ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ತುಳುವೆರೆ ಆಯಾನೊ ಕೂಟ ಕುಡ್ಲ ಅಧ್ಯಕ್ಷರಾಗಿ ಶಮಿನ ಆಳ್ವ ಆಯ್ಕೆ

ಮಂಗಳೂರು : ತುಳು ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ನಿರಂತರವಾಗಿ ಪ್ರಯತ್ನಿಸುತ್ತಿರುವ ತುಳುವೆರೆ ಆಯಾನೊ ಕೂಟ ಕುಡ್ಲ ಇದರ ಮಹಾಸಭೆಯು ಇತ್ತೀಚೆಗೆ ಸ್ವರೂಪ ಅಧ್ಯಯನ ಕೇಂದ್ರ ಕೋಡಿಯಾಲ್ ಬೈಲ್ ಇಲ್ಲಿ ನಡೆಯಿತು.ನೂತನ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಶಮಿನ ಆಳ್ವ ಮರು ಆಯ್ಕೆಯಾದರು, ಪ್ರಧಾನ ಕಾರ್ಯದರ್ಶಿಯಾಗಿ ಭೂಷಣ್ ಕುಲಾಲ್, ಖಜಾಂಜಿಯಾಗಿ ಅಮೂಲ್ಯ ಶೆಟ್ಟಿ ಇವರು ಆಯ್ಕೆಯಾದರು. ಅಂತೆಯೇ ಉಪಾಧ್ಯಕ್ಷರಾಗಿ ಗೋಪಾಡ್ಕರ್, ಹರಿಪ್ರಸಾದ್ ರೈ, ರಾಜೇಶ್ ಅಮಿನ್ , ಜೊತೆ ಕಾರ್ಯದರ್ಶಿಗಳಾಗಿ ಶ್ರೀಮತಿ ರೋಹಿಣಿ ಶೆಟ್ಟಿ, ಶ್ರೀಮತಿ ಭಾರತೀ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಜ್ವಲ್ ಆಳ್ವ, ರಾಜೇಶ್ ಹೆಗ್ಡೆ ಪೊಳಲಿ, ಕುಸುಮ ಶೆಟ್ಟಿ ಇವರು ಅವಿರೋಧವಾಗಿ ಆಯ್ಕೆಗೊಂಡರು.

ಪ್ರಾದೇಶಿಕ ವಾರ್ತೆಗಳು

ಮಂಗಳೂರು ಪ್ರೆಸ್ ಕ್ಲಬ್ ಅತಿಥಿ ಡಾ. ಆರ್.ಕೆ.ನಾಯರ್ ಸನ್ಮಾನ ಸ್ವೀಕರಿಸಿ ತಮ್ಮ ಅನುಭವವನ್ನು ಹಂಚಿಕೊಂಡರು.

ಮಂಗಳೂರು- ಆರಂಭದಲ್ಲಿ ಗಿಡಗಳನ್ನು ನೆಡಲು ಶುರು ಮಾಡಿದಾಗ ಜನರು ನನ್ನನ್ನು ಹುಚ್ಚನೆಂದು ಕರೆಯುತ್ತಿದ್ದರು. ಆದರೆ, ಇದೀಗ 12 ರಾಜ್ಯಗಳಲ್ಲಿ 121 ಕಾಡುಗಳನ್ನು ಬೆಳೆಸಿದ್ದೇನೆ. 122ನೇ ಕಾಡನ್ನು ರಾಜಸ್ತಾನದಲ್ಲಿ ಆರಂಭಿಸಿರುವುದಾಗಿ ಹೆಸರಾಂತ ಪರಿಸರವಾದಿ, ಗ್ರೀನ್‌ ಹೀರೋ ಆಫ್‌ ಇಂಡಿಯಾ ಡಾ.ಆರ್‌.ಕೆ. ನಾಯರ್‌ ಹೇಳಿದ್ದಾರೆ.ಮಂಗಳೂರು ಪ್ರೆಸ್‌ ಕ್ಲಬ್‌ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಪ್ರೆಸ್‌ಕ್ಲಬ್‌ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಗುಜರಾತ್‌ನ ಇಂಡಸ್ಟ್ರಿಯಲ್‌ ಎಸ್ಟೇಟ್‌ನಲ್ಲಿ ಸಣ್ಣ ಕಾಡು ಬೆಳೆಸಿ ನೋಡಿದೆ. ಇದು ಅತ್ಯಂತ ಯಶಸ್ವಿಯಾಗಿದ್ದು, ಬೇರೆ ಕಡೆಗಳ ಇಂಡಸ್ಟ್ರಿಯಲ್‌ ಎಸ್ಟೇಟ್‌ಗಳಿಂದಲೂ ಇದೇ ರೀತಿಯ ಕಾಡು ಬೆಳೆಸಲು ಬೇಡಿಕೆ ಬರತೊಡಗಿತು. ಇದಾದ ಬಳಿಕ ಮಹಾರಾಷ್ಟ್ರದ ಕೆಮಿಕಲ್‌ ಡಂಪಿಂಗ್‌ ಯಾರ್ಡ್‌ನಲ್ಲಿ ಗಿಡಗಳನ್ನು ನೆಡುತ್ತಾ, ಜಗತ್ತಿನ ಅತಿ ದೊಡ್ಡ ಮಿಯಾವಕಿ ಕಾಡು ಸೃಷ್ಟಿಸಿದೆ ಎಂದರು. ಗುಜರಾತ್‌ನಲ್ಲಿ ಪರ್ವತದ ಮೇಲೆ ಕಾಡು ಬೆಳೆಯಲು ಸಾಧ್ಯವೇ ಇಲ್ಲ ಎಂಬಂಥ ಜಾಗದಲ್ಲೂ ಲಕ್ಷಾಂತರ ಗಿಡಗಳನ್ನು ನೆಟ್ಟು ಬೆಳೆಸಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಬಂದು ಉದ್ಘಾಟನೆ ನೆರವೇರಿಸಿದಾಗ ಅಲ್ಲಿನ ಗಿಡಗಳು 18 ಅಡಿಗೂ ಹೆಚ್ಚು ಬೆಳೆದು ದಟ್ಟ ಕಾಡಾಗಿತ್ತು. ಈ ಸ್ಮೃತಿ ವನಕ್ಕೆ ಸ್ವತಃ ರಾಷ್ಟ್ರಪತಿಗಳೇ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಡಾ.ಆರ್‌.ಕೆ. ನಾಯರ್‌ ಹೇಳಿದರು. ಸುಳ್ಯದಿಂದ ರಾಷ್ಟ್ರ ಮಟ್ಟಕ್ಕೆ:ನಾನು ಹುಟ್ಟಿದ್ದು ಕಾಸರಗೋಡಿನಲ್ಲಿ. 4ನೇ ವಯಸ್ಸಿನಲ್ಲೇ ನಮ್ಮ ಕುಟುಂಬ ಸುಳ್ಯಕ್ಕೆ ಬಂದು ಅಲ್ಲಿನ ತೋಟಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿತ್ತು. 12ನೇ ತರಗತಿ ಫೇಲಾದ ಬಳಿಕ ಗೆಳೆಯನೊಂದಿಗೆ ಮುಂಬೈಗೆ ತೆರಳಿ ಅಲ್ಲಿ ಮೆಡಿಕಲ್‌ ಅಂಗಡಿಯಲ್ಲಿ ಸೇಲ್ಸ್‌ ಮ್ಯಾನ್‌, ಹೊಟೇಲ್‌ಗಳಲ್ಲಿ ಕೆಲಸ ಮಾಡಿಕೊಂಡಿದ್ದೆ. ಬಳಿಕ ಗಾರ್ಮೆಂಟ್‌ನಲ್ಲಿ ಲೇಯರಿಂಗ್‌ ಕೆಲಸ ಶುರುಮಾಡಿ ಪ್ರೊಡಕ್ಷನ್‌ ಮ್ಯಾನೇಜರ್‌ ಹಂತಕ್ಕೆ ತಲುಪಿದೆ. ಅದಾದ ನಂತರ ಗುಜರಾತ್‌ನಲ್ಲಿ ಫ್ಯಾಕ್ಟರಿ ಮ್ಯಾನೇಜರ್‌ ಆಗಿ 10 ವರ್ಷ ಕೆಲಸ ಮಾಡಿ, ಸ್ವಂತ ಫ್ಯಾಕ್ಟರಿ ಶುರು ಮಾಡಿದೆ. ಸೌಪರ್ಣಿಕಾ ಎಕ್ಸ್‌ಪೋರ್ಟ್ಸ್‌ ಪ್ರೈ. ಲಿಮಿಟೆಡ್‌ ಈಗಲೂ ನಡೆಯುತ್ತಿದೆ. ಈ ನಡುವೆ ನನ್ನ ಎದುರಲ್ಲೇ ಮರವೊಂದು ಕಡಿದು ಬಿದ್ದಾಗ ಹಕ್ಕಿಗಳ ಆರ್ತನಾದ ಕೇಳಿ ತಳಮಳಗೊಂಡು ಕಾಡು ನೆಟ್ಟು ಬೆಳೆಸುವ ನಿರ್ಧಾರ ಮಾಡಿದೆ ಎಂದು ಆ ದಿನಗಳನ್ನು ಸ್ಮರಿಸಿದರು.ತುಳುವಿನಲ್ಲಿ ಪ್ರಾರ್ಥನೆ:ಪ್ರತಿಬಾರಿ ಗಿಡ ನೆಡಲು ಆರಂಭಿಸುವಾಗ ತುಳುವಿನಲ್ಲೇ ಪ್ರಾರ್ಥನೆ ಮಾಡಿಕೊಂಡು ಬಂದಿದ್ದೇನೆ. ನಾನು ನೆಟ್ಟು ಬೆಳೆಸಿದ ಕಾಡಿನಲ್ಲಿ ನಡೆಯುವಾಗ ಅಲ್ಲಿನ ಪಕ್ಷಿ, ಪ್ರಾಣಿ ಪ್ರಪಂಚವನ್ನು ನೋಡುವಾಗ ಸಾರ್ಥಕ ಭಾವ ಸಿಗುತ್ತದೆ. ಕಾಡಿನಲ್ಲಿನ ಮರಗಳು, ಪಕ್ಷಿಗಳ ಜತೆಗೂ ನಾನು ಮಾತುಕತೆ ನಡೆಸುತ್ತೇನೆ. ನಾನು ಹೋದಾಗಲೆಲ್ಲ ಪಕ್ಷಿಗಳು ಚಿಲಿಪಿಲಿಗುಟ್ಟುತ್ತಾ ಸ್ವಾಗತಿಸುತ್ತವೆ ಎಂದು ಡಾ.ನಾಯರ್‌ ಹರ್ಷ ವ್ಯಕ್ತಪಡಿಸಿದರು.ಜಿಲ್ಲಾ ವಾರ್ತಾಧಿಕಾರಿ ಖಾದರ್‌ ಶಾ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೆಸ್‌ ಕ್ಲಬ್‌ ಅಧ್ಯಕ್ಷ ಪಿ.ಬಿ. ಹರೀಶ್‌ ರೈ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ, ನಾಯಕ್‌ ಇಂದಾಜೆ,ಇಬ್ರಾಹಿಂ ಅಡ್ಕಸ್ಥಳ,ಪುಷ್ಪರಾಜ್ ಶೆಟ್ಟಿ ಬಿ.ಎನ್.,ಭಾಸ್ಕರ ರೈ ಕಟ್ಟ ಇದ್ದರು. ಆರ್‌.ಸಿ. ಭಟ್‌ ನಿರೂಪಿಸಿದರು.ಪಾದರಕ್ಷೆ ಹಾಕಲ್ಲ, ಮುಟ್ಟಾಳೆ ತಪ್ಪಿಸಿಲ್ಲ.ಕಳೆದ 19 ವರ್ಷಗಳಿಂದ ಪಾದರಕ್ಷೆಯನ್ನೇ ಹಾಕಿಲ್ಲ. ಏಳ‍ೆಂಟು ವರ್ಷಗಳಿಗೂ ಅಧಿಕ ಕಾಲದಿಂದ ತಲೆ ಮೇಲೆ ಅಡಕೆ ಹಾ‍ಳೆಯ ಮುಟ್ಟಾಳೆ ಧರಿಸುತ್ತಿದ್ದೇನೆ. ಮುಂಚೆ ಪ್ಯಾಂಟ್‌, ಶರ್ಟ್‌ ಧರಿಸುತ್ತಿದ್ದವನಿಗೆ ಈಗ ಪಂಚೆಯೇ ಪ್ರಿಯವಾಗಿದೆ. ಇದನ್ನೇ ಹಾಕಿಕೊಂಡು ಎಲ್ಲ ಏರ್‌ಪೋರ್ಟ್‌ಗಳಿಗೂ, ಎಲ್ಲ ಬಗೆಯ ವಿಮಾನಗಳಲ್ಲೂ ಹೋಗಿ ಬಂದಿದ್ದೇನೆ. ಈ ಭೂಮಿ ಮೇಲೆ ನಾವ್ಯಾರೂ ಶಾಶ್ವತ ಅಲ್ಲ. ನಮ್ಮ ಕೈಯಲ್ಲಿ ಪ್ರಕೃತಿ ಸಂರಕ್ಷಣೆ ಮಾಡಲು ಸಾಧ್ಯವಾಗದೆ ಇದ್ದರೂ ಪ್ರಕೃತಿಗೆ ಹಾಳು ಮಾಡುವ ಕೆಲಸ ಮಾತ್ರ ಮಾಡಬಾರದು ಎಂದು ಡಾ.ನಾಯರ್‌ ಮನವಿ ಮಾಡಿದ್ದಾರೆ.ಚಿತ್ರಗಳು – ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಇಂಜಿನೀಯರ್ ನಾಗೇಂದ್ರ ಅವರಿಗೆ ಡಾ| ರಾಜಕುಮಾರ್ ರವರ ಮಗಳಾದ ಪೂರ್ಣಿಮಾ ರಾಜ್ ಕುಮಾರ್ ರಿಂದ ಅದ್ದೂರಿ ಸನ್ಮಾನ

ಕರ್ನಾಟಕ ರತ್ನ ಡಾ| ಪುನೀತ್ ರಾಜಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬ ಆಚರಣೆಯನ್ನು ನಗರದ ಟಾನ್ ಹಾಲ್ ನಲ್ಲಿ ಮಂಗಳೂರಿನ ದೊಡ್ಡ ಮನೆ ಅಪ್ಪು ಯುವ ಸೇನೆ ವತಿಯಿಂದ ಅದ್ದೂರಿಯಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದೇ ಸಂಧರ್ಭದಲ್ಲಿ ಸಾಧಕರಿಗಾಗಿ ಪ್ರತಿ ವರ್ಷ ಸನ್ಮಾನ ನೀಡುವ ನಿಟ್ಟಿನಲ್ಲಿ ಈ ಬಾರಿ ಇಂಜಿನಿಯರ್ ನಾಗೇಂದ್ರ ಅವರ ಹಲವು ಕ್ಷೇತ್ರದ ಸಾಧನೆಯನ್ನು ಗುರುತಿಸಿ, ಪೂರ್ಣಿಮಾ ರಾಜಕುಮಾರ್,ನಟಿ ಧನ್ಯ ರಾಮ್ ಕುಮಾರ್, ಸಾಹಿತಿ ಪ್ರೇಮಕವಿ ಕೆ.ಕಲ್ಯಾಣ್,ನಟ ಹಾಗೂ ನಿರ್ಮಾಪಕ ಡಿ ಸತ್ಯಪ್ರಕಾಶ್, ರಾಜ್ಯಪ್ರಶಸ್ತಿ ವಿಜೇತ ರಮೇಶಚಂದ್ರ ಸಂಘಟಕ ರಾದ ಜನಾರ್ಧನ್ ಬಾಬು,ಕೆ. ಉಮೇಶ್ ಹಾಗೂ ಚಾನೆಲ್ 9 ರ ಮಾಲಕರಾದ ಪ್ರಸಾದ್ ಸುವರ್ಣ ಇವರುಗಳಿಂದ ಅದ್ದೂರಿಯಾಗಿ ಗೌರವ ಸನ್ಮಾನ ಪಡೆದಿರುತ್ತಾರೆ. ಇವರ ಸಾಧನೆಗಳನ್ನು ವಿಡಿಯೋ ಮೂಲಕ ಎಲ್ ಇಡಿ ಪರದೆಯಲ್ಲಿ ಪ್ರದರ್ಶಿಸಲಾಯಿತು.ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆ ಗಳನ್ನು ಕೂಡ ಏಪ೯ಡಿಸಗಿತ್ತು ಮುಖ್ಯವಾಗಿ ಸಂಗೀತ ಸ್ಪರ್ಧೆ ಚಿತ್ರಕಲೆ, ರಂಗೋಲಿ, ಚೆಸ್ ಹಾಗೂ ಆದರ್ಶ ದಂಪತಿಗಳು ಸ್ಪರ್ಧೆಯನ್ನು ಮತ್ತು ರಕ್ತದಾನ ನೇತ್ರದಾನ ಶಿಬಿರ, ಮತ್ತು ಉಚಿತ ಕನ್ನಡಕ ವಿತರಣೆಯನ್ನು ಮಾಡಲಾಯಿತು

ಪ್ರಾದೇಶಿಕ ವಾರ್ತೆಗಳು

ಹೊಸಬೆಟ್ಟಿನಲ್ಲಿ ಶಾರದಾ ಮಾಸದ ಕೂಟತಾಳಮದ್ದಳೆಯ ಗತಕಾಲದ ಇತಿಹಾಸ ಅನಾವರಣ

ಮಂಗಳೂರು: ‘ಯಕ್ಷಗಾನ ತಾಳ ಮುದ್ದಳೆ ಕಾರ್ಯಕ್ರಮಗಳು ಅಹೋರಾತ್ರಿ ನಡೆಯುತ್ತಿದ್ದ ಕಾಲವೊಂದಿತ್ತು. ಈಗಿನ ಯುವ ಸಮುದಾಯಕ್ಕೆ ಅದರ ಕಲ್ಪನೆಯೂ ಇರಲಾರದು. ಆದರೆ ವಿನಯ ಆಚಾರ್ಯರ ನೇತೃತ್ವದಲ್ಲಿ ನಡೆದ ವಿಶಿಷ್ಟ ಪರಿಕಲ್ಪನೆಯ ಶಾರದಾ ಮಾಸದ ಕೂಟವು ತಾಳಮದ್ದಳೆಯ ಗತಕಾಲದ ಇತಿಹಾಸವು ಮರುಕಳಿಸುವಂತೆ ಮಾಡಿದೆ’ ಎಂದು ಕರ್ನಾಟಕ ಜಾನಪದ,ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಕಾರದೊಂದಿಗೆ ಸುರತ್ಕಲ್ ಸಮೀಪ ಹೊಸಬೆಟ್ಟು ಮಾರುತಿ ಬಡಾವಣೆಯ ಶಾರದಾ ಮಂದಿರದಲ್ಲಿ ಇಡೀ ರಾತ್ರಿ ನಡೆದ ಶಾರದಾ ಮಾಸದ ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಯಕ್ಷಗಾನ ಹಿಮ್ಮೇಳ ವಾದನಗಳ ನುಡಿತದೊಂದಿಗೆ ಜರಗಿದ ಉದ್ಘಾಟನೆಯನ್ನು ಹಿರಿಯ ವಿದ್ವಾಂಸ ಹೊಸಬೆಟ್ಟು ಗುರುರಾಜ ಆಚಾರ್ಯ ಜಾಗಟೆ ಬಾರಿಸುವುದರ ಮೂಲಕ ನೆರವೇರಿಸಿದರು. ಯಕ್ಷಗುರು ಶಂಕರನಾರಾಯಣ ಮೈರ್ಪಾಡಿ, ಕರ್ಣಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ರಾಜೇಶ ಕುಳಾಯಿ, ಉಜ್ವಲ್ ಎಂ. ಕೆ. ಅತಿಥಿಗಳಾಗಿ ಪಾಲ್ಗೊಂಡರು. ಕಾರ್ಯಕ್ರಮದ ಸಂಘಟಕರಾದ ವಿನಯ ಆಚಾರ್ಯ ಹೊಸಬೆಟ್ಟು ಸ್ವಾಗತಿಸಿ ನಿರೂಪಿಸಿದರು. ದಕ್ಷ ಯಜ್ಞ :ಉದ್ಘಾಟನೆ ಬಳಿಕ ಜರಗಿದ ಮೊದಲ ತಾಳಮದ್ದಳೆ ‘ದಕ್ಷಯಜ್ಞ’ ಪ್ರಸಂಗದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ (ಈಶ್ವರ), ಉಮೇಶ ನೀಲಾವರ (ದೇವೇಂದ್ರ), ಮನೋಹರ ಕುಂದರ್ (ದಕ್ಷ), ಸುಬ್ರಹ್ಮಣ್ಯ ಬೈಪಾಡಿತ್ತಾಯ (ಬ್ರಾಹ್ಮಣ), ಸುಮಂಗಳಾ ರತ್ನಾಕರ (ದಾಕ್ಷಾಯಿಣಿ), ಗಾಯತ್ರಿ ಬಿ.ಎಸ್. (ನಾರದ), ನಳಿನಿ ಮೋಹನ್ (ವೀರಭದ್ರ) ಅರ್ಥಧಾರಿಗಳಾಗಿದ್ದರು.ವೀರಮಣಿ ಕಾಳಗ:ಎರಡನೇ ಪ್ರಸಂಗ ‘ವೀರಮಣಿ ಕಾಳಗ’. ಶ್ರೀಧರ ಎಸ್.ಪಿ. (ಶತ್ರುಘ್ನ), ಗೋಪಾಲಕೃಷ್ಣ ಅನಂತಾಡಿ (ಹನೂಮಂತ), ಪ್ರಶಾಂತ ಕುಮಾರ (ವೀರಮಣಿ), ಜಯರಾಮ ದೇವಸ್ಯ (ಈಶ್ವರ), ರವಿಕುಮಾರ್ ಬಿ. (ಶ್ರೀರಾಮ) ಕಲಾವಿದರಾಗಿದ್ದರು. ಶಾಂಭವಿ ವಿಜಯ:ಬೆಳಗ್ಗಿನ ಜಾವ ನಡೆದ ‘ಶಾಂಭವಿ ವಿಜಯ’ ಯಕ್ಷಗಾನ ಕೂಟದಲ್ಲಿ ವಿನೋದ ಆಚಾರ್ಯ (ದೆವೇಂದ್ರ), ಮನೋಹರ ಕುಂದರ್ (ಶುಂಭ), ಚಂದ್ರಶೇಖರ ಕೊಡಿಪಾಡಿ (ಶಾಂಭವಿ), ಸುಬ್ರಮಣ್ಯ ಬೈಪಾಡಿತ್ತಾಯ (ಸುಗ್ರೀವ), ಉಮೇಶ ನೀಲಾವರ (ಧೂಮ್ರಾಕ್ಷ), ವಿನಯ ಆಚಾರ್ಯ ಹೊಸಬೆಟ್ಟು (ರಕ್ತಬೀಜ) ಪಾತ್ರಧಾರಿಗಳಾಗಿ ಭಾಗವಹಿಸಿದರು.ರಾತ್ರಿ ಗಂ.9.30 ಕ್ಕೆ ಆರಂಭವಾದ ತಾಳಮದ್ದಳೆ ಕೂಟದಲ್ಲಿ ಶಶಿಧರ ರಾವ್, ರಾಮ ಹೊಳ್ಳ, ಗಣೇಶ ಮಯ್ಯ, ವಾಸುದೇವ ಮಯ್ಯ, ಮಾಧವ ಮಯ್ಯ, ಎಸ್. ಎನ್. ಭಟ್ ಬಾಯಾರು, ವೇದವ್ಯಾಸ ರಾವ್, ಲಕ್ಷ್ಮೀಶ್ ಉಪಾಧ್ಯಾಯ, ರಾಘವೇಂದ್ರ ಹೆಜಮಾಡಿ, ಹರೀಶ ಹೆಬ್ಬಾರ್, ಸ್ಕಂದ ಮಯ್ಯ ಮೊದಲಾದವರು ಮರುದಿನ ಮುಂಜಾನೆ ವರೆಗೆ ಸಮಗ್ರ ಹಿಮ್ಮೇಳದಲ್ಲಿದ್ದು ಸಹಕರಿಸಿದರು.

ಪ್ರಾದೇಶಿಕ ವಾರ್ತೆಗಳು

Rachana Awards 2023-25 -Nominations/Recommendations invited

RACHANA – Catholic Chamber of Commerce & Industry, established in 1998, has instituted five ‘Rachana Awards’ to honor outstanding individual Catholics originating from the Mangalore Diocese who have excelled in their respective fields.The five awards will be presented in the following fields:1.Rachana Agriculturist2.Rachana Entrepreneur3.Rachana Professional (Doctor, Advocate, Engineer, Chartered Accountant)4.Rachana NRI Entrepreneur/Professional5.Rachana Outstanding Woman (Entrepreneur/Professional/Agriculturist).Each award consists of a Title, a Citation, a Memento, and a Public Honour.Applications/Nominations/Recommendations, along with a photograph,should reach the office on or before 31.05.2025, to be addressed to: The President, RACHANA, First Floor, Pio Mall, Jail Road, Mangalore 575 004. Email: rachanamangalore@gmail.comA panel of 25 jury members will scrutinize the Nominations/Recommendations and select the most deserving candidates.The ‘RACHANA’ award ceremony will be held on Sunday, October 5, 2025 at6.00 pm at Milagres Jubilee Hall, Mangalore, in the presence of dignitaries and eminent personalities, and will be presided over by Most Rev. Dr. Peter Paul Saldanha, Bishop of Mangalore.Further clarifications regarding the awards may be obtained by contacting ‘RACHANA’ office between 10:00 am and 4:00 pm at Phone numbers: 83106 42093 / 99720 17484.-John B. Monteiro, President, Rachana, MangaloreVijay V. Lobo, Secretary, Rachana, Mangalore

ಪ್ರಾದೇಶಿಕ ವಾರ್ತೆಗಳು

ಪತ್ರಿಕಾ ಪ್ರಕಟಣೆ. ರಚನಾ ಪ್ರಶಸ್ತಿ 2023-25. ಅರ್ಜಿ/ ನಾಮಪತ್ರ ಆಹ್ವಾನ

ರಚನಾ’ – ಕ್ಯಾಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ, ಮಂಗಳೂರು ಮೂಲದ ವಿವಿಧೆಡೆಗಳಲ್ಲಿ ಹಬ್ಬಿಕೊಂಡಿರುವ ಕ್ಯಾಥೊಲಿಕ್ ಕ್ರೈಸ್ತ ಸಮುದಾಯದ, ತಂತಮ್ಮ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗಳನ್ನು ಮಾಡಿರುವ ಗಣ್ಯರನ್ನು ಪರಿಗಣಿಸಿ, ಆಯ್ದು ‘ರಚನಾ’ ಪ್ರಶಸ್ತಿಯನ್ನು ನೀಡುವ ಮೂಲಕ ಪುರಸ್ಕರಿಸುತ್ತಿದೆ. 2023-25ನೇ ಸಾಲಿನ ಈ ಕೆಳಗಿನ ಪ್ರಶಸ್ತಿಗಳಿಗಾಗಿ ನಾಮಪತ್ರಗಳನ್ನು ಆಹ್ವಾನಿಸಲಾಗಿದೆ.1.ರಚನಾ ಕೃಷಿಕ2.ರಚನಾ ವೃತ್ತಿಪರ (ವೈದ್ಯರು, ವಕೀಲರು, ಇಂಜಿನಿಯರ್ಸ್, ಚಾಟರ್ಡ್ ಎಕೌಂಟೆಂಟ್ಸ್)3.ರಚನಾ ಉದ್ಯಮಿ4.ರಚನಾ ಅನಿವಾಸಿ ಉದ್ಯಮಿ/ ವೃತ್ತಿಪರ5.ರಚನಾ ವಿಶೇಷ ಮಹಿಳಾ ಸಾಧಕಿ (ಉದ್ಯಮಿ, ವೃತ್ತಿಪರ, ಕೃಷಿಕ)ಪ್ರಶಸ್ತಿಯು ಬಿರುದು, ಸನ್ಮಾನ ಪತ್ರ, ಸ್ಮಾರಕ, ಸಾರ್ವಜನಿಕ ಸನ್ಮಾನವನ್ನೊಳಗೊಂಡಿರುವುದು.ಅರ್ಜಿ / ನಾಮಪತ್ರಗಳನ್ನು ಭಾವಚಿತ್ರದೊಂದಿಗೆ ಅಧ್ಯಕ್ಷರು, ರಚನಾ, ಮೊದಲ ಮಹಡಿ, ಪಿಯೊ ಮಾಲ್, ಜೈಲ್ ರಸ್ತೆ, ಮಂಗಳೂರು 575 004. ಇಮೇಯ್ಲ್: rachanamangalore@gmail.com, ಈ ವಿಳಾಸಕ್ಕೆ ದಿನಾಂಕ 31.05.2025 ಕ್ಕೂ ಮುಂಚಿತವಾಗಿ ತಲುಪುವಂತೆ ಕಳುಹಿಸಲು ಕೋರಲಾಗಿದೆ.25 ಮಂದಿ ಜ್ಯೂರಿ ಸದಸ್ಯರ ತಂಡವು ನಾಮಪತ್ರ ಅರ್ಜಿಗಳನ್ನು ಸೂಕ್ತವಾಗಿ ಪರಿಶೀಲಿಸಿ ಪ್ರಶಸ್ತಿಗಳಿಗಾಗಿ ಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡುವರು.ಪ್ರಶಸ್ತಿ ಪ್ರದಾನ ಕಾರ‍್ಯಕ್ರಮವು, 2025ರ ಅಕ್ಟೋಬರ್ 05, ಭಾನುವಾರದಂದು ಸಂಜೆ 6.00ಕ್ಕೆ ಮಿಲಾಗ್ರಿಸ್ ಜ್ಯುಬಿಲಿ ಸಭಾಭವನ ಮಂಗಳೂರು, ಇಲ್ಲಿ ಮಂಗಳೂರಿನ ಬಿಷಪ್ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಇವರ ಅಧ್ಯಕ್ಷತೆಯಲ್ಲಿ ಹಾಗೂ ಇತರ ಪ್ರಮುಖ ಗಣ್ಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನಡೆಯಲಿರುವುದು.‘ರಚನಾ ಪ್ರಶಸ್ತಿ’ ಬಗ್ಗೆ ಹೆಚ್ಚಿನ ವಿವರ ಹಾಗೂ ಮಾಹಿತಿಗಾಗಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ರಚನಾ ಕಛೇರಿಯ ದೂರವಾಣಿ ಸಂಖ್ಯೆ: 83106 42093 / 99720 17484 ಸಂಪರ್ಕಿಸಲು ಕೋರಲಾಗಿದೆ.-ಜೊನ್ ಬಿ. ಮೊಂತೇರೊ, ಅಧ್ಯಕ್ಷರು, ರಚನಾ, ಮಂಗಳೂರುವಿಜಯ್ ವಿ. ಲೋಬೊ, ಕಾರ್ಯದರ್ಶಿ, ರಚನಾ, ಮಂಗಳೂರು

ಪ್ರಾದೇಶಿಕ ವಾರ್ತೆಗಳು

ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ಅಭಿವೃದ್ಧಿಗೆ ನಾಂದಿ

ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಸುರತ್ಕಲ್, ಇದರ ಪಶ್ಚಿಮ ಬದಿಯ “ಪುಷ್ಕರಣಿ” ಕೆರೆಯ ಜೀರ್ಣೋದ್ಧಾರದ ಪ್ರಯುಕ್ತ ಇಡ್ಯಾ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ಹಾಗೂ ಪರಿವಾರ ಶಕ್ತಿಗಳಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕೇಸರರಾದ ವೇ। ಮೂ। ಐ. ರಮಾನಂದ ಭಟ್ ಅವರ ಅಮೃತ ಹಸ್ತದಿಂದ ಪಶ್ಚಿಮ ಬದಿಯ ‘ಪುಷ್ಕರಣಿ’ ಕೆರೆಗೆ ‘ಭೂಮಿ ಪೂಜೆ’ ನೆರವೇರಿಸಲಾಯಿತು. ಈ ಸಂದರ್ಭ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಐ. ರಮಾನಂದ ಭಟ್‌ರವರು ಸಹಸ್ರಾರು ವರ್ಷದಿಂದ ಪುರಾತನವಾದ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಡುಬದಿಯ ಕೆರೆಯ ಅಭಿವೃದ್ಧಿ ಭಗವದ್ಭಕ್ತರ ಸಹಕಾರದಿಂದ ಆಗಬೇಕಾಗಿದೆ. ಹಾಗಾಗಿ ಎಲ್ಲರೂ ಸಹಕರಿಸಬೇಕೆಂದು ವಿನಂತಿಸಿದರು. ಇದೇ ಸಂದರ್ಭ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ಪುಷ್ಕರಣಿ’ ಕೆರೆ ಅಭಿವೃದ್ಧಿ ಸಮಿತಿಯ ಸಂಚಾಲಕರಾದ ಶಂಕರನಾರಾಯಣ ಭಟ್, ಸೂರ್ಯನಾರಾಯಣ ಭಟ್, ಗೌರವ ಸಲಹೆಗಾರರಾದ ಸತೀಶ್ ರಾವ್ ಇಡ್ಯಾ, ಧಾರ್ಮಿಕ ಮುಂದಾಳು ಪುಂಡಲೀಕ ಹೊಸಬೆಟ್ಟು, ಕೆ. ರಾಜ್‌ ಮೋಹನ್ ರಾವ್, ಕೃಷ್ಣಕುಮಾರ್ ಇಡ್ಯಾ, ಸಮಿತಿ ಸದಸ್ಯರಾದ ಸಂದೀಪ್ ರಾವ್ ಇಡ್ಯಾ, ವಸಂತ್ ಕುಮಾರ್ ನಾಯಕ್, ಸೋಮನಾಥ ಇಡ್ಯಾ ಹಾಗೂ ಇಡ್ಯಾ ಪರಿಸರದ ಭಕ್ತರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಸ್ಟೇಟ್ ಬ್ಯಾಂಕ್ನಲ್ಲಿ QR CODE genarate ತಲೆದೋರಿದ ಸಮಸ್ಯೆ.

ಭಾರತೀಯ ಸ್ಟೇಟ್ ಬ್ಯಾಂಕ್ನಲ್ಲಿ ಕಳೆದ 4-5 ದಿನಗಳಿಂದ ತಮ್ಮ ತಮ್ಮ ಖಾತೆಗೆ ಸಂಬಂಧಪಟ್ಟಂತೆ QR CODE genarate ಮಾಡಲು ಸಾಧ್ಯವಾಗದೇ ಅನೇಕರು ಬ್ಯಾಂಕ್ಗೆ ಅಲೆದು ಅಲೆದು ಸುಸ್ತಾದ ಬಗ್ಗೆ ವರದಿಯಾಗಿದೆ.ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರನ್ನು ಕೇಳಿದರೆ ಮುಂಬೈ ಕೇಂದ್ರ ಕಚೇರಿಯಲ್ಲಿ ದೋಷ ಕಂಡು ಬಂದಿದೆ ಎಂದು ಹೇಳುತ್ತಿದ್ದಾರೆ.ಇದರಿಂದ ಬೇಸರಗೊಂಡ ಗ್ರಾಹಕರು ಮೊಬೈಲ್ ಸಂಖ್ಯೆ ಪೋರ್ಟಿಂಗ್ ವ್ಯವಸ್ಥೆ ಇರುವಂತೆ ಬ್ಯಾಂಕ್ ಖಾತೆ ಪೋರ್ಟಿಂಗ್ ವ್ಯವಸ್ಥೆ ಶೀಘ್ರ ಜಾರಿಗೆ ಬರುವಂತಾಗಲಿ ಎಂದು ಕಳೆದ 4-5 ದಿನಗಳಿಂದ ಬ್ಯಾಂಕ್ಗೆ ಅಲೆದು ಸುಸ್ತಾದ ಗ್ರಾಹಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ

ಪ್ರಾದೇಶಿಕ ವಾರ್ತೆಗಳು

20th year Celebration of Indian Group of InstitutionsMass Media Training in collaboration with Namma Kudla 24×7 | LAPT International Accreditation | Inauguration of Rajamma Memorial Trust

The Indian Group of Institutions (formerly Indian Computer Academy) celebrated its 20th anniversary, IGI – Sambhram 2025, on March 16 at 4:00 PM at the Shehnai Hall of Hotel Deepa Comforts. Established in 2005 in Pumpwell, Mangalore, the institution was inaugurated by the current Speaker of the Karnataka Legislative Assembly, Shri U.T. Khader, who was then the Secretary of Seva Dal. Over the past two decades, IGI has provided quality education in computer science, technical training, aviation, hospitality, logistics and supply chain management, airport management, cabin crew training, English coaching, and other fields, empowering thousands of students.One of the major highlights of the event was the announcement of LAPT (London Academy of Professional Training) accreditation. This internationally recognized skill assessment and certification body operates in over 180 countries, enabling students at IGI to receive globally recognized certificates that enhance their career prospects. During the celebration, Shri Murali Hosamajalu, Managing Director of IGI, was honored with the Master Trainer Award from LAPT for his contributions to aviation education. Another milestone was the launch of the Mass Media and Communication Training program in collaboration with Namma Kudla 24×7, Coastal Karnataka’s leading TV channel. This marks the region’s first diploma program in mass media communication, providing hands-on training in print and digital journalism, video production, social media and digital marketing, public relations, news anchoring, camera technology, and multimedia techniques, with expert media professionals guiding students through industry-oriented learning. The celebration also witnessed the inauguration of the Smt. Rajamma Memorial Educational and Charitable Trust in memory of Smt. Rajamma, the late mother of IGI’s MD, Shri Murali Hosamajalu. A social worker and political figure from Kaukraadi village in Puttur Taluk, she played a key role in women’s empowerment and community development. The trust aims to support youth and women through education and skill development programs. As part of the occasion, several notable personalities were honored for their contributions, including Shri Bhaskar Rai for journalism, Shri Vipin Purushu for art and culture, Smt. Sharada Kadri and Akash Karkera for social service, and Shri Advaith Narayan, who secured the 100th rank in the CDS Exam, for defense services. Alumni of IGI who have excelled in aviation, computer science, and logistics were also recognized. The event was presided over by Shri Murali Hosamajalu, MD of IGI and a Member of the State Committee, Education Cell, along with Director Smt. Sajitha M. Nair. Chief guests included Captain Brijesh Chouta, Member of Parliament, Shri Vedavyas Kamath, Karnataka MLA, Shri Satish Kumpala, President of Dakshina Kannada BJP, Shri Ramanath Rai, Former District In-Charge Minister, and Shri Vijay, President of LAPT, UK. Special invitees included Shri Kadri Navaneeth Shetty, CEO of Namma Kudla 24×7, writer and journalist Shri Jayant Kodkani, director and actor Shri Swaraj Shetty, film director Shri Vijay Kumar, film and theatre artist Miss Roopa Varkadi, Shri Abraham Varghese, former Principal and Secretary of St. George Group of Institutions, Dr. Abdul Khader, former Principal of Karnataka Polytechnic, Mangalore, and Shri Prasad Rai, Advocate from BC Road. The event also saw the presence of educationists, college heads, and media professionals.The evening concluded with a grand musical concert featuring renowned South Indian playback singers Prakash Mahadevan and Roopa Prakash. The program commenced with a welcome address by faculty member Smt. Chaitra and ended with a vote of thanks by Smt. Avani Parvathi. The event was hosted by Shri Kadri Navaneeth Shetty and Smt. Sindhu N.

ಪ್ರಾದೇಶಿಕ ವಾರ್ತೆಗಳು

ಮಕ್ಕಳು ಯಕ್ಷಗಾನದತ್ತ ಆಕರ್ಷಿಸುತ್ತಿರುವುದು ಒಳ್ಳೆಯ ಬೆಳವಣಿಗೆ: ಪ್ರತಿಭಾ ಎಲ್ ಸಾಮಗ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕೇಂದ್ರೀಯ ಮಹಿಳಾ ಘಟಕದ 8 ನೇ ವಾರ್ಷಿಕೋತ್ಸವ

ಸುರತ್ಕಲ್: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಕೇಂದ್ರೀಯ ಘಟಕ ಮಂಗಳೂರು ಇದರ 8 ನೇ ವಾರ್ಷಿಕೋತ್ಸವ ಬಂಟರ ಭವನದಲ್ಲಿ ನಡೆಯಿತು.ಶಕುಂತಳಾ ರಮಾನಂದ ಭಟ್, ಚಂದ್ರಕಲಾ ಬಾಲಕೃಷ್ಣ ಶೆಟ್ಟಿ, ಭಾರತಿ ಗಂಗಾಧರ್, ಮಮತ ಹೆಗ್ಡೆ, ಸತ್ಯವತಿ ಡಿ ಶೆಟ್ಟಿ ದೀಪ ಪ್ರಜ್ವಲನೆಗೈದರು.ಸಂಜೆ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ನೃತ್ಯ ವಿದುಷಿ, ವಿಮರ್ಶಕಿ ಪ್ರತಿಭಾ ಎಲ್ ಸಾಮಗ ವಹಿಸಿದ್ದರು. ಪ್ರಸಕ್ತ ಕಾಲಘಟ್ಟದಲ್ಲಿ ಮಹಿಳೆಯರೂ ಕೂಡಾ ಯಕ್ಷಗಾನದಲ್ಲಿ ಮುಂಚೂಣಿಯಲ್ಲಿದ್ದು ಕಲಾಸೇವೆಗೈಯುತ್ತಿದ್ದಾರೆ. ಅದರಲ್ಲೂ ಮಕ್ಕಳು ಯಕ್ಷಗಾನದತ್ತ ಆಕರ್ಷಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಮಕ್ಕಳನ್ನು ಯಕ್ಷಗಾನದಲ್ಲಿ ತೊಡಗಿಸಿಕೊಳ್ಳುವಂತೆ ಮಹಿಳಾ ಕೇಂದ್ರ ಸಮಿತಿ ಶ್ರಮ ಪಟ್ಟಿದೆ. ನೇಪಥ್ಯಕ್ಕೆ ಸರಿದ ಮತ್ತು ಸಾಧನೆಗೈದ ಮಹಿಳಾ ಕಲಾವಿದರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ ಕಾರ್ಯ ಎಂದರು. ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದ್ಮಪ್ರಸಾದ್ ಜೈನ್, ದೀಪಕ್ ಶೆಟ್ಟಿ ಲಿಂಗಮಾರುಗುತ್ತು, ವಿದ್ಯಾ ರಾಕೇಶ್, ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ, ಸುಜಾತ ಧನಂಜಯ ಶೆಟ್ಟಿ ಹೊಸಬೆಟ್ಟು, ಚೈತ್ರಾ ಶೆಟ್ಟಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಜಯಲಕ್ಷ್ಮೀ ಕಾರಂತ್ ಮಂಗಲ್ಪಾಡಿ, ಜ್ಯೋತಿ ಸುನೀಲ್ ಶೆಟ್ಟಿ ಕಾರ್ಕಳ ಅವರನ್ನು ಸನ್ಮಾನಿಸಲಾಯಿತು. ಕುಮಾರಿ ಚೈತ್ರಾ ಎಚ್ ರಾವ್, ವಿದುಷಿ ವೈಷ್ಣವಿ ಸಾತ್ವಿಕ್ ರಾವ್, ವಿದುಷಿ ಮೈತ್ರಿ ಭಟ್ ಅವರನ್ನು ಯಕ್ಷಧ್ರುವ ಪುರಸ್ಕಾರ ನೀಡಿ ಗೌರವಿಸಲಾಯಿತು. ಕೇಂದ್ರೀಯ ಮಹಿಳಾ ಘಟಕದ ಗೌರವಾಧ್ಯೆಕ್ಷೆ ಆರತಿ ಆಳ್ವ, ಅಧ್ಯೆಕ್ಷೆ ಪೂರ್ಣಿಮಾ ಯತೀಶ್ ರೈ, ಕಾರ್ಯದರ್ಶಿ ಪೂರ್ಣಿಮಾ ಶಾಸ್ತ್ರಿ, ಕೋಶಾಧಿಕಾರಿ ಭಾರತಿ ಎಸ್ ರಾವ್, ಸಂಚಾಲಕಿ ನಿವೇದಿತಾ ಎನ್ ಶೆಟ್ಟಿ ಉಪಸ್ಥಿತರಿದ್ದರು. ಪೂರ್ಣಿಮಾ ಯತೀಶ್ ರೈ ಸ್ವಾಗತಿಸಿ ಪ್ರಸ್ತಾವನೆಗೈದರು. ಆರತಿ ಆಳ್ವ ವಂದಿಸಿದರು. ಸಾಯಿಸುಮ ನಾವಡ ಕಾರ್ಯಕ್ರಮ‌ ನಿರೂಪಿಸಿದರು.ಬಳಿಕ ಮಹಿಳಾ ಕಲಾವಿದೆಯರಿಂದ ದಶಾವತಾರ ಯಕ್ಷರೂಪಕ ಪ್ರದರ್ಶನಗೊಂಡಿತು.

Scroll to Top