ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಪೇಸ್‌ನಲ್ಲಿ ಬ್ಯಾಟರಿ ಥರ್ಮಲ್ ಮ್ಯಾನೇಜ್‌ಮೆಂಟ್ ಕುರಿತು ಎಫ್‌ಡಿಪಿ ಉದ್ಘಾಟನೆ

ಮಂಗಳೂರು, ಆ. 3: ಪಿ.ಎ. ಕಾಲೇಜ್ ಆಫ್ ಎಂಜಿನಿಯರಿಂಗ್ (ಪೇಸ್), ಮಂಗಳೂರಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ‘ಬ್ಯಾಟರಿ ಥರ್ಮಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್ಸ್: ಪ್ರೆಸೆಂಟ್ & ಫ್ಯೂಚರ್’ ವಿಷಯದ ಕುರಿತು ಆಯೋಜಿಸಿರುವ ಒಂದು ವಾರದ AICTE ATAL Academy ಪ್ರಾಯೋಜಿತ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ (ಎಫ್‌ಡಿಪಿ) ಸೋಮವಾರ ಉದ್ಘಾಟನೆಗೊಂಡಿತು. ಕಾರ್ಯಕ್ರಮವು ಆಗಸ್ಟ್ 3ರಿಂದ 8ರವರೆಗೆ ನಡೆಯಲಿದೆ.ಬೆಂಗಳೂರು ಬಿ.ಎಂ.ಎಸ್. ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ವೆಂಕಟೇಶ್ ಟಿ. ಲಮಾಣಿ ಮುಖ್ಯ ಅತಿಥಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಲೆಕ್ಟ್ರಿಕ್ ವಾಹನ (ಇವಿ) ಕ್ಷೇತ್ರವು ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಬ್ಯಾಟರಿ ಥರ್ಮಲ್ ಮ್ಯಾನೇಜ್‌ಮೆಂಟ್ ವ್ಯವಸ್ಥೆಗಳ ಮಹತ್ವ ಹೆಚ್ಚುತ್ತಿದೆ. ಬ್ಯಾಟರಿಯ ಸುರಕ್ಷತೆ, ಕಾರ್ಯಕ್ಷಮತೆ ಮತ್ತು ಬಾಳಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಥರ್ಮಲ್ ಮ್ಯಾನೇಜ್‌ಮೆಂಟ್ ತಂತ್ರಜ್ಞಾನಗಳ ಅಭಿವೃದ್ಧಿ ಅಗತ್ಯವಾಗಿದೆ ಎಂದು ಅವರು ಹೇಳಿದರು.ಗೌರವ ಅತಿಥಿಯಾಗಿದ್ದ ಪೇಸ್‌ನ ವಿದ್ಯಾರ್ಥಿ ವ್ಯವಹಾರಗಳ ಡೀನ್ ಹಾಗೂ CMSR ನಿರ್ದೇಶಕ ಡಾ. ಸಯ್ಯದ್ ಅಮೀನ್ ಅಹಮ್ಮದ್ ಮಾತನಾಡಿ, ಇವಿ ಉದ್ಯಮ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮಗಳ ನಡುವಿನ ಸಹಯೋಗವನ್ನು ಬಲಪಡಿಸಬೇಕಾಗಿದೆ ಎಂದರು. ಉದ್ಯಮದ ನೈಜ ಅಗತ್ಯಗಳಿಗೆ ಪೂರಕವಾದ ನವೀನ ಮತ್ತು ಪ್ರಾಯೋಗಿಕ ಸಂಶೋಧನೆಗಳಿಗೆ ಅಧ್ಯಾಪಕರು ಹಾಗೂ ಸಂಶೋಧಕರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.ಪೇಸ್ ಉಪ ಪ್ರಾಂಶುಪಾಲೆ ಡಾ. ಶರ್ಮಿಳಾ ಕುಮಾರಿ ಎಂ. ಮಾತನಾಡಿ, ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಅಧ್ಯಾಪಕರ ಜ್ಞಾನ ಮತ್ತು ಕೌಶಲ ವೃದ್ಧಿಗೆ AICTE ATAL Academyಯ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪೇಸ್ ಪ್ರಾಂಶುಪಾಲ ಡಾ. ರಾಮಿಸ್ ಎಂ.ಕೆ. ಮಾತನಾಡಿ, ಆಧುನಿಕ ಬ್ಯಾಟರಿ ಚಾಲಿತ ವ್ಯವಸ್ಥೆಗಳ ಸುರಕ್ಷತೆ, ದಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸುವಲ್ಲಿ ಬ್ಯಾಟರಿ ಥರ್ಮಲ್ ಮ್ಯಾನೇಜ್‌ಮೆಂಟ್ ವ್ಯವಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.ವಿವಿಧ ಶಿಕ್ಷಣ ಸಂಸ್ಥೆಗಳ ಸುಮಾರು 50 ಮಂದಿ ಎಫ್‌ಡಿಪಿಯಲ್ಲಿ ಭಾಗವಹಿಸಿದ್ದಾರೆ.ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ್ ಪೈ ಎಂ. ಸ್ವಾಗತಿಸಿದರು. ಎಫ್‌ಡಿಪಿ ಸಂಯೋಜಕ ಡಾ. ಅಬ್ದುಲ್ ರಝಾಕ್ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಡಾ. ಮಹಮ್ಮದ್ ಸಲ್ಮಾನ್ ವಾರಿಮಣಿ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಶಹಬಾಝ್ ಎಸ್.ಎಂ. ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿಗೆ ಡಾ. ಮಾಲತಿ ಶೆಟ್ಟಿ ಮಾಣೂರು ಆಯ್ಕೆ

ಬೆಂಗಳೂರಿನ ನಿರ್ಮಾತೃ ನಾಡ ಪ್ರಭು ಕೆಂಪೇಗೌಡ ಸ್ಮರಣಾರ್ಥ ಬೆಂಗಳೂರಿನ ಸಮಥ ಸಾಹಿತ್ಯ, ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಆಗಸ್ಟ್ 9 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಚಾಮರಾಜಪೇಟೆ ಇಲ್ಲಿ ನಡೆಯುವ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿಗೆ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಾಹಿತಿ ,ಡಾ. ಮಾಲತಿ ಶೆಟ್ಟಿ ಮಾಣೂರು ಆಯ್ಕೆಯಾಗಿದ್ದು .ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ 9ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಚಾಮರಾಜಪೇಟೆ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ . ಕಾರ್ಯಕ್ರಮದ ಉದ್ಘಾಟನೆಯನ್ನು ಜೆಕೆ ರಶ್ಮಿ ಐಪಿಎಸ್ ಪೊಲೀಸ್ ಮಹಾ ನಿರೀಕ್ಷಕರು ಬೆಂಗಳೂರು ಮಾಡಲಿರುವರು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಎಂ ಶ್ರೀನಿವಾಸ್ ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಡಾ. ಶರವಣ , ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಉದ್ಯಮ ಕನ್ನಡ ಪರ ಸಂಘದ ಸಂಘಟನೆಯ ಒಕ್ಕೂಟ ಅಧ್ಯಕ್ಷರಾದ ಎಂ .ತಿಮ್ಮಯ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು . ಕಾರ್ಯಕ್ರಮ ಸಂಯೋಜಕರಾದ ಎಸ್ ಆರ್ ವಿಜಯ ಸಮರ್ಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಾ .ಮಾಲತಿ ಶೆಟ್ಟಿ ಮಾಣೂರವರು ಕಳೆದ 22 ವರ್ಷಗಳಿಂದ ಸಾಹಿತ್ಯ, ಪತ್ರಿಕೋದ್ಯಮ, ಸಮಾಜ ಸೇವೆ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದು ಕಳೆದ 13 ವರುಷಗಳಿಂದ ಸಾಹಿತ್ಯ ಪರ ಅಮೃತ ಪ್ರಕಾಶ ಪತ್ರಿಕೆಯನ್ನು ನಡೆಸುತ್ತಿದ್ದಾರೆ. 9 ಕೃತಿಗಳನ್ನು ಪ್ರಕಟಿಸಿದ್ದಾರೆ. ಪತ್ರಿಕೆಯ ವತಿಯಿಂದ ಹಿರಿಯ ಕಿರಿಯ ಬರಹಗಾರರ 49 ಕೃತಿಗಳು ಸರಣಿ ಕೃತಿ ಬಿಡುಗಡೆಯಲ್ಲಿ ಬಿಡುಗಡೆಗೊಂಡಿದೆ. ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳಲ್ಲಿ ಸಾಹಿತ್ಯ ಅಭಿರುಚಿ ಮೂಡುವ ಸಲುವಾಗಿ ಈಗಾಗಲೇ 119 ಶಾಲಾ-ಕಾಲೇಜುಗಳಲ್ಲಿ ಉಚಿತವಾಗಿ ಯಶಸ್ವಿಯಾಗಿ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಮಾಡಿ ದಾಖಲೆ ನಿರ್ಮಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಂಪುಟದ ನೂತನ ಸಚಿವರಾಗಿ 20 ಮಂದಿ ಇಂದು (ಆಗಸ್ಟ್ 3) ಪ್ರಮಾಣ ವಚನ ಸ್ವೀಕಾರ. ಜಮೀರ್ ಅಹ್ಮದ್ ಗೆ ಸ್ಥಾನ. ದಿನೇಶ್ ಗೂಂಡುರಾವ್ ಗೆ ಮಂತ್ರಿ ಪದವಿ ಇಲ್ಲ. ಸಂಪುಟದ ಗಾತ್ರ ಬರೋಬರಿ 34ಕ್ಕೆ ಏರಿಕೆ. BREAkING LATEST POLITICAL FLASH NEWS BY DR. ASHOK SHETTY BN

ಬೆಂಗಳೂರು – ಕರ್ನಾಟಕದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಂಪುಟದ ನೂತನ ಸಚಿವರಾಗಿ 20 ಮಂದಿ ಲೋಕಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರಿಂದ ಆಗಸ್ಟ್ 3 ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ಸಚಿವ ಸಂಪುಟದಲ್ಲಿ ದಿನೇಶ್ ಗುಂಡೂರಾವ್ ಅವರು ಅವಕಾಶ ವಂಚಿತರಾದರೆ, ಜಮೀರ್ ಅಹ್ಮದ್ ಅವರು ಸ್ಥಾನ ಪಡೆದುಕೊಂಡಿದ್ದಾರೆ. ಇದರೊಂದಿಗೆ ಸಂಪುಟದ ಗಾತ್ರ 34ಕ್ಕೆ ಏರಿದೆ. ನೂತನ ಸಚಿವರ ಆಯ್ಕೆಯಲ್ಲಿ ರಾಹುಲ್ ಗಾಂಧಿಯವರೇ ನೇರವಾಗಿ ಅಂತಿಮ ತೀರ್ಮಾನ ವಹಿಸಿದ್ದು, ಹೊಸ ಮುಖಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ

ಪ್ರಾದೇಶಿಕ ವಾರ್ತೆಗಳು

SFI ನೂತನ ಜಿಲ್ಲಾಧ್ಯಕ್ಷರಾಗಿ ಮಹಮ್ಮದ್ ಅಜ್ಲಾನ್ ಬೆಂಗ್ರೆ, ಕಾರ್ಯದರ್ಶಿಯಾಗಿ ವಿನಾಯಕ ಮಂಗಳೂರು ಸರ್ವಾನುಮತದಿಂದ ಆಯ್ಕೆ

ಭಾರತ ವಿದ್ಯಾರ್ಥಿ ಫೆಡರೇಶನ್ (SFI)ನ ದ.ಕ.ಜಿಲ್ಲಾ ಸಮಾವೇಶವು ನಗರದ ಡಾನ್ ಬಾಸ್ಕೋ ಹಾಲ್ ನಲ್ಲಿ ಬಿ ಕೆ ಇನಾಜ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.ಜಿಲ್ಲೆಯ ಜನಪದ ವಿದ್ವಾಂಸರೂ,ನಿವೃತ್ತ ಪ್ರಾಂಶುಪಾಲರಾದ ಡಾ.ಗಣನಾಥ ಶೆಟ್ಟಿ ಎಕ್ಕಾರು ಸಮಾವೇಶವನ್ನು ಉದ್ಘಾಟಿಸಿದರೆ,SFI ಕರ್ನಾಟಕ ರಾಜ್ಯಾಧ್ಯಕ್ಷರಾದ ಶಿವಪ್ಪ ಅಂಬ್ಲಿಕಲ್ ರವರು ಇಡೀ ಸಮಾವೇಶವು ಸುಸೂತ್ರವಾಗಿ ನಡೆಯುವಂತೆ ಮಾರ್ಗದರ್ಶನ ನೀಡಿದರು. ಸಮಾವೇಶವು ಮುಂದಿನ ಸಾಲಿಗೆ ನೂತನ ದ.ಕ‌.ಜಿಲ್ಲಾ ಸಮಿತಿಯನ್ನು ಆಯ್ಕೆಗೊಳಿಸಿತು.ನೂತನ ಅಧ್ಯಕ್ಷರಾಗಿ ಮಹಮ್ಮದ್ ಅಜ್ಲಾನ್ ಬೆಂಗ್ರೆ ಹಾಗೂ ಕಾರ್ಯದರ್ಶಿಯಾಗಿ ವಿನಾಯಕ ಮಂಗಳೂರುರವರು ಸರ್ವಾನುಮತದಿಂದ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಲಿಖಿತ್ ವಾಮಂಜೂರು, ಅಲ್ಮಾಸ್, ರೋನ್ ಸನ್ ಡಿಸೋಜ, ಅವಿಶಾ ಡಿಸೋಜ ಪಂಜಿಮೊಗರು,ಸಮನ್ವಿ ಬಜಾಲ್,ಪ್ರೇಮ್ ಮದ್ಯ, ಮಿನಹಾಜ್ ದೇರಳಕಟ್ಟೆ, ಸಹಕಾರ್ಯದರ್ಶಿಗಳಾಗಿ ಚಿರಾಗ್ ಕುತ್ತಾರ್,ಇಶಾನ್, ಶ್ರಮಾ,ಇಂಚರಾ ಎಸ್ ಬಜಾಲ್,ಸನನ್ವಿ ಬಜಾಲ್, ನೋಯಲ್ ಸ್ಟೀಫನ್ ಡಿಸೋಜ, ಶಯಾನ್,ರಂಜಿತ್ ಕೊಯ್ಯೂರುರವರನ್ನು‌ ಆರಿಸಲಾಯಿತು.ಹಾಗೂ ಜಿಲ್ಲೆಯ ವಿವಿಧ ಕಾಲೇಜ್ ಗಳಿಂದ 35 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಂದ ಖ್ಯಾತ ಹಿರಿಯ ಕ್ರೀಡಾ ಲೇಖಕ ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ ಅವರು ಸಹಕಾರಿ ಕ್ಷೇತ್ರದ ಪಿತಾಮಹ ಮೊಳಹಳ್ಳಿ ಶಿವರಾವ್ ಅವರ ಕುರಿತಾಗಿ ಬರೆದ ಸಮಗ್ರ ಚಿತ್ರಣ ‘ತ್ಯಾಗಮಯಿ ಮೊಳಹಳ್ಳಿ’ ಕೃತಿ ಆಗಸ್ಟ್ 3ರಂದು ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಎಸ್ ಸಿ ಡಿಸಿಸಿ ಬ್ಯಾಂಕ್ ನ ಪ್ರಧಾನ ಕಚೇರಿ ಸಭಾಂಗಣದಲ್ಲಿ ಬಿಡುಗಡೆಗೊಂಡಿತು. ಮಹಾನ್ ಸಾಧಕ ಮೊಳಹಳ್ಳಿ ಕುರಿತಾದ ಈ ಕೃತಿ ಸಹಕಾರಿ ಕ್ಷೇತ್ರಕ್ಕೆ, ನಮ್ಮೆಲ್ಲರಿಗೆ ಮಾರ್ಗದರ್ಶಿಯಾಗಲಿ :ಡಾ. ಎಂ.ಎನ್. ರಾಜೇಂದ್ರ ಕುಮಾರ್

ಮಂಗಳೂರು: ಸಹಕಾರವನ್ನು ಜೀವನದ ಧ್ಯೇಯವನ್ನಾಗಿ,, ಜನಸೇವೆಯನ್ನು ಜೀವನದ ಪರಮ ಗುರಿಯನ್ನಾಗಿ, ತ್ಯಾಗವನ್ನು ಬದುಕಿನ ಮಾರ್ಗವನ್ನಾಗಿ ಸ್ವೀಕರಿಸಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಜನರ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಏಳಿಗೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು, ಸಹಕಾರದ ಮೂಲಕ ಸಮಾಜದ ಸರ್ವತೋಮುಖ ಅಭಿವೃದ್ಧಿಯ ಕನಸು ಕಂಡ ಮಹಾನ್ ಚೇತನ, ಸಹಕಾರ ರಂಗದ ಪಿತಾಮಹ ಮೊಳಹಳ್ಳಿ ಶಿವರಾವ್ ಅವರ ಬದುಕು ಹಾಗೂ ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿದ ಸಾರ್ಥಕ ಸಮಾಜಮುಖಿ ಸೇವೆಯ ಕುರಿತಾದ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ ಅವರು ಬರೆದಿರುವ ‘ತ್ಯಾಗಮಯಿ ಮೊಳಹಳ್ಳಿ’ ಕೃತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾ‌ರ್ ಅವರು ಮಂಗಳೂರು ಕೊಡಿಯಾಲ್ ಬೈಲ್ ನಲ್ಲಿರುವ ಎಸ್ ಸಿಡಿ ಸಿಸಿ ಬ್ಯಾಂಕ್ ನ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು.ಬಳಿಕ ಮಾತಾಡಿದ ಅವರು, ನಮ್ಮ ಬ್ಯಾಂಕಿನ ಪ್ರಧಾನ ಕಚೇರಿಯ ಕಿರಿಯ ನಿರೀಕ್ಷಕರು ಹಾಗೂ ಪತ್ರಿಕೋದ್ಯಮದಲ್ಲಿ ಕ್ರೀಡಾ ಬರಹಗಾರರಾಗಿ ಸುಮಾರು 35 ವರ್ಷಗಳಿಂದ ಗುರುತಿಸಿಕೊಂಡಿರುವ ಜಗದೀಶ್ಚಂದ್ರ ಅಂಚನ್ ಅವರು ‘ತ್ಯಾಗಮಯಿ ಮೊಳಹಳ್ಳಿ’ ಕೃತಿಯ ಲೇಖಕರಾಗಿದ್ದಾರೆ. ಮೊಳಹಳ್ಳಿ ಅವರು ಎತ್ತಿನಗಾಡಿಯಲ್ಲಿ ಸಂಚರಿಸಿ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವನ್ನು ಬೆಳೆಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಕುಂದಾಪುರದ ಮೊಳಹಳ್ಳಿಯಲ್ಲಿ ಜನಿಸಿದರೂ ಪುತ್ತೂರಿನಲ್ಲಿ ನೆಲೆಸಿ ವಕೀಲ ವೃತ್ತಿಯಲ್ಲಿದ್ದರೂ ಸಹಕಾರಿ ಕ್ಷೇತ್ರದ ಅಭಿವ್ಯದ್ಧಿಗೆ ಕಾರಣರಾದವರು. ಇಂತಹ ಮಹಾನ್ ಸಾಧಕರ ಕುರಿತಾದ ಕೃತಿಯು ನಮ್ಮೆಲ್ಲರಿಗೆ ಮಾರ್ಗದರ್ಶಿಯಾಗಿರಲಿ” ಎಂದರು.ಕಾರ್ಯಕ್ರಮದಲ್ಲಿ ಬ್ಯಾಂಕ್ ನ ಸಿಇಒ ಗೋಪಿನಾಥ್ ಭಟ್, ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಬ್ಯಾಂಕ್ ನಿರ್ದೇಶಕ ಶಶಿಕುಮಾ‌ರ್ ರೈ ಬಾಳ್ಕೊಟ್ಟು ನಬಾರ್ಡ್ ಸಂಗೀತ, ರಮೇಶ್, ಸುಧೀರ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ತ್ಯಾಗಮಯಿ ಮೊಳಹಳ್ಳಿ ಕೃತಿಯ ಲೇಖಕರ ಕುರಿತು…ಹಿರಿಯ ಕ್ರೀಡಾ ಲೇಖಕರಲ್ಲಿ ಒಬ್ಬಾಗಿರುವಎಸ್. ಜಗದೀಶ್ಚಂದ್ರ ಅಂಚನ್, ಸೂಟರ್‌ಪೇಟೆಅವರು ಸುಮಾರು 36 ವರ್ಷಗಳ ನಿರಂತರ ಪತ್ರಿಕೋದ್ಯಮದ ಅವಧಿಯಲ್ಲಿ ಅವರು 4,500ಕ್ಕೂ ಹೆಚ್ಚು ಕ್ರೀಡಾ ಲೇಖನಗಳನ್ನು ಬರೆದಿದ್ದಾರೆ. ಜೊತೆಗೆ,ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ಇನ್ನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಇವರು ನಾಟಕ, ಸಿನಿಮಾ ಮತ್ತು ಯಕ್ಷಗಾನದ ಕುರಿತು ವಿಮರ್ಶಾತ್ಮಕ ಲೇಖನಗಳ ಮೂಲಕ ತಮ್ಮ ಬಹುಮುಖ ಪ್ರತಿಭೆಯನ್ನು ಸಹ ಅನಾವರಣಗೊಳಿಸಿದ್ದಾರೆ. ಸಹಕಾರ ರಂಗದ ಪಿತಾಮಹ ಮೊಳಹಳ್ಳಿ ಶಿವರಾಯರ ಜೀವನ, ತತ್ವಗಳು ಮತ್ತು ಸಮಾಜಸೇವೆಯ ಬಗ್ಗೆ ಅವರಿಗೆ ವಿಶೇಷ ಗೌರವ ಹಾಗೂ ಅಭಿಮಾನವಿದೆ. ಕಳೆದ ಹತ್ತು ವರ್ಷಗಳಿಂದ ಪ್ರತಿ ವರ್ಷ ಆಗಸ್ಟ್ 4 ರಂದು ಶಿವರಾಯರ ಜನ್ಮದಿನದಂದು ವಿವಿಧ ಪತ್ರಿಕೆಗಳಲ್ಲಿ ಸ್ಮರಣಾರ್ಥ ಲೇಖನಗಳನ್ನು ಬರೆದಿದ್ದಾರೆ. ಈ ಅಧ್ಯಯನ, ಅಭಿಮಾನ ಮತ್ತು ಸಾಮಾಜಿಕ ಕಾಳಜಿಯೇ‘ತ್ಯಾಗಮಯಿ ಮೊಳಹಳ್ಳಿ’ ಕೃತಿಯ ರಚನೆಗೆ ಅವರಿಗೆ ಪ್ರೇರಣೆಯಾಯಿತು.

ಪ್ರಾದೇಶಿಕ ವಾರ್ತೆಗಳು

ಆಗಸ್ಟ್ 3ರಂದು ‘ತ್ಯಾಗಮಯಿ ಮೊಳಹಳ್ಳಿ’ ಕೃತಿ ಬಿಡುಗಡೆ

ಮಂಗಳೂರು : ಸಹಕಾರವನ್ನು ಜೀವನದ ಧ್ಯೇಯವನ್ನಾಗಿ, ಜನಸೇವೆಯನ್ನು ಜೀವನದ ಪರಮ ಗುರಿಯನ್ನಾಗಿ. ತ್ಯಾಗವನ್ನು ಬದುಕಿನ ಮಾರ್ಗವನ್ನಾಗಿ ಸ್ವೀಕರಿಸಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಜನರ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಏಳಿಗೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು, ಸಹಕಾರ ರಂಗದ ಮೂಲಕ ಸಮಾಜದ ಸರ್ವತೋಮುಖ ಅಭಿವೃದ್ಧಿಯ ಕನಸು ಕಂಡ ಮಹಾನ್ ಚೇತನ, ಸಹಕಾರ ರಂಗದ ಪಿತಾಮಹ ‘” ಮೊಳಹಳ್ಳಿ ಶಿವರಾವ್” ಅಗ್ರಗಣ್ಯರು. ಕೀರ್ತಿಶೇಷ ಮೊಳಹಳ್ಳಿ ಶಿವರಾವ್ ಅವರ ಬದುಕು ಹಾಗೂ ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿದ ಸಾರ್ಥಕ ಸಮಾಜಮುಖಿ ಸೇವೆಯು ಸದಾ ಸ್ಮರಣೀಯ.ಇಂತಹ ಅಪೂರ್ವ ವ್ಯಕ್ತಿತ್ವದ ದ್ಯೋತಕವಾಗಿ ‘ತ್ಯಾಗಮಯಿ ಮೊಳಹಳ್ಳಿ’ ಕೃತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ಆಗಸ್ಟ್ -3ರಂದು ಪೂರ್ವಾಹ್ನ 11.30ಗಂಟೆಗೆ ಎಸ್ ಸಿಡಿಸಿಸಿ ಬ್ಯಾಂಕ್ ನಲ್ಲಿ ಬಿಡುಗಡೆ ಗೊಳಿಸಲಿರುವರು. ಎಸ್ ಸಿಡಿಸಿಸಿ ಬ್ಯಾಂಕ್ ಪ್ರಧಾನ ಕಛೇರಿಯ ಕಿರಿಯ ನಿರೀಕ್ಷಕರು ಹಾಗೂ ಪತ್ರಿಕೋದ್ಯಮದಲ್ಲಿ ಕ್ರೀಡಾ ಬರಹಗಾರರಾಗಿ ಸುಮಾರು 35 ವರ್ಷಗಳಿಂದ ಗುರುತಿಸಿಕೊಂಡಿರುವ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ ಅವರು ‘ತ್ಯಾಗಮಯಿ ಮೊಳಹಳ್ಳಿ’ ಕೃತಿಯ ಲೇಖಕರಾಗಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಮಂಗಳೂರು ಐಎಎಸ್‌ನಿಂದ ಕರ್ನಾಟಕ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಪರೀಕ್ಷೆಯ ಉತ್ತರ ಕೀ ಬಿಡುಗಡೆ

ಮಂಗಳೂರು, ಆ. 2: ಕರ್ನಾಟಕ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿಯ ಲಿಖಿತ ಪರೀಕ್ಷೆ ಭಾನುವಾರ ನಡೆದ ಬೆನ್ನಲ್ಲೇ, ನಗರದ ಮಂಗಳೂರು ಐಎಎಸ್ ಸಂಸ್ಥೆಯು ಪರೀಕ್ಷೆಯ ಅನಧಿಕೃತ ಉತ್ತರ ಕೀ (Answer Key) ಬಿಡುಗಡೆ ಮಾಡಿದೆ. ಪರೀಕ್ಷೆ ಮುಕ್ತಾಯಗೊಂಡ ತಕ್ಷಣವೇ ಸಂಸ್ಥೆಯ ವಿಷಯ ತಜ್ಞರು ಪ್ರಶ್ನೆಪತ್ರಿಕೆಯನ್ನು ವಿಶ್ಲೇಷಿಸಿ ಉತ್ತರ ಕೀಯನ್ನು ಸಿದ್ಧಪಡಿಸಿದ್ದು, ಅಭ್ಯರ್ಥಿಗಳು ತಮ್ಮ ಉತ್ತರಗಳನ್ನು ಪರಿಶೀಲಿಸಿಕೊಂಡು ಸಂಭವನೀಯ ಅಂಕಗಳನ್ನು ಅಂದಾಜಿಸಿಕೊಳ್ಳಲು ಇದು ನೆರವಾಗಲಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪರೀಕ್ಷಾರ್ಥಿಗಳು ಮಂಗಳೂರು ಐಎಎಸ್ ಕ್ಯಾಂಪಸ್‌ಗೆ ಭೇಟಿ ನೀಡಿ ಯಾವುದೇ ಶುಲ್ಕವಿಲ್ಲದೆ ಉತ್ತರಗಳನ್ನು ಪರಿಶೀಲಿಸಬಹುದಾಗಿದೆ. ಅಲ್ಲದೆ, ಸಂಸ್ಥೆಯ ಅಧ್ಯಾಪಕರು ಪ್ರಶ್ನೆಪತ್ರಿಕೆ ಕುರಿತು ಅಭ್ಯರ್ಥಿಗಳ ಸಂದೇಹಗಳಿಗೆ ಸ್ಪಷ್ಟನೆ ನೀಡಲಿದ್ದಾರೆ. ಈ ಕುರಿತು ಮಂಗಳೂರು ಐಎಎಸ್ ಸಂಸ್ಥಾಪಕರಾದ ಸಂತೋಷ್ ಕುಮಾರ್ ಎಸ್. ಮಾತನಾಡಿ, “ಪರೀಕ್ಷಾರ್ಥಿಗಳಿಗೆ ತ್ವರಿತ ಶೈಕ್ಷಣಿಕ ನೆರವು ನೀಡುವ ಉದ್ದೇಶದಿಂದಲೇ ಪರೀಕ್ಷೆ ಮುಗಿದ ಕೂಡಲೇ ಉತ್ತರ ಕೀ ಬಿಡುಗಡೆ ಮಾಡಲಾಗಿದೆ. ಇದರಿಂದ ಅಭ್ಯರ್ಥಿಗಳು ತಮ್ಮ ಸಾಧನೆಯನ್ನು ತಕ್ಷಣವೇ ಮೌಲ್ಯಮಾಪನ ಮಾಡಿಕೊಂಡು ನೇಮಕಾತಿಯ ಮುಂದಿನ ಹಂತಗಳಿಗೆ ಆತ್ಮವಿಶ್ವಾಸದಿಂದ ಸಿದ್ಧರಾಗಲು ಅನುಕೂಲವಾಗುತ್ತದೆ,” ಎಂದು ತಿಳಿಸಿದರು. ನಾಗರಿಕ ಸೇವೆಗಳು, ಪೊಲೀಸ್, ಬ್ಯಾಂಕಿಂಗ್ ಹಾಗೂ ವಿವಿಧ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿರುವ ಮಂಗಳೂರು ಐಎಎಸ್ ಸಂಸ್ಥೆಯು ಗುಣಮಟ್ಟದ ಬೋಧನೆ, ಪರಿಣತ ಬೋಧಕ ವರ್ಗ ಹಾಗೂ ನಿಯಮಿತ ಮಾದರಿ ಪರೀಕ್ಷೆಗಳ ಮೂಲಕ ಸಾವಿರಾರು ಸ್ಪರ್ಧಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದೆ. ಉತ್ತರ ಕೀ ಪರಿಶೀಲನೆಗೆ ಸಂಪರ್ಕ: ಮಂಗಳೂರು ಐಎಎಸ್ – ಎ ಸ್ಕೂಲ್ ಫಾರ್ ಸಿವಿಲ್ ಸರ್ವೀಸಸ್ಸಂದೇಶ ಫೌಂಡೇಶನ್, ಪ್ರೇಮನಗರ, ಬಜ್ಜೋಡಿ, ಮಂಗಳೂರು – 575005.ದೂರವಾಣಿ: 70221 85544

ಪ್ರಾದೇಶಿಕ ವಾರ್ತೆಗಳು

Mangalore IAS First to Release Karnataka Police Constable Exam Key Answers in Mangaluru

Mangaluru, August 2: Mangalore IAS, a premier coaching institute for Civil Services and Government Competitive Examinations, has become the first institute in Mangaluru to release the unofficial key answers for the Karnataka Civil Police Constable Written Examination held on August 2, 2026. Immediately after the completion of the examination, subject experts at Mangalore IAS prepared the answer key to help candidates assess their performance and estimate their probable scores. All aspirants from Dakshina Kannada and Udupi districts who appeared for the examination are invited to visit the Mangalore IAS campus to verify their answers free of cost. Faculty members will also be available to clarify doubts and discuss the question paper with candidates. Speaking on the occasion, Mr. Santhosh Kumar S., Founder of Mangalore IAS, said: “Our objective is to provide timely academic support to aspirants. By releasing the answer key immediately after the examination, we enable candidates to evaluate their performance without delay and prepare confidently for the next stages of recruitment.” Mangalore IAS has consistently guided thousands of aspirants preparing for Civil Services, Police, Banking and other Government examinations through quality coaching, expert faculty and regular mock tests. For Answer Key Verification: Mangalore IASA School for Civil ServicesSandesha Foundation, Premnagar, Bajjodi, Mangalore – 575005Founder: Santhosh Kumar S.Phone: 70221 85544Email: mangaloreias@gmail.com Media Contact:Mangalore IAS70221 85544mangaloreias@gmail.com

ಪ್ರಾದೇಶಿಕ ವಾರ್ತೆಗಳು

ಉಡುಪಿ ಲಯನ್ಸ್ ಸರ್ಕಲ್ ಬಳಿ ರಸ್ತೆ ದಾಟುತ್ತಿದ್ದಾಗ ಮಹಿಳೆಗೆ ಖಾಸಗಿ ಬಸ್ ಡಿಕ್ಕಿ: ನಗರಸಭೆ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಸ್ಥಳದಲ್ಲೇ ದುರಂತ ಸಾವು. ಉಡುಪಿ ಜಿಲ್ಲೆಯಲ್ಲೊಂದು ಹೃದಯವಿದ್ರಾವಕ ರಸ್ತೆ ಅಪಘಾತ

ಮಂಗಳೂರು : ರಸ್ತೆ ದಾಟುತ್ತಿದ್ದಾಗ ಖಾಸಗಿ ಬಸ್ ವೊಂದು ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ, ಮಹಿಳೆಯೊಬ್ಬರು ರಸ್ತೆಗೆ ಅಪ್ಪಳಿಸಿ ತೀವ್ರತರದ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಉಡುಪಿ ನಗರದ ನೈವೇದ್ಯ ಹೋಟೆಲ್ ಸಮೀಪದ ಕೋರ್ಟ್ ರಸ್ತೆ ಹತ್ತಿರದ ಲಯನ್ಸ್ ಸರ್ಕಲ್ ಬಳಿ ಆಗಸ್ಟ್ 1ರ ಶನಿವಾರ ಮಧ್ಯಾಹ್ನ ನಡೆದಿದೆ.ಮೃತರನ್ನು ಬಿಜೆಪಿ ಮುಖಂಡ (ಮಂಜುನಾಥ್)ಮಂಜುಕೊಳ ಅವರ ಪತ್ನಿ, ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ (37)ಎಂದು ಗುರುತಿಸಲಾಗಿದೆ. ಕಡಿಯಾಳಿಯ ಬಿಜೆಪಿ ಕಚೇರಿಯಲ್ಲಿ ಸಭೆ ಮುಗಿಸಿ, ತಾಲೂಕು ಪಂಚಾಯತ್ ಕಟ್ಟಡದಲ್ಲಿರುವ ಉಡುಪಿ ಶಾಸಕರ ಕಚೇರಿಗೆ ತೆರಳಿದ್ದು, ಅಲ್ಲಿಂದ ಅವರು ಮನೆಗೆ ಹೋಗಲು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಖಾಸಗಿ ಬಸ್ಸೊಂದು ಅವರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. ಮಾಹಿತಿ ತಿಳಿದು ಉಡುಪಿ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ಕುರಿತು ತನಿಖೆ ಆರಂಭಿಸಿದ್ದಾರೆ. ಈ ರಸ್ತೆ ಅಪಘಾತ ಜನಮಾನಸದಲ್ಲಿ ಕಣ್ಣೀರು ಸುರಿಸಿದೆ. ರಾಜಕೀಯವಾಗಿ ಇನ್ನಷ್ಟು ಉಜ್ವಲ ಭವಿಷ್ಯ ಹೊಂದಿದ್ದ, ಜನ ಸೇವೆ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದ ಲಕ್ಷ್ಮೀ ಮಂಜುನಾಥ್ ಅವರನ್ನು ವಿಧಿಯ ಕ್ರೂರ ಅಟ್ಟಹಾಸವು ರಸ್ತೆ ದುರಂತದ ಮೂಲಕ ಬಲಿ ತೆಗೆದುಕೊಂಡಿದೆ.

Scroll to Top