Author name: editor

ಪ್ರಾದೇಶಿಕ ವಾರ್ತೆಗಳು

ಕರಾವಳಿ ತೀರಗಳ ವಾತಾವರಣ ಬದಲಾವಣೆ ಅಧ್ಯಯನ: ವಿದ್ಯಾರ್ಥಿ ವಿಜ್ಞಾನಿ ಕಾರ್ಯಕ್ರಮ” ಮಳೆ ಹಾಗೂ ಗಾಳಿವೇಗದ ಅಳತೆಯ ಮಾಪಕ ಎಲ್ಲರಿಗೂ ಪೂರಕ”

ಉಳ್ಳಾಲ (ಮಂಗಳೂರು): ಮನುಷ್ಯನ ಅನೇಕ ದುರಾಸೆಯ ಫಲವೇ ಹವಾಮಾನ ವೈಪರೀತ್ಯಕ್ಕೆ ಮೂಲ ಕಾರಣ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿನ ಮುಂದುವರಿದ ಅಧ್ಯಯನಗಳ ರಾಷ್ಟ್ರೀಯ ಸಂಸ್ಥೆ (ಎನ್‌ಐಎಎಸ್)ಯ ಇಸ್ರೋ ಮುಖ್ಯ ಪ್ರಾಧ್ಯಾಪಕ ಡಾ. ಪಿ. ಜಿ. ದಿವಾಕರ್ ಅಭಿಪ್ರಾಯಪಟ್ಟರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮತ್ತು ಎನ್‌ಐಎಎಸ್ ಜಂಟಿ ಆಶ್ರಯದಲ್ಲಿ ಉಳ್ಳಾಲದ ಬಿಎಂ ಶಾಲೆಯಲ್ಲಿ ಹಮ್ಮಿಕೊಂಡ ‘ವಿದ್ಯಾರ್ಥಿ- ವಿಜ್ಞಾನಿ’ ಕಾರ್ಯಕ್ರಮದಲ್ಲಿ ಬುಧವಾರ ಅವರು ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯು ತೀವ್ರ ಸಮಸ್ಯೆಯಾಗಿ ಬೆಳೆಯುತ್ತಿದೆ. ಅದರಲ್ಲೂ ,ಕರಾವಳಿ ಭಾಗದ ಜನರಿಗೆ ವಾತಾವರಣದಲ್ಲಾಗುವ ತೀವ್ರ ಮಾರ್ಪಾಡುಗಳು ಬಹುಬೇಗನೇ ತಿಳಿಯುವುದರಿಂದ, ಈ ಯೋಜನೆಯು ಇಲ್ಲಿನ ಜನರಿಗೆ ಅತಿಹೆಚ್ಚು ಪೂರಕವಾಗಲಿದೆ ಎಂದರು.ವಿದ್ಯಾರ್ಥಿಗಳಿಗೆ ವಿಜ್ಞಾನದ ಕಡೆಗೆ ಆಸಕ್ತಿ ಹೆಚ್ಚಿಸಿ , ಪರಿಣಾಮಕಾರಿ ವಿಜ್ಞಾನಿಗಳನ್ನಾಗಿ ಮಾಡಲು ಎನ್‌ಐಎಎಸ್ ಆಯೋಜಿಸಿರುವ ‘ಕರಾವಳಿ ಭಾಗದ ಹವಾಮಾನ ಬದಲಾವಣೆ’ಯ ಅಧ್ಯಯನ ಯೋಜನೆಯು ಸಹಕರಿಯಾಗಲಿದೆ ಎಂದು ಹೇಳಿದರು.ವೈಜ್ಞಾನಿಕ ಶಿಕ್ಷಣದ ಮೂಲಕ ಯುವ ಜನಾಂಗದಲ್ಲಿ ವಿಜ್ಞಾನ ಮತ್ತು ಅನ್ವೇಷಣೆಯತ್ತ ಒಲವು ಮೂಡಿಸುವುದು ಬಹಳ ಅವಶ್ಯಕ ಎಂದರು. ಇಸ್ರೋ ಜಿಯೋಎಐಯನ್ನು ಬಿಡುಗಡೆಗೊಳಿಸಲಿದ್ದು , ಇದರಲ್ಲಿ ಮುಂದಿನ 10 ವರ್ಷದದಲ್ಲಿ ವಿಶ್ವದ ವಾತಾವರಣ ಹೇಗಿರುತ್ತವೆ ಎಂಬ ದತ್ತಾಂಶವು ಲಭ್ಯವಾಗಲಿದೆ ಎಂದು ತಿಳಿಸಿದರು.ಎನ್‌ಐಎಎಸ್ ಸಹ ಪ್ರಾಧ್ಯಾಪಕ ವಿ. ವಿ. ಬಿನೋಯ್ ಮಾತನಾಡಿ ,ಪ್ರಸ್ತುತ ಸ್ಥಿತಿಗತಿಯಲ್ಲಿ ವಿಜ್ಞಾನ ಎಂಬುದು ಪ್ರತಿ ಮೂಲೆ ಮೂಲೆಗೂ ತಲುಪುವುದು ಬಹಳ ಅನಿವಾರ್ಯ ಎಂದು ತಿಳಿಸಿದರು.ಇಂದಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ವೈಜ್ಞಾನಿಕ ಅಧ್ಯಯನದಲ್ಲಿ ಹೆಚ್ಚು ತೊಡಗಿ,ಕ್ರಿಯಾತ್ಮಕವಾಗಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ , ವಿಜ್ಞಾನಿಗಳು ವಿದ್ಯಾರ್ಥಿಗಳ ನಿಜವಾದ ಪ್ರೇರಣಾ ಶಕ್ತಿಯಾಗಿರುತ್ತಾರೆ. ಎಲ್ಲಾ ಶಾಲಾ ವಿದ್ಯಾರ್ಥಿಗಳು ತಮ್ಮೊಳಗಿರುವ ಪ್ರತಿಭಾ ಶಕ್ತಿಯನ್ನು ಇನ್ನಷ್ಟೂ ಉತ್ತಮ ವೇದಿಕೆಯ ರೂಪದಲ್ಲಿ ಅನಾವರಣಗೊಳಿಸಲು ಮುಂಬರಬೇಕು ಎಂದು ಸಲಹೆ ನೀಡಿದರು.ಇಂದು, ಇಸ್ರೋ ಮತ್ತು ಎನ್‌ಐಎಎಸ್ ಸಂಸ್ಥೆಗಳು ದೇಶದ ಸುಸ್ಥಿರ ಭವಿಷ್ಯವನ್ನು ರೂಪಿಸುವಲ್ಲಿ ಅಭೂತಪೂರ್ವ ಕಾರ್ಯವನ್ನು ಮಾಡುತ್ತಿದೆ. ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚಾಗಿ ತಿಳಿದುಕೊಂಡು ಇಂತಹ ಅನೇಕ ಪ್ರಯೋಜನಕಾರಿ ಕಾರ್ಯಾಗಾರಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಭವಿಷ್ಯವಿದೆ ಎಂದು ಹೇಳಿದರು.ವಿದ್ಯಾರ್ಥಿ ವಿಜ್ಞಾನಿ ಪರಿಕಲ್ಪನೆ:ಕೇರಳ ಮತ್ತು ಕರ್ನಾಟಕದ ಕರಾವಳಿ ತೀರಗಳಲ್ಲಿ ಹವಾಮಾನ ಬದಲಾವಣೆ ಕುರಿತು ಅಧ್ಯಯನ ಮಾಡಲು ವಿದ್ಯಾರ್ಥಿಗಳನ್ನೇ ವಿಜ್ಞಾನಿಗಳಾಗಿ ಮಾಡುವ ಯೋಜನೆ ಇದಾಗಿದೆ.ವಿವಿಧ ಶಾಲಾ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 40 ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರವನ್ನು ಎನ್‌ಐಎಎಸ್ ಹಮ್ಮಿಕೊಂಡಿತ್ತು. ಈ ಯೋಜನೆಯಲ್ಲಿ ಆಯ್ಕೆಗೊಂಡ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎಂಜಿನಿಯರ್, ಪದವಿ ವಿಜ್ಞಾನ ಮತ್ತು ಸಮಾಜಕಾರ್ಯ ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ.ಮಣ್ಣು, ನೀರು, ಗಾಳಿ, ವಾತಾವರಣ, ಮಾಲಿನ್ಯ, ಪರಿಸರ, ಉಷ್ಣಾಂಶ, ಮಳೆ, ನೀರಿನ ಶುದ್ಧತೆ, ಗಾಳಿಯ ವೇಗ, ಸಾಂಕ್ರಾಮಿಕ ರೋಗಗಳ ಕುರಿತ ಅಧ್ಯಯನವನ್ನು ಈ ಯೋಜನೆಯು ಒಳಗೊಂಡಿದೆ.ಬಿಎA ಶಾಲೆಗೆ ಆಗಮಿಸಿದ ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ಆಳ್ವಾಸ್ ನಲ್ಲಿ ತರಬೇತುಗೊಂಡ ವಿದ್ಯಾರ್ಥಿಗಳು ಮಾರ್ಗದರ್ಶನ ಹಾಗೂ ಅಧ್ಯಯನ ನಡೆಸಲು ಬೇಕಾದ ಸಲಕರಣೆಗಳ ನಿರ್ಮಾಣದಲ್ಲಿ ಸಹಕರಿಸಿದರು. ಗಾಳಿಯ ದಿಕ್ಕು, ಗಾಳಿಯ ವೇಗ, ಮಳೆಯ ಮಾಪಕವನ್ನು ಜನಸಾಮಾನ್ಯರು ಕೂಡ ಸುಲಭವಾಗಿ ಅಳತೆ ಮಾಡಬಹುದು ಎಂಬುದನ್ನು ನಿದರ್ಶಿಸಿ ತೋರಿಸಿದರು.ಬಿಎಂ ಶಾಲೆಯು,ಅಧ್ಯಯನಕ್ಕೆ ಪೂರಕವಾಗುವ ದತ್ತಾಂಶಗಳನ್ನು ಒದಗಿಸುವುದರ ಜೊತೆಗೆ ಮಾಹಿತಿಯನ್ನು ಕರ್ನಾಟಕದ ನೋಡಲ್ ಕೇಂದ್ರವಾದ ಆಳ್ವಾಸ್ ಸಂಸ್ಥೆಗೆ ಒದಗಿಸಲು ಮುಂದಾಗಿದೆ.ಇದೇ ರೀತಿ ಪ್ರತಿ 2ರಿಂದ 3 ತಿಂಗಳಿಗೊಮ್ಮೆ ವಿದ್ಯಾರ್ಥಿಗಳು ಅನ್ವೇಷಿಸಿದ ದತ್ತಾಂಶಗಳ ಪರಿಶೀಲನೆ ನಡೆಯಲಿರುವುದು. ಈ ಯೋಜನೆಯು ವಿದ್ಯಾರ್ಥಿಗಳಲ್ಲಿ ಅನ್ವೇಷಷಣೆಯ ಒಲವು ಮೂಡಿಸಲು ಸಹಕಾರಿಯಾಗಲಿದೆ.ಉಳ್ಳಾಲ ಬಿಎಂ ಪ್ರೌಢ ಶಾಲೆಯ ಪ್ರಾಂಶುಪಾಲೆ ಜಯವಂತಿ ಸೋನ್ಸ್ , ಉಳ್ಳಾಲ ಬಿಎಂ ಪ್ರಾಥಮಿಕ ಶಾಲೆಯ ಪ್ರಾಂಶುಪಾಲೆ ಹೇರೋಸ್ ಹಿಲ್ಡಾ ಇದ್ದರು. ಬೈಂದೂರಿನಿAದ ಹಿಡಿದು ಮಂಗಳೂರಿನ ವಿವಿಧ ಶಾಲಾ ಕಾಲೇಜುಗಳ ಆಯ್ಕೆಗೊಂಡ 6 ರಿಂದ 12 ನೇ ತರಗತಿಯ 112 ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮದ ಸಂಯೋಜಕ ಡಾ. ವಿನಯ್‌ಎಸ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು: ಯುವಜನೋತ್ಸವದಲ್ಲಿ ಹಲವು ಪ್ರಶಸ್ತಿ

ಮಿಜಾರು: ಮಂಗಳೂರಿನ ಸಸಿಹಿತ್ಲುವಿನಲ್ಲಿ ಈಚೆಗೆ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಸ್ಪರ್ಧಿಸಿದ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜನಪದ ನೃತ್ಯ (ಡೊಳ್ಳು- ಪ್ರಥಮ), ಜನಪದ ನೃತ್ಯ (ಏಕವ್ಯಕ್ತಿ) ಪ್ರಥಮ, ಕತೆ ಬರೆಯುವುದು- ಪ್ರಥಮ ಮತ್ತು ದ್ವಿತೀಯ, ಭಾಷಣ ಕಲೆ -ಪ್ರಥಮ, ಕವಿತೆ ಬರೆಯುವುದು -ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದಿದ್ದಾರೆ.ಪ್ರಥಮ ಬಹುಮಾನ ವಿಜೇತರು ರಾಜ್ಯಮಟ್ಟದ ಯುವಜನೋತ್ಸವಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ ಆಳ್ವ ಅಭಿನಂದಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಭಟ್ರಕುಮೇರು ಸ್ವಾಮಿ ಕೊರಗ ತನಿಯ ಕ್ಷೇತ್ರ : ಪ್ರತಿಷ್ಠಾವರ್ಧಂತಿ ಹಾಗೂ ಕೋಲ ಸೇವೆ ಸಂಪನ್ನ

ಮಂಗಳೂರು: ನಗರದ ಪದವಿನಂಗಡಿ ಸಮೀಪದ ಭಟ್ರಕುಮೇರು ಸ್ವಾಮಿ ಕೊರಗ ತನಿಯ ಸಾನಿಧ್ಯದಲ್ಲಿ ಸ್ವಾಮಿ ಕೊರಗ ತನಿಯ ದೈವದ ದ್ವಿತೀಯ ವರ್ಷದ ಪ್ರತಿಷ್ಠಾವರ್ಧಂತಿಹಾಗೂ ಕೋಲ ಸೇವೆಯು ಸಾನಿಧ್ಯದ ಯಜಮಾನರು ಹಾಗೂ ದೈವಾರಾಧಕರಾದ ಶ್ರೀ ಭಾಸ್ಕರ ಬಂಗೇರ ಇವರ ನೇತ್ರತ್ವದಲ್ಲಿ ತಾ| 08-12-2024ನೇ ಅದಿತ್ಯವಾರದಂದು ಬೆಳಿಗ್ಗೆ 10 ಗಂಟೆಗೆ ತಂತ್ರಿಗಳಾದ ಶ್ರೀ ರವಿ ಆನಂದ ಶಾಂತಿ ಆಡುಮರೋಳಿ ಇವರ ಮಾರ್ಗದರ್ಶನದಲ್ಲಿ ಜರುಗಿತು. ಬೆಳಿಗ್ಗೆ 6ರಿಂದ ಪಂಚಗವ್ಯಶುದ್ಧಿ, ಸ್ವಸ್ತಿಪುಣ್ಯಹ, ಮಹಾಗಣಪತಿ ಹೋಮ ಸಾನಿಧ್ಯಕಲಶ, ಪ್ರಸನ್ನ ಸೇವೆ ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಗಂಧಕಾಡು ಇವರಿಂದ ಭಜನ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ 12.30ಕ್ಕೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು.ಮಧ್ಯಾಹ್ನ 1 ಗಂಟೆಯಿಂದ ಶ್ರೀಮತಿ ವಿಜಯ ಭಾಸ್ಕರ್ ಮತ್ತು ಶ್ರೀ ಗಣೇಶ್ ಮಂಗಳೂರು ಇವರಿಂದ “ಭಕ್ತಿಗಾನ ಸುಧೆ” ಸಂಜೆ 4 ಗಂಟೆಯಿಂದ “ಸ್ಪೂರ್ತಿ ಮಹಿಳಾ ಭಜನಾ ಮಂಡಳಿ” ಪದವಿನಂಗಡಿ ಮತ್ತು ಶ್ರೀ ನಾರಾಯಣಗುರು ಸೇವಾಸಂಘ, ಮೇರಿಹಿಲ್, ಗುರುನಗರ ಇವರಿಂದ ” ಭಜನೆ ಹಾಗೂ ಹರಿನಾಮ ಸಂಕೀರ್ತನೆ ನಡೆಯಿತು. ಸಂಜೆ 7 ಗಂಟೆಗೆ ಅಗೆಲು ಸೇವೆ ನಡೆದು, ಬಳಿಕ ಅನ್ನಸಂತರ್ಪಣೆ ನೆರವೇರಿತು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ಪ್ರತಿಷ್ಠಾವರ್ಧಂತಿ ಹಾಗೂ ಕೋಲ ಸೇವೆಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರಾದ ಕಮಲಾದೇವಿ ಅಸ್ರಣ ಅವರು ಆಶೀರ್ವಚನ ನೀಡಿದರು. ನಿರೂಪಕ ನವನೀತ್ ಶೆಟ್ಟಿ ಕದ್ರಿ, ಉದ್ಯಮಿಗಳಾದ ಲೀಲಾಕ್ಷ ಕರ್ಕೇರಾ, ಎಂ. ಅಶೋಕ್ ಶೇಟ್, ಲಚ್ಚು ಲಾಲ್, ಶ್ರೀ ಕ್ಷೇತ್ರದ ಸೇವಾಕರ್ತರುಗಳಾದ ಪೂಜ್ಯ ಮಾತಶ್ರೀ ವಿಮಲಾ ಹಾಗೂ ಶ್ರೀಮತಿ ವಿಜಯ ಭಾಸ್ಕರ ಬಂಗೇರ ಮುಂತಾದವರು ಪಾಲ್ಗೊಂಡಿದ್ದರು.

ಪ್ರಾದೇಶಿಕ ವಾರ್ತೆಗಳು

ನಳಿನ್ ಕುಮಾರ್ ಕಟೀಲ್ ಮತ್ತು ವೇದವ್ಯಾಸ ಕಾಮತ್ ರ ಹುಟ್ಟುಹಬ್ಬಕ್ಕೆ Mpmla’s ನ್ಯೂಸ್ ಶುಭಾಶಯಗಳು.

ಮಂಗಳೂರು: ಇಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ ಕಾಮತ್ ರ ಹುಟ್ಟುಹಬ್ಬವಾಗಿದ್ದು, mp mla’s ನ್ಯೂಸ್ ಇಬ್ಬರಿಗೂ ಶುಭಾಶಯಗಳನ್ನು ಸಲ್ಲಿಸುತ್ತದೆ.

ಪ್ರಾದೇಶಿಕ ವಾರ್ತೆಗಳು

ಡಾ. ಅಶೋಕ್ ಶೆಟ್ಟಿ ಬಿ. ಎನ್. ಸಹಿತ 15 ಮಂದಿ ಸಾಧಕರಿಗೆ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪೆನಿ ಮತ್ತು ಆಕ್ಸಿಸ್ ಬ್ಯಾಂಕ್ ಸಹಯೋಗದಲ್ಲಿ ಸೇವಾರತ್ನ ಪ್ರಶಸ್ತಿ ಪ್ರದಾನ.

ಮಂಗಳೂರು: ಮಾಕ್ಸ್ ಲೈಫ್ ಇನ್ಶೂರೆನ್ಸ್ ಮತ್ತು ಆಕ್ಸಿಸ್ ಬ್ಯಾಂಕ್ ಸಹಯೋಗದಲ್ಲಿ ಪತ್ರಕರ್ತ ಡಾ. ಅಶೋಕ್ ಶೆಟ್ಟಿ ಬಿ. ಎನ್ ಸಹಿತ 15 ಮಂದಿ ಸಾಧಕರಿಗೆ ಅತ್ತಾವರದ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿ ಕಚೇರಿಯಲ್ಲಿ ಡಿಸೆಂಬರ್ 6 ರ ಸಂಜೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸನ್ಮಾನ ಕಾರ್ಯಕ್ರಮದಲ್ಲಿ ZVP ಸುಧಾಕರ್ ಶೆಟ್ಟಿ, ARM ಸತೀಶ್ ಮೆನನ್, ಕಚೇರಿ ಮುಖ್ಯಸ್ಥ ಅರುಣ್ ವಿ.ಎಸ್., ಬ್ರಾಂಚ್ ಮೆನೇಜರ್ ಗಣೇಶ್ ಆಚಾರ್ಯ, ಟೈನಿಂಗ್ ಮೆನೇಜರ್ ಸಚಿನ್ ಕೆ.ಎಸ್., ಸೀನಿಯರ್ ಪಾರ್ಟನರ್ (ಸೇಲ್ಸ್) ಶಶಿಧರ್, ಸೀನಿಯರ್ ಮೆನೇಜರ್ ಪ್ರಜ್ವಲ್ ಕೋಟ್ಯಾನ್ ಹಾಗೂ ಅಸೋಸಿಯೇಟ್ ಡೆವೆಲಪ್‌ಮೆಂಟ್ ಮೆನೇಜರ್ ಪ್ರಕಾಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಸಮಾಜದಲ್ಲಿ ಮಹತ್ವದ ಹೊಣೆಗಾರಿಕೆ ನಿಭಾಯಿಸುತ್ತಿರುವ ಮಾಧ್ಯಮದ ಪ್ರತಿನಿಧಿಗಳು -ಪ್ರೊ.ಪಿ‌ಎಲ್ ಧರ್ಮ. ದ.ಕ ಜಿಲ್ಲಾ ಪತ್ರಕರ್ತರ ಸಮ್ಮೇಳನದ ಸಮಾರೋಪ

ಮಂಗಳೂರು,ಡಿ‌.6;ಸಮಾಜದಲ್ಲಿ ಮಾಧ್ಯಮಗಳು ಹಲವು ಇತಿಮಿತಿಗಳ ನಡುವೆ ಪ್ರತಿನಿತ್ಯ ಹಲವಾರು ಸುದ್ದಿಗಳನ್ನು ಶ್ರಮವಹಿಸಿ ಓದುಗರಿಗೆ ನೀಡುವ ಮಹತ್ವದ ಹೊಣೆಗಾರಿಕೆ ಯನ್ನು ಇಂದಿಗೂ ನಿಭಾಯಿಸುತ್ತಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್ ಧರ್ಮ ತಿಳಿಸಿದ್ದಾರೆ.ಅವರು ನಗರದ ಕುದ್ಮುಲ್ ರಂಗರಾವ್ ಪುರಭವನದ ದಿ.ಮನೋಹರ ಪ್ರಸಾದ್ ವೇದಿಕೆ, ದಿ. ಭುವನೇಂದ್ರ ಪುದುವೆಟ್ಟು ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ 5ನೇ ಜಿಲ್ಲಾ ಸಮ್ಮೇಳನದ ಸಮಾರೋಪ ಸಮಾರಂಭವನ್ನು ನೆರವೇರಿಸಿ ಮಾತನಾಡುತ್ತಿದ್ದರು.ಪತ್ರಿಕೆಗಳು ಜಾಹೀರಾತು,ಸಿನಿಮಾ ಇನ್ನಿತರ ಪುಟಗಳ ನಡುವೆ ಪ್ರತಿನಿತ್ಯ ನೂರಾರು ಸುದ್ದಿಗಳನ್ನು ಸಂಗ್ರಹಿಸಿ ತನ್ನ ಓದುಗರಿಗೆ ನೀಡುತ್ತಿರುವುದರ ಹಿಂದಿನ ಪರಿಶ್ರಮ ಮಹತ್ವದ ಹೊಣೆಗಾರಿಕೆ ಯಾಗಿದೆ.ಜೊತೆಗೆ ಪತ್ರಕರ್ತರು ಸಮಾಜವನ್ನು ಎಚ್ಚರಿಸುವ, ಕೆಲವೊಮ್ಮೆ ಚಾಟಿ ಬೀಸುವ ಕೆಲಸವನ್ನೂ ಮಾಡುತ್ತಾ, ಸಮಾಜದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ ಎಂದರು. ಅತಿಥಿಗಳಾಗಿ ಭಾಗವಹಿಸಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡುತ್ತಾ, ಇಂದಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮಾಧ್ಯಮಗಳಲ್ಲೂ ಬದಲಾವಣೆ ಯಾಗಿದೆ.ಪತ್ರಿಕಾ ಮಾಧ್ಯಮ ಗಳ ಜೊತೆ ಟಿ.ವಿ ಮಾಧ್ಯಮ ಗಳು ಅವುಗಳಿಗಿಂತಲೂ ಸಾಮಾಜಿಕ ಮಾಧ್ಯಮಗಳು ಇನ್ನೂ ವೇಗವಾಗಿ ಸಮಾಜದಲ್ಲಿ ಜನರ ನಡುವೆ ಕಾರ್ಯ ನಿರ್ವಹಿಸುತ್ತಿದೆ.ರಾಜಕೀಯ ರಂಗದಂತೆ ಮಾಧ್ಯಮ ರಂಗಗಳು ಸ್ಪರ್ಧಾತ್ಮಕ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಒಂದು ಸಣ್ಣ ಘಟನೆ ಕ್ಷಣ ಮಾತ್ರದಲ್ಲಿ ದೇಶಾದ್ಯಂತ ಪ್ರಸಾರವಾಗುತ್ತವೆ.ಇಂತಹ ಸಂದರ್ಭದಲ್ಲಿ ಕೆಲವು ಸುದ್ದಿಗಳಿಂದ ಸಮಾಜದಲ್ಲಿ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತದೆ.ಈ ನಡುವೆ ಪತ್ರಕರ್ತರು ತಾವು ಇರುವ ಪ್ರದೇಶ ಜನರ ಬಗ್ಗೆ ಕಾಳಜಿಯಿಂದ ಸಕಾರಾತ್ಮಕ ದೃಷ್ಟಿಕೋನ. ದಿಂದ ಜನರ ಹಿತಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ. ಅದಕ್ಕಾಗಿ ಬ್ರ್ಯಾಂಡ್ ಮಂಗಳೂರು ನಂತಹ ಕಾರ್ಯಕ್ರಮ, ಗ್ರಾಮವಾಸ್ತವ್ಯದಂತಹ ಕಾರ್ಯಕ್ರಮಗಳು ಮಾದರಿಯಾಗಿದೆ ಎಂದರು.ಶಾಸಕ ಡಾ.ವೈ.ಭರತ್ ಶೆಟ್ಟಿಯವರು ಮಾತನಾಡುತ್ತಾ, ಪತ್ರಕರ್ತರು ಒತ್ತಡಗಳ ನಡುವೆ ತಮ್ಮ ಮೌಲ್ಯಗಳು,ಜನ ಸಾಮಾ ನ್ಯರ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಸಮ್ಮೇಳಕ್ಕೆ ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ದಿವಂಗತ ಮನೋಹರ ಪ್ರಸಾದ್ ಅವರ ಸಂಸ್ಕರಣೆಯನ್ನು ಹಿರಿಯ ಪತ್ರಕರ್ತರಾದ ಪಿ.ಬಿ.ಹರೀಶ್ ರೈ ಹಾಗೂ ರವೀಂದ್ರ ಶೆಟ್ಟಿ ನಡೆಸಿಕೊಟ್ಟರು.ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಎಂ.ಎಸ್.ಭಟ್ (:ಉದಯವಾಣಿ),ದೀಪಕ್ ಅಟವಳೆ (;ಹೊಸ ದಿಗಂತ),ಉದಯ ಶಂಕರ ನೀರ್ಪಾಜೆ( ಉದಯವಾಣಿ,) .ರಾಮಕೃಷ್ಣ ಭಟ್( ಕೆಪಿಎನ್,)ಜಯಂತ ಉಳ್ಳಾಲ,( ನಮ್ಮ ಕುಡ್ಲ ವಾಹಿನಿ)ಶಶಿಧರ ಪೊಯ್ಯತ್ತ ಬೈಲು( ಅಬ್ಬಕ್ಕ ಟಿವಿ ವಾಹಿನಿ,) ಅಶೋಕ್ ಶೆಟ್ಟಿ ಬಾಳ.ಬಿ.ರವೀಂದ್ರ ಶೆಟ್ಟಿ (ವಿಜಯ ಕರ್ನಾಟಕ,)ಪ್ರಕಾಶ್ ಸುವರ್ಣ(ಕನ್ನಡ ಪ್ರಭ ) .ಸಲೀಮ್ ಬೋಳಂಗಡಿ( ಸನ್ಮಾರ್ಗ) ಶರತ್ ಸಾಲ್ಯಾನ್ (ವಿ 4 ನ್ಯೂಸ್ ) .ಎಚ್.ಎಸ್.ಮಂಜುನಾಥ( ದಿ ಹಿಂದೂ ) ರಾಜೇಶ್ ಕದ್ರಿ(ಮಂಗಳೂರು ಮಿರರ್) ಭಾಗ್ಯವಾನ್ ಸುನೀಲ್ (ವಿಜಯವಾಣಿ) ಇವರನ್ನು ಸನ್ಮಾನಿಸಲಾಯಿತು.ಮಾಧ್ಯಮ ಯುವ ಜನ ಗೋಷ್ಠಿಯಲ್ಲಿ ಪತ್ರಕರ್ತರಾದ ಮೊಹಮ್ಮದ್ ಆರಿಫ್ ಪಡುಬಿದ್ರೆ,ಸಂಧ್ಯಾ ಹೆಗಡೆ,ಅನಿಲ್ ಶಾಸ್ತ್ರಿ ವಿಷಯ ಮಂಡಿಸಿದರು. ಅನ್ನಪೂರ್ಣೇಶ್ವರಿ ಅಂಧ ಕಲಾವಿದರ ಸಂಗೀತ ಕಾರ್ಯಕ್ರಮ ನಡೆಯಿತು.ಭಾಸ್ಕರ್ ಕಟ್ಟ ಕಾರ್ಯಕ್ರಮ ಸಂಯೋಜಿಸಿದರು. ತಾಲೂಕಿನ ಅಧ್ಯಕ್ಷ ರು ಪದಾಧಿಕಾರಿ ಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.ಸೀತಾರಾಮ ಆಚಾರ್ಯ ಮೂಡುಬಿದಿರೆ, ಮೌನೇಶ್ ವಿಶ್ವಕರ್ಮ ಬಂಟ್ವಾಳ,ಶಶಿಧರ ಪೊಯ್ಯತ್ತಬೈಲ್ ಉಳ್ಳಾಲ,ಸಿದ್ಧಿಕ್ ನೀರಾಜೆ ಪುತ್ತೂರು,ವಿಜಯ ಕುಮಾರ್ ಪೆರ್ಲ ಕಡಬ ಭಾಗವಹಿಸಿದ್ದರು.ಸಮ್ಮೇಳನ ದ ಸರ್ವಾಧ್ಯಕ್ಷ ಶಿವ ಸುಬ್ರಹ್ಮಣ್ಯ ಸಮಾರೋಪ ಸಮಾರಂಭದ ಪ್ರತಿಕ್ರಿಯೆ ನೀಡಿದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ವೇದಿಕೆಯಲ್ಲಿ ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ,ಉದ್ಯಮಿ ರಮೇಶ್ ನಾಯಕ್,ಇಂಡಿಯನ್ ರೆಡ್ ಕ್ರಾಸ್ ದ.ಕ ಜಿಲ್ಲಾ ಘಟಕದ ಸಭಾಪತಿ ಸಿ.ಎ. ಶಾಂತಾರಾಮ ಶೆಟ್ಟಿ ತಾಲೂಕು ಮತ್ತುಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾ ರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಆಳ್ವಾಸ್: ಅಭಿವ್ಯಕ್ತಿ ವೇದಿಕೆ ಉದ್ಘಾಟನೆಯಲ್ಲಿ ಡಾ.ಎನ್.ಪಿ. ನಾರಾಯಣ ಶೆಟ್ಟಿ. ಆಲಿಸುವ, ಚರ್ಚಿಸುವ ಮನೋಭಾವ ಬೆಳೆಸಿಕೊಳ್ಳಿ

ವಿದ್ಯಾಗಿರಿ: ‘ಆಲಿಸುವ ಹಾಗೂ ಚರ್ಚಿಸಿ ನಿರ್ಧರಿಸುವ ಮನೋಭಾವವೇ ಯಶಸ್ಸು ಕಾಣುವ ಮಾರ್ಗ’ ಎಂದು ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುಲಸಚಿವ (ಮೌಲ್ಯಮಾಪನ) ಡಾ.ಎನ್.ಪಿ. ನಾರಾಯಣ ಶೆಟ್ಟಿ ಹೇಳಿದರು.ಆಳ್ವಾಸ್ (ಸ್ವಾಯತ್ತ) ಕಾಲೇಜಿನಲ್ಲಿ ಮಂಗಳವಾರ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ‘ಅಭಿವ್ಯಕ್ತಿ’ ವಿದ್ಯಾರ್ಥಿ ವೇದಿಕೆಯ ಶೈಕ್ಷಣಿಕ ವರ್ಷದ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಪತ್ರಿಕೋದ್ಯಮದಲ್ಲಿ ಯಶಸ್ಸು ಕಾಣಲು ಸಂಯಮದ ಆಲಿಸುವ ಮನೋಭಾವ ಬಹುಮುಖ್ಯ. ಯಾವುದೇ ಕಾರ್ಯಕ್ರಮ ಯೋಜಿಸುವ ಮೊದಲು ಸಾಕಷ್ಟು ಚರ್ಚೆ ನಡೆಸಬೇಕು. ಹಿರಿಯರು- ಕಿರಿಯರು ಎನ್ನದೇ ಸಲಹೆ -ಸೂಚನೆಗಳನ್ನು ಸ್ವೀಕರಿಸಿಕೊಂಡು ನಿರ್ಧಾರಕ್ಕೆ ಬರಬೇಕು ಎಂದರು.ಭಾಷೆಯ ಮೇಲಿನ ಹಿಡಿತ ಹಾಗೂ ತಂತ್ರಜ್ಞಾನದ ಸ್ಪರ್ಶ ಇಂದಿನ ಮಾಧ್ಯಮ ಜಗತ್ತಿಗೆ ಅನಿವಾರ್ಯ ಎಂದ ಅವರು, ಜ್ಞಾನ ಮತ್ತು ಅಭಿವ್ಯಕ್ತಿ ಪತ್ರಿಕೋದ್ಯಮದ ಎರಡು ಕಣ್ಣುಗಳು ಎಂದರು.ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ‘ನಾವು ಏನು ಆಗಿಲ್ಲವೋ, ಆ ವ್ಯಕ್ತಿತ್ವವನ್ನು ನಮ್ಮೊಳಗೆ ರೂಪಿಸುವುದೇ ಕಲಿಕೆ. ಅದು ನಮ್ಮ ವ್ಯಕ್ತಿತ್ವದ ಉನ್ನತೀಕರಣ ಆಗಿರಬೇಕು’ ಎಂದರು.‘ನಮಗೆಲ್ಲ ಅಭಿವ್ಯಕ್ತಿ ಸ್ವಾತಂತ್ರö್ಯ ಇದೆ. ಆದರೆ, ಅದರ ಸದ್ಬಳಕೆ ಆಗದಿದ್ದರೆ, ಅಧ್ವಾನದ ಅಪಾಯಗಳೂ ಇವೆ’ ಎಂದರು.‘ಪ್ರಜಾಪ್ರಭುತ್ವ ಉಳಿಸಿ- ಬೆಳೆಸುವಲ್ಲಿ ಪತ್ರಿಕೋದ್ಯಮದ ಪಾತ್ರ ಬಹುಮುಖ್ಯ ಪ್ರಜಾಸತ್ತಾತ್ಮಕವಾಗಿ ವರ್ತಿಸಿದಾಗ ಮಾತ್ರ ಪತ್ರಕರ್ತರ, ಸಮಾಜದ ಯಶಸ್ಸು ಸಾಧ್ಯ’ ಎಂದರು.ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಯೋಗಿಕ ಕಲಿಕೆ ಹೆಚ್ಚು ಅವಕಾಶಗಳಿದ್ದು ಅವುಗಳನ್ನು ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು.ವಿಭಾಗ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ವಿದ್ಯಾರ್ಥಿ ಸಂಯೋಜಕ ರುಧೀರ್ ವಾರ್ಷಿಕ ವರದಿ ವಾಚಿಸಿದರು. ವಿನೀತ್ ಭವಿಷ್ಯದ ಕಾರ್ಯ ಯೋಜನೆಗಳನ್ನು ತಿಳಿಸಿದರು.ನೂತನ ವರ್ಷದ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ವೇದಿಕೆ ಖಜಾಂಚಿ ವೀಕ್ಷಿತ .ವಿ ನಿರೂಪಿಸಿದರು. ಉಪ ಸಂಯೋಜಕಿ ಪ್ರೇರಣಾ ಇದ್ದರು.

ಪ್ರಾದೇಶಿಕ ವಾರ್ತೆಗಳು

ಆಳ್ವಾಸ್ ಸಿನಿಮಾ ಸಮಾಜದಲ್ಲಿ ಕಾರ್ಯಾಗಾರ. ಬರವಣಿಗೆಯೇ ಸಿನಿಮಾದ ತಳಹದಿ: ಪರಮ್

ವಿದ್ಯಾಗಿರಿ; ‘ಸಿನಿಮಾ ಕ್ಷೇತ್ರದಲ್ಲಿ ಬರವಣಿಗೆ ಬಹುಮುಖ್ಯವಾಗಿದ್ದು, ಬರಹಗಾರರಿಗೆ ಹೆಚ್ಚಿನ ಬೇಡಿಕೆ ಇದೆ. ಸಿನಿಮಾ ಕ್ಷೇತ್ರ ಪ್ರವೇಶಿಸಲು ಇಚ್ಛಿಸುವ ವಿದ್ಯಾರ್ಥಿಗಳು ಬರವಣಿಗೆಯನ್ನು ಉನ್ನತೀಕರಿಸಿಕೊಳ್ಳಬೇಕು’ ಎಂದು ಆಳ್ವಾಸ್ (ಸ್ವಾಯತ್ತ) ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ರಮಾನಂದ ನಾಯಕ್ (ಪರಮ್ ಭಾರಧ್ವಜ್) ಹೇಳಿದರು.ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಸ್ನಾತಕೋತ್ತರ ಪತ್ರೀಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸೋಮವಾರ ಆಳ್ವಾಸ್ ಫಿಲಂ ಸೊಸೈಟಿ ಹಮ್ಮಿಕೊಂಡ ‘ಸ್ಕಿçಪ್ಟಿಂಗ್ ಸಿನಿಮಾ’ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ‘ಸಿನಿಮಾ ನಿರ್ಮಾಣದಲ್ಲಿ ಕಲ್ಪನೆ, ಬರವಣಿಗೆ, ಸಂಕಲನ, ಚಿತ್ರೀಕರಣ ಸೇರಿದಂತೆ ಎಲ್ಲ ವಿಭಾಗಗಳೂ ಮುಖ್ಯ. ಅವುಗಳ ನಡುವೆ ಉತ್ತಮ ಹೊಂದಾಣಿಕೆ ಹಾಗೂ ಸಮತೋಲನ ಇದ್ದಾಗ ಮಾತ್ರ ಒಳ್ಳೆಯ ಸಿನಿಮಾ ಬರಲು ಸಾಧ್ಯ’ ಎಂದರು.ಕಲಿಕೆಯಲ್ಲಿ ಮೇಲು-ಕೀಳು ಎಂಬುದು ಇಲ್ಲ. ಸಣ್ಣವರು, ದೊಡ್ಡವರು, ಸಮಾನ ಮನಸ್ಕರು ಸೇರಿದಂತೆ ಎಲ್ಲರಿಂದಲೂ ಕಲಿಯಬೇಕು ಎಂದರು.ತಾವು ಬರೆದು ನಿರ್ಮಿಸಿದ ಆಲ್ಪಂ ಹಾಡುಗಳನ್ನು ಪ್ರದರ್ಶಿಸಿದ ಅವರು, ಕಿರುಚಿತ್ರ, ಆಲ್ಪಂ ಹಾಡು, ಸಿನಿಮಾ ಹಾಡು, ಸಂಭಾಷಣೆ ಇತ್ಯಾದಿಗಳ ರಚನೆ ಬಗ್ಗೆ ತರಬೇತಿ ನೀಡಿದರು.ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಆಳ್ವಾಸ್ ಫಿಲಂ ಸೊಸೈಟಿ ಸಂಯೋಜಕ ಹರ್ಷವರ್ಧನ ಪಿ.ಆರ್., ಸಹಾಯಕ ಪ್ರಾಧ್ಯಾಪಕರಾದ ಸುಶ್ಮಿತಾ ಜೆ., ನಿಶಾನ್ ಕೋಟ್ಯಾನ್, ಹನ್ನಾ, ಅರುಣ್ ಮತ್ತು ಶಂಕರ್ ಕಾಮತ್ ಇದ್ದರು.

Scroll to Top