water supply, road and building projects across India.From a humble village background, through sheer hard work, technical expertise and dedication, he now shoulders the responsibility of managing critical operations nationwide.Mr. Acharya completed his Automobile Engineering at Karnataka Polytechnic, Mangaluru (KPT)* and stayed at BCM govt. Hostel, Ashok Nagar, during his student days.He is a true Role Model for the youth of Muniyalu and Karkala, who has retained the culture and humility of his village even in the corporate world.Dr. Ashok Shetty B.N., Editor of MP MLA’s News and his former classmate, lauded his achievement and said, “Gangadhara had leadership qualities since childhood. He had the determination, ambition and selfless, helpful nature to achieve something in life. His fight against injustice and philanthropic mindset have taken him to this top position today.”MP MLA’s News congratulates Mr. Acharya and wishes him more success in the future.

ರಾಷ್ಟ್ರೀಯ ವಾರ್ತೆಗಳು

ವಿಶಾಲ್ ಲಿಮಿಟೆಡ್ ಇನ್ಫ್ರಾ ಸ್ಟ್ರೈಕ್ಚರ್ ನ ಸೀನಿಯರ್ ಮೆನೇಜರ್ ಆಗಿ ರಾಜ್ಯದ ಮೂಲಭೂತ ಸೌಕರ್ಯ ಕಂಪನಿಯಲ್ಲಿ ಉನ್ನತ ಹುದ್ದೆ ಅಲಂಕರಿಸಿ ಕಾರ್ಪೊರೇಟ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಕಾರ್ಕಳ ಮುನಿಯಲುವಿನ ಅಪೂರ್ವ ಸಾಧಕ, ಗ್ರಾಮದ ಸಂಸ್ಕೃತಿ,ವಿನಯತೆಯನ್ನು ತನ್ನ ವೃತ್ತಿ ಜೀವನಕ್ಕೆ ಅಳವಡಿಸಿ ಯುವಜನತೆಗೆ ಮಾದರಿಯಾಗಿರುವ ಹೆಮ್ಮಯ ಕನ್ನಡಿಗ ಜಿ. ಎಸ್. ಗಂಗಾಧರ ಆಚಾರ್ಯ. ಪರಿಚಯ ಲೇಖನ: ಡಾ. ಅಶೋಕ್ ಶೆಟ್ಟಿ. ಬಿ. ಎನ್.

ಬೆಂಗಳೂರು ಕಾರ್ಕಳ ತಾಲೂಕಿನ ಮುನಿಯಾಲುವಿನ ಹೆಮ್ಮೆಯ ಸುಪುತ್ರ ಜಿ.ಎಸ್. ಗಂಗಾಧರ ಆಚಾರ್ಯ ಅವರು ಇಂದು ರಾಜ್ಯದ ಪ್ರತಿಷ್ಠಿತ ಮೂಲಸೌಕರ್ಯ ಕಂಪನಿಯೊಂದರಲ್ಲಿ ಉನ್ನತ ಹುದ್ದೆ ಅಲಂಕರಿಸಿ ನಾಡಿಗೆ ಕೀರ್ತಿ ತಂದಿದ್ದಾರೆ.ಬೆಂಗಳೂರಿನ ಬಸವನಗುಡಿಯಲ್ಲಿರುವ ವಿಶಾಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (VIL) ಸಂಸ್ಥೆಯಲ್ಲಿ ಸೀನಿಯರ್ ಮ್ಯಾನೇಜರ್ (ಮೆಕ್ಯಾನಿಕಲ್) – ಆಪರೇಷನ್ & ಮೆಂಟೆನೆನ್ಸ್, ಪ್ಯಾನ್ ಇಂಡಿಯಾ ಪ್ರಾಜೆಕ್ಟ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.ಹಳ್ಳಿಯ ಸರಳ ಬದುಕಿನಿಂದ ಬಂದು, ತಮ್ಮ ಪರಿಶ್ರಮ, ತಾಂತ್ರಿಕ ಜ್ಞಾನದಿಂದ ಇಂದು ಭಾರತದಾದ್ಯಂತ ನಡೆಯುವ ಕೋಟ್ಯಾಂತರ ರೂಪಾಯಿ ಮೌಲ್ಯದ ನೀರು ಸರಬರಾಜು, ರಸ್ತೆ, ಕಟ್ಟಡ ಯೋಜನೆಗಳ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದಾರೆ.ಮುನಿಯಾಲು, ಕಾರ್ಕಳ ಭಾಗದ ಯುವಜನತೆಗೆ ಇವರು ಮಾದರಿ ವ್ಯಕ್ತಿ. ಗ್ರಾಮದ ಸಂಸ್ಕೃತಿ, ವಿನಯತೆಯನ್ನು ಕಾರ್ಪೊರೇಟ್ ಕ್ಷೇತ್ರದಲ್ಲೂ ಉಳಿಸಿಕೊಂಡಿರುವ ಹೆಮ್ಮೆಯ ಕನ್ನಡಿಗ. ಇವರು ಮಂಗಳೂರು ಕರ್ನಾಟಕ ಪಾಲಿಟೆಕ್ನಿಕ್ ನಲ್ಲಿ ಆಟೋಮೋಬೈಲ್ ಇಂಜಿನಿಯರಿಂಗ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಅಶೋಕ ನಗರದ ಬಿಸಿಯಂ ಹಾಸ್ಟೆಲ್ ನಲ್ಲಿದ್ದರು. ಇವರ ಸಾಧನೆ ಬಗ್ಗೆ Mp MLA’s News ಅಭಿನಂದನೆ ಸಲ್ಲಿಸಿದ್ದು, ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ಇವರ ಕಾಲೇಜ್ ದಿನದ ಸಹಪಾಠಿಯಾಗಿದ್ದು, ಗಂಗಾಧರ್ ಅವರು ಬಾಲ್ಯದಿಂದಲೂ ನಾಯಕತ್ವದ ಗುಣ ಹೊಂದಿದ್ದರು. ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಟ.ಛಲ, ಧ್ಯೇಯ,ದೃಢ ಸಂಕಲ್ಪ ಉಳ್ಳವರಾಗಿದ್ದರು. ಅವರಲ್ಲಿ ನಿಸ್ವಾರ್ಥತೆ, ಅನ್ಯಾಯ ಪ್ರತಿಭಟಿಸುವ ಗುಣ, ಪರೋಪಕಾರಿ ಮನೋಭಾವನೆ ಇದ್ದವು. ಅದೇ ಇವತ್ತು ಇಷ್ಟೊಂದು ಉನ್ನತ ಹುದ್ದೆ ಅಲಂಕರಿಸಲು ಸಾಧ್ಯವಾಯಿತ್ತೆಂದೂ ಸಂಪಾದಕರು ಗಂಗಾಧರ್ ಬಗ್ಗೆ ಪ್ರಶಂಸನೀಯ ಮಾತುಗನ್ನಾಡಿದ್ದಾರೆ. ಅಲ್ ದಿ ಬೆಸ್ಟ್ ಗಂಗಾಧರ್ ಸರ್, ಭವಿಷ್ಯದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡುವ ಶಕ್ತಿ ದೇವರು ನಿಮಗೆ ಅನುಗ್ರಹಿಸಲಿ ಎಂದು Mp MLA’s News ಶುಭ ಹಾರೈಸುತ್ತದೆ

ರಾಷ್ಟ್ರೀಯ ವಾರ್ತೆಗಳು

ಪಿನ್ ಕೋಡ್‌ಗೆ ವಿದಾಯ !!!

ದೆಹಲಿ: ಅಂಚೆ ವಿಳಾಸಗಳ ಮೋಡಿಯಾಗಿದ್ದ ಪಿನ್ ಕೋಡ್‌ಗಳ ಯುಗ ಮುಗಿದಿದ್ದು, ಬದಲಾಗಿ ನಿಮಗೆ ಭಾರತೀಯ ಅಂಚೆ ಇಲಾಖೆಯು ಪರ್ಯಾಯವಾಗಿ ‘ಡಿಜಿಪಿನ್’ ಎಂಬ ಡಿಜಿಟಲ್ ವಿಳಾಸವನ್ನು ಪರಿಚಯಿಸಿದೆ. ಇಂದಿನಿಂದ ದೇಶದಲ್ಲಿ ಡಿಜಿಪಿನ್ ಹೊಸ ವಿಳಾಸ ವ್ಯವಸ್ಥೆಯಾಗಲಿದೆ. ಸಾಂಪ್ರದಾಯಿಕ ಪಿನ್ ಕೋಡ್‌ಗಳು ವಿಶಾಲ ಪ್ರದೇಶವನ್ನು ಒಳಗೊಂಡಿದ್ದರೆ, 10-ಅಂಕಿಯ ಡಿಜಿಪಿನ್ ವ್ಯವಸ್ಥೆಯು ನಿಮ್ಮ ಮನೆ ಅಥವಾ ವ್ಯವಹಾರದ ನಿಖರವಾದ ಸ್ಥಳವನ್ನು ಪ್ರತಿನಿಧಿಸುತ್ತದೆ. ಪಿನ್ ಕೋಡ್ ಮತ್ತು ಡಿಜಿಪಿನ್ ನಡುವಿನ ವ್ಯತ್ಯಾಸಗಳೇನು ಎಂಬುದನ್ನು ಕಂಡುಹಿಡಿಯೋಣ.ನಿಖರವಾದ ಸ್ಥಳವನ್ನು ಅರ್ಥಮಾಡಿಕೊಳ್ಳಲು ಭಾರತೀಯ ಅಂಚೆ ಇಲಾಖೆ ಡಿಜಿಪಿನ್ ವ್ಯವಸ್ಥೆಯನ್ನು ಪರಿಚಯಿಸಿದೆ. ಡಿಜಿಪಿನ್ 10-ಅಂಕಿಯ ಡಿಜಿಟಲ್ ಕೋಡ್ ಆಗಿದೆ. ವಿಶಾಲ ಪ್ರದೇಶವನ್ನು ಒಳಗೊಂಡ ಸಾಂಪ್ರದಾಯಿಕ ಪಿನ್ ಕೋಡ್ ಬದಲಿಗೆ, ಡಿಜಿಪಿನ್ ನಿಖರವಾದ ಸ್ಥಳ ಮಾಹಿತಿಯನ್ನು ಒದಗಿಸುತ್ತದೆ. ಅಂದರೆ, ಈ ಡಿಜಿಪಿನ್ ನಿಮ್ಮ ಮನೆ ಅಥವಾ ವ್ಯವಹಾರದ ನಿಖರವಾದ ಸ್ಥಳವನ್ನು ನಿಮಗೆ ನೀಡುತ್ತದೆ. ಡಿಜಿಪಿನ್ ರಚಿಸಲು ಮತ್ತು ಕೋಡ್ ಅನ್ನು ಕಂಡುಹಿಡಿಯಲು ಗೊತ್ತುಪಡಿಸಿದ ಸರ್ಕಾರಿ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಮನೆಯನ್ನು ಕಂಡುಹಿಡಿಯಬಹುದು. ಡಿಜಿಪಿನ್‌ನ ಪ್ರಯೋಜನವೆಂದರೆ ಅದು ಪತ್ರವ್ಯವಹಾರವನ್ನು ಸರಿಯಾದ ಸ್ಥಳಕ್ಕೆ ತಲುಪಿಸುತ್ತದೆ ಮತ್ತು ಆಂಬ್ಯುಲೆನ್ಸ್‌ಗಳು ಮತ್ತು ಅಗ್ನಿಶಾಮಕ ಇಲಾಖೆಗಳಂತಹ ತುರ್ತು ಸೇವೆಗಳು ಸ್ಥಳವನ್ನು ಅರ್ಥಮಾಡಿಕೊಳ್ಳುವ ಮೂಲಕ ನಿಮ್ಮನ್ನು ನಿಖರವಾಗಿ ತಲುಪಲು ಸಹಾಯ ಮಾಡುತ್ತದೆ. ಗ್ರಾಮೀಣ ಪ್ರದೇಶಗಳು ಸೇರಿದಂತೆ ದೂರದ ಸ್ಥಳಗಳಲ್ಲಿ ಡಿಜಿಪಿನ್ ಪ್ರಯೋಜನಕಾರಿಯಾಗಲಿದೆ ಎಂದು ಆಶಿಸಲಾಗಿದೆ.ಡಿಜಿಪಿನ್ ಪಾರ್ಸೆಲ್‌ಗಳನ್ನು ಸರಿಯಾದ ಸ್ಥಳಕ್ಕೆ ತಲುಪಿಸಲು ಸಾಧ್ಯವಾಗುತ್ತದೆ, ಪತ್ರವ್ಯವಹಾರ ಮಾತ್ರವಲ್ಲದೆ, ಇ-ಕಾಮರ್ಸ್ ವೆಬ್‌ಸೈಟ್‌ಗಳಿಗೂ ಸಹ.ನಿಮ್ಮ ಡಿಜಿಪಿನ್ ಅನ್ನು ಹೇಗೆ ಕಂಡುಹಿಡಿಯುವುದು?ನಿಮ್ಮ ಡಿಜಿಪಿನ್ ಅನ್ನು ಹುಡುಕಲು ಸರ್ಕಾರಿ ವೆಬ್‌ಸೈಟ್ https://dac.indiapost.gov.in/mydigipin/home ಅನ್ನು ಸಿದ್ಧಪಡಿಸಲಾಗಿದೆ. ಈ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಮತ್ತು ನೀವು ಕಂಡುಕೊಂಡ ಸ್ಥಳವನ್ನು ಕ್ಲಿಕ್ ಮಾಡುವ ಮೂಲಕ, ನಿಮ್ಮ 10-ಅಂಕಿಯ ಡಿಜಿಪಿನ್ ಅನ್ನು ನೀವು ಕಂಡುಹಿಡಿಯಬಹುದು. ಡಿಜಿಪಿನ್ ಅನ್ನು ಇತರ ವಿಳಾಸ ವ್ಯವಸ್ಥೆಗಳಿಗಿಂತ ಭಿನ್ನವಾಗಿಸುವುದು ನಾಲ್ಕು ಮೀಟರ್ ತ್ರಿಜ್ಯದೊಳಗೆ ನಿಮ್ಮ ನಿಖರವಾದ ಸ್ಥಳವನ್ನು ನೀವು ತಿಳಿದುಕೊಳ್ಳಬಹುದು. ಇಂಡಿಯಾ ಪೋಸ್ಟ್ ಐಐಟಿ ಹೈದರಾಬಾದ್, NRSC ಮತ್ತು ISRO ಸಹಯೋಗದೊಂದಿಗೆ ಡಿಜಿಪಿನ್ ಎಂಬ ಜಿಯೋಕೋಡೆಡ್ ಡಿಜಿಟಲ್ ವಿಳಾಸ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಡಿಜಿಪಿನ್ ಅನ್ನು ಆಫ್‌ಲೈನ್‌ನಲ್ಲಿಯೂ ಬಳಸಬಹುದು.

ರಾಷ್ಟ್ರೀಯ ವಾರ್ತೆಗಳು

ಪಾಕಿಸ್ತಾನದ ಅಣ್ವಸ್ತ್ರ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ. ನಾವು ಪಾಕ್ ಸೈನ್ಯವನ್ನು ಸೋಲಿಸಿದ್ದೇವೆ. ನಮ್ಮ ಯುದ್ಧ ಭಯೋತ್ಪಾದನೆಯ ವಿರುದ್ಧದ ಸಮರವಾಗಿದೆ- ‘ನಮೋ ಸಂದೇಶ’

ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ ಬಿ.ಎನ್.ಆದಂಪುರ ಏರ್‌ಬೇಸ್: ನಮ್ಮ ಸೈನ್ಯ ಪಾಕ್ ಸೈನ್ಯವನ್ನು ಸಂಪೂರ್ಣವಾಗಿ ಹೊಡೆದುರುಳಿಸಿದೆ. ನಮ್ಮ ವಾಯುದಳ ಕೇವಲ 13 ನಿಮಿಷಗಳಲ್ಲೇ ಪಾಕಿಸ್ತಾನದೊಳಗೆ ನುಗ್ಗಿ ಭಯೋತ್ಪಾದಕರ ನೆಲೆಯನ್ನು ಧ್ವಂಸಗೊಳಿಸಿದೆ. ‘ಭಾರತ್ ಮಾತಾ ಕೀ ಜೈ’ ಎನ್ನುವುದು ನಮ್ಮ ಸೈನಿಕರ ಶಕ್ತಿ. ಇದು ಸಮಸ್ತ 140 ಕೋಟಿ ಭಾರತೀಯರ ಬೃಹತ್ ಶಕ್ತಿ. ನಾನು 3 ಸೇನೆಗಳಿಗೆ ಸಲಾಮ್ ಹೇಳುತ್ತೇನೆ. ಪಾಕಿಸ್ತಾನದ ಅಣ್ವಸ್ತ್ರ ಗೊಡ್ಡು ಬೆದರಿಕೆಗೆ ನಾವು ಬಗ್ಗುವುದಿಲ್ಲ. ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಇದಕ್ಕಿಂತಲೂ ಕಠಿಣ ರೀತಿಯಲ್ಲಿ ನಾವು ತಕ್ಕ ಉತ್ತರ ಕೊಡುತ್ತೇವೆ. ನಮ್ಮ ಅತ್ಯಾಧುನಿಕ ತಂತ್ರಜ್ಞಾನ ಗೆದ್ದಿದೆ. ಇದರ ಮುಂದೆ ಪಾಕಿಸ್ತಾನ ನೆಲಕಚ್ಚಿದೆ ಎಂದು ಪ್ರಧಾನಿ ಮೋದಿಯವರು ಮೇ 13ರ ಮಂಗಳವಾರ ಮಧ್ಯಾಹ್ನ 3.30ಕ್ಕೆ ಪಂಜಾಬಿನ ಆದಂಪುರ ಏರ್‌ಬೇಸ್‌ನಲ್ಲಿ ಭಾಷಣ ಮಾಡಿದರು. ನಮೋ ಸಂದೇಶ ಅತ್ಯಾದ್ಭುತವಾಗಿತ್ತು. ಮೋದಿಯವರ ಪ್ರತಿಯೊಂದು ಮಾತುಗಳು ನಮ್ಮ ದೇಶಪ್ರೇಮವನ್ನು ಎತ್ತಿ ತೋರಿಸುತ್ತಿತ್ತು. ನಮ್ಮ ಯುದ್ಧ ಭಯೋತ್ಪಾದಕರ ವಿರುದ್ಧವಾಗಿದೆ. ನಮ್ಮ ಪರವಾಗಿ ಇಡೀ ವಿಶ್ವವೇ ಬೆಂಬಲ ಸೂಚಿಸಿದೆ. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಮಟ್ಟ ಹಾಕುವುದೇ ನಮ್ಮ ಉದ್ದೇಶವಾಗಿದೆ. ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಬೆಂಬಲ ಕೊಡುವವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಉಗ್ರವಾದಕ್ಕೆ ನಮ್ಮ ಸೇನೆ ತಕ್ಕ ರೀತಿಯಲ್ಲಿ ಉತ್ತರ ಕೊಟ್ಟಿದೆ. ಇದು ಇಲ್ಲಿಗೆ ನಿಲ್ಲುವುದಿಲ್ಲ ಎಂದು ಮೋದಿ ಹೇಳಿದ್ದಾರೆ.

ರಾಷ್ಟ್ರೀಯ ವಾರ್ತೆಗಳು

ರಾಜೇಶ್ ಅಮೀನ್ ಮುಲ್ಕಿ ಅವರಿಗೆ ಅಂಬೇಡ್ಕರ್ ಫೆಲೋಶಿಪ್ ನ್ಯಾಷನಲ್ ಅವಾರ್ಡ್

ನವದೆಹಲಿ: ಡಿಸೆಂಬರ್ 8 ರಂದು ದೆಹಲಿಯಲ್ಲಿ ನಡೆದ 38ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಆಯುಷ್ ಇಲಾಖೆ ಸರಕಾರಿ ನೌಕರ, ಹಾಯ್ ತುಳುನಾಡು ಪತ್ರಿಕೆ ಸಂಪಾದಕ, ತುಳುನಾಡು ಪ್ರತಿಷ್ಠಾನ (ರಿ) ಮೂಲ್ಕಿ ಇದರ ಸ್ಥಾಪಕಾಧ್ಯಕ್ಷರಾದ, ಲಯನ್ ಸ್ಮಾರ್ಟ್ ಸಿಟಿ ಮಂಗಳೂರು ಇದರ ಸದಸ್ಯರಾದ ಲಯನ್ ರಾಜೇಶ್ ಅಮೀನ್ ಮುಲ್ಕಿ ಅವರಿಗೆ ಬಡವರ ಹಸಿವನ್ನು ನೀಗಿಸುವಲ್ಲಿ ಮಾಡಿರುವ ಕಾರ್ಯ, ಆಪತ್ತಿನಲ್ಲಿರುವವರಿಗೆ ಸಹಾಯ ಮಾಡಿರುವುದಕ್ಕೆ ಇವರು ಸಲ್ಲಿಸಿದ ಅನನ್ಯ ಸೇವೆಯನ್ನು ಪರಿಗಣಿಸಿ ಡಾ. ಬಿ.ಆರ್. ಅಂಬೇಡ್ಕರ್ ಫೆಲೋಶಿಪ್ ನ್ಯಾಷನಲ್ ಅವಾರ್ಡ್ -2024ನ್ನು ನೀಡಿ ಗೌರವಿಸಲಾಗಿದೆ.

ರಾಷ್ಟ್ರೀಯ ವಾರ್ತೆಗಳು

ರಾಜೇಶ್ ಅಮೀನ್ ಮುಲ್ಕಿ ಅವರಿಗೆ ನವದೆಹಲಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಫೆಲೋಶಿಪ್ ನ್ಯಾಷನಲ್ ಅವಾರ್ಡ್ ಪ್ರಶಸ್ತಿ ಪ್ರಧಾನ.

ನವದೆಹಲಿ: ಭಾರತೀಯ ದಲಿತ್ ಸಾಹಿತ್ಯ ಅಕಾಡೆಮಿ ನವದೆಹಲಿ ಇದರ ವತಿಯಿಂದ ಡಿಸೆಂಬರ್ 8 ರಂದು ದೆಹಲಿಯಲ್ಲಿ ನಡೆದ 38ನೇ ದಲಿತ ಬರಹಗಾರ ರಾಷ್ಟ್ರೀಯ ಸಮ್ಮೇಳನದಲ್ಲಿ ಆಯುಷ್ ಇಲಾಖೆ ಸರಕಾರಿ ನೌಕರ, ಹಾಯ್ ತುಳುನಾಡು ಪತ್ರಿಕೆ ಸಂಪಾದಕ, ತುಳುನಾಡು ಪ್ರತಿಷ್ಠಾನ (ರಿ) ಮೂಲ್ಕಿ ಇದರ ಸ್ಥಾಪಕಾಧ್ಯಕ್ಷರಾದ, ಲಯನ್ ಸ್ಮಾರ್ಟ್ ಸಿಟಿ ಮಂಗಳೂರು ಇದರ ಸದಸ್ಯರಾದ ಲಯನ್ ರಾಜೇಶ್ ಅಮೀನ್ ಮುಲ್ಕಿ ಅವರಿಗೆ ಬಡವರ ಹಸಿವನ್ನು ನೀಗಿಸುವಲ್ಲಿ ಮಾಡಿರುವ ಕಾರ್ಯ, ಆಪತ್ತಿನಲ್ಲಿರುವವರಿಗೆ ಸಹಾಯ ಮಾಡಿರುವುದಕ್ಕೆ ಇವರು ಸಲ್ಲಿಸಿದ ಅನನ್ಯ ಸೇವೆಯನ್ನು ಪರಿಗಣಿಸಿ ಡಾ. ಬಿ.ಆರ್. ಅಂಬೇಡ್ಕರ್ ಫೆಲೋಶಿಪ್ ನ್ಯಾಷನಲ್ ಅವಾರ್ಡ್ -2024ನ್ನು ನೀಡಿ ಗೌರವಿಸಲಾಗಿದೆ.

ರಾಷ್ಟ್ರೀಯ ವಾರ್ತೆಗಳು

ಆಯುಷ್ ಇಲಾಖೆ ಸರಕಾರಿ ನೌಕರ ಲಯನ್ ರಾಜೇಶ್ ಅಮೀನ್ ಮುಲ್ಕಿ ಅವರಿಗೆ ಡಾ. ಬಿ. ಆರ್. ಅಂಬೇಡ್ಕರ್ ಫೆಲೋಶಿಫ್ ನ್ಯಾಷನಲ್ ಅವಾರ್ಡ್

ದೆಹಲಿ: ಭಾರತೀಯ ದಲಿತ್ ಸಾಹಿತ್ಯ ಅಕಾಡೆಮಿ ನವದೆಹಲಿ ಇದರ ವತಿಯಿಂದ ನಡೆಯುವ 38ನೇ ದಲಿತ ಬರಹಗಾರ ರಾಷ್ಟ್ರೀಯ ಸಮ್ಮೇಳನದಲ್ಲಿ ಆಯುಷ್ ಇಲಾಖೆ ಸರಕಾರಿ ನೌಕರ, ಲಯನ್ ಸ್ಮಾರ್ಟ್ ಸಿಟಿ ಮಂಗಳೂರು ಇದರ ಸದಸ್ಯ, ಹಾಯ್ ತುಳುನಾಡು ಪತ್ರಿಕೆ ಸಂಪಾದಕ, ತುಳುನಾಡು ಪ್ರತಿಷ್ಠಾನ (ರಿ) ಮೂಲ್ಕಿ ಇದರ ಸ್ಥಾಪಕಾಧ್ಯಕ್ಷರಾದ ರಾಜೇಶ್ ಅಮೀನ್ ಮುಲ್ಕಿ ಅವರಿಗೆ ಬಡವರ ಹಸಿವನ್ನು ನೀಗಿಸುವಲ್ಲಿ ಮಾಡಿರುವ ಕಾರ್ಯ, ಆಪತ್ತಿನಲ್ಲಿರುವವರಿಗೆ ಸಹಾಯ ಮಾಡಿರುವುದಕ್ಕೆ ಇವರು ಸಲ್ಲಿಸಿದ ಅನನ್ಯ ಸೇವೆಯನ್ನು ಪರಿಗಣಿಸಿ ಡಾ. ಬಿ.ಆರ್. ಅಂಬೇಡ್ಕರ್ ಫೆಲೋಶಿಪ್ ನ್ಯಾಷನಲ್ ಅವಾರ್ಡ್ -2024ನ್ನು ಡಿಸೆಂಬರ್ 8 ರಂದು ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ನೀಡಲಾಗುವುದು.

ರಾಷ್ಟ್ರೀಯ ವಾರ್ತೆಗಳು

ನನ್ನ ತಂದೆಯವರು ತೀರಿಕೊಂಡಾಗ ಆದಷ್ಟೇ ನೋವು, ದುಃಖ ನನಗಾಗುತ್ತಿದೆಂದು ವಯನಾಡು ಘಟನೆಗೆ ಕಣ್ಣೇರು ಹಾಕಿದ ರಾಹುಲ್ ಗಾಂಧಿ.

ಕೇರಳ: ವಯನಾಡು ದುರಂತದಲ್ಲಿ 400 ಮಂದಿ ನಾಪತ್ತೆಯಾಗಿದ್ದು,10 ಮಂದಿ ಕನ್ನಡಿಗರು ಸಹಿತ 290 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 82 ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಇಲ್ಲಿಗೆ ಸಹೋದರಿ ಪ್ರಿಯಾಂಕ ಗಾಂಧಿ ಜೊತೆಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು -“ನನ್ನ ತಂದೆಯವರು ತೀರಿಕೊಂಡಾಗ ಆದಷ್ಟೇ ನೋವು, ದುಃಖ ನನಗಾಗುತ್ತಿದೆ “ವೆಂದು ಕಣ್ಣೇರು ಹಾಕಿದ್ದಾರೆ. ಈ ಸಂದರ್ಭದಲ್ಲಿ ಎಐಸಿಸಿಯ ಪ್ರಮುಖ ವೇಣುಗೋಪಾಲ್ ಜೊತೆಗಿದ್ದರು.

ರಾಷ್ಟ್ರೀಯ ವಾರ್ತೆಗಳು

ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಬ್ರಿಜೇಶ್ ಚೌಟ ಒತ್ತಾಯ

ಮಂಗಳೂರು- ಸುಬ್ರಹ್ಮಣ್ಯ ನಡುವೆ ಪ್ಯಾಸೆಂಜರ್ ರೈಲು ಆರಂಭಿಸಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ಒತ್ತಾಯ ಮಾಡಿದ್ದಾರೆ.ಈ ಹಿಂದೆ ಮಂಗಳೂರು- ಸುಬ್ರಹ್ಮಣ್ಯ ನಡುವೆ ಮೀಟರ್ ಗೇಜ್ ಹಳಿ ಇದ್ದಾಗ ಪ್ಯಾಸೆಂಜರ್ ರೈಲು ಓಡಾಟ ಇತ್ತು. ಬ್ರಾಡ್ ಗೇಜ್ ಹಳಿ ಮಾಡುವ ಸಲುವಾಗಿ 2005ರಲ್ಲಿ ಈ ರೈಲಿನ ಸಂಚಾರವನ್ನು ನಿಲ್ಲಿಸಲಾಗಿತ್ತು. ಆನಂತರ, ಬ್ರಾಡ್ ಗೇಜ್ ಹಳಿಯಾಗಿ ಪರಿವರ್ತನೆ ಮಾಡಲಾಗಿದೆ. ಅಂದು ಓಡುತ್ತಿದ್ದ ಪ್ಯಾಸೆಂಜರ್ ರೈಲು ಮಂಗಳೂರಿನಿಂದ ಕಬಕ- ಪುತ್ತೂರು ನಡುವೆ ಓಡಾಟ ನಡೆಸುತ್ತಿದ್ದು, ಅದನ್ನು ಸುಬ್ರಹ್ಮಣ್ಯದ ವರೆಗೆ ವಿಸ್ತರಣೆ ಮಾಡಬೇಕು.ಮಂಗಳೂರು – ಸುಬ್ರಹ್ಮಣ್ಯ ಮಧ್ಯೆ ರೈಲು ಓಡಾಟವಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ಹೋಗುವವರಿಗೆ ಉಪಯೋಗವಾಗಲಿದೆ. ಗ್ರಾಮಾಂತರ ಪ್ರದೇಶವಾದ ಸುಳ್ಯದಿಂದ ಮಂಗಳೂರಿಗೆ ಪ್ರತಿದಿನ ಓಡಾಟ ಮಾಡುವವರಿದ್ದಾರೆ. ಅವರಿಗೂ ಉಪಯುಕ್ತ ಆಗಲಿದೆ. ಇದು ಸೌತ್ ವೆಸ್ಟರ್ನ್ ರೈಲ್ವೇ ವಿಭಾಗದಲ್ಲಿದ್ದು, ನಮ್ಮ ಜಿಲ್ಲೆಯ ಒಳಗೆ ಸಂಚರಿಸುವ ಏಕೈಕ ಪ್ಯಾಸೆಂಜರ್ ರೈಲಾಗಿದೆ. ಜನಸಾಮಾನ್ಯರ ಹಿತದೃಷ್ಟಿಯಿಂದ ಈ ರೈಲನ್ನು ಸುಬ್ರಹ್ಮಣ್ಯದ ವರೆಗೂ ವಿಸ್ತರಣೆ ಮಾಡಬೇಕು ಎಂದು ರೈಲ್ವೇ ಸಚಿವರನ್ನು ಮನವಿ ಮಾಡಿದ್ದಾರೆ. ಇದಕ್ಕುತ್ತರಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಸೇನೆಯಿಂದ ನಿವೃತ್ತಿ ಪಡೆದು ಸಂಸದರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಗ್ಗೆ ಗೌರವ ಹೊಂದಿದ್ದು, ರೈಲ್ವೇ ವಿಚಾರಗಳ ಬಗ್ಗೆ ಯಾವುದೇ ಮನವಿಯಿದ್ದರೂ ನನ್ನ ಕಚೇರಿಗೆ ಬಂದು ವೈಯಕ್ತಿಕವಾಗಿ ಚರ್ಚಿಸಬಹುದು. ಪರಿಹರಿಸಲು ಮುಕ್ತನಿದ್ದೇನೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ವಾರ್ತೆಗಳು

2024ರ ಬಜೆಟ್ ‘ನವಯುಗ-ನವಪಥ’ ಕಾರ್ಯಸೂಚಿಗೆ ಮುನ್ನುಡಿಯಾಗಿದೆ. ವಿಕಸಿತ ಭಾರತಕ್ಕೆ ಈ ಬಜೆಟ್ ದಾರಿದೀಪವಾಗಲಿದೆ – ಕ್ಯಾಪ್ಟನ್ ಬ್ರಿಜೇಶ್ ಚೌಟ

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಕಸಿತ ಭಾರತದ ಕುರಿತು ಅವರಿಗಿರುವ ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸಿದೆ.ಮೋದಿ 3.0 ನ ಸಂಕಲ್ಪ ಪತ್ರದಲ್ಲಿ ಮಾಡಲಾದ ಎಲ್ಲಾ ಭರವಸೆಗಳನ್ನು ಪೂರ್ಣಗೊಳಿಸಲು ಇಟ್ಟಿರುವ ಮೊದಲ ಹೆಜ್ಜೆಯಾಗಿದೆಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ.ದಕ್ಷಿಣ ಕನ್ನಡಕ್ಕೆ ಸಂಬಂಧಿಸಿದಂತೆ ಕೇಂದ್ರ ಬಜೆಟ್‌ನ ಒಂಬತ್ತು ಆದ್ಯತೆಗಳು ನಾನು ಹಾಕಿಕೊಂಡಿರುವ ಕಾರ್ಯಸೂಚಿ ‘ನವಯುಗ-ನವಪಥ’ಕ್ಕೆ ಪೂರಕವಾಗಲಿದೆ. ನಮ್ಮ 9 ಆದ್ಯತೆಗಳ ಗುರಿಯನ್ನು ಸಮರ್ಥವಾಗಿ ಪೂರ್ಣಗೊಳಿಸಲು ಈ ಬಜೆಟ್ ಸಹಕಾರಿಯಾಗಲಿದೆ. ಬಜೆಟ್ ನ ಒಂಬತ್ತು ಆದ್ಯತೆಗಳು:1) ಕೃಷಿಯಲ್ಲಿನ ಉತ್ಪಾದಕತೆ ಮತ್ತು ಚೇತರಿಕೆ.2) ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ3) ಅಂತರ್ಗತ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ4) ಉತ್ಪಾದನೆ ಮತ್ತು ಸೇವೆಗಳು5) ನಗರಾಭಿವೃದ್ಧಿ6) ಇಂಧನ ಭದ್ರತೆ7) ಮೂಲಸೌಕರ್ಯ8) ಆವಿಷ್ಕಾರ, ಸಂಶೋಧನೆ ಮತ್ತು ಅಭಿವೃದ್ಧಿ9) ಮುಂದಿನ ಪೀಳಿಗೆಯ ಸುಧಾರಣೆಗಳು . ನರೇಂದ್ರ ಮೋದಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನ ದೃಷ್ಟಿಕೋನಕ್ಕೆ ಅನುಗುಣವಾಗಿ ಆಂತರಿಕ ಬೆಳವಣಿಗೆಗೆ ಸಹಕಾರಿಯಾಗುವ ಮೂಲಕ ವಿವಿಧ ವಲಯಗಳಿಗೆ, ವಿವಿಧ ಪ್ರದೇಶಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿ ಮಾಡಲು ಈ ಬಜೆಟ್ ಸಹಕಾರಿಯಾಗಲಿದೆ.ಪಿ ಎಂ ನರೇಂದ್ರ ಮೋದಿ ಅವರು ಹೇಳಿದಂತೆ “ಇಂದಿನ ಬಜೆಟ್ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡುವಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅಭಿವೃದ್ಧಿ ಹೊಂದಿದ ಭಾರತಕ್ಕೆ ದೃಢವಾದ ಅಡಿಪಾಯವನ್ನು ಹಾಕುತ್ತದೆ”. ಎಂಬ ಅವರ ಮಾತು ಭವ್ಯ ಭಾರತದ ಭವಿಷ್ಯವನ್ನು ರೂಪಿಸಲಿದೆ.ಸ್ಟಾರ್ಟ್-ಅಪ್‌ಗಳು ಮತ್ತು ನಾವಿನ್ಯತೆ ಪರಿಸರದ ವ್ಯವಸ್ಥೆಯ ಮೇಲೆ ಗಮನ ಕೇಂದ್ರೀಕರಿಸುವುದು, MSME ಮತ್ತು ಉತ್ಪಾದನೆಗೆ ಬೆಂಬಲ ನೀಡುವುದು – ಉತ್ಪಾದನಾ ವಲಯದಲ್ಲಿ ಹೆಚ್ಚುವರಿ ಉದ್ಯೋಗಕ್ಕೆ ಸಹಾಯ ಮಾಡುವುದು, ನಗರಗಳನ್ನು ಬೆಳವಣಿಗೆಯ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸುವ ಕಾರ್ಯಕ್ರಮ, ಮೊದಲ ಬಾರಿಗೆ ಉತ್ಪಾದನಾ ವಲಯಕ್ಕೆ ಉದ್ಯೋಗಿಗಳು ಪ್ರವೇಶ ಮಾಡಲು ಉತ್ತೇಜಿಸುವುದು ಮುಂತಾದವುಗಳ ಮೂಲಕ ಈ ಬಜೆಟ್ ಹೊಸ ದಾರಿಯನ್ನು ತೆರೆದಿದೆ.ಯುವಕರಿಗೆ ಮತ್ತು ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು, ಶೈಕ್ಷಣಿಕ ಸಾಲಗಳು, ಸೀಗಡಿ ಕೃಷಿ ಮತ್ತು ಸಂಸ್ಕರಣೆಗೆ ಬೆಂಬ, ತರಕಾರಿ ಉತ್ಪಾದನಾ ಕ್ಲಸ್ಟರ್, ಮುದ್ರಾ ಸಾಲ ಮಿತಿಯನ್ನು 20 ಲಕ್ಷಕ್ಕೆ ಹೆಚ್ಚಿಸಿರುವುದು, ಹೂಡಿಕೆಗೆ ಸಿದ್ಧವಾದ “ಪ್ಲಗ್ ಆಂಡ್ ಪ್ಲೇ”ಕೈಗಾರಿಕಾ ಪಾರ್ಕುಗಳ ಅಭಿವೃದ್ಧಿಯ ಪ್ರಯತ್ನಗಳು ನಮ್ಮ ಕ್ಷೇತ್ರದಲ್ಲಿಯೂ ಅಳವಡಿಸಿಕೊಂಡು ನಮ್ಮ ನವಪಥದ ಕಾರ್ಯ ಸೂಚಿಗೆ ಮೈಲುಗಲ್ಲಾಗಲಿದೆ‌.ಪ್ರಧಾನ ಮಂತ್ರಿಗಳು ಹೇಳಿದಂತೆ “ಇಂದಿನ ಬಜೆಟ್ ಹೊಸ ಅವಕಾಶಗಳನ್ನು, ಹೊಸ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳನ್ನು ತಂದಿದೆ”. ಭಾರತವು ಸ್ವಯಂ ಚಾಲಿತ, ಸುಸ್ಥಿರ ಮತ್ತು ಸಮಗ್ರವಾಗಿ ಬೆಳೆದು ಜಗತ್ತಿಗೆ ಮಾದರಿಯಾಗಿ ವಿಶ್ವ ನಾಯಕನಾಗಲಿದೆ.ಈ ಬಜೆಟ್ ನ ಪ್ರಯೋಜನಗಳನ್ನು ನಮ್ಮ ಕ್ಷೇತ್ರದಲ್ಲಿ ಹೇಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬಹುದು ಎಂಬುದರ ಕುರಿತಾಗಿ ಮುಂದಿನ ದಿನಗಳಲ್ಲಿ ವಿಶೇಷವಾಗಿ ಗಮನಹರಿಸಲಾಗುವುದೆಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ

Scroll to Top