Author name: editor

ಪ್ರಾದೇಶಿಕ ವಾರ್ತೆಗಳು

ಧೈರ್ಯವಾಗಿ ಮುನ್ನುಗ್ಗಲು ಡಿಜಿಟಲ್ ಕ್ರಾಂತಿ ಮಾಧ್ಯಮ ಕ್ಷೇತ್ರಕ್ಕೆ ಶಕ್ತಿ ತುಂಬಿದೆ: ಜಿಲ್ಲಾ ಪತ್ರಕರ್ತರ ಸಮ್ಮೇಳನದ ಅಧ್ಯಕ್ಷ ಶಿವಸುಬ್ರಹ್ಮಣ್ಯ ಕೆ. ಅಭಿಮತ

ಮಂಗಳೂರು: ಆಧುನಿಕ ಯುಗದಲ್ಲಿ ನಡೆದಿರುವ ಡಿಜಿಟಲ್ ಕ್ರಾಂತಿಯ ಮಾಧ್ಯಮ ಯುಗದಲ್ಲಿ ಪತ್ರಿಕೋದ್ಯಮದ ಉಳಿವಿನ ಬಗ್ಗೆ ಹಲವು ಸಂಪಾದಕರಿಗೆ ಭಯ ಶುರು ಆಗಿದೆ. ಆದರೆ ಡಿಜಿಟಲ್ ಆಗಿ ಧೈರ್ಯದಿಂದ ಮುನ್ನುಗ್ಗುವ ಅವಕಾಶವನ್ನು ಡಿಜಿಟಲ್ ಕ್ರಾಂತಿ ಮಾಧ್ಯಮಗಳಿಗೆ ನೀಡಿದೆ ಎಂದು ಹಿರಿಯ ಪತ್ರಕರ್ತರಾದ ಶಿವಸುಬ್ರಹ್ಮಣ್ಯ ಕೆ. ಹೇಳಿದ್ದಾರೆ.ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ‌ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 5ನೇ జిಲ್ಲಾ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪತ್ರಿಕೋದ್ಯಮದ ತಮ್ಮ ಅನುಭವಗಳನ್ನು ಬಿಚ್ಚಿಟ್ಟ ಅವರು ಕಂಪೆನಿ ಕಲ್ಚರ್‌ಗೆ ಒಗ್ಗಿಕೊಳ್ಳಲು ಆಗದ ಕಾರಣ ಪತ್ರಿಕೋದ್ಯಮದಿಂದ ನಿರ್ಗಮಿಸಬೇಕಾಯುತು ಎಂದರು.ಪತ್ರಿಕಾಲಯದಲ್ಲಿ ಇರುವ ಕೆಲವೊಂದು ಕೆಟ್ಟ ನಡವಳಿಕೆಗಳು ಸುಸಂಸ್ಕೃತ ಪತ್ರಕರ್ತರನ್ನು ದೂರ ಮಾಡುವ ಅಪಾಯ ಇದೆ ಎಂದು ಹೇಳಿದರು.ಪತ್ರಿಕೋದ್ಯಮ ಪ್ರವೇಶ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬ ಯುವಪತ್ರಕರ್ತರ ಮುಂದೆ ಅದ್ಭುತ ಲೋಕ ತೆರೆದುಕೊಳ್ಳುತ್ತದೆ. ಹೊರಗಡೆ ಚೆನ್ನಾಗಿ ಕಂಡರೂ ಹಲವೆಡೆ ಒಳಗಿನ ವಾತಾವರಣ ಕಲುಷಿತವಾಗಿದೆ. ಪತ್ರಕರ್ತರಲ್ಲಿ ಗುಂಪುಗಾರಿಕೆ, ಹಣದ ಹಪಹಪಿ ಹೆಚ್ಚಾಗಿದೆ. ಪತ್ರಕರ್ತರನ್ನು ವ್ಯವಸ್ಥಿತವಾಗಿ ಮುಗಿಸುವ ಷಡ್ಯಂತ್ರವೂ ನಡೆಯುತಿದೆ. ಕನ್ನಡದ ಪತ್ರಿಕೋದ್ಯಮದ ಅವನತಿಗೆ ಈ ರೀತಿಯ ಬೆಳವಣಿಗೆ ಕಾರಣವಾಗಬಹುದು ಎಂದು ಹೇಳಿದರು. ಆದರೆ ಕ್ರಿಯಾಶೀಲವಾಗಿರುವ ಯುವ ಪತ್ರಕರ್ತರಿಗೆ ಸಾಕಷ್ಟು ಅವಕಾಶ ಇದೆ. ಮೊದಲು ನಿಮ್ಮ ಗುರಿಯನ್ನು ನಿಗದಿಪಡಿಸಿ, ಉದ್ಯೋಗದಲ್ಲಿ ಶಿಸ್ತು, ಬದ್ಧತೆ, ಅರ್ಪಣಾ ಮನೋಭಾವದಿಂದ ಕೆಲಸ ಮಾಡಿ, ಪ್ರಾದೇಶಿಕ ಭಾವನೆ, ಗುಂಪುಗಾರಿಕೆ, ಜಾತೀಯ ಮನೋಭಾವ ಬೇಡ. ಪತ್ರಿಕಾಲಯದಲ್ಲಿ ನಿಮಗೆ ಮಾರ್ಗದರ್ಶನ ಮಾಡುವವರ ಗುಂಪಿಗೆ ಸೇರಿಕೊಳ್ಳಿ ಎಂದು ಕರೆ ನೀಡಿದರು. ವಿಶ್ವಾಸಾರ್ಹತೆ ಮುಖ್ಯ ಎಂದ ಅವರು ವಿಶ್ವಾಸಾರ್ಹತೆ ಇಲ್ಲದಿದ್ದರೆ ಯಾವುದೇ ಮಾಧ್ಯಮ ಉಳಿಯಲು ಸಾಧ್ಯವಿಲ್ಲ ಎಂದರು. ಚಿಕ್ಕ ವಯಸ್ಸಿನಲ್ಲಿ ಪತ್ರಿಕೆಯನ್ನು ಓದುವುದರಿಂದ ಪತ್ರಿಕೆ ಓದುವ ಸುಖ ಸಿಗಲು, ಆಸಕ್ತಿ ಹೆಚ್ಚಲು ಸಾಧ್ಯ ಎಂದರು. ಒಂದು ಸರಕಾರ ಮಾಡುವ ಕೆಲಸವನ್ನು ಕಾರ್ಯನಿರತ ಪತ್ರಕರ್ತರ ಸಂಘ ಮಾಡುತಿದೆ ಎಂದು ಶ್ಲಾಘಿಸಿದ ಅವರು ಶಿವಾನಂದ ತಗಡೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಳಿಕ ಸಂಘಕ್ಕೆ ಹೊಸ ಇಮೇಜ್ ತಂದರು. ಜಿಲ್ಲಾ ಸಂಘಗಳು ಕೂಡ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತಿವೆ. ಪತ್ರಕರ್ತರ ಮುಂದಿನ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಅವರು ಹೇಳಿದರು.ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಶಿವಸುಬ್ರಹ್ಮಣ್ಯ ಕೆ.ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಕಲೆ ಸಾಹಿತ್ಯ, ಪ್ರಾದೇಶಿಕ ವಾರ್ತೆಗಳು

ನಾ ಕಂಡ ಉಪೇಂದ್ರ. ‘ಎ’ಯಿಂದ U. I. ತನಕ

ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ ಬಿ.ಎನ್.ಮಂಗಳೂರು:1998ರಲ್ಲಿ ಉಪೇಂದ್ರ ಚಿತ್ರದ ಚಿತ್ರೀಕರಣ ಬ್ರಹ್ಮರಕೂಟ್ಲು ಸಮೀಪದ ತುಂಬೆ ರಾಮಲ್‌ಕಟ್ಟೆ ಆಲದ ಮರದ ಸುತ್ತ ನಡೆಯುತ್ತಿತ್ತು. ಆಗ ನಾನು ಉಪೇಂದ್ರರವರನ್ನು ಭೇಟಿಯಾಗಿ ಈ ಚಿತ್ರದ ಹೀರೋ ಯಾರು ಎಂದು ಕೇಳಿದೆ.  ಉಪೇಂದ್ರರವರು ‘ನಾನು’ ಅಂತ ಹೇಳಿದರು. ಆದರ ನಂತರ ವಿಲನ್ ಯಾರು ಎಂದು ಕೇಳಿದೆ. ಆಗ ಉಪೇಂದ್ರರವರು ‘ನಾನು’ ಎಂದು ಹೇಳಿದರು.  ಯಾವುದೇ ಪ್ರಶ್ನೆಯನ್ನು ಕೇಳಿದರೂ ಉಪೇಂದ್ರರವರು ನಾನು, ನಾನು ಎನ್ನುತ್ತಲೇ ಇದ್ದರು. ನನಗೆ ಏನೆಂದೇ ಅರ್ಥವಾಗಲಿಲ್ಲ. ಉಪೇಂದ್ರ ಚಿತ್ರ ನೋಡಿದ ಮೇಲೆ ಉಪೇಂದ್ರರವರು ಮನುಷ್ಯನ ಒಳಗಿರುವ ‘ನಾನು ‘ಎಂಬ ಅಹಂಕಾರದ ಬಗ್ಗೆ ಕಥೆ ಹೆಣೆದು ಚಿತ್ರ ಸಂದೇಶ ನೀಡಿದ್ದರು. ಉಪೇಂದ್ರರವರ ಎಲ್ಲಾ ಚಿತ್ರಗಳು ‘ಎ ’ ಯಿಂದ ಆರಂಭಿಸಿ ವಿಶಿಷ್ಟ ಡೈಲಾಗ್ ಮತ್ತು ಮ್ಯಾನರೀಸಂನಿಂದ ಪ್ರೇಕ್ಷಕರನ್ನು ತಲುಪುತ್ತವೆ.ಪ್ರಸ್ತುತ ಉಪೇಂದ್ರರವರ ‘U.I’ ಐದು ಭಾಷೆಗಳಲ್ಲಿ ತಯಾರಾಗಿದ್ದು,ಡಿಸೆಂಬರ್ 20ರಂದು ರಾಜ್ಯಾದಾದ್ಯಂತ ಬಿಡುಗಡೆಗೊಳ್ಳಲಿದೆ.ಉಪೇಂದ್ರರವರು ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದಾಗ ಭಾಗವಹಿಸಿ ನಾಲ್ಕು ಪ್ರಶ್ನೆಗಳನ್ನು ಕೇಳಿದ್ದೆ.ಮೊದಲನೆಯದು, ‘U.I’ ಚಿತ್ರ ಡಿಸೆಂಬರ್ 20ಕ್ಕೆ ಬಿಡುಗಡೆಯಾಗುತ್ತದೆ. ಇದರ ಬೆನ್ನಲ್ಲೇ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರ ಡಿಸೆಂಬರ್ 25ಕ್ಕೆ ಬಿಡುಗಡೆಯಾಗುತ್ತದೆ. ಬೆನ್ನು ಬೆನ್ನಿಗೆ ದೊಡ್ಡ ಬಜೆಟ್‌ನ ಚಿತ್ರಗಳು ಬಿಡುಗಡೆಗೊಂಡರೆ ಸಮಸ್ಯೆಯಾಗುವುದಿಲ್ಲವೇ ಎಂದು ಕೇಳಿದಾಗ, ಉಪೇಂದ್ರರವರು ನನ್ನ ಚಿತ್ರದ ಪ್ರೇಕ್ಷಕರು ನನ್ನ ಚಿತ್ರವನ್ನು ನೋಡುತ್ತಾರೆ. ಇದರಿಂದ ನಮಗೇನೂ ಸಮಸ್ಯೆ ಇಲ್ಲ ಎಂದರು. ಎರಡನೆಯದಾಗಿ, ‘ಎ ’ ಚಿತ್ರದ ಉಪೇಂದ್ರನಿಗೂ ‘U.I’ ಚಿತ್ರದ ಉಪೇಂದ್ರನಿಗೂ ಇರುವ ವ್ಯತ್ಯಾಸ ಏನೆಂದು ಕೇಳಿದೆ. ಆಗ ಅವರು ನೀವು ‘U.I’ ಚಿತ್ರವನ್ನು ನೋಡಿ ಗೊತ್ತಾಗುತ್ತದೆ ಎಂದರು.ಮೂರನೆಯದಾಗಿ, ಈಗ ಥಿಯೇಟರುಗಳಿಗೆ ಬಂದು ಚಿತ್ರ ನೋಡುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆಯಲ್ಲವೇ ಎಂದು ಕೇಳಿದೆ. ಆಗ ಉಪೇಂದ್ರರವರು ಉತ್ತಮ ಗುಣಮಟ್ಟದ ಸ್ವಾರಸ್ಯಕರ ಕಥೆಯಿರುವ ಚಿತ್ರವನ್ನು ಪ್ರೇಕ್ಷಕರು ಖಂಡಿತಾ ಥಿಯೇಟರಿಗೆ ಬಂದು ನೋಡುತ್ತಾರೆ. ಕನ್ನಡ ಚಿತ್ರ ಪ್ರೇಮಿಗಳು ಎಂದಿಗೂ ಕನ್ನಡ ಚಿತ್ರವನ್ನು ಸೋಲಲು ಬಿಡುವುದಿಲ್ಲವೆಂದರು.ನಾಲ್ಕನೇಯದಾಗಿ, ನೀವು ಪ್ರಜಾಕೀಯ ರಾಜಕೀಯದ ಮೂಲಕ ರಾಜಕೀಯ ಪಕ್ಷ ಕಟ್ಟಿದವರು. ಅದು ಈಗ ಯಾವ ಹಂತದಲ್ಲಿದೆ. ಎಂದು ಕೇಳಿದೆ. ಆಗ ಉಪೇಂದ್ರರವರು ನಾನು ಯಾವುದೇ ರಾಜಕೀಯ ಪಕ್ಷ ಕಟ್ಟಿಲ್ಲ. ಅದು ನನ್ನ ರಾಜಕೀಯ ಚಿಂತನೆ ಸಿದ್ಧಾಂತಗಳಷ್ಟೇ. ಯಾವುದಕ್ಕೂ ‘U.I’ ಪಿಕ್ಚರ್ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದರು.ಉಪೇಂದ್ರರವರ ‘U.I’ ಬಹು ಭಾಷಾ ಚಿತ್ರ ಯಶಸ್ವಿಯಾಗಲೆಂದು Mp mla’s ನ್ಯೂಸ್ ಶುಭ ಹಾರೈಸುತ್ತದೆ.ಚಿತ್ರಗಳು: ಸತೀಶ್ ಕಾಪಿಕಾಡ್, ಸುರೇಶ್ ಪಂಡಿತ್ ಮತ್ತು ರಾಜೇಶ್ ಅಮೀನ್ ಮುಲ್ಕಿ

ಪ್ರಾದೇಶಿಕ ವಾರ್ತೆಗಳು

ಭಟ್ರಕುಮೇರು: ಡಿಸೆಂಬರ್ 8ರಂದು ತೃತೀಯ ವರ್ಷದ ಪ್ರತಿಷ್ಠಾವರ್ಧಂತಿ ಹಾಗೂ ಕೋಲ ಸೇವೆ.

ಮಂಗಳೂರು: ನಗರದ ಪದವಿನಂಗಡಿ ಸಮೀಪದ ಭಟ್ರಕುಮೇರು ಸ್ವಾಮಿ ಕೊರಗ ತನಿಯ ಸಾನಿಧ್ಯದಲ್ಲಿ ಸ್ವಾಮಿ ಕೊರಗ ತನಿಯ ದೈವದ ತೃತೀಯ ವರ್ಷದ ಪ್ರತಿಷ್ಠಾವರ್ಧಂತಿ ಹಾಗೂ ಕೋಲ ಸೇವೆಯು ಸಾನಿಧ್ಯದ ಯಜಮಾನರು ಹಾಗೂ ದೈವಾರಾಧಕರಾದ ಭಾಸ್ಕರ ಬಂಗೇರ ಇವರ ನೇತ್ರತ್ವದಲ್ಲಿ ಇದೇ ಬರುವ ಡಿಸೆಂಬರ್ 8ನೇ ಅದಿತ್ಯವಾರದಂದು ಬೆಳಿಗ್ಗೆ 6 ಗಂಟೆಗೆ ತಂತ್ರಿಗಳಾದ ರವಿ ಆನಂದ ಶಾಂತಿ ಆಡುಮರೋಳಿ ಇವರ ಮಾರ್ಗದರ್ಶನದಲ್ಲಿ ಜರುಗಲಿದೆ.ಅಂದು ಬೆಳಿಗ್ಗೆ 6ರಿಂದ ಪಂಚಗವ್ಯಶುದ್ಧಿ, ಸ್ವಸ್ತಿಪುಣ್ಯಹ, ಮಹಾಗಣಪತಿ ಹೋಮ ಸಾನಿಧ್ಯಕಲಶ, ಪ್ರಸನ್ನ ಸೇವೆ ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಗಂಧಕಾಡು ಇವರಿಂದ ಭಜನ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಸ್ವಾಮಿ ಕೊರಗ ತನಿಯ ದೈವದ ಕೋಲ ಸೇವೆ ಜರುಗಲಿದೆ. ಮಧ್ಯಾಹ್ನ 12.30ಕ್ಕೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ. ಮಧ್ಯಾಹ್ನ 1 ಗಂಟೆಯಿಂದ ಶ್ರೀಮತಿ ವಿಜಯ ಭಾಸ್ಕರ್ ಮತ್ತು ಗಣೇಶ್ ಮಂಗಳೂರು ಇವರಿಂದ “ಭಕ್ತಿಗಾನ ಸುಧೆ” ಸಂಜೆ 4 ಗಂಟೆಯಿಂದ “ಸ್ಪೂರ್ತಿ ಮಹಿಳಾ ಭಜನಾ ಮಂಡಳಿ” ಪದವಿನಂಗಡಿ ಮತ್ತು ಶ್ರೀ ನಾರಾಯಣಗುರು ಸೇವಾಸಂಘ, ಮೇರಿಹಿಲ್, ಗುರುನಗರ ಇವರಿಂದ ” ಭಜನೆ ಹಾಗೂ ಹರಿನಾಮ ಸಂಕೀರ್ತನೆ ನಡೆಯಲಿದೆ. ಸಂಜೆ 7 ಗಂಟೆಗೆ ಅಗೆಲು ಸೇವೆ ನಡೆಯಲಿದ್ದು, ಬಳಿಕ ಅನ್ನಸಂತರ್ಪಣೆ ನೆರವೇರಲಿದೆ.ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕರಿಗಂಧ ಸ್ವೀಕರಿಸಿ, ಸ್ವಾಮಿ ಕೊರಗ ತನಿಯ ದೈವದ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಕ್ಷೇತ್ರದ ಸೇವಾಕರ್ತರುಗಳಾದ ಪೂಜ್ಯ ಮಾತಶ್ರೀ ವಿಮಲಾ ಹಾಗೂ ಶ್ರೀಮತಿ ವಿಜಯ ಭಾಸ್ಕರ ಬಂಗೇರ ಇವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ವಾರ್ತೆಗಳು

ಆಯುಷ್ ಇಲಾಖೆ ಸರಕಾರಿ ನೌಕರ ಲಯನ್ ರಾಜೇಶ್ ಅಮೀನ್ ಮುಲ್ಕಿ ಅವರಿಗೆ ಡಾ. ಬಿ. ಆರ್. ಅಂಬೇಡ್ಕರ್ ಫೆಲೋಶಿಫ್ ನ್ಯಾಷನಲ್ ಅವಾರ್ಡ್

ದೆಹಲಿ: ಭಾರತೀಯ ದಲಿತ್ ಸಾಹಿತ್ಯ ಅಕಾಡೆಮಿ ನವದೆಹಲಿ ಇದರ ವತಿಯಿಂದ ನಡೆಯುವ 38ನೇ ದಲಿತ ಬರಹಗಾರ ರಾಷ್ಟ್ರೀಯ ಸಮ್ಮೇಳನದಲ್ಲಿ ಆಯುಷ್ ಇಲಾಖೆ ಸರಕಾರಿ ನೌಕರ, ಲಯನ್ ಸ್ಮಾರ್ಟ್ ಸಿಟಿ ಮಂಗಳೂರು ಇದರ ಸದಸ್ಯ, ಹಾಯ್ ತುಳುನಾಡು ಪತ್ರಿಕೆ ಸಂಪಾದಕ, ತುಳುನಾಡು ಪ್ರತಿಷ್ಠಾನ (ರಿ) ಮೂಲ್ಕಿ ಇದರ ಸ್ಥಾಪಕಾಧ್ಯಕ್ಷರಾದ ರಾಜೇಶ್ ಅಮೀನ್ ಮುಲ್ಕಿ ಅವರಿಗೆ ಬಡವರ ಹಸಿವನ್ನು ನೀಗಿಸುವಲ್ಲಿ ಮಾಡಿರುವ ಕಾರ್ಯ, ಆಪತ್ತಿನಲ್ಲಿರುವವರಿಗೆ ಸಹಾಯ ಮಾಡಿರುವುದಕ್ಕೆ ಇವರು ಸಲ್ಲಿಸಿದ ಅನನ್ಯ ಸೇವೆಯನ್ನು ಪರಿಗಣಿಸಿ ಡಾ. ಬಿ.ಆರ್. ಅಂಬೇಡ್ಕರ್ ಫೆಲೋಶಿಪ್ ನ್ಯಾಷನಲ್ ಅವಾರ್ಡ್ -2024ನ್ನು ಡಿಸೆಂಬರ್ 8 ರಂದು ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ನೀಡಲಾಗುವುದು.

ಪ್ರಾದೇಶಿಕ ವಾರ್ತೆಗಳು

ಆಳ್ವಾಸ್ ಮೆಡಿಕಲ್ ಫೌಂಡೇಶನ್ ನಲ್ಲಿ ವಿಶೇಷ ಉಪನ್ಯಾಸಗೈದ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿ (ಪುಣೆ)

ಮೂಡಬಿದ್ರಿ: ಆಳ್ವಾಸ್ ಮೆಡಿಕಲ್ ಫೌಂಡೇಶನ್‍ನಲ್ಲಿ “Rational (Ethical) pediatric Praticise’ ಈ ವಿಷಯದ ಬಗ್ಗೆ ಮೂಡಬಿದ್ರಿ ಆಳ್ವಾಸ್ ಸೆಮಿನರ್ ಹಾಲ್‍ನಲ್ಲಿ ಡಿ. 2ರಂದು ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿ (ಪುಣೆ) ಅವರು ವಿಶೇಷ ಉಪನ್ಯಾಸಗೈದರು. ಇದರಲ್ಲಿ 200 ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಆಳ್ವಾಸ್ ಆಯುರ್ವೇದ ಮತ್ತು ಹೋಮಿಯೋಪಥಿ ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಪಾಲ್ಗೊಂಡರು. ಮಕ್ಕಳ ಅಭ್ಯಾಸದಲ್ಲಿ ನೈತಿಕ ಮಾರ್ಗ ಕುರಿತಾದ ಉಪನ್ಯಾಸ ಇದಾಗಿತ್ತು. ಪ್ರತೀ ಎರಡು ತಿಂಗಳಿಗೊಮ್ಮೆ ಪುಣೆಯಿಂದ ಮೂಡಬಿದ್ರೆಗೆ ಬಂದು ಆಳ್ವಾಸ್ ಮೆಡಿಕಲ್ ಕಾಲೇಜಿನಲ್ಲಿ ಉಪನ್ಯಾಸ ನೀಡುತ್ತಾ ಬಂದಿರುವ ಡಾ. ಸುಧಾಕರ ಶೆಟ್ಟಿಯವರು ಮೂಡಬಿದ್ರೆಯಲ್ಲಿ ಗ್ರಾಮೀಣ ಪರಿಸರದಲ್ಲಿ ಸಂಚಾರಿ ಮಕ್ಕಳ ಮೊಬೈಲ್ ಕ್ಲಿನಿಕ್ ಅನ್ನು ಕೂಡ ನಡೆಸುತ್ತಾ ಬಂದಿದ್ದಾರೆ. ಆಳ್ವಾಸ ವಿದ್ಯಾರ್ಥಿಗಳಿಗೆ ಸಮುದಾಯ ಮತ್ತು ಗ್ರಾಮೀಣ ಮಕ್ಕಳ ವೈದ್ಯಕೀಯದ ಬಗ್ಗೆ ಡಾ. ಸುಧಾಕರ ಶೆಟ್ಟಿಯವರು ವಿಶೇಷ ಉಪನ್ಯಾಸ ನೀಡುತ್ತಾ ಬಂದಿದ್ದಾರೆ. ಡಾ. ಸುಧಾಕರ ಶೆಟ್ಟಿಯವರ ಉಪನ್ಯಾಸಕ್ಕೆ ಡಾ. ಮೋಹನ ಆಳ್ವರವರು ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ.ಡಾ. ಸುಧಾಕರ ಶೆಟ್ಟಿಯವರಿಗೆ ಈ ಹಿಂದೆ ಹೊರನಾಡ ಕನ್ನಡ ರತ್ನ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ -2022, ಚಾರ್ ಸಹಿಬಜಾದೆ ಅವಾರ್ಡ್ ದೊರಕಿರುತ್ತದೆ. ಅಷ್ಟೇ ಅಲ್ಲದೆ ಅವರು ಸತತ ನಾಲ್ಕು ಬಾರಿ ಕೇಂದ್ರ ಸರಕಾರದ ರಕ್ಷಾ ಮಂತ್ರಿ ಅವಾರ್ಡ್ ಪುರಸ್ಕೃತ ವೈದ್ಯಕೀಯ ತಂಡದ ಸದಸ್ಯರಾಗಿದ್ದಾರೆ.

ಕರ್ನಾಟಕ ವಾರ್ತೆಗಳು

ಮೈಸೂರಿನ ಲೇಖಕ, ಸಾಮಾಜಿಕ ಚಿಂತಕ ಎನ್.ವಿ. ರಮೇಶ್ ಅವರ 74 ರ ಜನ್ಮ ದಿನಾಚರಣೆ

ಮೈಸೂರು: ಎನ್. ವಿ. ರಮೇಶ್ ಅವರ 74ನೇ ಹುಟ್ಟುಹಬ್ಬದ ಅಂಗವಾಗಿ ಮೈಸೂರಿನ ನಮನ ಕಲಾ ಮಂಟಪದಲ್ಲಿ ರಾಜ್ಯದ ಲೇಖಕರಿಗೆ ನಡೆಸಲಾದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಹಾಗು ಲೇಖಕರಿಗೆ “ನಾನೇಕೆ ಬರೆಯುತ್ತೇನೆ ” ಎಂಬ ವಿಷಯದ ಕುರಿತಾದ ವಿಚಾರ ಸಂಕಿರಣವು ಡಿ. 1ರ ಭಾನುವಾರದಂದು ನಡೆಯಿತು.ಕಾರ್ಯಕ್ರಮದಲ್ಲಿ ಮಂಗಳೂರಿನ ಲೇಖಕಿ , ಕವಯತ್ರಿ, ಶಿಕ್ಷಕಿ ರೇಖಾ ಸುದೇಶ್ ರಾವ್ ಮಾತನಾಡಿ ಬರಹವು ಕಬ್ಬಿನ ಜಲ್ಲೆ ಯಂತೆ ಜಗಿದಷ್ಟು ಸಿಹಿ ಬರುವಂತೆ ಬರಹ ಓಡಿದಷ್ಟು ಮತ್ತೆ ಮತ್ತೆ ಓದಬೇಕು ಎನ್ನುವ ಹಂಬಲ ಹುಟ್ಟಬೇಕೆ ಹೊರತು ಈ ಕೃತಿ ಯಾಕಾದರೂ ಓದುತ್ತಿದ್ದೇನೆ ಎಂಬ ಭಾವನೆ ಓದುಗರಿಗೆ ಮೂಡಬಾರದು ಎಂದ ಅವರು ಭಾವನೆ ಕಲ್ಪನೆಗಳ ಆಗರ ಬರಹ ಎಂದು ಹೇಳಿದರು. ಮುಂದುವರಿದು ಮಾತನಾಡುತ್ತಾ, ತನ್ನ ಬರಹಕ್ಕೆ ಹಲವಾರು ಕಿರಿಯ,ಹಿರಿಯ ಸಾಹಿತಿಗಳ ಜೀವನ ಗಾತೆ ಪ್ರೇರಣೆ ಎಂದು ಅವರು ಹೇಳಿದರು.ಕೊಪ್ಪಳದ ಲೇಖಕಿ ಅನುಸೂಯ ಜಹಾಂಗೀರ್ ಧಾರ್ ಅಧ್ಯಕ್ಷತೆ ವಹಿಸಿದ್ದರುವೇದಿಕೆಯಲ್ಲಿ ಎನ್.ವಿ.ರಮೇಶ್, ಸ್ಮೈಲ್ ಶಿವ್, ಲೇಖಕ ದಾ.ಕೊಲ್ಚಪ್ಪೇ ಗೋವಿಂದ ಭಟ್. ಕಾದಂಬರಿಕಾರ ಪೀ .ವಿ. ಪ್ರದೀಪ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಸಮಾಜ ಸೇವಕ ಯು.ಆರ್. ಶೆಟ್ಟಿ ಅವರಿಗೆ ಕರ್ನಾಟಕ ಮುಕುಟಮಣಿ ಪ್ರಶಸ್ತಿ ಪ್ರದಾನ

ಮಂಗಳೂರಿನಲ್ಲಿ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಯು.ಆರ್. ಶೆಟ್ಟಿ ಅವರಿಗೆ ಕರ್ನಾಟಕ ಮುಕುಟಮಣಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಶ್ರೀ ಸಾಲಿಗ್ರಾಮ ಗಣೇಶ್ ಶನೈ ಅವರ ನೇತೃತ್ವದ ಕಲಾ ಕುಂಚ ದಾವಣಗೆರೆ ಇವರು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದಾವಣಗೆರೆಯ ಚೆನ್ನಗಿರಿ ವಿರೂಪಾಕ್ಷಪ್ಪ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಯು. ಆರ್. ಶೆಟ್ಟಿ ಯವರು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ವಿವಿಧ ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವ ಇವರು ನಾಟಕ ಕಲಾವಿದರಾಗಿ ಜನಪ್ರಿಯ ರಾಗಿದ್ದಾರೆ. ಇವರ ನೇತೃತ್ವದ ನಾಟಕ ತಂಡ ಸರಕಾರಿ ನೌಕರರ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಇವರ ಸಮಾಜಮುಖಿ ಸೇವೆ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆಯನ್ನು ಪರಿಗಣಿಸಿ ದಾವಣಗೆರೆಯ ಕಲಾ ಕುಂಚ ಸಂಸ್ಥೆ ಇವರಿಗೆ ಕರ್ನಾಟಕ ಮುಕುಟಮಣಿ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಪ್ರಾದೇಶಿಕ ವಾರ್ತೆಗಳು

ಗಂಗೊಳ್ಳಿ ಪಂ. ಉಪಚುನಾವಣೆ: ಶಾಸಕ ಮಂಜುನಾಥ ಭಂಡಾರಿ ಪ್ರಚಾರ

ಉಡುಪಿ: ಬೈಂದೂರು ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯತ್ ಗೆ ಉಪಚುನಾವಣೆ ನಡೆಯಲಿದ್ದು ಆದಿತ್ಯವಾರ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅವರು ಪಾಲ್ಗೊಂಡು ಅಭ್ಯರ್ಥಿ ಪರ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಶಾಸಕ ಗೋಪಾಲ್ ಪೂಜಾರಿ, ವಿಧಾನ ಪರಿಷತ್ ಉಪಚನಾವಣೆಯ ಅಭ್ಯರ್ಥಿ ರಾಜು ಪೂಜಾರಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಕುಂದಾಪುರ ಬ್ಲಾಕ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಪ್ರಸನ್ನ ಕುಮಾರ್ ಶೆಟ್ಟಿ, ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕರು ಮತ್ತು ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಬೀಚ್ ಸ್ವಚ್ಛತೆಗೆ ಸ್ಮಾರ್ಟ್ ಸಿಟಿಯಿಂದ ಆದ್ಯತೆ. ಮಂಗಳೂರು ಸ್ಮಾರ್ಟ್ ಸಿಟಿ ಜಿಎಂ ಅರುಣ್ ಪ್ರಭಾ

ಮಂಗಳೂರು : ಬೀಚ್ ಗಳು ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿದ್ದು, ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಬೀಚ್ ಗಳ ಸ್ವಚ್ಚತೆಗೂ ಆದ್ಯತೆ ನೀಡಲಾಗುವುದು ಎಂದು ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಜನರಲ್ ಮ್ಯಾನೇಜರ್ ಅರುಣ್ ಪ್ರಭಾ ತಿಳಿಸಿದರು.ದ.ಕ ಜಿಲ್ಲಾಡಳಿತ, ಮಂಗಳೂರು ನಗರ ಪೊಲೀಸ್ ಕಮಿಷನರೆಟ್,ಕ್ರೆಡೈ ಮಂಗಳೂರು, ಸ್ಮಾರ್ಟ್ ಸಿಟಿ ಮಂಗಳೂರು,ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ನ ಎನ್ ಎಸ್ ಎಸ್ ಘಟಕದ ಹಾಗೂ ಪಣಂಬೂರು ಕುಳಾಯಿ ಮೊಗವೀರ ಸಭಾದ ಸಹಯೋಗದಲ್ಲಿ ರವಿವಾರ ಚಿತ್ರಾಪುರ ಬೀಚ್ ನಲ್ಲಿ ನಡೆದ ಸ್ವಚ್ಚತಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರುಚಿತ್ರಾಪುರ ಬೀಚ್ ಕರಾವಳಿಯವ ಸ್ವಚ್ಛ, ಸುಂದರ ಬೀಚ್ ಆಗಿದ್ದು ಇದಕ್ಕೆ ಸ್ಥಳೀಯರ ಮುತುವರ್ಜಿ ಕಾರಣವಾಗಿದೆ ಎಂದು ಅವರು ಹೇಳಿದರು.ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತ ಚಂದ್ರಶೇಖರ್ ,ಕ್ರೆಡೈ ಮಂಗಳೂರು ಘಟಕದ ಅಧ್ಯಕ್ಷ ವಿನೋದ್ ಪಿಂಟೊ ,ಪಣಂಬೂರು ಕುಳಾಯಿ ಮೊಗವೀರ ಸಭಾದ ಅಧ್ಯಕ್ಷ ಮಾಧವ ಸುವರ್ಣ, ಡಿಸಿಪಿ ಸಿದ್ದಾರ್ಥ ಗೋಯಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ಅಧ್ಯಕ್ಷ ರಾಘವೇಂದ್ರ ಹೊಳ್ಳ, ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ನಿರ್ದೇಶಕ ಯತೀಶ್ ಬೈಕಂಪಾಡಿ, ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್ . ಬಿ.ಎನ್ ,ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ, ಮೊಗವೀರ ಸಭಾದ ಕಾರ್ಯದರ್ಶಿ ನಾಗೇಶ್ ಪುತ್ರನ್,ಉಪಾಧ್ಯಕ್ಷ ಕೇಶವ ಅಮೀನ್, ಜಗನ್ನಾಥ ಪುತ್ರನ್,ಕೋಶಾಧಿಕಾರಿ ಪುರು ಷೋತ್ತಮ ಕೋಟ್ಯಾನ್,ಸದಸ್ಯರಾದ ಪಿ.ದೇವೇಂದ್ರ, ರಮೇಶ್, ಕೆ.ಎಲ್. ಬಂಗೇರ, ಯೋಗೀಶ್ ಸಾಲ್ಯಾನ್ ,ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ನ ಎನ್ ಎಸ್ ಎಸ್ ವಿದ್ಯಾರ್ಥಿ ಕಾರ್ಯದರ್ಶಿ ಗಳಾದ ಸಿಂಧು,ಸುದೀಪ್ಉಪಸ್ಥಿತರಿದ್ದರು.

Scroll to Top