
ಅ. 2: ಮಂಗಳಾದೇವಿ ದಸರಾ ಕವಿಗೋಷ್ಠಿ – 2025. ಅಧ್ಯಕ್ಷರಾಗಿ ಭಾಸ್ಕರ ರೈ ಕುಕ್ಕುವಳ್ಳಿ; ದಶ ಕವಿಗಳ ನವರಸ ರಂಜನೆ
ಮಂಗಳೂರು: ಶರನ್ನವರಾತ್ರಿ ಪ್ರಯುಕ್ತ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 22ರಿಂದ ಮೊದಲ್ಗೊಂಡು ನವರಾತ್ರಿ ಮಹೋತ್ಸವ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅಕ್ಟೋಬರ್ 2 ಗುರುವಾರ ವಿಜಯದಶಮಿಯಂದು ಸಾಯಂಕಾಲ ಗಂ. 4:30 ರಿಂದ ‘ದಸರಾ ಕವಿಗೋಷ್ಠಿ – 2025’ ನವರಸ ರಂಜನೆಯ ಬಹುಭಾಷಾ ಕವಿಮೇಳವನ್ನು ಏರ್ಪಡಿಸಲಾಗಿದೆ.ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್.ಪ್ರದೀಪ ಕುಮಾರ್ ಕಲ್ಕೂರ ಕವಿಗೋಷ್ಠಿಯನ್ನು ಉದ್ಘಾಟಿಸುವರು. ಕವಿ – ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ 10 ಮಂದಿ ಪ್ರಮುಖ ಕವಿಗಳು ಗೋಷ್ಠಿಯಲ್ಲಿ ಭಾಗವಹಿಸುವರು. ಕವಿಗಳಾದ ಡಾ. ಸುರೇಶ್ ನೆಗಳಗುಳಿ (ಕನ್ನಡ ಗಝಲ್), ಮಹಮ್ಮದ್ ಬಡ್ಡೂರು (ಬ್ಯಾರಿ), ಗುಣಾಜೆ ರಾಮಚಂದ್ರ ಭಟ್ (ಕನ್ನಡ), ಡಾ.ಮೀನಾಕ್ಷಿ ರಾಮಚಂದ್ರ (ಮಲೆಯಾಳಂ), ಅಕ್ಷತಾ ರಾಜ್ ಪೆರ್ಲ (ಹವ್ಯಕ), ಡಾ.ಕವಿತಾ ಸುವರ್ಣ (ಹಿಂದಿ), ಅಕ್ಷಯ ಆರ್. ಶೆಟ್ಟಿ, ವಿಜಯಲಕ್ಷ್ಮಿ ಕಟೀಲು, ವಸಂತಿ ನಿಡ್ಲೆ (ತುಳು) ಇವರು ವಿವಿಧ ಭಾಷೆಗಳಲ್ಲಿ ಸ್ವರಚಿತ ಕವನಗಳನ್ನು ಪ್ರಸ್ತುತಪಡಿಸುವರು.ವಿಜಯದಶಮಿ ಪ್ರಯುಕ್ತ ದೇವಿ ಸನ್ನಿಧಿಯಲ್ಲಿ ಬೆಳಿಗ್ಗೆ ವಿದ್ಯಾರಂಭ ಮತ್ತು ತುಲಾಭಾರ, ಮಧ್ಯಾಹ್ನ ಹಾಗೂ ಸಂಜೆ ರಥೋತ್ಸವ ನಡೆಯುವುದು. ಮರುದಿನ ಅವಭೃತ ಮಂಗಳ ಸ್ನಾನದೊಂದಿಗೆ ಮಂಗಳಾದೇವಿ ದಸರಾ ಮಹೋತ್ಸವ ಸಂಪನ್ನಗೊಳ್ಳುವುದೆಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಜಾಗೃತಿ ಸಮಿತಿಗೆ ಡಾ.ರಾಜೇಶ್ ಕದ್ರಿ ನೇಮಕ
ಮಂಗಳೂರು : ಕರ್ನಾಟಕ ಸರಕಾರವು ರಾಜ್ಯದಲ್ಲಿ ಕನ್ನಡ ಅಭಿವೃದ್ಧಿಗಾಗಿ ಹಾಕಿಕೊಂಡಿರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ರಾಜ್ಯದ ಪ್ರತಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕನ್ನಡ ಜಾಗೃತಿ ಸಮಿತಿಯನ್ನು ರಚಿಸಿದ್ದು , ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಮಹಾನಗರ ಪಾಲಿಕಾ ವ್ಯಾಪ್ತಿಗೆ ಸಂಬಂಧಿಸಿದಂತೆ ಒಟ್ಟು 6 ಮಂದಿ ಸದಸ್ಯರನ್ನು ನಾಮನಿರ್ದೇಶನ ಮಾಡಿರುತ್ತದೆ. ಇವರಲ್ಲಿ ಡಾ.ರಾಜೇಶ್ ಕದ್ರಿ ಕೂಡ ಒಬ್ಬರು.ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಇವರು ಪತ್ರಕರ್ತ,ಪತ್ರಿಕೋದ್ಯಮಿಯಾಗಿದ್ದು,ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲೂ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡು ಬಂದಿರುತ್ತಾರೆ.
ಮೀರಾರೋಡ್ ಶ್ರೀ ಚಾಮುಂಡೇಶ್ವರಿ ಪ್ರಸನ್ನ ಸನ್ನಿಧಿ.ಸೆ.22-ಅ.2: ನವರಾತ್ರಿ ಉತ್ಸವ.
ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಮಂದಿರದ ಪ್ರಧಾನ ಅರ್ಚಕ ಲಕ್ಷ್ಮಣ್ ಜೆ. ಶೆಟ್ಟಿ ಭಕ್ತಾದಿಗಳಿಗೆ ವಿನಂತಿ.ಮೀರಾರೋಡ್,ಮೀರಾ ರೋಡ್ ಶಾಂತಿ ನಗರ ಪ್ರೇಮ್ ಜ್ಯೋತಿ ಸೊಸೈಟಿ, ಸೆಕ್ಟರ್ 4, ಸಿ-002, ಸಿ-19 ಇಲ್ಲಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಚಾಮುಂಡೇಶ್ವರೀ ಪ್ರಸನ್ನ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ಸೆ. 22ರಿಂದ ಅ. 2ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಸೆ. 22ರಂದು ಬೆಳಿಗ್ಗೆ 6ರಿಂದ ಅರ್ಚಕ ಮೀರಾ ರೋಡ್ ಶ್ರೀಶ ಭಟ್ ನೇತೃತ್ವದಲ್ಲಿ ಗಣಪತಿಹೋಮ, ಕಲಶ ಪ್ರತಿಷ್ಠಾಪನೆ ನೆರವೇರಲಿದೆ.ಸೆ. 22ರಿಂದ ಪ್ರತೀ ರಾತ್ರಿ 7.30ರಿಂದ 9.30ರ ವರೆಗೆ ಸ್ಥಳೀಯ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.ಸೆ. 26ರಂದು ಬೆಳಿಗ್ಗೆ 7ರಿಂದ ಪಂಚಮಿ ಪೂಜೆ ಪ್ರಯುಕ್ತ ನಾಗದೇವರಿಗೆ ತನು-ತಂಬಿಲ ಸೇವೆ, 11ರಿಂದ ವಿಜಯ ಶೆಟ್ಟಿ ಮೂಡುಬೆಳ್ಳೆ ಮತ್ತು ತಂಡದಿಂದ ಭಜನಾಮೃತ, ಮಧ್ಯಾಹ್ನ 12.30ರಿಂದ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಲಿದೆ.ನವರಾತ್ರಿ ಪ್ರಯುಕ್ತ ಶ್ರೀದೇವಿಗೆ ಅರ್ಪಿಸಲಿರುವ ವಿವಿಧ ರೀತಿಯ ಸೇವೆಗಳಿಗಾಗಿ ಮುಂಚಿತವಾಗಿ ಸನ್ನಿಧಾನದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಮಂದಿರದ ಪ್ರಧಾನ ಅರ್ಚಕ ಲಕ್ಷ್ಮಣ್ ಜೆ. ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಓಂ ಸಾಯಿ ಮಂದಿರದಲ್ಲಿ 29ನೇ ವಾರ್ಷಿಕ ಮಹೋತ್ಸವ
ಸೆ.28 ಕ್ಕೆ ಬೆಳಿಗ್ಗೆ 8.30ರಿಂದ ಕಂಕನಾಡಿ ಗರಡಿ ಬಳಿ ಇರುವ ಓಂ ಸಾಯಿ ಮಂದಿರದಲ್ಲಿ 29ನೇ ವಾರ್ಷಿಕ ಮಹೋತ್ಸವ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅಡಳಿತ ಮೊಕ್ತೇಸರ ಶ್ರೀ ಗಂಗಾಧರ ಶಾಂತಿ ಕರೆ ನೀಡಿದ್ದಾರೆ.
ನಿಧನ *ಅನಂತಾಡಿ ಸಂಜೀವ ರೈ ನಾರ್ಯಗುತ್ತು
ಬಂಟ್ವಾಳ: ಮಾಣಿ ವಲಯ ಬಂಟರ ಸಂಘದ ಮಾಜಿ ಕಾರ್ಯದರ್ಶಿ ಶ್ರೀ ರತ್ನಾಕರ ರೈ ಗೋಳಿಕಟ್ಟೆ ಅನಂತಾಡಿ ಗ್ರಾಮ ಇವರ ತಂದೆ ಕೃಷಿಕರಾದ ಶ್ರೀ ಸಂಜೀವ ರೈ ನಾರ್ಯಗುತ್ತು(83) ಸೆ. 25ರಂದು ಗುರುವಾರ ಬೆಳಿಗ್ಗೆ 8 ಗಂಟೆಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಸೈಂಟ್ ಆ್ಯನ್ಸ್ ಫ್ರಾಯರಿಯಲ್ಲಿ ಸಂತ ಪಾದ್ರೆ ಪಿಯೋ ಅವರ ಹಬ್ಬ ಆಚರಣೆ
ಮಂಗಳೂರು: ಮಂಗಳೂರಿನ ಜೈಲ್ ರಸ್ತೆಯಲ್ಲಿರುವ ಸೈಂಟ್ ಆ್ಯನ್ಸ್ ಫ್ರಾಯರಿಯಲ್ಲಿರುವ ಸೈಂಟ್ ಪಾದ್ರೆ ಪಿಯೋ ಪುಣ್ಯ ಕ್ಷೇತ್ರದಲ್ಲಿ ಸಂತ ಪಾದ್ರೆ ಪಿಯೋ ಅವರ ಹಬ್ಬವನ್ನು ಸೆ. 23 ರಂದು ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು.‘ಸಂತ ಪಾದ್ರೆ ಪಿಯೋ: ಶಿಲುಬೆಯ ಯಾತ್ರಿಕ, ಭರವಸೆಯ ಸಂದೇಶವಾಹಕ’ ಎನ್ನುವುದು ಈ ವರ್ಷದ ಹಬ್ಬದ ಮುಖ್ಯ ವಿಷಯವಾಗಿದ್ದು, ಜಪ್ಪು ಸೈಂಟ್ ಜೋಸೆಫ್ ಸೆಮಿನರಿಯ ರೆಕ್ಟರ್ ವಂದನೀಯ ಫಾ. ಡಾ. ರಾಜೇಶ್ ರೊಸಾರಿಯೊ ಅಧ್ಯಕ್ಷತೆಯಲ್ಲಿ ಹಬ್ಬದ ಬಲಿ ಪೂಜೆ ನಡೆಯಿತು. 30 ಕ್ಕೂ ಹೆಚ್ಚು ಗುರುಗಳು ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು. ಜೋ ರೊಡ್ರಿಗಸ್ ನೇತೃತ್ವದ ಗಾಯಕವೃಂದ ಮತ್ತು ಪಾದ್ರೆ ಪಿಯೋ ಗಾಯಕ ವೃಂದ ಭಕ್ತಿ ಗೀತೆಗಳನ್ನು ಪ್ರಸ್ತುತ ಪಡಿಸಿತು.ಬಲಿ ಪೂಜೆಯ ಬಳಿಕ ಕಾಪುಚಿನ್ ಪಬ್ಲಿಕೇಶನ್ ಟ್ರಸ್ಟ್‌ನ ಬ್ಯಾನರ್ ಅಡಿಯಲ್ಲಿ ಹೊರ ತಂದಿರುವ ಚಿಕ್ಕಮಗಳೂರು ಧರ್ಮ ಪ್ರಾಂತ್ಯದ ವಂದನೀಯ ಫಾ. ಜಾರ್ಜ್ ಡಿ’ಸೋಜಾ ಅವರು ಇಂಗ್ಲಿಷ್‌ನಿಂದ ಅನುವಾದಿಸಿದ ನಂಬಿಕೆ ಆಧಾರಿತ ಪರಿಸರ ಜಾಗೃತಿ ಸಂದೇಶ ನೀಡುವ ಕೃತಿ ‘ಟೆನ್ ಗ್ರೀನ್ ಕಮಾಂಡ್‌ಮೆಂಟ್ಸ್’, ದೈನಂದಿನ ಬೈಬಲ್ – ಕ್ಯಾಪುಚಿನ್ ಬೈಬಲ್ ಡೈರಿ- 2026 ಮತ್ತು ಡಿವೈನ್ ಮರ್ಸಿ ರಿಟ್ರೀಟ್ ಸೆಂಟರ್‌ನ ಹೊಸ 2026 ಕ್ಯಾಲೆಂಡರ್ ನ್ನು ಬಿಡುಗಡೆ ಮಾಡಲಾಯಿತು.170 ಗಂಟೆಗಳ ಭರತನಾಟ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದ ಸೈಂಟ್ ಅಲೋಶಿಯಸ್ ಕಾಲೇಜಿನ ಅಂತಿಮ ವರ್ಷದ ಬಿಎ ವಿದ್ಯಾರ್ಥಿನಿ ರೆಮೋನಾ ಇವೆಟ್ ಪಿರೇರಾ ಮತ್ತು ಮಿಸ್ ಇಂಡಿಯಾ ಆಸ್ಟ್ರಲ್ 2025 ಕಿರೀಟ ಪಡೆದ ಆಶ್ನಾ ಜ್ಯುವೆಲ್ ಡಿ’ಸೋಜಾ ಅವರನ್ನು ಸನ್ಮಾನಿಸಲಾಯಿತು. ಹಬ್ಬದ ದಾನಿಗಳನ್ನು ಗೌರವಿಸಲಾಯಿತು. ಸೈಂಟ್ ಆ್ಯನ್ಸ್ ಫ್ರಾಯರಿಯ ಕಾಪುಚಿನ್ ಸಮುದಾಯದ ಗಾರ್ಡಿಯನ್ ವಂದನೀಯ ಫಾ. ಜೆರಾಲ್ಡ್ ಲೋಬೊ ಅವರು ವಂದಿಸಿದರು.









