ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಮಂಗಳೂರಿನಲ್ಲಿ 5ನೇ ರಾಷ್ಟ್ರೀಯ ಕೊಂಕಣಿ ಚಾರೋಳಿ ಸಾಹಿತ್ಯ ಸಮ್ಮೇಳನ 2026ಕ್ಕೆ ಭವ್ಯ ಉದ್ಘಾಟನೆ *ಚಾರೋಳಿ ಕವಿತೆಗಳು ಹೃದಯ ಮತ್ತು ಮನಸ್ಸಿನ ಭಾಷೆ: ಎಂ. ಪಿ. ನೊರೊನ್ಹಾ

ಮಂಗಳೂರು, ಜುಲೈ 19: ನಗರದ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಭಾನುವಾರ ನಡೆದ 5ನೇ ರಾಷ್ಟ್ರೀಯ ಕೊಂಕಣಿ ಚಾರೋಳಿ ಸಾಹಿತ್ಯ ಸಮ್ಮೇಳನ 2026 ಅನ್ನು ಪ್ರಧಾನ ಜಿಲ್ಲಾ ಸರ್ಕಾರಿ ಅಭಿಯೋಜಕರೂ ಹಿರಿಯ ವಕೀಲರೂ ಆದ ಎಂ. ಪಿ. ನೊರೊನ್ಹಾ ಉದ್ಘಾಟಿಸಿದರು.ಉದ್ಘಾಟನಾ ಭಾಷಣದಲ್ಲಿ ಅವರು, ಭಾರತ ಸಂವಿಧಾನದ 29 ಮತ್ತು 30ನೇ ವಿಧಿಗಳಡಿ ಕೊಂಕಣಿ ಭಾಷೆಗೆ ಹಲವು ರಾಜ್ಯಗಳಲ್ಲಿ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕುಗಳ ರಕ್ಷಣೆ ದೊರೆತಿದೆ ಎಂದು ಹೇಳಿದರು.ಕಾವ್ಯವು ಹೃದಯ ಮತ್ತು ಮನಸ್ಸಿನ ಭಾಷೆ ಎಂದು ಅವರು ಅಭಿಪ್ರಾಯಪಟ್ಟರು. ಇಂದಿನ ವೇಗದ ಯುಗದಲ್ಲಿ ಜನರು ಎಲ್ಲದರಲ್ಲೂ ಸಂಕ್ಷಿಪ್ತತೆಯನ್ನು ಬಯಸುತ್ತಿದ್ದಾರೆ. ಸಕ್ಕರೆರಹಿತ, ತಂತಿರಹಿತ, ಹಾನಿರಹಿತ, ನಿರ್ಭಯ ಎಂಬ ಪದಗಳು ಇಂದು ಸಾಮಾನ್ಯ ಬಳಕೆಯಲ್ಲಿವೆ. ಅದೇ ರೀತಿ ದೀರ್ಘ ಕವಿತೆಗಳನ್ನು ಓದಲು ಸಮಯವಿಲ್ಲದ ಕಾರಣ ನಾಲ್ಕು ಸಾಲಿನ ಚಾರೋಳಿ ಕವಿತೆಗಳು ಓದುಗರಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ ಎಂದು ಅವರು ಹೇಳಿದರು.ದೀರ್ಘ ಕವಿತೆಯ ಸಾರವನ್ನು ಕೇವಲ ನಾಲ್ಕು ಸಾಲುಗಳಲ್ಲಿ ಪರಿಣಾಮಕಾರಿಯಾಗಿ ವ್ಯಕ್ತಪಡಿಸುವುದು ಸುಲಭವಲ್ಲ. ಅದಕ್ಕೆ ಭಾಷೆಯ ಮೇಲಿನ ಹಿಡಿತ, ವಿಷಯದ ಆಳವಾದ ಜ್ಞಾನ ಮತ್ತು ಅಪಾರ ಪ್ರತಿಭೆ ಅಗತ್ಯ ಎಂದು ಅವರು ಹೇಳಿದರು.ಕೊಂಕಣಿ ಚಾರೋಳಿ ಸಾಹಿತ್ಯದ ಬೆಳವಣಿಗೆಗಾಗಿ ಹಲವು ವರ್ಷಗಳಿಂದ ಶ್ರಮಿಸುತ್ತಿರುವ ರೇಮಂಡ್ ಡಿಕುನ್ಹಾ ಮತ್ತು ಅವರ ತಂಡವನ್ನು ಎಂ. ಪಿ. ನೊರೊನ್ಹಾ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ರೇಮಂಡ್ ಡಿಕುನ್ಹಾ ಅವರ ಸಾಹಿತ್ಯ ಸೇವೆ ಮತ್ತು ತ್ಯಾಗವನ್ನು ಪ್ರಶಂಸಿಸಿ, ತಾವು ರಚಿಸಿದ ನಾಲ್ಕು ಸಾಲಿನ ಕೊಂಕಣಿ ಚಾರೋಳಿಯನ್ನು ವಾಚಿಸಿ ಸಭಿಕರ ಮೆಚ್ಚುಗೆ ಗಳಿಸಿದರು.ಚಾರೋಳಿ ಕವಿತೆಗಳು ಜೀವನ, ಸೌಂದರ್ಯ, ಪ್ರಕೃತಿ, ಪ್ರೀತಿ ಮತ್ತು ಸಂತೋಷವನ್ನು ಮಾತ್ರ ಪ್ರತಿಬಿಂಬಿಸದೆ, ಭಾರತೀಯ ನಾಗರಿಕರ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಶಕ್ತಿಯನ್ನೂ ಹೊಂದಿರಬೇಕು ಎಂದು ಅವರು ಹೇಳಿದರು. ಸಮಾಜವನ್ನು ಉತ್ತಮ ಮೌಲ್ಯಗಳತ್ತ ಕೊಂಡೊಯ್ಯುವ ಜವಾಬ್ದಾರಿ ಕವಿಗಳ ಮೇಲಿದೆ ಎಂದು ಅಭಿಪ್ರಾಯಪಟ್ಟ ಅವರು, ಯುವಜನರನ್ನು ಚಾರೋಳಿ ಸಾಹಿತ್ಯದತ್ತ ಆಕರ್ಷಿಸುವ ಮೂಲಕ ಈ ಸಾಹಿತ್ಯ ಪ್ರಕಾರ ವಿಶ್ವದಾದ್ಯಂತ ಹರಡಲಿ ಎಂದು ಹಾರೈಸಿದರು. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಶ್ರೀ ರೇಮಂಡ್ ಡಿಕುನ್ಹಾ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಕವಿಗಳ ಉತ್ಸಾಹಭರಿತ ಭಾಗವಹಿಸುವಿಕೆಯನ್ನು . ಚಾರೋಳಿ ಸಾಹಿತ್ಯವನ್ನು ಪ್ರತಿಯೊಬ್ಬರ ಮನೆ-ಮನಗಳಿಗೆ ತಲುಪಿಸುವ ಜವಾಬ್ದಾರಿ ಸಾಹಿತ್ಯಾಸಕ್ತರ ಮೇಲಿದೆ ಎಂದು ಅವರು ಹೇಳಿದರು. ಯುವಜನರನ್ನು ಚಾರೋಳಿ ರಚನೆ ಮತ್ತು ಓದಿನತ್ತ ಪ್ರೇರೇಪಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದ ಅವರು, ಕಳೆದ ಆರು ವರ್ಷಗಳಿಂದ ತಾವು ಪ್ರತಿದಿನ ಕೊಂಕಣಿ ಚಾರೋಳಿಗಳನ್ನು ರಚಿಸಿ ಆನ್‌ಲೈನ್ ಮೂಲಕ ಪ್ರಕಟಿಸುತ್ತಿದ್ದು, ಈ ಮೂಲಕ ಚಾರೋಳಿ ಸಾಹಿತ್ಯದ ಪ್ರಸಾರಕ್ಕೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಮಂಗಳೂರಿನ ಶ್ರೀಮತಿ ಅರುಂಧತಿ ವಿ. ರಾವ್ ಹಾಗೂ ಗೋವಾದ ಶ್ರೀಮತಿ ಅನ್ನಿ ಡಿ. ಕೊಲ್ವಾಲೆ ಅವರಿಗೆ ಕೊಂಕಣಿ ಚಾರೋಳಿ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ರಾಷ್ಟ್ರೀಯ ಕೊಂಕಣಿ ಚಾರೋಳಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ವೇದಿಕೆಯಲ್ಲಿ ಗೋವಾದ ಶ್ರೀ ಎಲಿಯಾಸ್ ಫೆರ್ನಾಂಡಿಸ್ ಹಾಗೂ ಶ್ರೀ ಗೌರೀಶ್ ವರ್ನೇಕರ್ ಉಪಸ್ಥಿತರಿದ್ದರು.ಸೇಂಟ್ ಆನ್ಸ್ ಫ್ರೈರಿ, ಮಂಗಳೂರಿನ ಸುಪೀರಿಯರ್ ರೆವ. ಫಾ. ಜೆರಾಲ್ಡ್ ಲೋಬೊ, OFM Cap. ಪ್ರಾರ್ಥನಾ ವಿಧಿ ನಡೆಸಿ ಸಮ್ಮೇಳನಕ್ಕೆ ದೇವರ ಆಶೀರ್ವಾದ ಕೋರಿದರು.ಸಮ್ಮೇಳನದ ಅಧ್ಯಕ್ಷ ಶ್ರೀ ರೇಮಂಡ್ ಡಿಕುನ್ಹಾ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ರಿಯಾನಾ ಡಿಕುನ್ಹಾ ವಂದನಾರ್ಪಣೆ ಸಲ್ಲಿಸಿದರು. ಶ್ರೀಮತಿ ನತಾಲಿಯಾ ಡಿಕುನ್ಹಾ ಕಾರ್ಯಕ್ರಮ ನಿರೂಪಿಸಿದರು.ಮಂಗಳೂರು, ಉಡುಪಿ, ಕಾರವಾರ, ಗೋವಾ, ಕೇರಳ, ಹೈದರಾಬಾದ್, ನವದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಕವಿಗಳು ಮತ್ತು ಸಾಹಿತ್ಯಾಸಕ್ತರು ಸಮ್ಮೇಳನದಲ್ಲಿ ಭಾಗವಹಿಸಿ ಚಾರೋಳಿ ಸಾಹಿತ್ಯದ ರಾಷ್ಟ್ರೀಯ ಉತ್ಸವಕ್ಕೆ ಮೆರುಗು ತಂದರು.

ಪ್ರಾದೇಶಿಕ ವಾರ್ತೆಗಳು

ಬೈಲೂರು: ‘ಊರು ಬೋಡು ಪುದರ್ ಬೊಡ್ಚಿ’ ನಾಟಕದ ಶುಭಮುಹೂರ್ತ

ಕಾರ್ಕಳ: ಚೈತನ್ಯ ಕಲಾವಿದರು ಬೈಲೂರು ಇವರ ಈ ವರ್ಷದ ತುಳು ಹಾಸ್ಯಮಯ ನಾಟಕ “ಊರು ಬೋಡು ಪುದರ್ ಬೊಡ್ಚಿ” ಇದರ ಶುಭ ಮುಹೂರ್ತ ಕಾರ್ಯಕ್ರಮ ಜುಲೈ 16ರಂದು ಬೈಲೂರು ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನಡೆಯಿತು.ಅರ್ಚಕರಾದ ನಾರಾಯಣ ಭಟ್ ಕೌಡೂರು ನಾಟಕ ಮುಹೂರ್ತದ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ನಾಟಕದ ಯಶಸ್ವಿಗಾಗಿ ದೇವರಲ್ಲಿ ಪ್ರಾರ್ಥಿಸಿದರು.ತಂಡದ ಸಾರಥಿ ನಾಟಕದ ಕರ್ತೃ ಪ್ರಸನ್ನ ಶೆಟ್ಟಿ ಬೈಲೂರು , ಪದ್ಮರಾಜ ಹೆಗ್ಡೆ, ಹರೀಶ್ ಶೆಟ್ಟಿ, ಹರಿಜೀವನ ಹೆಗ್ಡೆ, ಕುಟ್ಟಿ ಶೇರಿಗಾರ್, ಗುಣಕರ ಶೆಟ್ಟಿ, ಶರತ್ ಉಚ್ಚಿಲ, ದಿಲೀಪ್ ಶೆಟ್ಟಿ, ಸದಾನಂದ ಸಾಲಿಯನ್, ಪ್ರಸಾದ್ ಐಸಿರ, ಗುರುರಾಜ್ ಮಾಡ, ಕೃಷ್ಣ ಶೆಟ್ಟಿ, ರಾಜೇಂದ್ರ ಶೆಟ್ಟಿ, ಸುಬ್ರಮಣ್ಯ ಬೈಲೂರು, ವಿಶ್ವೇಶ್ ಕೌಡೂರು, ಸುರೇಶ್ ಶೆಟ್ಟಿ, ಚೈತನ್ಯ ಕಲಾವಿದರು ತಂಡದ ಸದಸ್ಯರು ಮತ್ತಿತರರು ಉಪಸ್ಥಿರಿದ್ದರು

ಪ್ರಾದೇಶಿಕ ವಾರ್ತೆಗಳು

ರೆಡ್ ಕ್ರಾಸ್ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ಅವರಿಗೆ ಬೀಳ್ಕೊಡುಗೆ

ಮಂಗಳೂರು: ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಕಿಶೋರ್‌ಚಂದ್ರ ಹೆಗ್ಡೆ ಅವರಿಗೆ ಬೀಳ್ಕೊಡುಗೆ ಮತ್ತು ಗೌರವಾರ್ಪಣೆ ಕಾರ್ಯಕ್ರಮ ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ಕಚೇರಿ ಸಭಾಂಗಣದಲ್ಲಿ ನಡೆಯಿತು.ರೆಡ್‌ಕ್ರಾಸ್ ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ ” ವಿಜಯಬ್ಯಾಂಕ್‌ನ ಎಜಿಎಂ ಆಗಿ, ಖಾಯಂ ಜನತಾ ನ್ಯಾಯಾಲಯದ ಸದಸ್ಯರಾಗಿ, ಪ್ರಭಾರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದ ಕಿಶೋರ್‌ಚಂದ್ರ ಹೆಗ್ಡೆ ಅವರು ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ಕಾರ್ಯದರ್ಶಿಯಾಗಿ ಸಂಸ್ಥೆಯ ಬಲವರ್ಧನೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಕಾರ್ಯನಿರ್ವಹಣೆ, ಬದ್ಧತೆ, ಸಮರ್ಪಿತ ಸೇವೆ ರೆಡ್‌ಕ್ರಾಸ್‌ಗೆ ಸದಾ ಸ್ಪೂರ್ತಿದಾಯಕವಾಗಿದೆ’ಎಂದರು.ರೆಡ್‌ಕ್ರಾಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಬಿ.ಸಚ್ಚಿದಾನಂದ ರೈ, ಖಜಾಂಜಿ ಗುರುದತ್.ಎಂ.ನಾಯಕ್, ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಪಿ.ಬಿ.ಹರೀಶ್ ರೈ,ಡಾ.ಸುಮನ.ಬಿ., ರಾಘವೇಂದ್ರ ರಾವ್, ಸಿಬ್ಬಂದಿ ಮಲ್ಲಿಕಾ, ಅನಿತಾ, ಗಿರೀಶ್ ಕುಮಾರ್ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

A TRUE STORY :, PUNE STATION, 2018

There was a tea stall outside Pune Station. The owner was Ramesh Anna—62 years old, with a disabled leg. He would open the stall at 5 AM every day and close it at 11 PM. Tea cost 5 rupees a cup… and came with one thing for free: a smile.People would come, drink tea, chat for ten minutes, and leave feeling lighter. Some would say, “Anna, you’re like a psychiatrist.” Anna would smile and reply, “No, son, I’m just a tea-seller. But I’ve seen sorrow… so I put less sugar in the tea and more affection.” One day, a 25-year-old young man arrived. An engineer. He was dressed in a suit, but his eyes were swollen—as if he had been crying all night. He said, “Anna, give me a ‘cutting’—make it strong.” Anna served the tea. The young man finished it in a single gulp. He took a 100 rupee note from his pocket, placed it on the table, and said: “Anna, keep the change. This is my last cup of tea.” Anna’s hands trembled; he paused while washing the cup. He asked, “Son, where are you headed?” The young man smiled—a hollow, joyless smile. “Under a train. I lost my job. My girlfriend left me. There’s debt at home. What’s the point of living?” Anna stepped out of the stall, limping. He took the young man’s hand and led him behind the stall. There lay an old, tattered diary. Anna said, “Read this.” The First Page of Anna’s Diary -1985‘Today, my leg got crushed under a truck. The doctor said, ‘It has to be amputated.’ My wife was eight months pregnant. We had just 23 rupees at home. That night, I went to the hospital terrace… intending to jump. Just then, my wife called—’The baby is kicking. He’s saying, “Fight on, Baba.” I wept… and came back. The next day, I lost my leg… but I didn’t lose my spirit. I sat outside the station with two vessels and a kettle. I called out, “Chai!” The first day—I earned 17 rupees. I wept… but I survived.” The Second Page of the Diary -1993”Today, my wife passed away from cancer. I was left with a six-year-old child. People said, Put the boy in an orphanage.’* I said, ‘I lost a leg… but I won’t let go of my fatherhood.’ I sold tea night after night. I educated my son. I made him an engineer. Today, he is in America. He says, “Baba, come over here.” I say, “Son, who will look after my customers? Who will listen to their sorrows?”” The Last Page of the Diary -2018“Today, I turned 62. I have no leg. No wife. My son lives far away. Yet, every day, 200 people call me ‘Anna’. I listen to their sorrows… I serve them tea… and I tell them—’Live, my child’. I never met God… but I meet the God within people every day. That is why I am still alive… and happy. Because I have something to give—tea and time.” The young man started weeping after reading the diary… like a small child. Anna said—”Son, you have two hands… two legs… a degree…And yet, you set out to end your life? What did I have? 23 rupees and a broken leg. But I didn’t sit around crying over what I didn’t have… I kept using what I did have. You do the same. Lost your job? Find another. Lost your girlfriend? A better one will come along. But if life is lost… it never comes back, my boy.”Anna gave him back the 100 rupees… and a free cup of tea. He said—”This is the ‘tea of ​​life’. Don’t finish it all at once… sip it slowly.” Today, that young man is a manager at a big company in Bangalore. He calls Anna every month. And whenever he visits Pune, the first place he goes is Anna’s stall. He buys two cups of tea—one for himself… and one for Anna. And he says—”Anna, your 5-rupee tea saved a life worth 50 lakhs.” 5 Lessons from this True Story. Etch them on your heart 1. Everyone faces problems… it’s not just a problem, it’s a matter of perspectiveAnna lost a leg… but he didn’t lose his vision. You lost your job… but you didn’t lose your life. *Don’t count what is lost… make use of what remains. 3.God comes in human form to helpIt was the Divine Himself who appeared in the form of Anna. Before visiting a temple, recognize the God within a human being. He could be a tea-seller, a rickshaw driver, or a postman—anyone. 4. The ‘giver’ is never poorAnna is missing a leg… yet he makes 200 people smile every day. You have everything… yet you don’t make even one person smile. True wealth isn’t in your pocket… it’s in your conduct. Anna’s final message – For you“My children, life is like ‘Cutting Chai’ (half-cup tea)… Sometimes it tastes bitter… sometimes sweet… But don’t give up on it…sip it slowly… because the last sip is the sweetest of all…That sip is called ‘Experience’.” Ramesh Anna is still there outside Pune Station today

ಪ್ರಾದೇಶಿಕ ವಾರ್ತೆಗಳು

ಪರಮಾನಂದ ಸಾಲ್ಯಾನ್ ಅವರಿಗೆ ಜಿಲ್ಲಾ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಶ್ರದ್ಧಾಂಜಲಿ

ಮಂಗಳೂರು : ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ, ರಂಗಕರ್ಮಿ ಪರಮಾನಂದ ಸಾಲ್ಯಾನ್ ಅವರಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ನಡೆಯಿತು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮಾತನಾಡಿ ಪರಮಾನಂದ ಸಾಲ್ಯಾನ್ ಅವರು ಪತ್ರಿಕಾ ರಂಗದ ಜತೆಗೆ ತುಳು ರಂಗಭೂಮಿ ಮತ್ತು ಜಾನಪದ ಕ್ಷೇತ್ರದಲ್ಲಿ ಅಪಾರ ಜ್ಞಾನ ಹೊಂದಿದ್ದರು. ಭೂತಾರಾಧಾನೆ, ನಾಟಕ, ತುಳುನಾಡಿನ ಸಂಸ್ಕೃತಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಅವರು ಕಿರಿಯ ಪತ್ರಕರ್ತರಿಗೆ ಕಲಿಸುವ ಮಾದರಿಯಂತೂ ವಿಶಿಷ್ಟವಾಗಿತ್ತು ಎಂದರು.ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಮಾತನಾಡಿ ಬಹುಮುಖ ಪ್ರತಿಭೆಯಾಗಿದ್ದ ಪರಮಾನಂದ ಸಾಲ್ಯಾನ್ ಅವರು ಎಲ್ಲರೊಂದಿಗೆ ಸ್ನೇಹದಿಂದ ಬೆರೆಯುವ ವ್ಯಕ್ತಿಯಾಗಿದ್ದರು. ಅವರಲ್ಲಿದ್ದ ತುಳು ಪಾಂಡಿತ್ಯ, ಭಾಷಾ ಶುದ್ಧತೆ ಯುವ ಪೀಳಿಗೆಗೆ ಮಾರ್ಗದರ್ಶಿ ಎಂದರು.ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್.ಬಿ.ಎನ್. ಮಾಜಿ ಅಧ್ಯಕ್ಷ ಜಗನ್ನಾಥ್ ಶೆಟ್ಟಿ ಬಾಳ, ಭಾಸ್ಕರ ರೈ ಕಟ್ಟ, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ ನುಡಿನಮನ ಸಲ್ಲಿಸಿದರು. ಸಂಘದ ಪದಾಧಿಕಾರಿಗಳಾದ ವಿಲ್ಫ್ರೆಡ್ ಡಿಸೋಜ, ರಾಜೇಶ್ ಶೆಟ್ಟಿ, ರಾಜೇಶ್ ದಡ್ಡಂಗಡಿ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಬಿ.ಸಿ.ರೋಡ್ ನ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಯುವತಿಯೋರ್ವಳಿಗೆ ಮಾರಕಯುಧಗಳಿಂದ ಗಂಭೀರ ಹಲ್ಲೆ ನಡೆಸಿ ಯುವಕ ಪರಾರಿ. ಯುವತಿ ಸ್ಥಳದಲ್ಲೇ ಮೃತ್ಯು. ಯುವಕನ ಹತಾಶೆಗೆ ಒನ್ ವೇ ಲವ್ ಕಾರಣ.

ವರದಿ:ಜಯಾನಂದ ಪೆರಾಜೆ.ಬಂಟ್ವಾಳ:ಯುವತಿಯೋರ್ವಳನ್ನು ಮಾರಕಾಯುಧದಿಂದ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬಂಟ್ವಾಳದ ಬಿ.ಸಿ.ರೋಡಿನ ನೂತನ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದಲ್ಲೇ ಜುಲೈ16ರ ಗುರುವಾರ ಸಂಜೆ ನಡೆದಿದೆ.ಮೃತ ಯುವತಿಯನ್ನು ಬಂಟ್ವಾಳ ತಾಲೂಕಿನ ಉಳಿಗ್ರಾಮದ ನಿವಾಸಿ ಲಾವಣ್ಯ(21) ‌ಎಂದು ಗುರುತಿಸಲಾಗಿದೆ.ಇರಿತ ಗೈದು ಪರಾರಿಯಾದ ಯುವಕ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ನಿವಾಸಿ ಚೇತನ್ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.ಚೇತನ್ ಲಾವಣ್ಯಳನ್ನು ಏಕಮುಖ ವಾಗಿ ಪ್ರೀತಿಸುತ್ತಿದ್ದು ಅದನ್ನು ಆಕೆ ನಿರಾಕರಿಸಿದ್ದೇ ಘಟನೆಗೆ ಕಾರಣವೆನ್ನಲಾಗುತ್ತಿದ್ದು, ಯುವತಿ ಮನೆಗೆ ಹೋಗಲು ಬಸ್ಸಿಗಾಗಿ ಕಾಯುತ್ರಿದ್ದಾಗ ಮಾರಕ ಆಯುಧಗಳಿಂದ ಯುವತಿ ಮೇಲೆ ಚೇತನ್ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಯುವತಿಯನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದ ರೂ ಆಕೆ ಸ್ಥಳದಲ್ಲೇ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಯುವತಿ ಕಲ್ಲಡ್ಕ ಆಸ್ಪತ್ರೆಯೊಂದರಲ್ಲಿ ನರ್ಸ್ ಅಥವಾ ಉದ್ಯೋಗದಲ್ಲಿದ್ದರು ಎಂದು ಹೇಳಲಾಗಿದೆ.ಸತ್ಯಸಂಗತಿ ತನಖೆಯಿಂದ ತಿಳಿದು ಬರಬೇಕಾಗಿದೆ.ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಅರುಣ್ ಭೇಟಿ ನೀಡಿ ಆರೋಪಿಯನ್ನು ಬಂಧಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು ತನಿಖಾ ತಂಡ ರಚಿಸಲಾಗಿದೆ.ಘಟನೆ ನಡೆದು ಕೆಲವೇ ಕ್ಷಣಗಳಲ್ಲಿ ಜಾಲತಾಣಗಳಲ್ಲಿ ಹರಿದಾಡಿದ್ದು ಘಟನೆಯ ಗಂಭೀರತೆಗೆ ಸಾಕ್ಷಿಯಾಗಿದೆ.ಯುವಕ ಯುವತಿಯನ್ನು ಕೊಚ್ಚಿ ಕೊಲೆಮಾಡಿ ಪರಾರಿಯಾಗುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ .ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಪುರಿ ಜಗನ್ನಾಥನ ತೀರ್ಥಯಾತ್ರೆಯಲ್ಲಿದ್ದು ಘಟನೆಯ ಬಗ್ಗೆ ತಿಳಿದುಕೊಂಡು ಆರೋಪಿಯನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಪುರಿ ಜಗನ್ನಾಥ ರಥೋತ್ಸವದಲ್ಲಿದ್ದರೂ ಘಟನೆಯ ಬಗ್ಗೆ ತಕ್ಷಣ ಸ್ಪಂದಿಸಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತುಒಡಿಶಾದ ಪುರಿ ಜಗನ್ನಾಥ ದೇವರ ವಿಶ್ವಪ್ರಸಿದ್ಧ ರಥೋತ್ಸವದಲ್ಲಿ ಭಾಗಿಯಾಗಿರುವ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು, ಬಂಟ್ವಾಳದಲ್ಲಿ ನಡೆದ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣ ಸ್ಪಂದಿಸಿದ್ದಾರೆ.ಘಟನೆಯ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಂಪೂರ್ಣ ಮಾಹಿತಿ ಪಡೆದುಕೊಂಡ ಅವರು, ಪ್ರಕರಣದ ಆರೋಪಿಯನ್ನು ಯಾವುದೇ ವಿಳಂಬವಿಲ್ಲದೆ ಬಂಧಿಸಿ, ಅನ್ವಯವಾಗುವ ಎಲ್ಲಾ ಕಾನೂನುಗಳಡಿ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಇದೇ ವೇಳೆ, ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ಹಾಗೂ ಶೀಘ್ರಗತಿಯಲ್ಲಿ ಪೂರ್ಣಗೊಳಿಸಿ, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೆ, ಕಾನೂನಿನ ಚೌಕಟ್ಟಿನಲ್ಲಿಯೇ ತನಿಖೆ ನಡೆಸಿ ಸತ್ಯಾಂಶವನ್ನು ಹೊರತೆಗೆದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ತಿಳಿಸಿದ್ದಾರೆ.ಪ್ರಕರಣದಲ್ಲಿ ಆರೋಪಿಯ ಜೊತೆಗೆ ಇತರ ವ್ಯಕ್ತಿಗಳ ಪಾತ್ರವೂ ಇದ್ದರೆ, ಆ ಕುರಿತು ಸಮಗ್ರ ತನಿಖೆ ನಡೆಸಿ, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸಂಬಂಧಪಟ್ಟ ಎಲ್ಲರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದ್ದಾರೆ.ಇದೇ ರೀತಿಯ ದುರ್ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ನಿಗಾವನ್ನು ಮತ್ತಷ್ಟು ಬಲಪಡಿಸಬೇಕು. ಅಗತ್ಯವಿದ್ದರೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ಸಿಸಿಟಿವಿ ನಿಗಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಹಾಗೂ ಮಹಿಳೆಯರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಸಾರ್ವಜನಿಕರಲ್ಲಿ ಭದ್ರತೆಯ ಭಾವನೆ ಮೂಡಿಸುವ ನಿಟ್ಟಿನಲ್ಲಿ ಪೊಲೀಸರು ಕಟ್ಟುನಿಟ್ಟಿನ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ಅಪರಾಧ ಕೃತ್ಯಗಳಿಗೆ ಅವಕಾಶ ನೀಡದ ವಾತಾವರಣ ನಿರ್ಮಾಣವಾಗಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಆರೋಪಿ ಚೇತನ್ ನ್ನು ಪೊಲೀಸರು ಬಂಧಿಸಿದ್ದಾರೆ. ಆತ ಇಲಿ ಪಾಷಣ ತೆಗೆದುಕೊಂಡದ್ದರಿಂದ ತಪಾಸಣೆಗೆ ಸರಕಾರಿ ಆಸ್ಪತ್ರೆಗೆ ಆತನನ್ನು ಕರೆದುಕೊಂಡು ಹೋಗಲಾಗಿದೆ

ಪ್ರಾದೇಶಿಕ ವಾರ್ತೆಗಳು

Mp MLA’s news ಬೆಸ್ಟ್ ಆಫೀಸರ್ಸ್ ಅವಾರ್ಡ್ ಗೆ ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದ ಡಿಸಿ ರಾಜೇಶ್ ಶೆಟ್ಟಿ ಆಯ್ಕೆ.

ಮಂಗಳೂರು-Mp MLA’s news ಬೆಸ್ಟ್ ಆಫೀಸರ್ಸ್ ಅವಾರ್ಡ್ ಗೆ ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದ ಸೀನಿಯರ್ ಡಿವಿಷನಲ್ ಕಂಟ್ರೋಲರ್ ರಾಜೇಶ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಅವರು ಕೆ.ಎಸ್.ಆರ್.ಟಿ.ಸಿ ಗೆ ನೇಮಕಾತಿಗೊಳ್ಳುವ ಮುನ್ನ ಬೆಂಗಳೂರಲ್ಲಿ ಹತ್ತು ವರ್ಷಗಳ ಕಾಲ ಹೈಕೋರ್ಟ್ ಲಾಯರ್ ಆಗಿ ಸೇವೆ ಸಲ್ಲಿಸಿದ್ದರು. ಮಂಗಳೂರಿನವರಾಗಿರುವ ಕೆ.ಎಸ್.ಆರ್.ಟಿ.ಸಿ ಡಿಸಿ ರಾಜೇಶ್ ಶೆಟ್ಟಿ ಅವರು ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ (KSRTC Mangalore Senior Divisional controller(Dc)ಯಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗವನ್ನು ಅಭಿವೃದ್ಧಿ ಪಥದಲ್ಲಿ ತಂದು ನಿಲ್ಲಿಸಿದ್ದಲ್ಲದೆ, ರಾಜ್ಯದಲ್ಲೇ ಮಾದರಿ ವಿಭಾಗವೆಂಬ ಜನ ಮನ್ನಣೆಗೆ ಪಾತ್ರವಾಗಿಸಿದ್ದಾರೆ. ಸಾರಿಗೆ ವ್ಯವಸ್ಥೆಯಲ್ಲಿ ಕ್ಷಿಪ್ರಗತಿಯಲ್ಲಿ ಸುಸಜ್ಜಿತ ಸಕಾಲಿಕ ಸೇವೆ, ಭ್ರಷ್ಟಾಚಾರ ರಹಿತ ಆಡಳಿತ, ದಕ್ಷ, ಪ್ರಾಮಾಣಿಕ, ಜನಸ್ನೇಹಿ ಅಧಿಕಾರಿಯಾಗಿ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮಂಗಳೂರು ಸಾರಿಗೆ ವ್ಯವಸ್ಥೆಯಲ್ಲಿ ಎಲೆಕ್ಟ್ರಿಕಲ್ ಬಸ್ಸುಗಳನ್ನು ತರಿಸುವ ಯೋಜನೆ ಅವರದು.ಕಳೆದ 5 ವರ್ಷಗಳಿಂದ ಅವರು ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದ ಡಿಸಿಯಾಗಿ ಸ್ವಚ್ಛ ಮತ್ತು ಅಭಿವೃದ್ಧಿ ಪರ ಆಡಳಿತ ನೀಡಿದ್ದಾರೆ.ಈ ಹಿನ್ನಲೆಯಲ್ಲಿ ಜನ ಮಾಹಿತಿ, ಸಾರ್ವಜನಿಕ ಅಭಿಪ್ರಾಯಗಳನ್ನು ಆಧರಿಸಿ ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದ ಡಿಸಿ ರಾಜೇಶ್ ಶೆಟ್ಟಿ ಅವರನ್ನು Mp MLA’s news ಬೆಸ್ಟ್ ಆಫೀಸರ್ಸ್ ಅವಾರ್ಡ್ ಗೆ ಆಯ್ಕೆ ಮಾಡಲಾಗಿದೆ. ನೇರ ನಡೆ ನುಡಿ, ಸರಳ ಸಜ್ಜನಿಕೆಯ ಉತ್ತಮ ಅಧಿಕಾರಿಯಾಗಿರುವ ರಾಜೇಶ್ ಶೆಟ್ಟಿ ಅವರು ಮಂಗಳೂರಿನ ಸಂತ ಎಲೋಶಿಯಸ್ ಕಾಲೇಜ್ ನಲ್ಲಿ ಪಿಯುಸಿ ಶಿಕ್ಷಣ, ಮಂಗಳೂರಿನ ಎಸ್ ಡಿ ಯಂ ಲಾ ಕಾಲೇಜ್ ನಲ್ಲಿ ಕಾನೂನು ಪದವಿ ಓದಿದ್ದಾರೆ. Mp MLA’s news ಬೆಸ್ಟ್ ಆಫೀಸರ್ಸ್ ಅವಾರ್ಡ್ ಗೆ ಆಯ್ಕೆಯಾಗಿರುವ ಕೆ.ಎಸ್.ಆರ್.ಟಿ.ಸಿ ಡಿಸಿ ರಾಜೇಶ್ ಶೆಟ್ಟಿ ಅವರನ್ನು Mp MLA’s news ಸಂಪಾದಕ ಮತ್ತು ಸೌಹಾರ್ದ ಸಂಗಮದ ಸಂಘಟಕ ಡಾ. ಅಶೋಕ್ ಶೆಟ್ಟಿ. ಬಿ. ಎನ್. ಅವರು ಕೆ.ಎಸ್.ಆರ್.ಟಿ.ಸಿ ಡಿಸಿ ಅವರ ಮಂಗಳೂರು ಕಚೇರಿಯಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. Mp MLA’s ನ್ಯೂಸ್ 14ನೇ ಸೌಹಾರ್ದ ಸಂಗಮವು ಮಂಗಳೂರು ಟೌನ್ ಹಾಲ್ ನಲ್ಲಿ ನವೆಂಬರ್ 24 ರ ಮಂಗಳವಾರ ಸಂಜೆ 4ಗಂಟೆ ಯಿಂದ 9 ರ ತನಕ ನಡೆಯಲಿದ್ದು, ಅಂದು ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಕೆ.ಎಸ್.ಆರ್.ಟಿ.ಸಿ ಡಿಸಿ ರಾಜೇಶ್ ಶೆಟ್ಟಿ ಅವರಿಗೆ ಬೆಸ್ಟ್ ಆಫೀಸರ್ಸ್ ಅವಾರ್ಡ್ ನೀಡಲಾಗುವುದೆಂದು ಸೌಹಾರ್ದ ಸಂಗಮದ ಸಂಘಟಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ತಿಳಿಸಿದ್ದಾರೆ

ಪ್ರಾದೇಶಿಕ ವಾರ್ತೆಗಳು

INTERSNIP in Artificial Intelligence for the MCA and MSc students of St Joseph’s University, Bengaluru

The AI/ML Internship conducted for students of St. Joseph’s University (SJU) at the Comedkares Innovation Hub (Mysore Road) represents a critical milestone in bridging academic instruction with industry-aligned technical application.Running for one month in June and July, this program integrated human-centred design thinking, virtual prototyping, and digital sketching with a comprehensive hands-on curriculum in Artificial Intelligence and Machine Learning. 50 postgraduate students — comprising 27 MSc Big Data Analytics, 20 MCA, and 3 MSc Computer Science —completed all four phases of the internship, progressing from initial problem scouting and empathy mapping through to training advanced ensemble machine learning models.The students were organised into 11 project teams. In Week 4, teams learned and integrated advanced Ensemble Methods, Gradient Boosting, and XGBoost models into their project pipelines. The final week of the program (Week 5: 8 – 12 June 2026) focussed on final model stability improvements, comprehensive project documentation, mock presentation rehearsals, and a final showcase. Students have demonstrated outstanding participation and deep collaboration across their teams. Evidence — including project charters, Jupyter notebooks, Git code repositories, Onshape CAD models, Figma wireframes, and PrepIndia progress logs — validated their learning and progress. The final showcase in Week 5 allowed teams to demonstrate their completed, interactive AI/ML solutions, proving their readiness for industry-level data science and engineering roles.Mr Muurulidhar, Founder and CEO of Era Foundation Innovation Center, Fr Denzil Lobo SJ, Director, School of Information Technology, Dr Bojamma, Dean, School of Information Technology, Dr Prasanthi, HOD of the Dept of Computer Science were present for the Valedictory.

ಪ್ರಾದೇಶಿಕ ವಾರ್ತೆಗಳು

ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಎಂ.ಸಿ.ಎ (MCA) ಮತ್ತು ಎಂ.ಎಸ್ಸಿ (MSc) ವಿದ್ಯಾರ್ಥಿಗಳಿಗಾಗಿ ಕೃತಕ ಬುದ್ಧಿಮತ್ತೆ (Artificial Intelligence) ವಿಷಯದಲ್ಲಿ ಇಂಟರ್ನ್‌ಶಿಪ್‌

ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ (SJU) ವಿದ್ಯಾರ್ಥಿಗಳಿಗಾಗಿ ಮೈಸೂರು ರಸ್ತೆಯ ಕೃಪಾನಿಧಿ ಕಾಮೆಡ್‌ಕೇರ್ಸ್ ಇನ್ನೋವೇಶನ್ ಹಬ್‌ನಲ್ಲಿ (Comedkares Innovation Hub) ನಡೆಸಲಾದ ಎಐ/ಎಮ್‌ಎಲ್ (AI/ML) ಇಂಟರ್ನ್‌ಶಿಪ್‌, ಶೈಕ್ಷಣಿಕ ಬೋಧನೆ ಮತ್ತು ಉದ್ಯಮಕ್ಕೆ ಪೂರಕವಾದ ತಾಂತ್ರಿಕ ಅನ್ವಯಿಕತೆಯ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಒಂದು ತಿಂಗಳ ಕಾಲ ನಡೆದ ಈ ಕಾರ್ಯಕ್ರಮವು, ಮಾನವ-ಕೇಂದ್ರಿತ ವಿನ್ಯಾಸ ಚಿಂತನೆ (human-centred design thinking), ವರ್ಚುವಲ್ ಪ್ರೊಟೊಟೈಪಿಂಗ್ ಮತ್ತು ಡಿಜಿಟಲ್ ಸ್ಕೆಚಿಂಗ್ ಅನ್ನು ಕೃತಕ ಬುದ್ಧಿಮತ್ತೆ (AI) ಮತ್ತು ಮಷಿನ್ ಲರ್ನಿಂಗ್ (ML) ವಿಷಯಗಳ ಸಮಗ್ರ ಪ್ರಾಯೋಗಿಕ ಪಠ್ಯಕ್ರಮದೊಂದಿಗೆ ಸಂಯೋಜಿಸಿತ್ತು. 27 ಎಂ.ಎಸ್ಸಿ ಬಿಗ್ ಡೇಟಾ ಅನಾಲಿಟಿಕ್ಸ್, 20 ಎಂ.ಸಿ.ಎ ಮತ್ತು 3 ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್ ಒಳಗೊಂಡಂತೆ ಒಟ್ಟು 50 ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಇಂಟರ್ನ್‌ಶಿಪ್‌ನ ಎಲ್ಲಾ ನಾಲ್ಕು ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಅವರು ಆರಂಭಿಕ ಸಮಸ್ಯೆಗಳ ಹುಡುಕಾಟ ಮತ್ತು ಎಂಪಥಿ ಮ್ಯಾಪಿಂಗ್‌ನಿಂದ ಹಿಡಿದು ಸುಧಾರಿತ ಎನ್ಸೆಂಬಲ್ ಮಷಿನ್ ಲರ್ನಿಂಗ್ ಮಾಡೆಲ್‌ಗಳ (advanced ensemble machine learning models) ತರಬೇತಿಯವರೆಗೆ ಪ್ರಗತಿ ಸಾಧಿಸಿದರು. ವಿದ್ಯಾರ್ಥಿಗಳನ್ನು 11 ಪ್ರಾಜೆಕ್ಟ್ ತಂಡಗಳಾಗಿ ಸಂಘಟಿಸಲಾಗಿತ್ತು. 4ನೇ ವಾರದಲ್ಲಿ, ತಂಡಗಳು ಸುಧಾರಿತ ಎನ್ಸೆಂಬಲ್ ವಿಧಾನಗಳು (Ensemble Methods), ಗ್ರೇಡಿಯಂಟ್ ಬೂಸ್ಟಿಂಗ್ (Gradient Boosting) ಮತ್ತು ಎಕ್ಸ್‌ಜಿಬೂಸ್ಟ್ (XGBoost) ಮಾಡೆಲ್‌ಗಳನ್ನು ಕಲಿತು ತಮ್ಮ ಪ್ರಾಜೆಕ್ಟ್ ಪೈಪ್‌ಲೈನ್‌ಗಳಲ್ಲಿ ಅಳವಡಿಸಿಕೊಂಡವು. ಕಾರ್ಯಕ್ರಮದ ಅಂತಿಮ ವಾರವು (ವಾರ 5: 8 – 12 ಜೂನ್ 2026) ಮಾಡೆಲ್‌ನ ಸ್ಥಿರತೆಯ ಸುಧಾರಣೆಗಳು, ಸಮಗ್ರ ಪ್ರಾಜೆಕ್ಟ್ ದಾಖಲಾತಿ (documentation), ಅಣಕು ಪ್ರಸ್ತುತಿ ತಾಲೀಮುಗಳು (mock presentation rehearsals) ಮತ್ತು ಅಂತಿಮ ಪ್ರದರ್ಶನದ ಮೇಲೆ ಕೇಂದ್ರೀಕೃತವಾಗಿತ್ತು. ವಿದ್ಯಾರ್ಥಿಗಳು ತಮ್ಮ ತಂಡಗಳಲ್ಲಿ ಅತ್ಯುತ್ತಮ ಭಾಗವಹಿಸುವಿಕೆ ಮತ್ತು ಆಳವಾದ ಸಹಯೋಗವನ್ನು ಪ್ರದರ್ಶಿಸಿದ್ದಾರೆ. ಪ್ರಾಜೆಕ್ಟ್ ಚಾರ್ಟರ್‌ಗಳು, ಜುಪಿಟರ್ ನೋಟ್‌ಬುಕ್‌ಗಳು (Jupyter notebooks), ಗಿಟ್ ಕೋಡ್ ರೆಪೊಸಿಟರಿಗಳು (Git code repositories), ಆನ್‌ಶೇಪ್ ಕ್ಯಾಡ್ ಮಾಡೆಲ್‌ಗಳು (Onshape CAD models), ಫಿಗ್ಮಾ ವೈರ್‌ಫ್ರೇಮ್‌ಗಳು (Figma wireframes) ಮತ್ತು ಪ್ರೆಪ್‌ಇಂಡಿಯಾ ಪ್ರಗತಿ ದಾಖಲೆಗಳು ಸೇರಿದಂತೆ ವಿವಿಧ ಪುರಾವೆಗಳು ಅವರ ಕಲಿಕೆ ಮತ್ತು ಪ್ರಗತಿಯನ್ನು ದೃಢೀಕರಿಸಿವೆ. 5ನೇ ವಾರದ ಅಂತಿಮ ಪ್ರದರ್ಶನವು ತಂಡಗಳಿಗೆ ತಮ್ಮ ಪೂರ್ಣಗೊಂಡ, ಸಂವಾದಾತ್ಮಕ ಎಐ/ಎಮ್‌ಎಲ್ (AI/ML) ಪರಿಹಾರಗಳನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿತು. ಇದು ಉದ್ಯಮ-ಮಟ್ಟದ ಡೇಟಾ ಸೈನ್ಸ್ ಮತ್ತು ಎಂಜಿನಿಯರಿಂಗ್ ಪಾತ್ರಗಳಿಗೆ ಅವರ ಸಿದ್ಧತೆಯನ್ನು ಸಾಬೀತುಪಡಿಸಿತು.ಈ ಸಮಾರೋಪ ಸಮಾರಂಭದಲ್ಲಿ ಎರಾ ಫೌಂಡೇಶನ್ ಇನ್ನೋವೇಶನ್ ಸೆಂಟರ್‌ನ ಸಂಸ್ಥಾಪಕ ಮತ್ತು ಸಿಇಒ ಶ್ರೀ ಮುರಳಿಧರ್, ಮಾಹಿತಿ ತಂತ್ರಜ್ಞಾನ ಶಾಲೆಯ ನಿರ್ದೇಶಕರಾದ ಫಾದರ್ ಡೆನ್ಜಿಲ್ ಲೋಬೋ ಎಸ್‌ಜೆ, ಮಾಹಿತಿ ತಂತ್ರಜ್ಞಾನ ಶಾಲೆಯ ಡೀನ್ ಆದ ಡಾ. ಬೋಜಮ್ಮ, ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ (HOD) ಡಾ. ಪ್ರಶಾಂತಿ ಅವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ದಾಸ್ ಪ್ರಮೋಷನ್ಸ್: ನವೀಕೃತ ಕಚೇರಿ ಉದ್ಘಾಟನೆ

ಮಹಾನಗರ: ನಗರದ ದಾಸ್ ಪ್ರಮೋಷನ್ಸ್ ಇದರ ನವೀಕೃತ ಕೇಂದ್ರ ಕಚೇರಿಯ ಉದ್ಘಾಟನೆಯು ಕಂಕನಾಡಿಯ ಎಂಪೋರಿಯಂ ಕಾಂಪ್ಲೆಕ್ಸ್ ನಲ್ಲಿ ನೆರವೇರಿತು.ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಯು.ಟಿ. ಖಾದರ್ ಅವರು ಕಚೇರಿ ಉದ್ಘಾಟಿಸಿ, ಸಂಸ್ಥೆಯ ಬಗ್ಗೆ ಮುಕ್ತಕಂಠದಿಂದ ಪ್ರಶಂಸಿಸಿ ಶುಭ ಹಾರೈಸಿದರು. ಶ್ರೀಕ್ಷೇತ್ರ ಕಟೀಲು ಮುಖ್ಯ ಅರ್ಚಕ ಕಮಲಾದೇವಿ ಪ್ರಸಾದ್ ಅಸ್ರಣ್ಣ ದೀಪ ಬೆಳಗಿಸಿ ಆಶೀರ್ವಚನ ನೀಡಿದರು. ಡೈಜಿ ವರ್ಲ್ಡ್ ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ ಅವರು ನಾಮಫಲಕ ಅನಾವರಣಗೊಳಿಸಿ ಸಂಸ್ಥೆಯ ಬೆಳವಣಿಗೆಯ ಬಗ್ಗೆ ಶ್ಲಾಘಿಸಿದರು. ಖ್ಯಾತ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಅವರನ್ನು ಸಮ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಶಾಸಕ ವೇದವ್ಯಾಸ ಕಾಮತ್ ಮತ್ತು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ, ಪಣೋಲಿ ಬೈಲು ಭಂಡಾರ ಮನೆಯ ರಮೇಶ್, ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಪಂಜಿಕಲ್ಲು, ಸೌಂದರ್ಯ ರಮೇಶ್, ಸುರೇಶ್ ನಾವೂರ್, ಬಿಜೆಪಿ ಜಿಲ್ಲಾ ಮುಖಂಡೆ ಧನಲಕ್ಷ್ಮಿ ಗಟ್ಟಿ ಮಹಾಬಲ ಕೊಟ್ಟಾರಿ, ನಾಗೇಂದ್ರ ಕುಮಾರ್, ಕುದ್ರೋಳಿ ಗಣೇಶ್, ಡಾ| ಅಣ್ಣಯ್ಯ ಕುಲಾಲ್, ದಯಾನಂದ್ ಅಡ್ಯಾರ್, ಜಯರಾಜ್ ಪ್ರಕಾಶ್ ಮೊದಲಾದವರು ಶುಭ ಹಾರೈಸಿದರು.

Scroll to Top