ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಪಾಲ್ದನೆ ಚರ್ಚ್: ಐಸಿವೈಎಂ ಘಟಕದ ನೂತನ ಪದಾಧಿಕಾರಿಗಳ ಪ್ರಮಾಣ ವಚನ

ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚಿನ ಐಸಿವೈಎಂ ಘಟಕದ ನೂತನ ಪದಾಧಿಕಾರಿಗಳ ಪ್ರಮಾಣ ವಚನ ಜೂನ್‌ 15 ರಂದು ಬೆಳಗ್ಗೆ ಬಲಿಪೂಜೆಯ ಬಳಿಕ ನೆರವೇರಿತು. ಚರ್ಚಿನ ಧರ್ಮಗುರು ವಂದನೀಯ ಫಾ. ಆಲ್ಬನ್‌ ಡಿ’ಸೋಜಾ ಅವರು ಪ್ರಮಾಣ ವಚನ ಬೋಧಿಸಿದರು.ಸಂಘದ ಅಧ್ಯಕ್ಷೆಯಾಗಿ ವಿನೀಶಾ ಬ್ರ್ಯಾಗ್ಸ್, ಉಪಾಧ್ಯಕ್ಷರಾಗಿ ರಾಯನ್‌ ನೊರೊನ್ಹಾ, ಕಾರ್ಯದರ್ಶಿಯಾಗಿ ಆ್ಯಶಲ್‌ ಲೋಬೊ, ಜತೆ ಕಾರ್ಯದರ್ಶಿಯಾಗಿ ಡ್ಯಾರನ್‌ ಅರಾನ್ಹಾ, ಖಜಾಂಚಿಯಾಗಿ ಗ್ಲೇವಿನ್ ಡಿ’ಸೋಜಾ, ‘ಆಮ್ಚೊ ಯುವಕ್‌’ ಇದರ ಪ್ರತಿನಿಧಿಯಾಗಿ ವಿನೊಲಾ ಪಿಂಟೊ, ರೆಡ್‌ ಡ್ರೊಪ್‌ ಪ್ರತಿನಿಧಿಯಾಗಿ ಬ್ರೆಂಡನ್‌ ಪಿರೇರಾ, ಆಧ್ಯಾತ್ಮಿಕ ಕಾರ್ಯದರ್ಶಿ ಫ್ರೀಡಲ್ ಡಿ’ಸೋಜಾ, ಕ್ರೀಡಾ ಕಾರ್ಯದರ್ಶಿಯಾಗಿ ಡಿಯೋನ್ ಫೆರ್ನಾಂಡಿಸ್‌, ನಿಕಟ ಪೂರ್ವ ಅಧ್ಯಕ್ಷ ವಿಲ್‌ಸನ್ ಪಿಂಟೊ ಅವರು ಪ್ರತಿಜ್ಞೆ ಸ್ವೀಕರಿಸಿದರು.ಸಂಘದ ಸಚೇತಕ ಹಾಗೂ ಮದರ್ ತೆರೆಸಾ ವಾರ್ಡ್‌ ನ ಮುಖ್ಯಸ್ಥ ರೋಶನ್‌ ಮೊಂತೇರೊ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ರೆಡ್‌ಕ್ರಾಸ್‌ನಿಂದ ವಿಶ್ವ ರಕ್ತದಾನಿಗಳ ದಿನಾಚರಣೆ. ನಿರಂತರ ರಕ್ತದಾನದಿಂದ ಆರೋಗ್ಯಪೂರ್ಣ ಹೃದಯ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್.ತಿಮ್ಮಯ್ಯ ಮಾಹಿತಿ

ಮಂಗಳೂರು : ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದ.ಕ.ಜಿಲ್ಲಾ ಸಮಿತಿ ವತಿಯಿಂದ ಎಸ್‌ಡಿಎಂ ಪಿ.ಜಿ.ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಸಹಯೋಗದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ನಗರದ ಕೊಡಿಯಾಲ್‌ಬೈಲ್‌ನ ಎಸ್‌ಡಿಎಂ ಕಾನ್ಫರೆನ್ಸ್ ಹಾಲ್‌ನಲ್ಲಿ ಶನಿವಾರ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್.ತಿಮ್ಮಯ್ಯ ಮಾತನಾಡಿ ‘ ನಿರಂತರ ರಕ್ತದಾನ ಮಾಡುವ ರಕ್ತದಾನಿಗಳ ದೇಹದಲ್ಲಿ ಶುದ್ದ ರಕ್ತ ಉತ್ಪಾದನೆಯಾಗುತ್ತಲೇ ಇರುವ ಕಾರಣ ಹೆಚ್ಚು ಆರೋಗ್ಯವಂತರಾಗಿರುತ್ತಾರೆ. ಇದರಿಂದ ಅವರ ಹೃದಯವೂ ಆರೋಗ್ಯ ಪೂರ್ಣವಾಗಿರುತ್ತದೆ. ತುರ್ತು ಸಂದರ್ಭ ಜೀವ ಉಳಿಸಲು ನೆರವಾಗುವ ರಕ್ತದಾನದ ಬಗ್ಗೆ ಯುವ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಅವಶ್ಯ’ಎಂದರು.ಅಧ್ಯಕ್ಷತೆ ವಹಿಸಿದ್ದ ರೆಡ್‌ಕ್ರಾಸ್ ದ.ಕ.ಜಿಲ್ಲಾ ಸಮಿತಿಯ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ ‘ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭ ಅವಶ್ಯ ಇರುವವರಿಗೆ ರೆಡ್‌ಕ್ರಾಸ್‌ನ ಬ್ಲಡ್ ಬ್ಯಾಂಕ್ ವತಿಯಿಂದ ಸಂಪೂರ್ಣ ಉಚಿತವಾಗಿ ರಕ್ತ ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಿಪಿಎಲ್ ಕಾರ್ಡ್ ಇರುವವರು ಯಾವುದೇ ಆಸ್ಪತ್ರೆಯಲ್ಲಿ ದಾಖಲಾದರೂ ರೆಡ್‌ಕ್ರಾಸ್‌ನಿಂದ ಉಚಿತವಾಗಿ ರಕ್ತ ಒದಗಿಸಲು ಯೋಜನೆ ರೂಪಿಸಲಾಗುವುದು ಎಂದರು.ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿ ಡಾ.ಶಿವಪ್ರಕಾಶ್.ಡಿ. ಎಸ್., ಎಸ್‌ಡಿಎಂ ಪಿ.ಜಿ.ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ನಿರ್ದೇಶಕಿ ಡಾ.ಸೀಮಾ.ಎಸ್. ಶೆಣೈ, ಕೆಎಂಸಿಯ ಆರ್ಥೋ ವಿಭಾಗದ ಮುಖ್ಯಸ್ಥ ಡಾ.ಕೆ.ಆರ್.ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.15ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ರಕ್ತದಾನಿಗಳನ್ನು ಸನ್ಮಾನಿಸಲಾಯಿತು. ರೆಡ್‌ಕ್ರಾಸ್ ಜಿಲ್ಲಾ ಸಮಿತಿಯ ಉಪಾಧ್ಯಕ್ಷಡಾ.ಸತೀಶ್ ರಾವ್, ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಡಾ.ಸಚ್ಚಿದಾನಂದ ರೈ, ಪಿ.ಬಿ.ಹರೀಶ್ ರೈ, ಸಲಹೆಗಾರರಾದಪ್ರಭಾಕರ ಶರ್ಮ, ಕೆ.ಸುಧಾಕರ್‌ಉಪಸ್ಥಿತರಿದ್ದರು.ರೆಡ್‌ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ಸ್ವಾಗತಿಸಿ, ಎಸ್‌ಡಿಎಂ ಪಿ.ಜಿ.ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್‌ನ ಯೂತ್ ರೆಡ್‌ಕ್ರಾಸ್ ಅಧಿಕಾರಿ ಡಾ.ರಮ್ಯ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ಬಿ.ಅಪೂರ್ವ ರಕ್ತದಾನಿಗಳ ವಿವರ ನೀಡಿದರು. ವೈಷ್ಣವಿ ಆಚಾರ್ ಕಾರ್ಯಕ್ರಮ ನಿರೂಪಿಸಿದರು.ರಕ್ತದಾನಿಗಳಿಗೆ ಸನ್ಮಾನಅಧಿಕ ಬಾರಿ ರಕ್ತದಾನ ಮಾಡಿದ ಕರುಣಾಕರ.ಎಂ.ಎಚ್.ಮಂಗಳೂರು( 71ಬಾರಿ), ಸೀತಾರಾಮ ಗೌಡ ಪುತ್ತೂರು (65), ಕೆ.ವಿದ್ಯಾಕುಮಾರ್ ಬೆಳ್ತಂಗಡಿ (51), ರಾಘವೇಂದ್ರ ರಾವ್, ಮಂಗಳೂರು (40), ಪ್ರಕಾಶ್ ಬಾಳಿಗಾ ,ಬಂಟ್ವಾಳ (36),ಶರತ್.ಬಿ.ಎಸ್., ಸುಳ್ಯ( 32), ಚಂದ್ರಶೇಖರ .ಜಿ., ಮಂಗಳೂರು (29), ದೇವಿಪ್ರಸಾದ್ ಶೆಟ್ಟಿ , ಸುಳ್ಯ ( 27), ನವೀನ್ ,ಸುಳ್ಯ (25), ಬಾಲಕೃಷ್ಣ ಪಿ.ಎಸ್. ಸುಳ್ಯ ( 20), ಶಿವಾನಂದ.ಕೆ.ಆರ್. ಸುರತ್ಕಲ್ (18), ಸಂತೋಷ್ ಕುಮಾರ್ ರೈ ಮಂಗಳೂರು ಮತ್ತುಕಾರ್ತಿಕ್.ಆರ್.ಪದ್ಮಶಾಲಿ ಕೊಣಾಜೆ ( ತಲಾ 15 ಬಾರಿ) ಇವರುಗಳನ್ನು ಸನ್ಮಾನಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ. ಮಕ್ಕಳ ಹೃದ್ರೋಗ ಶಾಸ್ತ್ರ ಕಾರ್ಯಾಗಾರ

ಮಂಗಳೂರು: ದೇಶದಲ್ಲಿ ಇತ್ತೀಚೆಗೆ ಮಕ್ಕಳಲ್ಲಿ ಹೃದ್ರೋಗ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿದ್ದು, ಇದರ ಮಾಹಿತಿ, ಜಾಗೃತಿ, ಮುಂಜಾಗೃತ ಕ್ರಮ, ಆಧುನಿಕ ಚಿಕಿತ್ಸಾ ವಿಧಿವಿಧಾನಗಳ ಬಗ್ಗೆ ಈ ವೈದ್ಯಕೀಯ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧ್ಯಕ್ಷ ಡಾ. ಹಾಜಿ ಯು.ಕೆ. ಮೋನು ಹೇಳಿದರು.ಅವರು ಕಣಚೂರು ವೈದ್ಯಕೀಯ ಶಿಕ್ಷಣ ಕಾಲೇಜಿನಲ್ಲಿ ಶಿಶು ಮತ್ತು ಮಕ್ಕಳ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ತಮ್ಮ ಸಂಸ್ಥೆಯ ನಿರಂತರ ವೈದ್ಯಕೀಯ ಶಿಕ್ಷಣದ ಅಂಗವಾಗಿ ಎರಡು ದಿನ ಅವಧಿಯ ಮಕ್ಕಳ ಹೃದ್ರೋಗ ಶಾಸ್ತ್ರ ಶಿಕ್ಷಣ, ಆರೈಕೆ, ಮತ್ತು ಚಿಕಿತ್ಸೆಯ ಶನಿವಾರ ಕಾಲೇಜಿನ ಡ್ರೋಮ್ ಸಭಾಂಗಣದಲ್ಲಿ ಜರುಗಿದ ರಾಜ್ಯ ಮಟ್ಟದ ವೈದ್ಯಕೀಯ ಕಾರ್ಯಾಗಾರವನ್ನು ಉದ್ಘಾಟಿಸಿ ವೈದ್ಯಕೀಯ ವೃಂದ ಮತ್ತು ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿ ವೃಂದದವರನ್ನು ಉದ್ದೇಶಿಸಿ ಮಾತನಾಡಿದರು. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ರಹಮಾನ್ ಮಾತನಾಡಿ, ವೈದ್ಯರು ನಿರಂತರ ಅಧ್ಯಯನ, ಸಂಶೋಧನೆಯಲ್ಲಿ ತೊಡಗಿ ನೂತನ ಅವಿಷ್ಕಾರಗಳಿಗೆ ಸ್ಪಂದಿಸಿ ತಮ್ಮ ವೈದ್ಯಕೀಯ ಜ್ಞಾನವನ್ನು ವೃದ್ದಿಸಿ ಯಶಸ್ಸು ಸಾಧಿಸಿ ಜನಮನ್ನಣೆಗೆ ಪಾತ್ರರಾಗಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಕೊಚ್ಚಿನ್ ನಗರ ಮೂಲದ ಡಾ. ಕೃಷ್ಣ ಕುಮಾರ್ ಹಾಗೂ ಬೆಂಗಳೂರು ನಗರ ಮೂಲದ ಡಾ. ಸೇಜಲ್ ಶಾರವರು ಹೃದ್ರೋಗ ಶಾಸ್ತ್ರ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆ, ನೀಡಿದ ಅಮೂಲ್ಯ ಕೊಡುಗೆ ಮತ್ತು ಸಾಧಿಸಿದ ಅಮೋಘ ಸಾಧನೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.ಕಾಲೇಜಿನ ಪ್ರಾಂಶುಪಾಲರಾದ ಡಾ. ಶಹನವಾಜ್ ಮಣಿಪಾಡಿಯವರು ಕಾರ್ಯಾಗಾರದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿ, ದೇಶದ ನಾನಾ ಭಾಗಗಳಿಂದ ಭಾಗವಹಿಸಿದ ಖ್ಯಾತ, ನುರಿತ, ಮಕ್ಕಳ ಹೃದ್ರೋಗ ಪ್ರವೀಣರು, ಶಾಸ್ತ್ರ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ, ಮಕ್ಕಳಲ್ಲಿ ಕಾಣುವ ಹೃದಯ ಸಂಬಂಧಿ ವಿವಿಧ ರೋಗಗಳ ಕಾರಣ, ಲಕ್ಷಣ, ಜಾಗೃತಿ ಮತ್ತು ನಾನಾ ಚಿಕಿತ್ಸಾ ವಿಧಿವಿಧಾನಗಳ ಬಗ್ಗೆ ಅತಿಥಿ ಉಪನ್ಯಾಸ ನೀಡಲಿರುವರು ಎಂದು ಮಾಹಿತಿ ನೀಡಿದರು.ಈ ಸಂದರ್ಭ ಕಣಚೂರು ವೈದ್ಯಕೀಯ ವಿಜ್ಞಾನ ಸಲಹ ಸಮಿತಿ ಸದಸ್ಯ ಡಾ. ಎಂ.ವಿ. ಪ್ರಭು, ಮಕ್ಕಳ ಶಾಸ್ತç ವಿಭಾಗದ ಡಾ. ಶಂಶಾದ್ ಎ. ಖಾನ್, ಸಂಸ್ಥೆಯ ಆಡಳಿತ ಅಧಿಕಾರಿ ಡಾ. ರೋಹನ್ ಮೋನಿಸ್, ವೈದ್ಯಕೀಯ ಸಹ ಅಧೀಕ್ಷಕ ಡಾ. ಅಂಜನ್ ಕುಮಾರ್, ಕಾರ್ಯಗಾರದ ಸಲಹೆಗಾರರಾದ ಡಾ. ಪ್ರೇಮ್ ಆಳ್ವ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಡಾ. ಚೇತನ್ ತಾಂಡೆಲ್ ವಂದಿಸಿದರು. ಈ ಕಾರ್ಯಾಗಾರದಲ್ಲಿ ಸುಮಾರು 150 ವೈದ್ಯಕೀಯ ಪ್ರತಿನಿಧಿಗಳು ಸಕ್ರೀಯವಾಗಿ ಭಾಗವಹಿಸಿದ್ದರು. ಡಾ. ವರ್ಷ ಸ್ವಾಗತಿಸಿದರು ಮತ್ತು ಡಾ. ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

Sushanth Rai Bellipadi has been nominated by the Govt.of karnataka to the KVAFSU,Bidar

Bengaluru – 12 Jun 2025: Dr. Sushanth Rai Bellipadi, Director of Raison’s Nutrition, Mangaluru, has been nominated by the Government of Karnataka to the Board of Management of the Karnataka Veterinary, Animal and Fisheries Sciences University (KVAFSU), Bidar with immediate effect for the next three years.Dr. Rai is a well-recognized figure in the veterinary and poultry sectors. He previously served two consecutive terms as President of the Karnataka Poultry Farmers & Breeders Association (KPFBA) from 2019 to 2024. He has been a member of the Research Advisory Committee of ICAR-NIANP (National Institute of Animal Nutrition and Physiology) and ICAR-DPR (Directorate of Poultry Research), Hyderabad. In 2024, he is also elected to the Board of the Veterinary Council of India (VCI) from Karnataka, further cementing his leadership credentials in the industry.Known for his visionary leadership and collaborative approach, Dr. Rai has consistently steered organizations toward impactful growth. He is admired for his ability to foster synergies, maintain composure in high-pressure environments, and transform challenges into opportunities for development. His nomination to the KVAFSU Board is seen as a significant step toward strengthening the state’s veterinary and animal sciences ecosystem.

ಪ್ರಾದೇಶಿಕ ವಾರ್ತೆಗಳು

ಡಾ. ಸುಶಾಂತ್ ರೈ ಬೆಳ್ಳಿಪ್ಪಾಡಿ ಕೆವಿಎಎಫ್‌ಎಸ್‌ಯು ಆಡಳಿತ ಮಂಡಳಿಗೆ ನಾಮನಿರ್ದೇಶನ

ಬೆಂಗಳೂರು: ಮಂಗಳೂರಿನ ರೈಸನ್ ನ್ಯೂಟ್ರಿಷನ್‌ ಸಂಸ್ಥೆಯ ನಿರ್ದೇಶಕ ಡಾ. ಸುಶಾಂತ್ ರೈ ಬೆಳ್ಳಿಪ್ಪಾಡಿ ಅವರನ್ನು ಕರ್ನಾಟಕ ಸರ್ಕಾರವು ತತ್‌ಕ್ಷಣದಿಂದ ಜಾರಿಗೆ ಬರುವಂತೆ ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ (ಕೆವಿಎಎಫ್‌ಎಸ್‌ಯು) ಆಡಳಿತ ಮಂಡಳಿಗೆ ನಾಮನಿರ್ದೇಶನ ಮಾಡಿದೆ. ಅವರ ಅಧಿಕಾರಾವಧಿ ಮುಂದಿನ ಮೂರು ವರ್ಷಗಳವರೆಗೆ ಇರುತ್ತದೆ.ಡಾ. ಸುಶಾಂತ್‌ ರೈ ಅವರು ಪಶುವೈದ್ಯಕೀಯ ಮತ್ತು ಕಕ್ಕುಟೋದ್ಯಮದಲ್ಲಿ ಗುರುತಿಸಲ್ಪಟ್ಟ ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಅವರು ಈ ಹಿಂದೆ 2019 ರಿಂದ 2024 ರವರೆಗೆ ಕರ್ನಾಟಕ ಕೋಳಿ ಸಾಕಣೆದಾರರ ಮತ್ತು ತಳಿಗಾರರ ಸಂಘದ (ಕೆಪಿಎಫ್‌ಬಿಎ) ಅಧ್ಯಕ್ಷರಾಗಿ ಸತತ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ. ಅವರು ಹೈದರಾಬಾದ್‌ನ ಐಸಿಎಆರ್-ಎನ್‌ಐಎಎನ್‌ಪಿ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅನಿಮಲ್ ನ್ಯೂಟ್ರಿಷನ್ ಆ್ಯಂಡ್ ಫಿಸಿಯಾಲಜಿ) ಮತ್ತು ಐಸಿಎಆರ್-ಡಿಪಿಆರ್ (ಡೈರೆಕ್ಟರೇಟ್ ಆಫ್ ಪೌಲ್ಟ್ರಿ ರಿಸರ್ಚ್) ನ ಸಂಶೋಧನಾ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. 2024 ರಲ್ಲಿ, ಅವರು ಕರ್ನಾಟಕದಿಂದ ಭಾರತೀಯ ಪಶುವೈದ್ಯಕೀಯ ಮಂಡಳಿಯ (ವಿಸಿಐ) ಆಡಳಿತ ಮಂಡಳಿಗೆ ಆಯ್ಕೆಯಾಗುವ ಮೂಲಕ ಉದ್ಯಮದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲ ಪಡಿಸಿದ್ದರು.ತಮ್ಮ ದೂರದೃಷ್ಟಿಯ ನಾಯಕತ್ವ ಮತ್ತು ಸಹಯೋಗದ ಪ್ರಕ್ರಿಯೆಗೆ ಹೆಸರುವಾಸಿಯಾಗಿರುವ ಡಾ. ರೈ ಅವರು, ಸಂಸ್ಥೆಗಳನ್ನು ಪರಿಣಾಮಕಾರಿ ಬೆಳವಣಿಗೆಯತ್ತ ನಿರಂತರವಾಗಿ ಕೊಂಡೊಯ್ದಿದ್ದಾರೆ. ಕಷ್ಟಕರ ಪರಿಸ್ಥಿತಿಯಲ್ಲೂ ಸಂಯಮವನ್ನು ಕಾಯ್ದುಕೊಳ್ಳುವ ಹಾಗೂ ಸವಾಲುಗಳನ್ನು ಅಭಿವೃದ್ಧಿಯ ಅವಕಾಶಗಳಾಗಿ ಪರಿವರ್ತಿಸುವ ಅವರ ಸಾಮರ್ಥ್ಯಕ್ಕಾಗಿ ಅವರನ್ನು ಮೆಚ್ಚಲಾಗುತ್ತದೆ. KVAFSU ಮಂಡಳಿಗೆ ಅವರ ನಾಮನಿರ್ದೇಶನವು ರಾಜ್ಯದ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ಪರಿಸರ ವ್ಯವಸ್ಥೆಯನ್ನು ಬಲಪಡಿಸುವತ್ತ ಮಹತ್ವದ ಹೆಜ್ಜೆ ಎಂದೇ ಪರಿಗಣಿಸಲಾಗುತ್ತಿದೆ

ಪ್ರಾದೇಶಿಕ ವಾರ್ತೆಗಳು

ಹೈಕೋರ್ಟ್ ಹಿರಿಯ ನ್ಯಾಯವಾದಿಯಾಗಿ ಪದೋನ್ನತಿ ಪಡೆದ ಪಿ.ಪಿ. ಹೆಗ್ಡೆ

ಬೆಂಗಳೂರು: ಕರ್ನಾಟಕ ಉಚ್ಛ ನ್ಯಾಯಾಲಯದ ‘ಹಿರಿಯ ನ್ಯಾಯವಾದಿ’ಯಾಗಿ ಖ್ಯಾತ ವಕೀಲ ಪಿ.ಪಿ. ಹೆಗ್ಡೆಯವರನ್ನು ಹೈಕೋರ್ಟ್ ನ್ಯಾಯಮೂರ್ತಿಗಳು ಪದೋನ್ನತಿಗೊಳಿಸಿದ್ದಾರೆ.ಪಿಪಿ ಹೆಗ್ಡೆ ಎಂದೇ ಚಿರಪರಿಚಿತರಾಗಿರುವ ಮಂಗಳೂರಿನ ಪದ್ಮಪ್ರಸಾದ್ ಹೆಗ್ಡೆಯವರು ಎಲ್.ಎಲ್.ಬಿ. ಮತ್ತು ಎಲ್.ಎಲ್.ಎಮ್. ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದಿದ್ದರು. ಅತೀ ಕಿರಿಯ ವಯಸ್ಸಿನಲ್ಲಿಯೇ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವವುಳ್ಳ ಪಿಪಿ ಹೆಗ್ಡೆಯವರು ಮಂಗಳೂರು, ಬೆಂಗಳೂರು ಮತ್ತು ದೆಹಲಿಯಲ್ಲಿ ಕಚೇರಿ ಹೊಂದಿದ್ದಾರೆ. ಸುಪ್ರೀಂ ಕೋರ್ಟ್ ಕೇಸ್‍ಗಳಲ್ಲಿಯೂ ಇವರು ವಾದ ಮಂಡಿಸುತ್ತಿದ್ದಾರೆ. ಹಲವಾರು ಕ್ಲಿಷ್ಟಕರ ಕೇಸುಗಳಲ್ಲಿ ಸಮರ್ಥವಾಗಿ ವಾದಿಸಿ ಗಮನ ಸೆಳೆದಿರುವ ಇವರು ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರ ಭ್ರಷ್ಟಾಚಾರದ ವಿರುದ್ಧ ಹೋರಾಟ ರೂಪಿಸಿ ಯಶಸ್ವಿಯಾಗಿದ್ದರು. ಈ ಹೋರಾಟಕ್ಕೆ ನ್ಯಾಯಮೂರ್ತಿಗಳಾದ ನ್ಯಾ. ಶಿವರಾಜ್ ಪಾಟೀಲ್ ಮತ್ತು ನ್ಯಾ. ಸಂತೋಷ್ ಹೆಗ್ಡೆಯವರು ವಕೀಲರೊಂದಿಗೆ ಕೈ ಜೋಡಿಸಿದ್ದರು. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ನಕಲಿ ವಕೀಲರುಗಳನ್ನು ಪತ್ತೆ ಹಚ್ಚಿ ಅವರನ್ನು ಅಮಾನತುಗೊಳಿಸಿದ್ದರಲ್ಲದೆ ವಕೀಲ ವೃತ್ತಿಯಲ್ಲಿ ಇರುವವರು ಅನ್ಯ ವೃತ್ತಿ ಮಾಡಬಾರದು ಎಂಬ ನಿಯಮವನ್ನು ಪಿಪಿ ಹೆಗ್ಡೆಯವರು ಪರಿಣಾಮಕಾರಿಯಾಗಿ ಜಾರಿ ತಂದಿದ್ದರು. ಪ್ರಚಲಿತ ಕಾನೂನು ಮತ್ತು ಸಂವಿಧಾನದ ಕುರಿತು ಆಳವಾದ ಜ್ಞಾನ ಹೊಂದಿರುವ ಪಿಪಿ ಹೆಗ್ಡೆಯವರು ಅಂಕಣಗಳ ಮೂಲಕವೂ ಜನಜಾಗೃತಿ ಮೂಡಿಸಿ ಗಮನ ಸೆಳೆದಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಇಂದು ರೆಡ್‌ಕ್ರಾಸ್‌ನಿಂದ ವಿಶ್ವ ರಕ್ತದಾನಿಗಳ ದಿನಾಚರಣೆ

ಮಂಗಳೂರು: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದ.ಕ.ಜಿಲ್ಲಾ ಸಮಿತಿ ವತಿಯಿಂದ ಎಸ್‌ಡಿಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಸಹಯೋಗದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಜೂ.14ರಂದು ಬೆಳಗ್ಗೆ 11.15ಕ್ಕೆ ನಗರದ ಕೊಡಿಯಾಲ್‌ಬೈಲ್‌ನ ಎಸ್‌ಡಿಎಂ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯಲಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರೆಡ್‌ಕ್ರಾಸ್ ದ.ಕ.ಜಿಲ್ಲಾ ಸಮಿತಿಯ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿಡಾ.ಶಿವಪ್ರಕಾಶ್.ಡಿ. ಎಸ್., ಎಸ್‌ಡಿಎಂ ಪಿ.ಜಿ.ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ನಿರ್ದೇಶಕಿ ಡಾ.ಸೀಮಾ.ಎಸ್. ಶೆಣೈ,ಕೆಎಂಸಿಯ ಆರ್ಥೋ ವಿಭಾಗದ ಮುಖ್ಯಸ್ಥ ಡಾ.ಕೆ.ಆರ್.ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 15ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ರಕ್ತದಾನಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದೆಂದು ರೆಡ್‌ಕ್ರಾಸ್‌ನ ಜಿಲ್ಲಾ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಕರ್ನಾಟಕ ಬ್ಯಾಂಕಿನಿಂದ ಸ್ನೇಹಾಲಯಕ್ಕೆ ಹೃದಯಸ್ಪರ್ಶಿ ಕೊಡುಗೆ. ದುರ್ಬಲರ ಸೇವೆಗೆ ಉದಾರ ಬೆಂಬಲದೊಂದಿಗೆ ಕೈಜೋಡಿಸಿದ ಬ್ಯಾಂಕ್.

ಕರ್ನಾಟಕ ಬ್ಯಾಂಕ್ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಉಪಕ್ರಮದಡಿ, ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಉದಾರವಾದ ಕೊಡುಗೆ ನೀಡಿ, ಮಾನವ ಘನತೆ, ಚೇತರಿಕೆ ಮತ್ತು ದುರ್ಬಲರಿಗೆ ಕಾಳಜಿಯ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ. ತೊರೆಯಲ್ಪಟ್ಟವರಿಗೆ ಮತ್ತು ಮಾನಸಿಕವಾಗಿ ಅಸ್ವಸ್ಥರಿಗೆ ಆಶ್ರಯವಾಗಿರುವ ಸ್ನೇಹಾಲಯಕ್ಕೆ, ಕರ್ನಾಟಕ ಬ್ಯಾಂಕ್ 50 ಬೆಚ್ಚಗಿನ ಕೋಟ್ಗಳು, ಹಾಸಿಗೆಗಳು, ದಿಂಬುಗಳು ಮತ್ತು 700ಕ್ಕೂ ಅಧಿಕ ಹಾಸಿಗೆ ಹೊದಿಕೆಗಳು ಹಾಗೂ ದಿಂಬು ಕವರ್ಗಳನ್ನು ದಾನವಾಗಿ ನೀಡಿತು. ₹10.57 ಲಕ್ಷ ಮೌಲ್ಯದ ಈ ಅಮೂಲ್ಯ ಕೊಡುಗೆ, ನಿವಾಸಿಗಳಿಗೆ ಸೌಕರ್ಯ, ಆರಾಮ ಮತ್ತು ಮಾನವ ಘನತೆಯ ಭಾವನೆಯನ್ನು ಒದಗಿಸಿ, ಅವರ ಚೇತರಿಕೆ ಮತ್ತು ಪರಿವರ್ತನೆಯ ಪಯಣವನ್ನು ಮತ್ತಷ್ಟು ಸಮೃದ್ಧಗೊಳಿಸಿತು.ಈ ಭಾವನಾತ್ಮಕ ಕಾರ್ಯಕ್ರಮವು ಜೂನ್ 12, 2025ರಂದು ಸ್ನೇಹಾಲಯದ ವೃದ್ಧರ ವಿಭಾಗದಲ್ಲಿ ನಡೆಯಿತು. ಕರ್ನಾಟಕ ಬ್ಯಾಂಕಿನ ಸಹಾಯಕ ಜನರಲ್ ಮ್ಯಾನೇಜರ್ ಶ್ರೀ ವಿಶ್ವನಾಥ್ ಎಸ್.ಆರ್. ಮತ್ತು ಉಚ್ಚಿಲ ಶಾಖೆಯ ಮ್ಯಾನೇಜರ್ ಶ್ರೀ ಶಾಮ್ ಕುಮಾರ್ ಉಪಸ್ಥಿತರಿದ್ದರು. ಸ್ನೇಹಾಲಯದ ಚಾಪ್ಲಿನ್ ವ. ಫಾದರ್ ಸಿರಿಲ್ ಡಿಸೋಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಭಿಕರನ್ನು ಮತ್ತು ಅತಿಥಿಗಳನ್ನು ಆಶೀರ್ವದಿಸಿದರು. ಸ್ನೇಹಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬ್ರದರ್ ಜೋಸೆಫ್ ಕ್ರಾಸ್ಟಾ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಕೇಂದ್ರದ ಸ್ಫೂರ್ತಿದಾಯಕ ಪಯಣವನ್ನು ಹಂಚಿಕೊಂಡರು. “ಇವು ಕೇವಲ ಹಾಸಿಗೆಗಳು ಅಥವಾ ಕಂಬಳಿಗಳಲ್ಲ; ಇವು ನಿಮ್ಮ ಕಾಳಜಿ, ಭರವಸೆ ಮತ್ತು ಚೇತರಿಕೆಯ ಕಾರ್ಯದಲ್ಲಿ ನಂಬಿಕೆಯ ಸಂಕೇತಗಳು. ಇವು ನಮ್ಮ ನಿವಾಸಿಗಳಿಗೆ ‘ಸಮಾಜ ನಿಮ್ಮನ್ನು ಮರೆತಿಲ್ಲ, ನೀವು ಪ್ರೀತಿಪಾತ್ರರು’ ಎಂಬ ಸಂದೇಶವನ್ನು ನೀಡುತ್ತವೆ,” ಎಂದು ಅವರು ಕೃತಜ್ಞತೆಯಿಂದ ಹೇಳಿದರು. 2021-22ರಲ್ಲಿ ಕರ್ನಾಟಕ ಬ್ಯಾಂಕ್ ಸ್ನೇಹಾಲಯಕ್ಕೆ ಎಲೆಕ್ಟ್ರಿಕ್ ಆಟೋ ದಾನ ಮಾಡಿದ್ದನ್ನು ಅವರು ಪ್ರೀತಿಯಿಂದ ನೆನಪಿಸಿಕೊಂಡರು.ಸ್ನೇಹಾಲಯದ ಸ್ನೇಹಮಯ ವಾತಾವರಣದಿಂದ ಪ್ರಭಾವಿತರಾದ ಶ್ರೀ ವಿಶ್ವನಾಥ್, “ಕರ್ನಾಟಕ ಬ್ಯಾಂಕಿನ ಸಿಎಸ್ಆರ್ ಬೆಂಬಲವು ನೊಂದ ಜೀವಿಗಳಿಗೆ ತಲುಪಿರುವುದಕ್ಕೆ ನಾನು ಹೆಮ್ಮೆಪಡುತ್ತೇನೆ. ಸ್ನೇಹಾಲಯ ನಿಸ್ವಾರ್ಥವಾಗಿ ಅದ್ಭುತ ಕೆಲಸವನ್ನು ಮಾಡುತ್ತಿದೆ. ಈ ಪಯಣದ ಭಾಗವಾಗಿರುವುದು ನನಗೆ ಗೌರವದ ಸಂಗತಿ. ಭವಿಷ್ಯದಲ್ಲೂ ನಮ್ಮ ನಿರಂತರ ಬೆಂಬಲವಿರುತ್ತದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸ್ನೇಹಾಲಯದ ಉಪ ಕಾರ್ಯನಿರ್ವಾಹಕರಾದ ಶ್ರೀಮತಿ ವೀಣಾ, ಬ್ಯಾಂಕ್ ಮತ್ತು ಅದರ ಪ್ರತಿನಿಧಿಗಳಿಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದರು. “ಇಂತಹ ದಯೆಯ ಕಾರ್ಯಗಳು ವ್ಯಕ್ತಿಗಳನ್ನು ಮಾತ್ರವಲ್ಲ, ಇಡೀ ಸಮುದಾಯವನ್ನು ಉನ್ನತೀಕರಿಸುತ್ತವೆ,” ಎಂದು ಒತ್ತಿಹೇಳಿದರು.ಈ ಕಾರ್ಯಕ್ರಮವು ಒಗ್ಗಟ್ಟು, ಪ್ರೀತಿ ಮತ್ತು ಮಾನವೀಯತೆಯ ಸುಂದರ ಪ್ರತಿಬಿಂಬವಾಗಿತ್ತು. ನಿವಾಸಿಗಳು ಮತ್ತು ಸಿಬ್ಬಂದಿಯು ಭಾಗವಹಿಸಿದ ಈ ಸಭೆಯಲ್ಲಿ, ಸ್ನೇಹಾಲಯ ಸಂಸ್ಥೆಯ ಮಿಷನ್ನಲ್ಲಿ ನಂಬಿಕೆಯಿಟ್ಟು, ಸಮಾಜಮುಖೀ ಕಾರ್ಯದಲ್ಲಿ ಕೈಜೋಡಿಸಿದ ಕರ್ನಾಟಕ ಬ್ಯಾಂಕಿಗೆ ಚಿರಋಣಿಯಾಗಿದೆ.

ಪ್ರಾದೇಶಿಕ ವಾರ್ತೆಗಳು

ಅಹ್ಮದಾಬಾದ್ ವಿಮಾನ ದುರಂತಕ್ಕೆ ಮಂಗಳೂರು ಬಿಷಪ್ ದಿಗ್ಭ್ರಮೆ, ಸಂತಾಪ

ಮಂಗಳೂರು: ಗುಜರಾತಿನ ಅಹ್ಮದಾಬಾದ್ ನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ದುರಂತದಲ್ಲಿ ಅಪಾರ ಸಾವು ನೋವು ಸಂಭವಿಸಿದ ಬಗ್ಗೆ ಆಘಾತ ವ್ಯಕ್ತ ಪಡಿಸಿರುವ ಅವರು ಸಾವನ್ನಪ್ಪಿರುವ ಪ್ರಯಾಣಿಕರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಮೃತ ಪಟ್ಟವರ ಆತ್ಮಗಳಿಗೆ ದೇವರು ಚಿರ ಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ. ದುರಂತದಲ್ಲಿ ಗಾಯಗೊಂಡವರು ಬೇಗನೆ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

‘ಬ್ಯಾರಿ ಬಾಸೆ ಪಡಿಕೋರು’ ಪುಸ್ತಕ ಬಿಡುಗಡೆ

ಮಂಗಳೂರು: ಬ್ಯಾರಿ ಕಲಾರಂಗ ಮಂಗಳೂರು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಪ್ರಥಮ ಕಾರ್ಯಕ್ರಮವಾಗಿ ಸಂಘದ ಅಧ್ಯಕ್ಷ ಅಜೀಜ್ ಬೈಕಂಪಾಡಿ ಅವರು ಬರೆದ ‘ಬ್ಯಾರಿ ಬಾಸೆ ಪಡಿಕೋರು’ ಎಂಬ ಪುಸ್ತಕವನ್ನು ಗುರುವಾರ ಪತ್ರಿಕಾಭವನದಲ್ಲಿ ಬಿಡುಗಡೆಗೊಳಿಸಲಾಯಿತು.ಪುಸ್ತಕ ಬಿಡುಗಡೆಗೊಳಿಸಿದ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮಾತನಾಡಿ ‘ ದ.ಕ.ಜಿಲ್ಲೆ ತುಳು, ಕನ್ನಡ, ಕೊಂಕಣಿ, ಬ್ಯಾರಿ, ಅರೆಬಾಸೆ ಹೀಗೆ ವೈವಿಧ್ಯಮಯ ಭಾಷಿಗರ ಪ್ರದೇಶವಾಗಿದೆ. ‘ಬ್ಯಾರಿ ಭಾಷೆ ಪಡಿಕೋರು’ ಪುಸ್ತಕ ಭಾಷೆಯ ಬೆಳವಣಿಗೆಯ ಜತೆಗೆ ಹೊಸಬರಿಗೆ ಬ್ಯಾರಿ ಭಾಷೆಯ ಶಬ್ಧಗಳನ್ನು ತಿಳಿಯಲು ಸಹಕಾರಿಯಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮಹಮ್ಮದ್ ಬಡ್ಡೂರು ಅವರು ಮಾತನಾಡಿ ‘ ಭಾಷೆಯಲ್ಲಿ ಮೇಲು , ಕೀಳು ಎಂಬುವುದಿಲ್ಲ. ಮಾತನಾಡುವವರ ಸಂಖ್ಯೆಯಲ್ಲಿ ಮಾತ್ರ ಹೆಚ್ಚು ಕಡಿಮೆ ಇದೆ. ಹೊರ ಜಿಲ್ಲೆಗಳಿಂದ ಬರುವ ವಿವಿಧ ಇಲಾಖೆಗಳ ಅಧಿಕಾರಿ, ಸಿಬಂದಿಗೆ ‘ಬ್ಯಾರಿ ಬಾಸೆ ಪಡಿಕೋರು’ ಪುಸ್ತಕ ಉತ್ತಮ ಕೈ ಪಿಡಿಯಾಗಿದೆ ಎಂದರು.ಬ್ಯಾರಿ ಕಲಾರಂಗ ಅಧ್ಯಕ್ಷ, ಲೇಖಕ ಅಜೀಜ್ ಬೈಕಂಪಾಡಿ ಅವರು ಮಾತನಾಡಿ, ಬ್ಯಾರಿ ಭಾಷೆಯನ್ನು ಇತರ ಭಾಷಿಗರು ಸುಲಭವಾಗಿ ಕಲಿಯುವಂತಾಗಲಿ ಎನ್ನುವ ಉದ್ದೇಶದಿಂದ ವಿವಿಧ ಇಲಾಖೆ, ವಿದ್ಯಾಸಂಸ್ಥೆ ಹಾಗೂ ಗ್ರಂಥಾಲಯಗಳಿಗೆ ಈ ಪುಸ್ತಕವನ್ನು ಉಚಿತವಾಗಿ ಹಂಚಲಾಗುವುದು ಎಂದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅವರಿಗೆಪುಸ್ತಕದ ಪ್ರಥಮ ಪ್ರತಿ ನೀಡಲಾಯಿತು. ಬ್ಯಾರಿ ಕಲಾರಂಗದ ಸದಸ್ಯರಾದ ಇಸ್ಮಾಯಿಲ್ ಮೂಡುಶೆಡ್ಡೆ, ಶಾಹುಲ್ ಹಮೀದ್,ಸತೀಶ್ ಸುರತ್ಕಲ್, ಡಾ. ಸಿದ್ದೀಕ್ ಅಡ್ಡೂರು ಉಪಸ್ಥಿತರಿದ್ದರು.

Scroll to Top