ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಕೆ.ಟಿ. ಕಲ್ಲಡ್ಕದ ಸ್ಪೆಶಾಲಿ “ಟಿ”70 ವರ್ಷಗಳ ಸವಿರುಚಿ

(ಜಯಾನಂದ ಪೆರಾಜೆ)ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಕಲ್ಲಡ್ಕ ಪೇಟೆ ಬಂದಾಗ ನೆನಪಾಗುವುದು ಕಲ್ಲಡ್ಕ ಸ್ಪೆಶಲ್ “ಟಿ” ಅದುವೇ ಕೆ.ಟಿ.ಒಮ್ಮೆ ಸವಿದವರಿಗೆ ಮತ್ತೆ ಮತ್ತೆ ಸವಿಯ ಬೇಕೆಂಬ ಅಭಿರುಚಿ.ಯಾಕೆಂದರೆ ಕಳೆದ‌ ಎಪ್ಪತ್ತು ವರ್ಷಗಳಲ್ಲಿ ಲಕ್ಷ್ಮೀ ನಿವಾಸ ಸ್ಪೆಶಲ್ ಕೆಟಿ ಸವಿದವರು ಲಕ್ಷಾಂತರ ಮಂದಿ.ವಿದೇಶಿಗರು ಹೊಸ ರುಚಿಯನ್ನು ಸವಿದು ಕೊಂಡಾಡಿದ್ದಾರೆ. ಸಮಪ್ರಮಾಣದ ಸಕ್ಕರೆ,ಚಾ ಹುಡಿಯ ಡಿಕಾಕ್ಷನ್ ,ದಪ್ಪ ಹಾಲಿನಲ್ಲಿ ಸೇರಿದಾಗ ಟೀ ರೆಡಿ. ಹಾಲಿನ ಮೇಲೆ ತೇಲಾಡುವ ಟಿ ಡಿಕಾಕ್ಷನ್ ನೋಡುವುದೇ ಒಂದು ಆನಂದ. ಸವಿದಾಗ ಪರಮಾನಂದ. ಕುಡಿದವರು ಯಾರೇ ಆಗಲಿ ಈ ಪಾಕಕ್ಕೆ ಜಯ್ ಎನ್ನದವರಿಲ್ಲ.ಕಲ್ಲಡ್ಕ ಶ್ರೀರಾಮ ಮಂದಿರದ ಪ್ರವೇಶ ದ್ವಾರದಲ್ಲಿಯೇ ಲಕ್ಷ್ಮೀ ಗಣೇಶ ಹೊಟೇಲ್ ಇದೀಗ ಭಾರೀ ಫೇಮಸ್. ಕಲ್ಲಡ್ಕ ಬಂದವರು ವಾಹನ ನಿಲ್ಲಿಸಿ ಕೆ.ಟಿ.ಹೊಟೇಲ್ಗೆ ಭೇಟಿ ನೀಡುವುದು ಸಂಪ್ರದಾಯವಾಗಿ ಬಿಟ್ಟಿದೆ. ರಾಷ್ಟ್ರೀಯ ಹೆದ್ದಾರಿ ಮೇಲೆ ರಾಜ್ಯದಲ್ಲಿಯೇ ವಿಶಿಷ್ಟವಾದ ಓವರ್ ಬ್ರಿಡ್ಜ್ ನಿರ್ಮಾಣವಾಗುತ್ತಿದ್ದು ಇನ್ನೂ ಕೆಲವೇ ದಿನಗಳಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. ಕೆಳಗಡೆ ದಶಕಗಳ ಇತಿಹಾಸವಿರುವ ಕಪ್ಪುಬಿಳಿ ಚಾ “ಕೇಟಿ” ನೀವೊಮ್ಮೆ ಸವಿಯಲೇ ಬೇಕು.ಬೇಕಾದರೆ ರಿಂ ಜಿಂ ಕಾಫಿಯೂ ಇದೆ.

ಪ್ರಾದೇಶಿಕ ವಾರ್ತೆಗಳು

ಪಾಲ್ದನೆ : ಲೀಜನ್ ಆಫ್ ಮೇರಿ ಸಂಘಟನೆಯ ಸದಸ್ಯರ ಧಾರ್ಮಿಕ ಯಾತ್ರೆ

ಮಂಗಳೂರು:ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚಿನ ಲೀಜನ್ ಆಫ್ ಮೇರಿ ಸಂಘಟನೆಯ ಸದಸ್ಯರು ತಮ್ಮ ಧಾರ್ಮಿಕ ಯಾತ್ರೆಯ ಅಂಗವಾಗಿ ಹರಿಹರದ ಆರೋಗ್ಯ ಮಾತೆಗೆ ಸಮರ್ಪಿಸಿದ ದಿ ಬೆಸಿಲಿಕಾ ಆಫ್ ಅವರ್ ಲೇಡಿ ಆಫ್ ಹೆಲ್ತ್ ಇಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ. ಚರ್ಚಿನ ಧರ್ಮ ಗುರು ಫಾ. ಆಲ್ಬನ್ ಡಿ ಸೋಜಾ ಅವರು ಆಶೀರ್ವಚನ ನೀಡಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಲೀಜನ್ ಆಫ್ ಮೇರಿ ಸಂಘಟನೆಯ ಅಧ್ಯಕ್ಷೆ ಹೆಲೆನ್ ಲೋಬೊ, ಚರ್ಚಿನ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ. ವಿನೂತನ ಶೈಲಿಯ ಚಿಕಿತ್ಸೆಯಿಂದ ವಯಸ್ಸಾದ ಹೃದ್ರೋಗಿಗೆ ಜೀವದಾನ

ಮಂಗಳೂರು: ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ವಿಭಾಗದ ವೈದ್ಯರ ತಂಡ ವಯಸ್ಸಾದ ಹೃದ್ರೋಗಿಗೆ ವಿನೂತನ ಶೈಲಿಯ ಚಿಕಿತ್ಸೆಯ ಮೂಲಕ ಜೀವದಾನ ನೀಡಿದ ಘಟನೆ ನಡೆದಿದೆ. ವೈದ್ಯರು ಈ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪದ ಮತ್ತು ಗಮನಾರ್ಹ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಹೊನ್ನಾವರ (ಉತ್ತರ ಕನ್ನಡ) ನಗರ ಮೂಲದ 69 ವಯಸ್ಸಿನ ಹೃದ್ರೋಗಿಯು, ತೀವ್ರ ಎದೆ ನೋವು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಹಾಗೂ ಹೃದ್ರೋಗ ಶಾಸ್ತ್ರ‌ ತಜ್ಞ ಡಾ. ಪ್ರಭಾಕರ್ ರನ್ನು ಭೇಟಿ ಮಾಡಿ ತಮ್ಮ ಹೃದ್ರೋಗದ ಸಮಸ್ಯೆಗಳನ್ನು ವಿವರಿಸಿದರು. ರೋಗಿಯನ್ನು ಸೂಕ್ಷ್ಮವಾಗಿ ತಪಾಸಣೆ ಮಾಡಿದಾಗ ವೈದ್ಯರು ರೋಗಿಯು ತೀವ್ರ ಹೃದ್ರೋಗ ಸಂಬಂಧಿತ ಕಾಯಿಲೆಗಳಿಂದ ಬಳಲುತಿದ್ದು, ಹೃದಯದ ಅಪದಮನಿಯಲ್ಲಿ ಕ್ಯಾಲ್ಸಿಯಂ ಕಣಗಳಿದ್ದು, ರಕ್ತದ ಚಲನವಲನಕ್ಕೆ ಅಡ್ಡಿ ಮಾಡುತ್ತಿತ್ತು. ಅದಲ್ಲದೆ ರೋಗಿಯು 10 ವರ್ಷದ ಹಿಂದೆ ಬೈಪಾಸ್ ಶಸ್ತ್ರ ಚಿಕಿತ್ಸೆಗೆ ಒಳಗೊಂಡಿದ್ದರು. ಈ ಕಾರಣ 2ನೇ ಬೈಪಾಸ್ ಶಸ್ತ್ರ ಚಿಕಿತ್ಸೆಯು ರೋಗಿಯ ಜೀವಕ್ಕೆ ಗಂಭೀರ ಸಮಸ್ಯೆ ಮತ್ತು ಅಪಾಯಕಾರಿಯಾಗಿತ್ತು. ತಕ್ಷಣ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ಡಾ. ಪ್ರಭಾಕರ್‌ರವರು ಈ ಗಂಭೀರ ಸಮಸ್ಯೆ ಮತ್ತು ಜೀವಕ್ಕೆ ಅಪಾಯಕಾರಿಯಾಗುವ ಸವಾಲನ್ನು ಸ್ವೀಕರಿಸಿ, 1 1/2 ಗಂಟೆ ಅವಧಿಯ ವಿನೂತನ ಶೈಲಿಯ ಕ್ಲಿಷ್ಟಕರವಾದ ಅರ್ಬಿಟಲ್ ಅಥೆರೆಕ್ಟೆಮಿ ಚಿಕಿತ್ಸೆಯನ್ನು ನಿರ್ವಹಿಸಿ ಹೃದಯದಲ್ಲಿರುವ ಕ್ಯಾಲ್ಸಿಯಂ ಕಣಗಳನ್ನು ನಿರ್ಮೂಲಿಸಿ 2 ಸ್ಟೆಂಟ್‌ಗಳನ್ನು ಅಳವಡಿಸಿ ಸಾಮಾನ್ಯ ರಕ್ತ ಚಾಲನೆಗೆ ಅನುವುಮಾಡಿಕೊಟ್ಟರು.ಈ ಚಿಕಿತ್ಸೆಗೆ ಆಸ್ಪತೆಯ ಹೃದ್ರೋಗ ತಜ್ಞರಾದ ಡಾ. ಪ್ರದೀಪ್ ಪಿರೇರಾ ಮತ್ತು ಡಾ. ಜೋಸ್ಟಲ್ ಪಿಂಟೋ ಸಹಕರಿಸಿದ್ದರು. ರೋಗಿಯು ಚಿಕಿತ್ಸೆಗೆ ಸ್ಪಂದಿಸಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಏ.26 ರಂದು ಬಿಡುಗಡೆಗೊಂಡಿದ್ದಾರೆ.ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ಫಾ. ರಿಚರ್ಡ್ ಕುವೆಲ್ಲೋ ಅವರು ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ನೆರವೇರಿಸಲಾಗಿದೆ ಎಂದು ವೈದ್ಯಕೀಯ ತಂಡದ ಗಮನಾರ್ಹ ಸಾಧನೆಯನ್ನು ಪ್ರಶಂಸಿಸಿ ಅಭಿನಂದಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

‘NOVATION 2025’ International Conference Successfully Held at St. Aloysius (Deemed to be University)

The School of Business and Management, Department of MBA, St. Aloysius (Deemed to be University), AIMIT Beeri campus organised the 8th International Conference ‘NOVATION 2025’: Innovations in Industry 5.0, 6.0, and beyond – Developing business models for the future on April 25, 2025. The chief guest at the inaugural Mr. Sandesh J Cutinho Prabhu, Chief General Manager -HR, MRPL, highlighted the future changes likely to occur in the next decade 5.0 and in the decade to follow 6.0, the importance of equipping human power to brace these challenges effectively. He provided a triple A formula of agility, adaptability and alignment to meet the gaps of the changing requirements of the industry. Prof (Dr) David M Smith, State University of Albany, New York, Dr. Yatin, Ministry of Finance, Govt. of Mauritius and Dr. Fr. Ranjit George SJ, Professor, Loyola College of Social Sciences (Autonomous) Thiruvananthapuram, were the keynote speakers at the conference. Dr. Ronald Nazareth, Registrar, St Aloysius (Deemed to be University), presided over the inaugural and Dr (Fr.) Kiran Coth SJ, Director, AIMIT, addressed the gathering. Dr. Rajani Suresh, Dean, School of Business and Management, welcomed the gathering and gave an overview of the conference.More than 60 research papers were presented by academicians, research scholars and students across various tracks.

ಪ್ರಾದೇಶಿಕ ವಾರ್ತೆಗಳು

ಏ.29ರಂದು ರೇಮಂಡ್ ಡಿಸೋಜಾ ಪ್ರೆಸ್ ಕ್ಲಬ್ ಗೌರವ ಅತಿಥಿ

ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಏ.29ರಂದು ಬೆಳಗ್ಗೆ 11.30 ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯುವಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ದೇಹದಾಡ್ಯಪಟು , ಮಿ.ವರ್ಲ್ಡ್ರೇಮಂಡ್ ಡಿಸೋಜಾ ಭಾಗವಹಿಸಿ ಸಂವಾದ ನಡೆಸಲಿದ್ದಾರೆ.ಹಿರಿಯ ಪತ್ರಕರ್ತ ಕೇಶವ ಕುಂದರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ , ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ.ಆರ್.ಉಪಸ್ಥಿತರಿರುವರು ಎಂದು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಡಾ. ಕೆ.ಸಿ. ಬಲ್ಲಾಳ್ ತೆಕ್ಕಟ್ಟೆ ಅವರಿಗೆ ಹುಟ್ಟೂರ ಅಭಿನಂದನೆ

ಹುಟ್ಟೂರ ಅಭಿನಂದನೆ ಡಾ! ಕೆ ಸಿ ಬಲ್ಲಾಳ ತೆಕ್ಕಟ್ಟೆ ಭಂಡಾಸಾಲೇ ಮನೆ ಇವರಿಗೆ ಕುಂದಾಪುರ ದಲ್ಲಿ 19 ನೇ ಏಪ್ರಿಲ್ ನಂದು, ತೆಕ್ಕಟ್ಟೆ ಯ ” ಯಶಸ್ವಿ ಕಲಾ ವೃಂದ, ಇವರಿಗೆ ತಮ್ಮ ಬೆಳ್ಳಿ ಹಬ್ಬದ ಸಂಧರ್ಭದಲ್ಲಿ ಅಭಿನಂದಿ ಸಿದರು. ಮಾಜಿ ಮಂತ್ರಿಗಳಾದ ಶ್ರೀ ಜಯಪ್ರಕಾಶ್ ಹೆಗ್ಡೆ, ಉದ್ಯಮಿಗಳಾದ ಆನಂದ ಸಿ ಕುಂದರ್, ಈ ದಿನ ಯಕ್ಷಗಾನದ ಸಾಧನೆಗೆ ಸನ್ಮಾನಿತರಾದ ಗುರುಗಳಾದ ಶ್ರೀ ಕೊಯಿಕಾಡಿ ಸೀತಾರಾಮ್ ಶೆಟ್ಟಿ ಹಾಗೂ ಯಶಸ್ವೀ ಕಲಾ ವೃಂದ ದ ಅಧ್ಯಕ್ಷರಾದ ಸೀತಾರಾಮ ಶೆಟ್ಟಿ ಹಾಗೂ ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟರು ಉಪಸ್ಥಿತರಿದ್ದರು

ಪ್ರಾದೇಶಿಕ ವಾರ್ತೆಗಳು

ಇಂಜಿನೀಯರ್ ನಾಗೇಂದ್ರ ಅವರಿಗೆ ವರ್ಷದ ಸಾಧಕ,(Achiever of the year) ಪ್ರಶಸ್ತಿ ಪ್ರಧಾನ

ಮಂಗಳೂರಿನ ಕೆನರಾ ಕ್ಲಬ್ ಸಭಾಂಗಣದಲ್ಲಿ,ರೋಟರಿ ಇಂಟರ್ ನ್ಯಾಶನಲ್,ಮಂಗಳೂರು ಸೆಂಟ್ರಲ್ ಕ್ಲಬ್ ಆಯೋಜಿಸಿದ್ದ, ಸಮಾರಂಭ ಕಾರ್ಯಕ್ರಮದಲ್ಲಿ ಇಂಜೀನೀಯರ ನಾಗೇಂದ್ರ ಅವರಿಗೆ ವರ್ಷದ ಸಾಧಕ (Achiever of the year )ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಇವರು ಕಳೆದ ವರ್ಷ ಪಡೆದ ರಾಜ್ಯ ಪ್ರಶಸ್ತಿ, ರಾಷ್ಟ್ರಪ್ರಶಸ್ತಿ, ಜಿಲ್ಲಾ ಪ್ರಶಸ್ತಿ ಕಲಾರತ್ನ ಪ್ರಶಸ್ತಿ ಹಾಗೂ ರೋಟರಿ ಸೇವಾಕಾರ್ಯಗಳನ್ನು ಗುರುತಿಸಿ ವರ್ಷದ ಸಾಧಕ (Achiever of the year ) ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ಸಂಧರ್ಭ ದಲ್ಲಿ ಮಾಜಿ ಗೌರ್ನರ್ ಡಾ| ದೇವದಾಸ್ ರೈ, ಅಧ್ಯಕ್ಷರಾದ ಬ್ರಾಯ್ನ್ ಪಿಂಟೋ, ಸೂರಜ್ ಇಂಟರ್ನ್ಯಾಶನಲ್ ಸ್ಕೂಲ್ ನ ಮಾಲಕರಾದ ಮಂಜುನಾಥ್ ರೇವಣ್ಕರ್,ಅಥೇನಾ ಹಾಸ್ಪಿಟಲ್ ನ ಮಾಲಕರಾದ ಆರ್ ಎಸ್ ಶೆಟ್ಟಿಯಾನ್,ಅಸಿಸ್ಟೆಂಟ್ ಗೌರ್ನರ್ ಕೃಷ್ಣ ಹೆಗ್ಡೆ,ರಾಜ್ ಗೋಪಾಲ್ ರೈ,ರೋನಾಲ್ಡ್ ಮೆಂಡೋನ್ಸಾ ಉಪಸ್ಥಿತರಿದ್ದರು.ಇದೇ ಸಂದರ್ಭ ಮಾಧ್ಯಮ ಕ್ಷೇತ್ರ ಕ್ಕಾಗಿ ಭಾಸ್ಕರ್ ರೈ ಕಟ್ಟಾ, ಮಿಸಸ್ ಇಂಟರ್ ನ್ಯಾಷನಲ್ ರನ್ನರ್ ಅಪ್ ಆದ ಡಾ / ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್ ,ಗೋಲ್ಡ್ ಮೆಡಲ್ ಪಡೆದ ಡಾ/ಶ್ರೇಯಾ ರೇವಣ್ ಕರ್, 10ನೇ ರಾಂಕ್ ಪಡೆದ ಡಾ / ಸುಜನ್ ರಾಜ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು

ಪ್ರಾದೇಶಿಕ ವಾರ್ತೆಗಳು

ಕಥೋಲಿಕ್ ಕ್ರೆಸ್ತರ ಪರಮೋಚ್ಚ ಧರ್ಮಗುರು ಪರಮಪೂಜ್ಯ ಪೋಪ್ ಫ್ರಾನ್ಸಿಸ್‌ರವರಿಗೆ ಗೌರವ ನಮನ

ಎಂ.ಸಿ.ಸಿ ಬ್ಯಾಂಕ್ ಮಂಗಳೂರು ಇದರ ಆಡಳಿತ ಕಛೇರಿಯಲ್ಲಿ ಪರಮಪೂಜ್ಯ ಪೋಪ್ ಫ್ರಾನ್ಸಿಸ್ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ದಿನಾಂಕ 24.04.2025ರಂದು ಬ್ಯಾಂಕಿನ ಆಡಳಿತ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಶ್ರೀಮತಿ ಕ್ಯಾರೆನ್ ಕ್ರಾಸ್ತಾ ತಂಡದಿAದ ಪ್ರಾರ್ಥನಾ ಗೀತೆಯೊಂದಿಗೆ ಸಭೆ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಫಾ| ಮುಲ್ಲರ್ಸ್ ಸಂಸ್ಥೆಯ ನಿಯೋಜಿತ ನೀರ್ದೇಶಕರಾದ ವಂದನೀಯ ಪೌಸ್ತಿನ್ ಲೋಬೊ ಹಾಜರಿದ್ದರು. ವಂ. ಪೌಸ್ತಿನ್ ಲೋಬೊ ಪರಮಪೂಜ್ಯ ಪೋಪ್ ಫ್ರಾನ್ಸಿಸ್ ಅವರ ಆತ್ಮಕ್ಕೆ ಗೌರವ ಸಲ್ಲಿಸಿ ಅವರು ಹಲವಾರು ಸಂದರ್ಭಗಳಲ್ಲಿ ಪೋಪ್ ಆವರೊಂದಿಗಿನ ಭೇಟಿಯನ್ನು ನೆನಪಿಸಿಕೊಂಡರು. ಪರಮಪೂಜ್ಯ ಪೋಪ್ ಪ್ರಾನ್ಸಿಸ್ ದ್ವನಿಯಿಲ್ಲದವರ ದ್ವನಿ ಎಂದು ಅವರು ಹೇಳಿದರು. ಅವರು ತಮ್ಮ ಗುರು ಯೇಸುಕಿಸ್ತನನ್ನು÷್ನ ಭವ್ಯತೆಯಲ್ಲಿ ಅಲ್ಲ, ಬಡವರು ಮತ್ತು ದೀನದಲಿತರಲ್ಲಿ ಕಂಡರು. ತಮ್ಮ ಜೀವನದುದ್ದಕ್ಕೂ ಸರಳ ಮತ್ತು ವಿನಮ್ರ ಜೀವನಶೈಲಿಯನ್ನು ನಡೆಸುವ ಮೂಲಕ ಸಂತ ಫ್ರಾನ್ಸಿಸ್ ಅಸ್ಸಿಸಿಯ ಹೆಜ್ಜೆಗಳನ್ನು ಅಕ್ಷರಶ: ಅನುಸರಿಸಿದರು. ಪರಮಪೂಜ್ಯ ಪೋಪ್ ಫ್ರಾನ್ಸಿಸ್ ಪ್ರಗತಿಪರರಾಗಿದ್ದರು ಮತ್ತು ಅನಗತ್ಯ ಮತ್ತು ಅಪ್ರಸ್ತುತ ಅಭ್ಯಾಸಗಳನ್ನು ತೆಗೆದುಹಾಕುವಲ್ಲಿ ನಂಬಿಕೆ ಇಟ್ಟಿದರು. ಪ್ರಪಂಚದಾದ್ಯAತ ಯುದ್ದಗಳು ಮತ್ತು ಸಂಘರ್ಷಗಳಿAದಾಗಿ ಬಳಲುತ್ತಿರುವ ಮಾನವಕುಲದ ಬಗ್ಗೆ ಅವರು ಆಳವಾದ ಸಹಾನಭೂತಿಯನ್ನು ಹೊಂದಿದ್ದರು. ಅವರು ಜನರಲ್ಲಿ ಅಂತರ್ ಧರ್ಮೀಯ ಸಾಮರಸ್ಯವನ್ನು ಪ್ರತಿಪಾದಿಸಿದರು ಮತ್ತು ಶಾಂತಿಯನ್ನು ತರಲು ಬಯಸಿದರು. ಅವರು ಮಾನವಕುಲದ ಸುಧಾರಣೆಗಾಗಿ ನಿಜವಾದ ಅರ್ಥದಲ್ಲಿ ಶ್ರಮಿಸುವ ಜಾಗತಿಕ ವ್ಯಕ್ತಿತ್ವ (ವಿಶ್ವ ಮಾನವ) ಆಗಿದ್ದರು. ಅವರ ನಿಧನದಿಂದಾಗಿ ಜಗತ್ತು ಅನಾಥವಾಗಿದೆ ಮತ್ತು ಅವರ ಪವಿತ್ರತೆಯು ನಮ್ಮ ಜೀವನದಲ್ಲಿ ಅವರ ಆದರ್ಶಗಳನ್ನು ಅನುಸರಿಸಲು ನಮ್ಮ ಬೆಳಕಿನ ದಾರಿದೀಪವಾಗಲಿ ಎಂದು ಅವರು ಹಾರೈಸಿದರು. ಬ್ಯಾಂಕಿನ ನಿರ್ದೇಶಕಿ ಶ್ರೀಮತಿ ಐರಿನ್ ರೆಬೆಲ್ಲೊ ಪರಮಪೂಜ್ಯ ಪೋಪ್ ಫ್ರಾನ್ಸಿಸ್ ಅವರು ರೋಮನ್ ಕ್ಯಾಥೋಲಿಕ್ ಚರ್ಚ್ನ ಸರ್ವೋಚ್ಛ ಮಠಾಧೀಶರಾಗಿ ವಹಿಸಿದ್ದ ಸ್ಥಾನಕ್ಕೆ ಸಂಪೂರ್ಣ ನ್ಯಾಯ ಒದಗಿಸುತ್ತಾ ಅವರು ಸಾಗಿದ ಹಾದಿಯನ್ನು ಪ್ರಸ್ತುತಪಡಿಸಿದರು. ಪೋಪ್ ಫ್ರಾನ್ಸಿಸ್ ಅವರ ಜೀವನ ಪ್ರಯಾಣವನ್ನು ಪ್ರಸ್ತುತಪಡಿಸುವಾಗ, ಆವರು ಪೋಪ್‌ರ ಸರಳತೆ, ರೋಗಿಗಳು, ಬಡವರು ಮತ್ತು ದೀನದಲಿತರ ಬಗ್ಗೆ ಅವರ ಕಾಳಜಿಯನ್ನು ಎತ್ತಿ ತೋರಿಸಿದರು. ಪುರಾತನ ಪದ್ದತಿಗಳು ಮತ್ತು ನಂಬಿಕೆಗಳನ್ನು ನಿರ್ಮೂಲನೆ ಮಾಡುವಲ್ಲಿ ಮತ್ತು ಬಡವರ ಜೀವನವನ್ನು ಸುಧಾರಿಸುವಲ್ಲಿ ಅವರ ಪ್ರಯತ್ನಗಳನ್ನು ಅವರು ವಿವರಿಸಿದರು. ಮಹಿಳೆಯರನು ಸಬಲೀಕರಣಗೊಳಿಸುವಲ್ಲಿ ಅವರ ಪ್ರಯತ್ನಗಳನ್ನು ಸಹ ಅವರು ವಿವರಿಸಿದರು. ಹ್ರದಯದ ಶುದ್ದತೆ ಮತ್ತು ಮಾನವಕುಲದ ಮೇಲಿನ ಅತ್ಯಂತ ಪ್ರೀತಿಯೊಂದಿಗೆ ದೈವಿಕ ಅನುಗ್ರಹವನ್ನು ಪ್ರತಿಬಿಂಬಿಸುವ ಮುಖ. ಪ್ರವಿತ್ರರ ಜೀವನವು ಮಾನವಕುಲವು ತಮ್ಮ ಜೀವನದಲ್ಲಿ ಅನುಕರಿಸಲು ಮಾದರಿಯಾಗಬೇಕೆಂದು ಅವರು ಬಯಸಿದರು.ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಬ್ಯಾಂಕಿನ ಎಲ್ಲಾ ನಿರ್ದೇಶಕರು, ಗ್ರಾಹಕರು ಮತು ಸಿಬ್ಬಂದಿಗಳ ಪರವಾಗಿ ಪರಮಪೂಜ್ಯ ಪೋಪ್ ಫ್ರಾನ್ಸಿಸ್ ಅವರ ಭಾವಚಿತ್ರಕ್ಕೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು. ವಂ. ಪೌಸ್ತಿನ್ ಲೋಬೊ ಮತ್ತು ಉಪಾಧ್ಯಕ್ಷ ಶ್ರೀ ಜೆರಾಲ್ಡ್ ಜೂಡ್ ಡಿಸಿಲ್ವಾ ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು.ಬ್ಯಾಂಕಿನ ಎಲ್ಲಾ ನಿರ್ದೇಶಕರು, ಅಡಳಿತ ಕಛೇರಿ ಮತ್ತು ಸಂಸ್ಥಾಪಕ ಶಾಖೆಯ ಸಿಬ್ಬಂದಿಗಳು ಹಾಜರಿದ್ದರು. ಮಹಾಪ್ರಬಂಧಕ ಶ್ರೀ ಸುನಿಲ್ ಮಿನೆಜಸ್ ವಂದಿಸಿ, ಹಿರಿಯ ಪ್ರಬಂಧಕ ಶ್ರೀ ಡೇರಿಲ್ ಲಸ್ರಾದೊ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಪೋಪ್ ಫ್ರಾನ್ಸಿಸ್ ಅವರಿಗೆ ಶ್ರದ್ಧಾಂಜಲಿ ಸಭೆ

ಮಂಗಳೂರು, ಎ. ೨೫: ಮಂಗಳೂರು ಧರ್ಮಪ್ರಾಂತ್ಯದ ವತಿಯಿಂದ ಕೆಥೋಲಿಕರ ಪರಮೋಚ್ಛ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರಿಗೆ ಶ್ರದ್ಧಾಂಜಲಿ ಸಭೆ ಶುಕ್ರವಾರ ನಗರದ ಮಿಲಾಗ್ರಿಸ್ ಚರ್ಚ್ ವಠಾರದಲ್ಲಿ ನಡೆಸಲಾಯಿತು.ಮಂಗಳೂರು ಬಿಷಪ್ ಅ|ವಂ|ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಶ್ರದ್ದಾಂಜಲಿ ಅರ್ಪಿಸಿ ಮಾತನಾಡಿ, ಪೋಪ್ ಫ್ರಾನ್ಸಿಸ್ ಅವರು ಜಗತ್ತಿಗೆ ಬೆಳಕಾಗಿದ್ದಾರೆ. ಮಕ್ಕಳು, ಯುವಕರು, ಬಡವರು, ದೀನರು ಮತ್ತು ವಲಸಿಗರಿಗೆ ಹತ್ತಿರವಾಗಿದ್ದರು. ಪೋಪ್ ಫ್ರಾನ್ಸಿಸ್ ನಮಗೆ ಸಹೋದರತ್ವವನ್ನು ಕಲಿಸಿದ್ದಾರೆ ಎಂದರು.ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಮಾತನಾಡಿ, ಪೋಪ್ ಫ್ರಾನ್ಸಿಸ್ ಅವರು ಪ್ರೀತಿ, ಸರಳತೆಯ ಜೀವನದಿಂದಾಗಿ ಜಾಗತಿಕ ಸುಧಾರಣಾವಾದಿಯಾಗಿ ಗುರುತಿಸಿಕೊಂಡಿದ್ದಾರೆ. ಜಗತ್ತಿಗೆ ಪರಿಸರ ಪ್ರೀತಿ, ಸಹಬಾಳ್ವೆಯ ಪಾಠ ಮಾಡಿದ್ದಾರೆ. ಸಂಪ್ರದಾಯವಾದಿಯಾಗದೆ ಪವಿತ್ರಸಭೆಯಲ್ಲಿ ಬದಲಾವಣೆ, ನವೀನತೆಯೊಂದಿಗೆ ಜನರ ಪೋಪ್ ಎಂದೇ ಕರೆಯಲ್ಪಟ್ಟವರು. ಚರ್ಚ್ ಬಡವರ ಪರ ಇರಬೇಕೆಂದು ಹೇಳಿದರು. ರೋಮಿನಲ್ಲಿ ಕೈದಿಗಳ ಪಾದ ತೊಳೆದು ಜಗತ್ತಿಗೆ ಸರಳತೆಯನ್ನು ತೋರಿದವರು. ಧರ್ಮ ಸರಳೀಕರಣಗೊಳಿಸಿ ಜನರ ಪ್ರೀತಿ ಗಳಿಸಿ, ಯುವಜನತೆಯನ್ನು ಚರ್ಚ್‌ಗಳತ್ತ ಆಕರ್ಷಿಸಿದರು. ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ್ದಾರೆ. ಪೋಪ್ ಅವರ ಅಗಲಿಕೆ ಜಗತ್ತಿಗೆ ಅಪಾರ ನಷ್ಟವನ್ನುಂಟು ಮಾಡಿದೆ ಎಂದರು.ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಾತನಾಡಿ, ವಿಶ್ವದಲ್ಲಿ ಪ್ರೀತಿಯ ಹೃದಯ ತೆರೆದವರಾಗಿದ್ದಾರೆ. ಬಡವರ ಕಣ್ಣೀರು ಒರೆಸಿ ಅವರನ್ನು ಮುನ್ನಡೆಸಿದ್ದಾರೆ. ಜಗತ್ತಿನ ಮಾನವ ಸಂಕುಲಕ್ಕೆ ಅವರ ನಿಧನ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದರು.ಸಾಹಿತಿ ಜ್ಯೋತಿ ಚೇಳಾರು ಉಪನ್ಯಾಸ ನೀಡಿದರು.ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಬಿಷಪ್ ಅ|ವಂ|ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ, ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ್ ಕಾಮತ್, ಹರೀಶ್ ಪೂಂಜಾ, ಮಾಜಿ ಸಚಿವ ಬಿ. ರಮಾನಾಥ ರೈ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ, ಮಾಜಿ ಶಾಸಕ ಜೆ.ಆರ್. ಲೋಬೊ, ಬಿಜೆಪಿ ಯುವ ಮೋರ್ಚ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ವಂ| ಜೆ.ಬಿ. ಸಲ್ಡಾನ್ಹಾ, ರೋಯ್ ಕ್ಯಾಸ್ತಲಿನೊ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಳ್ವಾರಿಸ್, ಪ್ರಮುಖರಾದ ಎಂ . ಪಿ.ನೊರೋನ್ಹಾ,ಎಲಿಯಾಸ್ ಫೆರ್ನಾಂಡಿಸ್, ವಂ| ಫಾವುಸ್ತಿನ್ ಲೋಬೊ, ಜೋಯ್ಲಾಸ್ ಪಿಂಟೊ, ವಂ| ಡಾ| ಡೇನಿಯಲ್ ವೇಗಸ್, ವಂ| ಡಾ| ಜೋಸೆಫ್ ಮಾರ್ಟಿಸ್, ಶ್ರೀಕಾಂತ್ ಕಾಸರಗೋಡು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಕಾಶ್ಮೀರ ಪಹಲ್ಗಾಮ್‌ ದುಷ್ಕೃತ್ಯ: ಬಿಷಪ್‌ ಖಂಡನೆ

ಮಂಗಳೂರು, ಎ.೨೪ಭಾರತದ ಮುಕುಟಮಣಿ ಎನ್ನಿಸಿರುವ ಕಾಶ್ಮೀರದಲ್ಲಿ ಪ್ರವಾಸಕ್ಕಾಗಿ ತೆರಳಿದ್ದ  ಅಮಾಯಕ ನಾಗರಿಕರನ್ನು ಹತ್ಯೆ ಮಾಡಿದ ಉಗ್ರಗಾಮಿಗಳ ಕೃತ್ಯ ಅತ್ಯಂತ ಖಂಡನೀಯ, ಯಾವುದೇ ತಪ್ಪೆಸಗದವರ ಮೇಲೆ ಏಕಾಏಕಿ ಗುಂಡಿಟ್ಟು ಕೊಂದಿರುವುದು ಮಾನವತೆಗೆ ಕಳಂಕ ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್‌ ಅತಿ ವಂದನೀಯ ಡಾ.ಪೀಟರ್‌ ಪಾವ್ಲ್‌ ಸಾಲ್ಡನ್ಹಾ ಅವರು ಖೇದ ವ್ಯಕ್ತಪಡಿಸಿದ್ದಾರೆ.ರಜೆಯಲ್ಲಿ ಕುಟುಂಬಗಳು, ಮಹಿಳೆಯರು ಮಕ್ಕಳ ಸಹಿತ ಕಾಶ್ಮೀರ ಪಹಲ್ಗಾಮ್‌ಗೆ ಪ್ರವಾಸ ತೆರಳಿದ್ದರು. ಅಲ್ಲಿ ಮುಖ್ಯವಾಗಿ ಪುರುಷರನ್ನೇ ಗುರಿಯಾಗಿಸಿ ಉಗ್ರರು 26 ಮಂದಿಯ ತಲೆಗೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇಂತಹ ಪಾಪಕೃತ್ಯ ಯಾವುದೇ ನಾಗರಿಕರು ಒಪ್ಪುವಂಥದ್ದಲ್ಲ.ಜೀವ ಕಳೆದುಕೊಂಡವರಿಗೆ ಚಿರಶಾಂತಿ ಲಭಿಸಲಿ, ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿ. ಮೃತರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ.ಇದಕ್ಕೆ ಕಾರಣರಾದ ಯಾರನ್ನೂ ಬಿಡದೆ ಸರಕಾರ ಕ್ರಮ ಜರಗಿಸುವಂತೆ ಆಗ್ರಹಿಸುವುದಾಗಿ ಬಿಷಪ್‌ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Scroll to Top