Author name: editor

ಪ್ರಾದೇಶಿಕ ವಾರ್ತೆಗಳು

ಡಾ.ಸುಧಾಕರ ಶೆಟ್ಟಿ ಅವರಿಗೆ “ಹೊರನಾಡ ಕನ್ನಡ ರತ್ನ” ಪ್ರಶಸ್ತಿ ಪ್ರದಾನ

ಖ್ಯಾತ ಮಕ್ಕಳ ತಜ್ಞ, ಪುಣೆಯ ಬೇಬಿ ಕ್ಲಿನಿಕ್ ನ, ಮೂಡುಬಿದಿರೆ ಮೂಲದ ಡಾ.ಸುಧಾಕರ ಶೆಟ್ಟಿ ಅವರಿಗೆ ಮುಂಬಯಿಯ ಕುರ್ಲಾ ಬಂಟರ ಭವನದ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಭಾನುವಾರ ನಡೆದ “ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮ” ಕಾರ್ಯಕ್ರಮದಲ್ಲಿ “ಹೊರನಾಡ ಕನ್ನಡ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕರ್ನಾಟಕ ಸಂಘ ಅಂಧೇರಿ ಇದರ ಆಶ್ರಯದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡಾ.ಸುಧಾಕರ ಶೆಟ್ಟಿ ಅವರ ಮೂರು ದಶಕಗಳ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಯಿತು.ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ,ಹೇರಂಬ ಇಂಡಸ್ಟ್ರೀಸ್ ನ ಸಿ.ಎಂ.ಡಿ ಕನ್ಯಾನ ಸದಾಶಿವ ಶೆಟ್ಟಿ ಮತ್ತಿತರ ಪ್ರಮುಖರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ವಿಕಲಾಂಗ ಚೇತನರು ಸ್ವಾವಲಂಬಿಗಳಾಗಲು ಫ್ರೋತ್ಸಾಹ ಅಗತ್ಯ-ಡಾ.ಎಂ.ಶಾಂತರಾಮ ಶೆಟ್ಟಿ.

ಮಂಗಳೂರು:ವಿಕಲಾಂಗ ಚೇತನರು ಸ್ವಾವಲಂಬಿಗಳಾಗುವಂತಾಗಬೇಕು.ಈ ನಿಟ್ಟಿನಲ್ಲಿ ಅವರಿಗೆ ಸಮಾಜದಿಂದ ಫ್ರೋತ್ಸಾಹ ದೊರೆಯಬೇಕು ಎಂದು ನಿಟ್ಟೆ ವಿಶ್ವ ವಿದ್ಯಾನಿಲಯದ ಸಹ ಕುಲಾಧಿಪತಿ ಹಾಗೂ ಖ್ಯಾತ ವೈದ್ಯರಾದ ಡಾ.ಎಂ. ಶಾಂತರಾಮ ಶೆಟ್ಟಿ ತಿಳಿಸಿದ್ದಾರೆ.ದಕ್ಷಿಣ ಕನ್ನಡ ,ಉಡುಪಿ ಜಿಲ್ಲಾ ವಿಶಿಷ್ಟ ಚೇತನರ ಸಂಘ,ಭಾರತೀಯ ರೆಡ್‌ ಕ್ರಾಸ್ ದಕ್ಷಿಣ ಕನ್ನಡ ಶಾಖೆ,ಮಂಗಳೂರು ವಿಶ್ವವಿದ್ಯಾಲಯ ಯುವ ರೆಡ್ ಕ್ರಾಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ರವಿವಾರ ಹಮ್ಮಿಕೊಂಡ ಸಂಘದ 32ನೇ ವಾರ್ಷಿಕ ದಿನಾಚರಣೆ, ವೈದ್ಯಕೀಯ ನೆರವು ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ವಿಶಿಷ್ಟ ಚೇತನರು ಸಮಾಜದಲ್ಲಿ ತಮ್ಮ ಮಾನಸಿಕ ದೃಢತೆಯಿಂದ ಬದುಕಿದವರು.ಅವರಿಗೆ ಸ್ಫೂರ್ತಿ ನೀಡುವ,ಅವರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು. ಅವರು ಇತರರಂತೆ ಸ್ವತಂತ್ರ ವಾಗಿ ಬದುಕಲು ಶಾಶ್ವತವಾದ ನೆರವು ನೀಡುವಲ್ಲಿ ಸಾಮೂಹಿಕವಾದ ಪ್ರಯತ್ನ ಆಗಬೇಕು.ಈ ನಿಟ್ಟಿನಲ್ಲಿ ಅವರದೇ ಆದ ಒಂದು ಸಂಘವನ್ನು ನಿರ್ಮಿಸಿಕೊಂಡು ತಮ್ಮಂತೆ ಇರುವವರಿಗೆ ಪರಸ್ಪರ ಸಹಾಯ ಮಾಡುವಲ್ಲಿ 32ವರ್ಷಗಳ ಹಿಂದೆ ಸಂಘ ರಚಿಸಿರುವುದು ಶ್ಲಾಘನೀಯ.ಮೂರು ದಶಕಗಳ ಹಿಂದೆ ವೆನ್ಲಾಕ್ ಆಸ್ಪತ್ರೆಯಲ್ಲಿಕಾರ್ಯ ನಿರ್ವಹಿಸುತ್ತಿದ್ದಾಗ ಪ್ರಮಾಣ ಪತ್ರ ದಾಖಲೆ ಪಡೆಯಲು ವಿಶಿಷ್ಟ ಚೇತನರ ಬವಣೆಯನ್ನು ನಾನು ಗಮನಿಸಿ ವಿಕಾಲಾಂಗ ,ವಿಶಿಷ್ಟ ಚೇತನರಿಗೆ ಒಂದು ಸಂಘಟನೆ ಅಗತ್ಯವಿದೆ ಎನ್ನುವ ಆಸೆ ಇಂದು ಸಂಸ್ಥೆ ಬೆಳೆದು 32ನೇ ವಾರ್ಷಿಕ ಉತ್ಸವ ಆಚರಿಸುವ ಮೂಲಕ ಸಾರ್ಥಕಗೊಂಡಿದೆ.ಈ ನಿಟ್ಟಿನಲ್ಲಿ ಸಮಾಜದ ಎಲ್ಲರ ಕೊಡುಗೆ ವಿಕಲಾಂಗ ಚೇತನರು ಸ್ವಾವಲಂಬಿಗಳಾಗಿ ಬದುಕಲು ನೆರವಾಗು ತಾಗಬೇಕು ಎಂದು ಶಾಂತರಾಮ ಶೆಟ್ಟಿ ಶುಭ ಹಾರೈಸಿದರು. ಭಾರತೀಯ ರೆಡ್ ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಭಾಪತಿ ಸಿ.ಎ.ಶಾಂತರಾಮ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾ ಡುತ್ತಾ,ಸಮಾಜದಲ್ಲಿ ವಿವಿಧ ಕಾರಣಗಳಿಂದ ವಿಕಲಾಂಗರಾಗುವ ಸಂದರ್ಭದಲ್ಲಿ ಅವರನ್ನು ಅವಲಂಬಿಸಿ ಕೊಂಡಿರುವವರು ಸಂಕಷ್ಟಕ್ಕೆ ಈಡಾಗುತ್ತಾರೆ. ಈ ಸಂದರ್ಭದಲ್ಲಿ ಅಂತವರಿಗೆ ಸಹಕಾರದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಘಟಿತರಾಗಿ ಪರಸ್ಪರ ಸಹಕಾರ ನೀಡುವ ನಿಟ್ಟಿನಲ್ಲಿ ವಿಶಿಷ್ಟ ಚೇತನರ ಸಂಘದ ಕೆಲಸ ಮಹತ್ವ ಪೂರ್ಣವಾಗಿದೆ ಎಂದರು.ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ವೇದವ್ಯಾಸ ಕಾಮತ್ ಭಾಗವಹಿಸಿ ಮಾತನಾಡುತ್ತಾ, ದಿವ್ಯಾಂಗರಾದ ವ್ಯಕ್ತಿಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಂಘದ ವತಿಯಿಂದ ಸೇವಾ ಕಾರ್ಯಗಳು ನಡೆಯುತ್ತಿರುವುದು ಮತ್ತು ಅದಕ್ಕೆ ರೆಡ್ ಕ್ರಾಸ್ ನಂತಹ ಇತರ ಸಂಘಟನೆ ಗಳು ಬೆಂಬಲ ನೀಡುತ್ತಿರುವುದು ಶ್ಲಾಘ ನೀಯ. ಸಮಾಜದಲ್ಲಿ ವಿಕಲಚೇತನರು ತಮ್ಮ ಆತ್ಮ ಬಲದಿಂದ ಮಾಡುತ್ತಿರುವ ಸಾಧನೆ ಇತರರಿಗೆ ಸ್ಪೂರ್ತಿ ಎಂದರು.ಸಮಾರಂಭದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಗಣಪತಿ ಗೌಡ,ವೆನ್ಲಾಕ್ ರೆಡ್ ಕ್ರಾಸ್ ವಿಕಲಾಂಗ ಕೋಶದ ಅಧ್ಯಕ್ಷ ಡಾ.ಕೆ‌.ಆರ್.,ಮಂಗಳೂರು ವಿಶ್ವ ವಿದ್ಯಾನಿಲಯದ ಯುವ ರೆಡ್ ಕ್ರಾಸ್ ವಿಭಾಗದ ನೋಡಲ್ ಅಧಿಕಾರಿ ಡಾ.ಗಾಯತ್ರಿ, ದಕ್ಷಿಣ ಕನ್ನಡ , ಉಡುಪಿ ಜಿಲ್ಲಾ ವಿಶಿಷ್ಟ ಚೇತನರ ಸಂಘದ ಅಧ್ಯಕ್ಷ ಡಾ.ವಿ.ಮುರಳೀಧರ ಸ್ವಾಗತಿಸಿದರು.ಪ್ರದಾನ ಕಾರ್ಯದರ್ಶಿ ಜಯಪ್ರಕಾಶ್ ಫಲಾನುಭವಿಗಳ ವಿವರ ನೀಡಿದರು. ಸಮಾರಂಭದಲ್ಲಿ ಅತಿಥಿಗಳು ವಿಕಲಾಂಗರಿಗೆ ನೆರವು,ವಿದ್ಯಾರ್ಥಿ ವೇತನ ಕಾರ್ಯಕ್ರಮ ನೆರವೇರಿಸಿದರು.ದಿನಮಣಿ ರಾವ್ ಕಾರ್ಯಕ್ರಮ ನಿರೂಪಿಸಿದರು.ನಾಗೇಶ್ ಶೆಟ್ಟಿ ವಂದಿಸಿದರು.ಇದೇ ಸಂದರ್ಭದಲ್ಲಿ ವಿಕಲಾಂಗ ಚೇತನರಿಗೆ ಉಚಿತ ಆರೋಗ್ಯ ತಪಾಸಣೆ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ದೆಹಲಿಗೆ ತೆರಳುವ ಮುನ್ನ ಬಿಎಸ್‌ವೈ ಮಾರ್ಗದರ್ಶನ ಪಡೆದ ಕ್ಯಾಪ್ಟನ್ ಬ್ರಿಜೇಶ್ ಚೌಟ

ಲೋಕಸಭೆ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಬಿಜೆಪಿಯ ಸಂಸದರಿಗೆ ಹೈಕಮಾಂಡ್ ಬುಲಾವ್ ಕೊಟ್ಟಿದ್ದು ಈ ಸಭೆಯಲ್ಲಿ ಭಾಗವಹಿಸಲು ದೆಹಲಿ ಕಡೆ ಪ್ರಯಾಣ ಬೆಳೆಸಿರುವ ಮಧ್ಯದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರನ್ನು ಅವರ ಬೆಂಗಳೂರಿನ ನಿವಾಸದಲ್ಲಿ ಭೇಟಿಯಾಗಿ ರಾಜ್ಯದಲ್ಲಿ ಚುನಾವಣೆಯ ಯಶಸ್ವಿ ನಿರ್ವಹಣೆಗೆ ಅಭಿನಂದಿಸಿದರು, ಆ ಬಳಿಕ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪ ಅವರ ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿ ಅವರ ಮಾರ್ಗದರ್ಶನ ಪಡೆದರು ಇದಾದ ನಂತರ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನಕ್ಕೆ ಭೇಟಿ ನೀಡಿ ದೆಹಲಿ ಕಡೆ ಪ್ರಯಾಣಿಸಿದರು. ಎನ್ ಡಿಎ ಮೈತ್ರಿಕೂಟದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇದೇ ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದು ಈ ಸಮಾರಂಭದಲ್ಲಿ ಭಾಗವಹಿಸಿ ಮಂಗಳೂರಿಗೆ ವಾಪಸ್ ಆಗುವ ಮಾಹಿತಿ ಇದೆ.

ಪ್ರಾದೇಶಿಕ ವಾರ್ತೆಗಳು

“ಫೌಟ್ ಲೈಕ್ ಎ ಲಯನ್” ಎಂದು ಪದ್ಮರಾಜ್ ಅವರನ್ನು ಶ್ಲಾಘಿಸಿದ ರಾಷ್ಟ್ರೀಯ ಕಾಂಗ್ರೆಸ್ ನಾಯಕರು.ಜನಪರವಾಗಿ ಸಾಗುವೆನೆಂದ ಪದ್ಮರಾಜ್.

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸೋತಿರಬಹುದು. ಆದರೆ, ಶೇಕಡವಾರು ಮತದಾನದ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ನಿನ್ನೆ ರಾಷ್ಟ್ರೀಯ ನಾಯಕರು ಕರೆ ಮಾಡಿ ಶ್ಲಾಘಿಸಿ, ನನ್ನ ಸ್ಪರ್ಧೆ ಬಗ್ಗೆ “ಫೈಟ್ ಲೈಕ್ ಎ ಲಯನ್” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಪದ್ಮರಾಜ್ ಆರ್. ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಟಿಕೇಟ್ ಘೋಷಣೆ ವೇಳೆ ಇಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ವಾತಾವರಣವಿತ್ತು. ಆದರೆ, ಕಾಂಗ್ರೆಸ್ ಉತ್ತಮವಾಗಿ ಹೋರಾಟ ಮಾಡಿ ಗಮನ ಸೆಳೆದಿದೆ.ಈ ಸಲ ಕಾಂಗ್ರೆಸ್ 6,14,924 ಮತಗಳನ್ನು ಪಡೆದ ಶೇ. 43.43 ಸಾಧನೆ ಮಾಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 4,99,664 ಮತಗಳನ್ನು ಪಡೆದು ಶೇ. 37.14 ದಾಖಲಿಸಿತ್ತು.ಸೋಲಿನ ನೈತಿಕ ಹೊಣೆ ನಾನೇ ಹೊರುತ್ತೇನೆ. ಇದು ಅಂತ್ಯವಲ್ಲ. ಆರಂಭ. ಮುಂದಿನ ದಿನಗಳಲ್ಲಿಯೂ ಪಕ್ಷದಲ್ಲಿ ಸಕ್ರಿಯವಾಗಿ ಜನಪರವಾಗಿ, ಸೌಹಾರ್ದದಿಂದ ತೊಡಗಿಸಿಕೊಳ್ಳುತ್ತಾ ಬೂತ್ ಮಟ್ಟದಿಂದಲೇ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವತ್ತ ಸಾಗುತ್ತೇನೆ ಎಂದು ಪದ್ಮರಾಜ್ ಆರ್. ಪೂಜಾರಿ ಹೇಳಿದರು.ಈ ಚುನಾವಣೆಯಲ್ಲಿ ಪಕ್ಷದ ಕಾರ‍್ಯಕರ್ತರ, ನಾಯಕರ ಬೆಂಬಲವನ್ನು ಮರೆಯುವಂತಿಲ್ಲ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆಂದವರು ನುಡಿದರು. ಈ ಸಲ ಕಾಂಗ್ರೆಸ್ ಸೋತರೂ ನೈತಿಕವಾಗಿ ನಾವು ಗೆದ್ದಿದ್ದೇವೆ. ಬಿಜೆಪಿ ನೈತಿಕವಾಗಿ ಸೋತಿದೆ. ಮುಂದೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮಂಗಳೂರು ನಗರಪಾಲಿಕೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪ್ರಬಲ ಸ್ಪರ್ಧೆ ನೀಡಲಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಶಾಹುಲ್ ಹಮೀದ್, ಶುಭೋದಯ ಆಳ್ವ, ಅಶ್ರಫ್, ಲ್ಯಾನ್ಸಿಲೋಟ್ ಪಿಂಟೋ, ಸಂಶುದ್ದೀನ್, ಅಬ್ದುಲ್ ಲತೀಫ್, ಅಬುಲ್ ಖಾದರ್, ಅಬ್ದುಲ್ ರವೂಫ್, ಕೇಶವ ಮರೋಳಿ, ಸುಹಾನ್ ಆಳ್ವ, ನಜೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಭರವಸೆಯ ಬೆಳಕಾದ ಪದ್ಮರಾಜ್ ಆರ್. ಪೂಜಾರಿ

ಲೋಕಸಭೆ ಚುನಾವಣೆಯಲ್ಲಿ ಸೋತರೂ ಧೃತಿಗೆಡದೆ ಮತ್ತೆ ಸಮಾಜಮುಖಿ ಸೇವೆಯಲ್ಲಿ ತೊಡಗಿದ್ದಾರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷರಾದ ಪದ್ಮರಾಜ್ ಆರ್.ಪೂಜಾರಿ.ನಾನು ಬಡವರ ಕಣ್ಣೀರೊರೆಸುವ ಕಾರ್ಯ ಮಾಡಬೇಕು ಎನ್ನುವ ಮನದಾಸೆಯಿಂದ ಇತ್ತೀಚೆಗೆ ನಿಧನರಾದ ಕೊಡಿಪ್ಪಾಡಿ ಗ್ರಾಮದ ಬಟ್ರುಪ್ಪಾಡಿ ನಿವಾಸಿ, ಆಟೋಚಾಲಕ ದಿ.ಅನಿಲ್ ಪೂಜಾರಿಯವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುವುದರ ಜತೆಗೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಗುರುಬೆಳದಿಂಗಳು ಫೌಂಡೇಶನ್ ಮೂಲಕ ಧನಸಹಾಯ ನೀಡಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಭರವಸೆಯ ಮಾತು ಹೇಳಿ ಮಾದರಿ ರಾಜಕಾರಣಿಯಾಗಿದ್ದಾರೆ.ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ.ರಾಜಾರಾಂ, ಹಿಂದುಳಿದ ವರ್ಗ ಬ್ಲಾಕ್ ಅಧ್ಯಕ್ಷ ಮೋಹನ್ ಗುರ್ಜಿನಡ್ಕ, ಕೊಡಿಪ್ಪಾಡಿ ವಲಯ ಅಧ್ಯಕ್ಷ ಕೇಶವಪೆಲತ್ತಡಿ, ಪ್ರವೀಣ್ ಶೆಟ್ಟಿ ಅಳಕೆಮಜಲು, ನೌಷಾದ್, ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀಪ್ರಸಾದ್‌ ಪಾಣಾಜೆ, ದಾಮೋದರ ಮುರ, ನಗರಸಭಾ ಸದಸ್ಯ ರಿಯಾಜ್ ಪರ್ಲಡ್ಕ, ಶರತ್ ಕೇಪುಳು, ಯಂಗ್ ಬ್ರಿಗೆಡ್ ರಾಜ್ಯಾಧ್ಯಕ್ಷ ಜುನೈದ್ ಪಿ.ಕೆ, ಮೆಸ್ಕಾಂ ಸಲಹಸ ಸಮಿತಿ ಸದಸ್ಯರಾದ ಚಂದ್ರಶೇಖರ ಕಲ್ಲಗುಡ್ಡೆ, ಚಂದ್ರ ಅರ್ಕ ಉಪಸ್ಥಿತರಿದ್ದರು.

ರಾಷ್ಟ್ರೀಯ ವಾರ್ತೆಗಳು

ಜೂನ್ 8 ರ ರಾತ್ರಿ 8 ಗಂಟೆಗೆ ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ.

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ನೀಡಿದ್ದು, ರಾಷ್ಟ್ರಪತಿಯವರು ರಾಜೀನಾಮೆ ಅಂಗೀಕರಿಸಿದ್ದಾರೆ. ಪ್ರಸುತ್ತ ಮೋದಿಯವರು ಹಂಗಾಮಿ ಪ್ರಧಾನಿಯಾಗಿ ಮುಂದುವರಿಯಲಿದ್ದು, ಜೂನ್ 8 ರ ಶನಿವಾರ ರಾತ್ರಿ 8 ಗಂಟೆಗೆ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆ ಅಭೂತಪೂರ್ವ ಜಯ ದೊರೆತಿದೆ-ನಳಿನ್ ಕುಮಾರ್ ಕಟೀಲ್

ಮಂಗಳೂರು, ಜೂ.4: ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಮತ್ತೊಮ್ಮೆ ಅಭೂತಪೂರ್ವ ಜಯ ದೊರೆತಿದೆ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮಾಧ್ಯಮ ಪ್ರತಿದಿನಗಳ ಜೊತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಮುಂದೆ ಕ್ಯಾಬೃಜೇಶ್ ಚೌಟರ ನೇತೃತ್ವದಲ್ಲಿ ಎಲ್ಲರ ಸಹಕಾರದೊಂದಿಗೆ ಮುಂದುವರಿಯುವ ವಿಶ್ವಾಸವಿದೆ. ರಾಜ್ಯದಲ್ಲಿಯೂ ನಿರೀಕ್ಷೆ ಯಂತೆ ಬಿಜೆಪಿ 17ಕ್ಷೇತ್ರದಲ್ಲಿ ಜಯಗಳಿಸಿದೆ.ದೇಶದಲ್ಲಿ ಎನ್ ಡಿಎ ನೇತೃತ್ವದ ಸರಕಾರ ರಚನೆಯಾಗಲಿದೆ. 295 ಕ್ಷೇತ್ರ ಗಳಲ್ಲಿ ಮತದಾರರು ಎನ್ ಡಿಎ ಸರಕಾರವನ್ನು ಬೆಂಬಲಿಸಿದ್ದಾರೆ. ಇದರಿಂದಾಗಿ ಸರಳ ಬಹುಮತದೊಂದಿಗೆ ಮತ್ತೊಮ್ಮೆ ಎನ್ ಡಿಎ ಸರಕಾರ ಅಧಿಕಾರ ಪಡೆದಿದೆ.ಕೇರಳ ರಾಜ್ಯದಲ್ಲಿ ನಾನು ಚುನಾವಣಾ ಕೆಲಸಲ್ಲಿ ತೊಡಗಿಸಿಕೊಂಡಿರುತ್ತೇನೆ. ಈ ಬಾರಿ ಪ್ರಥಮ ಬಾರಿಗೆ ತ್ರಿಶೂರಿನಲ್ಲಿ ಬಿಜೆಪಿ ಖಾತೆ ತೆರೆದಿರುವುದಕ್ಕೆ ಕಾರಣರಾದ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸುದ್ದಿ ಗಾರರಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Scroll to Top