ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಸಹಕಾರ ರತ್ನ ಡಾ| ಅಗರಿ ನವೀನ್ ಭಂಡಾರಿಯವರಿಗೆ ‘ಪ್ರೈಡ್ ಆಫ್ ಕರ್ನಾಟಕ’ ಅವಾರ್ಡ್

ಭಾರತೀಯ ವ್ಯಾಪಾರ ನಿಯತಕಾಲಿಕದ ಐಕಾನ್‌ಗಳು ವತಿಯಿಂದ ೩೭ ನೇ ಆವೃತ್ತಿಯ ಪ್ರೈಡ್ ಆಫ್ ಕರ್ನಾಟಕ ಅವಾರ್ಡ್ ೨೦೨೫ ಅನ್ನು ಅತ್ಯುತ್ತಮ ಸಾಮಾಜಿಕ ಸೇವೆಗಳಿಗಾಗಿ ಸಹಕಾರ ರತ್ನ ಡಾ| ಅಗರಿ ನವೀನ್ ಭಂಡಾರಿಯವರಿಗೆ ಪ್ರಧಾನ ಮಾಡಲಾಯಿತು. ಅಗರಿ ನವೀನ್ ಭಂಡಾರಿಯವರು ಆರ್‌ಬಿಐಯ ಉತ್ತರ ವಲಯದ ಮಾಜಿ ನಿರ್ದೇಶಕರಾಗಿದ್ದು, ಬೆಂಗಳೂರು ಸುಂದರ್ ರಾಮ್ ಶೆಟ್ಟಿ ನಗರ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ವರದಿ: ಉಮಾಪ್ರಸಾದ್ ರೈ

ಪ್ರಾದೇಶಿಕ ವಾರ್ತೆಗಳು

ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಮಾಧ್ಯಮ ರಂಗದ ಸಾಧಕ ಪುರಸ್ಕಾರ

ಮಂಗಳೂರು,ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಭಾನುವಾರ ನಡೆದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಪತ್ರಕರ್ತರ ಗ್ರಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕ, ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಮಾಧ್ಯಮ ರಂಗದ ಸಾಧಕ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ನಡೆಯಿತು..ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ ಎಂ. ಎನ್. ರಾಜೇಂದ್ರ ಕುಮಾರ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ್, ಕೆ ಎಂ ಎಫ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಕಾಪು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿ ಕುಮಾರ್ ರೈ ಬಲ್ಯೊಟ್ಟು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಬಿಹಾರ ಚುನಾವಣೆ ಎನ್ ಡಿ ಎ ಮೈತ್ರಿಕೂಟಕ್ಕೆ ಪ್ರಚಂಡ ಗೆಲುವು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಸಂದ ಜಯ: ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್

ಮಂಗಳೂರು, ಬಿಹಾರದಲ್ಲಿ ಚುನಾವಣಾ ಫಲಿತಾಂಶದ ಕುರಿತು ಮಂಗಳೂರಿನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ನಾಯಕರ ವೋಟ್ ಚೋರಿ ಸುಳ್ಳು ಆರೋಪಕ್ಕೆ ಬಿಹಾರ ರಾಜ್ಯದ ಜನತೆ ತಕ್ಕ ಉತ್ತರ ಕೊಟ್ಟಿದ್ದಾರೆ. ಅಲ್ಲದೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯವನ್ನು ಜನರು ನೆಚ್ಚಿಕೊಂಡಿದ್ದಾರೆ. ಹೀಗಾಗಿ ಬಿಹಾರದಲ್ಲಿ ಎನ್ ಡಿ ಎ ಮೈತ್ರಿಕೂಟಕ್ಕೆ ಭರ್ಜರಿ ಜಯ ಸಿಕ್ಕಿದೆ ಎಂದು ಹೇಳಿದರು.ದೇಶದಲ್ಲಿ ಪಕ್ಷ ಇನ್ನೂ ಬಲಿಷ್ಠ ವಾಗಿ ಸಂಘಟನೆ ಯಾಗಲಿದೆ ಎಂದು ಹೇಳಿದರು. ಈ ಚುನಾವಣಾ ಫಲಿತಾಂಶ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕೂ ಧಕ್ಕೆ ತರಲಿದೆ ಎಂದು ಅಭಿಪ್ರಾಯ ಪಟ್ಟರು.

ಪ್ರಾದೇಶಿಕ ವಾರ್ತೆಗಳು

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ. ಎನ್.

ಮಂಗಳೂರು-ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025-28 ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪುಷ್ಪರಾಜ್ ಬಿ.ಎನ್ ಮಂಗಳೂರು ವಾರ್ತಾಭಾರತಿ ದಿನ ಪತ್ರಿಕೆಯ ಬ್ಯೂರೋ ಮುಖ್ಯಸ್ಥನಾಗಿ ಕಳೆದ 22ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು,ಈ ಹಿಂದೆ ಜನವಾಹಿನಿ ಪತ್ರಿಕೆಯ ಉಪ ಸಂಪಾದಕನಾಗಿ,ಪುತ್ತೂರು ವರದಿಗಾರನಾಗಿ, ಕೊಡಗು ಜಿಲ್ಲಾ ಪ್ರಧಾನ ವರದಿಗಾರನಾಗಿ ಪೂರ್ಣಾವಧಿಯಾಗಿ ಕಾರ್ಯ ನಿರ್ವಹಿ ಸಿರುತ್ತಾರೆ. ನಿರಂತರ ಶಿಕ್ಷಣ ಪತ್ರಿಕೆ, ನಿಯತಕಾಲಿಕಗಳಲ್ಲಿ ಸುದ್ದಿ ಬಿಡುಗಡೆ ಸೇರಿದಂತೆ ಪತ್ರಿಕೆಗಳಲ್ಲಿ ಒಟ್ಟು ಮೂರು ದಶಕಗಳಿಗೂ ಅಧಿಕ ಕಾಲ ಕಾರ್ಯ ನಿರ್ವಹಿಸಿರುತ್ತಾರೆ.1990-91ರ ದಕ್ಷಿಣ ಕನ್ನಡ ಜಿಲ್ಲಾ ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ, ನಿರಂತರ ಶಿಕ್ಷಣ ಯೋಜನೆಯಲ್ಲಿ ಸಂಯೋಜಕನಾಗಿ ಕಾರ್ಯನಿರ್ವ ಹಿಸಿರು ವುದು.ಈ ನಡುವೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು,1997-98ರಲ್ಲಿ ಉಪ್ಪಿನಂಗಡಿ ಜೇಸೀಸ್ (ಇಂಟರ್ ನ್ಯಾಶನಲ್ ) ಘಟಕದ ಅಧ್ಯಕ್ಷ ನಾಗಿ,ಅಂತರಾಷ್ಟ್ರೀಯ ಜೇಸೀಸ್ ಸಂಸ್ಥೆಯ ವಲಯ ತರಬೇತು ದಾರನಾಗಿ ಕೊಯಿಲದ ಕರ್ನಾಟಕ ಜಾಗೃತಿ ಸಭಾದ ಅಧ್ಯಕ್ಷನಾಗಿ, ಕೊಯಿಲ ರಾಮಕುಂಜ ರೋಟರಿ ಗ್ರಾಮೀಣ ದಳದ ಅಧ್ಯಕ್ಷನಾಗಿ ,ಕೊಡಗು ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ರುವುದು. ಪುತ್ತೂರು ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅರೆ ಕಾಲಿಕ ಅತಿಥಿ ಉಪನ್ಯಾಸಕನಾಗಿ ಕಡಬ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವುದು. ಗ್ರಾಮ ಪಂಚಾಯತ್ ಸದಸ್ಯರಿಗೆ ತರಬೇತಿ ನೀಡಿರುವುದು, ಸೇರಿದಂತೆ ಜಿಲ್ಲೆಯ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ತರಬೇತಿ, ಪತ್ರಿಕೋದ್ಯಮ ದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿರುವುದು.ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಯಾಗಿ,ಪ್ರಸ್ತುತ ಮಂಗಳೂರು ಪ್ರೆಸ್ ಕ್ಲಬ್‌ ನ ಕಾರ್ಯದರ್ಶಿ ಯಾಗಿ,ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಗೃಹ ನಿರ್ಮಾಣ ಸಹಕಾರಿ ಸಂಘದ ನಿರ್ದೇಶಕ ನಾಗಿ,ಪತ್ರಿಕಾ ಭವನ ಟ್ರಸ್ಟ್ ನ ಕಾರ್ಯ ದರ್ಶಿಯಾಗಿ ,ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಸೇರಿದಂತೆ ವಿವಿಧ ಸಾಮಾಜಿಕ ಸಂಘಟನೆ ಗಳಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.*ಶೈಕ್ಷಣಿಕ ಅರ್ಹತೆ :-ರಾಮಕುಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು,ರಾಮಕುಂಜ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದು ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪದವಿ ಪಡೆದು ಬಳಿಕ ಕುವೆಂಪು ವಿಶ್ವ ವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮ ಪದವಿ, ಪತ್ರಿಕೋದ್ಯಮದಲ್ಲಿ ( ಎಂಸಿಜೆ ) ಸ್ನಾತಕೋತ್ತರ ಪದವಿ ಹಾಗೂ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ.*ಪದವಿ ಪುರಸ್ಕಾರ:-ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪುಶಸ್ತಿ 2024,ಟ್ಯಾಲೆಂಟ್‌ ರೀಸರ್ಚ್ ಫೌಂಡೇಶನ್ ಪ್ರಶಸ್ತಿ,ಪಬ್ಲಿಕ್ ರಿಲೇಶನ್ ಕೌನ್ಸಿಲ್ ಆಫ್ ಇಂಡಿಯಾ ಪುರಸ್ಕಾರ, ಉಳ್ಳಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪುರಸ್ಕಾರ 2023 ಸೇರಿದಂತೆ ಗೌರವ ಪಡೆದಿರುತ್ತಾರೆ.*ಇತರ ಚಟುವಟಿಕೆ ಗಳು :-ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಕೊಡಗು,ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸಾಹಿತ್ಯ ,ಕವಿಗೋಷ್ಠಿಯಲ್ಲಿ ಕವಿತಾ ವಾಚನ,ಅಧ್ಯಕ್ಷತೆವಹಿಸಿರುವುದು ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುವುದು.ವೈಯಕ್ತಿಕ ವಿವರ:-ಮೂಲತಃ ಪುತ್ತೂರು ತಾಲೂಕಿನ (ಈಗಿನ ಕಡಬ ತಾಲೂಕಿನ) ರಾಮಕುಂಜ ಗ್ರಾಮದ ನೀರಾಜೆ ನಿವಾಸಿ.ಹಾಲಿ ಉಳ್ಳಾಲ ತಾಲೂಕಿನಪಿಲಾರು ದಾರಂದ ಬಾಗಿಲಿನಲ್ಲಿ ವಾಸವಾ ಗಿದ್ದು, ಮಂಗಳೂರಿನ ವೆಲೆನ್ಸಿಯಾದ ವಾರ್ತಾಭಾರತಿ ಕಚೇರಿಯಲ್ಲಿ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಅಟಲ್ ಬಿಹಾರಿ ವಾಜಪೇಯಿ ಅವರ ಚಾಲಕರಾಗಿದ್ದ ಬಿ.ಸಿ. ಕುಶಾಲಪ್ಪರನ್ನು ಅಭಿನಂದಿಸಲು NSCDF ರಾಷ್ಟ್ರೀಯ ಅಧ್ಯಕ್ಷ ಗಂಗಾಧರ ಗಾಂಧಿ ಮನವಿ.

ಮಂಗಳೂರು-ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆಯಲಿರುವ ದೇಶ ಕಂಡ ಸಜ್ಜನ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನದ ಅಟಲ್ ವಿರಾಸಾತ್ ಕಾರ್ಯಕ್ರಮದಲ್ಲಿ ಅವರೊಂದಿಗೆ 2 ವರ್ಷಗಳ ಕಾಲ ಚಾಲಕರಾಗಿ ಸೇವೆ ಸಲ್ಲಿಸಿದ್ದ ಕೊಡಗು ಮದೆನಾಡು ಮೂಲದ ಬಟ್ಯನ ಚಿನ್ನಪ್ಪ ಕುಶಾಲಪ್ಪ ಅವರನ್ನು ಗುರುತಿಸಿ ಅಭಿನಂದಿಸುವ ಕಾರ್ಯ ಆಗಬೇಕಿದೆ ಎಂದು NSCDF ಅಧ್ಯಕ್ಷ ಗಂಗಾಧರ್ ಗಾಂಧೀ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ದ.ಕ. ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಸತೀಶ್ ಕುಂಪಲ ಅವರ ಸುದ್ದಿ ಗೋಷ್ಠಿಯ ವಿಷಯ ತಿಳಿದು ಗಂಗಾಧರ್ ಗಾಂಧೀ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ ಮತ್ತು ಬಟ್ಯಾನ ಚಿನ್ನಪ್ಪ ಕುಶಾಲಪ್ಪ ಕುರಿತಾದ ಸಣ್ಣ ಬರಹ ನೀಡಿದ್ದು ಈ ಮಹತ್ವ ಪೂರ್ಣ ಕಾರ್ಯಕ್ರಮದಲ್ಲಿ ವಾಜಪೇಯಿ ಅವರೊಂದಿಗೆ ಕೆಲಸ ಮಾಡಿರುವ ಕುಶಾಲಪ್ಪರನ್ನು ಗುರುತಿಸಿದರೆ ಕಾರ್ಯಕ್ರಮಕ್ಕೆ ಇನ್ನಷ್ಟು ಮಹತ್ವ ಬರುತ್ತದೆ ಮತ್ತು ಶೋಭೆ ತರಬಲ್ಲದು ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಿ.ಸಿ.ಕುಶಾಲಪ್ಪ,ಬಟ್ಯನ ಚಿನ್ನಪ್ಪ ಕುಶಾಲಪ್ಪಅವರ ಬಗ್ಗೆ ಒಂದಿಷ್ಟು….ಅದು 1984 ಸಮಯ. ದೇಶ ಕಂಡ ಪ್ರಭುದ್ದ, ಸಜ್ಜನ ರಾಜಕಾರಣಿ,ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಕರ್ನಾಟಕ ರಾಜಧಾನಿ ಬೆಂಗಳೂರಿಗೆ ಆಗಮಿಸುತ್ತಾರೆ, ಅಗ ಅವರನ್ನು ಕರೆತರಲು ಹೋಗುವ ಚಾಲಕರೇ ಕೊಡಗಿನ ಮದೆನಾಡು ಮೂಲದ ಬಿ.ಸಿ. ಕುಶಾಲಪ್ಪ.!!!ಬಟ್ಯಾನ ಚೆನ್ನಪ್ಪ ಕುಶಾಲಪ್ಪ ಅವರ ಕಾರು ಚಾಲನ ಪ್ರಭುದ್ಧತೆ ಕಂಡು ಬೆರಗಾದವರೇ ದೇಶ ಕಂಡ ಸಜ್ಜನ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ.ಮಾತ್ರವಲ್ಲ ನೇರವಾಗಿ ದೆಹಲಿಗೆ ಕರೆಸಿಕೊಂಡು ಎರಡು ವರ್ಷಗಳ ತನ್ನ ಚಾಲಕರಾಗಿ ನೇಮಿಸಿಕೊಳ್ಳುತ್ತಾರೆ ಇದು ಕುಶಾಲಪ್ಪ ನಿಷ್ಠೆಗೆ ವಾಜಪೇಯಿ ನೀಡಿದ ಗೌರವ ಎಂದೇ ವ್ಯಾಖ್ಯಾನಿಸಬಹುದಾಗಿದೆ.ಬಳಿಕ ನಡೆದದ್ದೆಲ್ಲ ಪವಾಡವೇ ಎನ್ನಬಹುದು.ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ, ಅಂದಿನ ಸಚಿವ ವಿ.ಎಸ್. ಆಚಾರ್ಯ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ, ಕೊಡಗಿನ ಅಂದಿನ ಉಸ್ತುವಾರಿ ಸಚಿವ ರಾಮಚಂದ್ರ ಗೌಡರಿಗೆ, ಯುವ ರಾಜಕಾರಣಿ ವಿಜೇಯೇಂದ್ರ ಹಾಗೂ ಅನೇಕ ರಾಜಕಾರಣಿಗಳಿಗೆ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ ಹೆಮ್ಮೆ ಇವರದು.ಇಷ್ಟೆಲ್ಲ ಪ್ರಭುದ್ದ ರಾಜಕಾರಣಿಗಳ ಒಡನಾಟವಿದ್ದರೂ ತನ್ನ ಪಾಡಿಗೆ ತಾನು ಎಂಬಂತೆ ಬದುಕುತ್ತಿರುವ ಬಟ್ಯನ ಚೆನ್ನಪ್ಪ ಕುಶಾಲಪ್ಪ ಅವರನ್ನು ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಾಬ್ಧ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಅಭಿನಂದಿಸವುದು ನಮ್ಮ ಜವಾಬ್ದಾರಿ ಎಂದು ಭಾವಿಸಿದ್ದೇನೆಂದು ಗಂಗಾಧರ ಗಾಂಧಿ ತಿಳಿಸಿದ್ದಾರೆ.ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿಗಂಗಾಧರ್ ಗಾಂಧೀ ಮೊಬೈಲ್ ಸಂಖ್ಯೆ9663593596 ವನ್ನು ಆಸಕ್ತರು ಸಂಪರ್ಕಿಸಬಹುದಾಗಿದೆ

ಪ್ರಾದೇಶಿಕ ವಾರ್ತೆಗಳು

ವೆನ್ಲಾಕ್ ನಲ್ಲಿ ಐಸಿಯು ಘಟಕಗಳ ಇಳಿಕೆಯಿಂದಾಗಿ ರೋಗಿಗಳ ಪರದಾಟ:- ಶಾಸಕ ಕಾಮತ್

ರಾಜ್ಯ ಕಾಂಗ್ರೆಸ್ ಸರ್ಕಾರವು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಿರುವುದರಿಂದ ರೋಗಿಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಕೂಡಲೇ ಈ ಬಗ್ಗೆ ಆರೋಗ್ಯ ಸಚಿವರು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕ ವೇದವ್ಯಾಸ ಕಾಮತ್ ರವರು ಪತ್ರದ ಮೂಲಕ ಆಗ್ರಹಿಸಿದರು.ನಾನು ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯಾದ ವೆನ್ಲಾಕ್ ನಲ್ಲಿ ಕೇವಲ 16 ತೀವ್ರ ನಿಗಾ ಘಟಕಗಳಿದ್ದವು. ಆ ನಂತರ ರೋಗಿಗಳಿಗೆ ಅನುಕೂಲವಾಗಲು ಹಂತ ಹಂತವಾಗಿ ಅವುಗಳ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಅಂತಿಮವಾಗಿ ಜನರು ಕೊರೋನ ಸಂಕಷ್ಟದಲ್ಲಿ ಸಿಲುಕಿದ್ದಾಗ, ಬಿಜೆಪಿ ಸರ್ಕಾರದ ವಿಶೇಷ ಸಹಕಾರದೊಂದಿಗೆ 115 ಕ್ಕೂ ಅಧಿಕ ತೀವ್ರ ನಿಗಾ ಘಟಕ ಹಾಗೂ 250 ಕ್ಕೂ ಹೆಚ್ಚು ಆಕ್ಸಿಜನ್ ಬೆಡ್ ಗಳನ್ನು ಸಜ್ಜುಗೊಳಿಸಲಾಗಿತ್ತು. ಆದರೆ ಇದೀಗ ಕಾಂಗ್ರೆಸ್ ಸರ್ಕಾರವು ಅತ್ಯಂತ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದು ತೀವ್ರ ನಿಗಾ ಘಟಕಗಳ ಸಂಖ್ಯೆಯನ್ನು ಗಣನೀಯವಾಗಿ ಇಳಿಸಿ ರೋಗಿಗಳು ಈ ಹಿಂದಿನಂತೆ ಪರದಾಡುವಂತೆ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ವೆನ್ಲಾಕ್ ಆಸ್ಪತ್ರೆಗೆ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೇ ಸುತ್ತಮುತ್ತಲಿನ ಅನೇಕ ಜಿಲ್ಲೆಗಳಿಂದಲೂ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಅಲ್ಲದೇ ಮಂಗಳೂರು ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು ಜನರ ಅಗತ್ಯಕ್ಕನುಗುಣವಾಗಿ ತೀವ್ರನಿಗಾ ಘಟಕಗಳನ್ನು ಹೆಚ್ಚಿಸಬೇಕೇ ಹೊರತು ಕಡಿಮೆಗೊಳಿಸಬಾರದು. ಸ್ಟಾಫ್ ನರ್ಸ್ ಗಳ ಕೊರತೆಯಿದ್ದರೆ ಅದಕ್ಕೆ ವ್ಯವಸ್ಥೆ ಮಾಡಿಕೊಳ್ಳಿ. ಅದು ಬಿಟ್ಟು ಜನಸಾಮಾನ್ಯರ ಆರೋಗ್ಯದ ವಿಷಯದಲ್ಲಿ ಚೆಲ್ಲಾಟವಾಡುವುದು ಬೇಡ. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರೇ ರಾಜ್ಯದ ಆರೋಗ್ಯ ಸಚಿವರಾಗಿದ್ದರೂ ಇಂತಹ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಶಾಸಕರು ಹೇಳಿದರು.

ಪ್ರಾದೇಶಿಕ ವಾರ್ತೆಗಳು

“45“ ಸಿನಿಮಾದ ”ಅಫ್ರೋ ಟಪಂಗ್“ ಹಾಡಿನ ಪ್ರಮೋಷನ್ ನಲ್ಲಿ ಮೋಡಿ ಮಾಡಿದ ಚಿತ್ರತಂಡ. ಅರ್ಜುನ್ ಜನ್ಯ, ರಾಜ್ ಬಿ ಶೆಟ್ಟಿಗೆ ಅನುಶ್ರೀ ಸಾಥ್!

ಮಂಗಳೂರು: ಬಹುನಿರೀಕ್ಷಿತ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ “45” ಸಿನಿಮಾದ ಆಫ್ರೋ ಟಪಂಗ್ ಹಾಡಿನ ಪ್ರಮೋಷನ್ ಗಾಗಿ ಆಗಮಿಸಿದ್ದ ಚಿತ್ರತಂಡ  ಫೋರಂ ಫಿಜಾ ಮಾಲ್ ನಲ್ಲಿ ನೆರೆದಿದ್ದ ಸಿನಿಮಾ ಪ್ರೇಮಿಗಳು ಮತ್ತು ಅಭಿಮಾನಿಗಳನ್ನು ಮೋಡಿ ಮಾಡಿತು. ನಿರ್ದೇಶಕ ಅರ್ಜುನ್ ಜನ್ಯ, ರಾಜ್ ಬಿ ಶೆಟ್ಟಿ, ಗಾಯಕರಾದ ನಿಶಾನ್ ರೈ, ಎಂ.ಸಿ.ಬಿಜು ಅವರಿಗೆ ಅನುಶ್ರೀ ಶೆಟ್ಟಿ ಸಾಥ್ ನೀಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ಹಾಡಿನ ನೃತ್ಯ ಪ್ರದರ್ಶನ ನೆರೆದಿದ್ದವರ ಮನಸೂರೆಗೊಂಡಿತು. ಹಾಡಿಗೆ ರಾಜ್ ಬಿ ಶೆಟ್ಟಿ ಟಪಾಂಗುಚ್ಚಿ ಕುಣಿಯುವ ಮೂಲಕ ಆಕರ್ಷಣೆ ಹೆಚ್ಚಿಸಿದ್ದು ವಿಶೇಷವಾಗಿತ್ತು.ಬಳಿಕ ಮಾಧ್ಯಮಗಳ ಜೊತೆಗೆ ಮಾತಾಡಿದ ಅರ್ಜುನ್ ಜನ್ಯ ಅವರು, “ಮಂಗಳೂರಿನ ಜನ ಬಹಳ ಒಳ್ಳೆಯವರು. ಇಲ್ಲಿಗೆ ಪ್ರತೀ ಬಾರಿ ಬಂದಾಗಲೂ ಒಳ್ಳೆಯ ಫೀಲ್ ಉಂಟಾಗುತ್ತೆ. ಹಾಗಾಗಿ ಸಿನಿಮಾದಲ್ಲಿ ನಿಶಾನ್ ರೈ ಬರೆದಿರುವ ತುಳು ಸಾಹಿತ್ಯವಿರುವ ಹಾಡನ್ನು ಅಳವಡಿಸಲಾಗಿದೆ. ಈಗಾಗಲೇ ಹಾಡು 25 ಮಿಲಿಯನ್ ವೀಕ್ಷಣೆ ಪಡೆಯುವ ಸನಿಹದಲ್ಲಿಯುವುದು ಖುಷಿ ಎನಿಸುತ್ತಿದೆ. ಚಿತ್ರವು ಡಿಸೆಂಬರ್ 25ರಂದು ಬಿಡುಗಡಯಾಗುತ್ತಿದೆ ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ“ ಎಂದರು.ನಟ ರಾಜ್ ಬಿ ಶೆಟ್ಟಿ ಮಾತಾಡಿ, ”45 ಸಿನಿಮಾದಲ್ಲಿ ಶಿವರಾಜ್ ಕುಮಾರ್, ಉಪೇಂದ್ರ ಅವರೊಂದಿಗೆ ನಟಿಸಿರುವುದು ರೋಮಾಂಚನಕಾರಿ ಅನುಭವ. ಸಿನಿಮಾ ಚೆನ್ನಾಗಿ ಮೂಡಿಬಂದಿದ್ದು ಆಫ್ರೋ ಟಪಂಗ್ ಹಾಡಿಗೆ ಒಳ್ಳೇ ರೆಸ್ಪಾನ್ಸ್ ಬರುತ್ತಿದೆ. ತುಳುವರು ಸಿನಿಮಾ ನೋಡಿ“ ಎಂದರು.ಫೋರಂ ಫಿಜಾ ಮಾಲ್ ನ ಬಿ.ಎಂ.ಫಾರೂಕ್ ಮಾತಾಡಿ, ”ಚಿತ್ರತಂಡ ಒಳ್ಳೆಯ ಪ್ರಯತ್ನಕ್ಕೆ ಕೈಹಾಕಿದೆ. ತುಳು ಸಾಹಿತ್ಯವನ್ನು ಹಾಡಿನಲ್ಲಿ ಬಳಕೆ ಮಾಡಿರುವುದು ನಮಗೆ ಹೆಮ್ಮೆಯ ವಿಚಾರ“ ಎಂದರು.ಅನುಶ್ರೀ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.*ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಉಗಾಂಡಾ ಮಕ್ಕಳ ನೃತ್ಯ!*ರೀಲ್ಸ್ ಮೂಲಕವೇ ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ್ದ ಉಗಾಂಡಾ ದೇಶದ ಹಳ್ಳಿಯ ಮಕ್ಕಳ ತಂಡ “ಗೆಟ್ಟೋ ಕಿಡ್ಸ್” ಅನ್ನು 45 ಸಿನಿಮಾದ ಟಪಂಗ್ ಹಾಡಿನಲ್ಲಿ ಕುಣಿಸಿರುವುದು ಸಿನಿಮಾದ ವಿಶೇಷವಾಗಿದೆ. ಈ ಕುರಿತು ಮಾತಾಡಿದ ನಿರ್ದೇಶಕ ಅರ್ಜುನ್ ಜನ್ಯ ರೀಲ್ಸ್ ಮೂಲಕ ನೋಡಿದ್ದ ಮಕ್ಕಳ ಪ್ರಸಿದ್ಧ ನೃತ್ಯ ತಂಡವನ್ನು ಕರೆಸುವ ಮೂಲಕ ಸಿನಿಮಾದ ಹಾಡನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವಲ್ಲಿ ಯಶಸ್ಸು ಸಿಕ್ಕಿದೆ“ ಎಂದರು.

ಪ್ರಾದೇಶಿಕ ವಾರ್ತೆಗಳು

ಸಮಾಜಕ್ಕೆ ಮಾದರಿ ಆಗುವ ಕೆಲಸ ಮಾಡಿದ ಹೆಮ್ಮೆ ಇದೆ – ಶ್ರೀನಿವಾಸ್ ನಾಯಕ್ ಇಂದಾಜೆ

ಮಂಗಳೂರು,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗಿ ಎರಡು ಅವಧಿ ಗೆ (ಆಗಸ್ಟ್ 4,2018 ರಿಂದ 07.11.2025 ರ ವರೆಗೆ ) ಅವಕಾಶ ನೀಡಿರುವುದಕ್ಕೆ ನನ್ನ ಪತ್ರಕರ್ತ ಮಿತ್ರರಿಗೆ ಧನ್ಯವಾದಗಳು.ನಮ್ಮ ಅವಧಿಯಲ್ಲಿ ಪತ್ರಕರ್ತರ ಅರೋಗ್ಯ ಕ್ಷೇಮಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಪತ್ರಿಕಾ ಭವನದಲ್ಲಿ ಮೀಡಿಯಾ ಹೆಲ್ತ್ ಕ್ಲಬ್ ನ್ನು ಎ ಜೆ ವೈದ್ಯಕೀಯ ಮಹಾವಿದ್ಯಾಲಯ ಸಹಾಭಾಗೀತ್ವದಲ್ಲಿ ಆರಂಭಿಸಲಾಗಿದೆ. ಈ ಮೂಲಕ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಉಚಿತ ಅರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ. ಕ್ಷೇಮಾ ಹೆಲ್ತ್ ಕಾರ್ಡ್ ಹಾಗೂ ಮಣಿಪಾಲ ಅರೋಗ್ಯ ಕಾರ್ಡ್ ನ್ನು ಪತ್ರಕರ್ತ ಮಿತ್ರರಿಗೆ ವಿತರಿಸಲಾಗಿದೆ.ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಆರಂಭಿಸಲಾಗಿದೆ. ಕಳೆದ ಎರಡು ವರ್ಷದಲ್ಲಿ ಸಂಘದ ಸದಸ್ಯರಿಗೆ 10 ಲಕ್ಷ ರೂಪಾಯಿ ವಿಮೆ ಮಾಡಿಸಲಾಗಿದೆ. ಸಮಾಜಕ್ಕೆ ಮಾದರಿ ಯಾಗುವ ಕೆಲಸ ಮಾಡಿದ್ದೇನೆ ಎಂಬ ಹೆಮ್ಮೆ ಇದೆ ಎಂದುl ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಶ್ರೀನಿವಾಸ್ ನಾಯಕ್ ಇಂದಾಜಿ ತಿಳಿಸಿದರು.ಮಂಗಳೂರು ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ಯಲ್ಲಿ ಮಾತನಾಡಿದ ಅವರು,ಪತ್ರಕರ್ತರ ಗ್ರಹ ನಿರ್ಮಾಣ ಸಹಕಾರ ಸಂಘ ಆರಂಭಿಸಲಾಗಿದೆ. ಈ ಮೂಲಕ ಪತ್ರಕರ್ತರಿಗೆ ಕಡಿಮೆ ದರದಲ್ಲಿ ನಿವೇಶನ ನೀಡುವ ಪ್ರಯತ್ನ ಮುಂದುವರಿದಿದೆ. ನೀರುಮಾರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರ್ಮ0ಕಿ ಪದವು ಎಂಬಲ್ಲಿ 3 ಎಕರೆ ಕಂದಾಯ ಭೂಮಿಯನ್ನು ನಿವೇಶನ ನೀಡುವಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಕೊರೋನ ವೇಳೆ 4 ಕುಟುಂಬಗಳಿಗೆ ರಾಜ್ಯ ಸರಕಾರದಿಂದ 14 ಲಕ್ಷ ರೂಪಾಯಿ ನೆರವು ಕೊಡಿಸಲಾಗಿದೆ.ಕೊರೋನ ವೇಳೆ ಕಾರ್ಮಿಕ ಇಲಾಖೆ ಹಾಗೂ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಸಹಾಯದಲ್ಲಿ ಎಲ್ಲಾ ಪತ್ರಕರ್ತರಿಗೆ ಫುಡ್ ಕಿಟ್ ವಿತರಿಸಲಾಗಿದೆ.5 ಪತ್ರಕರ್ತರ ಜಿಲ್ಲಾ ಸಮ್ಮೇಳನ ಆಯೋಜಿಸಲಾಗಿದೆ. ಈ ಸಮಾವೇಶ ದಲ್ಲಿ ಸಾಧಕ ಹಾಗೂ ಹಿರಿಯ ಪತ್ರಕರ್ತರಿಗೆ ಸನ್ಮಾನಿಸಿ ಅವರನ್ನು ಗುರುತಿಸುವ ಕೆಲಸ ಮಾಡಲಾಗಿದೆ.ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಹಾಗೂ ರಾಜ್ಯ ಮಟ್ಟದ ಬ್ರ್ಯಾಂಡ್ ಮಂಗಳೂರು ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.ಸಾಮಾಜಿಕ ಚಟುವಟಿಕೆಗಳುಪತ್ರಕರ್ತರ ಗ್ರಾಮ ವಾಸ್ತವ್ಯ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ಮಾಡಲು ಸಾಧ್ಯವಾಗಿದೆ. ಬೆಳ್ತಂಗಡಿ ತಾಲೂಕಿನ ಕುತ್ಲುರು, ಸುಳ್ಯ ತಾಲೂಕಿನ ಮಡಪ್ಪಾಡಿ, ಕೊಲ್ಲಮೊಗರು, ಕಡಬ ತಾಲೂಕಿನ ಸಿರಿಬಾಗಿಲು, ಪುತ್ತೂರು ತಾಲೂಕಿನ ಸುಳ್ಯಪದವು ನಲ್ಲಿ ಯಶಸ್ವಿ ಗ್ರಾಮ ವಾಸ್ತವ್ಯ ಮಾಡಲಾಗಿದೆ.ಕುತ್ಲುರು ಸರಕಾರಿ ಶಾಲೆ ಗೆ ವಿವಿಧ ಕಂಪನಿ ಹಾಗೂ ಸರಕಾರದ ಮೂಲಕ 50 ಲಕ್ಷಕ್ಕೂ ಮಿಕ್ಕಿ ಅನುದಾನ ತರಲಾಗಿದೆ.ಮಡಪಾಡ್ಡಿ ಯಲ್ಲಿ 1.5 ಕೋಟಿ ವೆಚ್ಚದಲ್ಲಿ 3 ಕಿಲೋಮೀಟರ್ ರಸ್ತೆ ನಿರ್ಮಾಣ ವಾಗಿದೆ.ಬಿಜೈ ಕಾಪಿಕಾಡ್ ಅಂಗನವಾಡಿ ಯನ್ನು ದಾನಿಗಳ ಮೂಲಕ ಅಭಿವೃದ್ಧಿ ಪಡಿಸಲಾಗಿದೆ.ಬ್ರ್ಯಾಂಡ್ ಮಂಗಳೂರು ಕಾರ್ಯಕ್ರಮ ದ ಮೂಲಕ ಮಂಗಳೂರು ವಿಶ್ವದಲ್ಲಿಯೇ ಗುರುತಿಸುವ ಕೆಲಸ ವಾಗುತ್ತಿದೆ. ಪತ್ರಕರ್ತರ ಸಂಘ ಆರಂಭಿಸಿದ ಈ ಕಾರ್ಯಕ್ರಮ ವನ್ನು ಈಗ ಕೆನರಾ ಚೇಂಬರ್ ಒಫ್ ಕಾಮರ್ಸ್ ಹಾಗೂ ಕ್ರಡೈ ಮುಂದುವರಿಸಿ ಕೊಂಡು ಹೋಗುತ್ತಿದೆ.ಮುಂದಿನ ಯೋಜನೆಗಳು:ಬ್ರ್ಯಾಂಡ್ ಮಂಗಳೂರು ಇಂಟರ್ನ್ಯಾಷನಲ್ ಕೌನ್ಸಿಲ್ ಸ್ಥಾಪನೆಮಂಗಳೂರು ನ್ನು ವಿಶ್ವದಲ್ಲಿ ಆಕರ್ಷಸಲು ಈ ಕೌನ್ಸಿಲ್ ಮೂಲಕ ಪ್ರಯತ್ನಿಸಲಾಗುವುದು. ಜನಪ್ರತಿನಿದಿಗಳು, ಅಧಿಕಾರಿಗಳು, ಪತ್ರಕರ್ತರು, ಉದ್ಯಮಿ ಗಳನ್ನು ಒಳಗೊಂಡ ಸಮಿತಿ ರಚಿಸಲಾಗುವುದು.ಗ್ರಾಮ ವಾಸ್ತವ್ಯ ಫಾಲೋ ಅಪ್ ಸಮಿತಿ:ಗ್ರಾಮ ವಾಸ್ತವ್ಯ ಮಾಡಿರುವ ಗ್ರಾಮಗಳಲ್ಲಿ ನಡೆಯಬೇಕಾಗಿರುವ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಿ ಕೊಂಡು ಹೋಗಲು ಗ್ರಾಮ ಮಟ್ಟದಲ್ಲಿ ಸಮಿತಿ ರಚಿಸಲಾಗುವುದು.

ಪ್ರಾದೇಶಿಕ ವಾರ್ತೆಗಳು

ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ 2ನೇ ಬಾರಿಗೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ಅಶೋಕ್ ಶೆಟ್ಟಿ. ಬಿ.ಎನ್ ಅವರಿಗೆ ಚುನಾವಣಾಧಿಕಾರಿಯಿಂದ ಅಭಿನಂದನೆ ಜೊತೆಗೆ ಪ್ರಮಾಣ ಪತ್ರ

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ 2ನೇ ಬಾರಿಗೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ಅಶೋಕ್ ಶೆಟ್ಟಿ ಬಿ. ಎನ್ ಅವರನ್ನು ಚುನಾವಣಾಧಿಕಾರಿ ಖಾದರ್ ಶಾ ಅವರು ಮಂಗಳೂರು ವಾರ್ತಾ ಇಲಾಖೆಯಲ್ಲಿ ಪ್ರಮಾಣಪತ್ರ ನೀಡಿ ಅಭಿನಂದಿಸಿದರು

ಪ್ರಾದೇಶಿಕ ವಾರ್ತೆಗಳು

ಗಂಗಾಧರ್ ಗಾಂಧೀಗೆ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.

ಅನೇಕ ಸಾಮಾಜಿಕ ಸಾಂಸ್ಕೃತಿಕ ಶೈಕ್ಷಣಿಕ ಕನ್ನಡ ಕಾರ್ಯಕ್ರಮ,ಕಾನೂನು ಕಾರ್ಯಕ್ರಮ ಆಯೋಜನೆ,ಸಂಘಟಕ ಮತ್ತು ಗಾಯನ ಕ್ಷೇತ್ರದಲ್ಲಿ ನಿರಂತರ 12 ಗಂಟೆಗಳ ಕಾಲ ಹಾಡುವ ಮೂಲಕ ಎರಡು ವಿಶ್ವ ದಾಖಲೆ ಮಾಡಿರುವ ಗಂಗಾಧರ್ ಗಾಂಧೀಗೆ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2025 ಇತ್ತೀಚಿಗೆ ಪ್ರಧಾನ ಮಾಡಲಾಯಿತು.ಕೇರಳದ ನೆಲದಲ್ಲಿ ಕನ್ನಡ ಗ್ರಾಮವನ್ನು ಸೃಷ್ಟಿ ಮಾಡಿ ಕನ್ನಡ ಭಾಷೆ ಕನ್ನಡದ ಅನನ್ಯತೆ ಕನ್ನಡದ ಅಸ್ಮಿತೆ ಕುರಿತು ಕಳೆದ 40 ವರ್ಷಗಳಿಂದ ನಿರಂತರ ಕಾರ್ಯಕ್ರಮಗಳನ್ನು ಮಾಡುತ್ತಾ ,ಅದೇ ಕಾಸರಗೋದಿನ ಕನ್ನಡ ಗ್ರಾಮದಲ್ಲಿ ತನ್ನ 60 ನೇ ಜನ್ಮದಿನ ಆಚರಿಸಿದ ಶಿವರಾಮ ಕಾಸರಗೋಡು ಅವರ ಕನಸಿನ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2025 ಯನ್ನು ಕನ್ನಡಕ್ಕಾಗಿ ಕೆಲಸ ಮಾಡಿದ,ಮಾಡುತ್ತಿರುವ 60 ಮಂದಿ ಸಾಧಕರನ್ನು ಈ ಸಂದರ್ಭದಲ್ಲಿ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕನ್ನಡವನ್ನೇ ಉಸಿರಾಗಿ ಬದುಕಿ, ಭವಿಷ್ಯದಲ್ಲಿ ಅನೇಕ ಕನ್ನಡ ಪರ ಕಾರ್ಯಕ್ರಮದ ಕನಸು ಹೊತ್ತಿರುವ , ಆನೇಕ ಸಾಮಾಜಿಕ ಸಾಂಸ್ಕೃತಿಕ ಶೈಕ್ಷಣಿಕ ಕಾನೂನು ಮಾಹಿತಿ ಕಾರ್ಯಕ್ರಮಗಳನ್ನು ರಾಜ್ಯದ ವಿವಿಧ ಕಡೆಗಳಲ್ಲಿ ಆಯೋಜಿಸಿದ, ಇತ್ತೀಚಿಗೆ ನಿರಂತರ 12 ಗಂಟೆಗಳ ಕಾಲ ಕನ್ನಡ ಗೀತೆಗಳನ್ನು ಹಾಡುವ ಮೂಲಕ ಎರಡು ವಿಶ್ವ ದಾಖಲೆ ಮಾಡಿರುವ ಗಂಗಾಧರ್ ಗಾಂಧೀ ಅವರನ್ನು ಶಾಲು ಹೊದಿಸಿ, ಹಾರ ಹಕ್ಕಿ ಪೇಟ ತೊಡಿಸಿ ಅಭಿನಂದನ ಪಲಕ ನೀಡಿ ಅತ್ಯಂತ ಪ್ರೀತಿ ಯಿಂದ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಸಾಮಾಜಿಕ ಚಿಂತಕ ವೆಂಕಟ್ರಮಣ ಹೊಳ್ಳ, ಕಾರ್ಯಕ್ರಮದ ರೂವಾರಿ ಶಿವರಾಮ ಕಾಸರಗೋಡು.,ಶಿಕ್ಷಕಿ, ಕವಯಾತ್ರಿ ರೇಖಾ ಸುದೇಶ್ ರಾವ್, ಪತ್ರಕರ್ತ ಜಗದೀಶ್ ಕೂಡ್ಲು ಮತ್ತಿತರರು ಉಪಸ್ಥಿತರಿದ್ದರು.ಡಾ. ಕೊಳಚಪ್ಪೆ ಗೋವಿಂದ ಭಟ್.

Scroll to Top