Author name: editor

ಪ್ರಾದೇಶಿಕ ವಾರ್ತೆಗಳು

MCC Bank hosts NRI ‘Insights and Interactions’ meet in Dubai

Dubai, June 16: MCC Bank hosted a successful ‘Insights & Interactions’ event on June 15 at Winny’s Restaurant, Karama, Dubai.The programme was spearheaded by Dayan D’Souza, a prominent Mangalorean personality based in Dubai.Speaking on the occasion, Dayan mentioned about the current state of affairs of the banking and MCC Bank. Walter Nandalike, another well-known community leader from Mangaluru and also managing director of Daijiworld Media, spoke about uniting the community around a common goal.The event featured an engaging session with Anil Lobo, chairman of MCC Bank Ltd, who shared valuable insights with the attendees. Anil updated on the status of MCC Bank prior to and post him taking over the charge of the bank and growth they’ve experienced over the years. He took the attendees over the history of MCC Bank. He also shared his future plans on growing the bank through new branches and online presence. The gathering brought together community members for a memorable evening of learning and networking.The event saw attendance from leading entrepreneurs, socio-cultural volunteers from Dubai including Joseph Mathias, Stephen Menezes.Roshan D’Silva skillfully compered the event. Alwyn Pinto proposed vote of thanks.The event, organised in collaboration with MCC Bank Ltd, was well-received, with participants appreciating the informative discussions and warm hospitality.

ಪ್ರಾದೇಶಿಕ ವಾರ್ತೆಗಳು

ದುಬೈನಲ್ಲಿ ಎಂಸಿಸಿ ಬ್ಯಾಂಕ್ ಎನ್‌ಆರ್‌ಐ ‘ಅಂತರ್ದೃಷ್ಟಿ ಮತ್ತು ಸಂವಾದ’ ಸಭೆ

ದುಬೈ, ಜೂನ್ 16: ಎಂಸಿಸಿ ಬ್ಯಾಂಕ್ ಜೂನ್ 15ರಂದು ದುಬೈಯ ಕರಾಮಾದ ವಿಜಿ ರೆಸ್ಟೋರೆಂಟ್‌ನಲ್ಲಿ ‘ಅಂತರ್ದೃಷ್ಟಿ ಮತ್ತು ಸಂವಾದ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು. ಈ ಕಾರ್ಯಕ್ರಮವನ್ನು ದುಬೈನಲ್ಲಿ ನೆಲೆಸಿರುವ ಪ್ರಸಿದ್ಧ ಮಂಗಳೂರು ಮೂಲದ ವ್ಯಕ್ತಿ ಶ್ರೀ ಡಯಾನ್ ಡಿಸೋಜಾ ಇವರು ನಡೆಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಡಯಾನ್’ರವರು, ಪ್ರಸ್ತುತ ಬ್ಯಾಂಕಿಂಗ್ ಪರಿಸ್ಥಿತಿ ಮತ್ತು ಎಂಸಿಸಿ ಬ್ಯಾಂಕ್‌ನ ಸ್ಥಿತಿಗತಿಯ ಬಗ್ಗೆ ಪ್ರಸ್ತಾಪಿಸಿದರು. ಮಂಗಳೂರು ಮೂಲದ ಮತ್ತೊಬ್ಬ ಪ್ರಖ್ಯಾತ ಸಮುದಾಯ ನಾಯಕ ಹಾಗೂ ದಾಯ್ಜಿವರ್ಲ್ಡ್ ಮೀಡಿಯಾದ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ, ಸಮುದಾಯವನ್ನು ಒಂದು ಗುರಿಯತ್ತ ಏಕಮತದಿಂದ ಒಗ್ಗೂಡಿಸುವ ಮಹತ್ವದ ಕುರಿತು ಮಾತನಾಡಿದರು.ನಂತರ ಎಂಸಿಸಿ ಬ್ಯಾಂಕ್ ಲಿಮಿಟೆಡ್‌ನ ಅಧ್ಯಕ್ಷ ಅನಿಲ್ ಲೋಬೊ ಅವರೊಂದಿಗೆ ವಿಚಾರ ವಿನಿಮಯ ನಡೆಯಿತು. ಅವರು ಬ್ಯಾಂಕ್‌ನ ಪ್ರಗತಿ, ಅಧ್ಯಕ್ಷ ಸ್ಥಾನ ಸ್ವೀಕರಿಸುವ ಮೊದಲು ಹಾಗೂ ನಂತರದ ಸ್ಥಿತಿ ಮತ್ತು ಆ ವರ್ಷಗಳಲ್ಲಿ ಕಂಡ ಅಭಿವೃದ್ಧಿಯ ಕುರಿತು ವಿವರಿಸಿದರು. ಅವರು ಎಂಸಿಸಿ ಬ್ಯಾಂಕ್‌ನ ಇತಿಹಾಸವನ್ನು ಸವಿವರವಾಗಿ ವಿವರಿಸಿದರು. ಜೊತೆಗೆ ಹೊಸ ಶಾಖೆಗಳ ಸ್ಥಾಪನೆ ಮತ್ತು ಆನ್‌ಲೈನ್ ಹಾಜರಾತಿ ಮೂಲಕ ಬ್ಯಾಂಕ್ ವಿಸ್ತರಣೆಯ ಭವಿಷ್ಯ ಯೋಜನೆಗಳನ್ನೂ ಹಂಚಿಕೊಂಡರು. ಈ ಕಾರ್ಯಕ್ರಮವು ದುಬೈಯ ವಿವಿಧ ಉದ್ಯಮಿಗಳು, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದ ಸ್ವಯಂಸೇವಕರನ್ನು ಒಂದೆಡೆ ಸೇರಿಸಿ ಸಾರ್ಥಕವಾದ ಸಂವಾದ ಮತ್ತು ನೆಟ್’ವರ್ಕಿಂಗ್‌ಗೆ ವೇದಿಕೆಯಾಯಿತು.ಜೋಸೆಫ್ ಮಾಥಿಯಾಸ್, ಸ್ಟೀಫನ್ ಮಿನೇಜಸ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ರೋಶನ್ ಡಿಸಿಲ್ವಾ ನಿರ್ವಹಿಸಿದರೆ, ಆಲ್ವಿನ್ ಪಿಂಟೊ ಧನ್ಯವಾದ ನೀಡಿದರು.

ಪ್ರಾದೇಶಿಕ ವಾರ್ತೆಗಳು

ಯೋಗಾಭ್ಯಾಸದಿಂದ ಚೇತೋಹಾರಿ ಜೀವನ-ಜಿಲ್ಲಾ ಆಯುಷ್ ಅಧಿಕಾರಿ ಡಾ.ಮೊಹಮ್ಮದ್. ಇಕ್ಬಾಲ್ ಕೆ.

ಮಂಗಳೂರು: ಬದಲಾದ ಜೀವನಶೈಲಿ ಹಾಗೂ ವೃತ್ತಿ ಬದುಕಿನ ಒತ್ತಡದಿಂದ ಹೆಚ್ಚಿನವರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.ಇದನ್ನು ನಿವಾರಣೆ ಮಾಡಲು ಕೆಲಸ ಮಧ್ಯೆ ಒಂದಷ್ಟು ಹೊತ್ತು ಸರಳ ಯೋಗದ ಮೂಲಕ ವಿರಾಮ ಪಡೆಯಬೇಕು. ಇದರಿಂದ ಚೇತೋಹಾರಿಯಾಗಿ ಕೆಲಸ ಮಾಡಬಹುದೆಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಮೊಹಮ್ಮದ್. ಇಕ್ಬಾಲ್ ಕೆ. ಹೇಳಿದರು. ಮಂಗಳೂರು ಪ್ರೆಸ್ ಕ್ಲಬ್ ಮತ್ತು ದ.ಕ.ಜಿಲ್ಲಾ ಆಯುಷ್ ಇಲಾಖೆ ನಗರದ ಪತ್ರಿಕಾ ಭವನದಲ್ಲಿ ಬುಧವಾರ ಜಿಲ್ಲೆಯ ಪತ್ರಕರ್ತರಿಗೆ ನಡೆದ ವಿರಾಮ ಯೋಗದ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಜೂ.21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗಾಗಿ ಪೂರ್ವಭಾವಿಯಾಗಿ ಸಾರ್ವಜನಿಕರಿಗೆ ಯೋಗ ತರಬೇತಿ ನೀಡಲಾಗುತ್ತಿದೆ. ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿಯೇ ಕುಳಿತು ಮಾಡುವ ಯೋಗಾಸನ ಹಾಗೂ ಪ್ರಾಣಾಯಾಮದ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ. ಯೋಗಾಭ್ಯಾಸದೊಂದಿಗೆ ಪರಿಸರ ಸ್ವಚ್ಛತೆ ಹಾಗೂ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.ಶಾರದಾ ನ್ಯಾಚುರೋಪತಿ ಕಾಲೇಜಿನ ಕಲಿಕಾ ವೈದ್ಯೆಯರಾದ ಗಾಯತ್ರಿ ಮತ್ತು ಸುಜಿತಾ ವಿರಾಮ ಯೋಗ ಪ್ರಾತ್ಯಕ್ಷಿಕೆ ನೀಡಿದರು.ವೆನ್ಲಾಕ್ ಆಯುಷ್ ಆಸ್ಪತ್ರೆಯ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ವೈದ್ಯಾಧಿಕಾರಿ ಡಾ.ಪ್ರಕಾಶ್.ಎ.ಜೆ. ಯೋಗ ಮತ್ತುಪ್ರಾಣಾಯಾಮದ ಬಗ್ಗೆ ಮಾಹಿತಿ ನೀಡಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ತಾಲೂಕು ಆಯುಷ್ ಘಟಕದ ಆಡಳಿತ ವೈದ್ಯಾಧಿಕಾರಿ ಡಾ.ಸಹನಾ ಪಿ., ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ , ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಉಪಾಧ್ಯಕ್ಷ ಮಹಮ್ಮದ್ ಆರಿಫ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ದಕ್ಷಿಣ ಕನ್ನಡದಲ್ಲಿ ಸೌಹಾರ್ದತೆ, ಶಾಂತಿ ಮರುಸ್ಥಾಪನೆಗೆ ಪ್ರತಿ ತಾಲೂಕಿನಲ್ಲಿ ಸಮಿತಿಜಯಶ್ರೀಕೃಷ್ಣ ಪರಿಸರ ಪೇಮಿ ಸಮಿತಿ ತೀರ್ಮಾನ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸೌಹಾರ್ದತೆ, ಶಾಂತಿಯ ವಾತಾವರಣ ಮರುಸ್ಥಾಪನೆ ಕಾರ್ಯದಲ್ಲಿ ಸಂಬಂಧಿಸಿದ ಜಿಲ್ಲಾಡಳಿತ ಜತೆ ಸಹಕರಿಸಲು ಪ್ರತೀ ತಾಲೂಕುಗಳಲ್ಲಿ ತಲಾ 8- 10 ಸದಸ್ಯರ ಸಮಿತಿ ರಚಿಸಲು ಜಯಶ್ರೀಕೃಷ್ಣ ಪರಿಸರ ಪೇಮಿ ಸಮಿತಿ ತೀರ್ಮಾನಿಸಿದೆ.ಮುಂದಿನ ಆರು ತಿಂಗಳಲ್ಲಿ ಸಮಿತಿ ರಚನೆ ಪ್ರಕ್ರಿಯೆ ಪೂರ್ಣ ಸ್ವರೂಪ ಪಡೆದುಕೊಳ್ಳಲಿದೆ. ಗೃಹ ಸಚಿವ ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸ್ಪೆಷಲ್ ಆ್ಯಕ್ಷನ್ ಫೋರ್ಸ್ (ಎಸ್‌ಎಎಫ್) ಸ್ಥಾಪಿಸಿರುವ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದು ಮಂಗಳೂರು ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪರಿಸರ ಪೇಮಿ ಸಮಿತಿ ಸ್ಥಾಪಕ ತೋನ್ಸೆ ಜಯಕೃಷ್ಣ ಎ.ಶೆಟ್ಟಿ ಹೇಳಿದರು. ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಯುವ ಜನಾಂಗದ ಉಜ್ವಲ ಭವಿಷ್ಯ ರೂಪಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಹಾರ್ದತೆ, ಶಾಂತಿಯ ವಾತಾವರಣ ಮರುಸ್ಥಾಪಿಸುವಂತೆ ಗೃಹಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಮಂಗಳೂರು ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಅವರು ಒತ್ತಾಯಿಸಿದರು.ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯ ಸೌಹಾರ್ದತೆಯ ವಾತಾವರಣಕ್ಕೆ ಧಕ್ಕೆಯಾಗಿದೆ. ಕೇವಲ 25 ರಷ್ಟು ಜನರಿಂದ ಇಡೀ ಜಿಲ್ಲೆಯ ನೆಮ್ಮದಿಯ ಜೀವನಕ್ಕೆ ಸಮಸ್ಯೆಯಾಗಿದೆ. ಅಮಾಯಕರ ಹತ್ಯೆ ನಡೆದಿದೆ. ಕೆಲವು ಮನೆಗಳಲ್ಲಿ ಇದ್ದ ಓರ್ವ ಮಗನನ್ನು ಕೂಡ ಪೋಷಕರು ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಹಣ ಹೂಡಲು ಕಂಪನಿಗಳು ಹಿಂಜರಿಯುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.ಅವಿಭಜಿತ ಜಿಲ್ಲೆಯ ಜನರು ಧರ್ಮ ಬೇಧವಿಲ್ಲದೆ ಅನ್ಯೋನತೆಯಿಂದ ಬಾಳಿದವರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹರಡುವವರು, ದ್ವೇಷ ಭಾಷಣಗಳು ಅಶಾಂತಿಗೆ ಕಾರಣವಾಗುತ್ತಿದ್ದು, ನಮ್ಮ ರಾಜಕೀಯೇತರ ಸಂಘಟನೆಯ ಮೂಲಕ ಶಾಂತಿ ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದು ಸಮಿತಿಯ ರಾಜ್ಯ ಸಂಯೋಜಕ ಕೆ.ಪಿ. ಜಗದೀಶ್ ಅಧಿಕಾರಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್ ಎಂ. ಶೆಟ್ಟಿ, ಜಡಿಲ್ಲಾ ಉಪಾಧ್ಯಕ್ಷರಾದ ಅನುಪ್ರಕಾಶ್ ಶೆಟ್ಟಿ, ನಾಗೇಶ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿಗಳಾದ ಸುರೇಂದ್ರ ಮೆಂಡನ್,ಜಿ.ಟಿ. ಆಚಾರ್ಯ, ಸದಸ್ಯರಾದ ಶಂಕರ್ ಸುವರ್ಣ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ವೇಣೂರು ಚರ್ಚ್: ಪ್ರತಿಭಾನ್ವಿತ ಬಾಲಕಿಗೆ ಸನ್ಮಾನ

ವೇಣೂರು ಕ್ರೈಸ್ಟ್ ದಿ ಕಿಂಗ್ ಚರ್ಚ್ ಸದಸ್ಯೆ ನಿಶೆಲ್‌ ಫೆರ್ನಾಂಡಿಸ್‌ ಅವರನ್ನು ಪಿ.ಯು.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರಯುಕ್ತ ಕ್ಯಾಥೊಲಿಕ್‌ ಸಭಾ ವತಿಯಿಂದ ಸನ್ಮಾನಿಸಲಾಯಿತು. ಚರ್ಚಿನ ಪ್ರಧಾನ ಧರ್ಮಗುರು ವಂದನೀಯ ಫಾ. ಎಡ್ವಿನ್‌ ಸಂತೋಷ್‌ ಮೋನಿಸ್‌ ಅವರು ಮಾತನಾಡಿ ನಿಶೆಲ್ ಅವರು ಬಹುಮುಖ ಪ್ರತಿಭೆ ಹೊಂದಿದ್ದು, ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸುವ ಮೂಲಕ ಚರ್ಚಿಗೆ ಗೌರವ ತಂದು ಕೊಟ್ಟಿದ್ದಾರೆ ಎಂದು ಶ್ಲಾಘಿಸಿ ಆಕೆಯನ್ನು ಮತ್ತು ಅಕೆಯ ಹೆತ್ತವರನ್ನು ಆಭಿನಂದಿಸಿದರು.ಸಮಾರಂಭದಲ್ಲಿ ವಂದನೀಯ ಫಾ. ಲಾಯ್‌ಸ್ಟನ್‌ ಕೊರ್ಡೇರೊ, ಚರ್ಚಿನ ಉಪಾಧ್ಯಕ್ಷ ಡೆನ್ನಿಸ್‌ ಸಿಕ್ವೇರಾ, ಕಾರ್ಯದರ್ಶಿ ಜೆತ್ರುದ್‌ ಡಿ’ಸೋಜಾ, ಕ್ಯಾಥೊಲಿಕ್‌ ಸಭಾ ಘಟಕದ ಅಧ್ಯಕ್ಷ ಅರುಣ್‌ ಡಿ’ಸೋಜಾ, ಕಾರ್ಯದರ್ಶಿ ಗ್ರೇಸಿ ನೊರೊನ್ಹಾ ಅವರು ಜತೆಗೂಡಿ ಫಲ, ಪುಷ್ಪ ನೀಡಿ ಶಾಲು ಹೊದಿಸಿ ನಿಶೆಲ್‌ ಅವರನ್ನು ಸನ್ಮಾನಿಸಿದರು. ಕ್ಯಾಥೊಲಿಕ್‌ ಸಭಾ ಮಾಜಿ ಕೇಂದ್ರೀಯ ಅಧ್ಯಕ್ಷ ಎಲ್.ಜೆ. ಫೆರ್ನಾಂಡಿಸ್‌ ಮತ್ತಿತರರು ಉಪಸ್ಥಿತರಿದ್ದರು. ನಿಶೆಲ್‌ ಅವರು ಚರ್ಚ್ ಗಾಯನ ಮಂಡಳಿಯಲ್ಲಿ ಕೀ ಬೋರ್ಡ್ ನುಡಿಸಿ ಸಹಕರಿಸುತ್ತಿದ್ದಾರೆ. ಅವರು ಚರ್ಚಿನ ಗಾಯನ ಮಂಡಳಿಯ ಮುಖ್ಯಸ್ಥ ಆಲ್ವಿನ್‌ ಫೆರ್ನಾಂಡಿಸ್‌ ಮತ್ತು ಅನಿತಾ ಡಾಯಸ್‌ ಅವರ ಪುತ್ರಿ.

ಪ್ರಾದೇಶಿಕ ವಾರ್ತೆಗಳು

ಶತಾಯುಷಿ ಸೂಡ ಅಪ್ಪಿ ಆಚಾರ್ಯ ಬೋರಿಗುಡ್ಡೆ ನಿಧನ

ಮೂಲ್ಕಿ: ಸೂಡದ ನಿವಾಸಿ ದಿ.ಹೊನ್ನಯ್ಯ ಆಚಾರ್ಯರ ಧರ್ಮಪತ್ನಿ ಶತಾಯುಷಿ ಅಪ್ಪಿ ಆಚಾರ್ಯ (101) ಜೂನ್ 13 ರಂದು ಮನೆಯಲ್ಲಿ ನಿಧನ ಹೊಂದಿದರು.ಅವರು ಇಬ್ಬರು ಪುತ್ರರು, ಮೂವರು ಪುತ್ರಿಯರು, 23 ಮೊಮ್ಮಕ್ಕಳು, 27 ಮರಿ ಮಕ್ಕಳು ಒರ್ವ ಮರಿ ಮರಿ ಮಕ್ಕಳು ಸೇರಿ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಬೀರಮಲೆ ಬೆಟ್ಟ ಪ್ರಜ್ಞಾ ಆಶ್ರಮದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಸಭೆ.

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರು ಬಂಟ್ವಾಳ ಇದರ ಕೇಂದ್ರ ಸಮಿತಿಯ ಸಭೆಯು ಪುತ್ತೂರಿನ ಬೀರಮಲೆ ಬೆಟ್ಟದ ಪ್ರಜ್ಞಾ ಆಶ್ರಮದಲ್ಲಿ ಜರಗಿತು.ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಪಡುಮಲೆಯಲ್ಲಿ ಆಗಸ್ಟ್ 17ರಂದು ಜರಗಲಿರುವ ಜಿಲ್ಲಾಮಟ್ಟದ ಕಾರ್ಯಾಗಾರದ ಬಗ್ಗೆ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಪುತ್ತೂರು ಘಟಕದ ಅಧ್ಯಕ್ಷ ಚಂದ್ರಶೇಖರ್ ಆಳ್ವ ಪಡುಮಲೆ ಮತ್ತು ಪ್ರತಿಷ್ಠಾನದ ಖಜಾಂಜಿ ಕೃಷ್ಣಶರ್ಮ ಅನಾರು ಕಾರ್ಯಗಾರದ ಸ್ವರೂಪದ ಬಗ್ಗೆ ಮಾಹಿತಿ ನೀಡಿದರು.ಶ್ರೀ ಎಡನೀರು ಮಠಾಧೀಶರ ಚಾತುರ್ಮಾಸ್ಯ ಕಾರ್ಯಕ್ರಮ, ಸಹಕಾರಿ ಸಂಘದ ಚುನಾವಣೆ, ಪ್ರತಿಷ್ಠಾನದ ಸದಸ್ಯರಿಗೆ ಕೇತ್ರ ಸಂದರ್ಶನದ ಬಗ್ಗೆ ಕಯ್ಯೂರು ನಾರಾಯಣ ಭಟ್ ಮಾಹಿತಿ ನೀಡಿದರು.ಬೌದ್ಧಿಕ ವಿಕಲಾಂಗರ ವಸತಿಯುತ ಕೇಂದ್ರದ ಬಗ್ಗೆ ಪುತ್ತೂರು ಘಟಕದ ಶ್ರೀಮತಿ ಶಂಕರಿ ಶರ್ಮ ಮಾಹಿತಿ ನೀಡಿದರು.ಕೇಂದ್ರದ ನಿರ್ವಾಹಕರಾದ ಶ್ರೀ ಅಣ್ಣಪ್ಪ ಮತ್ತು ಶ್ರೀಮತಿ ಜ್ಯೋತಿ ದಂಪತಿ ಮಾತನಾಡಿ ಕೇಂದ್ರದಲ್ಲಿ 15 ಸದಸ್ಯರಿದ್ದು ದಾನಿಗಳ ಸಹಕಾರದಿಂದ ಕೇಂದ್ರವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಪ್ರತಿಷ್ಠಾನದ ಜಿಲ್ಲಾ ಸಂಚಾಲಕ ಭಾಸ್ಕರ ಬಾರ್ಯ ಸ್ವಾಗತಿಸಿ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ಆಳ್ವ ಪಡುಮಲೆ ವಂದಿಸಿದರು. ಬಾಲಕೃಷ್ಣರಾವ್. ಎ, ಪದ್ಮನಾಭ ನಾಯಕ್,ಚಂಚಲಾಕ್ಷಿ.ಯನ್, ಭವಾನಿ ಶಂಕರ ಶೆಟ್ಟಿ ಪುತ್ತೂರು,ಗುಂಡ್ಯಡ್ಕ ಈಶ್ವರ ಭಟ್, ಕೆ. ರಾಮಕೃಷ್ಣ ನಾಯಕ್, ಪ್ರೇಮಲತಾ ರಾವ್ ಟಿ, ಮಹಾಬಲ ರೈ ವಳತಡ್ಕ, ಸೋಮನಾಥ ಬೇಕಲ್, ಚಂದ್ರಕಲಾ ಬೇಕಲ್ ಸಭೆಯಲ್ಲಿ ಭಾಗವಹಿಸಿದ್ದರು. ಪ್ರತಿಷ್ಠಾನದ ಪುತ್ತೂರು ಘಟಕದ ವತಿಯಿಂದ ಆಶ್ರಮ ನಿವಾಸಿಗಳಿಗೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನವನ್ನು ವ್ಯವಸ್ಥೆ ಮಾಡಲಾಗಿತ್ತು.

ಪ್ರಾದೇಶಿಕ ವಾರ್ತೆಗಳು

ಮೂಲ್ಕಿ ಯುವವಾಹಿನಿಯ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ:ಸಮಾಜಕ್ಕೆ ಯುವವಾಹಿನಿಯ ಕೊಡುಗೆ ಅಪಾರ: ಲೀಲಾಕ್ಷ ಕರ್ಕೇರ

ಮೂಲ್ಕಿ: ಸಮಾಜಮುಖಿ ಚಿಂತನೆಯೊಂದಿಗೆ ಉತ್ತಮ ನಾಯಕತ್ವದ ಗುಣವನ್ನು ಬೆಳೆಸುವಲ್ಲಿ ಯುವವಾಹಿನಿಯು ಸಮಾಜದಲ್ಲಿ ಮುಂಚೂಣಿಯಲ್ಲಿದೆ. ಅಧ್ಯಕ್ಷ ಸ್ಥಾನವನ್ನು ಒಂದೇ ವರ್ಷಕ್ಕೆ ಮೀಸಲಿಟ್ಟು ಸಮಾಜದಲ್ಲಿ ನಾರಾಯಣಗುರುಗಳ ತತ್ವಾದರ್ಶವನ್ನು ಪಸರಿಸುತ್ತಿರುವ ಸಂಸ್ಥೆಯನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಮಂಗಳೂರಿನ ನಮ್ಮ ಕುಡ್ಲ ಛಾನೆಲ್‌ನ ಆಡಳಿತ ನಿರ್ದೇಶಕ ಲೀಲಾಕ್ಷ ಕರ್ಕೇರ ಹೇಳಿದರು.ಅವರು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಮೂಲ್ಕಿಯ ಯುವವಾಹಿನಿಯ ನೂತನ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು. ಮೂಲ್ಕಿ ಯುವವಾಹಿನಿಯ ಅಧ್ಯಕ್ಷ ರಿತೇಶ್ ಮೂಲ್ಕಿ ಅಧ್ಯಕ್ಷತೆಯನ್ನು ವಹಿಸಿ, ನೂತನ ಅಧ್ಯಕ್ಷ ವಿನಯಕುಮಾರ್ ಮಟ್ಟು ಅವರಿಗೆ ಅಧಿಕಾರ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಮೂಲ್ಕಿ ನಾರಾಯಣಗುರು ಶಿಕ್ಷಣ ಸಂಸ್ಥೆಯ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿಯನ್ನು ಭೋಧಿಸಿದರು.ತುಳು ಭಾಷಾ ಸಂಶೋಧಕ ಮಹಿ ಮೂಲ್ಕಿ, ಮೂಲ್ಕಿ ನಾರಾಯಣಗುರು ಶಿಕ್ಷಣ ಸಂಸ್ಥೆಯ ಸಂಚಾಲಕ ಹರೀಂದ್ರ ಸುವರ್ಣ, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಸಂಘಟನಾ ಕಾರ್ಯದರ್ಶಿ ಲೋಹಿತ್ ರೆಂಜಾಳ ಸುಳ್ಯ, ನೂತನ ಕಾರ್ಯದರ್ಶಿ ಪ್ರೇರಣಾ, ಕೋಶಾಧಿಕಾರಿ ಜ್ಯೋತಿ ರಾಮಚಂದ್ರ ಉಪಸ್ಥಿತರಿದ್ದರು.ಮೂಲ್ಕಿ ಯುವವಾಹಿನಿಯ ಅಧ್ಯಕ್ಷ ರಿತೇಶ್ ಮೂಲ್ಕಿ ಸ್ವಾಗತಿಸಿದರು, ಕಾರ್ಯದರ್ಶಿ ಲತೀಶ್ ಸಾಲ್ಯಾನ್ ಕಾರ್ನಾಡು ವರದಿ ವಾಚಿಸಿ, ವಂದಿಸಿದರು, ಮಾಜಿ ಅಧ್ಯಕ್ಷ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಜೂ. 18ರಂದು ಪತ್ರಕರ್ತರಿಗೆ ವಿರಾಮ ಯೋಗ ಪ್ರಾತ್ಯಕ್ಷಿಕೆ

ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಜಿಲ್ಲೆಯ ಪತ್ರಕರ್ತರಿಗೆ ವಿರಾಮ ಯೋಗ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಜೂ.18ರಂದು ಬೆಳಗ್ಗೆ 11ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯಲಿದೆ.ಜಿಲ್ಲಾ ಆಯುಷ್ ಅಧಿಕಾರಿ ಡಾ.ಮಹಮ್ಮದ್ ಇಕ್ಬಾಲ್ ಕೆ. ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈಅಧ್ಯಕ್ಷತೆ ವಹಿಸಲಿದ್ದಾರೆ. ವೆನ್ಲಾಕ್ ಆಯುಷ್ ಆಸ್ಪತ್ರೆಯ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ವೈದ್ಯಾಧಿಕಾರಿ ಡಾ.ಪ್ರಕಾಶ್ ಎ.ಜೆ., ಉಳ್ಳಾಲ ತಾಲೂಕು ಆಯುಷ್ ಘಟಕದ ಆಡಳಿತ ವೈದ್ಯಾಧಿಕಾರಿ ಡಾ.ಸಹನಾ ಪಿ. ವಿರಾಮ ಯೋಗದ ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ.ಆರ್. ಉಪಸ್ಥಿತರಿರುವರು ಎಂದು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ನಾಳೆ ಶಾಲೆಗೆ ರಜೆ

ರೆಡ್ ಅಲರ್ಟ್ ಹಿನ್ನಲೆಯಲ್ಲಿ ನಾಳೆ (ಜೂನ್ 16) ದ.ಕ. ಜಿಲ್ಲೆಯ ಮಂಗಳೂರು, ಬಂಟ್ವಾಳ, ಉಳ್ಳಾಲ, ಮುಲ್ಕಿ, ಮೂಡುಬಿದಿರೆ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು ಮತ್ತು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Scroll to Top