ಕರ್ನಾಟಕ ವಾರ್ತೆಗಳು

ಕರ್ನಾಟಕ ವಾರ್ತೆಗಳು

ಸುಧಾಕರ್ ಹೆಗ್ಡೆ ಕೋಟೆಬಾಗಿಲು ಅವರಿಗೆ ಕರ್ನಾಟಕ ಮುಕುಟಮಣಿ ರಾಜ್ಯ ಪ್ರಶಸ್ತಿ.

ದಾವಣಗೆರೆ: ಶ್ರೀನಿಧಿ ಕ್ಯಾಟರರ್ಸ್ ಅಂಡ್ ಇವೆಂಟ್ ಮ್ಯಾನೇಜ್ಮೆಂಟ್ ಕೋಟೆಬಾಗಿಲು ಇದರ ಮಾಲಕರಾಗಿರುವ ಸುಧಾಕರ್ ಹೆಗ್ಡೆ ಅವರಿಗೆ ಉಧ್ಯಮ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಅನನ್ಯ ಸಾಧನೆಗಾಗಿ ದಾವಣಗೆರೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಡಿಸೆಂಬರ್ 1 ರಂದು ದಾವಣಗೆರೆಯಲ್ಲಿ ನಡೆಯಲಿರುವ 69 ನೇ ಕನ್ನಡ ರಾಜ್ಯೋತ್ಸವದ ಸಮಾರಂಭದಲ್ಲಿ ಕರ್ನಾಟಕ ಮುಕುಟಮಣಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಿದೆಂದು ಸಂಘಟಕರ ಪ್ರಕಟಣೆ ತಿಳಿಸಿದೆ

ಕರ್ನಾಟಕ ವಾರ್ತೆಗಳು

ಪ್ರಶಸ್ತಿ ವಿಜೇತ ನಿರ್ದೇಶಕ ವೆಂಕಟ್ ಭಾರಧ್ವಜ್ ನಿರ್ದೇಶನದ ‘ಹೇ ಪ್ರಭು’ ಬಹುಭಾಷಾ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ ಸುಧಾಕರ್ ಶೆಟ್ಟಿ.

ಬೆಂಗಳೂರು: ವೆಂಕಟ್ ಭಾರಧ್ವಜ್ ನಮ್ಮ ದೇಶ ಕಂಡ ಪ್ರತಿಭಾವಂತ ಪ್ರಶಸ್ತಿ ವಿಜೇತ ನಿರ್ದೇಶಕರಾಗಿದ್ದಾರೆ. ಇವರ ನಿರ್ದೇಶನದ ಭಾರೀ ನಿರೀಕ್ಷೆಯ ಹೇ ಪ್ರಭು ಬಹುಭಾಷಾ ಚಿತ್ರವಾಗಿದೆ. ಇದರಲ್ಲಿ ಮೂಡಬಿದ್ರೆ ಮೂಲದ ಪುಣೆಯ ಹೊರನಾಡ ಕನ್ನಡ ರತ್ನ,ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿಯವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದು, ಇದು ಗ್ರಾಮೀಣ, ಆರೋಗ್ಯ ಮತ್ತು ವೈದ್ಯಕೀಯ ಸಂದೇಶ ಸಾರುವ ಚಿತ್ರವಾಗಿರುವುದ್ದರಿಂದ ಪ್ರತಿಯೊಬ್ಬರು ನೋಡಲೇಬೇಕಾದ ಚಿತ್ರವಾಗಿದೆ. ಪ್ರಸಿದ್ದ ವೈದ್ಯ ಡಾ. ಸುಧಾಕರ್ ಶೆಟ್ಟಿಯವರು ಅಭಿನಯಿಸಿರುವುದ್ದರಿಂದ ವೈದ್ಯಕಿಯ ಜಗತ್ತು ಸೇರಿದತೆ ಕರ್ನಾಟಕ, ಮಹಾರಾಷ್ಟ್ರದ ಜನ ‘ಹೇ ಪ್ರಭು’ ಚಿತ್ರ ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರಕ್ಕೆ Mpmla’s ನ್ಯೂಸ್ ಶುಭ ಹಾರೈಸುತ್ತದೆ

ಕರ್ನಾಟಕ ವಾರ್ತೆಗಳು

ಡಾ. ಅಗರಿ ನವೀನ ಭಂಡಾರಿಯವರಿಗೆ ಬಾಗಲಕೋಟದಲ್ಲಿ ಕರ್ನಾಟಕ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪ್ರದಾನ.

ಮಂಗಳೂರು:ಸಹಕಾರ ಕ್ಷೇತ್ರದ ಸಾಧನೆಗಾಗಿ ನೀಡಲಾಗುವ ರಾಜ್ಯ ಸಹಕಾರ ರತ್ನ ಪುರಸ್ಕಾರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಉತ್ತರ ವಲಯದ ಮಾಜಿ ನಿರ್ದೇಶಕ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿರುವ ಪುತ್ತೂರು ಮೂಲದ ಹಿರಿಯ ಸಮಾಜ ಸೇವಕ ಡಾ. ಅಗರಿ ನವೀನ್ ಭಂಡಾರಿರವರಿಗೆ ನ. 17 ರಂದು ಬಾಗಲಕೋಟೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಹಕಾರ ಸಚಿವ ಕೆ.ಎನ್. ರಾಜಣ್ಣರವರು ಪ್ರಶಸ್ತಿ ಪ್ರದಾನ ಮಾಡಿದರು. ಅಗರಿ ನವೀನ್ ಭಂಡಾರಿಯವರು ಈಗಾಗಲೇ ಬೆಂಗಳೂರು ನಗರದ ಬೊಮ್ಮನಹಳ್ಳಿಯಲ್ಲಿ 111 ಎಕ್ರೆ ಪ್ರದೇಶದಲ್ಲಿ ಸುಸಜ್ಜಿತವಾದ ಮೂಲ್ಕಿ ಸುಂದರರಾಮ್ ಶೆಟ್ಟಿ ಬಡಾವಣೆ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಇಲ್ಲಿ 535 ಅಪಾರ್ಟ್‌ಮೆಂಟ್‌ನ್ನು ಇವರ ನೇತೃತ್ವದಲ್ಲಿ ನಿರ್ಮಿಸಲಾಗಿದೆ. ಇದು ಬೆಂಗಳೂರಿನಲ್ಲೇ ಮಾದರಿ ಬಡಾವಣೆಯಾಗಿ ಬೆಳೆದಿದೆ. ಇದರ ಬೆಳವಣಿಗೆ. ಅಭಿವೃದ್ಧಿ ಹಿಂದೆ ಅಗರಿ ನವೀನ್ ಭಂಡಾರಿಯವರ ಪರಿಶ್ರಮವಿದೆ.ಅಗರಿ ನವೀನ್ ಭಂಡಾರಿಯವರು ಮೂಲ್ಕಿ ಸುಂದರರಾಮ್ ಶೆಟ್ಟಿ ನಗರ ಸೌಹಾರ್ದ ಸಹಕಾರಿ ಸಂಘದಲ್ಲಿ ಕಳೆದ 19 ವರ್ಷಗಳಿಂದ ಅಧ್ಯಕ್ಷರಾಗಿ, ಸಹಕಾರ ಸಂಘವನ್ನು ಮಾದರಿಯಾಗಿ ಬೆಳೆಸಿದ್ದಾರೆ. ಸಹಕಾರ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿರುವ ನವೀನ್ ಭಂಡಾರಿಯವರು ಮೂಲ್ಕಿ ಸುಂದರರಾಮ್ ಶೆಟ್ಟಿ ನಗರ ಕ್ಷೇಮಾಭಿವೃದ್ಧಿ ಸಂಘದ ಸ್ಥಾಪಕಾಧ್ಯಕ್ಷರಾಗಿರುತ್ತಾರೆ. ಪ್ರಸ್ತುತ ಸುಂದರರಾಮ್ ಶೆಟ್ಟಿ ನಗರ ಕ್ಲಬ್ ಸಮಿತಿಯ ಅಧ್ಯಕ್ಷರಾಗಿದ್ದಾರೆ.ರಾಜ್ಯ ಸಹಕಾರ ರತ್ನ ಪ್ರಶಸ್ತಿಗೆ ಪಾತ್ರರಾದ ಡಾ. ಅಗರಿ ನವೀನ್ ಭಂಡಾರಿಯವರಿಗೆ Mp mla’s news ಶುಭ ಹಾರೈಸುತ್ತದೆ.

ಕರ್ನಾಟಕ ವಾರ್ತೆಗಳು

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ವೇದಿಕೆಯಲ್ಲಿ ಜನಮನ ರಂಜಿಸಿದ ಕನ್ನಡ ಗೀತಗಾಯನ ಕಾರ್ಯಕ್ರಮ

ದಸರಾ ವಸ್ತು ಪ್ರದರ್ಶನ 2024 ರ ವರ್ಣ ರಂಜಿತ ಕಾರ್ಯಕ್ರಮದಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರವು ಪ್ರತಿನಿತ್ಯ ಮೈಸೂರು ವಸ್ತು ಪ್ರದರ್ಶನ ವೇದಿಕೆಯಲ್ಲಿ ಆಯೋಜಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾನು ವೀಕ್ಷಿಸಿದ್ದೇನೆ. ಹಾಗೇನೇ 15-11-2024ರಂದು ಸಂಜೆ ಆಯೋಜಿಸಲಾದ ಗಂಗಾಧರ ಗಾಂಧಿ ಮತ್ತು ಬಳಗದ ಸಂಗೀತ ಕಾರ್ಯಕ್ರಮವನ್ನು ಕುತೂಹಲದಿಂದ ನೋಡಿದೆ. ಒಂದು ಸುಮಧುರ ಗೀತೆಗಳ ಲೋಕವೇ ಅಲ್ಲಿ ಅನಾವರಣ ಗೊಂಡಿತ್ತು. ಅಲ್ಲಿ ಮೂಡಿಬಂದ ಮಾಧುರ್ಯ ಪ್ರಧಾನವಾದ ಗೀತೆಗಳೇ ಆಗಿದ್ದವು. ಈ ಕಾರಣದಿಂದ ಜನಮನಗೆಲ್ಲುವಲ್ಲಿ ಯಶಸ್ವಿಯಾಯಿತು.ಸರಿಯಾಗಿ ಸಂಜೆ 6 ಗಂಟೆಗೆ ‘ಈ ದೇಶ ಚೆನ್ನ ಈ ಮಣ್ಣು ಚೆನ್ನ, ಎಂದು ನಾ ಕಾಣೆನಲ್ಲ’ ಎಂಬ ಹಾಡಿನೊಂದಿಗೆ ಆರಂಭಗೊಂಡು ದ್ವಿತೀಯ ಹಾಡಾಗಿ’ಕನ್ನಡಮ್ಮನ ದೇವಾಲಯ ಕಂಡೆ ಹೆಣ್ಣಿನ ಕಂಗಳಲಿ ‘ ಹಾಡುವ ಮೂಲಕ ನಿರಂತರ ಸುಮಾರು 45ಕ್ಕು ಹೆಚ್ಚು ಗೀತೆಗನ್ನು ಹಾಡುವುದೆಂದರೆ ತಮಾಷೆ ಮಾತಲ್ಲ ಮತ್ತು ಅನೇಕರು ಗಾಯನ ಕಂಡು ಮುಖವಿಸ್ಮಿತಾರಾದರು. ಸುಮಧುರ ಹಾಡುಗಳು ಜನರನ್ನು ಮನರಂಜಿಸಿತು…ಹಿನ್ನಲೆಯಲ್ಲಿ ಸಂಗೀತ ಪರಿಕರ ನುಡಿಸುವವರು ಇರಲಿಲ್ಲ ನಿಜ . ಹಾಗಾಗಿ ಇತ್ತೀಚಿನ ನೂತನ ಆವಿಷ್ಕಾರದ ಕರೋಕೆ ಮಾದರಿಯಲ್ಲಿ ಹಿನ್ನಲೆ ಸಂಗೀತವನ್ನು ಅಳವಡಿಸಲಾಗಿತ್ತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪರಿಕರ ನುಡಿಸುವಿಕೆಯಲ್ಲಿ ಅಥವಾ ಗಾಯನದಲ್ಲಿ ವ್ಯತ್ಯಾಸವಾದರೆ ಸರಿದೂಗಿಸಿಕೊಳ್ಳಲು ಅವಕಾಶವಿರುತ್ತದೆ. ಕರೋಕೇ ಹಿನ್ನಲೆ ಸಂಗೀತದಲ್ಲಿ ಹಾಡುವಾಗ ಗಾಯಕ ಒಂದು ಕ್ಷಣ ತಪ್ಪಿದರೂ ಹಾಡಿನ ರೂಪವೇ ಬದಲಾದೀತು. ಹಾಗಾಗಿ ಕರೋಕೆ ಗಾಯನವನ್ನು ಸಾಮಾನ್ಯವೆಂದು ಪರಿಭಾವಿಸುವಂತಿಲ್ಲ ಮತ್ತು ಅದೊಂದು ತಪ್ಪಸ್ಸೆ ಸರಿ.ಅನೇಕ ಬೇರೆ ಬೇರೆ ಸಂಗೀತ ಪರಿಕರಗಳನ್ನು ಬಳಸಿ ಮಧ್ಯೆ ಮಧ್ಯೆ ಸಂಗೀತ ನುಡಿಸುವಿಕೆಗೆ ಸಮಯ ಕಳೆದುಕೊಳ್ಳುವ ಈ ಸಂದರ್ಭಗಳಲ್ಲಿ ಕಡಿಮೆ ಅವಧಿಯಲ್ಲಿ ಕರೋಕೆ ಮೂಲಕ ಸುಮಾರು _45 ಕ್ಕು ಹೆಚ್ಚು ಹಾಡುಗಳನ್ನು ಸಾದರ ಪಡಿಸಿದ ಗಂಗಾಧರ್ ಗಾಂಧಿ, ರಾಣಿ ಪುಷ್ಪಲತಾ ದೇವಿ, ವರ್ಷ ರವರ ಗಾಯನ ನಿಜಕ್ಕು ಅದ್ಭುತವೆನಿಸಿತು.ಅಲ್ಲದೆ ಪ್ರತಿ ಹಾಡಿನ ಮಧ್ಯೆ ಗೀತೆಯ ಬಗ್ಗೆ ಅತ್ಯಂತ ಕಡಿಮೆ ಶಬ್ಧಗಳಲ್ಲಿ ಹಾಡಿನ ನಿರೂಪಣೆ ಗೈದ ರೇಷ್ಮಾ ಶೆಟ್ಟಿ ಗೋರೂರು ಹಾಗೂ ಮಧ್ಯೆ ಮಧ್ಯೆ ಮೂಡಿಬಂದ ಬಾಲ ಕಲಾವಿದೆ ಲಾಲಿತ್ಯ ಬೇಲೂರು ಇವರ ನೃತ್ಯ ಮನಸಿಗೆ ಮುದನೀಡಿತು.ಬಹಳ ಮುಖ್ಯವಾಗಿ ಒಂದಕ್ಕಿಂತ ಒಂದು ಮಾಧ್ಯರ್ಯ ಪ್ರಧಾನ ಕನ್ನಡ ಗೀತೆಗಳು ಮೂಡಿ ಬಂದಿರುವುದಲ್ಲದೆ ಪ್ರೇಕ್ಷಕರ ಒತ್ತಾಯದ ಮೇರೆಗೆ ಒಂದೆರಡು ಹಿಂದಿ ಹಾಡುಗಳನ್ನು ಸಾದರ ಪಡಿಸಿ ಜನಮೆಚ್ಚುಗೆಗೆ ಪಾತ್ರರಾದರು. ಈ ಕಾರ್ಯಕ್ರಮದ ನಂತರ ತಿಳಿದ ವಿಚಾರವೇನೆಂದರೆ ಗಂಗಾಧರ್ ಗಾಂಧಿ, ರಾಣಿ ಪುಷ್ಪಲತಾ ದೇವಿ, ವರ್ಷ ಕರ್ಕೇರಾ , ಶ್ರೀ ರಕ್ಷಾ ಸರ್ಪಗಳ ಮತ್ತು ನೇತ್ರಾ ಖುಷಿ ಕಳೆದ 2023 ರ ನವೆಂಬರ್ ತಿಂಗಳಲ್ಲಿ ಮಂಗಳೂರಿನ ಪುರಭನದಲ್ಲಿ ನಿರಂತರ 12 ಗಂಟೆ ಹಾಡುವ ಮೂಲಕ ಎರಡು ವಿಶ್ವದಾಖಲೆಯನ್ನು ನಿರ್ಮಿಸಿರುವ ವಿಚಾರ ಬೆಳಕಿಗೆ ಬಂತು. ಮತ್ತು ಕರ್ನಾಟಕ ವಸ್ತು ಪ್ರದರ್ಶನ ವೇದಿಕೆಯಲ್ಲಿ ಗಂಗಾಧರ್ ಗಾಂಧಿ, ರಾಣಿ ಪುಷ್ಪಲತಾ ದೇವಿ ಮತ್ತು ವರ್ಷ ಕರ್ಕೇರಾ 45 ಕ್ಕೂ ಹೆಚ್ಚು ಗೀತೆಗಳನ್ನು ಹಾಡುವ ಮೂಲಕ ನಿಜಕ್ಕೂ ಶ್ಲಾಘನೀಯ ವೆನಿಸಿದರು.ಈ ತಂಡವನ್ನು ಗುರುತಿಸಿ ಮೈಸೂರಿನ ವೇದಿಕೆಯಲ್ಲಿ ಅವಕಾಶ ಕಲ್ಪಿಸಿಕೊಟ್ಟ “ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ” ದ ಅಧ್ಯಕ್ಷ ರಘುರಾಜ್ ಅರಸ್ ಹಾಗೂ ಉಪಾಧ್ಯಕ್ಷ ರಾಜೇಶ್ ಸಿ.ಗೌಡ ಅಭಿನಂದನಾರ್ಹರು ಅನಿಸಿತು. ಇಂತಹ ಪ್ರತಿಭೆಗಳಿಗೆ ಮತ್ತಷ್ಟು ಅವಕಾಶಗಳು ಸಿಗುವಂತಾಗಲಿ ಎಂಬುದೇ ನನ್ನ ಆಶಯ.ಡಾ. ಕೊಲ್ಚಪ್ಪೆ ಗೋವಿಂದ ಭಟ್.

ಕರ್ನಾಟಕ ವಾರ್ತೆಗಳು

ಕರ್ನಾಟಕ ಜಾನಪದ ಪರಿಷತ್ ನ ಜಿಲ್ಲಾಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಪ್ರವೀಣ್ ಕುಮಾರ್ (ಪಮ್ಮಿ) ಕೊಡಿಯಲ್ ಬೈಲ್ ಆಯ್ಕೆ.

ಬೆಂಗಳೂರು: ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಇದರ ದ.ಕ. ಜಿಲ್ಲಾಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಪ್ರವೀಣ್ ಕುಮಾರ್(ಪಮ್ಮಿ) ಕೊಡಿಯಾಲ್ ಬೈಲ್ ಅವರು ಆಯ್ಕೆಯಾಗಿದ್ದಾರೆ. ಇವರಿಗೆ mpmla’s ನ್ಯೂಸ್ ಶುಭ ಹಾರೈಸುತ್ತದೆ.

ಕರಾವಳಿ ಸುದ್ದಿ, ಕರ್ನಾಟಕ ವಾರ್ತೆಗಳು

ಇಂದು ಪಿಡಿಓ ನೇಮಕಾತಿ ಪರೀಕ್ಷೆ. ಪರೀಕ್ಷಾ ಆಡಳಿತ ಮಂದಿ ವಿರುದ್ದ ವಿದ್ಯಾರ್ಥಿಗಳಿಂದ ಪ್ರತಿಭಟನೆ. ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ.

ಬ್ರೇಕಿಂಗ್ ನ್ಯೂಸ್: ಡಾ. ಅಶೋಕ್ ಶೆಟ್ಟಿ ಬಿ. ಎನ್.ಕಲ್ಬುರ್ಗಿ: ಇಂದು ರಾಜ್ಯದಲ್ಲಿ ಪಿಡಿಓ ನೇಮಕಾತಿ ಪರೀಕ್ಷೆ ನಡೆದಿದ್ದು, ಕಲ್ಬುರ್ಗಿಯಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಆಡಳಿತ ಮಂದಿ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎನ್ನುವ ಆರೋಪಗಳು ವಿದ್ಯಾರ್ಥಿಗಳಿಂದ ಕೇಳಿ ಬಂದಿವೆ. ಕಲ್ಬುರ್ಗಿಯ ಇಸ್ಲಾಂಬಾದ್ ಕಾಲೋನಿಯಲ್ಲಿರುವ ಲಿಟಲ್ ಫ್ಲವರ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿದ್ದರೂ,12 ವಿದ್ಯಾರ್ಥಿಗಳಿಗೆ ಮಾತ್ರ ಬೆಳಗಿನ ಸಾಮಾನ್ಯ ಪ್ರಶ್ನೆ ಪತ್ರಿಕೆಯನ್ನು 20 ನಿಮಿಷ ತಡವಾಗಿ ನೀಡಲಾಗಿದೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಎರಡನೇ ಪರೀಕ್ಷೆಗೆ ಹಾಜರಾಗದೆ ಪ್ರತಿಭಟನೆ ನಡೆಸಿದ್ದಾರೆ.ಪ್ರಶ್ನೆ ಪತ್ರಿಕೆ ಇಲ್ಲದೆ ಪರೀಕ್ಷೆ ಹೇಗೆ ಬರೆಯಲಿ? ನಮಗೆ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಅನುಮಾನವಿದೆಂದು ವಿದ್ಯಾರ್ಥಿಗಳು ಪ್ರತಿಭಟನೆ ವೇಳೆ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು, ಬೀದರ್, ಕಲ್ಬುರ್ಗಿಯ 840 ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

ಕರ್ನಾಟಕ ವಾರ್ತೆಗಳು

ರವಿ ಶೆಟ್ಟಿ ಮೂಡಂಬೈಲು ಹಾಗೂ ಮಿತ್ರಂಪಾಡಿ ಜಯರಾಮ ರೈಯವರಿಗೆ ‘ನವಕರ್ನಾಟಕ ರತ್ನ’ ಪ್ರಶಸ್ತಿ

ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಕರ್ನಾಟಕ ಸಂಘ ಕತಾರ್ ನ ಅಧ್ಯಕ್ಷ ರವಿ ಶೆಟ್ಟಿ ಮೂಡಂಬೈಲು ಹಾಗೂ ಅಬುಧಾಬಿಯ ಇಂಡಿಯಾ ಸೋಶಿಯಲ್ ಆಂಡ್ ಕಲ್ಚರ್ ಸೆಂಟರ್ ಅಧ್ಯಕ್ಷ ಜಯರಾಮ್ ರೈ ಮಿತ್ರಂಪಾಡಿಯವರು ಸಮಾಜಸೇವೆ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಹೃದಯವಾಹಿನಿ ರಜತ ಮಹೋತ್ಸವ ಹಾಗೂ ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನದಲ್ಲಿ ಪ್ರತಿಷ್ಠಿತ ನವಕರ್ನಾಟಕ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದರು. ಯುಎಇ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿಯವರು ಸಮ್ಮೇಳನದ ಅಧ್ಯಕ್ಷರಾಗಿ ಆಗಮಿಸಿದ್ದರು.

ಕರ್ನಾಟಕ ವಾರ್ತೆಗಳು

ವಿಧಾನ ಸೌಧದಲ್ಲಿ ಸದ್ದು ಮಾಡಿದ mpmlasnewstv 24×7 news portal.

ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿ ಪಾರದರ್ಶಕವೇ ಎಂದು mpmlasnewstv 24×7 news portal ತನಿಖಾ ವರದಿ ಪ್ರಕಟಿಸಿತ್ತು.ಈ ವರದಿಯಲ್ಲಿ ಉದ್ಯಮಿಯೊಬ್ಬರು ರಾಜ್ಯೋತ್ಸವ ಪ್ರಶಸ್ತಿ ಪಡೆಯುವುದಕ್ಕಾಗಿ 15 ಲಕ್ಷ ರೂಪಾಯಿ ಖರ್ಚು ಮಾಡಿರುವ ಬಗ್ಗೆ ಬರೆಯಲಾಗಿತ್ತು.ಈ ಹಿನ್ನಲೆಯಲ್ಲಿ ಜನಸಾಮಾನ್ಯರಿಗೆ, ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಸಾಧ್ಯವೇ? ಈ ಬಗ್ಗೆ ಸಿಎಂ ಸಿದ್ದರಾಮಯ್ಯನವರು ಖುದ್ದು ಪರಿಶೀಲಿಸಿ ಅರ್ಹರಿಗೆ ಮಾತ್ರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕೆಂದು ಹೇಳಲಾಗಿತ್ತು.ಇದು ರಾಜ್ಯೋತ್ಸವ ಪ್ರಶಸ್ತಿಯ ಅಂತಿಮ ಪಟ್ಟಿ ಬಿಡುಗಡೆಯ ದಿವಸ ಸಿಎಂ ಸಿದ್ಧರಾಮಯ್ಯರವರ ಗಮನಕ್ಕೆ ಬಂದು ಅವರು ರಾಜ್ಯೋತ್ಸವ ಪಟ್ಟಿಯಲ್ಲಿದ್ದ ಆ ಉದ್ಯಮಿಯ ಹೆಸರನ್ನು ಪಟ್ಟಿಯಿಂದಲೇ ಕಿತ್ತೆಸೆದು ಪ್ರಾಮಾಣಿಕ ಮತ್ತು ಅರ್ಹರಿಗೆ ಮಾತ್ರ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದರು.ಇದು mpmlasnewstv 24×7 news portal ವರದಿಗೆ ಸಂದ ಜಯವಾಗಿದೆ.

ಕರ್ನಾಟಕ ವಾರ್ತೆಗಳು

“ಕರ್ನಾಟಕ ಮುಕುಟಮಣಿ” ಪ್ರಶಸ್ತಿಗೆ ಸಮಾಜ ಸೇವಕ ಯು.ಆರ್.ಶೆಟ್ಟಿ ಆಯ್ಕೆ

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಈ ಬಾರಿ ಕನ್ನಡ ರಾಜ್ಯೋತ್ಸವದ ಸಂದರ್ಭ ನೀಡಲಿರುವ ” ಕರ್ನಾಟಕ ಮುಕುಟಮಣಿ ” ಪ್ರಶಸ್ತಿಗೆ ಮಂಗಳೂರಿನ ಸಮಾಜ ಸೇವಕ ಯು.ಆರ್.ಶೆಟ್ಟಿ ಯವರನ್ನು ಆಯ್ಕೆಗೊಳಿಸಿದೆ.ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕ ನೌಕರರಾಗಿರುವ ಯು.ಆರ್.ಶೆಟ್ಟಿ ಮಾಡಿರುವ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಗೊಳಿಸಲಾಗಿದೆ. ತುರ್ತು ಸಂದರ್ಭ ಗಳಲ್ಲಿ ಅನೇಕ ಬಾರಿ ರಕ್ತದಾನವನ್ನು ಮಾಡಿರುವ ಇವರು ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕವೂ ಜನಮನ್ನಣೆ ಪಡೆದಿರುವರು. ಕೋವಿಡ್-19 ತುರ್ತುಸ್ಥಿತಿ ಯಲ್ಲಿ ಪ್ಲಾಸ್ಮಾ ದಾನ ಮಾಡಿರುವ ಯು.ಆರ್.ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ನಾಟಕ ಸ್ಪರ್ಧೆಯಲ್ಲಿ ಸತತ ಏಳು ಬಾರಿ ಆಯ್ಕೆಗೊಂಡು ಇಲಾಖೆಗೆ ಹೆಮ್ಮೆ ತಂದಿರುವರು. ಕರ್ನಾಟಕ ಕಲಾ ಮತ್ತು ಸಾಂಸ್ಕೃತಿಕ ಸಂಘದ ಜಿಲ್ಲಾಧ್ಯಕ್ಷರಾಗಿರುವ ಶ್ರೀಯುತರು ಈಗಾಗಲೇ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿರುವರು.

ಕರ್ನಾಟಕ ವಾರ್ತೆಗಳು

ಇವರೇ ತಮಗೆ ಬೇಕಾದಂತೆ ಪಟ್ಟಿ ಮಾಡುವುದಾದರೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಹೇಳುವುದು ಯಾಕೆ? ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಾರದರ್ಶಕವೇ?

ತನಿಖಾ ವರದಿ: ಡಾ.ಅಶೋಕ್ ಶೆಟ್ಟಿ ಬಿ. ಎನ್.ಬೆಂಗಳೂರು: ಕಳೆದ ಒಂದು ತಿಂಗಳಿಂದ ಕನ್ನಡ ರಾಜ್ಯೋತ್ಸವದ ಪ್ರಶಸ್ತಿಗಾಗಿ ಲಾಬಿ ನಡೆಸುವವರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಈ ಪೈಕಿ,ಬಂಟ ಉದ್ಯಮಿಯೊಬ್ಬರು 15 ಲಕ್ಷ ರೂಪಾಯಿ ಖರ್ಚು ಮಾಡಿದ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಪ್ರಶಸ್ತಿಗಾಗಿ ಆನ್ಲೈನ್ ಅರ್ಜಿ ಸಲ್ಲಿಸಲು ಸೆ. 30 ಕೊನೆಯ ದಿನಾಂಕವಾಗಿತ್ತು. ಹೀಗೇ 2,800 ಅರ್ಜಿಗಳು ಬಂದಿದ್ದವು. ಅವುಗಳನ್ನು 700 ಕ್ಕೆ ಇಳಿಸಿ ಪಟ್ಟಿ ಮಾಡಲಾಗಿತ್ತು. ಗಮನಿಸಬೇಕಾದ ವಿಷಯವೆಂದರೆ,ಕೇವಲ ಆನ್ಲೈನ್ ಅರ್ಜಿ ಸಲ್ಲಿಸಿ ಸುಮ್ಮನೆ ಕುಳಿತವರಿಗೆ ಪ್ರಶಸ್ತಿ ಇಲ್ಲ. ಎಂಎಲ್ಎ, ಮಂತ್ರಿಗಳ ಮೂಲಕ ಲಾಬಿ ನಡೆಸಿದವರಿಗೆ ಮಾತ್ರ ಪ್ರಶಸ್ತಿವೆಂಬುದು ಬಹಿರಂಗ ಸತ್ಯವಾಗಿದೆ. ಕೇವಲ ಲಾಬಿ ನಡೆಸುವವರಿಗೆ ಪ್ರಶಸ್ತಿ ನೀಡುವುದಾರೆ ಆನ್ಲೈನ್ ಮೂಲಕ ಪ್ರಶಸ್ತಿಗೆ ಅರ್ಜಿ ಕರೆಯುವುದು ಯಾವ ಪುರುಷಾರ್ಥಕ್ಕೆ?ಇದು ಜನರ ಕಣ್ಣೆಗೆ ಮಣ್ಣೆರೆಚುವುದೇ? ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಪ್ರಶಸ್ತಿಗೆ ಅರ್ಹರ ಪಟ್ಟಿಯನ್ನು ಅಂತಿಮಗೊಳಿಸುವುದಕ್ಕೆ ಮುನ್ನ ಪರಿಶೀಲಿಸಬೇಕಾಗಿದೆ. ಕಳೆದ ವರ್ಷ ವಿದೇಶದಲ್ಲಿರುವ ಬಂಟ ಉದ್ಯಮಿಯೊಬ್ಬರು 25 ಲಕ್ಷ ರೂಪಾಯಿ ಖರ್ಚು ಮಾಡಿದ್ದೂ ಗುಟ್ಟಾಗಿ ಉಳಿದಿಲ್ಲ. ರಾಜ್ಯೋತ್ಸವ ಪ್ರಶಸ್ತಿ ಎನ್ನುವುದು ಹಣ ಮಾಡುವ ಸ್ಕೀಮೇ ಅಥವಾ ಅರ್ಹರನ್ನು ಗೌರವಿಸುವ ಸರಕಾರದ ಯೋಜನೆಯೇ? ಗೊಂದಲದಲ್ಲಿದ್ದಾರೆ ಜನ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಸಂಗಪ್ಪ ತಂಗಡಗಿಯವರಿಗೆ ಫುಲ್ ಪವರ್ ಅಂತೆ? ರಿಮೋಟ್ ಕಂಟ್ರೋಲ್ ಸಿಎಂ ಕೈಯಲ್ಲಂತೆ. ಅರ್ಹರನ್ನು, ಪ್ರತಿಭಾವಂತರನ್ನು ಹಾಗೇ ಸುಮ್ಮನೆ ಗೌರವಿಸಿ ಪ್ರಶಸ್ತಿ ನೀಡುವ ಶುಭ ಘಳಿಗೆ ಸಿಎಂ ಸಿದ್ದರಾಮಯ್ಯ ಅವರು ಮನಸ್ಸು ಮಾಡಿದರೆ ಖಂಡಿತ ಸಾಧ್ಯವಿದೆ. ಮಾನ್ಯ ಮುಖ್ಯಮಂತ್ರಿಗಳು ಈ ಬಗ್ಗೆ ತಕ್ಷಣ ಅರ್ಹರ ಪಟ್ಟಿಯನ್ನು ಅಂತಿಮಗೊಳಿಸಬೇಕಾಗಿದೆ. ಇದು ಸಾಧ್ಯನಾ? ಕಾತರದಿಂದ ಕಾಯುತ್ತಿದ್ದಾರೆ ಜನ.

Scroll to Top