ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಕಾರ್ಕಳ ಯೂತ್ ಬಿಲ್ಲವ ಸಂಘಟನೆಗೆ ಶರತ್ ಬೈಲಡ್ಕ ಅಧ್ಯಕ್ಷರಾಗಿ ಆಯ್ಕೆ

ಕಾರ್ಕಳ: ಯೂತ್ ಬಿಲ್ಲವ ಕಾರ್ಕಳ ಸಂಘಟನೆಯ ನೂತನ ಅಧ್ಯಕ್ಷರಾಗಿ ಪೆರ್ವಾಜೆ ಪತ್ತೊಂಜಿಕಟ್ಟೆಯ ಶರತ್ ಬೈಲಡ್ಕ ಆಯ್ಕೆಯಾಗಿದ್ದಾರೆ.ಪದಾಧಿಕಾರಿಗಳಾಗಿ ಪ್ರಧಾನ ಕಾರ್ಯದರ್ಶಿ- ಅಭಿಲಾಷ್ ಕೋಟ್ಯಾನ್ ತೆಳ್ಳಾರ್, ಗೌರವಾಧ್ಯಕ್ಷರು- ಭಾಸ್ಕರ್ ಎಸ್.ಕೋಟ್ಯಾನ್ ಮತ್ತು ಪ್ರಮಲ್‌ಕುಮಾರ್, ಉಪಾಧ್ಯಕ್ಷರು-ರವಿರಾಜ್ ಪೂಜಾರಿ ಮತ್ತು ಸುಧೀರ್ ಪೂಜಾರಿ, ಜತೆ ಕಾರ್ಯದರ್ಶಿ- ಶ್ರವಣ್ ಅಂಚನ್, ಕೋಶಾಧಿಕಾರಿ-ಸುಜಿತ್ ನಿಟ್ಟೆ ಸಂಘಟನಾ ಕಾರ್ಯದರ್ಶಿ-ಶ್ರೀನಿವಾಸ್ ಪೂಜಾರಿ ಯರ್ಲಪಾಡಿ, ಕ್ರೀಡಾ ಕಾರ್ಯದರ್ಶಿ-ಜಗದೀಶ್ ಪೂಜಾರಿ ಮಿಯ್ಯಾರು, ಸಾಂಸ್ಕೃತಿಕ ಕಾರ್ಯದರ್ಶಿ-ರಕ್ಷಿತ್ ಮುಂಡ್ಲಿ, ಕಾರ್ಯಕಾರಿ ಸಮಿತಿ ಸದಸ್ಯರು-ಕಾರ್ತಿಕ್ ಸುವರ್ಣ, ವಿಶಾಲ್ ಸಾಲಿಯಾನ್, ರವೀಂದ್ರ ಪೂಜಾರಿ ಶಿರ್ಲಾಲು, ಕರುಣಾಕರ ಪೂಜಾರಿ, ಶ್ರೇಯಸ್ ಪೂಜಾರಿ ಮತ್ತು ಸುದೇಶ್ ನಿಟ್ಟೆ ಆಯೆಯಾಗಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಐಸ್ ಸ್ಕೇಟಿಂಗ್ ನಲ್ಲಿ ಮಂಗಳೂರಿನ‌ ಡ್ಯಾಶಿಯಲ್ ಕೋನ್ಸೆಸ್ಸೋ ಸಾಧನೆ

ಮಂಗಳೂರು:ಭಾರತೀಯ ಐಸ್ ಸ್ಕೇಟಿಂಗ್ ಅಸೋಸಿಯೇಶನ್ ವತಿಯಿಂದ ಡೆಹ್ರಾಡೂನ್‌ನಲ್ಲಿ ನಡೆದ 21ನೇ ರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರಿನ ಡ್ಯಾಶಿಯಲ್ ಕೋನ್ಸೆಸ್ಸೊ ವಿಶಿಷ್ಟ ಸಾಧನೆ ಮೆರೆದಿದ್ದಾರೆ.ಹಿರಿಯರ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಡ್ಯಾಶಿಯಲ್ ಅವರು ಮಿಕ್ಸ್ಡ್ ರಿಲೇ ವಿಭಾಗದಲ್ಲಿ 1 ಚಿನ್ನ ಮತ್ತು 500 ಮೀ.1000 ಮೀ. ಮತ್ತು 1500 ಮೀಟರ್ ನಲ್ಲಿ 3 ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ. ಡ್ಯಾಶಿಯಲ್ ಕಾನ್ಸೆಸ್ಸೊ ಪ್ರಸ್ತುತ ಮಂಗಳೂರಿನ ಎಸ್‌ಡಿಎಂ ಸಂಸ್ಥೆಯಲ್ಲಿ ಪದವಿ ವ್ಯಾಸಂಗವನ್ನು ಪಡೆಯುತ್ತಿದ್ದಾರೆ. ಇವರು ಮಂಗಳೂರಿನ‌ ದೇರೆಬೈಲ್ ನಿವಾಸಿ ಫ್ರಾನ್ಸಿಸ್ ಮತ್ತು ಡೋರಿಸ್ ಕಾನ್ಸೆಸ್ಸೊ ಅವರ ಪುತ್ರಿಯಾಗಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ವೈಭವೀಕರಣವಿಲ್ಲದ ನೈಜ ಸುದ್ದಿಗಳು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪೂರಕ -ಸುಧೀರ್ ಕುಮಾರ್ ರೆಡ್ಡಿ. ದ.ಕ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ

ಮಂಗಳೂರು,ಜು.1; ವೈಭವೀಕರಣ ವಿಲ್ಲದ ನೈಜ ಸುದ್ದಿಗಳು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪೂರಕ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದರು. ಅವರು ಬುಧವಾರ ಪತ್ರಿಕಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್, ಪತ್ರಿಕಾಭವನ ಟ್ರಸ್ಟ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ,ಮಾತನಾಡುತ್ತಿದ್ದರು.ಆಡಳಿತ ವ್ಯವಸ್ಥೆ ಹಾಗೂ ಮಾಧ್ಯಮ ಒಂದೇ ಹಾದಿಯಲ್ಲಿ ಸಾಗುತ್ತಿದ್ದು, ಇದು ಅರೋಗ್ಯಕರ ಬೆಳವಣಿಗೆ. ಒಂದೇ ಘಟನೆಯನ್ನು ಹಲವು ರೀತಿಯಲ್ಲಿ ವೈಭವೀಕರಣ ಮಾಡಲಾಗಿರುವ ಸುದ್ದಿಗಳನ್ನು ನಾನು ಹಿಂದೆ ಗಮನಿಸಿದ್ದೆಆದರೆ, ಇಂದು ಫ್ಯಾಕ್ಟ್ ಚೆಕ್ ಮಾದರಿಯಲ್ಲಿ ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆ. ಇದು ಸಂತಸದ ವಿಚಾರ. ಪತ್ರಕರ್ತರು ನೈಜ ಸುದ್ದಿಗಳನ್ನು ನೈಜವಾಗಿ ನೀಡಬೇಕು.ಸಮಾಜದಲ್ಲಿ ವಸ್ತುನಿಷ್ಠರಾಗಿ ಕಾರ್ಯ ನಿರ್ವ ಹಿಸ ಬೇಕಾಗುತ್ತದೆ ಎಂದರು. ಪತ್ರಕರ್ತರು ಪಾರದರ್ಶಕ ವರದಿ ಮಾಡುವ ಮೂಲಕ ಸಮಾಜದಲ್ಲಿ ಶಾಂತಿ ಸ್ಥಾಪನೆಗೆ ನೆರವಾಗಬೇಕು.ಸಮಾಜದಲ್ಲಿ ಬದಲಾವಣೆ ಎನ್ನುವುದು ಏಕಾಏಕಿ ಆಗಲು ಸಾಧ್ಯವಿಲ್ಲ. ಕಮ್ಯೂನಲ್ ಫೀಲಿಂಗ್ ಎನ್ನುವುದು ನಿರಂತರವಾಗಿರುತ್ತದೆ. ಅಂತಹ ಭಾವನೆಯನ್ನು ನಿಧಾನವಾಗಿ ಬದಲಾಗಬೇಕು. ಅದು ಪತ್ರಕರ್ತರಿಂದ ಮಾತ್ರ ಸಾಧ್ಯ. ಎಲ್ಲವೂ ಶಾಂತಿಯುತವಾಗಿದ್ದಾಗ ಏಕಾಏಕಿ ಸಣ್ಣಪುಟ್ಟ ಘಟನೆಗಳು ನಡೆದರೆ ಅಂತಹ ಸಂದರ್ಭದಲ್ಲಿ ಪಾರದರ್ಶಕ ವರದಿಗಾರಿಕೆ ಅಗತ್ಯವಾಗಿದೆ. ಅಪರಾಧಗಳು ನಡೆದಾಗ ವ್ಯಾಪಾರ ವ್ಯವಹಾರ, ರಾಜಕೀಯ ಸಹಿತ ವಿವಿಧ ಕ್ಷೇತ್ರಗಳಿಗೆ ಪರಿಣಾಮ ಬೀರುವ ಮೂಲಕ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಅಪರಾಧ ಮಾಡುವವರು ಎಷ್ಟೇ ಚಾಲಾಕಿಗಳಾಗಿದ್ದರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾಡಿನ ಶಾಂತಿಗಾಗಿ ಎಲ್ಲರೂ ಸಹಕರಿಸುವ ಜತೆಗೆ ಶ್ರಮಿಸಬೇಕು ಎಂದರುಮುಖ್ಯ ಅತಿಥಿಗಳಾಗಿ ಅರಣ್ಯ ಸಂರಕ್ಷಣಾಕಾರಿ ಡಾ.ವಿ.ಕರಿಕಾಲನ್ ಮಾತನಾಡುತ್ತಾ, ಪತ್ರಕರ್ತರು ಸಮಾಜವನ್ನುಎಚ್ಚರಿಸುವ ಕೆಲಸವನ್ನು ಮಾಡುತ್ತಿರುವುದನ್ನು ನಾನು ಗಮನಿಸಿದ್ದೇನೆ. ಇದರೊಂದಿಗೆ ಪ್ರಜಾಪ್ರಭುತ್ವದ ವ್ಯವಸ್ಥೆ ಬಲಗೊಳಿಸಲು ಸಹಕಾರ ನೀಡುತ್ತಿದ್ದಾರೆಎಂದರು. ಕರಾವಳಿಯ ಜನ ಸುಶಿಕ್ಷಿತರಾಗಿದ್ದು, ಇಂತಹ ಶಿಕ್ಷಣ ವ್ಯವಸ್ಥೆ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಉತ್ತಮ ಶಿಕ್ಷಣ ಪಡೆದರೂ, ಲೋಕಸೇವಾ ಆಯೋಗದ ಮೂಲಕ ಜನಸೇವೆಗೆ ಮುಂದಾಗುವವರು ವಿರಳ. ಅದರ ಬದಲಾಗಿ ಉದ್ಯಮದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಬರೆದು ಸಾರ್ವಜನಿಕ ಸೇವೆಗೆ ಉತ್ತಮ ಅವಕಾಶಗಳಿವೆ. ಅವುಗಳನ್ನು ಕರಾವಳಿಯ ಯುವ ಸಮುದಾಯ ಬಳಸಿಕೊಳ್ಳಬೇಕು ಎಂದರು.ಪತ್ರಿಕಾ ದಿನದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ನ್ಯೂಸ್-18ನ ಪ್ರಧಾನ ಸಂಪಾದಕ ಹರಿಪ್ರಸಾದ್ ಅಡ್ಪಂಗಾಯ ಅವರು, ಮಾಧ್ಯಮ ಇಂದು ಹೆಚ್ಚು ಟೀಕೆಗೆ ಒಳಗಾಗಿದೆ. ಸುಳ್ಳು ಸುದ್ದಿ ಪ್ರಸಾರವಾಗುತ್ತಿದೆ ಎನ್ನುವ ಆರೋಪಗಳಿದ್ದು, ಸುಳ್ಳು ಸುದ್ದಿ ತಡೆಯಲು ಪತ್ರಕರ್ತರ ಜವಾಬ್ದಾರಿ ಪ್ರಮುಖವಾಗಿದೆ. ಗಾಸಿಪ್ ತಡೆಯುವುದು ನಮ್ಮ ಎದುರು ಇರುವ ದೊಡ್ಡ ಸವಾಲು. ಡಿಜಿಟಲ್ ಮತ್ತು ಸೋಷಿಯಲ್ ಮೀಡಿಯಾದಿಂದ ಸುಳ್ಳು ಸುದ್ದಿ ಹರಡುತ್ತಿದೆ. ಜಾತಿ, ಧರ್ಮ ವೈಭವೀಕರಿಸದೆ ಅವುಗಳನ್ನು ಪತ್ರಕರ್ತರು ದೂರವಿರಿಸಬೇಕು. ಧರ್ಮವನ್ನು ಆಧಾರವಾಗಿರಿಸಿ ಬರೆಯಬಾರದು. ಒಂದು ಧರ್ಮದ ಪರ ಮತ್ತೊಂದು ಧರ್ಮದ ವಿರುದ್ಧ ಬರೆಯಬಾರದು. ಪತ್ರಕರ್ತರು ಭ್ರಷ್ಟರಾಗಿರದೆ, ಪಾರದರ್ಶಕ ವರದಿಗಾರಿಕೆಗೆ ಆದ್ಯತೆ ನೀಡಬೇಕು. ಪತ್ರಿಕೋಧ್ಯಮ ಸಮಾಜದ ಕನ್ನಡಿಯಾಗಿದ್ದು, ಪತ್ರಕರ್ತರು ಅದನ್ನು ಕಾಲಕಾಲಕ್ಕೆ ಸ್ವಚ್ಛಗೊಳಿ ಸುತ್ತಿರಬೇಕು ಎಂದರು.1843ರ ಜುಲೈ 1ರಂದು ಕ್ರೈಸ್ತ ಮಿಷನರಿಯಾಗಿದ್ದ ರೆವರೆಂಡ್ ಹರ್ಮನ್ ಮೊಗ್ಲಿಂಗ್ ಅವರು ಕನ್ನಡದ ಮೊದಲ ಪತ್ರಿಕೆ `ಮಂಗಳೂರು ಸಮಾಚಾರ’ ಆರಂಭಿಸಿದ್ದರು. ಈ ಐತಿಹಾಸಿಕ ದಿನ. ಪ್ರಜಾಪ್ರಭುತ್ವ ದ ನಾಲ್ಕನೇ ಅಂಗವಾದ ಮಾಧ್ಯಮ ರಂಗ ವಾಸ್ತವ ಸಂಗತಿಗಳನ್ನು ಸಮಾಜದ ಮುಂದಿಟ್ಟು ಪ್ರಜಾಪ್ರಭುತ್ವವನ್ನು ಸಶಕ್ತ ಗೊಳಿಸಬೇಕಾಗಿದೆ.ಸತ್ಯ ಸಂಗತಿ ಗಳನ್ನುಜನರ ಮುಂದಿಡಬೇಕಾಗುತ್ತದೆ ತಪ್ಪುಗಳು ನುಸುಳದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್ ವಹಿಸಿದ್ದರು.ಹಿರಿಯ ಪತ್ರಿಕಾ ವಿತರಕ ತಿಮ್ಮಪ್ಪ ಶೆಟ್ಟಿಯವರನ್ನು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸನ್ಮಾನಿಸಿದರು.ಅತಿಥಿಗಳು ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಸಮಾರಂಭದ ವೇದಿಕೆಯಲ್ಲಿ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು,ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೆ. ಪೂಜಾರಿ ಉಪಸ್ಥಿತರಿದ್ದರು.ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ವಿವರಗಳನ್ನು ವಿಜಯ ಕೋಟ್ಯಾನ್ ಪಡುನೀಡಿದರು.ಉಪಾಧ್ಯಕ್ಷ ಆರಿಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಎರಡು ಕಾಲುಗಳನ್ನು ಕಳೆದುಕೊಂಡ ಅಶ್ವಿನಿಗೆ ಆಶ್ರಯವಾದ ಬಿಜೆಪಿ, ಮಾಜಿ ಸಂಸದರ ಮುತುವರ್ಜಿಯಲ್ಲಿ 23 ಲಕ್ಷ ರೂ. ವೆಚ್ಚದ ಕೃತಕ ಕಾಲುಗಳಿಗೆ ಸಹಾಯಹಸ್ತ

ಮಂಜನಾಡಿ ದುರಂತದಲ್ಲಿ ಇಬ್ಬರು ಮಕ್ಕಳು ಹಾಗೂ ತನ್ನೆರಡೂ ಕಾಲುಗಳನ್ನು ಕಳೆದುಕೊಂಡ ಅಶ್ವಿನಿ ಅವರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿರ್ದೇಶನದಂತೆ ಮಹಾರಾಷ್ಟ್ರದ ಲೋಧ ಚಾರಿಟೇಬಲ್ ಟ್ರಸ್ಟ್ 23ಲಕ್ಷ ರೂ. ಮೊತ್ತವನ್ನು ಅಶ್ವಿನಿಯವರಿಗೆ ಕೃತಕ ಕಾಲುಗಳಿಗೆ ಒದಗಿಸಿಲಾಗಿದ್ದು ಮಂಗಳವಾರ ದಕ್ಷಿಣ ಕನ್ನಡ ಮಾಜಿ ಸಂಸದ ನಳಿನ್ ಕಟೀಲ್ ಸಹಾಯಧನದ ಚೆಕ್ ಬುಧವಾರ ಹಸ್ತಾಂತರಿಸುವ ಮೂಲಕ ಬಾಳಿನಲ್ಲಿ ದೈಕಿಕವಾಗಿ ಎಲ್ಲವೂ ಕಳೆದುಕೊಂಡಿದದ್ದೆ ಎಂಬ ಮನಸ್ಸಿಗೆ ಕೊಂಚ ನಿರಾಳತೆ ಸಿಕ್ಕಿದೆ.ಇಂದಿಗೆ ಭರ್ತಿ ಒಂದು ವರ್ಷ, ಒಂದು ತಿಂಗಳ ಹಿಂದೆ ಧಾರಾಕಾರ ಮಳೆಗೆ ಮನೆಯ ಮೇಲೆ ಗುಡ್ಡ ಕುಸಿದು ಮನೆ ಧರಾಶಾಹಿಯಾಗಿ ಮಣ್ಣಿನೊಳಗೆ ಕಾಲು ಸಿಲುಕಿ ಹಾಕಿಕೊಂಡು ತನ್ನ ಎರಡು ಕಾಲುಗಳನ್ನು ಆಸ್ಪತ್ರೆಯಲ್ಲಿ ಅದ್ಯಾವ ಚಿಕಿತ್ಸೆ ನೀಡಿದರೂ ಫಲಿಸದೆ ಕಳೆದುಕೊಂಡ ಅಶ್ವಿನಿಯವರ ಹರೇಕಳದ ತಾಯಿ ಮನೆಯಲ್ಲಿ ಕಣ್ಣೀರು ಸುರಿಸುತ್ತಾ ಜೀವನ ಸಾಗಿಸುತ್ತಿದ್ದಾಕೆಗೆ ರಾ¶ÖçÃಯ ಸ್ವಯಂ ಸೇವಕ ಸಂಘ ನೆರಳಾಗಿ ಬಂದಿದೆ.ನಡೆದಾಡಲು ಸಾಧ್ಯವಾಗುವಂತೆ ಕೃತಕ ಕಾಲುಗಳಿಗೆ 23 ಲಕ್ಷ ರೂ. ಗಳ ಅಗತ್ಯತೆ ಮನಗಂಡು ಕಾರ್ಯಕರ್ತರ ಮನವಿಗೆ ಸ್ಪಂದಿಸಿದ ಸಂಘದ ಪ್ರಮುಖರಾದ ಪ್ರಕಾಸ್ ಪಿ.ಎಸ್ ಅವರು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಲ್ಲಿ ಜೀವನದ ಪ್ರಮುಖ ಘಟ್ಟವನ್ನೇ ಕಳೆದುಕೊಂಡಿದ್ದ ಅಶ್ವಿನಿ ಅವರ ಕುರಿತಾಗಿ ಚರ್ಚಿಸಿ ದೊಡ್ಡ ಮೊತ್ತ ತರಿಸುವಲ್ಲಿ ಯಶಸ್ವಿಯಾಗಿದ್ದು ಚಿರಕಾಲ ಮರೆಯದ ಸೇವೆಗೆ ಸೇರಿದ ಜನಸ್ತೋಮ ಕೃತಜ್ಞತೆ ಸಲ್ಲಿಸಿದೆ.ಬುಧವಾರ ಸಂಘ ಪರಿವಾರದೊಂದಿಗೆ ಆಗಮಿಸಿದ ನಳಿನ್ ಕಟೀಲ್ ಅವರು ಚೆಕ್ ಹಸ್ತಾಂತರಿಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿರ್ದೇಶನದಂತೆ ನನ್ನಿಂದಾದ ಸೇವೆಯನ್ನು ತಾಯಿ ಭಾರತಿ ಸುತೆ ಅಶ್ವಿನಿ ಅವರಿಗಾಗಿ ಮಾಡಿಸಿದ್ದಾಳೆ. ಮಂಜನಾಡಿಯ ಕೊಪ್ಪಳ ಪ್ರದೇಶದಲ್ಲಿ ಕಳೆದ ವರ್ಷ ನೆರೆ ಹಾವಳಿಯಿಂದ ಮನೆ ಕುಸಿತದಿಂದ ತನ್ನ ಎರಡು ಕರುಳ ಬಳ್ಳಿಯನ್ನು ಕಳೆದುಕೊಂಡದ್ದಲ್ಲದೆ ಎರಡು ಕಾಲು, ತನ್ನ ಮಾವ ಒಂದು ಕಾಲು ಕಳೆದುಕೊಂಡಿರುವುದು ಹಾಗೂ ಅಶ್ವಿನಿಯವರ ಅತ್ತೆಯ ಸಾವು ಅವರನ್ನು ದಿಗ್ಬ್ರಮೆಗೊಳಪಡಿಸಿತ್ತು ಇದೀಗ ಕೊಂಚ ನೆಮ್ಮದಿ ಕರುಣಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದೇವೆ ಎಂದು ನೋವಿನ ನಡುವೆಯೂ ಸಂತಸ ವ್ಯಕ್ತಡಿಸಿದ್ದಾರೆ.ಒಂದು ವರ್ಷದಿಂದ ಕುಟುಂಬ ಸಂಕಷ್ಟದಲ್ಲಿತ್ತು. ಎರಡು ಕೃತಕ ಕಾಲುಗಳನ್ನು ಒದಗಿಸುವುದು ಕುಟುಂಬದ ಬೇಡಿಕೆಯಾಗಿತ್ತು. ಕೃತಕ ಕಾಲುಗಳಿಗೆ 23ರೂ. ಲಕ್ಷ ತಗಲುವುದರಿಂದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮಂಡಲ ಅಧ್ಯಕ್ಷ ಜಗದೀಶ್ ಕುವೆತ್ತಬೈಲ್ ಬೇಡಿಕೆ ಮುಂದಿಟ್ಟಿದ್ದರು. ಅದರಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂತೋಷ್ ಅವರು ಖುದ್ದಾಗಿ ಕರೆ ಮಾಡಿ ಕುಟುಂಬದ ಜೊತೆ ನಿಲ್ಲುವಂತೆ ಸೂಚಿಸಿದ್ದರು. ಹಾಗಾಗಿ ಮಹಾರಾಷ್ಟ್ರ ಸರಕಾರದ ಮಾನ್ಯ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಸಚಿವರಾದ ಮಂಗಲ್ ಪ್ರಭಾತ್ ಲೋಧ ಅವರ ಲೋಧ ಚಾರಿಟೇಬಲ್ ಟ್ರಸ್ಟ್ಗೆ ಮನವಿ ಮಾಡಿದ ತಕ್ಷಣ ಅವರು ಸ್ಪಂದಿಸಿ ಕೃತಕ ಕಾಲುಗಳಿಗೆ ತಗಲುವ 23ಲಕ್ಷ ರೂ. ವನ್ನು ಒದಗಿಸಿದ್ದೇನೆ.ಮಾಜಿ ಸಂಸದರು ನಳಿನ್ ಕುಮಾರ್ ಕಟೀಲ್ CªÀgÀÄಆಂಡ್ರೋಲೈಟ್ ಎಂಬ ಸಂಸ್ಥೆ ಕೃತಕ ಕಾಲು ಜೋಡಣೆಗೆ ಮುಂದಾಗಿದೆ. ಆರ್ಥಿಕ ಸಂಕಷ್ಟಕ್ಕೆ ಬಿಜೆಪಿ ಕುಟುಂಬದ ಜೊತೆ ನಿಂತು ಕಾರ್ಯವನ್ನು ಮಾಡಿದೆ. ಟ್ರಸ್ಟ್ ಮುಖ್ಯಸ್ಥರು ಮಂಗಲ್ ಪ್ರಭಾತ್ ಲೋಧ ನೇರ ಅಶ್ವಿನಿ ಜೊತೆಗೆ ಮಾತನಾಡಿದ್ದಾರೆ. ಈಗಾಗಲೇ ಎರಡು ಬೇಡಿಕೆಗಳನ್ನು ಮನೆಮಂದಿ ಮುಂದಿಟ್ಟಿದ್ದಾರೆ. ದುರ್ಘಟನೆಯಲ್ಲಿ ಮನೆಯನ್ನು ಕಳೆದು ಕೊಂಡಿರುವುದ್ದರಿಂದ ಮನೆ ಮತ್ತು ಜಾಗವನ್ನು ಒದಗಿಸುವಂತೆ ಕೇಳಿಕೊಂಡಿದ್ದಾರೆ. ಜಿಲ್ಲಾಕಾರಿಗಳು ಹಾಗೂ ಈ ಭಾಗದ ಶಾಸಕರು ಸಚಿವರಾಗಿದ್ದು, ಅವರು ಜಾಗ ಒದಗಿಸಿಕೊಟ್ಟಲ್ಲಿ ಮನೆ ಕಟ್ಟಿಕೊಡುವ ಕೆಲಸವನ್ನು ಬಿಜೆಪಿ ಮಾಡಲಿದೆ.ಉದಯ ಶಂಕರ್ ಶೆಟ್ಟಿ ಬಲೆತ್ತೋಡು, ಚಂದ್ರಶೇಖರ್ ಹಾಗೂ ಸುಮಲತಾ ಅವರು ವಿಶೇಷ ಮುತುವರ್ಜಿ ವಹಿಸಿಕೊಂಡು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಕಾಶ್ ಪಿ.ಎಸ್., ಸಂತೋಷ್ ಅವರ ಗಮನಕ್ಕೆ ತರುವ ಮುಖಾಂತರ ಮಾಜಿ ಸಂಸದ ನಳಿನ್ ಕಟೀಲ್ ದೊಡ್ಡ ಆಸರೆಯಾಗಿದ್ದಾರೆ. ನಳಿನ್ ಕಟೀಲ್ ಅವರ ದೊಡ್ಡ ಸೇವೆಯನ್ನು ಜಿಲ್ಲಾ ಬಿಜೆಪಿ ಹಾಗೂ ಇಡೀ ಉಳ್ಳಾಲದ ಜನತೆ ಎಂದಿಗೂ ಮರೆಯುವುದಿಲ್ಲ.ಮಾಜಿ ಸಂಸದರ ಜೊತೆಗೆ ಬಿಜೆಪಿ ಜಿಲ್ಲಾಧ್ಯಕ್ಷರು ಸತೀಶ್ ಕುಂಪಲ, ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್, ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ರಾಜ್ ಕೆ. ಆರ್. ಹಾಗೂ ದಯಾನಂದ ತೊಕ್ಕೊಟ್ಟು, ಮಂಡಲ ಕೋಶಾಕಾರಿ ಸುಮಲತ ಕೊಣಾಜೆ,ಚಂದ್ರಶೇಖರ್ ಶೆಟ್ಟಿ ಮರಿಕ್ಕಳ,ಸೇವಾ ಭಾರತಿ ಸ್ವಯಂಸೇವಕ, ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು ಉದಯಶಂಕರ್ ಶೆಟ್ಟಿ ಬಲೆತ್ತೋಡು, ಮುರಳೀಧರ್ ಕೊಣಾಜೆ ಯುವ ಮೋರ್ಛಾ ಅಧ್ಯಕ್ಷರು ಸುಧಾಕರ ಗಟ್ಟಿ ಹಾಗೂ ರಮೇಶ್ ಬೆದ್ರೊಳಿಕೆ ಜೊತೆಗಿದ್ದರು.

ಪ್ರಾದೇಶಿಕ ವಾರ್ತೆಗಳು

ಹಿರಿಯ ನಾಗರಿಕರಿಗಾಗಿ ಬೋಳೂರಿನಲ್ಲಿ “ಹಾಡಾಡೋಣ ಬನ್ನಿ” ಕಾರ್ಯಕ್ರಮ

ಮಂಗಳೂರು: ಖ್ಯಾತ ಸಮಾಜ ಸೇವಕಿ ಮೀರಾ ಪಡಿಯಾರ್ ಅವರ ಸಾರಥ್ಯದಲ್ಲಿ ಹಿರಿಯ ನಾಗರಿಕರಿಗೆಂದೇ ವಿಶೇಷವಾಗಿ “ಹಾಡಾಡೋಣ ಬನ್ನಿ” ಎಂಬ ಕೆರೋಕೆ ಕಾರ್ಯಕ್ರಮ ನಡೆಯಲಿದೆ. “ನಾದಸಂಗಮ” ಸಂಸ್ಥೆಯ ವತಿಯಿಂದ ಜುಲೈ 11ರಂದು ಶನಿವಾರ ಬೆಳಗ್ಗೆ 9:30 ರಿಂದ ಸಂಜೆ 5:30ರ ವರೆಗೆ ಬೋಳೂರಿನ ಜಾರಂದಾಯ ದೈವಸ್ಥಾನದ ಹತ್ತಿರ ಇರುವ ಕೆರೋಕೆ ಕ್ಲಬ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.ಮೀರಾ ಪಡಿಯಾರ್ ಅವರ ಸಾರಥ್ಯದ “ನಾದಸಂಗಮ” ಸಂಸ್ಥೆಯು ಸತತವಾಗಿ, ಸಂಗೀತಾಸಕ್ತರಿಗಾಗಿ, ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ. ಖ್ಯಾತ ಗಾಯಕ ಎಸ್ಪಿಬಿ ಅವರ ಪುಣ್ಯ ಸ್ಮರಣೆಯಂದು ಸತತ 12 ಗಂಟೆಗಳ ಕಾಲ ವಿಶೇಷ ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟಿತ್ತು. ಆನಂತರದ ದಿನಗಳಲ್ಲಿ ಪಿಬಿ ಶ್ರೀನಿವಾಸ್-ರಾಜಕುಮಾರ್ ಜೋಡಿಯ ವಿಶೇಷ ಹಾಡುಗಳ ಗಾಯನ ಕಾರ್ಯಕ್ರಮವನ್ನು ವಿವಿಧ ಗಾಯಕರ ಮೂಲಕ ನೆನಪಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಗಳ ಯಶಸ್ಸಿನಿಂದ ಉತ್ತೇಜಿತರಾಗಿ ಪಿ ಸುಶೀಲ-ಎಸ್ ಜಾನಕಿ ಇವರಿಬ್ಬರ ಯಶಸ್ವಿ ಹಾಗೂ ಸುಮಧುರ ಹಾಡುಗಳನ್ನು ನೆನಪಿಸುವ ಮತ್ತೊಂದು ಸಂಗೀತಸಂಜೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ತದನಂತರ ಮಹಿಳಾ ಗಾಯಕಿಯರಿಗೆಂದೇ ವಿಶೇಷವಾಗಿ ಒಂದು ಕೆರೋಕೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆನಂತರ ಕೇವಲ ಪುರುಷ ಹವ್ಯಾಸಿ ಗಾಯಕರಿಗಾಗಿಯೇ ಮತ್ತೊಂದು ಕಾರ್ಯಕ್ರಮವನ್ನು ಆಯೋಜಿಸಿತ್ತು.ಇದೀಗ ನಾದಸಂಗಮ ಸಂಸ್ಥೆಯು ಹಿರಿಯ ನಾಗರಿಕರಿಗಾಗಿ ಒಂದು ವಿಶೇಷವಾದ “ಹಾಡಾಡೋಣ ಬನ್ನಿ” ಎಂಬ ಕೆರೋಕೆ ಗಾಯನ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಆಹ್ವಾನಿತರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ಒಟ್ಟು 50 ಜನ ಹಿರಿಯ ನಾಗರಿಕರು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಒಟ್ಟು 100 ಹಾಡುಗಳನ್ನು 50 ಮಂದಿ ಸದಸ್ಯರು ಹಾಡಲಿದ್ದಾರೆ.ಗೋಪಿನಾಥ ಕಾಮತ್ ಮತ್ತು ಮಮತಾ ಶೆಟ್ಟಿ ಅವರು ಕಾರ್ಯಕ್ರಮದ ಆಯೋಜನೆಯಲ್ಲಿ ಸಹಕರಿಸಿದ್ದಾರೆ. ಅಲ್ಲದೆ ಎಲ್ಲಾ ಸಂಗೀತ ಹಾಡುಗಾರರ ಸಹಕಾರವೂ ಇದೆ ಎಂದು ಮೀರಾ ಪಡಿಯಾರ್ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಪತ್ರಿಕಾ ವಿತರಕರಿಗೆ ಸನ್ಮಾನಪತ್ರಿಕೆಗಳು ಪತ್ರಿಕಾಧರ್ಮ ಪಾಲಿಸಲಿ- ಕೆ.ಎನ್. ಗಂಗಾಧರ ಆಳ್ವ

ಬಂಟ್ವಾಳ ಜು.1ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೋದ್ಯಮವು ಜನಾಭಿಪ್ರಾಯದೊಂದಿಗೆ ಸರಕಾರವು ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಸರಕಾರದ ಕಾನೂನು ಯೋಜನೆಗಳನ್ನು ಜನರಿಗೆ ತಲಪಿಸಲು ಪ್ರತಿಕೆಗಳು ಸಹಕಾರಿಯಾಗಿವೆ. ಸತ್ಯವನ್ನು ಜನರಿಗೆ ತಲುಪಿಸಿ ಅನ್ಯಾಯವನ್ನು ಪ್ರಶ್ನಿಸುವ ಮೂಲಕ ಪತ್ರಿಕೆಗಳು ಪತ್ರಿಕಾ ಧರ್ಮವನ್ನು ಪಾಲಿಸಬೇಕು. ಭ್ರಷ್ಟಚಾರವನ್ನು ತೊಲಗಿಸಲು ಪತ್ರಿಕಾ ಮಾಧ್ಯಮವು ಪ್ರಯತ್ನಿಸಬೇಕು ಎಂದು ಬಂಟ್ವಾಳ ಎಸ್.ವಿ.ಎಸ್. ದೇವಳ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ ಹೇಳಿದರು.ಅವರು ಕಾಲೇಜಿನ ಕನ್ನಡ ಸಂಘದ ವತಿಯಿಂದ ಏರ್ಪಡಿಸಲಾದ ಪತ್ರಿಕಾ ದಿನಾಚರಣೆಯ ಸಂದರ್ಬದಲ್ಲಿ ಕಳೆದ 40 ವರ್ಷಗಳಿಂದ ಪತ್ರಿಕಾ ವಿತರಕರಾಗಿ ಕಾರ್ಯನಿರ್ವಹಿಸುತ್ತಿರುವ ಬಿ.ಸಿ.ರೋಡಿನ ಮಾಧವರನ್ನು ಸನ್ಮಾನಿಸಿ ಮಾತನಾಡಿದರು.ಮುಖ್ಯ ಅತಿಥಿಯಾಗಿ ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ಪತ್ರಿಕಾ ದಿನಾಚರಣೆ ಮತ್ತು ಮಂಗಳೂರು ಸಮಾಚಾರ ಪತ್ರಿಕೆಯಿಂದ ಆರಂಭಗೊಂಡು ಕರ್ನಾಟಕದಲ್ಲಿ ಪತ್ರಿಕೋದ್ಯಮದ ಬೆಳವಣಿಗೆ ಬಗ್ಗೆ ಉಪನ್ಯಾಸ ನೀಡಿದರು. ಪತ್ರಿಕಾ ವಿತರಕರು ಮುಂಜಾನೆ ಮನೆ ಬಾಗಿಲಿಗೆ ಪತ್ರಿಕೆಯನ್ನು ಹಾಕುವ ಮೂಲಕ ಮನೆಮನೆಗೆ ಲೋಕದ ಸುದ್ದಿಯನ್ನು ತಲುಪಿಸುತ್ತಾರೆ. ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಕರ್ತರ ಹಾಗೂ ಪತ್ರಿಕಾ ಏಜೆಂಟರ ಪಾತ್ರವೂ ಮಹತ್ತರವಾದುದು ಎಂದು ಅಭಿನಂದಿಸಿದ ಅವರು ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದರು.ಉಪನ್ಯಾಸಕರಾದ ವೆಂಕಟೇಶ ನಾಯಕ್,ಮಂಜುನಾಥ ಶೆಣೈ ,ಅಲೆನ್ ಡೊನಾಲ್ಡ್, ವಿಭಾನಿ ಉಪಸ್ಥಿತರಿದ್ದರು.ವಿದ್ಯಾರ್ಥಿ ನಾಯಕಿ ವಿಭಾ ಪುತ್ರನ್ ಸ್ವಾಗತಿಸಿ, ಉಪನ್ಯಾಸಕಿ ಯಜ್ಞೇಶ್ವರಿ ನಿರೂಪಿಸಿ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಮಂಗಳೂರ ಸಮಾಚಾರದ ಕೊಡುಗೆ ಚಾರಿತ್ರಿಕ – ಎಂ.ಎ‌.ಗಫೂರ್. ಪತ್ರಿಕಾ ದಿನಾಚರಣೆ- ಮೊಗ್ಲಿಂಗ್ ಸ್ಮರಣೆ

ಮಂಗಳೂರು: ಕನ್ನಡ ಮಾಧ್ಯಮ ಕ್ಷೇತ್ರಕ್ಕೆ ಬುನಾದಿ ಹಾಕಿದ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ’ ಹಾಗೂ ಆ ಪತ್ರಿಕೆಯ ಸಂಪಾದಕರಾದ ಹರ್ಮನ್ ಮೊಗ್ಲಿಂಗ್ ಅವರ ಕೊಡುಗೆ ಚಾರಿತ್ರಿಕ ವಾದದ್ದು ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಘಟಕದ ವತಿಯಿಂದ ಮಂಗಳೂರಿನ ಬಲ್ಮಠದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಆವರಣದಲ್ಲಿ ಪತ್ರಿಕಾ ದಿನಾಚರಣೆ ಪ್ರಯುಕ್ತ ಡಾ.‌ಹರ್ಮನ್ ಮೊಗ್ಲಿಂಗ್ ಪ್ರತಿಮೆಗೆ ಹಾರಾರ್ಪಣೆ ಮಾಡಿ ಅವರು ಮಾತನಾಡಿದರು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ಮೊಗ್ಲಿಂಗ್ ಅವರು ಜೈಮಿನಿ ಭಾರತ, ಬಸವ ಪುರಾಣ, ದಾಸ ಸಾಹಿತ್ಯವನ್ನು ಸಂಪಾದಿಸಿ ಪ್ರಕಟಿಸುವ ಮೂಲಕ ಮಾಧ್ಯಮ ಕ್ಷೇತ್ರದ ಜೊತೆಗೆ ಕನ್ನಡ ಸಾಹಿತ್ಯ ಲೋಕಕ್ಕೆ ಅಪೂರ್ವ ಕೊಡುಗೆಗಳನ್ನು ನೀಡಿದವರು ಎಂದು ಹೇಳಿದರು.ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಂ.ವಾಟ್ಸನ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ , ಕೆಜೆಯು ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ದ.ಕ.ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಕೆಜೆಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿಪ್ರಕಾಶ್ ಪುಣಚ, ಕೋಶಾಧಿಕಾರಿಕೆನ್ಯೂಟ್ ಪಿಂಟೊ , ಪತ್ರಕರ್ತರಾದ ಭಾಸ್ಕರ ರೈ ಕಟ್ಟ, ಡೊನಾಲ್ಡ್‌ ಪಿರೇರಾ, ಎಡ್ವರ್ಡ್ ಲೋಬೊ, ಶಾರುಖ್, ಹಮೀದ್ ವಿಟ್ಲ , ಥಿಯೋಲೋಜಿಕಲ್ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕೆಜೆಯು ಜಿಲ್ಲಾಧ್ಯಕ್ಷ‌ ಈಶ್ವರ ವಾರಣಾಶಿ ಸ್ವಾಗತಿಸಿ, ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಖ್ಯಾತ ಗಾಯಕ, ಸವ್ಯಸಾಚಿ ಕಲಾವಿದ, ನಟ, ಸಮಾಜ ಸೇವಕ, ಸರಕಾರಿ ಅಧಿಕಾರಿ ನಾಗೇಂದ್ರ ಅವರಿಗೆ ಪ್ರೈಡ್ ಆಫ್ ಇಂಡಿಯಾ ಪ್ರಶಸ್ತಿ ಪ್ರದಾನ

ಇಂಟರ್ನ್ಯಾಷನಲ್ ಹ್ಯೂಮನ್ ಡೆವಲಪ್ಮೆಂಟ್ ಕೌನ್ಸಿಲ್(R), ದೆಹಲಿ (International human development council, New Delhi)  ಇದರ ವತಿಯಿಂದ ದಿನಾಂಕ 24-06-2026ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕಲೆ ಹಾಗೂ ಸಮಾಜ ಸೇವೆ ಯನ್ನು ಗುರುತಿಸಿ ಪ್ರತಿಭಾವಂತ ಸರಕಾರಿ ಅಧಿಕಾರಿ ನಾಗೇಂದ್ರ ಅವರಿಗೆ  ಪ್ರೈಡ್ ಆಫ್ ಇಂಡಿಯಾ (*pride of INDIA* )  ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈಗಾಗಲೇ ನಾಗೇಂದ್ರ ಇವರಿಗೆ ವಿಶ್ವೇಶ್ವರ ಅಂತರಾಷ್ಟ್ರೀಯ ಪ್ರಶಸ್ತಿ, ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ, ಒಂದು ಬಾರಿ ರಾಜ್ಯ ಪ್ರಶಸ್ತಿ, ಹಾಗೂ ಜಿಲ್ಲಾ ಮಟ್ಟದಲ್ಲಿ ರೋಟರಿ ಇಂಟರ್ನ್ಯಾಷನಲ್ ವತಿಯಿಂದ  ಲೈಫ್ ಟೈಮ್ ಅಚೀವ್ಮೆಂಟ್ ಪ್ರಶಸ್ತಿ, ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ ಇನ್ನು ಮುಂತಾದವುಗಳು ದೊರೆತಿರುವುದು ಅವರ ಗಮನಾರ್ಹ ಸಾಧನೆಯಗಿದೆ. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಮಹೇಶ್ ಗೌಡ,ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ್, ರಾಷ್ಟ್ರೀಯ ಜಾನಪದ ಗಾಯಕಿಯಾದ ಡಾ. ಪದ್ಮಾವತಿ, ಗೌರವಾನ್ವಿತ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಳದಲೇ, ಬೆಂಗಳೂರು ಸಿಟಿಯ  ಡೆಪ್ಯುಟಿ ಪೊಲೀಸ್ ಕಮಿಷನರ್  ಹೆಚ್. ಮಂಜುನಾಥ್ ಬಾಬು,ಜಿಕೆವಿಕೆ ಅಗ್ರಿಕಲ್ಚರ್ ಸೈನ್ಸ್ ಯುನಿವರ್ಸಿಟಿಯ ಮಾಜಿ ಉಪಕುಲಪತಿಗಳಾದ ಡಾ. ನಾರಾಯಣಗೌಡ, ಚಲನಚಿತ್ರ ನಟಿ ಸಂಯುಕ್ತ ಹೊರನಾಡು, ಸಾಗರ ಗಂಗೋತ್ರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಶಿಕಲಾ ಹಾಗೂ ಇನ್ನಿತರ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತುಈ ಬಗ್ಗೆ ಡಾ.ರಾಜಕುಮಾರ್ ಅಭಿಮಾನಿಗಳ ವೇದಿಕೆ ಬಳಗದಿಂದ, ರೋಟರಿ ಸಂಸ್ಥೆಯ ಸದಸ್ಯರುಗಳಿಂದ, ಇವರ ಸ್ನೇಹಿತರಿಂದ ಹಾಗೂ ಪ್ರೀತಿಯ ಅಭಿಮಾನಿಗಳಿಂದ ಪ್ರಶಂಸೆ, ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ಪ್ರಾದೇಶಿಕ ವಾರ್ತೆಗಳು

ರೋಹನ್ ಕಾರ್ಪೋರೇಶನ್ ಕಾರ್ಯಕ್ರಮದಲ್ಲಿ ಬಾಲಿವುಡ್ ಬಾದ್‍ಷಾ ಜಾದೂ! ಮಂಗಳೂರಿನ ನನ್ನ ನೆನಪುಗಳು ಸದಾ ತಾಜಾ: ಶಾರುಖ್ ಖಾನ್ ಮೆಲುಕು.

ಮಂಗಳೂರು, ಜೂ. 25: ಮಂಗಳೂರು ನನ್ನ ಬಾಲ್ಯದ ಊರಿದು. ಮತ್ತೆ ಇಲ್ಲಿಗೆ ಬರುವ ಮೂಲಕ ನನ್ನ ನೆನಪುಗಳು ತಾಜಾ ಆಗಿವೆ, ಭಗವಂತ ಕಲ್ಪಿಸಿದರೆ ಇನ್ನಷ್ಟು ಇಲ್ಲಿನ ನೆನಪುಗಳ ಮರು ಸೃಷ್ಟಿಸುವೆ.ಹೀಗೆಂದದ್ದು ಬಾಲಿವುಡ್ ಬಾದ್‍ಷಾ ಖ್ಯಾತಿಯ ಶಾರುಖ್ ಖಾನ್.ನಗರದ ಖ್ಯಾತ ನಿರ್ಮಾಣ ಸಂಸ್ಥೆ ರೋಹನ್ ಕಾರ್ಪೋರೇಶನ್ ಅಡ್ಯಾರ್ ಗಾರ್ಡನ್‍ನಲ್ಲಿ ಜೂನ್ 25ರ ಗುರುವಾರ ಆಯೋಜಿಸಿದ್ದ ಆ್ಯನ್ ಈವ್ನಿಂಗ್ ವಿದ್ ಶಾರುಖ್ ಖಾನ್ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಪಾಲ್ಗೊಂಡು, ಮಾತನಾಡಿದರು. ಚಿಕ್ಕಂದಿನಲ್ಲಿ ಕೆಲ ಕಾಲ ಇಲ್ಲಿದ್ದರೂ ಕಿಂಗ್ ಖಾನ್ ಆದ ಬಳಿಕ ಮೊದಲ ಬಾರಿಗೆ ಭೇಟಿ ನೀಡಿದ ಶಾರುಖ್, ಮಂಗಳೂರಿನ ಅಭಿಮಾನಿಗಳ ಪ್ರೀತಿ, ಅಭಿಮಾನಕ್ಕೆ ಫಿದಾ ಆದರು.ಮಂಗಳೂರು ಸುಂದರ ನಗರ, ನಾನು ವಿಮಾನ ನಿಲ್ದಾಣದಲ್ಲಿ ಇಳಿದು, ಈ ವೇದಿಕೆಗೆ ಬರುವವರೆಗೂ ನೀವು ಪ್ರೀತಿ ತೋರಿದ್ದೀರಿ, ರೋಹನ್ ಕಾರ್ಪೋರೇಶನ್ ನವರು ಸುರತ್ಕಲ್ ಕಡಲ ಕಿನಾರೆಯಲ್ಲಿ ಮರೀನಾ ಒನ್ ಯೋಜನೆಯನ್ನು ರೂಪಿಸುತ್ತಿರುವುದು ಮತ್ತಷ್ಟು ಖುಷಿ ತಂದಿದೆ. ಈ ಊರಿನಲ್ಲಿ ಕೆಲ ಸಮಯ ಕಳೆಯುವುದು, ನೀರು ದೋಸೆ ಸವಿಯುವುದು ಇಷ್ಟ ಎಂದರು. ರೋಹನ್ ಮರೀನಾ ಅನಾವರಣಈ ಸಂದರ್ಭದಲ್ಲಿ ರೋಹನ್ ಕಾರ್ಪೋರೇಶನ್ ಐಷಾರಾಮಿ ಸಮುದ್ರ ತೀರ ವಸತಿ ಯೋಜನೆ ‘ಮರೀನಾ ಒನ್’ ಅನ್ನು ಶಾರುಖ್ ಖಾನ್ ಅನಾವರಣಗೊಳಿಸಿದರು.ಈ ವೇಳೆ ಮಾತನಾಡಿದ ರೋಹನ್ ಕಾರ್ಪೋರೇಶನ್ ಪ್ರವರ್ತಕ ಡಾ. ರೋಹನ್ ಮೊಂತೇರೊ, ಶಾರುಖ್ ಖಾನ್ ಅವರ ಜೀವನ ಪಯಣವು ಲಕ್ಷಾಂತರ ಜನರಿಗೆ ಪ್ರೇರಣೆಯ ಮೂಲ. ಶಾರುಖ್ ಖಾನ್ ಅವರನ್ನು ಮಂಗಳೂರಿಗೆ ಕರೆ ತರುವ ಕನಸು ಇಂದು ನಿಜವಾಗಿದೆ ಎಂದರು.ರೋಹನ್ ಕಾರ್ಪೊರೇಷನ್ ನಿರ್ದೇಶಕ ಡಿಯೋನ್ ಮೊಂತೇರೊ ಮಾತನಾಡಿ, ಮಂಗಳೂರಿನ ಜನತೆಗೆ ವಿಶ್ವಮಟ್ಟದ ಅನುಭವ ನೀಡಲು ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಜನರಿಂದ ದೊರೆತ ಅಭೂತಪೂರ್ವ ಸ್ಪಂದನೆ ಕಾರ್ಯಕ್ರಮವನ್ನು ಸಂಸ್ಥೆಯ ಪಯಣದ ಅತ್ಯಂತ ಸ್ಮರಣೀಯ ಘಟ್ಟವನ್ನಾಗಿ ರೂಪಿಸಿದೆ ಎಂದರು. ರೋಹನ್ ಮೊಂತೇರೊ ಅವರ ಪತ್ನಿ ಲವೀಟಾ, ಮಗಳು ರಿಯಾ ಮೊಂತೇರೊ ಉಪಸ್ಥಿತರಿದರು. ಸಾಹಿಲ್ ಜಹೀರ್ ಹಾಗೂ ಡೋನಾ ಸೆಬಾಸ್ಟಿಯನ್ ನಿರೂಪಿಸಿದರು.ಕಾದರೂ ಖುಷಿ ಪಟ್ಟ ಅಭಿಮಾನಿಗಳು :ಜೂನ್ 25ರ ಸಂಜೆ 6ಕ್ಕೆ ಶಾರುಖ್ ಬರುವುದು ನಿಗದಿಯಾಗಿದ್ದರೂ ಅಪರಾಹ್ನ 3 ಗಂಟೆಗೇ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಸಭಾಂಗಣಕ್ಕೆ ಆಗಮಿಸಿದರು. ಕಾರ್ಯಕ್ರಮಕ್ಕೆ ಶಾರುಖ್ ಆಗಮಿಸುವಾಗ ರಾತ್ರಿ 8 ಗಂಟೆಯಾಗಿದ್ದರೂ ಅಭಿಮಾನಿಗಳು ಕಾದಿದ್ದರು. ಪೊಲೀಸರು, ಖಾಸಗಿ ಭದ್ರತಾ ಸಿಬಂದಿ ಸಹಿತ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕೆ ಮೊದಲು ಸಂಜೆ ಐದರ ಸುಮಾರಿಗೆ ಮುಂಬಯಿಯಿಂದ ಖಾಸಗಿ ವಿಮಾನದಲ್ಲಿ ಆಗಮಿಸಿದ ಶಾರುಖ್ ಖಾನ್ ಅವರನ್ನು ವಿಮಾನನಿಲ್ದಾಣದಲ್ಲಿ ಅಭಿಮಾನಿಗಳು ಹರ್ಷೋದ್ಗಾರದೊಂದಿಗೆ ಸ್ವಾಗತಿಸಿದರು, cಖುಷ್ ಆದ ಕಿಂಗ್ ಖಾನ್: ಶಾರುಖ್ ತನ್ನ ಅಭಿಮಾನಿಗಳ ಕಡೆಗೆ ಕೈಬೀಸಿ ಫೈಯಿಂಗ್ ಕಿಸ್ ಹಾರಿಸಿದರು.ನಮಸ್ಕಾರ ಕುಡ್ಲ.. ಎಂಚ ಉಲ್ಲರ್ ಎನ್ನುತ್ತಾ ಮಾತು ಆರಂಭಿಸಿದ ಶಾರುಖ್ ಪ್ರೀತಿ ಉಪ್ಪಡ್ ಎನ್ನುತ್ತಾ ವಿದಾಯ ಕೋರಿದರು. ನನ್ನ ಅಜ್ಜ ಮಂಗಳೂರು ಬಂದರಿನಲ್ಲಿ ಎಂಜಿನಿಯರ್ ಆಗಿದ್ದವರು. ಆ ಬಗ್ಗೆ ನನಗೆ ಹೆಚ್ಚು ನೆನಪುಗಳಿಲ್ಲ. ಆದರೆ ಇಲ್ಲಿನ ಕೆಲವು ಫೋಟೋ ಗಳು ನನ್ನೊಂದಿಗಿವೆ ಎನ್ನುತ್ತಾ ಹಳೆಯ ಫೋಟೋಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಿದಾಗ ಜನ ಚಪ್ಪಾಳೆ ತಟ್ಟಿ ಖುಷಿಪಟ್ಟರು.ನಿಮಗೆ ಸಂವಾದ ನಡೆಸುವಾಗ ಬೋರ್ ಎನ್ನಿಸಿದರೆ ಹೇಳಿ, ಮನರಂಜಿಸುವೆ ಎಂದ ಶಾರುಖ್ ಚಮ್ಮಕ್ ಚಲ್ಲೋ… ತುಜೆ ದೇಖಾ ತೋ ಯೇ ಜಾನಾ ಸನಮ್ ಹಾಡಿಗೆ ಹೆಜ್ಜೆ ಹಾಕಿದ್ದನ್ನು ಸಹಸ್ರಾರು ಮಂದಿ ಅಭಿಮಾನಿಗಳು ಕಣ್ತುಂಬಿಕೊಂಡದ್ದಲ್ಲದೆ ಸ್ಮಾರ್ಟ್ ಫೋನ್ ಮೆಮೊರಿಗೂ ಸೇರಿಸಿಕೊಂಡರು.ಹುಚ್ಚೆಬ್ಬಿಸಿದ ಸಲ್ಮಾನ್ ಅಲಿ:ಇಂಡಿಯನ್ ಐಡೋಲ್ ಖ್ಯಾತಿಯ ಗಾಯಕ ಸಲ್ಮಾನ್ ಅಲಿ, ಶಾರುಖ್ ಅವರ ಸಿನೆಮಾಗಳ ಛಯ್ಯ ಛಯ್ಯ, ಕೋಯಿ ಮಿಲ್ ಗಯಾ, ತುಮ್ಸ್ ಮಿಲ್ ಕೆ ದಿಲ್.. ಮೊದಲಾದ ಹಾಡುಗಳಿಗೆ ಜನ ಕುಣಿದು ಸಂಭ್ರಮಿಸಿದರು.‘ಮಂಗಳೂರು ತನ್ನದೇ ಆದ ಸಂಸ್ಕೃತಿಯಿಂದ ಎಲ್ಲರ ಗಮನ ಸೆಳೆಯುತ್ತಿದೆ, ಮುಂಬಯಿನಲ್ಲೂ ಬಹಳ ಮಂದಿ ಮಂಗಳೂರಿನವರಿದ್ದಾರೆ. ನಾನು ಆಗಾಗ ಮುಂಬಯಿಯಿಂದ ಇಲ್ಲಿಗೆ ಬರಲು ಬಯಸುವೆ.’-ಶಾರುಖ್ ಖಾನ್, ಹಿಂದಿ ಚಿತ್ರ ನಟಕುಡ್ಲದಲ್ಲಿ ಶಿಕ್ಷಕನಾಗಿರುತ್ತಿದ್ದೆ!ಕಾರ್ಯಕ್ರಮದ ಮಧ್ಯೆ ವಿಶೇಷ ಸಂವಾದದಲ್ಲೂ ಶಾರುಖ್ ಪಾಲ್ಗೊಂಡರು. ಒಂದು ವೇಳೆ ನೀವು ಬಾಲಿವುಡ್‍ಗೆ ಹೋಗದಿರುತ್ತಿದ್ದರೆ ಏನಾಗಿರುತ್ತಿದ್ದಿರಿ ಎಂಬ ಪ್ರಶ್ನೆಗೆ, ಬಹುಶಃ ಇಲ್ಲಿನ ಸಂತ ಅಲೋಶಿಯಸ್ ಅಥವಾ ಮೌಂಟ್ ಕಾರ್ಮೆಲ್ ಅಥವಾ ಶಾರದಾ ಕಾಲೇಜಿನಲ್ಲಿ ಶಿಕ್ಷಕನಾಗಿರುತ್ತಿದ್ದೆ ಎಂದರು. ಯುವಜನತೆ ದೊಡ್ಡ ಕನಸು ಕಾಣಬೇಕು, ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು ಹಾಗೂ ಗುರಿ ಸಾಧನೆಗಾಗಿ ಸತತ ಶ್ರಮಿಸಬೇಕು ಎಂದರು.ಶಾರುಖ್ ಖಾನ್ ಅವರ ಜೀವನ ಪಯಣವು ಲಕ್ಷಾಂತರ ಜನರಿಗೆ ಪ್ರೇರಣೆಯ ಮೂಲ. ಅವರನ್ನು ಇಲ್ಲಿಗೆ ಕರೆತರುವ ಕನಸು ನನಸಾಗಿದೆ ಎಂದು ರೋಹನ್ ಕಾರ್ಪೋರೇಶನ್ ಸಂಸ್ಥೆಯ ಪ್ರವರ್ತಕ ಡಾ. ರೋಹನ್ ಮೊಂತೆರೋ ಅವರು ನುಡಿದರು. ಶಾರುಖ್ ಖಾನ್ ಅವರನ್ನು ಮಂಗಳೂರಿಗೆ ಕರೆಸುವುದರ ಮೂಲಕ ರೋಹನ್ ಕಾರ್ಪೋರೇಶನ್ ಸಂಸ್ಥೆ ಕಾರ್ಪೊರೇಟ್ ಜಗತ್ತಿನಲ್ಲಿ ಹೊಸ ದಾಖಲೆ ಬರೆದಿದೆ. ಈ ಕಾರ್ಯಕ್ರಮ ಜನ ಮೆಚ್ಚುಗೆ ಪಡೆದಿದೆ

ಪ್ರಾದೇಶಿಕ ವಾರ್ತೆಗಳು

ಜುಲೈ 5ರಂದು ಕಂಕನಾಡಿ ಎಂಪೋರಿಯಂ ಕಾಂಪ್ಲೆಕ್ಸ್ ನಲ್ಲಿ ಲಯನ್ ಅನಿಲ್ ದಾಸ್ ಸಾರಥ್ಯದ ಅಂತಾರಾಷ್ಟ್ರೀಯ ಖ್ಯಾತಿಯ ಪ್ರತಿಷ್ಟಿತ ಮತ್ತು ಅಪಾರ ಜನ ಮೆಚ್ಚುಗೆ ಪಡೆದಿರುವ ಜಿಲ್ಲೆಯ ಹೆಸರಾಂತ ಸೇವಾ ಸಂಸ್ಥೆ ದಾಸ್ ಪ್ರಮೋಷನ್ಸ್ ಹೋಂ ನರ್ಸಿಂಗ್ ಕೇರ್ ಇದರ ನವೀಕೃತ ಪ್ರಧಾನ ಕಚೇರಿ ಉದ್ಘಾಟನೆ

ಮಂಗಳೂರು: ರಾಜ್ಯದಾದ್ಯoತ ಸಹಸ್ರಾರು ಮಂದಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿರುವ ಮಂಗಳೂರಿನ ಹೆಸರಾಂತ ನಿಸ್ವಾರ್ಥ ಸಮಾಜ ಸೇವಾ ಮನೋಭಾವದ ಉದ್ಯಮಿ ಲಯನ್ ಅನಿಲ್ ದಾಸ್ ಸಾರಥ್ಯದ ಅಂತಾರಾಷ್ಟ್ರೀಯ ಖ್ಯಾತಿಯ ಪ್ರತಿಷ್ಟಿತ ಮತ್ತು ಅಪಾರ ಜನ ಮೆಚ್ಚುಗೆ ಪಡೆದಿರುವ ಸೇವಾ ಸಂಸ್ಥೆ ದಾಸ್ ಪ್ರಮೋಷನ್ಸ್ ಹೋಂ ನರ್ಸಿಂಗ್ ಕೇರ್ ಇದರ ನವೀಕೃತ ಪ್ರಧಾನ ಕಚೇರಿಯ ಉದ್ಘಾಟನೆಯು ಜು. 5ರಂದು ಬೆಳಿಗ್ಗೆ 11-30ಕ್ಕೆ ಕಂಕನಾಡಿಯ ಎಂಪೋರಿಯಂ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ. ಶ್ರೀ ಕ್ಷೇತ್ರ ಕಟೀಲಿನ ಕಮಲಾದೇವಿ ಪ್ರಸಾದ್ ಅಸ್ರಣ್ಣರು ದೀಪ ಪ್ರಜ್ವಲನೆ ಮಾಡಲಿದ್ದು,ಎಂಪಿ ಕ್ಯಾ. ಬ್ರಿಜೇಶ್ ಚೌಟ ಅವರು ನಾಮಫಲಕ ಅನಾವರಣ ಮಾಡಲಿದ್ದಾರೆ. ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ನವೀಕೃತ ಕೇಂದ್ರ ಕಚೇರಿಯ ಉದ್ಘಾಟನೆ ಮಾಡಲಿದ್ದಾರೆ. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ವೈ. ಭರತ್ ಶೆಟ್ಟಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಡೈಜಿವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಕು. ಧನಲಕ್ಷ್ಮೀ ಅವರಿಗೆ ಸನ್ಮಾನ ಕಾರ್ಯಕ್ರಮವಿದ್ದು, ಹಿತೈಷಿಗಳು ಹಾಗೂ ಸಂಸ್ಥೆಯ ಅಭಿಮಾನಿಗಳು ಸಮಾರಂಭದಲ್ಲಿ ಭಾಗವಹಿಸುವಂತೆ ದಾಸ್ ಪ್ರಮೋಷನ್ಸ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಲ. ಅನಿಲ್‌ದಾಸ್ ಹಾಗೂ ಶ್ರೀಮತಿ ಆಶಾಲತಾ ದಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top