ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

“ತುಳುವೆರೆನ ತುಳುನಾಡ ಸಂತೆ” ಮಾವು ಹಲಸುಗಳೊಂದಿಗೆ ಸಾಹಿತ್ಯ ಸಾಂಸ್ಕೃತಿಕ ರಂಗಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ತುಳುಕೂಟ ಬಂಟ್ವಾಳದ ಆಶ್ರಯದಲ್ಲಿ ಇದೇ ಬರುವ ತಾರೀಕು ಜೂ. 20,21,22 ರಂದು ಬಿ.ಸಿ.ರೋಡು ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯುವ “ತುಳುವೆರೆನ ತುಳುನಾಡ ಸಂತೆ” ಮಾವು ಹಲಸುಗಳೊಂದಿಗೆ ಸಾಹಿತ್ಯ ಸಾಂಸ್ಕೃತಿಕ ರಂಗಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಬಿ.ಸಿ.ರೋಡು ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ಪೂಜೆ ನೆರವೇರಿಸಿ ತುಳುಕೂಟದ ಅಧ್ಯಕ್ಷರಾದ ಸುದರ್ಶನ್ ಜೈನ್ ಆಮಂತ್ರಣ ಬಿಡುಗಡೆಗೊಳಿಸಿದರು. ಈ ಸಂಧರ್ಭದಲ್ಲಿ ತುಳುಕೂಟ ಬಂಟ್ವಾಳದ ಕಾರ್ಯದರ್ಶಿ ಎಚ್ಕೆ ನಯನಾಡು, ಕೋಶಾದಿಕಾರಿ ಸುಭಾಶ್ಚಂದ್ರ ಜೈನ್,ಉಪಾಧ್ಯಕ್ಷರು ಕೆ.ಸೀತಾರಾಮ ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ತ್ ಸದಸ್ಯರಾದ ದೇವಪ್ಪ ಕುಲಾಲ್ ಪಂಜಿಕಲ್ಲು, ಸಮಿತಿ ಸಂಚಸಲಕರಾದ ಸೇಷಪ್ಪ ಮಾಸ್ಟರ್, ಸುಕುಮಾರ್ ಬಂಟ್ವಾಳ, ನಾರಾಯಣ ಸಿ.ಪೆರ್ನೆ, ಪರಮೇಶ್ವರ ಮೂಲ್ಯ, ಮೋಹನ್ ಶೆಟ್ಟಿ ಪಂಜಿಕಲ್ಲು, ಚಂದ್ರಶೇಖರ್ ಗಟ್ಟಿ, ಸತೀಶ್ ಕುಮಾರ್ ಕಾರ್ತಿಕ್, ಸನ್ಮತಿ ಜೆ.ಜೈನ್ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ವಿಮಾನ ನಿಲ್ದಾಣದಲ್ಲೇ ಕಡತಗಳಿಗೆ ಸಹಿ ಹಾಕುವ ಮೂಲಕ ಸೇವೆಗೆ ಸಿದ್ದರಾದ ಹಾಜಿ ಸ್ಪೀಕರ್ ಯು.ಟಿ ಖಾದರ್ ಫರೀದ್

ಪವಿತ್ರ ಹಜ್ಜ್ ಕರ್ಮ ನಿರ್ವಹಿಸಿ ಇಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದಾಗ ಅವರನ್ನು ಬರಮಾಡಿಕೊಡಲು ಕುಟುಂಬಸ್ಥರು ಸ್ನೇಹಿಗಳು ಕಾಯುತ್ತಿದ್ದರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಬಾಕಿ ಇರುವ ಕಡತಗಳಿಗೆ ಸಹಿ ಹಾಕುವ ಮೂಲಕ ತನ್ನ ಕರ್ತವ್ಯವನ್ನು ನಿರ್ವಹಿಸಿದ್ದಾರೆ.ವಿಮಾನ ನಿಲ್ದಾಣಕ್ಕೆ ಅಧಿಕಾರಿಗಳನ್ನು ಕರೆಸಿ ಇಷ್ಟು ದಿನ ಬಾಕಿ ಉಳಿದ ಹಲವು ಕಡತಗಳನ್ನು ಪರಿಶೀಲಿಸಿ ಸಹಿ ಹಾಕಿ ಕಳಿಸಿದ್ದಾರೆ.ಹಜ್ಜ್ ಯಾತ್ರೆ ಮುಗಿಸಿ ಬರುವಾಗ ಸಹಜವಾದ ಅರೋಗ್ಯ ಏರು ಪೇರನ್ನು ಲೆಕ್ಕಿಸದೆ ಸೇವೆಗೆ ಇಳಿದಿರುವುದು ಅವರ ಕೆಲಸದ ಮೇಲಿರುವ ಗೌರವ ಎತ್ತಿ ತೋರಿಸಿವೆ.ಇದೀಗ ಬೆಂಗಳೂರಿನಲ್ಲೇ ಕೆಲವೊಂದು ಸಭೆಯ ಬಳಿಕ ಮಂಗಳೂರು ತಲುಪಲಿರುವ ಹಾಜಿ ಯು.ಟಿ ಖಾದರ್ ಫರೀದ್ ನಾಳೆ ದಿನ ಪೂರ್ತಿ ಸೇವೆಯಲ್ಲಿ ನಿರತರಾಗಲಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಯಕ್ಷಧ್ರುವ ಫೌಂಡೇಶನ್ ಬಂಟ್ವಾಳ ಘಟಕದ ನೂತನ ಅಧ್ಯಕ್ಷರಾಗಿ ದಿವಾಕರ ಶೆಟ್ಟಿ ಪರಾರಿ ಗುತ್ತು ಆಯ್ಕೆ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಬಂಟ್ವಾಳ ಘಟಕ ಇದರ ಪದಾಧಿಕಾರಿಗಳ ಸಭೆಯು ಅಧ್ಯಕ್ಷರಾದ ಚಂದ್ರಹಾಸ. ಡಿ. ಶೆಟ್ಟಿ ರಂಗೋಲಿ ಇವರ ಅಧ್ಯಕ್ಷತೆ ಯಲ್ಲಿ ಬಿ.ಸಿ. ರೋಡಿನ ಹೋಟೆಲ್ ರಂಗೋಲಿಯಲ್ಲಿ ಜರಗಿತು.ಜಗನ್ನಾಥ ಚೌಟ ಬದಿಗುಡ್ಡೆ, ಸದಾನಂದ ಶೆಟ್ಟಿ ರಂಗೋಲಿ, ಸಂಕಪ್ಪ ಶೆಟ್ಟಿ ಸಂಚಯಗಿರಿ, ಸೇಸಪ್ಪ ಮಾಸ್ಟರ್, ಸಂಜೀವ ಶೆಟ್ಟಿ ಬೋಳಂತೂರು, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಜಯಪ್ರಕಾಶ್ ಜಕ್ರಿಬೆಟ್ಟು, ದೇವದಾಸ್ ಶೆಟ್ಟಿ, ಮೋಹನ್ ದಾಸ್ ಕೊಟ್ಟಾರಿ, ಶಂಕರ ಶೆಟ್ಟಿ ಪರಾರಿಗುತ್ತು, ದಿವಾಕರ ಶೆಟ್ಟಿ ಪರಾರಿಗುತ್ತು, ಸತೀಶ್ ಶೆಟ್ಟಿ ಮೊಡಂಕಾಪು ಸಭೆಯಲ್ಲಿ ಉಪಸ್ಥಿತರಿದ್ದರು.ಮುಂದಿನ ಅವಧಿಗೆ ನೂತನ ಸಮಿತಿಯನ್ನು ರಚಿಸಲಾಯಿತು.ಗೌರವಾಧ್ಯಕ್ಷರು : ಜಗನ್ನಾಥ ಚೌಟ ಬದಿಗುಡ್ಡೆಅಧ್ಯಕ್ಷರು : ದಿವಾಕರ ಶೆಟ್ಟಿ ಪರಾರಿ ಗುತ್ತುಸಂಚಾಲಕರು : ಭುವನೇಶ್ ಪಚ್ಚಿನಡ್ಕಪ್ರಧಾನ ಕಾರ್ಯದರ್ಶಿ : ಬಿ. ದೇವದಾಸ ಶೆಟ್ಟಿಜತೆ ಕಾರ್ಯದರ್ಶಿ : ಮೋಹನ ದಾಸ್ ಕೊಟ್ಟಾರಿಉಪಾಧ್ಯಕ್ಷರು : ಚಿತ್ತರಂಜನ್ ಶೆಟ್ಟಿ ಬೊಂಡಾಲ, ಜಯಪ್ರಕಾಶ್ ಜಕ್ರಿಬೆಟ್ಟು, ಸತೀಶ್ ಶೆಟ್ಟಿ ಮೊಡಂಕಾಪು, ಕೋಶಾಧಿಕಾರಿ : ಶಂಕರ ಶೆಟ್ಟಿ ಪರಾರಿ,ಗೌರವ ಸಲಹೆಗಾರರು : ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬಿ. ರಮಾನಾಥ ರೈ, ಚಂದ್ರಹಾಸ್. ಡಿ. ಶೆಟ್ಟಿ ರಂಗೋಲಿ, ಸತೀಶ್ ಶೆಟ್ಟಿ ಪಟ್ಲ, ಎ. ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಸದಾನಂದ. ಡಿ. ಶೆಟ್ಟಿ ರಂಗೋಲಿ, ಸಂಕಪ್ಪ ಶೆಟ್ಟಿ ಸಂಚಯಗಿರಿ, ಸೇಸಪ್ಪ ಮಾಸ್ಟರ್.

ಪ್ರಾದೇಶಿಕ ವಾರ್ತೆಗಳು

ಆಂಜೆಲೋರ್‌ ಚರ್ಚಿನಲ್ಲಿ ಪ್ರಥಮ ಚಿಕಿತ್ಸೆ ತರಬೇತಿ ಶಿಬಿರ

ಮಂಗಳೂರು: ಮಂಗಳೂರು ನಗರದ ನಾಗುರಿಯ ಗಾರ್ಡಿಯನ್ ಏಂಜೆಲ್ ಚರ್ಚ್ ನ ಕ್ಯಾಥೋಲಿಕ್ ಸಭಾ ಘಟಕ ಮತ್ತು ಆರೋಗ್ಯ ಆಯೋಗದ ಆಶ್ರಯದಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ಪ್ರಥಮ ಚಿಕಿತ್ಸೆ ತರಬೇತಿ ಶಿಬಿರ ಚರ್ಚ್ ಸಭಾಂಗಣದಲ್ಲಿ ನಡೆಯಿತು.ಮನೆಯಲ್ಲಿ ಸಂಭವಿಸುವ ವಿದ್ಯುತ್ ಅಪಘಾತ, ನೀರಿಗೆ ಬಿದ್ದು ದುರಂತ, ವಿಷದ ಹಾವು ಕಡಿತ, ಆಹಾರ ಸೇವಿಸುವಾಗ ಗಂಟಲಿನಲ್ಲಿ ಸಿಲುಕಿ ಕೊಳ್ಳುವುದು, ಕುಸಿದು ಬೀಳುವ ಸಂದರ್ಭ ಮುಂತಾದ ಸಮಯದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ತರಬೇತಿ ನೀಡಲಾಯಿತು.ಆಂಜೆಲೋರ್‌ ಚರ್ಚಿನ ಪ್ರಧಾನ ಧರ್ಮಗುರು ವಂದನೀಯ ಫಾ. ಫ್ರೆಡ್ರಿಕ್ ಮೊಂತೆರೊ, ವಾಸ್ತವ್ಯ ಧರ್ಮಗುರು ವಂದನೀಯ ಫಾ. ಸ್ಟೇನಿ ಫೆರ್ನಾಂಡಿಸ್, ಚರ್ಚ್ ಉಪಾಧ್ಯಕ್ಷ ಪಾವ್ಲ್ ರೊಡ್ರಿಗಸ್, ಕಾರ್ಯದರ್ಶಿ ಲೊನಿನಾ ಡಿ’ ಸೋಜಾ, ಸರ್ವ ಆಯೋಗಗಳ ಸಂಚಾಲಕಿ ರೆನಿಟಾ ಮಿನೇಜಸ್, ಫಾದರ್ ಮುಲ್ಲರ್ ಆಸ್ಪತ್ರೆಯ ಡಾ. ರಿತೇಶ್ ಡಿ’ ಕುನ್ಹಾ, ಚರ್ಚಿನ ಮಾಜಿ ಉಪಾಧ್ಯಕ್ಷ ಆಲ್ಬರ್ಟ್ ಲಸ್ರಾದೊ, ಫಿಲೋಮಿನಾ ತಾವ್ರೋ ಮುಂತಾದವರು ಉಪಸ್ಥಿತರಿದ್ದರು

ಪ್ರಾದೇಶಿಕ ವಾರ್ತೆಗಳು

ಯು. ಆರ್.ಶೆಟ್ಟಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು

ಮಂಗಳೂರು -ಸಮಾಜ ಸೇವಕ, ” ಕಲಾರತ್ನ ” ಕೋವಿಡ್ -19 ಸಂದರ್ಭದಲ್ಲಿ ಒಬ್ಬರ ಜೀವ ಉಳಿಸಲು ಪ್ಲಾಸ್ಮಾ ದಾನ ಮಾಡಿದ ಸದಾ ಸಮಾಜಪರ ಚಿಂತಕ,ಸಂಘಟಕರಾಗಿರುವ ಯು. ಆರ್. ಶೆಟ್ಟಿಯವರಿಗೆ ಇಂದು ಹುಟ್ಟುಹಬ್ಬ.Mp mla*s News ಯು . ಆರ್.ಶೆಟ್ಟಿ ಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸುತ್ತದೆ.

ಪ್ರಾದೇಶಿಕ ವಾರ್ತೆಗಳು

ವಿದ್ಯಾರ್ಥಿಗಳ ಸೂಪ್ತ ಪ್ರತಿಭೆ ಗುರುತಿಸಲು ಪ್ರೋತ್ಸಾಹ ಅಗತ್ಯ: ಅರುಣಾಪ್ರಭಾ

ಮಂಗಳೂರು, ವಿದ್ಯಾರ್ಥಿಗಳಲ್ಲಿ ಅಪಾರ ಪ್ರತಿಭೆ ಇರುತ್ರದೆ. ಆದರೆ ಅದಕ್ಕೆ ಸೂಕ್ತ ವೇದಿಕೆ ಸಿಕ್ಕಿದರೆ ಗುರುತಿಸಲು ಸಾಧ್ಯವಾಗುತ್ತದೆ ಎಂದು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಮಹಾ ಪ್ರಭಂದಕ ಅರುಣಾಪ್ರಭಾ ಹೇಳಿದರು.ಗ್ಲೋಬಲ್ ಇಕೋ ಗ್ರೀನ್ ಫೌಂಡೇಶನ್ ವತಿಯಿಂದ ಗಾಂಧಿನಗರ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಚಿತ್ರಕಲಾ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಮಕ್ಕಳ ಪ್ರತಿಭೆ ಗುರುತಿಸಿ ಹೆತ್ತವರು ಹಾಗೂ ಶಿಕ್ಷಕರು ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಮಂಗಳ ರಿ ಸೊರ್ಸ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಆಡಳಿತ ನಿರ್ದೇಶಕ ದಿಲ್ ರಾಜ್ ಆಳ್ವ, ಅನಘ ಸುಝಕೀ ಆಡಳಿತ ನಿರ್ದೇಶಕ ಫಣಿ ಸಾಂಬಾಶಿವ ರಾವ್ ನಡೆಲ್ಲಾ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ ಬಿ ಹರೀಶ್ ರೈ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ್ ರೈ, ಕೋಶಾಧಿಕಾರಿ ಪುಷ್ಪರಾಜ್ ಬಿ ಎನ್, ಸ್ಪರ್ಧೆ ತೀರ್ಪುಗಾರರಾದ ಗೀತಾ ಬಿ ರೈ,, ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ರೆಡ್‌ಕ್ರಾಸ್‌ನಿಂದ ನಾಗರಿಕ ಸುರಕ್ಷಾ ತರಬೇತಿ. ರೆಡ್‌ಕ್ರಾಸ್ ರಾಜ್ಯ ಉಪಾಧ್ಯಕ್ಷ ಭಾಸ್ಕರ ರಾವ್ ಆಶಯ

ಮಂಗಳೂರು: ಸಮಾಜಮುಖಿ ಸೇವೆಗೆ ಇಡೀ ವಿಶ್ವದಲ್ಲೇ ರೆಡ್‌ಕ್ರಾಸ್ ಸಂಸ್ಥೆ ಅತ್ಯುತ್ತಮ ವೇದಿಕೆಯಾಗಿದೆ. ನಾಗರಿಕರ ಸುರಕ್ಷತೆಗೆ ರೆಡ್‌ಕ್ರಾಸ್ ವಿಶೇಷ ಅದ್ಯತೆ ನೀಡಿದ್ದು ಮುಂದಿನ ದಿನಗಳಲ್ಲಿ ರೆಡ್‌ಕ್ರಾಸ್ ಮೂಲಕ ನಾಗರಿಕ ಸುರಕ್ಷಾ ತರಬೇತಿ ನೀಡಲು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ರೆಡ್‌ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಘಟಕದ ಉಪಾಧ್ಯಕ್ಷ, ನಿವೃತ್ತ ಎಡಿಜಿಪಿ ಭಾಸ್ಕರ ರಾವ್ ಹೇಳಿದರು.ಸೋಮವಾರ ರೆಡ್‌ಕ್ರಾಸ್ ದ.ಕ.ಜಿಲ್ಲಾ ಘಟಕದ ಕಚೇರಿಗೆ ಭೇಟಿ ನೀಡಿದ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ರೆಡ್‌ಕ್ರಾಸ್ ದ.ಕ.ಜಿಲ್ಲಾ ಘಟಕ ರಾಜ್ಯದ ಅತ್ಯುತ್ತಮ ಘಟಕಗಳಲ್ಲಿ ಒಂದಾಗಿದ್ದು, ಭವ್ಯ ಕಟ್ಟಡ ಸಹಿತ ಉತ್ತಮ ಮೂಲಭೂತ ಸೌಲಭ್ಯ ಹೊಂದಿದೆ ಎಂದರು.ಉದ್ಘಾಟನೆಗೆ ಸಿದ್ದವಾಗಿರುವ ದ.ಕ.ಜಿಲ್ಲಾ ಘಟಕದ ಶತಮಾನೋತ್ಸವ ಕಟ್ಟಡವನ್ನು ವೀಕ್ಷಿಸಿ ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು.ರೆಡ್‌ಕ್ರಾಸ್ ಸಂಸ್ಥೆಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅವರು ಸಂಸ್ಥೆಯ ಕಾರ್ಯಚಟವಟಿಕೆಗಳ ವಿವರ ನಿಡಿದರು.ನಿವೃತ್ತ ಅಪರ ಜಿಲ್ಲಾಧಿಕಾರಿ ಎಸ್.ಎ.ಪ್ರಭಾಕರ ಶರ್ಮ , ರೆಡ್‌ಕ್ರಾಸ್ ಜಿಲ್ಲಾ ಘಟಕದ ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಡಾ.ಸಚ್ಚಿದಾನಂದ ರೈ, ಪುಷ್ಪರಾಜ್ ಜೈನ್, ಗುರುದತ್ ಕಾಮತ್, ಪಿ.ಬಿ.ಹರೀಶ್ ರೈ, ಸಿಬ್ಬಂದಿ ಮಲ್ಲಿಕಾ, ಅನಿತಾ, ಗಿರೀಶ್ ಕುಮಾರ್ಜಿಲ್ಲಾ ಘಟಕದ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಬಂಟ್ವಾಳ ವ್ಯವಸಾಯ ಸಂಘದ ಅಕ್ಷಯ ಸೌಧ ಲೋಕಾರ್ಪಣೆ. ‘ಸಹಕಾರಿ ಸಂಘವು ಜನಸಾಮಾನ್ಯರ ಜೊತೆಗೆ ಉತ್ತಮ ಸಂಬಂಧವಿರಿಸಬೇಕು’-ಡಾ. ಪ್ರಭಾಕರ ಭಟ್ ಕಲ್ಲಡ್ಕ

ಬಂಟ್ವಾಳ ಜೂ.9: ಸಹಕಾರಿ ಸಂಘವು ಜನಸಾಮಾನ್ಯರ ಜೊತೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಬೇಕು. ಪ್ರತಿಯೊಬ್ಬರ ಸಹಕಾರ ಇಲ್ಲದೆ ಸಂಘ ಲಾಭದಾಯಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಬಂಟ್ವಾಳ ವ್ಯವಸಾಯ ಸಹಕಾರಿ ಸಂಘದ ನೂತನ ಕಟ್ಟಡ ನಿರ್ಮಾಣವಾಗಿ ಲೋಕಾರ್ಪಣೆಯಾಗುತ್ತಿರುವುದು ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.ಅವರು ಬಿ.ಸಿ.ರೊಡಿನ ಕೈಕಂಬದಲ್ಲಿ ಬಂಟ್ವಾಳ ವ್ಯವಸಾಯ ಸಹಕಾರಿ ಸಂಘದ ನೂತನ ಕಟ್ಟಡ ಅಕ್ಷಯ ಸೌಧದ ಉದ್ಘಾಟನಾ ಸಮಾರಂಭದಲ್ಲಿ ದೀಪಪ್ರಜ್ವಲನೆ ಮಾಡಿ ಮಾತನಾಡಿದರು.ಕರ್ನಾಟಕ ರಾಜ್ಯಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಸಹಕಾರ ರತ್ನ ಡಾ. ಎಮ್.ಎನ್. ರಾಜೇಂದ್ರ ಕುಮಾರ್ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು, ಅಕ್ಷಯ ಸೌಧ ಜನರಿಗೆ ಅಕ್ಷಯವಾಗಲಿ ಕೃಷಿ ಸಾಲ ಶೂನ್ಯ ಬಡ್ಡಿಯಲ್ಲಿ ಸಿಗುವಂತಾಗಬೇಕು. ಸಹಕಾರಿ ಸಂಘಗಳು ರೈತರ ಸಂಸ್ಥೆಯಾಗಿದ್ದು ಲಾಭದಾಯಕವಾಗಿ ಕಾರ್ಯನಿರ್ವಹಿಸಿ ರೈತರಿಗಾಗಿ ನಿರಂತರ ಸೇವೆಯನ್ನು ಮಾಡಬೇಕು ಎಂದರು.ಮಾಜಿ ಸಚಿವ ನಾಗರಾಜ ಶೆಟ್ಟಿ ಜಿ.ಆನಂದ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿ ರೈತರಿಗೆ ಮತ್ತು ಬಡವರಿಗೆ ಸಹಕಾರ ನೀಡುವುದರ ಜೊತೆಗೆ ಮಹಿಳೆಯರಿಗೂ ಉತ್ತಮ ಸೇವೆ ಸಹಕಾರಿ ಸಂಘದಿಂದ ಸಿಗುವಂತಾಗಲಿ ಎಂದು ಶುಭಹಾರೈಸಿದರು.ಗಣಕೀಕರಣವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಬಂಟ್ವಾಳ ಪುರಸಭೆ ಅಧ್ಯಕ್ಷ ಟಿ.ವಾಸು ಪೂಜಾರಿ, ಬಂಟ್ವಾಳ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ಭೂಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಅರುಣ್ ರೋಶನ್ ಡಿಸೋಜ, ಬಂಟ್ವಾಳ ಪುರಸಭೆ ಸದಸ್ಯ ಎ.ಗೋವಿಂದ ಪ್ರಭು, ಸದಸ್ಯೆ ಜಯಂತಿ ವಿ. ಬಂಗೇರ ಉಪಸ್ಥಿತರಿದ್ದರು.ಸಂಘದ ಅಧ್ಯಕ್ಷ ಎಮ್. ಕರುಣೇಂದ್ರ ಪೂಜಾರಿ ಕೊಂಬರಬೈಲು ಮಾತನಾಡಿ ಎಲ್ಲಾ ನಿರ್ದೇಶಕರ ಹಾಗೂ ಸದಸ್ಯರ ಸಹಕಾರದಿಂದ ಉತ್ತಮವಾದ ಅಕ್ಷಯ ಸೌಧ ಕಟ್ಟಡ ನಿರ್ಮಾಣವಾಗಿದೆ ಎಂದು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸಂಘದ ಉಪಾಧ್ಯಕ್ಷ ಆದಿರಾಜ ಕೆ. ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಕಾಮತ್ ವರದಿ ಮಂಡಿಸಿದರು.ಸನ್ಮಾನ :ಸಹಕಾರ ರತ್ನ ಡಾ. ಎಮ್. ಎನ್. ರಾಜೇಂದ್ರ ಕುಮಾರ್ , ಸಂಘದ ಮಾಜಿ ಅಧ್ಯಕ್ಷ ದಿ. ಜಿ ಆನಂದ ರವರ ಪತ್ನಿ ಶಾರದಾ ಜಿ.ಆನಂದ , ಮಾಜಿ ಅಧ್ಯಕ್ಷ ಪದ್ಮನಾಭ ದೇವಾಡಿಗ , ಸಹಕಾರ ರತ್ನ ರವೀಂದ್ರ ಕಂಬಳಿ, ಇಂಜಿನಿಯರ್ ಸುಧಾಕರ ಕೆ.ಟಿ., ಗುತ್ತಿಗೆದಾರರಾದ ಹರೀಶ್, ನವೀನ್ ರವರನ್ನು ಸನ್ಮಾನಿಸಲಾಯಿತು.ನಿರ್ದೇಶಕರಾದ ವಿಠಲ ಪೂಜಾರಿ , ಎ.ಲಕ್ಷಿö್ಮÃ ವಿ. ಪ್ರಭು , ಹರೀಶ್, ಬಿ. ಜಯ ಕುಂದರ್ ,ಮುರಳೀಧರ ಭಟ್ , ಚಂದ್ರಶೇಖರ ಭಂಡಾರಿ, ದಿವಾಕರ ಶೆಟ್ಟಿ , ಪದ್ಮನಾಭ ಗೌಡ , ಗಣೇಶ , ಜಯಂತಿ, ಬಂಟ್ವಾಳ ವಲಯ ಮೇಲ್ವಿಚಾರಕ ಕೀರ್ತಿ ರಾಜ್ ಹಾಗೂ ಶಾಖೆಯ ಸಿಬ್ಬಂದಿಗಳು ಸಹಕರಿಸಿದರು.

ಪ್ರಾದೇಶಿಕ ವಾರ್ತೆಗಳು

ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆ ಗಳ ಒಕ್ಕೂಟ (ರಿ ) ಇದರ ಜಿಲ್ಲಾಧ್ಯಕ್ಷರಾಗಿ ಲ| ಅನಿಲ್ ದಾಸ್ ಆಯ್ಕೆ

ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆ ಗಳ ಒಕ್ಕೂಟ (ರಿ ) ಇದರ ಜಿಲ್ಲಾಧ್ಯಕ್ಷರಾಗಿ ಲ| ಅನಿಲ್ ದಾಸ್ ರವರು ಆವಿರೋದವಾಗಿ ಆಯ್ಕೆಯಾಗಿದ್ದಾರೆ

Scroll to Top