ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಹಿರಿಯ ಪತ್ರಕರ್ತರು, ನಿವೃತ್ತ ಪ್ರಾಂಶುಪಾಲ ಪ್ರೊ.ಕೆ. ಬಾಲಕೃಷ್ಣ ಗಟ್ಟಿ ವಿಧಿವಶ

ಮಂಗಳೂರು, ಜೂ.12: ಕರ್ನಾಟಕ ಕರಾವಳಿಯಲ್ಲಿನ ಹಿರಿಯ ಪತ್ರಕರ್ತ, ನಿವೃತ್ತ ಪ್ರಾಂಶುಪಾಲ ಪ್ರೊ| ಕೆ.ಬಾಲಕೃಷ್ಣ ಗಟ್ಟಿ (83) ಅವರು ಇಂದಿಲ್ಲಿ ನಿಧನರಾದರು.ಬಂಟ್ವಾಳ ಎಸ್‌.ವಿ.ಎಸ್ ಕಾಲೇಜ್‌ನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಅವರು 1998-2003ರ ಅವಧಿಯಲ್ಲಿ ‘ಜನವಾಹಿನಿ’ ದೈನಿಕ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.ವೃತ್ತಿಯಿಂದ ನಿವೃತ್ತರಾದ ಬಳಿಕ ಅವರು ಮಂಗಳೂರಿನಲ್ಲಿ ನೆಲೆಸಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಒಬ್ಬಳು ಪುತ್ರಿ ಮತ್ತು ಬಂಧು ಬಳಗವನ್ನು ಆಗಲಿದ್ದಾರೆ.ಮೂಲತಃ ಕುಂಬಳೆಯವರಾದ ಬಾಲಕೃಷ್ಣ ಗಟ್ಟಿ ಅವರು ಕುಂಬಳೆಯ ಹಿರಿಯ ಸಾಮಾಜಿಕ ಧುರೀಣ ದಿವಂಗತ ಮಹಾಲಿಂಗ ಗಟ್ಟಿ ಅವರ ಪುತ್ರ .ಕೇರಳದ ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕಅವರು ಬಂಟ್ವಾಳ ಎಸ್ .ವಿ. ಎಸ್ .ಕಾಲೇಜಿನಲ್ಲಿ ಸುದೀರ್ಘ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.ಮಂಗಳೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು.ಬಂಟ್ವಾಳ ತಾಲೂಕಿನಿಂದ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವರದಿಗಾರರಾಗಿ ಅವರು ದೀರ್ಘಕಾಲ ಕಾರ್ಯನಿರ್ವಹಿಸಿದ್ದರು.ನೇತ್ರಾವತಿ ವಾರ್ತೆ ದೈನಿಕವನ್ನು ಪ್ರಾರಂಭಿಸಿ ಅನೇಕ ಕಿರಿಯ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದರು. ಜನವಾಹಿನಿ ದೈನಿಕದ ಕಾರ್ಯನಿರ್ವಾಹಕ ಸಂಪಾದಕರಾಗಿ ಪತ್ರಿಕೆಯನ್ನು ಮುನ್ನಡೆಸಿದ್ದ ಬಾಲಕೃಷ್ಣ ಗಟ್ಟಿ ಸರಳ ನಿಷ್ಠುರ ಬರೆವಣಿಗೆ ಮೂಲಕ ಪತ್ರಿಕಾರಂಗದಲ್ಲಿ ಗುರುತಿಸಲ್ಪಟ್ಟಿದ್ದರು. ಬಂಟ್ವಾಳ ತಾಲೂಕು ಪತ್ರಕರ್ತರ ಸಂಘ ಸ್ಥಾಪನೆ ಮಾಡಿ ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 2024 ನವಂಬರ 12ರಂದು ನಡೆದ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ರೂಪೇಶ್ ಶೆಟ್ಟಿ ಅಭಿನಯದ ಹೊಸ ಕನ್ನಡ ಸಿನಿಮಾ “ಹಲ್ಕಾ ಡಾನ್‌”

ಕರಾವಳಿಯ ನಗುಮೊಗದ ಹೀರೋ ರಾಕ್ ಸ್ಟಾರ್ ರೂಪೇಶ್‌ ಶೆಟ್ಟಿ ಅವರು ಬಿಗ್‌ಬಾಸ್‌ ವಿನ್ನರ್‌ ಆದ ಬಳಿಕ ಬಹುಬೇಡಿಕೆಯ ನಟ, ನಿರೂಪಕರಾಗಿ ಗುರುತಿಸಿಕೊಂಡಿದ್ದು, ತಾನು ಕೈಯಾಡಿಸಿದ ಪ್ರತಿಯೊಂದರಲ್ಲೂ ಸಕ್ಸಸ್‌ ಆಗುತ್ತಿರುವುದು ಅವರ ಪ್ರತಿಭೆಗೆ ಸಾಕ್ಷಿ.ಐಪಿಎಲ್‌ ಸಂದರ್ಭದಲ್ಲೂ ಟೀವಿ ಚಾನೆಲ್‌ನಲ್ಲಿ ಕಾಮೆಂಟರರ್‌ ಆಗಿ ಬ್ಯುಸಿಯಾಗಿದ್ದ ರೂಪೇಶ್‌ ಶೆಟ್ಟಿ, ಈಗ ಸುಲಭದಲ್ಲಿ ಯಾರ ಕೈಗೂ ಸಿಗದಷ್ಟು ಕೆಲಸಕಾರ್ಯಗಳಲ್ಲಿ ವ್ಯಸ್ತರಾಗಿದ್ದಾರೆ. ಅವರ ನಟನೆಯ “ಜೈ” ಸಿನಿಮಾವಂತೂ ಸೂಪರ್‌ ಹಿಟ್‌ ಆಗಿ, ನೂರು ದಿನಗಳನ್ನು ಪೂರೈಸಿ ನಿರ್ಮಾಪಕರಿಗೆ ಖುಷಿ ಕೊಟ್ಟಿದೆ. ಒಂದು ಹೊಸ ರೂಪದ ಸಿನೆಮಾ ಎಂದು ಜನಮನ್ನಣೆಯನ್ನೂ ಗಳಿಸಿದೆ. ಜೊತೆಗೆ ಹೊಸ ತುಳು ಸಿನಿಮಾ “ಬ್ರೋ” ಘೋಷಣೆಯಾಗಿದೆ.ಈಗ ರೂಪೇಶ್‌ ನಟಿಸಿರುವ ಮೊದಲ ತಮಿಳು ಸಿನೆಮಾ ಸನ್ನಿಧಾನಂ ಪಿ.ಒ. ತಮಿಳುನಾಡಿನಾದ್ಯಂತ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇವರ ನಟನೆಗೆ ತಮಿಳರು ಕೂಡ ಫಿದಾ ಆಗಿದ್ದು, ರೂಪೇಶ್‌ ಶೆಟ್ಟಿಗೆ ಅಲ್ಲೂ ಭಾರೀ ಬೇಡಿಕೆ ವ್ಯಕ್ತವಾಗುವ ಸಾಧ್ಯತೆ ಇದೆ.ಈ ನಡುವೆ ಇವರು ಮತ್ತೊಂದು ಕನ್ನಡ ಸಿನೆಮಾದಲ್ಲೂ ನಟಿಸುತ್ತಿದ್ದಾರೆ. ಈಗಾಗಲೇ ಕೆಲವು ಕನ್ನಡ ಸಿನೆಮಾಗಳಲ್ಲಿ ನಟಿಸಿರುವ ರೂಪೇಶ್‌, ಈಗ ಹಲ್ಕಾ ಡಾನ್‌ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾವನ್ನು ಮೈಲಾರಿ, ಟಗರು, ಸಲಗ, UI ನಂತಹ ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟಿರುವ ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್ ಅವರೇ ನಿರ್ಮಾಣ ಮಾಡುತ್ತಿದ್ದು, ಚಲ ಅವರು ನಿರ್ದೇಶಕರಾಗಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಜೂನ್ 14 ರಂದು ಸುರತ್ಕಲ್ ಬಂಟರ ಸಂಘದ ಮಹಾಸಭೆ, ಅಭಿನಂದನೆ ಸಹಾಯಹಸ್ತ ಕಾರ್ಯಕ್ರಮ

ಸುರತ್ಕಲ್ : ಬಂಟರ ಸಂಘ (ರಿ) ಸುರತ್ಕಲ್ ಇದರ ವಾರ್ಷಿಕ ಮಹಾಸಭೆ ಮತ್ತು ಅಭಿನಂದನೆ, ಸಹಾಯ ಹಸ್ತ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಜೂನ್ 14 ರಂದು ಭಾನುವಾರ ನಡೆಯಲಿದೆ.ಬೆಳಿಗ್ಗೆ 9 ಗಂಟೆಗೆ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ವಿಶೇಷ ಮಹಾಸಭೆ, 11 ಗಂಟೆಗೆ ವಾರ್ಷಿಕ ಮಹಾಸಭೆ ನಡೆಯಲಿದೆ.ಮಧ್ಯಾಹ್ನ 1 ಗಂಟೆಗೆ ಗ್ರಾಮವಾರು ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ. ಸಂಜೆ 4.30 ಕ್ಕೆ ಸಭಾ ಕಾರ್ಯಕ್ರಮ, ಅಭಿನಂದನೆ, ಸಹಾಯಹಸ್ತ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ನಡೆಯಲಿದೆ.ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಬಾಳ‌ ಜಗನ್ನಾಥ ಶೆಟ್ಟಿ ವಹಿಸಲಿದ್ದಾರೆ. ಸಮಾರಂಭವನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಂಬೈ ವಿ.ಕೆ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕರಾದ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು, ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಡಾ ಪಿ.ವಿ. ಶೆಟ್ಟಿ ಮುಂಬೈ, ಮುಂಬೈ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾದ ಸಿಎ ಅಶೋಕ್ ಶೆಟ್ಟಿ ಎಂ, ಪಡುಬಿದ್ರೆ ಬಂಟರ ಸಂಘದ ಅಧ್ಯಕ್ಷರಾದ ಡಾ ದೇವಿಪ್ರಸಾದ್ ಶೆಟ್ಟಿ ಬೆಳಪು, ಭಾರತೀಯ ಭೂಸೇನೆಯ ನಿವೃತ್ತ ಸೇನಾಧಿಕಾರಿ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಭಾಗವಹಿಸಲಿದ್ದಾರೆ.ಸಮಾರಂಭದಲ್ಲಿ ಭಿನ್ನ ಸಾಮರ್ಥ್ಯ ಹಾಗೂ ವಿಕಲಚೇತನರಿಗೆ ಸಹಾಯಹಸ್ತ, ನಿರಂತರ ವಿದ್ಯಾರ್ಥಿ ವೇತನ, ದತ್ತಿನಿಧಿ ವಿತರಣೆ, ಶೈಕ್ಷಣಿಕ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಅಭಿನಂದನೆ, ಸನ್ಮಾನ ನಡೆಯಲಿದೆ ಎಂದು ಸುರತ್ಕಲ್ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ರೆಡ್‌ಕ್ರಾಸ್‌ನಿಂದ ಪರಿಸರ ದಿನಾಚರಣೆ

ಮಂಗಳೂರು : ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರೆಡ್‌ ಕ್ರಾಸ್ ಸೊಸೈಟಿಯ ಶತಮಾನೋತ್ಸವ ಕಟ್ಟಡದ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರೆಡ್ ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ ” ರಕ್ತದಾನ ಶಿಬಿರ, ವಿಪತ್ತ ನಿರ್ವಹಣೆ, ಆರೋಗ್ಯ ಜಾಗೃತಿ ಸಹಿತ ವಿವಿಧ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ರೆಡ್ ಕ್ರಾಸ್ ಸೊಸೈಟಿ ಪರಿಸರ ಸಂರಕ್ಷಣೆಗೂ ವಿಶೇಷ ಆದ್ಯತೆ ನೀಡಿದೆ. ಎಂದರು.ರೆಡ್‌ಕ್ರಾಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ.ಸಚ್ಚಿದಾನಂದ ರೈ, ಖಜಾಂಜಿ ಗುರುದತ್ ನಾಯಕ್, ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ, ಆಡಳಿತ ಸಮಿತಿ ನಿರ್ದೇಶಕರಾದಪಿ.ಬಿ.ಹರೀಶ್ ರೈ, ಡಾ.ಸುಮನ .ಬಿ., ರಾಘವೇಂದ್ರ ರಾವ್, ಕಚೇರಿ ಸಿಬ್ಬಂದಿ ಮಲ್ಲಿಕಾ, ಅನಿತಾ, ಗಿರೀಶ್ ಕುಮಾರ್ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಸೌದಿ ಬಿಲ್ಲವಾಸ್ ದಮ್ಮಾಮ್ ಸೌದಿ ಅರೇಬಿಯದ 2026-27 ನೇ ವರ್ಷಕ್ಕೆ ಅಧ್ಯಕ್ಷರಾಗಿ ಸತೀಶ್ ಕುಮಾರ್ ಅಂಚನ್ ಬಜಾಲ್, ಪ್ರಧಾನ ಕಾರ್ಯದರ್ಶಿ ರೋಶನ್ ಕೋಟ್ಯಾನ್ ಪುನರಾಯ್ಕೆ.

ದಮ್ಮಾಮ್: ಸೌದಿ ಬಿಲ್ಲವಾಸ್ ದಮ್ಮಾಮ್ ಸೌದಿ ಅರೇಬಿಯ ಇದರ ವಾರ್ಷಿಕ ಮಹಾಸಭೆಯು ಶುಕ್ರವಾರ ಜುಬೈಲ್ ನ ಪುಳಿ ರೆಸ್ಟೊರೇಂಟ್ ನ ಪ್ಲೆಕ್ಸೊನ್ ಅಡಿಟೋರಿಯಂನಲ್ಲಿ ಸತೀಶ್ ಕುಮಾರ್ ಅಂಚನ್ ಬಜಾಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಖ್ಯಾತ ಯಕ್ಷಗಾನ ಭಾಗವತರಾದ ರೋಶನ್ ಕೋಟ್ಯಾನ್ ರವರ ಪ್ರಾರ್ಥನೆ ಯೊಂದಿಗೆ ಪ್ರಾರಂಭವಾಗಿ ವೇದಿಕೆಯಲ್ಲಿದ್ದಎಲ್ಲಾ ಗಣ್ಯರು ದೀಪ ಬೆಳಗಿಸಿ ಸಭೆ ಹಾಗು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಸಂಘದ ಪ್ರಧಾನ ಕಾರ್ಯದರ್ಶಿ ವರದಿ ವಾಚಿಸಿದರು, ಖಜಾಂಚಿ ಹರೀಶ್ ಪೂಜಾರಿ ತೋನ್ಸೆ ಲೆಕ್ಕಪತ್ರ ಮಂಡಿಸಿದರು ನಂತರ ವರದಿ ಹಾಗು ಲೆಕ್ಕಪತ್ರ ಮೇಲೆ ಚರ್ಚೆ, ಪ್ರಶ್ನೋತ್ತರ ನಡೆಯಿತು ತದ ನಂತರ ಸಂಘದ ಹಿರಿಯರು ಮತ್ತು ಗೌರವಾಧ್ಯಕ್ಷರಾದ ಸದಾಶಿವ ಪೂಜಾರಿ ಯವರು ನೂತನ ಪದಾಧಿಕಾರಿ ಹಾಗು ಕಾರ್ಯಕಾರಿ ಸಮಿತಿಯನ್ನು ರಚಿಸುವ ಕಾರ್ಯ ಅಚ್ಚುಕಟ್ಟಾಗಿ ನಿರ್ವಹಿಸಿದರಲ್ಲದೆ ಸಭೆಯನ್ನು ಉದ್ದೇಶಿಸಿ ಮಾತನಾಡಿ ಶುಭ ಕೋರಿದರು . ವೇದಿಕೆಯಲ್ಲಿದ್ದ ಇನ್ನೋರ್ವ ಗೌರವಾಧ್ಯಕ್ಷರಾದ ಯುವ ಉದ್ಯಮಿ ಯೋಗೇಶ್ ಪೂಜಾರಿ ಕಟಪಾಡಿ ಸಭೆಯನ್ನು ಉದ್ದೇಶಿಸಿ ಶುಭ ಕೋರಿ ಮಾತನಾಡಿ ನೂತನ ಸಮಿತಿಗೆ ಸಲಹೆ ಸೂಚನೆ ಮಾರ್ಗದರ್ಶನ ನೀಡಿದರು.ಅಧ್ಯಕ್ಷರು 2026-27 ವರ್ಷದ ಕಾರ್ಯಕ್ರಮ ಯೋಜನೆಗಳ ಬಗ್ಗೆ ವಿವರವಾಗಿ ಮಾತನಾಡಿದ್ದಲ್ಲದೆ ಸದಸ್ಯರಿಗೆ ಸಂಘದ ಮಹತ್ವ ಮತ್ತು ಕಾರ್ಯಕ್ರಮದ ಬಗ್ಗೆ ಸದಸ್ಯರ ಪ್ರಶ್ನೆಗಳಿಗೆ ಪ್ರತಿಕ್ರೀಯಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.ಸಭೆಯ ನಂತರ ಸದಸ್ಯರಿಂದ ಹಾಗು ಮಕ್ಕಳಿಂದ ಹಾಡು, ನ್ರತ್ಯ ಸಾಂಸ್ಕತಿಕ ಕಾರ್ಯಕ್ರಮದ ನಡುವೆ ರಾಫಲ್ ಟಿಕೆಟ್ ಡ್ರಾ ವನ್ನು ಮನೋಹರ ಅಮೀನ್ ಮತ್ತು ದಕ್ಷಯ್ ಮಾಡಿದರು.ಸಭೆಯ ಪ್ರಾರಂಭದಿಂದ ಕೊನೆಯವರೆಗೆ ಸಂಘದ ಕಾರ್ಯ ಚಟುವಟಿಕೆಗಳನ್ನು ಪ್ರೊಜೆಕ್ಟರ್ ಮೂಲಕ ಪ್ರವೀಣ್ ಪೂಜಾರಿ ತೋರಿಸಿದರು ಕೊನೆಗೆ,ಸಹ ಕಾರ್ಯದರ್ಶಿ ರಾಜೇಶ್ ತೋನ್ಸೆ ವಂದಿಸಿದರು, ಕಾರ್ಯಕ್ರಮವನ್ನು ಸಂಘಟನ ಕಾರ್ಯದರ್ಶಿ ಹಾಗು ಸಂಯೋಜಕಿ ಶ್ರೀಮತಿ ಚೇತನ ಪೂಜಾರಿ ನಿರ್ವಹಿಸಿದರು.ಗೌರವ ಅಧ್ಯಕ್ಷರು: ಸದಾಶಿವ ಪೂಜಾರಿ ಮತ್ತು ಯೋಗೇಶ್ ಪೂಜಾರಿ ಕಟಪಾಡಿ.ಅಧ್ಯಕ್ಷರು: ಸತೀಶ್ ಕುಮಾರ್ ಅಂಚನ್ ಬಜಾಲ್.ಉಪಾಧ್ಯಕ್ಷರು: ವಿಶ್ವನಾಥ್ ಸುವರ್ಣ ಮತ್ತು ಸುಂದರದಾಸ್ ಪೂಜಾರಿ.ಪ್ರಧಾನ ಕಾರ್ಯದರ್ಶಿ: ರೋಶನ್ ಕೋಟ್ಯನ್.ಸಹ ಕಾರ್ಯದರ್ಶಿ: ರಾಜೇಶ್ ತೋನ್ಸೆ, ಮನೋಹರ ಅಮೀನ್.ಖಜಾಂಚಿ: ಹರೀಶ್ ಪೂಜಾರಿ ತೋನ್ಸೆ.ಸಹ ಖಜಾಂಚಿ: ಶ್ರೀಮತಿ ಪ್ರೀತ ಎ ಬಂಗೇರ.ಮಖ್ಯ ಸಂಯೋಜಕರು: ಶ್ರೀಮತಿ ಚೇತನ ಎಸ್ ಪೂಜಾರಿ.ಸಹ ಸಂಯೋಜಕರು: ಅಜೀತ್ ಸನಿಲ್ ಕಟಪಾಡಿ.ಸಾಂಸ್ಕ್ರತಿಕ ಕಾರ್ಯದರ್ಶಿ: ಯಶವಂತ್ ಸನಿಲ್ .ಸಹ ಸಾಂಸ್ಕ್ರತಿಕ ಕಾರ್ಯದರ್ಶಿಗಳು: ಸಂದೀಪ್ ಬಜಾಲ್, ದಕ್ಷಯ್ ಪೂಜಾರಿ.ಕ್ರೀಡಾ ಕಾರ್ಯದರ್ಶಿ: ದೇವಾಂಗ್ ಸುವರ್ಣ.ಸಹ ಕ್ರೀಡಾ ಕಾರ್ಯದರ್ಶಿಗಳು: ಗಣೇಶ್ ಪಾಲನ್ ಮತ್ತು ಪ್ರಮೋದ್ ಪೂಜಾರಿ.ಮಾಧ್ಯಮ ಸಮಿತಿ ಮುಖ್ಯಸ್ಥರು: ಪುಷ್ಪರಾಜ್ ಪೂಜಾರಿ ಗಡಿಯಾರ್.ಕಾರ್ಯಕಾರಿ ಸಮಿತಿ ಸದಸ್ಯರು: ಅರುಣ್ ಬಂಗೇರ, ಉಮೇಶ್ ಬಿಲ್ಲವ, ಶ್ರೀ ಪ್ರವೀಣ್ ಪೂಜಾರಿ, ಶ್ರೀಮತಿ ವಿಧ್ಯಾಶ್ರೀ ತೋನ್ಸೆ, ಶ್ರೀಮತಿ ಭಾಗ್ಯಜ್ಯೋತಿ ತೋನ್ಸೆ, ಶ್ರೀಮತಿ ಸುನೀತ ಸುವರ್ಣ, ಶ್ರೀಮತಿ ಸುಚಿತ್ರ ಬಜಾಲ್ , ಶ್ರೀಮತಿ ದೀಕ್ಷಾ ಕೋಟ್ಯಾನ್, ಶ್ರೀಮತಿ ದಿವ್ಯ ಅಮೀನ್, ಕುಮಾರಿ ಸುಹಾಸಿನಿ ಬಿಲ್ಲವ., ವೇದಾವತಿ ಪೂಜಾರಿ.ಮಾರ್ಗದರ್ಶಿ ಮಂಡಲಿ: ಸುದರ್ಶನ್ ಡಿ ಪೂಜಾರಿ, ಶೇಖರ್ ಕೋಟ್ಯಾನ್, ಆನಂದ ಪೂಜಾರಿ, ಜಯ ಸುವರ್ಣ.ಸಾಮಾಜಿಕ ಮಾಧ್ಯಮ ಸಮಿತಿ*: ಪ್ರವೀಣ್ ಪೂಜಾರಿ, ಶ್ರೀಮತಿ ಸುನೀತ ಸುವರ್ಣ, ಪ್ರಮೋದ್ ಪೂಜಾರಿ, ಅಕ್ಷಾನ್ ಪಾಲನ್.ಸಾಂಸ್ಕ್ರತಿಕ ಸಮಿತಿ:: ಅಂಕಿತ್ ಪೂಜಾರಿ ಎರ್ಮಾಲ್, ಸಂದೀಪ್ ಸಾಲ್ಯನ್, ಅವನೀತ್ ಪೂಜಾರಿ, ರಾಜೇಶ್ ಪಡುಬಿದ್ರೆ, ಸುರೇಶ್ ಸುವರ್ಣ, ಶ್ರುಜನ್ ಪೂಜಾರಿ, ಕುಮಾರಿ ನಮಿತ ಸಾಲ್ಯನ್.ಕ್ರೀಡಾ ಸಮಿತಿ: ಸಂತೋಷ್ ಜೆ ಡಿ ಪೂಜಾರಿ, ಪ್ರತೀಕ್ ಪೂಜಾರಿ, ಮಹೇಂದ್ರ ಬಿಲ್ಲವ, ದೀಕ್ಷೀತ್ ಕೋಟ್ಯಾನ್, ಶೀಮತಿ ದೀಕ್ಷ ಆರ್ ಕೋಟ್ಯಾನ್, ಕುಮಾರಿ ಸುಹಾಸಿನಿ ಬಿಲ್ಲವ.ಆಹಾರ ವ್ಯವಸ್ಥೆ ಸಮಿತಿ: ಶ್ರೀಮತಿ ಮಮತ ಪೂಜಾರಿ, ಶ್ರೀಮತಿ ವೇದಾವತಿ ಪೂಜಾರಿ, ಆನಂದ ಪೂಜಾರಿ, ವಿಶ್ವನಾಥ್ ಸುವರ್ಣ ಮತ್ತು ಸುಂದರದಾಸ್ ಪೂಜಾರಿ, ಸದಾಶಿವ ಪೂಜಾರಿ.

ಪ್ರಾದೇಶಿಕ ವಾರ್ತೆಗಳು

ಪಾಂಡವರಕಲ್ಲು: ಸರಕಾರಿ ಶಾಲೆಗೆ 8 ಫ್ಯಾನ್ ಕೊಡುಗೆ ನೀಡಿದ ಸುಧಾಕರ ಶೆಣೈ

ಬಂಟ್ವಾಳ : ಪಾಂಡವರಕಲ್ಲು ದ.ಕ. ಜಿಲ್ಲಾ  ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾರ್ಥಮಿಕ ಶಾಲೆಗೆ ಸುಧಾಕರ್ ಶೆಣೈ  ಖಂಡಿಗ ಅವರು ಕೊಡುಗೆಯಾಗಿ ಎಂಟು ಫ್ಯಾನ್ ಗಳನ್ನು ಶುಕ್ರವಾರ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ  ಶಾಲಾ ಮುಖ್ಯ ಶಿಕ್ಷಕಿ ಅಗ್ನೆಸ್ ಪ್ರಮಿಲಾ ಲೋಬೊ, ಎಸ್ಡಿಎಂಸಿ ಅಧ್ಯಕ್ಷ ದಿನೇಶ್ ಜೇಕ್ಯಾರ್, ಸದಸ್ಯರಾದ ಮಾಧವ ಪಟ್ರಾಡಿ,  ಲತೀಫ್, ಬಾಬು ಪೂಜಾರಿ ನಿರಾಡಿ, ಹನೀಫ್ ಕೆದಿಲೆ, ಫಾರೂಕ್ ನೀರಾಡಿ, ಪದ್ಮನಾಭ,  ನಮಿತಾ ಹಾಗೂ ಮತ್ತಿತರರು ಹಾಜರಿದ್ದರು.

ಪ್ರಾದೇಶಿಕ ವಾರ್ತೆಗಳು

ವಿಶ್ವ ಪರಿಸರ ದಿನಾಚರಣೆಗಾಂಧಿನಗರ ಸರಕಾರಿ ಶಾಲಾ ಮಕ್ಕಳಿಗೆ ಬಟ್ಟೆ ಬ್ಯಾಗ್ ವಿತರಣೆ

ಮಂಗಳೂರು, ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಗರದ ಗಾಂಧಿನಗರದ ಜಿಲ್ಲಾ ಪಂಚಾಯತ್ ಉನ್ನತಿಕರಿಸೀದ ಸರಕಾರಿ ಶಾಲೆಯ ಮಕ್ಕಳಿಗೆ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಮೂಡಿಸಲು ಬಟ್ಟೆ ಚೀಲಗಳನ್ನು ವಿತರಿಸಲಾಯಿತು.ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಹಾಗೂ ಗಾಂಧಿ ನಗರ ಜಿಲ್ಲಾ ಪಂಚಾಯತ್ ಉನ್ನತಿಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗೆ ಆಯೋಜಿಸಲಾದ ಭಾಷಣ ಸ್ಪರ್ಧೆಯ ಬಹುಮಾನವನ್ನು ದಕ್ಷಿಣ ಕನ್ನಡ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್ ವಿತರಿಸಿ ಮಾತನಾಡಿದರು.ವಿದ್ಯಾರ್ಥಿಗಳಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಆಗುವ ಹಾನಿಯ ಕುರಿತು ಜಾಗೃತಿ ಮೂಡಿಸುವ ಕಾರ್ಯ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಬಟ್ಟೆಯ ಚೀಲ ನೀಡಿ ಜಾಗೃತಿ ಮೂಡಿಸುವುದು ಉತ್ತಮ ಕಾರ್ಯ ಎಂದು ಹೇಳಿದರು.ಬಟ್ಟೆ ಚೀಲ ವಿತರಿಸಿ ಮಾತನಾಡಿದ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಮಹಾ ಪ್ರಬಂಧಕ ಅರುಣಾ ಪ್ರಭ, ಪರಿಸರದ ಮೇಲೆ ನಿರಂತರ ನಡೆಯುವ. ಮಾಲಿನ್ಯ ದಿಂದದಾಗಿ ಗಾಳಿ ಕೂಡ ವಿಷಯುಕ್ತ ವಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡಲು ಮೊದಲ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತ ನರೇಶ್ ಶೆಣೈ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ ಬಿ ಹರೀಶ್. ರೈ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ ಎನ್, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ್ ರೈ ಕಟ್ಟಾ, ಗಾಂಧಿ ನಗರ ಜಿಲ್ಲಾ ಪಂಚಾಯತ್ ಉನ್ನತಿಕರಿಸೀದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಫ್ಲೆವಿ ಫೆರ್ನಾಂಡೀಸ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಭಾರತೀಯ ಮಜ್ದೂರ್ ಸಂಘದ ದಕ್ಷಿಣ ಮತ್ತು ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ವಿ. ರಾಧಾಕೃಷ್ಣನ್ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮನ

ಮಂಗಳೂರು, ಜೂನ್ 5:ಭಾರತೀಯ ಮಜ್ದೂರ್ ಸಂಘದ (BMS) ದಕ್ಷಿಣ ಹಾಗೂ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಗಳಾದ *ಶ್ರೀ ವಿ. ರಾಧಾಕೃಷ್ಣನ್* ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದರು. ಜೂನ್ 7ರಂದು ನಡೆಯಲಿರುವ ಭಾರತೀಯ ಮಜ್ದೂರ್ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸುವುದರ ಜೊತೆಗೆ ಜಿಲ್ಲೆಯ ವಿವಿಧ ಸಂಯೋಜಿತ ಯೂನಿಯನ್‌ಗಳಿಗೆ ಭೇಟಿ ನೀಡಿ ಸಂಘಟನಾ ಚಟುವಟಿಕೆಗಳ ಕುರಿತು ಮಾರ್ಗದರ್ಶನ ನೀಡಲಿದ್ದಾರೆ.ಜಿಲ್ಲೆಗೆ ಆಗಮಿಸಿದ ಶ್ರೀ ರಾಧಾಕೃಷ್ಣನ್ ಅವರನ್ನು ಭಾರತೀಯ ಮಜ್ದೂರ್ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಕಾರ್ಯವಾಹರಾದ *ಶ್ರೀ ಪ್ರಕಾಶ್ ಪಿ.ಎಸ್.* , ಭಾರತೀಯ ಮಜ್ದೂರ್ ಸಂಘದ ರಾಜ್ಯ ಉಪಾಧ್ಯಕ್ಷರಾದ *ಶ್ರೀ ಸತೀಶ್ ಶೆಟ್ಟಿ,* ಜಿಲ್ಲಾ ಅಧ್ಯಕ್ಷರಾದ *ಶ್ರೀ ಅನಿಲ್ ಕುಮಾರ್ ಯು.,* ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ *ಶ್ರೀ ಗೋಪಾಲ ಕೃಷ್ಣ* ಹಾಗೂ ಜಿಲ್ಲಾ ಉಪಾಧ್ಯಕ್ಷರಾದ *ಶ್ರೀ ರೋಹಿತಾಶ್ವ* ಉಪಸ್ಥಿತರಿದ್ದರು.ತಮ್ಮ ಜಿಲ್ಲಾ ಭೇಟಿಯ ಸಂದರ್ಭದಲ್ಲಿ ಶ್ರೀ ರಾಧಾಕೃಷ್ಣನ್ ಅವರು ಭಾರತೀಯ ಮಜ್ದೂರ್ ಸಂಘದ ಸಂಯೋಜಿತ ಯೂನಿಯನ್‌ಗಳ ಕಚೇರಿಗಳಿಗೆ ಭೇಟಿ ನೀಡಿ ಅವುಗಳ ಆಡಳಿತಾತ್ಮಕ ಹಾಗೂ ಸಂಘಟನಾ ಚಟುವಟಿಕೆಗಳ ಪರಿಶೀಲನೆ ನಡೆಸಲಿದ್ದಾರೆ. ಯೂನಿಯನ್‌ಗಳ ದಾಖಲಾತಿಗಳ ಸಮರ್ಪಕ ನಿರ್ವಹಣೆ, ಸದಸ್ಯತ್ವ ನೋಂದಣಿ, ರಿಜಿಸ್ಟರ್‌ಗಳ ಪಾಲನೆ, ಲೆಕ್ಕಪತ್ರಗಳ ನಿರ್ವಹಣೆ, ವಾರ್ಷಿಕ ವರದಿಗಳ ಸಲ್ಲಿಕೆ, ಅಫಿಲಿಯೇಷನ್ ನವೀಕರಣ ಹಾಗೂ ಭಾರತೀಯ ಮಜ್ದೂರ್ ಸಂಘದ ನಿಯಮಾವಳಿಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.ಸಂಘಟನೆಯ ಬಲವರ್ಧನೆ ಹಾಗೂ ಕಾರ್ಯಕ್ಷಮತೆಯ ವೃದ್ಧಿಗಾಗಿ ಎಲ್ಲಾ ಸಂಯೋಜಿತ ಯೂನಿಯನ್‌ಗಳು ಕಾನೂನುಬದ್ಧ ಹಾಗೂ ಸಂಘಟನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮಹತ್ವವನ್ನು ಅವರು ಒತ್ತಿ ಹೇಳಲಿದ್ದಾರೆ.ಜೂನ್ 7ರಂದು ಜಿಲ್ಲಾ ಕಾರ್ಯಾಲಯದ *“ಪ್ರಭಾಕರ ಘಾಟೆ”* ಸಭಾಂಗಣದಲ್ಲಿ ನಡೆಯಲಿರುವ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಜಿಲ್ಲೆಯ ಸಂಘಟನಾ ಬೆಳವಣಿಗೆ, ಕಾರ್ಮಿಕರ ಸಮಸ್ಯೆಗಳು, ಸಂಯೋಜಿತ ಯೂನಿಯನ್‌ಗಳ ಕಾರ್ಯವೈಖರಿ ಹಾಗೂ ಮುಂದಿನ ಸಂಘಟನಾ ಕಾರ್ಯಕ್ರಮಗಳು ಮತ್ತು ಕಾರ್ಯತಂತ್ರಗಳ ಕುರಿತು ಸಮಗ್ರ ಚರ್ಚೆ ನಡೆಯಲಿದೆ.

ಪ್ರಾದೇಶಿಕ ವಾರ್ತೆಗಳು

ಸಕಾರಾತ್ಮಕ ಚಿಂತನೆಯಿಂದ ಮಾನಸಿಕ ಆರೋಗ್ಯ -ದ.ಕ.ಜಿಲ್ಲಾ ರೆಡ್‌ಕ್ರಾಸ್ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ

ಮಂಗಳೂರು : ಸಾಮಾಜಿಕ ಜಾಲತಾಣಗಳ ಪ್ರಭಾವ, ಶೈಕ್ಷಣಿಕ ಒತ್ತಡ, ಬದಲಾಗುತ್ತಿರುವ ಜೀವನಶೈಲಿ ಸಹಿತ ಹಲವು ಕಾರಣಗಳಿಂದ ಹದಿಹರೆಯದವರು ಖಿನ್ನತೆಗೆ ಒಳಗಾಗುತ್ತಿದಾರೆ. ಹದಿಹರೆಯದವರ ಮಾನಸಿಕ ಆರೋಗ್ಯ ದೈಹಿಕ ಆರೋಗ್ಯದಷ್ಟೇ ಮುಖ್ಯ, ಆತ್ಮಸ್ಥೆರ್ಯ ಹಾಗೂ ಸಕಾರಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳುವ ಮೂಲಕ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠ ಇದರ ವತಿಯಿಂದ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಸಹಭಾಗಿತ್ವದಲ್ಲಿ ಸಮಾಲೋಚನೆ ಮತ್ತು ಹದಿಹರೆಯದಮಾನಸಿಕ ಆರೋಗ್ಯ ಸರ್ಟಿಫಿಕೇಟ್ ಕೋರ್ಸ್ ಪೂರೈಸಿದ ದ್ವಿತೀಯ ಬ್ಯಾಚ್ ವಿದ್ಯಾರ್ಥಿಗಳಿಗೆ ಗುರುವಾರ ರೆಡ್‌ಕ್ರಾಸ್ ಸೊಸೈಟಿಯ ಪ್ರೇರಣಾ ಸಭಾಂಗಣದಲ್ಲಿ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.ಯೂತ್ ರೆಡ್‌ಕ್ರಾಸ್ ನಿರ್ದೇಶಕಿ ಡಾ.ಸುಮನ ಬೋಳಾರ್ ಮಾತನಾಡಿ “ಹದಿಹರೆಯದಲ್ಲಿ ಕೆಲವು ಸಮಸ್ಯೆಗಳು ಸಾಮಾನ್ಯ. ಇವುಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ಸಲಹೆ ನೀಡುವುದರಿಂದ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸಬಹುದು. ಈ ನಿಟ್ಟಿನಲ್ಲಿ ಹದಿಹರೆಯದ ಮಾನಸಿಕ ಆರೋಗ್ಯ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲಾಗಿದೆ ಎಂದರು.ವಿದ್ಯಾರ್ಥಿನಿಯರಾದ ಸುಕನ್ಯಾ ಮತ್ತು ಶೋಭರಾಣಿ ಕೋರ್ಸ್ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ರೆಡ್‌ಕ್ರಾಸ್ ದ.ಕ.ಜಿಲ್ಲಾ ಘಟಕದ ಖಜಾಂಜಿ ಗುರುದತ್ ನಾಯಕ್, ನಿರ್ದೇಶಕರಾದ ಡಾ.ಸತೀಶ್ ರಾವ್, ಪಿ.ಬಿ.ಹರೀಶ್ ರೈ ಉಪಸ್ಥಿತರಿದ್ದರು. ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಕಲಾ ನಡಿಗೆ ಜನರ ಬಳಿಗೆ ವಿನೂತನ ಕಾರ್ಯಕ್ರಮ

ಮಂಗಳೂರು, ಸಂಗೀತ ಆಲಿಸುವುದರ ಮೂಲಕ ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಮಹಾ ಪ್ರಬಂಧಕ ಅರುಣಾ ಪ್ರಭ ಅಭಿಪ್ರಾಯಪಟ್ಟರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಾ ಸಾಧನಾ ಮಂಗಳೂರು ಹಾಗೂ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದಲ್ಲಿ ಕದ್ರಿ ಉದ್ಯಾನವನದಲ್ಲಿ ಆಯೋಜಿಸಲಾದ ಕಲಾ ನಡಿಗೆ ಜನರ ಬಳಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಘ ಸಂಸ್ಥೆಗಳ ಮೂಲಕ ಈ ರೀತಿಯ ಕಾರ್ಯಕ್ರಮ ಆಯೋಜಿಸಿರುವುದು ಮಾದರಿಯಾಗಿದೆ. ನಮ್ಮ ಕಲೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಇದು ಸಹಕಾರಿಯಾಗಲಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರಾಜೇಶ್, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕಲಾ ನಡಿಗೆ ಜನರ ಬಳಿಗೆ ಆಯೋಜಿಸಲಾಗಿದ್ದು, ಉತ್ತಮ ಸ್ಪಂದನೆ ದೊರೆತಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕದ್ರಿ ಉದ್ಯಾನವನ ಸಲಹಾ ಸಮಿತಿ ಸದಸ್ಯ ಜಗನ್ನಾಥ ಗಾಂಭೀರ್,ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ್ ರೈ ಕಟ್ಟಾ ಸಿರಿ ತೋಟಗಾರಿಕೆ ಇಲಾಖೆಯ ರುಕ್ಮಯ್ಯ,ಪತ್ರಕರ್ತರಾದ ಶ್ರೀನಿವಾಸ್ ನಾಯಕ್, ರಾಜೇಶ್ ದಡ್ಡ0ಗಡಿ ಕಲಾವಿದರಾದ ವಿಭಾ ನಾಯಕ್, ಹೇಮಂತ್ ಭಾಗವತ್, ಅಶ್ವಿತ್ ಪ್ರಭು, ದೀಪ್ತಿ, ಭೂಮಿ ಉಪಸ್ಥಿತರಿದ್ದರು.ವಿಭಾ ಶ್ರೀನಿವಾಸ್ ನಾಯಕ್ ಹಾಗೂ ಸಂಗೀತ ಕಾರ್ಯಕ್ರಮ ನಡೆಯಿತು.

Scroll to Top