ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಸೈಂಟ್ ಜೋಸೆಫ್ ವಿಶ್ವವಿದ್ಯಾಲಯ – ಸಿಂಟ್ಯಾಕ್ಸಿಯಾ 2025 ಉದ್ಘಾಟನೆ.

ಸೇಂಟ್ ಜೋಸೆಫ್ ವಿಶ್ವವಿದ್ಯಾನಿಲಯದ ಮಾಹಿತಿ ತಂತ್ರಜ್ಞಾನ ಶಾಲೆಯ ಕಂಪ್ಯೂಟರ್ ಸೈನ್ಸ್ ವಿಭಾಗವು ಜನವರಿ 16, 2025 ರಂದು ಅಂತರ-ಕಾಲೇಜು ಉತ್ಸವವಾದ ಸಿಂಟ್ಯಾಕ್ಸಿಯಾ-2025ರ ಭವ್ಯ ಉದ್ಘಾಟನೆಯನ್ನು ಆಯೋಜಿಸಿತು. ಈ ಕಾರ್ಯಕ್ರಮವು ನವೀನತೆ, ಸಹಯೋಗ ಮತ್ತು ಪ್ರತಿಭೆಯ ಆಚರಣೆಗೆ ಒಂದು ವೇದಿಕೆಯಾಯಿತು.ಮುಖ್ಯ ಅತಿಥಿಯಾಗಿ ಗಣ್ಯ ತಂತ್ರಜ್ಞರಾದ ಶ್ರೀ ಅಶೋಕ್ ಪಿರೇರಾ ಅವರು ಈ ಸಂದರ್ಭದಲ್ಲಿ ಭಾಗವಹಿಸಿದರು. ಇದರೊಂದಿಗೆ ಫಾದರ್ ಡೆನ್ಸಿಲ್ ಲೋಬೋ ಎಸ್.ಜೆ., ಡಾ. ಬಿ.ಜಿ. ಪ್ರಶಾಂತಿ, ಡಾ. ನಿತ್ಯಾ ಬಿ, ಸೈಬರ್ನೆಟಿಕ್ಸ್ ಕೋರ್ಡಿನೇಟರ್ ಡಾ. ಶಶಿಕಲಾ ಮತ್ತು ಟೆಕ್ನೋಫೈಟ್ ಕೋರ್ಡಿನೇಟರ್ ಡಾ. ಮೃಣ್ಮಯೀ ಬಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮವು ಆಯೋಜಕ ಸಮಿತಿಯಿಂದ ಹೃತ್ಪೂರ್ವಕ ಸ್ವಾಗತ ಭಾಷಣದೊಂದಿಗೆ ಆರಂಭವಾಯಿತು. ಶ್ರೀ ಅಶೋಕ್ ಪಿರೇರಾ ಅವರು ಪ್ರೇರಣಾದಾಯಕ ಪ್ರಾಸ್ತಾವಿಕ ಭಾಷಣವನ್ನು ನೀಡಿ, ಉತ್ಪನ್ನ ಅಭಿವೃದ್ಧಿಯ ಮೇಲೆ ಮತ್ತು ಜನರನ್ನು ಸಂಪರ್ಕಿಸಲು, ಸಮುದಾಯಗಳನ್ನು ಕಂಡುಹಿಡಿಯಲು ಮತ್ತು ವ್ಯವಹಾರಗಳನ್ನು ಬೆಳೆಸಲು ಸಹಾಯ ಮಾಡುವ ತಂತ್ರಜ್ಞಾನಗಳನ್ನು ನಿರ್ಮಿಸುವ ಮೇಲೆ ಗಮನಹರಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಫಾದರ್ ಡೆನ್ಸಿಲ್ ಲೋಬೋ ಎಸ್.ಜೆ., ಅವರು ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ನೈತಿಕ ಜವಾಬ್ದಾರಿಯ ಪ್ರಾಮುಖ್ಯತೆಯನ್ನು ಒತ್ತಿಹೇಳುವ ವಿಚಾರವನ್ನು ಹಂಚಿಕೊಂಡರು. ಅವರು ವಿಮರ್ಶಾತ್ಮಕ ಚಿಂತನಾ ಕೌಶಲ್ಯಗಳನ್ನು ಬೆಳೆಸುವ ಪ್ರಾಮುಖ್ಯತೆಯನ್ನು ಸಹ ಉಲ್ಲೇಖಿಸಿದರು. ಕಾರ್ಯಕ್ರಮವು ಸಿಂಟ್ಯಾಕ್ಸಿಯಾ ಗೀತೆಯನ್ನು ಹಾಡುವುದರೊಂದಿಗೆ ಮುಕ್ತಾಯವಾಯಿತು, ಕಾರ್ಯಕ್ರಮವು “ಸ್ಯಿಂಟ್ಯಾಕ್ಸಿಯಾ ಗೀತೆ” ಹಾಡಿದ ನಂತರ ಕೊನೆಗೊಂಡಿತು, ಇದರಿಂದ ಎಲ್ಲರೂ ಹಬ್ಬದ ಆತ್ಮದಲ್ಲಿ ಏಕತೆಯಾಗಿದ್ದರು. ಘಟನಾವಳಿಯನ್ನು ಸುಗಮವಾಗಿ ಆಯೋಜಿಸಿದ ಸಂಘಟನಾ ಸಮಿತಿಯವರ ಕಾರ್ಯಪಟುತ್ವ ಹಾಗೂ ಪ್ರಮುಖ ಅತಿಥಿಗಳ ಸಮ್ಮುಖವನ್ನು ಕೃತಜ್ಞತೆ ಸಲ್ಲಿಸುವ ಪ್ರಾಮಾಣಿಕ ಧನ್ಯವಾದಗಳೊಂದಿಗೆ ಕಾರ್ಯಕ್ರಮ ಸುದೀರ್ಘಗೊಂಡಿತು. ಕ್ರಿಸ್ತು ಜಯಂತಿ ಕಾಲೇಜು ತಮ್ಮ ಪ್ರದರ್ಶನ ಮತ್ತು ಹಲವು ವಿಭಾಗಗಳಲ್ಲಿ ಯಶಸ್ಸನ್ನು ಸಾಧಿಸಿ ಅತ್ಯುಚ್ಚ ಪ್ರಶಸ್ತಿಯನ್ನು ಪಡೆದುಕೊಂಡಿತು.ಈ ಸಮಯದಲ್ಲಿ, ಸೈಬರ್‌ನೆಟಿಕ್ಸ್ ಸಂಘದ ಅಧ್ಯಕ್ಷ ಶಾಯರಿ ಲೋಬೋ ಮತ್ತು ಟೆಕ್ನೋಫೈಟ್ ಸಂಘದ ಅಧ್ಯಕ್ಷ ರೇವನ್ ಡಿಸೋಜಾ ಅವರು ಕಾರ್ಯಕ್ರಮದ ಸಂಘಟನೆಯ ಪ್ರಗತಿ ಮತ್ತು ಎದುರಿಸಿದ ಸವಾಲುಗಳನ್ನು ಹಂಚಿಕೊಂಡು, ಸ್ವಯಂ ಸಹಾಯಕ ಸಮಿತಿ ಸದಸ್ಯರ ಪರಿಶ್ರಮ ಮತ್ತು ಸಮರ್ಪಣೆಗೆ ಧನ್ಯವಾದಗಳನ್ನು ಸಲ್ಲಿಸಿದರು.

ಪ್ರಾದೇಶಿಕ ವಾರ್ತೆಗಳು

ಜನವರಿ22ರಂದು ಪುನರ್ ಪ್ರತಿಷ್ಠೆ ಹಾಗೂ ಕಲಶಾಭಿಷೇಕ

ಬಂಟ್ವಾಳ .ಜನವರಿ 22ರಂದು ಬೆಳಿಗ್ಗೆ 8.30ಕ್ಕೆ ಕಳ್ಳಿಗೆಗುತ್ತು ಧರ್ಮ ಚಾವಡಿಯಲ್ಲಿ ಕನಪಾಡಿತ್ತಾಯ ಮತ್ತು ಧೂಮಾವತಿ ಬಂಟ ದೈವಗಳ ನೂತನ ಮಂಚ ಪುನರ್ ಪ್ರತಿಷ್ಟೆ ಹಾಗೂ ಕಲಾಶಾಭಿಷೇಕ ನಡೆಯಲಿದೆ

ಪ್ರಾದೇಶಿಕ ವಾರ್ತೆಗಳು

ಏನೆಪೋಯ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನ ಆಚರಣೆ. ‘ಮಹಾತ್ಮರ ಬದುಕು ಇಂದಿನ ಪೀಳಿಗೆಗೆ ದಾರಿದೀಪ’: ಭಾಸ್ಕರ ರೈ ಕುಕ್ಕುವಳ್ಳಿ

ಮಂಗಳೂರು: ನಗರದ ಕೂಳೂರಿನಲ್ಲಿರುವ ಏನೆಪೋಯ ಶಿಕ್ಷಣ ಸಂಸ್ಥೆ ವೈಐಎಎಸ್ ಸಿಎಂ ಇದರ ಎನ್.ಎಸ್.ಎಸ್ 2,9,17 ಮತ್ತು 18ನೇ ಘಟಕಗಳು ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12ರಂದು ದೇಶಾದ್ಯಂತ ಆಚರಿಸುವ ರಾಷ್ಟ್ರೀಯ ಯುವ ದಿನಾಚರಣೆ ಸಲುವಾಗಿ (ದಿನಾಂಕ 15 ರಂದು) ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿತ್ತು. ವಿಶ್ರಾಂತ ಪ್ರಾಧ್ಯಾಪಕ ಮತ್ತು ಲೇಖಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.ಕೂಸು ‘ನಮ್ಮ ದೇಶದಲ್ಲಿ ಜನಿಸಿದ ಅನೇಕ ಮಹಾತ್ಮರು ಸ್ವದೇಶದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ತಮ್ಮ ವರ್ಚಸ್ಸಿನ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಪಾದಿಸಿ ಜಗತ್ಪ್ರಸಿದ್ಧರಾಗಿದ್ದಾರೆ. ಅಂತವರ ಬದುಕು ಇಂದಿನ ಪೀಳಿಗೆಗೆ ದಾರಿದೀಪವಾಗಿದೆ. ಸ್ವಾಮಿ ವಿವೇಕಾನಂದರು ತಮ್ಮ ಚಿಕಾಗೋ ಭಾಷಣದ ಮೂಲಕ ಪ್ರಾಚ್ಯದ ಮಹಾಪ್ರವಾದಿಯಾಗಿ ಹೊರಹೊಮ್ಮಿದ್ದಲ್ಲದೆ ‘ಏಳಿ ಎದ್ದೇಳಿ’ ಎಂಬ ಅಮೃತವಾಣಿಯ ಮೂಲಕ ಯುವಜನರಿಗೆ ಇಂದಿಗೂ ಸ್ಫೂರ್ತಿಯಾಗಿದ್ದಾರೆ’ ಎಂದು ಅವರು ನುಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಉಪಪ್ರಾಂಶುಪಾಲ ಡಾ. ಜೀವನ್ ರಾಜ್ ‘ಇಂದಿನ ಯುವಜನರು ಹಿರಿಯರ ಆದರ್ಶಗಳನ್ನು ಪಾಲಿಸಿ ಯೋಗ್ಯ ದಾರಿಯಲ್ಲಿ ನಡೆಯಬೇಕು’ ಎಂದು ಕಿವಿಮಾತು ಹೇಳಿದರು. ಪ್ರಾಂಶುಪಾಲ ಡಾ.ಅರುಣ್ ಎ.ಭಾಗವತ್ ಅವರ ನಿರ್ದೇಶನದಂತೆ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಭಾಸ್ಕರ ರೈ ಕುಕ್ಕುವಳ್ಳಿ ಬಹುಮಾನ ವಿತರಣೆ ಮಾಡಿದರು. ಎನ್.ಎಸ್.ಎಸ್ ಅಧಿಕಾರಿಗಳಾದ ಡಾ. ದಿನಕರ ಎಸ್. ಪಚ್ಚನಾಡಿ, ನಿಯಾಜ್ ಪಿ.ಮತ್ತು ಸುಮಂಗಲ ರಾವ್ ಉಪಸ್ಥಿತರಿದ್ದರು. ಡಾ.ಧನುಷ್ ಬಿ., ಡಾ.ಶರೀನಾ ಪಿ.,ನಾರಾಯಣ್ ಸುಕುಮಾರ್ ಮತ್ತು ಮೈಕ್ರೋಬಯಾಲಜಿ ಮತ್ತು ಫೋರೆನ್ಸಿಕ್ ಸಾಯನ್ಸ್ ವಿಭಾಗಗಳಿಂದ ಎನ್ಎಸ್ಎಸ್ ಘಟಕಗಳ ಸದಸ್ಯರಾದ ಸುಮಾರು 60 ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಪಪ್ರಾಂಶುಪಾಲರಾದ ಡಾ. ಶರೀನಾ ಪಿ. ನಾರಾಯಣ್ ಸುಕುಮಾರ್ ಶುಭ ಕೋರಿದರು.

ಪ್ರಾದೇಶಿಕ ವಾರ್ತೆಗಳು

ಜ.22ರಂದು ಕೃಷ್ಣ.ಜೆ.ಪಾಲೆಮಾರ್ ಪ್ರೆಸ್ ಕ್ಲಬ್ ಗೌರವ ಅತಿಥಿ

ಮಂಗಳೂರು: ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಜ.22ರಂದು ಬೆಳಗ್ಗೆ 11.30 ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯುವಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ, ಲ್ಯಾಂಡ್‌ಲಿಂಕ್ಸ್ ಸಂಸ್ಥೆಯ ಚೇರ್ಮನ್ ಮತ್ತು ಸಿಇಒ ಕೃಷ್ಣ.ಜೆ.ಪಾಲೆಮಾರ್ ಭಾಗವಹಿಸಿ ಸಂವಾದ ನಡೆಸಲಿದ್ದಾರೆ. ಸಾಹಿತಿ, ಕಲಾವಿದ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸುವರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ .ಆರ್. ಉಪಸ್ಥಿತರಿರುವರು ಎಂದು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ತುಳುಚಲನ ಚಿತ್ರ ನಿರ್ಮಾಪಕರ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ

ಮಂಗಳೂರು: ತುಳು ಚಲನ ಚಿತ್ರಗಳಿಗೆ ಸಬ್ಸಿಡಿ, ಪ್ರಾದೇಶಿಕ ಭಾಷಾ ಸಿನಿಮಾಗಳಿಗೆ ಪ್ರಶಸ್ತಿ, ಮಲ್ಟಿಫ್ಲೆಕ್ಸ್ ಗಳಲ್ಲಿ ಕನ್ನಡ ಸಿನಿಮಾಗಳಿಗೆ ನೀಡುವಂತೆ ಶೇಕಡಾವಾರು ಷೇರು, ತುಳುಚಲನಚಿತ್ರ ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಜಾಗ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್ ಧನರಾಜ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ ಸಂಘದ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಕೊಂಚಾಡಿ, ಸಚಿನ್ ಎ ಎಸ್, ಪ್ರೀತಂ ಸಾಗರ್ ಉಪಸ್ಥಿತರಿದ್ದರು.‌

ಪ್ರಾದೇಶಿಕ ವಾರ್ತೆಗಳು

ವೆಂಕಟ್ ಭಾರಧ್ವಜ್ ನಿರ್ದೇಶನದ ಹೈನ ಚಿತ್ರದ ಟ್ರೈಲರ್ ಬಿಡುಗಡೆ.

ಬೆಂಗಳೂರು: ಬಹುನಿರೀಕ್ಷೆಯ ಹೈನ ಚಿತ್ರವನ್ನು ಅಂತಾರಾಷ್ಟೀಯ ಖ್ಯಾತೀಯ ಪ್ರಶಸ್ತಿ ವಿಜೇತ,ಬಹುಭಾಷಾ ಚಿತ್ರ ನಿರ್ದೇಶಕ ವೆಂಕಟ್ ಭಾರಧ್ವಜ್ ನಿರ್ದೇಶಿಸಿದ್ದು, ಚಿತ್ರದ ಅಫೀಷಿಯಲ್ ಟ್ರೈಲರ್ ಬಿಡುಗಡೆಗೊಂಡಿದೆ. ಇದನ್ನು ನೋಡಲು ಈ ಕೆಳಗಿನ ಲಿಂಕ್ ಬಳಸಿ.

ಪ್ರಾದೇಶಿಕ ವಾರ್ತೆಗಳು

ಆರ್ ಜೆ ಪ್ರೊಡಕ್ಷನ್ ನಿರ್ಮಾಣದ ತುಳು ಸಿನಿಮಾಕ್ಕೆ ಮುಹೂರ್ತ

ಮಂಗಳೂರು: ಆರ್ ಜೆ ಪ್ರೊಡಕ್ಷನ್ ನಿರ್ಮಾಣದ ರೋಶನ್ ಆರ್ ಆಳ್ವ ನಿರ್ದೇಶನದ ನೂತನ ತುಳು ಚಿತ್ರದ ಮುಹೂರ್ತ ಸಮಾರಂಭ ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರಗಿತು. ಆರಂಭದಲ್ಲಿ ನ ಸ್ಕ್ರಿಪ್ಟ್ ಪೂಜೆಯು ನೆರವೇರಿತು. ಆರ್ ಜೆ ಪ್ರೊಡಕ್ಷನ್‌ನ ರಮೇಶ್ ಆಳ್ವ ತಿಂಬರ ಮತ್ತು ಜಯಶ್ರೀ ಆರ್ ಆಳ್ವ ತಿಂಬರ ಕ್ಯಾಮೆರಾ ಚಾಲನೆಗೈದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉದ್ಯಮಿಗಳಾದ ಸಂಜೀವ ಶೆಟ್ಟಿ ತಿಂಬರ ಮುಂಬೈ, ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ನಾರಾಯಣ ಹೆಗ್ಡೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉದ್ಯಮಿ ಸೀತಾರಾಮ ಶೆಟ್ಟಿ ತಿಂಬರ, ನೀರಜ್ ಶೆಟ್ಟಿ, ಮಂಗಲ್ಪಾಡಿ ಪಂಚಾಯತ್ ನ ಮಾಜಿ ಸದಸ್ಯರಾದ ವಲ್ಸರಾಜ್, ಪಿಎನ್ ಆರ್ ಪ್ರೊಡಕ್ಷನ್‌ನ ರಾಘವೇಂದ್ರ ಹೊಳ್ಳ ತಿಂಬರ ಹಾಗೂ ಇತರರು ಉಪಸ್ಥಿತರಿದ್ದರು.ನಿರ್ದೇಶಕರಾದ ರೋಷನ್ ಆರ್ ಆಳ್ವ ತಿಂಬರ, ಛಾಯಾಗ್ರಾಹಕ ಅರುಣ್ ರೈ ಪುತ್ತೂರು, ನಾಯಕ ನಟ ನವೀನ್, ನಾಯಕಿ ಅಮೃತ ಹಾಗೂ ಇತರ ಕಲಾವಿದರು ಹಾಗೂ ತಂತ್ರಜ್ಞರು ಹಾಜರಿದ್ದರು. ಹರ್ಷರಾಜ್ ನಾವೂರು ಕಾರ್ಯಕ್ರಮವನ್ನು ನಿರೂಪಿಸಿದರು. ಚಿತ್ರದಲ್ಲಿ ದೀಪಕ್ ರೈ ಪಾಣಾಜೆ, ಪ್ರಕಾಶ್ ತೂಮಿನಾಡು, ಪುಷ್ಪರಾಜ್ ಬೊಳ್ಳಾರ್ ಸೇರಿದಂತೆ ಹಲವು ತುಳು ಮತ್ತು ಕನ್ನಡ ಚಲನಚಿತ್ರ ತಾರೆಯರು ಬಣ್ಣ ಹಚ್ಚಲಿದ್ದಾರೆ ಎಂದು ಚಿತ್ರದ ನಿರ್ದೇಶಕ ರೋಶನ್ ಆರ್ ಆಳ್ವ ಮಾಹಿತಿ ನೀಡಿದರು.

ಪ್ರಾದೇಶಿಕ ವಾರ್ತೆಗಳು

ಮೂಡುಬಿದಿರೆ ಮಸೀದಿ ಬಳಿ ಕುಡಿಯುವ ನೀರಿನ ಘಟಕ ಉದ್ಘಾಟನೆ

ಮೂಡುಬಿದಿರೆ ಜುಮ್ಮಾ ಮಸೀದಿ ಮತ್ತು ಇರುವೈಲ್ ರಸ್ತೆ ಅಂಗಡಿ ಮಾಲಕರ ಸಂಘದ ವತಿಯಿಂದ ನಿರ್ಮಿಸಲಾದ ಸಾರ್ವಜನಿಕ ಕುಡಿಯುವ ನೀರಿನ ಘಟಕವನ್ನು ಮೂಡುಬಿದಿರೆ ಟೌನ್ ಜುಮ್ಮಾ ಮಸೀದಿಯ ಖತೀಬರಾದ ಅಬೂಬಕ್ಕರ್ ಸಿದ್ದೀಕ್ ದಾರಿಮಿ ಅವರು ಶುಕ್ರವಾರ ಮಧ್ಯಾಹ್ನ ಉದ್ಘಾಟಿಸಿದರು.ಮಸೀದಿ ಕಮಿಟಿ ಅಧ್ಯಕ್ಷ ಅಬ್ದುರ್ರಹ್ಮಾನ್, ಕಾರ್ಯದರ್ಶಿ ಮುಹಮ್ಮದ್ ನದೀಮ್, ಜತೆ ಕಾರ್ಯದರ್ಶಿ ಪಿ.ಎಚ್.ಮುಹಮ್ಮದ್ ಹುಸೈನ್, ಪುರಸಭಾ ಸದಸ್ಯ ಇಕ್ಬಾಲ್ ಕರೀಮ್,ಅಂಗಡಿ ಮಾಲಕರಾದ ಶಿವಾನಂದ ಪ್ರಭು,ಸನತ್ ಜೈನ್,ಬದ್ರುದ್ದೀನ್, ಹನೀಫ್ ರಹ್ಮಾನಿಯಾ,ಬಶೀರ್,ಮಹೇಶ್,ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಎನ್ ನಾಗೇಂದ್ರ ಇವರಿಗೆ ‘ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ’ ಪ್ರಧಾನ

ವಿವೇಕಾನಂದ ಜಯಂತಿಯಂದು ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ದರ್ಶನ್ ಸೋಶಿಯಲ್ ಕಲ್ಚರಲ್ ಅಕಾಡೆಮಿ (ರಿ) ಬೆಂಗಳೂರು ಇವರ 98ನೇ ಸಾಂಸ್ಕೃತಿಕ ಕಾರ್ಯಕ್ರಮ ಯುವ ಸಂಭ್ರಮ ದಿನಾಂಕ 12 -01 – 25 ರಂದು ಬೆಂಗಳೂರಿನ ಸಾಂಸ್ಕೃತಿಕ ಕಲಾಗ್ರಾಮ ಮಲ್ಲತ್ತಳ್ಳಿ ಇಲ್ಲಿ ಜರುಗಿತು.ಈ ಸಂದರ್ಭದಲ್ಲಿ ಶ್ರೀಯುತ ಎನ್ ನಾಗೇಂದ್ರ ಇವರಿಗೆ ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿಪ್ರಧಾನ ಮಾಡಲಾಯಿತು. ಇವರು ಸ್ವಂತ ರಚಿಸಿ ಹಾಡಿರುವ ಕೊರೋನಾ Song ಹಾಗೂDRUG Awareness song ಗಳು ಯುವ ಜನತೆಯಲ್ಲಿ ಜನ ಜಾಗೃತಿ ಮೂ ಡಿಸಿದ್ದು ಇವೆರಡೂ ವಿಷಯಗಳು national Issue ಗಳಾಗಿರುತ್ತವೆ.ಈ ಜಾಗೃತಿ ಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಈ ಸಂದರ್ಭದಲ್ಲಿ ಪ್ರಖ್ಯಾತ ಹಿರಿಯ ಚಲನಚಿತ್ರ ನಟರಾದ ಶ್ರೀ ಶ್ರೀನಿವಾಸ ಮೂತಿ೯,ನಟ ನವೀನ್ ಶಂಕರ್,ನಟ ಗಣೇಶ್ ರಾವ್ ಕೇಸರ್ ಕರ್, ದರ್ಶನ್ ಅಕಾಡೆಮಿಯ ಅಧ್ಯಕ್ಷ ದರ್ಶನ್,ಕಿರುತೆರೆಹಾಸ್ಯ ಕಲಾವಿದೆ ಕವಿತಾ ಸುಧೀಂದ್ರ,ಕರ್ನಾಟಕ ರಾಜ್ಯ ಸಹಕಾರ ಮಂಡಳದ ಕಾರ್ಯದರ್ಶಿಯವರಾದ ಲಕ್ಷ್ಮಿಪತಯ್ಯ ಹಾಗೂ ಇತರರು ಉಪಸ್ಥಿತರಿದ್ದರು

ಪ್ರಾದೇಶಿಕ ವಾರ್ತೆಗಳು

ನಾನು ತುಳುನಾಡಿನವ “ತುಳುವ“ ಎನ್ನುವುದೇ ಹೆಮ್ಮೆ! – ಸುನಿಲ್ ಶೆಟ್ಟಿ

ಮಂಗಳೂರು: ”ನಾನು ತುಳುನಾಡಿನವ, ಮೂಲ್ಕಿ ಬಳಿಯ ಬಪ್ಪನಾಡು ನನ್ನ ಹುಟ್ಟೂರು. ನಾನು ವರ್ಷಕ್ಕೆ ನಾಲ್ಕು ಬಾರಿ ಇಲ್ಲಿಗೆ ಭೇಟಿ ಕೊಡುತ್ತೇನೆ. ನಾನು ತುಳುವ ಎನ್ನುವುದೇ ನನಗೆ ಹೆಮ್ಮೆ. ತುಳು ಸಿನಿಮಾದಲ್ಲಿ ಅಭಿನಯಿಸಬೇಕು ಅನ್ನುವ ಆಸೆ ಹಿಂದಿನಿಂದಲೂ ಇತ್ತು. ಆದರೆ ಕಾಲ ಕೂಡಿ ಬಂದಿರಲಿಲ್ಲ. ಈಗ ರೂಪೇಶ್ ಶೆಟ್ಟಿ ನಿರ್ದೇಶನದಲ್ಲಿ ಬರುತ್ತಿರುವ ಜೈ ಸಿನಿಮಾ ಕಥೆ ಕೇಳಿ ಇಷ್ಟಪಟ್ಟು ನಟಿಸುತ್ತಿದ್ದೇನೆ“ ಎಂದು ಬಾಲಿವುಡ್ ಸ್ಟಾರ್ ನಟ ಸುನಿಲ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.”ಕಾಮಿಡಿ ಸಿನಿಮಾಗಳಲ್ಲಿ ಅಭಿನಯ ಮಾಡಬೇಕು ಅನ್ನುವ ಆಸೆ ಇದೆ. ನನಗೆ ತುಳು ಸಿನಿಮಾದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಮಿಡಿಯನ್ ಆಗಿ ಅಭಿನಯಿಸಬೇಕು. ಆದರೆ ಈಗ ಜೈ ಸಿನಿಮಾದಲ್ಲಿ ಅತಿಥಿ ಪಾತ್ರ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ನೋಡೋಣ“ ಎಂದರು.ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದಲ್ಲಿ ಜೈ ತುಳು ಸಿನಿಮಾದಲ್ಲಿ, ಬಾಲಿವುಡ್ ನಟ ಸುನೀಲ್ ಶೆಟ್ಟಿ ನಟಿಸುತ್ತಿದ್ದಾರೆ. ಸದ್ಯ ಮಂಗಳೂರಿನಾದ್ಯಂತ ಶೂಟಿಂಗ್ ನಡೆಯುತ್ತಿದ್ದು ಇನ್ನು ಕೆಲವು ದಿನಗಳ ಕಾಲ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದಾರೆ. ಜೈ ಸಿನಿಮಾಕ್ಕೆ ಮೂರನೆ ಹಂತದ ಚಿತ್ರೀಕರಣ ನಡೆಯುತ್ತಿದ್ದು ಹಾಡಿನ ಚಿತ್ರೀಕರಣ ಇನ್ನು ನಡೆಯಲಿದೆ. ಜೈ ಸಿನಿಮಾ ತುಳುವಿನಲ್ಲಿ ಬಿಗ್ ಬಜೆಟ್ ನ ಸಿನಿಮಾ ಆಗಿದ್ದು ಸಿನಿಮಾಕ್ಕೆ ಕರಾವಳಿಯನ್ನು ಕೇಂದ್ರೀಕರಿಸಿ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ. ಮುಖ್ಯವಾಗಿ ಉಡುಪಿ, ಕುಂದಾಪುರ ಮಂಗಳೂನಲ್ಲಿ ಚಿತ್ರೀಕರಣ ನಡೆದಿದೆ. ಜಿಲ್ಲೆಯ ಖ್ಯಾತನಾಮ ಕಲಾವಿದರುಸಿನಿಮಾದಲ್ಲಿದ್ದಾರೆ.ಗಿರಿಗಿಟ್, ಗಮ್ಜಾಲ್, ಸರ್ಕಸ್ ಚಿತ್ರಗಳ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ಅವರು ಮತ್ತೊಂದು ಬಿಗ್ ಬಜೆಟ್ ನ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಜೈ ಸಿನಿಮಾ ಆರ್ ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತಿದ್ದು, ಅನಿಲ್ ಶೆಟ್ಟಿ, ಸುಧಾಕರ್ ಶೆಟ್ಟಿ ಹಾಗೂ ಮಂಜುನಾಥ್ ಅತ್ತಾವರ ನಿರ್ಮಾಪಕರಾಗಿದ್ದು ರೂಪೇಶ್ ಶೆಟ್ಟಿ ಸಿನಿಮಾದ ನಿರ್ದೇಶಕರಾಗಿದ್ದು ಕಥೆ ಹಾಗೂ ಸಂಭಾಷಣೆಯನ್ನು ಪ್ರಸನ್ನ ಶೆಟ್ಟಿ, ಬೈಲೂರು ಬರೆದಿದ್ದಾರೆ. ಕ್ಯಾಮರಾ ವಿನುತ್ ಕೆ, ಸಂಗೀತ ಲೊಯ್ ವೆಲೆಂಟಿನ್ ಸಲ್ಮಾನ, ಸಂಕಲನ ರಾಹುಲ್ ವಸಿಷ್ಠ, ನಿರ್ಮಾಪಕರು ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ, ಮುಗ್ರೋಡಿ, ಮಂಜುನಾಥ ಅತ್ತಾವರ, ಸಹ ನಿರ್ಮಾಪಕರು ದೀಕ್ಷಿತ್ ಆಳ್ವ, ನೃತ್ಯ ಹಾಗೂ ಎಕ್ಸಿಕ್ಯೂಟಿವ್ಪ್ರೊಡ್ಯುಸರ್ ನವೀನ್ ಶೆಟ್ಟಿ ಆರ್ಯನ್ಸ್.ಜೈ ಸಿನಿಮಾದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ರಾಜ್ ದೀಪಕ್ ಶೆಟ್ಟಿ, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ, ಮಾಣಿಬೆಟ್ಟು, ಉಮೇಶ್ ಮಿಜಾರ್, ಮೊದಲಾದವರು ಅಭಿನಯಿಸಲಿದ್ದಾರೆ.ನಾಯಕಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಜೈ ತುಳು ಚಿತ್ರ ಆದಷ್ಟು ಬೇಗ ತೆರೆಕಾಣಲಿದೆ.ಪತ್ರಿಕಾಗೋಷ್ಟಿಯಲ್ಲಿ ನಿರ್ಮಾಪಕ ಮಂಜುನಾಥ್ ಅತ್ತಾವರ, ರೂಪೇಶ್ ಶೆಟ್ಟಿ ಉಪಸ್ಥಿತರಿದ್ದರು.

Scroll to Top